ಇಂದು ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Ashada Friday 2026: July 17 Horoscope for All 12 Zodiac Signs, Dakshinayana Begins with Karka Sankranti

ಇಂದು ಜುಲೈ 17, 2026 ರಂದು ಶುಕ್ರವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಆಷಾಢ ಶುಕ್ರವಾರ, ಕಟಕ ಸಂಕ್ರಮಣ ಇದ್ದು, ಅಮ್ಮನ ಆರಾಧನೆಗೆ ಅತ್ಯಂತ ಪ್ರಾಶಸ್ತ್ಯವಾದ ದಿನವಾಗಿದೆ. ಚಾಮುಂಡೇಶ್ವರಿ, ಮಹಾಲಕ್ಷ್ಮಿ ಅಥವಾ ಮಹಾಕಾಳಿ ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ, ದರ್ಶನ ಮತ್ತು ಪುಷ್ಪ ಸಮರ್ಪಣೆ ಮಾಡುವುದರಿಂದ ತಾಯಿಯ ಪರಿಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ‘ಟಿವಿ9 ಕನ್ನಡ ಡಿಜಿಟಲ್​’ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದು ಸೂರ್ಯನು ಕಟಕ ರಾಶಿಗೆ ಪ್ರವೇಶಿಸುತ್ತಾನೆ. ದಕ್ಷಿಣಾಯನವೂ ಸಹ ಇಂದು ಪ್ರಾರಂಭವಾಗುತ್ತದೆ.

ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಮೇಲೆ ಗ್ರಹಗಳಾದ ರವಿ (ಕರ್ಕಾಟಕದಲ್ಲಿ) ಮತ್ತು ಚಂದ್ರ (ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ) ಸಂಚಾರದ ಪರಿಣಾಮಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೆ ಆರ್ಥಿಕ ಸ್ಥಿತಿ, ವೃತ್ತಿ, ಆರೋಗ್ಯ, ಸಂಬಂಧಗಳು ಮತ್ತು ವೈಯಕ್ತಿಕ ಜೀವನದ ಮೇಲೆ ಆಗುವ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

Source link

IND vs ENG: ರೂಟ್ ಅಜೇಯ 99 ರನ್; 2ನೇ ಏಕದಿನ ಗೆದ್ದ ಇಂಗ್ಲೆಂಡ್ – Kannada News | England Beats India in 2nd ODI: Joe Root’s 99* Levels Series 1 1 in Cardiff

ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (India vs England ODI) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಗೆಲುವು ಸಾಧಿಸಿದೆ. ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅನುಭವಿ ಜೋ ರೂಟ್ ಅಜೇಯ 99 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 44 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 233 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 6 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್‌ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

ಕೊಹ್ಲಿ- ಶ್ರೇಯಸ್ ಅರ್ಧಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ನಾಯಕ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನೀಡಿದರು. ಶುಭ್ಮ​ನ್ ಗಿಲ್ 31 ರನ್‌ಗಳಿಗೆ ಔಟಾದರೆ, ರೋಹಿತ್ ಶರ್ಮಾ ಕೂಡ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 47 ಎಸೆತಗಳಲ್ಲಿ 26 ರನ್‌ಗಳಿಗೆ ಔಟಾದರು. ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 60 ರನ್‌ಗಳ ಜೊತೆಯಾಟವಾಡಿದರು. ಕೆಎಲ್ ರಾಹುಲ್ ಬದಲಿಗೆ ಬಂದ ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಕೇವಲ 1 ರನ್‌ಗೆ ಕೊನೆಗೊಂಡಿತು. ಅದಾದ ನಂತರ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ತಂಡದ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ವಿರಾಟ್ ಕೊಹ್ಲಿ ಔಟಾಗುವುದರ ಜೊತೆಗೆ ತಂಡದ ಬ್ಯಾಟಿಂಗ್ ಕುಸಿಯಲು ಪ್ರಾರಂಭಿಸಿತು.

ಅದರಲ್ಲೂ ಕಳೆದ ಪಂದ್ಯದಲ್ಲಿ ಮಿಂಚಿದ್ದ ಆಲ್‌ರೌಂಡರ್ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲಿ 5 ಎಸೆತಗಳಲ್ಲಿ 2 ರನ್​ಗಳಿಸಿ ಔಟಾದರೆ, ಅಕ್ಷರ್ ಪಟೇಲ್ ಅವರ ಇನ್ನಿಂಗ್ಸ್ ಕೂಡ 1 ರನ್​ಗೆ ಅಂತ್ಯವಾಯಿತು. ಆ ಬಳಿಕ ಬಂದ ಶಿವಂ ದುಬೆಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಗುರ್ನೂರ್ ಬ್ರಾರ್ 7 ರನ್ ಗಳಿಸಿ ಟೆಂಟ್‌ಗೆ ಮರಳಿದರೆ, ಪ್ರಸಿದ್ಧ್ ಕೃಷ್ಣಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಜಸ್ಪ್ರೀತ್ ಬುಮ್ರಾ 13 ಎಸೆತಗಳಲ್ಲಿ ಅಜೇಯ 20 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು.

ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಗಲಿಲ್ಲ. ಖಾತೆ ತೆರೆಯುವುದಕ್ಕೂ ಮುನ್ನವೇ ಆರಂಭಿಕ ಡಕೆಟ್​ ಮೊದಲ ಎಸೆತದಲ್ಲೇ ಔಟಾದರು. ಬೆಥೆಲ್ ಅವರ ಇನ್ನಿಂಗ್ಸ್ ಕೂಡ 4 ರನ್​​ಗಳಿಗೆ ಅಂತ್ಯವಾಯಿತು. ನಾಯಕ ಬ್ರೂಕ್ ಕೂಡ 16 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಕರನ್ 26 ರನ್​ಗಳ ಇನ್ನಿಂಗ್ಸ್ ಆಡುವುದರ ಜೊತೆಗೆ ರೂಟ್​ಗೆ ಸಾಥ್ ನೀಡಿದರು. ಇದಾದ ಬಳಿಕ ಜೊತೆಯಾದ ವಿಲ್ ಜ್ಯಾಕ್ಸ್ ಹಾಗೂ ರೂಟ್ ತಂಡವನ್ನು ಸಂಕಷ್ಟದಿಂದ ಹೊರತಂದರು. ಇವರಿಬ್ಬರ ನಡುವೆ ಅರ್ಧಶತಕದ ಜೊತೆಯಾಟವೂ ಮೂಡಿಬಂತು.

