IND vs ENG: ಸರಣಿ ನಿರ್ಧಾರಕ ಪಂದ್ಯ ಎಷ್ಟು ಗಂಟೆಗೆ ಆರಂಭ; ಉಚಿತವಾಗಿ ವೀಕ್ಷಿಸುವುದು ಹೇಗೆ? – Kannada News | India vs England 3rd ODI: Lord’s Match Date, Time, Live Stream and Squads Info

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಭಾನುವಾರ (ಜುಲೈ 19) ಲಂಡನ್‌ನ ಐತಿಹಾಸಿಕ ಲಾರ್ಡ್ಸ್ (Lord’s) ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಎರಡೂ ತಂಡಗಳು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಸರಣಿಯ ಈ ಹೈವೋಲ್ಟೇಜ್ ಕದನ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ನಡೆಯಲಿದೆ ಎಂಬುದನ್ನು ನಾವು ನಿಮಗೆ ತಿಳಿಸಲಿದ್ದೇವೆ. ಸರಣಿಯ ಮೊದಲ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭವಾಗಿತ್ತು. ಆದರೆ ಎರಡನೇ ಏಕದಿನ ಪಂದ್ಯ ಇನ್ನು ತಡವಾಗಿ ಆರಂಭವಾಗಿತ್ತು. ಅಂದರೆ ಪಂದ್ಯ ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಆರಂಭವಾಗಿತ್ತು. ಇದೀಗ ಮೂರನೇ ಏಕದಿನ ಪಂದ್ಯ ಬದಲಾದ ಸಮಯದಲ್ಲಿ ಶುರುವಾಗಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಜುಲೈ 18 ರಂದು ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವ ಸೌಲಭ್ಯವನ್ನು ನೀಡುತ್ತದೆ.

IND vs ENG: ಲಾರ್ಡ್ಸ್‌ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ

ಉಭಯ ತಂಡಗಳು

ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಶ್ದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.

ಇಂಗ್ಲೆಂಡ್‌ ತಂಡ: ಹ್ಯಾರಿ ಬ್ರೂಕ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಜೋ ರೂಟ್, ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಟಾಸ್ ಗೆದ್ದವನೇ ಬಾಸ್; ಪಂದ್ಯದ ದಿನ ಹವಾಮಾನ ಹೇಗಿರಲಿದೆ? – Kannada News | IND vs ENG 3rd ODI Preview: Lord’s Pitch, Weather, Head to Head and Series Decider

ಭಾರತ-ಇಂಗ್ಲೆಂಡ್ (India vs England ) ನಡುವಿನ ಏಕದಿನ ಸರಣಿಯ ನಿರ್ಣಾಯಕ ಮೂರನೇ ಮತ್ತು ಅಂತಿಮ ಪಂದ್ಯ ಜುಲೈ 19 ರಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ನಲ್ಲಿ (Lord’s) ನಡೆಯಲಿದೆ. ಮೂರು ಪಂದ್ಯಗಳ ಸರಣಿ ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿರುವುದರಿಂದ ಈ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಕೈಸೇರಲಿದೆ. ಹೀಗಾಗಿ ಉಭಯ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿವೆ. ಆದರೆ ಈಗಾಗಲೇ ಟಿ20 ಸರಣಿ ಸೋತಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನಾದರೂ ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿದೆ. ಹೀಗಾಗಿ ಲಾರ್ಡ್ಸ್‌ ಪಿಚ್ ಹೇಗಿರಲಿದೆ? ಪಂದ್ಯದ ದಿನದಂದು ಹವಾಮಾನ ಹೇಗಿರಲಿದೆ ಎಂಬುದನ್ನು ನೋಡೋಣ.

ಪಿಚ್ ವರದಿ

ಲಾರ್ಡ್ಸ್ ಪಿಚ್ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಹೊಸ ಚೆಂಡು ಉತ್ತಮ ಸೀಮ್ ಮತ್ತು ಹೆಚ್ಚುವರಿ ಬೌನ್ಸ್ ನೀಡುತ್ತದೆ. ಆದಾಗ್ಯೂ, ಬ್ಯಾಟರ್‌ಗಳು ಒಮ್ಮೆ ನೆಲೆಗೊಂಡ ನಂತರ, ದೊಡ್ಡ ಸ್ಕೋರ್‌ ದಾಖಲಾಗುವ ಸಾಧ್ಯತೆಯೂ ಇರುತ್ತದೆ. ಅಂಕಿಅಂಶಗಳ ಪ್ರಕಾರ, ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 289 ರನ್‌ಗಳು ಮತ್ತು ಸರಾಸರಿ ಎರಡನೇ ಇನ್ನಿಂಗ್ಸ್ ಸ್ಕೋರ್ 201 ರನ್‌ಗಳಾಗಿದೆ. ಇಲ್ಲಿಯವರೆಗೆ, ಮೊದಲು ಬ್ಯಾಟ್ ಮಾಡುವ ತಂಡಗಳು ಈ ಮೈದಾನದಲ್ಲಿ ಉತ್ತಮ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿವೆ.

ಹವಾಮಾನ ವರದಿ

ಪಂದ್ಯದ ದಿನದಂದು ಲಂಡನ್‌ನಲ್ಲಿ ಹವಾಮಾನವು ಕ್ರಿಕೆಟ್‌ಗೆ ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ತಾಪಮಾನವು ಸುಮಾರು 21 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ, ಮಳೆಯಾಗುವ ಸಾಧ್ಯತೆ ಕೇವಲ ಶೇ. 3 ರಷ್ಟು ಮಾತ್ರ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.

IND vs ENG: ಲಾರ್ಡ್ಸ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ ರೋಹಿತ್, ಕೊಹ್ಲಿ

ಹೆಡ್-ಟು-ಹೆಡ್ ದಾಖಲೆ

ಕಳೆದ ಹತ್ತು ಏಕದಿನ ಪಂದ್ಯಗಳಲ್ಲಿ ಉಭಯ ತಂಡಗಳ ಮುಖಾಮುಖಿ ನೋಡಿದರೆ, ಇದರಲ್ಲಿ ಭಾರತ ಸ್ಪಷ್ಟ ಮುನ್ನಡೆ ಸಾಧಿಸಿದೆ. ಭಾರತ 8 ಗೆಲುವುಗಳನ್ನು ದಾಖಲಿಸಿದ್ದರೆ, ಇಂಗ್ಲೆಂಡ್ ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಪ್ರಸ್ತುತ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿರುವುದರಿಂದ, ಮೂರನೇ ಏಕದಿನ ಪಂದ್ಯದ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಕನಸು; ದೆಹಲಿ ‘ರಾಮಾಯಣ’ ಈವೆಂಟ್​​ನಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಯಶ್ – Kannada News | Ramayana Is Indias Dream Says Rocking Star Yash in Pratham Sankalp Event

‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಂದು ರಿಲೀಸ್ ಆಗಲಿದೆ. ಜುಲೈ 24ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಅದಕ್ಕೂ ಒಂದು ವಾರ ಮೊದಲು ಅಂದರೆ ಇಂದು (ಜುಲೈ 18) ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮ ನಡೆದಿದೆ. ‘ಪ್ರಥಮ ಸಂಕಲ್ಪ’ ಅನ್ನೋದು ಈ ಕಾರ್ಯಕ್ರಮದ ಹೆಸರಾಗಿತ್ತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ‘ರಾಮಾಯಣ’ ಸಿನಿಮಾ ಕಲಾವಿದರು ಕೂಡ ಬಂದಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಕೂಡ ಆಗಮಿಸಿದ್ದರು. ಅವರು ತಮ್ಮ ಪಾತ್ರದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ವಿವರಿಸಿದರು.

ಯಶ್​​ಗೆ ನಿರ್ಮಾಪಕ ನಿತೇಶ್​ ತಿವಾರಿ ಧನ್ಯವಾದ ಹೇಳಿದರು. ‘ರಾಮಾಯಣವನ್ನು ಇಲ್ಲಿಯವರೆಗೆ ತರೋಕೆ ಯಶ್ ಅವರು ಸಹ ನಿರ್ಮಾಪಕನಾಗಿ, ಗೆಳೆಯನಾಗಿ ಸಹಾಯ ಮಾಡಿದ್ದಾರೆ’ ಎಂದರು ನಿತೇಶ್.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

