ಮುಂಗಾರು ಆಗಮನಕ್ಕೆ ದಿನಗಣನೆ: ಜೂನ್ 4 ರಂದು ಕೇರಳ ಪ್ರವೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ – Kannada News

ನವದೆಹಲಿ, ಜೂನ್ 03: ದೇಶಾದ್ಯಂತ ಮಳೆ(Rain)ಯ ಕಣ್ಣಾ ಮುಚ್ಚಾಲೆ ಶುರುವಾಗಿದೆ. ಕೆಲವೆಡೆ ಮಳೆ ವಿಪರೀತವಾಗಿದ್ದರೆ ಇನ್ನೂ ಕೆಲವೆಡೆ ಒಮ್ಮೆಯೂ ಮಳೆಯೇ ಆಗಿಲ್ಲ.ಬಿಸಿಲ ಬೇಗೆಯಿಂದ ಕಂಗಾಲಾಗಿರುವ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ತಂಪು ಸುದ್ದಿ ನೀಡಿದೆ. ನೈಋತ್ಯ  ಮುಂಗಾರು ಜೂನ್ 4 ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಾರು ಆರಂಭದ ಬೆನ್ನಲ್ಲೇ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂದಿನ 6 ರಿಂದ 7 ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಕೇರಳ ತಲುಪಬೇಕಿದ್ದ ಮುಂಗಾರು ಈ ಬಾರಿ ಸಣ್ಣ ಬದಲಾವಣೆಗಳನ್ನು ಕಂಡಿದೆ. ಹವಾಮಾನ ಇಲಾಖೆಯು ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತದೆ.

ಸದ್ಯ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ದಟ್ಟವಾದ ಮೋಡಗಳು ಕವಿದಿದ್ದರೂ, ಅರಬ್ಬಿ ಸಮುದ್ರದ ಮೇಲೆ ಬೀಸಬೇಕಾದ ಪಶ್ಚಿಮ ಮಾರುತಗಳ (Westerly winds) ವೇಗ ಇನ್ನು ಅಗತ್ಯ ಮಟ್ಟವನ್ನು ತಲುಪಿಲ್ಲ. ಈ ತಾಂತ್ರಿಕ ಕಾರಣಗಳಿಂದಾಗಿ ಆರಂಭದ ದಿನಾಂಕವನ್ನು ಮೇ 26 ರಿಂದ ಜೂನ್ 4 ಕ್ಕೆ ಪರಿಷ್ಕರಿಸಲಾಗಿದ್ದರೂ, ಜೂನ್ 8 ರೊಳಗಿನ ಆಗಮನವನ್ನು ಹವಾಮಾನ ತಜ್ಞರು ‘ಸಾಮಾನ್ಯ ಅವಧಿ’ ಎಂದೇ ಪರಿಗಣಿಸುತ್ತಾರೆ.

ಪೋಸ್ಟ್

ಮುಂಗಾರು ಪ್ರವೇಶದ ಪ್ರಭಾವದಿಂದಾಗಿ ಕೇರಳದ ಹಲವು ಜಿಲ್ಲೆಗಳಿಗೆ ಈಗಾಗಲೇ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಜೂನ್ 7 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.

ಮತ್ತಷ್ಟು ಓದಿ:

ಜೂನ್ 4 ರಂದು ಕೇರಳ ಪ್ರವೇಶಿಸಲಿರುವ ಈ ಮಾರುತಗಳು ಕ್ರಮೇಣ ದೇಶದ ಇತರೆ ಭಾಗಗಳಿಗೆ ವ್ಯಾಪಿಸಲಿದ್ದು, ಜುಲೈ ಮೊದಲ ವಾರದ ವೇಳೆಗೆ ಇಡೀ ಭಾರತವನ್ನು ಆವರಿಸಲಿವೆ. ಇದರಿಂದಾಗಿ ಪ್ರಸ್ತುತ 45 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ಹೊಂದಿರುವ ಉತ್ತರ ಭಾರತದ ರಾಜ್ಯಗಳಿಗೂ ಶೀಘ್ರದಲ್ಲೇ ಬಿಸಿಲ ಬೇಗೆಯಿಂದ ಮುಕ್ತಿ ಸಿಗಲಿದೆ.

ಹವಾಮಾನದ ಬದಲಾವಣೆಗಳ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಸಾರ್ವಜನಿಕರು ಸ್ಥಳೀಯ ಹವಾಮಾನ ವರದಿಗಳನ್ನು ಗಮನಿಸಿ ಮುಂಜಾಗ್ರತೆ ವಹಿಸುವಂತೆ ಐಎಂಡಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate: ಯಥಾಸ್ಥಿತಿಯಲ್ಲಿ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ದರಪಟ್ಟಿ – Kannada News

ನವದೆಹಲಿ, ಜೂನ್ 3: ನಿನ್ನೆಯಂತೆ ಇಂದು ಬುಧವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬದಲಾವಣೆ ಹೊಂದಿಲ್ಲ. ಭಾರತದಲ್ಲಿ ಅಪರಂಜಿ ಚಿನ್ನದ ಬೆಲೆ (Gold price) 15,622 ರೂನಲ್ಲಿ ಮುಂದುವರಿದಿದೆ. ಬೆಳ್ಳಿ ಬೆಲೆಯಲ್ಲೂ ವ್ಯತ್ಯಯ ಆಗಿಲ್ಲ. ಆದರೆ, ವಿದೇಶಗಳಲ್ಲಿ ಚಿನ್ನದ ಬೆಲೆ ಅಲ್ಪಸ್ವಲ್ಪ ಏರಿಳಿತ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,717 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,320 ರೂ
  • ಚೆನ್ನೈ: 14,500 ರೂ
  • ಮುಂಬೈ: 14,320 ರೂ
  • ದೆಹಲಿ: 14,335 ರೂ
  • ಕೋಲ್ಕತಾ: 14,320 ರೂ
  • ಕೇರಳ: 14,320 ರೂ
  • ಅಹ್ಮದಾಬಾದ್: 14,325 ರೂ
  • ಜೈಪುರ್: 14,335 ರೂ
  • ಲಕ್ನೋ: 14,335 ರೂ
  • ಭುವನೇಶ್ವರ್: 14,320 ರೂ

