Independence Day Wishes: ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ; ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಅತ್ಯುತ್ತಮ ಕನ್ನಡ ಶುಭಾಶಯಗಳು ಹಾಗೂ ಸ್ಟೇಟಸ್‌ಗಳು – Kannada News | Independence Day Wishes, Quotes, Images, Messages, WhatsApp and Facebook Status in Kannada

ಆಗಸ್ಟ್ 15ರಂದು ಭಾರತವು ತನ್ನ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ. ಈ ಶುಭ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ಬಂಧು-ಮಿತ್ರರು ಹಾಗೂ ಕುಟುಂಬದವರಿಗೆ ಶುಭಾಶಯ ಕೋರಲು, ವಾಟ್ಸಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕಿಕೊಳ್ಳಲು ಇಲ್ಲಿದೆ ಆಕರ್ಷಕ ಮೆಸೇಜ್‌ಗಳು, ಶುಭಾಶಯಗಳು ಹಾಗೂ ಸ್ಪೂರ್ತಿದಾಯಕ ನುಡಿಗಳು ಇಲ್ಲಿವೆ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

“ತ್ಯಾಗ, ಬಲಿದಾನ ಮತ್ತು ದೇಶಪ್ರೇಮದ ಸಂಕೇತವಾದ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ಜೈ ಹಿಂದ್!”

“ನಮ್ಮ ದೇಶದ ಹೆಮ್ಮೆ, ಸಾರ್ವಭೌಮತೆ ಮತ್ತು ಏಕತೆಯನ್ನು ಎತ್ತಿಹಿಡಿಯೋಣ. ಎಲ್ಲರಿಗೂ ಭಾರತದ ಸ್ವಾತಂತ್ರ್ಯ ದಿನಾಚರಣೆಯ ನಲ್ಮೆಯ ಶುಭಾಶಯಗಳು!”

“ನಾವು ಸ್ವತಂತ್ರ ಭಾರತದ ಪ್ರಜೆಗಳೆಂದು ಹೇಳಿಕೊಳ್ಳಲು ಹೆಮ್ಮೆಪಡೋಣ. ಭಾರತ ಮಾತೆಗೆ ಪ್ರಣಾಮಗಳು! ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.”

“ದೇಶದ ಗಡಿ ಕಾಯುವ ಯೋಧರಿಗೆ ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಮಹನೀಯರಿಗೆ ನಮನಗಳು. ಪ್ರತಿಯೊಬ್ಬ ಭಾರತೀಯನಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು!”

ಸ್ಪೂರ್ತಿದಾಯಕ ದೇಶಭಕ್ತಿ ನುಡಿಗಳು:

“ನನ್ನ ರಕ್ತದ ಪ್ರತಿಯೊಂದು ಹನಿಯೂ ಈ ದೇಶದ ಬೆಳವಣಿಗೆಗೆ ಧಾರೆ ಎರೆಯಲ್ಪಡಲಿ.”
— ಮಹಾತ್ಮ ಗಾಂಧಿ

“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ.”
— ನೇತಾಜಿ ಸುಭಾಷ್ ಚಂದ್ರ ಬೋಸ್

“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ.”
— ಬಾಲ ಗಂಗಾಧರ ತಿಲಕ್

ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್

“ಕೇಸರಿ, ಬಿಳಿ, ಹಸಿರು – ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ 🕊️🇮🇳. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!”

“ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಏಕೈಕ ದೇಶ ನಮ್ಮ ಭಾರತ! ಜೈ ಹಿಂದ್

“ಬನ್ನಿ ನಾವೆಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ! ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು.”

ಇದನ್ನೂ ಓದಿ: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ 

ಸ್ವಾತಂತ್ರ್ಯ ದಿನಾಚರಣೆಯ ಚಿತ್ರಗಳು

ತ್ರಿವರ್ಣ ಧ್ವಜ: ಹಿನ್ನೆಲೆಯಲ್ಲಿ ಮುಗಿಲೆತ್ತರಕ್ಕೆ ಹಾರಾಡುತ್ತಿರುವ ಭಾರತದ ತ್ರಿವರ್ಣ ಧ್ವಜ
ಹಾಗೂ ಮೇಲೆ “79th Independence Day” ಎಂದು ಬರೆದಿರುವ ಚಿತ್ರಗಳು.

ವೀರ ಯೋಧರು: ದೇಶದ ಗಡಿಯಲ್ಲಿ ಧ್ವಜ ಹಿಡಿದು ನಿಂತಿರುವ ಭಾರತೀಯ ಯೋಧರ ಚಿತ್ರಗಳು.

ಐತಿಹಾಸಿಕ ಸ್ಥಳಗಳು: ದೆಹಲಿಯ ಕೆಂಪುಕೋಟೆಯ ಮೇಲೆ ಹಾರಾಡುತ್ತಿರುವ ರಾಷ್ಟ್ರಧ್ವಜದ ಚಿತ್ರ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6+2+3 ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ – Kannada News | India Playing XI For 1st Test Against Sri Lanka

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರಿಂದ ಶುರುವಾಗಲಿದೆ. ಶ್ರೀಲಂಕಾ ಗಾಲೆಯಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಇಬ್ಬರು ಕನ್ನಡಿಗರು ಕಾಣಿಸಿಕೊಳ್ಳುವುದು ಖಚಿತ. ಏಕೆಂದರೆ ಈ ಸರಣಿಯಿಂದ ಸಾಯಿ ಸುದರ್ಶನ್ ಹೊರಗುಳಿದಿದ್ದು ಅವರ ಬದಲಿಗೆ ದೇವದತ್ ಪಡಿಕ್ಕಲ್​ಗೆ ಸ್ಥಾನ ಸಿಗುವುದು ಬಹುತೇಕ ಕನ್ಫರ್ಮ್ ಆಗಿದೆ.

ಅದರಂತೆ ಟೀಮ್ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕನ್ನಡಿಗರಾದ ಕೆ. ಎಲ್. ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದರೆ, ಅಂತಿಮ ತಂಡದಲ್ಲಿ ಕಾಣಿಸಿಕೊಳ್ಳುವ ಕನ್ನಡಿಗರ ಒಟ್ಟು ಸಂಖ್ಯೆ ಮೂರಕ್ಕೆ ಏರಲಿದೆ.

ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11?

  • ಆರಂಭಿಕ ಜೋಡಿ: ಯಶಸ್ವಿ ಜೈಸ್ವಾಲ್ ಮತ್ತು ಕೆ. ಎಲ್. ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
  • ಮೂರನೇ ಕ್ರಮಾಂಕ: ಕರ್ನಾಟಕದ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
  • ಮಧ್ಯಮ ಕ್ರಮಾಂಕ: ಶುಭ್​ಮನ್ ಗಿಲ್, ರಿಷಭ್ ಪಂತ್ ಹಾಗೂ ಧ್ರುವ್ ಜುರೇಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
  • ಆಲ್​ರೌಂಡರ್​: ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ ಹಾಗೂ ಸರಂಶ್ ಜೈನ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು.
  • ಬೌಲರ್​ಗಳು: ಪರಿಪೂರ್ಣ ಬೌಲರ್​ಗಳಾಗಿ ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್ ಹಾಗೂ ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಅಂದರೆ ಟೀಮ್ ಇಂಡಿಯಾ ಮೊದಲ ಪಂದ್ಯಕ್ಕಾಗಿ 6 ಪರಿಪೂರ್ಣ ಬ್ಯಾಟರ್​ಗಳು, ಇಬ್ಬರು ಆಲ್​ರೌಂಡರ್​ಗಳು ಹಾಗೂ ಮೂವರು ಬೌಲರ್​ಗಳೊಂದಿಗೆ ಪ್ಲೇಯಿಂಗ್ ಇಲೆವೆನ್ ಸಂಯೋಜಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ಯಶಸ್ವಿ ಜೈಸ್ವಾಲ್
  2. ಕೆ.ಎಲ್. ರಾಹುಲ್
  3. ದೇವದತ್ ಪಡಿಕ್ಕಲ್
  4. ಶುಭ್​ಮನ್ ಗಿಲ್ (ನಾಯಕ)
  5. ರಿಷಭ್ ಪಂತ್ (ವಿಕೆಟ್ ಕೀಪರ್)
  6. ಧ್ರುವ್ ಜುರೆಲ್
  7. ರವೀಂದ್ರ ಜಡೇಜಾ
  8. ಸರಂಶ್ ಜೈನ್
  9. ಕುಲ್ದೀಪ್ ಯಾದವ್
  10. ಮೊಹಮ್ಮದ್ ಸಿರಾಜ್
  11. ಗುರ್ನೂರ್ ಬ್ರಾರ್.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪ್ರಕಟ

