ಜೈಲುಗಳ ಕಮಾಂಡ್ ಸೆಂಟರ್ಗೆ ಚಾಲನೆ: ಅನೈತಿಕ ಚಟುವಟಿಕೆಗಳಿಗೆ ಇನ್ನಾದ್ರೂ ಬೀಳುತ್ತಾ ಬ್ರೇಕ್? – Kannada News | Revolutionising Jail Security: Karnataka Launches Centralised Monitoring System for Prisons
ಬೆಂಗಳೂರು, ಜನವರಿ 31: ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗೃಹಸಚಿವ ಜಿ. ಪರಮೇಶ್ವರ್ ಅವರು ನೂತನ ಕಮಾಂಡ್ ಸೆಂಟರ್ ಉದ್ಘಾಟಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಡ್ರಗ್ಸ್ ಸಪ್ಲೈ, ಲಿಕ್ಕರ್ ತಯಾರಿಕೆ, ಅಕ್ರಮ ಬರ್ತಡೇ ಆಚರಣೆಗಳಂತಹ ಘಟನೆಗಳು ವರದಿಯಾಗಿದ್ದವು. ಇದು ಕಾರಾಗೃಹ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಜೈಲುಗಳಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು…