IPL 2027: RCB ರಿಲೀಸ್ ಮಾಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

Source link

‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು

ಅರ್ಜುನ್ ಸರ್ಜಾ ನಟನೆಯ ‘ಬ್ಲಾಸ್ಟ್’ ಸಿನಿಮಾ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಆ್ಯಕ್ಷನ್ ಕಮರ್ಷಿಯಲ್ ಚಿತ್ರಕ್ಕೆ ರವಿ ಬಸ್ರೂರು ನೀಡಿರುವ ಅದ್ಭುತ ಸಂಗೀತ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ‘ಕೆಜಿಎಫ್’ ಹಾಗೂ ‘ಸಲಾರ್’ ಖ್ಯಾತಿಯ ರವಿ ಬಸ್ರೂರು ತಮ್ಮ ವಿಶಿಷ್ಟ ಶೈಲಿಯ ಬಿಜಿಎಂ ಮತ್ತು ಮಾಸ್ ಹಾಡುಗಳ ಮೂಲಕ ಪ್ರತಿಯೊಂದು ಸೀನ್‌ಗೂ ಜೀವ ತುಂಬಿದ್ದಾರೆ. ಚಿತ್ರದ ಕಥೆಗೆ ಅವರ ರೀ-ರೆಕಾರ್ಡಿಂಗ್ ಹೈಲೈಟ್ ಆಗಿದ್ದು, ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಕಿವಿಗೆ ಹಬ್ಬ ಉಂಟುಮಾಡಿದೆ. ಸಿನಿಮಾದ ಒಟ್ಟಾರೆ ಯಶಸ್ಸು ಮತ್ತು ಕಲೆಕ್ಷನ್ ಹೆಚ್ಚಾಗುವಲ್ಲಿ ಅವರ ಮ್ಯೂಸಿಕ್ ಪ್ರಮುಖ ಮೈಲೇಜ್ ತಂದುಕೊಟ್ಟಿದೆ ಎಂದು ಚಿತ್ರವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಆ ಮ್ಯೂಸಿಕ್​​ನ ಒಂದು ಝಲಕ್ ಮೇಲಿನ ವಿಡಿಯೋದಲ್ಲಿ ಇದೆ.

Source link

ಪ್ರಯಾಣಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ: ಈ ಮೆಟ್ರೋ ಸ್ಟೇಷನ್​ಗಳಲ್ಲಿ ಇಳಿಯೋದಿದ್ರೆ ಗಮನಿಸಿ – Kannada News

ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಕಟೌಟ್​ಗಳುImage Credit source: tv9

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು (ಜೂನ್ 3) ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಭವನ ವ್ಯಾಪ್ತಿಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಭಾರಿ ಬದಲಾವಣೆಗಳನ್ನು ಮಾಡಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಕೂಡ ಇದನ್ನು ಗಮನಿಸಬೇಕಾಗಿದೆ. ನೀವು ಒಂದು ವೇಳೆ ಲೋಕಭವನ ಮತ್ತು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಿಗೆ ತಲುಪಲು ವಿಧಾನಸೌಧ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯಲು ಯೋಜಿಸಿದ್ದರೆ, ನಿಲ್ದಾಣದಿಂದ ಹೊರಬಂದ ತಕ್ಷಣವೇ ನಿಮಗೆ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಬಹುದು.

ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ಹೊರಭಾಗದ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರಲಿದ್ದು, ಕೇವಲ ಪಾದಚಾರಿಗಳಿಗೆ ಅಥವಾ ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿರಲಿದೆ. ಹೀಗಾಗಿ ಹೊರಬಂದ ತಕ್ಷಣ ಆಟೋ, ಟ್ಯಾಕ್ಸಿ ಅಥವಾ ಇತರೆ ವಾಹನಗಳ ಸೌಲಭ್ಯ ಸಿಗುವುದು ದುಸ್ತರವಾಗಲಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.

ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವಿವರ

  • ಬಸವೇಶ್ವರ ವೃತ್ತದಿಂದ ಬಿಆರ್‌ವಿ ಜಂಕ್ಷನ್: ರಾಜಭವನ ರಸ್ತೆಯ ಈ ಮಾರ್ಗದಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
  • ಪರ್ಯಾಯ ರಸ್ತೆಗಳು: ಕಬ್ಬನ್ ರಸ್ತೆ ಮಾರ್ಗವಾಗಿ ಚಲಿಸುವ ವಾಹನಗಳು ಬಿಆರ್‌ವಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಶಿವಾಜಿನಗರ, ಬಾಳೇಕುಂದ್ರಿ ವೃತ್ತದ ಕಡೆಗೆ ಸಾಗಬಹುದು. ಕ್ವೀನ್ಸ್ ರಸ್ತೆಯಿಂದ ಬರುವವರು ಬಾಳೇಕುಂದ್ರಿ ಜಂಕ್ಷನ್ ಮೂಲಕ ಕನ್ನಿಂಗ್‌ಹ್ಯಾಮ್ ರಸ್ತೆ ಬಳಸಲು ಸೂಚಿಸಲಾಗಿದೆ.
  • ನೋ ಪಾರ್ಕಿಂಗ್ ವಲಯಗಳು: ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ ಹಾಗೂ ಕಬ್ಬನ್ ಪಾರ್ಕ್‌ನ ಒಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಭಾರೀ ವಾಹನಗಳಿಗೆ ನಿಷೇಧ: ಇಡೀ ಬೆಂಗಳೂರು ನಗರದಾದ್ಯಂತ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಹಾಗೂ ದಿನನಿತ್ಯದ ವಾಹನ ಸವಾರರು ಈ ಟ್ರಾಫಿಕ್ ಅಡ್ವೈಸರಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ಸಮಯ ಹಾಗೂ ಮಾರ್ಗವನ್ನು ಯೋಜಿಸಿಕೊಳ್ಳುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology: ಸಂಖ್ಯಾಶಾಸ್ತ್ರದ ಪ್ರಕಾರ, ಈ 4 ತಾರೀಖುಗಳಲ್ಲಿ ಹುಟ್ಟಿದವರು ಸಾಕ್ಷಾತ್ ‘ಕುಬೇರನ ಸ್ವರೂಪ’! – Kannada News

ಸಾಕ್ಷಾತ್ ‘ಕುಬೇರನ ಸ್ವರೂಪ’Image Credit source: Pinterest

ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಜನಿಸಿದ ದಿನಾಂಕವು ಆತನ ಸ್ವಭಾವ, ಭವಿಷ್ಯ ಮತ್ತು ಆತನ ಅದೃಷ್ಟದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದವರು ಹುಟ್ಟುತ್ತಲೇ ತಮ್ಮೊಂದಿಗೆ ಅಪಾರ ಅದೃಷ್ಟವನ್ನು ಹೊತ್ತು ತರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳಿನ 3, 12, 21 ಅಥವಾ 30 ನೇ ತಾರೀಖಿನಂದು ಜನಿಸಿದ ಮಕ್ಕಳನ್ನು ಸಾಕ್ಷಾತ್ ‘ಕುಬೇರನ ಸ್ವರೂಪ’ ಅಥವಾ ಕುಬೇರನ ಅವತಾರ ಎಂದು ಪರಿಗಣಿಸಲಾಗುತ್ತದೆ.

ಈ ದಿನಾಂಕಗಳ ಮೊತ್ತವನ್ನು ಕೂಡಿಸಿದಾಗ (ಉದಾಹರಣೆಗೆ: 1+2=3, 2+1=3, 3+0=3) ಕೊನೆಗೆ ಬರುವ ಸಂಖ್ಯೆ 3. ಆದ್ದರಿಂದ ಇವರ ಮೂಲ ಸಂಖ್ಯೆ (Radix/Mulank) ‘3’ ಆಗಿರುತ್ತದೆ. ಈ ಸಂಖ್ಯೆಯ ಅಧಿಪತಿ ದೇವಗುರು ಬೃಹಸ್ಪತಿ (ಗುರು ಗ್ರಹ). ಇಂತಹ ಮಕ್ಕಳಲ್ಲಿ ಕಂಡುಬರುವ ವಿಶೇಷ ಗುಣಗಳು ಮತ್ತು ಅವರ ಅದೃಷ್ಟದ ರಹಸ್ಯ ಇಲ್ಲಿದೆ ನೋಡಿ:

ಮನೆಯಲ್ಲಿ ಲಕ್ಷ್ಮಿ-ಕುಬೇರರ ತಾಂಡವ (ಆರ್ಥಿಕ ಪ್ರಗತಿ):

ಮೂಲ ಸಂಖ್ಯೆ 3 ರ ಅಡಿಯಲ್ಲಿ ಜನಿಸಿದ ಮಕ್ಕಳನ್ನು ಕುಬೇರನ ಸ್ವರೂಪ ಎನ್ನಲು ಪ್ರಮುಖ ಕಾರಣವಿದೆ. ಈ ಮಕ್ಕಳು ಹುಟ್ಟಿದ ತಕ್ಷಣವೇ ಇವರ ಇಡೀ ಕುಟುಂಬದ ಆರ್ಥಿಕ ಸ್ಥಿತಿ ಬದಲಾಗತೊಡಗುತ್ತದೆ. ತಂದೆ-ತಾಯಿಯ ಆದಾಯ ಹೆಚ್ಚಾಗುತ್ತದೆ, ಮನೆಯಲ್ಲಿದ್ದ ಸಾಲದ ಬಾಧೆಗಳು ದೂರವಾಗಿ ನೆಮ್ಮದಿ ನೆಲೆಸುತ್ತದೆ. ಇವರು ಹೆಜ್ಜೆ ಇಟ್ಟ ಕಡೆ ಧನ-ಧಾನ್ಯದ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿದೆ. ಇವರು ಬೆಳೆದು ದೊಡ್ಡವರಾದ ಮೇಲೂ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

ತೀಕ್ಷ್ಣ ಬುದ್ಧಿಶಕ್ತಿ ಹಾಗೂ ಅದ್ಭುತ ಜ್ಞಾಪಕಶಕ್ತಿ:

ಗುರು ಗ್ರಹದ ಪ್ರಭಾವದಿಂದಾಗಿ ಈ ಮಕ್ಕಳು ಹುಟ್ಟುತ್ತಲೇ ಅಪ್ರತಿಮ ಬುದ್ಧಿವಂತರಾಗಿರುತ್ತಾರೆ. ಇವರ ಗ್ರಹಣ ಶಕ್ತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ, ಯಾವುದೇ ವಿಷಯವನ್ನು ಒಮ್ಮೆ ನೋಡಿದರೆ ಅಥವಾ ಕೇಳಿದರೆ ತಕ್ಷಣವೇ ಗ್ರಹಿಸಿ ಕಲಿಯುತ್ತಾರೆ. ಸಾಮಾನ್ಯವಾಗಿ ಇವರು ಓದು-ಬರಹದಲ್ಲಿ ತುಂಬಾ ಆಸಕ್ತಿ ಹೊಂದಿರುತ್ತಾರೆ ಮತ್ತು ಶಾಲಾ-ಕಾಲೇಜುಗಳಲ್ಲಿ ಯಾವಾಗಲೂ ತರಗತಿಗೆ ತಾವೇ ಮುಂಚೂಣಿಯಲ್ಲಿರುತ್ತಾರೆ (ಟಾಪರ್ಸ್). ಅತಿ ಸಣ್ಣ ವಯಸ್ಸಿನಲ್ಲೇ ತಮ್ಮದೇ ಆದ ಒಂದು ವಿಶಿಷ್ಟ ಗುರುತನ್ನು ಸಮಾಜದಲ್ಲಿ ಸೃಷ್ಟಿಸಿಕೊಳ್ಳುತ್ತಾರೆ.

