‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು – Kannada News | H.D. Deve Gowda’s Wife Chennamma Passes Away: Brother Recalls Her Humble Life and Support

ಹಾಸನ, ಜುಲೈ 18: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಕುಟುಂಬದ ಸದಸ್ಯರಿಗೆ ಆಘಾತ ಉಂಟಾಗಿದೆ. ಚೆನ್ನಮ್ಮ ಅವರ ಸಹೋದರ ವಿಶ್ವನಾಥ್, ಅಕ್ಕನ ನಿಧನಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದು, ‘‘ಅವರು ನಮ್ಮ ಕುಟುಂಬಕ್ಕೆ ದೇವರಾಗಿದ್ದರು. ನಮ್ಮನ್ನು ಸಾಕಿ, ಬೆಳೆಸಿದ್ದು ಅವರೇ. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಮ್ಮ ವಹಿಸಿಕೊಂಡಿದ್ದರು. ನಾವು ಅವರ ಹಾಕಿದ ಗೆರೆ ದಾಟುತ್ತಿರಲಿಲ್ಲ. ಅವರು ನಮಗೆ ದೇವರು. ಅವರ ನೆರವಿನಿಂದಲೇ ನಾವು ಉತ್ತಮ ಉದ್ಯೋಗ ಪಡೆದು ಗೌರವಯುತ ಜೀವನ ನಡೆಸಲು ಸಾಧ್ಯವಾಯಿತು. ಪತಿ ಪ್ರಧಾನಿ, ಪುತ್ರ ಮುಖ್ಯಮಂತ್ರಿ ಮತ್ತು ಸಚಿವರಾದರು, ಅಳಿಯ ದೊಡ್ಡ ವೈದ್ಯರಾದರೂ ಚೆನ್ನಮ್ಮ ಅವರು ಎಂದಿಗೂ ಸರಳತೆ ಕಾಯ್ದುಕೊಂಡಿದ್ದರು. ಯಾವುದೇ ಅಹಂ ಇಲ್ಲದೆ ಜೀವನ ಸಾಗಿಸಿದರು’’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದೇವೇಗೌಡರ ಪತ್ನಿ ಚೆನ್ನಮ್ಮ ಅಗಲಿಕೆಗೆ ಕಂಬನಿ ಮಿಡಿದ ರಾಜಕೀಯ ನಾಯಕರು: ಯಾರು ಏನೇನು ಹೇಳಿದ್ದಾರೆ ನೋಡಿ – Kannada News | Deve Gowda’s Wife Chennamma Passes Away; Political Leaders Offer Condolences

ಬೆಂಗಳೂರು, ಜುಲೈ 18: ಉಸಿರಾಟದ ತೊಂದರೆ ಅಂತಾ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ಸೇರಿದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ (HD Deve Gowda) ಪತ್ನಿ ಚೆನ್ನಮ್ಮ ಶನಿವಾರ ವಿಧಿವಶರಾಗಿದ್ದಾರೆ. ಬದುಕಿನುದ್ದಕ್ಕೂ ಹಲವು ಸಂಕಷ್ಟ ಎದುರಿಸಿ ಗೆದ್ದಿದ್ದ ಚೆನ್ನಮ್ಮ (Chennamma), ಈ ಬಾರಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ರಾಜಕೀಯ ನಾಯಕರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

”ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು‌ ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ – ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು”.

ಇದನ್ನೂ ಓದಿ: ದೇವೇಗೌಡರ ಬೆನ್ನಿಗೆ ನಿಂತಿದ್ದ ಧೀಶಕ್ತಿ: ಅತಿಥಿಗಳ ಪಾಲಿನ ಅನ್ನಪೂರ್ಣೆ; ಕುಟುಂಬ ಮುನ್ನಡೆಸಿದ ಮಹಾತಾಯಿ ‘ಚೆನ್ನಮ್ಮ’

”ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಸಚಿವ ಪ್ರಲ್ಹಾದ​​ ಜೋಶಿ ಸಂತಾಪ

‘‘ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸರಳತೆ ಹಾಗೂ ತಾಳ್ಮೆಯ ಸಾಕಾರಮೂರ್ತಿಯಾಗಿದ್ದ ಅವರು, ಶ್ರೀ ದೇವೇಗೌಡರ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಭದ್ರ ಬುನಾದಿಯಾಗಿ, ಇಡೀ ಕುಟುಂಬವನ್ನು ಮಮತೆಯಿಂದ ಮುನ್ನಡೆಸಿದ ಆದರ್ಶ ಮಾತೃಶಕ್ತಿಯಾಗಿದ್ದರು. ಅವರ ಅಗಲಿಕೆ ಗೌಡರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ

‘‘ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು. ಅವರ ಸರಳತೆ, ಸಹನೆ ಹಾಗೂ ತಮ್ಮ ಕುಟುಂಬಕ್ಕೆ ನೀಡಿದ ಅಚಲ ಬೆಂಬಲ ಸದಾ ಸ್ಮರಣೀಯವಾದದ್ದು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ದೇವೇಗೌಡರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ.

ಆರ್. ಅಶೋಕ್ ಸಂತಾಪ

ಇನ್ನು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್​​ ಕೂಡ ಸಂತಾಪ ಸೂಚಿಸಿದ್ದಾರೆ. ‘‘ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಒಬ್ಬ ಕುಟುಂಬದ ಮಾತೃಮೂರ್ತಿಯ ಅಗಲಿಕೆ ಆ ಕುಟುಂಬಕ್ಕೆ ಎಂದಿಗೂ ತುಂಬಲಾರದ ನಷ್ಟ. ಈ ಕಠಿಣ ಮತ್ತು ನೋವಿನ ಕ್ಷಣದಲ್ಲಿ ಪೂಜ್ಯ ಶ್ರೀ ಎಚ್.ಡಿ. ದೇವೇಗೌಡ ಅವರಿಗೂ, ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಹಾಗೂ ಶ್ರೀ ದೇವೇಗೌಡರ ಕುಟುಂಬದ ಎಲ್ಲ ಸದಸ್ಯರಿಗೂ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಭಗವಂತನು ದಿವಂಗತ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದಿದ್ದಾರೆ.

ಇದನ್ನೂ ಓದಿ: ಕುಟುಂಬದ ಹೊರೆ ಬೀಳದಂತೆ ಸಂಸಾರ ನಿಭಾಯಿಸಿದ್ದ ಹೆಂಡ್ತಿಯನ್ನು ಕಳೆದುಕೊಂಡು ದೇವೇಗೌಡ್ರು ಕಣ್ಣೀರು

ಎಂಎಲ್​ಸಿ ಸಿ.ಟಿ.ರವಿ ಸಂತಾಪ ಸೂಚಿಸಿದ್ದು, ‘‘ದೇವೇಗೌಡರ ರಾಜಕೀಯ ಏಳುಬೀಳುಗಳಲ್ಲಿ ಜತೆಯಾಗಿದ್ದರು. ಮನೆಗೆ ಯಾರೇ ಬಂದರೂ ಪ್ರೀತಿಯಿಂದ ಕಾಣುತ್ತಿದ್ದರು. ಯಜಮಾನರ ಸಾರ್ವಜನಿಕ ಕಾರ್ಯಕ್ಕೆ ಶಕ್ತಿಯಾಗಿದ್ದರು. ಮಾತೃಶ್ರೀಯಾಗಿಯೇ ಇದ್ದಂತಹ ಚೆನ್ನಮ್ಮ ಅಗಲಿದ್ದಾರೆ. ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’’ ಎಂದಿದ್ದಾರೆ.


ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:17 pm, Sat, 18 July 26

Source link

ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗಿದರೆ ಅದನ್ನು ತಿನ್ನುವುದು ಸುರಕ್ಷಿತವೇ ಅಥವಾ ವಿಷಕಾರಿಯೇ ತಿಳಿದುಕೊಳ್ಳಿ – Kannada News | Green Potatoes: Are They Toxic? Everything You Need to Know

ಆಲೂಗಡ್ಡೆ ಅಡುಗೆ ಮನೆಯಲ್ಲಿ ಹೆಚ್ಚು ಬಳಸುವ ತರಕಾರಿಗಳಲ್ಲಿ ಒಂದಾಗಿದೆ. ಪಲ್ಯ, ಸಾಂಬಾರ್, ಪರೋಟಾ, ಸ್ನ್ಯಾಕ್ಸ್‌ ಸೇರಿದಂತೆ ಅನೇಕ ಖಾದ್ಯಗಳಲ್ಲಿ ಆಲೂಗಡ್ಡೆ ಪ್ರಮುಖ ಸ್ಥಾನ ಪಡೆದಿದೆ. ಆದರೆ ಕೆಲವೊಮ್ಮೆ ಮನೆಯಲ್ಲೇ ಕೆಲವು ದಿನ ಇಟ್ಟಿರುವ ಆಲೂಗಡ್ಡೆಗಳು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಬಹುದು. ಇದನ್ನು ಹಲವರು ಸಾಮಾನ್ಯ ಬಣ್ಣ ಬದಲಾವಣೆ ಎಂದು ಭಾವಿಸಿ ಬಳಸಿಬಿಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು. ಇದು ಕೇವಲ ಬಣ್ಣ ಬದಲಾವಣೆ ಮಾತ್ರವಲ್ಲ, ಅದರೊಳಗೆ ವಿಷಕಾರಿ ರಾಸಾಯನಿಕ ಪ್ರಮಾಣ ಹೆಚ್ಚಾಗುತ್ತಿರುವ ಸೂಚನೆಯೂ ಆಗಿರಬಹುದು. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಅದನ್ನು ತಿಂದರೆ ಏನಾಗಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಆಲೂಗಡ್ಡೆ ಹೆಚ್ಚು ಸಮಯ ಸೂರ್ಯನ ಬೆಳಕು ಅಥವಾ ಕೃತಕ ಬೆಳಕಿಗೆ ಒಡ್ಡಿಕೊಂಡಾಗ ಅದರ ಮೇಲ್ಮೈಯಲ್ಲಿ ಕ್ಲೋರೋಫಿಲ್ (Chlorophyll) ಉತ್ಪತ್ತಿಯಾಗುತ್ತದೆ. ಇದೇ ಕಾರಣಕ್ಕೆ ಅದು ಹಸಿರು ಬಣ್ಣದಲ್ಲಿ ಕಾಣಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ಇದರ ಜೊತೆಗೆ ಸೋಲನೈನ್ (Solanine) ಎಂಬ ನೈಸರ್ಗಿಕ ವಿಷಕಾರಿ ಸಂಯುಕ್ತದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸೋಲನೈನ್ ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಸೇರಿದರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಹಸಿರು ಆಲೂಗಡ್ಡೆ ತಿಂದರೆ ಏನಾಗಬಹುದು?

ಸೋಲನೈನ್ ಅಧಿಕವಾಗಿರುವ ಆಲೂಗಡ್ಡೆ ಸೇವಿಸಿದರೆ ಕೆಲವರಲ್ಲಿ ಈ ಲಕ್ಷಣಗಳು ಕಾಣಿಸಬಹುದು.

  • ವಾಕರಿಕೆ ಮತ್ತು ವಾಂತಿ
  • ಹೊಟ್ಟೆನೋವು
  • ಅತಿಸಾರ
  • ತಲೆಸುತ್ತು
  • ತೀವ್ರ ತಲೆನೋವು
  • ದೌರ್ಬಲ್ಯ
  • ಅಪರೂಪದ ಸಂದರ್ಭಗಳಲ್ಲಿ ನರಮಂಡಲದ ಮೇಲೆ ಪರಿಣಾಮ
  • ಮಕ್ಕಳು, ವಯೋವೃದ್ಧರು ಹಾಗೂ ಕಡಿಮೆ ರೋಗನಿರೋಧಕ ಶಕ್ತಿ ಇರುವವರಲ್ಲಿ ಇದರ ಪರಿಣಾಮ ಹೆಚ್ಚಾಗಿ ಕಾಣಿಸಬಹುದು.

ಹಸಿರು ಭಾಗ ಕತ್ತರಿಸಿ ತಿನ್ನಬಹುದೇ?

ಆಲೂಗಡ್ಡೆಯ ಒಂದು ಸಣ್ಣ ಭಾಗ ಮಾತ್ರ ಹಸಿರಾಗಿದ್ದರೆ, ಆ ಭಾಗವನ್ನು ಹಾಗೂ ದಪ್ಪ ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಉಳಿದ ಭಾಗವನ್ನು ಬಳಸಬಹುದು. ಆದರೆ ಹೆಚ್ಚಿನ ಭಾಗ ಹಸಿರಾಗಿದ್ದರೆ, ಮೊಳಕೆಗಳು ಹೆಚ್ಚಾಗಿ ಬಂದಿದ್ದರೆ, ಕಹಿ ರುಚಿ ಕಂಡುಬಂದರೆ ಅಥವಾ ವಾಸನೆ ಇದ್ದರೆ ಮೃದುವಾಗಿ ಕೊಳೆತಿದ್ದರೆ ಅದನ್ನು ಬಳಸುವುದು ಒಳ್ಳೆಯದಲ್ಲ.

ಮೊಳಕೆ ಬಂದ ಆಲೂಗಡ್ಡೆಯೂ ಸುರಕ್ಷಿತವೇ?

ಸಾಮಾನ್ಯವಾಗಿ ಮೊಳಕೆ ಬಂದ ಆಲೂಗಡ್ಡೆಯಲ್ಲೂ ಸೋಲನೈನ್ ಪ್ರಮಾಣ ಹೆಚ್ಚಾಗಿರಬಹುದು. ಸಣ್ಣ ಮೊಳಕೆ ಇದ್ದರೆ ಅದನ್ನು ಹಾಗೂ ಸುತ್ತಲಿನ ಭಾಗವನ್ನು ತೆಗೆದು ಬಳಸಬಹುದು. ಆದರೆ ಹೆಚ್ಚು ಮೊಳಕೆ ಬಂದಿದ್ದರೆ ಅಥವಾ ಸಂಪೂರ್ಣ ಆಲೂಗಡ್ಡೆ ಸುಕ್ಕುಗಟ್ಟಿದ್ದರೆ ಬಳಸದೇ ಇರುವುದು ಉತ್ತಮ.

ಇದನ್ನೂ ಓದಿ: ಪ್ರತಿದಿನ ಒಂದು ಸಣ್ಣ ತುಂಡು ಶುಂಠಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು!

ಆಲೂಗಡ್ಡೆಯನ್ನು ಸರಿಯಾಗಿ ಸಂಗ್ರಹಿಸಿಡುವುದು ಹೇಗೆ?

