IND vs ENG: ಏಕದಿನ ಸರಣಿಯಲ್ಲಿ ಮಹತ್ವದ ಮೈಲಿಗಲ್ಲು ದಾಟಲಿದ್ದಾರೆ ರೋಹಿತ್, ಕೊಹ್ಲಿ – Kannada News | Virat Kohli Chases 15,000, Rohit Sharma 12,000 ODI Runs in India vs England Series

ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಮೂಲಕ ಟೀಂ ಇಂಡಿಯಾದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ (PC-PTI).

ಇವರಿಬ್ಬರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಆಡುತ್ತಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ವಿರಾಟ್ ಕೊಹ್ಲಿ ತಪ್ಪಿಸಿಕೊಂಡಿದ್ದರು. ಗಾಯದಿಂದ ಬಳಲುತ್ತಿದ್ದ ಕೊಹ್ಲಿ ಇದೀಗ ಸಂಪೂರ್ಣ ಚೇತರಿಸಿಕೊಂಡು ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ (PC-PTI).

ಇದೀಗ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದರೆ, ಏಕದಿನ ಕ್ರಿಕೆಟ್​ನಲ್ಲಿ ಮಹತ್ವದ ಮೈಲಿಗಲ್ಲು ದಾಟಲಿದ್ದಾರೆ. ಪ್ರಸ್ತುತ ಏಕದಿನ ಕ್ರಿಕೆಟ್​ನಲ್ಲಿ ಆಡಿರುವ 311 ಪಂದ್ಯಗಳಲ್ಲಿ 14797 ರನ್ ಕಲೆಹಾಕಿದ್ದಾರೆ. ಇಂಗ್ಲೆಂಡ್‌ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಕೊಹ್ಲಿ 203 ರನ್ ಕಲೆಹಾಕಿದರೆ, 15000 ಏಕದಿನ ರನ್​ಗಳ ಗಡಿ ದಾಟಲಿದ್ದಾರೆ (PC-PTI).

ವಿರಾಟ್ ಕೊಹ್ಲಿಯಂತೆಯೇ ರೋಹಿತ್ ಶರ್ಮಾ ಕೂಡ ಏಕದಿನ ಕ್ರಿಕೆಟ್​ನಲ್ಲಿ ಮಹತ್ವದ ಮೈಲಿಗಲ್ಲು ದಾಟಲಿದ್ದಾರೆ. ಈ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ 280 ರನ್ ಕಲೆಹಾಕಿದರೆ, ಏಕದಿನ ಕ್ರಿಕೆಟ್​ನಲ್ಲಿ 12000 ರನ್​ಗಳನ್ನು ಪೂರೈಸಲಿದ್ದಾರೆ. ಇದರ ಜೊತೆಗೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರನ್ನು ಹಿಂದಿಕ್ಕಲಿದ್ದಾರೆ. ಪ್ರಸ್ತುತ ರೋಹಿತ್ 285 ಏಕದಿನ ಪಂದ್ಯಗಳಲ್ಲಿ 11720 ರನ್ ಬಾರಿಸಿದ್ದಾರೆ (PC-PTI).

ಇನ್ನು ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಆಡಿದ 463 ಏಕದಿನ ಪಂದ್ಯಗಳಲ್ಲಿ 18426 ರನ್ ಕಲೆಹಾಕಿದ್ದಾರೆ. ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ಕುಮಾರ ಸಂಗಕ್ಕಾರ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ 8ನೇ ಸ್ಥಾನದಲ್ಲಿರುವ ರೋಹಿತ್ 280 ರನ್ ಬಾರಿಸಿದರೆ, 7ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ (PC-PTI).

Published On – 5:52 pm, Sun, 12 July 26

Source link

ಅಭಿಮಾನಿಗಳಿಗೆ ಹೆಲ್ತ್ ಕಾರ್ಡ್ ಕೊಡಿಸಿದ ಶಿವರಾಜ್ ಕುಮಾರ್ – Kannada News | Shiva Rajkumar issued free family health cards to his fans

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ (Shiva Rajkumar) ಅವರು ಇಂದು (ಜುಲೈ 12) ಅಭಿಮಾನಿಗಳೊಟ್ಟಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿಡಿಯೋ ಹಂಚಿಕೊಂಡಿದ್ದ ನಟ ಶಿವರಾಜ್ ಕುಮಾರ್, ಹುಟ್ಟುಹಬ್ಬಕ್ಕೆ ಆಗಮಿಸುವ ಅಭಿಮಾನಿಗಳು ಕಡ್ಡಾಯವಾಗಿ ಕೇಕ್ ಹಾಗೂ ಹಾರಗಳನ್ನು ತರಬಾರದು ಎಂದಿದ್ದರು. ಅದರಂತೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ನಟ ಶಿವರಾಜ್ ಕುಮಾರ್, ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳಿಗೆ ಉಚಿತವಾಗಿ ಹೆಲ್ತ್ ಕಾರ್ಡ್​​ಗಳನ್ನು ವಿತರಣೆ ಮಾಡಿದ್ದಾರೆ. ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಹೆಸರಿನ ಹೆಲ್ತ್ ಕಾರ್ಡುಗಳನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಈ ಹೆಲ್ತ್ ಕಾರ್ಡ್​​ಗಳು ಅವರ ಅಭಿಮಾನಿಗಳು ಮತ್ತು ಅವರ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಬಿಡುಗಡೆ ಮಾಡಲಾಯ್ತು.

