ಬೆಂಗಳೂರಿನ ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ವಿದ್ಯಾರ್ಥಿನಿ ತೇಜು ಆತ್ಮಹತ್ಯೆ – Kannada News | Bengaluru Tragedy: 20 Year Old College Student Teju Found Dead in Sankey Tank

ಬೆಂಗಳೂರು, ಜುಲೈ 7: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ 20 ವರ್ಷದ ವಿದ್ಯಾರ್ಥಿನಿ ತೇಜು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ. ಯುವತಿಯ ಶವವು ಇಂದು (ಜುಲೈ 7) ಬೆಳಗಿನ ಜಾವ ಸ್ಯಾಂಕಿ ಕೆರೆಯಲ್ಲಿ ಪತ್ತೆಯಾಗಿದೆ. ಸದಾಶಿವನಗರ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತೇಜು ತನ್ನ ಪ್ರಿಯಕರನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿ, ನಂತರ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ತೇಜು ಪೋಷಕರು ವಿಚ್ಛೇದನ ಪಡೆದಿದ್ದು, ತಾಯಿ ಮೆಟ್ರೋದಲ್ಲಿ ಕೆಲಸ ಮಾಡುತ್ತಾರೆ. ಆಕೆ ಚಿಕ್ಕಬಾಣಾವರ ಸಮೀಪದ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದರು.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತೇಜು ಅವರ ಕುಟುಂಬಸ್ಥರಿಂದ ಮತ್ತು ಪ್ರಿಯಕರನಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ (SOCO) ತಂಡವನ್ನು ಕರೆಸಲಾಗಿದ್ದು, ಇದು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಕುರಿತು ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Manifestation Secrets: ಇಂದು 7-7 ಪೋರ್ಟಲ್ ಮತ್ತು ಕಾಲಾಷ್ಟಮಿಯ ಮಹಾ ಸಂಗಮ; ಈ ದಿನದ ರಹಸ್ಯ ಇಲ್ಲಿದೆ! – Kannada News | Manifestation Secrets: Kavya Shastri on 7 7 Portal and Why Your Wishes Aren’t Coming True

ಜುಲೈ 7 ಅಂದರೆ ಇಂದು ಆಧ್ಯಾತ್ಮಿಕ ಜಗತ್ತಿನಲ್ಲಿ ಅತ್ಯಂತ ಪವಿತ್ರ ಹಾಗೂ ಅಪರೂಪದ ದಿನವಾಗಿದೆ. ಒಂದೆಡೆ ಶಿವನ ರೌದ್ರಾವತಾರವಾದ ಕಾಲಭೈರವನ ಆರಾಧನೆಯ ಕಾಲಾಷ್ಟಮಿ, ಮತ್ತೊಂದೆಡೆ ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯ ಹೆಬ್ಬಾಗಿಲು ಎನಿಸುವ ‘7-7 ಪೋರ್ಟಲ್’ ವಿಶಿಷ್ಟವಾಗಿ ಒದಗಿಬಂದಿದೆ. ಈ ಮಹಾ ಸಂಗಮದ ದಿನದಂದು ಅನೇಕರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು (Manifestation) ಪ್ರಯತ್ನಿಸುತ್ತಿರುತ್ತಾರೆ. ಆದರೆ, ಹಲವು ಬಾರಿ ನಾವು ಎಷ್ಟು ಪ್ರಾರ್ಥಿಸಿದರೂ ಅಂದುಕೊಂಡಿದ್ದು ಕೈಗೂಡುವುದಿಲ್ಲ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಖ್ಯಾತ ನಟಿ ಕಾವ್ಯಾ ಶಾಸ್ತ್ರಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಮ್ಯಾನಿಫೆಸ್ಟೇಷನ್‌ಗೆ ಬೇಕಾದ ಪ್ರಮುಖ ಮೂರು ಅಂಶ:

ಕಾವ್ಯಾ ಶಾಸ್ತ್ರಿ ಅವರ ಪ್ರಕಾರ, ನಾವು ಬ್ರಹ್ಮಾಂಡ(universe)ದ ಬಳಿ ಏನನ್ನಾದರೂ ಕೇಳುವಾಗ ಪ್ರಮುಖವಾಗಿ ಮೂರು ವಿಷಯಗಳು ಒಂದಕ್ಕೊಂದು ಹೊಂದಾಣಿಕೆಯಾಗಬೇಕು (Align). ನಮ್ಮ ಮನಸ್ಸು, ನಮ್ಮ ನಡೆ (Actions) ಹಾಗೂ ನಮ್ಮ ತೀವ್ರವಾದ ಕೋರಿಕೆ—ಇವು ಮೂರು ಒಂದಾದಾಗ ಮಾತ್ರ ನಾವಂದುಕೊಂಡಿದ್ದು ನಮಗೆ ಸಿಗುತ್ತದೆ. ಆದರೆ ಈ ಮೂರರ ಮಧ್ಯೆ ಹೊಂದಾಣಿಕೆ ಇಲ್ಲದಿದ್ದಾಗ ನಮ್ಮ ಪ್ರಾರ್ಥನೆಗಳು ವಿಫಲವಾಗುತ್ತವೆ.

ಸುಪ್ತ ಮನಸ್ಸಿನಲ್ಲಿರುವ ಅನುಮಾನದ ಮೂಟೆ:

ನಮ್ಮ ಪ್ರಾರ್ಥನೆಗಳು ಕೈಗೂಡದೆ ಇರಲು ಮೊದಲ ಕಾರಣ ಮನಸ್ಸಿನ ಆಳದಲ್ಲಿರುವ ಗೊಂದಲ. ನಾವು ದೇವರೆದುರು ನಿಂತು “ನನಗೆ ಈ ಕೆಲಸ ಸಿಗಲಿ” ಎಂದು ಕೇಳಿಕೊಳ್ಳುತ್ತೇವೆ. ಆದರೆ ನಮ್ಮ ಮನಸ್ಸಿನಲ್ಲಿ (Back of the mind), “ಇದು ನನಗೆ ಸಿಗುತ್ತಾ? ನನಗೆ ಅಷ್ಟು ಅರ್ಹತೆ ಇದೆಯಾ? ನನಗಿಂತ ಉತ್ತಮರು ಬಂದರೆ ಏನು ಮಾಡುವುದು?” ಎಂಬ ನೂರಾರು ಅನುಮಾನಗಳನ್ನು ನಾವೇ ಹುಟ್ಟುಹಾಕಿಕೊಳ್ಳುತ್ತೇವೆ.