  • ತಂಪಾದ, ಒಣ ಹಾಗೂ ಕತ್ತಲೆ ಇರುವ ಜಾಗದಲ್ಲಿ ಇಡಿ.
  • ಗಾಳಿಯಾಡುವ ಬುಟ್ಟಿ ಅಥವಾ ಕಾಗದದ ಚೀಲದಲ್ಲಿ ಸಂಗ್ರಹಿಸಿ.
  • ನೇರ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ.
  • ಪ್ಲಾಸ್ಟಿಕ್ ಕವರ್‌ನಲ್ಲಿ ಹೆಚ್ಚು ದಿನ ಇಡಬೇಡಿ.
  • ಈರುಳ್ಳಿ ಜೊತೆಗೆ ಒಂದೇ ಜಾಗದಲ್ಲಿ ಸಂಗ್ರಹಿಸಬೇಡಿ. ಎರಡರಿಂದ ಹೊರಬರುವ ಅನಿಲಗಳು ಆಲೂಗಡ್ಡೆ ಬೇಗ ಹಾಳಾಗಲು ಕಾರಣವಾಗಬಹುದು.
  • ಫ್ರಿಜ್‌ನಲ್ಲಿ ಇಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಕಡಿಮೆ ತಾಪಮಾನದಲ್ಲಿ ಪಿಷ್ಟ (ಸ್ಟಾರ್ಚ್) ಸಕ್ಕರೆಯಾಗಿ ಬದಲಾಗುವುದರಿಂದ ರುಚಿ ಮತ್ತು ಗುಣಮಟ್ಟ ಬದಲಾಗಬಹುದು.

ಆಲೂಗಡ್ಡೆ ಖರೀದಿಸುವಾಗ ಗಮನಿಸಬೇಕಾದ ಅಂಶಗಳು:

  • ಹಸಿರು ಬಣ್ಣದ ಕಲೆಗಳಿಲ್ಲದ ಆಲೂಗಡ್ಡೆ ಆಯ್ಕೆ ಮಾಡಿ.
  • ಗಟ್ಟಿಯಾಗಿರುವ ಮತ್ತು ಮೃದುವಾಗದ ಆಲೂಗಡ್ಡೆ ಖರೀದಿಸಿ.
  • ಹೆಚ್ಚು ಮೊಳಕೆ ಬಂದಿರುವ ಅಥವಾ ಸುಕ್ಕುಗಟ್ಟಿರುವ ಆಲೂಗಡ್ಡೆ ಖರೀದಿಸಬೇಡಿ.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಆಹಾರ ವಿಷಬಾಧೆ, ತೀವ್ರ ಹೊಟ್ಟೆನೋವು, ವಾಂತಿ ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ ರೋಹಿತ್, ಕೊಹ್ಲಿ

Source link

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಮಿಂಚಿದ ಕನ್ನಡ ಸಿನಿಮಾ ‘ಮಿಥ್ಯ’ – Kannada News | Mithya Kannada movie got three mentions in 72nd National film award

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು (ಜುಲೈ 18) ಘೋಷಿಸಲಾಗಿದೆ. ಕಳೆದ ಕೆಲವ ವರ್ಷಗಳಂತೆ ಈ ವರ್ಷವೂ ಸಹ ದಕ್ಷಿಣ ಭಾರತದ ಸಿನಿಮಾಗಳೇ ಪಾರುಪತ್ಯ ಸಾಧಿಸಿವೆ. ಮಮ್ಮುಟಿ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡರೆ, ಅತ್ಯುತ್ತಮ ಮನೊರಂಜನಾ ಸಿನಿಮಾ ಎನಿಸಿಕೊಂಡಿದೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’. ಹಲವಾರು ದಕ್ಷಿಣ ಭಾರತದ ಸಿನಿಮಾಗಳು ಈ ಬಾರಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿವೆ. ಕನ್ನಡಕ್ಕೆ ಸಹ ಎರಡು ಪ್ರಶಸ್ತಿಗಳು ಲಭ್ಯವಾಗಿರುವುದು ವಿಶೇಷ.

ರಕ್ಷಿತ್ ಶೆಟ್ಟಿ ಮತ್ತು ಕೆಆರ್​​ಜಿ ಒಟ್ಟಿಗೆ ನಿರ್ಮಿಸಿರುವ ಸಿನಿಮಾ ‘ಮಿಥ್ಯ’ಕ್ಕೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಒಟ್ಟು ಮೂರು ಸಿನಿಮಾಗಳು ಧಕ್ಕಿವೆ. ಮುಖ್ಯ ಪ್ರಶಸ್ತಿ ವಿಭಾಗದಲ್ಲಿ ಮಿಥ್ಯ ಸಿನಿಮಾದ ಬಾಲನಟ ಆತಿಶ್ ಶೆಟ್ಟಿ ಅವರಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದೆ. ಅವರು ಈ ಪ್ರಶಸ್ತಿಯನ್ನು ಬೆಂಗಾಲಿಯ ಬಾಲನಟರೊಂದಿಗೆ ಹಂಚಿಕೊಂಡಿದ್ದಾರೆ. ಅದೇ ಸಿನಿಮಾನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ರೂಪಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅವರು ಸಹ ತಮಿಳಿನ ‘ಮಹಾರಾಜ’ ಸಿನಿಮಾದ ನಟಿ ಸಚನಾ ಅವರೊಟ್ಟಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಮಿಥ್ಯ ಸಿನಿಮಾಕ್ಕೆ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ, ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಸಹ ಲಭ್ಯವಾಗಿದೆ.

ಇದನ್ನೂ ಓದಿ:72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಎರಡು ಪ್ರಶಸ್ತಿ

ಮಿಥ್ಯ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. 11 ವರ್ಷದ ಬಾಲಕ ಮಿಥುನ್ ಅಲಿಯಾಸ್ ಮಿಥ್ಯನ ಜೀವನ, ಅವನ ಏಕಾಂಗಿತನ ಇನ್ನಿತರೆಗಳ ಸುತ್ತ ಸುತ್ತುವ ಕತೆಯನ್ನು ‘ಮಿಥ್ಯ’ ಒಳಗೊಂಡಿದೆ. ಪೋಷಕರನ್ನು ಕಳೆದುಕೊಂಡ ಬಾಲಕನೊಬ್ಬ ಮುಂಬೈನಿಂದ ಉಡುಪಿಗೆ ಬಂದು ಇಲ್ಲಿ ಅವನ ಚಿಕ್ಕಪ್ಪ-ಚಿಕ್ಕಮ್ಮ ಅವರ ಮಕ್ಕಳೊಡನೆ ಸಮಯ ಕಳೆಯಬೇಕಾಗುತ್ತದೆ. ಆಗ ಅವನಿಗೆ ಎದುರಾಗುವ ಸಮಸ್ಯೆ, ಕಾಡುವ ಒಂಟಿತನ ಇನ್ನಿತರೆಗಳನ್ನು ನಿರ್ದೇಶಕ ಸುಮಂತ್ ಭಟ್ ಅದ್ಭುತವಾಗಿ ತೆರೆಗೆ ತಂದಿದ್ದಾರೆ.