ರೂಟ್ ಅಜೇಯ 99 ರನ್

ಜ್ಯಾಕ್ಸ್ 30 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, 8ನೇ ಕ್ರಮಾಂಕದಲ್ಲಿ ಬಂದ ಗಸ್ ಅಟ್ಕಿನ್ಸನ್, ರೂಟ್ ಜೊತೆಗೂಡಿ ತಂಡಕ್ಕೆ ಜಯ ತಂದುಕೊಟ್ಟರು. ಅಂತಿಮವಾಗಿ ರೂಟ್ 133 ಎಸೆತಗಳಲ್ಲಿ 8 ಬೌಂಡರಿ ಸಹಿತ ಅಜೇಯ 99 ರನ್ ಬಾರಿಸಿ ಕೇವಲ 1 ರನ್ನಿಂದ ಶತಕ ವಂಚಿತರಾದರು. ಇತ್ತ ಟೀಂ ಇಂಡಿಯಾ ಪರ ಬ್ರಾರ್ 2 ವಿಕೆಟ್ ಪಡೆದರೆ ಉಳಿದವರೆಲ್ಲರಿಗೂ ತಲಾ ಒಂದೊಂದು ವಿಕೆಟ್ ಸಿಕ್ಕವು. ಆದಾಗ್ಯೂ ಯಾರಿಗೂ ಇಂಗ್ಲೆಂಡ್ ಗೆಲುವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

Published On – 1:34 am, Fri, 17 July 26

Source link

ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ನಿರ್ಧಾರ ಮತ್ತು ಸ್ವಭಾವವನ್ನು ಪರರ‌ಮೇಲೆ ಹೇರುವರು… – Kannada News | Daily Horoscope for July 17, 2026: Uttarayan Greeshma season, Ashada Masa shukla Paksha Friday astrology Prediction

ಮೇಷ ರಾಶಿ:

ವ್ಯಾಪಾರ ಲಾಭದಲ್ಲಿ ಏರುಪೇರು ಕಂಡುಬರಬಹುದು. ಆತ್ಮಸ್ಥೆರ್ಯ ಕಾಪಾಡಿಕೊಳ್ಳಿ. ಕೆಲಸದ ಒತ್ತಡ ಜಾಸ್ತಿಯಾಗಬಹುದು. ಕುಟುಂಬದಲ್ಲಿ ಹಿರಿಯರ ಮಾತಿಗೆ ಕಿವಿಗೊಡಿ. ಹಣದ ನಿರ್ವಹಣೆ ಸಾವಧಾನದಿಂದ ಮಾಡಿ. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ.

ವೃಷಭ ರಾಶಿ:

ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಒಳ್ಳೆಯದು. ನಿಮ್ಮ ಪರೀಕ್ಷೆಗಳೂ ಆಗಬಹುದು. ಆಪ್ತರೇ ನಿಮ್ಮನ್ನು ಎಲ್ಲರೆದುರು ಟೀಕಿಸಿಯಾರು. ಯಾರನ್ನೂ ಹೆಚ್ಚು ಅವಲಂಬಿಸಿ ಯೋಜನೆಗಳನ್ನು ಘೋಷಿಸಿ. ಯಾರನ್ನೋ ಮೆಚ್ಚಿಸಲು ಕೆಲಸವನ್ನು ಮಾಡಬೇಕಾಗುವುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ.

ಮಿಥುನ ರಾಶಿ:

ಸರ್ಕಾರಿ ಕೆಲಸಗಳಿಗೆ ದಿನವನ್ನು ಹೊಂದಿಕೆ ಮಾಡಿಕೊಳ್ಳುವಿರಿ. ಸಂಬಂಧಿಕರಿಂದ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಒಳ್ಳೆಯ ಹೆಸರು ಪಡೆಯುವಿರಿ. ಆಯ್ಕೆ‌ ಮಾಡಿಕೊಳ್ಳುವಾಗ ಎಡವುವಿರಿ. ನಿಮ್ಮ ಯೋಗ್ಯತೆಯ ಪರೀಕ್ಷೆಗೆ ಆಗಬಹುದು. ಎಚ್ಚರವಾಗಿರಿ. ಇಂದು ಮಾತಿನಿಂದ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ನೀವೇ ಮಾಡುವ ಕಾರ್ಯವನ್ನು ಖುದ್ದಾಗಿ ನಿರ್ವಹಿಸಿ.

ಕರ್ಕಾಟಕ ರಾಶಿ:

ನಿಮ್ಮ ಶ್ರದ್ಧೆ ಮತ್ತು ಪರಿಶ್ರಮ ಫಲ ನೀಡುತ್ತದೆ. ಹಿರಿಯರ ಜತೆಗಿನ ಮಾತುಕತೆಗಳಿಂದ ಉತ್ತಮ ಮಾರ್ಗ. ಹಣದ ಲೆಕ್ಕಪತ್ರಗಳನ್ನು ಸರಿಯಾಗಿ ಇಡಿ. ಸ್ನೇಹಿತರ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಬೆಂಬಲ ಮತ್ತು ನೆಮ್ಮದಿ ಸಿಗುತ್ತದೆ. ಹೊಸದಾಗಿ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದವರಿಗೆ ಕೆಲಸವು ಸಿಗುವುದು ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯನ್ನು ಬಲದಿಂದ ತಂದುಕೊಳ್ಳಬೇಕು. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು.

ಸಿಂಹ ರಾಶಿ:

ಉದ್ಯೋಗದ ಭವಿಷ್ಯವು ತೀವ್ರವಾಗಿ ಕಾಡುವುದು. ಇಂದು ಸಂಗಾತಿಯೊಂದಿಗಿನ ಅನುಭವಗಳು ಆನಂದದಾಯಕ. ಮಕ್ಕಳಿಂದ ಖುಷಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ಇರುತ್ತದೆ. ವಿದೇಶದಿಂದ ಒಳ್ಳೆಯ ಸುದ್ದಿ ಬರಬಹುದು. ಆರೋಗ್ಯದಲ್ಲಿ ಶಕ್ತಿಯುಳ್ಳ ಸ್ಥಿತಿ. ಮಾತನ್ನು ಸ್ಪಷ್ಟವಾಗಿ ಆಡಿ. ಒತ್ತಡವು ಹೆಚ್ಚಿದ್ದೀತು. ಕುಳಿತಲ್ಲೇ ಕುಳಿತರೇ ಆಗದು. ಬಂಧುಗಳ ವಿಚಾರದಲ್ಲಿ ನಿಮಗೆ ನಂಬಿಕೆ ಕಡಿಮೆಯಾಗುವುದು. ನಿಮಗೆ ಸಿಕ್ಕ ಅನಾದರದಿಂದ ಬೇಸರವಾಗಬಹುದು.