ಸೋಲಿನ ಭಯ ಹಾಗೂ ನಕಾರಾತ್ಮಕತೆ:

ಭವಿಷ್ಯದಲ್ಲಿ ನಮಗೆ ಒಂದು ವೇಳೆ ಸೋಲಾದರೆ ನೋವಾಗಬಾರದು ಎಂಬ ಕಾರಣಕ್ಕೆ, ಒಳ್ಳೆಯದನ್ನು ಯೋಚಿಸುವ ಮೊದಲೇ ಕೆಟ್ಟದ್ದಕ್ಕೆ ನಮ್ಮ ಮನಸ್ಸನ್ನು ನಾವೇ ಸಿದ್ಧಗೊಳಿಸಿಬಿಡುತ್ತೇವೆ. ಇಂತಹ ನಕಾರಾತ್ಮಕ ಆಲೋಚನೆಗಳು ನಮ್ಮ ಯಶಸ್ಸನ್ನು ತಡೆಯುತ್ತವೆ ಮತ್ತು ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯನ್ನು ನಮ್ಮಿಂದ ದೂರ ನಿಲ್ಲಿಸುತ್ತವೆ.

ಅತಿಯಾದ ತಾರ್ಕಿಕ (Logical) ಆಲೋಚನೆ:

ಪ್ರತಿಯೊಂದಕ್ಕೂ ಲಾಜಿಕ್ ಹುಡುಕುವ ನಮ್ಮ ಸ್ವಭಾವವೂ ಇದಕ್ಕೆ ಕಾರಣ. “ಇದು ಹೇಗೆ ಸಾಧ್ಯ? ಅವರು ಸಹಾಯ ಮಾಡುತ್ತಾರಾ? ಇವರು ಮಾಡ್ತಾರಾ?” ಎಂದು ಪ್ರತಿಯೊಂದಕ್ಕೂ ಲಾಜಿಕ್ ಹುಡುಕುವುದನ್ನು ಮೊದಲು ನಿಲ್ಲಿಸಬೇಕು. ಮ್ಯಾನಿಫೆಸ್ಟೇಷನ್ ಯಶಸ್ವಿಯಾಗಲು ಬ್ರಹ್ಮಾಂಡದ ಶಕ್ತಿಯ ಮೇಲೆ ಸಂಪೂರ್ಣ ನಂಬಿಕೆ ಇಡುವುದು ಅತ್ಯಂತ ಅಗತ್ಯ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ಇತರರ ಬಗ್ಗೆ ನೆಗೆಟಿವ್ ಮಾತನಾಡುವ ದೊಡ್ಡ ತಪ್ಪು:

ನಮ್ಮ ಮ್ಯಾನಿಫೆಸ್ಟೇಷನ್ ವರ್ಕ್ ಆಗದಿರಲು ಮತ್ತೊಂದು ದೊಡ್ಡ ತಪ್ಪು ಎಂದರೆ — ನಮ್ಮ ಬಗ್ಗೆ ನಮಗೆ ಗೌರವ ಇಲ್ಲದಿರುವುದು ಮತ್ತು ಇತರರ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದು. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಯಾವುದೇ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್‌ಗೆ ಹೋಗಿ ನೋಡಿದರೆ, ಪ್ರತಿಯೊಬ್ಬರೂ ಯಾರಾದರೂ ಒಬ್ಬರ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿರುತ್ತಾರೆ. “ಅವಳು ದಪ್ಪಗಿದ್ದಾಳೆ, ಅವನು ಸಣ್ಣಗಿದ್ದಾನೆ, ಅವಳು ಹೇಗೆ ದುಡ್ಡು ಮಾಡಿದಳೋ ಗೊತ್ತಿಲ್ಲ” ಅಂತೆಲ್ಲಾ ಇತರರ ಜೀವನದ ಬಗ್ಗೆ ಸುಮ್ಮನೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ನೆನಪಿಡಿ, ಬ್ರೈನ್ ಅಥವಾ ಬ್ರಹ್ಮಾಂಡಕ್ಕೆ ನೀವು ನಿಮ್ಮ ಬಗ್ಗೆ ಮಾತನಾಡುತ್ತಿದ್ದೀರೋ ಅಥವಾ ಇತರರ ಬಗ್ಗೆ ಮಾತನಾಡುತ್ತಿದ್ದೀರೋ ಎಂಬ ವ್ಯತ್ಯಾಸ ತಿಳಿಯುವುದಿಲ್ಲ. ನೀವು ಆಡುವ ನಕಾರಾತ್ಮಕ ಶಬ್ದಗಳು ಕೊನೆಗೆ ನಿಮ್ಮದೇ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ.

ಇಂದಿನಿಂದಲೇ ಈ ಸರಳ ಬದಲಾವಣೆ ಮಾಡಿಕೊಳ್ಳಿ:

ಯಾರನ್ನಾದರೂ ಹೊಗಳಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಪಕ್ಷ ಯಾರ ಬಗ್ಗೆಯೂ ನೆಗೆಟಿವ್ ಕಮೆಂಟ್ ಅಥವಾ ನೆಗೆಟಿವ್ ಆಲೋಚನೆ ಮಾಡಬೇಡಿ. ತಂತ್ರಗಳಿಗಿಂತ ಹೆಚ್ಚಾಗಿ ಆ ತಂತ್ರದ ಹಿಂದಿರುವ ನಿಮ್ಮ ಉದ್ದೇಶ ಎಷ್ಟು ಪವಿತ್ರವಾಗಿದೆ ಮತ್ತು ಅದು ಎಷ್ಟು ಬಲವಾಗಿದೆ ಎಂಬುದು ಮುಖ್ಯ. “ಇದು ಖಂಡಿತವಾಗಿಯೂ ಆಗುತ್ತದೆ” ಎಂಬ ದೃಢವಾದ ನಂಬಿಕೆಯನ್ನು ನಿಮ್ಮದಾಗಿಸಿಕೊಳ್ಳಿ, ಬ್ರಹ್ಮಾಂಡವು ನಿಮ್ಮ ಇಷ್ಟಾರ್ಥಗಳನ್ನು ಖಂಡಿತವಾಗಿ ಪೂರೈಸುತ್ತದೆ ಎಂದು ಕಾವ್ಯಾ ಶಾಸ್ತ್ರಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:03 am, Tue, 7 July 26

Source link

Global Forgiveness Day 2026: ಒಂದು ಕ್ಷಮೆ ಬದುಕನ್ನು ಸುಂದರಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ – Kannada News | Global Forgiveness Day 2026: Know the purpose of celebrating Global Forgiveness Day

