ನೆಲಮಂಗಲ, ಮೇ 31: ಕಳೆದ ಎರಡು ದಿನಗಳಿಂದ ನಿರಂತರ ಮಳೆಗೆ (Rain) ಅವಘಡವೊಂದು ಸಂಭವಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಬೊಮ್ಮಶಟ್ಟಿಹಳ್ಳಿ ಗ್ರಾಮದಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ (death)ಘಟನೆ ನಡೆದಿದೆ. ಬೊಮ್ಮಶಟ್ಟಿಹಳ್ಳಿಯಲ್ಲಿ ದ್ಯಾಮಪ್ಪ ಮತ್ತು ಬಾಬುಲಾಲ್ ಮೃತರು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಮಳೆಗೆ ಮತ್ತೊಂದು ದುರಂತ
ಕೆಲಸ ಮಾಡುತ್ತಿದ್ದಾಗ ಗೋಡೆ ಕುಸಿದು ಕಾರ್ಮಿಕರ ಸಾವು
ಕಳೆದ 2 ದಿನಗಳಿಂದ ನಿರಂತರ ಮಳೆಗೆ ಕುಸಿದ ಗೋಡೆ
ನಡೆದಿದ್ದೇನು?
ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿದಿದೆ. ಇತ್ತ ಕಾರ್ಮಿಕರು ಪಟೇಲ್ ಎಂಬುವರಿಗೆ ಸೇರಿದ ಸೈಟ್‌ನಲ್ಲಿ ಗೋಡೆ ನಿರ್ಮಾಣದ ಕೆಲಸ ಮಾಡುತ್ತಿದ್ದರು. ಮಳೆಯಿಂದಾಗಿ ಕೆಲಸ ಮಾಡುತ್ತಿರುವಾಗಲೇ ಗೋಡೆ ಕುಸಿದು ಕಾರ್ಮಿಕರು ಇಬ್ಬರು ಸಾವನ್ನಪ್ಪಿದ್ದಾರೆ.
ದುರಂತ ನಂತರ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು, ಮೇ.31: ರಾಜಧಾನಿ ಬೆಂಗಳೂರಿನಲ್ಲಿ ವಿಐಪಿ ಸಂಸ್ಕೃತಿ ಮತ್ತು ಅಧಿಕಾರಿಗಳ ಭದ್ರತೆಯ ಹೆಸರಿನಲ್ಲಿ ಸಾಮಾನ್ಯ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಘಟನೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಅಂಡರ್‌ಪಾಸ್ ನಿರ್ಮಾಣ ಕಾರ್ಯದಿಂದಾಗಿ ಉಸಿರುಗಟ್ಟುತ್ತಿರುವ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road), ಇಂದು ರಾಜ್ಯಪಾಲರ (Governor) ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನರಕಸದೃಶ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಚಾರ ದಟ್ಟಣೆಯ ನಡುವೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಸಾರ್ವಜನಿಕರ ಕಣ್ಣು ತೇವವಾಗುವಂತೆ ಮಾಡಿದೆ. ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ತೀವ್ರ ಕಂಗಾಲಾಗಿದ್ದರು.
“ಸಾಮಾನ್ಯ ಸಾರ್ವಜನಿಕರ ಹಾಗೂ ರೋಗಿಗಳ ಅನುಕೂಲ ಮತ್ತು ಜೀವವು ವಿಐಪಿಗಳ ಸೌಕರ್ಯದಷ್ಟೇ ಮುಖ್ಯವಾಗುವುದು ಯಾವಾಗ?” ಎಂದು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಕಟುವಾಗಿ ಪ್ರಶ್ನಿಸಿದ್ದಾರೆ. ಅಂಡರ್‌ಪಾಸ್ ನಿರ್ಮಾಣ ಹಂತದಲ್ಲಿರುವ ಇಂತಹ ಸೂಕ್ಷ್ಮ ರಸ್ತೆಗಳಲ್ಲಿ ಗಣ್ಯರ ಸಂಚಾರಕ್ಕೆ ಗಂಟೆಗಟ್ಟಲೆ ಸಾರ್ವಜನಿಕರನ್ನು ತಡೆಯುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರು, ಮೇ 31: ಜೂನ್ 3ರಂದು ರಾಜ್ಯದ 25ನೇ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಟ್ಟಾಭಿಷೇಕಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಇದೇ ದಿನದಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಭವನದ ಶಂಕುಸ್ಥಾಪನೆಯನ್ನು ಆಯೋಜಿಸಲು ಸಿದ್ಧತೆಗಳು ನಡೆದಿವೆ. ಇನ್ನು ಪ್ರಮಾಣ ವಚನ ಸಮಾರಂಭಕ್ಕೆ ಎಲ್ಲ ನಾಯಕರಿಗೂ ಲೋಕಭವನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪದಾಧಿಕಾರಿಗಳಿಗಾಗಿ ಕಾಂಗ್ರೆಸ್ ಭವನದ ಆವರಣದಲ್ಲಿ ವಿಶೇಷ ವೇದಿಕೆ ಮತ್ತು ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಅವರು ಪ್ರಮಾಣ ವಚನ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ರಾಹುಲ್ ಗಾಂಧಿ ಅವರ ಅನುಮೋದನೆ ದೊರೆತರೆ, ಈ ಕಾರ್ಯಕ್ರಮಗಳು ಜೂನ್ 3ರಂದು ನಡೆಯಲಿದೆ.
ಪ್ರತಿ ಐಪಿಎಲ್ನಂತೆ ಈ ಬಾರಿಯ ಐಪಿಎಲ್ ಕೂಡ ವಿವಾದಗಳಿಂದ ಹೊರತಾಗಿರಲಿಲ್ಲ. ಈ ಆವೃತ್ತಿಯಲ್ಲೂ ಸಾಕಷ್ಟು ವಿವಾದಗಳು ಸೃಷ್ಟಿಯಾದವು. ಅದರಲ್ಲೂ ಮೂರನೇ ಅಂಪೈರ್ ನೀಡಿದ ಕೆಲವೊಂದು ತೀರ್ಪುಗಳು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದವು. ಅದರಲ್ಲಿ ಪ್ರಮುಖವಾದದ್ದು, ಲೀಗ್ ಹಂತದಲ್ಲಿ ಆರ್ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದರ್ ನೀಡಿದ ಕ್ಯಾಚ್ ಅನ್ನು ಜೇಸನ್ ಹೊಲ್ಡರ್ ಹಿಡಿದ ರೀತಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗಿದರೂ ಮೂರನೇ ಅಂಪೈರ್ ಅದನ್ನು ಔಟೆಂದು ತೀರ್ಪು ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಅದೇ ರೀತಿಯ ಕ್ಯಾಚ್ ಅನ್ನು ಆರ್ಸಿಬಿ ಹಿಡಿದಿತ್ತು. ಆದರೆ ಅದನ್ನು ಮಾತ್ರ ನಾಟೌಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಐಪಿಎಲ್ 2026 ರ ಫೈನಲ್ ಪಂದ್ಯ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಈ ಫೈನಲ್ ಪಂದ್ಯ ಮುಗಿಯುವುದಕ್ಕೆ ಮುನ್ನವೇ ಈ ಬಾರಿಯ ಆರೆಂಜ್ ಕ್ಯಾಚ್ ಯಾರ ಪಾಲಾಗಿದೆ ಎಂಬುದು ಖಚಿತವಾಗಿದೆ. ವಾಸ್ತವವಾಗಿ ಎಲ್ಲರಿಗೂ ತಿಳಿದಿರುವಂತೆ ಇಡೀ ಆವೃತ್ತಿಯಲ್ಲಿ ಯಾರು ಅತ್ಯಧಿಕ ರನ್ ಕಲೆಹಾಕುತ್ತಾರೋ ಅವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಈ ಆರೆಂಜ್ ಕ್ಯಾಪ್ ರೇಸ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದರು. ಆದಾಗ್ಯೂ ಅದರ ನಂತರದ ಎರಡು ಸ್ಥಾನಗಳಲ್ಲಿ ಗುಜರಾತ್ ತಂಡದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇದ್ದ ಕಾರಣ ಫೈನಲ್ ಪಂದ್ಯ ಮುಗಿದ ಬಳಿಕವಷ್ಟೇ ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದನ್ನು ಅಧಿಕೃತವಾಗಿ ಹೇಳಬಹುದಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಗಿಲ್ ಹಾಗೂ ಸುದರ್ಶನ್, ಸೂರ್ಯವಂಶಿ ಅವರನ್ನು ಮೀರಿಸದ ಕಾರಣ ಅವರಿಬ್ಬರು ಈ ರೇಸ್ನಿಂದ ಹೊರಬಿದ್ದಿದ್ದು, ವೈಭವ್ಗೆ ಈ ಕ್ಯಾಪ್ ಸಿಕ್ಕಿದೆ.
ಭಾರತೀಯ ಸಿನಿಮಾ ಸಂಗೀತ ಲೋಕದ ಅತ್ಯುತ್ತಮ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (sp balasubrahmanyam) ಅತ್ಯದ್ಭುತ ಗಾಯಕರಾಗಿದ್ದ ಜೊತೆಗೆ ಅದ್ಭುತ ನಟರೂ ಆಗಿದ್ದರು. ಅವರು ಕನ್ನಡದಲ್ಲಿ ‘ಮುದ್ದಿನ ಮಾವ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಪರಭಾಷೆಯ ಕೆಲ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಬಾಲಸುಬ್ರಹ್ಮಣ್ಯಂ ಸಾಮಾನ್ಯವಾಗಿ ಅಮಾಯಕ, ಮುಗ್ಧ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದರು. ಅವರು ನಟಿಸಿದ ಹಲವು ಸಿನಿಮಾಗಳು ಹಿಟ್ ಆಗಿರುವುದು ಮಾತ್ರವಲ್ಲ ಅವರ ಪಾತ್ರವೂ ಜನಪ್ರಿಯತೆ ಗಳಿಸಿವೆ. ಆದರೆ ಎಸ್ಪಿಬಿ ಅವರು ನಿಧನ ಹೊಂದುವುದಕ್ಕೆ ಮುಂಚೆ ನಟಿಸಿದ್ದ ಸಿನಿಮಾ ಒಂದು ದೊಡ್ಡ ಹಿಟ್ ಆಗಿತ್ತು. ಇದೀಗ ಆ ಸಿನಿಮಾ ಕನ್ನಡದಲ್ಲೂ ಬಿಡುಗಡೆ ಆಗುತ್ತಿದೆ.
ಕೋವಿಡ್ ಸಮಯದಲ್ಲಿ ನಿಧನ ಹೊಂದಿದ ಬಾಲಸುಬ್ರಹ್ಮಣ್ಯಂ ಅವರು ನಟಿಸಿದ ಕೊನೆಯ ಸಿನಿಮಾಗಳಲ್ಲಿ ಒಂದು ‘ಮಿಥುನಂ’. 2012 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಅನ್ನು ತನಿಕೇಳ ಭರಣಿ ನಿರ್ದೇಶನ ಮಾಡಿದ್ದರು. ವೃದ್ಧರಿಬ್ಬರ ಪ್ರೇಮಕತೆಯನ್ನು, ಜೀವನದ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುವ ಸಿನಿಮಾ ಅದಾಗಿತ್ತು. ಈ ತೆಲುಗು ಸಿನಿಮಾದ ಕನ್ನಡ ಅವತರಣಿಕೆ ಜೂನ್ 5 ರಂದು ಬಿಡುಗಡೆಯಾಗಲಿದೆ. ಜೂನ್ 4 ಎಸ್ ಪಿ ಬಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಹರಿದಾಸರ ಚಿತ್ರಗಳ ನಿರ್ದೇಶಕರೆಂದೆ ಹೆಸರಾಗಿರುವ ಮಧುಸೂದನ್ ಹವಾಲ್ದಾರ್ ಹಾಗೂ ತ್ರಿವಿಕ್ರಮ ಜೋಶಿ ಅವರ ಸಾರಥ್ಯದಲ್ಲಿ ಈ ಚಿತ್ರದ ಕನ್ನಡದ ಅವತರಣಿಕೆ ಸಿದ್ದವಾಗಿದೆ. ಶ್ರೀದೇವಿ ಶ್ರೀನಿವಾಸ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ಬಿಡುಗಡೆ ಸಮಾರಂಭ ಹಾಗೂ ಪೂರ್ವಭಾವಿ ಪ್ರದರ್ಶನ ನಡೆಯಿತು. ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಸುಂದರರಾಜ್, ಎಸ್ ಪಿ ಬಿ ಅವರ ಆಪ್ತರಾದ ಗೋಪಿ, ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ಶ್ರೀದೇವಿ ಶ್ರೀನಿವಾಸ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಎಸ್ ಪಿ ಬಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ‘ಮಿಥುನಂ’ ಚಿತ್ರದ ಕನ್ನಡದ ಅವತರಣಿಕೆ ಯಶಸ್ವಿಯಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಧುಸೂದನ್ ಹವಾಲ್ದಾರ್, ನನಗೆ ತನಿಕೆಳ್ಳ ಭರಣಿ ಅವರು ಪರಿಚಯ. ಅವರ ಬಳಿ ಈ ಸಿನಿಮಾದ ರೈಟ್ಸ್ ಕೇಳಿದಾಗ, ಅವರು ನಿರ್ಮಾಪಕರನ್ನು ಕೇಳಿ ಎಂದರು. ನಿರ್ಮಾಪಕರು ಕನ್ನಡದಲ್ಲಿ ಬಿಡುಗಡೆ ಮಾಡುವುದಕ್ಕೆ ಖುಷಿಯಿಂದ ರೈಟ್ಸ್ ನೀಡಿದರು. ಅದರೆ ಚಿತ್ರವನ್ನು ಆರು ತಿಂಗಳಲ್ಲಿ ಬಿಡುಗಡೆ ಮಾಡಬೇಕು ಮತ್ತು ಎಸ್ ಪಿ ಬಿ ಅವರ ಧ್ವನಿಗೆ ಯಾವುದೇ ಧಕ್ಕೆ ಬಾರದ ಹಾಗೆ ಅಂತಹವರಿಂದ ಡಬ್ಬಿಂಗ್ ಮಾಡಿಸ ಬೇಕು ಎಂದರು. ಕನ್ನಡದಲ್ಲಿ ಪ್ರಭಾಕರ್ ಅವರ ಧ್ವನಿ ಕೇಳಿದಾಗ ಎಸ್ ಪಿ ಬಿ ಅವರ ಧ್ವನಿ ಕೇಳಿದ ಹಾಗೆ ಅನಿಸುತ್ತದೆ. ಇನ್ನೂ, ಈ ಚಿತ್ರ ಹದಿನೈದು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು, ಆಗಿನ ಸೆನ್ಸಾರ್ ಮಂಡಳಿ ನಿಯಮಗಳಿಗೂ ಈಗಿನ ನಿಯಮಗಳಿಗೂ ವ್ಯತ್ಯಾಸವಿದೆ. ಅನಿಮಲ್ ಬೋರ್ಡ್ ಪರ್ಮಿಷನ್ ದೊರಕುವುದು ಸ್ವಲ್ಪ ತಡವಾಗಿರುವುದರಿಂದ ಕನ್ನಡದ ಅವತರಣಿಕೆ ಬಿಡುಗಡೆ ಸ್ವಲ್ಪ ತಡವಾಯಿತು. ಈಗ ಜೂನ್ 5 ರಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಪವರ್ಪ್ಲೇನಲ್ಲೇ ಅಂದರೆ ಮೊದಲ 6 ಓವರ್ಗಳಲ್ಲೇ ತನ್ನ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದ ನಾಯಕ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರ ವಿಕೆಟ್ ಕಳೆದುಕೊಂಡಿದೆ. ಈ ಎರಡು ವಿಕೆಟ್ಗಳು ಕೇವಲ 26 ರನ್ಗಳಿಗೆ ಪತನವಾದವು. ಇದರ ಪರಿಣಾಮವಾಗಿ ಗುಜರಾತ್ ಪವರ್ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ.