ಕನ್ಯಾ ರಾಶಿ:

ಮನಸ್ಸು ಇಂದು ಅಸ್ಥಿರವಾದರೆ ಧ್ಯಾನದಿಂದ ಶಾಂತಿ ನೆಮ್ಮದಿಯ ಕಡೆಗೆ ಕರೆತನ್ನಿ. ಕೆಲಸದಲ್ಲಿ ವಿಳಂಬ ಉಂಟಾಗಬಹುದು. ನಿರೀಕ್ಷಿಸಿದ ಹಣ ವಿಳಂಬವಾಗಬಹುದು. ಸ್ನೇಹಿತರಿಂದ ಸಹಾಯ ಸಿಗುತ್ತದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಯತ್ನಿಸಬಹುದು. ಎಂದೋ ಮಾಡಿದ ಹೂಡಿಕೆಯಿಂದ ಸಹಾಯವಾಗಲಿದೆ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತ ಯಾವ ಕಾರ್ಯವನ್ನೂ ಸಫಲ ಮಾಡಲಾಗದು.

ತುಲಾ ರಾಶಿ:

ವೃತ್ತಿಪರ ಜೀವನದಲ್ಲಿ ಆತ್ಮವಿಮರ್ಶೆಗೆ ಅವಕಾಶ ಇಟ್ಟುಕೊಳ್ಳಿ. ಯಾವುದೇ ಸಮಸ್ಯೆಗೆ ಸಂಗಾತಿಯೊಂದಿಗೆ ಚರ್ಚೆ ಮಾಡುವುದು ಉತ್ತಮ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸ್ವಲ್ಪ ಬಳಲಿಕೆ ಸಾಧ್ಯ. ಹಿಂದೆ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವು ಸಿಗಲಿದೆ. ನೂತನ ಸ್ಥಳವನ್ನು ಖರೀದಿಸಲಿದ್ದೀರಿ. ನಿಮ್ಮದಾದ ಸ್ವಂತ ಬಳಗವನ್ನು ತಯಾರು ಮಾಡಿಕೊಳ್ಳುವಿರಿ. ಇಂದು ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು.

ವೃಶ್ಚಿಕ ರಾಶಿ:

ಆತ್ಮವಿಶ್ವಾಸ ಎಲ್ಲ ಕೆಲಸಕ್ಕೆ ನೆರವಾಗಲಿದೆ. ಹೊಸ ಯೋಜನೆಯ ಹುಡುಕಾಟದಲ್ಲಿ ಇರುವಿರಿ. ಸರ್ಕಾರಿ ಕೆಲಸಗಳಿಗೆ ಹೊಂದಿಕೆಯಾಗುವ ದಿನ. ಹಣಕಾಸಿನ ಸ್ಥಿತಿ ಚಿಗುರುತ್ತಾ ಹೋಗುತ್ತದೆ. ಸಂಬಂಧಿಕರಿಂದ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಒಳ್ಳೆಯ ಹೆಸರು ಪಡೆಯುವಿರಿ. ಪ್ರಯಾಣವನ್ನು ಅನಿವಾರ್ಯವಾದರೆ ಮಾಡಿ. ಆಲಸ್ಯಕ್ಕೆ ನೀವೆರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿ. ಕೆಲಸಗಳನ್ನು ಅದು ಕೆಡಿಸೀತು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ನಾಟಕೀಯತೆಯಿಂದ ನೀವು ಹೊರಬಂದರೆ ಒಳ್ಳೆಯದು.

ಧನು ರಾಶಿ:

ಸಹೋದ್ಯೋಗಿಗಳ ಜೊತೆ ಸಮನ್ವಯ ಅಗತ್ಯವಾಗಿ ಬೇಕು. ವ್ಯಾಪಾರ ಲಾಭದಲ್ಲಿ ಏರುಪೇರು ಕಂಡುಬರಬಹುದು. ಆತ್ಮಸ್ಥೆರ್ಯ ಕಾಪಾಡಿಕೊಳ್ಳಿ. ಕೆಲಸದ ಒತ್ತಡ ಜಾಸ್ತಿಯಾಗಬಹುದು. ಕುಟುಂಬದಲ್ಲಿ ಹಿರಿಯರ ಮಾತಿಗೆ ಕಿವಿಗೊಡಿ. ಹಣದ ನಿರ್ವಹಣೆ ಸಾವಧಾನದಿಂದ ಮಾಡಿ. ನೀವು ಸರಿಯಾಗಿ ಇದ್ದರೂ ಬೇರೆಯವರಿಗೆ ಸರಿ ಇಲ್ಲದಂತೆ ಕಾಣಿಸುವುದು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ.

ಮಕರ ರಾಶಿ:

ಎಲ್ಲದಕ್ಕೂ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುವರು. ಮಿತ್ರರಿಂದ ಹೊಸ ಯೋಜನೆ ಬಗ್ಗೆ ಮಾಹಿತಿ ಸಿಗಬಹುದು. ಹಳೆಯ ಸಾಲ ತೀರಿಸಲು ಅವಕಾಶ ಇರುತ್ತದೆ. ವ್ಯಾಪಾರಿಗಳಿಗೆ ಒಳ್ಳೆಯ ಸಮಯ, ಲಾಭ ಇದೆ. ಮನಸ್ಸಿನಲ್ಲಿ ಸಂತೋಷ ಇರುತ್ತದೆ. ಕುಟುಂಬದಲ್ಲಿ ಮಕ್ಕಳಿಂದ ಖುಷಿ ಇರುತ್ತದೆ. ನೂತನ ವಸ್ತುಗಳನ್ನು ಖರೀದಿಸುವಿರಿ. ಸಂಗಾತಿಯ ನೋವಿನಲ್ಲಿ ಭಾಗಿಯಾಗಲಾಗದು. ನಿಮ್ಮ ಆಯ್ಕೆಯು ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರಬಹುದು. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ‌ ಕೊರತೆ ಆಗುವ ಸಾಧ್ಯತೆ ಇದೆ.

ಕುಂಭ ರಾಶಿ:

ಮನೆ ಖರೀದಿ ವಿಚಾರವು ಕುಟುಂಬದಲ್ಲಿ ಚರ್ಚೆಗೆ ಬರುವುದು. ಆರೋಗ್ಯದಲ್ಲಿ ತಲೆನೋವಿನ ಮುನ್ಸೂಚನೆ ಕಾಣಿಸುವುದು. ಬಂಧುಗಳೊಂದಿಗೆ ಗಂಭೀರ ಮಾತುಕತೆ ನಡೆಯಬಹುದು. ಆದಾಯದ ಜೊತೆಗೆ ಖರ್ಚು ಏರಿಕೆಯಾಗುವ ಸಾಧ್ಯತೆ. ಸ್ನೇಹಿತರ ಜೊತೆಗಿನ ಅನುಬಂಧವು ಸ್ವಲ್ಪ ಹದಗೆಡಬಹುದು. ಜಬಾಬ್ದಾರಿಯಲ್ಲಿ ಸ್ವಲ್ಪ ಹಿನ್ನಡೆಯಾದೀತು. ಎಲ್ಲ ಸಂದರ್ಭವನ್ನೂ ಒಂದೇ ರೀತಿಯಲ್ಲಿ ನೋಡಲಾಗದು. ಸಂಗಾತಿಯ ಜೊತೆ ಕುಳಿತು ದುಃಖದಿಂದ ಸಮಾಧಾನ ಮಾಡುವಿರಿ.

ಮೀನ ರಾಶಿ:

ಅಲ್ಪ ಪ್ರಯತ್ನದಿಂದ ಇಂದು ಕೆಲಸವನ್ನು ಸಾಧಿಸಿಕೊಳ್ಳಬಹುದು. ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೂ ಇನ್ನೊಬ್ಬರು ಅದನ್ನು ಬೇರೇ ರೀತಿಯಲ್ಲಿ ಅರ್ಥೈಸುವರು. ಗೆಳೆಯರು ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುಬರು. ಕುಟುಂಬದಲ್ಲಿ ಶಾಂತಿ ಸಂಚಾರವಾಗಲಿದೆ. ಹಣದ ಲೆಕ್ಕಪತ್ರಗಳಲ್ಲಿ ಜಾಗರೂಕರಾಗಿರಿ. ಇದು ಅನಿವಾರ್ಯವಾದುದು ಆಗಿದೆ. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮಘಾ, ಯೋಗ : ಪರಿಘ, ಕರಣ : ಕೌಲವ, ಸೂರ್ಯೋದಯ – 06 – 02 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:50 – 12:26, ಯಮಗಂಡ ಕಾಲ 16:37 – 17:13, ಗುಳಿಕ ಕಾಲ 07:39 – 09:14

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:59 am, Fri, 17 July 26

Source link

ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ – Kannada News | Wild elephant facing jcb for protecting forest watch viral video

ಅಸ್ಸಾಂನ, ಜುಲೈ 16: ಅರಣ್ಯವನ್ನು ರಕ್ಷಿಸಲು ಜೆಸಿಬಿ ಮುಂದೆ ನಿಂತಿರುವ ಆನೆಯ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ಅಸ್ಸಾಂನಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋದಲ್ಲಿ ಒಂದು ದೊಡ್ಡ ಆನೆ ಮತ್ತು ಜೆಸಿಬಿ ಯಂತ್ರ ಪರಸ್ಪರ ಎದುರಾಗಿ ಕಾಣಿಸಿಕೊಂಡಿವೆ. ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು FalconUpdatesHQ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ಆನೆಯೊಂದು ಹಸಿರು ಪ್ರದೇಶದ ಮಧ್ಯದಲ್ಲಿ ನಿಂತಿದೆ. ಅದರ ಮುಂದೆ ಒಂದು ಜೆಸಿಬಿ ಯಂತ್ರವಿದೆ. ಆ ಜೆಸಿಬಿ ಮುಂದೆ ಚಲಿಸುತ್ತಾ ಆನೆಯನ್ನು ಪಕ್ಕಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಆನೆ ಸ್ವಲ್ಪವೂ ಹಿಂದೆ ಸರಿಯುವುದಿಲ್ಲ, ಆದರೆ ಅಲ್ಲಿಯೇ ನಿಂತು, ತನ್ನ ಸೊಂಡಿಲನ್ನು ಎತ್ತಿ ಜೆಸಿಬಿಯನ್ನು ಎದುರಿಸುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: 4,4,4,6..! ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಜಸ್ಪ್ರೀತ್ ಬುಮ್ರಾ – Kannada News | Jasprit Bumrah’s Explosive Batting Shocks England in ODI! Unexpected Runs Highlight Skills

ಜಸ್ಪ್ರೀತ್ ಬುಮ್ರಾ (Jasprit Bumrah) ಎಂದೊಡನೆ ನಮಗೆಲ್ಲ ನೆನಪಾಗುವುದು ಅವರ ಕರಾರುವಕ್ಕಾದ ಬೌಲಿಂಗ್. ವಿಶ್ವ ಕ್ರಿಕೆಟ್​ನ ಅಗ್ರಗಣ್ಯ ಬೌಲರ್​ಗಳ ಪಟ್ಟಿಯಲ್ಲಿ ಬುಮ್ರಾ ಕೂಡ ಸ್ಥಾನ ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ವಿಶ್ವದರ್ಜೆಯ ಬೌಲರ್ ಎನಿಸಿಕೊಂಡಿರುವ ಬುಮ್ರಾಗೆ ಬ್ಯಾಟಿಂಗ್​ನಲ್ಲಿ ಮಾತ್ರ ಛಾಪು ಮೂಡಿಸಲು ಸಾಧ್ಯವಾಗಿಲ್ಲ. ಆದಾಗ್ಯೂ ಬುಮ್ರಾ ಆಗಾಗ್ಗ ತಮ್ಮ ಬ್ಯಾಟಿಂಗ್‌ ಮೂಲಕ ಕೆಲವು ಚಮತ್ಕಾರಿ ಇನ್ನಿಂಗ್ಸ್​ಗಳನ್ನು ಆಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇಂದು ನಡೆದ ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಬುಮ್ರಾ ಸ್ಫೋಟಕ ಬ್ಯಾಟಿಂಗ್‌ ಮೂಲಕ ಇಂಗ್ಲೆಂಡ್‌ ಬೌಲರ್​ನ ಬೆವರಿಳಿಸಿದ್ದಾರೆ.

ಒಂದೇ ಓವರ್‌ನಲ್ಲಿ 3 ಬೌಂಡರಿ, 1 ಸಿಕ್ಸರ್

ಇಂಗ್ಲೆಂಡ್‌ ವಿರುದ್ಧದ ಈ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತದ ಪರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಇತರ ಬ್ಯಾಟ್ಸ್‌ಮನ್​ಗಳ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಕೇವಲ 233 ರನ್ ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ 10ನೇ ಕ್ರಮಾಂಕದಲ್ಲಿ ಬಂದ ಜಸ್ಪ್ರೀತ್ ಬುಮ್ರಾ ಅಜೇಯ 20 ರನ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. 150 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ ಜಸ್ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು, ಹೀಗಾಗಿ ಒಂದೇ ಓವರ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಸ್ಕೋರ್ ಗಳಿಸಿದರು.