ಕ್ಷಮೆ (Forgiveness) ಶ್ರೇಷ್ಠ ಮಾನವೀಯ ಗುಣಗಳಲ್ಲಿ ಒಂದಾಗಿದೆ. ಕ್ಷಮೆಯಾಚನೆ ಕೋಪ, ಅಸೂಯೆ, ಸೇಡು ಮತ್ತು ಮಾನಸಿಕ ಒತ್ತಡದ ಅದೃಶ್ಯ ಸರಪಳಿಗಳಿಂದ ನಿಮ್ಮನ್ನು ನೀವು ಮುಕ್ತಗೊಳಿಸಲು ಇರುವಂತಹ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಯಾವುದೇ ಸಂಬಂಧಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ನೆರೆಹೊರೆಯಲ್ಲಿ ತಪ್ಪು ತಿಳುವಳಿಕೆಗಳು, ಅಸಮಾಧಾನಗಳು ಅಥವಾ ಭಿನ್ನಾಭಿಪ್ರಾಯಗಳು ಉದ್ಭವಿಸುವುದು ಅನಿವಾರ್ಯ. ಇದನ್ನು ಹಾಗೆಯೇ ಮುಂದುವರೆಸಿದರೆ ಸಂಬಂಧವೂ ಹಾಳಾಗುತ್ತದೆ, ಶಾಂತಿ ಮತ್ತು ನೆಮ್ಮದಿಯೂ ಕೆಡುತ್ತದೆ. ಆದರೆ ಒಂದು ಕ್ಷಮೆ ಈ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಸಂಬಂಧವನ್ನು ಬಲಪಡಿಸುತ್ತದೆ. ಕ್ಷಮೆಯ ಈ ಚಮತ್ಕಾರಿ ಮಹತ್ವದ ಬಗ್ಗೆ ತಿಳಿಸಲು, ಕ್ಷಮಾಗುಣವನ್ನು ಬೆಳೆಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಜುಲೈ 7 ರಂದು ಜಾಗತಿಕ ಕ್ಷಮೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಜಾಗತಿಕ ಕ್ಷಮೆ ದಿನದ ಇತಿಹಾಸವೇನು?

ಈ ವಿಶೇಷ ದಿನವನ್ನು 1994 ರಲ್ಲಿ CECA (ಕ್ರಿಶ್ಚಿಯನ್ ಎಂಬಸಿ ಕ್ರೈಸ್ಟ್ ಅಂಬಾಸಿಡರ್ಸ್) ಎಂಬ ಸಂಸ್ಥೆ ಸ್ಥಾಪಿಸಿತು. ಆರಂಭದಲ್ಲಿ, ಇದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್‌ನಲ್ಲಿ ಒಂದು ಸ್ಥಳೀಯ ಕಾರ್ಯಕ್ರಮವಾಗಿ ಪ್ರಾರಂಭವಾಯಿತು. ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸೆ, ದ್ವೇಷ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಕ್ಷಮೆಯ ಮಹತ್ವವನ್ನು ಜನರಿಗೆ ತಿಳಿಸಲು ಈ ಒಂದು ದಿನದ ಅಗತ್ಯವಿದೆ ಎಂದು ಇದರ ಸ್ಥಾಪಕರು ನಂಬಿದ್ದರು. ಇದರಿಂದಾಗಿ ಕಾಲಾನಂತರದಲ್ಲಿ, ಕ್ಷಮೆ ದಿನ  ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯಿತು. ಇಂದು, ಈ ದಿನವನ್ನು ಜಾಗತಿಕ ಕ್ಷಮೆ ದಿನದ ಹೆಸರಿನಲ್ಲಿ ಜಾತಿ, ಧರ್ಮ, ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ಜಾತ್ಯತೀತ ಮತ್ತು ಮಾನವೀಯ ಆಚರಣೆಯಾಗಿ ಆಚರಿಸಲಾಗುತ್ತಿದೆ.

ಜಾಗತಿಕ ಕ್ಷಮೆ ದಿನದ ಮಹತ್ವವೇನು?

  • ಕುಟುಂಬ, ಸ್ನೇಹ, ಪ್ರಣಯ ಸಂಬಂಧಗಳು ಅಥವಾ ಕೆಲಸದ ಸ್ಥಳದಲ್ಲಿ, ಸಂವಹನ ಮತ್ತು ಕ್ಷಮೆ ಸಂಬಂಧಗಳನ್ನು ಬಲಪಡಿಸುವಲ್ಲಿ ಕ್ಷಮೆಯ ಪಾತ್ರದ ಬಗ್ಗೆ ಈ ದಿನ ತಿಳಿಸುತ್ತದೆ.
  • ಕ್ಷಮೆ ಕೇಳುವುದು ಸಂಬಂಧಗಳನ್ನು ಮಾತ್ರವಲ್ಲದೆ ಮನಸ್ಸಿನ ಶಾಂತಿ ಮತ್ತು ಭಾವನಾತ್ಮಕ ಸಮತೋಲನವನ್ನು ಸಹ ಸುಧಾರಿಸುತ್ತದೆ ಎಂಬುದನ್ನು ನೆನಪಿಸುತ್ತದೆ.
  • ಜಾಗತಿಕ ಕ್ಷಮೆ ದಿನವು ಜನರಲ್ಲಿ ಕ್ಷಮೆ ಮತ್ತು ಸಮನ್ವಯದ ಮನೋಭಾವವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
  • ಇತರರ ತಪ್ಪುಗಳನ್ನು ಕ್ಷಮಿಸಿ, ಸಂಬಂಧವನ್ನು ಸರಿಪಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.
  • ದೇಶಗಳು, ಸಮುದಾಯಗಳು ಮತ್ತು ಕುಟುಂಬಗಳ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಸಾಧಿಸುವಲ್ಲಿ ಕ್ಷಮೆಯ ಮಹತ್ವ ಎಂತಹದ್ದು ಎಂದು ಈ ದಿನ ನಮಗೆ ನೆನಪಿಸುತ್ತದೆ.

ಇದನ್ನೂ ಓದಿ: ಚಾಕೊಲೇಟ್‌ಹಿತಮಿತ ಸೇವನೆಯಿಂದಲೂ ಪಡೆಯಬಹುದು ಸಾಕಷ್ಟು ಪ್ರಯೋಜನ

ಕ್ಷಮೆಯ ವೈಜ್ಞಾನಿಕ ಮತ್ತು ಆರೋಗ್ಯ ಪ್ರಯೋಜನಗಳು:

ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಪರಿಹಾರ: ನಾವು ಇನ್ನೊಬ್ಬರ ಬಗ್ಗೆ ಅಸಮಾಧಾನವನ್ನು ಹೊಂದಿರುವಾಗ, ನಮ್ಮ ದೇಹವು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನುಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತದೆ. ಈ ಸ್ಥಿತಿಯು ವ್ಯಕ್ತಿಯನ್ನು ಕೆರಳಿಸುವಂತೆ,  ದುಃಖಿಸುವಂತೆ ಮತ್ತು ದಣಿದಂತೆ ಮಾಡುತ್ತದೆ. ಆದರೆ ಒಂದು ಕ್ಷಮೆ ಮನಸ್ಸನ್ನು ಶಾಂತಗೊಳಿಸುತ್ತದೆ, ಖಿನ್ನತೆ ಮತ್ತು ಆತಂಕದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.