ಸಂಸ್ಕಾರ ಮತ್ತು ಶಿಸ್ತಿನ ಸಿಪಾಯಿಗಳು:

ದೇವಗುರು ಬೃಹಸ್ಪತಿಯ ಆಶೀರ್ವಾದ ಇವರ ಮೇಲಿರುವುದರಿಂದ, ಇವರಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರಗಳು ರಕ್ತಗತವಾಗಿ ಬಂದಿರುತ್ತವೆ. ವಯಸ್ಸಿನಲ್ಲಿ ಹಿರಿಯರಾದವರನ್ನು ಗೌರವಿಸುವುದು, ತಂದೆ-ತಾಯಿಯ ಮಾತನ್ನು ಪಾಲಿಸುವುದು ಇವರ ರಕ್ತದಲ್ಲೇ ಇರುತ್ತದೆ. ಶಿಸ್ತುಬದ್ಧ ಜೀವನ ಇವರಿಗೆ ಇಷ್ಟ. ಕೇವಲ ಓದು ಅಷ್ಟೇ ಅಲ್ಲದೆ, ಚಿತ್ರಕಲೆ (Drawing), ಬರವಣಿಗೆ (Writing) ಯಂತಹ ಸೃಜನಶೀಲ ಹವ್ಯಾಸಗಳಲ್ಲೂ ಇವರು ಅಪಾರ ಸಾಧನೆ ಮಾಡುತ್ತಾರೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸದಾ ಹಸನ್ಮುಖಿ ಸ್ವಭಾವ:

ಮೂಲ ಸಂಖ್ಯೆ 3 ರ ಮಕ್ಕಳು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಇವರ ಮುಖದಲ್ಲಿ ಒಂದು ರೀತಿಯ ದೈವಿಕ ಕಳೆ ಇರುತ್ತದೆ. ಇವರ ಸಕಾರಾತ್ಮಕ ಗುಣ ಮತ್ತು ಮಾತಿನ ಶೈಲಿಯಿಂದಾಗಿ ಸುತ್ತಮುತ್ತಲಿನ ಜನರನ್ನು ಇವರು ಸುಲಭವಾಗಿ ಆಕರ್ಷಿಸುತ್ತಾರೆ. ಇವರು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ನಗುನಗುತ್ತಾ ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ.

ದೊಡ್ಡ ಕನಸುಗಳು, ಕಠಿಣ ಪರಿಶ್ರಮ:

ಈ ತಾರೀಖುಗಳಲ್ಲಿ ಹುಟ್ಟಿದವರು ತುಂಬಾ ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರು ಬಾಲ್ಯದಿಂದಲೇ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಕೇವಲ ಕನಸು ಕಾಣುವುದಷ್ಟೇ ಅಲ್ಲದೆ, ಅದನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಅಲ್ಲದೆ, ಇವರು ಧಾರ್ಮಿಕ ಪ್ರವೃತ್ತಿಯವರೂ ಆಗಿರುತ್ತಾರೆ. ತೀರ್ಥಯಾತ್ರೆಗಳನ್ನು ಮಾಡುವುದು ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಇವರಿಗೆ ಅತೀವ ಆನಂದವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ: ವಿಚ್ಛೇದನ ಕೊಡ್ತೀನಿ ಎಂದಿದ್ದಕ್ಕೆ ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಬುಲ್ಡೋಜರ್​ನಿಂದ ಮನೆ ಕೆಡವಲು ಯತ್ನಿಸಿದ ವ್ಯಕ್ತಿ – Kannada News

ಪೆನ್ಸಿಲ್ವೇನಿಯಾ, ಜೂನ್ 03: ಪತ್ನಿ ವಿಚ್ಛೇದನ(Divorce) ಕೊಡ್ತೀನಿ ಎಂದಿದ್ದಕ್ಕೆ ಕೋಪಗೊಂಡ ಪತಿ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದಾಗಲೇ ಬುಲ್ಡೋಜರ್ ತಂದು ಕೆಡವಲು ಯತ್ನಿಸಿರುವ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ಕೌಂಟಿಯಲ್ಲಿ ನಡೆದಿದೆ. ಪತಿಯೊಬ್ಬ ಕೋಪ ಹಾಗೂ ಮದ್ಯದ ಅಮಲಿನಲ್ಲಿ ಅತಿರೇಕದ ವರ್ತನೆ ತೋರಿದ್ದು ಮಹಿಳೆಯ ಸಮಯಪ್ರಜ್ಞೆಯಿಂದಾಗಿ ದೊಡ್ಡದೊಂದು ಗಂಡಾಂತರ ತಪ್ಪಿದೆ. 48 ವರ್ಷದ ಎರಿಕ್ ಪಿಯರ್ವ್ಸ್ಜಾ ಎಂಬಾತ ಬುಲ್ಡೋಜರ್ ಬಳಸಿ ತನ್ನದೇ ಮನೆಯನ್ನು ಕೆಡವಲು ಯತ್ನಿಸಿದಾಗ, ಮನೆಯೊಳಗಿದ್ದ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಎರಿಕ್, ಮದ್ಯದ ಅಮಲಿನಲ್ಲಿ ಮನೆಯ ಹೊರಗೆ ನಿಂತಿದ್ದ ಬೃಹತ್ ನಿರ್ಮಾಣ ಯಂತ್ರದ ಕ್ಯಾಬಿನ್ ಒಳಗೆ ಕುಳಿತುಕೊಂಡಿದ್ದಾನೆ ನಮ್ಮಿಬ್ಬರ ನಡುವೆ ಎಲ್ಲವೂ ಮುಗಿದರೆ, ಈ ಮನೆಯೂ ಇರಬಾರದು ಎಂದು ಕೂಗುತ್ತಾ ಯಂತ್ರದ ಮೂಲಕ ಮನೆಯ ಹಿಂಭಾಗದ ಗೋಡೆಯನ್ನು ಕೆಡವಲು ಆರಂಭಿಸಿದ್ದಾನೆ.

