ಯಾದಗಿರಿ: ಮಳೆ ಬಂದರೆ ಕುರಿಗಳಂತೆ ಒಂದೇ ರೂಮಲ್ಲಿ 5 ತರಗತಿಯ ವಿದ್ಯಾರ್ಥಿಗಳು; ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರ ಆಕ್ರೋಶ – Kannada News | Karnataka Education Crisis: Yadgir Govt School Teaches 5 Grades in One Room

ಯಾದಗಿರಿ, ಜು.9: ಸರ್ಕಾರ “ಸರ್ವರಿಗೂ ಶಿಕ್ಷಣ”, “ಸರ್ಕಾರಿ ಶಾಲೆ ಉಳಿಸಿ” ಎಂದು ಕೋಟಿ ಕೋಟಿ ರೂಪಾಯಿ ಜಾಹೀರಾತು ನೀಡುತ್ತವೆ. ಆದರೆ ರಿಯಾಲಿಟಿ ಮಾತ್ರ ಬೇರೆಯೇ ಇರುತ್ತದೆ. ಬಡ ಮಕ್ಕಳ ಅಕ್ಷರ ಕಲಿಯುವ ಜಾಗ ಹೇಗಿರುತ್ತೆ ಅನ್ನೋದಕ್ಕೆ ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಜಿಲ್ಲೆಯ ಈ ಶಾಲೆಯೇ ಸಾಕ್ಷಿ. ಇಲ್ಲಿ ಒಂದೇ ರೂಮಿನಲ್ಲಿ 1 ರಿಂದ 5ನೇ ತರಗತಿಯ 70 ಮಕ್ಕಳು ಒಟ್ಟಿಗೆ ಕುಳಿತು ಅ ಆ ಇ ಈ ಕಲಿಯುತ್ತಿದ್ದಾರೆ. ಇದಕ್ಕಿಂತ ದೊಡ್ಡ ವಿಪರ್ಯಾಸ ಬೇಕಾ? ಸರ್ಕಾರಿ ಶಾಲೆಗಳ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಪೋಷಕರು ಯಾಕೆ? ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಯಾವ ಕಾರಣಕ್ಕೆ ಸೇರಿಸುತ್ತಿದ್ದಾರೆ ಎಂಬುದನ್ನು ಇದು ಹೇಳುತ್ತದೆ. ಇದರ ನಡುವೆ ಸರ್ಕಾರ ಮೊಂಡುವಾದ ಮಕ್ಕಳು ಬಂದ್ರೆ ಶಾಲೆಗಳನ್ನು ಅಭಿವೃದ್ಧಿ ಮಾಡಬಹುದು ಎಂದು. ಆದರೆ ಮಕ್ಕಳು ಇರುವ ಶಾಲೆಗಳ ಗತಿ ಹೀಗಿದೆ ಎಂದು ಪೋಷಕರ ವಾದ.

ಗುಂಡಲೂರ ಗ್ರಾಮದ ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಇಡೀ ಶಾಲೆಗೆ ಇರೋದು ಕೇವಲ ಎರಡೇ ಎರಡು ಕೋಣೆಗಳು! ಅದರಲ್ಲಿ ಒಂದು ಕೋಣೆಯನ್ನು ಬಿಸಿಯೂಟ ತಯಾರಿಸಲು ಬಳಸಲಾಗುತ್ತಿದೆ. ಇನ್ನುಳಿದ ಕೇವಲ ಒಂದು ಕೋಣೆಯಲ್ಲಿ ಶಾಲೆಯ ಆಫೀಸ್ ರೂಮ್, ಶಿಕ್ಷಕರ ಕುರ್ಚಿ ಹಾಗೂ 5 ತರಗತಿಗಳ ಐದೂ ಬೋರ್ಡ್‌ಗಳನ್ನು ಇಡಲಾಗಿದೆ.

ಒಂದನೇ ತರಗತಿಯ ಮಗುವಿಗೆ ಶಿಕ್ಷಕರು ಪಾಠ ಮಾಡುವಾಗ, ಪಕ್ಕದಲ್ಲೇ ಕುಳಿತಿರುವ 5ನೇ ತರಗತಿಯ ವಿದ್ಯಾರ್ಥಿ ಕೂಡ ಅದನ್ನೇ ಕೇಳಿಸಿಕೊಳ್ಳಬೇಕು. ಮಳೆ ಇಲ್ಲದ ದಿನಗಳಲ್ಲಿ ಮಕ್ಕಳನ್ನು ಮರದ ನೆರಳಿನಲ್ಲಿ ಕೂರಿಸಿ ಪಾಠ ಮಾಡಲಾಗುತ್ತದೆ. ಆದರೆ ಮಳೆ ಬಂತೆಂದರೆ ಸಾಕು, ಎಲ್ಲ 70 ಮಕ್ಕಳನ್ನು ಕುರಿಗಳಂತೆ ಒಂದೇ ಕೋಣೆಯಲ್ಲಿ ಕೂರಿಸಲಾಗುತ್ತಿದೆ. ಇಂತಹ ಗದ್ದಲದ ವಾತಾವರಣದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಹೇಗೆ ಎಂಬುದು ಪೋಷಕರ ಪ್ರಶ್ನೆ.

ಇದನ್ನೂ ಓದಿ: ಅರಬೈಲ್ ಘಾಟ್‌ನಲ್ಲಿ ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ; ಧಾರವಾಡ ಮೂಲದ ಆರು ಜನ ಸ್ಥಳದಲ್ಲೇ ಸಾವು, ಮೂವರು ಗಂಭೀರ

ಇನ್ನು ಶಾಲೆಯ ಶಿಕ್ಷಕರ ಕೊರತೆ ಮತ್ತೊಂದು ದೊಡ್ಡ ತಲೆನೋವು. ಇಡೀ ಶಾಲೆಗೆ ಇರೋದು ಒಬ್ಬರೇ ಒಬ್ಬರು ಖಾಯಂ ಶಿಕ್ಷಕರು. ಇಲಾಖೆಯ ಕಚೇರಿ ಕೆಲಸ, ದತ್ತಾಂಶ ಅಪ್‌ಲೋಡ್, ಸಭೆ-ಸಮಾರಂಭ ಅಂತ ಇವರ ಸಮಯ ಕಚೇರಿ ಕೆಲಸಕ್ಕೇ ಮುಗಿದು ಹೋಗುತ್ತದೆ. ಸದ್ಯಕ್ಕೆ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆಯಾದರೂ, ಮೂಲಭೂತ ಸೌಕರ್ಯಗಳಿಲ್ಲದೆ ಅವರೂ ಪರದಾಡುತ್ತಿದ್ದಾರೆ. ಒಬ್ಬರು ಕೋಣೆಯ ಒಳಗೆ ಪಾಠ ಮಾಡಿದರೆ, ಮತ್ತೊಬ್ಬರು ಮರದ ಕೆಳಗೆ ಮಕ್ಕಳನ್ನು ಕೂರಿಸಬೇಕಾದ ಅನಿವಾರ್ಯತೆ ಇದೆ.

