ಮಹಿಳೆಯರೇ… ಗಾಜಿನ ಧರಿಸೋದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಹೆಂಗಳೆಯರಿಗೆ ಬಳೆಗಳೇ (bangles) ಭೂಷಣ. ಅದರಲ್ಲೂ ನಮ್ಮ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಬಳೆಗಳನ್ನು ಧರಿಸಲೇಬೇಕು ಎನ್ನಲಾಗುತ್ತದೆ. ವಿವಾಹಿತ ಮಹಿಳೆಯರು ಕೈಗಳಿಗೆ ಬಳೆಹಳನ್ನು ಧರಿಸುವುದು ಅವರ ವೈವಾಹಿಕತೆಯ ಸಂಕೇತವಾಗಿದೆ ಹೌದು ಸಿಂಧೂರ ಮತ್ತು ಮಂಗಳಸೂತ್ರದಂತೆಯೇ ವಿವಾಹಿತ ಮಹಿಳೆಯರಿಗೆ ಗಾಜಿನ ಬಳೆಗಳು ವೈವಾಹಿಕ ಆನಂದದ ಸಂಕೇತವಾಗುದೆ.   ಮತ್ತು ಇದು ಸೌಭಾಗ್ಯದ ಸಂಕೇತ. ಬಳೆಗಳನ್ನು ಧರಿಸುವುದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ,  ಬಳೆಗಳ ಶಬ್ದವು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ. ಇದು ಮಾತ್ರವಲ್ಲದೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಮಹಿಳೆಯ ಆರೋಗ್ಯವೂ ವೃದ್ಧಿಸುತ್ತದಂತೆ. ಹಾಗಿದ್ದರೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಏನೆಲ್ಲಾ ಆರೋಗ್ಯ  ಪ್ರಯೋಜನಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.

ಮಹಿಳೆಯರೇಕೆ ಗಾಜಿನ ಬಳೆಗಳನ್ನು ಧರಿಸಬೇಕು?

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ಬಳೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೌದು ಬಳೆಗಳು ಮಣಿಕಟ್ಟಿನ ಚರ್ಮಕ್ಕೆ ಉಜ್ಜುವ ಮೂಲಕ ಕೈಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.

ಶಕ್ತಿಯನ್ನು ಹೆಚ್ಚಿಸುತ್ತದೆ: ಚಿನ್ನ, ಬೆಳ್ಳಿ ಮತ್ತು ಗಾಜಿನಂತಹ ಲೋಹಗಳಿಂದ ಮಾಡಿದ ಬಳೆಗಳನ್ನು ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಗಾಜಿನ ಬಳೆಗಳ ಶಬ್ದವು ಮನೆ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಬಳೆಗಳು ಮನಸ್ಸು ಮತ್ತು ಮೆದುಳಿಗೆ ಸಕಾರಾತ್ಮಕ ಕಂಪನಗಳನ್ನು ಒದಗಿಸುತ್ತವೆ.

ಮಾನಸಿಕ ಸಮತೋಲನ: ವೈಜ್ಞಾನಿಕ ಪುರಾವೆಗಳ ಪ್ರಕಾರ, ಬಳೆಗಳನ್ನು ಧರಿಸುವುದರಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುಲು ಸಹಾಯ ಮಾಡುತ್ತದೆ. ಇದಲ್ಲದೆ, ಬಳೆಗಳು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.

ಹಾರ್ಮೋನು ಸಮತೋಲನ: ಮಹಿಳೆಯರ ದೇಹವು ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಅವರ ಹಾರ್ಮೋನುಗಳ ಮಟ್ಟವು ಹೆಚ್ಚು ವೇಗವಾಗಿ ಏರಿಳಿತಗೊಳ್ಳುತ್ತದೆ. ಬಳೆಗಳನ್ನು ಧರಿಸುವುದರಿಂದ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ

ಭಾವನಾತ್ಮಕ ಸಮತೋಲನ:ಬಳೆಗಳ ಝಣಝಣ ಶಬ್ದವು ಮಹಿಳೆಯರಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಳೆಗಳನ್ನು ಧರಿಸುವುದರಿಂದ ಮಹಿಳೆಯರು ಭಾವನಾತ್ಮಕವಾಗಿ ಸಮತೋಲನದಲ್ಲಿರುತ್ತಾರೆ.  ಬಳೆಗಳನ್ನು ಧರಿಸುವ ಮಹಿಳೆಯರು ಇತರ ಮಹಿಳೆಯರಿಗಿಂತ ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಉತ್ತಮರು ಎಂದು ಸಂಶೋಧನೆ ತೋರಿಸಿದೆ.

ಆಯಾಸವನ್ನು ನಿವಾರಿಸುತ್ತದೆ:  ಬಳೆಗಳಿಂದ ಉಂಟಾಗುವ ಘರ್ಷಣೆಯು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ, ಇದು ಮಹಿಳೆಯರಿಗೆ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಾನಸಿಕ ಸಮತೋಲನ: ಬಳೆಗಳನ್ನು ಧರಿಸುವುದರಿಂದ ಮಹಿಳೆಯರಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ, ಗಾಜಿನ ಬಳೆಗಳ ಶಬ್ದವು ಪರಿಸರದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಅದರ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!: ಎಲ್ಲಿ ನೋಡಿದ್ರೂ ನಮ್ಮದೇ ಜರ್ಸಿ