ಸುಮಾರು 2500 ಕುಟುಂಬಗಳಿಗೆ ಈ ಹೆಲ್ತ್ ಕಾರ್ಡ್​​ನಿಂದ ಸಹಾಯ ಆಗಲಿದೆ ಎನ್ನಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ಸೌಲಭ್ಯ, ಹೈ ಸ್ಪೀಡ್ ಆಂಬುಲೆನ್ಸ್ ಸೇವೆ, 2029ರ ವರೆಗೆ ಕಾರ್ಡುಗಳು ಮಾನ್ಯವಾಗಿರಲಿವೆ. ಅಭಿಮಾನಿಗಳು ಮಾತ್ರವೇ ಅಲ್ಲದೆ ಅವರ ಕುಟುಂಬಕ್ಕೂ ಕಾರ್ಡ್ ಅನ್ವಯ ಆಗಲಿದೆ.

ಇತ್ತೀಚೆಗಷ್ಟೆ ನಟ ಶಿವರಾಜ್ ಕುಮಾರ್ ಅವರು ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯ ಜಾಹೀರಾತೊಂದರಲ್ಲಿ ನಟಿಸಿದ್ದರು. ಅದೇ ಆಸ್ಪತ್ರೆಯ ಜೊತೆ ಕೈ ಜೋಡಿಸಿ ಈ ಹೆಲ್ತ್ ಕಾರ್ಡ್​ಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಲ ಮೂಲಗಳ ಪ್ರಕಾರ, ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಉಚಿತ ಹೆಲ್ತ್ ಕಾರ್ಡ್ ಕೊಡಿಸಲೆಂದು ಆಸ್ಪತ್ರೆಯ ಜಾಹೀರಾತಿನಲ್ಲಿ ಉಚಿತವಾಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಕಾರ್ಡ್ ವಿತರಣೆ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, ‘ಇವತ್ತು ನಾನು ಆರೋಗ್ಯದಿಂದ ಇದ್ದೀನಿ ಎಂದರೆ ಅದರಲ್ಲಿ ವೈದೇಹಿ ಆಸ್ಪತ್ರೆಯ ಪಾತ್ರ ಇದೆ. ಆರೋಗ್ಯದ ವಿಷಯದಲ್ಲಿ ಗೋಲ್ಡನ್ ಮಿನಟ್ ಎಂಬುದು ಬಹಳ ಮುಖ್ಯ, ಅದು ಯಾರಿಗೂ ಮಿಸ್ ಆಗಬಾರದು. ನನ್ನ ಅಭಿಮಾನಿಗಳಿಗೆ, ಅವರ ಕುಟುಂಬದ ಆರೋಗ್ಯಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಇತ್ತು. ಹಾಗಾಗಿ ಈ ಜಾಹೀರಾತು ಮಾಡಿ ಹೀಗೊಂದು ಕಾರ್ಯ ಮಾಡಿದೆವು. ಯಾರಿಗೆ ಚಿಕಿತ್ಸೆ ಮಾಡಿಸಲು ಸಾಧ್ಯ ಇದೆಯೋ ಅವರು ಈ ಕಾರ್ಡ್ ತೆಗೆದುಕೊಳ್ಳಬೇಡಿ, ಯಾರಿಗೆ ಆಗುವುದಿಲ್ಲವೋ, ಕುಟುಂಬ ಪರಿಸ್ಥಿತಿ ಸರಿಯಿಲ್ಲವೋ ಅವರಿಗೆ ಕಾರ್ಡ್ ಕೊಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಣಾ ನೀತಿಯಲ್ಲಿ ದೊಡ್ಡ ಬದಲಾವಣೆ; ಕ್ಷಿಪಣಿ ತಯಾರಿಕೆಗೆ ಖಾಸಗಿಯವರಿಗೂ ಸಿಗಲಿದೆ ಅವಕಾಶ – Kannada News | Govt to allow private sector to participate in missile production, a huge step in making defence stronger

ಡಿಆರ್​ಡಿಒ ಪರೀಕ್ಷಾರ್ಥ ಉಡಾಯಿಸಿದ ಒಂದು ಕ್ಷಿಪಣಿImage Credit source: PTI

ನವದೆಹಲಿ, ಜುಲೈ 12: ಭಾರತದ ರಕ್ಷಣಾ ವಲಯದಲ್ಲಿ ಒಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಇನ್ನು ಮುಂದೆ ಕ್ಷಿಪಣಿ (Missile) ತಯಾರಿಕಾ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸಲು ಸರ್ಕಾರ ಮುಂದಾಗಿದೆ. ಈವರೆಗೆ ಕ್ಷಿಪಣಿಗಳ ಉತ್ಪಾದನೆಯು ಹೆಚ್ಚಾಗಿ ‘ಭಾರತ್ ಡೈನಾಮಿಕ್ಸ್ ಲಿಮಿಟೆಡ್’ (BDL) ಇತ್ಯಾದಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೀಮಿತವಾಗಿತ್ತು. ಆದರೆ, ಭಾರತೀಯ ಸಶಸ್ತ್ರ ಪಡೆಗಳ ಬೇಡಿಕೆ ಹೆಚ್ಚಾಗುತ್ತಿರುವುದು ಮತ್ತು ವಿದೇಶಗಳಿಂದಲೂ ಭಾರತೀಯ ಕ್ಷಿಪಣಿಗಳಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ತೆರೆಯಲು ನಿರ್ಧರಿಸಲಾಗಿದೆ. ಇದು ‘ಆತ್ಮನಿರ್ಭರ ಭಾರತ’ ಅಭಿಯಾನದ ಭಾಗವಾಗಿದೆ.

