ಅರ್ಜುನ್ ಕಪೂರ್-ಸಾಹಿಬಾ ಬಾಲಿ ಡೇಟಿಂಗ್? ಲಾರ್ಡ್ಸ್​​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜೋಡಿ – Kannada News | Arjun Kapoor and Sahiba Bali Spark Dating Rumors After Being Spotted Together At Lords

ಜುಲೈ 19ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಏಕದಿನ ಪಂದ್ಯವನ್ನು ಅರ್ಜುನ್ ಕಪೂರ್-ಸಾಹಿಬಾ ಬಾಲಿ ಒಟ್ಟಿಗೆ ವೀಕ್ಷಿಸಿದ್ದಾರೆ. ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅರ್ಜುನ್ ಮತ್ತು ಸಾಹಿಬಾ ಪಂದ್ಯವನ್ನು ಎಂಜಾಯ್ ಮಾಡುತ್ತಾ ರಿಲ್ಯಾಕ್ಸ್ ಆಗಿ ಕಂಡರು. ಈ ಸಾರ್ವಜನಿಕ ಭೇಟಿಯು ಇಬ್ಬರ ನಡುವೆ ಸ್ನೇಹಕ್ಕಿಂತ ಮೀರಿದ ಸಂಬಂಧ ಇದೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ ಈ ಹೊಸ ವದಂತಿಗಳ ಬಗ್ಗೆ ಅರ್ಜುನ್ ಕಪೂರ್ ಅಥವಾ ಸಾಹಿಬಾ ಬಾಲಿ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೈದಾನದಲ್ಲಿ ಇವರಿಬ್ಬರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿವೆ. ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿರುವುದು ಜನರ ಗಮನ ಸೆಳೆದಿದೆ. ಆದರೆ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಇದೆ ಎಂದು ಖಚಿತಪಡಿಸುವ ಯಾವುದೇ ಸುಳಿವು ವಿಡಿಯೋಗಳಲ್ಲಿ ಇಲ್ಲ.

ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇಬ್ಬರಿಗೂ ಮುಂಚಿತವಾಗಿಯೇ ಅಭಿನಂದನೆ ಸಲ್ಲಿಸಲು ಶುರು ಮಾಡಿದ್ದಾರೆ. ‘ಇವರಿಬ್ಬರು ಜೊತೆಯಾಗಿದ್ದಾರಾ? ಸಾಹಿಬಾ ಬೇರೆಯವರ ಜೊತೆ ಇರಲಿಲ್ಲವೇ?’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸಾಹಿಬಾ ಅವರು ಕಂಟೆಂಟ್ ಕ್ರಿಯೇಟರ್ ಕುಲ್ಲು ಜೊತೆ ಪಂದ್ಯಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ. ಅರ್ಜುನ್ ಕಪೂರ್ ಕೇವಲ ಅದೇ ಫ್ರೆಂಡ್ಸ್ ಗ್ಯಾಂಗ್‌ನಲ್ಲಿ ಭಾಗವಾಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿ ಗಮನ ಸೆಳೆದಿತ್ತು

ಇತ್ತೀಚೆಗಷ್ಟೇ ಅರ್ಜುನ್ ಜನ್ಮದಿನಕ್ಕೆ ಸಾಹಿಬಾ ಅವರು ತಮಾಷೆಯಾಗಿ ಶುಭ ಕೋರಿದ್ದರು. ಅರ್ಜುನ್ ಫೋಟೋ ಹಂಚಿಕೊಂಡಿದ್ದ ಅವರು ‘ಎಲ್ಲರ ಬೆಸ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು. ತೂಕ ಇಳಿಸುವುದನ್ನು ನಿಲ್ಲಿಸಿ, ಸ್ವಲ್ಪ ಕೇಕ್ ತಿನ್ನಿ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜುನ್ ‘ನೀನು ನನ್ನ ಜೊತೆ ಸೇರಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ರಿಪ್ಲೈ ಮಾಡಿದ್ದರು. ಈ ಸಂಭಾಷಣೆಯು ಅಭಿಮಾನಿಗಳ ಗಮನ ಸೆಳೆದಿತ್ತು.

ಇದನ್ನೂ ಓದಿ: ‘ಅಂತ್ಯವನ್ನು ಒಪ್ಪಿಕೊಳ್ಳಿ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಅರ್ಜುನ್ ಕಪೂರ್ ಮನಸ್ಥಿತಿ 

ಸಾಹಿಬಾ ಬಾಲಿ ಯಾರು?

ಸಾಹಿಬಾ ಅವರು ನಟಿ ಮತ್ತು ಕಂಟೆಂಟ್ ಕ್ರಿಯೇಟರ್. ತಾವು ಸಿಂಗಲ್ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರು. ಕಂಟೆಂಟ್ ಕ್ರಿಯೇಟರ್ ಕುಲ್ಲು ಜೊತೆಗಿನ ತಮ್ಮ ಕೆಮಿಸ್ಟ್ರಿ ಕೇವಲ ವೃತ್ತಿಪರ ಸ್ನೇಹ ಅಷ್ಟೇ ಎಂದು ಹೇಳಿದ್ದಾರು. ಅರ್ಜುನ್ ಜೊತೆಗಿನ ಇವರ ಸ್ನೇಹವು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ.

ಮಲೈಕಾ ಅರೋರಾ ಜೊತೆ ಬ್ರೇಕಪ್

ಅರ್ಜುನ್ ಕಪೂರ್ ಈ ಹಿಂದೆ ನಟಿ ಮಲೈಕಾ ಅರೋರಾ ಜೊತೆ ಸುದೀರ್ಘ ಸಂಬಂಧ ಹೊಂದಿದ್ದರು. 2018 ರಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರು 2024ರಲ್ಲಿ ಬೇರ್ಪಟ್ಟರು. ಇಬ್ಬರ ನಡುವಿನ 12 ವರ್ಷಗಳ ವಯಸ್ಸಿನ ವ್ಯತ್ಯಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವ ಚಾಂಪಿಯನ್​ ಪಟ್ಟದೊಂದಿಗೆ ಹೊಸ ಇತಿಹಾಸ ಬರೆದ ಸ್ಪೇನ್ – Kannada News | Spain Crowned 2026 FIFA World Cup Champions

ಜುಲೈ 19, 2026 ರಂದು ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ, 2026ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಯಾವುದೇ ಗೋಲು ಬಾರಿಸಿರಲಿಲ್ಲ. ಆ ಬಳಿಕ ನಡೆದ ಹೆಚ್ಚುವರಿ ನಿಮಿಷದಲ್ಲಿ ಪಂದ್ಯ ಫಲಿತಾಂಶ ನಿರ್ಧಾರವಾಯಿತು.

