ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ: ರೈತರ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ – Kannada News | Union Governmnet extends North Karnataka district Farmers crop insurance registration to July 31

ಹುಬ್ಬಳ್ಳಿ, (ಜುಲೈ 16): ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯ ಕಾರಣ ರೈತರ ಬೆಳೆ ವಿಮೆ ನೋಂದಣಿ (crop insurance registration) ಅವಧಿ ವಿಸ್ತರಿಸಲಾಗಿದೆ. ರಾಜ್ಯದ ಧಾರವಾಡ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ ಅನ್ವಯಿಸಲಿದೆ. ಜುಲೈ 15ರವರೆಗೆ ಇದ್ದ ಕಾಲಮಿತಿಯನ್ನು ಜುಲೈ 31ರವರೆಗೆ ವಿಸ್ತರಿಸುವ ಮೂಲಕ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಈ ನಾಲ್ಕು ಜಿಲ್ಲೆಗಳ ರೈತರ ನೆರವಿಗೆ ಧಾವಿಸಿದೆ.

ಈ ಜಿಲ್ಲೆಗಳಲ್ಲಿ ರೈತರು ಮಳೆ ಕೊರತೆಯಿಂದಾಗಿ ಭಿನ್ನ-ವಿಭಿನ್ನ ಬೆಳೆ ಬಿತ್ತನೆ ಮಾಡಿದ್ದು, ಇದರಿಂದಾಗಿ ಬೆಳೆ ವಿಮೆ ಪಾವತಿಸುವಲ್ಲಿ ತಾಂತ್ರಿಕ ತೊಂದರೆ ಎದುರಿಸುತ್ತಿದ್ದರು. ಇದನ್ನು ಮನಗಂಡು ಸಚಿವ ಪ್ರಲ್ಹಾದ ಜೋಶಿ ಅವರು ಈ ಭಾಗದ ರೈತರ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್‌ ಚವ್ಹಾಣ್‌ ಅವರೊಂದಿಗೆ ಚರ್ಚಿಸಿ ಮನವಿ ಮಾಡಿದ್ದರು.

ಇದನ್ನೂ ನೋಡಿ: ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್: ಆಹಾರ ಸಚಿವ ಮಹತ್ವದ ಹೇಳಿಕೆ

ಈ ಜಿಲ್ಲೆಗಳಲ್ಲಿ ಮಳೆ ಅಭಾವ ಬೆಳೆ ವಿಮೆ ನೋಂದಣಿಗೆ ರೈತರಿಗಾಗುತ್ತಿರುವ ತೊಂದರೆ-ತೊಡಕು ಬಗ್ಗೆ ಶಾಸಕರಾದ ಸಿ.ಸಿ.ಪಾಟೀಲ್, ಎಮ್.ಆರ್.ಪಾಟೀಲ್ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ರೈತರೂ ಸಹ ಜೋಶಿ ಅವರ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು.

ಅಂತೆಯೇ ಜು.15ರಂದು ರಾಜ್ಯ ಸರ್ಕಾರದ ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ ತಕ್ಷಣವೇ ಸ್ಪಂದಿಸಿದ್ದಾರೆ. ವಿಮೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ನೋಂದಣಿ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿದ್ದಾರೆ. ಪ್ರಸ್ತಾವನೆ ಸಲ್ಲಿಸಿದ ಕೇವಲ 24 ಗಂಟೆಯೊಳಗೆ ಕೇಂದ್ರ ಸರ್ಕಾರ ಈ ವಿಶೇಷ ಅನುಮೋದನೆ ನೀಡಿದೆ ಎಂದಿದ್ದಾರೆ ಸಚಿವ ಪ್ರಲ್ಹಾದ ಜೋಶಿ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಮಳೆ ಕೊರತೆ ಹಾಗೂ ತಾಂತ್ರಿಕ ತೊಂದರೆಗಳಿಂದ ಬೆಳೆ ವಿಮೆ ಮಾಡಿಸಲಾಗದ ರೈತರ ಹಿತರಕ್ಷಣೆಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಜಿಲ್ಲೆಗಳ ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಲ್ಹಾದ ಜೋಶಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಡ್ ಪೇಮೆಂಟ್​ನಲ್ಲಿಯಂತೆ ಕೆಲ ಯುಪಿಐ ಪೇಮೆಂಟ್​ಗೂ ಎಂಡಿಆರ್ ಶುಲ್ಕ; ಸರ್ಕಾರ ಚಿಂತನೆ – Kannada News | UPI payments for large businesses may attract charges, as Govt thinks of bringing MDR

ನವದೆಹಲಿ, ಜುಲೈ 16: ಭಾರತದಲ್ಲಿ ಡಿಜಿಟಲ್ ಪಾವತಿಯ ಕ್ರಾಂತಿ ಸೃಷ್ಟಿಸಿರುವ ಯುಪಿಐ (UPI- Unified Payments Interface) ವಹಿವಾಟುಗಳ ಮೇಲೆ ಮತ್ತೊಮ್ಮೆ ಸೇವಾ ಶುಲ್ಕಗಳು ಜಾರಿಯಾಗುವ ಮುನ್ಸೂಚನೆ ಸಿಕ್ಕಿದೆ. ದೇಶದ ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳು (Large Businesses) ನಡೆಸುವ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ (Merchant Discount Rate – MDR), ಅಂದರೆ ವ್ಯಾಪಾರಿ ರಿಯಾಯಿತಿ ದರವನ್ನು ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಪ್ರಸ್ತುತ ದೇಶದಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದು ಸಂಪೂರ್ಣ ಉಚಿತವಾಗಿದೆ. ಆದರೆ, ಯುಪಿಐ ತಂತ್ರಜ್ಞಾನ ವ್ಯವಸ್ಥೆಯನ್ನು ನಿರಂತರವಾಗಿ ನಿರ್ವಹಿಸಲು ಬ್ಯಾಂಕ್‌ಗಳು ಮತ್ತು ಹಣಕಾಸು ತಂತ್ರಜ್ಞಾನ (Fintech) ಕಂಪನಿಗಳಿಗೆ ತಗಲುವ ಭಾರಿ ವೆಚ್ಚವನ್ನು ಸರಿದೂಗಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 250 ರೂ ಸಣ್ಣ ಎಸ್​ಐಪಿಗಳತ್ತ ಮುಗಿಬಿದ್ದ ಹೊಸ ಹೂಡಿಕೆದಾರರು; ಬಂದಷ್ಟೇ ವೇಗದಲ್ಲಿ ನಿರ್ಗಮನ; ಏನು ಕಾರಣ?

ಯುಪಿಐ ಪೇಮೆಂಟ್ಗೆ ಎಂಡಿಆರ್; ಪ್ರಮುಖ ಪ್ರಸ್ತಾವನೆಗಳೇನು?

  • ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಶುಲ್ಕ: ಈ ಪ್ರಸ್ತಾವನೆಯು ಕೇವಲ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ದೊಡ್ಡ ಸೂಪರ್‌ ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಇ-ಕಾಮರ್ಸ್ ದೈತ್ಯ ಕಂಪನಿಗಳ (ಉದಾಹರಣೆಗೆ ಅಮೆಜಾನ್, ಫ್ಲಿಪ್‌ಕಾರ್ಟ್) ವಹಿವಾಟುಗಳಿಗೆ ಮಾತ್ರ ಅನ್ವಯಿಸುವ ಸಾಧ್ಯತೆಯಿದೆ.
  • ಸಾಮಾನ್ಯ ಜನರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ಬೀದಿ ಬದಿ ವ್ಯಾಪಾರಿಗಳು, ಸಣ್ಣ ಕಿರಾಣಿ ಅಂಗಡಿಗಳು ಮತ್ತು ಸಾಮಾನ್ಯ ಸಾರ್ವಜನಿಕರು ಒಬ್ಬರಿಂದೊಬ್ಬರಿಗೆ ಮಾಡುವ (P2P – Person to Person) ವರ್ಗಾವಣೆಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ.
  • ಸಬ್ಸಿಡಿ ಹೊರೆ ತಗ್ಗಿಸುವಿಕೆ: ಸದ್ಯ ಯುಪಿಐ ಉಚಿತವಾಗಿ ನೀಡುವುದರಿಂದ ಬ್ಯಾಂಕ್‌ಗಳಿಗಾಗುವ ನಷ್ಟವನ್ನು ಸರಿದೂಗಿಸಲು ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳ ಹಣಕಾಸು ಪ್ರೋತ್ಸಾಹಧನವನ್ನು (Subsidies) ನೀಡುತ್ತಿದೆ. ದೊಡ್ಡ ವ್ಯಾಪಾರಿಗಳಿಗೆ ಶುಲ್ಕ ವಿಧಿಸುವುದರಿಂದ ಸರ್ಕಾರದ ಮೇಲಿನ ಈ ಸಬ್ಸಿಡಿ ಹೊರೆ ಕಡಿಮೆಯಾಗಲಿದೆ.

ಎಂಡಿಆರ್ ಎಂದರೇನು?

ಯಾವುದೇ ಒಬ್ಬ ಗ್ರಾಹಕರು ಅಂಗಡಿಯಲ್ಲಿ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಅಥವಾ ಕಾರ್ಡ್ ಬಳಸಿ ಡಿಜಿಟಲ್ ಪಾವತಿ ಮಾಡಿದಾಗ, ಆ ಹಣವನ್ನು ಸುರಕ್ಷಿತವಾಗಿ ಪ್ರಕ್ರಿಯೆಗೊಳಿಸಲು ಬ್ಯಾಂಕ್ ಮತ್ತು ಪೇಮೆಂಟ್ ಗೇಟ್‌ವೇಗಳು ವ್ಯಾಪಾರಿಯಿಂದ ಪಡೆಯುವ ನಿರ್ದಿಷ್ಟ ಶೇಕಡಾವಾರು ಶುಲ್ಕವನ್ನು MDR (Merchant Discount Rate) ಎನ್ನಲಾಗುತ್ತದೆ. ಪ್ರಸ್ತುತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಈ ಶುಲ್ಕವಿದೆ, ಆದರೆ ಸಾಮಾನ್ಯ ಯುಪಿಐ ವಹಿವಾಟುಗಳಿಗೆ ಸರ್ಕಾರ ಇದನ್ನು ಶೂನ್ಯ (Zero MDR) ಮಾಡಿದೆ.

ಇದನ್ನೂ ಓದಿ: ಇಪಿಎಫ್​ಒ ಅಪ್​​ಡೇಟ್; ಪಿಎಫ್ ಖಾತೆಗೆ ಬರುತ್ತಿದೆ ಬಡ್ಡಿ ಹಣ; ನಿಮಗೆ ಬಂದಿದೆಯಾ, ಪರಿಶೀಲಿಸುವುದು ಹೇಗೆ?

ಗ್ರಾಹಕರ ಮೇಲಾಗುವ ಪರಿಣಾಮವೇನು?

ನೇರವಾಗಿ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡದಿದ್ದರೂ, ದೊಡ್ಡ ವ್ಯಾಪಾರ ಸಂಸ್ಥೆಗಳ ಮೇಲೆ ಎಂಡಿಆರ್ ಶುಲ್ಕ ಬಿದ್ದರೆ, ಅವರು ಆ ಹೊರೆಯನ್ನು ಅಂತಿಮವಾಗಿ ಉತ್ಪನ್ನಗಳ ಬೆಲೆ ಹೆಚ್ಚಿಸುವ ಮೂಲಕ ಅಥವಾ ಹೆಚ್ಚುವರಿ ಸೇವಾ ತೆರಿಗೆಯ ರೂಪದಲ್ಲಿ ಗ್ರಾಹಕರ ಮೇಲೆಯೇ ಹಾಕುವ ಸಾಧ್ಯತೆಯಂತೂ ಇರುತ್ತದೆ.

ಈ ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದ ಚರ್ಚೆಯಲ್ಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಹಣಕಾಸು ಸಚಿವಾಲಯದ ಅಂತಿಮ ನಿರ್ಧಾರದ ಬಳಿಕವಷ್ಟೇ ಅಧಿಕೃತ ನಿಯಮಗಳು ಹೊರಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಏಕದಿನದಲ್ಲಿ ಅತಿ ಹೆಚ್ಚು ರನ್; ಪಾಕ್ ಮಾಜಿ ನಾಯಕನನ್ನು ಹಿಂದಿಕ್ಕಿದ ರೋಹಿತ್ – Kannada News | Rohit Sharma Breaks ODI Run Record: Surpasses Inzamam to Become 7th Highest Scorer

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾಗೆ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲೂ ರನ್ ಬರ ಎದುರಿಸಿದ್ದ ರೋಹಿತ್ ಕೊನೆಯ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಇಂಗ್ಲೆಂಡ್‌ ವಿರುದ್ಧ ರೋಹಿತ್​ಗೆ ಲಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ (PC-PTI).

ಮೊದಲ ಏಕದಿನದಲ್ಲಿ 21 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾಗಿದ್ದ ರೋಹಿತ್ ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 47 ಎಸೆತಗಳನ್ನು ಎದುರಿಸಿ 26 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲೂ ರೋಹಿತ್​ಗೆ ಮುಕ್ತವಾಗಿ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದಗ್ಯೂ ಈ 26 ರನ್​ಗಳ ಇನ್ನಿಂಗ್ಸ್ ಮೂಲಕ ರೋಹಿತ್ ಏಕದಿನದಲ್ಲಿ ವಿಶೇಷ ದಾಖಲೆಯನ್ನು ನಿರ್ಮಿಸಿದರು(PC-PTI).

ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಇದೀಗ 8ನೇ ಸ್ಥಾನದಿಂದ ಏಳನೇ ಸ್ಥಾನಕ್ಕೇರಿದ್ದಾರೆ. ಹೀಗಾಗಿ ಇಷ್ಟು ದಿನ 7ನೇ ಸ್ಥಾನದಲ್ಲಿದ್ದ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಇದೀಗ 8ನೇ ಸ್ಥಾನಕ್ಕೆ ಜಾರಿದ್ದಾರೆ(PC-PTI).

ಇಂಜಮಾಮ್-ಉಲ್-ಹಕ್ 378 ಏಕದಿನ ಪಂದ್ಯಗಳಲ್ಲಿ 11,739 ರನ್ ಗಳಿಸಿದ್ದಾರೆ. ಈಗ, ರೋಹಿತ್ ಶರ್ಮಾ ಅವರನ್ನು ಮೀರಿಸಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ ಕೇವಲ 287 ಏಕದಿನ ಪಂದ್ಯಗಳನ್ನು ಆಡಿದ್ದು 11,740 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಶೀಘ್ರದಲ್ಲೇ ರೋಹಿತ್​ 12,000 ರನ್​ಗಳ ಗಡಿಯನ್ನು ದಾಟಲಿದ್ದಾರೆ(PC-PTI).

ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ. ಈ ಸ್ವರೂಪದಲ್ಲಿ ಅವರು 18,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 14,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸಂಗಕ್ಕಾರ ಮೂರನೇ ಸ್ಥಾನದಲ್ಲಿದ್ದಾರೆ(PC-BCCI).

Published On – 7:19 pm, Thu, 16 July 26

Source link

‘ಹೆಗ್ಗಣ ಮುದ್ದು’ ನನ್ನ ಕೊನೇ ಸಿನಿಮಾ ಆಗಬಹುದು; ನಿರ್ಮಾಣದ ಬಗ್ಗೆ ಡಾಲಿ ಬೇಸರ – Kannada News | Daali Dhananjaya says Heggana Muddu may be Last Movie as Producer after Mother Promise

‘ಮದರ್ ಪ್ರಾಮಿಸ್’ (Mother Promise) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ, ನಿರ್ಮಾಪಕ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ‘ನಾನು 2021ರಲ್ಲಿ ಬಡವ ರಾಸ್ಕಲ್ ಸಿನಿಮಾ ಮೂಲಕ ನಿರ್ಮಾಪಕನಾಗಿ ಗೆಲುವು ನೋಡಿದವನು. ಅಲ್ಲಿಯವರೆಗೂ ಏನು ಕೊಡುತ್ತಾರೋ ಅದನ್ನು ಇಸ್ಕೊಂಡು ಕೆಲಸ ಮಾಡಿದವನು. ಇವತ್ತು 2026. ಎಷ್ಟೋ ಜನರ ಜೊತೆ ಕೆಲಸ ಮಾಡಿ, ಎಷ್ಟೋ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕನಾಗಿ ಬಡವ ರಾಸ್ಕಲ್, ಹೆಡ್ ಬುಷ್, ವಿದ್ಯಾಪತಿ, ಟಗರು ಪಲ್ಯ, ಜೆಸಿ, ಮದರ್ ಪ್ರಾಮಿಸ್ ಮಾಡಿದ್ದೇನೆ. ಮುಂದೆ ‘ಹೆಗ್ಗಣ ಮುದ್ದು’ (Heggana Muddu) ಸಿನಿಮಾ ಇದೆ. ನನ್ನ ನಿರ್ಮಾಣದಲ್ಲಿ ಅದೇ ಕೊನೆಯ ಸಿನಿಮಾ ಆಗಬಹುದು’ ಎಂದು ಡಾಲಿ ಧನಂಜಯ (Daali Dhananjaya) ಹೇಳಿದ್ದಾರೆ.

ನಟನಾಗಿ ಎಂಜಾಯ್ ಮಾಡಬೇಕು:

‘ನನಗೆ ಸುಸ್ತಾಗುತ್ತದೆ. ನಾನು ನಟನಾಗಿ ಜೀವನವನ್ನು ಎಂಜಾಯ್ ಮಾಡಬೇಕು. ಬರೀ ಇದೇ ಕೆಲಸ ಮಾಡಿಕೊಂಡು ಇರೋಕೆ ಆಗಲ್ಲ. ಯಾರೋ ಏನೋ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತೊಂದರೆ ಕೊಡಬಾರದು ಎಂಬ ಮನಸ್ಥಿತಿ ಬೇಕು. ಸಿನಿಮಾ, ಸಾಹಿತ್ಯ, ನಾಟಕ ಇವೆಲ್ಲವೂ ಕನ್ನಡವನ್ನು ಕಟ್ಟುವ ಕೆಲಸಗಳೇ. ಅದರಲ್ಲಿ ಪ್ರತಿಯೊಬ್ಬ ಕಲಾವಿದ ಕೂಡ ಮುಖ್ಯ ಆಗುತ್ತಾರೆ’ ಎಂದಿದ್ದಾರೆ ಡಾಲಿ ಧನಂಜಯ.

‘ಮದರ್ ಪ್ರಾಮಿಸ್ ಸಿನಿಮಾದಲ್ಲಿ ಅನೇಕ ಹೊಸಬರು ಕೆಲಸ ಮಾಡಿ, ಮನರಂಜನೆ ನೀಡಿದ್ದಾರೆ. ಯಾರಿಗಾದರೂ ಈ ಚಿತ್ರದ ಬಗ್ಗೆ ಸಮಸ್ಯೆ ಇದ್ದರೆ 50 ಜನರು ಇರುವ ಕಡೆ ಕುಳಿತುಕೊಂಡು ಅನುಭವ ಪಡೆಯಿರಿ. ಪ್ರೇಕ್ಷಕರು ನಗಲಿಲ್ಲ ಎಂದರೆ ಸಿನಿಮಾ ಚೆನ್ನಾಗಿಲ್ಲ ಅಂತ ನಾನು ಒಪ್ಪಿಕೊಳ್ಳುತ್ತೇನೆ. ಏನಾದರೂ ಮಾಡಿದಾಗ ಪಾಸಿಟಿವ್ ಆಗಿ ಜೊತೆಯಲ್ಲಿ ನಿಂತುಕೊಳ್ಳಬೇಕು. ಪ್ರತಿ ಬಾರಿ ಅದನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುವುದರಲ್ಲಿ ಅರ್ಥ ಇಲ್ಲ’ ಎಂದು ಡಾಲಿ ಹೇಳಿದ್ದಾರೆ.

ನಿರ್ಮಾಣ ಎಂದರೆ ಸುಲಭ ಅಲ್ಲ:

‘ಇದರ ಬಗ್ಗೆ ನಾನು ದೂಷಣೆ ಮಾಡುತ್ತಿಲ್ಲ. ಇದರಿಂದ ನನಗೆ ಏನೂ ಆಗಬೇಕಾಗಿಲ್ಲ. ನಟನಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಅಷ್ಟೇ ನನ್ನ ಕೆಲಸ. ಉಳಿದೆಲ್ಲವೂ ನನಗೆ ಹೆಚ್ಚುವರಿ. ಏನೋ ಕೊಡುಗೆ ನೀಡಬೇಕು ಅಂತ ನಾನು ಪ್ರಯತ್ನಿಸುತ್ತಿದ್ದೇನೆ. ಅದನ್ನು ಮೆಚ್ಚಿಕೊಳ್ಳುವುದು ಬಿಟ್ಟು ಬೇರೆ ಕಡೆ ತಿರುಗಿಸುವುದರಿಂದ ಅದು ಯಾರನ್ನೂ ಎಲ್ಲಿಗೂ ಕರೆದುಕೊಂಡು ಹೋಗಲ್ಲ. ನಿರ್ಮಾಣ ಎಂದರೆ ಸುಲಭ ಅಲ್ಲ’ ಎಂಬುದು ಡಾಲಿ ಧನಂಜಯ ಅಭಿಪ್ರಾಯ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ, ಡಾಲಿ ಬೇಸರ

‘ಪ್ರತಿ ಬಾರಿ ನಾನೊಬ್ಬನೆ ಇರುತ್ತೇನೆ. ಈ ಬಾರಿ ನನ್ನ ಫ್ರೆಂಡ್ ಹರ್ಷ ಬಂದಿದ್ದಾನೆ. ಪ್ರತಿ ಸಲ ದುಡ್ಡು ಹೊಂದಿಸಿಕೊಂಡು ಬಂದು, ಅದೇ ಉತ್ಸಾಹದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಒಳ್ಳೆಯ ಸಿನಿಮಾ ಮಾಡಿದಾಗ, ಅದಕ್ಕೆ ಒಳ್ಳೆಯ ಅಭಿಪ್ರಾಯ ಸಿಕ್ಕಾಗ ಅದನ್ನು ಪ್ರಸಾರ ಮಾಡಬೇಕು. ಈ ಹಿಂದೆ ಕೂಡ ನಮ್ಮ ಸಿನಿಮಾಗೆ ನೆಗೆಟಿವ್ ವಿಮರ್ಶೆ ಬಂದಿತ್ತು. ಆದರೆ ಜನರು ಚಿತ್ರಮಂದಿರಕ್ಕೆ ನುಗ್ಗಿದ್ದಾಗ ಇದು ಯಾವುದೂ ನಮಗೆ ಮುಖ್ಯವಾಗಿರಲಿಲ್ಲ. ಬಡವ ರಾಸ್ಕಲ್, ಟಗರು ಪಲ್ಯ ಸಿನಿಮಾಗಳಿಗೂ ನೆಗೆಟಿವ್ ಮಾಡಿದ್ದರು. ಆದರೆ ಆ ಸಿನಿಮಾಗಳು ಹಿಟ್ ಆದವು’ ಎಂದಿದ್ದಾರೆ ಡಾಲಿ ಧನಂಜಯ.

ಮದರ್ ಪ್ರಾಮಿಸ್ ಚಿತ್ರದಿಂದ ಲಾಸ್ ಆಗಿಲ್ಲ:

‘ಮದರ್ ಪ್ರಾಮಿಸ್ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ನಮಗೆ ಇನ್ನೂ ಚೆನ್ನಾಗಿ ಆಗಬೇಕು. ಖಂಡಿತವಾಗಿಯೂ ಲಾಸ್ ಆಗಲ್ಲ. ಮೊದಲ ವಾರದಲ್ಲಿಯೇ ಕಲೆಕ್ಷನ್ ಚೆನ್ನಾಗಿ ಆಗಿದೆ. ನಾವು ಚೆನ್ನಾಗಿ ಪ್ಲ್ಯಾನ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಒಂದು ವೇಳೆ ಲಾಸ್ ಅಂತ ಏನಾದರೂ ಆದರೆ ನನಗೆ ಸಂಭಾವನೆ ಸಿಗಲ್ಲ ಅಷ್ಟೇ. ಅದು ಬಿಟ್ಟರೆ ಇನ್ನು ಏನೂ ಲಾಸ್ ಆಗಲ್ಲ’ ಎಂದು ಡಾಲಿ ಧನಂಜಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್: ಆಹಾರ ಸಚಿವ ಮಹತ್ವದ ಹೇಳಿಕೆ – Kannada News | Central Government Recognized 7.76 Lakh Illegal BPL Card In Karnataka Says Ministers KH Muniyappa

ಬೆಂಗಳೂರು, (ಜುಲೈ 16): ರಾಜ್ಯದ 7.76 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್​ಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ.ಅಕ್ರಮ ಬಿಪಿಎಲ್​ ಕಾರ್ಡ್​ಗಳ ಪರಿಷ್ಕರಣೆ ಕೆಲಸ ನಡೆಯುತ್ತಿದೆ. ಈಗಾಗಲೇ 50% ಪರಿಷ್ಕರಣೆ ಮಾಡಲಾಗಿದೆ. ಬಿಪಿಎಲ್​ನಲ್ಲಿದ್ದ 4,32,295 ಜನರನ್ನು ಎಪಿಎಲ್​ಗೆ ಸೇರಿಸಲಾಗಿದೆ. ಇನ್ನುಳಿದವರನ್ನು ಆದಷ್ಟು ಬೇಗ ಎಪಿಎಲ್​ಗೆ ಪರಿವರ್ತನೆ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಹೇಳಿದ್ದಾರೆ.

ಇನ್ನು ಬಿಪಿಎಲ್ ಕಾರ್ಡ್ ಎಪಿಎಲ್ ಆಗಿದ್ರೆ, 15 ದಿನಗಳಲ್ಲಿ ಸರಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ 15 ದಿನದ ಸಮಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?

ಬೆಂಗಳೂರು, ಜುಲೈ 16: ‘‘ರಾಜ್ಯದಲ್ಲಿ ಅಕ್ರಮ ಬಿಪಿಎಲ್​ ಕಾರ್ಡ್​ಗಳ ಪರಿಷ್ಕರಣೆ ಕೆಲಸ ನಡೆಯುತ್ತಿದೆ. ಈಗಾಗಲೇ 50% ಪರಿಷ್ಕರಣೆ ಮಾಡಲಾಗಿದೆ’’ ಎಂದು ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಸ್ಮಾರ್ಟ್ ಪಿಡಿಎಸ್ ಸುಧಾರಣೆಗಳ ಭಾಗವಾಗಿ, ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಾಸ್ ಯಂತ್ರಗಳು ಮತ್ತು ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಇದು ಗ್ರಾಹಕರಿಗೆ ತೂಕದಲ್ಲಿ ಆಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲಿದೆ. ಜೊತೆಗೆ, ವಿತರಣಾ ವಾಹನಗಳಿಗೆ ಜಿಪಿಎಸ್ ಅಳವಡಿಸಿ, ಅವುಗಳ ಚಲನವಲನವನ್ನು ಪತ್ತೆಹಚ್ಚಲು ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತಿದೆ. ಇದು ಕಮಿಷನರ್ ಕಚೇರಿ ಮತ್ತು ಫುಡ್ ಕಾರ್ಪೊರೇಷನ್ ಎಂಡಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಪಡಿತರ ಬಡವರಿಗೆ ಸರಿಯಾಗಿ ತಲುಪುವುದನ್ನು ಖಚಿತಪಡಿಸುತ್ತದೆ’’ ಎಂದು ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದಲ್ಲಿ ಈ ವರ್ಷ ದಾಖಲೆಯ 1.37 ಲಕ್ಷ ಎಂಬಿಬಿಎಸ್ ಸೀಟುಗಳಿಗೆ ಅನುಮೋದನೆ; ಕರ್ನಾಟಕಕ್ಕೆ ಹೆಚ್ಚು ಲಾಭ! – Kannada News | Record MBBS Seats Approved this Year Karnataka tops the list with 15,395 seats

ನವದೆಹಲಿ, ಜುಲೈ 16: ಭಾರತದಲ್ಲಿ ಈ ಬಾರಿ ವೈದ್ಯರ ಸಂಖ್ಯೆ ಹೆಚ್ಚಾಗಲಿದೆ. ಏಕೆಂದರೆ, ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಇತಿಹಾಸದಲ್ಲೇ ಮೊದಲ ಬಾರಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ದೇಶಾದ್ಯಂತ ಬರೋಬ್ಬರಿ 1.37 ಲಕ್ಷ ಎಂಬಿಬಿಎಸ್ (MBBS) ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅನುಮೋದನೆ ನೀಡಿದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ರಾಜ್ಯವಾರು ಎಂಬಿಬಿಎಸ್​ ಸೀಟು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಸೀಟುಗಳನ್ನು ನೀಡಲಾಗಿದೆ. ದೇಶದಲ್ಲೇ ಅತಿಹೆಚ್ಚು ಎಂಬಿಬಿಎಸ್​ ಸೀಟುಗಳನ್ನು ಪಡೆಯುವ ಮೂಲಕ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ.

ನೀಟ್-ಯುಜಿ (NEET-UG) ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಸಿಹಿ ಸುದ್ದಿ ನೀಡಿದೆ. ಈ ಬಾರಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇ. 7ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರಿಂದಾಗಿ ಭಾರತದಲ್ಲಿ ಒಟ್ಟು ಪದವಿಪೂರ್ವ ವೈದ್ಯಕೀಯ ಸೀಟುಗಳ ಸಂಖ್ಯೆ 1.37 ಲಕ್ಷ ತಲುಪಿದೆ.

ಕರ್ನಾಟಕಕ್ಕೆ ಮೊದಲ ಸ್ಥಾನ:

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡರಲ್ಲೂ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯದ ಒಟ್ಟು 75 ವೈದ್ಯಕೀಯ ಕಾಲೇಜುಗಳಲ್ಲಿ ಬರೋಬ್ಬರಿ 15,395 ಸೀಟುಗಳು ಲಭ್ಯವಿದ್ದು, ಈ ಬಾರಿ ದಾಖಲೆಯ 1,300 ಸೀಟುಗಳು ಹೆಚ್ಚಳವಾಗಿವೆ. ಕರ್ನಾಟಕ ಒಟ್ಟು 15,395 ಸೀಟುಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ನಂತರ 2ನೇ ಸ್ಥಾನವನ್ನು ತಮಿಳುನಾಡು ಪಡೆದುಕೊಂಡಿದೆ. ತಮಿಳುನಾಡಿನ 78 ಕಾಲೇಜುಗಳಲ್ಲಿ 13,999 ಸೀಟುಗಳು ಲಭ್ಯವಿವೆ. ಈ ಬಾರಿ 950 ಸೀಟುಗಳು ಹೆಚ್ಚಳವಾಗಿದೆ. ನಂತರ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್, ಪಶ್ಚಿಮ ಬಂಗಾಳ ರಾಜ್ಯಗಳು ಇವೆ.

ಇದನ್ನೂ ಓದಿ: ನೀಟ್ ಪರೀಕ್ಷೆ: ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು 45 ನಿಮಿಷ ದೆಹಲಿ ಏರ್​ಪೋರ್ಟ್​​ನಲ್ಲೇ ಕಾದ ಮೋದಿ

ಕೇಂದ್ರ ಆರೋಗ್ಯ ಸಚಿವಾಲಯವು ಈ ನಿರ್ಧಾರವನ್ನು ಶ್ಲಾಘಿಸಿದೆ. ದೇಶದಲ್ಲಿ ನುರಿತ ವೈದ್ಯಕೀಯ ಮಾನವ ಸಂಪನ್ಮೂಲವನ್ನು ನಿರ್ಮಿಸಲು ಮತ್ತು ದೇಶದ ಮೂಲೆ ಮೂಲೆಗೂ ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಈ ಸೀಟುಗಳ ಹೆಚ್ಚಳವು ಅತ್ಯಗತ್ಯ ಮತ್ತು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಸಚಿವಾಲಯ ಹೇಳಿದೆ. ಇದರ ನಡುವೆ, ದೇಶದ ಹಲವು ಕಾಲೇಜುಗಳಲ್ಲಿ ಅರ್ಹ ಅಧ್ಯಾಪಕರ ಕೊರತೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ಸೀಟುಗಳನ್ನು ಹೆಚ್ಚಿಸುವುದರಿಂದ ಹೊರಬರುವ ವೈದ್ಯರ ಗುಣಮಟ್ಟ ಕಳಪೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಂಬಿಬಿಎಸ್​ ಸೀಟುಗಳನ್ನು ಹೆಚ್ಚಿಸುವುದರ ಜೊತೆಗೆ ಸ್ನಾತಕೋತ್ತರ (PG) ಸೀಟುಗಳ ಹೆಚ್ಚಳ ಮಾಡಬೇಕು, ತಜ್ಞ ವೈದ್ಯರ ಕೊರತೆ ನೀಗಿಸಲು ಪಿಜಿ ಸೀಟುಗಳ ತರಬೇತಿಯನ್ನು ಉತ್ತಮಗೊಳಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಹಾಗೇ, ಸೀಟುಗಳನ್ನು ಪಡೆದ ವೈದ್ಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಮಾಡುವ ಸಮರ್ಪಕ ನೀತಿಯನ್ನು ಜಾರಿಗೆ ತರಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಫ್ಲಶ್​ ಟ್ಯಾಂಕ್​ನಲ್ಲಿ ಮೊಬೈಲ್ ಅಡಗಿಸಿಟ್ಟು ಹೊಟ್ಟೆ ನೋವೆಂದು ಎದ್ದು ಹೋಗ್ತಿದ್ದ ನೀಟ್ ವಿದ್ಯಾರ್ಥಿ ಸಿಕ್ಕಿಬಿದ್ದಿದ್ಹೇಗೆ?

ಜೂನ್ 21ರಂದು ನಡೆದ ನೀಟ್ ಯುಜಿ (NEET UG 2026) ಪರೀಕ್ಷೆಯ ಫಲಿತಾಂಶಗಳು ಜುಲೈ 20ರೊಳಗೆ ಪ್ರಕಟವಾಗುವ ನಿರೀಕ್ಷೆಯಿದ್ದು, ಇದಕ್ಕೂ ಮುನ್ನವೇ ಎನ್‌ಎಂಸಿ ಸೀಟುಗಳ ಹಂಚಿಕೆಯ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ಒಟ್ಟು 823 ವೈದ್ಯಕೀಯ ಕಾಲೇಜುಗಳಲ್ಲಿ 1,36,939 ಎಂಬಿಬಿಎಸ್ ಸೀಟುಗಳು ಲಭ್ಯವಿರುತ್ತವೆ. ಇವುಗಳಲ್ಲಿ 1,27,028 ಸೀಟುಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಈ ವರ್ಷ ಹೊಸದಾಗಿ 9,911 ಸೀಟುಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇದರೊಂದಿಗೆ, ಒಟ್ಟು 25 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದ್ದು, ಇವುಗಳಿಂದಲೇ 2,400 ಹೆಚ್ಚುವರಿ ಸೀಟುಗಳು ಲಭ್ಯವಾಗಲಿವೆ. ಈ ವರ್ಷ ಮಂಜೂರಾದ 25 ಹೊಸ ಕಾಲೇಜುಗಳಲ್ಲಿ 7 ಸರ್ಕಾರಿ ಮತ್ತು 18 ಖಾಸಗಿ ಕಾಲೇಜುಗಳು ಸೇರಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಎಸ್ಕೇಪ್​​!: ಶಿವಕಾಳಿ ಸ್ವಾಮೀಜಿ ವಿರುದ್ಧ ಆರೋಪ – Kannada News | Nelamangala Robbery: Shivakali Swamiji Held for Allegedly Stealing Gold, Cash During Puja

ನೆಲಮಂಗಲ, ಜುಲೈ 16: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಾಗಲಗುಂಟೆಯಲ್ಲಿ ಪೂಜೆ ನೆಪದಲ್ಲಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಪ್ರಕರಣ ವರದಿಯಾಗಿದೆ. ಗೀತಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಿತಿನಿ ಅಲಿಯಾಸ್​​ ಶಿವಕಾಳಿ ಸ್ವಾಮೀಜಿ ವಿರುದ್ಧ ಆರೋಪ ಕೇಳಿಬಂದಿದೆ. ಗೀತಾ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅದಾಗಲೇ ಅವರಿಗೆ ಮದುವೆಯೂ ಆಗಿದೆ. ಈ ನಡುವೆ ಎರಡನೆ ಮಗಳ ಸಂಸಾರದಲ್ಲಿ ಆಗಾಗ ಜಗಳ ಹಿನ್ನೆಲೆ ಪರಿಚಯಸ್ಥರ ಮೂಲಕ ಶಿವಕಾಳಿ ಸ್ವಾಮೀಜಿಯನ್ನು ಗೀತಾ ಭೇಟಿಯಾಗಿದ್ದರು. ಆಗ ನಿಮ್ಮ ಅಳಿಯನಿಗೆ ಸಾವಿನ ಗಂಡಾಂತರವಿದೆ ಎಂದಿದ್ದ ಸ್ವಾಮೀಜಿ, ಯಾರು ಇಲ್ಲದ ವೇಳೆಯಲ್ಲಿ ಪೂಜೆ ಮಾಡಬೇಕು ಎಂದು ತಿಳಿಸಿದ್ದರು. ಸ್ವಾಮೀಜಿ ಮಾತನ್ನ ನಂಬಿ ಗೀತಾ ಒಬ್ಬರೇ ಇದ್ದ ಸಮಯದಲ್ಲಿ ಪೂಜೆ ನಡೆಸಲಾಗಿದ್ದು, ಪೂಜೆಗೆ ಒಡವೆ ನಗದು ಎಲ್ಲವನ್ನೂ ಇಡಿ ಎಂದು ಸ್ವಾಮೀಜಿ ತಿಳಿಸಿದ್ದರು. ಅದರಂತೆ 43 ಗ್ರಾಂ ಚಿನ್ನಾಭರಣ ಮತ್ತು 1 ಲಕ್ಷದ 30 ಸಾವಿರ ನಗದನ್ನು ಗೀತಾ ಇಟ್ಟಿದ್ದರು. ಆ ಬಳಿಕ ಬೂದಿ ಎರಚಿ ಬೆನ್ನ ಮೇಲೆ ಸ್ವಾಮೀಜಿ ಹೊಡೆದ ಪರಿಣಾಮ ಮಹಿಳೆ ಮೂರ್ಚೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಹಣ, ಚಿನ್ನ ದೋಚಿ ಸ್ವಾಮೀಜಿ ಎಸ್ಕೇಪ್​​ ಆಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs ENG: ಬೌಂಡರಿ ಬಾರಿಸಿ ಇಂಗ್ಲೆಂಡ್‌ ವಿರುದ್ಧ ವಿಶೇಷ ದಾಖಲೆ ನಿರ್ಮಿಸಿದ ಕೊಹ್ಲಿ – Kannada News | Virat Kohli Breaks Dravid’s Record: Most Runs vs England in England! IND vs ENG ODI

ಈ ದಾಖಲೆಯ ಜೊತೆಗೆ ಕೊಹ್ಲಿ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 100 ಏಕದಿನ ಪಂದ್ಯಗಳನ್ನಾಡಿದ ಸಾಧನೆಯನ್ನು ಮಾಡಿದರು. ಇದು ಇಂಗ್ಲೆಂಡ್‌ನಲ್ಲಿ ಕೊಹ್ಲಿಯ 35 ನೇ ಪಂದ್ಯವಾಗಿದೆ. ಆದಾಗ್ಯೂ, 2014 ರಲ್ಲಿ ಇದೇ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಅವರು ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದರು(PC-PTI).

Source link

ತೂಕ ಇಳಿಸಿಕೊಳ್ಳುವವರಿಗೆ ಬೆಲ್ಲ ಅಥವಾ ಖರ್ಜೂರ ಯಾವುದು ಬೆಸ್ಟ್‌ ತಿಳಿದುಕೊಳ್ಳಿ – Kannada News | Dates or Jaggery: Which Traditional Sweetener Is Better for Weight Loss?

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಖರ್ಜೂರವನ್ನು ಆಹಾರದಲ್ಲಿ ಬಳಸಲು ಆರಂಭಿಸಿದ್ದಾರೆ. ಇವೆರಡೂ ಸಕ್ಕರೆಗಿಂತ ಉತ್ತಮ ಪರ್ಯಾಯಗಳಾಗಿದ್ದರೂ, ತೂಕ ಇಳಿಸಿಕೊಳ್ಳುವವರಿಗೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಆರೋಗ್ಯ ತಜ್ಞರ ಅಭಿಪ್ರಾಯ ಹಾಗೂ ವಿವಿಧ ಅಧ್ಯಯನಗಳ ಪ್ರಕಾರ, ಖರ್ಜೂರ ಮತ್ತು ಬೆಲ್ಲ ಎರಡಕ್ಕೂ ತಮ್ಮದೇ ಆದ ಆರೋಗ್ಯ ಲಾಭಗಳಿದ್ದರೂ, ಅವುಗಳನ್ನು ಸೇವಿಸುವ ವಿಧಾನ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇವೆರಡರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಯಾವುದರ ಸೇವನೆ ಮಾಡುವುದು ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಲ್ಲ ಮತ್ತು ಖರ್ಜೂರದಲ್ಲಿ ಯಾವುದು ಬೆಸ್ಟ್?

ಖರ್ಜೂರದಲ್ಲಿ ನಾರಿನಾಂಶ (ಫೈಬರ್), ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ಆ್ಯಂಟಿಆಕ್ಸಿಡೆಂಟ್‌ಗಳು ಸಾಕಷ್ಟು ಇರುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ಏಕಾಏಕಿ ಏರುವುದನ್ನು ತಡೆಯಲು ಸಹಕಾರಿ.

ಬೆಲ್ಲವು ಕಬ್ಬು ಅಥವಾ ತಾಳೆ ರಸದಿಂದ ತಯಾರಾಗುವ ನೈಸರ್ಗಿಕ ಸಿಹಿ ಪದಾರ್ಥ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಕೆಲವು ಖನಿಜಗಳು ಇದ್ದರೂ, ಫೈಬರ್ ಬಹಳ ಕಡಿಮೆ. ಆದ್ದರಿಂದ ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡಿದರೂ ಹೆಚ್ಚು ಸೇವಿಸಿದರೆ ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಾಗುತ್ತದೆ.

ತೂಕ ಇಳಿಸಿಕೊಳ್ಳುವವರಿಗೆ ಯಾವುದು ಉತ್ತಮ?

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಖರ್ಜೂರವೇ ಉತ್ತಮ ಆಯ್ಕೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಾರಣ, ಇದರಲ್ಲಿ ಇರುವ ಫೈಬರ್ ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಪದೇ ಪದೇ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಇನ್ನೊಂದೆಡೆ ಬೆಲ್ಲದಲ್ಲಿ ಫೈಬರ್ ಇಲ್ಲದ ಕಾರಣ ಅದು ಬೇಗ ಜೀರ್ಣವಾಗಿ ಮತ್ತೆ ಹಸಿವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಟೀ, ಕಾಫಿ ಅಥವಾ ಸಿಹಿ ಪದಾರ್ಥಗಳಲ್ಲಿ ಬೆಲ್ಲ ಬಳಸಿದರೆ ತಿಳಿಯದಂತೆ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಸಾಧ್ಯತೆ ಇರುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ

ಖರ್ಜೂರದ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ಮಟ್ಟದಲ್ಲಿದ್ದು, ರಕ್ತದಲ್ಲಿನ ಗ್ಲೂಕೋಸ್ ಏರಿಳಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚು ಇರುವುದರಿಂದ ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಇದನ್ನೂ ಓದಿ: ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು

ಈ ವಿಷಯಗಳನ್ನು ತಿಳಿದುಕೊಂಡಿರಿ:

  • ವ್ಯಾಯಾಮಕ್ಕೆ 30 ನಿಮಿಷ ಮೊದಲು 1–2 ಖರ್ಜೂರ ತಿಂದರೆ ತ್ವರಿತ ಶಕ್ತಿ ಸಿಗುತ್ತದೆ.
  • ಬೆಲ್ಲವನ್ನು ಚಳಿಗಾಲದಲ್ಲಿ ಮಿತ ಪ್ರಮಾಣದಲ್ಲಿ ಸೇವಿಸುವುದು ದೇಹಕ್ಕೆ ಉಷ್ಣತೆ ನೀಡಲು ಸಹಕಾರಿಯಾಗಿದೆ.
  • ತೂಕ ಇಳಿಸಿಕೊಳ್ಳುವವರು ಯಾವುದೇ ಸಿಹಿ ಪದಾರ್ಥವನ್ನು “ಆರೋಗ್ಯಕರ” ಎಂದು ಅತಿಯಾಗಿ ಸೇವಿಸಬಾರದು.
  • ಖರ್ಜೂರ ಅಥವಾ ಬೆಲ್ಲ ಎರಡನ್ನೂ ಒಟ್ಟು ದಿನದ ಕ್ಯಾಲೊರಿ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡೇ ಸೇವಿಸುವುದು ಉತ್ತಮ.

ತಜ್ಞರ ಸಲಹೆ

ಪೌಷ್ಟಿಕ ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳುವವರು ದಿನಕ್ಕೆ 1–2 ಖರ್ಜೂರ ಅಥವಾ 1 ಟೀಸ್ಪೂನ್‌ಗಿಂತ ಕಡಿಮೆ ಬೆಲ್ಲ ಸೇವಿಸಿದರೆ ಸಾಕು. ಮಧುಮೇಹ, ಫ್ಯಾಟಿ ಲಿವರ್ ಅಥವಾ ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ಗಮನಿಸಿ: ಬೆಲ್ಲ ಮತ್ತು ಖರ್ಜೂರ ಎರಡೂ ನೈಸರ್ಗಿಕ ಸಿಹಿ ಪದಾರ್ಥಗಳೇ ಹೊರತು “ಸಕ್ಕರೆ ರಹಿತ” ಆಹಾರವಲ್ಲ. ಆದ್ದರಿಂದ ಮಿತ ಪ್ರಮಾಣವೇ ಆರೋಗ್ಯಕರ ಆಯ್ಕೆ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನೀರಿನ ಸೇವನೆಯೊಂದಿಗೆ ಇವುಗಳನ್ನು ಬಳಸಿದಾಗ ಮಾತ್ರ ತೂಕ ನಿಯಂತ್ರಣದಲ್ಲಿದ್ದು ಉತ್ತಮ ಫಲಿತಾಂಶ ದೊರೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version