ಬೆಳಗಾವಿ, ಮೇ 31: ರಾಜ್ಯ ರಾಜಕೀಯ ವಲಯದಲ್ಲಿ ಪ್ರಭಾವಿ ನಾಯಕರಾಗಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ಫೇಸ್‌ಬುಕ್‌ನಲ್ಲಿ ಸುಳ್ಳು ವದಂತಿ ಹರಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡು ಫೇಸ್‌ಬುಕ್ ಪೇಜ್‌ಗಳ ಅಡ್ಮಿನ್‌ಗಳ ವಿರುದ್ಧ ಬೆಳಗಾವಿ (belagavi) ಜಿಲ್ಲಾ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮುಖ್ಯಾಂಶಗಳು
ಸತೀಶ್ ಜಾರಕಿಹೊಳಿ ವಿರುದ್ಧ ಫೇಸ್‌ಬುಕ್ ಪೋಸ್ಟ್ ಹರಿಬಿಟ್ಟ ಕಿಡಿಗೇಡಿಗಳು
ಬೆಳಗಾವಿ ಸೈಬರ್ ಕ್ರೈಂ ಪೊಲೀಸರಿಂದ FIR
ಸತೀಶ್ ಜಾರಕಿಹೊಳಿ ಬೆಂಗಲಿಗರಿಂದ ದೂರು
ಸಿದ್ದರಾಮಯ್ಯಗೆ ದ್ರೋಹ ಬಗೆದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಹರಿಬಿಡಲಾಗಿತ್ತು. ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಬೆಳಗಾವಿಯ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಇನ್ನು ಈ ಬಗ್ಗೆ ರಾಜಶೇಖರ್ ತಳವಾರ ಎಂಬುವವರು ದೂರು ನೀಡಿದ್ದಾರೆ. ‘ಕರುನಾಡು ಕುರುಬಗೌಡ್ರು’ ಮತ್ತು ‘ಬಂಡಾಯದ ಧ್ವನಿ’ ಎಂಬ ಎರಡು ನಕಲಿ ಫೇಸ್‌ಬುಕ್ ಖಾತೆಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದ್ರೋಹ ಮಾಡಿದ್ದಾರೆ. ಸಿದ್ದರಾಮಯ್ಯನವರ ಜೊತೆಯಲ್ಲೇ ಇದ್ದುಕೊಂಡು ಅವರ ವಿರುದ್ಧವೇ ಸುಮಾರು 32-37 ಶಾಸಕರ ಸಹಿ ಸಂಗ್ರಹಿಸಿ, ಆ ಪಟ್ಟಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಒಟ್ಟಿಗೆ ಕುಳಿತಿರುವ ಫೋಟೋವನ್ನು ಎಡಿಟ್ ಮಾಡಿ ಅಪಪ್ರಚಾರ ಮಾಡಲಾಗಿದೆ.
ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಹಾಳುಮಾಡುವುದು ಇದರ ಒಂದು ಉದ್ದೇಶ. ಜೊತೆಗೆ, ಈ ಪೋಸ್ಟ್‌ಗಳ ಮೂಲಕ ಕುರುಬ ಮತ್ತು ವಾಲ್ಮೀಕಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಿ, ಸಾರ್ವಜನಿಕ ಶಾಂತಿ ಕದಡಿ ಗಲಭೆ (ದೊಂಬಿ) ಸೃಷ್ಟಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಈ ಎರಡು ನಕಲಿ ಫೇಸ್‌ಬುಕ್ ಖಾತೆಗಳ ಹಿಂದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರ್ ತಳವಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಜ್ಜಿ ಮನೆ ಎಂದರೆ ಎಲ್ಲಾ ಮೊಮ್ಮಕ್ಕಳಿಗೂ (grandchildren) ಸ್ವರ್ಗ. ಬಾಲ್ಯದ ಸುಂದರ ಬೇಸಿಗೆ ನೆನಪುಗಳು ಬೆಸೆದುಕೊಂಡಿರುವುದು ಅದೇ ಮನೆಯಲ್ಲಿ. ಬೇಸಿಗೆ ರಜೆ (summer vacation) ಶುರುವಾಗುತ್ತಿದ್ದಂತೆ ಯಾವಾಗ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಅದೆಷ್ಟೋ ಮಕ್ಕಳು ಕಾಯುತ್ತಾರೆ. ಅಜ್ಜಿಯ ಮಡಿಲಲ್ಲಿ ಮಲಗಿ ಕಥೆಗಳನ್ನು ಕೇಳುವುದು, ಅಜ್ಜನ ಜತೆಗೆ ಊರು ಸುತ್ತುವುದು ಇಂತಹ ನೆನಪುಗಳು ಒಂದೆರಡಲ್ಲ. ಹಳ್ಳಿಗಳಲ್ಲಿನ ಅಜ್ಜಿ ಮನೆಯ ಅನುಭವವು ಇಂದಿಗೂ ಅಷ್ಟೇ ಅಮೂಲ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಬೇಸಿಗೆ ರಜೆ ಮುಗಿಸಿ ತನ್ನ ಮನೆಗೆ ಹೊರಡು ನಿಂತಿರುವ ಮೊಮ್ಮಗನನ್ನು ತಬ್ಬಿಕೊಂಡು ಅಳುತ್ತಾ ನಿಂತಿರುವ ಹಿರಿಜೀವದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಪೋಲೋ ಇಂಗ್ಲಿಷ್ ಸ್ಕೂಲ್ ದೊಂಬರಹಳ್ಳಿ (Apollo English School Dombarahalli) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಬೇಸಿಗೆ ರಜೆ ತನ್ನ ಅಜ್ಜಿ ಮನೆಗೆ ಬಂದ ಮೊಮ್ಮಗ ಮತ್ತೆ ಮನೆಗೆ ಕಳುಹಿಸಿ ಕೊಡುವ ದೃಶ್ಯ ಕಾಣಬಹುದು. ಕಾರು ಹತ್ತಿ ಕುಳಿತಿರುವ ಮೊಮ್ಮಗನನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತಿರುವ ಅಜ್ಜಿಯನ್ನು ನೀವಿಲ್ಲಿ ಕಾಣಬಹುದು. ಅಜ್ಜಿಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದೇ ಮೊಮ್ಮಗನು ಕಣ್ಣೀರು ಹಾಕುತ್ತಿದ್ದಾನೆ.