ಬೇರೆ ಶಾಲೆಗಳತ್ತ ಮುಖ ಮಾಡಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಶಿಕ್ಷಣ ಇಲಾಖೆಯ ಈ ಉದಾಸೀನ ಧೋರಣೆಯಿಂದ ಬೇಸತ್ತಿರುವ ಗ್ರಾಮಸ್ಥರು ಹಾಗೂ ಪೋಷಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಶಾಲೆಯ ದುಸ್ಥಿತಿಯಿಂದಾಗಿ ಕಳೆದ ಕೇವಲ ಒಂದು ವರ್ಷದಲ್ಲಿಯೇ 20ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯನ್ನು ಬಿಟ್ಟಿದ್ದಾರೆ. ಬಡವರಾದರೂ ಪರವಾಗಿಲ್ಲ ಸಾಲ ಸೋಲ ಮಾಡಿ ಪಕ್ಕದ ಗ್ರಾಮದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗುಂಡಲೂರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡಬೇಕಿದೆ. ಇಲ್ಲದಿದ್ದರೆ ಬಡ ಮಕ್ಕಳ ಭವಿಷ್ಯ ಅಂಧಕಾರಕ್ಕೆ ದೂಡಲ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಹ ಆಟಗಾರನ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಅಫ್ಘಾನ್ ಆಟಗಾರರು! – Kannada News | Afghan Cricketers Carry Mortal Remains of Teammate Shapoor Zadran

ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ಅಧಿಕಾರಿಗಳು, ಸ್ಟಾರ್ ಆಟಗಾರರಾದ ಇಬ್ರಾಹಿಂ ಝದ್ರಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಝ್ ಸೇರಿದಂತೆ ಹಾಲಿ ಮತ್ತು ಮಾಜಿ ಸಹ ಆಟಗಾರರು ಹಾಗೂ ಸರ್ಕಾರಿ ಗಣ್ಯರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಣ್ಣೀರಿನ ವಿದಾಯ ಹೇಳಿದರು. (PC: ACB)

Source link

‘ರಾಕಾ’ ಚಿತ್ರದಲ್ಲಿ ನಟಿಸಲು ಪ್ರೀತಿ ಮುಕುಂದನ್​ಗೆ ಆಫರ್ ನೀಡಿದ್ದ ಅಟ್ಲಿ; ಆಮೇಲೇನಾಯ್ತು? – Kannada News | Atlee Raka Movie Why Preethi Mukundan Missed Out on Allu Arjun Deepika Film Role

ಸ್ಟಾರ್ ನಿರ್ದೇಶಕ ಅಟ್ಲಿ ಮತ್ತು ಅಲ್ಲು ಅರ್ಜುನ್ (Allu Arjun) ಕಾಂಬಿನೇಷನ್‌ನ ‘ರಾಕಾ’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಪ್ರೆಗ್ನೆಂಟ್ ಆಗಿದ್ದರೂ ಅವರು ಶೂಟ್​​ನಲ್ಲಿ ಭಾಗಿ ಆಗಿದ್ದರು. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ನಡುವೆ ನಿರ್ದೇಶಕ ಅಟ್ಲಿ ಅವರು ತಮಗೆ ಇಷ್ಟವಾದ ಒಬ್ಬ ನಟಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಲು ಬಯಸಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ.

ತಮಿಳಿನ ‘ಇದಯಂ ಮುರಳಿ’ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಅಟ್ಲಿ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಪ್ರೀತಿ ನಟಿಸಿದ್ದಾರೆ. ಅವರ ನಟನೆ ಮತ್ತು ನೃತ್ಯವನ್ನು ಅಟ್ಲಿ ಮುಕ್ತಕಂಠದಿಂದ ಶ್ಲಾಘಿಸಿದರು. ವೇದಿಕೆಯಲ್ಲಿ ನಟಿ ಪ್ರೀತಿ ಅವರನ್ನು ಉದ್ದೇಶಿಸಿ ಮಾತನಾಡಿದ ಅಟ್ಲಿ, ‘ಪ್ರೀತಿ, ನನಗೆ ನಿಮ್ಮ ನಟನೆ ಮತ್ತು ಡ್ಯಾನ್ಸ್ ತುಂಬಾ ಇಷ್ಟ. ನಾನು ನಿಮ್ಮನ್ನು ನನ್ನ ಹೊಸ ಸಿನಿಮಾಗೆ (ರಾಕಾ) ಆಯ್ಕೆ ಮಾಡಲು ಬಯಸಿದ್ದೆ. ಆದರೆ ನಿಮ್ಮ ಮ್ಯಾನೇಜರ್ ಬಳಿ ಕೇಳಿದಾಗ ನೀವು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದೀರಿ ಎಂದು ತಿಳಿಸಿದರು. ನಿಮಗೆ ಡೇಟ್ಸ್ ಇಲ್ಲದ ಕಾರಣ ಈ ಆಫರ್ ಮಿಸ್ ಆಯಿತು’ ಎಂದು ಹೇಳಿದರು.

‘ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮುಖ್ಯ ನಟಿಯಾಗಿದ್ದಾರೆ. ಅಟ್ಲಿ ಅವರು ಪ್ರೀತಿ ಮುಕುಂದನ್ ಅವರಿಗೆ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಪ್ರೀತಿ ಅವರಿಗೆ ಸಿಗದ ಆ ಪಾತ್ರ ಈಗ ಮಲಯಾಳಂ ನಟಿ ಫೆಮಿನಾ ಜಾರ್ಜ್ ಪಾಲಾಗಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಸಿನಿಮಾ, ಶೂಟಿಂಗ್​ಗೆ ಹಾಜರಾದ ರಶ್ಮಿಕಾ ಮಂದಣ್ಣ

ಯಾರು ಈ ಪ್ರೀತಿ ಮುಕುಂದನ್?