‘ಎಲ್ಲರಿಗೂ ನಮಸ್ಕಾರ’ ಎಂದು ಯಶ್ ಕನ್ನಡದಲ್ಲಿ ಮಾತು ಆರಂಭಿಸಿದರು. ಆ ಬಳಿಕ ಎಲ್ಲಾ ಭಾಷೆಯಲ್ಲಿ ನಮಸ್ಕಾರ ಹೇಳಿದರು. ‘ಇದು ನಿಜಕ್ಕೂ ಒಂದೊಳ್ಳೆಯ ಪ್ರಾಜೆಕ್ಟ್. ನಮಿತ್ ಮಲ್ಹೋತ್ರಾ ಅವರಿಗೆ ಇದರ ಕ್ರೆಡಿಟ್ ಹೋಗಬೇಕು.ಅವರು ನನಗೆ ಅವಕಾಶ ಕೊಟ್ಟರು. ಹಿಂದಿ ಕಲಿಯಲು ಕೂಡ ಅವಕಾಶ ಸಿಕ್ಕಿತು’ ಎಂದರು ಯಶ್.


‘ಇದು ಭಾರತದ ಕನಸು. ನಮ್ಮ ಕಥೆಯನ್ನು ವಿದೇಶದ ಪ್ರೇಕ್ಷಕರ ಎದುರು ಇಡಬೇಕು ಎಂಬುದು ಎಲ್ಲರ ಕನಸು. ರಣಬೀರ್ ಕಪೂರ್ ಅವರು ನೀವು ನಿಜಕ್ಕೂ ಗ್ರೇಟ್, ಅವರು ಈ ಪಾತ್ರಕ್ಕೆ ಎಷ್ಟು ಶರಣಾಗಿದ್ದರು ಎಂಬುದು ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ಸಾಯಿ ಕೂಡ ಫ್ಯಾಬುಲಸ್ ನಟಿ’ ಎಂದರು ಯಶ್.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ನಮಿತ್ ಮಲ್ಹೋತ್ರ ಅವರು ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ (ಎರಡು ಪಾರ್ಟ್​ ಸೇರಿ) ಬಂಡವಾಳ ಹೂಡಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಆಗಿದೆ.

ಮತ್ತಷ್ಟು ಕನ್ನಡ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚೆನ್ನಮ್ಮನ ಮೇಲೆ ಆಸಿಡ್‌ ದಾಳಿ: ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ – Kannada News | Lawyer chandramouli Recalls about acid Attack On HD Chennamma

ಬೆಂಗಳೂರು, (ಜುಲೈ 18): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಇಂದು (ಜುಲೈ 18) ವಿಧಿವಶರಾಗಿದ್ದಾರೆ. ಇನ್ನು 2001ರಲ್ಲಿ ಚೆನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.

ಆಸ್ತಿ ವಿವಾದ ಹಾಗೂ ಕುಟುಂಬದ ವೈಷಮ್ಯವೇ ಈ ದಾಳಿಗೆ ಕಾರಣವಾಗಿತ್ತು. ದೇವೇಗೌಡರ ಸಂಬಂಧಿ ಲೋಕೇಶ್ (ಬಸವೇಗೌಡರ ಮಗ) ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದ. ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ನಡೆದಿದ್ದ ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇನ್ನು ಚೆನ್ನಮ್ಮನವರಿಗೆ ಆಸಿಡ್ ಅಟ್ಯಾಕ್ ಆದಾಗ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಚಂದ್ರಮೌಳಿಯವರು ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Source link

ಆ್ಯಸಿಡ್‌ ದಾಳಿಗೂ ಮುನ್ನ ಮಾಜಿ ಪ್ರಧಾನಿ ಪತ್ನಿ ಚೆನ್ನಮ್ಮ ಹೇಗಿದ್ರು ಗೊತ್ತಾ? ಇಲ್ಲಿವೆ ಅಪರೂಪದ ಚಿತ್ರಗಳು – Kannada News | Chennamma Passes Away: Rare Photos Show H.D. Deve Gowda’s Wife Before the Acid Attack

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯಲ್ಲಿ 1941 ರಲ್ಲಿ ಜನಿಸಿದ್ದ ಚೆನ್ನಮ್ಮ, 1954 ರಲ್ಲಿ ದೇವೇಗೌಡರ ಜತೆ ವಿವಾಹವಾಗಿದ್ದರು. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೇರಿದಂತೆ ಚೆನ್ನಮ್ಮ ಅವರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಪುತ್ರಿಯವರು. (ಚಿತ್ರ ಕೃಪೆ: Dinesh Hirisave Basavaiah)

Source link

IND vs ENG: ಲಾರ್ಡ್ಸ್ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಬದಲಾವಣೆ – Kannada News | Washington Sundar OUT! Harsha Dubey Replaces for Final India vs England ODI