ಇದನ್ನೂ ಓದಿ: ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 588 ರಿಂಗಿಟ್ (14,099 ರುಪಾಯಿ)
  • ದುಬೈ: 542.50 ಡಿರಾಮ್ (14,124 ರುಪಾಯಿ)
  • ಅಮೆರಿಕ: 148.50 ಡಾಲರ್ (14,205 ರುಪಾಯಿ)
  • ಸಿಂಗಾಪುರ: 196.10 ಸಿಂಗಾಪುರ್ ಡಾಲರ್ (14,657 ರುಪಾಯಿ)
  • ಕತಾರ್: 542.50 ಕತಾರಿ ರಿಯಾಲ್ (14,235 ರೂ)
  • ಸೌದಿ ಅರೇಬಿಯಾ: 559 ಸೌದಿ ರಿಯಾಲ್ (14,247 ರುಪಾಯಿ)
  • ಓಮನ್: 57.40 ಒಮಾನಿ ರಿಯಾಲ್ (14,259 ರುಪಾಯಿ)
  • ಕುವೇತ್: 45.35 ಕುವೇತಿ ದಿನಾರ್ (14,137 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2027: RCB ರಿಲೀಸ್ ಮಾಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

Source link

‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು

ಅರ್ಜುನ್ ಸರ್ಜಾ ನಟನೆಯ ‘ಬ್ಲಾಸ್ಟ್’ ಸಿನಿಮಾ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಆ್ಯಕ್ಷನ್ ಕಮರ್ಷಿಯಲ್ ಚಿತ್ರಕ್ಕೆ ರವಿ ಬಸ್ರೂರು ನೀಡಿರುವ ಅದ್ಭುತ ಸಂಗೀತ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ‘ಕೆಜಿಎಫ್’ ಹಾಗೂ ‘ಸಲಾರ್’ ಖ್ಯಾತಿಯ ರವಿ ಬಸ್ರೂರು ತಮ್ಮ ವಿಶಿಷ್ಟ ಶೈಲಿಯ ಬಿಜಿಎಂ ಮತ್ತು ಮಾಸ್ ಹಾಡುಗಳ ಮೂಲಕ ಪ್ರತಿಯೊಂದು ಸೀನ್‌ಗೂ ಜೀವ ತುಂಬಿದ್ದಾರೆ. ಚಿತ್ರದ ಕಥೆಗೆ ಅವರ ರೀ-ರೆಕಾರ್ಡಿಂಗ್ ಹೈಲೈಟ್ ಆಗಿದ್ದು, ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಕಿವಿಗೆ ಹಬ್ಬ ಉಂಟುಮಾಡಿದೆ. ಸಿನಿಮಾದ ಒಟ್ಟಾರೆ ಯಶಸ್ಸು ಮತ್ತು ಕಲೆಕ್ಷನ್ ಹೆಚ್ಚಾಗುವಲ್ಲಿ ಅವರ ಮ್ಯೂಸಿಕ್ ಪ್ರಮುಖ ಮೈಲೇಜ್ ತಂದುಕೊಟ್ಟಿದೆ ಎಂದು ಚಿತ್ರವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಆ ಮ್ಯೂಸಿಕ್​​ನ ಒಂದು ಝಲಕ್ ಮೇಲಿನ ವಿಡಿಯೋದಲ್ಲಿ ಇದೆ.

Source link

ಪ್ರಯಾಣಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ: ಈ ಮೆಟ್ರೋ ಸ್ಟೇಷನ್​ಗಳಲ್ಲಿ ಇಳಿಯೋದಿದ್ರೆ ಗಮನಿಸಿ – Kannada News

ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಕಟೌಟ್​ಗಳುImage Credit source: tv9

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು (ಜೂನ್ 3) ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಭವನ ವ್ಯಾಪ್ತಿಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಭಾರಿ ಬದಲಾವಣೆಗಳನ್ನು ಮಾಡಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಕೂಡ ಇದನ್ನು ಗಮನಿಸಬೇಕಾಗಿದೆ. ನೀವು ಒಂದು ವೇಳೆ ಲೋಕಭವನ ಮತ್ತು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಿಗೆ ತಲುಪಲು ವಿಧಾನಸೌಧ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯಲು ಯೋಜಿಸಿದ್ದರೆ, ನಿಲ್ದಾಣದಿಂದ ಹೊರಬಂದ ತಕ್ಷಣವೇ ನಿಮಗೆ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಬಹುದು.

ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ಹೊರಭಾಗದ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರಲಿದ್ದು, ಕೇವಲ ಪಾದಚಾರಿಗಳಿಗೆ ಅಥವಾ ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿರಲಿದೆ. ಹೀಗಾಗಿ ಹೊರಬಂದ ತಕ್ಷಣ ಆಟೋ, ಟ್ಯಾಕ್ಸಿ ಅಥವಾ ಇತರೆ ವಾಹನಗಳ ಸೌಲಭ್ಯ ಸಿಗುವುದು ದುಸ್ತರವಾಗಲಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.

ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವಿವರ

  • ಬಸವೇಶ್ವರ ವೃತ್ತದಿಂದ ಬಿಆರ್‌ವಿ ಜಂಕ್ಷನ್: ರಾಜಭವನ ರಸ್ತೆಯ ಈ ಮಾರ್ಗದಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
  • ಪರ್ಯಾಯ ರಸ್ತೆಗಳು: ಕಬ್ಬನ್ ರಸ್ತೆ ಮಾರ್ಗವಾಗಿ ಚಲಿಸುವ ವಾಹನಗಳು ಬಿಆರ್‌ವಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಶಿವಾಜಿನಗರ, ಬಾಳೇಕುಂದ್ರಿ ವೃತ್ತದ ಕಡೆಗೆ ಸಾಗಬಹುದು. ಕ್ವೀನ್ಸ್ ರಸ್ತೆಯಿಂದ ಬರುವವರು ಬಾಳೇಕುಂದ್ರಿ ಜಂಕ್ಷನ್ ಮೂಲಕ ಕನ್ನಿಂಗ್‌ಹ್ಯಾಮ್ ರಸ್ತೆ ಬಳಸಲು ಸೂಚಿಸಲಾಗಿದೆ.
  • ನೋ ಪಾರ್ಕಿಂಗ್ ವಲಯಗಳು: ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ ಹಾಗೂ ಕಬ್ಬನ್ ಪಾರ್ಕ್‌ನ ಒಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಭಾರೀ ವಾಹನಗಳಿಗೆ ನಿಷೇಧ: ಇಡೀ ಬೆಂಗಳೂರು ನಗರದಾದ್ಯಂತ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಹಾಗೂ ದಿನನಿತ್ಯದ ವಾಹನ ಸವಾರರು ಈ ಟ್ರಾಫಿಕ್ ಅಡ್ವೈಸರಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ಸಮಯ ಹಾಗೂ ಮಾರ್ಗವನ್ನು ಯೋಜಿಸಿಕೊಳ್ಳುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology: ಸಂಖ್ಯಾಶಾಸ್ತ್ರದ ಪ್ರಕಾರ, ಈ 4 ತಾರೀಖುಗಳಲ್ಲಿ ಹುಟ್ಟಿದವರು ಸಾಕ್ಷಾತ್ ‘ಕುಬೇರನ ಸ್ವರೂಪ’! – Kannada News

ಸಾಕ್ಷಾತ್ ‘ಕುಬೇರನ ಸ್ವರೂಪ’Image Credit source: Pinterest

ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಜನಿಸಿದ ದಿನಾಂಕವು ಆತನ ಸ್ವಭಾವ, ಭವಿಷ್ಯ ಮತ್ತು ಆತನ ಅದೃಷ್ಟದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದವರು ಹುಟ್ಟುತ್ತಲೇ ತಮ್ಮೊಂದಿಗೆ ಅಪಾರ ಅದೃಷ್ಟವನ್ನು ಹೊತ್ತು ತರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನ 3, 12, 21 ಅಥವಾ 30 ನೇ ತಾರೀಖಿನಂದು ಜನಿಸಿದ ಮಕ್ಕಳನ್ನು ಸಾಕ್ಷಾತ್ ‘ಕುಬೇರನ ಸ್ವರೂಪ’ ಅಥವಾ ಕುಬೇರನ ಅವತಾರ ಎಂದು ಪರಿಗಣಿಸಲಾಗುತ್ತದೆ.

ಈ ದಿನಾಂಕಗಳ ಮೊತ್ತವನ್ನು ಕೂಡಿಸಿದಾಗ (ಉದಾಹರಣೆಗೆ: 1+2=3, 2+1=3, 3+0=3) ಕೊನೆಗೆ ಬರುವ ಸಂಖ್ಯೆ 3. ಆದ್ದರಿಂದ ಇವರ ಮೂಲ ಸಂಖ್ಯೆ (Radix/Mulank) ‘3’ ಆಗಿರುತ್ತದೆ. ಈ ಸಂಖ್ಯೆಯ ಅಧಿಪತಿ ದೇವಗುರು ಬೃಹಸ್ಪತಿ (ಗುರು ಗ್ರಹ). ಇಂತಹ ಮಕ್ಕಳಲ್ಲಿ ಕಂಡುಬರುವ ವಿಶೇಷ ಗುಣಗಳು ಮತ್ತು ಅವರ ಅದೃಷ್ಟದ ರಹಸ್ಯ ಇಲ್ಲಿದೆ ನೋಡಿ:

ಮನೆಯಲ್ಲಿ ಲಕ್ಷ್ಮಿ-ಕುಬೇರರ ತಾಂಡವ (ಆರ್ಥಿಕ ಪ್ರಗತಿ):

ಮೂಲ ಸಂಖ್ಯೆ 3 ರ ಅಡಿಯಲ್ಲಿ ಜನಿಸಿದ ಮಕ್ಕಳನ್ನು ಕುಬೇರನ ಸ್ವರೂಪ ಎನ್ನಲು ಪ್ರಮುಖ ಕಾರಣವಿದೆ. ಈ ಮಕ್ಕಳು ಹುಟ್ಟಿದ ತಕ್ಷಣವೇ ಇವರ ಇಡೀ ಕುಟುಂಬದ ಆರ್ಥಿಕ ಸ್ಥಿತಿ ಬದಲಾಗತೊಡಗುತ್ತದೆ. ತಂದೆ-ತಾಯಿಯ ಆದಾಯ ಹೆಚ್ಚಾಗುತ್ತದೆ, ಮನೆಯಲ್ಲಿದ್ದ ಸಾಲದ ಬಾಧೆಗಳು ದೂರವಾಗಿ ನೆಮ್ಮದಿ ನೆಲೆಸುತ್ತದೆ. ಇವರು ಹೆಜ್ಜೆ ಇಟ್ಟ ಕಡೆ ಧನ-ಧಾನ್ಯದ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿದೆ. ಇವರು ಬೆಳೆದು ದೊಡ್ಡವರಾದ ಮೇಲೂ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