ಹಲವು ಸಿನಿಮೋತ್ಸವಗಳಲ್ಲಿಯೂ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿರುವ ‘ಮಿಥ್ಯ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

72 National Film Award: ರಾಷ್ಟ್ರಪ್ರಶಸ್ತಿ ಪಡೆದ ಪ್ರಾದೇಶಿಕ ಸಿನಿಮಾಗಳ ಪಟ್ಟಿ – Kannada News | Here is the list of 72nd national film award won movies in regional category

2024ರಲ್ಲಿ ಸಿಬಿಎಫ್​​ಸಿ ಪ್ರಮಾಣ ಪತ್ರ ಪಡೆದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿ ಇಂದು (ಜುಲೈ 18) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಯ್ತು. ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ಸಹ ಈ ಸಂದರ್ಭದಲ್ಲಿ ಘೋಷಿಸಲಾಯ್ತು. ಕನ್ನಡ ಸೇರಿದಂತೆ ಇತರೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದ್ದು 2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪ್ರಾದೇಶಿಕ ಸಿನಿಮಾಗಳ ಪಟ್ಟಿ ಇಲ್ಲಿದೆ…

ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ

ತುಳು-ಇಂಬು-ಶಿವಧ್ವಜ ಶೆಟ್ಟಿ

ಗರ್ವಾಲಿ-ಡೋಲಿ -ದಿನೇಶ್ ಭೋಸ್ಲೆ

ಮಣಿಪುರಿ-ಸುನಿತಾ-ಯುಮ್ನಾನ್ ಅಜಿತ್ ಸಿಂಗ್

ಅತ್ಯುತ್ತಮ ತೆಲುಗು ಸಿನಿಮಾ- ಕಮಿಟಿ ಕುರ್ರೋಳ್ಳು-ಯದು ವಂಶಿ

ಅತ್ಯುತ್ತಮ ತಮಿಳು ಸಿನಿಮಾ- ರಾಯನ್ (ಧನುಶ್)

ಅತ್ಯುತ್ತಮ ಒಡಿಯಾ ಸಿನಿಮಾ- ಲಹರಿ-ಅಮಾರ್ಥ್ಯ ಭಟ್ಟಾಚಾರ್ಯ

ಅತ್ಯುತ್ತಮ ಮರಾಠಿ ಸಿನಿಮಾ- ಮುಕ್ಕಂಬೋಷ್ಟ್ ಬಂಬಲವಾಡಿ-ಪರೇಷ್ ಮಕಾಶಿ

ಅತ್ಯುತ್ತಮ ಮಲಯಾಳಂ ಸಿನಿಮಾ- ಫೆಮಿನಿಚಿ ಫಾತಿಮಾ-ಫಾಸಿಲ್ ಮೊಹಮ್ಮದ್

ಅತ್ಯುತ್ತಮ ಕನ್ನಡ ಸಿನಿಮಾ- ಮಿಥ್ಯ-ಸುಮಂತ್ ಭಟ್-ಪರಮವಃ ಪ್ರೊಡಕ್ಷನ್ಸ್-ಕೆಆರ್​ಜಿ ಸ್ಟುಡಿಯೋ

ಅತ್ಯುತ್ತಮ ಹಿಂದಿ ಸಿನಿಮಾ- ಶ್ರೀಕಾಂತ್-ತುಷಾರ್ ಹೀರಾನಂದಾನಿ

ಅತ್ಯುತ್ತಮ ಗುಜರಾತಿ ಸಿನಿಮಾ- ಮಾರನ್: ದಿ ಹಂಟ್-ಅಭಿಷೇಕ್ ಜೈನ್

ಅತ್ಯುತ್ತಮ ಬೆಂಗಾಲಿ ಸಿನಿಮಾ- ಚಲಚಿತ್ರ ಎಕೋನ್-ಅಂಜನ್ ದತ್

ಅತ್ಯುತ್ತಮ ಅಸ್ಸಾಮಿಸಿನಿಮಾ – ಜೂಹಿಪೋಲ್-ಜುದುಮೋನಿ ದತ್ತ

ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಪಟ್ಟಿ

ಸ್ಪೆಷಲ್ ಮೆನ್ಷನ್- ಚೋಲಾ ಡೋರಾ-ಹಿಂದಿ, ಭದ್ರಕಾಲಿ ನಾಟಕಂ-ಮಲಯಾಳಂ

ಅತ್ಯುತ್ತಮ ಚಿತ್ರಕತೆ-ಓಬುರ್

ಅತ್ಯುತ್ತಮ ನರೇಟರ್-ಲಿಟಲ್ ಪ್ಯಾಲೆಟ್-ಇಂಗ್ಲೀಷ್-ಸೌಂದರ್ಯ ಜಯ ಚಂದ್ರ

ಅತ್ಯುತ್ತಮ ಸಂಗೀತ-41 ಡಿಗ್ರಿ-ಮರಾಠಿ-ಶಿವಪಾಲ್ ಸಿಂಗ್

ಅತ್ಯುತ್ತಮ ಎಡಿಟಿಂಗ್- ಎನ್​​ಡಿಎ-ಮಾನ್ವಿರ್ ಜಸ್ರೋಹಿತ್

ಅತ್ಯುತ್ತಮ ಸೌಂಡ್- ಬ್ಲೂ-ತಮಿಳು-ಹರಿ ಹರ ಸುಧಾ

ಅತ್ಯುತ್ತಮ ಸಿನಿಮಾಟೊಗ್ರಾಫಿ-ಲೈಫ್ ಇನ್ ಲೂಮ್-ಎಡ್ಮಂಡ್ ರ್ಯಾಂಸಮ್

ಅತ್ಯುತ್ತಮ ನಿರ್ದೇಶಕ-ಸ್ಟ್ಯಾಚ್ಯು ಆಫ್ ಯೂನಿಟಿ-ಆನಂದ್ ಎಲ್ ರಾಯ್-ಹಿಂದಿ

ಅತ್ಯುತ್ತಮ ಕಿರುಚಿತ್ರ-ಹಂಸಫರ್ (ಮರಾಠಿ)

ಅತ್ಯುತ್ತಮ ಅನಿಮೇಷನ್-ಟಚ್ಡ್ ಆಸ್ ವಾಟರ್-ಜೋಸೆಫ್ ಬೆನಡಿಕ್ಟ್

ಅತ್ಯುತ್ತಮ ನಾನ್ ಫೀಚರ್ ಸಿನಿಮಾ-ಎ ಟೇಲ್ ಆಫ್ ಇಕೊ ಫೆಮಿನಿಸಮ್-ಸೂರಜ್ ಕುಮಾರ್

ಅತ್ಯುತ್ತಮ ಡಾಕ್ಯುಮೆಂಟರಿ- ರಾಮ್ ನಾಮಿ- ಹಿಂದಿ

ಅತ್ಯುತ್ತಮ ಆರ್ಟ್-ಕಲ್ಚರ್ಮೇ ಸಿನಿಮಾ: ನಿದಾ-ಹಿಂದಿ-ಅತುಲ್ ಪಾಂಡೆ

ಅತ್ಯುತ್ತಮ ಬಯೋಗ್ರಾಫಿಕಲ್ ಸಿನಿಮಾ: -ಕಾಕೋರಿ-ಹಿಂದಿ-ಕಮಲೇಶ್ ಮಿಶ್ರಾ

ಅತ್ಯುತ್ತಮ ಮೊದಲ ಸಿನಿಮಾ-ಏಂಗನ್-(ಸಂತಾಲಿ)-ರವಿದಾಸ್

ಅತ್ಯುತ್ತಮ ನಾನ್ ಫೀಚರ್ ಫಿಲಂ-ಬಂಗಾರ್ (ಮರಾಠಿ)-ಸುಮಿರಾ ರಾಯ್

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:14 pm, Sat, 18 July 26

Source link

ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಎಲ್ಲಿ-ಯಾವಾಗ ಆಗಿತ್ತು ಗೊತ್ತಾ? – Kannada News | Acid attacked On HD Deve Gowda’s Wife Chennamma In 2001, here Is details Where And Why?

