ಖಡ್ಗ ಕೈಯಲ್ಲಿ ಹಿಡಿದು ‘ಪಿನಾಕ’ ಟೀಸರ್ ಬಿಡುಗಡೆ ಮಾಡಿದ ನಟ ಗಣೇಶ್ – Kannada News | Golden Star Ganesh new film Pinaka Teaser released in Bengaluru

ಮದನ್​ ಕುಮಾರ್​
|

Updated on: Jul 06, 2026 | 7:50 PM

ಮುಖ್ಯಾಂಶಗಳು

  • ‘ಪಿನಾಕ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಗಣೇಶ್.
  • ‘ಗೋಲ್ಡನ್ ಸ್ಟಾರ್’ ವೃತ್ತಿಜೀವನದಲ್ಲಿ ಡಿಫರೆಂಟ್ ಆಗಿರಲಿದೆ ಈ ಚಿತ್ರ.
  • ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ನಿರ್ಮಾಣ ಆಗಿರುವ ಸಿನಿಮಾ.

‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಪಿನಾಕ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಚಿತ್ರದ ಥೀಮ್​ಗೆ ಅನುಗುಣವಾಗಿ ಗಣೇಶ್ ಅವರು ಖಡ್ಗ ಎತ್ತಿ ಹಿಡಿಯುವ ಮೂಲಕ ಟೀಸರ್ ಅನಾವರಣ ಮಾಡಿದರು. ಈ ವೇಳೆ ರಂಗಾಯಣ ರಘು, ಸಾಧು ಕೋಕಿಲ, ನಿರ್ದೇಶಕ ಧನಂಜಯ್ ಮುಂತಾದವರು ಹಾಜರಿದ್ದರು.

Source link

ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕುವ ತಪ್ಪನ್ನು ಮಾತ್ರ ಮಾಡಬೇಡಿ – Kannada News | Know about things you shouldn’t search on Google?

ಗೂಗಲ್ (Google) ಒಂದು ಜನಪ್ರಿಯ ಸರ್ಚ್ ಎಂಜಿನ್ ಆಗಿದ್ದು, ಇದು ನಮಗೆ ಬೇಕಾದ ಪ್ರತಿಯೊಂದು ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸಿ ಕೊಡುತ್ತದೆ. ಸಣ್ಣ ವಿಷಯಗಳಿಂದ ಹಿಡಿದು ಆಳವಾದ ಸಂಶೋಧನೆಯವರೆಗೆ ಪ್ರತಿಯೊಂದು ಮಾಹಿತಿಯನ್ನು ಗೂಗಲ್‌ ಒದಗಿಸಿಕೊಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಗೂಗಲ್‌ನಲ್ಲಿ ಬೆಸ್ಟ್‌ ರೆಸ್ಟೋರೆಂಟ್‌, ರೆಸಿಪಿ, ಕಾನೂನು ಮಾಹಿತಿ ಸೇರಿದಂತೆ ಒಂದಷ್ಟು ವಿಷಯಗಳ ಬಗ್ಗೆ ಹುಡುಕಾಟ ನಡೆಸುತ್ತಾರೆ. ಆದರೆ ತಪ್ಪಿಯೂ ಗೂಗಲ್‌ನಲ್ಲಿ ಈ ಕೆಲವೊಂದು ವಿಷಯಗಳನ್ನು ಹುಡುಕಲೇಬಾರದಂತೆ. ಬೆರಳ ತುದಿಯಲ್ಲಿಯೇ ಮಾಹಿತಿ ಲಭ್ಯವಿದ್ದರೂ, ಈ ಒಂದಷ್ಟು ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಬಾರದು. ಇದರಿಂದ ನಾವು ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಂಟರ್ನೆಟ್‌ನಲ್ಲಿ ಸುರಕ್ಷಿತವಾಗಿರಲು, ನೀವು ಈ ಕೆಲವು ಮಾಹಿತಿಗಳನ್ನು ಗೂಗಲ್‌ನಲ್ಲಿ ಸರ್ಚ್‌ ಮಾಡದಿರಿ.

ಗೂಗಲ್‌ನಲ್ಲಿ ಈ ವಿಷಯಗಳನ್ನು ಸರ್ಚ್‌ ಮಾಡಬೇಡಿ:

 ಕಾನೂನುಬಾಹಿರ ಮತ್ತು ಹಿಂಸಾತ್ಮಕ ಮಾಹಿತಿ: ಬಾಂಬ್‌ಗಳು, ಸ್ಫೋಟಕಗಳು, ಶಸ್ತ್ರಾಸ್ತ್ರಗಳ ತಯಾರಿಕಾ ವಿಧಾನಗಳು ಅಥವಾ ಅಕ್ರಮ ಔಷಧಿ ತಯಾರಿಕೆ ಬಗ್ಗೆ ಎಂದಿಗೂ ಹುಡುಕಬೇಡಿ. ಅಂತಹ ಹುಡುಕಾಟಗಳು ಭದ್ರತಾ ಸಂಸ್ಥೆಗಳ ಗಮನಕ್ಕೆ ಬರಬಹುದು ಮತ್ತು ಇದು ನಿಮ್ಮನ್ನು ಕಾನೂನು ತನಿಖೆಗೆ ಒಳಪಡಿಸಬಹುದು.

ಮಕ್ಕಳ ಶೋಷಣೆ ಅಥವಾ ದೌರ್ಜನ್ಯದ ವಿಷಯ: ಮಕ್ಕಳಿಗೆ ಸಂಬಂಧಿಸಿದ ಯಾವುದೇ ರೀತಿಯ ಆಕ್ಷೇಪಾರ್ಹ ಅಥವಾ ಅನೈತಿಕ  ವಿಷಯಗಳನ್ನು ಹುಡುಕುವುದು ಬಹಳ ಗಂಭೀರ ಅಪರಾಧವಾಗಿದ್ದು, ಇದಕ್ಕಾಗಿ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು. ಇದಲ್ಲದೆ ಗರ್ಭಪಾತದ ಬಗ್ಗೆಯೂ ಹುಡುಕಬಾರದು.

