Headlines

ರಸ್ತೆ, ಫುಟ್‌ಪಾತ್‌ಗಳ ಮೇಲೆ ಜಪ್ತಿ ವಾಹನಗಳ ರಾಶಿ: ಕೋಟ್ಯಂತರ ರೂ. ಮೌಲ್ಯದ ಸಾವಿರಾರು ವಾಹನಗಳು ಇಲ್ಲಿ ತುಕ್ಕು ಹಿಡಿಯುತ್ತಿರುವುದೇಕೆ? – Kannada News | Bengaluru Police Yards: Thousands of Seized Vehicles Rusting due to Auction Delay

ಬೆಂಗಳೂರು, ಜುಲೈ 19: ನಗರದ ವಿವಿಧ ಪೊಲೀಸ್ ಠಾಣೆಗಳ ಆವರಣಗಳು ಮತ್ತು ನಿಗದಿತ ಪೊಲೀಸ್ ಯಾರ್ಡ್‌ಗಳು (Police Yards) ಈಗ ಭಾರಿ ಪ್ರಮಾಣದ ಜಪ್ತಿ ಮಾಡಿದ ವಾಹನಗಳಿಂದ ತುಂಬಿ ತುಳುಕುತ್ತಿವೆ. ವಿವಿಧ ಅಪರಾಧ ಪ್ರಕರಣಗಳು, ಅಪಘಾತಗಳು ಹಾಗೂ ಕಾನೂನು ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಸಾವಿರಾರು ಕಾರುಗಳು, ಬೈಕ್‌ಗಳು ಮತ್ತು ಆಟೋಗಳು ವರ್ಷಗಟ್ಟಲೆಯಿಂದ ಧೂಳು ತಿನ್ನುತ್ತಾ, ತುಕ್ಕು ಹಿಡಿಯುತ್ತಾ ನಿಂತಲ್ಲೇ ಹಾಳಾಗುತ್ತಿವೆ. ಡೆಕ್ಕನ್ ಹೆರಾಲ್ಡ್  ವರದಿಯು ಈ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದು, ನಗರದಲ್ಲಿ ಇದು ದೊಡ್ಡ ಸುರಕ್ಷತಾ…

Read More

ಸೈಬರ್​​ ವಂಚಕರ ಮಾತು ನಂಬಿ 22 ಲಕ್ಷ ರೂಪಾಯಿ ಕಳೆದುಕೊಂಡ ನಿವೃತ್ತ ಬ್ಯಾಂಕ್ ನೌಕರ – Kannada News | Udupi: Retired Bank Employee Cheated of ₹22 Lakh in Digital Arrest Scam by Imposters Posing as ED and CBI Officers

ಉಡುಪಿ, ಜುಲೈ, 19: ಡಿಜಿಟಲ್​​ ವಂಚನೆಗಳ ಬಗ್ಗೆ ಪೊಲೀಸರಿಂದ ಸಾಕಷ್ಟು ಜಾಗೃತಿ ಬಳಿಕವೂ, ದುರ್ದೈವವೆಂಬಂತೆ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ನಡುವೆ ಸೈಬರ್ ಕ್ರೈಂ, ಜಾರಿ ನಿರ್ದೇಶನಾಲಯ (ED) ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ಕರೆ ಮಾಡಿದ್ದ ಸೈಬರ್​​ ವಂಚಕರು 76 ವರ್ಷದ ನಿವೃತ್ತ ಬ್ಯಾಂಕ್ ನೌಕರನಿಂದ ಬರೋಬ್ಬರಿ 22 ಲಕ್ಷ ರೂಪಾಯಿ ಲಪಟಾಯಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ವಂಚನೆ ನಡೆದಿದ್ದು ಹೇಗೆ? ದೂರಿನಲ್ಲಿ ತಿಳಿಸಿರುವಂತೆ, ಜುಲೈ 10ರಂದು ಮಧ್ಯಾಹ್ನ 3 ಗಂಟೆ…

Read More

ಫೈನಲ್ ಪಂದ್ಯಕ್ಕೂ ಮುನ್ನ ಯಮಾಲ್ ವಿಚಿತ್ರ ‘ಶಪಥ’ – Kannada News | Lamine Yamal promised to grow a full beard

ಜಗತ್ತಿನಾದ್ಯಂತ ಫಿಫಾ ವಿಶ್ವಕಪ್ ಫೈನಲ್ ಫೀವರ್ ಶುರುವಾಗಿದೆ. ಭಾನುವಾರ (ಜುಲೈ 19) ನಡೆಯಲಿರುವ ಮಹಾಫೈನಲ್ ಕದನದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಸ್ಪೇನ್ ತಂಡದ ಯುವ ಸೆನ್ಸೇಷನ್ ಲಾಮಿನ್ ಯಮಾಲ್ (Lamine Yamal) ವಿಚಿತ್ರ ಶಪಥವೊಂದನ್ನು ಮಾಡಿದ್ದಾರೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಯಮಾಲ್, “ಈ ಬಾರಿ ಸ್ಪೇನ್ ತಂಡ ವಿಶ್ವಕಪ್ ಗೆದ್ದರೆ, ನಾನು ಮುಂದಿನ ಮೂರು ವಾರಗಳ ಕಾಲ ಪೂರ್ತಿಯಾಗಿ ಗಡ್ಡ…