ಖಾಸಗಿಯವರಿಂದ ಯಾವ ಕ್ಷಿಪಣಿಗಳು ಉತ್ಪಾದನೆಯಾಗಲಿವೆ?

  • ಅಸ್ತ್ರ ಮಾರ್ಕ್-2: ಇದು ಭಾರತದ ಅತ್ಯಾಧುನಿಕ ‘ಬಿಯಾಂಡ್ ವಿಶುವಲ್ ರೇಂಜ್’ (BVR) ಏರ್-ಟು-ಏರ್ ಕ್ಷಿಪಣಿಯಾಗಿದೆ. ಇದನ್ನು (Astra Mark-2) ಮೊದಲಿಗೆ ಖಾಸಗಿ ವಲಯದ ಮೂಲಕ ತಯಾರಿಸಲು ಸರ್ಕಾರ ಯೋಜನೆ ರೂಪಿಸಿದೆ. 180-200 ಕಿ.ಮೀ ವ್ಯಾಪ್ತಿಯ ಈ ಕ್ಷಿಪಣಿಯನ್ನು ತೇಜಸ್, ಸುಕೋಯ್ Su-30 MKI ಮತ್ತು ರಫೇಲ್ ಯುದ್ಧ ವಿಮಾನಗಳಲ್ಲಿ ಅಳವಡಿಸಲಾಗುತ್ತದೆ.
  • ಪ್ರಳಯ ಕ್ಷಿಪಣಿ: ಅಸ್ತ್ರದ ನಂತರ, 500 ಕಿ.ಮೀ ವ್ಯಾಪ್ತಿಯ ‘ಪ್ರಳಯ’ (Pralay) ಟ್ಯಾಕ್ಟಿಕಲ್ ಬ್ಯಾಲಿಸ್ಟಿಕ್ ಕ್ಷಿಪಣಿಯ ತಯಾರಿಕೆಯನ್ನು ಕೂಡ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?

ಕ್ಷಿಪಣಿ ತಯಾರಿಕೆಗೆ ರೇಸ್​ನಲ್ಲಿರುವ ಭಾರತದ ಖಾಸಗಿ ದಿಗ್ಗಜರು…

ಕ್ಷಿಪಣಿಗಳ ತಯಾರಿಕೆಗೆ ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ಟೆಂಡರ್ (RFP – Request for Proposal) ಕರೆಯಲಿದೆ. ಈ ರೇಸ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿರುವ ಪ್ರಮುಖ ಖಾಸಗಿ ಕೈಗಾರಿಕಾ ಸಂಸ್ಥೆಗಳು ಈ ಕೆಳಕಂಡತಿವೆ:

  • ಟಾಟಾ ಗ್ರೂಪ್ (Tata Group)
  • ಅದಾನಿ ಡಿಫೆನ್ಸ್ (Adani Defence)
  • ಮಹೀಂದ್ರಾ ಗ್ರೂಪ್ (Mahindra Group)
  • ಭಾರತ್ ಫೋರ್ಜ್ (Bharat Forge)
  • ಐಕಾಮ್ (ICOMM)

ಖಾಸಗಿಯವರನ್ನು ಬಳಸಿಕೊಳ್ಳುವ ಈ ನಿರ್ಧಾರ ಏಕೆ?

  • ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಸದ್ಯದ ಸರ್ಕಾರಿ ಉತ್ಪಾದನಾ ಘಟಕಗಳ ಮೇಲೆ ಅತಿಯಾದ ಒತ್ತಡವಿದ್ದು, ಅದನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
  • ರಫ್ತು ಅವಕಾಶ: ಇತ್ತೀಚೆಗೆ ಇಂಡೋನೇಷ್ಯಾದಂತಹ ದೇಶಗಳು ಅಸ್ತ್ರ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ತೋರಿವೆ. ಇಂತಹ ಅಂತಾರಾಷ್ಟ್ರೀಯ ಬೇಡಿಕೆಗಳನ್ನು ಪೂರೈಸಲು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಅಗತ್ಯವಿದೆ.
  • ಯುದ್ಧ ಸಿದ್ಧತೆ: ಇತ್ತೀಚಿನ ಜಾಗತಿಕ ಸಂಘರ್ಷಗಳಿಂದ ಕಲಿಯುವ ಪಾಠಗಳ ಪ್ರಕಾರ, ಯುದ್ಧದ ಸಂದರ್ಭದಲ್ಲಿ ಕ್ಷಿಪಣಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ವೇಗದ ಉತ್ಪಾದನೆಯ ಅಗತ್ಯವಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?