ಹ್ಯಾಕಿಂಗ್, ವಂಚನೆ ಅಥವಾ ಸೈಬರ್ ಅಪರಾಧ: ಫೋನ್‌ಗಳು, ವೈ-ಫೈ ಅಥವಾ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವುದು ಹೇಗೆ, UPI ವಂಚನೆಗಳು, OTP ವಂಚನೆಗಳು, ಯಾರದ್ದೋ ಅಥವಾ ಯಾವುದೇ ಸಾಧನದ ಪಾಸ್‌ವರ್ಡ್‌ಗಳನ್ನು ಭೇದಿಸುವುದು ಹೇಗೆ ಎಂಬ ಈ ರೀತಿಯ ಹುಡುಕಾಟಗಳಿಂದ ದೂರವಿರಿ. ಅವು ನಿಮಗೆ ಸಾಮಾನ್ಯವಾಗಿ ಕಂಡರೂ ಭಾರತೀಯ ಸೈಬರ್ ತಂಡಕ್ಕೆ ಅವು ಕ್ರಿಮಿನಲ್ ಉದ್ದೇಶದಂತೆ ಕಾಣಿಸಬಹುದು. ಇದು ನಿಮ್ಮನ್ನು ಕಾನೂನು ತೊಂದರೆಗೆ ಸಿಲುಕಿಸಬಹುದು.

ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್: ನೀವು ಯಾವುದೇ ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್‌ಗಳನ್ನು ಗೂಗಲ್‌ನಲ್ಲಿ ಹುಡುಕಬಾರದು ಏಕೆಂದರೆ ಸೈಬರ್ ಅಪರಾಧಿಗಳು ಇದೇ ರೀತಿಯ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಗೂಗಲ್ ಹುಡುಕಾಟದಲ್ಲಿ ಹಾಕುತ್ತಾರೆ ಮತ್ತು ನೀವು ಅವುಗಳನ್ನು ಡೌನ್‌ಲೋಡ್ ಮಾಡಿದ ತಕ್ಷಣ, ನಿಮ್ಮ ಫೋನ್ ಮತ್ತು ಕಂಪ್ಯೂಟರ್‌ನಿಂದ ಪ್ರಮುಖ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಒಂದು ಗ್ಲಾಸ್‌ ನೀರು ನೀಡುವುದೇಕೆ?

ಹೂಡಿಕೆ ಯೋಜನೆಗಳು: ನಿಮ್ಮ ಹಣವನ್ನು ತ್ವರಿತವಾಗಿ ದ್ವಿಗುಣಗೊಳಿಸುವ ಅಥವಾ ಹೆಚ್ಚಿನ ಆದಾಯವನ್ನು ಖಾತರಿಪಡಿಸುವ ಇತ್ಯಾದಿ ಭರವಸೆಗಳನ್ನು ನೀಡುವ ಹೂಡಿಕೆ ಯೋಜನೆಗಳನ್ನು ಹುಡುಕುವುದನ್ನು ತಪ್ಪಿಸಿ. ಏಕೆಂದರೆ ಇವುಗಳಲ್ಲಿ ಕೆಲವೊಂದು ವೆಬ್‌ಸೈಟ್‌ಗಳು ಕ್ರಿಪ್ಟೋ ವಂಚನೆಗಳಾಗಿರಬಹುದು, ಇಂತಹ ವೆಬ್‌ಸೈಟ್‌ಗಳು ನಿಮ್ಮ ಹಣವನ್ನೆಲ್ಲಾ ದೋಚಬಹುದು.  ಆದ್ದರಿಂದ ಯಾವಾಗಲೂ ಪ್ರತಿಷ್ಠಿತ ಸಂಸ್ಥೆಗಳಿಂದ ಹೂಡಿಕೆಗೆ ಸಂಬಂಧಿಸಿದ ಸಲಹೆಯನ್ನು ಕೇಳಿ.

ಗ್ರಾಹಕ ಸೇವೆ ಸಂಖ್ಯೆ: ಕಸ್ಟಮರ್ ಕೇರ್ ಸಂಖ್ಯೆಗಳನ್ನು ಗೂಗಲ್‌ನಲ್ಲಿ ಹುಡುಕಬಾರದು. ಇಲ್ಲಿ, ಸೈಬರ್ ಅಪರಾಧಿಗಳು ನಿಮಗೆ ತಪ್ಪು ಕಸ್ಟಮರ್ ಕೇರ್ ಸಂಖ್ಯೆಯನ್ನು ನೀಡುವ ಮೂಲಕ ನಿಮ್ಮ ಪ್ರಮುಖ ಮಾಹಿತಿಯನ್ನು ಕದಿಯಬಹುದು. ನಂತರ, ಈ ಮಾಹಿತಿಯ ಸಹಾಯದಿಂದ, ಅವರು ನಿಮ್ಮ ಹಣವನ್ನು ದೋಚಬಹುದು. ಹಾಗಾಗಿ ಗ್ರಾಹಕ ಸೇವಾ ಸಂಖ್ಯೆಯನ್ನು ನೇರವಾಗಿ ಗೂಗಲ್‌ನಲ್ಲಿ ಹುಡುಕುವ ಬದಲು ಆಯಾ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಿರಿ.

ರೋಗ ನಿರ್ಣಯ ವಿಷಯಗಳು: ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ, ಅದಕ್ಕೆ ಯಾವ ಔಷಧಿ ಸೂಕ್ತ ಎಂಬ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಬಾರದು. ಇದು ನಿಮ್ಮ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು. ಆದ್ದರಿಂದ ಔಷಧಿಗಳು ಮತ್ತು ಯಾವುದೇ ವೈದ್ಯಕೀಯ ಸಮಸ್ಯೆಗೆ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ, ಆಗಿದ್ದೇನು? – Kannada News | Bengaluru Rapido accident: Injured woman seeks accountability after near fatal crash