ತೀಕ್ಷ್ಣ ಬುದ್ಧಿಶಕ್ತಿ ಹಾಗೂ ಅದ್ಭುತ ಜ್ಞಾಪಕಶಕ್ತಿ:

ಗುರು ಗ್ರಹದ ಪ್ರಭಾವದಿಂದಾಗಿ ಈ ಮಕ್ಕಳು ಹುಟ್ಟುತ್ತಲೇ ಅಪ್ರತಿಮ ಬುದ್ಧಿವಂತರಾಗಿರುತ್ತಾರೆ. ಇವರ ಗ್ರಹಣ ಶಕ್ತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ, ಯಾವುದೇ ವಿಷಯವನ್ನು ಒಮ್ಮೆ ನೋಡಿದರೆ ಅಥವಾ ಕೇಳಿದರೆ ತಕ್ಷಣವೇ ಗ್ರಹಿಸಿ ಕಲಿಯುತ್ತಾರೆ. ಸಾಮಾನ್ಯವಾಗಿ ಇವರು ಓದು-ಬರಹದಲ್ಲಿ ತುಂಬಾ ಆಸಕ್ತಿ ಹೊಂದಿರುತ್ತಾರೆ ಮತ್ತು ಶಾಲಾ-ಕಾಲೇಜುಗಳಲ್ಲಿ ಯಾವಾಗಲೂ ತರಗತಿಗೆ ತಾವೇ ಮುಂಚೂಣಿಯಲ್ಲಿರುತ್ತಾರೆ (ಟಾಪರ್ಸ್). ಅತಿ ಸಣ್ಣ ವಯಸ್ಸಿನಲ್ಲೇ ತಮ್ಮದೇ ಆದ ಒಂದು ವಿಶಿಷ್ಟ ಗುರುತನ್ನು ಸಮಾಜದಲ್ಲಿ ಸೃಷ್ಟಿಸಿಕೊಳ್ಳುತ್ತಾರೆ.

ಸಂಸ್ಕಾರ ಮತ್ತು ಶಿಸ್ತಿನ ಸಿಪಾಯಿಗಳು:

ದೇವಗುರು ಬೃಹಸ್ಪತಿಯ ಆಶೀರ್ವಾದ ಇವರ ಮೇಲಿರುವುದರಿಂದ, ಇವರಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರಗಳು ರಕ್ತಗತವಾಗಿ ಬಂದಿರುತ್ತವೆ. ವಯಸ್ಸಿನಲ್ಲಿ ಹಿರಿಯರಾದವರನ್ನು ಗೌರವಿಸುವುದು, ತಂದೆ-ತಾಯಿಯ ಮಾತನ್ನು ಪಾಲಿಸುವುದು ಇವರ ರಕ್ತದಲ್ಲೇ ಇರುತ್ತದೆ. ಶಿಸ್ತುಬದ್ಧ ಜೀವನ ಇವರಿಗೆ ಇಷ್ಟ. ಕೇವಲ ಓದು ಅಷ್ಟೇ ಅಲ್ಲದೆ, ಚಿತ್ರಕಲೆ (Drawing), ಬರವಣಿಗೆ (Writing) ಯಂತಹ ಸೃಜನಶೀಲ ಹವ್ಯಾಸಗಳಲ್ಲೂ ಇವರು ಅಪಾರ ಸಾಧನೆ ಮಾಡುತ್ತಾರೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸದಾ ಹಸನ್ಮುಖಿ ಸ್ವಭಾವ:

ಮೂಲ ಸಂಖ್ಯೆ 3 ರ ಮಕ್ಕಳು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಇವರ ಮುಖದಲ್ಲಿ ಒಂದು ರೀತಿಯ ದೈವಿಕ ಕಳೆ ಇರುತ್ತದೆ. ಇವರ ಸಕಾರಾತ್ಮಕ ಗುಣ ಮತ್ತು ಮಾತಿನ ಶೈಲಿಯಿಂದಾಗಿ ಸುತ್ತಮುತ್ತಲಿನ ಜನರನ್ನು ಇವರು ಸುಲಭವಾಗಿ ಆಕರ್ಷಿಸುತ್ತಾರೆ. ಇವರು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ನಗುನಗುತ್ತಾ ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ.

ದೊಡ್ಡ ಕನಸುಗಳು, ಕಠಿಣ ಪರಿಶ್ರಮ:

ಈ ತಾರೀಖುಗಳಲ್ಲಿ ಹುಟ್ಟಿದವರು ತುಂಬಾ ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರು ಬಾಲ್ಯದಿಂದಲೇ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಕೇವಲ ಕನಸು ಕಾಣುವುದಷ್ಟೇ ಅಲ್ಲದೆ, ಅದನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಅಲ್ಲದೆ, ಇವರು ಧಾರ್ಮಿಕ ಪ್ರವೃತ್ತಿಯವರೂ ಆಗಿರುತ್ತಾರೆ. ತೀರ್ಥಯಾತ್ರೆಗಳನ್ನು ಮಾಡುವುದು ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಇವರಿಗೆ ಅತೀವ ಆನಂದವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ: ವಿಚ್ಛೇದನ ಕೊಡ್ತೀನಿ ಎಂದಿದ್ದಕ್ಕೆ ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಬುಲ್ಡೋಜರ್​ನಿಂದ ಮನೆ ಕೆಡವಲು ಯತ್ನಿಸಿದ ವ್ಯಕ್ತಿ – Kannada News