ಆತಂಕದ ನಡುವೆಯೂ ಧೈರ್ಯ ಕಳೆದುಕೊಳ್ಳದ ಪತ್ನಿ, ತಕ್ಷಣವೇ ಸುರಕ್ಷಿತ ಜಾಗದಲ್ಲಿ ನಿಂತು ಪೊಲೀಸರಿಗೆ ತುರ್ತು ಕರೆ ಮಾಡಿದರು. ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಅತ್ಯಂತ ಚಾಣಾಕ್ಷತನದಿಂದ ಯಂತ್ರದ ಹೊಡೆತಕ್ಕೆ ಸಿಲುಕದಂತೆ ಸುರಕ್ಷಿತ ಮಾರ್ಗದ ಮೂಲಕ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾದರು. ಮನೆಯ ಹಿಂಭಾಗಕ್ಕೆ ಹಾನಿ ಮಾಡಿದ ನಂತರ ಎರಿಕ್ ಅಲ್ಲಿಂದ ಜಿಮ್ ಬ್ಯಾಗ್ ಎತ್ತಿಕೊಂಡು ನಗರದ ಕಡೆಗೆ ಪರಾರಿಯಾಗಿದ್ದಾನೆ. ಆದರೆ, ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೆನ್ಸಿಲ್ವೇನಿಯಾ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?

ಪ್ರಸ್ತುತ ಆರೋಪಿಯ ಮೇಲೆ ಕೊಲೆ ಯತ್ನ, ಸಾರ್ವಜನಿಕ ಆಸ್ತಿಗೆ ಧಕ್ಕೆ ಹಾಗೂ ಇತರರ ಜೀವಕ್ಕೆ ಅಜಾಗರೂಕತೆಯಿಂದ ಅಪಾಯವನ್ನುಂಟುಮಾಡಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬುಲ್ಡೋಜರ್​ನಿಂದಾಗಿ ಮನೆಯ ಮುಖ್ಯ ರಚನೆ ಸಂಪೂರ್ಣ ದುರ್ಬಲಗೊಂಡಿರುವುದರಿಂದ, ಅದು ಯಾವುದೇ ಸಮಯದಲ್ಲಿ ಕುಸಿಯಬಹುದು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮವಾಗಿ ಇಡೀ ಮನೆಯನ್ನು ಅಧಿಕೃತವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದ ಪತಿಯ ಬೇಜವಾಬ್ದಾರಿತನವನ್ನು ನೆಟ್ಟಿಗರು ಕಟುವಾಗಿ ಖಂಡಿಸಿದ್ದಾರೆ. ಆದಾಗ್ಯೂ, ಯಾವುದೇ ಪ್ರಾಣಹಾನಿಯಾಗದಂತೆ ತಾಯಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿ, ಕಾನೂನು ಕೈಗೆತ್ತಿಕೊಂಡ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸಲು ಪೊಲೀಸರು ಸನ್ನದ್ಧರಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿಕೆ ಶಿವಕುಮಾರ್ ಜತೆ 14 ಮಂದಿ ಪ್ರಮಾಣವಚನ ಸಾಧ್ಯತೆ: ಸಂಭಾವ್ಯ ಸಚಿವರ ಫೈನಲ್ ಲಿಸ್ಟ್ ಲಭ್ಯ – Kannada News

ಬೆಂಗಳೂರಿನಲ್ಲಿ ರಾರಾಜಿಸುತ್ತಿರುವ ಡಿಕೆ ಶಿವಕುಮಾರ್ ಫ್ಲೆಕ್ಸ್Image Credit source: tv9

ಬೆಂಗಳೂರು, ಜೂನ್ 3: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಅವರ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಕೊನೆ ಹಂತದ ಫೈನಲ್ ಲಿಸ್ಟ್ ‘ಟಿವಿ9’ಗೆ ಲಭ್ಯವಾಗಿದೆ. ಇಂದು ಮುಖ್ಯಮಂತ್ರಿಗಳ ಜೊತೆಗೆ ಒಟ್ಟು 14 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡುವ ಸಾಧ್ಯತೆಯಿದೆ. ದೆಹಲಿಯಲ್ಲಿ ನಡೆದ ಹಲವು ದಿನಗಳ ಮ್ಯಾರಥಾನ್ ಸಭೆಗಳ ಬಳಿಕ ಹೈಕಮಾಂಡ್ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ವರಿಷ್ಠರು ನೂತನ ಸಚಿವರ ಅಧಿಕೃತ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಜೊತೆ 14 ಪ್ರಮುಖ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ.
  • ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ್‌ಗೆ ಮಾತ್ರ ಡಿಸಿಎಂ ಸ್ಥಾನ?
  • ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಪಟ್ಟಕ್ಕಾಗಿ ಸತೀಶ್ ಜಾರಕಿಹೊಳಿ ಭಾರಿ ಒತ್ತಡ.

ಯಾರೆಲ್ಲ ಇದ್ದಾರೆ ಫೈನಲ್ ಲಿಸ್ಟ್‌ನಲ್ಲಿ?

ಕೊನೆ ಹಂತದ ಲೆಕ್ಕಾಚಾರಗಳ ಪ್ರಕಾರ ಸಂಪುಟ ಸೇರಲಿರುವ ಆ 14 ಸಂಭಾವ್ಯ ನಾಯಕರ ಪಟ್ಟಿ ಹೀಗಿದೆ;

ಡಾ. ಜಿ. ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯ, ಕೆ.ಎಚ್. ಮುನಿಯಪ್ಪ ಅಥವಾ ರೂಪಕಲಾ ಶಶಿಧರ್, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಎಚ್.ಕೆ. ಪಾಟೀಲ್ ಅಥವಾ ಈಶ್ವರ್ ಖಂಡ್ರೆ ಹಾಗೂ ಎನ್. ಚಲುವರಾಯಸ್ವಾಮಿ. ಎಲ್ಲ ಸಮೀಕರಣಗಳನ್ನು ಪರಿಶೀಲಿಸಿಯೇ ವರಿಷ್ಠರು ಈ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿ (KIA) ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಪರಮೇಶ್ವರ್‌ಗೆ ಮಾತ್ರ ಡಿಸಿಎಂ ಪಟ್ಟ?

ಈ ಬಾರಿಯ ಸಂಪುಟದಲ್ಲಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಸಮುದಾಯಗಳ ಒತ್ತಡವಿದ್ದರೂ ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲು ವರಿಷ್ಠರು ಒಪ್ಪಿಲ್ಲ ಎನ್ನಲಾಗಿದೆ.