ಬೆಂಗಳೂರು, (ಜುಲೈ 18): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ (HD Deve Gowda’s Wife Chennamma) ಇಂದು (ಜುಲೈ 18) ವಿಧಿವಶರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರ ಆರೋಗ್ಯದಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸುಮಾರು 25 ದಿನ ಚಿಕಿತ್ಸೆ ಪಡೆದುಕೊಂಡು ಮನೆಗೆ ಹಿಂದಿರುಗಿದ್ದರು. ಮತ್ತೆ ಜುಲೈ 15ರಂದು ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನು 2001ರಲ್ಲಿ ಚೆನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.

ಇದನ್ನೂ ಓದಿ:  Chennamma Deve Gowda Death: ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

Source link

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಎರಡು ಪ್ರಶಸ್ತಿ – Kannada News | 72 National film awards: here is the list

ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಘೋಷಣೆಯನ್ನು ಇಂದು (ಜುಲೈ 18) ಮಾಡಿತು. ದೆಹಲಿಯ ರಾಷ್ಟ್ರೀಯ ಮೀಡಿಯಾ ಸೆಂಟರ್​​ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಸಮಿತಿಯ ಪ್ರಮುಖರು ಪ್ರಶಸ್ತಿಗಳ ಘೋಷಣೆ ಮಾಡಿದರು. 2024ರಲ್ಲಿ ಸಿಬಿಎಫ್​​ಸಿಯಿಂದ ಪ್ರಮಾಣ ಪತ್ರ ಪಡೆದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾ, ನಟ-ನಟಿಯರು, ತಂತ್ರಜ್ಞರುಗಳನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿ, ಇತರೆ ತಂತ್ರಜ್ಞರ ಪಟ್ಟಿ ಇಲ್ಲಿದೆ ನೋಡಿ…

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ

ತೀರ್ಪುಗಾರರ ಆಯ್ಕೆ ವಿಶೇಷ-ಮೇಯಳಗನ್ (ಸೌಂಡ್ ಮಿಕ್ಸ್)

ಅತ್ಯುತ್ತಮ ನಟ ತೀರ್ಪುಗಾರರ ಆಯ್ಕೆ- ಕ್ಯಾಪ್ಟನ್ ಮಿಲ್ಲರ್ (ಧನುಶ್)

ಅತ್ಯುತ್ತಮ ಆಕ್ಷನ್ -ಮಹಾರಾಜ

ಅತ್ಯುತ್ತಮ ಕೊರಿಯೋಗ್ರಫಿ- ಸ್ತ್ರೀ 2

ಅತ್ಯುತ್ತಮ ಸಂಗೀತ- ಅಮರನ್ (ತಮಿಳು)

ಅತ್ಯುತ್ತಮ ಹಾಡು- ಆರ್ಟಿಕಲ್ 270 (ಹಿಂದಿ)

ಅತ್ಯುತ್ತಮ ಪ್ರಸಾಧನ- ಕಮಿಟಿ ಕುರ್ರೋಳ್ಳು (ತೆಲುಗು)

ಅತ್ಯುತ್ತಮ ವಸ್ತ್ರವಿನ್ಯಾಸ- ಪುಷ್ಪ 2 (ತೆಲುಗು)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಕಲ್ಕಿ 2898 ಎಡಿ (ತೆಲುಗು)

ಅತ್ಯುತ್ತಮ ಸಂಕಲನ- ಅಮರನ್ (ತಮಿಳು)

ಅತ್ಯುತ್ತಮ ಧ್ವನಿ ವಿನ್ಯಾಸ- ಭೂಲ ಭುಲಯ್ಯ (ಹಿಂದಿ)

ಅತ್ಯುತ್ತಮ ಸಂಭಾಷಣೆ- ಲಕ್ಕಿ ಭಾಸ್ಕರ್ (ತೆಲುಗು)

ಅತ್ಯುತ್ತಮ ಅಡಾಪ್ಟೆಡ್ ಚಿತ್ರಕತೆ -ಮರಾಠಿ-ಸ್ವರಗಂಧರ್ವ

ಅತ್ಯುತ್ತಮ ಚಿತ್ರಕತೆ-ಪುಷ್ಪ 2 (ಸುಕುಮಾರ್)

ಅತ್ಯುತ್ತಮ ಸಿನಿಮಾಟೊಗ್ರಫಿ- ಬ್ರಮಯುಗಂ (ಮಲಯಾಳಂ)

ಅತ್ಯುತ್ತಮ ಗಾಯಕಿ- ಎಆರ್ಎಂ (ವೈಕೋಂ ವಿಜಯಲಕ್ಷ್ಮಿ)

ಅತ್ಯುತ್ತಮ ಗಾಯಕ- ಭರತ್ ಗಣಪತಿ (ಗರತ್ ಗಣಪತಿ-ಮರಾಠಿ)

ಅತ್ಯುತ್ತಮ ಬಾಲ ಕಲಾವಿದರು- ಓಂಕೊ ಕಿ ಕೋಟಿ (ಬಂಗಾಲಿ), ಮಿಥ್ಯ (ಅತೀಶ್ ಎಸ್ ಶೆಟ್ಟಿ)

ಅತ್ಯುತ್ತಮ ಪೋಷಕ ನಟಿ- ಮಿಥ್ಯ (ರೂಪಶ್ರೀ ವರ್ಕಾಡೆ), ಮಹಾರಾಜ (ಸಚನಾ ನಂಬಿಯಾಸ್)

ಪೋಷಕ ನಟ- ಭಕ್ಷಕ್-ಸಂಜಯ್ ಮಿಶ್ರಾ

ಅತ್ಯುತ್ತಮ ನಟಿ- ಆರ್ಟಿಕಲ್ 370-ಯಾಮಿ ಗೌತಮ್

ಅತ್ಯುತ್ತಮ ನಟ- ಚಂದು ಚಾಂಪಿಯನ್ (ಕಾರ್ತಿಕ್ ಆರ್ಯನ್), ಬ್ರಮಯುಗಂ (ಮಮ್ಮುಟಿ)

ಅತ್ಯುತ್ತಮ ನಿರ್ದೇಶಕ- ಅಮರನ್ (ರಾಜಕುಮಾರ ಪೆರ್ರಿಸ್ವಾಮಿ)

ಅತ್ಯುತ್ತಮ ಮಕ್ಕಳ ಸಿನಿಮಾ- 35 ಚಿನ್ನ ಕದು ಕಾದು, ನಂದ ಕಿಶೋರ್

ಅತ್ಯುತ್ತಮ ಸಾಮಾಜಿಕ ಮೌಲ್ಯ ಸಿನಿಮಾ- ಕ್ಯಾಪ್ಟನ್ ಮಿಲ್ಲರ್ (ಅರುಣ್ ಮೆಟ್ಟಿಸ್ವಾಮಿ)

ಅತ್ಯುತ್ತಮ ಮನೊರಂಜನಾ ಸಿನಿಮಾ- ಕಲ್ಕಿ 2898 ಎಡಿ (ನಾಗ್ ಅಶ್ವಿನ್)

ಅತ್ಯುತ್ತಮ ಡೆಬ್ಯೂ ಸಿನಿಮಾ- ಸ್ವಾತಂತ್ರ್ಯ ವೀರ ಸಾವರ್ಕರ್ (ರಣದೀಪ್ ಹೂಡಾ)

ಅತ್ಯುತ್ತಮ ಸಿನಿಮಾ-ಆರ್ಟಿಕಲ್ 370 (ಆದಿತ್ಯ ಜಂಬಲೆ)

