Headlines

ಬುಲೆಟ್ ರೈಲು ಯೋಜನೆ ವಿಳಂಬವನ್ನು ಟೀಕಿಸಿದ ಜಪಾನ್ ಮಾಜಿ ಸಚಿವ; ಭಾರತ ತಿರುಗೇಟು – Kannada News | Former Japan minister slams India for bullet train project delay Government hits back

ನವದೆಹಲಿ, ಜುಲೈ 17: ಮುಂಬೈ-ಅಹಮದಾಬಾದ್ ಬುಲೆಟ್ ರೈಲು (Bullet Train) ಯೋಜನೆ ವಿಳಂಬವಾಗುತ್ತಿದೆ ಎಂದು ಜಪಾನ್‌ನ ಮಾಜಿ ಸಚಿವರೊಬ್ಬರು ಮಾಡಿರುವ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಇದು ಕೇವಲ ಜಪಾನ್ ಮಾಜಿ ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿರುವ ಭಾರತ ಈ ಯೋಜನೆಯ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅಹಮದಾಬಾದ್-ಮುಂಬೈ ಹೈಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ನಡುವಿನ ಮಾತುಕತೆಗಳು…

Read More

ಭಾರತದಲ್ಲಿ ಹಸಿರು ಇಂಧನ ಕ್ರಾಂತಿ; ಆರು ತಿಂಗಳಲ್ಲಿ ದಾಖಲೆಯ ಶೇ.25ರಷ್ಟು ಪ್ರಗತಿ- ಮಾಹಿತಿ ಬಿಚ್ಚಿಟ್ಟ ಸಚಿವ ಪ್ರಲ್ಹಾದ್ ಜೋಶಿ – Kannada News | India’s renewable energy capacity increase by 25pc in 2026, says union minister Pralhad Joshi

ನವೀಕರಣ ಇಂಧನImage Credit source: Pralhad Joshi’s X @JoshiPralhad ನವದೆಹಲಿ, ಜುಲೈ 17: ಭಾರತವು ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ (Clean and Renewable energy capacity) ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. 2026ರ ಮೊದಲ ಆರು ತಿಂಗಳ ಅವಧಿಯಲ್ಲೇ ದೇಶದ ಹಸಿರು ಇಂಧನ ಕ್ಷೇತ್ರವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 25ರಷ್ಟು ಅಭೂತಪೂರ್ವ ಪ್ರಗತಿ ಕಂಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi)…

Read More

ದೃಷ್ಟಿ ಮಸಕಾಗುವುದನ್ನು ತಡೆಯಲು ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳಿ – Kannada News | Flax Seeds vs Pumpkin Seeds: Which Is Better for Eye Health?

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಮಸುಕಾಗುವುದು, ಕಣ್ಣಿನ ಆಯಾಸ, ಡ್ರೈ ಐ (Dry Eye), ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆಯಿಂದ ಉಂಟಾಗುವ ಡಿಜಿಟಲ್ ಐ ಸ್ಟ್ರೇನ್ ಸಮಸ್ಯೆಗಳು ಹೆಚ್ಚುತ್ತಿವೆ. ಹಲವರು “ಕೆಲವು ಆಹಾರ ತಿಂದರೆ ಕನ್ನಡಕವೇ ಬೇಡ” ಎಂಬ ನಂಬಿಕೆಯಲ್ಲಿ ನೈಸರ್ಗಿಕ ಪರಿಹಾರಗಳನ್ನು ಹುಡುಕುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ಕೆಲವು ಪೌಷ್ಟಿಕ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ದೃಷ್ಟಿ ಕುಗ್ಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಅದರಲ್ಲಿಯೂ ಕಣ್ಣಿನ ಆರೋಗ್ಯ ಕಾಪಾಡಲು…

Read More

141 ವರ್ಷಗಳ ಹಳೆಯ ಶಾಲೆಯ ಸ್ಥಿತಿ ನೋಡಿ: ಗೆದ್ದಲು ಹಿಡಿದ ಮೇಲ್ಚಾವಣಿ, ಬಿರುಕು ಬಿಟ್ಟ ಮಣ್ಣಿನ ಗೋಡೆಗಳು; ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟ – Kannada News | Dilapidated Ankola School: Harawada Students Face Life Threat in Crumbling Classrooms