ಮತ್ತೊಂದೆಡೆ, ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ತಮಗೆ ಬೇಕೆಂದು ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರಿದ್ದಾರೆ. ಇದೇ ಕಾರಣಕ್ಕೆ ಅವರು ಎರಡು ದಿನಗಳ ಕಾಲ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಆದರೆ, ಸತೀಶ್ ಅವರಿಗೆ ಎರಡು ಹುದ್ದೆ ನೀಡಲು ಹಿಂಜರಿಯುತ್ತಿರುವ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಪ್ರಮಾಣವಚನ: ಖಾಕಿ ಭದ್ರಕೋಟೆಯಾದ ಲೋಕಭವನ! 2000ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ನಿಯೋಜನೆ

ಸತೀಶ್ ಜಾರಕಿಹೊಳಿ ಅವರ ಪಟ್ಟು ಸಡಿಲವಾಗದಿದ್ದರೆ ಹಿಂದುಳಿದ ವರ್ಗದ ಮತ್ತೊಬ್ಬ ಪರ್ಯಾಯ ನಾಯಕನ ಹುಡುಕಾಟದಲ್ಲೂ ದೆಹಲಿ ವರಿಷ್ಠರಿದ್ದಾರೆ ಎನ್ನಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ಪಂದ್ಯಗಳು ಎಕ್ಸ್​ಟ್ರಾ… ನ್ಯೂಝಿಲೆಂಡ್ vs ಭಾರತ ವೇಳಾಪಟ್ಟಿ ಪ್ರಕಟ – Kannada News

ನ್ಯೂಝಿಲೆಂಡ್ vs ಭಾರತ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಟೀಮ್ ಇಂಡಿಯಾ ಅಕ್ಟೋಬರ್​ನಲ್ಲಿ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲದೆ ಅಲ್ಲಿ ಒಟ್ಟು 12 ಪಂದ್ಯಗಳನ್ನಾಡಲಿದೆ. ಇದಕ್ಕೂ ಮುನ್ನ ಈ ಸರಣಿಯಲ್ಲಿ 10 ಪಂದ್ಯಗಳನ್ನು ನಿಗದಿ ಮಾಡಲಾಗಿತ್ತು. ಇದೀಗ ಹೆಚ್ಚುವರಿ 2 ಏಕದಿನ ಪಂದ್ಯಗಳನ್ನು ಸೇರಿಸಲಾಗಿದೆ. ಅದರಂತೆ 5 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯಲಿದೆ. ಇದಾದ ಬಳಿಕ 2 ಮ್ಯಾಚ್​ಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತದೆ.

ಸಾಮಾನ್ಯವಾಗಿ ದ್ವಿಪಕ್ಷೀಯ ಸರಣಿಗಳಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಆದರೆ, ಈ ಬಾರಿ ಕ್ರಿಕೆಟ್ ಅಭಿಮಾನಿಗಳ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ ಬಿಸಿಸಿಐ  ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗಳು ಸರಣಿಯನ್ನು 5 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.

ವಿಶೇಷ ಎಂದರೆ ಈ ದಶಕದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ 5 ಪಂದ್ಯಗಳ ಏಕದಿನ ಸರಣಿ ಆಡಿದ್ದು 7 ವರ್ಷಗಳ ಹಿಂದೆ. ಅಂದರೆ ಮಾರ್ಚ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಿತ್ತು.

ಇದಾದ ಬಳಿಕ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿರಲಿಲ್ಲ. ಇದೀಗ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ 2 ಪಂದ್ಯಗಳನ್ನು ಹೆಚ್ಚಿಸಿರುವುದಾಗಿ ಬಿಸಿಸಿಐ ಹೇಳಿಕೊಂಡಿದೆ.

ಪಂದ್ಯಗಳ ಹೆಚ್ಚಳಕ್ಕೆ ಅಸಲಿ ಕಾರಣವೇನು?

ಈ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕೊನೆಯ ನ್ಯೂಝಿಲೆಂಡ್ ಪ್ರವಾಸವಾಗಿದೆ. ಹೀಗಾಗಿ ಅದರ ಸಂಪೂರ್ಣ ಲಾಭ ಪಡೆಯಲು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅಂದರೆ ಅಲ್ಲಿನ ಕ್ರಿಕೆಟ್ ಮಂಡಳಿ, ಪ್ರಾಯೋಜಕರು ಮತ್ತು ಪ್ರಸಾರಕರು  ಹೆಚ್ಚಿನ ಲಾಭ ಗಳಿಸಲು ಈ ಹೆಚ್ಚುವರಿ ಪಂದ್ಯಗಳನ್ನು ಕೇಳಿ ಪಡೆದಿದ್ದಾರೆ.

ಇದರಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನ್ಯೂಝಿಲೆಂಡ್​ನಲ್ಲಿ 5 ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುತ್ತಿರುವುದರಿಂದ ಪ್ರಾಯೋಜಕತ್ವ ಮತ್ತು ಪ್ರೇಕ್ಷಕರಿಂದ ಉತ್ತಮ ಆದಾಯ ಗಳಿಸಬಹುದು. ಇದನ್ನೇ ಮನಗಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ನ್ಯೂಝಿಲೆಂಡ್ vs ಭಾರತ ವೇಳಾಪಟ್ಟಿ