ಹೃದಯ ಆರೋಗ್ಯಕ್ಕೆ ವರದಾನ: ನೀವು ಯಾರನ್ನಾದರೂ ಪೂರ್ಣ ಹೃದಯದಿಂದ ಕ್ಷಮಿಸಿದಾಗ, ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು  ಹೃದಯ ಬಡಿತ ಸಾಮಾನ್ಯವಾಗುತ್ತದೆ, ಹೃದಯ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ: ನಕಾರಾತ್ಮಕ ಆಲೋಚನೆಗಳು ಮತ್ತು ದ್ವೇಷದೊಂದಿಗೆ ನಿರಂತರವಾಗಿ ಬದುಕುವುದರಿಂದ ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಮನಸ್ಸು ಸಂತೋಷ ಮತ್ತು ವಿಶ್ರಾಂತಿ ಪಡೆದಾಗ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ವೈರಸ್‌ಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಹೆಚ್ಚು ಸಮರ್ಥವಾಗಿರುತ್ತದೆ.

ಉತ್ತಮ ನಿದ್ರೆ ಪಡೆಯಲು ಸಹಕಾರಿ: ಮನಸ್ಸಿನಲ್ಲಿನ ಆಲೋಚನೆಗಳ ಯುದ್ಧವು ಹೆಚ್ಚಾಗಿ ನಮ್ಮ ನಿದ್ರೆಯನ್ನು ಕಸಿದುಕೊಳ್ಳುತ್ತದೆ. ಕ್ಷಮಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯ ಭಾವನೆ ಸಿಗುತ್ತದೆ, ಇದು ನಿದ್ರಾಹೀನತೆಯನ್ನು ನಿವಾರಿಸುತ್ತದೆ ಮತ್ತು ಆಳವಾದ ನಿದ್ರೆಯನ್ನು ಉತ್ತೇಜಿಸುತ್ತದೆ.

ಸಂಬಂಧಗಳನ್ನು ಬಲಪಡಿಸುತ್ತದೆ: ಕ್ಷಮಿಸುವುದು ಹೇಗೆಂದು ತಿಳಿದಿರುವ ವ್ಯಕ್ತಿಯು ಯಾವಾಗಲೂ ಬಲವಾದ ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಿರುತ್ತಾನೆ. ಅಂತಹ ಜನರು ಹೆಚ್ಚು ಸಹಾನುಭೂತಿ ಮತ್ತು ಸ್ನೇಹಪರರಾಗಿರುತ್ತಾರೆ, ಇದು ಸಮಾಜದಲ್ಲಿ ಅವರ ಗೌರವವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಮುಂಗಾರು ಮಳೆಗೆ ನಲುಗಿದ ಕರಾವಳಿ! ಕರ್ನಾಟಕದ ಹಲವು ಶಾಲೆಗಳಿಗೆ ರಜೆ – Kannada News | TV9 Kannada Live | 7 July 2026 Karnataka Weather Rain Report, School Holidays Mumbai Rains Latest News

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Breaking News Today Live Updates in Kannada: ಕರ್ನಾಟಕ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರಿನ 5 ಹೋಬಳಿಗಳ ಶಾಲೆಗಳಿಗೆ, ಶೃಂಗೇರಿಯ ಶಾಲಾ-ಕಾಲೇಜುಗಳಿಗೆ ಮತ್ತು ಕಳಸದ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಲಾಗಿದೆ. ಇತ್ತ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮತ್ತೊಂದೆಡೆ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ದಟ್ಟವಾದ ಮಂಜು ಆವರಿಸಿದೆ. ಇದರಿಂದಾಗಿ NH 173 ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯಿಂದಾಗಿ ಘಾಟಿಯಲ್ಲಿ ಸುಂದರ ಜಲಪಾತಗಳು ಸೃಷ್ಟಿಯಾಗಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Karnataka Dam Water Level: ಮುಂಗಾರು ಮಳೆ ಚುರುಕು, ಕರ್ನಾಟಕದ ಪ್ರಮುಖ ಡ್ಯಾಂಗಳ ಜುಲೈ 7ರ ನೀರಿನ ಮಟ್ಟದ ವಿವರ – Kannada News | Karnataka Reservoir Water Level on July 7 Tunga Dam Completely Filled, Inflow Rises in KRS and Bhadra

ಬೆಂಗಳೂರು, ಜುಲೈ 7: ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಮುಂಗಾರು ಮಳೆ (Monsoon Rain) ತೀವ್ರಗೊಂಡಿದ್ದು, ಬತ್ತಿ ಹೋಗುತ್ತಿದ್ದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಈಗ ಭಾರಿ ಪ್ರಮಾಣದ ಒಳಹರಿವು ಆರಂಭವಾಗಿದೆ. ಜೂನ್ ತಿಂಗಳಲ್ಲಿ ಕೊಂಚ ಕೈಕೊಟ್ಟಿದ್ದ ಮಳೆಯು ಜುಲೈ ಆರಂಭದಲ್ಲಿ ಚುರುಕುಗೊಂಡಿದೆ. ನದಿ-ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿಯ ತುಂಗಾ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 22 ಗೇಟ್‌ಗಳನ್ನು ಮುಂಜಾನೆ ತೆರೆಯಲಾಗಿದ್ದು, ಸುಮಾರು 24,ವಾಹನ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂ ಆವರಣದಲ್ಲಿರುವ ತುಂಗಾದೇವಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ.

ಹಾಲಿನ ನೊರೆಯಂತೆ ಧುಮುಕುತ್ತಿರುವ ನೀರು, ರೈತರಲ್ಲಿ ಹುಮ್ಮಸ್ಸು

ತುಂಗಾ ಜಲಾಶಯದ ಎಲ್ಲಾ ಗೇಟ್‌ಗಳಿಂದ ನೀರು ಧುಮುಕುತ್ತಿರುವುದರಿಂದ ಇಡೀ ವಾತಾವರಣ ಹಾಲಿನ ನೊರೆಯಂತೆ ಕಂಗೊಳಿಸುತ್ತಿದೆ. ಮಳೆಯ ನಡುವೆಯೂ ಡ್ಯಾಂ ಸೌಂದರ್ಯ ಇಮ್ಮಡಿಯಾಗಿದೆ. ನಿರಂತರ ಮಳೆಯಿಂದಾಗಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲವಾಗಲಿದೆ. ಮಳೆ ತಡವಾಗಿದ್ದರಿಂದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ

ಕೆಆರ್​ಎಸ್ ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 82.45 ಅಡಿ
  • ಒಳಹರಿವು: 5,734 ಕ್ಯೂಸೆಕ್, ಹೊರಹರಿವು: 777 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 11.909 ಟಿಎಂಸಿ

ಕಬಿನಿ ಜಲಾಶಯ (ಮೈಸೂರು)

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 59.32 ಅಡಿಯಷ್ಟಿದೆ (ಕಳೆದ ವರ್ಷ ಇದೇ ದಿನ 80.79 ಅಡಿ ಇತ್ತು). ಪ್ರಸ್ತುತ ಜಲಾಶಯದಲ್ಲಿ 7.07 ಟಿಎಂಸಿ ನೀರು ಸಂಗ್ರಹವಿದ್ದು, 4,394 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ನದಿಗೆ 500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ಕಾಲುವೆಗಳಿಗೆ ಸದ್ಯ ನೀರು ಹರಿಸುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿಯಲ್ಲಿ ನೀರಿನ ಮಟ್ಟ ಹಾಗೂ ಒಳಹರಿವು ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 30 ಮಿ.ಮೀ ಮಳೆ ದಾಖಲಾಗಿದೆ.