ಅಂಕೋಲಾ, ಜು.17: ಶಾಲೆ ಅಂದರೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಜ್ಞಾನದ ದೇವಾಲಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಈ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಕಲಿಯುವುದಕ್ಕಿಂತ ಹೆಚ್ಚಾಗಿ ದಿನವಿಡೀ ತಮ್ಮ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡ, ಗೆದ್ದಲು ಹಿಡಿದ ಮೇಲ್ಚಾವಣಿ, ಮಳೆ ಬಂದರೆ ಸೋರುವ ಮಣ್ಣಿನ ಗೋಡೆಗಳು, ಇಂತಹದ್ದೇ ಒಂದು ತೀವ್ರ ಅಪಾಯಕಾರಿ ಪರಿಸ್ಥಿತಿಯಲ್ಲಿ ಪುಟಾಣಿ ಮಕ್ಕಳು ಪ್ರತಿದಿನ ಜೀವ ಭಯದಲ್ಲೇ ಪಾಠ ಕೇಳುತ್ತಿದ್ದಾರೆ. ಇದು…

Read More

ರಾಜ್ಯಾದ್ಯಂತ 579 ಮದ್ಯ ಮಾರಾಟ ಸನ್ನದುಗಳ ಇ-ಹರಾಜು: ಅಬಕಾರಿ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ – Kannada News | Karnataka Liquor Licence E Auction 2026–31: 579 Permits Up for Bidding; Check Dates, Eligibility and Details

ಪ್ರಾತಿನಿಧಿಕ ಚಿತ್ರImage Credit source: Getty images ಬೆಂಗಳೂರು, ಜುಲೈ 17: ರಾಜ್ಯಾದ್ಯಂತ ಒಟ್ಟು 579 ಮದ್ಯ ಮಾರಾಟ ಪರವಾನಗಿಗಳನ್ನ (Licenses) ಮುಂದಿನ 5 ವರ್ಷಗಳ ಅವಧಿಗೆ, ಅಂದರೆ 2026-27 ರಿಂದ 2030-31 ರವರೆಗೆ ಇ-ಹರಾಜು ಮೂಲಕ ಹಂಚಿಕೆ ಮಾಡಲು ಜುಲೈ 1ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದೀಗ ಅಬಕಾರಿ ಇಲಾಖೆಯು ಇ-ಹರಾಜು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯಾರಿಗೆ ಎಷ್ಟು ಮೀಸಲಾತಿ? ಒಟ್ಟು ಪರವಾನಗಿಗಳ ಪೈಕಿ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಲಭ್ಯವಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ…

Read More

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಏನಾಗುತ್ತದೆ? ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ? – Kannada News | Sonam wangchuk hunger strike; Can the government force feed him like it did Irom Sharmila?

ನವದೆಹಲಿ, ಜುಲೈ 17: ಇಂದಿಗೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಉಪವಾಸ ಸತ್ಯಾಗ್ರಹದ 20ನೇ ದಿನಕ್ಕೆ ಕಾಲಿಟ್ಟಿದೆ. ಅವರ ತೂಕ ವೇಗವಾಗಿ ಕಡಿಮೆಯಾಗುತ್ತಿದೆ. ಇಲ್ಲಿಯವರೆಗೆ 9 ಕೆಜಿ ತೂಕ ಕಳೆದುಕೊಂಡಿರುವ ಅವರ ಆರೋಗ್ಯವು ಕ್ಷೀಣಿಸುತ್ತಿದೆ. ದೀರ್ಘಕಾಲದ ಉಪವಾಸ ಸತ್ಯಾಗ್ರಹವು ಈಗಾಗಲೇ ಅವರ ಅಂಗಗಳ ಮೇಲೆ ಪರಿಣಾಮ ಬೀರಿದೆ. ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಹೈಕೋರ್ಟ್ ಕೂಡ ಹೇಳಿದೆ. ಆದರೂ ಸತ್ಯಾಗ್ರಹವನ್ನು ಮುಂದುವರಿಸುವ ಬಗ್ಗೆ ದೃಢನಿಶ್ಚಯ ಹೊಂದಿರುವ ಸೋನಮ್ ವಾಂಗ್‌ಚುಕ್ ಅವರ…