18 ರನ್ ಕಲೆಹಾಕಿದ ಬುಮ್ರಾ

ಇಂಗ್ಲೆಂಡ್ ವೇಗಿ ಸಾಕಿಬ್ ಮಹಮೂದ್ ಎಸೆದ 43 ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಈ ಓವರ್​ನಲ್ಲಿ ಬುಮ್ರಾ ಮೂರು ಬೌಂಡರಿ ಮತ್ತು ನಂತರ ಒಂದು ಸಿಕ್ಸರ್ ಬಾರಿಸಿ 18 ರನ್ ಕಲೆಹಾಕಿದರು. ಬುಮ್ರಾ ಅವರ ಬ್ಯಾಟಿಂಗ್ ಪ್ರದರ್ಶನ ಎಲ್ಲರನ್ನೂ ಅಚ್ಚರಿಗೊಳಿಸಿತು. ಬುಮ್ರಾ ಸಾಮಾನ್ಯವಾಗಿ ತಮ್ಮ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಅವರು ಇಂಗ್ಲಿಷ್ ಪಿಚ್‌ಗಳಲ್ಲಿಯೂ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

IND vs ENG: 968 ದಿನಗಳ ಬಳಿಕ ಕಣಕ್ಕಿಳಿದು ಇತಿಹಾಸ ಸೃಷ್ಟಿಸಿದ ಬುಮ್ರಾ..!

ಒಂದೇ ಓವರ್‌ನಲ್ಲಿ 35 ರನ್‌

ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಬುಮ್ರಾ ಏಕದಿನದಲ್ಲಿ ಯಾವ ಇಂಗ್ಲೆಂಡ್‌ ವಿರುದ್ಧ ಒಂದೇ ಓವರ್​ನಲ್ಲಿ 18 ರನ್​ಗಳನ್ನು ಕಲೆಹಾಕಿದ್ದಾರೋ ಅದೇ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 35 ರನ್ ಬಾರಿಸಿದ್ದರು. 2022 ರ ಇಂಗ್ಲೆಂಡ್ ಪ್ರವಾಸದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಬುಮ್ರಾ, ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 35 ರನ್‌ಗಳನ್ನು ಕಲೆಹಾಕಿದ್ದರು. ಈ ಓವರ್‌ನಲ್ಲಿ ಬುಮ್ರಾ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ 29 ರನ್ ಗಳಿಸಿದ್ದರು. ಈಗ, ಬುಮ್ರಾ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET UG 2026 Results: ನೀಟ್ ಯುಜಿ ಫಲಿತಾಂಶ ಪ್ರಕಟ; 11.21 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ; ರಿಸಲ್ಟ್ ನೋಡುವುದು ಹೇಗೆ? – Kannada News | NEET UG 2026 Results declared by NTA at how to check scorecard

ನವದೆಹಲಿ, ಜುಲೈ 16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇಂದು ‘ನೀಟ್ ಯುಜಿ 2026’ (NEET UG 2026) ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 715 ಅಂಕಗಳೊಂದಿಗೆ ಇಬ್ಬರಿಗೆ ಪ್ರಥಮ ಸ್ಥಾನ ಲಭಿಸಿದೆ. ಒಟ್ಟು 720 ಅಂಕಗಳಿಗೆ 715 ಅಂಕಗಳನ್ನು ಪಡೆಯುವ ಮೂಲಕ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಜೂನ್ 21ರಂದು ದೇಶಾದ್ಯಂತ 551 ನಗರಗಳು ಹಾಗೂ ವಿದೇಶದ 14 ನಗರಗಳು ಸೇರಿದಂತೆ ಒಟ್ಟು 5,440 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ ಮತ್ತು ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗಿತ್ತು.

ನೀಟ್ ಯುಜಿ ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?:

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಪರೀಕ್ಷಾ ಪ್ರಾಧಿಕಾರ ಇದರೊಂದಿಗೆ ಅಖಿಲ ಭಾರತ ಟಾಪರ್‌ಗಳು, ರಾಜ್ಯವಾರು ಟಾಪರ್‌ಗಳು, ವರ್ಗವಾರು ಟಾಪರ್‌ಗಳು, ಕಟ್‌-ಆಫ್ ಅಂಕಗಳು ಮತ್ತು ಭಾಷಾವಾರು ಭಾಗವಹಿಸುವಿಕೆಯ ವಿವರಗಳನ್ನು ಕೂಡ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಯಶಸ್ವಿ; 22 ಲಕ್ಷಕ್ಕೂ ಅಧಿಕ ಮಕ್ಕಳು ಹಾಜರ್; ಕಳೆದ ಬಾರಿಗಿಂತ ಭೌತಶಾಸ್ತ್ರ ಪತ್ರಿಕೆ ಕಠಿಣವಿತ್ತೆಂದ ವಿದ್ಯಾರ್ಥಿಗಳು

ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಲು ಅನುಸರಿಸಬೇಕಾದ ಹಂತಗಳು:

  • ಅಧಿಕೃತ ವೆಬ್‌ಸೈಟ್‌ neet.nta.nic.inಗೆ ಭೇಟಿ ನೀಡಿ
  • ಹೋಮ್​ಪೇಜ್​ನಲ್ಲಿರುವ ‘NEET UG 2026 re-exam scorecard’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ (Registration Number) ಅಥವಾ ರೋಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ.
  • ನಿಮ್ಮ ನೀಟ್ ಯುಜಿ 2026ರ ಸ್ಕೋರ್‌ಕಾರ್ಡ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
  • ಸ್ಕೋರ್‌ಕಾರ್ಡ್ ಪಿಡಿಎಫ್ (PDF) ಅನ್ನು ಡೌನ್‌ಲೋಡ್ ಮಾಡಿಕೊಂಡು, ಮುಂದಿನ ದಾಖಲಾತಿ ಪ್ರಕ್ರಿಯೆಗಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ (ಎನ್‌ಟಿಎ) ಮಾಹಿತಿಯ ಪ್ರಕಾರ, ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ದೇಶದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳು ಒಟ್ಟು 13 ಭಾಷೆಗಳಲ್ಲಿ ಈ ಪರೀಕ್ಷೆಯನ್ನು ಬರೆದಿದ್ದರು.

ದೇಶದ ಎಲ್ಲಾ ಭಾಗಗಳಿಂದಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1.7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ 43 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ವರ್ಷದ ನೀಟ್ ಪರೀಕ್ಷೆಯ ಟಾಪರ್​ಗಳು:

19 ಅಭ್ಯರ್ಥಿಗಳು 700ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

138 ಅಭ್ಯರ್ಥಿಗಳು 690ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

1,492 ಅಭ್ಯರ್ಥಿಗಳು 650 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

10,160 ಅಭ್ಯರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ಇದನ್ನೂ ಓದಿ: ಲೋಪದೋಷಗಳನ್ನು ಸರಿಪಡಿಸಿದ್ದೇವೆ, ನೀಟ್ ಮರುಪರೀಕ್ಷೆ ಯಶಸ್ವಿಯಾಗಿದೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

690ಕ್ಕಿಂತ ಹೆಚ್ಚು ಅಂಕ ಗಳಿಸಿದ 138 ಅಭ್ಯರ್ಥಿಗಳು ದೇಶದ ಬೇರೆ ಬೇರೆ 66 ನಗರಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ 705ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಗ್ರ 17 ರ‍್ಯಾಂಕರ್‌ಗಳು 8 ರಾಜ್ಯಗಳವರು. ಆ ರಾಜ್ಯಗಳೆಂದರೆ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಮತ್ತು ತೆಲಂಗಾಣ.