ಬೆಂಗಳೂರು, ಜುಲೈ 06): ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಅತಿ ವೇಗದ ಚಾಲನೆಯಿಂದ ಯುವತಿ ಆಸ್ಪತ್ರೆ ಸೇರುವಂತಾಗಿದೆ. ಹೌದು…ಜೂನ್ 17ರಂದು ಬೆಳಗ್ಗೆ ಸಾನಿಕೃಷ್ಣ (32) ಎನ್ನುವ ಯುವತಿ , ರ್ಯಾಪಿಡೋ ಬುಕ್ ಮಾಡಿಕೊಂಡು ಬೆಂಗಳೂರಿನ ಬೈರಸಂದ್ರದ ದೊಮ್ಮಲೂರಿಗೆ ಹೊರಟ್ಟಿದ್ದಳು. ಆದ್ರೆ, ಮಾರ್ಗ ಮಧ್ಯೆ ಅಪಘಾತವಾಗಿದೆ. ಟ್ರಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್​ ಸಾನಿಕೃಷ್ಣ ಮೇಲೆ ಹರಿದಿದ್ದು, ಗಂಭೀರ ಗಾಯಗಳಾಗಿವೆ. ಬೆಂಗಳೂರಿನಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಾಗಿರುವ ಕಾರಣ, ಸದ್ಯ ಸಾನಿ ಅವರ ಸ್ವಂತ ಊರಾದ ಕೇರಳದ ಕೋಯಿಕ್ಕೊಡ್ ನಲ್ಲಿರುವ ಮಿತ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ರ್ಯಾಪಿಡೋ ಯಾವುದೇ ಹಣ ಸಹಾಯ ಮಾಡಿಲ್ಲ. ಇದರಿಂದ ಯುವತಿ ಇ-ಮೇಲ್ ಮೂಲಕ ದೂರು ನೀಡಿದ್ದು, ಈ ಸಂಬಂಧ
ಜೀವನ್ ಭೀಮಾ ನಗರ ಪೋಲಿಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗ: ಎಸ್​ಐಆರ್ ಪ್ರಕ್ರಿಯೆ ವೇಳೆ ಹೃದಯಾಘಾತದಿಂದ ಮತ್ತೋರ್ವ ಬಿಎಲ್‌ಒ ಸಾವು! – Kannada News | Another BLO Dies of Heart Attack During SIR Process in Karnataka

ಶಿವಮೊಗ್ಗ, ಜುಲೈ 06: ರಾಜ್ಯದಲ್ಲಿ ಎಸ್​ಐಆರ್ (SIR) ವೇಳೆ ಹಲವು ಎಡವಟ್ಟುಗಳು ನಡೆದಿವೆ. ಮನೆ ಮನೆಗೆ ತೆರಳುವ ಬದಲು ಕಲ್ಯಾಣ ಮಂಟಪ, ಮಸೀದಿ ದೇಗುಲ ಹಾಗೂ ಅಂಗನವಾಡಿಗಳಲ್ಲಿ ಬಿಎಲ್​​ಓಗಳು ಎಸ್​ಐಆರ್ ಫಾರ್​ಮ್ ಹಂಚಿಕೆ ಮಾಡುತ್ತಿದ್ದಾರೆ. ಈ ಮಧ್ಯೆ ಎಸ್​ಐಆರ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕೆಲ ಸಿಬ್ಬಂದಿ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾರೆ. ಇದೀಗ ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಎಸ್​ಐಆರ್​ ವೇಳೆ ಹೃದಯಾಘಾತವಾಗಿ ಬಿಎಲ್​ಒ ಸಾವನ್ನಪ್ಪಿದ್ದಾರೆ.

ನಡೆದಿದ್ದೇನು?

ಕಲ್ಲಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೂ ಆಗಿದ್ದ ಬಿಎಲ್‌ಒ (BLO) ಮಂಜುಳಾ (52) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಜುಳಾ ಅವರು ಇಂದು ಕಲ್ಲಾಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್​ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ

ಸದ್ಯ ಮೃತದೇಹವನ್ನು ಭದ್ರಾವತಿ ತಾಲೂಕಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಒತ್ತಡದಿಂದಲೇ ಸಾವುವಾಗಿದೆ: ಮಂಜುಳಾ ಪತಿ ಸಂಗಯ್ಯ ಗಂಭೀರ ಆರೋಪ

ಇನ್ನು ಪತ್ನಿ ಮಂಜುಳಾ ಸಾವಿಗೆ ಪತಿ ಸಂಗಯ್ಯ ಕಣ್ಣೀರು ಹಾಕಿದ್ದಾರೆ. ನಿರಂತರವಾಗಿ ಅಧಿಕಾರಿಗಳು ಹೇರುತ್ತಿದ್ದ ಒತ್ತಡದಿಂದಲೇ ಸಾವಾಗಿದೆ ಎಂದು ಟಿವಿ9 ವಾಹಿನಿ ಎದುರು ಆಕ್ರೋಶ ವ್ಯಕ್ತಪಡಿಸಿದರು. ‘ನನ್ನ ಪತ್ನಿಗೆ ಸಕ್ಕರೆ ಕಾಯಿಲೆ ಇತ್ತು. ಅವರು ಎಸ್​ಐಆರ್ ಕರ್ತವ್ಯ ಬೇಡ ಅಂದರೂ ಒತ್ತಡ ಹಾಕಲಾಗಿದೆ’ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು

‘ಇಂದು ಕರ್ತವ್ಯ ಸಮಯದಲ್ಲಿ ಪತ್ನಿ ಸಾವು ಆಗಿದೆ. ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಾವಿನ ಕಾರಣ ಗೊತ್ತಾಗಲಿದೆ. ಅಂಗನವಾಡಿ ಕೆಲಸದ ಜೊತೆ ಈ ಕೆಲಸ ಹೆಚ್ಚಿನ ಹೊರೆ ಆಗಿತ್ತು’ ಎಂದು ಮಂಜುಳಾ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ – Kannada News | PM Narendra Modi arrives in Indonesia President Prabowo Subianto welcomed him at airport