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ, ಸರ್ಫರಾಝ್ ಖಾನ್.

Source link

Independence Day Tricolour Food: ಸ್ವಾತಂತ್ರ್ಯ ದಿನಾಚರಣೆಯಂದು ಸುಲಭವಾಗಿ ‘ತ್ರಿವರ್ಣ’ ಖಾದ್ಯ ತಯಾರಿಸಿ; ರೆಸಿಪಿ ಇಲ್ಲಿದೆ – Kannada News | 80th Independence Day: Celebrate with Healthy Tricolour Food Recipes

ಆಗಸ್ಟ್ 15ರ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಇಡೀ ಭಾರತವೇ ಸಜ್ಜಾಗಿದೆ. ಈ ರಾಷ್ಟ್ರೀಯ ಹಬ್ಬದ ದಿನದಂದು ಮನೆಯಲ್ಲಿಯೇ ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಪ್ರತಿನಿಧಿಸುವ ‘ತ್ರಿವರ್ಣ’ ಖಾದ್ಯಗಳನ್ನು ತಯಾರಿಸಿ ಕುಟುಂಬದವರೊಂದಿಗೆ ಸವಿಯುವುದು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಯಾವುದೇ ಕೃತಕ ಬಣ್ಣಗಳನ್ನು ಬಳಸದೆ, ಸಂಪೂರ್ಣ ಸ್ವಾಭಾವಿಕ ಹಾಗೂ ಆರೋಗ್ಯಕರ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ವಿಶಿಷ್ಟ ತ್ರಿರಂಗ ಖಾದ್ಯಗಳ ವಿವರ ಇಲ್ಲಿದೆ.

ತ್ರಿವರ್ಣ ಇಡ್ಲಿ (Tricolour Idli):

ಬೆಳಗಿನ ಉಪಹಾರಕ್ಕೆ ಸೌಮ್ಯ ಹಾಗೂ ಆರೋಗ್ಯಕರವಾದ ಇಡ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಇದನ್ನು ತ್ರಿರಂಗ ರೂಪದಲ್ಲಿ ಮಾಡಲು ಮೂರು ಭಾಗಗಳ ಇಡ್ಲಿ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಬೇಕು. ತ್ರಿವರ್ಣ ಇಡ್ಲಿ ಮಾಡಲು ಸಿದ್ಧಪಡಿಸಿದ ಇಡ್ಲಿ ಹಿಟ್ಟನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿ. ಕಿತ್ತಳೆ/ಕೇಸರಿ ಬಣ್ಣಕ್ಕೆ ಕ್ಯಾರೆಟ್ ರಸ, ಹಸಿರು ಬಣ್ಣಕ್ಕೆ ಪಾಲಕ್ ಅಥವಾ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಸೇರಿಸಿ. ಮತ್ತೊಂದು ಭಾಗವನ್ನು ಬಿಳಿಯಾಗಿರಿಸಿ, ಇಡ್ಲಿ ತಟ್ಟೆಯಲ್ಲಿ ಮೂರು ಬಣ್ಣಗಳನ್ನು ಹಾಕಿ 10-15 ನಿಮಿಷ ಬೇಯಿಸಿ. ಬಣ್ಣಬಣ್ಣದ, ಕಣ್ಣಿಗೆ ತಂಪು ನೀಡುವ ತ್ರಿರಂಗ ಇಡ್ಲಿ ಸಿದ್ಧವಾಗುತ್ತದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಬಹುದು.

ತ್ರಿವರ್ಣ ಸ್ಯಾಂಡ್‌ವಿಚ್ (Tricolour Sandwich):

ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಮತ್ತು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ತ್ರಿರಂಗ ಸ್ಯಾಂಡ್‌ವಿಚ್ ಸಂಜೆಯ ಸ್ನ್ಯಾಕ್ಸ್ ಅಥವಾ ಉಪಹಾರಕ್ಕೆ ಸೂಕ್ತ. ಇದನ್ನು ತಯಾರಿಸಲು ಮೊದಲ ಬ್ರೆಡ್ ಪದರಕ್ಕೆ ಹಸಿರು ಪುದೀನಾ-ಕೊತ್ತಂಬರಿ ಚಟ್ನಿ ಅಥವಾ ಸೌತೆಕಾಯಿ ಚೂರುಗಳನ್ನು ಬಳಸಲಾಗುತ್ತದೆ. ನಡುವಿನ ಬಿಳಿ ಪದರಕ್ಕಾಗಿ ಪನ್ನೀರ್, ಮಯೋನೈಸ್ ಅಥವಾ ಚೀಸ್ ಸ್ಲೈಸ್ ಇಡಲಾಗುತ್ತದೆ. ಮೇಲಿನ ಕೇಸರಿ ಪದರಕ್ಕಾಗಿ ಕ್ಯಾರೆಟ್ ತುರಿ, ಟೊಮೆಟೊ ಬಳಸಲಾಗುತ್ತದೆ. ಈ ಮೂರೂ ಪದರಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ತ್ರಿಕೋನ ಆಕಾರದಲ್ಲಿ ಕತ್ತರಿಸಿದರೆ ಆಕರ್ಷಕ ಸ್ಯಾಂಡ್‌ವಿಚ್ ಸಿದ್ಧಗೊಳ್ಳುತ್ತದೆ.

ತ್ರಿವರ್ಣ ಪಲಾವ್ ಮತ್ತು ರೈಸ್ (Tricolour Pulao):

ಮಧ್ಯಾಹ್ನದ ಊಟಕ್ಕೆ ತ್ರಿರಂಗ ಪಲಾವ್ ಅಥವಾ ರೈಸ್ ಕಣ್ಣಿಗೂ ಹಾಗೂ ಹೊಟ್ಟೆಗೂ ಹಬ್ಬವನ್ನು ನೀಡುತ್ತದೆ. ಇದನ್ನು ತಯಾರಿಸಲು ಪ್ರತ್ಯೇಕವಾಗಿ ಮೂರು ಬಣ್ಣಗಳ ಅನ್ನವನ್ನು ಸಿದ್ಧಪಡಿಸಿಕೊಳ್ಳಬೇಕು. ಕೇಸರಿ ಬಣ್ಣದ ಅನ್ನಕ್ಕಾಗಿ ಟೊಮೆಟೊ ರೈಸ್, ಕ್ಯಾರೆಟ್ ರೈಸ್ ಅಥವಾ ಅರಿಶಿನ ಬೆರೆಸಿದ ಅನ್ನವನ್ನು ಮಾಡಬಹುದು. ಬಿಳಿ ಭಾಗಕ್ಕೆ ಸಾಮಾನ್ಯ ಬಿಳಿ ಅನ್ನ, ಕಾಯಿಹಾಲು ಅನ್ನ ಅಥವಾ ಮೊಸರನ್ನ ಸೂಕ್ತ. ಇನ್ನು ಹಸಿರು ಬಣ್ಣಕ್ಕಾಗಿ ಪಾಲಕ್ ಅಥವಾ ಪುದೀನಾ ರೈಸ್ ತಯಾರಿಸಬಹುದು. ಬಡಿಸುವಾಗ ಪ್ಲೇಟ್‌ನಲ್ಲಿ ರಾಷ್ಟ್ರಧ್ವಜದ ಮಾದರಿಯಲ್ಲಿ ಮೂರೂ ಅನ್ನವನ್ನು ಸಾಲಾಗಿ ಜೋಡಿಸಿದರೆ ಸುಂದರವಾದ ತ್ರಿರಂಗ ಪಲಾವ್ ಸಿದ್ಧವಾಗುತ್ತದೆ.

ತ್ರಿವರ್ಣ ಆರೋಗ್ಯಕರ ಸಲಾಡ್ (Tricolour Healthy Salad):

ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಮತ್ತು ಡಯಟ್‌ನಲ್ಲಿರುವವರಿಗೆ ತ್ರಿರಂಗ ಸಲಾಡ್ ಅತ್ಯುತ್ತಮ ಆಯ್ಕೆ. ಇದಕ್ಕಾಗಿ ಕೇಸರಿ ಬಣ್ಣವನ್ನು ಪ್ರತಿನಿಧಿಸಲು ತುರಿದ ಕ್ಯಾರೆಟ್ ಅಥವಾ ಪಪ್ಪಾಯಿ ಚೂರುಗಳನ್ನು ಬಳಸಬಹುದು. ಬಿಳಿ ಬಣ್ಣಕ್ಕಾಗಿ ಬೇಯಿಸಿದ ಮೊಳಕೆ ಕಾಳುಗಳು, ಪನ್ನೀರ್ ಅಥವಾ ಮೂಲಂಗಿ ತುರಿಯನ್ನು ಬಳಸಲಾಗುತ್ತದೆ. ಹಸಿರು ಬಣ್ಣಕ್ಕಾಗಿ ಸೌತೆಕಾಯಿ, ಬೇಯಿಸಿದ ಹಸಿ ಬಟಾಣಿ ಅಥವಾ ಕ್ಯಾಪ್ಸಿಕಂ ಚೂರುಗಳನ್ನು ಸೇರಿಸಬಹುದು. ಈ ಮೂರೂ ತರಕಾರಿಗಳನ್ನು ಗಾಜಿನ ಬೌಲ್‌ನಲ್ಲಿ ಸಾಲಾಗಿ ಜೋಡಿಸಿ, ಮೇಲೆ ಸ್ವಲ್ಪ ನಿಂಬೆ ರಸ, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಉದುರಿಸಿದರೆ ತಾಜಾ ಹಾಗೂ ಪೌಷ್ಟಿಕ ಸಲಾಡ್ ಸಿದ್ಧವಾಗುತ್ತದೆ.

ಇದನ್ನೂ ಓದಿ: Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ತ್ರಿವರ್ಣ ಸ್ಮೂಥಿ ಮತ್ತು ಜ್ಯೂಸ್ (Tricolour Smoothie):

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ತಂಪಾದ ಕುಡಿಯುವ ಪಾನೀಯ ಬೇಕೆನಿಸಿದರೆ ತ್ರಿವರ್ಣ ಸ್ಮೂಥಿ ಉತ್ತಮ ಆಯ್ಕೆ. ಉದ್ದನೆಯ ಗಾಜಿನ ಗ್ಲಾಸ್‌ನ ಅಡಿಭಾಗದಲ್ಲಿ ಕಿವಿ ಹಣ್ಣು ಅಥವಾ ಪಾಲಕ್-ಆಪಲ್ ಸ್ಮೂಥಿಯ ಹಸಿರು ಪದರವನ್ನು ಮೊದಲಿಗೆ ಹಾಕಿ. ಅದರ ಮೇಲೆ ಮೆಲ್ಲಗೆ ಸಿಹಿ ಮೊಸರು ಅಥವಾ ಬಾಳೆಹಣ್ಣಿನ ಮಿಲ್ಕ್‌ಶೇಕ್‌ನ ಬಿಳಿ ಪದರವನ್ನು ಸುರಿಯಿರಿ. ಅಂತಿಮವಾಗಿ ಮೇಲ್ಭಾಗದಲ್ಲಿ ಮಾವಿನ ಹಣ್ಣು, ಕಿತ್ತಳೆ ಅಥವಾ ಪಪ್ಪಾಯಿ ಜ್ಯೂಸ್‌ನ ಕೇಸರಿ ಪದರವನ್ನು ಸೇರಿಸಿ. ಈ ರೀತಿ ಜಾಗರೂಕತೆಯಿಂದ ಸಿದ್ಧಪಡಿಸಿದಾಗ ಗಾಜಿನ ಗ್ಲಾಸ್‌ನಲ್ಲಿ ಮೂರು ಬಣ್ಣಗಳು ಪ್ರತ್ಯೇಕವಾಗಿ ಕಾಣಿಸಿಕೊಂಡು ಕುಡಿಯಲು ಆಕರ್ಷಕವಾಗಿರುತ್ತವೆ.

ನೈಸರ್ಗಿಕ ಪದಾರ್ಥಗಳ ಬಳಕೆಗೆ ಆದ್ಯತೆ ನೀಡಿ:

ಸ್ವಾತಂತ್ರ್ಯ ದಿನದ ಈ ವಿಶೇಷ ಅಡುಗೆಗಳನ್ನು ಮಾಡುವಾಗ ಯಾವುದೇ ರೀತಿಯ ಕೃತಕ ಆಹಾರ ಬಣ್ಣಗಳನ್ನು (Artificial Food Colors) ಬಳಸದಿರುವುದು ಸೂಕ್ತ. ಕ್ಯಾರೆಟ್, ಟೊಮೆಟೊ, ಪಾಲಕ್, ಕೊತ್ತಂಬರಿ, ಪುದೀನಾ, ಅರಿಶಿನ ಹಾಗೂ ಹಣ್ಣುಗಳಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ಖಾದ್ಯಗಳು ನೋಡಲು ಸುಂದರವಾಗಿ ಕಾಣುವುದಲ್ಲದೆ, ಆರೋಗ್ಯಕ್ಕೂ ಅತ್ಯಂತ ಹಿತಕರವಾಗಿರುತ್ತವೆ.

ಮತ್ತಷ್ಟು ಜೀವನಶೈಲಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಗೆ ಬರುವಂತೆ ಯಶ್-ರಾಧಿಕಾ ದಂಪತಿಗೆ ಆಹ್ವಾನ ನೀಡಿದ ಚಿಕ್ಕಣ್ಣ – Kannada News | Actor Chikkanna Invites Rocking Star Yash and Radhika Pandit for His Wedding with Pavana

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಹಾಗೂ ಹೀರೋ ಚಿಕ್ಕಣ್ಣ ಅವರು ತಮ್ಮ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಲು ಸಜ್ಜಾಗಿದ್ದಾರೆ. ಅವರು ಶೀಘ್ರವೇ ವಿವಾಹ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಭೇಟಿಯಾಗಿ ತಮ್ಮ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದು ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿರುವ ಚಿಕ್ಕಣ್ಣ, ‘ರಾಜಾಹುಲಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಯಶ್ ಜೊತೆ ಒಟ್ಟಾಗಿ ಅಭಿನಯಿಸಿದ್ದರು. ಇಬ್ಬರ ನಡುವಿನ ಆತ್ಮೀಯತೆ ಮತ್ತು ಸ್ನೇಹ ಈಗಲೂ ಹಾಗೆಯೇ ಮುಂದುವರಿದಿದೆ.