ಪೆನ್ಸಿಲ್ವೇನಿಯಾ, ಜೂನ್ 03: ಪತ್ನಿ ವಿಚ್ಛೇದನ(Divorce) ಕೊಡ್ತೀನಿ ಎಂದಿದ್ದಕ್ಕೆ ಕೋಪಗೊಂಡ ಪತಿ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದಾಗಲೇ ಬುಲ್ಡೋಜರ್ ತಂದು ಕೆಡವಲು ಯತ್ನಿಸಿರುವ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ಕೌಂಟಿಯಲ್ಲಿ ನಡೆದಿದೆ. ಪತಿಯೊಬ್ಬ ಕೋಪ ಹಾಗೂ ಮದ್ಯದ ಅಮಲಿನಲ್ಲಿ ಅತಿರೇಕದ ವರ್ತನೆ ತೋರಿದ್ದು ಮಹಿಳೆಯ ಸಮಯಪ್ರಜ್ಞೆಯಿಂದಾಗಿ ದೊಡ್ಡದೊಂದು ಗಂಡಾಂತರ ತಪ್ಪಿದೆ. 48 ವರ್ಷದ ಎರಿಕ್ ಪಿಯರ್ವ್ಸ್ಜಾ ಎಂಬಾತ ಬುಲ್ಡೋಜರ್ ಬಳಸಿ ತನ್ನದೇ ಮನೆಯನ್ನು ಕೆಡವಲು ಯತ್ನಿಸಿದಾಗ, ಮನೆಯೊಳಗಿದ್ದ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಎರಿಕ್, ಮದ್ಯದ ಅಮಲಿನಲ್ಲಿ ಮನೆಯ ಹೊರಗೆ ನಿಂತಿದ್ದ ಬೃಹತ್ ನಿರ್ಮಾಣ ಯಂತ್ರದ ಕ್ಯಾಬಿನ್ ಒಳಗೆ ಕುಳಿತುಕೊಂಡಿದ್ದಾನೆ ನಮ್ಮಿಬ್ಬರ ನಡುವೆ ಎಲ್ಲವೂ ಮುಗಿದರೆ, ಈ ಮನೆಯೂ ಇರಬಾರದು ಎಂದು ಕೂಗುತ್ತಾ ಯಂತ್ರದ ಮೂಲಕ ಮನೆಯ ಹಿಂಭಾಗದ ಗೋಡೆಯನ್ನು ಕೆಡವಲು ಆರಂಭಿಸಿದ್ದಾನೆ.

ಆತಂಕದ ನಡುವೆಯೂ ಧೈರ್ಯ ಕಳೆದುಕೊಳ್ಳದ ಪತ್ನಿ, ತಕ್ಷಣವೇ ಸುರಕ್ಷಿತ ಜಾಗದಲ್ಲಿ ನಿಂತು ಪೊಲೀಸರಿಗೆ ತುರ್ತು ಕರೆ ಮಾಡಿದರು. ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಅತ್ಯಂತ ಚಾಣಾಕ್ಷತನದಿಂದ ಯಂತ್ರದ ಹೊಡೆತಕ್ಕೆ ಸಿಲುಕದಂತೆ ಸುರಕ್ಷಿತ ಮಾರ್ಗದ ಮೂಲಕ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾದರು. ಮನೆಯ ಹಿಂಭಾಗಕ್ಕೆ ಹಾನಿ ಮಾಡಿದ ನಂತರ ಎರಿಕ್ ಅಲ್ಲಿಂದ ಜಿಮ್ ಬ್ಯಾಗ್ ಎತ್ತಿಕೊಂಡು ನಗರದ ಕಡೆಗೆ ಪರಾರಿಯಾಗಿದ್ದಾನೆ. ಆದರೆ, ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೆನ್ಸಿಲ್ವೇನಿಯಾ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?

ಪ್ರಸ್ತುತ ಆರೋಪಿಯ ಮೇಲೆ ಕೊಲೆ ಯತ್ನ, ಸಾರ್ವಜನಿಕ ಆಸ್ತಿಗೆ ಧಕ್ಕೆ ಹಾಗೂ ಇತರರ ಜೀವಕ್ಕೆ ಅಜಾಗರೂಕತೆಯಿಂದ ಅಪಾಯವನ್ನುಂಟುಮಾಡಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬುಲ್ಡೋಜರ್​ನಿಂದಾಗಿ ಮನೆಯ ಮುಖ್ಯ ರಚನೆ ಸಂಪೂರ್ಣ ದುರ್ಬಲಗೊಂಡಿರುವುದರಿಂದ, ಅದು ಯಾವುದೇ ಸಮಯದಲ್ಲಿ ಕುಸಿಯಬಹುದು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮವಾಗಿ ಇಡೀ ಮನೆಯನ್ನು ಅಧಿಕೃತವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದ ಪತಿಯ ಬೇಜವಾಬ್ದಾರಿತನವನ್ನು ನೆಟ್ಟಿಗರು ಕಟುವಾಗಿ ಖಂಡಿಸಿದ್ದಾರೆ. ಆದಾಗ್ಯೂ, ಯಾವುದೇ ಪ್ರಾಣಹಾನಿಯಾಗದಂತೆ ತಾಯಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿ, ಕಾನೂನು ಕೈಗೆತ್ತಿಕೊಂಡ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸಲು ಪೊಲೀಸರು ಸನ್ನದ್ಧರಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿಕೆ ಶಿವಕುಮಾರ್ ಜತೆ 14 ಮಂದಿ ಪ್ರಮಾಣವಚನ ಸಾಧ್ಯತೆ: ಸಂಭಾವ್ಯ ಸಚಿವರ ಫೈನಲ್ ಲಿಸ್ಟ್ ಲಭ್ಯ – Kannada News