ಜಕಾರ್ತ, ಜುಲೈ 6: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ತಮ್ಮ ಮೂರು ದೇಶಗಳ ಅಧಿಕೃತ ಪ್ರವಾಸದ ಮೊದಲ ಭಾಗವಾಗಿ ಇಂಡೋನೇಷ್ಯಾಕ್ಕೆ ತಲುಪಿದ್ದಾರೆ. ಪ್ರಧಾನಿ ಮೋದಿ ಅವರು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾಕ್ಕೆ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಅವರನ್ನು ಇಂಡೋನೇಷ್ಯಾದ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೊ ಅವರು ಬರಮಾಡಿಕೊಂಡರು. ಈ ಭೇಟಿಯ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಇಂಡೋನೇಷ್ಯಾದ ಅಧ್ಯಕ್ಷರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಜಂಟಿ ಕಡಲ ಭದ್ರತೆಯನ್ನು ಬಲಪಡಿಸುವುದು, ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು, ಭಾರತದ ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇಂಡೋನೇಷ್ಯಾದಲ್ಲಿ ಜಾರಿಗೆ ತರುವ ಕುರಿತು ಮಹತ್ವದ ಒಪ್ಪಂದಗಳು ಈ ಸಭೆಯಲ್ಲಿ ನಡೆಯುವ ಸಾಧ್ಯತೆಯಿದೆ.

ಭಾರತದ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿರುವ ‘ಆಕ್ಟ್ ಈಸ್ಟ್ ಪಾಲಿಸಿ’ ಅಡಿಯಲ್ಲಿ ಇಂಡೋನೇಷ್ಯಾ ಅತ್ಯಂತ ಪ್ರಮುಖ ದೇಶವಾಗಿದೆ. ಆಸಿಯಾನ್ (ASEAN) ಒಕ್ಕೂಟದ ಪ್ರಬಲ ರಾಷ್ಟ್ರವಾಗಿರುವ ಇಂಡೋನೇಷ್ಯಾದೊಂದಿಗೆ ಬಾಂಧವ್ಯ ವೃದ್ಧಿಸುವುದು ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ಸೇಬು ಹಣ್ಣನ್ನು ಗುರುತಿಸಬಲ್ಲಿರಾ – Kannada News | Optical Illusion: Find the hidden apple in this picture within 5 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Instagram

ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸಲು ನೀವು ರೆಡಿ ಇದ್ದೀರಾ. ಹೌದು, ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು, ಬ್ರೈನ್‌ ಟೀಸರ್‌ ಆಟಗಳಿಂದ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಿಕೊಳ್ಳಬಹುದು. ಆದರೆ ಈ ಟ್ರಿಕ್ಕಿ ಒಗಟು ಬಿಡಿಸುವಾಗ ನಿಮ್ಮ ಮೆದುಳನ್ನು ಬಳಸಿಕೊಳ್ಳುವುದು ಬಹಳ ಮುಖ್ಯ. ಇದೀಗ ನೀವು  ಬುದ್ಧಿವಂತರೇ ಎಂದು ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿರುವ ಸೇಬು ಹಣ್ಣನ್ನು ಪತ್ತೆ ಹಚ್ಚಬೇಕು. ನೀವು ಐದು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಸಾಧ್ಯವೇ.

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?

ಎಸ್ಕೇಪ್ ಮನೋರ್‌ (escape manor) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಭ್ರಮೆ ಉಂಟು ಮಾಡುವುದು ಸಹಜ. ಈ ಚಿತ್ರದಲ್ಲಿ ನೋಡಿದಾಗ ನಿಮ್ಮ ಕಣ್ಣಿಗೆ ಕೋಳಿ, ಬಾತುಕೋಳಿ ಹಾಗೂ ಕುಂಬಳಕಾಯಿ ರಾಶಿ ಕಾಣಿಸುತ್ತದೆ. ಈ ಕಾರ್ಟೂನ್ ಆಧಾರಿತ ಚಿತ್ರದಲ್ಲಿ ಸೇಬು ಹಣ್ಣು ಒಂದಿದೆ. ಈ ಹಣ್ಣನ್ನು ನೀವು ಐದು ಸೆಕೆಂಡುಗಳೊಳಗೆ ಪತ್ತೆ ಹಚ್ಚಿದ್ರೆ ನಿಮ್ಮದು ದೃಷ್ಟಿ ತೀಕ್ಷ್ಣವಾಗಿದೆ ಎಂದರ್ಥ. ಈ ಒಗಟು ಬಿಡಿಸುವ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ ಎಂದು ಭಾವಿಸುತ್ತೇವೆ.

ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ನೀವು ಜಾಣರೇ, ಈ ಲಿವಿಂಗ್ ರೂಮ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ

ಸೇಬು ಹಣ್ಣನ್ನು ಗುರುತಿಸಲು ಸಾಧ್ಯವಾಯಿತೇ?

ಈ ಚಿತ್ರದಲ್ಲಿ ಕೋಳಿ, ಬಾತುಕೋಳಿಗಳು ಹಾಗೂ ಕುಂಬಳಕಾಯಿಯನ್ನು ಒಳಗೊಂಡಿದೆ. ಈ ಚಿತ್ರದ ವಿನ್ಯಾಸದಿಂದ ಇಲ್ಲಿರುವ ಸೇಬು ಹಣ್ಣನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಇಲ್ಲಿ ಬಿಳಿ ಬಣ್ಣದಲ್ಲಿ ವೃತ್ತ ಎಳೆದು ಸೇಬನ್ನು ಗುರುತಿಸಿದ್ದೇವೆ. ಈ ಫೋಟೋದಲ್ಲಿ ಸಣ್ಣ ಗಾತ್ರದ ಹಾಗೂ ಕೆಂಪು ಬಣ್ಣದ ಸೇಬು ನಿಮ್ಮ ಕಣ್ಣಿಗೆ ಗೋಚರಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ ಸೇಬು ಹಣ್ಣನ್ನು ಗುರುತಿಸಿರುವುದನ್ನು ನೀವು ನೋಡಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಗ ಹೆಮ್ಮೆಪಡುವ ಸಿನಿಮಾ ಮಾತ್ರ ಈಗ ಒಪ್ಪಿಕೊಳ್ಳುವೆ’: ನಟಿ ಕಾಜಲ್ ಅಗರ್ವಾಲ್ ಮನದ ಮಾತು – Kannada News | Kajal Aggarwal talks about The India Story and Ramayana movie and her son

ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಜ್ಜಾಗಿವೆ. ಶ್ರೇಯಸ್ ತಲ್ಪಾಡೆ ಜೊತೆಗಿನ ‘ದಿ ಇಂಡಿಯಾ ಸ್ಟೋರಿ’ (The India Story) ಈ ತಿಂಗಳೇ ತೆರೆಗೆ ಬರುತ್ತಿದ್ದರೆ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ (Ramayana) ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ. ತಾಯಿಯಾದ ಬಳಿಕ ತಮ್ಮ ಸಿನಿಮಾ ಆಯ್ಕೆಗಳು ಹೇಗೆ ಬದಲಾಗಿವೆ ಎಂಬುದನ್ನು ಕಾಜಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಮಗನಿಗಾಗಿ ಬದಲಾದ ಸಿನಿಮಾ ಆಯ್ಕೆ:

ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದ ಕಾಜಲ್ ಅವರಿಗೆ ನೀಲ್ ಕಿಚ್ಲು ಎಂಬ ಮಗನಿದ್ದಾನೆ. ತಾಯಿಯಾದ ನಂತರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳುವ ಕಾಜಲ್, ‘ಈಗ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮುನ್ನ ನನ್ನ ಮಗನ ದೃಷ್ಟಿಕೋನದಿಂದ ಯೋಚಿಸುತ್ತೇನೆ. ನನ್ನ ಸಿನಿಮಾಗಳನ್ನು ನೋಡಿ ನನ್ನ ಮಗ – ನಮ್ಮ ಅಮ್ಮ ಅದ್ಭುತ ಚಿತ್ರದ ಭಾಗವಾಗಿದ್ದರು – ಎಂದು ಹೆಮ್ಮೆಯಿಂದ ಹೇಳಬೇಕು. ಹಾಗಾಗಿ ಈಗ ಕಥೆಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಜವಾಬ್ದಾರಿ ಮತ್ತು ಜಾಗರೂಕತೆ ಇರುತ್ತದೆ’ ಎಂದಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ಮಂಡೋದರಿ ಪಾತ್ರ:

‘ರಾಮಾಯಣ’ ಚಿತ್ರದ ಬಗ್ಗೆ ಕಾಜಲ್ ವಿಶೇಷ ಉತ್ಸಾಹ ಹೊಂದಿದ್ದಾರೆ. ‘ನನ್ನ ಮಗನಿಗೆ ರಾಮಾಯಣ ಎಂದರೆ ಪಂಚಪ್ರಾಣ. ಪ್ರತಿದಿನ ಮನೆಯಲ್ಲಿ ರಾಮಲೀಲಾ ನಾಟಕ ಮಾಡುತ್ತಿರುತ್ತಾನೆ. ನಾನು ಈ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಕೇಳಿ ಅವನಿಗಂತೂ ತುಂಬಾನೇ ಖುಷಿಯಾಗಿದೆ. ವಿಶೇಷವೆಂದರೆ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಾವಣನ ಪಾತ್ರವೇ ಇಷ್ಟ. ಚಿತ್ರದ ಎರಡನೇ ಭಾಗ ಬರುವಷ್ಟರಲ್ಲಿ ಅವನಿಗೆ 5 ವರ್ಷ ತುಂಬುತ್ತದೆ. ಥಿಯೇಟರ್‌ನಲ್ಲಿ ಅವನು ನೋಡಲಿರುವ ಮೊದಲ ಸಿನಿಮಾ ಇದೇ ಆಗಿರುತ್ತದೆ’ ಎಂದು ಕಾಜಲ್ ಹೇಳಿದ್ದಾರೆ.

ಇದನ್ನೂ ಓದಿ: ನಟ ಯಶ್ ಗುಣಗಾನ ಮಾಡಿದ ಕಾಜಲ್, ನಟಿ ಹೇಳಿದ್ದೇನು?

ಆಹಾರ ಪದ್ಧತಿ ಬದಲಿಸಿದ ‘ದಿ ಇಂಡಿಯಾ ಸ್ಟೋರಿ’:

ತಮ್ಮ ಮತ್ತೊಂದು ಚಿತ್ರವಾದ ‘ದಿ ಇಂಡಿಯಾ ಸ್ಟೋರಿ’ ಬಗ್ಗೆ ಮಾತನಾಡಿದ ಕಾಜಲ್, ಇದು ಕೀಟನಾಶಕಗಳ ಮಾಫಿಯಾ ಮತ್ತು ಆಹಾರ ಕಲಬೆರಕೆ ಭ್ರಷ್ಟಾಚಾರದ ಸುತ್ತ ಸಾಗುವ ಕಥೆಯಾಗಿದೆ ಎಂದಿದ್ದಾರೆ. ‘ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಏನೆಲ್ಲಾ ಇರುತ್ತದೆ ಮತ್ತು ಅದು ಹೇಗೆ ತಯಾರಾಗುತ್ತದೆ ಎಂಬುದರ ಆಳವಾದ ಸಂಶೋಧನೆ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಇದರ ಶೂಟಿಂಗ್ ಮಾಡುವಾಗ ನನಗೆ ಶಾಕ್ ಆಗಿತ್ತು. ಕಣ್ಣು ಮುಚ್ಚಿ ಬಳಸುತ್ತಿದ್ದ ಎಷ್ಟೋ ವಸ್ತುಗಳನ್ನು ಈಗ ನನ್ನ ಅಡುಗೆಮನೆಯಿಂದ ಹೊರಹಾಕಿದ್ದೇನೆ. ನನ್ನ ಮಗನಿಗೆ ಯಾವ ಆಹಾರ ನೀಡಬೇಕು, ಯಾವುದನ್ನು ನೀಡಬಾರದು ಎಂಬ ಬಗ್ಗೆ ಈಗ ನನಗೆ ಸ್ಪಷ್ಟತೆ ಸಿಕ್ಕಿದೆ’ ಎಂದಿದ್ದಾರೆ ಕಾಜಲ್ ಅಗರ್ವಾಲ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಉಡುಪಿ, ಉತ್ತರ ಕನ್ನಡಕ್ಕೆ ರೆಡ್​​ ಅಲರ್ಟ್​​, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ – Kannada News | Karnataka Weather Forecast: Red Alert for Udupi, Uttara Kannada; Orange Alert Issued for Bengaluru and 17 Other Districts

