Headlines

Gold Rate: ಚಿನ್ನದ ಬೆಲೆ ಸತತ ಇಳಿಕೆ; ಬೆಳ್ಳಿ ಬೆಲೆಯೂ ಭರ್ಜರಿ ಕುಸಿತ – Kannada News | Gold Price Today on 17th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 17: ಚಿನ್ನದ ಬೆಲೆ ಸತತವಾಗಿ ತಗ್ಗಿದೆ. ನಿನ್ನೆ 25 ರೂ ಇಳಿದಿದ್ದ ಇದರ ಬೆಲೆ (Gold Rates) ಇಂದು ಶುಕ್ರವಾರ 70 ರೂ ಕಡಿಮೆಗೊಂಡಿದೆ. ವಿದೇಶಗಳಲ್ಲೂ ಬಹುತೇಕ ಕಡೆ ಬಂಗಾರದ ದರ ಇಳಿದಿದೆ. ಇನ್ನು, ಬೆಳ್ಳಿ ಬೆಲೆಯೂ ಶುಕ್ರವಾರ ಗ್ರಾಮ್​ಗೆ 5 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,530 ರುಪಾಯಿ ಆಗಿದೆ. 100…

Read More

NEET-UG Topper Aryan Gupta: ನೀಟ್-ಯುಜಿ ಟಾಪರ್ ಆರ್ಯನ್ ಗುಪ್ತ ಯಶೋಗಾಥೆ; ಅಜ್ಜಿಯನ್ನು ಬಲಿ ಪಡೆದ ಕ್ಯಾನ್ಸರ್ ವಿರುದ್ಧ ಹೋರಾಡಲು ವೈದ್ಯನಾಗುವ ಸಂಕಲ್ಪ – Kannada News | NEET UG 2026 AIR 1: Aryan Gupta’s 17 Hour Study and Grandma’s Cancer Motivated Topper

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಪ್ರತಿಷ್ಠಿತ ನೀಟ್-ಯುಜಿ (NEET-UG) 2026 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಂಜಾಬ್‌ನ ಲುಧಿಯಾನದ ಆರ್ಯನ್ ಗುಪ್ತ 720ಕ್ಕೆ 715 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR-1) ಸಾಧಿಸಿದ್ದಾರೆ. ವೈದ್ಯಕೀಯ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಆರ್ಯನ್ ಅವರ ತಂದೆ ಡಾ. ಸಚಿನ್ ಗುಪ್ತಾ ಅರಿವಳಿಕೆ ತಜ್ಞರಾಗಿದ್ದು, ತಾಯಿ ಡಾ. ರೀನಾ ಗುಪ್ತಾ ಸ್ತ್ರೀರೋಗ ತಜ್ಞರಾಗಿದ್ದಾರೆ. ಅವರ ಹಿರಿಯ ಸಹೋದರ ಕೂಡ ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅಖಿಲ…

Read More

ಸಿಎಂ ವಿಜಯ್ ಬಗ್ಗೆ ಮೊದಲ ಬಾರಿ ಮಾತನಾಡಿದ ಪುತ್ರ ಸಂಜಯ್ – Kannada News | Jason Sanjay talks about his family and his father Vijay

ವಿಜಯ್  (Vijay) ಸಿಎಂ ಆಗಿದ್ದಾರೆ. ವಿಜಯ್, ಸಿನಿಮಾ ಮತ್ತು ರಾಜಕೀಯ ಕ್ಷೇತ್ರ ಎರಡರಲ್ಲೂ ದೊಡ್ಡ ಯಶಸ್ಸು ಗಳಿಸಿದಂತಾಗಿದೆ. ಆದರೆ ಅವರ ಖಾಸಗಿ ಬದುಕು ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ವಿಜಯ್ ಅವರು ಸಿಎಂ ಆಗುವ ಮುಂಚೆಯೇ ಪತ್ನಿ ಸಂಗೀತಾ ಅವರೊಟ್ಟಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆ ಸಮಯದಲ್ಲಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ವಿಜಯ್’ ಹೆಸರನ್ನು ತೆಗೆದು ಹಾಕಿದ್ದರು. ಆ ಮೂಲಕ ಪರೋಕ್ಷ ಸಿಟ್ಟನ್ನು ತಂದೆಯ ವಿರದ್ಧ ಹೊರ…

Read More

ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್‌ಸಿಪಿಯಲ್ಲಿ ಮತ್ತೊಂದು ಒಡಕು – Kannada News | Maharashtra NCP Crisis: Fadnavis Secret Meetings Stoke Political Turmoil

ಮುಂಬೈ, ಜುಲೈ 17: ಮಹಾರಾಷ್ಟ್ರ(Maharashtra) ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ತಲ್ಲಣ ಸೃಷ್ಟಿಯಾಗಿದೆ. ಆಡಳಿತಾರೂಢ ಎನ್‌ಸಿಪಿ (ಅಜಿತ್ ಪವಾರ್ ಬಣ) ಮುಖ್ಯಸ್ಥೆ ಸುನೇತ್ರಾ ಪವಾರ್ ನೇತೃತ್ವದ ಬಣ ಮತ್ತು ಶರದ್ ಪವಾರ್ ನೇತೃತ್ವದ ವಿರೋಧ ಪಕ್ಷದ ಎನ್‌ಸಿಪಿ ಬಣ ಎರಡರಲ್ಲೂ ಆಂತರಿಕ ಕಲಹಗಳು ತಾರಕಕ್ಕೇರಿವೆ. ಈ ಇಡೀ ರಾಜಕೀಯ ನಾಟಕದ ಕೇಂದ್ರಬಿಂದುವಾಗಿ ಮೂಡಿಬಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಬ್ಯಾಕ್ ಟು ಬ್ಯಾಕ್ ನಡೆದಿರುವ ಮೂರು ರಹಸ್ಯ ಸಭೆಗಳು ತೀವ್ರ ಊಹಾಪೋಹಗಳಿಗೆ ಕಾರಣವಾಗಿವೆ. ಅಜಿತ್ ಪವಾರ್ ಅವರ…

Read More

‘ಕರ್ಣ’ ಧಾರಾವಾಹಿಯಲ್ಲಿ ಆಷಾಢದ ಟ್ವಿಸ್ಟ್; ಮೆಕ್ಯಾನಿಕ್ ವೇಷದಲ್ಲಿ ಬಂದ ಕಥಾನಾಯಕ – Kannada News | Karna Serial Update: Karna Turns Mechanic to Meet Nidhi Amid Ashadha Obstacles

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರ್ಣ’ದಲ್ಲಿ ಈಗ ರೋಚಕ ತಿರುವು ಎದುರಾಗಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಥಾನಾಯಕ ಕರ್ಣ ಹಾಗೂ ನಿಧಿ ಜೋಡಿಗೆ ಹೊಸ ಸಂಕಷ್ಟ ಎದುರಾಗಿದೆ. ಇಬ್ಬರೂ ಮನೆಯವರ ಕಣ್ಣು ತಪ್ಪಿಸಿ ಕದ್ದುಮುಚ್ಚಿ ಪ್ರೀತಿ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಫನ್ ಎಪಿಸೋಡ್ ವೀಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸಾಗುತ್ತದೆ ಎನ್ನುವ ಕುತೂಹಲ ಮೂಡಿದೆ. ಹೇಗಾದರೂ ಮಾಡಿ ನಿಧಿಯನ್ನು ಭೇಟಿಯಾಗಲು ಕರ್ಣ ಹೊಸ ಪ್ಲಾನ್ ಮಾಡಿದ್ದಾನೆ….

Read More

Video: ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ: ಡಾ. ಶಶಿಶೇಖರ್ ದೀಕ್ಷಿತ್ ವಿವರಣೆ – Kannada News | Ashadha Masa: Auspicious for Shakti Devata Worship and Chamundeshwari Devi Puja in Mysore

ಆಷಾಢ ಮಾಸದ ಮೊದಲ ಶುಕ್ರವಾರದಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಸನ್ನಿಧಾನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಈ ಕುರಿತು ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ಅವರು ಮಾತನಾಡಿ, ಆಷಾಢ ಮಾಸವು ಶಕ್ತಿ ದೇವತೆಗಳ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಮಾಸವಾಗಿದೆ. ಈ ಮಾಸದಲ್ಲಿ ಶಕ್ತಿ ದೇವತೆಗಳನ್ನು ಆರಾಧಿಸಿದರೆ ಸಕಲ ಶುಭಗಳು ಲಭಿಸುತ್ತವೆ ಎಂಬುದು ನಂಬಿಕೆಯಾಗಿದೆ ಎಂದರು. ಪ್ರತಿದಿನದಂತೆ ಬೆಳಿಗ್ಗೆ 3:30 ರಿಂದ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಗರ್ಭಗುಡಿಯಲ್ಲಿರುವ…

Read More

ಬೆಂಗಳೂರು: 2 ವರ್ಷದ ಮಗು ಅನುಮಾನಾಸ್ಪದ ಸಾವು, ಲಿವ್-ಇನ್ ಸಂಬಂಧದಲ್ಲಿದ್ದ ದಂಪತಿ ವಿರುದ್ಧ ಅನುಮಾನ – Kannada News | Bengaluru 2 Year Old Girl Dies Under Suspicious Circumstances; Police Probe Live in Couple