ಇದೇ ಬಾಂಧವ್ಯದಿಂದಾಗಿ ಚಿಕ್ಕಣ್ಣ ಅವರು ವೈಯಕ್ತಿಕವಾಗಿ ತೆರಳಿ ಯಶ್ ಹಾಗೂ ರಾಧಿಕಾ ದಂಪತಿಗೆ ಮದುವೆ ಆಹ್ವಾನ ನೀಡಿದ್ದಾರೆ. ಕೇವಲ ರಾಕಿಂಗ್ ಸ್ಟಾರ್ ದಂಪತಿ ಮಾತ್ರವಲ್ಲದೆ ರಾಜಕೀಯ ಹಾಗೂ ಚಲನಚಿತ್ರ ರಂಗದ ಹಲವು ಗಣ್ಯರಿಗೆ ಚಿಕ್ಕಣ್ಣ ಸೆಲೆಬ್ರಿಟಿಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸುತ್ತಿದ್ದಾರೆ. ಚಿಕ್ಕಣ್ಣ ಅವರ ವಿವಾಹ ಮಹೋತ್ಸವವು ಮೈಸೂರಿನಲ್ಲಿ ಆಗಸ್ಟ್ 29 ಮತ್ತು 30 ರಂದು ಅದ್ದೂರಿಯಾಗಿ ನೆರವೇರಲಿದ್ದು, ಮದುವೆ ಸಂಭ್ರಮಕ್ಕೆ ತಯಾರಿಗಳು ಭರದಿಂದ ಸಾಗಿವೆ.

ಚಿಕ್ಕಣ್ಣ ಅವರು ಕೈಹಿಡಿಯಲಿರುವ ಹುಡುಗಿಯ ಹೆಸರು ಪಾವನಾ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯಾಗಿದ್ದು, ಇದು ಹಿರಿಯರು ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಸದ್ದಿಲ್ಲದೆ ಮದುವೆ ನಿಶ್ಚಯ ಕಾರ್ಯಕ್ರಮ ಹಾಗೂ ಹೂ ಮುಡಿಸುವ ಶಾಸ್ತ್ರವನ್ನು ಕುಟುಂಬಸ್ಥರು ಪೂರ್ಣಗೊಳಿಸಿದ್ದರು.

ಇದನ್ನೂ ಓದಿ: ಕಾಶಿಯಲ್ಲಿ ಮುಗಿಯಿತು ಚಿಕ್ಕಣ್ಣ ನಟನೆಯ ‘ಲಕ್ಷ್ಮಿಪುತ್ರ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್

ಹಿಂದೆ ವಿವಿಧ ಟಾಕ್ ಶೋಗಳು ಹಾಗೂ ವೇದಿಕೆಗಳಲ್ಲಿ ತಮ್ಮ ಮದುವೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದ ಚಿಕ್ಕಣ್ಣ, ಈಗ ಕೊನೆಗೂ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ದೀರ್ಘಕಾಲದ ಬ್ಯಾಚುಲರ್ ಲೈಫ್‌ಗೆ ವಿದಾಯ ಹೇಳಿ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿರುವ ಚಿಕ್ಕಣ್ಣ ಹಾಗೂ ಪಾವನಾ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಮಿತ್ರರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ – Kannada News | Bharti Airtel scraps few pre paid plans, including the popular Rs 299 plan

ನವದೆಹಲಿ, ಆಗಸ್ಟ್ 13: ಭಾರ್ತಿ ಏರ್‌ಟೆಲ್ (Bharti Airtel) ತನ್ನ ಗ್ರಾಹಕರಿಗೆ ನೀಡುತ್ತಿದ್ದ ಅತ್ಯಂತ ಜನಪ್ರಿಯ ₹299 ರ ಅನ್‌ಲಿಮಿಟೆಡ್ ಬೇಸ್ ಪ್ರಿಪೇಡ್ ಪ್ಲಾನ್ ಅನ್ನು ರದ್ದುಗೊಳಿಸಿದೆ. ಇದರೊಂದಿಗೆ ಕಂಪನಿಯ ಕನಿಷ್ಠ ಅನ್‌ಲಿಮಿಟೆಡ್ ಪ್ರಿಪೇಡ್ ಪ್ಲಾನ್ ಆರಂಭಿಕ ಬೆಲೆ ಈಗ ₹349 ಕ್ಕೆ ಏರಿಕೆಯಾಗಿದೆ. ಈ ಬದಲಾವಣೆಯು ಕಂಪನಿಯ ಬೇಸ್ ಎಆರ್‌ಪಿಯು (ARPU) ದರದಲ್ಲಿ 16.7% ನಷ್ಟು ಏರಿಕೆಗೆ ಕಾರಣವಾಗಿದೆ. ಎಆರ್​ಪಿಯು ಎಂದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ.

ಏರ್​ಟೆಲ್ ದರ ಬದಲಾವಣೆಗಳು

  • ₹299 ಪ್ಲಾನ್ ರದ್ದು: ದಿನಕ್ಕೆ 1GB ಡೇಟಾ ನೀಡುತ್ತಿದ್ದ 28 ದಿನಗಳ ಅವಧಿಯ ₹299 ರ ಪ್ಲಾನ್ ಅನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ.
  • ಇತರ ರದ್ದುಗೊಂಡ ಪ್ಲಾನ್‌ಗಳು: ಏರ್‌ಟೆಲ್ ತನ್ನ ಪೋರ್ಟ್‌ಫೋಲಿಯೋದಿಂದ ₹319, ₹649 ಮತ್ತು ₹799 ಬೆಲೆಯ ಪ್ರಿಪೇಡ್ ಪ್ಲಾನ್‌ಗಳನ್ನು ಸಹ ತೆಗೆದುಹಾಕಿದೆ. ಆದರೆ, ಕೆಲ ಪ್ರದೇಶಗಳಲ್ಲಿ ₹579, ₹619 ಪ್ಲಾನ್​ಗಳನ್ನು ಕೈಬಿಡಲಾಗಿರುವುದು ತಿಳಿದುಬಂದಿದೆ.
  • ಹೊಸ ಬೇಸ್ ಪ್ಲಾನ್ (₹349): ಈಗ ಗ್ರಾಹಕರು ದಿನಕ್ಕೆ 1.5GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಪಡೆಯಲು ₹299 ಬದಲು ಕನಿಷ್ಠ ₹349 ವೆಚ್ಚ ಮಾಡಬೇಕಾಗುತ್ತದೆ.
  • ಬೆಲೆ ಏರಿಕೆ: ₹859 ಪ್ಲಾನ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಈಗ ಅದು ₹899 ಕ್ಕೆ ದೊರೆಯಲಿದೆ.
  • ಬದಲಾಗದ ಪ್ಲಾನ್​ಗಳು: ₹199 ಮತ್ತು ₹219 ಪ್ಲಾನ್​ಗಳು ಹಾಗೆಯೇ ಮುಂದುವರಿಯಲಿವೆ. ₹199 ಪ್ಲಾನ್ 28 ದಿನ ವ್ಯಾಲಿಡಿಟಿ ಇದ್ದು ಒಟ್ಟಾರೆ 2ಜಿಬಿ ಡೇಟಾ ನೀಡುತ್ತದೆ. ₹219 ಪ್ಲಾನ್ ಒಟ್ಟು 3ಜಿಬಿ ಡೇಟಾ ನೀಡುತ್ತದೆ.