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯಕ್ಕೂ ಮೊದಲು, ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಗಾಯದಿಂದ ಬಳಲುತ್ತಿರುವ ತಂಡದ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಕೊನೆಯ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಯುವ ಸ್ಪಿನ್ ಆಲ್‌ರೌಂಡರ್ ಹರ್ಷ್ ದುಬೆ (Harsha Dubey) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉಭಯ ತಂಡಗಳ ನಡುವೆ ನಡೆದಿದ್ದ ಮೂರನೇ ಏಕದಿನ ಪಂದ್ಯದ ವೇಳೆ ಸುಂದರ್ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಫಿಲ್ಡಿಂಗ್ ಕೂಡ ಮಾಡಿರಲಿಲ್ಲ ಇದೀಗ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಹರ್ಷ್ ದುಬೆಯನ್ನು ಆಯ್ಕೆ ಮಾಡಲಾಗಿದೆ.

ಸುಂದರ್ ಔಟ್, ದುಬೆಗೆ ಮತ್ತೊಂದು ಅವಕಾಶ

ಜುಲೈ 16, ಗುರುವಾರ ಕಾರ್ಡಿಫ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸುಂದರ್ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು. ವಿರಾಟ್ ಕೊಹ್ಲಿ ಔಟಾದ ನಂತರ ಬ್ಯಾಟಿಂಗ್‌ ಮಾಡಲು ಬಂದ ಸುಂದರ್ ಓಡುವಾಗ ಕಾಲಿನ ನೋವಿಗೆ ತುತ್ತಾದರು. ಕೂಡಲೇ ಮೈದಾನಕ್ಕೆ ಬಂದ ಫಿಸಿಯೋ ಸುಂದರ್‌ ಅವರ ಕಾಲಿಗೆ ಬ್ಯಾಂಡೇಜ್ ಮಾಡಿದರು.

ಆದರೆ ಚಿಕಿತ್ಸೆಯ ಬಳಿಕವೂ ಸುಂದರ್ ಅವರ ನೋವು ಕಡಿಮೆ ಆಗಲಿಲ್ಲ. ಇದು ಸುಂದರ್ ಅವರ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರಿತು. ಹೀಗಾಗಿ ಅವರು ಮುಂದಿನ ಎಸೆತದಲ್ಲಿ ಪುಲ್ ಶಾಟ್ ಮಾಡಲು ಪ್ರಯತ್ನಿಸಿ ವಿಕೆಟ್ ಕೀಪರ್‌ಗೆ ಸುಲಭವಾದ ಕ್ಯಾಚ್ ನೀಡಿದರು. ಹೀಗಾಗಿ, ಸುಂದರ್ ಕೇವಲ ಐದು ಎಸೆತಗಳನ್ನು ಆಡಿ ಪೆವಿಲಿಯನ್‌ಗೆ ಮರಳಿದರು. ಇದರಿಂದಾಗಿ ಸುಂದರ್ ಫಿಲ್ಡಿಂಗ್ ಸಮಯದಲ್ಲೂ ಮೈದಾನಕ್ಕಿಳಿಯಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ, ಆಯ್ಕೆ ಸಮಿತಿಯು ಅಂತಿಮ ಏಕದಿನ ಪಂದ್ಯಕ್ಕಾಗಿ ಎಡಗೈ ಸ್ಪಿನ್ ಆಲ್‌ರೌಂಡರ್ ಹರ್ಷ್ ದುಬೆ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಹರ್ಷ್ ದುಬೆ ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಸರಣಿಯಲ್ಲಿ ದುಬೆ ಎರಡು ಪಂದ್ಯಗಳನ್ನು ಆಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಅದಕ್ಕೂ ಮೊದಲು, ಅವರು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ತಂಡದ ಭಾಗವಾಗಿದ್ದರಾದರೂ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಮುಂಬರುವ ಜಿಂಬಾಬ್ವೆ ಪ್ರವಾಸಕ್ಕಾಗಿ ಅವರನ್ನು ಟಿ20 ತಂಡಕ್ಕೂ ಆಯ್ಕೆ ಮಾಡಲಾಗಿದೆ.

IND vs ENG: ಲಾರ್ಡ್ಸ್‌ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ

ಹರ್ಷ್ ದುಬೆಗೆ ಆಡುವ ಅವಕಾಶ ಸಿಗುತ್ತಾ?