ಪ್ರೀತಿ ಮುಕುಂದನ್ ಅವರು ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ನಟಿಸಿದ್ದಾರೆ. ‘ಓಂ ಭೀಮ್ ಬುಶ್’ ಅವರ ಮೊದಲ ಸಿನಿಮಾ. 2024ರಲ್ಲಿ ಸಿನಿಮಾ ರಿಲೀಸ್ ಆಯಿತು. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘ಬ್ಲಾಸ್ಟ್’ ಭಾರೀ ಮೆಚ್ಚುಗೆ ಪಡೆಯಿತು. ಬಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಇವರಿಗೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಸಿನಿಮಾದಲ್ಲಿ ನಟಿಸುವ ದೊಡ್ಡ ಅವಕಾಶ ಕೈತಪ್ಪಿ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಯೋಧ್ಯೆ ರಾಮ ಮಂದಿರದಲ್ಲಿ ಮಹಾವಂಚನೆ ಬಯಲು:ಕಾಣಿಕೆ ಕಳ್ಳತನ ಮಾತ್ರವಲ್ಲ, ನಕಲಿ ರಶೀದಿ ನೀಡಿ ಭಕ್ತರಿಗೆ ಕೋಟಿ ಕೋಟಿ ನಾಮ – Kannada News | Ayodhya Ram Mandir Scam: Fake Receipts Expose Multi Crore Donation Fraud by Staff

ಅಯೋಧ್ಯೆ, ಜುಲೈ 09: ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ(Ram Mandir)ದ ಕಾಣಿಕೆ ಕಳ್ಳತನದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಇದರಲ್ಲಿ ಮತ್ತೊಂದು ಆಘಾತಕಾರಿ ಮಹಾವಂಚನೆ ಬಯಲಾಗಿದೆ. ದೇವಸ್ಥಾನದ ಕೌಂಟರ್‌ಗಳಿಂದ ಹಣ ಕದಿಯುತ್ತಿದ್ದ ಸಿಬ್ಬಂದಿ, ನೇರವಾಗಿ ಭಕ್ತರನ್ನೇ ವಂಚಿಸಲು ನಕಲಿ ದೇಣಿಗೆ ರಶೀದಿ ಜಾಲವನ್ನು ನಡೆಸುತ್ತಿದ್ದರು ಎಂಬ ಕರಾಳ ಸತ್ಯವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಭಕ್ತರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಸಿಬ್ಬಂದಿ
ವಿಚಾರಣೆಯ ವೇಳೆ ಬಂಧಿತ ಆರೋಪಿಗಳು ನೀಡಿರುವ ಹೇಳಿಕೆಗಳು ಪೊಲೀಸರನ್ನೇ ಬೆಚ್ಚಿಬೀಳಿಸಿವೆ. ಭಕ್ತರು ರಾಮ ಮಂದಿರಕ್ಕೆ ದೊಡ್ಡ ಪ್ರಮಾಣದ ದೇಣಿಗೆ ನೀಡಲು ಮುಂದೆ ಬಂದಾಗ, ಆರೋಪಿಗಳು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಿನಲ್ಲೇ ಇದ್ದ ನಕಲಿ ರಶೀದಿ ಪುಸ್ತಕಗಳನ್ನು ಬಳಸಿ ಹಣ ವಸೂಲಿ ಮಾಡುತ್ತಿದ್ದರು. ಭಕ್ತರಿಗೆ ಅದು ಅಸಲಿ ರಶೀದಿ ಎಂದೇ ಅನಿಸುತ್ತಿತ್ತು, ಆದರೆ ಆ ಹಣ ಟ್ರಸ್ಟ್ ಖಾತೆಗೆ ಹೋಗುವ ಬದಲು ನೇರವಾಗಿ ಆರೋಪಿಗಳ ಜೇಬು ಸೇರುತ್ತಿತ್ತು.

ಪೊಲೀಸರು ಈಗ ಆರೋಪಿಗಳ ಬಳಿಯಿದ್ದ ಹಳೆಯ ಆವೃತ್ತಿಯ ನಕಲಿ ರಶೀದಿ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದು, ಇದುವರೆಗೆ ಎಷ್ಟು ಕೋಟಿ ರೂಪಾಯಿ ವಂಚನೆ ನಡೆದಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರದ ಬೆನ್ನಲ್ಲೇ ಮಧ್ಯಪ್ರದೇಶದ ಬಾಗಲಾಮುಖಿ ದೇವಸ್ಥಾನದಲ್ಲೂ ಭುಗಿಲೆದ್ದ ದೇಣಿಗೆ ಕಳ್ಳತನ ವಿವಾದ

ಕದ್ದ ಹಣದಲ್ಲಿ ಸೈಟು, ಐಷಾರಾಮಿ ಕಾರು ಖರೀದಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತಿನ್ನು ಯಾದವ್, ಲವ್ ಕುಶ್ ಮಿಶ್ರಾ, ಕರುಣೇಶ್ ಪಾಂಡೆ ಮತ್ತು ಅನುಕಲ್ಪ್ ಮಿಶ್ರಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಕದ್ದ ಹಣ ಏನಾಯಿತು ಎಂದು ಜಾಲಾಡುತ್ತಿದ್ದಾರೆ.

ಕಳ್ಳತನ ಮತ್ತು ವಂಚನೆಯ ಹಣದಿಂದ ಆರೋಪಿಗಳು ಅಯೋಧ್ಯೆ ಸುತ್ತಮುತ್ತ ಬೆಲೆಬಾಳುವ ಜಮೀನು, ಐಷಾರಾಮಿ ವಾಹನಗಳು ಮತ್ತು ಮನೆಗಳನ್ನು ಖರೀದಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮುಖ್ಯ ಆರೋಪಿ ಅನುಕಲ್ಪ್ ಮಿಶ್ರಾ ಇತ್ತೀಚೆಗೆ ಖರೀದಿಸಿರುವ ಹೊಸ ಮನೆ ಮತ್ತು ಕಾರಿನ ಬ್ಯಾಂಕ್ ವಹಿವಾಟುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.

ಸಿಸಿಟಿವಿ ಸಾಕ್ಷ್ಯ ಹಾಗೂ ಹೆಚ್ಚುವರಿ ಮಾಹಿತಿ
ರಾಮ ಮಂದಿರದ ಗರ್ಭಗುಡಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿಯೇ ತಮ್ಮ ಪ್ಯಾಂಟ್ ಮತ್ತು ಸಾಕ್ಸ್‌ಗಳ ಒಳಗೆ ನೋಟುಗಳ ಕಟ್ಟುಗಳನ್ನು ಬಚ್ಚಿಟ್ಟುಕೊಳ್ಳುತ್ತಿದ್ದ ದೃಶ್ಯಗಳು ಪತ್ತೆಯಾಗಿದ್ದವು. ಕೇವಲ 45 ದಿನಗಳಲ್ಲಿ 70 ಕ್ಕೂ ಹೆಚ್ಚು ಬಾರಿ ಹಣ ಕದಿಯಲಾಗಿತ್ತು, ಈ ವಿಷಯ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಈಗ ನಕಲಿ ರಶೀದಿ ದಂಧೆಯೂ ಬಯಲಿಗೆ ಬಂದಿರುವುದರಿಂದ, ರಾಮ ಮಂದಿರ ಟ್ರಸ್ಟ್ ತನ್ನ ಭದ್ರತೆ ಮತ್ತು ಆಡಿಟಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲ್ ಹಾಗೂ ಕಠಿಣಗೊಳಿಸಲು ನಿರ್ಧರಿಸಿದೆ. ಇನ್ಮುಂದೆ ಕೇವಲ ಕ್ಯೂಆರ್ ಕೋಡ್ ಮತ್ತು ಬ್ಯಾಂಕ್ ವರ್ಗಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:43 am, Thu, 9 July 26

Source link

ಮೆಲ್ಬೋರ್ನ್ ರೆನೆಗೇಡ್ಸ್ vs ಪರ್ತ್ ಸ್ಕಾರ್ಚರ್ಸ್: ಚೆನ್ನೈನಲ್ಲಿ ಬಿಬಿಎಲ್ ಪಂದ್ಯ! – Kannada News | Melbourne Renegades Vs Perth Scorchers on 12th December at the Chepauk Stadium

ಆಸ್ಟ್ರೇಲಿಯಾದ ಜನಪ್ರಿಯ ಬಿಗ್ ಬ್ಯಾಷ್ ಲೀಗ್​ (BBL) ಟಿ20 ಟೂರ್ನಿಯ 16ನೇ ಸೀಸನ್​ನ ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ  ನಡೆಯಲಿರುವುದು ಖಚಿತವಾಗಿದೆ. 2026ರ ಡಿಸೆಂಬರ್ 12 ರಂದು ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಆಯೋಜಿಸುತ್ತಿರುವ ಟೂರ್ನಿಯೊಂದರ ಪಂದ್ಯವು ಭಾರತದಲ್ಲಿ ನಡೆಯುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲು. ಭಾರತದ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಮತ್ತು ಬಿಬಿಎಲ್ ಟೂರ್ನಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕ್ರಿಕೆಟ್ ಆಸ್ಟ್ರೇಲಿಯಾ ಈ ಮಾಸ್ಟರ್ ಪ್ಲಾನ್ ಮಾಡಿದೆ.

ಅಧಿಕೃತ ಘೋಷಣೆ ಯಾವಾಗ?

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಜಂಟಿಯಾಗಿ ಈ ಮಹತ್ವದ ಪಂದ್ಯವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಪ್ರಸ್ತುತ ಮಾಹಿತಿ ಪ್ರಕಾರ, ಶುಕ್ರವಾರದೊಂದು ಬಿಗ್ ಬ್ಯಾಷ್ ಲೀಗ್ ಪಂದ್ಯವು ಭಾರತದಲ್ಲಿ ನಡೆಯುವುದನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಯಾವ ತಂಡದ್ದು ಹೋಮ್ ಗ್ರೌಂಡ್?

ಈ ಪಂದ್ಯದಲ್ಲಿ ಎರಡು ವಿದೇಶಿ ತಂಡಗಳು ಕಣಕ್ಕಿಳಿಯುತ್ತಿರುವುದರಿಂದ ಚೆನ್ನೈ ಯಾವ ತಂಡದ್ದು ಹೋಮ್ ಗ್ರೌಂಡ್ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಮೆಲ್ಬೋರ್ನ್ ರೆನೆಗೇಡ್ಸ್.

ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಆತಿಥೇಯ ತಂಡವಾಗಿ ಕಣಕ್ಕಿಳಿಯಲಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ತನ್ನ ಒಂದು ಹೋಮ್ ಪಂದ್ಯವನ್ನು ಭಾರತದಲ್ಲಿ ಆಡಲು ನಿರ್ಧರಿಸಿದೆ.

ಚೆಪಾಕ್ ಸವಾಲು!

ಚೆನ್ನೈನ ಚೆಪಾಕ್ ಮೈದಾನವು ಸಾಂಪ್ರದಾಯಿಕವಾಗಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತದೆ. ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಆಡಿ ರೂಢಿಯಿರುವ ಮೆಲ್ಬೋರ್ನ್ಸ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳ ಆಟಗಾರರಿಗೆ ಚೆಪಾಕ್​ನ ಟರ್ನಿಂಗ್ ಟ್ರ್ಯಾಕ್ ಹೊಸ ಸವಾಲೊಡ್ಡಲಿದೆ. ಈ ಸವಾಲನ್ನು ಮೆಟ್ಟಿ ನಿಂತು ಮೊದಲ ಮ್ಯಾಚ್​ನಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಭಾರತದಲ್ಲಿ ಟೂರ್ನಿ ಆಯೋಜಿಸುತ್ತಿರುವುದು ಯಾಕೆ?

ವಿಶ್ವ ಕ್ರಿಕೆಟ್‌ನಲ್ಲಿ ಭಾರತವು ಅತಿ ಹೆಚ್ಚು ವೀಕ್ಷಕರನ್ನು ಮತ್ತು ಬಲಿಷ್ಠ ಆರ್ಥಿಕ ಮಾರುಕಟ್ಟೆಯನ್ನು ಹೊಂದಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ನೇರವಾಗಿ ತಲುಪುವ ಮೂಲಕ ಬಿಬಿಎಲ್ ಟೂರ್ನಿಯ ಡಿಜಿಟಲ್ ವೀಕ್ಷಣೆ ಮತ್ತು ಜಾಗತಿಕ ಜನಪ್ರಿಯತೆ ಹಾಗೂ ಪ್ರಾಯೋಜಕತ್ವಗಳನ್ನು  ಗಣನೀಯವಾಗಿ ಹೆಚ್ಚಿಸಿಕೊಳ್ಳುವುದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ತನ್ನ ಅಧೀನದಲ್ಲಿರುವ ಬಿಬಿಎಲ್ ಫ್ರಾಂಚೈಸಿಗಳನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಭಾರತದಲ್ಲಿ ಪಂದ್ಯ ಆಯೋಜಿಸುವುದರಿಂದ ಭಾರತೀಯ ಹೂಡಿಕೆದಾರರು ಮತ್ತು ಐಪಿಎಲ್ ಫ್ರಾಂಚೈಸಿ ಮಾಲೀಕರ ಗಮನ ಸೆಳೆಯಲು ಸುಲಭವಾಗುತ್ತದೆ. ಆ ಮೂಲಕ ಬಿಬಿಎಲ್ ತಂಡಗಳಿಗೆ ದೊಡ್ಡ ಮಟ್ಟದ ವಿದೇಶಿ ಹೂಡಿಕೆ ತರಲು ಕ್ರಿಕೆಟ್​ ಆಸ್ಟ್ರೇಲಿಯಾದ ಪ್ಲಾನ್ ರೂಪಿಸಿದೆ.

