ಟಿಕೆಟ್ ಬೆಲೆ ನಿರ್ಧರಿಸುವ ಹಕ್ಕು ನಿರ್ಮಾಪಕರಿಗೆ: ತೆಲುಗು ರಾಜ್ಯಗಳಲ್ಲಿ ಹೊಸ ಬೇಡಿಕೆ – Kannada News | Flexible pricing for movie ticket in Andhra and Telangana
ಸಿನಿಮಾ (Cinema) ಟಿಕೆಟ್ ಬೆಲೆ, ಶೋ ಟೈಮಿಂಗ್ಸ್, ಶೋ ಸಂಖ್ಯೆ, ಲಾಭ ಹಂಚಿಕೆ ಇನ್ನಿತರೆಗಳ ಕುರಿತಾಗಿ ಆಂಧ್ರ ಮತ್ತು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ತಿಂಗಳುಗಳಿಂದಲೂ ಚರ್ಚೆ, ವಾಗ್ವಾದ ನಡೆಯುತ್ತಲೇ ಇದೆ. ಈಗ ಪ್ರತಿ ಬಾರಿ ಸಿನಿಮಾ ಬಿಡುಗಡೆ ಆಗುವಾಗಲೂ ನಿರ್ಮಾಪಕರು, ವಿತರಕರು ಸರ್ಕಾರ ಬಳಿ ಅರ್ಜಿ ಹಾಕಿಕೊಳ್ಳಬೇಕಿದೆ. ಸರ್ಕಾರಗಳು ಆದೇಶದಂತೆ ನಿಗದಿತ ದಿನಗಳ ಮಟ್ಟಿಗೆ ಟಿಕೆಟ್ ಬೆಲೆ ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಈ ಅವಕಾಶ ಎಲ್ಲ ಸಿನಿಮಾಗಳಿಗೂ ಇರುವುದಿಲ್ಲ ಬದಲಿಗೆ ಕೆಲ ದೊಡ್ಡ ಸಿನಿಮಾಗಳಿಗೆ ಮಾತ್ರವೇ ಇದರ…