ಬಾಂಗ್ಲಾ ವಿರುದ್ಧ ಅತ್ಯಲ್ಪ ಮೊತ್ತಕ್ಕೆ ಆಲೌಟ್; ಅವಮಾನಕರ ದಾಖಲೆ ಬರೆದ ಆಸ್ಟ್ರೇಲಿಯಾ – Kannada News | Darwin Test Shock: Bangladesh Pacer Hasan Mahmud Rips Through Australia for Record 198 All Out

ಡಾರ್ವಿನ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ (Australia vs Bangladesh) ತಂಡಕ್ಕೆ ಬಾಂಗ್ಲಾದೇಶ ತಂಡದ ವೇಗಿಗಳು ಬಿಗ್ ಶಾಕ್ ನೀಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ಯಾಟ್ ಕಮ್ಮಿನ್ಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 198 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಸ್ಟೀವ್ ಸ್ಮಿತ್ 71 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಇತ್ತ ಬಾಂಗ್ಲಾದೇಶ ಪರ ಬೌಲಿಂಗ್​ನಲ್ಲಿ ಮಿಂಚಿದ ವೇಗಿ ಹಸನ್ ಮಹಮೂದ್ (Hasan Mahmud) ಬರೋಬ್ಬರಿ 6 ವಿಕೆಟ್​ಗಳ ಗೊಂಚಲು ಪಡೆದರು.

ಅತ್ಯಂತ ಕಡಿಮೆ ಸ್ಕೋರ್

ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. 2017 ರಲ್ಲಿ ಮಿರ್ಪುರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 217 ರನ್‌ ಕಲೆಹಾಕಿದ್ದು ಈ ಹಿಂದಿನ ಕನಿಷ್ಠ ಸ್ಕೋರ್ ಆಗಿತ್ತು. ಅಂದರೆ ಬರೋಬ್ಬರಿ 9 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ವಿರುದ್ಧ 200 ಕ್ಕೂ ಅಂದರೆ 198 ರನ್‌ಗೆ ಆಲೌಟ್ ಆಗುವ ಮೂಲಕ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ 200 ರನ್‌ಗಳನ್ನು ಗಳಿಸಲು ವಿಫಲವಾಗಿರುವುದು ಇದೇ ಮೊದಲು.

ಹಸನ್ ಮಹಮೂದ್ ದಾಖಲೆ

ಇತ್ತ ಬೌಲಿಂಗ್‌ನಲ್ಲಿ ಮಿಂಚಿದ ಹಸನ್ ಮಹಮೂದ್ ಆಸ್ಟ್ರೇಲಿಯಾ ನೆಲದಲ್ಲಿ ಐದು ವಿಕೆಟ್ ಪಡೆದ ಮೊದಲ ಬಾಂಗ್ಲಾದೇಶ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು, ಮೊಹಮ್ಮದ್ ರಫೀಕ್ (5/62) ಮತ್ತು ಶಕೀಬ್ ಅಲ್ ಹಸನ್ (5/68) ಆಸೀಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದರು. ಆದರೆ ಈ ದಾಖಲೆ ಬಾಂಗ್ಲಾ ನೆಲದಲ್ಲಿ ಸೃಷ್ಟಿಯಾಗಿತ್ತು. ಇದೀಗ ಆಸ್ಟ್ರೇಲಿಯಾದಲ್ಲಿ 6/55 ಪ್ರದರ್ಶನ ನೀಡುವ ಮೂಲಕ ಹಸನ್ ಮಹಮೂದ್ ಇತಿಹಾಸ ಸೃಷ್ಟಿಸಿದ್ದಾರೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಬಾಂಗ್ಲಾದೇಶದ ವೇಗದ ಬೌಲರ್‌ಗಳು ಟೆಸ್ಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2024 ರಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್​ನಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದ್ದರು.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಏಷ್ಯಾದ ತಂಡಗಳ ವಿರುದ್ಧ 4ನೇ ಕನಿಷ್ಠ ಸ್ಕೋರ್

ಆಸ್ಟ್ರೇಲಿಯಾ ತವರು ನೆಲದಲ್ಲಿ ಬಲಿಷ್ಠ ತಂಡ ಎಂದು ಹೆಸರುವಾಸಿಯಾಗಿದೆ. ಆದಾಗ್ಯೂ ಏಷ್ಯಾ ಖಂಡದ ತಂಡಗಳ ವಿರುದ್ಧದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ನಾಲ್ಕನೇ ಕನಿಷ್ಠ ಸ್ಕೋರ್ ಇದಾಗಿದೆ. 1981 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 83 ರನ್‌ಗೆ ಆಲೌಟ್ ಆಗಿತ್ತು. ಅದರ ನಂತರ, 2024 ರಲ್ಲಿ ಪರ್ತ್ ಪಂದ್ಯದಲ್ಲಿ ಅದೇ ಭಾರತದ ವಿರುದ್ಧ 104 ರನ್‌, 1973 ರಲ್ಲಿ ಸಿಡ್ನಿಯಲ್ಲಿ ಪಾಕಿಸ್ತಾನ ವಿರುದ್ಧ 184 ರನ್‌ಗೆ ಆಲೌಟ್ ಆಗಿತ್ತು. ಈಗ ಡಾರ್ವಿನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 198 ರನ್‌ಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ಹೊಸ ಅವಮಾನಕರ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:57 pm, Thu, 13 August 26

Source link

‘ರಾಹುಲ್ ಗಾಂಧಿಯ ಅಹಂಕಾರದಿಂದ ಇಡೀ ಅಧಿವೇಶನ ಹಾದಿ ತಪ್ಪಿತು’; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ – Kannada News | Parliament session derailed due to Rahul Gandhi’s arrogance Union Minister Pralhad Joshi slams LoP

ನವದೆಹಲಿ, ಆಗಸ್ಟ್ 13: ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪಗಳಿಗೆ ಅಡಚಣೆಯಾಗಲು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಅಹಂಕಾರ ಮತ್ತು ಬೇಜವಾಬ್ದಾರಿತನದ ನಡವಳಿಕೆಯೇ ಕಾರಣ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಮುಂಗಾರು ಅಧಿವೇಶನದ ಕಲಾಪಗಳು ವ್ಯರ್ಥವಾದ ಕುರಿತು ರಾಹುಲ್ ಗಾಂಧಿ ಅವರ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಒಬ್ಬ ವ್ಯಕ್ತಿಯ ಅಹಂಕಾರದಿಂದ ಅಧಿವೇಶನ ವ್ಯರ್ಥ:

“ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿಯ ಅತ್ಯಂತ ಬೇಜವಾಬ್ದಾರಿತನದ ನಡವಳಿಕೆಯಿಂದಾಗಿ, ಅಂತಿಮವಾಗಿ ಅಂಗೀಕಾರಗೊಂಡ ವಿಧೇಯಕಗಳನ್ನು ಹೊರತುಪಡಿಸಿ, ನಡೆಯಬೇಕಿದ್ದ ಅರ್ಥಪೂರ್ಣ ಚರ್ಚೆಗಳು ಮತ್ತು ರಚನಾತ್ಮಕ ಕೆಲಸಗಳು ನಡೆಯಲಿಲ್ಲ. ಕೇವಲ ಒಬ್ಬ ವ್ಯಕ್ತಿಯ ಅಹಂಕಾರದಿಂದಾಗಿ ಇಡೀ ಅಧಿವೇಶನವೇ ಹಾದಿ ತಪ್ಪಿತು. ಇದಕ್ಕೆ ಅವರ ಅಹಂಕಾರದ ಹೊರತಾಗಿ ಬೇರೆ ಯಾವುದೇ ಕಾರಣವಿರಲಿಲ್ಲ” ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.


ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಗೀಕಾರ, ಪ್ರಲ್ಹಾದ್ ಜೋಶಿಗೆ ಕೇಂದ್ರ ಶಿಕ್ಷಣ ಖಾತೆ ಹೆಚ್ಚುವರಿ ಹೊಣೆ

ಬೇಡಿಕೆಗೆ ಒಪ್ಪಿದರೂ ಚರ್ಚೆಯಿಂದ ಓಡಿದ ವಿಪಕ್ಷ:

“ವಿರೋಧ ಪಕ್ಷದವರು ಬೇಡಿಕೆಗಳನ್ನು ಇಡುತ್ತಾರೆ. ಆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಾಗ ಅವರು ಚರ್ಚೆಯಿಂದ ಓಡಿಹೋಗುತ್ತಾರೆ. ಸಂಸತ್ತಿನಲ್ಲಿ ಗೃಹ ಸಚಿವರು ಉತ್ತರ ನೀಡಲಿದ್ದಾರೆ ಎಂದು ಒಂದು ವಾರದ ಹಿಂದೆಯೇ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದರು. ಆದರೂ ವಿಪಕ್ಷಗಳು ಅದನ್ನು ಒಪ್ಪಲಿಲ್ಲ. ನಿನ್ನೆ ಸ್ವತಃ ಗೃಹ ಸಚಿವರೇ ಮಾತನಾಡಿದಾಗ, ತಮ್ಮ ನಿಲುವನ್ನೇ ಬದಲಿಸಿ ಅವರ ರಾಜೀನಾಮೆಗೆ ಆಗ್ರಹಿಸಿದರು” ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಸಾಂವಿಧಾನಿಕ ಚೌಕಟ್ಟಿನ ಉಲ್ಲಂಘನೆ:

“ಪ್ರತಿಭಟನೆ ನಡೆಯುತ್ತಿರುವ ಜಾರ್ಖಂಡ್‌ಗೆ ರಾಹುಲ್ ಗಾಂಧಿ ಏಕೆ ಹೋಗುತ್ತಿಲ್ಲ? ಅವರದೇ ಸಚಿವರಿಗೆ ಅವರು ಏಕೆ ಎಚ್ಚರಿಕೆ ನೀಡುತ್ತಿಲ್ಲ? ರಾಹುಲ್ ಗಾಂಧಿ ಅತ್ಯಂತ ಅಹಂಕಾರ ಹೊಂದಿರುವ ವ್ಯಕ್ತಿ. ಸರ್ಕಾರದ ಸಾಂವಿಧಾನಿಕ ಚೌಕಟ್ಟನ್ನು ನಿರ್ಲಕ್ಷಿಸಿ, ಸಂಸತ್ತು ಸಂಪೂರ್ಣವಾಗಿ ತಮ್ಮ ಇಷ್ಟದಂತೆಯೇ ನಡೆಯಬೇಕೆಂದು ಅವರು ಬಯಸುತ್ತಾರೆ” ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ’; ತಮ್ಮದೇ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

“ಜನರಿಂದ 95 ಬಾರಿ ತಿರಸ್ಕರಿಸಲ್ಪಟ್ಟಿದ್ದರೂ, ಕಾಂಗ್ರೆಸ್ ನಾಯಕರು ತಮ್ಮ ಸರಣಿ ವೈಫಲ್ಯಗಳಿಂದ ಪಾಠ ಕಲಿಯಲು ಸಿದ್ಧರಿಲ್ಲದಂತೆ ಕಾಣುತ್ತಿದೆ” ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ನಡವಳಿಕೆಯನ್ನು ಖಂಡನೀಯ ಮತ್ತು ಸಂಸದೀಯ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಅವರು ಟೀಕಿಸಿದ್ದಾರೆ.

ನೀಟ್-ಯುಜಿ 2026 (NEET-UG 2026) ಪರೀಕ್ಷೆಯ ಅಕ್ರಮಗಳು ಹಾಗೂ ಅದನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ದೇಶವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಇದಾದ ನಂತರ ಜುಲೈ 26ರಂದು ಪ್ರಲ್ಹಾದ್ ಜೋಶಿ ಅವರನ್ನು ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:20 pm, Thu, 13 August 26

Source link

ಅನ್ನ ಅಥವಾ ಚಪಾತಿ.. ಯಾವುದು ಬೆಸ್ಟ್? ಎರಡನ್ನೂ ಒಟ್ಟಿಗೆ ತಿಂದರೆ ಏನಾಗುತ್ತೆ? – Kannada News | Rice and Roti in the Same Meal: Does It Cause Weight Gain or Blood Sugar Spikes?

ಅನ್ನ ಮತ್ತೆ ಚಪಾತಿ ಈ ಎರಡನ್ನೂ ಒಟ್ಟಿಗೆ ಊಟದಲ್ಲಿ ತಿನ್ನುವುದು ತಪ್ಪೇ? ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು, ಮಧುಮೇಹ ಇರುವವರು ಹಾಗೂ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವವರು ವಿಶೇಷವಾಗಿ ಇದರ ಬಗ್ಗೆ ಗೊಂದಲದಲ್ಲಿರುತ್ತಾರೆ. ಅನ್ನ ಮತ್ತು ಚಪಾತಿ ಎರಡೂ ಧಾನ್ಯಾಧಾರಿತ ಆಹಾರಗಳಾಗಿದ್ದು, ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತವೆ. ಆದರೆ ಅನ್ನ ಮತ್ತು ಚಪಾತಿಯನ್ನು ಒಟ್ಟಿಗೆ ತಿನ್ನುವುದರಿಂದಲೇ ಎಲ್ಲರಿಗೂ ಹಾನಿಯಾಗುತ್ತದೆ ಎಂಬುದು ಸರಿಯಲ್ಲ. ಮುಖ್ಯವಾಗಿ ಸೇವಿಸುವ ಪ್ರಮಾಣ, ಒಟ್ಟಾರೆ ಆಹಾರದ ಸಮತೋಲನ, ದೈಹಿಕ ಚಟುವಟಿಕೆ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಗಮನಿಸಬೇಕು. ಒಂದೇ ಊಟದಲ್ಲಿ ಎರಡನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಒಟ್ಟು ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಸೇವನೆ ಹೆಚ್ಚಾಗಬಹುದು. ಹಾಗಾದರೆ ಅನ್ನ-ಚಪಾತಿ ಒಟ್ಟಿಗೆ ತಿನ್ನುವುದರಿಂದ ಏನೆಲ್ಲಾ ಪರಿಣಾಮ ಉಂಟಾಗಬಹುದು, ಇದರ ಬದಲು ಊಟದಲ್ಲಿ ಯಾವ ರೀತಿ ಆಹಾರಗಳನ್ನು ಸೇವನೆ ಮಾಡಬಹುದು ಎಂದು ತಿಳಿದುಕೊಳ್ಳಿ.