ಹೇಮಾವತಿ ಜಲಾಶಯ (ಹಾಸನ)

  • ಗರಿಷ್ಠ ಮಟ್ಟ: 2922 ಅಡಿ (37 ಟಿಎಂಸಿ)
  • ಇಂದಿನ ನೀರಿನ ಮಟ್ಟ: 2895.91 ಅಡಿ (17.379 ಟಿಎಂಸಿ)
  • ಒಳಹರಿವು: 8,901 ಕ್ಯೂಸೆಕ್, ಹೊರಹರಿವು: 300 ಕ್ಯೂಸೆಕ್

ಭದ್ರಾ ಜಲಾಶಯ (ಲಕ್ಕವಳ್ಳಿ/ಭದ್ರಾವತಿ)

  • ಗರಿಷ್ಠ ಮಟ್ಟ: 186 ಅಡಿ (71.535 ಟಿಎಂಸಿ)
  • ಇಂದಿನ ನೀರಿನ ಮಟ್ಟ: 140.6 ಅಡಿ (27.231 ಟಿಎಂಸಿ)
  • ಒಳಹರಿವು: 8,117 ಕ್ಯೂಸೆಕ್, ಹೊರಹರಿವು: 212 ಕ್ಯೂಸೆಕ್

ಬಸವಸಾಗರ ಜಲಾಶಯ (ನಾರಾಯಣಪುರ, ಯಾದಗಿರಿ)

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ನೀರಿನ ಮಟ್ಟ: 488.82 ಮೀಟರ್
  • ಒಳಹರಿವು: 00 ಕ್ಯೂಸೆಕ್, ಹೊರಹರಿವು: 761 ಕ್ಯೂಸೆಕ್

ರಾಜ್ಯಾದ್ಯಂತ ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಆರ್‌ಎಸ್, ಭದ್ರಾ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರ ಔಟ್! – Kannada News | Nitish Kumar Reddy Ruled Out Of India vs England ODI Series

ಇಂಗ್ಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಟೀಮ್ ಇಂಡಿಯಾ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಬಿದ್ದಿದ್ದಾರೆ. ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದು, ಹೀಗಾಗಿ ಅವರನ್ನು ಈ ಸರಣಿಯಿಂದ ಕೈ ಬಿಡಲಾಗಿದೆ. (PC: Getty Images)

ಅಫ್ಘಾನಿಸ್ತಾನ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ ನಿತೀಶ್ ಕುಮಾರ್ ರೆಡ್ಡಿ ಎಡಗಾಲಿನ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿದ್ದರು. ಈ ಗಾಯದ ಕಾರಣದಿಂದಾಗಿ ಅವರು ಇಂಗ್ಲೆಂಡ್ ಸರಣಿಯಿಂದ ಹೊರಬೀಳಬೇಕಾಗಿ ಬಂದಿದೆ. ಸದ್ಯ ಅವರು ಬೆಂಗಳೂರಿನ ಬಿಸಿಸಿಐ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ನಲ್ಲಿ ಚಿಕಿತ್ಸೆ ಮತ್ತು ಚೇತರಿಕೆ ಪಡೆಯುತ್ತಿದ್ದಾರೆ. (PC: Getty Images)

ಅತ್ತ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿಯುವುದು ಖಚಿತವಾಗುತ್ತಿದ್ದಂತೆ, ಇಂಗ್ಲೆಂಡ್‌ನಲ್ಲಿ ಟಿ20 ಸರಣಿ ಆಡುತ್ತಿರುವ ಶಿವಂ ದುಬೆ ಅವರನ್ನು ಏಕದಿನ ತಂಡದಲ್ಲೂ ಮುಂದುವರಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ.  ಭಾರತ ಏಕದಿನ ತಂಡದಲ್ಲಿ 2024 ರಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಶಿವಂ ದುಬೆಗೆ ಇದೀಗ 2 ವರ್ಷಗಳ ಬಳಿಕ ಮತ್ತೆ ಅದೃಷ್ಟ ಖುಲಾಯಿಸಿದೆ. (PC: Getty Images)

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಜುಲೈ 14 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಸ್ಟೇಡಿಯಂನಲ್ಲಿ ನಡೆದರೆ, ದ್ವಿತೀಯ ಪಂದ್ಯವು ಜುಲೈ 16 ರಂದು ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯವು ಜುಲೈ 19 ರಂದು ಜರುಗಲಿದ್ದು, ಈ ಪಂದ್ಯಕ್ಕೆ ಲಂಡನ್​ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

Published On – 9:46 am, Tue, 7 July 26

Source link

ಸೋಮವಾರದ ಪರೀಕ್ಷೆಯಲ್ಲಿ ಫೇಲ್ ಆದ ‘ಆಲ್ಫಾ’; 7 ಸಾವಿರ ಶೋಗಳಿದ್ದರೂ ಗಳಿಸಿದ್ದು ಒಂದಂಕಿ – Kannada News | Alpha Movie Box Office Disaster: Alia Bhatt, Sharvari Starrer Fails Monday Test

ಬಾಲಿವುಡ್​ನ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ‘ಆಲ್ಫಾ’ (Alpha Movie) ಬಾಕ್ಸ್ ಆಫೀಸ್‌ನಲ್ಲಿ ಮೊದಲ ಸೋಮವಾರ ಭಾರಿ ಹಿನ್ನಡೆ ಅನುಭವಿಸಿದೆ. ಸ್ಟಾರ್ ನಟಿಯರಾದ ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ವೀಕೆಂಡ್‌ನಲ್ಲಿ ಸಾಧಾರಣ ಗಳಿಕೆ ಕಂಡಿತ್ತು. ಈಗ ಸೋಮವಾರದ ಲಿಟ್ಮಸ್ ಟೆಸ್ಟ್‌ನಲ್ಲಿ ಸಂಪೂರ್ಣವಾಗಿ ಫೇಲ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಈ ಚಿತ್ರದಿಂದ ಭಾರೀ ನಷ್ಟ ಅನುಭವಿಸುವ ಭೀತಿ ಎದುರಿಸಿದೆ.

