ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್‌ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ – Kannada News | Karnataka Government Offices: Vidhana Soudha Enforces Strict Water and Power Saving Measures Amid Drought

ಬೆಂಗಳೂರು, ಜುಲೈ 16: ರಾಜ್ಯದ ಯಾವ ದಿಕ್ಕಿಗೆ ಹೋದರೂ ನೀರಿಲ್ಲ. ಕಳೆದ ವಾರ ಅಲ್ಪ ಸ್ವಲ್ಪ ಮಳೆಯಾದರೂ (Rain) ರಾಜ್ಯದ ಜಲಾಶಯಗಳು ತುಂಬುವಷ್ಟು ಒಳ ಹರಿವು ಬಂದಿಲ್ಲ. ಸದ್ಯ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ವಿಧಾನಸೌಧ ಮತ್ತು ಸಚಿವಾಲಯಗಳಿಗೂ ಬರಗಾಲದ ಬಿಸಿ ತಟ್ಟಿದ್ದು, ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಗಟ್ಟುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಗುರುವಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​ರಿಂದ ಕಟ್ಟುನಿಟ್ಟಿನ ಆದೇಶ

ದೇಶದಲ್ಲಿ ಎಲ್‌ನಿನೋ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಕೊರತೆ ಉಂಟಾಗಿದ್ದು, ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಬರಗಾಲದ ಬಿಸಿ ಈಗ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧಕ್ಕೂ ತಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಪೋಲಾಗುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ, ತಕ್ಷಣ ನೆರವಿಗೆ ಮನವಿ

ಇತ್ತೀಚಿನ ದಿನಗಳಲ್ಲಿ ಕಚೇರಿ ಸಮಯ ಮುಗಿದ ನಂತರವೂ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಎಸಿ ಸಾಧನಗಳನ್ನು ಆಫ್ ಮಾಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಸಚಿವಾಲಯದ ಎಲ್ಲಾ ಇಲಾಖೆಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿದ್ದಾರೆ.

ಪ್ರಮುಖ ನಿರ್ದೇಶನಗಳು ಮತ್ತು ನಿಯಮಗಳು

  • ನೈಸರ್ಗಿಕ ಬೆಳಕಿನ ಬಳಕೆ: ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು.
  • ಸಂಜೆ 6 ಗಂಟೆಯ ನಂತರ ಕಠಿಣ ನಿಗಾ: ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಸಂಜೆ 6 ಗಂಟೆಯ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಹಾಗೂ ಬೆಳಿಗ್ಗೆ 6ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
  • ಸ್ವಿಚ್-ಆಫ್ ಕಡ್ಡಾಯ: ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಯದ್ದಾಗಿರುತ್ತದೆ.
  • AC ತಾಪಮಾನ ನಿಯಂತ್ರಣ: ಅಧಿಕಾರಿಗಳ ಕಚೇರಿಗಳಲ್ಲಿನ AC ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು.
  • ತಂತ್ರಜ್ಞಾನದ ಅಳವಡಿಕೆ: ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
  • ನೀರು ಪೋಲಾಗುವುದಕ್ಕೆ ಬ್ರೇಕ್: ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು ಅಳವಡಿಸಲಾಗುವುದು ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು.

ಇದನ್ನೂ ಓದಿ: Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ

ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ನೀರಿನಂತಹ ಅತ್ಯಮೂಲ್ಯ ಸಂಪನ್ಮೂಲಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಆದೇಶವನ್ನು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಿನಿ ರಜನೀಶ್ ಆದೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮೃತ್ ಭಾರತ್ ನಿಲ್ದಾಣ ಯೋಜನೆ; ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ – Kannada News | Amrit Bharat Station Scheme is transforming 1,300 Railway stations 75 stations will be inaugurated by PM Modi tomorrow

ನವದೆಹಲಿ, ಜುಲೈ 16: ಭಾರತೀಯ ರೈಲ್ವೆಯನ್ನು (Indian Railways) ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಆಧುನೀಕರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ‘ಅಮೃತ್ ಭಾರತ್ ನಿಲ್ದಾಣ ಯೋಜನೆ’ (Amrit Bharat Station Scheme). ಈ ಯೋಜನೆಯಡಿ ದೇಶಾದ್ಯಂತ ಒಟ್ಟು 1,340 ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಹಾಗೂ ಸಾಂಸ್ಕೃತಿಕ ಸೊಗಡಿನ ತಾಣಗಳನ್ನಾಗಿ ಮರುರೂಪಿಸಲಾಗುತ್ತಿದೆ. ಈ ಅಭಿವೃದ್ಧಿ ಕ್ರಾಂತಿಯ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಮರುರೂಪಿಸಲಾದ 75 ರೈಲ್ವೆ ನಿಲ್ದಾಣಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಾಳೆ (ಶುಕ್ರವಾರ) ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಲಿದ್ದಾರೆ.