ಇದೀಗ ತಂಡವನ್ನು ಕೂಡಿಕೊಂಡಿರುವ ಹರ್ಷ್ ದುಬೆಗೆ ಲಾರ್ಡ್ಸ್​ನಲ್ಲಿ ಆಡುವ ಅವಕಾಶ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ಈ ಪ್ರವಾಸದ ಉದ್ದಕ್ಕೂ ಭಾರತದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ, ಅದರಲ್ಲೂ ಕಾರ್ಡಿಫ್‌ನಲ್ಲಿ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾ ಹೆಚ್ಚುವರಿ ಬ್ಯಾಟ್ಸ್‌ಮನ್‌ರನ್ನು ಆಡಿಸುವ ಸಾಧ್ಯತೆಗಳಿವೆ. ಅದರಂತೆ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಒಂದು ವೇಳೆ ಸುಂದರ್ ಅವರ ಬದಲಿಯಾಗಿ ಬೌಲರ್ ಅನ್ನು ಕಣಕ್ಕಿಳಿಸಲು ನಿರ್ಧರಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್‌ನಲ್ಲಿದ್ದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಹರ್ಷ್ ದುಬೆ ಅವರಿಗೆ ಲಾರ್ಡ್ಸ್‌ನಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಶ್ದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ್ಯಸಿಡ್‌ ದಾಳಿಗೂ ಮುನ್ನ ಮಾಜಿ ಪ್ರಧಾನಿ ಪತ್ನಿ ಚೆನ್ನಮ್ಮ ಹೇಗಿದ್ರು ಗೊತ್ತಾ? ಇಲ್ಲಿವೆ ಅಪರೂಪದ ಚಿತ್ರಗಳು – Kannada News | Chennamma passes away rare photos show h d deve gowdas wife before the acid attack

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯಲ್ಲಿ 1941 ರಲ್ಲಿ ಜನಿಸಿದ್ದ ಚೆನ್ನಮ್ಮ, 1954 ರಲ್ಲಿ ದೇವೇಗೌಡರ ಜತೆ ವಿವಾಹವಾಗಿದ್ದರು. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೇರಿದಂತೆ ಚೆನ್ನಮ್ಮ ಅವರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಪುತ್ರಿಯವರು. (ಚಿತ್ರ ಕೃಪೆ: Dinesh Hirisave Basavaiah)

Source link

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡ ‘ಆರ್ಟಿಕಲ್ 370’ – Kannada News | National Film Awards: Yami Gautam Article 370 Wins Big With 3 Major Awards

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು (ಜುಲೈ 18) ಘೋಷಣೆ ಆಗಿದೆ. ಇದರಲ್ಲಿ ಯಾಮಿ ಗೌತಮ್ ಅಭಿನಯದ ‘ಆರ್ಟಿಕಲ್ 370’ ಸಿನಿಮಾ ಭರ್ಜರಿ ಯಶಸ್ಸು ದಾಖಲಿಸಿದೆ. ಇಂದು ಪ್ರಕಟವಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಈ ಚಿತ್ರ ಬರೋಬ್ಬರಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದು ಯಾಮಿ ಗೌತಮ್ ಹಾಗೂ ನಿರ್ಮಾಪಕ ಆದಿತ್ಯ ಧಾರ್ ಅವವರಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.

ಚಿತ್ರದ ಈ ಅದ್ಭುತ ಸಾಧನೆಗೆ ಆಪ್ತರು ಹಾಗೂ ಸಿನಿಮಾ ತಂತ್ರಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಆದಿತ್ಯ ರಾಜ್ ಕೌಲ್ ಎಂಬುವವರು ಟ್ವೀಟ್ ಮಾಡಿ, ‘ನನ್ನ ಸ್ನೇಹಿತರಾದ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಅವರಿಗೆ ಅಭಿನಂದನೆಗಳು. ನಮ್ಮ ‘ಆರ್ಟಿಕಲ್ 370’ ಚಿತ್ರಕ್ಕೆ ಇಂದು ಮೂರು ಪ್ರಮುಖ ರಾಷ್ಟ್ರೀಯ ಪ್ರಶಸ್ತಿಗಳು ಘೋಷಣೆಯಾಗಿರುವುದು ಖುಷಿ ಮೂಡಿಸಿದೆ. ಇದು ಕೇವಲ ಆರಂಭವಷ್ಟೇ’ ಎಂದು ಬರೆದುಕೊಂಡಿದ್ದಾರೆ.

ಯಾವೆಲ್ಲಾ ಪ್ರಶಸ್ತಿಗಳು ಸಿಕ್ಕಿವೆ?

ಅತ್ಯುತ್ತಮ ನಟಿ: ಯಾಮಿ ಗೌತಮ್ (ಆರ್ಟಿಕಲ್ 370)

ಅತ್ಯುತ್ತಮ ಪ್ರಶಸ್ತಿ ಚಿತ್ರ : ಆರ್ಟಿಕಲ್ 370

ಅತ್ಯುತ್ತಮ ಸಂಗೀತ ನಿರ್ದೇಶಕ: ಶಾಶ್ವತ್ ಸಚದೇವ್ (ಆರ್ಟಿಕಲ್ 370)

‘ಆರ್ಟಿಕಲ್ 370’ ಸಿನಿಮಾ ಬಗ್ಗೆ:

‘ಆರ್ಟಿಕಲ್ 370’ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ ಸರ್ಕಾರದ ಐತಿಹಾಸಿಕ ತೀರ್ಮಾನದ ಹಿನ್ನೆಲೆಯನ್ನು ಹೊಂದಿರುವ ರಾಜಕೀಯ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಯಾಮಿ ಗೌತಮ್ ಇದರಲ್ಲಿ ಇಂಟೆಲಿಜೆನ್ಸ್ ಅಧಿಕಾರಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು. ಕಾಶ್ಮೀರದ ಸೂಕ್ಷ್ಮ ಪರಿಸ್ಥಿತಿ, ರಾಜಕೀಯ ತಂತ್ರಗಾರಿಕೆ ಮತ್ತು ಭಯೋತ್ಪಾದನೆ ನಿಗ್ರಹದ ಸುತ್ತ ಸಾಗುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಭಾರಿ ಸದ್ದು ಮಾಡಿತ್ತು.

ಇದನ್ನೂ ಓದಿ:

ಯಶಸ್ಸಿನ ಅಲೆ

ಆದಿತ್ಯ ಧಾರ್ ಅವರು ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ಈ ಸಿನಿಮಾಗೆ ಸಾಕಷ್ಟು ಅವಾರ್ಡ್​ ಸಿಗೋ ಸೂಚನೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:58 pm, Sat, 18 July 26

Source link

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ? ಇಲ್ಲಿದೆ ವಿವರ – Kannada News | former PM HD Deve Gowda’s Wife Chennamma funeral to be held On July 20 In Haradanahalli at Hassan

ಬೆಂಗಳೂರು, (ಜುಲೈ 18): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ (HD Deve Gowda’s Wife Chennamma) ಇಂದು (ಜುಲೈ 18) ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಇಂದು ರಾತ್ರಿ ಪದ್ಮನಾಭನಗರದ ನಿವಾಸದಲಿ ಮೃತದೇಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜುಲೈ 19) ಬೆಳಿಗ್ಗೆ ಸಾರ್ವಜನಿಕರಿಗೆ ಪದ್ಭನಾಭನಗರದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಬಳಿಕ ಮಧ್ಯಾಹ್ನದ ನಂತರ ಸ್ವಗ್ರಾಮ ಹಾಸನದ ಹರದನಳ್ಳಿಗೆ ಮೃತ ದೇಹ ಕೊಂಡೊಯ್ದು ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ತದನಂತರ ಸೋಮವಾರ ಹರದನಹಳ್ಳಿ ಬಳಿಯ ಮಾವಿನಕೆರೆಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ – Kannada News | Lord’s Decider: India Aims to End Century Drought and Win England ODI Series

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಜುಲೈ 19 ರ ಭಾನುವಾರದಂದು ನಡೆಯಲಿದೆ. ಈ ಪಂದ್ಯದ ಫಲಿತಾಂಶವು ಏಕದಿನ ಸರಣಿ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಲಾರ್ಡ್ಸ್‌ನ (Lord’s cricket ground) ಇತಿಹಾಸವನ್ನು ನೋಡಿದರೆ, ಆತಿಥೇಯ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಕಳೆದ 22 ವರ್ಷಗಳಿಂದ ಅಂದರೆ 2004 ರಿಂದ ಈ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದ್ದರಿಂದ ಈ ಬಾರಿ ಟೀಂ ಇಂಡಿಯಾ ಇತಿಹಾಸವನ್ನು ಬದಲಿಸುವ ಇರಾದೆಯಲ್ಲಿದೆ. ಆದರೆ ಗೆಲುವು ಮಾತ್ರವಲ್ಲದೆ, ಈ ಮೈದಾನದಲ್ಲಿ ಭಾರತ ಪುರುಷ ತಂಡದ ಪರ ಯಾರು ಮೊದಲ ಶತಕ ಬಾರಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಸಹ ಕಾದು ಕುಳಿತಿದ್ದಾರೆ.