Source link

ದೆಹಲಿಯ ಭಾರತ್ ಮಂಟಪದಲ್ಲಿ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಟ್ರೇಲರ್ ಲಾಂಚ್? – Kannada News | Ramayana Trailer Launch Event To Take Place At Bharat Mandapam New Delhi

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಪ್ರಾಜೆಕ್ಟ್ ಆದ ‘ರಾಮಾಯಣ’ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಈ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್ ಜುಲೈ 18 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ವರದಿಯಾಗಿದೆ. ಈಗ ಈ ಟ್ರೇಲರ್ ಲಾಂಚ್ ಕಾರ್ಯಕ್ರಮ ಎಲ್ಲಿ ನಡೆಯಲಿದೆ ಎನ್ನುವ ಬಿಗ್ ಅಪ್‌ಡೇಟ್ ಸಿಕ್ಕಿದೆ. ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಲಾಂಚ್ ದೆಹಲಿಯಲ್ಲಿ ನಡೆಯಲಿದೆ. ದೆಹಲಿಯ ಐತಿಹಾಸಿಕ ಮತ್ತು ಪ್ರತಿಷ್ಠಿತ ತಾಣವಾದ ‘ಭಾರತ್ ಮಂಟಪ’ದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ‘ವೆರೈಟಿ’ ನಿಯತಕಾಲಿಕೆ ವರದಿ ಮಾಡಿದೆ.

ದೊಡ್ಡ ಮಟ್ಟದ ಆಯೋಜನೆ:

ರಾಮಾಯಣವನ್ನು ಮಹಾಕಾವ್ಯ ಎಂದು ಪರಿಗಣಿಸಲಾಗಿದೆ. ಈ ಕಥೆಯನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಚಿತ್ರದ ಮೌಲ್ಯ ಮತ್ತು ಪ್ರಾಮುಖ್ಯತೆಗೆ ತಕ್ಕಂತೆ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಅತ್ಯಂತ ಭವ್ಯವಾಗಿ ನಡೆಸಲು ಸಿದ್ಧತೆ ನಡೆದಿದೆ. ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗವಹಿಸಲಿದ್ದಾರೆ. ಅವರೊಂದಿಗೆ ಚಿತ್ರದ ಪ್ರಮುಖ ತಾರಾಗಣ ಕೂಡ ಉಪಸ್ಥಿತರಿರಲಿದೆ ಎಂದು ವರದಿ ಆಗಿದೆ.

ದೊಡ್ಡ ತಾರಾಗಣ ಹೊಂದಿರುವ ಸಿನಿಮಾ:

ಈ ಚಿತ್ರದಲ್ಲಿ ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್, ಸನ್ನಿ ಡಿಯೋಲ್, ರವಿ ದುಬೆ, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಮತ್ತು ಕುನಾಲ್ ಕಪೂರ್ ನಟಿಸಿದ್ದಾರೆ. ಸಿನಿಮಾಗೆ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಜಂಟಿಯಾಗಿ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ಜುಲೈ 18ರಂದೇ ಬಿಡುಗಡೆ ಆಗುತ್ತಾ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್?

ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರವನ್ನು ಭಾರತದಾದ್ಯಂತ ಬಿಡುಗಡೆ ಮಾಡುತ್ತಿದೆ. ಈ ದೃಶ್ಯ ವೈಭವದ ಸಿನಿಮಾ 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಜಾಗತಿಕವಾಗಿ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ದೀಪಾವಳಿಗೆ ತೆರೆಗೆ ಬರುತ್ತಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ, ಭಾರತಕ್ಕೆ ಸಿಗಲಿದೆಯೇ ಜಾಗತಿಕ ಇಂಧನ ಬಲ ತರುವ ‘ಯುರೇನಿಯಂ’? – Kannada News | PM Modi in Australia: India’s Global Energy Push with Uranium Deal

ಮೆಲ್ಬೋರ್ನ್, ಜುಲೈ 09: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮೂರು ರಾಷ್ಟ್ರಗಳ ಅಧಿಕೃತ ಪ್ರವಾಸದ ಎರಡನೇ ಹಂತವಾಗಿ ಗುರುವಾರ ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಾಗತಿಕ ಪೂರೈಕೆ ಸರಪಳಿ ಅಡಚಣೆ ಮತ್ತು ಇಂಧನ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನೈಸರ್ಗಿಕ ಹಾಗೂ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗಿ ಮುಂದುವರೆಯಲಿದೆ ಎಂದು ಎರಡೂ ದೇಶಗಳ ನಾಯಕರು ಘೋಷಿಸಿದ್ದಾರೆ.

‘ಮಾ ತುಜೆ ಸಲಾಮ್’ ಗೀತೆಗೆ ಮನಸೋತ ಮೋದಿ!

ಆಸ್ಟ್ರೇಲಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಲ್ಲಿನ ಅನಿವಾಸಿ ಭಾರತೀಯರು ಅಭೂತಪೂರ್ವ ಸ್ವಾಗತ ನೀಡಿದರು. ಸ್ವಾಗತ ಸಮಾರಂಭದಲ್ಲಿ ಆಸ್ಟ್ರೇಲಿಯನ್-ಭಾರತ ಆರ್ಕೆಸ್ಟ್ರಾ ತಂಡವು ಪ್ರಸ್ತುತಪಡಿಸಿದ ‘ಮಾ ತುಜೆ ಸಲಾಮ್’  ಸಂಗೀತಕ್ಕೆ ಪ್ರಧಾನಿ ಮನಸೋತರು.
ನಾವು ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಆಸ್ಟ್ರೇಲಿಯಾದ ಮಣ್ಣಿನಲ್ಲಿ ಮೂಡಿಬಂದ ಈ ಸಂಗೀತ ಅದರ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ, ಎಂದು ಮೋದಿ ಶ್ಲಾಘಿಸಿದರು.