Read More

Gold Rate: ಬಂಗಾರ ದರ ಸ್ವಲ್ಪ ಹೆಚ್ಚಳ; 13,135 ರೂ ಮುಟ್ಟಿದ ಆಭರಣ ಚಿನ್ನದ ಬೆಲೆ – Kannada News | Gold Price Today on 19th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 19: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ತುಸು ಏರಿದೆ. ಒಂದು ಗ್ರಾಮ್​ಗೆ ಇದರ ಬೆಲೆ (Gold Rates) 70 ರೂ ಜಿಗಿದಿದೆ. ವಿದೇಶಗಳಲ್ಲಿ ಕೆಲ ಚಿನ್ನದ ಬೆಲೆ ಸತತವಾಗಿ ತಗ್ಗಿದೆ. ನಿನ್ನೆ 25 ರೂ ಇಳಿದಿದ್ದ ಇದರ ಬೆಲೆ ಇಂದು ಶುಕ್ರವಾರ 70 ರೂ ಕಡಿಮೆಗೊಂಡಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬಂಗಾರದ ದರ ಇಳಿದಿದೆ. ಶುಕ್ರವಾರ 5 ರೂ ಕಡಿಮೆಗೊಂಡಿದ್ದ ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22…

Read More

ಬ್ರಹ್ಮಕಲಶ: 1 ಮಿಲಿಯನ್ ಇನ್‌ಸ್ಟಾಗ್ರಾಮ್ ರೀಲ್ಸ್ ಮೈಲಿಗಲ್ಲು ತಲುಪಿದ ಮೊದಲ ಕನ್ನಡ ಹಾಡು – Kannada News | Rishab Shetty Kantara Chapter 1 Brahmakalasha Song creates Record 1 Million Instagram reels

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಈವರೆಗಿನ ವೃತ್ತಿಜೀವನದಲ್ಲೇ ಅತಿ ದೊಡ್ಡ ಸಕ್ಸಸ್ ಎನಿಸಿಕೊಂಡ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾದ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ, ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಬೆನ್ನಲ್ಲೇ ಈಗ ಮತ್ತೊಂದು ಅಪರೂಪದ ಸಾಧನೆಯನ್ನು ಈ ಸಿನಿಮಾ ಮಾಡಿದೆ. ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆಯುತ್ತಿದ್ದರೂ ಇದರ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ ಎಂಬುದಕ್ಕೆ ಈ ಹೊಸ ದಾಖಲೆಯೇ ಸಾಕ್ಷಿ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್…

Read More

ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ, ಅವರ ದಾಂಪತ್ಯ ಆದರ್ಶ: ಬ್ರಹ್ಮಾಂಡ ಗುರೂಜಿ – Kannada News | Brahmanda Guruji Reflects on Late Chennamma’s Devotion, Highlights Spiritual Influence on Deve Gowda’s Life

ಬೆಂಗಳೂರು, ಜುಲೈ 19:  ಚೆನ್ನಮ್ಮನವರು ದೇವೇಗೌಡರ ಮನೆಯ ಮಹಾಲಕ್ಷ್ಮೀ. ಮನೆಯ ಮಕ್ಕಳು, ಮೊಮ್ಮಕ್ಕಳ ಯಶಸ್ಸು ಕೀರ್ತಿ ಪಡೆಯಲು ಮತ್ತು ದೇವೇಗೌಡರನ್ನು ಮೂರು ಬಾರಿ ಬದುಕಿಸಿದ್ದು ಕೂಡ ಪರಮ ದೈವ ಭಕ್ತೆ ಚೆನ್ನಮ್ಮನವರು. ಗಂಡ ಹೊರಗೆ ಹೋಗಿ ಬಂದರೆ ದೃಷ್ಟಿ ತೆಗೆಯುತ್ತಿದ್ದ ಅವರ ದಾಂಪತ್ಯ ನೋಡಿ ಇಂದಿನವರು ಕಲಿಯಬೇಕು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ದೇವೇಗೌಡರ ಪತ್ನಿ ಅವರಿಗೆ 89 ವರ್ಷ ವಯಸ್ಸಾಗಿತ್ತು. ಈ ಒಂಭತ್ತು ಎನ್ನುವುದು ಗಂಡಾಂತರ. ಗಂಡು ಅಥವಾ ಹೆಣ್ಣು ಯಾರಿಗೇ ಆದರೂ 9ರ ಘಟ್ಟ…

Read More

ದೇಸಿ ಶ್ವಾನ ದತ್ತು ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ: ಅನಾಥ ನಾಯಿಗಳನ್ನು ಎತ್ತಿ ಮುದ್ದಾಡಿದ ಸಾರ್ವಜನಿಕರು – Kannada News | ‘Adopt Me Second Innings’ Drive Connects Stray Dogs with Forever Homes in Bengaluru

