ಐಪಿಎಲ್ ಮುಗಿಯುತ್ತಿದ್ದಂತೆ ಸಿನಿ ಹಬ್ಬ ಶುರು; ಈ ವಾರ ಥಿಯೇಟರ್​ನಲ್ಲಿ ಬಿಗ್ ಫೈಟ್ – Kannada News

ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಹಬ್ಬ ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ, ಪ್ರೇಕ್ಷಕರು ಮತ್ತೆ ಸಿನಿಮಾ ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಐಪಿಎಲ್ ಕ್ರೇಜ್‌ನಿಂದಾಗಿ ಇಷ್ಟು ದಿನ ದೊಡ್ಡ ಸಿನಿಮಾಗಳ ಬಿಡುಗಡೆ ಕೊಂಚ ಕಮ್ಮಿಯಾಗಿತ್ತು. ಆದರೆ ಈಗ ಕ್ರಿಕೆಟ್ ಜ್ವರ ಇಳಿಯುತ್ತಿದ್ದಂತೆ ಬಾಕ್ಸ್ ಆಫೀಸ್‌ನಲ್ಲಿ ಅಸಲಿ ಜಟಾಪಟಿ ಆರಂಭವಾಗಿದೆ. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸೌತ್ ಮತ್ತು ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿದ್ದು, ಸಿನಿಮಾ ಪ್ರೇಮಿಗಳಿಗೆ ಜೂನ್ ತಿಂಗಳ ಆರಂಭದಲ್ಲೇ ಭರಪೂರ ಮನರಂಜನೆಯ ಹಬ್ಬ ಸಿಗಲಿದೆ.

‘ಮ್ಯಾಂಗೋ ಪಚ್ಚ’

ಕಿಚ್ಚ ಸುದೀಪ್ ಅಳಿಯ ಸಂಜಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಜೂನ್ 5ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಅನ್ನು ಸುದೀಪ್ ಪತ್ನಿ ಪ್ರಿಯಾ ನಿರ್ಮಾಣ ಮಾಡಿದ್ದಾರೆ. ಭಿನ್ನವಾದ ಶೀರ್ಷಿಕೆ ಮತ್ತು ವಿಭಿನ್ನವಾದ ಕಥಾಹಂದರ ಹೊಂದಿರುವ ಈ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾ ಕೌಟುಂಬಿಕ ಡ್ರಾಮಾ ಮತ್ತು ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ದೊಡ್ಡ ಕಮರ್ಷಿಯಲ್ ಚಿತ್ರಗಳ ಪೈಪೋಟಿಯ ನಡುವೆಯೂ ತನ್ನ ಕಂಟೆಂಟ್ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಪೆದ್ದಿ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿರುವ ‘ಪೆದ್ದಿ’ ಸಿನಿಮಾ ಈ ವಾರದ ಅತ್ಯಂತ ದೊಡ್ಡ ಆಕರ್ಷಣೆಯಾಗಿದೆ. ‘ಆರ್​​ಆರ್​ಆರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಉತ್ತರ ಭಾರತದಲ್ಲೂ ರಾಮ್ ಚರಣ್ ಅವರಿಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದ್ದು, ಈ ಚಿತ್ರವು ಹಿಂದಿಯಲ್ಲೂ ಅತ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್, ಕನ್ನಡದ ನಟ ಶಿವರಾಜ್​​ಕುಮಾರ್ ಅಭಿನಯಿಸಿದ್ದಾರೆ. ಬುಚ್ಚಿ ಬಾಬು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ

ಹೈ ಜವಾನಿ ತೋ ಇಷ್ಕ್ ಹೋನಾ ಹೈ

ಬಾಲಿವುಡ್‌ನ ಖ್ಯಾತ ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಂಪೂರ್ಣ ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿದೆ. ವರುಣ್ ಧವನ್, ಮೃಣಾಲ್ ಠಾಕೂರ್ ಹಾಗೂ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಜೂನ್ 5 ರಂದು ತೆರೆಗೆ ಬರುತ್ತಿದೆ. ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾದ ಹಿಂದಿ ಬಿಡುಗಡೆಯ ಭೀತಿಯ ನಡುವೆಯೇ, ಮೊದಲ ದಿನವೇ ಪ್ರೇಕ್ಷಕರನ್ನು ಸೆಳೆಯಲು ಬುಕ್‌ಮೈಶೋನಲ್ಲಿ ಟಿಕೆಟ್ ದರದಲ್ಲಿ ಬರೋಬ್ಬರಿ 50% ರಷ್ಟು ಭರ್ಜರಿ ರಿಯಾಯಿತಿ ಆಫರ್ ಅನ್ನು ಚಿತ್ರತಂಡ ಘೋಷಿಸಿದೆ. ಸತತ ಸೋಲುಗಳಿಂದ ಕಂಗಾಲಾಗಿರುವ ಪೂಜಾ ಹೆಗ್ಡೆ ಅವರಿಗೆ ಈ ಸಿನಿಮಾ ಬಾಲಿವುಡ್‌ನಲ್ಲಿ ಮರುಜೀವ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Delhi Tragedy: ದೆಹಲಿಯ ಹೋಟೆಲ್​ನಲ್ಲಿ ಅಗ್ನಿ ಅವಘಡ, 20 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ – Kannada News

ನವದೆಹಲಿ, ಜೂನ್ 03: ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ‘ಮಿಕಾಸಾ ಇನ್’ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ(Fire Tragedy) ಸಂಭವಿಸಿದೆ. ಘಟನೆಯಲ್ಲಿ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಕೆಲವರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಬೆಳಗ್ಗೆ 8.50 ರ ಸುಮಾರಿಗೆ ಹೋಟೆಲ್‌ನ ನೆಲಮಾಳಿಗೆಯಿಂದ ಬೆಂಕಿ ಕಾಣಿಸಿಕೊಂಡ ತಕ್ಷಣ, ದೆಹಲಿ ಅಗ್ನಿಶಾಮಕ ಸೇವೆಗಳು (DFS) ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಅಪಾಯದ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಎರಡು ವಾಟರ್ ಎಂಜಿನ್‌ಗಳು, ಎರಡು ಬೌಸರ್‌ಗಳು ಮತ್ತು ಒಂದು ತ್ವರಿತ ಪ್ರತಿಕ್ರಿಯೆ ವಾಹನ (QRV) ಸೇರಿದಂತೆ ಆಧುನಿಕ ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿದವು. ಕಿರಿದಾದ ಗಲ್ಲಿಗಳ ನಡುವೆಯೂ ಸಿಬ್ಬಂದಿಗಳು ಅತ್ಯಂತ ಶ್ರಮವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಐದು ಅಂತಸ್ತಿನ ಈ ಹೋಟೆಲ್‌ನಲ್ಲಿ ಸುಮಾರು 25 ಕೊಠಡಿಗಳಿದ್ದು, ಅವಘಡದ ಸಮಯದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಇದ್ದರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳಾಗಿದ್ದರು. ಬೆಂಕಿ ಹರಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಹೋಟೆಲ್ ಸಿಬ್ಬಂದಿ ಅಗ್ನಿಶಾಮಕ ದಳದೊಂದಿಗೆ ಕೈಜೋಡಿಸಿ, ಸಿಲುಕಿಕೊಂಡಿದ್ದ ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಹರಸಾಹಸ ಪಟ್ಟರು. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೆಸ್ಟೋರೆಂಟ್ ಸಿಬ್ಬಂದಿಯ ಜಾಣ್ಮೆ
ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡುವ ಕೇಸರ್ ಸಿಂಗ್ ಅವರು ಬೆಳಗ್ಗೆ ವಿದ್ಯುತ್ ಸ್ಟೌವ್ ಆನ್ ಮಾಡಲು ಹೋದಾಗ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅವರು ಗಾಬರಿಯಾಗದೆ ತಕ್ಷಣವೇ ತಮ್ಮ ಸಹಾಯಕರು ಹಾಗೂ ಹೋಟೆಲ್‌ನ ಇತರೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಎಲ್ಲರೂ ಬೇಗನೆ ಹೊರಹೋಗಲು ದಾರಿ ಮಾಡಿಕೊಟ್ಟರು.