ಪಂದ್ಯದ ಮುಖ್ಯಾಂಶಗಳು:

  • ಗೆಲುವಿನ ಗೋಲು: ಪಂದ್ಯದ 106ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಫೆರಾನ್ ಟೊರೆಸ್, ನಿಕೋ ವಿಲಿಯಮ್ಸ್ ನೀಡಿದ ಪಾಸ್ ಅನ್ನು ಅದ್ಭುತ ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ ಜಯ ತಂದುಕೊಟ್ಟರು.
  • ರೆಡ್ ಕಾರ್ಡ್: ಹೆಚ್ಚುವರಿ ಸಮಯದ ಆರಂಭದಲ್ಲೇ (93ನೇ ನಿಮಿಷ) ಅರ್ಜೆಂಟೀನಾದ ಮಿಡ್‌ಫೀಲ್ಡರ್ ಎಂಜೊ ಫೆರ್ನಾಂಡಿಸ್ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. ಇದರಿಂದಾಗಿ ಅರ್ಜೆಂಟೀನಾ ಹೆಚ್ಚುವರಿ ನಿಮಿಷದಲ್ಲಿ ಕೇವಲ 10 ಆಟಗಾರರೊಂದಿಗೆ ಆಡುವಂತಾಯಿತು.
  • ಸ್ಪೇನ್ ಪ್ರಾಬಲ್ಯ: ಇಡೀ ಪಂದ್ಯದಲ್ಲಿ ಸ್ಪೇನ್ 65% ರಷ್ಟು ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿತ್ತು. ಹಾಗೆಯೇ ಸ್ಪೇನ್‌ನ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅರ್ಜೆಂಟೀನಾಗೆ ಒಂದು ಶಾಟ್ ಅನ್ನೂ ಗೋಲು ಪೆಟ್ಟಿಗೆಯ ಕಡೆಗೆ ಹೊಡೆಯಲು ಸಾಧ್ಯವಾಗಲಿಲ್ಲ.

ಪರಿಣಾಮ ಅರ್ಜೆಂಟೀನಾ ತಂಡವು ಸ್ಪೇನ್ ಮುಂದೆ ಶರಣಾಗಲೇಬೇಕಾಯಿತು. ಅದರಂತೆ ಫೆರಾನ್ ಟೊರೆಸ್ ಬಾರಿಸಿದ ಐತಿಹಾಸಿಕ ಗೋಲಿನೊಂದಿಗೆ ಸ್ಪೇನ್ ತಂಡವು ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸ್ಪೇನ್ ಹೊಸ ಇತಿಹಾಸ:

ಸ್ಪೇನ್ ಪುರುಷರ ತಂಡ ಗೆದ್ದ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2010 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಫುಟ್‌ಬಾಲ್ ಇತಿಹಾಸದಲ್ಲೇ ಒಂದೇ ಸಮಯದಲ್ಲಿ ಪುರುಷರ ಮತ್ತು ಮಹಿಳೆಯರ (2023) ವಿಶ್ವಕಪ್ ಟ್ರೋಫಿಗಳನ್ನು ಹೊಂದಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಗಿದೆ.

ಕಮರಿದ ಅರ್ಜೆಟೀನಾ ಕನಸು:

ಫೈನಲ್​ನಲ್ಲಿ ಸ್ಪೇನ್ ತಂಡವನ್ನು ಮಣಿಸಿ ಅರ್ಜೆಂಟೀನಾ ಹೊಸ ಇತಿಹಾಸ ನಿರ್ಮಿಸುವ ಇರಾದೆಯಲ್ಲಿತ್ತು. ಅಂದರೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕೇವಲ 2 ತಂಡಗಳು ಮಾತ್ರ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆ ತಂಡಗಳೆಂದರೆ ಇಟಲಿ (1934, 1938 ) ಮತ್ತು ಬ್ರೆಝಿಲ್ (1958, 1962).

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!

ಇದಾದ ಬಳಿಕ ಕಳೆದ 60 ವರ್ಷಗಳಿಂದ ಯಾವುದೇ ತಂಡ ಬ್ಯಾಕ್ ಟು ಬ್ಯಾಕ್ ವಿಶ್ವಕಪ್ ಗೆದ್ದಿಲ್ಲ. 2022 ರಲ್ಲಿ ವರ್ಲ್ಡ್ ಕಪ್ ಎತ್ತಿ ಹಿಡಿದಿದ್ದ ಅರ್ಜೆಟೀನಾ ಈ ಬಾರಿ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿ ಹೊಸ ಇತಿಹಾಸ ಬರೆಯುವ ಇರಾದೆಯಲ್ಲಿತ್ತು. ಆದರೆ ಸ್ಪೇನ್ ತಂಡ ಶಿಸ್ತಿನ ಆಟದ ಮುಂದೆ ಸೋಲೊಪ್ಪಿಕೊಳ್ಳದೇ ವಿಧಿಯಿರಲಿಲ್ಲ ಎನ್ನಬಹುದು.

Source link

ಬೆಂಗಳೂರಿಗರೇ ಎಚ್ಚರ! ನೀವು ತಿನ್ನುವ ಸೊಪ್ಪು, ತರಕಾರಿಯಲ್ಲೂ ಇದೆ ಸೀಸದ ಅಂಶ! – Kannada News | Lead in Vegetables: Shocking Pollution Report of Bengaluru Vegetables and AQI Levels

ನೀವು ತಿನ್ನುವ ಸೊಪ್ಪು, ತರಕಾರಿಯಲ್ಲೂ ಇದೆ ಸೀಸದ ಅಂಶ!

