ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಈಗ ಹೇಗಿದೆ? ಮಣಿಪಾಲ್ ಆಸ್ಪತ್ರೆಯ ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ – Kannada News | HD Deve Gowda’s Wife Chennamma Health Improves, Breathing Condition Better Says Manipal Hospital Doctor
ಬೆಂಗಳೂರು, ಜುಲೈ 18: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅವರ ಆರೋಗ್ಯದಲ್ಲಿ ಶುಕ್ರವಾರಕ್ಕಿಂತ ಇಂದು ಸುಧಾರಣೆ ಕಂಡುಬಂದಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಸತ್ಯನಾರಾಯಣ ಶನಿವಾರ ಬೆಳಗ್ಗೆ ತಿಳಿಸಿದ್ದಾರೆ. ಉಸಿರಾಟದ ತೊಂದರೆ ಶೇ 20ರಿಂದ 30ರಷ್ಟು ಹತೋಟಿಗೆ ಬಂದಿದ್ದು, ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯದ ಮಾನದಂಡಗಳು ಸ್ಥಿರವಾಗಿವೆ ಎಂದು ಅವರು ಹೇಳಿದ್ದಾರೆ. ಸದ್ಯ ವೆಂಟಿಲೇಟರ್ ಅಗತ್ಯವಿಲ್ಲದೆ ಸಹಜ ಉಸಿರಾಟ ನಡೆಯುತ್ತಿದೆ. ಆದರೆ ಸಂಪೂರ್ಣ ಚೇತರಿಕೆಗೆ ಇನ್ನೂ ಸಮಯ ಬೇಕಾಗಲಿದ್ದು, ಮುಂದಿನ ದಿನಗಳಲ್ಲೂ…