ಮತ್ತಷ್ಟು ಓದಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಇಬ್ಬರು ಕಾರ್ಮಿಕರು ದುರ್ಮರಣ

ಅನಿರೀಕ್ಷಿತವಾಗಿ ಸಂಭವಿಸಿದ ಈ ಅವಘಡದಲ್ಲಿ ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡಿರುವುದು ತೀವ್ರ ಬೇಸರದ ಸಂಗತಿಯಾದರೂ, ದೆಹಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಹೌಜ್ ರಾಣಿಯ ಯುವಕರ ಸಕಾಲಿಕ ಸಾಹಸದಿಂದಾಗಿ ಉಳಿದ ಜನರುಪಾರಾಗಿರುವುದು ಸಮಾಧಾನದ ಸಂಗತಿಯಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಅಕ್ರಮಗಳ ಬಗ್ಗೆ ಚಾರ್ಜ್​ಶೀಟ್ ಸಲ್ಲಿಸಿದ ಸಿಬಿಐ – Kannada News

ಸಿಬಿಐ ಹಾಗೂ ಬಿ ನಾಗೇಂದ್ರImage Credit source: TV9 Network

ಬೆಂಗಳೂರು, ಜೂನ್ 3: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ (KMVSTDCL) ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಸೇರಿದಂತೆ 30 ಆರೋಪಿಗಳ ವಿರುದ್ಧ ಸಿಬಿಐ (CBI) ಇಲ್ಲಿನ ನ್ಯಾಯಾಲಯಕ್ಕೆ ಮಂಗಳವಾರ ಬೃಹತ್ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಿಗಮದ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವರ ಕುಟುಂಬಸ್ಥರು ಹಾಗೂ ಅವರ ಆಪ್ತರು ಶಾಮೀಲಾಗಿರುವುದು ಸಾಬೀತಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಮುಖ್ಯಾಂಶಗಳು

  • ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಿಬಿಐನಿಂದ 3 ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಕೆ.
  • ಹಗರಣದ ಮುಖ್ಯ ಸೂತ್ರಧಾರ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧದ ಆರೋಪಗಳ ಸಾಕ್ಷಿ ಬಗ್ಗೆ ಉಲ್ಲೇಖ.
  • ನಕಲಿ ದಾಖಲೆ ಸೃಷ್ಟಿಸಿ ಒಟ್ಟು 89.63 ಕೋಟಿ ರೂ. ಹಣ ದುರುಪಯೋಗಪಡಿಸಿದ್ದರ ಬಗ್ಗೆ ಉಲ್ಲೇಖ.

ವಾಲ್ಮೀಕಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಈ ಮೂರೂ ಘಟಕಗಳಲ್ಲಿ ನಡೆದಿರುವ ಆರ್ಥಿಕ ದುರುಪಯೋಗದ ತನಿಖೆ ಪೂರ್ಣಗೊಳಿಸಲಾಗಿದ್ದು, ಮೂರರಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) ಎಂ.ಜಿ. ರೋಡ್ ಶಾಖೆಯ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಹೈಕೋರ್ಟ್ ಉಸ್ತುವಾರಿಯಲ್ಲಿ ಈ ತನಿಖೆ ನಡೆದಿತ್ತು. ನಂತರ ಹೈಕೋರ್ಟ್ ಆದೇಶದ ಮೇರೆಗೆ ತನಿಖೆಯನ್ನು ಇಲಾಖೆಯ ಇತರೆ ಎರಡು ಘಟಕಗಳಿಗೂ ವಿಸ್ತರಿಸಲಾಗಿತ್ತು.

ಕೋಟ್ಯಂತರ ರೂಪಾಯಿ ಲೂಟಿ ನಡೆದಿದ್ದು ಹೇಗೆ?

ಮಾಜಿ ಸಚಿವ ಬಿ. ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ಎಂಡಿ ಪದ್ಮನಾಭ ಜಂಟಿಯಾಗಿ ಈ ವ್ಯವಸ್ಥಿತ ಸಂಚು ರೂಪಿಸಿದ್ದರು. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಎಂಬಾತ ಈ ಹಿಂದೆ ಛತ್ತೀಸ್‌ಗಢದಲ್ಲಿ ಮಾಡಿದ ಮಾದರಿಯಲ್ಲೇ ಇಲ್ಲೂ ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ನಿಗಮದ ಎಂಡಿ ಮತ್ತು ಅಕೌಂಟ್ಸ್ ಆಫೀಸರ್ ಅವರ ನಕಲಿ ರಬ್ಬರ್ ಸ್ಟಾಂಪ್ ಹಾಗೂ ಸಹಿಗಳನ್ನು ಬಳಸಿ, ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂ. ಪೈಕಿ 89.63 ಕೋಟಿ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಹಣವನ್ನು ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ರವಾನಿಸಿ ಕೊನೆಗೆ ನಗದು, ಚಿನ್ನ ಮತ್ತು ಐಷಾರಾಮಿ ಬೆನಾಮಿ ವಾಹನಗಳಾಗಿ ಪರಿವರ್ತಿಸಿಕೊಳ್ಳಲಾಗಿತ್ತು. ಇದಕ್ಕೆ ಬ್ಯಾಂಕ್ ಅಧಿಕಾರಿಗಳೂ ಸಾಥ್ ನೀಡಿದ್ದರು ಎಂಬುದಾಗಿ ಸಿಬಿಐ ಹೇಳಿದೆ.

ಕುಟುಂಬದ ಖಾತೆಗಳಿಗೆ ಸೇರಿದ ಕಮಿಷನ್ ಹಣ

ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಹಾಗೂ ರೊಟ್ಟಿ ಮಾಡುವ ಯಂತ್ರಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೆಕ್ಕಂಟಿ ನಾಗರಾಜ್ ಅವರ ಆಪ್ತನಿಗೆ ಸೇರಿದ ಸಂಸ್ಥೆಗೆ 13.95 ಕೋಟಿ ರೂ. ಟೆಂಡರ್ ನೀಡಲಾಗಿತ್ತು. ಇದರ ಪ್ರತಿಯಾಗಿ ಸಚಿವ ನಾಗೇಂದ್ರ ಅವರಿಗೆ ಸಂದಾಯವಾದ 1.20 ಕೋಟಿ ರೂ. ಅಕ್ರಮ ಹಣವನ್ನು ಅವರ ಸಹೋದರಿ, ಭಾವ, ಪಿಎ ಹಾಗೂ ಬಳ್ಳಾರಿಯ ಫಾರ್ಮ್‌ಹೌಸ್ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ಸಿಬಿಐ ಉಲ್ಲೇಖಿಸಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್: 5 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಇದಲ್ಲದೆ, ಕೌಶಲಾಭಿವೃದ್ಧಿ ತರಬೇತಿಯ 4.90 ಕೋಟಿ ರೂ. ಕಾಮಗಾರಿಯಲ್ಲೂ ಯಾವುದೇ ಟೆಂಡರ್ ಇಲ್ಲದೆ ಉಪ-ಗುತ್ತಿಗೆ ನೀಡಿ, ನೆಕ್ಕಂಟಿ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರೂ. ಹಾಗೂ ಇಲಾಖೆಯ ಸೆಕ್ಷನ್ ಆಫೀಸರ್ ಪ್ರಕಾಶ್ ಅವರಿಗೆ 15.50 ಲಕ್ಷ ಲಂಚ ನೀಡಲಾಗಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MBBS Course: NMC ಹೊಸ ಪ್ರಸ್ತಾಪ; MBBS ಪೂರ್ಣಗೊಳಿಸಲು ಇನ್ಮುಂದೆ 10 ವರ್ಷಗಳ ಕಾಲಾವಕಾಶ! – Kannada News

