ಜಾಗತಿಕ ರಾಜಕೀಯ ತಲ್ಲಣ: 220 ಮಿಲಿಯನ್ ಅಮೆರಿಕನ್ನರ ವೋಟರ್ ಡೇಟಾ ಚೀನಾ ಪಾಲು, ಶ್ವೇತಭವನದಿಂದ ಟ್ರಂಪ್ ಬಾಂಬ್ – Kannada News | China Hacked 220M US Voter Data, Sparking Global Cyber War Fears
ವಾಷಿಂಗ್ಟನ್, ಜುಲೈ 17:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾ ವಿರುದ್ಧ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ‘ಸೈಬರ್ ಹ್ಯಾಕಿಂಗ್’ ಆರೋಪವನ್ನು ಹೊರಿಸುವ ಮೂಲಕ ಜಾಗತಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಚೀನಾವು ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿ, ಬರೋಬ್ಬರಿ 220 ಮಿಲಿಯನ್ (22 ಕೋಟಿ) ಅಮೆರಿಕದ ಮತದಾರರ ಅತ್ಯಂತ ರಹಸ್ಯ ಫೈಲ್‌ಗಳನ್ನು ಅಕ್ರಮವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಶ್ವೇತಭವನದಿಂದ ದೇಶವನ್ನುದ್ದೇಶಿಸಿ ನಡೆಸಿದ ಪ್ರೈಮ್-ಟೈಮ್ ಭಾಷಣದಲ್ಲಿ ಟ್ರಂಪ್ ಗುಡುಗಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಇದು…