IOB Recruitment 2026: ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನಲ್ಲಿ 750 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | IOB Apprentice Recruitment 2026: 750 Vacancies Apply Online Before July 20! Banking Jobs

ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಐಒಬಿ) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಭರದಿಂದ ಸಾಗುತ್ತಿದೆ. ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ.

ಪ್ರಮುಖ ದಿನಾಂಕಗಳು ಮತ್ತು ಪರೀಕ್ಷೆಯ ವೇಳಾಪಟ್ಟಿ:

ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಈ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಜುಲೈ 22 ರವರೆಗೆ ಕಾಲಾವಕಾಶ ನೀಡಲಾಗಿದೆ. ಇನ್ನು ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಆಗಸ್ಟ್ 2 ರಂದು ದೇಶಾದ್ಯಂತ ನಡೆಸಲು ಇಲಾಖೆ ತೀರ್ಮಾನಿಸಿದೆ.

ಹುದ್ದೆಗಳ ಹಂಚಿಕೆ ಮತ್ತು ರಾಜ್ಯವಾರು ವಿವರ:

ಬ್ಯಾಂಕ್ ಬಿಡುಗಡೆ ಮಾಡಿರುವ ಈ ಬೃಹತ್ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ದೇಶಾದ್ಯಂತ ಒಟ್ಟು 750 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು ಖಾಲಿ ಹುದ್ದೆಗಳಲ್ಲಿ ವಿವಿಧ ರಾಜ್ಯಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಪ್ರಕಟಣೆಯಲ್ಲಿ ತಮ್ಮ ವ್ಯಾಪ್ತಿಯ ಹುದ್ದೆಗಳ ವಿವರವನ್ನು ಪರಿಶೀಲಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಸಡಿಲಿಕೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷದಿಂದ ಗರಿಷ್ಠ 28 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದ್ದು, SC/ST ಅಭ್ಯರ್ಥಿಗಳಿಗೆ ಏಳು ವರ್ಷಗಳು, OBC ಅಭ್ಯರ್ಥಿಗಳಿಗೆ ಮೂರು ವರ್ಷಗಳು ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ನೋಂದಣಿ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕದ ವಿವರ:

ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ NAT ಅಥವಾ NAP ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಜುಲೈ 20 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ವರ್ಗವಾರು ಅರ್ಜಿ ಶುಲ್ಕದ ವಿವರ ಹೀಗಿದೆ:

  • ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ರೂ. 800
  • SC / ST / ಮಹಿಳಾ ಅಭ್ಯರ್ಥಿಗಳಿಗೆ: ರೂ. 600
  • ದಿವ್ಯಾಂಗ ಅಭ್ಯರ್ಥಿಗಳಿಗೆ: ರೂ. 200

ಆಯ್ಕೆ ವಿಧಾನ ಮತ್ತು ಆಕರ್ಷಕ ಸ್ಟೈಫಂಡ್:

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಆನ್‌ಲೈನ್ ವಸ್ತುನಿಷ್ಠ (Objective) ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರು ಕೆಲಸ ಮಾಡುವ ಪ್ರದೇಶಕ್ಕೆ ಅನುಗುಣವಾಗಿ ಪ್ರತೀ ತಿಂಗಳು ಆಕರ್ಷಕ ಸ್ಟೈಫಂಡ್ ನೀಡಲಾಗುತ್ತದೆ. ಮೆಟ್ರೋ ಪ್ರದೇಶಗಳಿಗೆ ತಿಂಗಳಿಗೆ ರೂ. 15,500, ನಗರ ಪ್ರದೇಶಗಳಿಗೆ ರೂ. 14,500 ಮತ್ತು ಅರೆ-ನಗರ ಅಥವಾ ಗ್ರಾಮೀಣ ಪ್ರದೇಶದ ಶಾಖೆಗಳಿಗೆ ತಿಂಗಳಿಗೆ ರೂ. 14,000 ಸ್ಟೈಫಂಡ್ ನಿಗದಿಪಡಿಸಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ವರ್ಷದ ತರಬೇತಿ ಹಾಗೂ ಪ್ರಾಯೋಗಿಕ ಜ್ಞಾನ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ. ಕೊನೆಯ ದಿನದ ವರೆಗೆ ಕಾಯದೇ ಆಸಕ್ತರು ತಕ್ಷಣವೇ ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಅಧಿಕೃತ ಪೋರ್ಟಲ್ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ? – Kannada News | High Level Meeting In Delhi for Karnataka Cabinet expansion And KPCC bearers Appointment

ನವದೆಹಲಿ, (ಜುಲೈ 16): ಸಂಪುಟ ವಿಸ್ತರಣೆ ಸರ್ಕಸ್ ತೀವ್ರಗೊಂಡಿದ್ದು, ಈ ಸಂಬಂಧ ದೆಹಲಿಯಲ್ಲಿ ಸುರ್ಜೆವಾಲಾ ನಿವಾಸದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ವರಿಷ್ಠರ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಂತ್ರಿ ಸ್ಥಾನ ಪಡೆದುಕೊಳ್ಳಲು ಅನೇಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಇಪ್ಪತ್ತು ಸ್ಥಾನಗಳ ಪೈಕಿ ಐವತ್ತು ಮಂದಿ ಲಾಬಿ ನಡೆಸುತ್ತಿದ್ದಾರೆ. ಆದರೆ ಎಷ್ಟು ಜನರಿಗೆ ಈ ಬಾರಿ ಅವಕಾಶ ಸಿಗುತ್ತದೆ? ಯಾರಿಗೆಲ್ಲಾ ಮಂತ್ರಿ ಸ್ಥಾನ? ಸಿಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ವರಿಷ್ಠರ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಪಕ್ಷ ಸಂಘಟನೆಗಾಗಿ ಕೆಪಿಸಿಸಿಗೆ ಪದಾಧಿಕಾರಿಗಳ ಆಯ್ಮೆ ಬಗ್ಗೆಯೂ ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಕೆಪಿಸಿಸಿ ಮಹಿಳಾ ಕಾರ್ಯಧ್ಯಕ್ಷೆ ಹಾಗೂ ನೂತನ ಡಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ LLB ವಿದ್ಯಾರ್ಥಿನಿ – Kannada News | LLB Student Amrutha Stabbed to Death by Lover’s Brother in Bengaluru; Family Donates Her Eyes

ಬೆಂಗಳೂರು, ಜುಲೈ 16: ಅಣ್ಣನ ಜೊತೆ ಮದುವೆ ಆಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಅಮೃತಾ ಮೃತ ದುರ್ದೈವಿಯಾಗಿದ್ದು, ಈಕೆಗೆ ಜು.13ರಂದು ಬೆಂಗಳೂರಿನ HAL ರಸ್ತೆಯ ಕೋಡಿಹಳ್ಳಿಯಲ್ಲಿ ಸೂರ್ಯ ಎಂಬಾತ ಚಾಕು ಇರಿದಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಮೃತಾ ನಿನ್ನೆ ಪ್ರಾಣಬಿಟ್ಟಿದ್ದಾರೆ.