ಹೌದು, ಭಾರತ ತಂಡವು ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಹಲವಾರು ಪಂದ್ಯಗಳನ್ನು ಆಡಿದೆ. ಈ ಮೈದಾನವು ಮೂರು ಸ್ವರೂಪಗಳಲ್ಲಿ ಯಾವುದರಲ್ಲೂ ಭಾರತೀಯ ತಂಡಕ್ಕೆ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿಲ್ಲ. 1983 ರಲ್ಲಿ ಭಾರತ ಇಲ್ಲಿ ತನ್ನ ಮೊದಲ ವಿಶ್ವಕಪ್ ಗೆದ್ದಿದ್ದರೂ ಮತ್ತು ಕೆಲವು ಸ್ಮರಣೀಯ ಟೆಸ್ಟ್ ವಿಜಯಗಳನ್ನು ಸಾಧಿಸಿದ್ದರೂ, ಈ ಮೈದಾನವು ವಿಶೇಷವಾಗಿ ಉತ್ತಮವಾಗಿಲ್ಲ.

47 ವರ್ಷಗಳ ಪ್ರಯಾಣ

ಆದರೆ ಫಲಿತಾಂಶಗಳನ್ನು ಹೊರತುಪಡಿಸಿ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದರೆ, ಅವರು ಟೆಸ್ಟ್ ಪಂದ್ಯಗಳಲ್ಲಿ ಹಲವಾರು ಶತಕಗಳನ್ನು ಸಿಡಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಈ ಮೈದಾನದಲ್ಲಿ ಏಕದಿನ ಪಂದ್ಯಗಳಲ್ಲಿ ಶತಕದ ಇನ್ನಿಂಗ್ಸ್ ಆಡಿಲ್ಲ. ಭಾರತ ತಂಡವು 1975 ರಲ್ಲಿ ಇಲ್ಲಿ ತನ್ನ ಮೊದಲ ಏಕದಿನ ಪಂದ್ಯವನ್ನು ಆಡಿತ್ತು. ಅದರ ನಂತರ, 2022 ರವರೆಗಿನ 47 ವರ್ಷಗಳಲ್ಲಿ, ಟೀಂ ಇಂಡಿಯಾ ಈ ಮೈದಾನದಲ್ಲಿ ಕೇವಲ ಒಂಬತ್ತು ಏಕದಿನ ಪಂದ್ಯಗಳನ್ನು ಆಡಿದ್ದು, ಯಾವುದೇ ಬ್ಯಾಟ್ಸ್‌ಮನ್ ಶತಕ ಬಾರಿಸುವಲ್ಲಿ ಯಶಸ್ವಿಯಾಗಿಲ್ಲ.

IND vs ENG: ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಮಹದಾಸೆಯನ್ನು ಈಡೇರಿಸಿಕೊಳ್ತಾರಾ ಕೊಹ್ಲಿ

ಅತ್ಯಧಿಕ ಏಕದಿನ ಸ್ಕೋರ್ 90

ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ದಂತಕಥೆಯ ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್‌ನಲ್ಲಿ ಹಲವಾರು ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಆದರೆ ಅವರಲ್ಲಿ ಯಾರೂ ಶತಕ ಬಾರಿಸಿಲ್ಲ. ಮಾಜಿ ನಾಯಕ ಸೌರವ್ ಗಂಗೂಲಿ 2004 ರಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್ ಗಳಿಸುವ ಮೂಲಕ ಲಾರ್ಡ್ಸ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ಏಕದಿನ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. ಕಾಕತಾಳೀಯವಾಗಿ, ಲಾರ್ಡ್ಸ್‌ನಲ್ಲಿ ಭಾರತದ ಕೊನೆಯ ಏಕದಿನ ಗೆಲುವು ಅದೇ ಪಂದ್ಯದಲ್ಲಿ ಬಂದಿತ್ತು. ಗಂಗೂಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಇಲ್ಲಿ ಭಾರತದ ಪರ ತಲಾ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version