ಅನ್ನ ಮತ್ತು ಚಪಾತಿ ಒಟ್ಟಿಗೆ ತಿಂದರೆ ಕಾರ್ಬೋಹೈಡ್ರೇಟ್ ಹೆಚ್ಚಾಗುತ್ತದೆಯೇ?

ಸಾಮಾನ್ಯವಾಗಿ ಅನ್ನ ಮತ್ತು ಚಪಾತಿ ಎರಡರಲ್ಲೂ ಕಾರ್ಬೋಹೈಡ್ರೇಟ್‌ಗಳಿವೆ. ಎರಡನ್ನೂ ಹೆಚ್ಚು ಪ್ರಮಾಣದಲ್ಲಿ ಒಂದೇ ಸಮಯದಲ್ಲಿ ಸೇವಿಸಿದರೆ ಊಟದಿಂದ ದೊರೆಯುವ ಒಟ್ಟು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೊರಿಗಳು ಹೆಚ್ಚಾಗಬಹುದು. ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿ ಸೇವಿಸಿ, ದೈಹಿಕ ಚಟುವಟಿಕೆ ಕಡಿಮೆಯಿದ್ದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಅನ್ನ ಮತ್ತು ಚಪಾತಿ ಸೇರಿಸಿ ತಿಂದ ತಕ್ಷಣವೇ ದೇಹದಲ್ಲಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ ಎಂಬುದು ಸರಳೀಕೃತ ಹೇಳಿಕೆ. ಒಟ್ಟಾರೆ ದಿನದ ಕ್ಯಾಲೊರಿ ಸಮತೋಲನವೇ ಹೆಚ್ಚು ಮುಖ್ಯ.

ರಕ್ತದಲ್ಲಿನ ಸಕ್ಕರೆ ಹೆಚ್ಚಾಗಬಹುದೇ?

ಅನ್ನದ ಪ್ರಮಾಣ, ಅದರ ವಿಧ ಮತ್ತು ಅಡುಗೆ ವಿಧಾನಕ್ಕೆ ಅನುಗುಣವಾಗಿ ರಕ್ತದಲ್ಲಿನ ಗ್ಲೂಕೋಸ್ ಮೇಲೆ ಪರಿಣಾಮ ಬದಲಾಗಬಹುದು. ಚಪಾತಿಯಲ್ಲಿ ಸಾಮಾನ್ಯವಾಗಿ ಸ್ವಲ್ಪ ಹೆಚ್ಚು ಫೈಬರ್ ಇರಬಹುದು. ಆದರೆ ಎರಡನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಊಟದಿಂದ ಒಟ್ಟಾರೆ ಕಾರ್ಬೋಹೈಡ್ರೇಟ್ ಸೇವನೆ ಹೆಚ್ಚಾಗುತ್ತದೆ. ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಅನ್ನ-ಚಪಾತಿಯ ಪ್ರಮಾಣವನ್ನು ವಿಶೇಷವಾಗಿ ಗಮನಿಸುವುದು ಉತ್ತಮ. ಊಟದಲ್ಲಿ ತರಕಾರಿ ಮತ್ತು ಪ್ರೋಟೀನ್‌ ಸೇರಿಸುವುದರಿಂದ ಆಹಾರ ಹೆಚ್ಚು ಸಮತೋಲನವಾಗಲು ಸಹಾಯವಾಗಬಹುದು.

ಗ್ಯಾಸ್‌, ಹೊಟ್ಟೆ ಉಬ್ಬರಕ್ಕೆ ಕಾರಣವೇ?

ಅನ್ನ ಮತ್ತು ಚಪಾತಿ ಜೀರ್ಣವಾಗುವ ವೇಗದಲ್ಲಿ ವ್ಯತ್ಯಾಸವಿರಬಹುದು. ಆದರೆ ಅನ್ನ ಮತ್ತು ಚಪಾತಿಯನ್ನು ಒಟ್ಟಿಗೆ ತಿನ್ನುವುದೇ ಎಲ್ಲರಲ್ಲೂ ಗ್ಯಾಸ್‌ ಅಥವಾ ಅಜೀರ್ಣಕ್ಕೆ ಕಾರಣವಾಗುತ್ತದೆ ಎಂದು ಹೇಳಲು ಸಾಕಷ್ಟು ಆಧಾರವಿಲ್ಲ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವುದು, ವೇಗವಾಗಿ ತಿನ್ನುವುದು ಅಥವಾ ವ್ಯಕ್ತಿಗೆ ಹೊಂದದ ಆಹಾರ ಸೇವಿಸುವುದರಿಂದ ಹೊಟ್ಟೆ ಭಾರ, ಉಬ್ಬರ ಅಥವಾ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.

ತೂಕ ಇಳಿಸಿಕೊಳ್ಳುವವರು ಏನು ಮಾಡಬೇಕು?

ತೂಕ ಇಳಿಸಿಕೊಳ್ಳುವವರು ಅನ್ನ ಅಥವಾ ಚಪಾತಿಯಲ್ಲಿ ಒಂದನ್ನೇ ಕಡ್ಡಾಯವಾಗಿ ಆಯ್ಕೆ ಮಾಡಬೇಕೆಂದಿಲ್ಲ. ಬದಲಾಗಿ ಪ್ರಮಾಣ ನಿಯಂತ್ರಣ ಮುಖ್ಯ. ನಿಮ್ಮ ಪ್ಲೇಟ್‌ನಲ್ಲಿ ಅರ್ಧ ಭಾಗ: ತರಕಾರಿ ಅಥವಾ ಸಲಾಡ್‌, ಕಾಲು ಭಾಗ ಪ್ರೋಟೀನ್‌ — ಬೇಳೆ, ಮೊಟ್ಟೆ, ಪನೀರ್‌, ಮೀನು ಮುಂತಾದವು, ಕಾಲು ಭಾಗ ಅನ್ನ ಅಥವಾ ಚಪಾತಿಎಂಬ ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು. ಎರಡನ್ನೂ ತಿನ್ನಲು ಬಯಸಿದರೆ, ಸ್ವಲ್ಪ ಸ್ವಲ್ಪ ಪ್ರಮಾಣದ ಚಪಾತಿ ಮತ್ತು ಸ್ವಲ್ಪ ಅನ್ನ ತೆಗೆದುಕೊಂಡು, ತರಕಾರಿ ಮತ್ತು ಪ್ರೋಟೀನ್‌ ಪ್ರಮಾಣವನ್ನು ಹೆಚ್ಚಿಸುವುದು ಉತ್ತಮ.

ಹಾಗಾದರೆ ಅನ್ನ-ಚಪಾತಿ ಒಟ್ಟಿಗೆ ತಿನ್ನಬಹುದೇ?