7 ಸಾವಿರ ಶೋ ಇದ್ದರೂ ಗಳಿಕೆ ಕೇವಲ 3.85 ಕೋಟಿ ರೂಪಾಯಿ

ಬಿಡುಗಡೆಯಾದ 4ನೇ ದಿನವಾದ ಸೋಮವಾರ ಈ ಚಿತ್ರಕ್ಕೆ ದೇಶಾದ್ಯಂತ ಸುಮಾರು 6,997 ಶೋಗಳು ಸಿಕ್ಕಿದ್ದವು. ಇಷ್ಟೊಂದು ದೊಡ್ಡ ಮಟ್ಟದ ಸ್ಕ್ರೀನಿಂಗ್ ಲಭ್ಯವಿದ್ದರೂ ಸಿನಿಮಾ ಗಳಿಸಿದ್ದು ಮಾತ್ರ ಕೇವಲ 3.85 ಕೋಟಿ ರೂಪಾಯಿ ಕಲೆಕ್ಷನ್ ಮಾತ್ರ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಸೋಮವಾರದ ಒಟ್ಟಾರೆ ಆಕ್ಯುಪೆನ್ಸಿ ಕೇವಲ 13ರಷ್ಟು ಮಾತ್ರ ದಾಖಲಾಗಿದೆ. ಅಂದರೆ 100 ಸೀಟ್ ಇರುವ ಥಿಯೇಟರ್​​ನಲ್ಲಿ ತುಂಬಿದ್ದು ಕೇವಲ 13 ಜನ ಮಾತ್ರ.

4 ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

ಮೊದಲ ದಿನವಾದ ಶುಕ್ರವಾರ ಸಿನಿಮಾ 9.25 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ 11.50 ಕೋಟಿ ರೂಪಾಯಿ, ಭಾನುವಾರ 13.25 ಕೋಟಿ ರೂಪಾಯಿ, ಸೋಮವಾರ 3.85 ಕೋಟಿ ರೂಪಾಯಿ ಗಳಿಸಿದೆ. ನಾಲ್ಕು ದಿನಗಳ ಪ್ರದರ್ಶನದ ನಂತರ ‘ಆಲ್ಫಾ’ ಸಿನಿಮಾ ಭಾರತದಲ್ಲಿ ಒಟ್ಟು 37.85 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರ ಭಾರತದ ಒಟ್ಟು ಗ್ರಾಸ್ ಗಳಿಕೆ 45.34 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ: ಭಾನುವಾರವೂ ಚೇತರಿಸಿಕೊಳ್ಳದ ‘ಆಲ್ಫಾ’; 3 ದಿನಗಳ ಗಳಿಕೆ ಎಷ್ಟು?

ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಗಳಿಕೆ ಮಂದಗತಿಯಲ್ಲೇ ಸಾಗಿದ್ದು, 4ನೇ ದಿನ 1.50 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಸದ್ಯಕ್ಕೆ ಚಿತ್ರದ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ 18.30 ಕೋಟಿ ರೂಪಾಯಿ ತಲುಪಿದೆ. ಜಾಗತಿಕವಾಗಿ (Worldwide) ಎಲ್ಲೂ ನಿರೀಕ್ಷಿತ ಮಟ್ಟದ ಹವಾ ಸೃಷ್ಟಿಸದ ಈ ಚಿತ್ರ, ನಾಲ್ಕು ದಿನಗಳಲ್ಲಿ ಒಟ್ಟಾರೆಯಾಗಿ 63.64 ಕೋಟಿ ಗ್ರಾಸ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ಗಂಟೆಯಲ್ಲಿ ಇರಾನ್ ಉಡೀಸ್, ಟ್ರಂಪ್ ಧಮಕಿ, ಇರಾನ್ ಕೊಟ್ಟ ತಿರುಗೇಟು ಏನು? – Kannada News | Trump Threatens Iran: US Can Destroy in Hours; Iran’s Sharp Rebuttal

ವಾಷಿಂಗ್ಟನ್, ಜುಲೈ 07: ಇರಾನ್(Iran) ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇರಾನ್ ನಮ್ಮೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಾವು ಅದರ ಕಥೆ ಮುಗಿಸುತ್ತೇವೆ” ಎಂದು ನೇರವಾಗಿಯೇ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಪ್ರಮುಖ ತೈಲ ಮತ್ತು ವಿದ್ಯುತ್ ಮೂಲಸೌಕರ್ಯಗಳನ್ನು ಕೆಲವೇ ಗಂಟೆಗಳಲ್ಲಿ ಧೂಳೀಪಟ ಮಾಡುವ ಶಕ್ತಿ ಅಮೆರಿಕಕ್ಕಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಸೋಮವಾರ ಪ್ರಮುಖ ಜಂಟಿ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್, ತಮಗೆ ಯುದ್ಧಕ್ಕಿಂತ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆಯಿದೆ ಎಂದು ಹೇಳಿದರು. ನಾನು ಶಾಂತಿಯುತ ಇತ್ಯರ್ಥವನ್ನು ಬಯಸುತ್ತೇನೆ. ಇರಾನ್‌ನ 9.1 ಕೋಟಿ ಜನರ ಮೇಲೆ ದಾಳಿ ನಡೆಸಲು ನನಗೆ ಇಷ್ಟವಿಲ್ಲ. ಆದರೆ ಅವರು ಒಪ್ಪದಿದ್ದರೆ, ಕೇವಲ ಒಂದು ಗಂಟೆಯಲ್ಲಿ ಇರಾನ್‌ನ ಎಲ್ಲಾ ಪ್ರಮುಖ ಸೇತುವೆಗಳನ್ನು ನಾವು ಧ್ವಂಸ ಮಾಡಬಲ್ಲೆವು. ಅವರ ಇಂಧನ ಪೂರೈಕೆ, ಆಧುನಿಕ ತೈಲ ಸ್ಥಾವರಗಳು ಮತ್ತು ಇಡೀ ವಿದ್ಯುತ್ ವ್ಯವಸ್ಥೆಯನ್ನು ಮಧ್ಯಾಹ್ನದೊಳಗಾಗಿ ನಾವು ಉಡೀಸ್ ಮಾಡಬಹುದು. ಈ ಶಕ್ತಿ ನಮಗಿದೆ ಎಂಬುದು ಇರಾನ್‌ಗೂ ಚೆನ್ನಾಗಿ ಗೊತ್ತು ಎಂದಿದ್ದಾರೆ.

ಒಂದೇ ದಾಳಿಗೆ ಇರಾನ್ ನಾಯಕರು ಖಲಾಸ್ ಆಗುತ್ತಿದ್ದರು
ಇತ್ತೀಚೆಗೆ ಆಕ್ಸಿಯಾಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಮತ್ತೊಂದು ಆಘಾತಕಾರಿ ವಿಷಯ ಹಂಚಿಕೊಂಡಿದ್ದರು. ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಅವರ ಅಂತ್ಯಕ್ರಿಯೆಗಾಗಿ ಇರಾನ್‌ನ ಉಳಿದ ಎಲ್ಲಾ ಉನ್ನತ ನಾಯಕರು ಒಂದೆಡೆ ಸೇರಿದ್ದರು.