ಮದುವೆ, ಮಗು ಇರುವ ವಿಚಾರ ಮುಚ್ಚಿಟ್ಟು ಪ್ರೀತಿ

ಅಮೃತಾ ಮತ್ತು ಆರೋಪಿ ಸೂರ್ಯ ಸಹೋದರ ಧನುಷ್​ ಪರಸ್ಪರ ಪ್ರೀತಿಸುತ್ತಿದ್ದರು. ಇವರೆಲ್ಲ ಒಂದೇ ಏರಿಯಾದವರಾಗಿದ್ದು, ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯವಾಗಿತ್ತು. ಅದೇ ಪರಿಚಯದಿಂದ ಧನುಷ್ ಮತ್ತು ಅಮೃತಾ ಆತ್ಮೀಯರಾಗಿದ್ರು. ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಧನುಷ್​​ಗೆ ಅದಾಗಲೇ​ ಮದುವೆಯಾಗಿ 1 ಮಗುವಿದ್ದು, ಪತ್ನಿಯಿಂದ ಆತ ವಿಚ್ಚೇದನ ಪಡೆದಿದ್ದ. ಆದರೆ ಈ ವಿಚಾರವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ. ನಂತರ ವಿಷಯ ಗೊತ್ತಾದ ಬಳಿಕ ಧನುಷ್​​ನಿಂದ ಅಮೃತಾ ದೂರವಾಗಿದ್ದರು. ಇದೇ ವಿಚಾರಕ್ಕೆ ಜು.13ರಂದು ಯುವತಿ ಮನೆ ಬಳಿ ಧನುಷ್​​ ಸಹೋದರ ಸೂರ್ಯ ಗಲಾಟೆ ಮಾಡಿದ್ದು, ಚಾಕು ಇರಿದಿದ್ದ. ಪ್ರಕರಣ ಸಂಬಂಧ ಆರೋಪಿಗಳಾದ ಸೂರ್ಯ ಮತ್ತು ಧನುಷ್​ನನ್ನು ಪೊಲೀಸರು ಬಂಧಿಸಿದ್ದು, ಜೀವನ್​ಭೀಮಾನಗರ ಠಾಣೆಯಲ್ಲಿ ಈ ಬಗ್ಗೆ ಕೇಸ್​ ದಾಖಲಾಗಿದೆ.

ಇದನ್ನೂ ಓದಿ: ಹಣಕ್ಕಾಗಿ‌ 20 ವರ್ಷದ ಮಗಳನ್ನೇ ಪಶ್ಚಿಮ ಆಫ್ರಿಕಾದಲ್ಲಿ ಮಾರಾಟ ಮಾಡಿದ ಪೋಷಕರು!

ವಕೀಲೆಯಾಗಬೇಕೆಂದು ಕನಸು ಕಂಡಿದ್ದ ಅಮೃತಾ

22 ವರ್ಷದ ಅಮೃತಾ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದು, ಮುಂದು ವಕೀಲೆಯಾಗುವ ಕನಸು ಕಂಡಿದ್ದಳು. ಆದರೀಗ ದಾರುಣ ಅಂತ್ಯ ಕಂಡಿದ್ದಾಳೆ. ಹೀಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಯುವತಿಯ ಕುಟುಂಬಸ್ಥರು, ಸಹಪಾಠಿಗಳು ಆಗ್ರಹಿಸಿದ್ದಾರೆ.

ಯುವತಿಯ ನೇತ್ರದಾನಕ್ಕೆ ಕುಟುಂಬಸ್ಥರ ನಿರ್ಧಾರ

ಇನ್ನು ಯುವತಿ ಅಮೃತಾರ ನೇತ್ರದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಗಳ ಸಾವಿನ ಶೋಕದ ನಡುವೆಯೂ ಮಾನವೀಯತೆ ಮೆರೆದ ಅಮೃತಾ ಕುಟುಂಬದ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೃತಾ ಕೊನೆಯುಸಿರೆಳೆದ ತಕ್ಷಣವೇ, ಕುಟುಂಬದವರು ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ವೈದ್ಯರು ಈ ಬಗ್ಗೆ ಕುಟುಂಬದವರೊಂದಿಗೆ ಮಾತನಾಡಿದಾಗ, ಅವರು ತಕ್ಷಣವೇ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:25 pm, Thu, 16 July 26

Source link

ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ? – Kannada News | Income Tax Return update, July 31st last date to file ITR, know what happens if deadline missed

ಆದಾಯ ತೆರಿಗೆ ರಿಟರ್ನ್Image Credit source: Getty Images

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಕೊನೆಯ ದಿನಾಂಕ ಜುಲೈ 31ಕ್ಕೆ ಇದೆ. ನೀವು ಇನ್ನೂ ರಿಟರ್ನ್ ಸಲ್ಲಿಸಿಲ್ಲ ಎಂದಾದಲ್ಲಿ ತ್ವರಿತ ಮಾಡಿ. ಡೆಡ್​ಲೈನ್ ತಪ್ಪಿಸಿಕೊಂಡರೆ ನಿಮ್ಮ ಜೇಬಿಗೆ ಕತ್ತರಿ ಬಿದ್ದೀತು. ಐಟಿಆರ್ ಅನ್ನು ನಿಗದಿತ ಅವಧಿಯೊಳಗೆ ಸಲ್ಲಿಸಿಲ್ಲವೆಂದರೆ ದಂಡ, ಬಡ್ಡಿ ಇತ್ಯಾದಿ ತಲೆನೋವು ಭರಿಸಬೇಕಾಗುತ್ತದೆ. ಈ ಬಾರಿ ಗಡುವನ್ನು ವಿಸ್ತರಿಸುವ ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ, ತೆರಿಗೆದಾರರು ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ಐಟಿಆರ್ ಸಲ್ಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಜುಲೈ 31ರ ಒಳಗಾಗಿ ನಿಮ್ಮ ತೆರಿಗೆ ರಿಟರ್ನ್ ಫೈಲ್ ಮಾಡದಿದ್ದರೆ ನೀವು ಎಷ್ಟು ದಂಡ ತೆರಬೇಕಾಗಬಹುದು ಹಾಗೂ ಏನೆಲ್ಲಾ ನಷ್ಟಗಳನ್ನು ಅನುಭವಿಸಬೇಕಾಗಬಹುದು ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ತಡವಾಗಿ ಸಲ್ಲಿಕೆಗೆ ಬೀಳುವ ದಂಡ

ಆದಾಯ ತೆರಿಗೆ ಕಾನೂನಿನ ಸೆಕ್ಷನ್ 234F ಅಡಿಯಲ್ಲಿ ತಡಪಾವತಿ ಶುಲ್ಕ ವಿಧಿಸುವ ಅವಕಾಶ ಇರುತ್ತದೆ. ಜುಲೈ 31ರ ನಂತರವೂ ನೀವು ವಿಳಂಬಿತ ರಿಟರ್ನ್ (Belated Return) ಅನ್ನು ಡಿಸೆಂಬರ್ 31ರ ಒಳಗೆ ಸಲ್ಲಿಸಲು ಅವಕಾಶವಿದೆ. ಆದರೆ ಇದಕ್ಕೆ ದಂಡ ಪಾವತಿಸಬೇಕಾಗುತ್ತದೆ:

  • ರೂ. 5,00,000 ಕ್ಕಿಂತ ಹೆಚ್ಚು ಆದಾಯವಿದ್ದರೆ: ಜುಲೈ 31 ರ ನಂತರ ಐಟಿಆರ್ ಸಲ್ಲಿಸಿದರೆ ರೂ. 5,000 ತಡಪಾವತಿ ಶುಲ್ಕ (Late Fee) ವಿಧಿಸಲಾಗುತ್ತದೆ.
  • ರೂ. 5,00,000 ಅಥವಾ ಅದಕ್ಕಿಂತ ಕಡಿಮೆ ಆದಾಯವಿದ್ದರೆ: ವಿಳಂಬ ಶುಲ್ಕವನ್ನು ರೂ. 1,000 ಕ್ಕೆ ಸೀಮಿತಗೊಳಿಸಲಾಗಿದೆ.
  • ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಆದಾಯವಿದ್ದರೆ: ಯಾವುದೇ ದಂಡ ಇರುವುದಿಲ್ಲ (ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ).