ಹೌದು, ಪ್ರಮಾಣ ನಿಯಂತ್ರಣದಲ್ಲಿದ್ದರೆ ಬಹುತೇಕ ಆರೋಗ್ಯವಂತರು ಎರಡನ್ನೂ ಒಂದೇ ಊಟದಲ್ಲಿ ಸೇವಿಸಬಹುದು. ಆದರೆ ತೂಕ ನಿಯಂತ್ರಣ, ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ವೈಯಕ್ತಿಕ ಆಹಾರ ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣವನ್ನು ನಿರ್ಧರಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್: ಉಚಿತ ಪಾರ್ಕಿಂಗ್‌ಗೆ ಬ್ರೇಕ್, ಶುಲ್ಕ ಫಿಕ್ಸ್ – Kannada News | Vehicle Parking On Bengaluru Roads Could Cost Car Owners Up To Rs 25,000 Annually Under Draft Policy

ಬೆಂಗಳೂರು, (ಆಗಸ್ಟ್ 13): ನಗರದ ವಾಹನ ಸವಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನೀತಿ (New Parking Rules)ಜಾರಿಗೆ ತರಲು ಮುಂದಾಗಿದೆ. ಪುಗ್ಸಟ್ಟೆ ಪಾರ್ಕಿಂಗ್‌ ವ್ಯವಸ್ಥೆಗೆ ಬ್ರೇಕ್‌ ಹಾಕಲು ಹೊಸ ಪಾರ್ಕಿಂಗ್ ನೀತಿಗೆ ಸರ್ಕಾರ ಇಂದು (ಆಗಸ್ಟ್ 13) ಕರಡು ಅಧಿಸೂಚನೆ ಹೊರಡಿಸಿದ್ದು, ಹೊಸ ನೀತಿಯಡಿ ರಸ್ತೆಗಳನ್ನು ಮೂರು ಮಾದರಿಗಳಾಗಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಾಹನಗಳಿಗೆ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬರಲಿದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದ್ದು, ಅದು ಈ ಕೆಳಗಿನಂತಿದೆ.

ರಸ್ತೆಗಳ ವರ್ಗೀಕರಣ ಮತ್ತು ಪಾರ್ಕಿಂಗ್ ಮಾದರಿಗಳು

ಹೊಸ ನಿಯಮಾವಳಿಗಳ ಪ್ರಕಾರ ನಗರದ ರಸ್ತೆಗಳನ್ನು A, B, ಹಾಗೂ C ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆಗೆ ‘ಆನ್-ಸ್ಟ್ರೀಟ್’ (ರಸ್ತೆ ಬದಿ), ‘ಆಫ್-ಸ್ಟ್ರೀಟ್’ (ನಿಗದಿತ ಪಾರ್ಕಿಂಗ್ ತಾಣ) ಮತ್ತು ‘ಮಾಸಿಕ ಪಾಸ್’ ಎಂಬ ಮೂರು ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ.

ಆನ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

  • A ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ ₹40, ಲಘು ವಾಹನಗಳಿಗೆ (ಕಾರ್ ಇತ್ಯಾದಿ) 80 ರೂಪಾಯಿ.
  • B ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ ₹30, ಲಘು ವಾಹನಗಳಿಗೆ 60 ರೂ.
  • C ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ ₹20, ಲಘು ವಾಹನಗಳಿಗೆ 40 ರಿಂದ 60 ರೂ.

ಆಫ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

  • A ವರ್ಗ: ದ್ವಿಚಕ್ರ ವಾಹನ – ₹20 | ಲಘು ವಾಹನ – 40 ರೂ.
  • B ವರ್ಗ: ದ್ವಿಚಕ್ರ ವಾಹನ – ₹15 | ಲಘು ವಾಹನ – 30 ರೂ.
  • C ವರ್ಗ: ದ್ವಿಚಕ್ರ ವಾಹನ – ₹10 | ಲಘು ವಾಹನ – 20 ರೂ.

ಮಾಸಿಕ ಆಫ್-ಸ್ಟ್ರೀಟ್ ಪಾಸ್ ದರಗಳು:

  • A ವರ್ಗ: ದ್ವಿಚಕ್ರ ವಾಹನಕ್ಕೆ ₹2,000 ಹಾಗೂ ಲಘು ವಾಹನಗಳಿಗೆ 40,000.
  • B ವರ್ಗ: ದ್ವಿಚಕ್ರ ವಾಹನಕ್ಕೆ ₹1,500 ಹಾಗೂ ಲಘು ವಾಹನಗಳಿಗೆ3,000.
  • C ವರ್ಗ: ದ್ವಿಚಕ್ರ ವಾಹನಕ್ಕೆ ₹1,000 ಹಾಗೂ ಲಘು ವಾಹನಗಳಿಗೆ 2,000.

ಈ ಜಾಗಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧ!

ಸಂಚಾರಕ್ಕೆ ಅಡಚಣೆ ಉಂಟಾಗದಂತೆ ತಡೆಯಲು ಕೆಲವು ಸೂಕ್ಷ್ಮ ವಲಯಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ/ನಿಷೇಧಿಸಲಾಗಿದೆ:

  • ಮೆಟ್ರೋ ಹಾಗೂ ಪ್ರಮುಖ ಬಸ್ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶ.
  • ಆರ್ಟಿರಿಯಲ್ (ಮುಖ್ಯ ಸಂಪರ್ಕ) ರಸ್ತೆಗಳು.
  • ಟ್ರಾಫಿಕ್ ಸಿಗ್ನಲ್‌ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ.
  • ಉಪಮುಖ್ಯ ರಸ್ತೆಗಳ ಜಂಕ್ಷನ್‌ಗಳಿಂದ 25 ಮೀಟರ್ ಅಂತರದವರೆಗೆ.
  • ರಾತ್ರಿ ಪಾರ್ಕಿಂಗ್ & ಮಾಲೀಕರಿಗಷ್ಟೇ ವಿನಾಯಿತಿ/ದಂಡದ ನಿಯಮ

ರಾತ್ರಿ ಪಾರ್ಕಿಂಗ್: ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕೆಲವು ಆಯ್ದ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

ಸೈಕಲ್ ಹಾಗೂ ಆಟೋಗಳಿಗೆ ವಿನಾಯಿತಿ: ಸೈಕಲ್ ನಿಲುಗಡೆಗೆ ಹಾಗೂ ನಿಗದಿತ ಆಟೋ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಮನೆ ಮಾಲೀಕರ ಹೊಣೆಗಾರಿಕೆ

ಬಾಡಿಗೆದಾರರಿಗೆ ಪಾರ್ಕಿಂಗ್ ಜಾಗ ಒದಗಿಸುವುದು ಮನೆ ಮಾಲೀಕರ ಕರ್ತವ್ಯ. ರಸ್ತೆ ಬದಿ ಅಥವಾ ಮನೆ ಮುಂದೆ ವಾಹನ ನಿಲ್ಲಿಸಿದರೆ ಅದರ ಶುಲ್ಕ ಅಥವಾ ದಂಡದ ಜವಾಬ್ದಾರಿಯನ್ನು ಮಾಲೀಕರೇ ಹೊರಬೇಕಾಗುತ್ತದೆ.

ಖಾಲಿ ನಿವೇಶನ ಮಾಲೀಕರಿಗೆ ಆಸ್ತಿ ತೆರಿಗೆ ವಿನಾಯಿತಿ!