ಬೆಂಗಳೂರಿನಲ್ಲಿ ರಾರಾಜಿಸುತ್ತಿರುವ ಡಿಕೆ ಶಿವಕುಮಾರ್ ಫ್ಲೆಕ್ಸ್Image Credit source: tv9

ಬೆಂಗಳೂರು, ಜೂನ್ 3: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಅವರ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಕೊನೆ ಹಂತದ ಫೈನಲ್ ಲಿಸ್ಟ್ ‘ಟಿವಿ9’ಗೆ ಲಭ್ಯವಾಗಿದೆ. ಇಂದು ಮುಖ್ಯಮಂತ್ರಿಗಳ ಜೊತೆಗೆ ಒಟ್ಟು 14 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡುವ ಸಾಧ್ಯತೆಯಿದೆ. ದೆಹಲಿಯಲ್ಲಿ ನಡೆದ ಹಲವು ದಿನಗಳ ಮ್ಯಾರಥಾನ್ ಸಭೆಗಳ ಬಳಿಕ ಹೈಕಮಾಂಡ್ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ವರಿಷ್ಠರು ನೂತನ ಸಚಿವರ ಅಧಿಕೃತ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಜೊತೆ 14 ಪ್ರಮುಖ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ.
  • ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ್‌ಗೆ ಮಾತ್ರ ಡಿಸಿಎಂ ಸ್ಥಾನ?
  • ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಪಟ್ಟಕ್ಕಾಗಿ ಸತೀಶ್ ಜಾರಕಿಹೊಳಿ ಭಾರಿ ಒತ್ತಡ.

ಯಾರೆಲ್ಲ ಇದ್ದಾರೆ ಫೈನಲ್ ಲಿಸ್ಟ್‌ನಲ್ಲಿ?

ಕೊನೆ ಹಂತದ ಲೆಕ್ಕಾಚಾರಗಳ ಪ್ರಕಾರ ಸಂಪುಟ ಸೇರಲಿರುವ ಆ 14 ಸಂಭಾವ್ಯ ನಾಯಕರ ಪಟ್ಟಿ ಹೀಗಿದೆ;

ಡಾ. ಜಿ. ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯ, ಕೆ.ಎಚ್. ಮುನಿಯಪ್ಪ ಅಥವಾ ರೂಪಕಲಾ ಶಶಿಧರ್, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಎಚ್.ಕೆ. ಪಾಟೀಲ್ ಅಥವಾ ಈಶ್ವರ್ ಖಂಡ್ರೆ ಹಾಗೂ ಎನ್. ಚಲುವರಾಯಸ್ವಾಮಿ. ಎಲ್ಲ ಸಮೀಕರಣಗಳನ್ನು ಪರಿಶೀಲಿಸಿಯೇ ವರಿಷ್ಠರು ಈ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿ (KIA) ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಪರಮೇಶ್ವರ್‌ಗೆ ಮಾತ್ರ ಡಿಸಿಎಂ ಪಟ್ಟ?

ಈ ಬಾರಿಯ ಸಂಪುಟದಲ್ಲಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಸಮುದಾಯಗಳ ಒತ್ತಡವಿದ್ದರೂ ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲು ವರಿಷ್ಠರು ಒಪ್ಪಿಲ್ಲ ಎನ್ನಲಾಗಿದೆ.

ಮತ್ತೊಂದೆಡೆ, ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ತಮಗೆ ಬೇಕೆಂದು ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರಿದ್ದಾರೆ. ಇದೇ ಕಾರಣಕ್ಕೆ ಅವರು ಎರಡು ದಿನಗಳ ಕಾಲ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಆದರೆ, ಸತೀಶ್ ಅವರಿಗೆ ಎರಡು ಹುದ್ದೆ ನೀಡಲು ಹಿಂಜರಿಯುತ್ತಿರುವ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಪ್ರಮಾಣವಚನ: ಖಾಕಿ ಭದ್ರಕೋಟೆಯಾದ ಲೋಕಭವನ! 2000ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ನಿಯೋಜನೆ

ಸತೀಶ್ ಜಾರಕಿಹೊಳಿ ಅವರ ಪಟ್ಟು ಸಡಿಲವಾಗದಿದ್ದರೆ ಹಿಂದುಳಿದ ವರ್ಗದ ಮತ್ತೊಬ್ಬ ಪರ್ಯಾಯ ನಾಯಕನ ಹುಡುಕಾಟದಲ್ಲೂ ದೆಹಲಿ ವರಿಷ್ಠರಿದ್ದಾರೆ ಎನ್ನಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ಪಂದ್ಯಗಳು ಎಕ್ಸ್​ಟ್ರಾ… ನ್ಯೂಝಿಲೆಂಡ್ vs ಭಾರತ ವೇಳಾಪಟ್ಟಿ ಪ್ರಕಟ – Kannada News

ನ್ಯೂಝಿಲೆಂಡ್ vs ಭಾರತ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಟೀಮ್ ಇಂಡಿಯಾ ಅಕ್ಟೋಬರ್​ನಲ್ಲಿ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲದೆ ಅಲ್ಲಿ ಒಟ್ಟು 12 ಪಂದ್ಯಗಳನ್ನಾಡಲಿದೆ. ಇದಕ್ಕೂ ಮುನ್ನ ಈ ಸರಣಿಯಲ್ಲಿ 10 ಪಂದ್ಯಗಳನ್ನು ನಿಗದಿ ಮಾಡಲಾಗಿತ್ತು. ಇದೀಗ ಹೆಚ್ಚುವರಿ 2 ಏಕದಿನ ಪಂದ್ಯಗಳನ್ನು ಸೇರಿಸಲಾಗಿದೆ. ಅದರಂತೆ 5 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯಲಿದೆ. ಇದಾದ ಬಳಿಕ 2 ಮ್ಯಾಚ್​ಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತದೆ.