MBBS ಪೂರ್ಣಗೊಳಿಸಲು ಇನ್ಮುಂದೆ 10 ವರ್ಷಗಳ ಕಾಲಾವಕಾಶ!Image Credit source: Pinterest

ಕಳೆದ 2023 ರ ‘ಪದವಿ ವೈದ್ಯಕೀಯ ಶಿಕ್ಷಣ ನಿಯಮಗಳ ತಿದ್ದುಪಡಿ’ಯ ಪ್ರಕಾರ, ಎಂಬಿಬಿಎಸ್ ಕೋರ್ಸ್ ಮುಗಿಸುವ ಗರಿಷ್ಠ ಅವಧಿಯನ್ನು 9 ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ, ಇದೀಗ ಹಳೆಯ ನಿಯಮಕ್ಕೆ ಮರಳಿ ಆ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಲು ಆಯೋಗ ನಿರ್ಧರಿಸಿದೆ. ಈ ಹೊಸ 10 ವರ್ಷಗಳ ನಿಯಮದ ಚೌಕಟ್ಟಿನಲ್ಲೇ ವಿದ್ಯಾರ್ಥಿಗಳು ತಮ್ಮ 4.5 ವರ್ಷಗಳ ಶೈಕ್ಷಣಿಕ ಕೋರ್ಸ್ (ಥಿಯರಿ ಮತ್ತು ಪ್ರಾಕ್ಟಿಕಲ್) ಮತ್ತು ಕಡ್ಡಾಯವಾಗಿ ಮಾಡಬೇಕಾದ ಒಂದು ವರ್ಷದ ರೋಟರಿ ಮೆಡಿಕಲ್ ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ.

ಮೊದಲ ವರ್ಷದ ಪರೀಕ್ಷಾ ನಿಯಮಗಳಲ್ಲಿ ಬದಲಾವಣೆ ಇಲ್ಲ:

ಕೋರ್ಸ್‌ನ ಒಟ್ಟಾರೆ ಅವಧಿಯನ್ನು ಹೆಚ್ಚಿಸಲಾಗಿದೆಯಾದರೂ, ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷಾ ನಿಯಮಗಳಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ ಎಂದು ಎನ್‌ಎಂಸಿ ಸ್ಪಷ್ಟಪಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ, ವಿದ್ಯಾರ್ಥಿಗಳು ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ಗರಿಷ್ಠ 4 ಪ್ರಯತ್ನಗಳಿಗೆ (Attempts) ಮಾತ್ರ ಅವಕಾಶವಿರುತ್ತದೆ. ಈ ನಾಲ್ಕು ಅವಕಾಶಗಳಲ್ಲೇ ಮೊದಲ ವರ್ಷದ ಎಲ್ಲಾ ವಿಷಯಗಳನ್ನು ಕಡ್ಡಾಯವಾಗಿ ಪಾಸ್ ಮಾಡಬೇಕಾಗುತ್ತದೆ. ಇದರಲ್ಲಿ ವಿಫಲರಾದರೆ ಕೋರ್ಸ್‌ನಿಂದ ಹೊರಹೋಗಬೇಕಾಗುತ್ತದೆ.

ಸಾರ್ವಜನಿಕರು ಮತ್ತು ಪಾಲುದಾರರಿಂದ ಸಲಹೆಗೆ ಆಹ್ವಾನ:

ಎನ್‌ಎಂಸಿ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹೊಸ ನಿಯಮಕ್ಕೆ ಸಕ್ಷಮ ಪ್ರಾಧಿಕಾರವು ಈಗಾಗಲೇ ಅನುಮೋದನೆ ನೀಡಿದೆ. ಆದಾಗ್ಯೂ, ಪ್ರಜಾಪ್ರಭುತ್ವ ಮಾದರಿಯಲ್ಲಿ ಇದನ್ನು ಜಾರಿಗೆ ತರಲು ಆಯೋಗವು ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜುಗಳು, ಪ್ರೊಫೆಸರ್‌ಗಳು ಹಾಗೂ ವೈದ್ಯಕೀಯ ಕ್ಷೇತ್ರದ ಇತರೆ ಪಾಲುದಾರರಿಂದ (Stakeholders) ಅನಿಸಿಕೆಗಳನ್ನು ಕೋರಿದೆ. ಈ ಹೊಸ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಸಲಹೆಗಳು ಅಥವಾ ಆಕ್ಷೇಪಣೆಗಳನ್ನು ನೋಂದಾಯಿಸಲು 30 ದಿನಗಳ ಗಡುವು ನೀಡಲಾಗಿದೆ.

ಇಮೇಲ್ ಮೂಲಕ ಮಾತ್ರ ಸ್ವೀಕಾರ:

ಆಯೋಗವು ನಿಗದಿಪಡಿಸಿದ ಅಧಿಕೃತ ಇಮೇಲ್ ವಿಳಾಸದ ಮೂಲಕ ಬರುವ ಪ್ರತಿಕ್ರಿಯೆಗಳನ್ನು ಮಾತ್ರ ಪರಿಶೀಲನಾ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಎಂಸಿ ತಿಳಿಸಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಸಾಮಾನ್ಯವಾಗಿ ವೈದ್ಯರಾಗಲು ಎಷ್ಟು ವರ್ಷ ಬೇಕು?

ಭಾರತದಲ್ಲಿ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆಯು ಕಠಿಣವಾದ ‘ನೀಟ್ ಯುಜಿ’ (NEET UG) ಪರೀಕ್ಷೆಯ ಮೂಲಕ ದೇಶಾದ್ಯಂತದ ವೈದ್ಯಕೀಯ ಕಾಲೇಜುಗಳಲ್ಲಿ ಆರಂಭವಾಗುತ್ತದೆ. ಅಧಿಕೃತವಾಗಿ ಎಂಬಿಬಿಎಸ್ ಕೋರ್ಸ್ ಅವಧಿ 5.5 ವರ್ಷಗಳು. ಇದರಲ್ಲಿ 4.5 ವರ್ಷಗಳ ಕಾಲ ತರಗತಿ ಹಾಗೂ ಪ್ರಾಯೋಗಿಕ ಅಧ್ಯಯನವಿದ್ದರೆ, ಕೊನೆಯ 1 ವರ್ಷ ಕಡ್ಡಾಯ ಇಂಟರ್ನ್‌ಶಿಪ್ ಇರುತ್ತದೆ.

ಆದರೆ, ವೈದ್ಯಕೀಯ ಶಿಕ್ಷಣದ ಅತ್ಯಂತ ಕಠಿಣ ಪಠ್ಯಕ್ರಮದ ಕಾರಣದಿಂದಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನಿಗದಿತ 5.5 ವರ್ಷಗಳಲ್ಲೇ ಕೋರ್ಸ್ ಮುಗಿಸಲು ಸಾಧ್ಯವಾಗುವುದಿಲ್ಲ. ಹಲವರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಹೆಚ್ಚುವರಿ ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ವೈದ್ಯಕೀಯ ಕಾರಣ ಅಥವಾ ವೈಯಕ್ತಿಕ ತೊಂದರೆಗಳಿಂದ ವಿದ್ಯಾರ್ಥಿಯೊಬ್ಬರು ಒಂದು ಸೆಮಿಸ್ಟರ್ ಪರೀಕ್ಷೆಯನ್ನು ತಪ್ಪಿಸಿಕೊಂಡರೆ, ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಆದರೆ, ಅಂತಿಮವಾಗಿ ಇಡೀ ಕೋರ್ಸ್ ಅನ್ನು ಹೊಸ ನಿಯಮದ ಪ್ರಕಾರ 10 ವರ್ಷಗಳ ಒಳಗಾಗಿ ಮುಗಿಸುವುದು ಕಡ್ಡಾಯವಾಗಿರುತ್ತದೆ.