ಈ ಮೂಲಕ ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಕಾರಿ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಬರೋಬ್ಬರಿ 71,000 ಕೋಟಿ ರೂ. ಬೃಹತ್ ಹೂಡಿಕೆಯೊಂದಿಗೆ ರೈಲ್ವೆ ಜಾಲವನ್ನು ವಿಶ್ವದರ್ಜೆಯ ಸಾರಿಗೆ ಹಬ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಒಟ್ಟು 1,340 ರೈಲ್ವೆ ನಿಲ್ದಾಣಗಳು ಒಂದು ಭವ್ಯ ದೃಷ್ಟಿಕೋನದೊಂದಿಗೆ ಸಂಪೂರ್ಣ ಆಧುನಿಕ ಹಾಗೂ ಸುಂದರ ರೂಪಾಂತರವನ್ನು ಪಡೆಯುತ್ತಿವೆ. ದೇಶಾದ್ಯಂತ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾರ್ಯವು ಅತ್ಯಂತ ವೇಗವಾಗಿ ಸಾಗುತ್ತಿದ್ದು, ಅತ್ಯಾಧುನಿಕ ಸೌಲಭ್ಯಗಳು ಸಾರ್ವಜನಿಕ ಸೇವೆಗೆ ಸಿದ್ಧವಾಗುತ್ತಿವೆ. ಈಗಾಗಲೇ ಒಟ್ಟು 122 ರೈಲ್ವೆ ನಿಲ್ದಾಣಗಳ ಆಧುನೀಕರಣದ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ.

(Video Source: Indian Railways)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ:ಲಾಲ್ ಬಾಗ್ ನಲ್ಲಿ ಮರ ಕಡಿಯದಂತೆ ನೀಡಿದ್ದ ಮಧ್ಯಂತರ ಆದೇಶ ಮುಂದುವರಿಕೆ – Kannada News | Karnataka High Court postponed August 20 PIL against Bengaluru tunnel road project

ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website

ಬೆಂಗಳೂರು, (ಜುಲೈ 16): ಬೆಂಗಳೂರಿನ (Bengaluru) ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಆಗಸ್ಟ್ 20ಕ್ಕೆ ನಿಗದಿಪಡಿಸಿದೆ. ಸುರಂಗ ರಸ್ತೆ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಪ್ರಕಾಶ್ ಬೆಳವಾಡಿ, ಡಾ. ಎ.ರವೀಂದ್ರ, ಸಿಟಿಜನ್ ಆಕ್ಷನ್ ಫೋರಂ ಸಲ್ಲಿಸಿದ್ದ  ಪಿಐಎಲ್ ಅರ್ಜಿಯನ್ನು ಇಂದು (ಜುಲೈ 16) ವಿಚಾರಣೆ ನಡೆಸಿದ ಕೋರ್ಟ್, ಕಾಮಗಾರಿ ಹೈಕೋರ್ಟ್​ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಪಿಐಎಲ್ ಬಾಕಿಯಿರುವ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರ ಪರ ತೇಜಸ್ವಿ ಸೂರ್ಯ, ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದರು.

ಕಳೆದ ವಿಚಾರಣೆಯ ವೇಳೆ ನ್ಯಾಯಾಲಯವು ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾಪನ ಪ್ರಾಧಿಕಾರ, ನಗರ ಭೂಸಾರಿಗೆ ನಿರ್ದೇಶನಾಲಯ, ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ(ಸ್ಮೈಲ್) ರಾಡಿಕ್ ಕನ್ಸಲ್ಟೆಂಟ್ಸ್ ಮತ್ತು ಆಲ್ಟಿನೋಕ್ ಕನ್ಸಲ್ಟೆಂಟ್ಸ್ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತ್ತು. ಅಲ್ಲದೆ, ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಂತಹ ಸೂಕ್ಷ್ಮ ಪ್ರದೇಶಗಳ ಅಡಿಯಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(ಎಖಐ)ದಿಂದ ಅಭಿಪ್ರಾಯ ಪಡೆಯುವಂತೆ ಸೂಚಿಸಿತ್ತು.

ಇದನ್ನೂ ಓದಿ: ತೇಜಸ್ವಿ ಸೂರ್ಯ ಬಗ್ಗೆ ಕೇಳಬೇಡಿ, ಆತ ವೇಸ್ಟ್ ಮೆಟೀರಿಯಲ್: ಸುರಂಗ ರಸ್ತೆ ವಿರೋಧಿಸಿದ್ದಕ್ಕೆ ಡಿಕೆ ಶಿವಕುಮಾರ್ ತಿರುಗೇಟು

ಹಿನ್ನೆಲೆ: ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವ ಸಲುವಾಗಿ ಹೆಬ್ಬಾಳದಿಂದ ಸಿಲ್ಕ್‌  ಬೋರ್ಡ್‌ವರೆಗೆ ಸುಮಾರು 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಬೆಂಗಳೂರು ಜೋಡಿ ಸುರಂಗ ರಸ್ತೆ ಯೋಜನೆಗೆ 2025ರ ಜು.14ರಂದು ಕರೆದಿರುವ ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಜತೆಗೆ ಆರ್ಎಫ್ಪಿ ಪ್ರಕಟಣೆ, ಪೂರ್ವ-ಬಿಡ್ ಪ್ರಕ್ರಿಯೆಗಳು, ಬಿಡ್ ಸಲ್ಲಿಕೆ, ಬಿಡ್ ಮೌಲ್ಯಮಾಪನ ಮತ್ತು ಉದ್ದೇಶಿತ ಟೆಂಡರ್ ಪ್ರಸ್ತಾವ ಅಂತಿಮಗೊಳಿಸುವ ಪತ್ರ ಸೇರಿದಂತೆ ಎಲ್ಲಾ ಹಂತಗಳನ್ನೂ ರದ್ದುಗೊಳಿಸಲು ಕೋರಲಾಗಿದೆ. ಸುರಂಗ ಮಾರ್ಗ ಯೋಜನೆಗೆ ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ 2024ರ ನ.26ರಂದು ನೀಡಿರುವ ಪತ್ರವನ್ನು ರದ್ದುಗೊಳಿಸಲು ಸಹ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಶತಕದ ಪಂದ್ಯದಲ್ಲಿ 78ನೇ ಏಕದಿನ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ – Kannada News | Virat Kohli’s Record Breaking ODI: 78th Half Century and Sophia Gardens Milestone vs England

ಎಂದಿನಂತೆ ಶುಭ್​ಮನ್ ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್​ಗಿಳಿದ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರೆ, ಇನ್ನೊಂದು ಅಚ್ಚರಿಯ ಸಂಗತಿಯಂತೆ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಅರ್ಧಶತಕವನ್ನು ಪೂರೈಸಿದರು. ಕೊಹ್ಲಿ 50 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 78 ನೇ ಅರ್ಧಶತಕವನ್ನು ಪೂರೈಸಿದರು(PC-BCCI).

Source link

ಸಂಪುಟ ವಿಸ್ತರಣೆ ಸರ್ಕಸ್: ಹೈಕಮಾಂಡ್‌ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ, ತಮ್ಮದೇ ಪಟ್ಟಿ ಸಿದ್ಧಪಡಿಸಿಕೊಂಡಿರೋ ರಾಹುಲ್ – Kannada News | Karnataka Cabinet Expansion: Congress High command Plan New Face In Cabinet Birth, Rahul Gandhi created separate List

ನವದೆಹಲಿ, (ಜುಲೈ 16): ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಿ 1 ತಿಂಗಳಿಗೂ ಹೆಚ್ಚು ದಿನಗಳಾಗಿದೆ. ಕೇವಲ 13 ಮಂದಿ ಸಚಿವರನ್ನ ಇಟ್ಕೊಂಡು ಡಿಕೆಶಿ ಸರ್ಕಾರ ನಡೆಸ್ತಿದ್ದಾರೆ. ಪ್ರಬಲ ಖಾತೆಗಳಿಗೆ ಇನ್ನೂ ಸಚಿವರನ್ನೇ ನೇಮಕ ಮಾಡಿಲ್ಲ. ಹೀಗಾಗಿಯೇ ಸಿಎಂ ಡಿಕೆ ಶಿವಕಿಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿದ್ದು, ಇಂದು (ಜುಲೈ 16) ರಾಹುಲ್ ಗಾಂಧಿ ಜೊತೆ ಮಹತ್ವದ ಚರ್ಚೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ 10 ಜನಪತ್ ನಿವಾಸದಲ್ಲೂ ಸಭೆ ನಡೆದಿದ್ದು, ಸಂಪುಟ ವಿಸ್ತರಣೆ (cabinet expansion) ಸಂಬಂಧ ಮೀಟಿಂಗ್ ಆಯ್ತು. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೇವಾಲ, ಕೆಸಿ.ವೇಣುಗೋಪಾಲ್, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಸೋನಿಯಾ ಗಾಂಧಿ ಸಮ್ಮುಖದಲ್ಲಿ ಚರ್ಚೆ ನಡೀತು. ಆದ್ರೆ ಅಂದುಕೊಂಡಂತೆ ಯಾವುದೂ ಫೈನಲ್ ಆಗಲಿಲ್ಲ. ಯಾಕೆಂದ್ರೆ ಅಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಪಸ್ಥಿತಿ ಇತ್ತು.

ಹೈಕಮಾಂಡ್​ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ

ಮೂಲಗಳ ಮಾಹಿತಿ ಪ್ರಕಾರ ರಾಜ್ಯ ನಾಯಕರ ಪಟ್ಟಿ ಹೈಕಮಾಂಡ್​ಗೆ ಒಪ್ಪಿಗೆ ಆಗಿಲ್ಲ. ಹೊಸ ಮುಖಗಳಿಗೆ ಮನ್ನಣೆ ನೀಡಲು ಹೈಕಮಾಂಡ್ ಒಲವು ಇದೆ. ಆದ್ರೆ ಹಿರಿಯರಿಗೆ ಮಣೆ ಹಾಕುವಂತೆ ರಾಜ್ಯ ನಾಯಕರು ಒತ್ತಡ ಹಾಕಿದ್ದಾರೆ. ಹಿರಿಯ ನಾಯಕರ ಜತೆ ಕೆಲ ನೂತನ ಶಾಸಕರಿಗೆ ಅವಕಾಶ ಕೊಡಿ ಎಂದು ರಾಜ್ಯ ನಾಯಕರು ಒತ್ತಡ ಹಾಕಿದ್ದಾರೆ. ಆದ್ರೆ ರಾಜ್ಯ ನಾಯಕರ ಮಾತಿಗೆ ರಾಹುಲ್ ಗಾಂಧಿ ಒಪ್ಪಿಲ್ಲ.

ಇದನ್ನೂ ನೋಡಿ: ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್

ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿರುವ ರಾಹುಲ್ ಗಾಂಧಿ

ಇನ್ನು ರಾಹುಲ್ ಗಾಂಧಿ ಅವರು ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಪರ್ಯಾಯ ಏಜೆನ್ಸಿ ಮೂಲಕ ಮಾಹಿತಿ ಪಡೆದಿರೋ ರಾಹುಲ್, ಆ ಮಾಹಿತಿಯನ್ನೇ ಆಧರಿಸಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಹೊಸ ಮುಖಗಳಿಗೆ ಮಣೆ ಹಾಕೋಕೆ ರಾಜ್ಯ ನಾಯಕರು ಹಿಂದೇಟು ಹಾಕಿದ್ದಾರೆ. ಹೀಗಾಗಿ ರಾಹುಲ್ ಜೊತೆಗಿನ ಸಭೆ ಕೇವಲ 10 ನಿಮಿಷಕ್ಕೆ ಅಂತ್ಯ ಆಗಿದೆ. ಡಿಕೆ, ಸಿದ್ದು, ಬಿ.ಕೆ.ಹರಿಪ್ರಸಾದ್ ಜೊತೆ ಪ್ರತ್ಯೇಕ ಚರ್ಚೆ ಮಾಡಿರೋ ರಾಹುಲ್ ಗಾಂಧಿ, ಮುಂದಿನ ವಾರ ಮತ್ತೆ ಮಾತುಕತೆ ಮಾಡೋಣ ಅಂದಿದ್ದಾರೆ.

ಇನ್ನೊಂದೆಡೆ ಮಂತ್ರಿ ಸ್ಥಾನ ಪಡೆದುಕೊಳ್ಳಲು ಅನೇಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಇಪ್ಪತ್ತು ಸ್ಥಾನಗಳ ಪೈಕಿ ಐವತ್ತು ಮಂದಿ ಲಾಬಿ ನಡೆಸುತ್ತಿದ್ದಾರೆ. ಆದರೆ ಎಷ್ಟು ಜನರಿಗೆ ಈ ಬಾರಿ ಅವಕಾಶ ಸಿಗುತ್ತದೆ? ಯಾರಿಗೆಲ್ಲಾ ಮಂತ್ರಿ ಸ್ಥಾನ? ಸಿಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಇವತ್ತು ರಾತ್ರಿಯೊಳಗೆ ಹೈಕಮಾಂಡ್​ನಿಂದ ಶುಭ ಸುದ್ದಿ ಬರಬಹುದು ಅಂತಾ ಎಲ್ಲರೂ ನಿರೀಕ್ಷೆ ಇಟ್ಕೊಂಡಿದ್ರು. ಆದ್ರೆ ಮತ್ತೆ ವಿಳಂಬ ಆಗ್ತಿದೆ. ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ, ಶುಭ ಘಳಿಗೆ, ಶುಭ ಸಮಯ, ಶುಭ ಸಂದರ್ಭ ಕೂಡಿ ಬರುತ್ತಿಲ್ಲ. ಅದ್ಯಾವ ರಾಹು ಕೇತು ವಕ್ಕರಿಸಿಕೊಂಡಿದ್ಯೋ? ಏನೋ? ಸಂಪುಟ ವಿಸ್ತರಣೆಗೆ ಹಿಡಿದ ಗ್ರಹಣ ಮಾತ್ರ ಬಿಡುತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆ ಹಗರಣ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ – Kannada News | Karnataka Strengthens Temple Security Following Ayodhya Donation Scandal

ಬೆಂಗಳೂರು, ಜುಲೈ 16: ಅಯೋಧ್ಯೆ ರಾಮಮಂದಿರ ಹುಂಡಿ ಅವ್ಯವಹಾರದ ಬೆನ್ನಲ್ಲೇ ಅಲರ್ಟ್ ಆಗಿರುವ ರಾಜ್ಯ ಸರ್ಕಾರವು ರಾಜ್ಯದ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿನ ಕಾಣಿಕೆ ಹುಂಡಿಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಕುರಿತಾಗಿ ಡಿಸಿಎಂ ಜಿ. ಪರಮೇಶ್ವರ್​ ಮಾತನಾಡಿದ್ದು, ‘‘ರಾಜ್ಯದಲ್ಲಿ 39 ಸಾವಿರ ದೇವಸ್ಥಾನಗಳು ಮುಜರಾಯಿ ಅಡಿಯಲ್ಲಿವೆ. ಮುಜರಾಯಿಗೆ ಸೇರದ ದೇವಸ್ಥಾನಗಳೂ ಇವೆ. ಎ ದರ್ಜೆಯ ದೇವಸ್ಥಾನಕ್ಕೆ ಸಾಕಷ್ಟು ಹಣ ಬರುತ್ತೆ. ಹುಂಡಿ ಇತರೆ ಸ್ಥಳಕ್ಕೆ ಸಿಸಿಟಿಸಿ ಹಾಕಿ ಕೇಂದ್ರೀಕೃತ ಸರ್ವರ್​​ ಅಳವಡಿಸಬೇಕು. ಕೇಂದ್ರ ಸ್ಥಾನದಿಂದಲೇ ಮಾನಿಟರ್ ಮಾಡಬೇಕು ಎಂದು ಆದೇಶ ಮಾಡಿದ್ದೇವೆ. ದೇವಸ್ಥಾನದ ಹಣವನ್ನು ಆ ದೇವಸ್ಥಾನಕ್ಕೆ ಖರ್ಚು ಮಾಡಬೇಕು. ಅದಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. 10% ಹಣವನ್ನು ಸಿ‌ ದರ್ಜೆಯ ದೇವಸ್ಥಾನಕ್ಕೆ ಕೊಡಬಹುದು, ಅದು ಬಿಟ್ಟರೆ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲ್ಲ’’ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; ಉಸಿರುಗಟ್ಟಿ ಓರ್ವ ಭಕ್ತ ಸಾವು, ಹಲವರಿಗೆ ಗಾಯ – Kannada News | One dead, several injured in stampede during Puri Jagannath Rath Yatra