ಇದನ್ನೂ ಓದಿ: ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

ಬಾಕಿ ತೆರಿಗೆಯ ಮೇಲೆ ಮಾಸಿಕ ಶೇ. 1 ಬಡ್ಡಿ

ಸೆಕ್ಷನ್ 234A ಪ್ರಕಾರ, ನೀವು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ ಇನ್ನೂ ಬಾಕಿ ಉಳಿದಿದ್ದರೆ ಮತ್ತು ನೀವು ಜುಲೈ 31 ರ ಒಳಗೆ ಐಟಿಆರ್ ಸಲ್ಲಿಸದಿದ್ದರೆ, ಆಗಸ್ಟ್ 1 ರಿಂದ ಐಟಿಆರ್ ಸಲ್ಲಿಸುವ ದಿನಾಂಕದವರೆಗೆ ಪ್ರತಿ ತಿಂಗಳಿಗೆ ನಿಮ್ಮ ಪಾವತಿ ಮೊತ್ತದ ಮೇಲೆ ಶೇ. 1 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ನಷ್ಟಗಳನ್ನು ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ

ವ್ಯಾಪಾರ, ಷೇರು ಮಾರುಕಟ್ಟೆ (Capital Gains) ಅಥವಾ ಇತರ ಮೂಲಗಳಿಂದ ನಿಮಗೆ ಈ ವರ್ಷ ನಷ್ಟ ಉಂಟಾಗಿದ್ದರೆ, ಆ ನಷ್ಟವನ್ನು ಮುಂದಿನ ವರ್ಷದ ಲಾಭದ ಎದುರು ಸರಿಹೊಂದಿಸಲು (Set-off) ಅವಕಾಶ ಇರುತ್ತದೆ. ಆ ಅವಕಾಶ ಸಿಗಬೇಕೆಂದರೆ ಜುಲೈ 31 ರ ಒಳಗಾಗಿ ಐಟಿಆರ್ ಸಲ್ಲಿಸುವುದು ಕಡ್ಡಾಯ. ತಡವಾಗಿ ರಿಟರ್ನ್ಸ್ ಸಲ್ಲಿಸಿದರೆ ಈ ನಷ್ಟಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯುವ (Carry Forward) ಅವಕಾಶವನ್ನು ಕಳೆದುಕೊಳ್ಳುತ್ತೀರಿ.

ರಿಫಂಡ್ ಪಡೆಯುವುದು ವಿಳಂಬವಾಗುತ್ತದೆ

ನೀವು ಹೆಚ್ಚಿನ ಟಿಡಿಎಸ್ (TDS) ಕಡಿತದಿಂದಾಗಿ ಸರ್ಕಾರದಿಂದ ರೀಫಂಡ್ (Tax Refund) ಪಡೆಯಬೇಕಾಗಿದ್ದರೆ, ಜುಲೈ 31 ರ ಒಳಗೆ ಸಲ್ಲಿಸುವುದರಿಂದ ರೀಫಂಡ್ ಬೇಗನೆ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ತಡವಾಗಿ ಸಲ್ಲಿಸಿದಷ್ಟೂ ರೀಫಂಡ್ ಪ್ರಕ್ರಿಯೆ ತಡವಾಗುತ್ತದೆ ಹಾಗೂ ನಿಮ್ಮ ಹಣ ಸಿಗುವುದು ವಿಳಂಬವಾಗುತ್ತದೆ.

ಇದನ್ನೂ ಓದಿ: ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ?

ಹಳೆಯ ಟ್ಯಾಕ್ಸ್ ರಿಜೈಮ್ ಆಯ್ಕೆ ಇರುವುದಿಲ್ಲ

ಒಂದು ವೇಳೆ ನೀವು ಈ ವರ್ಷ ಜುಲೈ 31 ರ ಗಡುವು ಮೀರಿದ ನಂತರ ವಿಳಂಬಿತ ರಿಟರ್ನ್ (Belated Return) ಸಲ್ಲಿಸಿದರೆ, ನಿಮಗೆ ಹಳೆಯ ತೆರಿಗೆ ಪದ್ಧತಿಯನ್ನು (Old Tax Regime) ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ನೀವು ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯಡಿಯಲ್ಲೇ (New Tax Regime) ಐಟಿಆರ್ ಸಲ್ಲಿಸಬೇಕಾಗುತ್ತದೆ.

ಜೈಲು ಶಿಕ್ಷೆಯೂ ಆಗಬಹುದು ಎಚ್ಚರ!

ತೆರಿಗೆ ಇಲಾಖೆಯು ನೋಟಿಸ್ ನೀಡಿದ ಮೇಲೂ ಉದ್ದೇಶಪೂರ್ವಕವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸದೆ ತಪ್ಪಿಸಿಕೊಳ್ಳುವವರಿಗೆ ಸೆಕ್ಷನ್ 276CC ಅಡಿಯಲ್ಲಿ 3 ತಿಂಗಳಿನಿಂದ 2 ವರ್ಷಗಳವರೆಗೆ ಮತ್ತು ಬಾಕಿ ತೆರಿಗೆ ಮೊತ್ತ ದೊಡ್ಡದಾಗಿದ್ದರೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕೊನೆಯ ದಿನಗಳಲ್ಲಿ ವೆಬ್‌ಸೈಟ್ ಸರ್ವರ್ ನಿಧಾನವಾಗುವ ಸಾಧ್ಯತೆಗಳಿರುವುದರಿಂದ ಇಂದೇ ನಿಮ್ಮ Form 16, Form 26AS ಮತ್ತು AIS (Annual Information Statement) ದಾಖಲೆಗಳನ್ನು ಪರಿಶೀಲಿಸಿ, ತಕ್ಷಣವೇ ಐಟಿಆರ್ ಸಲ್ಲಿಸಿ ನಿಶ್ಚಿಂತರಾಗಿರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ – Kannada News | Do not deploy Indian sailors on ships passing through Hormuz India’s big warning to shipowners

ನವದೆಹಲಿ, ಜುಲೈ 16: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮತ್ತು ಪರ್ಷಿಯನ್ ಗಲ್ಫ್ ವಲಯದಲ್ಲಿ ಸಂಚರಿಸುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸದಂತೆ ಭಾರತ ಸರ್ಕಾರವು ಶಿಪ್ಪಿಂಗ್ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ. ಕಳೆದ 3 ದಿನಗಳಲ್ಲಿ ಈ ವಲಯದಲ್ಲಿ ನಡೆದ ದಾಳಿಗಳಲ್ಲಿ ಇಬ್ಬರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಈ ದೊಡ್ಡ ನಿರ್ಧಾರ ಹೊರಬಿದ್ದಿದೆ.