ಇಂಧನ ಕ್ರಾಂತಿಗೆ ‘ಯುರೇನಿಯಂ’ ಒಪ್ಪಂದದ ಆಸೆ

ಆಸ್ಟ್ರೇಲಿಯನ್ ಮೀಡಿಯಾಗಳ ವರದಿ ಪ್ರಕಾರ, ಭಾರತದ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಅಗತ್ಯವಿರುವ ಯುರೇನಿಯಂ ರಫ್ತು ಒಪ್ಪಂದವು ಈ ಪ್ರವಾಸದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. 2014ರಲ್ಲೇ ಉಭಯ ದೇಶಗಳ ನಡುವೆ ಪರಮಾಣು ಒಪ್ಪಂದವಾಗಿದ್ದರೂ, ಕಟ್ಟುನಿಟ್ಟಿನ ನಿಯಮಗಳಿಂದಾಗಿ ರಫ್ತು ಸೀಮಿತವಾಗಿತ್ತು. ಈಗ ಇಂಧನ ಉತ್ಪಾದನೆಯಂತಹ ಶಾಂತಿಯುತ ಉದ್ದೇಶಗಳಿಗಾಗಿ ಆಸ್ಟ್ರೇಲಿಯಾ ಭಾರತಕ್ಕೆ ಯುರೇನಿಯಂ ನೀಡಲು ಒಲವು ತೋರಿದೆ.

ರಫ್ತು ದ್ವಿಗುಣಗೊಳಿಸಿದ ಇಸಿಟಿಎ ಒಪ್ಪಂದ

2022 ರಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ಸಹಿ ಹಾಕಲಾದ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ನಂತರ ಭಾರತದಿಂದ ಆಸ್ಟ್ರೇಲಿಯಾಕ್ಕೆ ಆಗುವ ರಫ್ತು ಪ್ರಮಾಣ ದುಪ್ಪಟ್ಟಾಗಿದೆ. ಪ್ರಸ್ತುತ ಚೀನಾ, ಜಪಾನ್, ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಂತರ ಭಾರತವು ಆಸ್ಟ್ರೇಲಿಯಾದ 5ನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.

ಮತ್ತಷ್ಟು ಓದಿ: ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿ ಭಾಷಣ; ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಮೋದಿ ಮೋದಿ ಕೂಗು

ಗುರುವಾರ ಸಂಜೆ ಮೆಲ್ಬೋರ್ನ್‌ನ ಐತಿಹಾಸಿಕ ಕ್ರೀಡಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಸಹಸ್ರಾರು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸದ್ಯ ಸುಮಾರು 10 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಜನರಿದ್ದಾರೆ. ಕೆಲವು ಪ್ರತಿಭಟನೆಗಳ ಸುಳಿವು ಸಿಕ್ಕಿರುವುದರಿಂದ ಕ್ರೀಡಾಂಗಣದ ಸುತ್ತಲೂ ರಕ್ಷಣಾ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಇಂಡೋನೇಷ್ಯಾದಿಂದ ಆಸ್ಟ್ರೇಲಿಯಾಕ್ಕೆ ನೇರ ಪಯಣ

ಇದಕ್ಕೂ ಮುನ್ನ ಇಂಡೋನೇಷ್ಯಾದಲ್ಲಿ ಯಶಸ್ವಿ ಪ್ರವಾಸ ಮುಗಿಸಿದ್ದ ಮೋದಿ, ಅಲ್ಲಿನ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ರಕ್ಷಣೆ, ಡಿಜಟಲ್ ತಂತ್ರಜ್ಞಾನ ಹಾಗೂ ಕಡಲ ಭದ್ರತೆ ಸೇರಿದಂತೆ 14 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಅಲ್ಲದೆ ಪ್ರಸಿದ್ಧ ಪ್ರಂಬನನ್ ಶಿವ ದೇವಾಲಯದ ಜಂಟಿ ಸಂರಕ್ಷಣಾ ಯೋಜನೆಗೂ ಚಾಲನೆ ನೀಡಿದ್ದರು. ಆಸ್ಟ್ರೇಲಿಯಾದಲ್ಲಿ ತಮ್ಮ ರಾಜತಾಂತ್ರಿಕ ಕಾರ್ಯಕ್ರಮಗಳನ್ನು ಮುಗಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ ಕೊನೆಯ ಹಂತವಾಗಿ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:31 am, Thu, 9 July 26

Source link

ಸಂಜು ಫಾರ್ಮ್​ ಪ್ರಶ್ನಿಸುವವರು, ತಿಲಕ್ ವಿಷಯದಲ್ಲಿ ಗಪ್ ಚುಪ್: ಶ್ರೀಕಾಂತ್ ಆಕ್ರೋಶ – Kannada News | Srikkanth Slams Double Standards In Samson vs Varma Debate

ಟಿ20 ವಿಶ್ವ ಚಾಂಪಿಯನ್ ಭಾರತ ತಂಡವು ಬ್ಯಾಕ್ ಟು ಬ್ಯಾಕ್ 4 ಪಂದ್ಯಗಳಲ್ಲಿ ಸೋಲನುಭವಿಸಿದೆ. ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಹೀನಾಯ ಸೋಲಿನ ಬೆನ್ನಲ್ಲೇ ಆಡುವ ಬಳಗದಿಂದ ಸಂಜು ಸ್ಯಾಮ್ಸನ್ ಹೊರಬಿದ್ದಿದ್ದಾರೆ. ಇದಕ್ಕೆ ನೀಡಲಾದ ಕಾರಣ ಕಳಪೆ ಫಾರ್ಮ್​. ಆದರೆ ಇದೇ ವಿಷಯವನ್ನು ತಿಲಕ್ ವರ್ಮಾ ವಿಚಾರದಲ್ಲಿ ಮುಂದಿಡಲಾಗುತ್ತಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 125 ರನ್‌ಗಳ ಹೀನಾಯ ಸೋಲು ಅನುಭವಿಸಿದ ನಂತರ ಖಾರವಾಗಿ ಪ್ರತಿಕ್ರಿಯಿಸಿರುವ ಶ್ರೀಕಾಂತ್, ಟೀಮ್ ಇಂಡಿಯಾ ಆಯ್ಕೆ ಸಮತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪ್ಲೇಯಿಂಗ್ ಇಲೆವೆನ್ ಬದಲಿಸಿರುವ ಟೀಮ್ ಮ್ಯಾನೇಜ್ಮೆಂಟ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಂಗ್ಲೆಂಡ್​ನ ವೇಗ ಹಾಗೂ ಬೌನ್ಸ್ ಪಿಚ್‌ಗಳಲ್ಲಿ ಶಾರ್ಟ್-ಪಿಚ್ ಎಸೆತಗಳನ್ನು ಎದುರಿಸಲು ತಿಲಕ್ ವರ್ಮಾ ಹೆದರುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗಿಂತ ಮುಂಚಿತವಾಗಿ ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿ, ಮ್ಯಾನೇಜ್‌ಮೆಂಟ್ ತಿಲಕ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.