ಎನ್‌ಎಂಸಿಯ ಈ ನಿರ್ಧಾರವು ಕಠಿಣ ಪಠ್ಯಕ್ರಮದ ಒತ್ತಡದಲ್ಲಿರುವ ಮತ್ತು ಆರೋಗ್ಯದ ಸಮಸ್ಯೆಗಳಿಂದಾಗಿ ಪರೀಕ್ಷೆಗಳನ್ನು ಸರಿಯಾದ ಸಮಯಕ್ಕೆ ಬರೆಯಲಾಗದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರಾಳತೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೂತನ ಸರ್ಕಾರದಲ್ಲಿ ಸಚಿವ ಸ್ಥಾನ: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ – Kannada News

ಬೆಂಗಳೂರು, ಜೂನ್​​ 03: ಡಿ.ಕೆ. ಶಿವಕುಮಾರ್ (DK Shivakumar)​​ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗುವುದು ಪಕ್ಕಾ ಆದ ಹಿನ್ನೆಲೆ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ (U. T. Khader) ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಲೋಕಭವನದಲ್ಲೇ ಡೆಪ್ಯುಟಿ ಸ್ಪೀಕರ್​ಗೆ ಖಾದರ್​​ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್​​ ಅವರಿಂದ ಕರೆ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಮುಖ್ಯಾಂಶಗಳು

  • ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ
  • ಡೆಪ್ಯುಟಿ ಸ್ಪೀಕರ್​ಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಖಾದರ್​​
  • ನೂತನ ಸರ್ಕಾರದಲ್ಲಿ ಯು.ಟಿ. ಖಾದರ್​​ಗೆ ಸಚಿವ ಸ್ಥಾನ

ರಾಜ್ಯಪಾಲರಿಗೆ ಧನ್ಯವಾದ

ಸ್ಪೀಕರ್ ಆಗಿ ಮೂರು ವರ್ಷಗಳ ಅವಧಿಯಲ್ಲಿ ಸಹಕಾರ ನೀಡಿದ್ದಕ್ಕೆ ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​​ಗೆ ಯು.ಟಿ. ಖಾದರ್​​ ಧನ್ಯವಾದ ತಿಳಿಸಿದ್ದಾರೆ. ಲೋಕಭವನಕ್ಕೆ ತೆರಳಿ ಗವರ್ನರ್​​ ಭೇಟಿಯಾಗಿರುವ ಅವರು, ರಾಜ್ಯಪಾಲರಿಗೆ ರಾಜೀನಾಮೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಖಾದರ್​​ಗೆ ಡಿಕೆಶಿ ಸರ್ಕಾರದಲ್ಲೂ ಅದೇ ಖಾತೆ ಸಿಗಬಹುದೆಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್​​ಗೆ ಒಲಿದ ಅದೃಷ್ಟ?

ಖಾದರ್​​ ಫಸ್ಟ್​ ರಿಯಾಕ್ಷನ್​​

ಇನ್ನು ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿರುವ ಯು.ಟಿ. ಖಾದರ್​​, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆದರೆ ಆರೋಗ್ಯ ಖಾತೆ ಅಥವಾ ವಸತಿ ಖಾತೆ ಸಿಕ್ಕರೆ ಒಳಿತೆಂಬ ಬಯಕೆ ಇದೆ. ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ತಾನು ಸಿದ್ಧ. ಯಾವ ಬಾಲ್ ಬಂದರೂ ಬ್ಯಾಟಿಂಗ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬೆಂಬಲಿಗರ ಸಂಭ್ರಮ

ಯು.ಟಿ. ಖಾದರ್ ಸಚಿವರಾಗುವುದು ಖಚಿತವಾಗಿರುವ ಹಿನ್ನೆಲೆ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿ ಇರುವ ಖಾದರ್​ ನಿವಾಸಕ್ಕೆ ಆಗಮಿಸಿ ಹಲವರು ಶುಭ ಕೋರುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:16 pm, Wed, 3 June 26

Source link

DKS Oath Ceremony: ಡಿಕೆ ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು

ಚಿತ್ರದುರ್ಗ, ಜೂನ್ 03: ಚಿತ್ರದುರ್ಗ ತಾಲೂಕಿನ ಮಾಡನಾಯಕನಹಳ್ಳಿಯಲ್ಲಿ ನೊಣವಿನಕೆರೆ ಶ್ರೀಗಳು, ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಕುರಿತು ಮಾತನಾಡಿದ್ದಾರೆ. ಗುರು ನುಡಿದ ಮುಹೂರ್ತವು ರಾಜಯೋಗವಾಗಿದ್ದು, ಪರಿಪೂರ್ಣವಾಗಿದೆ ಎಂದು ಶ್ರೀಗಳು ಬಣ್ಣಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಶ್ರೀಮಠದ ಆಶೀರ್ವಾದ ಪಡೆದಿದ್ದಾರೆ ಮತ್ತು ಜಯಶೀಲರಾಗಿದ್ದಾರೆ ಎಂದು ಹೇಳಿದ್ದಾರೆ. ಸದಾ ಧರ್ಮದ ಧ್ವಜವನ್ನು ಹಿಡಿದು, ಆತಂಕವಿಲ್ಲದೆ ಜನರ ಸೇವೆ ಮಾಡಬೇಕು ಎಂಬುದು ತಮ್ಮ ಹಾರೈಕೆ ಎಂದು ಶ್ರೀಗಳು ತಿಳಿಸಿದ್ದಾರೆ. ಗುರುಗಳ ಆಶೀರ್ವಾದದಿಂದ ಸೇವೆ ಸಲ್ಲಿಸುವ ಶಕ್ತಿ ಸಾಮರ್ಥ್ಯ ಡಿ.ಕೆ. ಶಿವಕುಮಾರ್ ಅವರಿಗೆ ದೊರೆತಿದೆ ಎಂದು ಅವರು ನುಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಡಾನ್ 3’ ವಿವಾದಕ್ಕೆ ಬಿಗ್ ಟ್ವಿಸ್ಟ್; ಚಿತ್ರರಂಗದ ಒಕ್ಕೂಟಕ್ಕೇ ಲೀಗಲ್ ನೋಟಿಸ್ ಕಳುಹಿಸಿದ ರಣವೀರ್ ಸಿಂಗ್ – Kannada News

ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಹಾಗೂ ‘ಡಾನ್ 3’ ಚಿತ್ರತಂಡದ ವಿವಾದ ದಿನ ಕಳೆದಂತೆ ದೊಡ್ಡದಾಗುತ್ತಲೇ ಇದೆ. ಸಿನಿಮಾ ಕೈಬಿಟ್ಟು, ನಷ್ಟ ಪರಿಹಾರಕ್ಕೆ ಒಪ್ಪದ ಬೆನ್ನಲ್ಲೇ ರಣವೀರ್ ಸಿಂಗ್ ವಿರುದ್ಧ ಚಿತ್ರರಂಗದ ಒಕ್ಕೂಟ ನಿಷೇಧ ಹೇರಿತ್ತು. ಇದೀಗ ನಟ ರಣವೀರ್ ಸಿಂಗ್ ಅವರು ತಮಗೆ ವಿಧಿಸಲಾಗಿರುವ ಅಸಹಕಾರ ಆದೇಶದ ವಿರುದ್ಧ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ (FWICE) ಸಂಸ್ಥೆಗೆ ನೋಟಿಸ್ ಕಳುಹಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ರಣವೀರ್ ಸಿಂಗ್ ಮಂಗಳವಾರವೇ ಈ ಲೀಗಲ್ ನೋಟಿಸ್ ರವಾನಿಸಿದ್ದಾರೆ. ಆದರೆ, ನೋಟಿಸ್‌ನಲ್ಲಿ ಏನಿದೆ ಎಂಬ ಸಂಪೂರ್ಣ ವಿವರಗಳು ಇನ್ನು ಬಹಿರಂಗವಾಗಿಲ್ಲ. ಇತ್ತ FWICE ಒಕ್ಕೂಟ ಕೂಡ ಈ ನೋಟಿಸ್‌ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಏನಿದು ‘ಡಾನ್ 3’ ವಿವಾದ?