ಬೆಂಗಳೂರು, ಜುಲೈ 06: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವಿಪರೀತ ವರ್ಷಧಾರೆಯಾಗುತ್ತಿದೆ. ಈ ನಡುವೆ ಜುಲೈ 9ರಿಂದ 11ರ ವರೆಗೆ ಕರಾವಳಿಯಲ್ಲಿ, ಜುಲೈ 9ರಂದು ದಕ್ಷಿಣ ಒಳನಾಡು ಭಾಗದಲ್ಲಿ ಮತ್ತು ಜುಲೈ 8ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಪೈಕಿ ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಪರೀತ ಮಳೆಯ ಜೊತೆಗೆ ಗಂಟೆಗೆ 50-60 ಕಿಲೋ ಮೀಟರ್​​ ವೇಗದಲ್ಲಿ ಗಾಳಿಯ ಅಬ್ಬರವೂ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಎರಡು ಜಿಲ್ಲೆಗಳಿಗೆ ನಾಳೆ ರೆಡ್​​ ಅಲರ್ಟ್​​

ಕರಾವಳಿ ಭಾಗದ ಉತ್ತರ ಕನ್ನಡ ಮತ್ತು ಉಡುಪಿಗೆ ನಾಳೆ ರೆಡ್​​ ಅಲರ್ಟ್​​ ನೀಡಲಾಗಿದ್ದು, ರಾಜ್ಯದ 18 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯಬ್ಬರದ ನಿರೀಕ್ಷೆ ಇದೆ.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ ಕರ್ನಾಟಕ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ?

ಕೆಲ ಜಿಲ್ಲೆಗಳಲ್ಲಿ ವಿಪರೀತ ಗಾಳಿ

ಚಾಮರಾಜನಗರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿಪರೀತ ಗಾಳಿ ಇರಲಿದ್ದು, ಗಾಳಿಯ ವೇಗ ಗಂಟೆಗೆ 40-50 ಕಿಲೋ ಮೀಟರ್​​ ಇರಬಹುದೆಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರಕ್ಕೂ ಆರೆಂಜ್​​ ಅಲರ್ಟ್​​

ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿರುವ ಬೆಂಗಳೂರು ನಗರದಲ್ಲಿಯೂ ನಾಳೆ ಭಾರಿ ಮಳೆಯ ನಿರೀಕ್ಷೆ ಇದ್ದು, ಆರೆಂಜ್​​ ಅಲರ್ಟ್​​ ನೀಡಲಾಗಿದೆ. ಗಂಟೆಗೆ 30-40 ಕಿಲೋ ಮೀಟರ್​​ ಗಾಳಿಯ ವೇಗದ ಜೊತೆಗೆ ವರುಣಾರ್ಭಟದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಕಲಿ ವೆಬ್ಸೈಟ್​ಗಳನ್ನು ಗುರುತಿಸುವುದು ಸುಲಭ; 5 ಉಪಾಯಗಳನ್ನು ಹಂಚಿಕೊಂಡಿದೆ ಸರ್ಕಾರದ ಪಿಐಬಿ ಫ್ಯಾಕ್ಟ್​ಚೆಕ್ – Kannada News | Beware of fake websites, PIB fact check shares 5 things how to find the fake sites

ನವದೆಹಲಿ, ಜುಲೈ 6: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಕ್ರೈಮ್‌ಗಳು ದಿನೇದಿನೆ ಹೆಚ್ಚುತ್ತಿವೆ. ಜನಸಾಮಾನ್ಯರನ್ನು ನಕಲಿ ವೆಬ್‌ಸೈಟ್‌ಗಳ ಮೂಲಕ ವಂಚಿಸುವ ಜಾಲಗಳು ಸಕ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಭಾರತ ಸರ್ಕಾರದ ಅಧಿಕೃತ ಸಂಸ್ಥೆಯಾದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ನ ಫ್ಯಾಕ್ಟ್ ಚೆಕ್ (Fact Check) ಘಟಕವು ನಕಲಿ ವೆಬ್‌ಸೈಟ್‌ಗಳನ್ನು ಸುಲಭವಾಗಿ ಗುರುತಿಸಲು 5 ಪ್ರಮುಖ ಎಚ್ಚರಿಕೆ ಸಂಕೇತಗಳ (Warning Signs) ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನಿಮ್ಮ ಪಾಸ್‌ವರ್ಡ್‌ಗಳು, ಬ್ಯಾಂಕಿಂಗ್ ವಿವರಗಳು ಮತ್ತು ವೈಯಕ್ತಿಕ ಡೇಟಾವನ್ನು ಆನ್‌ಲೈನ್ ಟ್ರ್ಯಾಪ್‌ಗಳಿಂದ ರಕ್ಷಿಸಿಕೊಳ್ಳಲು ನೆರವಾಗುವ ಆ 5 ಪ್ರಮುಖ ಅಂಶಗಳು ಇಲ್ಲಿವೆ:

1. ವೆಬ್‌ಸೈಟ್ ಯುಆರ್‌ಎಲ್ (URL) ಅನ್ನು ಸೂಕ್ಷ್ಮವಾಗಿ ಗಮನಿಸಿ

ಯಾವುದೇ ವೆಬ್‌ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸುವ ಮುನ್ನ ಅಥವಾ ಆನ್‌ಲೈನ್ ವಹಿವಾಟು ನಡೆಸುವ ಮುನ್ನ ಅದರ ವೆಬ್ ವಿಳಾಸವನ್ನು (URL) ಪರೀಕ್ಷಿಸಿ.

ಪ್ರಮುಖ ವೆಬ್‌ಸೈಟ್‌ಗಳ ವಿಳಾಸವು “https://” ನಿಂದ ಆರಂಭವಾಗುತ್ತದೆಯೇ ಹೊರತು ಬರೀ “http” ನಿಂದ ಅಲ್ಲ (ಇಲ್ಲಿ ‘s’ ಎಂದರೆ Secure ಅಥವಾ ಸುರಕ್ಷಿತ ಎಂದರ್ಥ).