ನಿಜ ಹೇಳಬೇಕೆಂದರೆ, ಕ್ರೀಸ್‌ನಲ್ಲಿ ತಿಲಕ್ ವರ್ಮಾ ಸಂಪೂರ್ಣವಾಗಿ ‘ಕ್ಲೂಲೆಸ್’ ಆಗಿ ಕಾಣುತ್ತಿದ್ದಾರೆ. ಅವರಿಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ. ಇಂತಹ ಆಟಗಾರನನ್ನು ಭವಿಷ್ಯದ ನಾಯಕ ಎಂದು ಬಿಂಬಿಸಿ ಅವರಿಗೆ ತಂಡದಲ್ಲಿ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿರುವುದೇ ಅಚ್ಚರಿ.

ಇಲ್ಲಿ ಸಂಜು ಸ್ಯಾಮ್ಸನ್ ಫಾರ್ಮ್​ ಪ್ರಶ್ನಿಸಿದವರೆಇಗೆ, ತಿಲಕ್ ವರ್ಮಾ ಅವರ ಕಳಪೆ ಫಾರ್ಮ್ ಕಾಣಿಸುತ್ತಿಲ್ಲ. ನನ್ನ ಪ್ರಕಾರ, ಫಾರ್ಮ್‌ನಲ್ಲಿಲ್ಲದ ಆಟಗಾರನನ್ನು ಬೆಂಬಲಿಸುವ ಬದಲು, ಸಂಜು ಸ್ಯಾಮ್ಸನ್ ಅವರಿಗೆ ತಕ್ಷಣವೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಬೇಕು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಾಯಿಸಿದ್ದಾರೆ.

ತಿಲಕ್ ವರ್ಮಾ ಔಟ್ ಆಫ್​ ಫಾರ್ಮ್​​ನಲ್ಲಿದ್ದಾರಾ?

ಕೃಷ್ಣಮಾಚಾರಿ ಶ್ರೀಕಾಂತ್ ಅವರ ಆರೋಪವನ್ನು ಪರಿಶೀಲಿಸಿದಾಗ ಭಾರತ ತಂಡದ ಉಪನಾಯಕ ತಿಲಕ್ ವರ್ಮಾ ಔಟ್ ಆಫ್​ ಫಾರ್ಮ್​ನಲ್ಲಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

  • ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ: ಕೇವಲ 19 ರನ್​.
  • ಐರ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯ: 55 ರನ್​ ಬಾರಿಸಲು ತೆಗೆದುಕೊಂಡಿದ್ದು 46 ಎಸೆತಗಳನ್ನು.
  • ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ: ಕೇವಲ 13 ರನ್​.
  • ಇಂಗ್ಲೆಂಡ್ ವಿರುದ್ಧ ಎರಡನ ಟಿ20 ಪಂದ್ಯ: 24 ರನ್​ಗಳಿಸಿ ಔಟ್.
  • ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯ: 11 ಎಸೆತಗಳಲ್ಲಿ ಕೇವಲ 3 ರನ್​.

ಇದನ್ನೂ ಓದಿ: 5 ಗಂಟೆ 15 ನಿಮಿಷಗಳ ಕಾದಾಟ: ಹೊಸ ಇತಿಹಾಸ  ನಿರ್ಮಿಸಿದ ನೊವಾಕ್ ಜೊಕೊವಿಚ್

ಈ ಕಳಪೆ ಬ್ಯಾಟಿಂಗ್ ಹೊರತಾಗಿಯೂ ಯಾರೂ ಸಹ ತಿಲಕ್ ವರ್ಮಾ ಅವರ ಸ್ಥಾನದ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಲ್ಲಿ ಸಂಜು ಸ್ಯಾಮ್ಸನ್​ ಎರಡು ಮ್ಯಾಚ್​ಗಳಲ್ಲಿ ವಿಫಲರಾಗಿದ್ದಕ್ಕೆ ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಟ್ಟಿದ್ದಾರೆ. ಆದರೆ ತಿಲಕ್ ವರ್ಮಾಗೆ ಸತತ ಅವಕಾಶಗಳನ್ನು ನೀಡುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

Source link

‘ತಾಯಿ ಕಿಳವಿ’ ಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್ – Kannada News | Sivakarthikeyan Gifts Mahindra BE 6 to Thayee Kilavi Director for Box Office Success

ಕಾಲಿವುಡ್ ಸ್ಟಾರ್ ನಟ ಮತ್ತು ನಿರ್ಮಾಪಕ ಶಿವಕಾರ್ತಿಕೇಯನ್ ಆಗಾಗಾ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಸಿನಿಮಾ ರಂಗದಲ್ಲಿ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡುತ್ತಾ ಇದ್ದಾರೆ. ಈಗ ಅವರು ತಮ್ಮ ಉದಾರ ಗುಣದಿಂದ ಮತ್ತೆ ಸುದ್ದಿಯಾಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಡಿ ಮೂಡಿಬಂದ ‘ತಾಯಿ ಕಿಳವಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು ಅವರಿಗೆ ಖುಷಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರಿಗೆ ಶಿವಕಾರ್ತಿಕೇಯನ್ ಹೊಚ್ಚ ಹೊಸ ‘ಮಹೀಂದ್ರಾ BE 6’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ಸಂಭ್ರಮಾಚರಣೆಯ ದಿನದಂದೇ ಈ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಲಾಗಿದೆ. ಕಾರು ನೀಡುತ್ತಿರುವ ಫೋಟೋಗಳನ್ನು ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ‘ನಾವು ಯಾವಾಗಲೂ ಹೆಮ್ಮೆಪಡುವಂತಹ ಪ್ರಯಾಣಕ್ಕೆ ಒಂದು ವಿಶೇಷ ಉಡುಗೊರೆ’ ಎಂದು ಬರೆದುಕೊಂಡಿದೆ. ಅಲ್ಲದೆ ಚಿತ್ರದ ಯಶಸ್ಸಿಗೆ ಕಾರಣರಾದ ಕಲಾವಿದರು, ತಂತ್ರಜ್ಞರು, ವಿತರಕರು ಮತ್ತು ಪ್ರದರ್ಶಕರಿಗೆ ಧನ್ಯವಾದಗಳನ್ನು ಅರ್ಪಿಸಿದೆ.