ಅವರೆಲ್ಲರೂ ಒಂದೇ ಜಾಗದಲ್ಲಿದ್ದರು, ನಾವು ಮನಸ್ಸು ಮಾಡಿದ್ದರೆ ಒಂದೇ ದಾಳಿಯಲ್ಲಿ ಇರಾನ್‌ನ ಇಡೀ ನಾಯಕತ್ವವನ್ನೇ ನಿರ್ಮೂಲನೆ ಮಾಡಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ, ಏಕೆಂದರೆ ಇರಾನ್‌ನ ಎಲ್ಲರನ್ನೂ ಮುಗಿಸಿದರೆ ಮುಂದೆ ನಮ್ಮ ಜೊತೆ ಮಾತುಕತೆ ನಡೆಸಲು ಯಾರೂ ಉಳಿಯುತ್ತಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಮತ್ತಷ್ಟು ಓದಿ: ‘ಭಾರತವನ್ನು ಇರಾನ್ ಎಂದೂ ಮರೆಯುವುದಿಲ್ಲ’; ಅಯತೊಲ್ಲಾ ಖಮೇನಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಟೆಹ್ರಾನ್ ಕೃತಜ್ಞತೆ

ಇರಾನ್ ನೀಡಿದ ಖಾರವಾದ ತಿರುಗೇಟು
ಟ್ರಂಪ್ ಅವರ ಈ ಬೆದರಿಕೆ ಹೇಳಿಕೆಗಳನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಎಕ್ಸ್​ನಲ್ಲಿ ಖಾತೆಯಲ್ಲಿ ಅಮೆರಿಕಕ್ಕೆ ತಿರುಗೇಟು ನೀಡಿದೆ:

ಸಂಸ್ಕೃತಿ ಇಲ್ಲದ ಅಮೆರಿಕ: ಅಮೆರಿಕಕ್ಕೆ ನಾಗರಿಕತೆ ಎಂಬುದಿಲ್ಲ, ಖಮೇನಿಯವರ ನಿಧನದ ದುಃಖವನ್ನು ಅಮೆರಿಕ ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಮನುಷ್ಯರನ್ನು ಕೊಲ್ಲಬಹುದು, ಆದರೆ ಅವರ ಆದರ್ಶಗಳನ್ನಲ್ಲ. ನೀವು ಅಯತೊಲ್ಲಾ ಖಮೇನಿ ಅವರನ್ನು ಕೊಂದಿರಬಹುದು. ಆದರೆ ವಾಸ್ತವದಲ್ಲಿ ನೀವು ಸುಗಂಧ ದ್ರವ್ಯದ ಬಾಟಲಿಯನ್ನು ಒಡೆದಿದ್ದೀರಿ, ಈಗ ಅದರ ಪರಿಮಳ (ಅವರ ಆದರ್ಶಗಳು) ಇಡೀ ಜಗತ್ತಿಗೆ ಹರಡಿದೆ ಎಂದು ಇರಾನ್ ಭಾವುಕವಾಗಿ ಉತ್ತರಿಸಿದೆ.

ಮುಂದುವರೆದ ಖಮೇನಿ ಅಂತ್ಯಕ್ರಿಯೆ ಮೆರವಣಿಗೆ
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಖಮೇನಿ ಅವರ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಇರಾನ್‌ನ ಪವಿತ್ರ ನಗರವಾದ ‘ಕೋಮ್’ಗೆ ತರಲಾಗಿದೆ. ಕೋಮ್‌ನ ಜಮ್ಕರನ್ ಮಸೀದಿಯ ಸುತ್ತ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಅಲ್ಲಿ ಬೃಹತ್ ಅಂತ್ಯಕ್ರಿಯೆಯ ಮೆರವಣಿಗೆ ನಡೆಯಲಿದೆ. ಇದರ ನಂತರ, ಮುಂದಿನ ಧಾರ್ಮಿಕ ವಿಧಿವಿಧಾನಗಳಿಗಾಗಿ ಪಾರ್ಥಿವ ಶರೀರವನ್ನು ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗೆ ಕೊಂಡೊಯ್ಯಲಾಗುವುದು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ 4 ದಿನಗಳಲ್ಲಿ 3ನೇ ಬಾರಿ ಬಾಂಬ್ ಬೆದರಿಕೆ – Kannada News | ISRO Headquarters in Bengaluru Receives Third Bomb Threat Email in Four Days; Kalaburagi Court Targeted Too

ಇಸ್ರೋ (ಸಾಂದರ್ಭಿಕ ಚಿತ್ರ)Image Credit source: TV9 Network

ಬೆಂಗಳೂರು, ಜುಲೈ 7: ರಾಜಧಾನಿ ಬೆಂಗಳೂರಿನ (Bengaluru) ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಧಾನ ಕಚೇರಿಗೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಇಸ್ರೋ ಸಂಸ್ಥೆಗೆ ಬಂದಿರುವ ಮೂರನೇ ಬಾಂಬ್ ಬೆದರಿಕೆ ಇಮೇಲ್ ಇದಾಗಿದೆ. ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಇಸ್ರೋ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಬಂದಿದ್ದ ಈ ಇಮೇಲ್ ಗಮನಿಸಿದ್ದು, ಅದರಲ್ಲಿ ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಅಪರಿಚಿತ ಆರೋಪಿ ಉಲ್ಲೇಖಿಸಿದ್ದ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದೀರ್ಘ ಶೋಧದ ಬಳಿಕ ಪೊಲೀಸರು ನಿರಾಳ

ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್ (BDDS), ಶ್ವಾನ ದಳ, ಸಿಐಎಸ್‌ಎಫ್ (CISF) ಮತ್ತು ಸಂಜಯನಗರ ಠಾಣಾ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಅಂತರಿಕ್ಷ ಭವನ ಸೇರಿದಂತೆ ಇಡೀ ಕ್ಯಾಂಪಸ್ ಅನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಇದರೊಂದಿಗೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಕೇಂದ್ರದಲ್ಲೂ ಪೊಲೀಸರು ಪರಿಶೀಲನೆ ನಡೆಸಿದರು. ಮಧ್ಯಾಹ್ನದವರೆಗೆ ನಡೆದ ಸುದೀರ್ಘ ಶೋಧದ ಬಳಿಕ ಯಾವುದೇ ಆಕ್ಷೇಪಾರ್ಹ ವಸ್ತು ಪತ್ತೆಯಾಗದ ಕಾರಣ ಇದೊಂದು ಹುಸಿ ಇಮೇಲ್ ಎಂದು ಘೋಷಿಸಲಾಯಿತು.