ಅತ್ಯುತ್ತಮ ವಿಮರ್ಶೆ-ಸಂಜೀವ್ ಶ್ರೀವಾಸ್ತವ- ಹಿಂದಿ,

ಅತ್ಯುತ್ತಮ ಪುಸ್ತಕ- ‘ನಾನಿರುವುದೇ ನಿಮಗಾಗಿ, ನಾಡಿರುವುದು ನಮಗಾಗಿ’- ಕೆಂಚನಾರು ಪ್ರದೀಪ್ ಕುಮಾರ್

Source link

ದೇವೇಗೌಡರ ಬೆನ್ನಿಗೆ ನಿಂತಿದ್ದ ಧೀಶಕ್ತಿ: ಅತಿಥಿಗಳ ಪಾಲಿನ ಅನ್ನಪೂರ್ಣೆ; ಕುಟುಂಬ ಮುನ್ನಡೆಸಿದ ಮಹಾತಾಯಿ ‘ಚೆನ್ನಮ್ಮ’ – Kannada News | Chennamma Passes Away: The Woman Who Stood by Former PM H.D. Deve Gowda

ಹಾಸನ, ಜುಲೈ 18: ದಕ್ಷಿಣ ಭಾರತದ ಏಕೈಕ ಪ್ರಧಾನಿ ಎಂಬ ಇತಿಹಾಸ ಬರೆದವರು ಹೆಚ್​​ಡಿ ದೇವೇಗೌಡರು (HD Deve Gowda). ಈ ಮಣ್ಣಿನ ಮಗನ ಯಶಸ್ಸಿನ ಹಿಂದೆ ಒಬ್ಬ ಅಪ್ರತಿಮ ಮಹಿಳೆಯ ಶ್ರಮವಿದೆ. ಅವರೇ ಪತ್ನಿ ಚೆನ್ನಮ್ಮ. “ಚೆನ್ನಮ್ಮ (Chennamma) ಕೇವಲ ಪತ್ನಿಯಷ್ಟೇ ಅಲ್ಲ, ನನ್ನ ಪಾಲಿನ ತಾಯಿಯೂ ಹೌದು” ಎಂದು ಸ್ವತಃ ದೇವೇಗೌಡರೇ ಹಲವು ಬಾರಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆರು ಮಕ್ಕಳೊಂದಿಗೆ ಇಡೀ ಕುಟುಂಬ ಮುನ್ನಡೆಸಿದ ಮಹಾತಾಯಿ, ಅತಿಥಿಗಳ ಪಾಲಿನ ಅನ್ನಪೂರ್ಣೆ ಇದೀಗ ವಿಧಿವಶರಾಗಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಸುಶಿಕ್ಷಿತೆ: ಪಟೇಲರ ಮುದ್ದಿನ ಮಗಳು

1937ರಲ್ಲಿ ಜನಿಸಿದ ಚೆನ್ನಮ್ಮ ಅವರು ಮುತ್ತಿಗೆಹಿರೆಹಳ್ಳಿಯ ಸಿರಿವಂತ ಪಟೇಲ್ ದೇವೇಗೌಡ ಮತ್ತು ಕಾಳಮ್ಮ ದಂಪತಿಯ ನಾಲ್ಕು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳಲ್ಲಿ ಹಿರಿಯವರು. ಅಂದಿನ ಸ್ವಾತಂತ್ರ್ಯ ಪೂರ್ವದ ಕಾಲದಲ್ಲೇ ತಮ್ಮೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಪಕ್ಕದ ಹೊಳೆನರಸೀಪುರ ತಾಲೂಕಿನ ಹಳೆಕೋಟೆಯ ಶಾಲೆಗೆ ನಿತ್ಯ 5 ಕಿ.ಮೀ ನಡೆದುಕೊಂಡೇ ಹೋಗಿ ಲೋಯರ್ ಸೆಕೆಂಡರಿ ಶಿಕ್ಷಣ ಪೂರೈಸಿದ ಸುಶಿಕ್ಷಿತ ಹೆಣ್ಣುಮಗಳು. ಪ್ರೌಢಶಾಲೆ ಹತ್ತಿರದಲ್ಲಿ ಇಲ್ಲದ ಕಾರಣ ಅವರ ಓದು ಅಲ್ಲಿಗೆ ನಿಂತಿತ್ತಾದರೂ, ತುಂಬಿದ ಕೊಡದಂತಹ ಜ್ಞಾನ ಅವರದಾಗಿತ್ತು. ತಮ್ಮ 17ನೇ ವಯಸ್ಸಿನಲ್ಲಿ, ಅಂದರೆ 1954ರ ಮೇ 25ರಂದು 21 ವರ್ಷದ ಯುವಕ ಹೆಚ್.ಡಿ. ದೇವೇಗೌಡರನ್ನು ಚೆನ್ನಮ್ಮ ವರಿಸಿದರು.

ದಾಂಪತ್ಯದ ಅಪರೂಪದ ಕಾಕತಾಳೀಯಗಳು

72 ವರ್ಷಗಳ ಸುದೀರ್ಘ ಹಾಗೂ ಮಾದರಿ ದಾಂಪತ್ಯ ಜೀವನ ನಡೆಸಿದ ಈ ಜೋಡಿಯ ನಡುವೆ ಹಲವು ಸಾಮ್ಯತೆಗಳಿವೆ. ಚೆನ್ನಮ್ಮ ಅವರ ತವರು ಮನೆ ಹಾಸನ ತಾಲೂಕಿನ ಮುತ್ತಿಗೆಹಿರೆಹಳ್ಳಿಯಾದರೂ, ಅವರು ಜನಿಸಿದ್ದು ತಮ್ಮ ಅಜ್ಜಿ ಮನೆಯಾದ ಹರದನಹಳ್ಳಿಯಲ್ಲಿಯೇ! ಅಂದರೆ ದೇವೇಗೌಡರ ಹುಟ್ಟೂರಿನಲ್ಲೇ ಚೆನ್ನಮ್ಮ ಕೂಡ ಜನಿಸಿದ್ದರು. ಅಷ್ಟೇ ಅಲ್ಲದೆ, ಇಬ್ಬರೂ ಸಹ ತಮ್ಮ ತಂದೆಯಂದಿರ ಎರಡನೇ ಪತ್ನಿಯ ಮಕ್ಕಳು ಎಂಬುದು ವಿಶೇಷ. ದೊಡ್ಡೇಗೌಡರ ಎರಡನೇ ಪತ್ನಿ ದೇವಮ್ಮ ಅವರ ಪುತ್ರ ದೇವೇಗೌಡರಾದರೆ, ಪಟೇಲ್ ದೇವೇಗೌಡರ ಎರಡನೇ ಪತ್ನಿ ಕಾಳಮ್ಮ ಅವರ ಪುತ್ರಿ ಚೆನ್ನಮ್ಮ. ಹರದನಹಳ್ಳಿ ಹಾಗೂ ಮುತ್ತಿಗೆಹಿರೆಹಳ್ಳಿ ನಡುವೆ ಕೇವಲ 4 ಕಿ.ಮೀ ಅಂತರವಿದ್ದಿದ್ದರಿಂದ ಬಾಲ್ಯದಿಂದಲೇ ಇವರಿಬ್ಬರಿಗೂ ಪರಿಚಯವಿತ್ತು.