ರಾಧಿಕಾ ಶರತ್‌ಕುಮಾರ್ ಶ್ಲಾಘನೆ:

ಈ ಚಿತ್ರದಲ್ಲಿ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ನಡೆದ ಚಿತ್ರದ ಯಶಸ್ಸಿನ ಸಭೆಯಲ್ಲಿ ಅವರು ನಿರ್ದೇಶಕರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.

‘ಒಮ್ಮೆ ಕಮಲ್ ಹಾಸನ್ ಅವರು ನನ್ನ ಬಳಿ ಮಾತನಾಡುತ್ತಾ, ಈ ಸಿನಿಮಾ ಯಶಸ್ವಿಯಾಗಬೇಕು. ಸಿನಿಮಾ ಚೆನ್ನಾಗಿದ್ದರೆ ನಿನಗೆ ಮೆಚ್ಚುಗೆ ಸಿಗುತ್ತದೆ. ಆದರೆ ಸಿನಿಮಾ ಸೂಪರ್ ಹಿಟ್ ಆದಲ್ಲಿ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಸೇರಿದಂತೆ ಚಿತ್ರದ ಎಲ್ಲರಿಗೂ ದೊಡ್ಡ ಬ್ರೇಕ್ ಸಿಗುತ್ತದೆ ಎಂದು ಹೇಳಿದ್ದರು’ ಎಂದು ರಾಧಿಕಾ ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯನ್

ದೊಡ್ಡ ಸ್ಟಾರ್ ಸಿನಿಮಾಗಳಂತೆ ಟಿಕೆಟ್ ದರವನ್ನು ಹೆಚ್ಚಿಸದೆ, ಸಾಮಾನ್ಯ ದರದಲ್ಲೇ ಈ ಸಿನಿಮಾ ಕಮರ್ಷಿಯಲ್ ಆಗಿ ದೊಡ್ಡ ಕಮಾಯಿ ಮಾಡಿದೆ. ಈ ಚಿತ್ರವು ಮಾನವೀಯ ಸಂಬಂಧಗಳು ಮತ್ತು ಹೆಣ್ಣಿನ ಧ್ವನಿಗೆ ಗೌರವ ಕೊಡುವ ಕಥೆಯನ್ನು ಹೊಂದಿದ್ದು, ಪ್ರೇಕ್ಷಕರ ಹೃದಯ ಮುಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕದಿಂದ ಇರಾನ್ ಮೇಲೆ ಮತ್ತೆ ಭೀಕರ ದಾಳಿ: ಅಲಿ ಖಮೇನಿ ಅಂತ್ಯಕ್ರಿಯೆಗೂ ಮುನ್ನ ಉದ್ವಿಗ್ನತೆ – Kannada News | US Strikes Iran Again Amidst Rising Tensions, Khameneis Funeral Looms

ಟೆಹ್ರಾನ್, ಜುಲೈ 09: ಅಮೆರಿಕವು ಇರಾನ್‌ನ ಮೇಲೆ ಮತ್ತೊಮ್ಮೆ ಭೀಕರ ದಾಳಿಯನ್ನು ನಡೆಸಿದ್ದು, ಈಗಾಗಲೇ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ನಿನ್ನೆಯಷ್ಟೇ ಮೂರು ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡಿದ್ದ ಅಮೆರಿಕ, ಇದೀಗ ಮತ್ತೆ ಆಕ್ರಮಣವನ್ನು ಮುಂದುವರಿಸಿದೆ. ಬುಶೆಹರ್‌ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರ ಪ್ರದೇಶ ಮತ್ತು ಇರಾನ್‌ನ ಚಬಹಾರ್ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ. ಅಮೆರಿಕದ ಈ ಕಾರ್ಯಾಚರಣೆಗಳನ್ನು ಯುಎಸ್‌ ಸೆಂಟ್ರಲ್ ಕಮಾಂಡ್ ದೃಢಪಡಿಸಿದೆ.

ಡೊನಾಲ್ಡ್ ಟ್ರಂಪ್ ಅವರು ಒಪ್ಪಂದ ಅಂತ್ಯ ಮತ್ತು ರಾತ್ರಿ ದಾಳಿ ಕುರಿತ ಎಚ್ಚರಿಕೆಗಳನ್ನು ನೀಡಿದ ಬೆನ್ನಲ್ಲೇ ಈ ಆಕ್ರಮಣಗಳು ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಪ್ರಮುಖವಾಗಿ, ಇಂದು ಆಯತೊಲ್ಲಾ ಅಲಿ ಖಮನೈ ಅವರ ಅಂತ್ಯಕ್ರಿಯೆ ನಡೆಯುವ ಮುನ್ನವೇ ಈ ದಾಳಿಗಳು ಸಂಭವಿಸಿವೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಸಹ ಪ್ರತಿದಾಳಿ ನಡೆಸಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳಾದ ಬಹ್ರೇನ್ ಮತ್ತು ಕುವೈತ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಇರಾನ್ ದಾಳಿ ನಡೆಸಿದೆ. ಅಮೆರಿಕದ ಒಂದು ದಾಳಿಗೆ ನಾವು ಎರಡು ದಾಳಿಗಳನ್ನು ನಡೆಸುತ್ತೇವೆ ಎಂದು ಇರಾನ್ ಪ್ರತಿಜ್ಞೆ ಮಾಡಿದೆ. ಇರಾನ್ ಸಂಸತ್ತಿನ ವಕ್ತಾರರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಅಮೆರಿಕದ ಒಬ್ಬ ಸೈನಿಕನೂ ಜೀವಂತವಾಗಿ ಹಿಂದಿರುಗುವುದಿಲ್ಲ ಎಂದಿದ್ದಾರೆ. ಯುದ್ಧದ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version