ಇದನ್ನೂ ಓದಿ: ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಏರ್‌ಟೆಲ್ ಒಂದೇ ದಿನದಲ್ಲಿ ಮಾಡಿದ ಅತಿ ದೊಡ್ಡ ಪ್ರಿಪೇಡ್ ಪೋರ್ಟ್‌ಫೋಲಿಯೋ ಬದಲಾವಣೆ ಇದಾಗಿದೆ. ಕಂಪನಿಯು ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾರಿಫ್ ವ್ಯವಸ್ಥೆಯನ್ನು ಮರುಹೊಂದಿಸಲು (Tariff Rationalisation) ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಪರಿಷತ್​ ಸಭಾಪತಿ ಸ್ಥಾನಕ್ಕೆ ಚುನಾವಣೆ: ಕಾಂಗ್ರಸ್​​, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ – Kannada News | Karnataka Council Chairman Election: Congress’s Saleem Ahmed and BJP’s P.H. Poojar File Nominations

ಕಾಂಗ್ರೆಸ್​​ನಿಂದ ಸಲೀಂ ಅಹ್ಮದ್ ಉಮೇದುವಾರಿಕೆ ಸಲ್ಲಿಕೆImage Credit source: Tv9 Kannada

ಬೆಂಗಳೂರು, ಆಗಸ್ಟ್​ 13: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕ ವಿಧಾನ ಪರಿಷತ್​​ ಸಭಾಪತಿ ಸ್ಥಾನಕ್ಕೆ ನಾಳೆ (ಆಗಸ್ಟ್​​ 14) ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​​ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್​​ನಿಂದ ಸಲೀಂ ಅಹ್ಮದ್ ಉಮೇದುವಾರಿಕೆ ಸಲ್ಲಿಸಿದ್ದು, ವಿಧಾನಪರಿಷತ್ ಕಾರ್ಯದರ್ಶಿ ಜ್ಯೋತಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಪರಿಷತ್​​ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್​ ಮತ್ತು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಾಥ್​ ನೀಡಿದ್ದಾರೆ.

ಸಂಖ್ಯಾಬಲವಿಲ್ಲದಿದ್ದರೂ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ

ಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಗೆಲ್ಲಲು ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ವಿಪಕ್ಷ ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಪಿ.ಹೆಚ್​. ಪೂಜಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆ ಬಳಿಕ ಟಿವಿ9 ಜೊತೆ ಮಾತನಾಡಿರುವ ಕಾಂಗ್ರೆಸ್​​ ಅಭ್ಯರ್ಥಿ ಸಲೀಂ ಅಹ್ಮದ್, ಬಿಜೆಪಿಯವರು ನಾಮಪತ್ರವಸಲ್ಲಿಸುವುದು ಅವರಿಗೆ ಬಿಟ್ಟಿದ್ದು. ಆದರೆ ಸರ್ವಾನುಮತದಿಂದ ಆಯ್ಕೆಯಾದರೆ ಒಳ್ಳೆಯದಿತ್ತು ಎಂದಿದ್ದಾರೆ, ಜೊತೆಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಹೆಸರು ಅಧಿಕೃತ ಘೋಷಣೆ

ಉಪ ಸಭಾಪತಿ ಸ್ಥಾನಕ್ಕೂ ಬಿಜೆಪಿಯಿಂದ ಅಭ್ಯರ್ಥಿ?

ಸಭಾಪತಿ ಸ್ಥಾನದ ಚುನಾವಣೆಗೆ ಮಾತ್ರವಲ್ಲದೆ ಉಪ ಸಭಾಪತಿ ಸ್ಥಾನಕ್ಕೂ ಅಭ್ಯರ್ಥಿ ಕಣಕ್ಕಿಳಿಸಲು ವಿಪಕ್ಷ ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ಗೆಲ್ಲಲು ಅಗತ್ಯವಿರುವ ಸಂಖ್ಯಾಬಲದ ಕೊರತೆ ಇದ್ದರೂ ಚುನಾವಣೆಯ ಗಂಭೀರತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲು ವಿಪಕ್ಷ ಮುಂದಾಗಿರುವ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ರಾಮಾಯಣ’ವನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ಆಗರ್ಭ ಶ್ರೀಮಂತ ನಮಿತ್ ಮಲ್ಹೋತ್ರಾ ಯಾರು? – Kannada News | Who is Namit Malhotra the man behind Ramayana movie

‘ರಾಮಾಯಣ’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಭಾರತೀಯ ಸಿನಿಮಾಗಳಲ್ಲಿ ಹಿಂದೆಂದೂ ನೋಡಿರದ ರೀತಿಯ ವಿಎಫ್​​ಎಕ್ಸ್, ಸ್ಪೆಷಲ್ ಎಫೆಕ್ಸ್​​ಗಳನ್ನು ಸಿನಿಮಾ ಹೊಂದಿದೆ. ‘ರಾಮಾಯಣ’ ಸಿನಿಮಾದ ಎರಡು ಭಾಗಕ್ಕಾಗಿ ಸುಮಾರು 4000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎನ್ನಲಾಗುತ್ತಿದೆ. ‘ಇದು ವಿಶ್ವಕ್ಕಾಗಿ ನಿರ್ಮಿಸಲಾಗಿರುವ ಭಾರತೀಯ ಸಿನಿಮಾ’ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಅದರಂತೆಯೇ ಸಿನಿಮಾದ ಪ್ರಚಾರವನ್ನು ಪ್ರತಿಷ್ಠಿತ ಹಾಲಿವುಡ್ ವೇದಿಕೆಗಳಲ್ಲಿ, ಟಾಪ್ ಹಾಲಿವುಡ್​ ಸಿನಿಮಾಗಳ ಜೊತೆಯಲ್ಲಿಯೇ ಮಾಡಲಾಗುತ್ತಿದೆ. ‘ರಾಮಾಯಣ’ದಂತಹಾ ಅಪ್ಪಟ ಭಾರತೀಯ ಕತೆಯನ್ನು ವಿಶ್ವಕ್ಕೆ ಪರಿಚಯಿಸಲು ಊಹಿಸಲಾಗದ ಬಜೆಟ್​​ ಅನ್ನು ಹೂಡಿಕೆ ಮಾಡಿದ್ದಾರೆ ನಿರ್ಮಾಪಕ ನಮಿತ್ ಮಲ್ಹೋತ್ರಾ. ಅಷ್ಟಕ್ಕೂ ಯಾರು ಈ ನಮಿತ್ ಮಲ್ಹೋತ್ರಾ?

‘ರಾಮಾಯಣ’ ಸಿನಿಮಾ ಪ್ರಾರಂಭವಾಗುವುದಕ್ಕೆ ಮುಂಚೆ ಭಾರತೀಯ ಚಿತ್ರಪ್ರೇಮಿಗಳಿಗೆ ನಮಿತ್ ಮಲ್ಹೋತ್ರಾ ಹೆಸರು ಪರಿಚಯವೇ ಇರಲಿಲ್ಲ. ಆದರೆ ನಮಿತ್ ಅವರಿಗೆ ಸಿನಿಮಾಗಳು ಹೊಸದಲ್ಲ. ದಶಕಗಳಿಂದಲೂ ಅದೇ ರಂಗದಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. ಭಾರತೀಯ ಸಿನಿಮಾಗಳು ಆಸ್ಕರ್ ವೇದಿಕೆ ಏರಲು ಹೆಣಗಾಡುತ್ತಿರುವ ಸಮಯದಲ್ಲಿಯೇ ನಮಿತ್ ಮಲ್ಹೋತ್ರಾ ಅವರು ಬರೋಬ್ಬರಿ ಎಂಟು ಆಸ್ಕರ್ ವಿಜಯಗಳ ಹಿಂದೆ ಪ್ರಮುಖ ಶಕ್ತಿಯಾಗಿ ನಿಂತವರು.