ಭಾರತದ ನೌಕಾಯಾನ ನಿಯಂತ್ರಕ ಸಂಸ್ಥೆಯಾದ ಡೈರೆಕ್ಟರೇಟ್ ಜನರಲ್ ಆಫ್ ಮ್ಯಾರಿಟೈಮ್ ಅಡ್ಮಿನಿಸ್ಟ್ರೇಷನ್ (DGMA) ಬುಧವಾರ ತುರ್ತು ಆದೇಶ ಹೊರಡಿಸಿದೆ. “ಮುಂದಿನ ಆದೇಶದವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಯಾವುದೇ ವಾಣಿಜ್ಯ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸುವಂತಿಲ್ಲ” ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಭಾರತೀಯ ನಾವಿಕ ಬಲಿ; ಭಾರತದಿಂದ ಇರಾನ್​ಗೆ ಸಮನ್ಸ್ ಜಾರಿ

ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ DGMA, ಸಂಘರ್ಷ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮೊಂಬಾಸಾ ಬಿ, ಅಲ್ ಬಹ್ಯಾ, ಜಿಎಫ್ಎಸ್ ಗ್ಯಾಲಕ್ಸಿ, ಎಂಟಿ ವೆದ್ಯಾನ್ ಮತ್ತು ಅಲ್ ರೇಖಾಯತ್ ಸೇರಿದಂತೆ ಹಲವು ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿರುವುದರಿಂದ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ:

ಜಾಗತಿಕ ಹಡಗು ಉದ್ಯಮಕ್ಕೆ ನಾವಿಕರನ್ನು ಪೂರೈಸುವಲ್ಲಿ ಭಾರತವು ವಿಶ್ವದಲ್ಲೇ 3ನೇ ಅತಿ ದೊಡ್ಡ ದೇಶವಾಗಿದೆ. ಜಗತ್ತಿನಾದ್ಯಂತ 3 ಲಕ್ಷಕ್ಕೂ ಅಧಿಕ ಭಾರತೀಯ ನಾವಿಕರು ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಗಲ್ಫ್ ವಲಯದಲ್ಲಿ ನಡೆದ ವಿವಿಧ ದಾಳಿಗಳಲ್ಲಿ 13 ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮೂಲಗಳು ಖಚಿತಪಡಿಸಿವೆ.

ಹಡಗಿನ ಕ್ಯಾಪ್ಟನ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ:

ಹಾರ್ಮುಜ್ ಮತ್ತು ಪರ್ಷಿಯನ್ ಗಲ್ಫ್ ಸುತ್ತಮುತ್ತಲಿನ ಜಲಪ್ರದೇಶದಲ್ಲಿ ಇರುವ ಹಡಗುಗಳ ಕ್ಯಾಪ್ಟನ್ ಅತ್ಯಂತ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ತುರ್ತು ನೆರವಿಗಾಗಿ ನಾವಿಕರು ತಕ್ಷಣವೇ ಡಿಜಿ ಕಮ್ಯುನಿಕೇಷನ್ ಸೆಂಟರ್ (MMDAC) ಅಥವಾ ಭಾರತೀಯ ನೌಕಾಪಡೆಯ ಇನ್ಫಾರ್ಮೇಷನ್ ಫ್ಯೂಷನ್ ಸೆಂಟರ್ ಇಂಡಿಯನ್ ಓಷಿಯನ್ ರೀಜನ್ ಅನ್ನು ಸಂಪರ್ಕಿಸಲು ಕೋರಲಾಗಿದೆ.

ಹಾರ್ಮುಜ್‌ನಲ್ಲಿ ಬಿಕ್ಕಟ್ಟು:

ಬುಧವಾರ ಅಮೆರಿಕ ಸೇನೆಯು ಇರಾನ್‌ನ ಕರಾವಳಿ ರಕ್ಷಣಾ ನೆಲೆಗಳು ಮತ್ತು ಕ್ಷಿಪಣಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿದ್ದು, ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಹೇರಿದೆ. ಇದಕ್ಕೆ ಪ್ರತಿಯಾಗಿ, ತಾನು ಅಮೆರಿಕದ ವಿರುದ್ಧ ಅಸ್ತಿತ್ವದ ಯುದ್ಧ ಎದುರಿಸುತ್ತಿರುವುದಾಗಿ ಘೋಷಿಸಿರುವ ಇರಾನ್, ಈ ವಲಯದ ಇಂಧನ ರಫ್ತನ್ನು ತಡೆಯುವುದಾಗಿ ಹೆದರಿಸಿದೆ. ಇದರಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಕಷ್ಟಕರವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ಹಡಗುಗಳ ಮೇಲಿನ ಶೇ. 20ರಷ್ಟು ಶುಲ್ಕ ಹಿಂಪಡೆದ ಟ್ರಂಪ್; ಹೊಸ ಘೋಷಣೆಯೇನು?

ಜಾಗತಿಕ ಹಡಗು ಉದ್ಯಮದಲ್ಲಿ ಭಾರತದ ಬಲ:

ಸರ್ಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜಾಗತಿಕ ಹಡಗು ಉದ್ಯಮಕ್ಕೆ ನಾವಿಕರನ್ನು ಪೂರೈಸುವಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ದೇಶವಾಗಿದೆ. ಪ್ರಸ್ತುತ ವಿಶ್ವದಾದ್ಯಂತ ವಿವಿಧ ಹಡಗುಗಳಲ್ಲಿ 3 ಲಕ್ಷಕ್ಕೂ ಅಧಿಕ ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ಸುರಕ್ಷತೆ ಭಾರತಕ್ಕೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇತ್ತೀಚೆಗೆ ನಡೆದ ದಾಳಿಗಳಲ್ಲಿ ಇಬ್ಬರು ಭಾರತೀಯ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲಿ ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್! – Kannada News | No Changes CM Name In karnataka social welfare department Bard at Chitradurga

ಚಿತ್ರದುರ್ಗ, (ಜುಲೈ 16): ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದು ತಿಂಗಳುಗಳೇ ಕಳೆದಿದ್​ದು, ಡಿಕೆ ಶಿವಕುಮಾರ್  ಅವರು ನೂತನ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಸಹ ಕೆಲ ಸರ್ಕಾರಿ ಬೋರ್​ಡ್​​​​ಗಳಲ್ಲಿ ಇನ್ನೂ ಸಿದ್ದರಾಮಯ್ಯನವರೇ ಸಿಎಂ ಎಂದೇ ಇದೆ. ಸರ್ಕಾರಿ ಮಾಹಿತಿ ನಾಮಫಲಕಗಳಲ್ಲಿ ಸಿಎಂ ಹೆಸರು ಮತ್ತು ಭಾವಚಿತ್ರ ಬದಲಾಗಿಸಿಲ್ಲ. ಹೌದು….ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಾಹಿತಿ ಬೋರ್ಡ್​​​ನಲ್ಲಿ ಸಿದ್ದರಾಮಯ್ಯನವರು ಇನ್ನೂ ಸಿಎಂ ಆಗಿಯೇ ಉಳಿದಿದ್ದರೆ, ಡಿಕೆ ಶಿವಕುಮಾರ್ ಡಿಸಿಎಂ ಎನ್ನುವ ನಾಮಫಲಕ ರಾರಾಜಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Tourism and Hospitality Jobs Boom: AI ಉದ್ಯೋಗ ಕಿತ್ತುಕೊಳ್ಳುತ್ತೆ ಎಂಬ ಆತಂಕಬೇಡ; 2028ರ ವೇಳೆಗೆ ಸೃಷ್ಟಿಯಾಗಲಿವೆ 30 ಲಕ್ಷ ಹೊಸ ಉದ್ಯೋಗಗಳು! – Kannada News | Tourism and Hospitality Jobs Boom: 3 Million New Roles by 2028 in India

ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆImage Credit source: glion.edu

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ ಯುವಜನತೆಗೆ ಇಲ್ಲಿದೆ ಒಂದು ಅದ್ಭುತ ಸುದ್ದಿ. ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ (Tourism and Hospitality) ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಉದ್ಯೋಗಾವಕಾಶಗಳು ಗಮನಾರ್ಹವಾಗಿ ಹೆಚ್ಚಾಗಲಿವೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಮಂಡಳಿ (THSC) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ಇಲಾಖೆಯು ಮುಂಬರುವ ವರ್ಷಗಳಲ್ಲಿ ಬೃಹತ್ ಉದ್ಯೋಗ ಕ್ರಾಂತಿಗೆ ಸಾಕ್ಷಿಯಾಗಲಿದೆ.

2028ರ ವೇಳೆಗೆ ಸೃಷ್ಟಿಯಾಗಲಿದೆ 30 ಲಕ್ಷ ಉದ್ಯೋಗಗಳ ಮಹಾಪೂರ:

THSC ವರದಿಯ ಅಂದಾಜಿನ ಪ್ರಕಾರ, ಮುಂಬರುವ 2028 ರ ವೇಳೆಗೆ ಈ ವಲಯದಲ್ಲಿ ಸುಮಾರು 30 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದುಡಿಯುವ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 1.48 ಕೋಟಿಗೆ ಏರಿಕೆಯಾಗಲಿದೆ. ಇದಕ್ಕೂ ಮುನ್ನ 2024 ರ ವೇಳೆಗೆ ಈ ವಲಯದಲ್ಲಿ 1.18 ಕೋಟಿ ಜನರು ಉದ್ಯೋಗದಲ್ಲಿದ್ದರು ಎಂದು ವರದಿ ಬಹಿರಂಗಪಡಿಸಿದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ವಲಯವು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ.

ಹೋಟೆಲ್ ಮತ್ತು ಆಹಾರ ಸೇವಾ ವಲಯದಲ್ಲಿ ಭಾರಿ ಬೇಡಿಕೆ:

ವರದಿಯ ಪ್ರಕಾರ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ಸೇವಾ ವಿಭಾಗಗಳಲ್ಲಿ ಅತಿ ಹೆಚ್ಚು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ವಿಶೇಷವೆಂದರೆ, ಇಲ್ಲಿ ಕೌಶಲ್ಯಪೂರ್ಣ (Skilled), ಅರೆ-ಕೌಶಲ್ಯಪೂರ್ಣ (Semi-skilled) ಮತ್ತು ಆರಂಭಿಕ ಹಂತದ (Entry-level) ಕೆಲಸಗಾರರಿಗೆ ಸಮಾನ ಅವಕಾಶಗಳು ಲಭ್ಯವಿವೆ. ಪ್ರವಾಸೋದ್ಯಮದ ಕ್ಷಿಪ್ರ ಬೆಳವಣಿಗೆಯಿಂದಾಗಿ ಯುವಕರಿಗೆ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಸಾಧ್ಯವಿದ್ದು, ಆಕರ್ಷಕ ಸಂಬಳ ಹೆಚ್ಚಳದೊಂದಿಗೆ ಹೊಸಬರಿಗೂ (Freshers) ಇಲ್ಲಿ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ಸಿಗಲಿವೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್‌ನಲ್ಲಿ 73 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳ ನೇಮಕಾತಿ; ಪದವೀಧರರಿಗೆ ಉತ್ತಮ ಅವಕಾಶ

ಇವೇ ನೋಡಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ರಾಜ್ಯಗಳು:

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ, ಕೇವಲ ವಸತಿ ಮತ್ತು ಆಹಾರ ಸೇವೆಗಳೇ ಶೇಕಡಾ 93 ರಷ್ಟು ಬೃಹತ್ ಪಾಲು ಹೊಂದಿವೆ. ಅಂದರೆ, ಈ ವಲಯದಲ್ಲಿ ಸೃಷ್ಟಿಯಾಗುವ ಪ್ರತಿ 10 ಹೊಸ ಉದ್ಯೋಗಗಳಲ್ಲಿ, 9 ಉದ್ಯೋಗಗಳು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳು, ರೆಸಾರ್ಟ್‌ಗಳು ಮತ್ತು ಇತರ ಆಹಾರ ಸೇವೆಗಳಿಂದಲೇ ಸೃಷ್ಟಿಯಾಗಲಿವೆ. ಇನ್ನು ರಾಜ್ಯವಾರು ನೋಡುವುದಾದರೆ, ಭಾರತದ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮುಂಚೂಣಿಯಲ್ಲಿವೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಕೆಲಸದಾಕೆಯ ಮೇಲೆ ಕಾರು ಹತ್ತಿಸಿ, ಆಸ್ಪತ್ರೆಗೆ ಕರೆದೊಯ್ದ, ಆಕೆ ಸತ್ತಿದ್ದಾಳೆಂದು ತಿಳಿಯುತ್ತಿದ್ದಂತೆ ಮತ್ತದೇ ಜಾಗದಲ್ಲಿ ಶವ ಎಸೆದು ಹೋದ ಮಹಿಳೆ – Kannada News | Gurugram Car Accident: Driver Abandons Maid’s Body After Fatal Thar Collision

ಗುರುಗ್ರಾಮ, ಜುಲೈ 16: ಕೆಲವೊಮ್ಮೆ ಅಪಘಾತ(Accident)ಗಳು ಕಣ್ತಪ್ಪಿನಿಂದ ಆಗಿಬಿಡುತ್ತವೆ. ಕೆಲವೊಮ್ಮೆ ತಪ್ಪು ಚಾಲಕರದ್ದಾಗಿದ್ದರೆ ಇನ್ನೂ ಕೆಲವೊಮ್ಮೆ ಬೇರೆಯವರದ್ದಾಗಿರುತ್ತದೆ. ಆದರೆ ಯಾರಿಗೆ ಅಪಾಯವಾದರೂ ಕನಿಷ್ಠ ಮಾನವೀಯತೆ ಎಂಬುದು ಮನುಷ್ಯರಿಗಿರಬೇಕು. ಆದರೆ ಗುರುಗ್ರಾಮದಲ್ಲಿ ನಡೆದ ಘಟನೆ ಎಲ್ಲರ ರಕ್ತ ಕುದಿಯುವಂತೆ ಮಾಡುತ್ತದೆ.

ಮಹಿಳೆಯೊಬ್ಬರು ಕಾರು ರಿವರ್ಸ್​ ತೆಗೆಯುವಾಗ ಅಲ್ಲೇ ಮಲಗಿದ್ದ ಮನೆಗೆಲಸದಾಕೆ ಮೇಲೆ ಥಾರ್ ಗಾಡಿ ಹತ್ತಿಸಿದ್ದಾರೆ. ನಂತರ ತನ್ನ ತಪ್ಪಿನ ಅರಿವಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆ ಮಹಿಳೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಹೇಳಿದ್ದನ್ನು ಕೇಳಿದ ಚಾಲಕಿ ಶವವನ್ನು ಮತ್ತೆ ಕಾರಿನಲ್ಲಿ ಹೊತ್ತು ತಂದು ಅಪಘಾತ ನಡೆದ ಸ್ಥಳದಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾಳೆ.

ಮೃತರನ್ನು ಉತ್ತರ ಪ್ರದೇಶದ ಮಹೋಬಾ ಮೂಲದ 57 ವರ್ಷದ ಗುಡ್ಡಿ ಎಂದು ಗುರುತಿಸಲಾಗಿದೆ. ಈ ಘಟನೆ ಗುರುಗ್ರಾಮದ ಸೆಕ್ಟರ್ 67 ರಲ್ಲಿರುವ ‘ಅನ್ಸಾಲ್ ವರ್ಸಾಲಿಯಾ ಸೊಸೈಟಿ’ಯಲ್ಲಿ ನಡೆದಿದೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ

ಸುಸ್ತಾಗಿ ಪಾರ್ಕಿಂಗ್‌ನಲ್ಲಿ ಮಲಗಿದ್ದೇ ತಪ್ಪಾಯ್ತಾ?

ಬಡತನದ ಬೇಗೆಯಿಂದಾಗಿ ಗುಡ್ಡಿ ಅವರು ಈ ಐಷಾರಾಮಿ ಅಪಾರ್ಟ್‌ಮೆಂಟ್‌ನ ಮನೆಗಳಲ್ಲಿ ಕಸಗುಡಿಸುವುದು, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ದಿನವಿಡೀ ದುಡಿದು ಸುಸ್ತಾಗಿದ್ದ ಗುಡ್ಡಿ, ಮಧ್ಯಾಹ್ನ ನೆಲಮಹಡಿಯ ಕಾರ್ ಪಾರ್ಕಿಂಗ್ ಪ್ರದೇಶದ ನೆರಳಿನಲ್ಲಿ ಸ್ವಲ್ಪ ಸಮಯ ಮಲಗಿದ್ದರು.

ಇದೇ ಕಟ್ಟಡದಲ್ಲಿ ವಾಸಿಸುವ ಮಹಿಳೆಯೊಬ್ಬರು ತನ್ನ ಥಾರ್ ಕಾರನ್ನು ಸ್ಟಾರ್ಟ್ ಮಾಡಿ, ಹಿಂದಕ್ಕೆ ಚಲಾಯಿಸುವಾಗ ಕೆಳಗೆ ಮಲಗಿದ್ದ ಗುಜ್ಜಾರನ್ನು ಗಮನಿಸದೇ ಆಕೆಯ ಮೇಲೆ ಕಾರಿನ ಚಕ್ರಗಳನ್ನು ಹರಿಸಿದ್ದಾರೆ. ಗುಡ್ಡಿ ರಕ್ತದ ಮಡುವಿನಲ್ಲಿ ಒದ್ದಾಡುವುದನ್ನು ಕಂಡು ಗಾಬರಿಯಾದ ಚಾಲಕಿ, ತಕ್ಷಣ ಆಕೆಯನ್ನು ಮತ್ತೊಂದು ವಾಹನದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವೈದ್ಯರು ‘ಡೆಡ್’ ಎಂದ ತಕ್ಷಣ ಬದಲಾದ ಬುದ್ಧಿ

ಆಸ್ಪತ್ರೆಯಲ್ಲಿ ಗುಡ್ಡಿಯನ್ನು ಪರೀಕ್ಷಿಸಿದ ವೈದ್ಯರು, ಆಕೆ ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಇಲ್ಲಿಂದ ಚಾಲಕಿಯ ಅಸಲಿ ಕ್ರೌರ್ಯ ಆರಂಭವಾಯಿತು. ಆಸ್ಪತ್ರೆಯವರ ಕಾಟ, ಪೊಲೀಸರ ಎಫ್‌ಐಆರ್ ಹಾಗೂ ಜೈಲಿನ ಭಯಕ್ಕೆ ಬಿದ್ದ ಆಕೆ, ಮೃತದೇಹಕ್ಕೆ ಗೌರವ ನೀಡುವ ಸೌಜನ್ಯವನ್ನೂ ಮರೆತಳು. ಗುಡ್ಡಿಯ ಶವವನ್ನು ಮರಳಿ ತನ್ನ ಕಾರಿನಲ್ಲಿ ತಂದು, ಅಪಾರ್ಟ್‌ಮೆಂಟ್‌ನ ಯಾವ ಪಾರ್ಕಿಂಗ್ ಜಾಗದಲ್ಲಿ ಅಪಘಾತ ನಡೆದಿತ್ತೋ, ಅದೇ ಕಾಂಕ್ರೀಟ್ ನೆಲದ ಮೇಲೆ ಶವವನ್ನು ಎಸೆದು ಯಾರಿಗೂ ಮಾಹಿತಿ ನೀಡದೆ ತನ್ನ ಮನೆಗೆ ಹೋಗಿ ಅವಿತುಕೊಂಡಿದ್ದಾಳೆ.

ಭುಗಿಲೆದ್ದ ಆಕ್ರೋಶ, ಸಿಸಿಟಿವಿ ತನಿಖೆ ತೀವ್ರ

ಮೃತ ಗುಡ್ಡಿಯ ಸೋದರಳಿಯ ಪಾರ್ಕಿಂಗ್‌ಗೆ ಬಂದಾಗ ಅತ್ತೆಯ ಶವ ಅನಾಥವಾಗಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ನೂರಾರು ನಿವಾಸಿಗಳು ಮತ್ತು ಮೃತರ ಸಂಬಂಧಿಕರು ಚಾಲಕಿಯ ಮನೆಯ ಮುಂದೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದರು.

ಮಾಹಿತಿ ಪಡೆದ ಸೆಕ್ಟರ್ 65 ರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಾವು ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಏರಿಯಾದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದೇವೆ. ಅಪಘಾತದ ನೈಜತೆ ಹಾಗೂ ಸಾಕ್ಷ್ಯ ನಾಶಪಡಿಸಲು ಶವವನ್ನು ತಂದು ಬಿಸಾಡಿದ ಆಂಗಲ್‌ನಲ್ಲಿ ತನಿಖೆ ನಡೆಸಿ ಚಾಲಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದಸರಾ ಕಂಬಳಕ್ಕೆ 8 ಕೋಟಿ ಕೊಡೋದಾದ್ರೆ, ಕರಾವಳಿ ಕಂಬಳಕ್ಕೆ 25 ಲಕ್ಷ ಕೊಡಿ: ಸುನೀಲ್​ ಕುಮಾರ್ ಆಗ್ರಹ​ – Kannada News | MLA Sunil Kumar Demands 25 Lakh Grant for Coastal Kambala Events

ಬೆಂಗಳೂರು, ಜುಲೈ 16: ‘‘ನಮ್ಮ ಸರ್ಕಾರದ ಅವಧಿಯಲ್ಲಿ ಕಂಬಳ ನಡೆಸಲು ಅನುದಾನ ನೀಡಿದ್ದರು. ಈಗ ಪ್ರತಿ ಕಂಬಳಕ್ಕೆ 5 ಲಕ್ಷ ರೂ. ಕೊಡಿ ಅಂತಾ ಕೇಳಿದ್ದೇವೆ ಕೊಟ್ಟಿಲ್ಲ. ಯಾವುದೋ ಒಂದು ಕಂಬಳಕ್ಕೆ 8 ಕೋಟಿ ರೂ ಕೊಡೋದಾದರೆ ದಕ್ಷಿಣ ಕನ್ನಡ ಕಂಬಳಕ್ಕೆ 25 ಲಕ್ಷ ರೂ ಕೊಡಿ’’ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್​​ ಆಗ್ರಹಿಸಿದ್ದಾರೆ. ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ವಿಚಾರವಾಗಿ ಮಾತನಾಡಿದ ಅವರು, ‘‘ದಸರಾದಲ್ಲಿ ಕಂಬಳ ನಡೆಸಬೇಕೋ, ಬೇಡವೋ ಅಂತಾ ಚರ್ಚೆ ಶುರುವಾಗಿದೆ. ಯಾವುದೇ ಉತ್ಸವ ಬೇರೆ ಪ್ರದೇಶಕ್ಕೆ ಹೋಗಲು ಭಿನ್ನಾಭಿಪ್ರಾಯವಿಲ್ಲ. ಕರಾವಳಿ ಕಂಬಳಕ್ಕೆ ಸಾಂಸ್ಕೃತಿಕ ಸೊಗಡು, ಧಾರ್ಮಿಕ ಭಾವನೆ ಇದೆ. ಅದನ್ನು ಬೇರೆಡೆಗೆ ಕೊಂಡೊಯ್ದಾಗ ಅದನ್ನು ಎಲ್ಲರೂ ಸ್ವೀಕರಿಸಬೇಕು. ನಾನೂ ಕೂಡ ಕಂಬಳ ಆಯೋಜಿಸುವ ವ್ಯಕ್ತಿ. ದಸರಾ ಸಮಿತಿ ಕಂಬಳ ಮಾಲೀಕರು, ಅಭಿಮಾನಿಗಳ ಜೊತೆ ಚರ್ಚಿಸಿಲ್ಲ. ಕೇವಲ ಒಬ್ಬರೇ ಕಂಬಳ ಮಾಡುವುದಾಗಿ ತೀರ್ಮಾನ ಸರಿಯಲ್ಲ, ಕಂಬಳ ಮಾಲೀಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿತ್ತು’’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

TV9 Kannada News Live: ಉಪಸಭಾಪತಿ ಎಂ.ಕೆ. ಪ್ರಾಣೇಶ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ಶಾಕ್: ಪರಿಷತ್ ಸದಸ್ಯತ್ವ ರದ್ದುಗೊಳಿಸಿ ಆದೇಶ; ಇಂದಿನ ಪ್ರಮುಖ ಸುದ್ದಿಗಳು – Kannada News | TV9 Kannada Live Breaking News 16 July 2026 CM DK Shivakumar, Karnataka Politics, Dharwad News Cinema Latest Updates Online

  • 16 Jul 2026 02:26 PM (IST)

    ಗದಗದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಣೆ ಯತ್ನ

    ಗದಗದಲ್ಲಿ ಅನ್ನಭಾಗ್ಯ ಯೋಜನೆಯ 32 ಟನ್ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಮತ್ತು ಪೊಲೀಸರು ಭೇದಿಸಿದ್ದಾರೆ. ಬಿಂಕದಕಟ್ಟೆ ಗ್ರಾಮದಲ್ಲಿ ಲಾರಿ ವಶಪಡಿಸಿಕೊಂಡಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾವೇರಿ ಎಪಿಎಂಸಿ ಹೆಸರಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಪ್ರಕರಣ ಸಂಬಂಧ ಚಾಲಕ ಮತ್ತು ಕ್ಲೀನರ್‌ನನ್ನು ಬಂಧಿಸಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 16 Jul 2026 01:40 PM (IST)

    ಮಂಗಳೂರು ಸಿಸಿಬಿ ಪೊಲೀಸರ ಮೆಗಾ ಆಪರೇಷನ್: ದೆಹಲಿಯಿಂದ ತರುತ್ತಿದ್ದ 5 ಕೋಟಿ ಮೌಲ್ಯದ 5 ಕೆಜಿ ಡ್ರಗ್ಸ್ ಬಾಗಲಕೋಟೆಯಲ್ಲಿ ಜಪ್ತಿ

    ಮಾದಕ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಅಂತರರಾಜ್ಯ ಡ್ರಗ್ಸ್ ಜಾಲದ ಬೆನ್ನೆಲುಬನ್ನೇ ಮುರಿದಿದ್ದಾರೆ. ದೇಶದ ರಾಜಧಾನಿ ದೆಹಲಿಯಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ 5 ಕೆಜಿ ತೂಕದ ಹೈಟೆಕ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಕುಖ್ಯಾತ ಪೆಡ್ಲರ್‌ಗಳನ್ನು ಬಾಗಲಕೋಟೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • 16 Jul 2026 01:38 PM (IST)

    ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಯತ್ನ; ಸಬ್ ಇನ್ಸ್‌ಪೆಕ್ಟರ್ ಈಗ ಜೈಲು ಪಾಲು

    ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಕೌಟುಂಬಿಕ ದೌರ್ಜನ್ಯ ಹಾಗೂ ಎರಡು ಮದುವೆ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಎರಡನೇ ಪತ್ನಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ, ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯ ಪ್ರೊಬೇಷನರಿ ಪಿಎಸ್ಐ (Probationary PSI) ದೊರೆನಾಯ್ಕ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

  • 16 Jul 2026 01:26 PM (IST)

    ಹೆಚ್​ಡಿಕೆ ಹೆಚ್​ಎಂಟಿಗೆ ಭೇಟಿ ಕೊಟ್ಟಿದ್ದು ಖುಷಿ ತಂದಿದೆ: ಸಚಿವ ಈಶ್ವರ ಖಂಡ್ರೆ

    ಬೆಂಗಳೂರಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹೆಚ್.ಎಂ.ಟಿ ಸಂಸ್ಥೆಯ ವಶದಲ್ಲಿರುವ ವಿವಾದಿತ ಅರಣ್ಯ ಭೂಮಿಯ ವಿಷಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಆರಂಭವಾಗಿವೆ. ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೆಚ್​ಎಂಟಿ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದನ್ನು ರಾಜ್ಯ ಅರಣ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಸ್ವಾಗತಿಸಿದ್ದಾರೆ. ಆದರೆ, ಇದರ ಜೊತೆಯಲ್ಲೇ “ಭೇಟಿ ನೀಡಿದ ಮೇಲಾದರೂ ಕುಮಾರಸ್ವಾಮಿ ಅವರು ತಮ್ಮ ನಿಲುವು ಬದಲಾಯಿಸಿ, ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡಲಿ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

  • 16 Jul 2026 01:24 PM (IST)

    ಸಿಎಂ ಡಿಕೆಶಿ ಬೆನ್ನಲ್ಲೇ ಪ್ರಧಾನಿಗೆ ಡಿಸಿಎಂ ಪರಮೇಶ್ವರ್ ಪತ್ರ

    ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ಬೆನ್ನಲ್ಲೇ, ಇದೀಗ ಉಪಮುಖ್ಯಮಂತ್ರಿ (ಕಂದಾಯ ಸಚಿವರೂ ಆಗಿರುವ) ಡಾ. ಜಿ. ಪರಮೇಶ್ವರ್ ಅವರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದಾರೆ. ರಾಜ್ಯದ ಕಷ್ಟದ ಪರಿಸ್ಥಿತಿಯನ್ನು ವಿವರಿಸಿ, ಹೆಚ್ಚುವರಿ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಅವರು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.

  • 16 Jul 2026 01:21 PM (IST)

    ದಕ್ಷಿಣ ಕನ್ನಡದಲ್ಲಿ ಅಕ್ರಮ ನೋಟು ಮುದ್ರಣ ಜಾಲ ಪತ್ತೆ

    ಸಾರ್ವಜನಿಕ ವಲಯ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ತಲೆನೋವಾಗಿದ್ದ ನಕಲಿ ನೋಟು ತಯಾರಿಸುವ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸುಧಾರಿತ ಮುದ್ರಣ ಯಂತ್ರಗಳನ್ನು ಜಪ್ತಿ ಮಾಡಿದ್ದಾರಲ್ಲದೆ, ಅಂತರರಾಜ್ಯ ಸಂಪರ್ಕ ಹೊಂದಿದ್ದ ಬರೋಬ್ಬರಿ 7 ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ.

  • 16 Jul 2026 12:51 PM (IST)

    ಸೆಪ್ಟೆಂಬರ್ ಒಳಗಾಗಿ ಧಾರ್ಮಿಕ ಕ್ಷೇತ್ರದಿಂದ ಆರಂಭವಾಗಲಿದೆ ಸಮಾಜವಾದಿ ಪಕ್ಷದ ಬೃಹತ್ ರಥಯಾತ್ರೆ

    ಉತ್ತರ ಪ್ರದೇಶದಲ್ಲಿ ಮುಂಬರುವ ಅತ್ಯಂತ ನಿರ್ಣಾಯಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ರಣಕಣ ರಂಗೇರಿದೆ. ಆಡಳಿತಾರೂಢ ಬಿಜೆಪಿಗೆ ಪ್ರಬಲ ಟಕ್ಕರ್ ನೀಡಲು ಸಜ್ಜಾಗಿರುವ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಹಾಗೂ ಯುಪಿಯ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಇಡೀ ರಾಜ್ಯಾದ್ಯಂತ ಬೃಹತ್ ರಥಯಾತ್ರೆ ಕೈಗೊಳ್ಳಲು ಭರ್ಜರಿ ತಾಲೀಮು ನಡೆಸಿದ್ದಾರೆ.

  • 16 Jul 2026 12:25 PM (IST)

    ಉಪಸಭಾಪತಿ ಎಂ.ಕೆ. ಪ್ರಾಣೇಶ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ಶಾಕ್: ಪರಿಷತ್ ಸದಸ್ಯತ್ವ ರದ್ದು

    ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಆಘಾತ ಎದುರಾಗಿದೆ. ಅವರ ವಿಧಾನ ಪರಿಷತ್ (ವಿಧಾನ ಪರಿಷತ್ತ್) ಸದಸ್ಯತ್ವವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಇದರೊಂದಿಗೆ ಅವರ ಎದುರಾಳಿಯಾಗಿದ್ದ ಗಾಯತ್ರಿ ಶಾಂತೇಗೌಡ ಅವರ ಕಾನೂನು ಹೋರಾಟಕ್ಕೆ ಕೊನೆಗೂ ಬಿಗ್ ವಿಕ್ಟರಿ ಸಿಕ್ಕಂತಾಗಿದೆ. ಇಲ್ಲಿದೆ ನೋಡಿ ಸ್ಟೋರಿ

  • 16 Jul 2026 10:58 AM (IST)

    ಆಧಾರ್, ಪಾಸ್‌ಪೋರ್ಟ್ ಮಾಡಿಸಿ ರಾಜಾರೋಷವಾಗಿ ತಿರುಗುತ್ತಿದ್ದ ಬಾಂಗ್ಲಾ ಪ್ರಜೆ ಈಗ ಜೈಲು ಪಾಲು

    ಭಾರತದ ಗಡಿ ದಾಟಿ ಅಕ್ರಮವಾಗಿ ದೇಶದೊಳಗೆ ನುಗ್ಗಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ದಶಕಕ್ಕೂ ಹೆಚ್ಚು ಕಾಲ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ಸಿಂಧನೂರಿನ ನ್ಯಾಯಾಲಯವು 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

  • 16 Jul 2026 10:08 AM (IST)

    ರೀಲ್ಸ್ ಸ್ಟಾರ್ ‘ಅಮುಕು ಡುಮುಕು’ ಮಂಜು ಕುಡಿದು ಬಾರ್ ಬಿಲ್ ಕೊಡದೆ ಮಹಿಳಾ ಸಿಬ್ಬಂದಿಗೆ ಕಾಟ

    ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಾಗೂ ವಿಡಿಯೋಗಳ ಮೂಲಕವೇ ಗುರುತಿಸಿಕೊಂಡಿದ್ದ ಪ್ರಖ್ಯಾತ ಇನ್‌ಫ್ಲುಯೆನ್ಸರ್ ಮಂಜು ಅಲಿಯಾಸ್ ‘ಅಮುಕು ಡುಮುಕು’ ಮತ್ತು ಆತನ ಸ್ನೇಹಿತರ ವಿರುದ್ಧ ಬೆಂಗಳೂರಿನಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ರೆಸ್ಟೋ ಬಾರ್‌ಗೆ ಹೋಗಿ ಮದ್ಯ ಹಾಗೂ ಊಟ ಸವಿದು ಬಿಲ್ ನೀಡಲು ನಿರಾಕರಿಸಿದಲ್ಲದೆ, ಅಲ್ಲಿನ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

  • 16 Jul 2026 09:49 AM (IST)

    ಕೊಡಗು ಹೋಂಸ್ಟೇ ಅತ್ಯಾಚಾರ ಪ್ರಕರಣ: ಮಾಲೀಕ ವಿಶಾಲ್ ಪೊನ್ನಪ್ಪಗೆ ಬಿಗ್ ರಿಲೀಫ್

    ಕೊಡಗು ಜಿಲ್ಲೆಯ ಹೋಂಸ್ಟೇ ಒಂದರಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ. ಪ್ರಕರಣದ ಆರೋಪ ಎದುರಿಸುತ್ತಿದ್ದ ಹೋಂಸ್ಟೇ ಮಾಲೀಕನ ಬಂಧನ ಹಾಗೂ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದು ಸಂಪೂರ್ಣ ಅಕ್ರಮ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ತೀರ್ಪು ನೀಡಿದೆ.

  • 16 Jul 2026 09:23 AM (IST)

    ಮನೆಗೆ ಬಂದು ಉಪಹಾರ ಸವಿದು 5 ಲಕ್ಷದ ಚಿನ್ನದ ಸರ ಎಗರಿಸಿದ ಸುಶೀಲಮ್ಮ ಬಂಧನ

    ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು.

  • 16 Jul 2026 09:22 AM (IST)

    ಹಣಕ್ಕಾಗಿ ಆಫ್ರಿಕಾದ ಸೆನಗಲ್ ದೇಶಕ್ಕೆ ಮಗಳನ್ನೇ ಮಾರಿದ ಪೋಷಕರು

    ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶಕ್ಕೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪವಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ಎಂಬುವವರೇ ಮಗಳು ನಂದಿತಾ (20) ಇಂಟರ್ನ್ಯಾಷನಲ್ ದಂಧೆಗೆ ಮಾರಿದ ತಂದೆ-ತಾಯಿ. ಹೆಚ್ಚಿನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

  • 16 Jul 2026 09:19 AM (IST)

    ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು

    ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದು, ಶಾಲಾ ಸಿಬ್ಬಂದಿಯ ಘೋರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

  • Source link

    Exit mobile version