  • ಟಿ20 ಸರಣಿ ವೇಳಾಪಟ್ಟಿ
  • ಮೊದಲ ಟಿ20 ಪಂದ್ಯ – ಅಕ್ಟೋಬರ್ 22, ಕ್ರೈಸ್ಟ್‌ಚರ್ಚ್
  • 2ನೇ ಟಿ20 ಪಂದ್ಯ – ಅಕ್ಟೋಬರ್ 24, ಕ್ರೈಸ್ಟ್‌ಚರ್ಚ್
  • 3ನೇ ಟಿ20 ಪಂದ್ಯ – 27 ಅಕ್ಟೋಬರ್, ವೆಲ್ಲಿಂಗ್ಟನ್
  • 4ನೇ ಟಿ20 ಪಂದ್ಯ – 30 ಅಕ್ಟೋಬರ್, ಆಕ್ಲೆಂಡ್
  • 5ನೇ ಟಿ20 ಪಂದ್ಯ – ನವೆಂಬರ್ 1, ಹ್ಯಾಮಿಲ್ಟನ್
  • ಏಕದಿನ ಸರಣಿ ವೇಳಾಪಟ್ಟಿ
  • ಮೊದಲ ಏಕದಿನ ಪಂದ್ಯ – 4 ನವೆಂಬರ್, ಆಕ್ಲೆಂಡ್
  • 2ನೇ ಏಕದಿನ ಪಂದ್ಯ – ನವೆಂಬರ್ 7, ವೆಲ್ಲಿಂಗ್ಟನ್
  • 3ನೇ ಏಕದಿನ ಪಂದ್ಯ – ನವೆಂಬರ್ 10, ಹ್ಯಾಮಿಲ್ಟನ್
  • 4ನೇ ಏಕದಿನ ಪಂದ್ಯ – 13 ನವೆಂಬರ್, ಮೌಂಟ್ ಮೌಂಗನುಯಿ
  • 5ನೇ ಏಕದಿನ ಪಂದ್ಯ – 15 ನವೆಂಬರ್, ಮೌಂಟ್ ಮೌಂಗನುಯಿ
  • ಟೆಸ್ಟ್ ಸರಣಿ ವೇಳಾಪಟ್ಟಿ
  • ಮೊದಲ ಟೆಸ್ಟ್ – ನವೆಂಬರ್ 19-23, ವೆಲ್ಲಿಂಗ್ಟನ್
  • ಎರಡನೇ ಟೆಸ್ಟ್ – 27 ನವೆಂಬರ್-1 ಡಿಸೆಂಬರ್ 2026, ಕ್ರೈಸ್ಟ್‌ಚರ್ಚ್

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ನ್ಯೂಝಿಲೆಂಡ್ ವಿರುದ್ಧದ ಸರಣಿ ಡಿಸೆಂಬರ್ 1, 2026 ರಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಭಾರತ ತಂಡವು ಸ್ವದೇಶಕ್ಕೆ ಮರಳಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿಯನ್ನು ಆಡಲಿದೆ.

Published On – 9:36 am, Wed, 3 June 26

Source link

ಮದುವೆ ಮಂಟಪದಲ್ಲಿ ಡ್ಯಾನ್ಸ್​ ಬಿಟ್ಟು ಪಂಜ ಕುಸ್ತಿಗಿಳಿದ ವಧು-ವರ – Kannada News

ನವದೆಹಲಿ, ಜೂನ್ 03: ಸಾಮಾನ್ಯವಾಗಿ ಮದುವೆ(Marriage)ಮಂಟಪದಲ್ಲಿ ವಧು-ವರರು ನಾಚಿಕೆಯಿಂದ ನಿಂತಿರುವುದನ್ನು ಅಥವಾ ರೋಮ್ಯಾಂಟಿಕ್ ಆಗಿ ನೃತ್ಯ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವಧು ಇವೆಲ್ಲವನ್ನೂ ಬದಿಗಿಟ್ಟು, ವರನಿಗೆ ನೇರವಾಗಿ ಪಂಜ ಕುಸ್ತಿ ಸವಾಲು ಹಾಕಿ ಸಖತ್ ಮನರಂಜನೆ ನೀಡಿದ್ದಾಳೆ.

ಗುಲಾಬಿ ಬಣ್ಣದ ಮದುವೆಯ ಲೆಹೆಂಗಾ ಧರಿಸಿದ್ದ ವಧು, ಮಂಟಪದ ಮಧ್ಯದಲ್ಲಿದ್ದ ಟೇಬಲ್ ಮೇಲಿಟ್ಟು ವರನಿಗೆ ಸವಾಲು ಹಾಕಿದಳು. ನನ್ನೊಂದಿಗೆ ಸ್ಪರ್ಧಿಸಲು ಹುಡುಗಿಯರನ್ನಲ್ಲ, ಹುಡುಗರನ್ನು ಕರೆತನ್ನಿ”ಎಂದು ಆತ್ಮವಿಶ್ವಾಸದಿಂದ ಕೂಗಿದ ವಧುವಿನ ದಿಟ್ಟತನಕ್ಕೆ ನೆರೆದಿದ್ದ ಅತಿಥಿಗಳು ಆಶ್ಚರ್ಯಚಕಿತರಾದರು.

ಕೆಂಪು ಶೆರ್ವಾನಿ ಧರಿಸಿದ್ದ ವರ ಆರಂಭದಲ್ಲಿ ಮುಗುಳ್ನಗುತ್ತಲೇ ಪಂದ್ಯಕ್ಕೆ ಸಿದ್ಧನಾದನಾದರೂ, ಕುಸ್ತಿ ಆರಂಭವಾಗುತ್ತಿದ್ದಂತೆ ವಧುವಿನ ಬಲಕ್ಕೆ ಬೆಚ್ಚಿಬಿದ್ದಿದ್ದಾನೆ. ವಧು ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ವರನ ಕೈಯನ್ನು ಕೆಳಕ್ಕೆ ಒತ್ತಿ, ಅಂತಿಮವಾಗಿ ಪಂದ್ಯವನ್ನು ಗೆದ್ದಿದ್ದಾಳೆ. ಇದನ್ನು ನೋಡುತ್ತಿದ್ದ ಕ್ಯಾಮೆರಾಮನ್ ಹಾಗೂ ನೆರೆದಿದ್ದ ಸಂಬಂಧಿಕರು ನಗುವಿನ ಕಡಲಲ್ಲಿ ತೇಲಿದರು.