ಅಹಮದಾಬಾದ್, ಮೇ,31: ಐಪಿಎಲ್ 2026 ರ ಮಹಾ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿದ್ದು, ಇಡೀ ಅಹಮದಾಬಾದ್ ನಗರವೀಗ ಕೆಂಪು ಮಯವಾಗಿದೆ. ಗುಜರಾತ್‌ನ ತವರಿನಲ್ಲೇ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಭರ್ಜರಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಕ್ರೀಡಾಂಗಣದ ಹೊರಗಿನ ಜೋಶ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂದ್ಯದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌ಸಿಬಿ ಕಟ್ಟಾ ಅಭಿಮಾನಿಯೊಬ್ಬರು, “ಅಹಮದಾಬಾದ್‌ನಲ್ಲಿ ಇವತ್ತು ಎಲ್ಲಿ ಕಣ್ಣು ಹಾಯಿಸಿದರೂ ಆರ್‌ಸಿಬಿ ಜರ್ಸಿಗಳೇ ಕಾಣಿಸುತ್ತಿವೆ. ಗುಜರಾತ್‌ನಲ್ಲೇ ನಮ್ಮ ಆರ್ಮಿ ಧೂಳೆಬ್ಬಿಸುತ್ತಿದೆ. ಕಳೆದ ಬಾರಿಯಂತೆ ಈ ವರ್ಷವೂ ನಾವು ಕಪ್ ಅನ್ನು ನಮ್ಮ ಮನೆಗೆ (ಬೆಂಗಳೂರಿಗೆ) ಕೊಂಡೊಯ್ಯಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ. ಇದೇ ವೇಳೆ ಗುಜರಾತ್ ತಂಡದ ವಿರುದ್ಧ ಆರ್‌ಸಿಬಿ ಗೆಲುವಿನ ತಂತ್ರದ ಬಗ್ಗೆ ಮಾತನಾಡಿದ ಅಭಿಮಾನಿಗಳು, “ಗುಜರಾತ್ ಟೈಟನ್ಸ್ ತಂಡಕ್ಕೆ ಹೋಲಿಸಿದರೆ ನಮ್ಮ ಆರ್‌ಸಿಬಿಯ ಬ್ಯಾಟಿಂಗ್ ಲೈನ್ ಅತ್ಯಂತ ಬಲಿಷ್ಠವಾಗಿದೆ ಮತ್ತು ಅದ್ಭುತ ಫಾರ್ಮ್‌ನಲ್ಲಿದೆ. ಈ ಬಾರಿ ನಮ್ಮ ತಂಡದ ಬ್ಯಾಟರ್‌ಗಳು ಗುಜರಾತ್ ಬೌಲರ್‌ಗಳನ್ನು ಧೂಳೀಪಟ ಮಾಡಲಿದ್ದಾರೆ. ಈ ವರ್ಷವೂ ಟ್ರೋಫಿ ನಮ್ಮ ಮುಡಿಗೇರಲಿದ್ದು, ನಮ್ಮ ತಂಡದ ಮೇಲೆ ನಮಗೆ ನೂರಕ್ಕೆ ನೂರು ನಂಬಿಕೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಟಾಸ್ ಗೆದ್ದ ಆರ್​ಸಿಬಿ, ಫೈನಲ್ ಪಂದ್ಯ ಆಡದ ಸಾಲ್ಟ್; ಗುಜರಾತ್ ತಂಡದಲ್ಲೂ ಬದಲಾವಣೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯ ನಡೆಯುತ್ತಿದೆ. ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಬೆಂಗಳೂರು ಇತಿಹಾಸ ನಿರ್ಮಿಸುವ ಅವಕಾಶವನ್ನು ಹೊಂದಿದೆ. ಆರ್​ಸಿಬಿ ಈ ಸಾಧನೆ ಮಾಡಿದರೆ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಮೂರನೇ ತಂಡ ಎನಿಸಿಕೊಳ್ಳಲಿದೆ. ಇತ್ತ ಗುಜರಾತ್ ಕೂಡ 2022 ರ ನಂತರ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಲು ನೋಡುತ್ತಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಟಾಸ್ ಗೆದ್ದ ಆರ್​ಸಿಬಿ

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆ ಬಳಿಕ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ನೀಡಿದ ರಜತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದರು. ಅಂದರೆ ಈ ನಿರ್ಣಾಯಕ ಪಂದ್ಯದಲ್ಲೂ ಫಿಲ್ ಸಾಲ್ಟ್ ಇಲ್ಲದೆ ಆರ್​ಸಿಬಿ ಕಣಕ್ಕಿಳಿಯುತ್ತಿದೆ. ಇತ್ತ ಟಾಸ್ ಸೋತ ಗುಜರಾತ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸಾಯಿ ಕಿಶೋರ್ ಬದಲಿಗೆ ಅರ್ಷದ್ ಖಾನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

RCB vs GT, IPL 2026 Final Live Score: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಡಫ್ಫಿ ಮತ್ತು ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್ಸ್​: ವೆಂಕಟೇಶ್ ಅಯ್ಯರ್, ಕನಿಷ್ಕ್ ಚೌಹಾನ್, ಸ್ವಪ್ನಿಲ್ ಸಿಂಗ್, ಅಭಿನಂದನ್ ಸಿಂಗ್ ಮತ್ತು ಜೋರ್ಡಾನ್ ಕಾಕ್ಸ್.

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನಿಶಾಂತ್ ಸಿಂಧು, ಕಗಿಸೋ ರಬಾಡ, ಅರ್ಷದ್ ಖಾನ್ (ಸಾಯಿ ಕಿಶೋರ್ ಬದಲಿಗೆ) ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಪ್ರಸಿದ್ಧ್ ಕೃಷ್ಣ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:17 pm, Sun, 31 May 26

Source link

ಹಿಮಾಚಲ ಸ್ಥಳೀಯ ಸಂಸ್ಥೆ ಚುನಾವಣೆ; ಆಡಳಿತಾರೂಢ ಕಾಂಗ್ರೆಸ್​ಗೆ ಆಘಾತ; ಬಿಜೆಪಿ ಗೆಲುವಿನ ಕೇಕೆ

ಹಿಮಾಚಲ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿರುವ ಪಕ್ಷದ ನಾಯಕರು, ಕಾರ್ಯಕರ್ತರುImage Credit source: PTI

ಶಿಮ್ಲಾ, ಮೇ 31: ಹಿಮಾಚಲ ಪ್ರದೇಶದಲ್ಲಿ ಮೇ 17ರಂದು ನಡೆದಿದ್ದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳ (Himachal Pradesh Local Bodies elections) ಫಲಿತಾಂಶ ಇವತ್ತು ಭಾನುವಾರ (ಮೇ 31) ಪ್ರಕಟವಾಗಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಜೈ ಎಂದಿದ್ದಾರೆ. ಪ್ರಮುಖ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ವಿಜಯಪತಾಕೆ ಹಾರಿಸಿದೆ.

ಮೂರು ಪಾಲಿಕೆಗಳು ಬಿಜೆಪಿ ವಶ

ರಾಜ್ಯದ ಅತ್ಯಂತ ಪ್ರಮುಖ ಮುನ್ಸಿಪಲ್ ಕಾರ್ಪೊರೇಷನ್‌ಗಳಾದ ಧರ್ಮಶಾಲಾ, ಸೋಲನ್ ಮತ್ತು ಮಂಡಿ ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಪಲಂಪುರ್ ಪಾಲಿಕೆಯನ್ನು ಮಾತ್ರ ಕಾಂಗ್ರೆಸ್ ಉಳಿಸಿಕೊಂಡಿದೆ. ಮಂಡಿ ಪಾಲಿಕೆಯ 15 ವಾರ್ಡ್​ಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದರೆ, ಕಾಂಗ್ರೆಸ್​ಗೆ ದಕ್ಕಿದ್ದು ಒಂದು ಮಾತ್ರ. ಸೋಲನ್​ನಲ್ಲಿ 17 ವಾರ್ಡ್​ಗಳ ಪೈಕಿ ಬಿಜೆಪಿಗೆ 10, ಕಾಂಗ್ರೆಸ್​ಗೆ 6 ಸಿಕ್ಕಿವೆ. ಧರ್ಮಶಾಲಾದ 17 ವಾರ್ಡ್​ಗಳಲ್ಲಿ ಬಿಜೆಪಿಗೆ 11, ಕಾಂಗ್ರೆಸ್​ಗೆ 5 ಸ್ಥಾನ ಸಿಕ್ಕಿದೆ. ಆದರೆ, ಪಲಂಪುರ್​ನಲ್ಲಿ ಕಾಂಗ್ರೆಸ್​ಗೆ 11, ಬಿಜೆಪಿಗೆ 4 ಸ್ಥಾನ ಸಿಕ್ಕಿವೆ.

ಇತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. 25 ನಗರಸಭೆ ಪೈಕಿ 18ರಲ್ಲಿ ಗದ್ದುಗೆ ಹಿಡಿದಿದೆ. 22 ನಗರ ಪಂಚಾಯಿತಿಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದಿದೆ. ಕಾಂಗ್ರೆಸ್ ಆಡಳಿತ ಇರುವ ಹಿಮಾಚಲಪ್ರದೇಶ ಮುಂದಿನ ವರ್ಷ (2027) ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ. ಅದಕ್ಕೆ ಮುನ್ನ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಧಾನಸಭಾ ಚುನಾವಣೆಯ ಮತದಾರನ ತೀರ್ಪಿಗೆ ದಿಕ್ಸೂಚಿಯಾಗಿರಬಹುದಾ?

ಇದನ್ನೂ ಓದಿ: ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ

ಕಾಂಗ್ರೆಸ್ಸನ್ನು ತಿರಸ್ಕರಿಸಿದ ಜನರು: ಜೈರಾಮ್ ಠಾಕೂರ್

ಈ ಅದ್ಭುತ ಗೆಲುವಿನ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. “ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಆಡಳಿತ ವೈಫಲ್ಯಕ್ಕೆ ಈ ಫಲಿತಾಂಶವೇ ಕನ್ನಡಿಯಾಗಿದೆ. ಮತದಾರರು ಮುಖ್ಯಮಂತ್ರಿ ಸುಖು ಅವರ ನಾಯಕತ್ವವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಆಂತರಿಕ ಪೆಟ್ಟು: ವಿಧಾನಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್‌ಗೆ ಈ ನಗರ ಪ್ರದೇಶಗಳ ಫಲಿತಾಂಶ ಭಾರಿ ಆಘಾತ ನೀಡಿದೆ. ಮುಂಬರುವ ದಿನಗಳಲ್ಲಿ ಇದು ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ

ಬಿಜೆಪಿ ಗೆಲುವಿಗೆ ಕಾರಣಗಳೇನು?

ಸ್ಥಳೀಯ ಮೂಲಸೌಕರ್ಯಗಳ ಅಭಿವೃದ್ಧಿ, ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗಿದೆ. ಬಿಜೆಪಿಯ ಬಲಿಷ್ಠ ತಳಮಟ್ಟದ ಪ್ರಚಾರ ಮತ್ತು ಒಗ್ಗಟ್ಟಿನ ಹೋರಾಟವು ಪಕ್ಷಕ್ಕೆ ಈ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.

ಈ ಜಯವು ಹಿಮಾಚಲ ಪ್ರದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಆಡಳಿತ ವೈಖರಿಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಂಪುಟ ಸೇರಲು ಕಸರತ್ತು: ಡಿಕೆ ಶಿವಕುಮಾರ್​ ನಿವಾಸಕ್ಕೆ ಮಾಜಿ ಸಚಿವರು, ಶಾಸಕರ ಪರೇಡ್‌!

ಬೆಂಗಳೂರು, ಮೇ 31: ಸರ್ಕಾರ ರಚಿಸಲು ಡಿಕೆ ಶಿವಕುಮಾರ್​​ಗೆ ರಾಜ್ಯಪಾಲರು ಆಹ್ವಾನ ನೀಡ್ತಿದ್ದಂತೆ, ಭದ್ರತೆ ಹೆಚ್ಚಾಗಿದೆ. ನಿಯೋಜಿತ ಸಿಎಂ ಆಗಿರುವ ಡಿಕೆ ಶಿವಕುಮಾರ್​​ (DK Shivakumar) ಇದೀಗ ಸಂಪುಟ ರಚನೆಯ ಕಸರತ್ತು ಆರಂಭಿಸಿದ್ದು, ಅವರ ನಿವಾಸಕ್ಕೆ ಮಾಜಿ ಸಚಿವರು ಮತ್ತು ಶಾಸಕರ ದಂಡೇ ಹರಿದು ಬರುತ್ತಿದೆ. ಡಿಕೆ ಶಿವಕುಮಾರ್​ನ್ನು ಭೇಟಿ ಮಾಡಿ ವಿಶ್‌ ಮಾಡಿದ್ದು, ಜೊತೆಗೆ ಸಚಿವ ಸ್ಥಾನಕ್ಕೂ ಡಿಮ್ಯಾಂಡ್​ ಕೂಡ ಮಾಡಿದ್ದಾರೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್​​ ನಿವಾಸಕ್ಕೆ ಪೊಲೀಸ್‌ ಭದ್ರತೆ, ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು
  • ಹರಿದು ಬರುತ್ತಿದೆ ಮಾಜಿ ಸಚಿವರು ಮತ್ತು ಶಾಸಕರ ದಂಡು
  • ಡಿಸಿಎಂ ಸ್ಥಾನಕ್ಕೆ ಇನ್ನೂ ಪ್ರಪೋಸಲ್ ಬಂದಿಲ್ಲ ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ

ಯಾರೆಲ್ಲಾ ಡಿಕೆ ಶಿವಕುಮಾರ್​ ನಿವಾಸಕ್ಕೆ ಭೇಟಿ

ನಿನ್ನೆಯಷ್ಟೇ ಸಿಎಲ್‌ಪಿ ನಾಯಕನಾಗಿ ಆಯ್ಕೆ ಆಗಿರಿವ ಡಿ.ಕೆ ಶಿವಕುಮಾರ್‌, ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಡಿಕೆ ಶಿವಕುಮಾರ್​ ನಿಯೋಜಿತ ಸಿಎಂ ಆಗ್ತಿದ್ದಂತೆ ಪ್ರೋಟೋಕಾಲ್ ಪ್ರಕಾರ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಕಾರ್ಯಕರ್ತರು, ಸಾರ್ವಜನಿಕರ ಭೇಟಿಗೆ ನಿರ್ಬಂಧ ಹಾಕಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿನ ಅವರ ನಿವಾಸ ಪವರ್ ಸೆಂಟರ್ ಆಗಿ ಬದಲಾಗಿದ್ದು, ಮಾಜಿ ಸಚಿವರಾದ ಎಂಬಿ ಪಾಟೀಲ್‌, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಕೆ.ಹೆಚ್‌. ಮುನಿಯಪ್ಪ, ಟಿಬಿ ಜಯಚಂದ್ರ ಮತ್ತು ಶಾಸಕರಾದ ಪುಟ್ಟರಂಗಶೆಟ್ಟಿ, ಅಶೋಕ್ ಪಟ್ಟಣ್, ಕೆ.ವೈ.ನಂಜೇಗೌಡ, ಗಣೇಶ್ ಹುಕ್ಕೇರಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.

ಸಂಪುಟ ರಚನೆ ಕಸರತ್ತು: ನಾಳೆ ದೆಹಲಿಗೆ ಡಿಕೆ ಶಿವಕುಮಾರ್​ ಪಯಣ

ಸಾಲು ಸಾಲು ನಾಯಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಂತೆ, ಡಿಕೆ ಶಿವಕುಮಾರ್​​ ನಾಳೆಯೇ ದೆಹಲಿಗೆ ಹಾರಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಸಚಿವರ ಹೆಸರು ಫೈನಲ್ ಮಾಡಲು ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಸಚಿವ ಸಂಪುಟ ಕುರಿತು ಚರ್ಚಿಸಲಿರುವ ಡಿಕೆ ಶಿವಕುಮಾರ್​ ತಮ್ಮ ಜೊತೆ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು. ಮುಂದಿನ ಪ್ರಕ್ರಿಯೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಂಪುಟದಲ್ಲಿ ಯಾರ್ಯಾರು ಸಚಿವರಾಗುತ್ತಾರೆ?: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ನಿಯೋಜಿತ ಸಿಎಂ

ಸಿದ್ದರಾಮಯ್ಯ ಕೂಡ ಮತ್ತೆ ನಾಳೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಬೆಳಗ್ಗೆ 9.30ಕ್ಕೆ ದೆಹಲಿಗೆ ತೆರಳಲಿದ್ದಾರೆ. ತಮ್ಮ ಆಪ್ತರಿಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಯೋಜಿತ ಸಿಎಂ ಡಿಕೆ ಶಿವಕುಮಾರ್​​, ಯಾರು ಯಾರು  ಸಚಿವರಾಗುತ್ತಾರೆ ಹೈಕಮಾಂಡ್ ನಿರ್ಧರಿಸುತ್ತೆ, ಈ ಬಗ್ಗೆ ನನಗೆ ಇನ್ನೂ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಡಿಸಿಎಂ ಹುದ್ದೆಗಳು ಸೃಷ್ಟಿಯಾಗುತ್ತೋ? ಇಲ್ಲವೋ? ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ

ಇನ್ನು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರಿಗೆ ಹೈಕಮಾಂಡ್ ಶಾಕ್​ ನೀಡಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಪ್ರಪೋಸಲ್ ಬಂದಿಲ್ಲ. ಜೂನ್ 3ರ ನಂತರ ನಿರ್ಧಾರ ಮಾಡುತ್ತೇವೆ. ಸಿಎಂ ಜೊತೆ ಎಷ್ಟು ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಗೊತ್ತಿಲ್ಲ. 15 ದಿನದ ಬಳಿಕ ಮತ್ತೊಮ್ಮೆ ಸಂಪುಟ ವಿಸ್ತರಣೆಯಾಗಲಿದೆ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಹೊಂದಾಣಿಕೆ ಇರಬೇಕು, ಅಂತಹ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತೆ ಎಂದಿದ್ದಾರೆ.

ವರದಿ: ಬ್ಯೂರೋ ರಿಪೋರ್ಟ್‌ ಟಿವಿ9.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಕಾಲಾ ಹಿರನ್’: ಸಲ್ಮಾನ್ ಖಾನ್ ಕೃಷ್ಣಮೃಗ ಭೇಟೆ ಕೇಸು ಕುರಿತು ಸಿನಿಮಾ

ಸಲ್ಮಾನ್ ಖಾನ್ (Salman Khan) ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಅದ್ಭುತವಾದ ವೃತ್ತಿ ಜೀವನ ನೋಡಿರುವ, ನೋಡುತ್ತಿರುವ ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ಏರು-ಪೇರುಗಳಿಂದ ಕೂಡಿತ್ತು. ಅಪಘಾತ ಪ್ರಕರಣ, ಸಹ ನಟನಿಗೆ ಬೆದರಿಕೆ, ಹಲ್ಲೆ ಪ್ರಕರಣ, ಕೃಷ್ಣಮೃಗ ಭೇಟೆ ಪ್ರಕರಣ, ಇನ್ನೂ ಹಲವಾರು ವಿವಾದಗಳಿಗೆ ಸಲ್ಮಾನ್ ಖಾನ್ ಸಿಲುಕಿಕೊಂಡಿದ್ದರು. ಅವುಗಳಲ್ಲಿ ಹೆಚ್ಚು ಸಾರ್ವಜನಿಕರ ಗಮನ ಸೆಳೆದಿದ್ದೆಂದರೆ ಕಾರು ಅಪಘಾತ ಪ್ರಕರಣ ಮತ್ತು ಕೃಷ್ಣಮೃಗ ಭೇಟೆ ಪ್ರಕರಣ. ಇದೀಗ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣದ ಬಗ್ಗೆ ಸಿನಿಮಾ ಒಂದು ಬಾಲಿವುಡ್​​ನಲ್ಲಿ ನಿರ್ಮಾಣ ಆಗುತ್ತಿದೆ.

ವಿವಾದಾತ್ಮಕ ಸಿನಿಮಾಗಳ ನಿರ್ಮಾಣದಿಂದಲೇ ಹೆಸರಾಗುತ್ತಿರುವ ಅಮಿತ್ ಜಾನಿ ನಿರ್ಮಾಣದಲ್ಲಿ ‘ಕಾಲಾ ಹಿರನ್: ದಿ ಬ್ಯಾಟಲ್ ಆಫ್ ಲೆಗಸಿ’ ಹೆಸರಿನ ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಲ್ಮಾನ್ ಖಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ಕೈಯಲ್ಲಿ ರೈಫಲ್ ಹಿಡಿದು ಗುರಿ ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಕೈಗೆ ಧರಿಸುವ ಚೈನ್ ಮಾದರಿಯ ಚೈನ್ ಪೋಸ್ಟರ್​​ನಲ್ಲಿರುವ ವ್ಯಕ್ತಿಯ ಕೈಯಲ್ಲೂ ಇದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಅಮಿತ್ ಜಾನಿ, ‘ಇದು ನಿಜ ಘಟನೆ ಮತ್ತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಕತೆಯನ್ನು ಒಳಗೊಂಡಿದೆ’ ಎಂದಿದ್ದಾರೆ. ಅಲ್ಲದೆ ಈ ಸಿನಿಮಾ ಭಾರತದ ಅತಿ ದೊಡ್ಡ ವಿವಾದಾತ್ಮಕ ಸಿನಿಮಾ ಆಗಲಿದೆ ಎಂದು ಸಹ ಅವರು ಹೇಳಿದ್ದಾರೆ. ಕೃಷ್ಣಮೃಗ ಭೇಟೆ ಕುರಿತ ಈ ಸಿನಿಮಾ ಸಲ್ಮಾನ್ ಖಾನ್ ಜೊತೆಗೆ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಕತೆಯನ್ನೂ ಒಳಗೊಂಡಿರಲಿದೆ.

‘ಉದಯಪುರ ಫೈಲ್ಸ್’ ಸಿನಿಮಾ ನಿರ್ಮಾಣ ಮಾಡಿದ್ದ ಅಮಿತ್ ಜಾನಿ ಇದೀಗ ‘ಕಾಲಾ ಹಿರನ್’ ಸಿನಿಮಾಕ್ಕೆ ಕೈ ಹಾಕಿದ್ದು, ಈ ಸಿನಿಮಾವನ್ನು ಭರತ್ ಎಸ್ ಶ್ರೀನಾಥ್ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜಾನಿ ಫೈರ್ ಫಾಕ್ಸ್ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಟೀಸರ್ ಜೂನ್ 20 ರಂದು ಬಿಡುಗಡೆ ಆಗಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಜಂಗಲ್ ರಾಜ್‌ ಆಗಿ ಬದಲಾಗುತ್ತಿದೆ?: ಶಾಲೆಯ ಮುಂದೆಯೇ ಲಾಂಗ್ ಬೀಸಿದ ಪುಂಡರು!; ವಿಡಿಯೋ ವೈರಲ್!

ಬೆಂಗಳೂರು, ಮೇ,31: ಕಾನೂನು ಸುವ್ಯವಸ್ಥೆಗೆ ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಪುಂಡರ ಅಡ್ಡೆಯಾಗುತ್ತಿದೆಯೇ ಎಂಬ ಅನುಮಾನ ಮೂಡಲಾರಂಭಿಸಿದೆ. ನಗರದ ಡೇನಿಸ್ ರಸ್ತೆಯ (Davis Road) ಸೆಂಟ್ ಅಲ್ಫೋನ್ಸಸ್ ಶಾಲೆಯ (St. Alphonsus School) ಜಂಕ್ಷನ್ ಬಳಿ, ಸಾರ್ವಜನಿಕವಾಗಿ ಯುವಕರ ಗುಂಪೊಂದು ಮಾರಕಾಸ್ತ್ರ ಪ್ರದರ್ಶಿಸಿ ದಾದಾಗಿರಿ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ಕುರಿತಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿ ನಾಗರಿಕರು ಆತಂಕಗೊಂಡಿದ್ದಾರೆ.

ಲಕ್ಕಿ ಜಂಕ್ಷನ್‌ನ ಗೌಸಿಯಾ ಟೀ ಹೋಟೆಲ್ ಎದುರು ಶನಿವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಎರಡು ಸ್ಕೂಟರ್‌ಗಳಲ್ಲಿ ಹೆಲ್ಮೆಟ್ ಧರಿಸದೆ, ಟ್ರಾಫಿಕ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಒಂದೊಂದು ದ್ವಿಚಕ್ರ ವಾಹನದಲ್ಲಿ ತಲಾ ನಾಲ್ಕು ಜನರಂತೆ ಒಟ್ಟು ಎಂಟು ಜನ ಯುವಕರು ಬಂದಿದ್ದರು. ಅಲ್ಲಿ ಸಣ್ಣ ವಿಷಯಕ್ಕೆ ಪರಸ್ಪರ ತೀವ್ರ ಜಗಳ ಆರಂಭಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​ ವಿಡಿಯೋ:

ಯುವಕರ ನಡುವಿನ ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ, ಆ ಗುಂಪಿನಲ್ಲಿದ್ದ ಒಬ್ಬ ಪುಂಡ ಸಾರ್ವಜನಿಕ ರಸ್ತೆಯಲ್ಲೇ ದೊಡ್ಡ ಲಾಂಗ್ ಹೊರತೆಗೆದು ಬೀಸುತ್ತಾ ಎದುರಾಳಿಗಳಿಗೆ ಮತ್ತು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ಸ್ಥಳದ ಅಕ್ಕಪಕ್ಕದಲ್ಲೇ ಶಾಲೆ, ಟೀ ಸ್ಟಾಲ್ ಹಾಗೂ ಸಿಗರೇಟ್ ಅಂಗಡಿಗಳಿರುವುದರಿಂದ, ಮುಂಜಾನೆ ಶಾಲೆಗೆ ತೆರಳುತ್ತಿದ್ದ ಸಣ್ಣ ಸಣ್ಣ ಮಕ್ಕಳು, ಪೋಷಕರು ಹಾಗೂ ಸವಾರರು ಈ ರೌಡಿಸಂ ನೋಡಿ ತೀವ್ರ ಭಯಭೀತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಇಂತಹ ಗಾಂಜಾ ಪುಂಡರ ಮತ್ತು ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ

ಘಟನೆ ನಡೆದ ಜಂಕ್ಷನ್‌ನಲ್ಲಿ ಬೆಂಗಳೂರು ನಗರ ಪೊಲೀಸರ ಅಧಿಕೃತ ಸಿಸಿಟಿವಿ (CCTV) ಕ್ಯಾಮೆರಾಗಳು ಹಾಗೂ ಖಾಸಗಿ ಅಂಗಡಿಗಳ ಕಣ್ಗಾವಲು ಕ್ಯಾಮೆರಾಗಳಿದ್ದು, ಇಡೀ ಕೃತ್ಯದ ದೃಶ್ಯಾವಳಿಗಳು ಅದರಲ್ಲಿ ಸೆರೆಯಾಗಿವೆ. “ಇಂತಹ ರೌಡಿಸಂ ಮತ್ತು ಮಾರಕಾಸ್ತ್ರ ಪ್ರದರ್ಶನವನ್ನು ಸಣ್ಣ ಗಲಾಟೆ ಎಂದು ನಿರ್ಲಕ್ಷಿಸದೆ, ಪೊಲೀಸರು ತಕ್ಷಣವೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು” ಎಂದು ಸಾರ್ವಜನಿಕರು ಸಿಟಿ ಪೊಲೀಸ್ ಕಮಿಷನರ್‌ಗೆ ಜಾಲತಾಣಗಳ ಮೂಲಕ ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ

ನವದೆಹಲಿ, ಮೇ 31: ಜನರಲ್ ಅನಿಲ್ ಚೌಹಾಣ್ ಅವರ ನಿವೃತ್ತಿಯ ನಂತರ ತೆರವಾಗಿದ್ದ ಸಿಡಿಎಸ್ ಸ್ಥಾನಕ್ಕೆ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ತರಲಾಗಿದೆ. ದೇಶದ ನೂತನ ಮತ್ತು ಮೂರನೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ರಾಜಾ ಸುಬ್ರಮಣಿ (General NS Raja Subramani) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇಂದು ಭಾನುವಾರ ರಾಷ್ಟ್ರರಾಜಧಾನಿ ನಗರಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅವರು ಅಧಿಕಾರ ಸೂತ್ರಗಳನ್ನು ಕೈಗೆತ್ತಿಕೊಂಡರು. ಇದಕ್ಕೂ ಮುನ್ನ ಅವರು ಭಾರತೀಯ ಭೂಸೇನೆಯ ಉಪ ಮುಖ್ಯಸ್ಥರಾಗಿ (Vice Chief of Army Staff) ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಸಿಡಿಎಸ್ ಹುದ್ದೆ ಭಾರತದ ಸೇನಾ ವ್ಯವಸ್ಥೆಯಲ್ಲಿ ಅತ್ಯುಚ್ಚ ಮತ್ತು ಅತ್ಯಂತ ಮಹತ್ತರವಾದುದು. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ನಡುವೆ ಸಮನ್ವಯ ತರುವ ಜವಾಬ್ದಾರಿ ಸಿಡಿಎಸ್​ಗೆ ಇರುತ್ತದೆ. ಆರೇಳು ವರ್ಷದ ಹಿಂದಷ್ಟೇ ಭಾರತೀಯ ಸೇನೆಯಲ್ಲಿ ಸಿಡಿಎಸ್ ಹುದ್ದೆ ಸೃಷ್ಟಿಯಾಗಿದ್ದು. ಹಿಂದಿನ ಸಿಡಿಎಸ್ ಅನಿಲ್ ಚೌಹಾಣ್​ಗಿಂತ ಮೊದಲು ಜನರಲ್ ಬಿಪಿನ್ ರಾವತ್ ಆ ಸ್ಥಾನ ಅಲಂಕರಿಸಿದ್ದರು.

ಇದೀಗ ಈ ಮಹತ್ತರ ಸ್ಥಾನದ ಅಧಿಕಾರ ವಹಿಸಿಕೊಂಡ ತಕ್ಷಣ ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಕುರಿತು ಜನರಲ್ ರಾಜಾ ಸುಬ್ರಮಣಿ ಅವರು ತಮ್ಮ ಪ್ರಮುಖ ಆದ್ಯತೆಗಳನ್ನು ಹಂಚಿಕೊಂಡಿದ್ದಾರೆ. ಥಿಯೇಟರ್ ಕಮಾಂಡ್​ಗಳ ಸ್ಥಾಪನೆ, ಆತ್ಮನಿರ್ಭರತೆ ಮತ್ತು ಆಧುನೀಕರಣ, ಹಾಗೂ ತಂತ್ರಜ್ಞಾನ ಆಧಾರಿತ ರಕ್ಷಣೆ, ಈ ಮೂರು ಪ್ರಮುಖ ಆದ್ಯತೆಗಳ ಬಗ್ಗೆ ಅವರು ವಿಚಾರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ

ನೂತನ ಸಿಡಿಎಸ್​ಗೆ ಮೂರು ಆದ್ಯತೆಗಳು

ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳನ್ನು ಒಟ್ಟುಗೂಡಿಸಿ ಜಂಟಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ‘ಥಿಯೇಟರ್ ಕಮಾಂಡ್’ (Theaterisation) ಪ್ರಕ್ರಿಯೆಯನ್ನು ವೇಗಗೊಳಿಸುವುದು ಇವರ ಮೊದಲ ಆದ್ಯತೆಯಾಗಿದೆ. ಮೂರೂ ಪಡೆಗಳ ನಡುವೆ ಹೆಚ್ಚಿನ ಸಮನ್ವಯ ತರುವುದು ಇದರ ಮುಖ್ಯ ಉದ್ದೇಶವಾಗಿದೆ.

ರಕ್ಷಣಾ ವಲಯದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತದಲ್ಲೇ ತಯಾರಾಗುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳನ್ನು (Make in India) ಸಶಸ್ತ್ರ ಪಡೆಗಳಿಗೆ ಅಳವಡಿಸಲು ಅವರು ಒತ್ತು ನೀಡಲಿದ್ದಾರೆ.

ಕೃತಕ ಬುದ್ಧಿಮತ್ತೆ (AI), ಸೈಬರ್ ಯುದ್ಧ ತಂತ್ರಗಳು ಮತ್ತು ಬಾಹ್ಯಾಕಾಶ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಭಾರತೀಯ ಸೇನೆಯನ್ನು ಭವಿಷ್ಯದ ಯುದ್ಧಗಳಿಗೆ ಸಜ್ಜುಗೊಳಿಸುವುದು ಇವರ ಪ್ರಮುಖ ಗುರಿಯಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?

ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರ ಹಿನ್ನೆಲೆ

ಜನರಲ್ ರಾಜಾ ಸುಬ್ರಮಣಿ ಅವರು ಭಾರತೀಯ ಸೇನೆಯಲ್ಲಿ 37 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಹಾಗೂ ಅತ್ಯಂತ ಗೌರವಾನ್ವಿತ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಚೀನಾ ಗಡಿಯ ಸವಾಲುಗಳನ್ನು ಒಳಗೊಂಡಿರುವ ‘ಸೆಂಟ್ರಲ್ ಕಮಾಂಡ್’ ಸೇರಿದಂತೆ ಸೇನೆಯ ಹಲವು ಆಯಕಟ್ಟಿನ ವಿಭಾಗಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅಪಾರ ಅನುಭವ ಹೊಂದಿದ್ದಾರೆ. ಅವರ ಅತ್ಯುತ್ತಮ ಸೇವೆಗಾಗಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (PVSM) ಮತ್ತು ಅತಿ ವಿಶಿಷ್ಟ ಸೇವಾ ಪದಕ (AVSM) ಸೇರಿದಂತೆ ಹಲವು ದೇಶದ ಉನ್ನತ ಮಿಲಿಟರಿ ಗೌರವಗಳನ್ನು ನೀಡಿ ಗೌರವಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಮತ್ತು ಭಾರತದ ಗಡಿಗಳಲ್ಲಿ ರಕ್ಷಣಾ ಸವಾಲುಗಳು ಹೆಚ್ಚುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರ ನಾಯಕತ್ವವು ಭಾರತದ ಮೂರೂ ರಕ್ಷಣಾ ಪಡೆಗಳಿಗೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ ನೋಡಿ

ಸಿದ್ ಶ್ರೀರಾಮ್ (Sid Sriram) ದಕ್ಷಿಣ ಭಾರತದ ಅದ್ಭುತ ಗಾಯಕ (Singer). ಅವರ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇರುವುದಿಲ್ಲ ಅಷ್ಟು ಅದ್ಭುತವಾಗಿ, ತಾಳ-ಲಯಬದ್ಧವಾಗಿ ಹಾಡುತ್ತಾರೆ ಸಿದ್ ಶ್ರೀರಾಮ್. ತಮ್ಮ ಗಾಯನದ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ ಸಿದ್ ಶ್ರೀರಾಮ್. ಆ ವಿಡಿಯೋಗಳಲ್ಲಿ ಹಿನ್ನೆಲೆ ಸಂಗೀತದ ಹೊರತಾಗಿ ಹಾಡಿರುತ್ತಾರೆ ಆದರೂ ಅವರ ಹಾಡು ಅದ್ಭುತವಾಗಿ ಕೇಳುತ್ತದೆ. ಇಲ್ಲಿ ಅಂಥಹುದೇ ಒಂದು ವಿಡಿಯೋ ಇದೆ. ರಶ್ಮಿಕಾ-ವಿಜಯ್ ದೇವರಕೊಂಡ ನಟಿಸಿರುವ ಸಿನಿಮಾದ ಹಾಡೊಂದನ್ನು ಅದ್ಭುತವಾಗಿ ಹಾಡಿದ್ದಾರೆ ಸಿದ್ ಶ್ರೀರಾಮ್. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರು ಆರ್​​ಸಿಬಿ ಫ್ಯಾನ್ಸ್​​​ಗೆ ಬಿಗ್​ ಶಾಕ್ ನೀಡಿದ ಪೊಲೀಸ್ ಆಯುಕ್ತ ಶ್ರೀಮಂತ್ ಕುಮಾರ್ ಸಿಂಗ್!

ಬೆಂಗಳೂರ, ಮೇ,31: ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಹಣಾಹಣಿಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಶ್ರೀಮಂತ್ ಕುಮಾರ್ ಸಿಂಗ್ ಅವರು ಸಾರ್ವಜನಿಕ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಡಿಸಿಪಿಗಳಿಗೆ ವಿಶೇಷ ಸೂಚನೆಗಳನ್ನು ನೀಡಿದ್ದಾರೆ. ಕಳೆದ ವರ್ಷದ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ರಸ್ತೆಗಳಲ್ಲಿ ಮೆರವಣಿಗೆ, ಪಟಾಕಿ ಸಿಡಿಸುವುದು, ವಾಹನಗಳ ಮೇಲೆ ಹತ್ತಿ ಕುಣಿಯುವುದು ಮತ್ತು ವೀಲಿಂಗ್ ಮಾಡುವಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಡ್ರಂಕ್ ಅಂಡ್ ಡ್ರೈವ್ ತಪಾಸಣೆಗಳನ್ನು ರಾತ್ರಿಪೂರ್ತಿ ನಡೆಸಲು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ. ಸಾರ್ವಜನಿಕವಾಗಿ ಎಲ್ಇಡಿ ಸ್ಕ್ರೀನ್‌ಗಳನ್ನು ಹಾಕಿ ಪಂದ್ಯವನ್ನು ಪ್ರದರ್ಶಿಸುವಂತಿಲ್ಲ. ಮನೆಗಳು, ಕ್ಲಬ್‌ಗಳು ಮತ್ತು ಗೆಸ್ಟ್ ಹೌಸ್‌ಗಳಂತಹ ಖಾಸಗಿ ಒಳಾಂಗಣಗಳಲ್ಲಿ ಸಂಭ್ರಮಾಚರಣೆಗೆ ಅವಕಾಶವಿದೆ, ಆದರೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version