ಪುರಿ, ಜುಲೈ 16: ಒಡಿಶಾದ ಪುರಿಯಲ್ಲಿ ಇಂದು ಅತ್ಯಂತ ವೈಭವದಿಂದ ಆರಂಭವಾದ ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯ (Puri Jagannath Rath Yatra) ಸಂದರ್ಭದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಉಸಿರುಗಟ್ಟಿ ಓರ್ವ ಭಕ್ತ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವತೆ ಸುಭದ್ರೆಯ ರಥ ಎಳೆಯುವ ಪವಿತ್ರ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಜಮಾಯಿಸಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಕಟಕ್ ಜಿಲ್ಲೆಯ ನಿವಾಸಿಯಾದ 35 ವರ್ಷದ ಅನಿಲ್ ದಾಸ್ ಎಂದು ಗುರುತಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ?:

ರಥ ಯಾತ್ರೆಯನ್ನು ವೀಕ್ಷಿಸಲು ಭಕ್ತರು ಪುರಿಯ ಪ್ರಮುಖ ರಸ್ತೆಯಾದ ‘ಬಡಾ ದಂಡಾ’ ಬಳಿ ಕಾಯುತ್ತಿದ್ದಾಗ ಅನಿಲ್ ದಾಸ್ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪುರಿ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನೂಕುನುಗ್ಗಲಿನಿಂದಾಗಿ ಇನ್ನೂ ಕೆಲವು ಭಕ್ತರಿಗೆ ಗಾಯಗಳಾಗಿದ್ದು, ತುರ್ತು ರಕ್ಷಣಾ ತಂಡಗಳು ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನದಟ್ಟಣೆಯನ್ನು ನಿರ್ವಹಿಸಲು ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ.

ಇದನ್ನೂ ಓದಿ: ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ, ಎಲ್ಲೆಲ್ಲೂ ಭಕ್ತಸಾಗರ

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ, ಲಕ್ಷಾಂತರ ಭಕ್ತರು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ 9 ದಿನಗಳ ವಾರ್ಷಿಕ ರಥಯಾತ್ರೆ ವೀಕ್ಷಿಸಲು ಜಮಾಯಿಸಿದ್ದರು. ಈ ಪವಿತ್ರ ಆಚರಣೆಯು ವಿಷ್ಣುವಿನ ಸುದರ್ಶನ ಚಕ್ರವನ್ನು ಜಗನ್ನಾಥ ದೇವಾಲಯದಿಂದ ಹೊರತಂದು ಸುಭದ್ರೆಯ ‘ದರ್ಪದಾಲನ್’ ರಥದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಆರಂಭವಾಯಿತು. ನಂತರ ಜಗನ್ನಾಥನ ಹಿರಿಯ ಸಹೋದರ ಬಲಭದ್ರನನ್ನು ‘ತಾಳಧ್ವಜ’ ರಥಕ್ಕೆ ಮತ್ತು ಜಗನ್ನಾಥನನ್ನು ‘ನಂದಿಘೋಷ’ ರಥಕ್ಕೆ ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.

ಈ ವೇಳೆ ಭಕ್ತರು “ಜೈ ಜಗನ್ನಾಥ್” ಎಂದು ಘೋಷಣೆಗಳನ್ನು ಕೂಗಿದರು. ಒಡಿಸ್ಸಿ ನೃತ್ಯಗಾರರು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ ಸಿನಿಮಾ ನೋಡಬೇಡಿ’; ಆಸ್ಟ್ರೇಲಿಯಾದಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಲಹೆ; ಕಾರಣ ಏನು? – Kannada News | Ranbir Kapoor Ramayana Movie M Rating Australian Classification Board Reasons details

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಲಿದ್ದು, ಇದಕ್ಕೂ ಮುನ್ನ ಚಿತ್ರದ ಬಗ್ಗೆ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯು (Australian Classification Board) ಈ ಚಿತ್ರದ ಸ್ಪೆಷಲ್ ವಿಡಿಯೋ ಪ್ಯಾಕೇಜ್‌ಗೆ ‘M’ (Mature) ರೇಟಿಂಗ್ ನೀಡಿದೆ. ಇದರಿಂದ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

‘M’ ರೇಟಿಂಗ್ ನೀಡಲು ಕಾರಣವೇನು?

ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರದಲ್ಲಿ ಮಧ್ಯಮ ಪ್ರಮಾಣದ ಹಿಂಸಾಚಾರ ಇರುವುದರಿಂದ ಇದಕ್ಕೆ ‘M’ ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾದ ನಿಯಮಗಳ ಪ್ರಕಾರ, ‘M’ ರೇಟಿಂಗ್ ಹೊಂದಿರುವ ಸಿನಿಮಾಗಳನ್ನು 15 ವರ್ಷದೊಳಗಿನ ಮಕ್ಕಳು ವೀಕ್ಷಿಸುವುದನ್ನು ಶಿಫಾರಸು ಮಾಡುವುದಿಲ್ಲ. ಆದರೆ, ಇದು ಕೇವಲ ಒಂದು ಸಲಹೆಯಾಗಿದ್ದು, ಕಾನೂನುಬದ್ಧವಾಗಿ ಮಕ್ಕಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಕ್ಕೆ ಯಾವುದೇ ನಿಷೇಧ ಇರುವುದಿಲ್ಲ. ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ಇದನ್ನು ವೀಕ್ಷಿಸಬಹುದಾಗಿದೆ.