ವಿಡಿಯೋ

ನೆಟ್ಟಿಗರ  ಕಮೆಂಟ್
ಭಾರತದ ಸಾಂಪ್ರದಾಯಿಕ ವಿವಾಹಗಳ ಚೌಕಟ್ಟಿನಿಂದ ಸ್ವಲ್ಪ ಹೊರಬಂದು ಹೊಸ ಯುಗದ ವಧುವಿನಂತೆ ಸದ್ದು ಮಾಡಿರುವ ಈಕೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಧೂಳೆಬ್ಬಿಸುತ್ತಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ವರನ ಕಾಲೆಳೆಯುತ್ತಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮನೆಯಲ್ಲಿ ಇನ್ಮುಂದೆ ವಧುವಿನದ್ದೇ ಆಡಳಿತ, ಆಕೆಯ ಧೈರ್ಯ ಮೆಚ್ಚಲೇಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. RJ Sagar Meghani ಅವರು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಯಾರಿಗೂ ಯಾವುದೇ ಹಾನಿಯಾಗದೆ, ಮದುವೆಯ ಸಂಭ್ರಮವನ್ನು ಮತ್ತಷ್ಟು ರಂಗಾಗಿಸಿದ ಈ ಮೋಜಿನ ವಿಡಿಯೋ ಸದ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

World Bicycle Day 2026: ಸೈಕಲ್‌ ಸವಾರಿ ಪರಿಸರ, ನಮ್ಮ ಆರೋಗ್ಯ ಎರಡಕ್ಕೂ ಒಳ್ಳೆಯದು – Kannada News

ಸೈಕಲ್‌ (Bicycle) ಕೈಗೆಟಕುವ, ಆರೋಗ್ಯದಾಯಕ  ಹಾಗೂ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಹಿಂದೆಲ್ಲಾ ಜನ ಓಡಾಟಕ್ಕೆ ಸೈಕಲ್‌ಗಳನ್ನೇ ಬಳಸುತ್ತಿದ್ದರು. ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಸೈಕಲ್‌ ಬಳಕೆ ತೀರಾ ಕಡಿಮೆಯಾಗಿದೆ. ಪ್ರತಿಷ್ಠೆಯ ದೃಷ್ಟಿಯಿಂದ ಹಾಗೂ ಸಮಯ ಉಳಿಸಲು ಜನರು ಸೈಕಲ್ ಬಳಸುವುದನ್ನು ಬಿಟ್ಟು ಸ್ಕೂಟರ್, ಬೈಕ್ ಮತ್ತು ಕಾರುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ.‌ ಹೀಗೆ ವಾಹನಗಳ ಬಳಕೆ ಹೆಚ್ಚಾದಂತೆ ಪರಿಸರ ಕೂಡ ಮಾಲಿನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸೈಕಲ್‌ ಸವಾರಿ ಮಾಡಲು ಜನರನ್ನು ಪ್ರೋತ್ಸಾಹಿಸಲು, ಸೈಕ್ಲಿಂಗ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಜೂನ್‌ 3 ರಂದು ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ಬೈಸಿಕಲ್ ದಿನದ ಇತಿಹಾಸವೇನು?

ದ್ವಿಚಕ್ರ ವಾಹನ ಹಾಗೂ ಕಾರುಗಳ ಬಳಕೆಯಿಂದಾಗಿ, ಸೈಕಲ್‌ಗಳ ಬಳಕೆ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿತು. ಅಂತಹ ಪರಿಸ್ಥಿತಿಯಲ್ಲಿ, ಬೈಸಿಕಲ್ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅಮೆರಿಕದ ಪ್ರಾಧ್ಯಾಪಕರೊಬ್ಬರು ವಿಶ್ವ ಬೈಸಿಕಲ್ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮುಂದಿಟ್ಟರು. ಅಮೆರಿಕದ ಮಾಂಟ್ಗೊಮೆರಿ ಕಾಲೇಜಿನ ಪ್ರಾಧ್ಯಾಪಕ ಲೆಸ್ಜೆಕ್ ಸಿಬಿಲ್ಸ್ ಅವರು ಒಂದು  ಅರ್ಜಿಯನ್ನು ಸಲ್ಲಿಸುವ ಮೂಲಕ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲು ಪ್ರಸ್ತಾಪಿಸಿದ್ದರು. ನಂತರ ವಿಶ್ವ ಸಂಸ್ಥೆಯ  ಸಾಮಾನ್ಯ ಸಭೆಯು ಈ ದಿನದ ಆಚರಣೆಗೆ ಗ್ರೀನ್‌ ಸಿಗ್ನಲ್‌ ನೀಡಿತು. ಬಳಿಕ ಜೂನ್ 3, 2018 ರಂದು ಮೊದಲ ಬಾರಿಗೆ ವಿಶ್ವ ಸೈಕಲ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಬೈಸಿಕಲ್ ದಿನದ ಮಹತ್ವವೇನು?

  • ಸೈಕಲ್‌ನ ಆರೋಗ್ಯ ಪ್ರಯೋಜನಗಳು ಹಾಗೂ ಸೈಕಲ್‌ ಬಳಕೆಯಿಂದ ಪರಿಸರಕ್ಕಾಗುವ ಲಾಭಗಳ ಬಗ್ಗೆ ತಿಳಿಸಲೆಂದೇ ಜಗತ್ತಿನಾದ್ಯಂತ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತದೆ.
  • ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಹೆಚ್ಚು ಹೆಚ್ಚು ಸೈಕಲ್‌ ಬಳಸಲು ಪ್ರೋತ್ಸಾಹಿಸುವುದು ವಿಶ್ವ ಬೈಸಿಕಲ್ ದಿನದ ಉದ್ದೇಶವಾಗಿದೆ.
  • ಸೈಕ್ಲಿಂಗ್ ಆರೋಗ್ಯಕರ, ಸುಸ್ಥಿರ ಮತ್ತು ಕೈಗೆಟುಕುವ ಸಾರಿಗೆ ವಿಧಾನವಾಗಿದೆ. ಇದು ದೈಹಿಕ ಸದೃಢತೆಯನ್ನು ಸುಧಾರಿಸುತ್ತದೆ, ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಸೈಕ್ಲಿಂಗ್‌ನ ಈ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ:  ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ

ಸೈಕ್ಲಿಂಗ್‌ನ ಆರೋಗ್ಯ ಪ್ರಯೋಜನಗಳೇನು?