ಸಮಾಜದಲ್ಲಿ ಮನುಷ್ಯರ ರೀತಿ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಆದರೆ ಅವುಗಳ ನಿಯಂತ್ರಣ ಕೂಡ ಮುಖ್ಯ. ಬೀದಿ ನಾಯಿಗಳ ನಿಯಂತ್ರಣ ಕೇವಲ ಜಿಬಿಎ ಜವಾಬ್ದಾರಿ ಮಾತ್ರವಲ್ಲ. ಜನಸಾಮಾನ್ಯರೂ ಕೂಡ ಪ್ರಾಣಿಗಳ ಪೋಷಣೆಗೆ ಕೈಜೋಡಿಸಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ಅನಾಥ ನಾಯಿಗಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ “ಅಡಾಪ್ಟ್ ಮೀ ಸೆಕೆಂಡ್ ಇನ್ನಿಂಗ್ಸ್” ಅಭಿಯಾನದಡಿ ದೇಸಿ ಶ್ವಾನ ದತ್ತು ಕಾರ್ಯಕ್ರಮವನ್ನು…

Read More

ಬಟ್ಟೆ ಬಿಚ್ಚಿ ದೇವಸ್ಥಾನಕ್ಕೆ ನುಗ್ಗಿ, ದೇವಿಯ ವಿಗ್ರಹದ ಜೊತೆ ಕೆರೆಗೆ ಹಾರಿದ ಸಾಫ್ಟ್​ವೇರ್ ಇಂಜಿನಿಯರ್! – Kannada News | Hyderabad Software Engineer Enters Temple without Cloth, Takes Goddess Idol, Jumps Into Pond, dies

ಹೈದರಾಬಾದ್, ಜುಲೈ 19: ಆಕೆಯ ಹೆಸರು ತೇಜಸ್ವಿನಿ. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಮೂಲದ ವಕ್ಕುಲಗಡ್ಡಿ ಈಶ್ವರ್ ರಾವ್ ಮತ್ತು ಅರುಣಾ ದಂಪತಿಯ ಪುತ್ರಿಯಾದ 25 ವರ್ಷದ ತೇಜಸ್ವಿನಿ ಬೆಂಗಳೂರಿನಲ್ಲಿ (Bengaluru) ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ತೀವ್ರ ಒತ್ತಡವನ್ನು ಎದುರಿಸಿದ ಅವರು 6 ತಿಂಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ಇದಾದ ನಂತರ, 2 ತಿಂಗಳ ಹಿಂದೆ ಅವರು ತಮ್ಮ ತಾಯಿ ಅರುಣಾ ಅವರೊಂದಿಗೆ ಹೈದರಾಬಾದ್‌ಗೆ (Hyderabad) ಬಂದು…

Read More

ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!

ಬಾಗಲಕೋಟೆ, ಜುಲೈ 19: ಜಿಲ್ಲೆಯ ಇಳಕಲ್ ನಗರದಲ್ಲಿ ನಿನ್ನೆ ರಾತ್ರಿ ಸತತ 6 ರಿಂದ 7 ಗಂಟೆಗಳ ಕಾಲ ಸುರಿದ ಭರ್ಜರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸುಮಾರು ಎರಡು ಅಡಿಯಷ್ಟು ನೀರು ನಿಂತಿದ್ದರಿಂದ ಕಾರು ಮತ್ತು ಬೈಕ್ ಸವಾರರು ತೀವ್ರ ಸಂಕಷ್ಟ ಎದುರಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇನ್ನು ಹಲವು ವಸತಿ ಪ್ರದೇಶಗಳಲ್ಲಿ ಮಳೆ ನೀರು ಮನೆಗಳ ಬಾಗಿಲಿಗೆ ಬಂದು…

Read More

‘ಸಾವರ್ಕರ್’ ಕುರಿತು ಸಿನಿಮಾ ಮಾಡಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ರಾಷ್ಟ್ರ ಪ್ರಶಸ್ತಿ ಗೆದ್ದ ರಣದೀಪ್ ಹೂಡಾ – Kannada News | Randeep Hooda wins National Film Award Best Debut Director for Swatantryaveer Savarkar

ಪ್ರತಿಷ್ಠಿತ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಬಾಲಿವುಡ್‌ನ ಬಹುಮುಖ ಪ್ರತಿಭೆ ರಣದೀಪ್ ಹೂಡಾ (Randeep Hooda) ಅವರು ತಮ್ಮ ಚೊಚ್ಚಲ ನಿರ್ದೇಶನದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ (Swatantryaveer Savarkar) ಸಿನಿಮಾಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ (Best Debut Director) ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಕೇವಲ ನಿರ್ದೇಶನ ಮಾತ್ರವಲ್ಲದೆ, ಮುಖ್ಯ ಭೂಮಿಕೆಯಲ್ಲಿ ನಟಿಸಿ, ಸಹ-ಬರಹಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈ ಗೌರವಕ್ಕೆ ಪಾತ್ರರಾದ ಬೆನ್ನಲ್ಲೇ ರಣದೀಪ್ ಹೂಡಾ ಅವರು ಚಿತ್ರದ ಜರ್ನಿ ಮತ್ತು ತಾವು…

Read More