ಸಿನಿಮಾದ ಕಥಾಹಂದರ ಹೀಗಿದೆ:

ಸೆನ್ಸಾರ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಚಿತ್ರದ ಸಂಕ್ಷಿಪ್ತ ಕಥೆಯನ್ನು ಬರೆಯಲಾಗಿದೆ. ‘ಇದು ಯುವ ರಾಜಕುಮಾರ ಮತ್ತು ರಾಜಕುಮಾರಿಯ ಪುರಾತನ ಮಹಾಕಾವ್ಯವಾಗಿದೆ. ಇವರ ವಿವಾಹ ಮತ್ತು ತದನಂತರದ ವನವಾಸವು ಒಂದು ಐತಿಹಾಸಿಕ ಪ್ರಯಾಣಕ್ಕೆ ನಾಂದಿ ಹಾಡುತ್ತದೆ. ಕರ್ತವ್ಯ, ಪ್ರೀತಿ ಮತ್ತು ವಿಧಿಯ ಈ ಕಥೆಯು ಮುಂದೆ ಎದುರಾಗಲಿರುವ ದೊಡ್ಡ ಸವಾಲುಗಳಿಗೆ ಸಾಕ್ಷಿಯಾಗಲಿದೆ’ ಎಂದು ವಿವರ ನೀಡಲಾಗಿದೆ.

ಚೀನಾ ಮಾರುಕಟ್ಟೆ ಮೇಲೆ ಕಣ್ಣಿಟ್ಟ ಚಿತ್ರತಂಡ:

ಮತ್ತೊಂದೆಡೆ, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ: ಪಾರ್ಟ್ 1’ ಚಿತ್ರವನ್ನು ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ. 2020ರ ನಂತರ ಚೀನಾದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಸೂಕ್ತ ಮಾರುಕಟ್ಟೆ ಸಿಕ್ಕಿರಲಿಲ್ಲ. ಆದರೆ, ರಾಮಾಯಣ ಚಿತ್ರದ ಮೂಲಕ ಚೀನಾ ಮಾರುಕಟ್ಟೆಯನ್ನು ಮತ್ತೊಮ್ಮೆ ವಶಪಡಿಸಿಕೊಳ್ಳಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: ದೆಹಲಿಯ ಭಾರತ್ ಮಂಟಪದಲ್ಲಿ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಟ್ರೇಲರ್ ಲಾಂಚ್?

ಜುಲೈ 11ರಂದು ಘೋಷಣೆ ಮಾಡಿರುವಂತೆ, ‘ರಾಮಾಯಣ’ ಚಿತ್ರತಂಡವು ಜುಲೈ 24ರಂದು ಜಾಗತಿಕವಾಗಿ ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ದೆಹಲಿಯಲ್ಲಿ ದೊಡ್ಡ ಇವೆಂಟ್ ನಡೆಸುವ ಪ್ಲ್ಯಾನ್ ಕೂಡ ಇದೆ ಎನ್ನಲಾಗಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟ್ರಂಪ್‌ನನ್ನು ಕೊಲ್ಲುತ್ತೇವೆ’; ಇರಾನ್‌ನಲ್ಲಿ ಬೃಹತ್ ಬ್ಯಾನರ್! – Kannada News | We Will Kill Trump Irans New Warning big Billboard Puts US President In A Coffin

ಟೆಹ್ರಾನ್, ಜುಲೈ 16: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸಿದೆ ಎಂಬ ವರದಿಗಳ ನಡುವೆಯೇ ಇರಾನ್ ರಾಜಧಾನಿ ಟೆಹ್ರಾನ್‌ನ ಪ್ರಮುಖ ವೃತ್ತವಾದ ‘ಎಂಘೆಲಾಬ್ ಸ್ಕ್ವೇರ್’ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಬಿಂಬಿಸುವ ಬೃಹತ್ ಬಿಲ್​ಬೋರ್ಡ್ (ಬ್ಯಾನರ್) ಒಂದನ್ನು ಅಳವಡಿಸಲಾಗಿದೆ. ಅಮೆರಿಕ-ಇಸ್ರೇಲ್ ಜಂಟಿ ಪಡೆಗಳು ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಈ ಜನಾಂಗೀಯ ದ್ವೇಷದ ಬಿಲ್​ಬೋರ್ಡ್‌ಗಳನ್ನು ಹಾಕಲಾಗಿದೆ.

ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷ!:

ಟೆಹ್ರಾನ್‌ನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಹಾಕಲಾಗಿರುವ ಈ ಬೃಹತ್ ಹೋಲ್ಡಿಂಗ್‌ನಲ್ಲಿ ತೆರೆದ ಕಪ್ಪು ಬಣ್ಣದ ಶವಪೆಟ್ಟಿಗೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೇಹವು ಹೊರಬರುತ್ತಿರುವಂತೆ ತೋರಿಸಲಾಗಿದೆ. ಅದರಲ್ಲಿ ಅವರ ಕೂದಲು ಕೆದರಿದ್ದು, ಕಣ್ಣು ಮತ್ತು ಬಾಯಿ ಮುಚ್ಚಿವೆ. ಕೆಂಪು ಬಣ್ಣದ ಟೈ ಮೇಲೆ ಕೈಗಳನ್ನು ಇಡಲಾಗಿದ್ದು, ಪಾದಗಳು ನೇರವಾಗಿ ಮೇಲಕ್ಕೆ ಚಾಚಿಕೊಂಡಿವೆ. ಈ ಕಪ್ಪು ಶವಪೆಟ್ಟಿಗೆಯ ಮೇಲೆ ಪರ್ಷಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ “ನಾವು ಟ್ರಂಪ್‌ನನ್ನು ಕೊಲ್ಲುತ್ತೇವೆ” ಎಂದು ಬರೆಯಲಾಗಿದೆ. ಫೆಬ್ರವರಿ 28ರಂದು ಯುದ್ಧ ಆರಂಭವಾದಾಗ ಮೃತಪಟ್ಟ ಮಾಜಿ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸ್ಮರಣಾರ್ಥವಾಗಿ ಹಾಕಲಾದ ಈ ಬ್ಯಾನರ್‌ನಲ್ಲಿ ದಕ್ಷಿಣ ಇರಾನ್‌ನ ಮಿನಾಬ್ ನಗರದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಮಕ್ಕಳ ನೆನಪಿನ ಸಂದೇಶಗಳೂ ಇವೆ.

ಇದನ್ನೂ ಓದಿ: ಮಹಾಯುದ್ಧದ ಭೀತಿ: ಇರಾನ್‌ನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ, MQ-9 ಡ್ರೋನ್ ಹೊಡೆದುರುಳಿಸಿದ ಇರಾನ್

ಇರಾನ್ ತನ್ನ ರಾಜಕೀಯ ಸಂದೇಶಗಳನ್ನು ರವಾನಿಸಲು ಸಾರ್ವಜನಿಕ ಸ್ಥಳಗಳನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ಇತ್ತೀಚಿನ ವಾರಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಇಂತಹ ಹಲವು ಉಗ್ರ ಸಂದೇಶಗಳ ಬಿಲ್​ಬೋರ್ಡ್​ಗಳು ಕಾಣಿಸಿಕೊಂಡಿವೆ. ಕಳೆದ ಮೇ ತಿಂಗಳಿನಲ್ಲಿ ಅಮೆರಿಕನ್ನರನ್ನು ಗುರಿಯಾಗಿಸಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಟ್ರಂಪ್ ಅವರ ಬಾಯಿಯನ್ನು ಹಾರ್ಮುಜ್ ಜಲಸಂಧಿಯ ಫೋಟೋದೊಂದಿಗೆ ಹೊಲಿಯಲಾಗಿತ್ತು.

ಮಿಲಿಟರಿ ಶಕ್ತಿ ಪ್ರದರ್ಶನ:

ಮತ್ತೊಂದು ಬಿಲ್​ಬೋರ್ಡ್‌ನಲ್ಲಿ ಪರ್ಷಿಯನ್ ಗಲ್ಫ್‌ನಲ್ಲಿ ಬೃಹತ್ ಮೀನುಗಾರಿಕೆ ಬಲೆಯನ್ನು ತೋರಿಸಲಾಗಿದ್ದು, ಅದರಲ್ಲಿ ಅಮೆರಿಕದ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ನೌಕಾಪಡೆಯ ಹಡಗುಗಳನ್ನು ಸೆರೆಹಿಡಿದಿರುವುದನ್ನು ಚಿತ್ರಿಸಲಾಗಿತ್ತು. ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಇರಾನ್ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್

ಇದರ ಭಾಗವಾಗಿ ಇರಾನ್‌ನ ಪ್ರಮುಖ ಕನ್ಸರ್ವೇಟಿವ್ ದಿನಪತ್ರಿಕೆಯೊಂದು ಸೇಡು ತೀರಿಸಿಕೊಳ್ಳಬೇಕಾದ ಜಾಗತಿಕ ನಾಯಕರ ಹಿಟ್‌ಲಿಸ್ಟ್ ಒಂದನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಒಟ್ಟು 13 ಜಾಗತಿಕ ನಾಯಕರ ಫೋಟೋಗಳನ್ನು ಪ್ರಕಟಿಸಿ, ಇವರನ್ನು ಗುರಿಯಾಗಿಸಲಾಗುವುದು ಎಂದು ಇರಾನ್ ಮಾಧ್ಯಮಗಳು ಎಚ್ಚರಿಸಿವೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಜಾಗತಿಕ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೇಂದ್ರದಿಂದ ಗ್ರಾ.ಪಂಗಳ 2,186 ಕೋಟಿ ಬಾಕಿ ಹಣ ಬಿಡುಗಡೆಗೆ ಸಚಿವ ಈಶ್ವರ ಖಂಡ್ರೆ ಕಸರತ್ತು – Kannada News | Karnataka Grama Panchayat Funds Delayed: Eshwar Khandre Writes to MPs

ಸಚಿವ ಈಶ್ವರ ಖಂಡ್ರೆImage Credit source: x.com/eshwar_khandre

ಬೆಂಗಳೂರು, ಜುಲೈ 16: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ಬಿಡುಗಡೆಯಾಗಬೇಕಿದ್ದ 2,186.20 ಕೋಟಿ ರೂ ಬಾಕಿ ಅನುದಾನವನ್ನು (15th Finance Commission funds) ಕೇಂದ್ರ ಸರ್ಕಾರ ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರ ಮೇಲೆ ಒತ್ತಡ ಹೇರಿ ಹಣ ಬಿಡುಗಡೆ ಮಾಡಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ (Eshwara Khandre) ರಾಜ್ಯದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭೆ ಸಂಸದರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?

‘‘ಈ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿದ್ದ ನಾನು, ಪ್ರಸ್ತುತ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಪುಟ ದರ್ಜೆ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದು, ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ತಮ್ಮ ಬೆಂಬಲ ಮತ್ತು ಸಹಕಾರವನ್ನು ಬಯಸುತ್ತೇನೆ’’ ಎಂದಿದ್ದಾರೆ.

ಇದನ್ನೂ ಓದಿ: ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ: ರೈತರ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

‘‘ಕೇಂದ್ರ ಸರ್ಕಾರ 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿದ್ದ 15ನೇ ಹಣಕಾಸು ಆಯೋಗದ ಅನುದಾನದ 2186.20 ಕೋಟಿ ರೂ ತಾಂತ್ರಿಕ ಕಾರಣ ನೀಡಿ ಈವರೆಗೂ ಬಿಡುಗಡೆ ಮಾಡಿಲ್ಲ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಪ್ರಸಕ್ತ ವರ್ಷ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಮಳೆ ಕೊರತೆ ಉಂಟಾಗಿದ್ದು, ಮಳೆ ಆಶ್ರಿತ ಪ್ರದೇಶಗಳ ಗ್ರಾಮೀಣ ಜನರು ತೀವ್ರ ಸಂಕಷ್ಟದಲ್ಲಿದ್ದು, ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿದೆ ಎಂಬುದು ತಮಗೂ ತಿಳಿದಿದೆ.’’

ಗ್ರಾಮೀಣಾಭಿವೃದ್ಧಿಗೆ ತೊಡಕಾದ ನಿರ್ಧಾರ

‘‘ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-2026ನೇ ಆರ್ಥಿಕ ವರ್ಷದ 2186.20 ಕೋಟಿ ರೂ. ತಡೆ ಹಿಡಿದಿರುವುದು ಗ್ರಾಮೀಣ ಅಭಿವೃದ್ಧಿಗೆ ತೊಡಕಾಗಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆ ಅನುದಾನಗಳಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಾರ್ಯಾಚರಣಾ ಮಾರ್ಗಸೂಚಿಗಳ ಅಡಿಯಲ್ಲಿ ನಿಗದಿಪಡಿಸಲಾದ ಎಲ್ಲಾ ನಿಗದಿತ ಷರತ್ತುಗಳನ್ನು ರಾಜ್ಯ ಸರ್ಕಾರವು ಪಾಲಿಸಿದೆ. ರಾಜ್ಯವು 2024-25ರ ಆರ್ಥಿಕ ವರ್ಷಕ್ಕೆ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು 08.07.2025 ಮತ್ತು 24.09.2025 ರಂದು ಒದಗಿಸಿರುವುದಲ್ಲದೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಆಗಸ್ಟ್ 2025ರೊಳಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಅಪ್ ಲೋಡ್ ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಿದೆ.’’

‘‘ಜೊತೆಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಪ್ರಸ್ತಾಪಿಸಿದ ಎಲ್ಲಾ ಪ್ರಶ್ನೆಗಳಿಗೆ ರಾಜ್ಯವು ಸಕಾರಾತ್ಮಕವಾಗಿ ಉತ್ತರಿಸಿದೆ. ರಾಜ್ಯ ಸರ್ಕಾರದ ನಿರಂತರ ಅನುಸರಣೆಯ ಹೊರತಾಗಿಯೂ, ಕೇಂದ್ರ ಪಂಚಾಯತ್ ರಾಜ್ ಇಲಾಖೆ ತಂತ್ರಾಂಶದಲ್ಲಿನ ತೊಡಕುಗಳನ್ನು ಆಧಾರವಾಗಿಟ್ಟುಕೊಂಡು 2025-26ರ ಸಾಲಿಗೆ ಸಂಬಂಧಿಸಿದಂತೆ 15ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವುದಿಲ್ಲ ಎಂಬ ನಿಲುವು ತಳೆದಿರುವುದರಿಂದ ರಾಜ್ಯದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ.’’

ಇದನ್ನೂ ಓದಿ: ಹೆಚ್ಎಂಟಿ ಕಾರ್ಖಾನೆ ಜಾಗ ವಿವಾದ: ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ

‘‘ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಸಚಿವರಾಗಿರುವ ಹಾಗೂ ರಾಜ್ಯದ ಸಂಸದರಾದ ತಾವು ಕೇಂದ್ರ ಪಂಚಾಯತ್ ರಾಜ್ ಸಚಿವರಿಗೆ ಮನವರಿಕೆ ಮಾಡಿಸಿ, ಕೇಂದ್ರ ಸರ್ಕಾರದಿಂದ ರಾಜ್ಯದ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಾದ 2186.20 ಕೋಟಿ ರೂ. ಹಣ ಬಿಡುಗಡೆ ಮಾಡಿಸುವಂತೆ ಸಚಿವ ಈಶ್ವರ ಖಂಡ್ರೆ ಕೋರಿದ್ದಾರೆ.’’

ಪುತ್ರ ಸೇರಿದಂತೆ ಕೇಂದ್ರ ಸಚಿವರಿಗೂ ಪತ್ರ

ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರಿಗೂ ಪ್ರತ್ಯೇಕವಾಗಿ ಸಚಿವ ಈಶ್ವರ ಖಂಡ್ರೆ ಪತ್ರ ರವಾನಿಸಿದ್ದಾರೆ. ಇದರಲ್ಲಿ ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ತಮ್ಮ ಪುತ್ರ ಹಾಗೂ ಬೀದರ್ ಸಂಸದ ಸಾಗರ್ ಖಂಡ್ರೆಗೂ ಪತ್ರ ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:39 pm, Thu, 16 July 26

Source link

Exit mobile version