ಬೆಂಗಳೂರು, ಜುಲೈ 20: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟ ತಲುಪುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿಗರ ಆರೋಗ್ಯಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುವ ಹಸಿರೆಲೆ ಸೊಪ್ಪು ಮತ್ತು ತರಕಾರಿಗಳಲ್ಲಿ ಸೀಸ (Lead), ಕೀಟನಾಶಕ ಹಾಗೂ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

70ರ ಗಡಿ ದಾಟಿದ AQI: ಕಲುಷಿತಗೊಳ್ಳುತ್ತಿದೆ ನಗರದ ಗಾಳಿ

ನಗರದಲ್ಲಿ ಪ್ರತಿದಿನ ಸುಮಾರು ಮೂರು ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, ವಾಯುಮಾಲಿನ್ಯ ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು (AQI) 68 ರಿಂದ 70ರ ಗಡಿಯನ್ನು ದಾಟಿದ್ದು, ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ವಾಯುಮಾಲಿನ್ಯದ ಪರಿಣಾಮ ಹಾಗೂ ಕೃಷಿಗೆ ಕೈಗಾರಿಕಾ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಬಳಸುತ್ತಿರುವುದರಿಂದ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳುತ್ತಿವೆ ಎಂದು ಪರಿಸರ ತಜ್ಞರಾದ ಅಕ್ಷಯ್ ಹೆಬ್ಳೀಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Bengaluru Air Quality: ಮಲೆನಾಡಿನಲ್ಲಿ ಶುದ್ಧ ಗಾಳಿ, ಬೆಂಗಳೂರಿನಲ್ಲಿ ಉತ್ತಮ ಹವಾಮಾನ

ಆರ್ಗ್ಯಾನಿಕ್ ತರಕಾರಿಗಳೂ ಸುರಕ್ಷಿತವಲ್ಲ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದ ಪರೀಕ್ಷೆಗಳ ಪ್ರಕಾರ, 2024 ರಿಂದ 2026ರ ಅವಧಿಯಲ್ಲಿ ಸಂಗ್ರಹಿಸಲಾದ 1,323 ತರಕಾರಿ ಮಾದರಿಗಳಲ್ಲಿ 29 ಮಾದರಿಗಳು ಸಂಪೂರ್ಣ ಅಸುರಕ್ಷಿತ ಎಂದು ಕಂಡುಬಂದಿದೆ. ವಿಶೇಷವಾಗಿ ಬದನೆಕಾಯಿ, ತೊಂಡೆಕಾಯಿ ಮತ್ತು ಹಸಿರೆಲೆ ಸೊಪ್ಪುಗಳಲ್ಲಿ ಸೀಸದ ಪ್ರಮಾಣ ವಿಪರೀತವಾಗಿದೆ. ಕೆಲವು ಕಡೆ ‘ಆರ್ಗ್ಯಾನಿಕ್’ (ಜೈವಿಕ) ಹೆಸರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲೂ ಈ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿರುವುದು ಗ್ರಾಹಕರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಒಟ್ಟಾರೆಯಾಗಿ, ನಿರಂತರವಾಗಿ ಹೆಚ್ಚುತ್ತಿರುವ ಮಾಲಿನ್ಯವು ಈಗ ಬೆಂಗಳೂರಿಗರ ದಿನನಿತ್ಯದ ಆಹಾರದ ತಟ್ಟೆಯನ್ನೂ ಕಲುಷಿತಗೊಳಿಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಓಂ ನನ್ನ ಆಲ್​ ಟೈಮ್​ ಫೇವರಿಟ್’; ಹಾಡಿ ಹೊಗಳಿದ ಪ್ರಥ್ವಿರಾಜ್ ಸುಕುಮಾರನ್ – Kannada News | Prithviraj Sukumaran Names Shivarajkumar’s Om As His All Time Favorite Indian Film

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹಲವು ದಾಖಲೆ ಬರೆದಿದ್ದ ಖ್ಯಾತಿ ‘ಓಂ’ ಚಿತ್ರಕ್ಕೆ ಇದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಈ ಸಿನಿಮಾ ಬಗ್ಗೆ ಮಾಲಿವುಡ್‌ನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಓಂ’ ಚಿತ್ರ ತಮ್ಮ ಆಲ್ ಟೈಮ್ ಫೇವರಿಟ್ ಸಿನಿಮಾಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ 5 ಪ್ರಮುಖ ಭಾಷೆಗಳ ತಲಾ ಒಂದು ಸಿನಿಮಾವನ್ನು ಆಯ್ಕೆ ಮಾಡುವಾಗ, ಕನ್ನಡದಿಂದ ಅವರು ‘ಓಂ’ ಚಿತ್ರವನ್ನು ಹೆಮ್ಮೆಯಿಂದ ಹೆಸರಿಸಿದ್ದಾರೆ. ಉಪೇಂದ್ರ ಅವರು ಈ ಚಿತ್ರವನ್ನು ಅದ್ಭುತವಾಗಿ ಬರೆದು ನಿರ್ದೇಶಿಸಿದ್ದಾರೆ ಹಾಗೂ ಶಿವರಾಜ್‌ಕುಮಾರ್ ಅವರ ನಟನೆ ಅಪ್ರತಿಮವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಓಂ’ ಸಿನಿಮಾದ ಲೆಗಸಿ ಮತ್ತು ಇತಿಹಾಸ

1995ರಲ್ಲಿ ಬಿಡುಗಡೆಯಾದ ‘ಓಂ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಅಂಡರ್ ವರ್ಲ್ಡ್ ಮತ್ತು ಪ್ರೇಮಕಥೆಯನ್ನು ಬೆರೆಸಿ ಉಪೇಂದ್ರ ಅವರು ಮಾಡಿದ ಈ ಪ್ರಯೋಗ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಸಿನಿಮಾದಲ್ಲಿ ಅಂದಿನ ಕಾಲದ ರಿಯಲ್ ರೌಡಿಗಳನ್ನೇ ಬಳಸಿಕೊಂಡಿದ್ದು ಈ ಚಿತ್ರದ ದೊಡ್ಡ ಹೈಲೈಟ್ ಆಗಿತ್ತು. ಇದು ಪ್ರೇಕ್ಷಕರಿಗೆ ಹೊಸ ರೀತಿಯ ಥ್ರಿಲ್ ನೀಡಿತು.

ಇದನ್ನೂ ಓದಿ: ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ

ಶಿವರಾಜ್‌ಕುಮಾರ್ ಅವರ ಕೆರಿಯರ್‌ನಲ್ಲಿ ಸತ್ಯ ಪಾತ್ರ ಅತಿ ದೊಡ್ಡ ಬ್ರೇಕ್ ನೀಡಿತು. ಅವರ ಆವೇಶ, ಆ್ಯಕ್ಷನ್ ಮತ್ತು ಭಾವನಾತ್ಮಕ ನಟನೆಗೆ ಇಂದಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸಂಗೀತ ನಿರ್ದೇಶನದ ಹೇ ದಿನಕರ, ‘ಓ ಗುಲಾಬಿಯೇ’ ಹಾಡುಗಳು ಎವರ್‌ಗ್ರೀನ್ ಆಗಿ ಉಳಿದಿವೆ.

ಮರುಬಿಡುಗಡೆಯ ದಾಖಲೆ

‘ಓಂ’ ಸಿನಿಮಾ ಬರೋಬ್ಬರಿ 500ಕ್ಕೂ ಹೆಚ್ಚು ಬಾರಿ ಮರುಬಿಡುಗಡೆಗೊಂಡು ದಾಖಲೆ ಬರೆದಿದೆ. ಚಿತ್ರಮಂದಿರಗಳಲ್ಲಿ ಪ್ರತಿ ಬಾರಿ ಬಿಡುಗಡೆಯಾದಾಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಈ ಚಿತ್ರದ ಲೆಗಸಿಗೆ ಸಾಕ್ಷಿಯಾಗಿದೆ. ಪೃಥ್ವಿರಾಜ್ ಸುಕುಮಾರನ್ ಅವರಂತಹ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ನಟ ‘ಓಂ’ ಚಿತ್ರವನ್ನು ಭಾರತದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಗುರುತಿಸಿರುವುದು ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಶ್ನೆ: ಓಂ ರಿಲೀಸ್ ಆಗಿದ್ದು ಯಾವಾಗ?
ಉತ್ತರ: 
1995

ಪ್ರಶ್ನೆ: ಸಿನಿಮಾ ಎಷ್ಟು ಬಾರಿ ರೀ ರಿಲೀಸ್ ಆಗಿದೆ?
ಉತ್ತರ:
500ಕ್ಕೂ ಹೆಚ್ಚು ಬಾರಿ

ಪ್ರಶ್ನೆ: ಓಂ ಸಿನಿಮಾ ನಿರ್ದೇಶನ ಯಾರದ್ದು?
ಉತ್ತರ:
ಉಪೇಂದ್ರ

Source link

Bengaluru Air Quality: ಮಲೆನಾಡಿನಲ್ಲಿ ಶುದ್ಧ ಗಾಳಿ, ಬೆಂಗಳೂರಿನಲ್ಲಿ ಉತ್ತಮ ಹವಾಮಾನ – Kannada News | Bengaluru AQI Today: Air Quality Index of Karnataka Cities on July 20

ಮಲೆನಾಡಿನಲ್ಲಿ ಶುದ್ಧ ಗಾಳಿ, ಬೆಂಗಳೂರಿನಲ್ಲಿ ಉತ್ತಮ ಹವಾಮಾನ
Image Credit source: Deccan herald

ಬೆಂಗಳೂರು ಜುಲೈ 20: ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) ವರದಿಯ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟವು ತೃಪ್ತಿಕರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವದಿಂದಾಗಿ ಧೂಳಿನ ಕಣಗಳು ನಿಯಂತ್ರಣದಲ್ಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಜನರು ನಿರಾಳವಾಗಿ ಉಸಿರಾಡುವಂತಹ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ಸರಾಸರಿ 50 ರಿಂದ 56ರ ಆಸುಪಾಸಿನಲ್ಲಿ ದಾಖಲಾಗಿದೆ. ಇದನ್ನು ಉತ್ತಮ ವಲಯ ಎಂದು ವರ್ಗೀಕರಿಸಲಾಗುತ್ತದೆ. ನಗರದ ಹೆಬ್ಬಾಳ, ಜಯನಗರ ಮತ್ತು ಬನಶಂಕರಿ ಮುಂತಾದ ವಸತಿ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಉತ್ತಮವಾಗಿದ್ದು, AQI 45 ರಿಂದ 55 ರಷ್ಟಿದೆ. ಆದರೆ ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮನಹಳ್ಳಿಯಂತಹ ಕೈಗಾರಿಕಾ ಹಾಗೂ ವಾಹನ ದಟ್ಟಣೆಯ ವಲಯಗಳಲ್ಲಿ ಸೂಚ್ಯಂಕವು ಸ್ವಲ್ಪ ಏರಿಕೆಯಾಗಿದ್ದು, 60 ಕ್ಕಿಂತ ಹೆಚ್ಚು ದಾಖಲಾಗಿದೆ. ಒಟ್ಟಾರೆಯಾಗಿ, ಇಂದಿನ ಹವಾಮಾನವು ಹೊರಾಂಗಣ ಚಟುವಟಿಕೆಗಳು ಹಾಗೂ ದೈಹಿಕ ವ್ಯಾಯಾಮಕ್ಕೆ ಸೂಕ್ತವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದ ಇತರ ನಗರಗಳ ಸ್ಥಿತಿ: ಚಿಕ್ಕಮಗಳೂರು, ಮಡಿಕೇರಿ ಟಾಪ್!

ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಇಂದು ಪರಿಸರ ಸ್ನೇಹಿ ವಾತಾವರಣ ಕಂಡುಬಂದಿದೆ. ಮಲೆನಾಡು ಮತ್ತು ಕರಾವಳಿ ಭಾಗದ ನಗರಗಳಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದೆ.

  • ಚಿಕ್ಕಮಗಳೂರು ಮತ್ತು ಬೆಳಗಾವಿ: ರಾಜ್ಯದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ಹೊಂದಿದ ನಗರಗಳಾಗಿದ್ದು, ಇಲ್ಲಿ AQI ಕೇವಲ 38 ರಿಂದ 43ರಷ್ಟಿದೆ.
  • ಮಡಿಕೇರಿ ಮತ್ತು ಮಂಗಳೂರು: ಪ್ರವಾಸಿ ತಾಣವಾದ ಕೊಡಗಿನ ಮಡಿಕೇರಿ ಹಾಗೂ ಕರಾವಳಿಯ ಮಂಗಳೂರಿನಲ್ಲಿ ವಾಯು ಸೂಚ್ಯಂಕವು 45 ರಿಂದ 47ರ ಆಸುಪಾಸಿನಲ್ಲಿದ್ದು, ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ.
  • ಮೈಸೂರು ಮತ್ತು ಹುಬ್ಬಳ್ಳಿ: ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಯು ಗುಣಮಟ್ಟವು 50 ರ ಆಸುಪಾಸಿನಲ್ಲಿದ್ದು, ಸಾಮಾನ್ಯ ಜನರಿಗೆ ಯಾವುದೇ ಆರೋಗ್ಯದ ಅಪಾಯವಿಲ್ಲದ ಹಂತದಲ್ಲಿದೆ.

ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆ ಹಾಗೂ ಗಾಳಿಯ ತೇವಾಂಶದಿಂದಾಗಿ ವಾತಾವರಣದಲ್ಲಿದ್ದ ಹಾನಿಕಾರಕ ಕಣಗಳಾದ PM2.5 ಮತ್ತು PM10 ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಈ ಪರಿಸ್ಥಿತಿಯು ಮುಂದಿನ ಕೆಲವು ದಿನಗಳ ಕಾಲ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:49 am, Mon, 20 July 26

Source link

‘ರಾಮಾಯಣ’ ವೇದಿಕೆಯಲ್ಲಿ ಯಶ್ ಹವಾ ಕಂಡು ದಂಗಾದ ಬಾಲಿವುಡ್ ಮಂದಿ – Kannada News | Yash Steals the Show at Ramayana Event Outshines Ranbir Kapoor as Craze Soars

ರಾಕಿಂಗ್ ಸ್ಟಾರ್ ಯಶ್ (Yash) ಕ್ರೇಜ್ ಯಾವ ರೀತಿ ಇದೆ ಎಂಬುದನ್ನು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ. ಅವರ ನಟನೆಯ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ಇನ್ನು, ‘ರಾಮಾಯಣ’ ಸಿನಿಮಾದಲ್ಲಿ ಅವರನ್ನು ರಾವಣನಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈಗ ಯಶ್ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅವರು ‘ರಾಮಾಯಣ’ ಸಿನಿಮಾದ ವೇದಿಕೆ ಏರುತ್ತಿದ್ದಂತೆ ಅವರಿಗೆ ದೊಡ್ಡ ಮಟ್ಟದಲ್ಲಿ ಚಪ್ಪಾಳೆ ಹಾಗೂ ಸಿಳ್ಳೆ ಬಿದ್ದಿವೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ಯಶ್ ಅವರು ‘ಕೆಜಿಎಫ್ 2’ ಬಳಿಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ‘ಟಾಕ್ಸಿಕ್’ ಚಿತ್ರವನ್ನು ವಿಶ್ವ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅವರ ‘ಟಾಕ್ಸಿಕ್’ ಚಿತ್ರದ ಬಗ್ಗೆ ನಿರೀಕ್ಷೆ ಇಲ್ಲ ಎಂದೆಲ್ಲ ಬಾಲಿವುಡ್​ನ ಕೆಲವರು ಕೊಂಕು ತೆಗೆದಿದ್ದರು. ಆದರೆ, ಯಶ್ ಜನಪ್ರಿಯತೆ ರಣಬೀರ್ ಕಪೂರ್ ಅವರ ಕ್ರೇಜ್ ಅನ್ನು ಮೀರಿಸಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

‘ರಾಮಾಯಣ’ ಈವೆಂಟ್ ದೆಹಲಿಯಲ್ಲಿ ನಡೆಯಿತು. ಇದಕ್ಕೆ ಚಿತ್ರರಂಗದ ವಿವಿಧ ಸೆಲೆಬ್ರಿಟಿಗಳು ಆಗಮಿಸಿದ್ದರು. ಅದೇ ರೀತಿ, ‘ರಾಮಾಯಣ’ ಟೀಂ ಕೂಡ ಭಾಗವಹಿಸಿತ್ತು. ರಾಮನ ಪಾತ್ರಧಾರಿ ರಣಬೀರ್ ಕಪೂರ್, ಸೀತಾ ಪಾತ್ರಧಾರಿ ಸಾಯಿ ಪಲ್ಲವಿ ಸೇರಿದಂತೆ ತಂಡದ ಅನೇಕರು ವೇದಿಕೆ ಏರಿದರು. ಆಗ ಯಾರೊಬ್ಬರೂ ಸಿಳ್ಳೆ ಹಾಕಲಿಲ್ಲ, ದೊಡ್ಡದಾಗಿ ಕಿರುಚಾಡಲಿಲ್ಲ. ನೆರೆದಿದ್ದ ಜನಸಮೂಹ ಸೈಲೆಂಟ್ ಆಗಿತ್ತು. ಯಾವಾಗ ಯಶ್ ಅವರು ವೇದಿಕೆ ಏರಿದರೋ ಆಗ ಜೋರಾದ ಚಪ್ಪಾಳೆ ಕೇಳಿಸಿತು. ನೆರೆದಿದ್ದವರು ಜೋರಾಗಿ ಕೂಗಿದರು. ಅವರು ಮಾತನಾಡುವಾಗಲೂ ಇದೇ ಪರಿಸ್ಥಿತಿ ಮರುಕಳಿಸಿತು. ಇದು ಯಶ್ ಅವರ ಜನಪ್ರಿಯತೆಯನ್ನು ತೋರಿಸಿದೆ. ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಭಾರತದ ಕನಸು; ದೆಹಲಿ ‘ರಾಮಾಯಣ’ ಈವೆಂಟ್​​ನಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಯಶ್

‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ರಾವಣನಾಗಿ ಅಬ್ಬರಿಸಲು ಯಶ್ ರೆಡಿ ಆಗಿದ್ದಾರೆ. ಅದೇ ರೀತಿ ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ ಹಬ್ಬಕ್ಕೆ

ಪ್ರಶ್ನೆ: ಯಶ್ ಪಾತ್ರವೇನು?
ಉತ್ತರ: ರಾವಣನ ಪಾತ್ರ

ಪ್ರಶ್ನೆ: ಎಷ್ಟು ಭಾಗದಲ್ಲಿ ರಾಮಾಯಣ ಸಿನಿಮಾ ರಿಲೀಸ್ ಆಗಲಿದೆ?
ಉತ್ತರ: ಎರಡು ಭಾಗದಲ್ಲಿ

Source link

Karnataka Weather Forecast: ಕರಾವಳಿ ಕರ್ನಾಟಕ, ಒಳನಾಡಿನಲ್ಲಿ ಗಾಳಿ ಸಹಿತ ಮಳೆ; ಐಎಂಡಿ ಮುನ್ಸೂಚನೆ – Kannada News | Karnataka Weather Forecast: Moderate Rain in Coastal Districts, Strong Winds Across Interior Regions on July 20 21

ಬೆಂಗಳೂರು ಮಳೆ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ತುಸು ಬಿಡುವು ಪಡೆದಿದ್ದ ಮುಂಗಾರು (Monsoon Rain) ಈಗ ಮತ್ತೆ ಸ್ವಲ್ಪ ಮಟ್ಟಿಗೆ ಚುರುಕುಗೊಂಡಿದ್ದು, ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ (Weather Forecast) ನೀಡಿದೆ. ಜುಲೈ 20ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನಲ್ಲೂ ಮಳೆ ಮುನ್ಸೂಚನೆ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದ ಗಾಳಿ ಬೀಸಲಿದೆ.

ಜುಲೈ 21ಕ್ಕೂ ಕರಾವಳಿ, ಒಳನಾಡಿನಲ್ಲಿ ಮಳೆ ಮುನ್ಸೂಚನೆ

ಜುಲೈ 21ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದ ಗಾಳಿ ಬೀಸಲಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆ ಮತ್ತು ಗಾಳಿಯ ಮುನ್ಸೂಚನೆ ನೀಡಲಾಗಿದೆ.

ಸಾರ್ವಜನಿಕರಿಗೆ ಹವಾಮಾನ ಇಲಾಖೆಯ ಸಲಹೆ

  • ಕರಾವಳಿ ಮತ್ತು ಗಿರಿಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಲಾಪಾತಗಳು, ಸಮುದ್ರ ತೀರದ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
  • ಬಲವಾದ ಗಾಳಿ ಬೀಸುವ ಜಿಲ್ಲೆಗಳಲ್ಲಿ ಹಳೆಯ ಮರಗಳು, ತಾತ್ಕಾಲಿಕ ಶೆಡ್‌ಗಳು ಮತ್ತು ಹೋರ್ಡಿಂಗ್‌ಗಳ ಸಮೀಪ ವಾಹನ ನಿಲುಗಡೆ ಮಾಡದಂತೆ ಮನವಿ ಮಾಡಲಾಗಿದೆ.
  • ರೈತರು ಬೆಳೆಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಐಎಂಡಿ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Skanda Shashti Horoscope Today, July 20, 2026: Daily Rashifal for All 12 Zodiac Signs by Dr Basavaraj Guruji

ಇಂದು 2026ರ ಜುಲೈ 20ರ ಸೋಮವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಶುಕ್ಲ ಪಕ್ಷ ಷಷ್ಠಿ ಹಾಗೂ ಹಸ್ತಾ ನಕ್ಷತ್ರದಿಂದ ಕೂಡಿದೆ. ಬೆಳಗ್ಗೆ 7:37 ರಿಂದ 9:13ರವರೆಗೆ ರಾಹುಕಾಲವಿರುತ್ತದೆ. ಇಂದು ಸ್ಕಂದ ಷಷ್ಠಿ ಮಹಾ ಪರ್ವ ದಿನವಾಗಿದ್ದು, ಮಕ್ಕಳ ಆರೋಗ್ಯ ಮತ್ತು ಕುಜ ದೋಷ ನಿವಾರಣೆಗಾಗಿ ಸುಬ್ರಹ್ಮಣ್ಯನ ದರ್ಶನ, ಹುತ್ತಕ್ಕೆ ಪೂಜೆ ಮತ್ತು ಹುತ್ತದ ಮಣ್ಣಿನ ಸ್ನಾನ ಮಾಡುವುದು ಶುಭ. ಅಲ್ಲದೆ, ನಾರಾಯಣ ಭಗವಾನ್ ಜಯಂತ್ಯೋತ್ಸವವೂ ಇದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಭಾವನೆಯನ್ನು ಅಪರಿಚಿತರು ಅರಿಯುವರು… – Kannada News | Daily Horoscope for July 20, 2026: Uttarayan Greeshma season, Ashada Masa shukla Paksha Monday astrology Prediction

ಮೇಷ ರಾಶಿ:

ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು ಸದುಪಯೋಗ ಮಾಡಿಕೊಳ್ಳಬೇಕಿದೆ. ದೇಹವಿಂದು ನಿಮ್ಮ ನಿಯಂತ್ರಣದಲ್ಲಿ ಇರದು. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವರು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ.

ವೃಷಭ ರಾಶಿ:

ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಲಿದೆ. ತಿಳಿವಳಿಕೆಯ ಕೊರತೆಯಿಂದ ವ್ಯವಹಾರದಲ್ಲಿ ನಷ್ಟವಾದೀತು. ಧಾರ್ಮಿಕವಾಗಿ ಶ್ರದ್ಧೆ, ಭಕ್ತಿಗಳು ಕಡಿಮೆ ಆದೀತು. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು.