ಈ ವಿಡಿಯೋ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆ ದಿನಗಳು ಮತ್ತೆ ಮರಳಿ ಕೇಳುವೆ ಎಂದಿದ್ದಾರೆ. ಇನ್ನೊಬ್ಬರು, ನನ್ನ ಅಜ್ಜಿಯ ಮನೆಯ ನೆನಪಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿ ತಾತ ಇದ್ರೆ ಅಪ್ಪ ಅಮ್ಮನನ್ನೇ ಮರೆತು ಬಿಡ್ತೇವೆ ಅಂತಹ ಪ್ರೀತಿ ಅದು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷದಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ, ಸೇರಿ ಐದು ಕಡೆ ವಿಧಾನಸಭಾ ಚುನಾವಣೆಗಳು (Five states assembly elections 2026) ನಡೆದಿದ್ದವು. ಕೇರಳದಿಂದ ಹಿಡಿದು ಅಸ್ಸಾಮ್ವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಮೂರರಲ್ಲಿ ವಿಕ್ರಮ ಸಾಧಿಸಿದೆ. ಚುನಾವಣೆಗಳ ನಂತರ ಹೊಸದಾಗಿ ರಚನೆಯಾದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೊದಲ 15 ದಿನಗಳ ಪ್ರಮುಖ ಅಂಶಗಳ ವಿವರವಾದ ಮಾಹಿತಿ ಇಲ್ಲಿದೆ.
1. ಕೇರಳ (ಯುಡಿಎಫ್ ಸರ್ಕಾರ)
ಮುಖ್ಯಮಂತ್ರಿ: ವಿ.ಡಿ. ಸತೀಶನ್
ಆರಂಭಿಕ ಸಂಕಷ್ಟಗಳು ಮತ್ತು ವಿಳಂಬ: ವಿ.ಡಿ. ಸತೀಶನ್ ಮತ್ತು ಕೆ.ಸಿ. ವೇಣುಗೋಪಾಲ್ ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಸಿಎಂ ಹೆಸರಿಸಲು 10 ದಿನಗಳ ಕಾಲ ವಿಳಂಬವಾಯಿತು. ಇದು ಯುಡಿಎಫ್‌ನ ಆಡಳಿತಾತ್ಮಕ ಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಸಾಂಕೇತಿಕತೆ ಮತ್ತು ವಿರೋಧ: ಪ್ರಮಾಣವಚನ ಸ್ವೀಕಾರದ ವೇಳೆ ಸಿಎಂ ತಮ್ಮ ಪೂರ್ಣ ಹೆಸರನ್ನು (ತಂದೆಯ ಜಾತಿ ಗುರುತು ಸೇರಿ) ಬಳಸಿದ್ದಕ್ಕೆ ಟೀಕೆ ವ್ಯಕ್ತವಾಯಿತು. ಇದು ಕಾಂಗ್ರೆಸ್‌ನ ಜಾತಿ-ವಿರೋಧಿ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ವಿಮರ್ಶಕರು ವಾದಿಸಿದರು. ಜೊತೆಗೆ ಆರು ಚರಣಗಳ ವಂದೇ ಮಾತರಂ ಹಾಡಿದ್ದೂ ವಿವಾದ ಸೃಷ್ಟಿಸಿತು.
ಖಾತೆ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯಗಳು: ಮೀನುಗಾರಿಕೆ ಮತ್ತು ಉನ್ನತ ಶಿಕ್ಷಣ ಖಾತೆಗಳ ಕುರಿತು ಕಾಂಗ್ರೆಸ್ ಮತ್ತು ಐಯುಎಂಎಲ್ ನಡುವಿನ ಘರ್ಷಣೆಯಿಂದಾಗಿ ಖಾತೆ ಹಂಚಿಕೆ ವಿಳಂಬವಾಯಿತು. ಕ್ಯಾಥೋಲಿಕ್ ಸಮುದಾಯದ ಅಸಮಾಧಾನವನ್ನು ಶಮನಗೊಳಿಸಲು ಚರ್ಚ್ ಪ್ರತಿನಿಧಿಗಳೊಂದಿಗೆ ತ್ವರಿತ ಮಾತುಕತೆ ನಡೆಸಬೇಕಾಯಿತು.