ನಗರದಲ್ಲಿ ಪಾರ್ಕಿಂಗ್ ಅಭಾವ ನೀಗಿಸಲು ಸರ್ಕಾರಿ ಸಂಸ್ಥೆಗಳ ಖಾಲಿ ಜಾಗಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಸಾಲದಾಗಿ, ಸಾರ್ವಜನಿಕರು ಅಥವಾ ಖಾಸಗಿ ವ್ಯಕ್ತಿಗಳು ತಮ್ಮ ಖಾಲಿ ನಿವೇಶನಗಳನ್ನು (Vacant Sites) ಸಾರ್ವಜನಿಕ ಪಾರ್ಕಿಂಗ್ ಉದ್ದೇಶಕ್ಕೆ ನೀಡಿದರೆ, ಅಂತಹ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ (Property Tax) ವಿಶೇಷ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್​ಗೆ ಬರ್ತಾರಾ ದರ್ಶನ್? ವಕೀಲರ ವಾದವೇನಿತ್ತು? – Kannada News | Renuka Swamy case: Darshan lawyer wants Darshan to be present in court

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ವಿಚಾರಣೆಯಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಸಾಕ್ಷಿಗಳಿಗೆ ಬೆದರಿಕೆ, ತಿರುಚಿದ ಹೇಳಿಕೆ, ಮಾಫಿ ಸಾಕ್ಷಿಯಾಗಿ ಬದಲಾದ ಆರೋಪಿ ಹೀಗೆ ಹಲವು ಮಹತ್ವದ ಸಂಗತಿಗಳು ವಿಚಾರಣೆಯಲ್ಲಿ ನಡೆಯುತ್ತಿದೆ. ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್, ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ವಿಚಾರಣೆ ನಡೆಯುತ್ತಿರುವ 59 ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಅದರ ವಾದ-ಪ್ರತಿವಾದ ನ್ಯಾಯಾಲಯದಲ್ಲಿ ನಡೆದಿದೆ.

ವಾದ ಮಂಡಿಸಿದ ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ, ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲಿನ ವೇಳೆ ಕಕ್ಷಿದಾರರೊಂದಿಗೆ (ದರ್ಶನ್) ಜೊತೆಗೆ ಚರ್ಚಿಸಬೇಕಿದೆ. ವಿಡಿಯೋ ಕಾನ್ಫರೆನ್ಸ್​​ನಲ್ಲಿ ಅದು ಸಾಧ್ಯವಿಲ್ಲ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್​​ನಲ್ಲಿ ಹೆಡ್ ವ್ಯವಸ್ಥೆಯೂ ಇಲ್ಲ. ಹಾಗಾಗಿ ಕಕ್ಷಿದಾರರೊಟ್ಟಿಗೆ ಚರ್ಚೆ, ಮಾಹಿತಿ ಪಡೆಯುವುದು ಅಸಾಧ್ಯ. ಹಾಗಾಗಿ ಸಾಕ್ಷಿಗಳ ವಿಚಾರಣೆ ನಡೆಸುವಾಗ ದರ್ಶನ್, ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕು ಎಂದು ವಕೀಲರು ವಾದ ಮಂಡಿಸಿದರು.

ಆದರೆ ಇದಕ್ಕೆ ಆಕ್ಷೇಪಣೆ ಎತ್ತಿದ ಸಹಾಯಕ ಎಸ್​​ಪಿಪಿ ಸಚಿನ್, ‘ವಿಡಿಯೋ ಕಾನ್ಫರೆನ್ಸ್​​ಗೆ ಕಾನೂನಿನಲ್ಲಿ ಅವಕಾಶ ಇದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ ಖುದ್ದು ಹಾಜರಿ ಅಗತ್ಯವಿಲ್ಲವೆಂದರು, ಜೊತೆಗೆ ಬಿಹಾರದ ಪ್ರಕರಣವೊಂದನ್ನು ಉಲ್ಲೇಖಿಸಿ ವಾದವನ್ನು ಅವರು ಮಂಡಿಸಿದರು. ಪ್ರಕರಣದ ಹಿನ್ನೆಲೆ, ಈ ವರೆಗೆ ನಡೆದಿರುವ ಸಾಕ್ಷಿಗಳ ವಿಚಾರಣೆಗಳ ಹಿನ್ನೆಲೆಯಲ್ಲಿ ದರ್ಶನ್ ಖುದ್ದು ಹಾಜರಿಯ ಅಗತ್ಯತೆ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯವು, ಪ್ರಕರಣದ ಆದೇಶವನ್ನು ಆಗಸ್ಟ್ 17ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ

ನ್ಯಾಯಾಲಯದಲ್ಲಿ ದರ್ಶನ್ ಖುದ್ದು ಹಾಜರಿದ್ದರೆ, ಸಾಕ್ಷಿಗಳ ಮೇಲೆ ಪರೋಕ್ಷ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪ್ರಾಸಿಕ್ಯೂಷನ್ ಅವರು ದರ್ಶನ್, ನ್ಯಾಯಾಲಯದಲ್ಲಿ ಖುದ್ದು ಹಾಜರಿರಬಾರದು ಎಂದು ವಾದಿಸಿದ್ದಾರೆ. ಅಲ್ಲದೆ, ಕಳೆದ ಕೆಲ ಬಾರಿ ದರ್ಶನ್ ನ್ಯಾಯಾಲಯಕ್ಕೆ ಬಂದಾಗ ಭಾರಿ ಸಂಖ್ಯೆಯ ಜನ ಸೇರಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್​ ವಶಕ್ಕೆ – Kannada News | Two Suspects Taken Into Police Custody in Kalaburagi Over Alleged Pakistan and ISIS Links

ಪಾಕ್, ಐಸಿಸ್​​​ ಜೊತೆ ನಂಟುImage Credit source: tv9 kannada

ಕಲಬುರಗಿ, ಆಗಸ್ಟ್​​​ 13: ಪಾಕಿಸ್ತಾನ ಹಾಗೂ ಉಗ್ರ ಸಂಘಟನೆ ಐಸಿಸ್ (ISIS) ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ವಶಕ್ಕೆ ಪಡೆದುಕೊಂಡಿದೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎಟಿಎಸ್ ತಂಡ, ಕಲಬುರಗಿ ತಾಲೂಕಿನ ಮಾಲಗತ್ತಿ ಹಾಗೂ ಉಪಳಾಂವ್ ಗ್ರಾಮದ ಹೊರವಲಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶ ಮೂಲದ ಇಬ್ಬರು ವಶಕ್ಕೆ

ಎಟಿಎಸ್ ತಂಡ ವಶಕ್ಕೆ ಪಡೆದಿರುವ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಾಂಸ (ಬೀಫ್) ರಫ್ತು ಮಾಡುವ ಫೇರ್ ಎಕ್ಸ್ ಪೋರ್ಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಾಕ್​​​​ ಸಂಘಟನೆಗಳ ಜೊತೆ ನಂಟು, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್!

ಆರೋಪಿಗಳು ವಾಟ್ಸಾಪ್ ಕರೆಗಳು ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನ ಮತ್ತು ಐಸಿಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಎಟಿಎಸ್ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ.

ಸದ್ಯ ಇಬ್ಬರು ಆರೋಪಿಗಳನ್ನು ಕಲಬುರಗಿಯ ಅಜ್ಞಾತ ಸ್ಥಳದಲ್ಲಿಟ್ಟು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಸಿಕ್ಕಿದ್ದು ಹೇಗೆ?