ಆರು ಮಕ್ಕಳ ತಾಯಿ; ಕುಟುಂಬ ಮುನ್ನಡೆಸಿದ ಮಹಾತಾಯಿ

ಶ್ರೀಮಂತ ಮನೆತನದಿಂದ ಬಂದರೂ ಅಹಂಕಾರವಿಲ್ಲದೆ ಅಪ್ಪಟ ಸಂಪ್ರದಾಯಸ್ಥ ಮಹಿಳೆಯಾಗಿ ಬದುಕಿದ ಚೆನ್ನಮ್ಮ, ದೇವೇಗೌಡರ ರಾಜಕೀಯ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದರು. ಹೆಚ್.ಡಿ. ಬಾಲಕೃಷ್ಣೇಗೌಡ, ಹೆಚ್.ಡಿ. ರೇವಣ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ ನಾಲ್ಕು ಪುತ್ರರು ಹಾಗೂ ಶೈಲಜಾ ಮತ್ತು ಅನಸೂಯ ಎಂಬ ಇಬ್ಬರು ಪುತ್ರಿಯರು ಸೇರಿದಂತೆ ಒಟ್ಟು ಆರು ಜನ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಿದರು. ಪತಿಗೆ ಎಂದಿಗೂ ಸಂಸಾರದ ಹೊರೆ ತಟ್ಟದಂತೆ ಜವಾಬ್ದಾರಿ ನಿಭಾಯಿಸಿ, ಅವರ ರಾಜಕೀಯ ಯಶಸ್ಸಿಗೆ ನೆರಳಾಗಿ ನಿಂತರು. ಪತಿ ಪ್ರಧಾನಿಯಾದರೂ ಎಂದಿಗೂ ರಾಜಕೀಯದಲ್ಲಿ ಮೂಗು ತೂರಿಸದ ಚೆನ್ನಮ್ಮ, ಸದಾ ತೆರೆಯ ಮರೆಯಲ್ಲೇ ಉಳಿದು ಇಡೀ ಕುಟುಂಬವನ್ನು ಅಮ್ಮನಾಗಿ, ಅಜ್ಜಿಯಾಗಿ ಸಲಹಿದರು.

ಚೆನ್ನಮ್ಮ ಮೇಲೆ ಆಸಿಡ್ ದಾಳಿ

ಪರಮ ದೈವಭಕ್ತರಾದ ಈ ಕುಟುಂಬಕ್ಕೆ ಹರದನಹಳ್ಳಿಯ ದೇವೇಶ್ವರ ಸ್ವಾಮಿ ಮನೆದೇರು. ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಪೂಜೆ ಸಲ್ಲಿಸುವುದು ಈ ಕುಟುಂಬದ ವಾಡಿಕೆ. ಆದರೆ 2001ರ ಫೆಬ್ರವರಿ 21ರಂದು ನಡೆದ ಘಟನೆ ಇಡೀ ಕುಟುಂಬವನ್ನು ನಡುಗಿಸಿತ್ತು. ದೇವೇಗೌಡರು ಕಾರ್ಯನಿರತರಾಗಿದ್ದರಿಂದ ಚೆನ್ನಮ್ಮ ಅವರು ಪುತ್ರ ರೇವಣ್ಣ ಹಾಗೂ ಸೊಸೆ ಭವಾನಿ ರೇವಣ್ಣ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಪೂಜೆಯಲ್ಲಿದ್ದಾಗ ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್ ಎಂಬಾತ ಪೂಜೆಯ ನೆಪದಲ್ಲಿ ಬಂದು ಚೆನ್ನಮ್ಮ ಅವರ ಮೇಲೆ ಆಸಿಡ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಚೆನ್ನಮ್ಮ ಅವರ ಮುಖ, ತಲೆಗೆ ಗಂಭೀರ ಗಾಯಗಳಾಗಿದ್ದರೆ, ಭವಾನಿ ರೇವಣ್ಣ ಅವರ ಕೈಗೂ ಗಾಯವಾಗಿತ್ತು. ಪ್ರಾಣಾಪಾಯದಿಂದ ಪಾರಾದ ಈ ಘಟನೆ ರಾಜಕೀಯ ಪಿತೂರಿ ಹಾಗೂ ಕೌಟುಂಬಿಕ ಕಲಹದ ಚರ್ಚೆಗೆ ಗ್ರಾಸವಾಗಿತ್ತು.

ಅತಿಥಿಗಳ ಪಾಲಿನ ಅನ್ನಪೂರ್ಣೆ

ತಮ್ಮ ಇಡೀ ಜೀವನವನ್ನು ಪತಿಯ ಏಳಿಗೆಗಾಗಿ ಪೂಜೆ, ವ್ರತ, ಜಪ-ತಪಗಳಲ್ಲೇ ಕಳೆದ ಚೆನ್ನಮ್ಮ, ಪತಿಯ ಆರೋಗ್ಯದ ವಿಚಾರದಲ್ಲಿ ತಾಯಿಯಂತೆ ಆರೈಕೆ ಮಾಡಿದ ಕರುಣಾಮಯಿ. ದೇವೇಗೌಡರ ಮನೆಗೆ ಬರುವ ಪ್ರತಿಯೊಬ್ಬ ರಾಜಕೀಯ ಮುತ್ಸದ್ದಿ ಹಾಗೂ ಅತಿಥಿಗಳಿಗೆ ತಾವೇ ಸ್ವತಃ ಕೈಯಾರೆ ಅಡುಗೆ ಮಾಡಿ ಪ್ರೀತಿಯಿಂದ ಉಣಿಸುತ್ತಿದ್ದ ಗುಣ ಅವರದಾಗಿತ್ತು. ಅವರ ಕೈರುಚಿ ಸವಿದವರೆಲ್ಲರೂ ಅವರನ್ನು ಅನ್ನಪೂರ್ಣೆ ಎಂದೇ ಕರೆಯುತ್ತಿದ್ದರು. ಹೊಳೆನರಸೀಪುರದ ಪುರಸಭೆಯಿಂದ ಆರಂಭವಾಗಿ ದೆಹಲಿಯ ಕೆಂಪುಕೋಟೆಯವರೆಗಿನ ದೇವೇಗೌಡರ ಐತಿಹಾಸಿಕ ಪಯಣದಲ್ಲಿ ಸದಾ ಧೀಶಕ್ತಿಯಾಗಿ, ಭಾರತೀಯ ನಾರಿಯ ಸಭ್ಯತೆಯ ಗೆರೆ ದಾಟದೆ ಬದುಕಿದ ಚೆನ್ನಮ್ಮ ಅವರ ಜೀವನ ನಿಜಕ್ಕೂ ಇಂದಿನ ತಲೆಮಾರಿಗೆ ಒಂದು ಆದರ್ಶಪ್ರಾಯ ಸಂದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಸಿಡ್ ದಾಳಿಯ ನರಕಯಾತನೆ, ಅಪರಾಧಿಯನ್ನು ಕ್ಷಮಿಸಿದ ಕರುಣಾಮಯಿ: ದೇವೇಗೌಡರ ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ – Kannada News | Chennamma Demise: Devegowda Recalls Emotional 2001 Acid Attack and Family Forgiveness