ಆರಂಭಿಕ ಕಾನೂನು ಮತ್ತು ಸುವ್ಯವಸ್ಥೆ ಸವಾಲುಗಳು: ಎರ್ನಾಕುಲಂನಲ್ಲಿ ಜಲಫಿರಂಗಿ ಬಳಸಿ ಏಳು ಪರಿಶಿಷ್ಟ ಜಾತಿ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದು ಮತ್ತು ಹಿಂದಿನ ಎಲ್‌ಡಿಎಫ್ ಸರ್ಕಾರಕ್ಕೆ ಆಪ್ತರಾಗಿದ್ದ ಪೊಲೀಸ್ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ರಾಜಕೀಯ ದ್ವೇಷದ ಆರೋಪಗಳಿಗೆ ಕಾರಣವಾಯಿತು.
ಮುನಂಬಂ ವಕ್ಫ್ ವಿವಾದ ಮರುಕಳಿಸುವಿಕೆ: ವಿವಾದಿತ ಭೂಮಿಯನ್ನು UMEED ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ್ದರಿಂದ 600 ಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳು ಆತಂಕಗೊಂಡಿವೆ. ಸಿಎಂ ಯಾವುದೇ ಒಕ್ಕಲೆಬ್ಬಿಸುವಿಕೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರೂ, ನಿಖರವಾದ ಪರಿಹಾರ ಇನ್ನೂ ದೊರೆತಿಲ್ಲ.
ಬಲವಾದ ಜನಾದೇಶ ಮತ್ತು ರಾಜಕೀಯ ಸ್ಥಿರತೆ: 126 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಪ್ರಬಲ ಜನಾದೇಶ ಪಡೆಯಿತು. ಇದು ತನ್ನ ನೀತಿ ಆದ್ಯತೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಮತ್ತು ಆಡಳಿತದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದೆ.
ಉದ್ಯೋಗ ಸೃಷ್ಟಿ ಅಭಿಯಾನ: ಐದು ವರ್ಷಗಳಲ್ಲಿ 2 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವ ಬೃಹತ್ ಉದ್ಯೋಗ ಯೋಜನೆಯನ್ನು ಕಾರ್ಯಗತಗೊಳಿಸಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ.
ಹಣಕಾಸು ಶಿಸ್ತು (ಮಿತವ್ಯಯ ಕ್ರಮಗಳು): ಇಂಧನ ಬಳಕೆಯಲ್ಲಿ 20% ಕಡಿತ, ಅಧಿಕಾರಿಗಳ ವಾಹನಗಳ ಬೆಂಗಾವಲು ಪಡೆಯ ಕಡಿತ, ಅಧಿಕೃತ ಬಳಕೆಗೆ ವಿದೇಶಿ ವಸ್ತುಗಳ ನಿಷೇಧ ಮತ್ತು ಭೌತಿಕ ಸೆಮಿನಾರ್‌ಗಳ ಬದಲಿಗೆ ವಿಡಿಯೋ ಕಾನ್ಫರೆನ್ಸಿಂಗ್‌ಗೆ ಬದಲಾಯಿಸುವ ಆರು-ತಿಂಗಳ ಕಠಿಣ ಮಿತವ್ಯಯ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಡಿಜಿಟಲ್ ಏಕೀಕರಣ: ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ವಿಶ್ಲೇಷಣೆಗಳೊಂದಿಗೆ ಇಲಾಖೆಗಳಾದ್ಯಂತ ಡೇಟಾವನ್ನು ಏಕೀಕರಿಸಲು ಡೇಟಾ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸುವ ಅಸ್ಸಾಂ ರಾಜ್ಯ ಡೇಟಾ ನೀತಿ (ASDP) 2026 ಕ್ಕೆ ಅನುಮೋದನೆ ನೀಡಲಾಯಿತು.
ಸಮಾನ ನಾಗರಿಕ ಸಂಹಿತೆ (UCC) ಮಸೂದೆ, 2026: ಯುಸಿಸಿ ಚೌಕಟ್ಟನ್ನು ಪರಿಚಯಿಸಿದ ಮೂರನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ. ಈ ಮಸೂದೆಯು ಮದುವೆ/ವಿಚ್ಛೇದನಗಳನ್ನು 60 ದಿನಗಳಲ್ಲಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸುತ್ತದೆ, ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸುತ್ತದೆ, ಬಹುಪತ್ನಿತ್ವವನ್ನು ನಿಷೇಧಿಸುತ್ತದೆ ಮತ್ತು 2024 ರ ಮುಸ್ಲಿಂ ವಿವಾಹ ನೋಂದಣಿ ಕಾಯ್ದೆಯನ್ನು ಬದಲಾಯಿಸುತ್ತದೆ.
3. ಪಶ್ಚಿಮ ಬಂಗಾಳ (ಬಿಜೆಪಿ ಸರ್ಕಾರ)
ಮುಖ್ಯಮಂತ್ರಿ: ಸುವೇಂದು ಅಧಿಕಾರಿ
ಐತಿಹಾಸಿಕ ರಾಜಕೀಯ ಬದಲಾವಣೆ: 294 ಸ್ಥಾನಗಳ ಪೈಕಿ 207 ಸ್ಥಾನಗಳನ್ನು ಗೆದ್ದು ಮಮತಾ ಬ್ಯಾನರ್ಜಿ ಅವರ ಸತತ ಮೂರು ಅವಧಿಯ ಟಿಎಂಸಿ ಆಡಳಿತವನ್ನು ಅಂತ್ಯಗೊಳಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ.