ಪೊಲೀಸ್ ಮೂಲಗಳ ಪ್ರಕಾರ, ಅಂತಾರಾಜ್ಯ ಸೋಷಿಯಲ್ ಮೀಡಿಯಾ ಮಾನಿಟಿರಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕಳೆದ ಕೆಲವು ದಿನಗಳಿಂದ ಸತತ ನಿಗಾ ಇಡಲಾಗಿತ್ತು. ಪಾಕಿಸ್ತಾನದ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಫೇಸ್‌ಬುಕ್ ಪೇಜ್​​ ಹಾಗೂ ಇತರೆ ದೇಶವಿರೋಧಿ ಜಾಲತಾಣಗಳ ಜೊತೆ ಸಮೀರ್ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಇದರ ಆಧಾರದ ಮೇಲೆ ಕಲಬುರಗಿ ಪೊಲೀಸರು ಮತ್ತು ಉತ್ತರ ಪ್ರದೇಶದ ಎಟಿಎಸ್ ತಂಡ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ

ಸದ್ಯ ಎಟಿಎಸ್ ಅಧಿಕಾರಿಗಳು ಸಮೀರ್‌ನನ್ನು ವಿಚಾರಣೆ ನಡೆಸಿದ್ದು, ಆತ ಯಾವೆಲ್ಲಾ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಮತ್ತು ಈ ಜಾಲದಲ್ಲಿ ಇನ್ಯಾರಿದ್ದಾರೆ ಎಂಬ ಬಗ್ಗೆ ಆಳವಾದ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:58 pm, Thu, 13 August 26

Source link

Income Tax Dept Recruitment: ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ; 10 ನೇ ತರಗತಿ ಪಾಸಾಗಿದ್ರೆ ಸಾಕು! – Kannada News | Income Tax Dept Recruitment: Canteen Attendant Jobs for 10th Pass, Apply Now


ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ

ಸರ್ಕಾರಿ ಉದ್ಯೋಗ ಬಯಸುತ್ತಿರುವ 10 ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆಯು ಉತ್ತಮ ಅವಕಾಶವನ್ನು ತಂದಿದೆ. ಇಲಾಖೆಯು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಪ್ರದೇಶಗಳಲ್ಲಿ ಖಾಲಿ ಇರುವ ಏಳು ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 11 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ವಿಶೇಷವೆಂದರೆ, ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಸಡಿಲಿಕೆ:

ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಭಾರತೀಯ ನಾಗರಿಕರಾಗಿರಬೇಕು. ಆಗಸ್ಟ್ 31, 2026 ರಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು. ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯಲಿದೆ. ಇದಲ್ಲದೆ ಅಂಗವಿಕಲರು, ಮಾಜಿ ಸೈನಿಕರು ಮತ್ತು ಅರ್ಹ ಕೇಂದ್ರ ಸರ್ಕಾರಿ ನೌಕರರಿಗೂ ಸರ್ಕಾರದ ನಿಯಮಾವಳಿಗಳಂತೆ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.

10 ನೇ ತರಗತಿ ಅಂಕಗಳ ಆಧಾರದಲ್ಲಿ ಲಿಖಿತ ಪರೀಕ್ಷೆಗೆ ಆಯ್ಕೆ:

ಇಲಾಖೆಯು ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಒಟ್ಟು 280 ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡುತ್ತದೆ. ಅಂದರೆ ಪ್ರತಿಯೊಂದು ಹುದ್ದೆಗೆ 40 ಅಭ್ಯರ್ಥಿಗಳನ್ನು ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಈ ಲಿಖಿತ ಪರೀಕ್ಷೆಯು ಭೋಪಾಲ್‌ನಲ್ಲಿ ನಡೆಯಲಿದ್ದು, ಒಟ್ಟು 40 ಅಂಕಗಳ 40 ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ. ಈ ಪರೀಕ್ಷಾ ಪತ್ರಿಕೆಯು ಇಂಗ್ಲಿಷ್ ಗ್ರಹಿಕೆ, ಹಿಂದಿ, ಆಹಾರ ಮತ್ತು ಪೋಷಣೆ, ಗಣಿತ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ. ಇಲ್ಲಿ ನೆನಪಿಡಬೇಕಾದ ಮುಖ್ಯ ವಿಷಯವೆಂದರೆ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸುವ ಋಣಾತ್ಮಕ ಮೌಲ್ಯಮಾಪನ ಇರುತ್ತದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಾಯೋಗಿಕ ಕೌಶಲ್ಯ ಪರೀಕ್ಷೆ ಮತ್ತು ಪ್ರೊಬೇಶನ್ ಅವಧಿ:

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮುಂದಿನ ಹಂತವಾಗಿ 60 ಅಂಕಗಳ ಕೌಶಲ್ಯ ಪರೀಕ್ಷೆಗೆ ಕರೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಹಾರ ಮತ್ತು ಪಾನೀಯ ತಯಾರಿಕೆ, ಆಹಾರ ನಿರ್ವಹಣೆ, ಬಡಿಸುವಿಕೆ ಹಾಗೂ ನೈರ್ಮಲ್ಯ ಕಾಪಾಡುವಿಕೆಯಲ್ಲಿನ ಪ್ರಾಯೋಗಿಕ ಸಾಮರ್ಥ್ಯಗಳನ್ನು ನಿರ್ಣಯಿಸಲಾಗುತ್ತದೆ. ಕೌಶಲ್ಯ ಪರೀಕ್ಷೆಯ ನಂತರ ಅರ್ಹ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾಗಿ ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಪ್ರೊಬೇಶನ್ ಅವಧಿಯನ್ನು ಪೂರೈಸಬೇಕಾಗುತ್ತದೆ.

ವೇತನ ಶ್ರೇಣಿ ಮತ್ತು ಇತರ ಭತ್ಯೆಗಳ ವಿವರ:

ಕ್ಯಾಂಟೀನ್ ಪರಿಚಾರಕರ ಹುದ್ದೆಯು ಗ್ರೂಪ್ ಸಿ, ಗೆಜೆಟೆಡ್ ಅಲ್ಲದ ಮತ್ತು ಸಚಿವಾಲಯೇತರ ವರ್ಗದಡಿಯಲ್ಲಿ ಬರುತ್ತದೆ. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು 7 ನೇ ವೇತನ ಆಯೋಗದ ವೇತನ ಮಟ್ಟ 1 ರ ಅಡಿಯಲ್ಲಿ ಮಾಸಿಕ 18,000 ರಿಂದ 56,900 ರೂ. ವರೆಗೆ ವೇತನವನ್ನು ಪಡೆಯುತ್ತಾರೆ. ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA) ಮತ್ತು ಇತರ ನಿಯಮಾನುಸಾರ ಸಿಗುವ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ತಲೈಮನ್ನಾರ್ ಬಳಿ ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ – Kannada News | Sri Lankan Navy Arrested 9 Indian Fishermen Near Talaimannar