ಈ ನಿರ್ಧಾರವು ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವುದಲ್ಲದೆ, ಖಾಸಗಿ ವಲಯದ ಮೂಲಕ ಉದ್ಯೋಗ ಸೃಷ್ಟಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

UPSC Recruitment 2026: ಕೇಂದ್ರ ಸರ್ಕಾರಿ ಉದ್ಯೋಗವಕಾಶ; 450 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – Kannada News | UPSC Recruitment 2026: Apply Online for 450 Group A/B Posts by July 17

ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ (UPSC) ಸುವರ್ಣಾವಕಾಶ ನೀಡಿದೆ. ವಿವಿಧ ಸಚಿವಾಲಯಗಳು, ಇಲಾಖೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಡಿಯಲ್ಲಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ 54 ವಿವಿಧ ರೀತಿಯ ಹುದ್ದೆಗಳಲ್ಲಿ ಒಟ್ಟು 450 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 17 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ?

ಈ ನೇಮಕಾತಿಯಲ್ಲಿ ಡ್ರಗ್ ಇನ್ಸ್‌ಪೆಕ್ಟರ್, ಸ್ಪೆಷಲಿಸ್ಟ್ ಗ್ರೇಡ್-III, ಕಂಪನಿ ಪ್ರಾಸಿಕ್ಯೂಟರ್, ಕಾನೂನು ಅಧಿಕಾರಿ, ವೈಮಾನಿಕ ಅಧಿಕಾರಿ, ಸಹಾಯಕ ಎಂಜಿನಿಯರ್, ನಾಗರಿಕ ಸಹಾಯಕ ಭದ್ರತಾ ಅಧಿಕಾರಿ, ಅಧಿಕೃತ ಭಾಷಾ ಅಧಿಕಾರಿ, ಜಂಟಿ ನಿರ್ದೇಶಕರು, ವೈಜ್ಞಾನಿಕ ಅಧಿಕಾರಿ, ಉಪನ್ಯಾಸಕರು/ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 54 ವಿವಿಧ ಹುದ್ದೆಗಳಿಗೆ 450 ಖಾಲಿ ಹುದ್ದೆಗಳು ಪ್ರಕಟಿಸಲಾಗಿದೆ. ಇದರಲ್ಲಿ ಡ್ರಗ್ ಇನ್ಸ್‌ಪೆಕ್ಟರ್ – 186 ಮತ್ತು ಸ್ಪೆಷಲಿಸ್ಟ್ ಗ್ರೇಡ್-III – 104 ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಶೈಕ್ಷಣಿಕ ಅರ್ಹತೆ ಏನು?

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಬಿಇ/ಬಿಟೆಕ್, ಸ್ನಾತಕೋತ್ತರ ಪದವಿ (PG), ಎಂಬಿಬಿಎಸ್, ವೈದ್ಯಕೀಯ ಸ್ನಾತಕೋತ್ತರ ಪದವಿ, ಎಲ್‌ಎಲ್‌ಬಿ ಅಥವಾ ಸಂಬಂಧಿತ ಕಾನೂನು ಪದವಿ ಪಡೆದಿರಬೇಕು. ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವೂ ಕಡ್ಡಾಯವಾಗಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದು ಅಗತ್ಯ.

ವಯೋಮಿತಿ ಎಷ್ಟು?

ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಗರಿಷ್ಠ ವಯೋಮಿತಿಯನ್ನು 30 ರಿಂದ 50 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ದೊರೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಆಯಾ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ, ಅನುಭವ ಹಾಗೂ ಇತರ ಷರತ್ತುಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!

ಅರ್ಜಿ ಶುಲ್ಕದ ವಿವರ:

ಎಸ್‌ಸಿ, ಎಸ್‌ಟಿ, ದಿವ್ಯಾಂಗ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳು ₹25 ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆಯನ್ನು ಮೊದಲು ಅರ್ಜಿಗಳ ಪರಿಶೀಲನೆ ಮತ್ತು ಶಾರ್ಟ್‌ಲಿಸ್ಟಿಂಗ್ ಮೂಲಕ ನಡೆಸಲಾಗುತ್ತದೆ. ಅಗತ್ಯವಿದ್ದರೆ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಯಲಿದ್ದು, ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಸಾಧನೆಯ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ:

ಈ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 17, 2026. ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಪ್ರತಿ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ, ಅನುಭವ, ವಯೋಮಿತಿ ಮತ್ತು ಇತರ ಅರ್ಹತಾ ಮಾನದಂಡಗಳು ವಿಭಿನ್ನವಾಗಿರುವುದರಿಂದ, ಅರ್ಜಿ ಸಲ್ಲಿಸುವ ಮೊದಲು UPSC ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಕಡ್ಡಾಯ. ಸರಿಯಾದ ಮಾಹಿತಿ ಪರಿಶೀಲಿಸಿ ಅರ್ಜಿ ಸಲ್ಲಿಸಿದರೆ ಮಾತ್ರ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ತಪ್ಪಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಅಥಣಿಯಲ್ಲಿ ಭೀಕರ ದುರಂತ: ದುರಸ್ತಿ ವೇಳೆ ಕುಸಿದುಬಿದ್ದ ಮನೆ; ಇಬ್ಬರು ಕಾರ್ಮಿಕರು ಸಾವು – Kannada News | Two Workers death After House Collapses During Repair Work