ರಾಷ್ಟ್ರೀಯ ಯೋಜನೆಗಳ ಜೋಡಣೆ: ಗಡಿ ಬೇಲಿ ನಿರ್ಮಾಣಕ್ಕಾಗಿ ಬಿಎಸ್‌ಎಫ್‌ಗೆ ತ್ವರಿತವಾಗಿ ಭೂಮಿ ಮಂಜೂರು ಮಾಡಲಾಯಿತು. ಜೊತೆಗೆ ಬಹುಕಾಲದಿಂದ ಬಾಕಿ ಉಳಿದಿದ್ದ ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್ ಮತ್ತು ಉಜ್ವಲ ಯೋಜನೆಗಳನ್ನು ಹಾಗೂ ರಾಷ್ಟ್ರೀಯ ಜನಗಣತಿಯನ್ನು ಜಾರಿಗೊಳಿಸಲಾಯಿತು.
ಸಿಂಡಿಕೇಟ್‌ಗಳ ಮೇಲೆ ಕಠಿಣ ಕ್ರಮ: ಸ್ಥಳೀಯ ಸಿಂಡಿಕೇಟ್‌ಗಳು, ಅಕ್ರಮ ಗಣಿಗಾರಿಕೆ ಮತ್ತು ಜಾನುವಾರು ಕಳ್ಳಸಾಗಣೆ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಲಾಯಿತು. ಶಾಸನಬದ್ಧವಲ್ಲದ ಸಂಸ್ಥೆಗಳು ಮತ್ತು ಪಿಎಸ್‌ಯುಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ವಜಾಗೊಳಿಸಲಾಯಿತು.
ಸಾಂಸ್ಕೃತಿಕ ಮತ್ತು ನಾಗರಿಕ ಸುಧಾರಣೆಗಳು: ರಾಜ್ಯದ ಸಾರ್ವಜನಿಕ ಮೂಲಸೌಕರ್ಯಗಳ ಬಣ್ಣವನ್ನು ನೀಲಿ-ಬಿಳಿಯಿಂದ ಹಳದಿ-ಬಿಳಿಗೆ ಬದಲಾಯಿಸಲಾಯಿತು. ಶಾಲೆಗಳು ಮತ್ತು ಮದರಸಾಗಳಲ್ಲಿ ವಂದೇ ಮಾತರಂ ಅನ್ನು ಕಡ್ಡಾಯಗೊಳಿಸಲಾಯಿತು ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸಲಾಯಿತು.
ಸಮಾಜ ಕಲ್ಯಾಣ ಮತ್ತು ಒಬಿಸಿ ಪರಿಶೀಲನೆ: ಅನ್ನಪೂರ್ಣ ಯೋಜನೆ (₹3,000 ಮಾಸಿಕ ಆರ್ಥಿಕ ನೆರವು) ಗೆ ಅನುಮೋದನೆ, ಸಿಎಎ ಅರ್ಜಿದಾರ ಮಹಿಳೆಯರಿಗೆ ಸೌಲಭ್ಯಗಳ ವಿಸ್ತರಣೆ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಪರಿಚಯಿಸಲಾಯಿತು. ಅದೇ ಸಮಯದಲ್ಲಿ ಒಬಿಸಿ ಪಟ್ಟಿಯನ್ನು ಪರಿಶೀಲಿಸಲು 1.69 ಕೋಟಿ ಜಾತಿ ಪ್ರಮಾಣಪತ್ರಗಳ ಮರು-ಪರಿಶೀಲನೆಗೆ ಆದೇಶಿಸಲಾಯಿತು ಮತ್ತು 2026 ರ ಜೂನ್‌ನಿಂದ ಧರ್ಮ-ಆಧಾರಿತ ಸಹಾಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಯಿತು.
ಎರಡು ಪಕ್ಷಗಳ ಪ್ರಾಬಲ್ಯದ ಅಂತ್ಯ: ಹೊಸದಾಗಿ ರಚನೆಯಾದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ (108 ಸ್ಥಾನಗಳು) ಹೊರಹೊಮ್ಮುವ ಮೂಲಕ ದಶಕಗಳ ಡಿಎಂಕೆ-ಎಐಎಡಿಎಂಕೆ ಪ್ರಾಬಲ್ಯವನ್ನು ಕೊನೆಗೊಳಿಸಿತು. ಆದಾಗ್ಯೂ, ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ, ಐಯುಎಂಎಲ್ ಸೇರಿದಂತೆ ವಿವಿಧ ಮೈತ್ರಿಕೂಟಗಳ ಮೇಲಿನ ಅವಲಂಬನೆಯಿಂದಾಗಿ ಆರಂಭಿಕ ಸರ್ಕಾರ ರಚನೆಯು ವಿಳಂಬವಾಯಿತು.
ಕಲ್ಯಾಣ ಯೋಜನೆಗಳ ಕಡಿತದ ಟೀಕೆಗಳು: ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಬದಲಿಗೆ, ಎರಡು ತಿಂಗಳಿಗೊಮ್ಮೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಯಿತು. 5 ಎಕರೆವರೆಗಿನ ಕೃಷಿ ಸಾಲ ಮನ್ನಾದ ಬದಲಿಗೆ ಸಣ್ಣ ರೈತರಿಗೆ ₹50,000 ಕ್ಕೆ ಸಾಲ ಮನ್ನಾವನ್ನು ಸೀಮಿತಗೊಳಿಸಿದ್ದು ಟೀಕೆಗೆ ಗುರಿಯಾಯಿತು.