ಇಂದು ಭಾರತೀಯ ಸಿನಿಮಾ ಪ್ರೇಮಿಗಳು ಕೊಂಡಾಡುವ ನೋಲನ್ ಸಿನಿಮಾಗಳು, ಮಾರ್ವೆಲ್, ಡಿಸಿ ಸಿನಿಮಾಗಳಿಗೆ ವಿಎಫ್​​ಎಕ್ಸ್, ಸ್ಪೆಷಲ್ ಎಫೆಕ್ಟ್ ಮಾಡಿಕೊಡುವ ಡಿನಿಜ್ (DNEG) ಸಂಸ್ಥೆಯ ಸಿಇಓ ನಮಿತ್ ಮಲ್ಹೋತ್ರಾ. ಕಾರ್ಯಕ್ರೇತ್ರ ಹಾಲಿವುಡ್ ಆದರೂ ಅವರ ಮೂಲ ಭಾರತ. 1995ರಲ್ಲಿ, 18 ವರ್ಷದ ಯುವಕನಾಗಿದ್ದ ನಮಿತ್ ಮಲ್ಹೋತ್ರಾ ಮುಂಬೈನಲ್ಲಿ, ತಮ್ಮ ತಂದೆಯ ಗ್ಯಾರೇಜ್‌ನಲ್ಲಿ ಒಂದೇ ಒಂದು ಕಂಪ್ಯೂಟರ್ ಬಳಸಿ ಎಡಿಟಿಂಗ್ ಸ್ಟುಡಿಯೋ ಆರಂಭಿಸಿದ್ದರು. ಆ ಸ್ಟುಡಿಯೋ ಸ್ಥಾಪಿಸಲು ಅವರು ತಮ್ಮ ಕುಟುಂಬದ ಮನೆಯನ್ನೇ ಅಡಮಾನವಿಟ್ಟಿದ್ದರು. ಆ ಸಮಯದಲ್ಲಿ ಭಾರತೀಯ ವಿಎಫ್‌ಎಕ್ಸ್ ಎನ್ನುವುದು ತೀರ ಕಳಪೆ ಆಗಿತ್ತು. ಅದನ್ನು ಬದಲಾಯಿಸುವುದೇ ನಮಿತ್ ಮಲ್ಹೋತ್ರಾ ಗುರಿ ಆಗಿತ್ತು.

‘ಪ್ರೈಂ ಫೋಕಸ್’ ಹೆಸರಿನಲ್ಲಿ ಸ್ಟುಡಿಯೋ ಆರಂಭಿಸಿ ಭಾರತೀಯ ಸಿನಿಮಾ ಮತ್ತು ಟಿವಿ ಶೋಗಳಿಗೆ ಗ್ರಾಫಿಕ್ಸ್ ಒದಗಿಸುವ ಕಾರ್ಯ ಮಾಡುತ್ತಿದ್ದರು. ‘ಭೂಗಿ ವೂಗಿ’ ಸೇರಿದಂತೆ ಸೋನಿ, ಜೀ ಎಂಟರ್ಟೈನ್​​ಮೆಂಟ್​​ನ ಹಲವು ಕಾರ್ಯಕ್ರಮಗಳಿಗೆ ಗ್ರಾಫಿಕ್ಸ್ ಮಾಡಿಕೊಟ್ಟಿದ್ದರು. ಭಾರತದಲ್ಲಿ 90ರ ದಶಕದಲ್ಲಿ ಜನಪ್ರಿಯವಾದ ಹಲವಾರು ಜಾಹೀರಾತುಗಳ ಹಿಂದೆ ನಮಿತ್ ಮಲ್ಹೋತ್ರಾ ಅವರ ಶ್ರಮವಿದೆ. 2006ರ ವೇಳೆಗೆ ಪ್ರೈಂ ಫೋಕಸ್ ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸಿದ ನಮಿತ್, ಭಾರತೀಯ ಷೇರು ಮಾರುಕಟ್ಟೆಗೆ ಲಿಸ್ಟ್ ಮಾಡಿಸಿದರು.

2009ರ ವೇಳೆಗೆ ನಮಿತ್ ಹಾಗೂ ಅವರ ಸಂಸ್ಥೆಯ ವೃತ್ತಿಪರತೆ, ಗುಣಮಟ್ಟದ ಕಾರಣಕ್ಕೆ ಹಾಲಿವುಡ್ ಸಿನಿಮಾಗಳು ಸಹ ಅರಸಿ ಬಂದವು. ‘ಸ್ಟಾರ್ ವಾರ್ಸ್’, ‘ಹ್ಯಾರಿ ಪಾಟರ್’, ‘ನಾರ್ನಿಯಾ’, ‘ಟೈಟನ್ಸ್’, ‘ಟ್ರಾನ್ಸ್​ಫಾರ್ಮರ್ಸ್’ ಇನ್ನೂ ಹಲವು ಸಿನಿಮಾಗಳಿಗೆ 3ಡಿ ಸೇರಿದಂತೆ ಇನ್ನೂ ಕೆಲವು ಎಫೆಕ್ಟ್ಸ್ ಕೆಲಸಗಳನ್ನು ಮಾಡಿದ್ದು ಇದೇ ನಮಿತ್ ಮಲ್ಹೋತ್ರಾ ಮತ್ತು ತಂಡ.

2014 ರಲ್ಲಿ ನಮಿತ್ ಮಲ್ಹೋತ್ರಾ ಅವರು ತಮ್ಮ ಪ್ರೈಂ ಫೋಕಸ್ ಸಂಸ್ಥೆಯನ್ನು ಲಂಡನ್ ಮೂಲಕ ಡಿಎನ್​ಜಿ (DNEG) ಸಂಸ್ಥೆಯ ಜೊತೆಗೆ ಮರ್ಜ್ ಮಾಡಿದರು ಮಾತ್ರವಲ್ಲದೆ ಆ ಸಂಸ್ಥೆಯ ಸಿಇಓ ಆಗುವ ಮೂಲಕ ಸಂಸ್ಥೆಯ ಚುಕ್ಕಾಣಿ ಹಿಡಿದುಕೊಂಡರು. ನಮಿತ್ ಅವರು ಸಂಸ್ಥೆಯ ಸಿಇಓ ಆದ ಬಳಿಕ ‘ಇಂಟರ್ಸೆಲ್ಲರ್’, ‘ಡ್ಯೂನ್’, ‘ಟೆನೆಟ್’, ‘ಬ್ಲೇಡ್ ರನ್ನರ್’ ಇನ್ನೂ ಹತ್ತು ಹಲವು ಸಿನಿಮಾಗಳು, ವೆಬ್ ಸರಣಿಗಳಿಗೆ ಸಂಸ್ಥೆ ವಿಎಫ್​​ಎಕ್ಸ್, ಸ್ಪೆಷಲ್ ಎಫೆಕ್ಟ್ಸ್ ಮಾಡಿದ್ದು ಮಾತ್ರವಲ್ಲದೆ ಹಲವು ಆಸ್ಕರ್ ಗಳನ್ನು ಸಹ ಪಡೆದುಕೊಂಡಿತು.