ಬೆಂಗಳೂರು, ಜುಲೈ 17: ಬೆಂಗಳೂರು (Bengaluru) ನಗರದ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಸ್ಟ್ರೀಟ್‌ನಲ್ಲಿ ಎರಡು ವರ್ಷದ ಹೆಣ್ಣು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದರೂ, ಪ್ರಕರಣದಲ್ಲಿ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೇಸನ್ ಆಂಥೋನಿ ಮತ್ತು ರೋಸ್ಲಿನ್ ಎಂಬವರು ಹಲವು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದು, ಅವರಿಗೆ ಎರಡು ವರ್ಷದ ಹೆಣ್ಣು ಮಗು ಇತ್ತು. ಎರಡು ದಿನಗಳ ಹಿಂದೆ ಮಗುವಿಗೆ ಏಕಾಏಕಿ ಉಸಿರಾಟದ…

Read More

ಮುರ್ಷಿದಾಬಾದ್​ನಲ್ಲಿ ಸ್ಕೂಲ್​ ವ್ಯಾನ್​ಗೆ ಪ್ಯಾಸೆಂಜರ್ ರೈಲು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು, ಐವರಿಗೆ ಗಾಯ – Kannada News | Murshidabad Train Accident: 3 Dead, Students Critically Injured in School Van Crash

ಮುರ್ಷಿದಾಬಾದ್, ಜುಲೈ 17: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರೈಲು ಅಪಘಾತ(Train Accident)ದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲೊಂದು ಶಾಲಾ ಮಕ್ಕಳಿದ್ದ ವ್ಯಾನ್​ ಹಾಗೂ ಸೈಕ್ಲಿಸ್ಟ್‌ಗೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಈ ಘೋರ ದುರಂತ ಸಂಭವಿಸಿದೆ. ಬರ್ಹಾಂಪೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಣಸುಬರ್ಣ ಮತ್ತು ಗೋಬಿಂದಾಪುರ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ಅಪಘಾತ ನಡೆದಿದೆ….

Read More

World Emoji Day 2026: ಇಂದು ಎಮೋಜಿ ದಿನ; ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ – Kannada News | World Emoji Day 2026: What are the history and significance of World Emoji Day

ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಹೀಗಾಗಿ ಹೆಚ್ಚಿನವರು ಫೇಸ್​ಬುಕ್, ವಾಟ್ಸ್ಆ್ಯಪ್ (WhatsApp), ಇನ್​ಸ್ಟಾಗ್ರಾಮ್, ಟೆಲಿಗ್ರಾಂಗಳಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ನಾವೆಲ್ಲರೂ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದಕ್ಕಿಂತ ಎಮೋಜಿಗಳ ಮೂಲಕ ಹೇಳುವುದೇ ಹೆಚ್ಚು. ಹೀಗಾಗಿ ಈ ಎಮೋಜಿಗಳಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಪ್ರತಿ ವರ್ಷ ಜುಲೈ 17 ರಂದು ವಿಶ್ವ ಎಮೋಜಿ ದಿನವನ್ನು (World Emoji Day) ಆಚರಿಸಲಾಗುತ್ತದೆ. ವಿಶ್ವ ಎಮೋಜಿ ದಿನದ ಇತಿಹಾಸವೇನು? ವಿಶ್ವ ಎಮೋಜಿ ಇತಿಹಾಸದತ್ತ ಕಣ್ಣಾಯಿಸಿದರೆ ಎಮೋಜಿಯನ್ನು ಮೊದಲು ಎಮೋಟಿಕಾನ್ ಎಂದು ಕರೆಯಲಾಗುತ್ತಿತ್ತು. ಆ…

Read More

First Ashadha Puje at Chamundeshwari Temple Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ – Kannada News | Chamundeshwari Temple Ashadha Friday Live: Special Puja Rituals and KSRTC Bus Services

ಮೈಸೂರು, ಜುಲೈ 17: ಇಂದು ಆಶಾಢ ಮಾಸದ ಮೊದಲ ಶುಕ್ರವಾರವಾದ್ದರಿಂದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿದೆ. ಭಕ್ತರ ಅನುಕೂಲಕ್ಕಾಗಿ ಇಂದು ಬೆಳಗ್ಗೆ 6.30ರಿಂದಲೇ ಲಲಿತ್ ಮಹಲ್ ಹೆಲಿಪ್ಯಾಡ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ವಿಶೇಷ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವ್ಯವಸ್ಥೆಯಿಂದಾಗಿ ಭಕ್ತರಿಗೆ ಯಾವುದೇ ಅನನುಕೂಲವಿಲ್ಲದೆ ದೇವಾಲಯಕ್ಕೆ ತಲುಪಲು ಸಾಧ್ಯವಾಯಿತು. ದೇವಿಯ ವಿಶೇಷ ಪೂಜೆಯ ನೇರಪ್ರಸಾರ ಇಲ್ಲಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More