ಇದಕ್ಕೂ ಮುನ್ನ ಜುಲೈ 2 ರಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಕಚೇರಿಗೆ ಇಮೇಲ್ ಕಳುಹಿಸಿದ್ದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಿಶಾಂತ್ ತ್ಯಾಗಿ (36) ಎಂಬಾತನನ್ನು ಜುಲೈ 3 ರಂದು ಬಂಧಿಸಲಾಗಿತ್ತು. ಆದರೆ, ಶುಕ್ರವಾರ ತಮಿಳು ಭಾಷೆಯಲ್ಲಿ ಬಂದಿದ್ದ ಎರಡನೇ ಇಮೇಲ್ ಮತ್ತು ಭಾನುವಾರ ಬಂದಿರುವ ಮೂರನೇ ಇಮೇಲ್‌ಗೂ ಬಂಧಿತ ತ್ಯಾಗಿಗೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ಈ ಮೂರೂ ಇಮೇಲ್ ಐಡಿಗಳು ಬೇರೆ ಬೇರೆಯಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ. ಸಂಜಯನಗರ ಪೊಲೀಸರು ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾದ ಬಾಂಬ್ ಬೆದರಿಕೆ

ಇಸ್ರೋ ಸಂಸ್ಥೆಯ ಬೆನ್ನಲ್ಲೇ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ತಮಿಳುನಾಡಿನಿಂದ ‘ಉದಯ್ ಸೇತುಪತಿ’ ಎಂಬ ಹೆಸರಿನ ಇಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕೋರ್ಟ್ ಆವರಣದಲ್ಲಿ ನಾಲ್ಕು ಆರ್‌ಡಿಎಕ್ಸ್ (RDX) ಐಇಡಿ ಬಾಂಬ್‌ಗಳನ್ನು ಇಟ್ಟು ಮಧ್ಯಾಹ್ನ 2 ಗಂಟೆಗೆ ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಪೋಕ್ಸೊ (POCSO) ಪ್ರಕರಣದ ಆರೋಪಿಗಳಾದ ಆರ್.ಜೆ. ಶರಣ್ ಜಯರಾಮ್ ಮತ್ತು ಜಲ್ಲಿಕಟ್ಟು ಜ್ಯೂಲಿಯನ್ ಎಂಬುವವರನ್ನು ಬಿಡುಗಡೆ ಮಾಡಬೇಕು, ಅವರು ನಿರ್ಭಯಾ ಅತ್ಯಾಚಾರ ಪ್ರಕರಣದಂತಹ ಆರೋಪಿಗಳಲ್ಲ ಎಂದು ಇಮೇಲ್‌ನಲ್ಲಿ ಆಗ್ರಹಿಸಲಾಗಿತ್ತು.

ಇದನ್ನೂ ಓದಿ: ದುರಂತ್ ಎಕ್ಸ್​ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!

ಇಮೇಲ್ ಕಂಡು ಬೆದರಿದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸರು, ಬಾಂಬ್ ಹಾಗೂ ಶ್ವಾನ ದಳದೊಂದಿಗೆ ಕೋರ್ಟ್ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:04 am, Tue, 7 July 26

Source link

IND vs ENG: ಬಲಿಷ್ಠ ಪ್ಲೇಯಿಂಗ್ 11 ಹೆಸರಿಸಿದ ಇಂಗ್ಲೆಂಡ್! – Kannada News | England’s Playing XI vs India in 3rd T20I

ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್ ಮೈದಾನದಲ್ಲಿ ಮಂಗಳವಾರ (ಜುಲೈ 7, 2026) ನಡೆಯಲಿರುವ ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಪ್ಲೇಯಿಂಗ್ ಇಲೆವೆನ್ ಹೆಸರಿಸಿದೆ. ಕಳೆದ ಮ್ಯಾಚ್​ನಲ್ಲಿ ಕಣಕ್ಕಿಳಿದ ಬಲಿಷ್ಠ ಪಡೆಯನ್ನೇ ಈ ಪಂದ್ಯಕ್ಕಾಗಿ ಮುಂದುವರೆಸಿದ್ದಾರೆ.

5 ಪಂದ್ಯಗಳ ಈ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ಈಗಾಗಲೇ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ ಗೆದ್ದರೆ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಏಕೆಂದರೆ ಈ ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಹೀಗಾಗಿ ಒಟ್ಟು 4 ತಂಡಗಳು ಪಂದ್ಯ ಮಾತ್ರ ನಡೆಯಲಿದೆ.

ಈ ನಾಲ್ಕು ಮ್ಯಾಚ್​ಗಳಲ್ಲಿ ಈಗಾಗಲೇ ಇಂಗ್ಲೆಂಡ್ ದ್ವಿತೀಯ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಹೀಗಾಗಿ ಸರಣಿ ಜೀವಂತವಾಗಿರಿಸಲು ಭಾರತ ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.

ಒಂದು ದಿನ ಮೊದಲೇ ಪ್ರಕಟ:

ಕಳೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಬಲದೊಂದಿಗೆ ಕಣಕ್ಕಿಳಿಯುತ್ತಿರುವ ಇಂಗ್ಲೆಂಡ್ ತಂಡ, ಪಂದ್ಯ ಆರಂಭಕ್ಕೂ 24 ಗಂಟೆಗಳ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ನಾಯಕ ಹ್ಯಾರಿ ಬ್ರೂಕ್ ಯಾವುದೇ ಬದಲಾವಣೆ ಮಾಡದೆ ಹಳೆಯ ಗೆಲುವಿನ ಸಂಯೋಜನೆಯನ್ನೇ ಮುಂದುವರಿಸಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟಂಗ್.

ಇದನ್ನೂ ಓದಿ: ಭಾರತ ಟಿ20 ತಂಡ ಪ್ರಕಟ: ಮೂವರ ಹೊಸ ಎಂಟ್ರಿ!

ಹೇಗಿರಲಿದೆ ಟೀಮ್ ಇಂಡಿಯಾ?

ಕಳೆದ ಪಂದ್ಯದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪಾದಾರ್ಪಣೆಯ ಹೊರತಾಗಿಯೂ ಭಾರತ ತಂಡ 191 ರನ್‌ಗಳ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲವಾಗಿತ್ತು. ಹೀಗಾಗಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಗೌತಮ್ ಗಂಭೀರ್ ಈ ಪಂದ್ಯದಲ್ಲಿ ಬಲಿಷ್ಠ ತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ.

ಇದಕ್ಕಾಗಿ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ಅದರಂತೆ ರವಿ ಬಿಷ್ಣೋಯ್​ನ್ನು ಹೊರಗಿಟ್ಟು, ಪ್ರಿನ್ಸ್ ಯಾದವ್​ಗೆ ಚಾನ್ಸ್ ನೀಡುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ವರುಣ್ ಚಕ್ರವರ್ತಿ.

Published On – 9:19 am, Tue, 7 July 26

Source link

Exit mobile version