Read More

ಚಿಪ್ ತಯಾರಿಸದಿದ್ದರೂ ಸೆಮಿಕಂಡಕ್ಟರ್ ಕ್ರಾಂತಿಯ ಲಾಭ ಪಡೆಯುತ್ತಿರುವ 3 ಭಾರತೀಯ ಕಂಪನಿಗಳು – Kannada News | India’s Semicon 2 programme to give boost to supply chain companies

ನವದೆಹಲಿ, ಜುಲೈ 17: ಸರ್ಕಾರವು ಇತ್ತೀಚೆಗೆ ಅನುಮೋದಿಸಿರುವ ₹1.3 ಲಕ್ಷ ಕೋಟಿ ಬಜೆಟ್‌ನ ‘ಸೆಮಿಕಾನ್ 2.0’ (Semicon 2.0) ಯೋಜನೆಯು ದೇಶದ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಕ್ರಾಂತಿಯ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಈ ಯೋಜನೆಯಿಂದ ತಕ್ಷಣವೇ ಭಾರಿ ಲಾಭ ಗಳಿಸುತ್ತಿರುವ ದೇಶದ ಪ್ರಮುಖ 3 ಕಂಪನಿಗಳು ನೇರವಾಗಿ ಯಾವುದೇ ಮೈಕ್ರೋಚಿಪ್‌ಗಳನ್ನು (Chips) ತಯಾರಿಸುವುದಿಲ್ಲ! ಬದಲಿಗೆ, ಚಿಪ್ ತಯಾರಿಕಾ ಘಟಕಗಳಿಗೆ (Fabs) ಅತ್ಯಗತ್ಯವಾಗಿ ಬೇಕಾಗುವ ಜಾಗತಿಕ ಗುಣಮಟ್ಟದ ರಾಸಾಯನಿಕಗಳು, ಗ್ಯಾಸ್‌ಗಳು…

Read More

IND vs ENG: ಸಚಿನ್ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್ ಕೊಹ್ಲಿ – Kannada News | Virat Kohli Breaks Sachin’s England Record: Most 50+ Scores in ODIs and New Milestones!

ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿರಬಹುದು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಕಾರ್ಡಿಫ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಕೊಹ್ಲಿ, ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ ಸಾಧನೆಯನ್ನೂ ಮಾಡಿದರು(PC-PTI). Source link

Read More

‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಿಂದ ಬಿಡುಗಡೆ ಆಯ್ತು 2 ಭಾಷೆಯ ವಿಶೇಷ ಹಾಡು – Kannada News | Rukhmini Radhakrishna Movie Songs Released Lahari Music Mokshitha Pai Bharath Kumar

‘ರುಕ್ಮಿಣಿ ರಾಧಾಕೃಷ್ಣ’ (Rukhmini Radhakrishna) ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ‘ಉಮೇಶ್ ಫಿಲ್ಮ್ಸ್’ ಬ್ಯಾನರ್ ಮೂಲಕ ಎನ್. ಹನುಮಂತರಾಜು, ಎನ್.ಹೆಚ್. ಉಮೇಶ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಾಣ್ ಸುವರ್ಣ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ (Bharath Kumar) ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ನಟಿಯರಾದ ಮೋಕ್ಷಿತಾ ಪೈ (Mokshitha Pai) ಹಾಗೂ ರಿಯಾ ಸಚ್ ದೇವ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ…

Read More

ಲಂಚ ಪಡೆಯುವಾಗಲೇ ರೇಡ್​​: ಕಲಬುರಗಿ, ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು – Kannada News | Lokayukta Raid: Government Officials Caught Red Handed Taking Bribes in Kalaburagi and Chitradurga

ಕಲಬುರಗಿ/ಚಿತ್ರದುರ್ಗ, ಜುಲೈ 17: 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಎಪಿಪಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಸಂಗ ನಡೆದಿದೆ. ಕರಣವೊಂದರಲ್ಲಿ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ಹೈದರಾಬಾದ್ ಮೂಲದ ದೂರುದಾರ ರಾಹುಲ್​ರಿಂದ 5ನೇ ಜೆಎಂಎಫ್​ಸಿ ಕೋರ್ಟ್ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಕೋರ್ಟ್​ ಆವರಣದಲ್ಲಿಯೇ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 10 ಸಾವಿರ ನಗದು, 9 ಸೀರೆ, 4 ಶರ್ಟ್, 4 ಲಂಡನ್ ಜೀನ್ಸ್ ಪ್ಯಾಂಟ್,…

Read More