  • ಸೈಕ್ಲಿಂಗ್ ಹೃದಯ ಮತ್ತು ಶ್ವಾಸಕೋಶಗಳನ್ನು ಬಲಪಡಿಸುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಸೈಕ್ಲಿಂಗ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ಕ್ಯಾಲೊರಿಗಳನ್ನು ಸುಡಲು ಉತ್ತಮ ಮಾರ್ಗವಾಗಿದೆ.
  • ಸೈಕ್ಲಿಂಗ್ ಎಂಡಾರ್ಫಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸೈಕ್ಲಿಂಗ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
  • ಸೈಕ್ಲಿಂಗ್ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ಉತ್ತಮ ವ್ಯಾಯಾಮವಾಗಿದ್ದು, ಇದು ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
  • ಇದು ದೇಹದ ಸ್ನಾಯುಗಳನ್ನು ಆರೋಗ್ಯಕರ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ. ಸೈಕ್ಲಿಂಗ್ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ಗೆ ಹೆದರಿದ ವರುಣ್ ಧವನ್ ಸಿನಿಮಾ? ಮೊದಲ ದಿನವೇ ಟಿಕೆಟ್​ ಮೇಲೆ ಶೆ.50 ಆಫರ್ – Kannada News

ಬಾಲಿವುಡ್ ಅಂಗಳದಲ್ಲಿ ಈಗ ಹೊಸದೊಂದು ಆಸಕ್ತಿದಾಯಕ ಬೆಳವಣಿಗೆ ನಡೆದಿದೆ. ಈ ಶುಕ್ರವಾರ (ಜೂನ್ 5) ಬಿಡುಗಡೆಯಾಗಲಿರುವ ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡ ಭರ್ಜರಿ ಆಫರ್ ಒಂದನ್ನು ಘೋಷಿಸಿದೆ. ಸಿನಿಮಾದ ಮೊದಲ ದಿನದಂದೇ ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದ ಬಳಿಕ ಆಫರ್ ನೀಡುವುದು ಸಾಮಾನ್ಯ. ಆದರೆ, ವರುಣ್ ಧವನ್ ಸಿನಿಮಾ ಬೇರೆಯದೇ ರೀತಿಯ ತಂತ್ರ ಹೂಡಿದೆ

ಈ ಆಫರ್ ಅಡಿಯಲ್ಲಿ ಜೂನ್ 5ರಂದು ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ಕನಿಷ್ಠ ಎರಡು ಟಿಕೆಟ್ ಬುಕ್ ಮಾಡುವವರಿಗೆ, 200 ರೂಪಾಯಿವರೆಗಿನ ಟಿಕೆಟ್‌ಗಳ ಮೇಲೆ 50% ಡಿಸ್ಕೌಂಟ್ ಸಿಗಲಿದೆ. ಇತ್ತೀಚೆಗಷ್ಟೇ ಕರಣ್ ಜೋಹರ್ ಅವರ ‘ಚಾಂದ್ ಮೇರಾ ದಿಲ್’ ಚಿತ್ರಕ್ಕೂ ಇಂತಹುದೇ ಆಫರ್ ನೀಡಲಾಗಿತ್ತು.

‘ಪೆದ್ದಿ’ ಕ್ರೇಜ್‌ಗೆ ಬಾಲಿವುಡ್ ಬೆದರಿತಾ?

ಚಿತ್ರರಂಗದ ವಿಶ್ಲೇಷಕರ ಪ್ರಕಾರ, ಬಾಲಿವುಡ್ ಮೇಕರ್ಸ್ ಈ ರೀತಿ ಮೊದಲ ದಿನವೇ ಭಾರಿ ರಿಯಾಯಿತಿ ನೀಡುತ್ತಿರುವುದರ ಹಿಂದೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದ ಅಲೆ ಎದ್ದುಕಾಣುತ್ತಿದೆ. ‘ಪೆದ್ದಿ’ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿದ್ದು, ಹಿಂದಿಯಲ್ಲೂ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ‘ಆರ್​​ಆರ್​​ಆರ್​’ ಚಿತ್ರದ ಸಕ್ಸಸ್ ನಂತರ ಉತ್ತರ ಭಾರತದ ಮಾರ್ಕೆಟ್‌ನಲ್ಲಿ ರಾಮ್ ಚರಣ್ ಅವರಿಗೆ ಇರುವ ಕ್ರೇಜ್ ಮತ್ತು ಖ್ಯಾತಿ ಅಗಾಧವಾಗಿದೆ. ಬಾಲಿವುಡ್‌ನ ಜನಪ್ರಿಯ ನಟಿ ಜಾನ್ವಿ ಕಪೂರ್ ‘ಪೆದ್ದಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಹಿಂದಿ ಬೆಲ್ಟ್‌ನಲ್ಲಿ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ತಂದುಕೊಟ್ಟಿದೆ.

ಇದನ್ನೂ ಓದಿ: ಡೈಪರ್ ಚೇಂಜ್ ಮಾಡೋದು ಅಂದ್ರೆ ಆಗಲ್ಲ, ಅಲ್ಲಿಂದ ಜಾರಿಕೊಳ್ತೀನಿ; ರಾಮ್ ಚರಣ್

ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಕಾಂಬಿನೇಷನ್‌ನ ‘ಪೆದ್ದಿ’ ಚಿತ್ರವು ಹಿಂದಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ, ಸೌತ್ ಸಿನಿಮಾದ ಈ ಬಿರುಗಾಳಿಗೆ ಮುನ್ನವೇ ತಮ್ಮ ಚಿತ್ರಕ್ಕೆ ಗರಿಷ್ಠ ಮಟ್ಟದ ಓಪನಿಂಗ್ ಕಲೆಕ್ಷನ್ ಹಾಗೂ ಪ್ರೇಕ್ಷಕರನ್ನು ಸೆಳೆಯಲು ವರುಣ್ ಧವನ್ ಚಿತ್ರತಂಡ ಇಂತಹ ಆಫರ್ ಮೊರೆ ಹೋಗಿದೆ ಎನ್ನಲಾಗುತ್ತಿದೆ. ‘ಟಿಪ್ಸ್ ಫಿಲ್ಮ್ಸ್’ ನಿರ್ಮಿಸಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ. ಡೇವಿಡ್ ಧವನ್ ನಿರ್ದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version