ವೃತ್ತಿ ಬದುಕಿನ ಬಹುತೇಕ ವರ್ಷಗಳನ್ನು ಹಾಲಿವುಡ್​​ ಅಂಗಳದಲ್ಲೇ ಕಳೆದಿದ್ದರೂ ಭಾರತೀಯತೆಯನ್ನು ಉಳಿಸಿಕೊಂಡಿದ್ದ ನಮಿತ್ ಮಲ್ಹೋತ್ರಾ ತಮ್ಮ ನೆಲದ ಕತೆಗಳನ್ನು ವಿಶ್ವಕ್ಕೆ ಸಾರಿ ಹೇಳಬೇಕು ಎಂಬ ಅದಮ್ಯ ಬಯಕೆಯಿಂದ ‘ರಾಮಾಯಣ’ ಸಿನಿಮಾಕ್ಕೆ ಕೈ ಹಾಕಿದರು. ನಮಿತ್ ಮಲ್ಹೋತ್ರಾ ‘ರಾಮಾಯಣ’ ಸಿನಿಮಾ ಘೋಷಿಸುವ ವೇಳೆಗೆ ಅದೇ ಕತೆ ಆಧರಿಸಿದ ‘ಆದಿಪುರುಷ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಗಿತ್ತು. ಆದರೂ ಆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ತಮ್ಮ ವೃತ್ತಿ ಕೌಶಲ್ಯ, ನಿರ್ದೇಶಕ ನಿತೀಶ್ ತಿವಾರಿ ಅವರ ವಿಷನ್​​ ಮೇಲೆ ನಂಬಿಕೆ ಇಟ್ಟು ಸಿನಿಮಾಕ್ಕೆ ಭಾರಿ ದೊಡ್ಡ ಮೊತ್ತದ ಹಣಕಾಸು ಹೂಡಿಕೆ ಮಾಡಿದರು.

ಇದನ್ನೂ ಓದಿ: ‘ರಾಮಾಯಣ ಟ್ರೇಲರ್‌ ನನ್ನನ್ನು ಇಂಪ್ರೆಸ್ ಮಾಡಿಲ್ಲ: ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರತಿಕ್ರಿಯೆ

ಅದರ ಫಲವಾಗಿ ಈಗ ‘ರಾಮಾಯಣ’ ಚಿತ್ರವನ್ನು ಅತ್ಯಂತ ಭವ್ಯವಾಗಿ, ಐಮ್ಯಾಕ್ಸ್ (IMAX) ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ನಮಿತ್ ಅವರ ಪ್ರಕಾರ, ಈ ಚಿತ್ರ ಕೇವಲ ದೊಡ್ಡ ಬಜೆಟ್‌ನ ಚಲನಚಿತ್ರವಲ್ಲ, ಬದಲಿಗೆ ಇದು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ನೀಡುವ ಕೊಡುಗೆಯಾಗಿದೆ. ಭಾರತೀಯ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು ತಂತ್ರಜ್ಞಾನ ಒದಗಿಸಿದರೆ, ಇಡೀ ವಿಶ್ವವೇ ನೋಡುವಂತಹ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ನಮಿತ್ ಅವರ ಯಶೋಗಾಥೆಯೇ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಂಭೀರ್ ಪಡೆಗೆ ಸುನಿಲ್ ಗಾವಾಸ್ಕರ್ ಖಡಕ್ ಎಚ್ಚರಿಕೆ! – Kannada News | No Stardom, Only Results: Sunil Gavaskar Warns Gautam Gambhir

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ತಂಡದ ಆಡಳಿತ ಮಂಡಳಿಗೆ ಲಿಟಲ್ ಮಾಸ್ಟರ್ ಸುನಿಲ್ ಗಾವಾಸ್ಕರ್ ಅತ್ಯಂತ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್‌ನಲ್ಲಿ ಮುನ್ನಡೆಯಲು ಮುಂಬರುವ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ‘ಸೂಪರ್‌ಸ್ಟಾರ್ ಸಂಸ್ಕೃತಿ’ಗಿಂತ ತಂಡದ ಸಾಮೂಹಿಕ ಪ್ರದರ್ಶನ ಮುಖ್ಯ ಎಂದು ಗಾವಾಸ್ಕರ್ ನೆನಪಿಸಿದ್ದಾರೆ.

ವ್ಯಕ್ತಿಗಿಂತ ದೇಶವೇ ಮೊದಲು:

ಸುನಿಲ್ ಗಾವಾಸ್ಕರ್ ತಮ್ಮ ಇತ್ತೀಚಿನ ಅಂಕಣದಲ್ಲಿ ಗಂಭೀರ್ ಮತ್ತು ಬಳಗಕ್ಕೆ ನೇರ ಸಂದೇಶ ರವಾನಿಸಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ವರ್ಚಸ್ಸು ಅಥವಾ ವ್ಯಕ್ತಿ ಪೂಜೆಗಿಂತ ತಂಡದ ಶಿಸ್ತು ಮುಖ್ಯ. ಹಾಗೆಯೇ ದೇಶದ ಹೆಮ್ಮೆಯೇ ಮೊದಲ ಆದ್ಯತೆಯಾಗಬೇಕು ಎಂದು ಒತ್ತಿ ಹೇಳಿದ್ದಾರೆ. ಸರಣಿಯನ್ನು ಗೆಲ್ಲಬೇಕಾದರೆ ಪ್ರತಿಯೊಬ್ಬ ಆಟಗಾರನೂ ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವಿಗೆ ಶ್ರಮಿಸುವುದು ಅನಿವಾರ್ಯ ಎಂದಿದ್ದಾರೆ.

WTC ಫೈನಲ್ ಲೆಕ್ಕಾಚಾರ:

ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಐದನೇ ಸ್ಥಾನಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸರಣಿಯಲ್ಲಿ ಭಾರತಕ್ಕೆ ಇನ್ನು ಕೇವಲ ಒಂಬತ್ತು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿದ್ದು, ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್ ತಲುಪಬೇಕಾದರೆ ಕನಿಷ್ಠ ಏಳು ಪಂದ್ಯಗಳಲ್ಲಿ ಜಯಗಳಿಸಲೇಬೇಕಾದ ಕಠಿಣ ಪರಿಸ್ಥಿತಿ ಭಾರತದ ಮುಂದಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸದ ಪ್ರತಿಯೊಂದು ಪಂದ್ಯವೂ ಅತ್ಯಂತ ಮುಖ್ಯವಾಗಿದೆ ಎಂದು ಗಾವಾಸ್ಕರ್ ವಿಶ್ಲೇಷಿಸಿದ್ದಾರೆ.

ಲಂಕಾ ಪಿಚ್​ನಲ್ಲಿ ಜಾಗರೂಕತೆ ಅಗತ್ಯ:

ಶ್ರೀಲಂಕಾ ತಂಡವನ್ನು ಅವರದ್ದೇ ನೆಲದಲ್ಲಿ ಹಗುರವಾಗಿ ಪರಿಗಣಿಸಬೇಡಿ ಎಂದು ಸುನಿಲ್ ಗಾವಾಸ್ಕರ್ ಎಚ್ಚರಿಸಿದ್ದಾರೆ. ಶ್ರೀಲಂಕಾದ ಪಿಚ್‌ಗಳು ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿವೆ. ಅಲ್ಲಿನ ಸ್ಪಿನ್ ದಾಳಿಯನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಸುಲಭದ ಮಾತಲ್ಲ. ಹೀಗಾಗಿ, ಯಾವುದೇ ರೀತಿಯ ಅತಿಯಾದ ಆತ್ಮವಿಶ್ವಾಸ ಅಥವಾ ನಿರ್ಲಕ್ಷ್ಯಕ್ಕೆ ಇಲ್ಲಿ ಆಸ್ಪದವಿರಬಾರದು ಎಂದು ಅವರು ಹೇಳಿದ್ದಾರೆ.

