IND vs ENG: ಬೌಂಡರಿ ಬಾರಿಸಿ ಇಂಗ್ಲೆಂಡ್‌ ವಿರುದ್ಧ ವಿಶೇಷ ದಾಖಲೆ ನಿರ್ಮಿಸಿದ ಕೊಹ್ಲಿ – Kannada News | Virat Kohli Breaks Dravid’s Record: Most Runs vs England in England! IND vs ENG ODI

ಈ ದಾಖಲೆಯ ಜೊತೆಗೆ ಕೊಹ್ಲಿ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 100 ಏಕದಿನ ಪಂದ್ಯಗಳನ್ನಾಡಿದ ಸಾಧನೆಯನ್ನು ಮಾಡಿದರು. ಇದು ಇಂಗ್ಲೆಂಡ್‌ನಲ್ಲಿ ಕೊಹ್ಲಿಯ 35 ನೇ ಪಂದ್ಯವಾಗಿದೆ. ಆದಾಗ್ಯೂ, 2014 ರಲ್ಲಿ ಇದೇ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಅವರು ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದರು(PC-PTI).

Source link

ತೂಕ ಇಳಿಸಿಕೊಳ್ಳುವವರಿಗೆ ಬೆಲ್ಲ ಅಥವಾ ಖರ್ಜೂರ ಯಾವುದು ಬೆಸ್ಟ್‌ ತಿಳಿದುಕೊಳ್ಳಿ – Kannada News | Dates or Jaggery: Which Traditional Sweetener Is Better for Weight Loss?

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಖರ್ಜೂರವನ್ನು ಆಹಾರದಲ್ಲಿ ಬಳಸಲು ಆರಂಭಿಸಿದ್ದಾರೆ. ಇವೆರಡೂ ಸಕ್ಕರೆಗಿಂತ ಉತ್ತಮ ಪರ್ಯಾಯಗಳಾಗಿದ್ದರೂ, ತೂಕ ಇಳಿಸಿಕೊಳ್ಳುವವರಿಗೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತದೆ. ಆರೋಗ್ಯ ತಜ್ಞರ ಅಭಿಪ್ರಾಯ ಹಾಗೂ ವಿವಿಧ ಅಧ್ಯಯನಗಳ ಪ್ರಕಾರ, ಖರ್ಜೂರ ಮತ್ತು ಬೆಲ್ಲ ಎರಡಕ್ಕೂ ತಮ್ಮದೇ ಆದ ಆರೋಗ್ಯ ಲಾಭಗಳಿದ್ದರೂ, ಅವುಗಳನ್ನು ಸೇವಿಸುವ ವಿಧಾನ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇವೆರಡರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಯಾವುದರ ಸೇವನೆ ಮಾಡುವುದು ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಲ್ಲ ಮತ್ತು ಖರ್ಜೂರದಲ್ಲಿ ಯಾವುದು ಬೆಸ್ಟ್?

ಖರ್ಜೂರದಲ್ಲಿ ನಾರಿನಾಂಶ (ಫೈಬರ್), ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ಆ್ಯಂಟಿಆಕ್ಸಿಡೆಂಟ್‌ಗಳು ಸಾಕಷ್ಟು ಇರುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ಏಕಾಏಕಿ ಏರುವುದನ್ನು ತಡೆಯಲು ಸಹಕಾರಿ.

ಬೆಲ್ಲವು ಕಬ್ಬು ಅಥವಾ ತಾಳೆ ರಸದಿಂದ ತಯಾರಾಗುವ ನೈಸರ್ಗಿಕ ಸಿಹಿ ಪದಾರ್ಥ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಕೆಲವು ಖನಿಜಗಳು ಇದ್ದರೂ, ಫೈಬರ್ ಬಹಳ ಕಡಿಮೆ. ಆದ್ದರಿಂದ ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡಿದರೂ ಹೆಚ್ಚು ಸೇವಿಸಿದರೆ ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಾಗುತ್ತದೆ.

ತೂಕ ಇಳಿಸಿಕೊಳ್ಳುವವರಿಗೆ ಯಾವುದು ಉತ್ತಮ?

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಖರ್ಜೂರವೇ ಉತ್ತಮ ಆಯ್ಕೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಾರಣ, ಇದರಲ್ಲಿ ಇರುವ ಫೈಬರ್ ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಪದೇ ಪದೇ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಇನ್ನೊಂದೆಡೆ ಬೆಲ್ಲದಲ್ಲಿ ಫೈಬರ್ ಇಲ್ಲದ ಕಾರಣ ಅದು ಬೇಗ ಜೀರ್ಣವಾಗಿ ಮತ್ತೆ ಹಸಿವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಟೀ, ಕಾಫಿ ಅಥವಾ ಸಿಹಿ ಪದಾರ್ಥಗಳಲ್ಲಿ ಬೆಲ್ಲ ಬಳಸಿದರೆ ತಿಳಿಯದಂತೆ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಸಾಧ್ಯತೆ ಇರುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ

ಖರ್ಜೂರದ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ಮಟ್ಟದಲ್ಲಿದ್ದು, ರಕ್ತದಲ್ಲಿನ ಗ್ಲೂಕೋಸ್ ಏರಿಳಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚು ಇರುವುದರಿಂದ ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಇದನ್ನೂ ಓದಿ: ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು

ಈ ವಿಷಯಗಳನ್ನು ತಿಳಿದುಕೊಂಡಿರಿ:

  • ವ್ಯಾಯಾಮಕ್ಕೆ 30 ನಿಮಿಷ ಮೊದಲು 1–2 ಖರ್ಜೂರ ತಿಂದರೆ ತ್ವರಿತ ಶಕ್ತಿ ಸಿಗುತ್ತದೆ.
  • ಬೆಲ್ಲವನ್ನು ಚಳಿಗಾಲದಲ್ಲಿ ಮಿತ ಪ್ರಮಾಣದಲ್ಲಿ ಸೇವಿಸುವುದು ದೇಹಕ್ಕೆ ಉಷ್ಣತೆ ನೀಡಲು ಸಹಕಾರಿಯಾಗಿದೆ.
  • ತೂಕ ಇಳಿಸಿಕೊಳ್ಳುವವರು ಯಾವುದೇ ಸಿಹಿ ಪದಾರ್ಥವನ್ನು “ಆರೋಗ್ಯಕರ” ಎಂದು ಅತಿಯಾಗಿ ಸೇವಿಸಬಾರದು.
  • ಖರ್ಜೂರ ಅಥವಾ ಬೆಲ್ಲ ಎರಡನ್ನೂ ಒಟ್ಟು ದಿನದ ಕ್ಯಾಲೊರಿ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡೇ ಸೇವಿಸುವುದು ಉತ್ತಮ.

ತಜ್ಞರ ಸಲಹೆ

ಪೌಷ್ಟಿಕ ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳುವವರು ದಿನಕ್ಕೆ 1–2 ಖರ್ಜೂರ ಅಥವಾ 1 ಟೀಸ್ಪೂನ್‌ಗಿಂತ ಕಡಿಮೆ ಬೆಲ್ಲ ಸೇವಿಸಿದರೆ ಸಾಕು. ಮಧುಮೇಹ, ಫ್ಯಾಟಿ ಲಿವರ್ ಅಥವಾ ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ಗಮನಿಸಿ: ಬೆಲ್ಲ ಮತ್ತು ಖರ್ಜೂರ ಎರಡೂ ನೈಸರ್ಗಿಕ ಸಿಹಿ ಪದಾರ್ಥಗಳೇ ಹೊರತು “ಸಕ್ಕರೆ ರಹಿತ” ಆಹಾರವಲ್ಲ. ಆದ್ದರಿಂದ ಮಿತ ಪ್ರಮಾಣವೇ ಆರೋಗ್ಯಕರ ಆಯ್ಕೆ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನೀರಿನ ಸೇವನೆಯೊಂದಿಗೆ ಇವುಗಳನ್ನು ಬಳಸಿದಾಗ ಮಾತ್ರ ತೂಕ ನಿಯಂತ್ರಣದಲ್ಲಿದ್ದು ಉತ್ತಮ ಫಲಿತಾಂಶ ದೊರೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

250 ರೂ ಸಣ್ಣ ಎಸ್​ಐಪಿಗಳತ್ತ ಮುಗಿಬಿದ್ದ ಹೊಸ ಹೂಡಿಕೆದಾರರು; ಬಂದಷ್ಟೇ ವೇಗದಲ್ಲಿ ನಿರ್ಗಮನ; ಏನು ಕಾರಣ? – Kannada News | Choti SIP of Rs 250 gaining popularity and fast exits at same time, why small investors pulling out

ನವದೆಹಲಿ, ಜುಲೈ 16: ಭಾರತೀಯ ಹೂಡಿಕೆ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣ ಮೊತ್ತದ ಎಸ್‌ಐಪಿಗಳು (Systematic Investment Plans – SIP) ಭಾರಿ ಸಂಚಲನ ಸೃಷ್ಟಿಸುತ್ತಿವೆ. ಮ್ಯೂಚುವಲ್ ಫಂಡ್‌ಗಳನ್ನು ಸಾಮಾನ್ಯ ಜನರಿಗೂ ತಲುಪಿಸುವ ಉದ್ದೇಶದಿಂದ ಜಾರಿಗೆ ತರಲಾದ ‘ಚೋಟಿ ಎಸ್‌ಐಪಿ’ (Choti SIP) ಯೋಜನೆಗೆ ದೇಶಾದ್ಯಂತ ಭಾರಿ ಜನಪ್ರಿಯತೆ ವ್ಯಕ್ತವಾಗುತ್ತಿದೆ. ಕೇವಲ ತಿಂಗಳಿಗೆ ₹250 ಹೂಡಿಕೆ ಮಾಡುವ ಮೂಲಕ ಹೂಡಿಕೆ ಪ್ರಪಂಚಕ್ಕೆ ಕಾಲಿಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಇದರ ನಡುವೆಯೇ ಮಾರುಕಟ್ಟೆ ತಜ್ಞರು ಒಂದು ಪ್ರಮುಖ ಕಳವಳಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮೊದಲ ಬಾರಿಗೆ ಮ್ಯೂಚುವಲ್ ಫಂಡ್‌ಗೆ ಪ್ರವೇಶಿಸುತ್ತಿರುವ ಹೊಸ ಹೂಡಿಕೆದಾರರಲ್ಲಿ ಹೆಚ್ಚಿನವರು ಆರಂಭದ ಕೆಲವೇ ತಿಂಗಳುಗಳಲ್ಲಿ ತಮ್ಮ ಎಸ್‌ಐಪಿಗಳನ್ನು ನಿಲ್ಲಿಸಿ ಹೊರನಡೆಯುತ್ತಿದ್ದಾರೆ.