ಬೆಂಗಳೂರು, ಜು.18: ದೇಶದ ರಾಜಕಾರಣದಲ್ಲಿ ಧೀಮಂತ ನಾಯಕರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಇಂದು ನಿಧನ ಹೊಂದಿದ್ದಾರೆ. ಗೌಡರ ಕುಟುಂಬಕ್ಕೆ ಮಹಾಲಕ್ಷ್ಮೀಯಾಗಿದ್ದ ಚೆನ್ನಮ್ಮ ಇಂದು ಆ ಸುಂದರ ಕುಟುಂಬವನ್ನು ಬಿಟ್ಟು ಹೋಗಿದ್ದಾರೆ. ದೇವೇಗೌಡ ಅವರಿಗೆ ಚೆನ್ನಮ್ಮ ಪತ್ನಿ ಮಾತ್ರ ಆಗದೆ, ತಾಯಿಯಾಗಿ ಕಷ್ಟ, ಸುಖದಲ್ಲಿ ಜೊತೆಯಾಗಿದ್ದವರು. ಆದರೆ ಇಂದು ಅವರನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ. ಇದರ ನಡುವೆ ದೇವೇಗೌಡ ಅವರ ಕೌಟುಂಬಿಕ ಜೀವನದ ಅತ್ಯಂತ ಕರಾಳ ಸತ್ಯವೊಂದು ಇದೆ. 2001ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸೊಸೆ ಭವಾನಿ ರೇವಣ್ಣ ಮೇಲಿನ ಆಸಿಡ್ ದಾಳಿಯ ಹಿಂದೆ ಇದ್ದ ರಾಜಕೀಯ ಪಿತೂರಿಯನ್ನು ಗೌಡರು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

‘ವೀಕೆಂಡ್ ವಿತ್ ರಮೇಶ್’ ಸಾಧಕರ ಸೀಟಿನಲ್ಲಿ ಕುಳಿತು ಭಾವನಾತ್ಮಕವಾಗಿ ಮಾತನಾಡಿದ್ದ ದೇವೇಗೌಡರು, ಅಂದು ನಡೆದ ಆ ಘೋರ ಘಟನೆಯ ಕಟು ಸತ್ಯವನ್ನು ಬಿಚ್ಚಿಟ್ಟಿದ್ದರು. ಫೆಬ್ರವರಿ 21, 2001 ರಂದು ಹಾಸನದ ಹೊಳೆನರಸೀಪುರ ತಾಲ್ಲೂಕಿನ ಇರುವ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ಈ ದಾಳಿ ನಡೆದಿತ್ತು. ಆಗಿನ ಪತ್ರಿಕೆಗಳಲ್ಲಿ ದೇವೇಗೌಡರ ತಮ್ಮನ ಮಗ ಲೋಕೇಶ್ ಕೌಟುಂಬಿಕ ವೈಷಮ್ಯದಿಂದ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿತ್ತು. ಆದರೆ, ಇದರ ಹಿಂದೆ ದೊಡ್ಡ ರಾಜಕೀಯ ಮುಖಂಡರ ಕೈವಾಡವಿತ್ತು ಎಂದು ಹೇಳಿಕೊಂಡಿದ್ದರು.

“ಅಂದು ಆಸಿಡ್ ದಾಳಿಕೋರರ ಅಸಲಿ ಟಾರ್ಗೆಟ್ ನನ್ನ ಮಗ ಹೆಚ್.ಡಿ.ರೇವಣ್ಣ ಆಗಿದ್ದ. ಮಹಾದೇಶ್ವರ ಬೆಟ್ಟಕ್ಕೆ ನಾವೆಲ್ಲ ಹೊರಟಾಗ ರೇವಣ್ಣ ಬಂದಿರಲಿಲ್ಲ. ಇದನ್ನು ಅರಿಯದ ದಾಳಿಕೋರರು ರೇವಣ್ಣ ಎಂದು ಭಾವಿಸಿ ನನ್ನ ಪತ್ನಿ ಚನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಅವರನ್ನೇ ಗುರಿಯಾಗಿಸಿ ಆಸಿಡ್ ಎರೆಚಿದ್ದರು. ಕೃತ್ಯ ಎಸಗಿದ್ದು ನನ್ನ ತಮ್ಮನ ಮಗನೇ ಆದರೂ, ಆತನನ್ನು ಎತ್ತಿ ಕಟ್ಟಿದವರ ಹಿಂದೆ ರಾಜಕೀಯ ಮುಖಂಡರ ಪ್ರೇರಣೆಯಿತ್ತು” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಈ ಪ್ರಕರಣದಲ್ಲಿ ಲೋಕೇಶ್‌ಗೆ ನ್ಯಾಯಾಲಯ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ತನ್ನ ಮೇಲೆ ದಾಳಿ ಮಾಡಿದವನನ್ನೇ ಗೌಡರು ಜೈಲಿನಿಂದ ಬಿಡಿಸಿದ್ದರು ಎಂಬ ಸಂಗತಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. “ನನ್ನ ತಮ್ಮನಿಗೆ ಕ್ಯಾನ್ಸರ್ ಇತ್ತು. ಆತ ಇನ್ನು ಕೆಲವೇ ದಿನ ಬದುಕುತ್ತಾನೆ ಎಂದು ಗೊತ್ತಾದಾಗ ನನ್ನ ಮನಸ್ಸು ಕರಗಿತು. ಲೋಕೇಶ್ ಇನ್ನು 4 ವರ್ಷ ಜೈಲಿನಲ್ಲಿ ಇರಬೇಕಿತ್ತು. ಆದರೆ ತಮ್ಮನ ಕೊನೆಗಾಲದ ಸ್ಥಿತಿ ನೋಡಿ ಹೈಕೋರ್ಟ್ ಜಡ್ಜ್‌ಗೆ ಫೋನ್ ಮಾಡಿ, ನನ್ನ ತಮ್ಮ ಸಾಯುತ್ತಿದ್ದಾನೆ ಆತನ ಮಗನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದೆ” ಎಂದರು. ಮಾಜಿ ಪ್ರಧಾನಿ ಪತ್ನಿಯ ಮೇಲೆಯೇ ದಾಳಿ ನಡೆದಾಗ ಸ್ವತಃ ಗೌಡರೇ ಅಪರಾಧಿಯ ಬಿಡುಗಡೆಗೆ ಕೋರಿದ್ದನ್ನು ಕಂಡು ಅಂದು ನ್ಯಾಯಮೂರ್ತಿಗಳೇ ಆಶ್ಚರ್ಯಚಕಿತರಾಗಿದ್ದರು.

ತಮ್ಮ ಬದುಕಿನ ಏಳುಬೀಳುಗಳಲ್ಲಿ ಹೆಗಲಾಗಿ ನಿಂತ ಪತ್ನಿ ಚೆನ್ನಮ್ಮ ಅವರ ತ್ಯಾಗವನ್ನು ಗೌಡರು ಈ ಕಾರ್ಯಕ್ರಮದ ಮೂಲಕ  ಸ್ಮರಿಸಿದ್ದರು. ಚೆನ್ನಮ್ಮ ಅವರು ಈ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ಪ್ರಕಾರ, “ಆಸಿಡ್ ದಾಳಿಯಾದಾಗ ನನಗೆ 2 ತಿಂಗಳು ಪ್ರಜ್ಞೆಯೇ ಇರಲಿಲ್ಲ. ಆ ದಿನಗಳಲ್ಲಿ ದೇವೇಗೌಡ ಕಣ್ಣೀರು ಹಾಕಿದ್ದರು . ಆದರೆ ನನ್ನ ಮೇಲೆ ದಾಳಿ ಮಾಡಿದವನನ್ನು ಇವರು ಜೈಲಿನಿಂದ ಬಿಡಿಸಿದಾಗ ನಾನು ಯಾವುದೇ ಬೇಸರ ಮಾಡಿಕೊಳ್ಳಲಿಲ್ಲ” ಎಂದು ಪತಿಯ ಗುಣವನ್ನು ಕೊಂಡಾಡಿದ್ದರು. ದಶಕಗಳ ಕಾಲ ರಹಸ್ಯವಾಗಿದ್ದ ಈ ಘಟನೆ ವೀಕೆಂಡ್ ವೇದಿಕೆಯಲ್ಲಿ ಸಾರ್ವಜನಿಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version