ಫಲಿತಾಂಶಗಳು ಸಮಯಕ್ಕೆ ಸರಿಯಾಗಿ ಪ್ರಕಟವಾಗಿರುವುದರಿಂದ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿವೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಫಲಿತಾಂಶ ಪ್ರಕಟಿಸುವ ಮುನ್ನ ಎನ್‌ಟಿಎ ಅಂತಿಮ ಕೀಲಿ ಉತ್ತರವನ್ನು ಬಿಡುಗಡೆ ಮಾಡಿತ್ತು. ಮೌಲ್ಯಮಾಪನ ನೀತಿಯ ಪ್ರಕಾರ, ಭೌತಶಾಸ್ತ್ರದ ಎರಡು ಪ್ರಶ್ನೆಗಳನ್ನು ಪರಿಷ್ಕರಿಸಲಾಗಿತ್ತು. ಇದರಲ್ಲಿ ಒಂದು ಪ್ರಶ್ನೆಯನ್ನು ಕೈಬಿಡಲಾಗಿದ್ದು, ಮತ್ತೊಂದು ಪ್ರಶ್ನೆಗೆ ಎರಡು ಸರಿಯಾದ ಉತ್ತರಗಳನ್ನು ಅಂಗೀಕರಿಸಲಾಗಿತ್ತು. ಇದರಿಂದಾಗಿ ಎಲ್ಲಾ ಅಭ್ಯರ್ಥಿಗಳಿಗೆ 8 ಬೋನಸ್ ಅಂಕಗಳನ್ನು ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಕಿಂಗ್‌ಮೇಕರ್: ರಶೀದ್‌ ಪುಸ್ತಕದಲ್ಲಿ ಡಿಕೆ ಶಿವಕುಮಾರ್ ರಾಜಕೀಯ ಪಯಣ,ಬೈಕ್‌ ಪ್ರೇಮ ಅನಾವರಣ – Kannada News | DK Shivakumar Gets His Congress’s Crisis Manager, Karnataka’s Kingmaker biography Written By Rasheed Kidwai

ನವದೆಹಲಿ, (ಜುಲೈ 16): ಪತ್ರಕರ್ತ ರಶೀದ್‌ ಕಿದ್ವಾಯಿ (senior journalist Rasheed Kidwai) ಅವರು ಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಬಗ್ಗೆ ಪುಸ್ತಕ ಬರೆದಿದ್ದಾರೆ. ‘ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್’ (“Congress’s Crisis Manager, Karnataka’s Kingmaker”) ಎನ್ನುವ ಪುಸ್ತಕವನ್ನು ಬರೆದಿದ್ದು, ಪುಸ್ತಕದಲ್ಲಿ, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್‌ ಅವರ ಯೆಜ್ಡಿ ಬೈಕ್‌ ಪ್ರೀತಿಯ ಅನಾವರಣವಾಗಿದೆ. ಇನ್ನು ಇಂದು (ಜುಲೈ 16) ರಶೀದ್‌ ಕಿದ್ವಾಯಿ ಅವರು ಡಿ.ಕೆ. ಶಿವಕುಮಾರ್​​ಗೆ ಪುಸ್ತಕ ಹಸ್ತಾಂತರಿಸಿದ್ದು, ಇದಕ್ಕೆ ಡಿಕೆ ಶಿವಕುಮಾರ್ ಸಹ ತಮ್ಮ ಜೀವನ ಚರಿತ್ರೆಯುಳ್ಳ ಪುಸ್ತಕವನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಪುಸ್ತಕದಲ್ಲೇನಿದೆ?

ರಾಜಕೀಯ ಪತ್ರಕರ್ತ ರಶೀದ್ ಕಿದ್ವಾಯಿ ಅವರು ಬರೆದಿರುವ ಈ ಇಂಗ್ಲಿಷ್ ಪುಸ್ತಕವನ್ನು  ಹ್ಯಾಚೆಟ್ ಇಂಡಿಯಾ (Hachette India) ಪ್ರಕಾಶನ ಸಂಸ್ಥೆಯು ಪ್ರಕಟಿಸಿದ್ದು,   ಅಪರೂಪದ ಬಾಂಧವ್ಯದ ಕಥೆಯನ್ನು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರ ಹೊಸ ಪುಸ್ತಕ ‘ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್’ನಲ್ಲಿ ವಿವರಿಸಲಾಗಿದೆ. ಶಿವಕುಮಾರ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾದಾಗಿನಿಂದ ಹಿಡಿದು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಬಂದಿರುವ ಹಾದಿಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ನೋಡಿ: ಡಿಕೆ ಶಿವಕುಮಾರ್ ​ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಏರಿಳಿತಗಳು, ಕನಕಪುರದಿಂದ ಆರಂಭವಾದ ಅವರ ಪ್ರಯಾಣ ಮತ್ತು ಅವರ ರಾಜಕೀಯ ತಂತ್ರಗಳನ್ನು ವಿವರವಾಗಿ ಪರಿಚಯಿಸುತ್ತದೆ. ಶಿವಕುಮಾರ್‌ ವಿದ್ಯಾರ್ಥಿಯಾಗಿದ್ದ 1980ರ ಕಾಲವನ್ನು ಸ್ಮರಿಸಿರುವ ಲೇಖಕರು, ಅವರ ಕಾಲೇಜು ದಿನಗಳಿಂದಳಲ್ಲೂ ಅವರ ಸಂಘಟನಾ ಚಾತುರ್ಯವನ್ನೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಲ್ಲದೇ ಯೆಜ್ಡಿ ರೋಡ್‌ಕಿಂಗ್ ಬೈಕ್‌ ಜತೆಗಿನ ಅವರ ಒಡನಾಟದ ಬಗ್ಗೆ ಬರೆಯಲಾಗಿದೆ.

ಯಾರು ಈ ರಶೀದ್ ಕಿದ್ವಾಯಿ ?

