ಪಾಕಿಸ್ತಾನ ಸೇನೆಗೆ ಆಘಾತ: ಮಿಲಿಟರಿ ಬೆಂಗಾವಲು ಪಡೆ ಮೇಲೆ ಪ್ರತ್ಯೇಕತಾವಾದಿಗಳ ದಾಳಿ, 45 ಸೈನಿಕರು ಸಾವು – Kannada News | Balochistan Attack: BLA Claims 45 plus Pakistani Soldiers Killed in Mastung Convoy Ambush
ಬಲೂಚಿಸ್ತಾನ, ಜುಲೈ 17: ಪಾಕಿಸ್ತಾನ(Pakistan)ದ ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಭೀಕರ ಶಸ್ತ್ರಸಜ್ಜಿತ ದಾಳಿ ನಡೆದಿದೆ. ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ಉಗ್ರಗಾಮಿ ಸಂಘಟನೆಯು ಈ ಸಂಘಟಿತ ದಾಳಿಯ ಹೊಣೆ ಹೊತ್ತುಕೊಂಡಿದ್ದು, ತನ್ನ ಗಣ್ಯ ‘ಫತಾಹ್ ಸ್ಕ್ವಾಡ್’ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 45 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ . ಖಾದ್ ಕೂಚಾ ಎಂಬ ಪ್ರದೇಶದ ಹೆದ್ದಾರಿಯಲ್ಲಿ ರಜೆಯಲ್ಲಿದ್ದ ಮಿಲಿಟರಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್‌ಗಳನ್ನು ಗುರಿಯಾಗಿಸಿಕೊಂಡು ಡಜನ್‌ಗಟ್ಟಲೆ ಶಸ್ತ್ರಸಜ್ಜಿತ…