ಕೊಲಂಬೊ, ಆಗಸ್ಟ್ 13: ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಒಂದು ಹಡಗನ್ನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲೈಮನ್ನಾರ್‌ನ ಉರುಮಲೈ ಪಾಯಿಂಟ್ ಬಳಿ ಬುಧವಾರ ರಾತ್ರಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ (Sri Lanka) ನೌಕಾಪಡೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

“ಬಂಧಿತ 9 ಭಾರತೀಯ ಮೀನುಗಾರರನ್ನು ಮತ್ತು ಮೀನುಗಾರಿಕಾ ಹಡಗನ್ನು ಮುಂದಿನ ಕಾನೂನು ನಡಾವಳಿಗಳಿಗಾಗಿ ಮನ್ನಾರ್‌ನ ಮೀನುಗಾರಿಕಾ ಇನ್​ಸ್ಪೆಕ್ಟರ್​​ಗೆ ಹಸ್ತಾಂತರಿಸಲಾಗುವುದು” ಎಂದು ಶ್ರೀಲಂಕಾ ನೌಕಾಪಡೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ಮನ್ನಾರ್ ದ್ವೀಪ ಮತ್ತು ರಾಮಸೇತು (ಆಡಮ್ಸ್ ಬ್ರಿಡ್ಜ್) ಸುತ್ತಲಿನ ಮನ್ನಾರ್ ಕೊಲ್ಲಿಯ ಪರಿಸರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಅತ್ಯಂತ ಆದ್ಯತೆಯ ನಿಕಟ ಜೀವವೈವಿಧ್ಯತೆ ಮತ್ತು ಸಂರಕ್ಷಣಾ ವಲಯವೆಂದು ಗುರುತಿಸಲಾಗಿದೆ. ಹಾಗಾಗಿ ಇದು ನಿರ್ದಿಷ್ಟ ಮೀನುಗಾರಿಕಾ ನಿರ್ವಹಣೆ ಮತ್ತು ಪರಿಸರ ಸಂರಕ್ಷಣಾ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್

ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ಮೀನುಗಾರರ ವಿಷಯವು ಆಗಾಗ ಬಿರುಕು ಮೂಡಿಸುತ್ತಿರುತ್ತದೆ. ಶ್ರೀಲಂಕಾದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಪಾಕ್ ಜಲಸಂಧಿಯಲ್ಲಿ ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ ಹಾಗೂ ಅವರ ದೋಣಿಗಳನ್ನು ವಶಪಡಿಸಿಕೊಂಡ ಹಲವು ಘಟನೆಗಳು ನಡೆದಿವೆ. ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ಪಾಕ್ ಜಲಸಂಧಿಯು ಎರಡೂ ದೇಶಗಳ ಮೀನುಗಾರರಿಗೆ ಸಮೃದ್ಧ ಮೀನುಗಾರಿಕಾ ಕೇಂದ್ರವಾಗಿದೆ. ಎರಡೂ ದೇಶಗಳ ಮೀನುಗಾರರು ಅರಿಯದೇ ಪರಸ್ಪರರ ಜಲಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಆಗಾಗ ಬಂಧನಕ್ಕೊಳಗಾಗುತ್ತಿರುತ್ತಾರೆ.

ಇದನ್ನೂ ಓದಿ: ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!

ಜುಲೈ ಕೊನೆಯ ವಾರದಲ್ಲೂ ಶ್ರೀಲಂಕಾ ನೌಕಾಪಡೆಯು ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಬಂಧಿಸಿ, ಅವರ ದೋಣಿಯನ್ನು ವಶಪಡಿಸಿಕೊಂಡಿತ್ತು. ಅಧಿಕೃತ ದತ್ತಾಂಶಗಳ ಪ್ರಕಾರ, ಈ ವರ್ಷ ಏಪ್ರಿಲ್ 15ರ ವೇಳೆಗೆ 128 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, 18 ಹಡಗುಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ದೇವರಿಗೆ ಗೊತ್ತು ಅಷ್ಟೆ ಸಾಕು’ ಎಂದ ವಿಜಯಲಕ್ಷ್ಮಿ ದರ್ಶನ್, ಕಾರಣವೇನು? – Kannada News | Vijayalakshmi Darshan cryptic post on Instagram

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ವಿಚಾರಣೆ ಜಾರಿಯಲ್ಲಿದ್ದು, ನ್ಯಾಯಾಲಯದಲ್ಲಿ ಪ್ರತಿ ದಿನವೂ ಒಂದು ಹೊಸ ಆಸಕ್ತಿಕರ ಬೆಳವಣಿಗೆ ಆಗುತ್ತಿದೆ. ಆರೋಪಿ ದರ್ಶನ್​​ಗೆ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಿವೆ. ದರ್ಶನ್, ಜೈಲಿಗೆ ಹೋದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಹೊರಗಿದ್ದುಕೊಂಡು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊರಗಿದ್ದುಕೊಂಡು ಪತಿಗೆ ಅಗತ್ಯ ಕಾನೂನು ನೆರವು ಇನ್ನಿತರೆಗಳು ಧಕ್ಕಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಬಗ್ಗೆ ಕೆಲವು ಋಣಾತ್ಮಕ ಸುದ್ದಿಗಳು ಹರಿದಾಡುತ್ತಿವೆ. ವಿಶೇಷವಾಗಿ ದರ್ಶನ್ ಆಪ್ತ, ಸಹೋದರ ಸಮಾನ ಎನಿಸಿಕೊಂಡಿರುವ ಧನ್ವೀರ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ಮನಸ್ಥಾಪ ಉಂಟಾಗಿದೆ ಎನ್ನಲಾಗುತ್ತಿದೆ. ಇವುಗಳ ನಡುವೆಯೇ ವಿಜಯಲಕ್ಷ್ಮಿ ಅವರ ಇನ್​ಸ್ಟಾಗ್ರಾಂ ಪೋಸ್ಟ್ ಸುದ್ದಿಗಳಿಗೆ ಮತ್ತಷ್ಟು ಇಂಬು ನೀಡಿದೆ.