ರಶೀದ್ ಕಿದ್ವಾಯಿ ಹಿರಿಯ ಪತ್ರಕರ್ತ, ಲೇಖಕ ಮತ್ತು ರಾಜಕೀಯ ವಿಶ್ಲೇಷಕರು. ಅವರು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ನಲ್ಲಿ ಸಂದರ್ಶಕ ಸಹೋದ್ಯೋಗಿಯಾಗಿದ್ದಾರೆ. ದಿ ಟೆಲಿಗ್ರಾಫ್‌ನ ಮಾಜಿ ಸಹಾಯಕ ಸಂಪಾದಕರಾದ ಕಿದ್ವಾಯಿ ಸರ್ಕಾರ, ರಾಜಕೀಯ, ಸಮುದಾಯ ವ್ಯವಹಾರಗಳು ಮತ್ತು ಹಿಂದಿ ಸಿನಿಮಾಗಳನ್ನು ಟ್ರ್ಯಾಕ್ ಮಾಡುತ್ತಾರೆ ಮತ್ತು ಈ ವಿಷಯಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದ ಅವರು ಯುಕೆಯ ಲೀಸೆಸ್ಟರ್ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ವಿವಿ ಸುದ್ದಿ ವಾಹಿನಿಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಸ್, ಸೈನಿಕ, ಗುಪ್ತಚರ ಅಧಿಕಾರಿ ಹೆಸರಿನಲ್ಲಿ ವಂಚನೆ; ಉತ್ತರಾಖಂಡದ ಐಎಎಸ್​ ಆಫೀಸರ್ ಮಗನ ಬಂಧನ – Kannada News | Former IAS Officers Son Arrested For posed as IPS Officer, RAW And Army Officials In Uttarakhand

ಡೆಹ್ರಾಡೂನ್, ಜುಲೈ 16: ಸರ್ಕಾರದ ಉನ್ನತ ಅಧಿಕಾರಿಗಳು, ಐಪಿಎಸ್ ಅಧಿಕಾರಿ ಹಾಗೂ ದೇಶದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ ‘ರಾ’ (RAW) ಏಜೆಂಟ್ ಎಂದು ಸೋಗು ಹಾಕಿಕೊಂಡು ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣ ವಂಚಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗನನ್ನು ಉತ್ತರಾಖಂಡದ (Uttarakhand) ಡೆಹ್ರಾಡೂನ್ ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ರಾಮಸ್ವಾಮಿ ಅವರ ಮಗ ಯಶವರ್ಧನ್ ಬಂಧಿತ ಆರೋಪಿಯಾಗಿದ್ದು, ಇಂದು ಮುಸ್ಸೋರಿ ರಸ್ತೆಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಆತನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ ನಕಲಿ ದಾಖಲೆಗಳು ಮತ್ತು ವಸ್ತುಗಳನ್ನು ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಆತನಿಂದ 5 ನಕಲಿ ಗುರುತಿನ ಚೀಟಿಗಳು ಮತ್ತು 8 ವಿಸಿಟಿಂಗ್ ಕಾರ್ಡ್‌ಗಳು, ಪೊಲೀಸ್ ಮತ್ತು ಸೇನೆಗೆ ಸೇರಿದ 25 ಅಧಿಕೃತ ಲೋಗೋಗಳು, ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗೆ ಸೇರಿದ 3 ಜೊತೆ ಸಮವಸ್ತ್ರಗಳು ಹಾಗೂ ನಕಲಿ ಮೆಡಲ್ ರಿಬ್ಬನ್‌ಗಳು, ಒಂದು ಲ್ಯಾಪ್‌ಟಾಪ್ ಹಾಗೂ ವೈರ್‌ಲೆಸ್ ಸೆಟ್ (ವಾಕಿ-ಟಾಕಿ)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮೊಬೈಲ್​ನಿಂದ ಹೊಡೆದು ಗಂಡನನ್ನು ಕೊಂದ ಹೆಂಡತಿ! ಅಚ್ಚರಿಯಾದರೂ ಇದು ಸತ್ಯ

ಆರೋಪಿ ಯಶವರ್ಧನ್ ತನ್ನ ತಂದೆಯ ಪ್ರಭಾವ ಬಳಸಿಕೊಂಡು ಹಾಗೂ ಈ ನಕಲಿ ಸಮವಸ್ತ್ರ, ಐಡಿ ಕಾರ್ಡ್‌ಗಳನ್ನು ತೋರಿಸಿ ತಾನು ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದ. ಸರ್ಕಾರಿ ಕೆಲಸ ಕೊಡಿಸುವುದು, ಕಂಪನಿಗಳ ನೋಂದಣಿ ಪ್ರಕ್ರಿಯೆಯನ್ನು ಬೇಗನೆ ಮುಗಿಸುವುದು ಹಾಗೂ ಸರ್ಕಾರಿ ಟೆಂಡರ್‌ಗಳನ್ನು ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಯುಪಿಎಸ್‌ಸಿ ಫೇಲ್ ಆಗಿದ್ದ:

ಪೊಲೀಸ್ ವಿಚಾರಣೆ ವೇಳೆ ಆರೋಪಿ ಯಶವರ್ಧನ್ ತನ್ನ ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾಗ ಅಧಿಕಾರಿಗಳಿಗಿದ್ದ ಗೌರವ ಮತ್ತು ಪ್ರಭಾವವನ್ನು ನೋಡಿ ಬೆಳೆದಿದ್ದರಿಂದ ತನಗೂ ಐಎಎಸ್​ ಅಥವಾ ಐಪಿಎಸ್ ಆಗಬೇಕೆಂಬ ತೀವ್ರ ಆಸೆ ಇತ್ತು ಎಂದು ಹೇಳಿದ್ದಾನೆ. ಇದಕ್ಕಾಗಿ ಆತ ಹಲವು ವರ್ಷಗಳ ಕಾಲ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಇದರಿಂದ ನಿರಾಶೆಗೊಂಡು, ಸಮಾಜದಲ್ಲಿ ಸುಲಭವಾಗಿ ಪ್ರಭಾವ ಮತ್ತು ಹಣ ಗಳಿಸಲು ಈ ರೀತಿ ನಕಲಿ ಅಧಿಕಾರಿಯ ಸೋಗು ಹಾಕಲು ಪ್ರಾರಂಭಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರೇಜ್ ಆಫ್ ಕಂಬಳ’ ಹಾಡಿನಿಂದ ಕುತೂಹಲ ಹೆಚ್ಚಿಸಿದ ‘ಕರಾವಳಿ’ ಸಿನಿಮಾ ತಂಡ – Kannada News | Prajwal Devaraj Raj B Shetty starrer Karavali movie new song Rage of Kambala released