ಮಿಥುನ ರಾಶಿ:

ಧಾರ್ಮಿಕ ಮತ್ತು ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿ ಇಡುವರು. ದೇಹವನ್ನು ಬಲ ಮಾಡಿಕೊಳ್ಳಲು ಕಸರತ್ತು ಮಾಡುವಿರಿ. ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ಸ್ನೇಹಿತರ ಸಹಾಯವನ್ನು ಕೇಳುವಿರಿ. ಮಂಗಲ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಲಾಗದು. ಬದಲಾವಣೆಗಳನ್ನು ಕಾತರದಿಂದ ಕಾಯುವಿರಿ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ.

ಕರ್ಕಾಟಕ ರಾಶಿ:

ದೂರಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾಗಬಹುದು. ಒಳ್ಳೆಯ ರೂಢಿಯನ್ನು ತಪ್ಪಿಸಿಕೊಳ್ಳುವುದು ಬೇಡ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಿರಿಯರ ಮಾತಿನಿಂದ ನಿಮ್ಮ ಸಂವೇದನಾ ಕೇಂದ್ರವು ತೆರೆದುಕೊಳ್ಳಬಹುದು. ಆಲಸ್ಯದಿಂದ ಮನೆಯಲ್ಲಿ ಬೈಗುಳವನ್ನು ಕೇಳಬೇಕಾಗುವುದು. ನಿಮ್ಮ ಕೋಪಕ್ಕೆ ಒಂದು ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಮಕ್ಕಳ‌ ಮೇಲಿನ ಮೋಹವನ್ನು ಕಡಿಮೆ‌ ಮಾಡಿಕೊಳ್ಳಬೇಕಾಗುವುದು.

ಸಿಂಹ ರಾಶಿ:

ಕಛೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದ್ದರೂ ನಿಮಗೆ ಹಿಂಜರಿಕೆ ಉಂಟಾಗಲಿದೆ. ಒಣ ಭೂಮಿಯ ಮಾರಾಟದಿಂದ ಲಾಭವಿರಲಿದೆ. ವೃತ್ತಿಯ ಸಾಧನೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಂದು ನಿಮ್ಮ ತಾಯಿ ನಿಮಗೆ ಮಾನಸಿಕ ಬಲವನ್ನು ತುಂಬುವಳು. ಸುಳ್ಳು ವ್ಯವಹಾರಗಳು ಹೆಚ್ಚು ಕಾಲ ನಡೆಯದು. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ.

ಕನ್ಯಾ ರಾಶಿ:

ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ವಿಚಿತ್ರ ಎನಿಸಬಹುದು. ತಾಳ್ಮೆಯಿಂದ ಆಗುವ ಕೆಲಸವನ್ನು ತಣ್ಣಗೇ ಮಾಡಿ ಮುಗಿಸಿ. ನಿಮ್ಮವರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ತುಡಿತ ಅತಿಯಾದೀತು‌. ಸಕಾಲದಲ್ಲಿ ಭೋಜನವನ್ನು ಮಾಡಲು ಕಷ್ಟವಾಗುವುದು. ಕುಚೋದ್ಯ ಮಾಡಲು ಹೋಗಿ ಕೆಂಗಣ್ಣಿಗೆ ಗುರಿಯಾಗುವಿರಿ.

ತುಲಾ ರಾಶಿ:

ನಿಮ್ಮ‌ ಆಸಕ್ತಿಯನ್ನು ನೀವು ಬದಲಾಯಿಸಿಕೊಳ್ಳುವುದು ಬೇಡ. ಸಂಗಾತಿಯಿಂದ‌ ನಿರ್ಲಕ್ಷ್ಯಕ್ಕೆ‌ ಒಳಗಾಗುವಿರಿ. ನಿಮ್ಮ ಕೆಲಸದ ಮೇಲೇ ಹೆಚ್ಚು ಗಮನವಿಡುವುದು ಒಳ್ಳೆಯದು.‌ ಇನ್ನೊಬ್ಬರಿಗೆ ನೋವಾಗದಂತೆ ಹೇಳುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಂದ ಹೆಮ್ಮೆ ಪಡುವ ಸಂಗತಿಗಳು ನಿರೀಕ್ಷಿತವಾಗಿ ಬರಲಿದೆ. ನಿಮ್ಮ ಸದ್ಭಾವವನ್ನು ಆಡಿಕೊಳ್ಳಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಅಂತಃಕರಣವು ಶುದ್ಧವಿದ್ದರೆ ನಿಮಗೆ ಸಿಗದು ಸಿಕ್ಕಿಯೇ ಸಿಗುವುದು.

ವೃಶ್ಚಿಕ ರಾಶಿ:

ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಅಸೂಯೆಯಿಂದ‌ ನಿಮ್ಮ ಕೆಲಸವು ಹಿಂದುಳಿಯುವುದು. ಆರಂಭದ ಶೂರತ್ವದಿಂದ ಅಪಮಾನವಾಗುವುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ದುರಭ್ಯಾಸಕ್ಕೆ ಶರಣಾಗಿ ಹಣವನ್ನು ಕಳೆದುಕೊಳ್ಳಬಹುದು. ಅತಿಯಾದ ನಂಬಿಕೆಯು ಮುಳುವಾದೀತು ನಿಮಗೆ. ಶಾರೀರಿಕ ಪೀಡೆಯಿಂದ ಚಿಂತೆ ಉಂಟಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ.

ಧನು ರಾಶಿ:

ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಸಣ್ಣ ವಿಚಾರಗಳಿಗೆ ದ್ವೇಷ ಸಾಧಿಸಿ ಏನು ಮಾಡುವುದಿದೆ. ಮರೆತು ಮುನ್ನಡೆದರೆ ಮಾರ್ಗ ಸುಗಮ. ಇಂದಿನ‌ ಸೋಲೂ ನಿಮಗೆ ಗೆಲುವಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ. ವಿದೇಶದ ವಿನಿಮಯದಿಂದ ಹಠಾತ್ ಲಾಭವು ಕಾಣಿಸುವುದಿ. ಮಕ್ಕಳನ್ನು ನಯವಾದ ಮಾತುಗಳಿಂದ ಸರಿದಾರಿಗೆ ತರಬೇಕಾಗಬಹುದು.