ಬ್ಯಾಟಿಂಗ್ ವಿಭಾಗದ ಸುಧಾರಣೆಗೆ ಕರೆ:

ಕಳೆದ ಕೆಲವು ಸರಣಿಗಳಲ್ಲಿ ಭಾರತದ ಬೌಲಿಂಗ್ ವಿಭಾಗವು ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರೂ, ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರತೆಯ ಕೊರತೆ ಎದ್ದುಕಾಣುತ್ತಿದೆ. ಈ ಕೊರತೆಯನ್ನು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಲಿಟಲ್ ಮಾಸ್ಟರ್ ಸಲಹೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಅಗತ್ಯವಿರುವ ತಾಳ್ಮೆ, ಶಿಸ್ತು ಮತ್ತು ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲುವ ಮನೋಭಾವವನ್ನು ಬ್ಯಾಟರ್‌ಗಳು ಪ್ರದರ್ಶಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ವೇಗಿಗಳ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರ!

ಶುಭ್‌ಮನ್ ಗಿಲ್ ನೇತೃತ್ವದಲ್ಲಿ ಹೊಸ ಸವಾಲು:

ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಲಿರುವ ಈ ಟೆಸ್ಟ್ ಸರಣಿಯು ಯುವ ನಾಯಕ ಶುಭ್‌ಮನ್ ಗಿಲ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಜೋಡಿಗೆ ಮೊದಲ ಅಗ್ನಿಪರೀಕ್ಷೆಯಾಗಿದೆ. ಗಾಯದ ಸಮಸ್ಯೆಗಳು ಮತ್ತು ಇತ್ತೀಚಿನ ಮಿಶ್ರ ಪ್ರದರ್ಶನಗಳ ಒತ್ತಡದ ನಡುವೆ, ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಹೇಗೆ ಕಮ್ಯಾಂಡಿಂಗ್ ಪ್ರದರ್ಶನ ನೀಡಲಿದೆ ಎಂಬುದನ್ನು ಇಡೀ ಕ್ರಿಕೆಟ್ ಲೋಕ ಕುತೂಹಲದಿಂದ ವೀಕ್ಷಿಸುತ್ತಿದೆ.

Source link

ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಕಿಚ್ಚು: ಬೀದಿಗಿಳಿದು ರೈತರ ಹೋರಾಟಕ್ಕೆ ಕೈಜೋಡಿಸಿದ ವಿದ್ಯಾರ್ಥಿ ಪಡೆ – Kannada News | Cauvery Water Dispute: Students Join Farmers Protest in Mandyas Pandavapura

ಬೆಂಗಳೂರು, ಆ.13: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳು ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಮಂಡ್ಯದ ಪಾಂಡವಪುರದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪಾಂಡವಪುರ ಬಸ್ ನಿಲ್ದಾಣದ ಸರ್ಕಲ್ ಬಳಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದರು. ಅವರ ಕರೆಗೆ ಓಗೊಟ್ಟಿರುವ ಮಂಡ್ಯದ ವಿದ್ಯಾರ್ಥಿಗಳು, ಕಾವೇರಿ ನೀರಿಗಾಗಿ ರೈತರ ಹೋರಾಟಕ್ಕೆ ಸಂಪೂರ್ಣವಾಗಿ ಕೈಜೋಡಿಸಿದ್ದಾರೆ. ಮಂಡ್ಯ ಭಾಗದ ರೈತರಿಗೆ ಅವರ ಬೆಳೆಗೆ ನೀರು ಬಿಡದೆ, ಪ್ರಾಧಿಕಾರದ ಆದೇಶ ಪಾಲಿಸಿ ಪಕ್ಕದ ರಾಜ್ಯಕ್ಕೆ ನೀರು ಹರಿಬಿಡುತ್ತಿರುವುದನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನಮ್ಮ ರೈತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಮಂಡ್ಯ ಮಾತ್ರವಲ್ಲದೆ, ಬೆಳಗಾವಿ ಮತ್ತು ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಾವೇರಿ ಹೋರಾಟದ ಕಾವು ಹೆಚ್ಚಿದೆ. ಬೆಳಗಾವಿಯಲ್ಲಿ ಉರುಳು ಸೇವೆ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರೆ, ಮೈಸೂರಿನಲ್ಲಿ “ಬಾರ್ಕೋಲ್ ಚಳುವಳಿ” ಮೂಲಕ ರೈತರು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ವಿದ್ಯಾರ್ಥಿಗಳ ಸಾಥ್ ದೊರೆಯುತ್ತಿದ್ದು, ಯುವಜನತೆಯ ಸಕ್ರಿಯ ಭಾಗವಹಿಸುವಿಕೆ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಿಗ್ ಬಾಸ್ ಅಗ್ನಿಪರೀಕ್ಷೆ’; 72 ವರ್ಷದ ರತ್ನ ಹಾಗೂ 20 ವರ್ಷ ಕುಮಾರಿ ಪಾಸ್ – Kannada News | Big Boss Agniparikshe: 72 Year Old Ratna and 20 Year Old Kumari Selected as Star Contestants

ಬಿಗ್ ಬಾಸ್​​ನಲ್ಲಿ 60 ಸ್ಪರ್ಧಿಗಳ ಮಧ್ಯೆ ಅಗ್ನಿಪರೀಕ್ಷೆ ನಡೆಯುತ್ತಿದೆ. ಈ ಶೋನಲ್ಲಿ 72 ವರ್ಷದ ರತ್ನ ಹಾಗೂ 20 ವರ್ಷದ ಕುಮಾರಿ ಎಂಬಿಬ್ಬರು ಸ್ಪರ್ಧಿಗಳು ತಮ್ಮ ವಿಶಿಷ್ಟ ಆಕರ್ಷಣೆ ಹಾಗೂ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದಾರೆ. 72 ವರ್ಷದ ರತ್ನ ಅವರು ತಮ್ಮ ವಯಸ್ಸನ್ನೂ ಲೆಕ್ಕಿಸದೆ ಪೂರ್ಣ ಉತ್ಸಾಹದಿಂದ ವೇದಿಕೆಯಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಜಡ್ಜ್‌ಗಳ ಮೆಚ್ಚುಗೆಗೆ ಪಾತ್ರರಾದರು. ಮತ್ತೊಂದೆಡೆ 20 ವರ್ಷದ ಕುಮಾರಿ ತಮ್ಮ ಮುಗ್ಧತೆ ಹಾಗೂ ತೀಕ್ಷ್ಣ ಮಾತುಗಳಿಂದ ತೀರ್ಪುಗಾರರ ಮನಗೆದ್ದು ‘ಸ್ಟಾರ್ ಕಂಟೆಸ್ಟೆಂಟ್’ ಆಗಿ ಆಯ್ಕೆಯಾಗಿದ್ದಾರೆ.

ಈ ಇಬ್ಬರೂ ಸ್ಪರ್ಧಿಗಳ ಎನರ್ಜಿ ಹಾಗೂ ಚಾರ್ಮ್ ಕಂಡ ಜಡ್ಜ್‌ಗಳು ಗ್ರೀನ್ ಸಿಗ್ನಲ್ ನೀಡಿ ಮುಂದಿನ ಹಂತಕ್ಕೆ ಆಯ್ಕೆ ಮಾಡಿದ್ದಾರೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಎಪಿಸೋಡ್ ಬಿತ್ತರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version