ಭಜನೆಯಲ್ಲ, ತಾಯಿ ಶ್ರಾದ್ಧದ ದಿನ ರಾತ್ರಿ ಇಡೀ ನಡೆದಿದ್ದು ಇದೆಂಥಾ ನೃತ್ಯ

ಬೇಗುಸರಾಯ್, ಜೂನ್ 01: ಯಾರಾದರೂ ಮನೆಯಲ್ಲಿ ಸತ್ತಿದ್ದಾರೆಂದರೆ ಎಲ್ಲರ ಕಣ್ಣಂಚಲ್ಲೂ ನೀರು, ಊಟವೂ ಬೇಡ ಏನೂ ಬೇಡವೆಂಬ ಭಾವನೆ. ಸಂಜೆ ಹೊತ್ತು ದೇವರ ಮುಂದೆ ಒಂದಿಷ್ಟು ಭಜನೆ ವಾತಾವರಣ ಹೀಗಿರುವುದು ಸಾಮಾನ್ಯ. ಆದರೆ ಇಲ್ಲೊಂದು ಮನೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ, ಅವರ ಶ್ರಾದ್ಧ(Shraddha) ಕಾರ್ಯದ ದಿನ ಆ ಮಹಿಳೆಯ ಮಗ ಭಜನೆ ಬದಲು ಲಾಂಡ್ ನೃತ್ಯ ಮಾಡಿಸಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಿವನಗರ ಗ್ರಾಮದಲ್ಲಿ ನಡೆದ ಶ್ರಾದ್ಧ ಕಾರ್ಯಕ್ರಮವೊಂದು ಸಾಂಪ್ರದಾಯಿಕ ಪದ್ಧತಿಗಿಂತ ಸಂಪೂರ್ಣ ಭಿನ್ನವಾಗಿ ನಡೆದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿನ ನಿವಾಸಿ ಮೈನಾ ದೇವಿ ಎಂಬುವವರು ಮೇ 19 ರಂದು ನಿಧನರಾಗಿದ್ದರು. ಮೇ 30 ರಂದು ಅವರ 12ನೇ ದಿನದ ಪುಣ್ಯತಿಥಿ (ಶ್ರಾದ್ಧ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಗ ಮಹಾರಾಣಾ ಪ್ರತಾಪ್ ಪಾಸ್ವಾನ್, ಸಾಂಪ್ರದಾಯಿಕ ಭಜನೆ-ಪ್ರವಚನಗಳ ಬದಲಿಗೆ ಬಿಹಾರದ ಪ್ರಸಿದ್ಧ ಜಾನಪದ ಕಲೆಯಾದ ‘ಲಾಂಡ್ ನೃತ್ಯ’ (Launda Dance) ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ವೇದಿಕೆಯ ಮೇಲೆ ಮೃತ ಮಹಿಳೆಯ ದೊಡ್ಡ ಫೋಟೋ ಇಟ್ಟು, ಅದರ ಮುಂದೆಯೇ ನೃತ್ಯಗಾರರು ರಾತ್ರಿಯಿಡೀ ಭೋಜ್‌ಪುರಿ ಮತ್ತು ಹಿಂದಿ ಹಾಡುಗಳಿಗೆ ಜೋರಾದ ಸಂಗೀತದೊಂದಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಮದುವೆ ಅಥವಾ ಆರ್ಕೆಸ್ಟ್ರಾ ಕಾರ್ಯಕ್ರಮದಂತಿದ್ದ ಈ ವಿಚಿತ್ರ ಶ್ರಾದ್ಧದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಸಂಪ್ರದಾಯಕ್ಕೆ ಮಾಡಿದ ಅಪಚಾರ ಎಂದರೆ, ಇನ್ನು ಕೆಲವರು ಇದು ಆ ಕುಟುಂಬದ ವೈಯಕ್ತಿಕ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಓದಿ:Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ಈ ಘಟನೆಯು ವಿಕಸನಗೊಳ್ಳುತ್ತಿರುವ ಸಾಂಸ್ಕೃತಿಕ ಪದ್ಧತಿಗಳು ಮತ್ತು ವೈಯಕ್ತಿಕ ಆಯ್ಕೆ ಮತ್ತು ದೀರ್ಘಕಾಲೀನ ಸಾಮಾಜಿಕ ಪದ್ಧತಿಗಳ ನಡುವಿನ ಸಮತೋಲನದ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ಸ್ಥಳೀಯರು ಹೇಳುವ ಪ್ರಕಾರ, ಈ ಕಾರ್ಯಕ್ರಮವು ಸಾಂಪ್ರದಾಯಿಕ ಸಂತಾಪ ಸೂಚಕ ಸಭೆಯಾಗಿ ಪ್ರಾರಂಭವಾಯಿತು, ಆದರೆ ಕ್ರಮೇಣ ವಿವಾಹ ಆಚರಣೆ ಅಥವಾ ಆರ್ಕೆಸ್ಟ್ರಾ ಪ್ರದರ್ಶನವನ್ನು ಹೋಲುವ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದಲ್ಲ, ಎರಡಲ್ಲ… ವೈಭವ್​ ಸೂರ್ಯವಂಶಿಗೆ ಸಿಕ್ಕ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