ಬೆಳಗಾವಿ, ಜುಲೈ 12: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ (rain) ಸುರಿಯುತ್ತಿದೆ. ಹೀಗಾಗಿ ಅವಾಂತರಗಳು ಸಂಭವಿಸಿವೆ. ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಸೋರುತ್ತಿದ್ದ ಮನೆ ದುರಸ್ತಿ ವೇಳೆ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ. ಮಾದೇವ್ ಕೃಷ್ಣಪ್ಪ ಬಡಿಗೇರ್(48) ಮತ್ತು ಸೈಯದ್ ಕೆಂಪವಾಡಿ(32) ಮೃತರು. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಕೊಟ್ಟಲಗಿ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ನಂದಗೊಂಡ ಎಂಬುವರಿಗೆ ಸೇರಿದ ಮನೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಸೋರುತ್ತಿತ್ತು. ಹೀಗಾಗಿ ಮನೆ ದುರಸ್ತಿಗೆ ಇಬ್ಬರು ಕಾರ್ಮಿಕರು ಬಂದಿದ್ದರು. ಕಾರ್ಮಿಕರು ಮನೆಯ ಒಳಗೆ ರಿಪೇರಿ ಕೆಲಸದಲ್ಲಿ ತೊಡಗಿದ್ದಾಗ, ಮಳೆಗೆ ಸಂಪೂರ್ಣವಾಗಿ ನೆನೆದು ದುರ್ಬಲಗೊಂಡಿದ್ದ ಮಣ್ಣಿನ ಮೇಲ್ಛಾವಣಿ ಹಾಗೂ ಗೋಡೆಗಳು ಒಮ್ಮೆಗೇ ಇವರ ಮೇಲೆಯೇ ಕುಸಿದುಬಿದ್ದಿವೆ. ಇದರ ಪರಿಣಾಮ ಮಾದೇವ್ ಕೃಷ್ಣಪ್ಪ ಮತ್ತು ಸೈಯದ್ ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು.

ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ: ತಡೆಗೋಡೆ ಕುಸಿದು, ಮರ ಬಿದ್ದು ಮನೆಗಳಿಗೆ ಹಾನಿ

ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ತಕ್ಷಣವೇ ಧಾವಿಸಿ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಹರಸಾಹಸ ಪಟ್ಟರು. ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಮಹಾರಾಷ್ಟ್ರದ ಜತ್ತ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸರ್ಕಾರಿಬಸ್​​ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಮಗ, ಚಿಕ್ಕಮ್ಮ ದುರ್ಮರಣ

ಸರ್ಕಾರಿ ಬಸ್​ ಡಿಕ್ಕಿ ಹೊಡೆದು ಬೈಕ್​​ನಲ್ಲಿ ತೆರಳುತ್ತಿದ್ದ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಬೀದರ್​ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕಬಿರಾಬಾದ್ ವಾಡಿ ಕ್ರಾಸ್​ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ‌ ನಡೆದಿದೆ. ದುಬಲಗುಂಡಿ ಗ್ರಾಮದ ನಿವಾಸಿ ಪವನ್(22) ಮತ್ತು ಚಿಕ್ಕಮ್ಮ ನರಸಮ್ಮ ಮೃತರು.

ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆಯ ಅಬ್ಬರ; ನರಸಿಂಹವಾಡಿ ದತ್ತ ಮಂದಿರ ಜಲಾವೃತ!

ಕಾಮಾಲೆ ರೋಗಕ್ಕೆ ಮನ್ನಾಏಖೇಳ್ಳಿ ಗ್ರಾಮಕ್ಕೆ ಪವನ್ ಮತ್ತು ನರಸಮ್ಮ ಹೋಗಿದ್ದರು. ನಾಟಿಮದ್ದು ಹಾಕಿಸಿಕೊಂಡು ಹಿಂತಿರುಗುವಾಗ ಬೀದರ್-ಕಲಬುರಗಿ ಮಾರ್ಗದ ತಡೆರಹಿತ ಸಾರಿಗೆ ಬಸ್​ ಡಿಕ್ಕಿ ಹೊಡೆದು  ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಹಳ್ಳಿಖೇಡ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು – Kannada News | Bharthi Vishnuvardhan talks about S Janaki

ಖ್ಯಾತ ಗಾಯಕಿ ಎಸ್ ಜಾನಕಿ (S Janaki) ನಿಧನ ಹೊಂದಿದ್ದಾರೆ. ನಿನ್ನೆ ರಾತ್ರಿಯಿಂದಲೇ ಹಲವಾರು ಮಂದಿ ಸೆಲೆಬ್ರಿಟಿಗಳು ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನ ಮಹಾರಾಜ ಕಾಲೇಜಿಗೆ ಆಗಮಿಸಿ ಎಸ್ ಜಾನಕಿ ಅವರ ಅಂತಿಮ ದರ್ಶನ ಪಡೆದು, ಟಿವಿ9 ಜೊತೆಗೆ ವಿಶೇಷವಾಗಿ ಮಾತನಾಡಿದರು. ತಮ್ಮ ಹಾಗೂ ಜಾನಕಿ ಅವರ ಆತ್ಮೀಯತೆಯ ಬಗ್ಗೆ ಮಾತನಾಡಿದ ಜೊತೆಗೆ, ಜಾನಕಿ ಅವರಿಗೆ ಕಾಡುತ್ತಿದ್ದ ನೋವಿನ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಭಾರತಿ ವಿಷ್ಣುವರ್ಧನ್ ಅವರು ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