ವಿಜಯಲಕ್ಷ್ಮಿ ಅವರು ಇಂದು ಇನ್​​ಸ್ಟಾಗ್ರಾಂನಲ್ಲಿ ಕಾಮಾಕ್ಯ ದೇವರ ಚಿತ್ರಗಳನ್ನು ಹಂಚಿಕೊಂಡಿದ್ದು, ‘ದೇವರಿಗೆ ಗೊತ್ತು ಅಷ್ಟೆ ಸಾಕು’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಒಳ್ಳೆತನ, ವ್ಯಕ್ತಿತ್ವವನ್ನು ಯಾರಿಗೂ ತೋರಿಸುವ ಅಗತ್ಯವಿಲ್ಲ, ಅದು ದೇವರಿಗೆ ಗೊತ್ತಿದೆ ಅಷ್ಟೇ ಸಾಕು ಎಂದಿದ್ದಾರೆ. ಚಿತ್ರದ ಹಿನ್ನೆಲೆಯಲ್ಲಿ ‘ಎಲ್ಲಿಗೆ ಓಡುವೆ ಓ ಮನುಜ ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ’ ಎಂಬ ಹಾಡನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ವಿಜಯಲಕ್ಷ್ಮಿ ಅವರು ‘ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ, ವ್ಯಕ್ತಿಯಾಗಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದರು. ವಿಜಯಲಕ್ಷ್ಮಿ ಅವರು ಆ ಪೋಸ್ಟ್ ಹಂಚಿಕೊಂಡಾಗಲೇ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ಮನಸ್ಥಾಪದ ಸುಳಿವು ಹಲವರಿಗೆ ದೊರಕಿತ್ತು. ವಿಜಯಲಕ್ಷ್ಮಿ ಅವರು ಆ ಪೋಸ್ಟ್ ಹಂಚಿಕೊಂಡ ಕೆಲ ದಿನಗಳ ಬಳಿಕ, ಧನ್ವೀರ್ ಅವರು ದರ್ಶನ್ ಅನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿ ನೀಡಿದ್ದರು. ಅದಾದ ಬಳಿಕ ಧನ್ವೀರ್ ಸಹ ಅದೇ ಪೋಸ್ಟ್ ಅನ್ನು ಹಂಚಿಕೊಂಡು, ವಿಜಯಲಕ್ಷ್ಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಈಗ ವಿಜಯಲಕ್ಷ್ಮಿ ಅವರು ಮತ್ತೊಮ್ಮೆ ‘ಕ್ರಿಪ್ಟಿಕ್ ಪೋಸ್ಟ್’ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರದೋಷ್ ಮಾಫಿ ಕೇಸ್: ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್‌

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬಿರುಸಿನಿಂದ ಸಾಗುತ್ತಿದ್ದು, ದರ್ಶನ್ ಆಪ್ತ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿಯೂ ಆಗಿರುವ ಪ್ರದೋಶ್, ತಮ್ಮನ್ನು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ದರ್ಶನ್ ಪರ ವಕೀಲರು, ಆಗಸ್ಟ್ 18ರ ವರೆಗೆ ಪ್ರದೋಶ್ ಹೇಳಿಕೆ ದಾಖಲಿಗೆ ಅನುಮತಿ ನೀಡಬಾರದು ಎಂದಿದ್ದು, ಅದರಂತೆ ನ್ಯಾಯಾಲಯವು ದರ್ಶನ್ ವಕೀಲರ ಮನವಿಗೆ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಮುಂದಿನ ಸಾಕ್ಷಿಗಳ ವಿಚಾರಣೆ ವೇಳೆ ದರ್ಶನ್, ಖುದ್ದು ನ್ಯಾಯಾಲಯದಲ್ಲಿ ಹಾಜರರಿರಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ನ್ಯಾಯಾಲಯವು ಈ ಕುರಿತಂತೆ ಇನ್ನಷ್ಟೆ ಆದೇಶ ಹೊರಡಿಸಬೇಕಿದೆ. ಇಂದು (ಆಗಸ್ಟ್ 13) ನ್ಯಾಯಾಲಯದಲ್ಲಿ ಕೆಲ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:16 pm, Thu, 13 August 26

Source link

Independence Day 2026: ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ಮೊಳಗಲಿದೆ ‘ವಂದೇ ಮಾತರಂ’ ಗಾಯನ, ಎಷ್ಟು ಗಂಟೆಗೆ ಧ್ವಜಾರೋಹಣ? – Kannada News | Independence Day 2026 15th August Flag Hosting timings, guest list and all you need to know in Kannada

ನವದೆಹಲಿ, ಆಗಸ್ಟ್​​ 13: 2026ರ ಆಗಸ್ಟ್​​ 15ರಂದು ನಡೆಯಲಿರುವ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯು ಈ ಬಾರಿ ಹಲವು ಐತಿಹಾಸಿಕ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಳಿಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಲಿದ್ದು, ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಷ್ಟ್ರೀಯ ಗೀತೆಯ 150 ವರ್ಷಗಳ ಸಂಭ್ರಮವನ್ನು ದೇಶ ಆಚರಿಸುತ್ತಿರುವ ಹಿನ್ನೆಲೆ, ಕೆಂಪುಕೋಟೆಯಲ್ಲಿ ನಡೆಯುವ ಮುಖ್ಯ ಸಮಾರಂಭದಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಗಾಯನ ನಡೆಯಲಿದೆ.

ಸ್ವಾತಂತ್ರ್ಯದ ಬಳಿಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 1947ರ ಆಗಸ್ಟ್ 16ರಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ನಂತರ ಪ್ರಧಾನಿ ಧ್ವಜಾರೋಹಣ ಹಾಗೂ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಸಂಪ್ರದಾಯ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಭಾಗವಾಗಿದೆ.

ಇದನ್ನೂ ಓದಿ: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ

2026ರ ಸ್ವಾತಂತ್ರ್ಯ ದಿನದ ವಿಶೇಷತೆ ಏನು?

ಈ ಬಾರಿಯ ಆಚರಣೆಯು ‘150 ವರ್ಷಗಳ ವಂದೇ ಮಾತರಂ’ ಹಾಗೂ ‘ವಿಕಸಿತ ಭಾರತಕ್ಕಾಗಿ ಯುವಶಕ್ತಿ’ ಎಂಬ ಎರಡು ಪ್ರಮುಖ ವಿಷಯಗಳನ್ನು ಕೇಂದ್ರಬಿಂದುವಾಗಿಟ್ಟುಕೊಳ್ಳಲಾಗಿದೆ. ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನಗಳು, ಯುವಜನರ ಪಾಲ್ಗೊಳ್ಳುವಿಕೆ, ಪುಷ್ಪಾಲಂಕಾರ ಮತ್ತು ದೇಶಭಕ್ತಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಬಾರಿಯ ಥೀಮ್: ಯುವಶಕ್ತಿ – ವಿಕಸಿತ ಭಾರತ

2026ರ ಸ್ವಾತಂತ್ರ್ಯ ದಿನಾಚರಣೆಯ ಮತ್ತೊಂದು ಪ್ರಮುಖ ಅಂಶ ‘ಯುವಶಕ್ತಿ’ ಆಗಿದೆ. 2047ರಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲಿರುವ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿಯಲ್ಲಿ ಯುವಜನರ ಕೊಡುಗೆಯನ್ನು ಸರ್ಕಾರ ವಿಶೇಷವಾಗಿ ಗುರುತಿಸುತ್ತಿದೆ. ವಿಜ್ಞಾನ, ನಾವೀನ್ಯತೆ, ಶಿಕ್ಷಣ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಸ್ವಯಂಸೇವಾ ಕಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕರಿಗೆ ಗೌರವ ಸಲ್ಲಿಸಲಾಗುತ್ತದೆ.

ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

ಈ ಬಾರಿಯ ಸಮಾರಂಭಕ್ಕೆ 2026ರ ಅಂತರರಾಷ್ಟ್ರೀಯ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಒಲಿಂಪಿಯಾಡ್‌ನಲ್ಲಿ ಪದಕ ಗೆದ್ದ 19 ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇದಲ್ಲದೆ, ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 5,000 ವಿಶೇಷ ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ನಾವೀನ್ಯತೆಯ ಸಾಧಕರು, ಉದ್ಯಮಿಗಳು, ವಿಜ್ಞಾನಿಗಳು, ಕಾರ್ಮಿಕರು, ಸ್ವಯಂಸೇವಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version