ಹಲವು ಕಾರಣಗಳಿಂದಾಗಿ ‘ಕರಾವಳಿ’ (Karavali) ಸಿನಿಮಾ ನಿರೀಕ್ಷೆ ಮೂಡಿಸಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ (Raj B. Shetty) ಮುಂತಾದವರು ನಟಿಸಿರುವ ಈ ಸಿನಿಮಾದ ಹಾಡುಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳನ್ನು ನೋಡಿದ ಬಳಿಕ ಸಿನಿಮಾ ಮೇಲಿನ ಹೈಪ್ ಇನ್ನಷ್ಟು ಹೆಚ್ಚಾಗಿದೆ. ಈಗ ಇನ್ನೊಂದು ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ಸಖತ್ ಅಗ್ರೆಸಿವ್ ಆಗಿದೆ ಎಂಬುದು ವಿಶೇಷ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಜೊತೆ ಸಂಪದಾ, ಸುಷ್ಮಿತಾ, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆ ಇರಲಿದೆ. ಆದ್ದರಿಂದ ನಿರೀಕ್ಷೆ ಮನೆ ಮಾಡಿದೆ. ಈಗಾಗಲೇ ಟ್ರೇಲರ್ ಹೇಗಿದೆ ಎಂಬುದನ್ನು ಜನರು ನೋಡಿದ್ದಾರೆ. ಜುಲೈ 24ಕ್ಕೆ ಅದ್ದೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ನಡುವೆ ಚಿತ್ರತಂಡದಿಂದ ಪವರ್ ಫುಲ್ ಆಗಿರುವ ಕವರ್ ಸಾಂಗ್ ರಿಲೀಸ್ ಮಾಡಲಾಗಿದೆ. ದೊಡ್ಡ ಪರದೆಯಲ್ಲಿ ಈ ಸಾಂಗ್ ನೋಡಲು ಸಿನಿಪ್ರಿಯರು ಕಾದಿದ್ದಾರೆ.

ಆನಂದ್ ಶ್ರೀರಾಜ್ ಗಾಯನದ ಹಾಡು:

‘Rage of Kambala’ ಎಂಬ ಶೀರ್ಷಿಕೆಯಲ್ಲಿ ರಿಲೀಸ್ ಆಗಿರುವ ‘ಓಡಾ…’ ಗೀತೆಗೆ ಖ್ಯಾತ ಗಾಯಕ ಆನಂದ್ ಶ್ರೀರಾಜ್ ಅವರು ಧ್ವನಿ ನೀಡಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ಕಿಂಗ್ ಆಫ್ ಕೋಥ’, ‘ಎಂಪರಾನ್’ ಮುಂತಾದ ಸಿನಿಮಾದ ಹಾಡುಗಳು ಅವರ ಕಂಠದಲ್ಲಿ ಮೂಡಿಬಂದು ಜನಮನ ಗೆದ್ದಿವೆ. ಈಗ ಅವರು ‘ಕರಾವಳಿ’ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಕುತೂಹಲ ಹೆಚ್ಚಿಸಿದ ಹೊಸ ಗೀತೆ:

ಈ ಹಾಡಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಸಚಿನ್ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕಥೆಯ ಯಾವ ಹಂತದಲ್ಲಿ ಈ ಹಾಡು ಬರಲಿದೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ತಾಂತ್ರಿಕವಾಗಿ ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿದೆ ಎಂಬುದಕ್ಕೆ ಈ ಹಾಡು ಕೂಡ ಸಾಕ್ಷಿಯಾಗಿದೆ.

ಇದನ್ನೂ ಓದಿ: ‘ಕರಾವಳಿ’ ಕಿರಿಕ್: ಪ್ರಜ್ವಲ್​ಗೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇಕೆ? ವಿವರಿಸಿದ ಚಿತ್ರತಂಡ

ಜಯಪ್ರಿಯ ಗಾಯಕರ ಸಂಗಮ:

‘ಕರಾವಳಿ’ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜನಪ್ರಿಯ ಗಾಯಕರಾದ ಸಿದ್ ಶ್ರೀರಾಮ್, ಸಾಯಿ ವಿಗ್ನೇಶ್, ಆಬಿ, ಬಿ. ಜಯಶ್ರೀ ಮತ್ತು ಆನಂದ್ ಶ್ರೀರಾಜ್ ಅವರ ಕಂಠದಲ್ಲಿ ಈ ಸಿನಿಮಾದ ಹಾಡುಗಳು ಮೂಡಿಬಂದಿವೆ. ಈಗಾಗಲೇ ಬಿಡುಗಡೆ ಆಗಿರುವ ‘ಮುದ್ದು ಗುಮ್ಮ..’ ಹಾಗೂ ‘ಸೋಲ್ ಆಫ್ ಕರಾವಳಿ’ ಹಾಡುಗಳು ಜನರಿಗೆ ಇಷ್ಟ ಆಗಿವೆ. ಈಗ ‘ರೇಜ್ ಆಫ್ ಕಂಬಳ’ ಕೂಡ ಸೇರ್ಪಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಥಾಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು – Kannada News | 1 Dead, several injured as crane collapses onto vehicles in Thane

ಮುಂಬೈ, ಜುಲೈ 16: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಇಂದು ಸಂಜೆ ಭೀಕರ ಅಪಘಾತವೊಂದು ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಬೃಹತ್ ಕ್ರೇನ್ ನಿಯಂತ್ರಣ ತಪ್ಪಿ ಕೆಳಗಡೆ ನಿಲ್ಲಿಸಲಾಗಿದ್ದ ಹಲವು ವಾಹನಗಳ ಮೇಲೆ ಉರುಳಿಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತವು ಮೀರಾ ರೋಡ್‌ನಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದಿದೆ. ಕ್ರೇನ್ ಅನ್ನು ಕಟ್ಟಡದ 13ನೇ ಮಹಡಿಯಲ್ಲಿ ನಿಲ್ಲಿಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ, ತಾಂತ್ರಿಕ ದೋಷದಿಂದ ಅದು ಭೀಕರ ಶಬ್ದದೊಂದಿಗೆ ನೇರವಾಗಿ ಕೆಳಗೆ ಬಿದ್ದಿದೆ.

ಆ ಕಟ್ಟಡದ ಕೆಳಗೆ ಹಾಗೂ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಹಲವು ಕಾರು ಮತ್ತು ಬೈಕ್​ಗಳ ಮೇಲೆ ಈ ದೈತ್ಯ ಕ್ರೇನ್ ಬಿದ್ದಿದೆ. ಇದರ ತೀವ್ರತೆಗೆ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಕ್ರೇನ್ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನಗಳಲ್ಲಿದ್ದ ಹಾಗೂ ಹತ್ತಿರದಲ್ಲಿದ್ದ ಇನ್ನು ಕೆಲವು ನಾಗರಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಭೇಟಿ ನೀಡಿದ್ದು, ವಾಹನಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version