ವಂಚಕರು ಪ್ರಸಿದ್ಧ ಬ್ರ್ಯಾಂಡ್‌ಗಳು ಅಥವಾ ಸರ್ಕಾರಿ ಪೋರ್ಟಲ್‌ಗಳ ಹೆಸರನ್ನು ಹೋಲುವ, ಆದರೆ ಅಕ್ಷರಗಳಲ್ಲಿ ಸಣ್ಣಪುಟ್ಟ ಕಾಗುಣಿತ ದೋಷಗಳಿರುವ (Spelling mistakes) ನಕಲಿ ಡೊಮೇನ್ ಹೆಸರುಗಳನ್ನು ಸೃಷ್ಟಿಸುತ್ತಾರೆ. ಇವುಗಳ ಬಗ್ಗೆ ಎಚ್ಚರವಿರಲಿ. ಉದಾಹರಣೆಗೆ, ಟಿವಿ9 ಕನ್ನಡ ವೆಬ್​ಸೈಟ್ ಯುಆರ್​ಎಲ್ ಗಮನಿಸಿ, ಅದು ಹೀಗಿದೆ: https://tv9kannada.com/. ವಂಚಕರು https://tv99kannada.com/ ಎನ್ನುವ ಯುಆರ್​ಎಲ್ ಇರುವ ನಕಲಿ ವೆಬ್​ಸೈಟ್ ಸೃಷ್ಟಿಸಬಹುದು. ಹೀಗಾಗಿ, ಎಚ್ಚರ ಇರಲಿ.

2. ಪ್ಯಾಡ್‌ಲಾಕ್ (Padlock) ಚಿಹ್ನೆ ಪರಿಶೀಲಿಸಿ

ನಿಮ್ಮ ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ (ವೆಬ್‌ಸೈಟ್ ಹೆಸರಿರುವ ಜಾಗದಲ್ಲಿ) ಒಂದು ಸಣ್ಣ ಬೀಗದ ಮುದ್ರೆ ಅಥವಾ ಪ್ಯಾಡ್‌ಲಾಕ್ (🔒) ಚಿಹ್ನೆ ಇರುವುದನ್ನು ಖಚಿತಪಡಿಸಿಕೊಳ್ಳಿ.

ಈ ಚಿಹ್ನೆಯು ನಿಮ್ಮ ಮತ್ತು ವೆಬ್‌ಸೈಟ್ ನಡುವಿನ ಸಂಪರ್ಕವು ಗೂಢಲಿಪೀಕರಣಗೊಂಡಿದೆ (Encrypted) ಎಂಬುದನ್ನು ಸೂಚಿಸುತ್ತದೆ. ಅಂದರೆ, ಈ ವೆಬ್​ಸೈಟ್​ನಲ್ಲಿ ಬಳಕೆದಾರನ ಚಟುವಟಿಕೆಗಳನ್ನು ಮೂರನೇ ಪಕ್ಷದವರು (Third person) ಕದ್ದು ನೋಡಲು ಆಗುವುದಿಲ್ಲ.

ಒಂದು ವೇಳೆ ಅಲ್ಲಿ ಪ್ಯಾಡ್‌ಲಾಕ್ ಚಿಹ್ನೆ ಇಲ್ಲದಿದ್ದರೆ, ಆ ಸೈಟ್‌ನಲ್ಲಿ ಯಾವುದೇ ಪಾಸ್‌ವರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

ಇದನ್ನೂ ಓದಿ: ಪಿಎಂ ಕೃಷಿ ಸಿಂಚಯಿ ಯೋಜನೆ: ನೀರಾವರಿ ಸಿಸ್ಟಮ್ಸ್ ಅಳವಡಿಸಲು ಭರ್ಜರಿ ರಿಯಾಯಿತಿ; ಇಲ್ಲಿದೆ ಸಬ್ಸಿಡಿ ಮತ್ತಿತರ ಸೌಲಭ್ಯಗಳ ವಿವರ

3. ಅತಿಯಾದ ಪಾಪ್-ಅಪ್ಸ್ ಮತ್ತು ಕ್ಲಿಕ್‌ಬೈಟ್ ಆಫರ್‌ಗಳು

ನಕಲಿ ವೆಬ್‌ಸೈಟ್‌ಗಳ ಮತ್ತೊಂದು ದೊಡ್ಡ ಲಕ್ಷಣವೆಂದರೆ ಅತಿಯಾದ ಜಾಹೀರಾತುಗಳು ಮತ್ತು ಪದೇಪದೇ ಬರುವ ಪಾಪ್-ಅಪ್ (Pop-up) ವಿಂಡೋಗಳು.

ಮೋಸದ ವೆಬ್‌ಸೈಟ್‌ಗಳು ಬಳಕೆದಾರರನ್ನು ಆಕರ್ಷಿಸಲು ತಪ್ಪು ದಾರಿಗೆಳೆಯುವ ಹಾಗೂ ಕ್ಲಿಕ್‌ಬೈಟ್ (Clickbait) ಆಫರ್‌ಗಳನ್ನು ಪ್ರದರ್ಶಿಸುತ್ತವೆ.

ಯಾವುದಾದರೂ ವೆಬ್‌ಸೈಟ್ ಅತಿಯಾದ ಸ್ಪ್ಯಾಮ್‌ನಿಂದ ಕೂಡಿದ್ದು, ನಿಮ್ಮ ಅನುಮತಿಯಿಲ್ಲದೆ ಪಾಪ್-ಅಪ್‌ಗಳನ್ನು ತೆರೆಯುತ್ತಿದ್ದರೆ ತಕ್ಷಣವೇ ಆ ಸೈಟ್ ಅನ್ನು ಮುಚ್ಚಿ (Close).

4. ‘ಕಾಂಟ್ಯಾಕ್ಟ್ ಅಸ್’ ಮತ್ತು ‘ಅಬೌಟ್ ಅಸ್’ ಪುಟಗಳನ್ನು ಪರಿಶೀಲಿಸಿ

ಯಾವುದೇ ಅಪರಿಚಿತ ವೆಬ್‌ಸೈಟ್ ಅನ್ನು ನಂಬುವ ಮುನ್ನ ಅದರ ‘Contact Us’ (ಸಂಪರ್ಕಿಸಿ) ಮತ್ತು ‘About Us’ (ನಮ್ಮ ಬಗ್ಗೆ) ಪುಟಗಳನ್ನು ಒಮ್ಮೆ ನೋಡಿ.