ಕೆಲವು ದಿನಗಳ ಹಿಂದೆ ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಮಹತ್ವಾಕಾಂಕ್ಷೆಯ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಹಠಾತ್ತನೆ ಹೊರನಡೆದಿದ್ದರು. ಚಿತ್ರಕಥೆಯ ವಿಚಾರದಲ್ಲಿ ಮೂಡಿದ ಸೃಜನಶೀಲ ಭಿನ್ನಾಭಿಪ್ರಾಯಗಳು ಹಾಗೂ ಸ್ಕ್ರಿಪ್ಟ್ ಅಂತಿಮಗೊಳ್ಳದೆ ಶೂಟಿಂಗ್ ಸತತವಾಗಿ ವಿಳಂಬವಾಗುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿತ್ತು.

ಬಂಡಾಯ ಎದ್ದು ಹೊರನಡೆದ ನಟನ ನಡೆಗೆ ಚಿತ್ರದ ನಿರ್ಮಾಣ ಸಂಸ್ಥೆ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಿನಿಮಾ ಅರ್ಧಕ್ಕೆ ನಿಂತಿದ್ದರಿಂದ ತಮಗಾದ ನಷ್ಟಕ್ಕೆ ಪ್ರತಿಯಾಗಿ ರಣವೀರ್ ಸಿಂಗ್ ಅವರಿಂದ ಬರೋಬ್ಬರಿ 45 ಕೋಟಿ ರೂಪಾಯಿ ಪರಿಹಾರ ಕೋರಿ ಸಂಸ್ಥೆ ಬೇಡಿಕೆ ಇಟ್ಟಿದೆ. ಇದರ ಬೆನ್ನಲ್ಲೇ FWICE ಒಕ್ಕೂಟವು ರಣವೀರ್ ಸಿಂಗ್ ಜೊತೆ ಚಿತ್ರರಂಗದ ಯಾರೂ ಸಹಕರಿಸಬಾರದು ಎಂದು ‘ಅಸಹಕಾರ ಆದೇಶ’ ಹೊರಡಿಸಿತ್ತು.

ಈ ಇಡೀ ವಿವಾದದ ಬಗ್ಗೆ ರಣವೀರ್ ಸಿಂಗ್ ಸದ್ಯ ಮೌನ ವಹಿಸಿದ್ದರೂ, ಅವರ ವಕ್ತಾರರು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ವೃತ್ತಿಪರ ಭಿನ್ನಾಭಿಪ್ರಾಯಗಳನ್ನು ಗೌರವ ಮತ್ತು ಪ್ರಬುದ್ಧತೆಯಿಂದ ಖಾಸಗಿಯಾಗಿ ಬಗೆಹರಿಸಿಕೊಳ್ಳಬೇಕು ಎಂದು ರಣವೀರ್ ನಂಬುತ್ತಾರೆ. ಹೀಗಾಗಿ ಅವರು ಈ ಊಹಾಪೋಹಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರಲು ನಿರ್ಧರಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಡಿಮೆ ಸಂಭಾವನೆ ಪಡೆದಿದ್ದ ರಣವೀರ್ ಸಿಂಗ್; ಆದ್ರೂ ಹರಿದುಬಂತು ಕೋಟಿ ಕೋಟಿ ಹಣ!

ಮುಂದಿನ ಸಿನಿಮಾ ‘ಪ್ರಳಯ್’ ಕಥೆ ಏನು?

FWICE ಹೇರಿರುವ ಈ ನಿಷೇಧದಿಂದಾಗಿ ರಣವೀರ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ಪ್ರಳಯ್’ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ, ವರದಿಗಳ ಪ್ರಕಾರ ಈ ವಿವಾದದಿಂದ ರಣವೀರ್ ಅವರ ಮುಂಬರುವ ಸಿನಿಮಾಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನಲಾಗಿದೆ. ಜೈ ಮೆಹ್ತಾ ನಿರ್ದೇಶನದ ‘ಪ್ರಳಯ್’ ಚಿತ್ರದ ಶೂಟಿಂಗ್ ಅನ್ನು ನಿಗದಿಯಂತೆ ಈ ವರ್ಷದ ಆಗಸ್ಟ್ ತಿಂಗಳಿನಿಂದ ಆರಂಭಿಸಲು ಚಿಂತಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:12 pm, Wed, 3 June 26

Source link

ಕೋಲ್ಕತ್ತಾದ ಕಾಲೇಜಿನಲ್ಲೊಂದು ಬೆಡ್ ರೂಮ್, ಗೆದ್ದಲು ತಿಂದಿರುವ 1 ಕೋಟಿ ರೂ. ನಗದು, ರಿವಾಲ್ವರ್, ಕಾಂಡೋಮ್ ಪತ್ತೆ – Kannada News

ಕೋಲ್ಕತ್ತಾ, ಜೂನ್ 03: ಕೋಲ್ಕತ್ತಾ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕಾಲೇಜು(College)ಗಳಲ್ಲಿ ಒಂದಾದ ಸುರೇಂದ್ರನಾಥ್ ಕಾಲೇಜಿನಲ್ಲಿ ಬೆಡ್ ರೂಮ್ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲದೆ ಆ ರೂಮಿನಲ್ಲಿ ಎರಡು ಚೀಲಗಳಲ್ಲಿ ಗೆದ್ದಲು ತಿಂದಿರುವ 1 ಕೋಟಿ ರೂ. ನಗದು, ರಿವಾಲ್ವರ್ ಹಾಗೂ ಕಾಂಡೋಮ್​ಗಳು ಪತ್ತೆಯಾಗಿವೆ.

ಮೇ 4 ರ ಚುನಾವಣಾ ಫಲಿತಾಂಶಗಳ ನಂತರ ವಿದ್ಯಾರ್ಥಿ ಸಂಘದ ಕೊಠಡಿಗೆ ಸಂಪೂರ್ಣವಾಗಿ ಬೀಗ ಹಾಕಲಾಗಿತ್ತು. ಮಳೆಗಾಲದ ಮುನ್ನ ಡೆಂಗ್ಯೂ ತಡೆಗಟ್ಟುವಿಕೆಗಾಗಿ ಪುರಸಭೆಯ ಆರೋಗ್ಯ ತಂಡವು ಕಾಲೇಜಿಗೆ ಭೇಟಿ ನೀಡಿದಾಗ, ಈ ಕೊಠಡಿಯ ಸ್ವಚ್ಛತೆಯೂ ಅತ್ಯಗತ್ಯವಾಗಿತ್ತು. ಕಾಲೇಜು ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ತೆರೆದು ಪರಿಶೀಲಿಸಿದಾಗ, ಅಲ್ಲಿ ಹಳೆಯ ಅಲ್ಮೇರಾವೊಂದರಲ್ಲಿ 500 ಮತ್ತು 100 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಚೀಲಗಳು ಪತ್ತೆಯಾಗಿವೆ.

