ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ನಾಳೆ ಪ್ರಧಾನಿ ಮೋದಿ ಚಾಲನೆ; ಇದರ ವಿಶೇಷತೆ ಒಂದೆರಡಲ್ಲ! – Kannada News | PM Narendra Modi To Launch India’s First Hydrogen Powered Train in Haryana Tomorrow
ಚಂಡೀಗಢ, ಜುಲೈ 16: ಭಾರತೀಯ ರೈಲ್ವೆ ಇತಿಹಾಸದಲ್ಲಿ ನಾಳೆ (ಜುಲೈ 17) ಮತ್ತೊಂದು ಸುವರ್ಣ ಅಧ್ಯಾಯ ಸೃಷ್ಟಿಯಾಗಲಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾಗಿರುವ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ (Hydrogen-powered train) ನಾಳೆ ಹರಿಯಾಣದ ಜಿಂದ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹಸಿರು ನಿಶಾನೆ ತೋರಿಸಲಿದ್ದಾರೆ. ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ (ICF) ವಿನ್ಯಾಸಗೊಳಿಸಲಾದ ಈ ರೈಲಿನ ಉದ್ಘಾಟನೆಯೊಂದಿಗೆ, ಪರಿಸರಸ್ನೇಹಿ ರೈಲು ಸಾರಿಗೆಗಾಗಿ ಹೈಡ್ರೋಜನ್ ತಂತ್ರಜ್ಞಾನ ಬಳಸುತ್ತಿರುವ ಜರ್ಮನಿ, ಜಪಾನ್, ಚೀನಾ ಮತ್ತು…