2025ರ ಏಪ್ರಿಲ್​ನಲ್ಲಿ 1.97 ಲಕ್ಷ ಇದ್ದ ಸಿಪ್ ಅಕೌಂಟ್​ಗಳು 2026ರ ಜೂನ್​ನಲ್ಲಿ 3.22 ಲಕ್ಷಕ್ಕೆ ಏರಿವೆ. ಆದರೆ, ಮೇ ತಿಂಗಳಲ್ಲಿ 26,000 ಸಿಪ್ ಅಕೌಂಟ್​ಗಳು ನಿಂತಿವೆ. ಕುತೂಹಲ ಎಂದರೆ, 2025ರ ಸೆಪ್ಟೆಂಬರ್​ನಿಂದ ಪ್ರತೀ ತಿಂಗಳು ಸರಾಸರಿಯಾಗಿ 28,000 ಹೊಸ ಎಸ್​ಐಪಿಗಳು ಆರಂಭಗೊಳ್ಳುತ್ತಿವೆ. ಆದರೆ, ಅದೇ ಅವದಿಯಲ್ಲಿ 20,000 ಅಕೌಂಟ್​ಗಳು ನಿಲ್ಲುತ್ತಾ ಬಂದಿವೆ.

‘ಚೋಟಿ ಎಸ್‌ಐಪಿ’ ಎಂದರೇನು?

ಮ್ಯೂಚುವಲ್ ಫಂಡ್‌ಗಳಲ್ಲಿ ಈ ಹಿಂದೆ ಕನಿಷ್ಠ ಹೂಡಿಕೆ ಮೊತ್ತ ಸಾಮಾನ್ಯವಾಗಿ ₹500 ರಿಂದ ₹1,000 ಇರುತ್ತಿತ್ತು. ಆದರೆ ದೇಶದ ಆರ್ಥಿಕ ಒಳಗೊಳ್ಳುವಿಕೆಯನ್ನು (Financial Inclusion) ಹೆಚ್ಚಿಸಲು, ಕಡಿಮೆ ಆದಾಯ ಸ್ತರದ ಜನರನ್ನು ಮ್ಯೂಚುವಲ್ ಫಂಡ್​ಗಳತ್ತ ಆಕರ್ಷಿಸಲು ಸೆಬಿ (SEBI) ಅನುಮತಿಯೊಂದಿಗೆ ಕೇವಲ ತಿಂಗಳಿಗೆ ₹250 ರಿಂದ ಹೂಡಿಕೆ ಆರಂಭಿಸುವ ‘ಚೋಟಿ ಎಸ್‌ಐಪಿ’ ಸೌಲಭ್ಯವನ್ನು ಮ್ಯೂಚುವಲ್ ಫಂಡ್ ಸಂಸ್ಥೆಗಳು ಪರಿಚಯಿಸಿವೆ. ಇದು ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಕಡಿಮೆ ಆದಾಯದ ಜನರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ.

ಇದನ್ನೂ ಓದಿ: ಇಪಿಎಫ್​ಒ ಅಪ್​​ಡೇಟ್; ಪಿಎಫ್ ಖಾತೆಗೆ ಬರುತ್ತಿದೆ ಬಡ್ಡಿ ಹಣ; ನಿಮಗೆ ಬಂದಿದೆಯಾ, ಪರಿಶೀಲಿಸುವುದು ಹೇಗೆ?

ಹೊಸ ಹೂಡಿಕೆದಾರರು ಬೇಗನೆ ಹೊರನಡೆಯುತ್ತಿರುವುದಕ್ಕೆ ಕಾರಣಗಳೇನು?

ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆದಾರರ ನೋಂದಣಿ ಹೆಚ್ಚುತ್ತಿದ್ದರೂ, ದೀರ್ಘಾವಧಿಯವರೆಗೆ ಹೂಡಿಕೆ ಮುಂದುವರಿಸಲು ಅವರು ವಿಫಲರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:

  • ಮಾರುಕಟ್ಟೆಯ ಏರಿಳಿತದ ಭಯ: ಶೇರು ಮಾರುಕಟ್ಟೆಯ ಏರಿಳಿತಗಳ (Market Volatility) ಬಗ್ಗೆ ಹೊಸಬರಲ್ಲಿ ಸೂಕ್ತ ತಿಳುವಳಿಕೆ ಕೊರತೆ ಇರುತ್ತದೆ. ಮಾರುಕಟ್ಟೆ ಸ್ವಲ್ಪ ಇಳಿದ ತಕ್ಷಣ ತಮ್ಮ ಹೂಡಿಕೆಯ ಮೌಲ್ಯ ಕಡಿಮೆಯಾಗುವುದನ್ನು ನೋಡಿ ಹೆದರಿ ಎಸ್‌ಐಪಿಗಳನ್ನು ನಿಲ್ಲಿಸುತ್ತಿದ್ದಾರೆ.
  • ತ್ವರಿತ ಲಾಭದ ನಿರೀಕ್ಷೆ: ಎಸ್‌ಐಪಿ ಅಂದರೆ ರಾತ್ರೋರಾತ್ರಿ ಹಣ ದುಪ್ಪಟ್ಟು ಮಾಡುವ ಯೋಜನೆಯಲ್ಲ. ಇದಕ್ಕೆ ದೀರ್ಘಾವಧಿಯ ತಾಳ್ಮೆ ಬೇಕು. ಆದರೆ ಶೀಘ್ರ ಲಾಭ ಸಿಗದಿದ್ದಾಗ ಜನರು ನಿರಾಶರಾಗುತ್ತಿದ್ದಾರೆ.
  • ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆ: ಪ್ರತಿ ತಿಂಗಳು ಆಟೋ-ಡೆಬಿಟ್ ಆಗುವ ದಿನ ಖಾತೆಯಲ್ಲಿ ಕನಿಷ್ಠ ಹಣ ಇಲ್ಲದಿದ್ದರೆ ಬ್ಯಾಂಕ್‌ಗಳು ಗ್ರಾಹಕರಿಗೆ ದಂಡ (ECS Bounce Charges) ವಿಧಿಸುತ್ತವೆ. ₹250 ಎಸ್‌ಐಪಿ ಕಂತು ಕಟ್ಟಲು ವಿಫಲವಾಗಿ ಬ್ಯಾಂಕ್‌ನಿಂದ ₹200-₹300 ದಂಡ ಬೀಳುವುದರಿಂದ ಬೇಸತ್ತು ಅನೇಕರು ಎಸ್‌ಐಪಿ ಅನ್ನೇ ರದ್ದುಗೊಳಿಸುತ್ತಿದ್ದಾರೆ.
  • ಹಣಕಾಸು ಶಿಸ್ತಿನ ಕೊರತೆ: ಸಣ್ಣ ಹೂಡಿಕೆಯನ್ನು ಗಂಭೀರವಾಗಿ ಪರಿಗಣಿಸದೆ, ಇತರ ಖರ್ಚುಗಳಿಗೆ ಆದ್ಯತೆ ನೀಡಿ ಹೂಡಿಕೆಯನ್ನು ಅರ್ಧಕ್ಕೆ ನಿಲ್ಲಿಸುವುದು ಮತ್ತೊಂದು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?

ತಜ್ಞರ ಕಿವಿಮಾತು: ಹನಿ ಹನಿ ಸೇರಿದರೆ ಹಳ್ಳ

ಬರೀ ₹250 ಹೂಡಿಕೆಯಿಂದ ಏನು ಮಾಡಲು ಸಾಧ್ಯ ಎಂದು ಕಡೆಗಣಿಸಬೇಡಿ. ತಿಂಗಳಿಗೆ ₹250 ರಂತೆ ವರ್ಷಕ್ಕೆ ಶೇ.12 ರಷ್ಟು ಸರಾಸರಿ ಆದಾಯ ನಿರೀಕ್ಷಿಸಿದರೆ, ದೀರ್ಘಾವಧಿಯಲ್ಲಿ ಅದು ಪಡೆಯುವ ಕಾಂಪೌಂಡಿಂಗ್ (ಚಕ್ರಬಡ್ಡಿ) ಶಕ್ತಿ ಅಪಾರ. ಕೇವಲ ₹250 ಎಸ್ಐಪಿಯಲ್ಲಿ ದೀರ್ಘಾವಧಿಯಲ್ಲಿ ₹10 ಲಕ್ಷ ಪಡೆಯಲು ಸಾಧ್ಯ. ಶೇ. 12 ವಾರ್ಷಿಕ ದರದಲ್ಲಿ ಫಂಡ್ ಬೆಳೆದರೆ, ₹250 ಎಸ್​ಐಪಿ ಈ ಕೆಳಗಿನಂತೆ ರಿಟರ್ನ್ಸ್ ಕೊಡಬಲ್ಲುದು:

  • 10 ವರ್ಷದಲ್ಲಿ ಒಟ್ಟು ಹೂಡಿಕೆ ₹30,000 – ಅಂದಾಜು ಮೌಲ್ಯ ₹57,000
  • 20 ವರ್ಷದಲ್ಲಿ ಒಟ್ಟು ಹೂಡಿಕೆ ₹60,000 – ಅಂದಾಜು ಮೌಲ್ಯ ₹2.5 ಲಕ್ಷ
  • 30 ವರ್ಷದಲ್ಲಿ ಒಟ್ಟು ಹೂಡಿಕೆ ₹90,000 – ಅಂದಾಜು ಮೌಲ್ಯ ₹9.0 ಲಕ್ಷ

ಹಣಕಾಸಿನ ಸ್ಥಿರತೆಗಾಗಿ ಸಣ್ಣ ಮೊತ್ತದಲ್ಲೇ ಹೂಡಿಕೆ ಆರಂಭಿಸಿ, ಮಾರುಕಟ್ಟೆಯ ಏರಿಳಿತಗಳಿಗೆ ಹೆದರದೆ ದೀರ್ಘಕಾಲದವರೆಗೆ ಹೂಡಿಕೆಯನ್ನು ಮುಂದುವರಿಸುವುದು ಅತ್ಯಂತ ಅಗತ್ಯವಾಗಿದೆ. ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆ ಹೆಚ್ಚೇನೂ ಏರಿಲ್ಲ. ಫಿಕ್ಸೆಡ್ ಡೆಪಾಸಿಟ್​ಗಿಂತಲೂ ಕಡಿಮೆ ರಿಟರ್ನ್ಸ್ ಕೊಟ್ಟಿದೆ. ಈ ವೇಳೆ, ಮಾರುಕಟ್ಟೆ ಚಲನೆಗಳ ಅರಿವಿಲ್ಲದ ಹೊಸ ಹೂಡಿಕೆದಾರರಿಗೆ ಈ ರಿಟರ್ನ್ಸ್ ನಿರಾಸೆ ಎನಿಸಬಹುದು. ಆದರೆ, ಈ ರೀತಿಯ ಬೀಳುಗಳು ಷೇರು ಮಾರುಕಟ್ಟೆಯಲ್ಲಿ ಆಗಾಗ್ಗೆ ಆಗುತ್ತಿರುತ್ತದೆ. ದೀರ್ಘಾವಧಿಯಲ್ಲಿ ಮಾರುಕಟ್ಟೆ ಗಣನೀಯ ಬೆಳವಣಿಗೆ ತೋರುತ್ತದೆ. ಹೀಗಾಗಿ, ತಾಳ್ಮೆಗೆಡದೆ ಹೂಡಿಕೆ ಮುಂದುವರಿಸುವುದು ಜಾಣತನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಟೀಂ ಇಂಡಿಯಾದ ಯುವ ವೇಗಿಗೆ ದಂಡದ ಬರೆ ಎಳೆದ ಐಸಿಸಿ

Source link

ಸಿಬಿಲ್ ಸ್ಕೋರ್ ಎಷ್ಟಿದರೆ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ – Kannada News | Bank Loan: If your CIBIL score is excellent, you can get a loan at a low interest rate.

ಸಾಲ (Loan) ತಕೊಳ್ಳುವುದಕ್ಕಿಂತ ಅದನ್ನು ಮರುಪಾವತಿ ಮಾಡುವುದೇ ದೊಡ್ಡ ತಲೆ ನೋವು. ಹೀಗಾಗಿ ಬಡ್ಡಿದರ ಕಡಿಮೆ ಇರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಲು ಮುಂದಾಗುವುದೇ ಹೆಚ್ಚು. ಆದರೆ ಈ ಸಾಲದ ಬಡ್ಡಿಯು ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ. ಸಿಬಿಲ್ ಸ್ಕೋರ್ ಹೆಚ್ಚಿದರೆ ಮಾತ್ರ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಹಾಗಾದ್ರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು ಎಂಬುದು ತಿಳಿದಿದೆಯೇ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕ್‌ಗಳು ಮೊದಲು ನೋಡುವುದೇ ಈ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ.

ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತೆ ಸಾಲದ ಬಡ್ಡಿದರ

750 – 900 (ಅತ್ಯುತ್ತಮ): ಸಿಬಿಲ್ ಸ್ಕೋರ್ 750 – 900 ನಡುವೆ ಇದ್ದರೆ ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಸುಲಭವಾಗಿ ಸಾಲ ನೀಡುತ್ತವೆ.

700 – 749 (ಉತ್ತಮ): ಈ ಸ್ಕೋರ್‌ನಲ್ಲಿ ಸಾಲ ಸಿಗುತ್ತದೆ. ಆದರೆ ಬಡ್ಡಿದರವು ಸರಾಸರಿಯಾಗಿರಬಹುದು. ಸ್ವಲ್ಪ ಹೆಚ್ಚಿರುತ್ತದೆ.

700 ಕ್ಕಿಂತ ಕಡಿಮೆ (ಕಳಪೆ): ಸಿಬಿಲ್ ಸ್ಕೋರ್ 700 ಕ್ಕಿಂತ ಕಡಿಮೆ ಇದ್ದಲ್ಲಿ ಸಾಲ ಸಿಗುವುದು ಕಷ್ಟ. ಸಿಬಿಲ್ ಸ್ಕೋರ್ ಕಡಿಮೆಯಿದ್ದು ಸಾಲ ನೀಡಿದ್ರೂ ಬ್ಯಾಂಕ್ ಸಾಲ ನೀಡಿದರೂ ಬಡ್ಡಿದರವನ್ನು ಹೆಚ್ಚು ವಿಧಿಸುತ್ತದೆ.

ಇದನ್ನೂ ಓದಿ: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್‌ನ್ನು ಕಡ್ಡಾಯಗೊಳಿಸಿದೆ.

ಪ್ರಶ್ನೆ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಉತ್ತರ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.

ಪ್ರಶ್ನೆ: ಸಿಬಿಲ್ ಸ್ಕೋರ್ ಕಡಿಮೆಯಾದರೆ ಏನಾಗುತ್ತದೆ?

ಉತ್ತರ:ಸಿಬಿಲ್ ಸ್ಕೋರ್ ಕಡಿಮೆಯಾದರೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದು ಕಷ್ಟ. ಒಂದು ವೇಳೆ ಸಾಲ ಸಿಕ್ಕರೂ ಬಡ್ಡಿದರ ಹೆಚ್ಚಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಯುಸಿ ಉಪನ್ಯಾಸಕರಿಂದ ಪಾಠ: ಸರ್ಕಾರದ ನಿರ್ಧಾರಕ್ಕೆ ವಿಜಯೇಂದ್ರ ವಿರೋಧ – Kannada News | BY Vijayendra Slams Karnataka Govt’s Decision to Deploy PUC Lecturers for Classes 9 and 10

ಬೆಂಗಳೂರು, ಜುಲೈ 16: ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನಿಯಮಗಳ ಕುರಿತ ಅಧಿಸೂಚನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಯುಸಿ ಉಪನ್ಯಾಸಕರನ್ನು ಪ್ರೌಢಶಾಲೆಯ 9 ಮತ್ತು 10 ನೇ ತರಗತಿಗೆ ಬೋಧನೆಗೆ ನಿಯೋಜಿಸಲು ಅವಕಾಶ ಮಾಡಿಕೊಡುವ ಈ ಅಧಿಸೂಚನೆ ಬಗ್ಗೆ ಕಿಡಿ ಕಾರಿರುವ ಅವರು, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂಬ ನೆಪವೊಡ್ಡಿ ಪಿಯುಸಿ ಉಪನ್ಯಾಸಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಕೂಡಲೇ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ವಿಜಯೇಂದ್ರ ವಿರೋಧ ಯಾಕೆ?

ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ಆದೇಶ ಸಮರ್ಥನಿಯವಲ್ಲ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಹಸ್ರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಸರ್ಕಾರ ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿಗಳು, ಪಾಲಕರೊಂದಿಗೆ ಚರ್ಚಿಸದೇ ಶಿಕ್ಷಣ ತಜ್ಞರು ಹಾಗೂ ಇತರ ಹಿತಾಸಕ್ತ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ, ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯವಾಗಿ ಪ್ರಕಟಿಸಿರುವುದು ಅಸಹನೀಯ ಮತ್ತು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ. ಹೀಗಾಗಿ ಇದನ್ನು ಬಲವಾಗಿ ವಿರೋಧಿಸೋದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ; ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್

ಉಪನ್ಯಾಸಕರ ಗಮನವನ್ನು ಪ್ರೌಢಶಾಲೆಗಳತ್ತ ಹರಿಸಿದರೆ ಇತ್ತ ಪಿಯುಸಿ ವಿದ್ಯಾರ್ಥಿಗಳಿಗೂ ಇಲ್ಲ ಹಾಗೂ ಅತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಇಲ್ಲ ಎಂಬಂತಾಗಿ ಎಲ್ಲರಿಗೂ ಅರೆಬರೆ ಶಿಕ್ಷಣ ನೀಡಿದಂತಾಗುತ್ತದೆ. ಇಂತಹ ಮೂರ್ಖ ಆದೇಶ ಹೊರಡಿಸುವ ಮೂಲಕ ವಿದ್ಯಾರ್ಥಿ ಹಾಗೂ ಉಪನ್ಯಾಸಕ ವಿರೋಧಿಯಾಗಿದೆ. ಶಿಕ್ಷಣ ಸಚಿವರೇ ಇಲ್ಲದ ಸರ್ಕಾರ ಇನ್ನೂ ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಜೂನ್ ತಿಂಗಳಲ್ಲೇ ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿದ್ದ ರಾಜ್ಯ ಸರ್ಕಾರ, ಇದೀಗ ನಿಯಮಗಳಿಗೆ ತಿದ್ದುಪಡಿ ತಂದಿದೆ. ನೇರ ನೇಮಕಾತಿ ಮತ್ತು ಬಡ್ತಿಯ ಮೂಲಕ ಇನ್ನು ಮುಂದೆ ನೇಮಕಗೊಳ್ಳುವ ಉಪನ್ಯಾಸಕರು ಸರ್ಕಾರ ನಿರ್ದಿಷ್ಟಪಡಿಸಿದ ಶಿಕ್ಷಣ ಸಂಸ್ಥೆಗಳಲ್ಲಿ 9 ಮತ್ತು 10ನೇ ತರಗಳನ್ನು ಬೋಧಿಸಬೇಕು ಎಂಬ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆಯೀಗ ಆಕ್ಷೇಪಗಳು ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ, ತಕ್ಷಣ ನೆರವಿಗೆ ಮನವಿ – Kannada News | Karnatakas DyCM Minister G. Parmeshwar Urges PM Modi for Drought Relief Aid

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿನ ಭೀಕರ ಬರಗಾಲದ ಪರಿಸ್ಥಿತಿ ಕುರಿತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ತಕ್ಷಣದ ಪರಿಹಾರ ಮತ್ತು ಆರ್ಥಿಕ ನೆರವಿಗೆ ಮನವಿ ಮಾಡಿದ್ದಾರೆ. ಮೋದಿಗೆ ಮುಖ್ಯಮಂತ್ರಿಗಳ ಮನವಿಯ ಬೆನ್ನಲ್ಲೇ, ಡಿಸಿಎಂ ಪರಮೇಶ್ವರ್ ಅವರು ರಾಜ್ಯಕ್ಕೆ ವಿಶೇಷ ಅನುದಾನ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ಮುಂಗಡ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವರು ಮತ್ತು ಕೃಷಿ ಸಚಿವರಿಗೂ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs ENG: 2ನೇ ಏಕದಿನದಲ್ಲಿ ಕಣಕ್ಕಿಳಿದ ಕೂಡಲೇ ವಿಶೇಷ ಶತಕ ಪೂರೈಸಿದ ಕೊಹ್ಲಿ – Kannada News | Virat Kohli’s Historic 100th ODI in SENA Countries: Records and India vs England Series

ಕಾರ್ಡಿಫ್ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದ ತಕ್ಷಣ ವಿರಾಟ್ ಕೊಹ್ಲಿ SENA ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 100 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು(PC-PTI).

Source link

Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ – Kannada News | Weather Update: Bengaluru Witnesses Widespread Rainfall; More Rain Likely Across Karnataka

ಬೆಂಗಳೂರಲ್ಲಿ ಮಳೆImage Credit source: Farman Ali khan X Account

ಬೆಂಗಳೂರು, ಜುಲೈ 16: ಜುಲೈ ತಿಂಗಳಿನಲ್ಲಿ ಶತಮಾನದ ಬಳಿಕ ದಾಖಲೆಯ ತಾಪಮಾನ ಕಂಡಿದ್ದ ಬೆಂಗಳೂರಿಗರ (Bengaluru) ಮೇಲೆ ಕೊನೆಗೂ ವರುಣ (Rain) ಕೊಂಚ ಕೃಪೆ ತೋರಿದ್ದಾನೆ. ಮಹಾನಗರದ ಹಲವೆಡೆ ಮಳೆಯಾಗಿದ್ದು, ಏಕಾಏಕಿ ವರ್ಷದಾರೆಯ ಪರಿಣಾಮ, ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ರಾಜಾಜಿನಗರ, ಮಲ್ಲೇಶ್ವರಂ, ಕುರುಬರಹಳ್ಳಿ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ  ಜನರು ಬಸ್ ನಿಲ್ದಾಣ, ಅಂಡರ್​ಪಾಸ್​ಗಳಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದಿವೆ.

ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ನೈಋತ್ಯ ಮುಂಗಾರಿನ ಅಭಾವದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳ ತಾಪಮಾನದಲ್ಲಿ ಹೆಚ್ಚಳದ ನಡುವೆಯೂ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದ ಗಾಳಿಯ ಜೊತೆಗೆ ಸಾಧಾರಣ ಮಳೆಯಾಗಲಿದೆ. ಹಾಗೆಯೇ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ

ಹೇಗಿರಲಿದೆ ಮುಂದಿನ 7 ದಿನಗಳ ವಾತಾವರಣ?

ಮುಂದಿನ 7 ದಿನಗಳ ಕಾಲ ಕರ್ನಾಟಕದಾದ್ಯಂತ ದುರ್ಬಲ ಮುಂಗಾರು ಮುಂದುವರಿಯಲಿದ್ದು, ಗರಿಷ್ಠ ಉಷ್ಣಾಂಶ ಏರಿಕೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರಾದ ಗಾಳಿಯೊಂದಿಗೆ ಹಗುರ ಮಳೆ ಮತ್ತು ಒಳನಾಡು ಜಿಲ್ಲೆಗಳಲ್ಲಿ ಬಿಸಿಲು, ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:11 pm, Thu, 16 July 26

Source link

ಇಪಿಎಫ್​ಒ ಅಪ್​​ಡೇಟ್; ಪಿಎಫ್ ಖಾತೆಗೆ ಬರುತ್ತಿದೆ ಬಡ್ಡಿ ಹಣ; ನಿಮಗೆ ಬಂದಿದೆಯಾ, ಪರಿಶೀಲಿಸುವುದು ಹೇಗೆ? – Kannada News | EPFO update, interest credit starts, various ways to know PF account Balance

ನವದೆಹಲಿ, ಜುಲೈ 16: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಕೋಟ್ಯಂತರ ಪಿಎಫ್ ಚಂದಾದಾರರ ಖಾತೆಗಳಿಗೆ 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿಯನ್ನು ಜಮೆ ಮಾಡಲು ನಿನ್ನೆಯೇ (ಜುಲೈ 15) ಅಧಿಕೃತವಾಗಿ ಚಾಲನೆ ನೀಡಿದೆ. ಈ ಬಾರಿ ಇಪಿಎಫ್‌ಒ ಕೇಂದ್ರಿಕೃತ ಐಟಿ ವ್ಯವಸ್ಥೆಯ (CITES) ಅಡಿಯಲ್ಲಿ ಸ್ವಯಂಚಾಲಿತವಾಗಿ ಒಂದೇ ಬ್ಯಾಚ್‌ನಲ್ಲಿ ಸುಮಾರು 34 ಕೋಟಿ ಖಾತೆಗಳಿಗೆ ಶೇ. 8.25 ರಷ್ಟು ಬಡ್ಡಿದರದ ಹಣವನ್ನು ಜಮೆ ಮಾಡುತ್ತಿದೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ಪ್ರಕಾರ, ಒಟ್ಟು 1.44 ಲಕ್ಷ ಕೋಟಿ ರೂಪಾಯಿಗೂ ಅಧಿಕ ಬಡ್ಡಿ ಹಣವನ್ನು ಅರ್ಹ ಚಂದಾದಾರರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ನಿಮ್ಮ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ ಇಲ್ಲವೇ ಎಂಬುದನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಪರಿಶೀಲಿಸಲು 4 ಸರಳ ಮಾರ್ಗಗಳು ಇಲ್ಲಿವೆ:

ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ 4 ಸುಲಭ ವಿಧಾನಗಳು

1. ಇಪಿಎಫ್‌ಒ ಪೋರ್ಟಲ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:

  • ಮೊದಲಿಗೆ ಇಪಿಎಫ್‌ಒ ಅಧಿಕೃತ ಪಾಸ್‌ಬುಕ್ ಪೋರ್ಟಲ್‌ಗೆ (EPFO Member Passbook) ಭೇಟಿ ನೀಡಿ: unifiedportal-mem.epfindia.gov.in
  • ನಿಮ್ಮ 12 ಅಂಕಿಯ ಯುಎಎನ್ (UAN) ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಲಾಗಿನ್ ಆಗಿ.
  • ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ ಒಟಿಪಿ (OTP) ನಮೂದಿಸಿ ವೆರಿಫೈ ಮಾಡಿ.
  • ಲಾಗಿನ್ ಆದ ನಂತರ ‘View’ ವಿಭಾಗಕ್ಕೆ ಹೋಗಿ ‘Passbook Lite’ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಇತ್ತೀಚಿನ ಪಿಎಫ್ ಕೊಡುಗೆಗಳು ಮತ್ತು ಜಮೆಯಾಗಿರುವ ಬಡ್ಡಿಯ ವಿವರಗಳನ್ನು ಕಾಣಬಹುದು.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?

2. ಉಮಾಂಗ್ ಆಪ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:

  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸರ್ಕಾರದ ಅಧಿಕೃತ ‘UMANG’ ಆಪ್ ಅನ್ನು ಡೌನ್‌ಲೋಡ್ ಮಾಡಿ ಓಪನ್ ಮಾಡಿ.
  • ಆಪ್‌ನಲ್ಲಿ ಲಭ್ಯವಿರುವ ಸೇವೆಗಳಲ್ಲಿ ‘EPFO’ ಆಯ್ಕೆ ಮಾಡಿ.
  • ಮುಂದೆ ‘Employee Centric Services’ ಅಡಿಯಲ್ಲಿ ‘View Passbook’ ಕ್ಲಿಕ್ ಮಾಡಿ.
  • ನಿಮ್ಮ UAN ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ OTP ದಾಖಲಿಸಿದರೆ ನಿಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್ ಪರದೆಯ ಮೇಲೆ ಮೂಡುತ್ತದೆ. ಇಲ್ಲಿಂದ ನೀವು ಪಾಸ್‌ಬುಕ್ ಅನ್ನು PDF ರೂಪದಲ್ಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

3. ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:

ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಕೇವಲ ಒಂದು ಮಿಸ್ಡ್ ಕಾಲ್ (Missed Call) ನೀಡಿ ಬ್ಯಾಲೆನ್ಸ್ ತಿಳಿಯಬಹುದು.

  • ನಿಮ್ಮ UAN ಸಂಖ್ಯೆಗೆ ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ಕೊಡಿ.
  • ಎರಡು ರಿಂಗ್ ಆದ ನಂತರ ಕರೆ ಸ್ವಯಂಚಾಲಿತವಾಗಿ ಕಟ್ ಆಗುತ್ತದೆ.

ಕೆಲವೇ ಸೆಕೆಂಡುಗಳಲ್ಲಿ ಇಪಿಎಫ್‌ಒನಿಂದ ನಿಮ್ಮ ಫೋನ್‌ಗೆ ಎಸ್‌ಎಂಎಸ್ ಬರಲಿದ್ದು, ಅದರಲ್ಲಿ ನಿಮ್ಮ ಕೊನೆಯ ಕೊಡುಗೆ ಮತ್ತು ಒಟ್ಟು ಬ್ಯಾಲೆನ್ಸ್ ವಿವರ ಇರುತ್ತದೆ. ಈ ಸೇವೆ ಸಿಗಬೇಕೆಂದರೆ ನಿಮ್ಮ UAN ನೊಂದಿಗೆ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.

ಇದನ್ನೂ ಓದಿ: ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

4. ಕೇವಲ ಒಂದು ಎಸ್‌ಎಂಎಸ್ (SMS) ಕಳುಹಿಸುವ ಮೂಲಕ:

ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್‌ನಿಂದ ಮೆಸೇಜ್ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.

ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್‌ನಲ್ಲಿ EPFOHO UAN KAN ಎಂದು ಟೈಪ್ ಮಾಡಿ (ಇಲ್ಲಿ UAN ಜಾಗದಲ್ಲಿ ನಿಮ್ಮ 12 ಅಂಕಿಯ ನೈಜ ಯುಎಎನ್ ಸಂಖ್ಯೆ ಬರೆಯಿರಿ. ಕೊನೆಯಲ್ಲಿ ‘KAN’ ಎಂದು ಬರೆದರೆ ನಿಮಗೆ ಕನ್ನಡದಲ್ಲೇ ಮಾಹಿತಿ ಸಿಗುತ್ತದೆ).

ಈ ಸಂದೇಶವನ್ನು 7738299899 ಸಂಖ್ಯೆಗೆ ಕಳುಹಿಸಿ. ತಕ್ಷಣವೇ ನಿಮ್ಮ ಖಾತೆಯ ವಿವರಗಳು ಎಸ್‌ಎಂಎಸ್ ಮೂಲಕ ಲಭ್ಯವಾಗುತ್ತವೆ.

ಬಡ್ಡಿ ಜಮೆ ವಿಳಂಬವಾದರೆ ನಷ್ಟವಿಲ್ಲ

ಒಂದು ವೇಳೆ ನಿಮ್ಮ ಖಾತೆಗೆ ತಾಂತ್ರಿಕ ಕಾರಣಗಳಿಂದ ಬಡ್ಡಿ ಹಣ ತಡವಾಗಿ ಕ್ರೆಡಿಟ್ ಆದರೂ ಚಂದಾದಾರರಿಗೆ ಯಾವುದೇ ನಷ್ಟವಾಗುವುದಿಲ್ಲ. ಇಪಿಎಫ್ ನಿಯಮಾವಳಿಗಳ ಪ್ರಕಾರ, ಬಡ್ತಿಯನ್ನು ನಿಮ್ಮ ಮಾಸಿಕ ಚಾಲ್ತಿ ಬ್ಯಾಲೆನ್ಸ್ ಮೇಲೆಯೇ ಲೆಕ್ಕ ಹಾಕಲಾಗುವುದರಿಂದ, ಹಣ ತಡವಾಗಿ ಕಾಣಿಸಿಕೊಂಡರೂ ಪೂರ್ಣ ಬಡ್ಡಿ ಮೊತ್ತ ಸುರಕ್ಷಿತವಾಗಿ ಖಾತೆ ಸೇರಲಿದೆ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version