ದೀರ್ಘಕಾಲದಿಂದ ಕೊಠಡಿ ಮುಚ್ಚಿದ್ದರಿಂದ ಹೆಚ್ಚಿನ ನೋಟುಗಳನ್ನು ಗೆದ್ದಲುಗಳು ತಿಂದು ಹಾಕಿದ್ದವು. ಜತೆಗೆ ಮದ್ಯದ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್​ಗಳು ಕೂಡಾ ಸಿಕ್ಕಿವೆ. ಇದರ ಜೊತೆಗೆ, ಕಾಲೇಜಿನ ಮತ್ತೊಂದು ಭಾಗದಲ್ಲಿ ಕೆಲವು ಸೂಟ್‌ಕೇಸ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಭಾಗಶಃ ಹಾನಿಗೊಳಗಾದ ಅಥವಾ ಸುಟ್ಟ ಸ್ಥಿತಿಯಲ್ಲಿರುವ ಹಳೆಯ ಕರೆನ್ಸಿ ನೋಟುಗಳು ಕಂಡುಬಂದಿವೆ. ಕಾಲೇಜು ಆಡಳಿತ ಮಂಡಳಿಯು ಈ ವಿಷಯದಲ್ಲಿ ಯಾವುದೇ ವಿಳಂಬ ಮಾಡದೆ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ಮುಚಿಪರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಹಣ ಹಾಗೂ ಪತ್ತೆಯಾದ ಹಳೆಯ ವೋಚರ್‌ಗಳನ್ನು ವಶಕ್ಕೆ ಪಡೆದುಕೊಂಡು, ಪಾರದರ್ಶಕ ತನಿಖೆಯನ್ನು ಆರಂಭಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್​​ಗೆ ಚಪ್ಪಲಿ ಏಟು

ಸುಮಾರು ಒಂದು ವರ್ಷದ ನಂತರ ವಿದ್ಯಾರ್ಥಿಗಳ ಸಂಘ ಕೊಠಡಿಯನ್ನು ತೆರೆಯಲಾಯಿತು. 2019 ರಿಂದ ಕ್ಯಾಂಪಸ್ ಚುನಾವಣೆಗಳು ನಡೆಯದ ಕಾರಣ, ಕಾಲೇಜುಗಳಲ್ಲಿನ ಸಂಘ ಕೊಠಡಿಗಳನ್ನು ಮುಚ್ಚುವಂತೆ ಕಲ್ಕತ್ತಾ ಹೈಕೋರ್ಟ್ ಆಗಿನ ಟಿಎಂಸಿ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರ 2025 ರಲ್ಲಿ ಅದನ್ನು ಮುಚ್ಚಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಿಗೆ ಇಲ್ಲಿ ಬೆಡ್ ರೂಮಿರುವುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಇದೇ ತಪಾಸಣೆಯ ವೇಳೆ, ಕಾಲೇಜಿನ ಹೊಸ ಕಟ್ಟಡದ ಐದನೇ ಮಹಡಿಯಲ್ಲಿರುವ ಎರಡು ಬೀಗ ಹಾಕಿದ ಕೊಠಡಿಗಳನ್ನು  ಪ್ರಾಂಶುಪಾಲರ ಸಮ್ಮುಖದಲ್ಲಿ ತೆರೆಯಲಾಯಿತು. ಈ ಕೊಠಡಿಗಳಲ್ಲಿ ಹಾಸಿಗೆಗಳು, ಕಪಾಟುಗಳು ಹಾಗೂ ಮೇಜು-ಕುರ್ಚಿಗಳಿರುವುದು ಕಂಡುಬಂದಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವನ್ನು ಪೂರೈಸಲು ಈ ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು ಎಂದು ಹಗಲು ಪಾಳಿಯ ಉಸ್ತುವಾರಿ ಶಿಕ್ಷಕ ಪೂರ್ಣೇಂದು ಪ್ರಕಾಶ್ ಪಾಲ್ ತಿಳಿಸಿದ್ದಾರೆ.

ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಬೇಕಾದ ಈ ಕೊಠಡಿಗಳಲ್ಲಿ ವಸತಿ ಮಾದರಿಯ ಪೀಠೋಪಕರಣಗಳು ಪತ್ತೆಯಾಗಿರುವುದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಈ ಎಲ್ಲಾ ಕೊಠಡಿಗಳನ್ನು ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಹೆಚ್ಚುವರಿ ಕ್ಲಾಸ್‌ರೂಮ್‌ಗಳನ್ನಾಗಿ ಮಾತ್ರ ಬಳಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಪತ್ತೆಯಾದ ಹಣದ ಮೂಲ ಮತ್ತು ವೋಚರ್‌ಗಳ ಕುರಿತು ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತ ತನಿಖೆ ನಡೆಸುತ್ತಿವೆ. ಶಾಸಕ ಸಜಲ್ ಘೋಷ್ ಸೇರಿದಂತೆ ಪ್ರಮುಖ ನಾಯಕರು ಈ ತನಿಖೆಯನ್ನು ಸ್ವಾಗತಿಸಿದ್ದು, ಇದು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸುಧಾರಣೆ ಮತ್ತು ವ್ಯವಸ್ಥಿತ ಪಾರದರ್ಶಕತೆಯನ್ನು ತರಲು ಉತ್ತಮ ಅವಕಾಶ ಎಂದು ಆಶಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ – Kannada News

ಆದಾಯ ತೆರಿಗೆ ರಿಟರ್ನ್Image Credit source: Shutterstock

ಆದಾಯ ತೆರಿಗೆ ಪಾವತಿಸುತ್ತಿರುವವರು, ತೆರಿಗೆ ಬಾಧ್ಯತೆ ಹೊಂದಿರುವವರೆಲ್ಲರೂ ಟ್ಯಾಕ್ಸ್ ರಿಟರ್ನ್ಸ್ (Income Tax Returns) ಸಲ್ಲಿಸುವುದು ಕಡ್ಡಾಯ. ವಿವಿಧ ವರ್ಗದ ತೆರಿಗೆ ಪಾವತಿದಾರರಿಗೆ ವಿವಿಧ ಐಟಿಆರ್ ಫಾರ್ಮ್​ಗಳಿವೆ. ಆದಾಯ ತೆರಿಗೆ ಇಲಾಖೆ ಖುದ್ದಾಗಿ ಐಟಿಆರ್ 1 ನಮೂನೆ (ITR-1 form) ಬಗ್ಗೆ ಮಾಹಿತಿ ನೀಡಿದೆ. ಅದರ ಬಳಕೆ ಯಾಕೆ, ಹೇಗೆ ಅರ್ಜಿ ತುಂಬಿಸಬೇಕು, ಹೇಗೆ ಸಲ್ಲಿಸಬೇಕು ಎನ್ನುವ ವಿವರಣೆ ಇರುವ ಮಾರ್ಗದರ್ಶಿ ವಿಡಿಯೋವೊಂದನ್ನು ಐಟಿ ಇಲಾಖೆ ಪೋಸ್ಟ್ ಮಾಡಿದೆ.

ಐಟಿಆರ್-1 ಯಾರು ಬಳಸಬಹುದು?

  • ಸಂಬಳ ಅಥವಾ ಪಿಂಚಣಿ ಆದಾಯ ಇರುವವರು
  • ಎರಡು ಮನೆಗಳನ್ನು ಹೊಂದಿರುವವರು
  • ಕುಟುಂಬ ಪಿಂಚಣಿ ಬರುತ್ತಿರುವವರು
  • 5,000 ರೂವರೆಗೆ ಕೃಷಿ ಆದಾಯ ಇರುವವರು
  • ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆ ಬಾಧ್ಯತೆ ಇರುವವರು (1.25 ಲಕ್ಷ ರೂವರೆಗೆ)
  • ಸೇವಿಂಗ್ಸ್ ಅಕೌಂಟ್​ನಿಂದ ಬಡ್ಡಿ, ಠೇವಣಿಗಳಿಂದ ಬಡ್ಡಿ, ಆದಾಯ ತೆರಿಗೆ ರೀಫಂಡ್​ನಿಂದ ಬಡ್ಡಿ ಇತ್ಯಾದಿ ಇತರ ಮೂಲಗಳಿಂದ ಆದಾಯ ಹೊಂದಿರವವರು.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಐಟಿಆರ್-1 ಅಥವಾ ಸಹಜ್ ಫಾರ್ಮ್ ಭರ್ತಿ ಮಾಡುವ ಹಂತ ಹಂತದ ಮಾರ್ಗದರ್ಶಿ