ಮಕರ ರಾಶಿ:

ನಿಮ್ಮ ಜೀವನದ ಎಲ್ಲ ಪರೀಕ್ಷೆಯನ್ನೂ ಪಾಸಾಗಬೇಕು ಎಂಬುದೇ ನಿಮ್ಮ‌ ನಿಶ್ಚಲ ನಿರ್ಧಾರ. ಹಣಕಾಸಿನ ತೊಂದರೆ ಬಂದರೂ ಅದನ್ನು ನಿಭಾಯಿಸುವ ಚಾಣಕ್ಷತನ ನಿಮಗೆ ಗೊತ್ತಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ನಿಮ್ಮ ಪ್ರಗತಿಯು ಸಂದೇಹಕ್ಕೆ ಕಾರಣವಾಗಲಿದೆ. ನಿರುದ್ಯೋಗ ಎಂಬ ಕೊರಗು ನಿಮ್ಮನ್ನು ಕಾಡಬಹುದು. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ.

ಕುಂಭ ರಾಶಿ:

ಕುಟುಂಬದ ಒತ್ತಡವನ್ನು ಕಛೇರಿಗೆ ಒಯ್ಯವುದು ಬೇಡ. ಬಹು ಮುಖ್ಯ ಕೆಲಸಕ್ಕಾಗಿ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಇಂದು ಮಾಡಬೇಕಾದುದನ್ನು ಮಾಡಿ ಮುಗಿಸಿ.‌ ದೈವವನ್ನು ನಂಬಿ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ವಿಷಯವನ್ನು ತಿಳಿದುಕೊಳ್ಳಲು ನಿರ್ಧಾರವನ್ನು ಮಾಡುವಿರಿ. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು.

ಮೀನ ರಾಶಿ:

ನೀವು ಉತ್ತಮ ನಡತೆಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ನಿಮ್ಮ ದುರಭ್ಯಾಸಗಳು ನಿಮ್ಮವರಿಗೆ ಅಪಮಾವನ್ನು ಮಾಡಿಸೀತು. ಆಯಾಸವಾಗಿದ್ದರೆ ವಿಶ್ರಾಂತಿಯನ್ನು ಸ್ವಲ್ಪ ಪಡೆಯಿರಿ. ಅತ್ಯಾಪ್ತರ ಕೆಲವು ವರ್ತನೆಗಳು ನಿಮಗೆ ಹಿಂಸೆಯನ್ನು ಕೊಡುತ್ತಿರುವುದು. ಪ್ರಾಪಂಚಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಇರಲಿದೆ. ಕರ್ತವ್ಯದ ವಿಚಾರದಲ್ಲಿ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಸಾಧ್ಯ, ಕರಣ : ಕೌಲವ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:39 – 09:15, ಯಮಗಂಡ ಕಾಲ 10:50 – 12:26, ಗುಳಿಕ ಕಾಲ 14:12 – 15:37

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಬೃಹತ್ ಗುರಿ ಬೆನ್ನಟ್ಟಲಾಗದೆ ಸೋತ ಟೀಂ ಇಂಡಿಯಾ; ಇಂಗ್ಲೆಂಡ್​ಗೆ ಸರಣಿ – Kannada News | England Beats India 2 1 in ODI Series at Lord’s: Duckett Heroics, Rohit’s Ton Not Enough

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಇಂಗ್ಲೆಂಡ್‌ 27 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇಂಗ್ಲೆಂಡ್‌ ಟಿ20 ಸರಣಿ ಜೊತೆಗೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಬೆನ್ ಡಕೆಟ್ ಅವರ ಶತಕ ಸೇರಿದಂತೆ ಸ್ಫೋಟಕ ಬ್ಯಾಟಿಂಗ್ ಮತ್ತು ಸ್ಯಾಮ್ ಕರನ್ ಅವರ ಅದ್ಭುತ ಸ್ಪೆಲ್‌ ಇಂಗ್ಲೆಂಡ್ ಗೆಲುವಿಗೆ ಕಾರಣವಾಯಿತು. ರೋಹಿತ್ ಶರ್ಮಾ ಅವರ ಐತಿಹಾಸಿಕ ಶತಕ ಕೂಡ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ, 2018 ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್, ಭಾರತದ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಬೆನ್ ಡಕೆಟ್

ಇಂಗ್ಲೆಂಡ್ ಪರ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಉತ್ತಮ ಆರಂಭ ನೀಡಿದರು . ಈ ಜೋಡಿ ಮೊದಲ ವಿಕೆಟ್‌ಗೆ 192 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಜಾಕೋಬ್ ಬೆಥೆಲ್ 93 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ನಂತರ ಜೊತೆಯಾದ ಬೆನ್ ಡಕೆಟ್ ಮತ್ತು ಜೋ ರೂಟ್ ಭಾರತೀಯ ಬೌಲರ್‌ಗಳ ಮೇಲೆ ವಾರಿ ನಡೆಸಿದರು. ಈ ಜೋಡಿ 80 ಎಸೆತಗಳಲ್ಲಿ 101 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು.

ಕೊನೆಯಲ್ಲಿ ಅಬ್ಬರಿಸಿದ ಬಟ್ಲರ್

ಈ ಸಮಯದಲ್ಲಿ, ಬೆನ್ ಡಕೆಟ್ ಶತಕ ಕೂಡ ಪೂರೈಸಿದರು. ಅಂತಿಮವಾಗಿ ಡಕೆಟ್ 135 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ 141 ರನ್‌ಗಳಿಸಿ ಔಟಾದರು. ಜೋ ರೂಟ್ ಒಂದು ಕಡೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಅರ್ಧಶತಕವನ್ನೂ ಸಿಡಿಸಿದರು. ಆದರೆ ನಾಯಕ ಹ್ಯಾರಿ ಬ್ರೂಕ್ 12 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಟ್ಲರ್ 13 ಎಸೆತಗಳಲ್ಲಿ 41 ರನ್ ಬಾರಿಸಿ ಇಂಗ್ಲೆಂಡ್‌ ತಂಡವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು.

Published On – 12:03 am, Mon, 20 July 26

Source link

Exit mobile version