IND vs ENG: ಟಾಸ್ ಗೆಲ್ಲು ಮ್ಯಾಚ್ ಸೋಲು; ಅಯ್ಯಯ್ಯೋ ಅಯ್ಯರ್

Source link

ಸಿಎ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ; ಸೆಪ್ಟೆಂಬರ್ ಮತ್ತು ನವೆಂಬರ್ ಪರೀಕ್ಷೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ! – Kannada News | ICAI CA 2026 Exam Applications Open: Apply Online for Foundation, Inter, Final Now! Last Dates and Schedule

ಸಿಎ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಮಹತ್ವದ ಸುದ್ದಿಯೊಂದನ್ನು ನೀಡಿದೆ. 2026ರ ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಿಗದಿಯಾಗಿರುವ ಸಿಎ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಗೊಳಿಸಿದೆ. ಫೌಂಡೇಶನ್, ಇಂಟರ್ಮೀಡಿಯೇಟ್ ಅಥವಾ ಅಂತಿಮ (Final) ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ICAI ನ ಅಧಿಕೃತ ಇ-ಸೇವೆಗಳ ಪೋರ್ಟಲ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಮತ್ತು ವಿಳಂಬ ಶುಲ್ಕದ ವಿವರ:

ಅಭ್ಯರ್ಥಿಗಳು ಯಾವುದೇ ವಿಳಂಬ ಶುಲ್ಕವಿಲ್ಲದೆ ಅರ್ಜಿಗಳನ್ನು ಸಲ್ಲಿಸಲು ಜುಲೈ 19 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ಈ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ಅಭ್ಯರ್ಥಿಗಳು 600ರೂ, ವಿಳಂಬ ಶುಲ್ಕದೊಂದಿಗೆ ಜುಲೈ 22 ರವರೆಗೆ ಫಾರ್ಮ್ ಅನ್ನು ಭರ್ತಿ ಮಾಡಲು ಅವಕಾಶವಿರುತ್ತದೆ.

ಅರ್ಜಿ ತಿದ್ದುಪಡಿ ವಿಂಡೋ (Correction Window):

ಅರ್ಜಿಯನ್ನು ಸಲ್ಲಿಸುವಾಗ ಯಾವುದೇ ದೋಷಗಳು ಅಥವಾ ತಪ್ಪುಗಳಾಗಿದ್ದಲ್ಲಿ, ಅವುಗಳನ್ನು ಸರಿಪಡಿಸಲು ಜುಲೈ 23 ರಿಂದ ಜುಲೈ 25, 2026 ರವರೆಗೆ ತಿದ್ದುಪಡಿ ವಿಂಡೋ ತೆರೆದಿರುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ನಿಗದಿತ ವಿವರಗಳಿಗೆ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು.

ಪರೀಕ್ಷಾ ವೇಳಾಪಟ್ಟಿ (Exam Schedule):

2026 ರ ಸಿಎ ಪರೀಕ್ಷೆಗಳು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಅದರ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ:

ಸಿಎ ಫೌಂಡೇಶನ್ ಪರೀಕ್ಷೆ: ಸೆಪ್ಟೆಂಬರ್ 2, 5, 7 ಮತ್ತು 9 ರಂದು ನಡೆಯಲಿದೆ.

ಸಿಎ ಇಂಟರ್ಮೀಡಿಯೇಟ್ ಪರೀಕ್ಷೆ:

  • ಗ್ರೂಪ್ 1: ಸೆಪ್ಟೆಂಬರ್ 1, 3 ಮತ್ತು 6 ರಂದು ನಡೆಯಲಿದೆ.
  • ಗ್ರೂಪ್ 2: ಸೆಪ್ಟೆಂಬರ್ 8, 10 ಮತ್ತು 12 ರಂದು ನಡೆಯಲಿದೆ.

ಸಿಎ ಫೈನಲ್ ಪರೀಕ್ಷೆ:

  • ಗ್ರೂಪ್ 1: ನವೆಂಬರ್ 2, 4 ಮತ್ತು 6 ರಂದು ನಡೆಯಲಿದೆ.
  • ಗ್ರೂಪ್ 2: ನವೆಂಬರ್ 9, 11 ಮತ್ತು 13 ರಂದು ನಡೆಯಲಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