ಸಾಮಾನ್ಯವಾಗಿ ದ್ವಿಪಕ್ಷೀಯ ಸರಣಿಗಳಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಆದರೆ, ಈ ಬಾರಿ ಕ್ರಿಕೆಟ್ ಅಭಿಮಾನಿಗಳ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ ಬಿಸಿಸಿಐ  ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗಳು ಸರಣಿಯನ್ನು 5 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.

ವಿಶೇಷ ಎಂದರೆ ಈ ದಶಕದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ 5 ಪಂದ್ಯಗಳ ಏಕದಿನ ಸರಣಿ ಆಡಿದ್ದು 7 ವರ್ಷಗಳ ಹಿಂದೆ. ಅಂದರೆ ಮಾರ್ಚ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಿತ್ತು.

ಇದಾದ ಬಳಿಕ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿರಲಿಲ್ಲ. ಇದೀಗ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ 2 ಪಂದ್ಯಗಳನ್ನು ಹೆಚ್ಚಿಸಿರುವುದಾಗಿ ಬಿಸಿಸಿಐ ಹೇಳಿಕೊಂಡಿದೆ.

ಪಂದ್ಯಗಳ ಹೆಚ್ಚಳಕ್ಕೆ ಅಸಲಿ ಕಾರಣವೇನು?

ಈ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕೊನೆಯ ನ್ಯೂಝಿಲೆಂಡ್ ಪ್ರವಾಸವಾಗಿದೆ. ಹೀಗಾಗಿ ಅದರ ಸಂಪೂರ್ಣ ಲಾಭ ಪಡೆಯಲು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅಂದರೆ ಅಲ್ಲಿನ ಕ್ರಿಕೆಟ್ ಮಂಡಳಿ, ಪ್ರಾಯೋಜಕರು ಮತ್ತು ಪ್ರಸಾರಕರು  ಹೆಚ್ಚಿನ ಲಾಭ ಗಳಿಸಲು ಈ ಹೆಚ್ಚುವರಿ ಪಂದ್ಯಗಳನ್ನು ಕೇಳಿ ಪಡೆದಿದ್ದಾರೆ.

ಇದರಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನ್ಯೂಝಿಲೆಂಡ್​ನಲ್ಲಿ 5 ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುತ್ತಿರುವುದರಿಂದ ಪ್ರಾಯೋಜಕತ್ವ ಮತ್ತು ಪ್ರೇಕ್ಷಕರಿಂದ ಉತ್ತಮ ಆದಾಯ ಗಳಿಸಬಹುದು. ಇದನ್ನೇ ಮನಗಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ನ್ಯೂಝಿಲೆಂಡ್ vs ಭಾರತ ವೇಳಾಪಟ್ಟಿ

  • ಟಿ20 ಸರಣಿ ವೇಳಾಪಟ್ಟಿ
  • ಮೊದಲ ಟಿ20 ಪಂದ್ಯ – ಅಕ್ಟೋಬರ್ 22, ಕ್ರೈಸ್ಟ್‌ಚರ್ಚ್
  • 2ನೇ ಟಿ20 ಪಂದ್ಯ – ಅಕ್ಟೋಬರ್ 24, ಕ್ರೈಸ್ಟ್‌ಚರ್ಚ್
  • 3ನೇ ಟಿ20 ಪಂದ್ಯ – 27 ಅಕ್ಟೋಬರ್, ವೆಲ್ಲಿಂಗ್ಟನ್
  • 4ನೇ ಟಿ20 ಪಂದ್ಯ – 30 ಅಕ್ಟೋಬರ್, ಆಕ್ಲೆಂಡ್
  • 5ನೇ ಟಿ20 ಪಂದ್ಯ – ನವೆಂಬರ್ 1, ಹ್ಯಾಮಿಲ್ಟನ್
  • ಏಕದಿನ ಸರಣಿ ವೇಳಾಪಟ್ಟಿ
  • ಮೊದಲ ಏಕದಿನ ಪಂದ್ಯ – 4 ನವೆಂಬರ್, ಆಕ್ಲೆಂಡ್
  • 2ನೇ ಏಕದಿನ ಪಂದ್ಯ – ನವೆಂಬರ್ 7, ವೆಲ್ಲಿಂಗ್ಟನ್
  • 3ನೇ ಏಕದಿನ ಪಂದ್ಯ – ನವೆಂಬರ್ 10, ಹ್ಯಾಮಿಲ್ಟನ್
  • 4ನೇ ಏಕದಿನ ಪಂದ್ಯ – 13 ನವೆಂಬರ್, ಮೌಂಟ್ ಮೌಂಗನುಯಿ
  • 5ನೇ ಏಕದಿನ ಪಂದ್ಯ – 15 ನವೆಂಬರ್, ಮೌಂಟ್ ಮೌಂಗನುಯಿ
  • ಟೆಸ್ಟ್ ಸರಣಿ ವೇಳಾಪಟ್ಟಿ
  • ಮೊದಲ ಟೆಸ್ಟ್ – ನವೆಂಬರ್ 19-23, ವೆಲ್ಲಿಂಗ್ಟನ್
  • ಎರಡನೇ ಟೆಸ್ಟ್ – 27 ನವೆಂಬರ್-1 ಡಿಸೆಂಬರ್ 2026, ಕ್ರೈಸ್ಟ್‌ಚರ್ಚ್

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ನ್ಯೂಝಿಲೆಂಡ್ ವಿರುದ್ಧದ ಸರಣಿ ಡಿಸೆಂಬರ್ 1, 2026 ರಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಭಾರತ ತಂಡವು ಸ್ವದೇಶಕ್ಕೆ ಮರಳಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿಯನ್ನು ಆಡಲಿದೆ.

Published On – 9:36 am, Wed, 3 June 26

Source link

ಮದುವೆ ಮಂಟಪದಲ್ಲಿ ಡ್ಯಾನ್ಸ್​ ಬಿಟ್ಟು ಪಂಜ ಕುಸ್ತಿಗಿಳಿದ ವಧು-ವರ – Kannada News

ನವದೆಹಲಿ, ಜೂನ್ 03: ಸಾಮಾನ್ಯವಾಗಿ ಮದುವೆ(Marriage)ಮಂಟಪದಲ್ಲಿ ವಧು-ವರರು ನಾಚಿಕೆಯಿಂದ ನಿಂತಿರುವುದನ್ನು ಅಥವಾ ರೋಮ್ಯಾಂಟಿಕ್ ಆಗಿ ನೃತ್ಯ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವಧು ಇವೆಲ್ಲವನ್ನೂ ಬದಿಗಿಟ್ಟು, ವರನಿಗೆ ನೇರವಾಗಿ ಪಂಜ ಕುಸ್ತಿ ಸವಾಲು ಹಾಕಿ ಸಖತ್ ಮನರಂಜನೆ ನೀಡಿದ್ದಾಳೆ.

ಗುಲಾಬಿ ಬಣ್ಣದ ಮದುವೆಯ ಲೆಹೆಂಗಾ ಧರಿಸಿದ್ದ ವಧು, ಮಂಟಪದ ಮಧ್ಯದಲ್ಲಿದ್ದ ಟೇಬಲ್ ಮೇಲಿಟ್ಟು ವರನಿಗೆ ಸವಾಲು ಹಾಕಿದಳು. ನನ್ನೊಂದಿಗೆ ಸ್ಪರ್ಧಿಸಲು ಹುಡುಗಿಯರನ್ನಲ್ಲ, ಹುಡುಗರನ್ನು ಕರೆತನ್ನಿ”ಎಂದು ಆತ್ಮವಿಶ್ವಾಸದಿಂದ ಕೂಗಿದ ವಧುವಿನ ದಿಟ್ಟತನಕ್ಕೆ ನೆರೆದಿದ್ದ ಅತಿಥಿಗಳು ಆಶ್ಚರ್ಯಚಕಿತರಾದರು.

ಕೆಂಪು ಶೆರ್ವಾನಿ ಧರಿಸಿದ್ದ ವರ ಆರಂಭದಲ್ಲಿ ಮುಗುಳ್ನಗುತ್ತಲೇ ಪಂದ್ಯಕ್ಕೆ ಸಿದ್ಧನಾದನಾದರೂ, ಕುಸ್ತಿ ಆರಂಭವಾಗುತ್ತಿದ್ದಂತೆ ವಧುವಿನ ಬಲಕ್ಕೆ ಬೆಚ್ಚಿಬಿದ್ದಿದ್ದಾನೆ. ವಧು ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ವರನ ಕೈಯನ್ನು ಕೆಳಕ್ಕೆ ಒತ್ತಿ, ಅಂತಿಮವಾಗಿ ಪಂದ್ಯವನ್ನು ಗೆದ್ದಿದ್ದಾಳೆ. ಇದನ್ನು ನೋಡುತ್ತಿದ್ದ ಕ್ಯಾಮೆರಾಮನ್ ಹಾಗೂ ನೆರೆದಿದ್ದ ಸಂಬಂಧಿಕರು ನಗುವಿನ ಕಡಲಲ್ಲಿ ತೇಲಿದರು.

ವಿಡಿಯೋ

ನೆಟ್ಟಿಗರ  ಕಮೆಂಟ್
ಭಾರತದ ಸಾಂಪ್ರದಾಯಿಕ ವಿವಾಹಗಳ ಚೌಕಟ್ಟಿನಿಂದ ಸ್ವಲ್ಪ ಹೊರಬಂದು ಹೊಸ ಯುಗದ ವಧುವಿನಂತೆ ಸದ್ದು ಮಾಡಿರುವ ಈಕೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಧೂಳೆಬ್ಬಿಸುತ್ತಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ವರನ ಕಾಲೆಳೆಯುತ್ತಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮನೆಯಲ್ಲಿ ಇನ್ಮುಂದೆ ವಧುವಿನದ್ದೇ ಆಡಳಿತ, ಆಕೆಯ ಧೈರ್ಯ ಮೆಚ್ಚಲೇಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. RJ Sagar Meghani ಅವರು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಯಾರಿಗೂ ಯಾವುದೇ ಹಾನಿಯಾಗದೆ, ಮದುವೆಯ ಸಂಭ್ರಮವನ್ನು ಮತ್ತಷ್ಟು ರಂಗಾಗಿಸಿದ ಈ ಮೋಜಿನ ವಿಡಿಯೋ ಸದ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version