Source link

ಹೊಸ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಬಂದ ಮೇಘನಾ ರಾಜ್

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಈಗ ಭಾರಿ ಕುತೂಹಲ ಮೂಡಿಸಿದೆ. ಈ ಹೊಸ ಸೀಸನ್‌ಗೆ ಸ್ಟಾರ್ ನಟಿ ಮೇಘನಾ ರಾಜ್ ಅವರು ಮುಖ್ಯ ತೀರ್ಪುಗಾರರಾಗಿ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಹಿರಿತೆರೆಯಲ್ಲಿ ಮಿಂಚಿದ್ದ ಮೇಘನಾ, ಈ ಹಿಂದೆ ‘ಡ್ಯಾನ್ಸಿಂಗ್ ಚಾಂಪಿಯನ್ ಶಿಪ್’ ಶೋ ಮೂಲಕ ತಮ್ಮ ಯಶಸ್ವಿ ಕಿರುತೆರೆ ಜರ್ನಿ ಆರಂಭಿಸಿದ್ದರು. ಪ್ರೇಕ್ಷಕರನ್ನು ತಮ್ಮ ಹಸನ್ಮುಖಿ ನಗುವಿನಿಂದ ಸೆಳೆಯುವ ಅವರು, ಈಗ ಈ ವಿಶಿಷ್ಟ ಅಡುಗೆ ಶೋನಲ್ಲಿ ಸ್ಪರ್ಧಿಗಳ ಕ್ವಾಟ್ಲೆ ಮತ್ತು ಅಡುಗೆಯನ್ನು ಒಟ್ಟಿಗೆ ಜಡ್ಜ್ ಮಾಡಲಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯದಲ್ಲಿ ಆರ್‌ಸಿಬಿ ಅಭಿಮಾನಿ ಯುವಕರ ಹುಚ್ಚಾಟ: ಪೊಲೀಸರಿಂದ ಲಾಠಿ ಪ್ರಹಾರ!

ಮಂಡ್ಯ, ಜೂನ್ 1: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗುಜರಾತ್ ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಸಕ್ಕರೆ ನಾಡು ಮಂಡ್ಯದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮೇರೆ ಮೀರಿತು. ನಗರದ ಪ್ರಮುಖ ಕೇಂದ್ರವಾದ ಸಂಜಯ ವೃತ್ತದಲ್ಲಿ ಜಮಾಯಿಸಿದ ನೂರಾರು ಆರ್‌ಸಿಬಿ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು, ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ. ವಿಜಯೋತ್ಸವದ ಹಿನ್ನೆಲೆಯಲ್ಲಿ ಸಂಜಯ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಕೆಲವು ಯುವಕರು ಹಳೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸರಕು ಸಾಗಣೆ ಲಾರಿಗಳ ಮೇಲೆ ಏರಿ ಪ್ರಾಣದ ಹಂಗು ತೊರೆದು ಮೊಂಡಾಟ ಮೆರೆದರು. ಲಾರಿಗಳ ಚಲನೆಗೆ ಅಡ್ಡಿಪಡಿಸಿ ರಸ್ತೆಯಲ್ಲೇ ಅತಿರೇಕದ ಸಂಭ್ರಮಾಚರಣೆ ಮುಂದುವರಿಸಿದರು. ಸಾರ್ವಜನಿಕರ ಜೀವಕ್ಕೆ ಆಪತ್ತು ತರುವಂತೆ ವರ್ತಿಸಿದ ಜನರನ್ನು ಹತೋಟಿಗೆ ತರಲು ಪೊಲೀಸರು ಅಂತಿಮವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​​ಸಿಬಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್: ಗಣ್ಯರಿಂದ ಅಭಿನಂದನೆಗಳ ಮಹಾಪೂರ!

ಆರ್​​ಸಿಬಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್

ಬೆಂಗಳೂರು, ಜೂನ್ 01: ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಈಗ ಸತತ ಎರಡನೇ ಬಾರಿಗೆ ಐಪಿಎಲ್  ಟ್ರೋಫಿ ಎತ್ತಿ ಹಿಡಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಆರ್​​ಸಿಬಿ, ಮತ್ತೊಮ್ಮೆ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ‘ಈ ಸಲವೂ ಕಪ್ ನಮ್ಮದೇ’ ಎಂದು ಸಾರಿದ್ದ ಅಭಿಮಾನಿಗಳ ಸಂಭ್ರಮವೀಗ ಮುಗಿಲು ಮುಟ್ಟಿದೆ.

ಮುಖ್ಯಾಂಶಗಳು

  • ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಸತತ ಎರಡನೇ ಬಾರಿ ಚಾಂಪಿಯನ್.
  • ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಲೋಕ ಫಿದಾ.
  • ಆರ್‌ಸಿಬಿ ಐತಿಹಾಸಿಕ ಗೆಲುವಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೇರಿ ಗಣ್ಯರ ಅಭಿನಂದನೆ.

ಗಲ್ಲಿ ಗಲ್ಲಿಯಲ್ಲೂ ಸಂಭ್ರಮ, ಕೊಹ್ಲಿ ವಿರಾಟ ರೂಪಕ್ಕೆ ಫ್ಯಾನ್ಸ್ ಫಿದಾ!

ಆರ್​​ಸಿಬಿ ಜಯಭೇರಿ ಬಾರಿಸುತ್ತಿದ್ದಂತೆ ರಾಜ್ಯದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಇಡೀ ಟೂರ್ನಿಯುದ್ದಕ್ಕೂ ಹಾಗೂ ಫೈನಲ್ ಪಂದ್ಯದಲ್ಲಿ ರನ್ ಬೆನ್ನಟ್ಟುವಾಗ ‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿ ಪ್ರದರ್ಶಿಸಿದ ವಿರಾಟ ರೂಪ ಹಾಗೂ ನಾಯಕ ರಜತ್ ಪಟಿದಾರ್ ಅವರ ತಾಳ್ಮೆಯ ಆಟಕ್ಕೆ ಕ್ರಿಕೆಟ್ ಲೋಕ ಫಿದಾ ಆಗಿದೆ. ಜಯಗಳಿಸುತ್ತಿದ್ದಂತೆ ಟ್ವೀಟ್ ಮಾಡಿದ ಆರ್‌ಸಿಬಿ ತಂಡ, “ಇದು ನಿಮ್ಮ ಗೆಲುವು, ಮನೆಯಲ್ಲಿಯೇ ಸುರಕ್ಷಿತವಾಗಿ ಸಂಭ್ರಮಿಸಿ” ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದೆ.

ಡಿಕೆಶಿ, ಸಿದ್ದರಾಮಯ್ಯ ಸೇರಿ ಗಣ್ಯಾತಿ ಗಣ್ಯರಿಂದ ಶುಭ ಹಾರೈಕೆ

ರೆಡ್ ಆರ್ಮಿಯ ಈ ಐತಿಹಾಸಿಕ ಸಾಧನೆಗೆ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್, ಇದು ನಮ್ಮ ಆರ್‌ಸಿಬಿಯ ಸುವರ್ಣ ಅಧ್ಯಾಯ. ಸತತ 2ನೇ ಬಾರಿ ಕಪ್ ಗೆಲ್ಲುವ ಮೂಲಕ ತಂಡ ಇತಿಹಾಸ ನಿರ್ಮಿಸಿದೆ. ಧೈರ್ಯ ಮತ್ತು ಸಂಯಮದಿಂದ ಆಟಗಾರರು ಬೆಂಗಳೂರಿಗೆ ಹೆಮ್ಮೆ ತಂದಿದ್ದಾರೆ ಎಂದು ಕೊಂಡಾಡಿದ್ದಾರೆ. ಆದರೆ, ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲು ಅಹ್ಮದಾಬಾದ್‌ನಲ್ಲಿ ಆಯೋಜಿಸಿದ್ದಕ್ಕೆ ಅವರು ಅಸಮಾಧಾನ ಹೊರಹಾಕಿದ್ದಾರೆ.

ಹಂಗಾಮಿ ಸಿಎಂ ಸಿದ್ದರಾಮಯ್ಯ, ಆರ್​ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯ ಉದ್ದಕ್ಕೂ ಆರ್‌ಸಿಬಿ ಹುಡುಗರು ಪ್ರದರ್ಶಿಸಿದ ನಿರ್ಭೀತ ಬ್ರಾಂಡ್ ಕ್ರಿಕೆಟ್ ಎದುರಾಳಿ ತಂಡ ಯಾವ ಉತ್ತರಗಳನ್ನ ನೀಡಲಿಲ್ಲ. ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದ ನಮ್ಮ ಆರ್‌ಸಿಬಿಗೆ ಅಭಿನಂದನೆಗಳು. ಒಗ್ಗಟ್ಟಿನ ತಂಡದ ಪ್ರಯತ್ನದ ಮೂಲಕ ಗಳಿಸಿದ ಗೆಲುವು ಎಲ್ಲೆಡೆ ಆರ್‌ಸಿಬಿ ಅಭಿಮಾನಿಗಳ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಆರ್‌ಸಿಬಿಯ ವಿಜಯೋತ್ಸವದ ಆಚರಣೆಗಳ ಕುರಿತು ರಾಜ್ಯ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿ ಹೊರಡಿಸಿದೆ. ಇದು ನಿಮ್ಮ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ. ಆದ್ದರಿಂದ ದಯವಿಟ್ಟು ಅವುಗಳನ್ನು ಅನುಸರಿಸಲು ಮರೆಯದಿರಿ. ಈ ಸಲವೂ ಕಪ್ ನಮ್ಮದೇ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ Rajat Patidar: ಎಲ್ಲಾ ಹಣೆಬರಹ, ಹೀಗೆಲ್ಲಾ ಆಗುತ್ತೆ ಅಂತ ಅಂದ್ಕೊಂಡಿರಲಿಲ್ಲ!

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಹೆಮ್ಮೆಯ ಆರ್‌ಸಿಬಿ ಸುವರ್ಣ ಇತಿಹಾಸ ಬರೆದಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ತಂಡದ ಶಕ್ತಿಯಾಗಿದ್ದರೆ, ರಜತ್ ಪಟಿದಾರ್ ದೃಢ ನಿಶ್ಚಯದಿಂದ ತಂಡ ಮುನ್ನಡೆಸಿದರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬ್ಯಾಕ್ ಟು ಬ್ಯಾಕ್ ಗೆಲ್ಲುವುದಷ್ಟೇ ಅಲ್ಲ, ಆರ್‌ಸಿಬಿ ಕ್ರಿಕೆಟ್ ಅಂಗಳದಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಚೇಸ್ ಮಾಸ್ಟರ್ ಕೊಹ್ಲಿ ಆಟ ಅದ್ಭುತ ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿನಿಮಾ ಜರ್ನಿಯಲ್ಲೇ ಅತ್ಯಂತ ಗರಿಷ್ಠ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ಕನ್ನಡದಿಂದ ಸಿನಿಮಾ ಜರ್ನಿ ಆರಂಭಿಸಿ, ಈಗ ಬಾಲಿವುಡ್​ವರೆಗೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಅವರು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲೇ ಬ್ಯುಸಿ ಆಗುತ್ತಿದ್ದಾರೆ. ಅವರು ಸದ್ಯಕ್ಕಂತೂ ಕನ್ನಡಕ್ಕೆ ಮರಳೋದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಅವರ ಸಂಭಾವನೆ ಸ್ಟಾರ್ ಹೀರೋಗಳಿಗೆ ಸರಿ ಸಮಾನವಾಗಿದೆ. ಈ ಎಲ್ಲಾ ಕಾರಣದಿಂದ ಸ್ಯಾಂಡಲ್​​ವುಡ್​ಗೆ ಅವರು ಮರಳೋದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರ ಹಿಂದಿ ಸಿನಿಮಾದ ಸಂಭಾವನೆ ಚರ್ಚೆ ಹುಟ್ಟುಹಾಕಿದೆ.

ರಶ್ಮಿಕಾ ಮಂದಣ್ಣ ಅವರು ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಲ್ಲಿನ ಪ್ರೇಕ್ಷಕರು ಅವರನ್ನು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದಲೇ ರಶ್ಮಿಕಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್​​ಗಳು ಬರುತ್ತಿವೆ. ‘ಛಾವಾ’ ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ.

ಈಗ ರಶ್ಮಿಕಾ ಮಂದಣ್ಣ ನಟನೆಯ ‘ಕಾಕ್​​ಟೇಲ್ 2’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ರಶ್ಮಿಕಾ ಅವರು ಬರೋಬ್ಬರಿ 15 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದು ಅವರ ವೃತ್ತಿ ಜೀವನದಲ್ಲೇ ಅತ್ಯಂತ ಗರಿಷ್ಠ ಸಂಭಾವನೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಕೂಡ ನಟಿಸಿದ್ದಾರೆ. ಕೃತಿ ಅವರು ರಶ್ಮಿಕಾಗೆ ಸರಿಸಮಾನವಾಗಿ ಹಣ ಪಡೆದರೆ, ಶಾಹಿದ್ ಕಪೂರ್ ಅವರು 35 ಕೋಟಿ ರೂಪಾಯಿ ಬಾಚಿಕೊಂಡಿದ್ದಾರೆ.

ಇದನ್ನೂ ಓದಿ: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಅತಿಯಾಗಿ ಆಡಿದ್ದ ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್

ರಶ್ಮಿಕಾ ಅವರು ಕೃತಿಗೆ ಜೂನಿಯರ್. ಆದಾಗ್ಯೂ ಇಬ್ಬರಿಗೂ ಒಂದೇ ರೀತಿಯ ಸಂಭಾವನೆ ಸಿಗುತ್ತಿದೆ ಎಂದು ಅನೇಕರು ಹೇಳಿದ್ದಾರೆ. ರಶ್ಮಿಕಾ ಈಗ ಮದುವೆ ಮಾಡಿಕೊಂಡಿದ್ದಾರೆ. ಹೀಗಾಗಿ, ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುವ ತವಕದಲ್ಲಿ ಅವರಿಲ್ಲ. ‘ಕಾಕ್ಟೇಲ್ 2’ ಸಿನಿಮಾ ಜೂನ್ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:35 am, Mon, 1 June 26

Source link

Rajat Patidar: ಎಲ್ಲಾ ಹಣೆಬರಹ, ಹೀಗೆಲ್ಲಾ ಆಗುತ್ತೆ ಅಂತ ಅಂದ್ಕೊಂಡಿರಲಿಲ್ಲ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಆರ್​ಸಿಬಿ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 155 ರನ್​ಗಳು ಮಾತ್ರ. ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 18 ಓವರ್​ಗಳಲ್ಲಿ ಪಂದ್ಯ ಮುಗಿಸಿ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಈ ಮೈದಾನದಲ್ಲಿ ಚೇಸಿಂಗ್ ಸುಲಭ ಎಂಬುದು ನಮಗೆ ಗೊತ್ತಿತ್ತು. ಹೀಗಾಗಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದೆವು. ಅಲ್ಲದೆ ಎದುರಾಳಿ ತಂಡದ ಮೂವರು ಬ್ಯಾಟರ್​ಗಳನ್ನು ಬೇಗನೆ ಔಟ್ ಮಾಡುವುದು ನಮ್ಮ ಮುಖ್ಯ ಗುರಿಯಾಗಿತ್ತು. ಅದನ್ನು ನಮ್ಮ ಬೌಲರ್​ಗಳು ಯಶಸ್ವಿಯಾಗಿ ಮಾಡಿದರು. ಫೈನಲ್​ ಪಂದ್ಯದಲ್ಲಿ ಮಾತ್ರ, ನಮ್ಮ ಬೌಲರ್​ಗಳು ಇಡೀ ಟೂರ್ನಿಯುದ್ದಕ್ಕೂ ಅಧ್ಭುತ ಬೌಲಿಂಗ್ ಮಾಡಿದ್ದಾರೆ. ವಿಶೇಷವಾಗಿ ಭುವಿ, ರಾಸಿಖ್, ಹೇಝಲ್​ವುಡ್, ಸುಯಶ್ ಶರ್ಮಾ, ಶೆಫರ್ಡ್, ಕೃನಾಲ್​… ಹೀಗೆ ಎಲ್ಲರೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ ಎಂದು ಎಲ್ಲಾ ಬೌಲರ್​ಗಳನ್ನು ಶ್ಲಾಘಿಸಿದರು.

ಇಂತಹದೊಂದು ಕನಸು ಕಂಡೇ ಇರಲಿಲ್ಲ!

ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗುತ್ತೇನೆ. ನಾಯಕನಾಗಿ ಟ್ರೋಫಿ ಎತ್ತಿ ಹಿಡುತ್ತೇನೆ ಎಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಎಲ್ಲವೂ ಹಣೆಬರಹ, ಹೀಗೆ ಆಗುತ್ತೆ… ನಾನು ಆರ್​ಸಿಬಿಗೆ ಟ್ರೋಫಿ ಗೆದ್ದುಕೊಡ್ತೀನಿ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇದಕ್ಕೆಲ್ಲಾ ನಾನು ಕೃತಜ್ಞ ಎಂದು ರಜತ್ ಪಾಟಿದಾರ್ ಭಾವುಕರಾದರು.

ಇನ್ನು ತಂಡದಲ್ಲಿ ವಿರಾಟ್ ಕೊಹ್ಲಿ ಅವರಿಂದ ಸಿಕ್ಕ ಬೆಂಬಲದ ಬಗ್ಗೆ ಮಾತನಾಡಿದ ಪಾಟಿದಾರ್, ವಿರಾಟ್ ಭಾಯ್ ಯಾವಾಗಲೂ ತಂಡದ ಆಟಗಾರ. ಯಾರೇ ಬಂದರೂ, ಅಂದರೆ ಹೊಸ ಆಟಗಾರರು, ಯುವ ಆಟಗಾರರು ಬಂದರೆ ಅವರ ಹಿಂಜರಿಕೆಯನ್ನು ಮನಗಂಡು, ಖುದ್ದಾಗಿ ಹೋಗಿ ಮಾತನಾಡಿ ಧೈರ್ಯ ತುಂಬುವಂತಹ ಆಟಗಾರ ಎಂದು ಕೊಹ್ಲಿಯನ್ನು ಕೊಂಡಾಡಿದ್ದಾರೆ.

ಈ ಬಾರಿ ಒತ್ತಡ ಇರಲಿಲ್ಲ!

ಐಪೆಇಲ್ 2025 ರ ಫೈನಲ್ ಆಡುವಾಗ ಮೊದಲ ಟ್ರೋಫಿ ಗೆಲ್ಲಬೇಕಾದ ಒತ್ತಡವಿತ್ತು. ಆದರೆ ಈ ವರ್ಷ ನಮ್ಮ ತಂಡ ಆಡಿದ ರೀತಿ, ತಂಡದಲ್ಲಿದ್ದವರ ಫಾರ್ಮ್​ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹೀಗಾಗಿಈ ಬಾರಿ ಯಾವುದೇ ಒತ್ತಡವಿಲ್ಲದೇ ಫೈನಲ್ ಆಡಿದ್ದೇವೆ ಎಂದು ಪಾಟಿದಾರ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2026 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?

ಈ ಸಲನೂ ಕಪ್ ನಮ್ಮದೇ!

ಅಂತಿಮವಾಗಿ ಪ್ರತಿ ಸ್ಟೇಡಿಯಂಗೂ ಬಂದು ನಮ್ಮ ಹೋಮ್ ಗ್ರೌಂಡ್​ನಂತೆ ಭಾಸುವಾಗುವಂತೆ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಧ್ಯನ್ಯವಾದಗಳನ್ನು ಅರ್ಪಿಸಿದ ರಜತ್ ಪಾಟಿದಾರ್, ಈ ಕಪ್ ನಿಮ್ಮದೇ… ಈ ಸಲನೂ ಕಪ್ ನಮ್ಮದೇ ಎನ್ನುವ ಮೂಲಕ ಮಾತು ಮುಗಿಸಿದರು.

Source link

IPL 2026 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?

Source link

Bengaluru Air Quality: ಇಳಿಕೆಯಾಯ್ತು ಮಾಲಿನ್ಯ, ಬೆಂಗಳೂರಿಗರೇ ನಿಮಗಿದೆ ಗುಡ್ ನ್ಯೂಸ್!

ಬೆಂಗಳೂರು, ಜೂನ್ 01: ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಇತ್ತೀಚಿನ ಮಳೆ ಮತ್ತು ಮುಂಗಾರು ಮಾರುತಗಳ ಪ್ರಭಾವದಿಂದಾಗಿ ಸದ್ಯಕ್ಕೆ ಸ್ಥಿರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಜೂನ್ 1ರ ಇಂದಿನ ವರದಿಯ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮ ಮತ್ತು ಸಮಾಧಾನಕರ ಮಟ್ಟದಲ್ಲಿ ದಾಖಲಾಗಿದೆ.

ಮುಖ್ಯಾಂಶಗಳು

  • ಪ್ರೀ-ಮಾನ್ಸೂನ್ ಮಳೆಯಿಂದಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸುಧಾರಣೆ.
  • ಸಿಲಿಕಾನ್ ಸಿಟಿ ಬೆಂಗಳೂರಿನ ಸರಾಸರಿ AQI 45 ರಿಂದ 65 ದಾಖಲು.
  • ಮೈಸೂರು ಮತ್ತು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಉತ್ತಮ ಮಟ್ಟದಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಪ್ರೀ-ಮಾನ್ಸೂನ್ ಮಳೆಯಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ಗಣನೀಯವಾಗಿ ಕಡಿಮೆಯಾಗಿವೆ. ಇಂದಿನ ವರದಿಯ ಪ್ರಕಾರ, ಬೆಂಗಳೂರಿನ ಸರಾಸರಿ AQI 45 ರಿಂದ 65 ರ ಆಸುಪಾಸಿನಲ್ಲಿ ದಾಖಲಾಗಿದೆ. ಇದು ಉತ್ತಮ ಮತ್ತು ಸಾಧಾರಣ ವಾತಾವರಣವನ್ನು ಸೂಚಿಸುತ್ತದೆ.

ನಗರದ ಪ್ರಮುಖ ಪ್ರದೇಶಗಳ ವಿವರ ಹೀಗಿದೆ:

  • ಸಿಲ್ಕ್ ಬೋರ್ಡ್ ಮತ್ತು ಮೆಜೆಸ್ಟಿಕ್: ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಈ ಭಾಗಗಳಲ್ಲಿ AQI ಸಲ್ಪ ಮಟ್ಟಿಗೆ ಹೆಚ್ಚಿದ್ದು, 60 – 70 ದಾಖಲಾಗಿದೆ.
  • ಜಯನಗರ ಮತ್ತು ಮಲ್ಲೇಶ್ವರಂ: ಹಸಿರು ಹೆಚ್ಚಿರುವ ಈ ವಲಯಗಳಲ್ಲಿ AQI ಅತ್ಯಂತ ಉತ್ತಮವಾಗಿದ್ದು, 35 – 45 ಮಟ್ಟದಲ್ಲಿದೆ.
  • ಹೂಡಿ ಮತ್ತು ವೈಟ್‌ಫೀಲ್ಡ್: ಐಟಿ ವಲಯದ ಈ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 50 – 62ರಷ್ಟಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ AQI ಸ್ಥಿತಿ

ರಾಜ್ಯದ ಇತರೆ ಜಿಲ್ಲಾ ಕೇಂದ್ರಗಳಲ್ಲೂ ಗಾಳಿಯ ಗುಣಮಟ್ಟವು ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಮಾಲಿನ್ಯ ನಿಯಂತ್ರಣದಲ್ಲಿದೆ.

  • ಮೈಸೂರು: 30 – 40
  • ಮಂಗಳೂರು: 35 – 45
  • ಹುಬ್ಬಳ್ಳಿ-ಧಾರವಾಡ: 50 – 60
  • ಕಲಬುರಗಿ: 65 – 75

ಸಾಮಾನ್ಯವಾಗಿ 0-50 ರವರೆಗಿನ AQI ಅನ್ನು ‘ಅತ್ಯಂತ ಉತ್ತಮ’ ಎಂದು ಮತ್ತು 51-100 ರಷ್ಟಿದ್ದರೆ ಅದನ್ನು ‘ಸಮಾಧಾನಕರ’ ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ಕರ್ನಾಟಕದ ಜನತೆಗೆ ಯಾವುದೇ ವಾಯು ಮಾಲಿನ್ಯದ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲವಾಗಿದ್ದು, ಮುಂಜಾನೆಯ ವಾಸಿಗಳಿಗೆ ಹಿತಕರವಾದ ವಾತಾವರಣವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ಗೆ ಇಡಿ ಇಕ್ಕಳ, ವಿಚಾರಣೆಗೆ ಹಾಜರಾಗಲು ಕಟ್ಟುನಿಟ್ಟಿನ ಆದೇಶ

ಬಿಟ್‌ಕಾಯಿನ್ ಹಗರಣದಲ್ಲಿ ಮೊಹಮ್ಮದ್ ನಲಪಾಡ್​ಗೆ ಸಂಕಷ್ಟImage Credit source: tv9

ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಒಂದೆಡೆ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಅವರ ಆಪ್ತ ವಲಯದಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಂತಿ‌ನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಹಾಗೂ ಯೂತ್ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್‌ಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಬಹುಕೋಟಿ ಬಿಟ್‌ಕಾಯಿನ್ ಹಗರಣ (Bitcoin Scam) ಮತ್ತು ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಲಪಾಡ್‌ಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದು, ಇಂದು (ಜೂನ್ 1) ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಬುಲಾವ್ ನೀಡಿದ್ದಾರೆ.

ಮುಖ್ಯಾಂಶಗಳು

  • ಬಿಟ್‌ಕಾಯಿನ್ ಪ್ರಕರಣದ ಕಿಂಗ್‌ಪಿನ್ ಶ್ರೀಕಿ ಜೊತೆಗಿನ ನಂಟಿನ ಹಿನ್ನೆಲೆ, ಮೊಹಮ್ಮದ್ ನಲಪಾಡ್‌ಗೆ 2ನೇ ಬಾರಿಗೆ ಇಡಿ ಸಮನ್ಸ್.
  • ರಾಜಕೀಯ ಕಾರ್ಯಗಳ ನೆಪವೊಡ್ಡಿ ಮೊದಲ ಇಡಿ ವಿಚಾರಣೆಗೆ ಗೈರಾಗಿದ್ದ ನಲಪಾಡ್‌.
  • ಜೂನ್ 1 ರಂದೇ ವಿಚಾರಣೆಗೆ ಹಾಜರಾಗಲು ಕಟಟುನಿಟ್ಟಿನ ಸೂಚನೆ.

ಶ್ರೀಕಿಗೆ ಹೋಟೆಲ್ ರೂಂ ಬುಕಿಂಗ್, ಆರ್ಥಿಕ ನಂಟಿನ ಆರೋಪ

ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣದ ಪ್ರಮುಖ ಸೂತ್ರಧಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಈಗಾಗಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು, ಮೊಹಮ್ಮದ್ ನಲಪಾಡ್ ವಿರುದ್ಧ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಶ್ರೀಕಿ ಜೊತೆ ನಲಪಾಡ್ ನಿರಂತರ ಸಂಪರ್ಕದಲ್ಲಿದ್ದರು ಹಾಗೂ ಆತನ ಅಕ್ರಮ ಚಟುವಟಿಕೆಗಳಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ ನಲಪಾಡ್, ರಹೀಮ್ ಖಾನ್ ಸೇರಿದಂತೆ ಮೂವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಜಂಟಿ ದಾಳಿ ನಡೆಸಿ, ಡಿಜಿಟಲ್ ಪುರಾವೆ ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.

ಮೊದಲ ನೋಟಿಸ್ ನೀಡಿದಾಗ ರಾಜಕೀಯ ಕೆಲಸಗಳ ಕಾರಣ ನೀಡಿ ನಲಪಾಡ್ ವಿಚಾರಣೆಯಿಂದ ನುಣುಚಿಕೊಂಡಿದ್ದರು. ಆದರೆ, ಈ ಬಾರಿ ಶ್ರೀಕಿ ಜೊತೆಗಿನ ಆರ್ಥಿಕ ವ್ಯವಹಾರಗಳ ಪಕ್ಕಾ ದಾಖಲೆಗಳು ಸಿಕ್ಕಲ್ಲಿ ಇಡಿ ಅಧಿಕಾರಿಗಳು ನಲಪಾಡ್‌ನನ್ನು ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಏನಿದು ಬಿಟ್‌ಕಾಯಿನ್ ಹಗರಣ?

ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಈ ಬಿಟ್‌ಕಾಯಿನ್ ಹಗರಣವು ಸರ್ಕಾರಿ ವೆಬ್‌ಸೈಟ್‌ಗಳು, ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಸೈಟ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಡಿಜಿಟಲ್ ಹಣವನ್ನು ಲೂಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಹ್ಯಾಕರ್ ಶ್ರೀಕಿ ವಿವಿಧ ಅಕ್ರಮ ಮಾರ್ಗಗಳ ಮೂಲಕ ಗಳಿಸಿದ್ದ ಬಿಟ್‌ಕಾಯಿನ್‌ಗಳನ್ನು ಮನಿ ಲಾಂಡ್ರಿಂಗ್ ಮಾಡಲು ಸುನೀಶ್ ಹೆಗ್ಡೆ ಮತ್ತು ರಾಬಿನ್ ಖಂಡೇವಾಲ ಸಹಾಯ ಮಾಡಿದ್ದರು. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ಇವರಿಂದ 47 ಲಕ್ಷ ರೂ. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡಿದ್ದರು. ಶ್ರೀಕಿಗೆ ರಾಜಕೀಯ ನಾಯಕರ ಪುತ್ರರ ಆಶ್ರಯವಿತ್ತು ಎಂಬ ಆರೋಪದಡಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ನಲಪಾಡ್ ನಿವಾಸದ ಮೇಲೆ ದಾಳಿ ನಡೆದಿತ್ತು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್​ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ?

ಸದ್ಯ ಶ್ರೀಕಿ, ಸುನೀಶ್ ಹಾಗೂ ರಾಬಿನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇವರ ವಿಚಾರಣೆಯ ಬೆನ್ನಲ್ಲೇ ನಲಪಾಡ್‌ಗೆ ಇಡಿ ಇಕ್ಕಳ ಬಿಗಿಗೊಳಿಸಿದೆ.

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version