ಅಧಿಕೃತ ಮತ್ತು ನಿಜವಾದ ವೆಬ್‌ಸೈಟ್‌ಗಳು ಯಾವಾಗಲೂ ಸರಿಯಾಗಿ ಕೆಲಸ ಮಾಡುವ ಫೋನ್ ಸಂಖ್ಯೆಗಳು, ಅಧಿಕೃತ ಇಮೇಲ್ ಐಡಿಗಳು ಮತ್ತು ತಮ್ಮ ಸಂಸ್ಥೆಯ ನೋಂದಾಯಿತ ವಿಳಾಸವನ್ನು ನೀಡಿರುತ್ತವೆ.

ವೆಬ್‌ಸೈಟ್‌ನಲ್ಲಿ ಯಾವುದೇ ಸಂಪರ್ಕ ಮಾಹಿತಿ ಇಲ್ಲದಿದ್ದರೆ ಅಥವಾ ಸಂಶಯಾಸ್ಪದ ವಿವರಗಳಿದ್ದರೆ ಅದನ್ನು ನಕಲಿ ಎಂದು ಪರಿಗಣಿಸಬಹುದು.

ಇದನ್ನೂ ಓದಿ: ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು

5. ಅತಿ ಆಕರ್ಷಕ ಅಥವಾ ನಂಬಲಾಗದ ಕೊಡುಗೆಗಳು

“ನಂಬಲು ಸಾಧ್ಯವೇ ಇಲ್ಲ” (Too Good to be True) ಎನ್ನುವಂತಹ ಅದ್ಭುತ ಕೊಡುಗೆಗಳನ್ನು ನೀಡುವ ವೆಬ್‌ಸೈಟ್‌ಗಳ ಬಗ್ಗೆ ತೀವ್ರ ನಿಗಾ ಇರಲಿ.

ಕೇವಲ ಒಂದು ಕ್ಲಿಕ್‌ನಲ್ಲಿ ಉಚಿತ ಲ್ಯಾಪ್‌ಟಾಪ್‌ಗಳು, ಸರ್ಕಾರಿ ಉದ್ಯೋಗಗಳು ಅಥವಾ ಬಂಪರ್ ಬಹುಮಾನಗಳನ್ನು ಗೆಲ್ಲಿ ಎಂದು ಪ್ರಚಾರ ಮಾಡುವ ವೆಬ್‌ಸೈಟ್‌ಗಳು ಬಹುತೇಕ ನಕಲಿಯಾಗಿರುತ್ತವೆ.

ಇಂತಹ ಅಕರ್ಷಕ ಪ್ರಚಾರದ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಪಿಐಬಿ ಎಚ್ಚರಿಸಿದೆ.

“ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುನ್ನ, ಆ ವೆಬ್‌ಸೈಟ್ ನಿಜವಾದದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಕಲಿ ಸೈಟ್ ಅನ್ನು ಗುರುತಿಸುವುದು ನೀವು ಅಂದುಕೊಂಡಿದ್ದಕ್ಕಿಂತ ತುಂಬಾ ಸುಲಭ” ಎಂದು ಎಕ್ಸ್ ಪೋಸ್ಟ್​ನಲ್ಲಿ ವಿವರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ: ಸಚಿವ ಎಂ.ಬಿ. ಪಾಟೀಲ್ – Kannada News | Karnataka Minister MB Patil on Ministry Name Change Controversy and Upcoming Cabinet Reshuffle

ಬೆಂಗಳೂರು, ಜು.6: ಕರ್ನಾಟಕದಲ್ಲಿ ಹೊಸದಾಗಿ ಪ್ರಸ್ತಾಪಿಸಲಾಗಿರುವ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಸರು ಹಾಗೂ ವ್ಯಾಪ್ತಿಯ ಕುರಿತು ಉಂಟಾಗಿರುವ ಗೊಂದಲಗಳಿಗೆ ಕ್ಯಾಬಿನೆಟ್ ಉಪಸಮಿತಿ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಸಿ.ಎಂ. ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ “ಕೇವಲ ಅನಿವಾಸಿ ಭಾರತೀಯ ಸಚಿವಾಲಯ” ಎಂದು ಉಲ್ಲೇಖಿಸಲಾಗಿದ್ದರೂ, ಕ್ಯಾಬಿನೆಟ್‌ಗೆ ಬರುವ ವೇಳೆಗೆ “ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ” ಎಂದು ಬದಲಾವಣೆ ಆಗಿರುವುದಕ್ಕೆ ಪಾಟೀಲ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ರಾಜ್ಯದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಕುರಿತು ಮಾತನಾಡಿದ ಸಚಿವರು, “ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ 10-15 ದಿವಸಗಳಲ್ಲಿ” ಕ್ಯಾಬಿನೆಟ್ ವಿಸ್ತರಣೆಯಾಗಲಿದೆ ಎಂದು ಖಚಿತಪಡಿಸಿದರು. ಈ ವಿಸ್ತರಣೆಯ ನಂತರ ಎಲ್ಲಾ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದರು. ಎಸ್.ಐ.ಆರ್. ನೀತಿಯ ಕುರಿತು ಬಿಜೆಪಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಾಟೀಲ್, “ಎಸ್.ಐ.ಆರ್ ತಂದಿದ್ದು ಕುಮಾರಸ್ವಾಮಿಯವರ ಕ್ಯಾಬಿನೆಟ್ ಅಲ್ವಾ?” ಎಂದು ಪ್ರಶ್ನಿಸಿದರು. ಅಲ್ಲದೆ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಎಸ್.ಐ.ಆರ್. ನಿಂದ ಆಗಿರುವ ಅನ್ಯಾಯವನ್ನು ಕರ್ನಾಟಕದಲ್ಲಿ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ರಾಜ್ಯದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿವೆ ಎಂದು ಅವರು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version