ಕಾಂಗ್ರೆಸ್ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಅಸ್ಸಾಂನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ನವದೆಹಲಿ, ಏಪ್ರಿಲ್ 6: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಕಾಂಗ್ರೆಸ್ ಪಕ್ಷದ ವಿರುದ್ಧ ಅಸ್ಸಾಂನ ಚುನಾವಣಾ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು. ನಮಗೆ ದೇಶ ಮೊದಲಾದರೆ ಕಾಂಗ್ರೆಸ್ಗೆ “ಕುಟುಂಬ-ಮೊದಲು” ಎಂದು ಅವರು ಟೀಕಿಸಿದ್ದಾರೆ. ಹೊಜೈನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ಹ್ಯಾಟಿಕ್ ಬಾರಿಸಲಿದೆ ಎಂದಿದ್ದಾರೆ. ಬಿಜೆಪಿಯ ಆಡಳಿತ ಮಾದರಿಯನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ತಮ್ಮ ಪಕ್ಷವು ನಿರಂತರ ಅಭಿವೃದ್ಧಿ ಪ್ರಯತ್ನಗಳ ಮೂಲಕ ಅಸ್ಸಾಂ ಜನರ ಜೀವನವನ್ನು ಸುಧಾರಿಸಲು…