  • ಪೋರ್ಟಲ್‌ಗೆ ಭೇಟಿ ನೀಡಿ: ಅಭ್ಯರ್ಥಿಗಳು ಮೊದಲು ICAI ನ ಅಧಿಕೃತ ಇ-ಸೇವೆಗಳ (e-Services) ಪೋರ್ಟಲ್‌ಗೆ ಲಾಗಿನ್ ಆಗಬೇಕು.
  • ನೋಂದಣಿ (Registration): ಹೊಸ ಅಭ್ಯರ್ಥಿಗಳಾಗಿದ್ದರೆ ಮೊದಲು ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
  • ಕೋರ್ಸ್ ಆಯ್ಕೆ: ಲಾಗಿನ್ ಆದ ನಂತರ, ಸೆಪ್ಟೆಂಬರ್ ಅಥವಾ ನವೆಂಬರ್ 2026 ರ ಪರೀಕ್ಷಾ ಆಯ್ಕೆಯನ್ನು ಆರಿಸಿಕೊಂಡು, ನೀವು ಬರೆಯಲಿರುವ ಸಂಬಂಧಿತ ಕೋರ್ಸ್ ಅನ್ನು ಆಯ್ಕೆ ಮಾಡಿ.
  • ಮಾಹಿತಿ ಭರ್ತಿ ಮಾಡಿ: ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಯಾವುದೇ ತಪ್ಪುಗಳಿಲ್ಲದಂತೆ ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಶುಲ್ಕ ಪಾವತಿ: ನಿಗದಿತ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಬ್ಯಾಂಕಿಂಗ್/ಕಾರ್ಡ್‌ಗಳ ಮೂಲಕ ಪಾವತಿಸಿ, ಫಾರ್ಮ್ ಅನ್ನು ಅಂತಿಮವಾಗಿ ಸಬ್ಮಿಟ್ ಮಾಡಿ.
  • ಪ್ರಿಂಟ್ ಔಟ್ ಇಟ್ಟುಕೊಳ್ಳಿ: ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ದೃಢೀಕರಣ ಪುಟವನ್ನು (Confirmation Page) ಡೌನ್‌ಲೋಡ್ ಮಾಡಿ ಅದರ ಒಂದು ಮುದ್ರಿತ ಪ್ರತಿಯನ್ನು (Printout) ನಿಮ್ಮ ಬಳಿ ಸುರಕ್ಷಿತವಾಗಿಟ್ಟುಕೊಳ್ಳಿ.

ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದರಿಂದ ವಿಳಂಬ ಶುಲ್ಕವನ್ನು ತಪ್ಪಿಸಬಹುದಷ್ಟೇ ಅಲ್ಲದೆ, ಕೊನೆಯ ಕ್ಷಣದಲ್ಲಿ ಎದುರಾಗುವ ವೆಬ್‌ಸೈಟ್ ಸರ್ವರ್ ಸಮಸ್ಯೆಗಳಿಂದ ದೂರವಿರಬಹುದು. ಇದು ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ತಮ್ಮ ಪರೀಕ್ಷಾ ತಯಾರಿಯತ್ತ ಸಂಪೂರ್ಣ ಗಮನ ಹರಿಸಲು ಸಹಾಯ ಮಾಡುತ್ತದೆ.

ಮತ್ತಷ್ಟು ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾನ ಕೋಗಿಲೆ ಎಸ್ ಜಾನಕಿ ಅಂತ್ಯಕ್ರಿಯೆ ಎಲ್ಲಿ? ಯಾವಾಗ? – Kannada News | S Janaki Final Rituals to be happened in Kuniyana Hundi

ಸುಮಾರು ಅರ್ಧ ಲಕ್ಷದಷ್ಟು ಹಾಡುಗಳನ್ನು ಹಾಡಿರುವ ಎಸ್ ಜಾನಕಿ (S Janaki) ಅವರು ನಿನ್ನೆ (ಜುಲೈ 11) ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನಲ್ಲೇ ನೆಲೆಸಿದ್ದ ಜಾನಕಿ ಅವರ ಆಸೆಯಂತೆ ಮೈಸೂರಿನಲ್ಲೇ ಕೊನೆ ಉಸಿರೆಳೆದಿದ್ದಾರೆ. ನಿನ್ನೆ ರಾತ್ರಿಯಿಂದಲೂ ಲಕ್ಷಾಂತರ ಜನ ತಂಡೋಪತಂಡವಾಗಿ ಆಗಮಿಸಿ ಜಾನಕಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆ ಚಿತ್ರರಂಗದ ಗಣ್ಯರು ಸಹ ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ರಾಜ್ಯದ ಕೆಲ ಪ್ರಮುಖ ರಾಜಕಾರಣಿಗಳು ಸಹ ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಸಿಎಂ ಡಿಕೆ ಶಿವಕುಮಾರ್, ಈ ಕುರಿತು ಮಾತನಾಡಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಜಾನಕಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದಿದ್ದಾರೆ. ಎಸ್ ಜಾನಕಿ ಅವರು ಮೂಲತಃ ತೆಲುಗಿನವರು, ಜನಿಸಿದ್ದು ಅವಿಭಜಿತ ಆಂಧ್ರ ಪ್ರದೇಶದ ಗುಂಟೂರಿನಲ್ಲಿ. ಆದರೆ ಅವರ ಜೀವನದ ಕೊನೆಯ ದಿನಗಳನ್ನು ಅವರು ಕಳೆದಿದ್ದು ಕರ್ನಾಟಕದ ಮೈಸೂರಿನಲ್ಲಿ. ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಾನಕಿ ಅವರಿಗೆ ಮೈಸೂರಿನ ಮೇಲೆ ಅಪಾರ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದು ಮಾತ್ರವೇ ಅಲ್ಲದೆ, ತಾವು ಮೈಸೂರಿನಲ್ಲೇ ಮಣ್ಣಾಗಬೇಕು ಎಂದು ಬಯಸಿದ್ದರು. ಅವರ ಆಸೆಯಂತೆ ಇದೀಗ ಜಾನಕಿ ಅವರನ್ನು ಮೈಸೂರಿನಲ್ಲೇ ಮಣ್ಣು ಮಾಡಲಾಗುತ್ತಿದೆ.