ಆಡಳಿತಾತ್ಮಕ ಎಡವಟ್ಟು: ಸಿಎಂ ಅವರ ಜ್ಯೋತಿಷಿಯನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ (ರಾಜಕೀಯ) ನೇಮಕ ಮಾಡಿದ್ದು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು, ಮತ್ತು 24 ಗಂಟೆಗಳ ಒಳಗೆ ಈ ನೇಮಕಾತಿಯನ್ನು ಹಿಂಪಡೆಯಲಾಯಿತು.
ಖಾತೆ ವಿಳಂಬ ಮತ್ತು ಟೆಂಡರ್ ರದ್ದತಿ: ಪ್ರಮಾಣ ವಚನ ಸ್ವೀಕರಿಸಿದ ನಂತರವೂ ಆರು ದಿನಗಳ ಕಾಲ ಖಾತೆಗಳನ್ನು ಹಂಚಿಕೆ ಮಾಡದಿರುವುದು ಮೈತ್ರಿಕೂಟದೊಳಗಿನ ಘರ್ಷಣೆಯನ್ನು ಎತ್ತಿತೋರಿಸಿತು. ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ₹16.83 ಲಕ್ಷದ ಲೋಕೋಪಯೋಗಿ ಕಾಮಗಾರಿ ಟೆಂಡರ್ ಅನ್ನು ತ್ವರಿತವಾಗಿ ರದ್ದುಗೊಳಿಸಬೇಕಾಯಿತು.
ಮೂಲಸೌಕರ್ಯ ಮತ್ತು ಭದ್ರತಾ ಸವಾಲುಗಳು: ಚೆನ್ನೈನಲ್ಲಿ ವ್ಯಾಪಕ ವಿದ್ಯುತ್ ಕಡಿತವು ವಿದ್ಯುತ್ ಸಬ್ಸಿಡಿಯ ಘೋಷಣೆಗಳನ್ನು ಮಂಕಾಗಿಸಿತು. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಕೊಯಮತ್ತೂರಿನಲ್ಲಿ ನಡೆದ ಗಂಭೀರ ಅಪರಾಧದ ಬಗ್ಗೆ ಸರ್ಕಾರದ ಅಸೂಕ್ಷ್ಮ ಸಂವಹನ ವಿಧಾನದ ಬಗ್ಗೆ ಸಾರ್ವಜನಿಕರ ಆಕ್ರೋಶ ಹೆಚ್ಚಾಯಿತು.
5. ಪುದುಚೇರಿ (ಎನ್‌ಡಿಎ ಸರ್ಕಾರ)
ಮುಖ್ಯಮಂತ್ರಿ: ಎನ್. ರಂಗಸ್ವಾಮಿ
ತಡೆರಹಿತ ನಿರಂತರತೆ: 30 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರಕ್ಕೆ ಬಂದ ಆಡಳಿತವು ತ್ವರಿತ ಮೂಲಸೌಕರ್ಯ ಮತ್ತು ಆರ್ಥಿಕ ಪುನರುಜ್ಜೀವನದ ಮೇಲೆ ಹೆಚ್ಚು ಗಮನಹರಿಸಿತು.
ಸಂಪರ್ಕ ಮೈಲಿಗಲ್ಲು: ಧಾರ್ಮಿಕ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ, 40 ವರ್ಷಗಳ ಅಂತರದ ನಂತರ ತಿರುನಳ್ಳಾರ್ ಮೂಲಕ ಕಾರೈಕಾಲ್-ಪೆರಲಂ ರೈಲು ಮಾರ್ಗವನ್ನು ಯಶಸ್ವಿಯಾಗಿ ಮರುಸ್ಥಾಪಿಸಲಾಯಿತು.
ಹಸಿರು ಇಂಧನಕ್ಕೆ ಉತ್ತೇಜನ: ಮೇಲ್ಛಾವಣಿ ಸೌರ ಫಲಕಗಳ ಅಳವಡಿಕೆಗಾಗಿ ಪಿಎಂ ಸೂರ್ಯ ಘರ್ ಯೋಜನೆಯಡಿ ಹೆಚ್ಚುವರಿಯಾಗಿ ₹30,000 ರಾಜ್ಯ ಸಬ್ಸಿಡಿಯನ್ನು ಘೋಷಿಸಲಾಯಿತು. ಇದು 13,000 ಕೆಳ-ಮಧ್ಯಮ-ಆದಾಯದ ಕುಟುಂಬಗಳನ್ನು ಗುರಿಯಾಗಿಸಿಕೊಂಡಿದೆ.
ವಸತಿ ಮತ್ತು ಸಾಲ ಪರಿಹಾರ: ಕಾಮರಾಜರ್ ಶತಮಾನೋತ್ಸವ ಕಲ್ಲಿನ ಮನೆ ನಿರ್ಮಾಣ ಯೋಜನೆಯಡಿ 8,600 ಕುಟುಂಬಗಳಿಗೆ ಬಡ್ಡಿ ಹೊರೆಯನ್ನು ಮನ್ನಾ ಮಾಡುವ ಮೂಲಕ ಪರಿಹಾರ ಒದಗಿಸಲಾಯಿತು. ಕೇವಲ ಅಸಲನ್ನು ಪಾವತಿಸುವ ಮೂಲಕ ತಮ್ಮ ಭೂಮಿಯ ಹಕ್ಕುಗಳನ್ನು ಮರಳಿ ಪಡೆಯಲು ಅವಕಾಶ ನೀಡಲಾಯಿತು.