  • ಹಂತ 1: ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ (incometax.gov.in). ಇಲ್ಲಿ ಲಾಗಿನ್ ಆಗಿರಿ
  • ಹಂತ 2: ಹೋಮ್ ಪೇಜ್‌ನಲ್ಲಿ ಕಾಣಿಸಿದ e-File -> Income Tax Returns -> File Income Tax Return ಎಂಬ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಂತರದ ಪುಟದಲ್ಲಿ ಮೌಲ್ಯಮಾಪನ ವರ್ಷವನ್ನು (Assessment Year) 2026-27 ಎಂದು ಆಯ್ದುಕೊಂಡು, ಫೈಲಿಂಗ್ ಮೋಡ್ ಅನ್ನು Online ಎಂದು ಸೆಲೆಕ್ಟ್ ಮಾಡಬೇಕು.
  • ಹಂತ 4: ನೀವು ಈ ಮೊದಲೇ ರಿಟರ್ನ್ ಅನ್ನು ಸೇವ್ ಮಾಡಿದ್ದರೆ ‘Resume Filing’ ಅನ್ನು ಒತ್ತಿರಿ. ಇಲ್ಲದಿದ್ದರೆ ‘Start New Filing’ ಕ್ಲಿಕ್ ಮಾಡಿ.
  • ಹಂತ 5: ತನ್ನ ತೆರಿಗೆ ಸ್ಥಿತಿಯನ್ನು (Status) ‘Individual’ ಅಥವಾ ಬೇರೆ ಸೂಕ್ತವಾದುದನ್ನು ಆಯ್ಕೆ ಮಾಡಬೇಕು.
  • ಹಂತ 6: ಡ್ರಾಪ್‌ಡೌನ್ ಮೆನುವಿನಿಂದ ITR-1 (Sahaj) ಫಾರ್ಮ್ ಅನ್ನು ಆರಿಸಿಕೊಳ್ಳಬೇಕು.
  • ಹಂತ 7: ಒಂದು ವೇಳೆ ತನಗೆ ಯಾವ ಫಾರ್ಮ್ ಬೇಕು ಎಂದು ಗೊಂದಲವಿದ್ದರೆ, ‘Help me decide which ITR form to file’ ಆಯ್ಕೆ ಬಳಸಬಹುದು.
  • ಹಂತ 8: ಸ್ಕ್ರೀನ್ ಮೇಲೆ ಕಾಣುವ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿಯನ್ನು (Document Checklist) ಓದಿಕೊಂಡು, ‘Let’s get started’ ಬಟನ್ ಒತ್ತಬೇಕು.
  • ಹಂತ 9: ತೆರಿಗೆ ರಿಟರ್ನ್ ಸಲ್ಲಿಸುತ್ತಿರುವುದಕ್ಕೆ ಇರುವ ಸೂಕ್ತ ಕಾರಣವನ್ನು (ಉದಾಹರಣೆಗೆ: ಆದಾಯವು ತೆರಿಗೆ ವಿನಾಯಿತಿ ಮಿಗಿಲಾಗಿರುವುದು) ಆಯ್ಕೆ ಮಾಡಬೇಕು.
  • ಹಂತ 10: ಈಗ ಮೊದಲೇ ಭರ್ತಿಯಾದ (Pre-filled) ಡೇಟಾ ಇರುತ್ತದೆ. ಅದನ್ನು ತನ್ನ AIS (Annual Information Statement) ಮತ್ತು Form 26AS ಜೊತೆ ಎಚ್ಚರಿಕೆಯಿಂದ ಹೋಲಿಸಿ ನೋಡಿ, ಅಗತ್ಯ ತಿದ್ದುಪಡಿಗಳಿದ್ದರೆ ಮಾಡಬೇಕು.
  • ಹಂತ 11: ಆದಾಯ ಮತ್ತು ಕಡಿತಗಳ (Income and Deduction) ವಿವರಗಳನ್ನು ಆಯಾ ಸೆಕ್ಷನ್‌ಗಳ ಅಡಿಯಲ್ಲಿ ನಿಖರವಾಗಿ ದಾಖಲಿಸಬೇಕು.
  • ಹಂತ 12 (ಎ): ತೆರಿಗೆ ಲೆಕ್ಕಾಚಾರ (Tax Computation) ಪರಿಶೀಲಿಸಿ. ತೆರಿಗೆ ಬಾಕಿ ಇದ್ದರೆ ‘Pay Now’ ಕ್ಲಿಕ್ ಮಾಡಿ, ಆನ್‌ಲೈನ್ ಪಾವತಿ ಮುಗಿಸಿ ಮತ್ತೆ ಫೈಲಿಂಗ್ ಪುಟಕ್ಕೆ ಮರಳಬೇಕು.
  • ಹಂತ 12 (ಬಿ): ತೆರಿಗೆ ಬಾಕಿ ಇಲ್ಲದಿದ್ದರೆ ಅಥವಾ ರೀಫಂಡ್ ಬರುವುದಿದ್ದರೆ, ನೇರವಾಗಿ ಮುಂದಿನ ಹಂತಕ್ಕೆ ಹೋಗಬಹುದು.

ಪ್ರಮುಖ ಸೂಚನೆ: ಪಾವತಿಸಿರುವ ತೆರಿಗೆ ವಿವರಗಳು ಆಟೋ-ಪಾಪುಲೇಟ್ (ಸ್ವಯಂಚಾಲಿತವಾಗಿ ಅಪ್ಡೇಟ್) ಆಗದಿದ್ದರೆ, ‘Resume Filing’ ಮಾಡಿ, ‘Tax Paid’ ಸೆಕ್ಷನ್‌ಗೆ ಹೋಗಿ, ‘Add Another’ ಕ್ಲಿಕ್ ಮಾಡಿ ಮ್ಯಾನುಯಲ್ ಆಗಿ ವಿವರಗಳನ್ನು ತುಂಬಿ ಸೇವ್ ಮಾಡಬೇಕು.

  • ಹಂತ 13: ಎಲ್ಲವೂ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡು ಡಿಕ್ಲರೇಶನ್ (ಸ್ವಯಂ ಘೋಷಣೆ) ಒಪ್ಪಿ Validation ಗೆ ಸಾಗಬೇಕು.

ಇದನ್ನೂ ಓದಿ: ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್ರಸಾದ್ ಷಣ್ಮುಗಂ

ಇದನ್ನೂ ಗಮನಿಸಿ: ನೀವು ಫೈಲಿಂಗ್ ಸಲ್ಲಿಸಿದ ಬಳಿಕ ಸಿಸ್ಟಂನಿಂದ ವ್ಯಾಲಿಡೇಶನ್ ಪರಿಶೀಲನೆ ಆಗುತ್ತದೆ. ಯಾವುದಾದರೂ ತಪ್ಪು ಕಂಡರೆ ಮೆಸೇಜ್ ಪರಾಮರ್ಶಿಸಿ, ಅದು ನೀಡುವ ಸಲಹೆಯಂತೆ ಕ್ರಮ ತೆಗೆದುಕೊಳ್ಳಿ.

  • ಹಂತ 14: ಆಂತರಿಕ ವ್ಯಾಲಿಡೇಶನ್ ಯಶಸ್ವಿಯಾದ ನಂತರ, ಇಡೀ ರಿಟರ್ನ್ ಅನ್ನು ಮತ್ತೊಮ್ಮೆ ಪರಿಶೀಲಿಸಲು ‘Preview’ ಕ್ಲಿಕ್ ಮಾಡಿ ನೋಡಿ, ನಂತರ ‘Proceed to Validation’ ಒತ್ತಬೇಕು.
  • ಹಂತ 15: ವ್ಯಾಲಿಡೇಶನ್ ಮುಗಿದ ತಕ್ಷಣ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Proceed to Verification’ ಮೇಲೆ ಕ್ಲಿಕ್ ಮಾಡಬೇಕು.
  • ಹಂತ 16: ಕೊನೆಯದಾಗಿ, ಸುಲಭವೆನಿಸಿದ ಇ-ವೆರಿಫಿಕೇಶನ್ ವಿಧಾನವನ್ನು (ಉದಾಹರಣೆಗೆ: ಆಧಾರ್ ಒಟಿಪಿ – Aadhaar OTP) ಆಯ್ದುಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಐಟಿ ಇಲಾಖೆ ಪೋಸ್ಟ್ ಮಾಡಿದ ವಿಡಿಯೋ

ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ಸೆಕ್ಷನ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸಲ್ಲಿಕೆಯಾದ ಬಳಿಕ “ನಿಮ್ಮ ITR-1 ಫೈಲಿಂಗ್ ಯಶಸ್ವಿಯಾಗಿದೆ” ಎಂಬ ಸಂದೇಶ ಪರದೆಯ ಮೇಲೆ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ! – Kannada News

ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸImage Credit source: @viral.humours/Instagram

ಕೇರಳದ 60 ವರ್ಷದ ವೃದ್ಧರೊಬ್ಬರ ಜೀವನದಲ್ಲಿ ನಡೆದಿರುವ ಘಟನೆ ಇಡೀ ದೇಶದ ಗಮನ ಸೆಳೆದಿದೆ. ತಾನು ನಿವೃತ್ತಿಯಾಗಬೇಕಾದ ವಯಸ್ಸಿನಲ್ಲಿ ಈ ವ್ಯಕ್ತಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ (Appointment Letter) ಕೈ ಸೇರಿದೆ. ಹೌದು, ಭರ್ತಿ 20 ವರ್ಷಗಳ ಹಿಂದೆ ಅವರು ಹಾಕಿದ್ದ ಅರ್ಜಿಗೆ ಈಗ ಸರ್ಕಾರ ಸ್ಪಂದಿಸಿದೆ. ಮಲಪ್ಪುರಂನ 60 ವರ್ಷದ ಅಬ್ದುಲ್ ಮಜೀದ್ ಎಂಬುವವರು ಭರ್ತಿ ಎರಡು ದಶಕಗಳ (20 ವರ್ಷ) ನಂತರ ಸರ್ಕಾರಿ ಕೆಲಸದ ನೇಮಕಾತಿ ಪತ್ರ ಪಡೆದಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಪತ್ರ ಬರುವಷ್ಟರಲ್ಲಿ ಅವರು ಸರ್ಕಾರಿ ಸೇವೆಗೆ ಸೇರಬೇಕಾದ ವಯಸ್ಸಿನ ಮಿತಿಯನ್ನೇ ದಾಟಿಹೋಗಿದ್ದಾರೆ.

2005 ರ ಪರೀಕ್ಷೆ, 2026 ರ ನೇಮಕಾತಿ:

ಅಬ್ದುಲ್ ಮಜೀದ್ ಅವರು 2005 ರಲ್ಲಿ ಕೇರಳ ಸಾರ್ವಜನಿಕ ಸೇವಾ ಆಯೋಗ (KPSC) ನಡೆಸಿದ್ದ ‘ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ’ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಶ್ರೇಣಿ ಪಟ್ಟಿ (Rank List) ಯಲ್ಲೂ ಸ್ಥಾನ ಪಡೆದಿದ್ದರು. ಸಾಮಾನ್ಯವಾಗಿ ಈ ರ್ಯಾಂಕ್ ಪಟ್ಟಿಗಳು 3 ವರ್ಷಗಳ ಕಾಲ ಮಾತ್ರ ಮಾನ್ಯವಾಗಿರುತ್ತವೆ. ಅದರಂತೆ ಇವರ ಪಟ್ಟಿಯ ಅವಧಿಯು 2008 ರಲ್ಲೇ ಮುಕ್ತಾಯಗೊಂಡಿತ್ತು.

ಆದರೆ ವ್ಯವಸ್ಥೆಯ ಆಮೆಗತಿಯ ಕೆಲಸ ಎಂತಹುದು ಎಂದರೆ, ರ್ಯಾಂಕ್ ಪಟ್ಟಿ ರದ್ದಾಗಿ 18 ವರ್ಷಗಳು ಕಳೆದ ನಂತರ, ಅಂದರೆ ಇತ್ತೀಚೆಗೆ (ಏಪ್ರಿಲ್ 24, 2026 ರಂದು) ಪಿಎಸ್‌ಸಿ ಮಜೀದ್ ಅವರಿಗೆ ನೇಮಕಾತಿಯ ಸಲಹಾ ಪತ್ರವನ್ನು (Advice Memo) ಕಳುಹಿಸಿದೆ. 20 ವರ್ಷಗಳ ಹಿಂದೆ ಬರೆದ ಪರೀಕ್ಷೆಗೆ ಈಗ ಕೆಲಸದ ಆಫರ್ ಬಂದಿರುವುದನ್ನು ನೋಡಿ ಮಜೀದ್ ದಂಗಾಗಿದ್ದಾರೆ.

ಕೈಗೆ ಬಂದರೂ ಬಾಯಿಗೆ ಬಾರದ ಉದ್ಯೋಗ:

ನೇಮಕಾತಿ ಪತ್ರ ಕೈ ಸೇರಿದಾಗ ಮಜೀದ್ ಅವರಿಗೆ ಅತೀವ ಸಂತೋಷವಾಗಿದ್ದರೂ, ಮರುಕ್ಷಣವೇ ಅದು ತೀವ್ರ ನಿರಾಶೆಗೆ ತಿರುಗಿತು. ಏಕೆಂದರೆ, ಅಧಿಕೃತ ದಾಖಲೆಗಳ ಪ್ರಕಾರ ಮೇ 27, 2026 ಕ್ಕೆ ಮಜೀದ್ ಅವರಿಗೆ ಭರ್ತಿ 60 ವರ್ಷ ತುಂಬಿದೆ. ನಿಯಮಗಳ ಪ್ರಕಾರ 60 ವರ್ಷ ದಾಟಿದ ವ್ಯಕ್ತಿ ಹೊಸದಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಲು ಅರ್ಹನಾಗಿರುವುದಿಲ್ಲ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಜನ್ಮ ದಿನಾಂಕದ ವ್ಯತ್ಯಾಸ:

ಪ್ರಸ್ತುತ ಉದ್ಯೋಗ ವಂಚಿತರಾಗಿರುವ ಮಜೀದ್ ಅವರಿಗೆ ಈಗ ಒಂದು ತಾಂತ್ರಿಕ ಅಂಶದಲ್ಲಿ ಸಣ್ಣ ಭರವಸೆ ಮೂಡಿದೆ. ಅವರ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯ ಪ್ರಕಾರ ಅವರ ಜನ್ಮ ದಿನಾಂಕ ಮೇ 27, 1966 ಎಂದು ದಾಖಲಾಗಿದೆ (ಅದರಂತೆ ಅವರಿಗೆ 60 ವರ್ಷ ತುಂಬಿದೆ). ಆದರೆ, ತಮ್ಮ ನಿಜವಾದ ಜನ್ಮ ದಿನಾಂಕ ಮೇ 27, 1967 ಎಂದು ಮಜೀದ್ ವಾದಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಇಲಾಖೆ ಇವರ ಈ ದಾಖಲೆಯನ್ನು ಪರಿಶೀಲಿಸಿ ಜನ್ಮ ದಿನಾಂಕವನ್ನು ಸರಿಪಡಿಸಿದರೆ, ಇವರಿಗೆ ಸದ್ಯ 59 ವರ್ಷ ತುಂಬಿದಂತಾಗುತ್ತದೆ. ಆಗ ಇನ್ನು ಕನಿಷ್ಠ ಒಂದು ವರ್ಷವಾದರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಇವರಿಗೆ ಕಾನೂನಾತ್ಮಕವಾಗಿ ಅರ್ಹತೆ ಸಿಗುತ್ತದೆ.

ಸಚಿವರ ಗಮನಕ್ಕೆ ಹೋದ ಅರ್ಜಿ:

ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಬ್ದುಲ್ ಮಜೀದ್ ಅವರು ಕೇರಳದ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕ ಮತ್ತು ವಕೀಲರಾದ ಎನ್. ಶಂಸುದ್ದೀನ್ ಅವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:53 am, Wed, 3 June 26

Source link

Exit mobile version