ಎಸ್ ಜಾನಕಿ ಅವರ ಅಂತಿಮ ಸಂಸ್ಕಾರ ಮೈಸೂರು ಜಿಲ್ಲೆ ಎಚ್​​ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯಲ್ಲಿ ನಡೆಯಲಿದೆ. ಇಲ್ಲಿಯೇ ಮಣ್ಣಾಗಬೇಕು ಎಂಬುದು ಎಸ್ ಜಾನಕಿ ಅವರ ಆಸೆಯೂ ಆಗಿತ್ತು. ಈಗಾಗಲೇ ಸ್ಥಳೀಯ ಆಡಳಿತದವರು ಸ್ಥಳಕ್ಕೆ ಹೋಗಿ ಜಾನಕಿ ಅವರ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಸ್ಥಳವನ್ನು ಸ್ವಚ್ಛಗೊಳಿಸಿ, ಅಂತಿಮ ಸಂಸ್ಕಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಇದನ್ನೂ ಓದಿ:ಒಂದು ಹಾಡು ನಾಲ್ಕು ಧ್ವನಿ: ಎಸ್ ಜಾನಕಿ ಹಾಡಿರುವ ಈ ಹಾಡು ಕೇಳಿದ್ದೀರಾ?

ಎಸ್ ಜಾನಕಿ ಅವರ ಮೊಮ್ಮಗಳು ಅಪ್ಸರಾ ಅಂತಿಮ ಕಾರ್ಯವನ್ನು ನಡೆಸಿಕೊಡಲಿದ್ದಾರೆ. ತೆಲುಗು ಬ್ರಾಹ್ಮಣ ವಿಧಿ ವಿಧಾನದ ಅನುಸಾರ ಅಂತಿಮ ಸಂಸ್ಕಾರ ನಡೆಯಲಿದೆ. ಪಂಚಗವ್ಯ ಶುದ್ಧೀಕರಣ ಸೇರಿದಂತೆ ಹಲವು ಕಾರ್ಯಗಳು ನಡೆಯಲಿವೆ. ಅದಾದ ಬಳಿಕ ಪೊಲೀಸ್ ಗೌರವ ಇರಲಿದೆ. ಬಳಿಕ ಎಸ್ ಜಾನಕಿ ಅವರು ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಸಂಜೆ ಐದು ಗಂಟೆ ಸುಮಾರಿಗೆ ಮೆರವಣಿಗೆಯಲ್ಲಿ ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ ಎಚ್​​ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿಗೆ ತೆಗೆದುಕೊಂಡು ಬರಲಾಗುತ್ತದೆ. ಬಳಿಕ ಸುಮಾರು ಆರು ಗಂಟೆ-ಆರೂವರೆ ವೇಳೆಗೆ ಅವರ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಏಕದಿನ ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಔಟ್; ಬದಲಿಯಾಗಿ ಬಂದಿದ್ಯಾರು? – Kannada News | India vs England ODI Series: Prince Yadav Replaces Harshit Rana for July 14 Series

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತ್ಯವಾಗಿದೆ. ಆತಿಥೇಯ ಇಂಗ್ಲೆಂಡ್‌ ಈ ಚುಟುಕು ಸಮರದಲ್ಲಿ ವಿಶ್ವ ಚಾಂಪಿಯನ್ ಟೀಂ ಇಂಡಿಯಾವನ್ನು 4-0 ಅಂತರದಿಂದ ಮಣಿಸಿ ಮೊಟ್ಟ ಮೊದಲ ಬಾರಿಗೆ ಟಿ20 ಸರಣಿ ಗೆದ್ದ ದಾಖಲೆಯನ್ನು ನಿರ್ಮಿಸಿತು. ಇದೀಗ ಆಂಗ್ಲರ ನಾಡಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಮುಜುಗರಕ್ಕೊಳಗಾಗಿರುವ ಟೀಂ ಇಂಡಿಯಾ, ಟಿ20 ಸರಣಿ ಸೋಲಿನ ಅವಮಾನಕ್ಕೆ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜುಲೈ 14 ರಿಂದ ಆರಂಭವಾಗಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಯುವ ಸ್ಟಾರ್ ಆಲ್‌ರೌಂಡರ್ ಹರ್ಷಿತ್ ರಾಣಾ ಈ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಯುವ ವೇಗಿ ಪ್ರಿನ್ಸ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಹರ್ಷಿತ್ ಮತ್ತು ವರುಣ್​ಗೆ ಗಾಯ
ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಸರಣಿ ಬರುವ ಮಂಗಳವಾರದಿಂದ ಆರಂಭವಾಗಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನ ಏಕದಿನ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಈ ಮೊದಲು ಏಕದಿನ ತಂಡದಲ್ಲಿ ಆಯ್ಕೆಯಾಗಿದ್ದ ಹರ್ಷಿತ್ ರಾಣಾ ಗ್ರೇಡ್ 1 ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಹೇಳಿದೆ. ಇತ್ತ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಮಂಡಿರಜ್ಜು ಗಾಯದಿಂದ (ಗ್ರೇಡ್ 2) ಬಳಲುತ್ತಿದ್ದು, ಅವರನ್ನು ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಹೊರಗಿಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಅಲ್ಲದೆ ವರುಣ್ ಚಕ್ರವರ್ತಿ ಬದಲಿಗೆ ರವಿ ಬಿಷ್ಣೋಯ್ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ.

Published On – 4:17 pm, Sun, 12 July 26

Source link

Exit mobile version