ನೆಲಮಂಗಲದಲ್ಲಿ ನೈತಿಕ ಪೊಲೀಸ್ ಗಿರಿ! ಹಿಂದೂ ಯುವಕನ ಮೇಲೆ ಹಲ್ಲೆ; ಆತ್ಮಹತ್ಯೆಗೆ ಯತ್ನಿಸಿದ ಮುಸ್ಲಿಂ ಯುವತಿ – Kannada News | Nelamangala Moral Policing: Hindu Youth Assaulted, Muslim Girl Attempts death
ನೆಲಮಂಗಲ, ಜುಲೈ 18: ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕೂರು ಗ್ರಾಮದಲ್ಲಿ ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ಯುವತಿಯೊಬ್ಬಳ ಜೊತೆಯಲ್ಲಿ ಓಡಾಡುತ್ತಿದ್ದನೆಂಬ ಕಾರಣಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಯಶವಂತ್ ಹಲ್ಲೆಗೊಳಗಾದ ಯುವಕ. ನಡೆದಿದ್ದೇನು? ಯಶವಂತ್ ಹಾಗೂ ಯುವತಿ ಕೌಸರ್ ಬಾನು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಲಕ್ಕೂರು ಗ್ರಾಮದ ನಿವಾಸಿಗಳಾದ ತಹರೀಕ್…