ಸೈಬರ್ ಅಕ್ರಮ ತಡೆ, ಡಿಜಿಟಲ್ ಭದ್ರತೆ ಬಲಪಡಿಸಲು DRDO ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಪ್ರಯೋಗ ಯಶಸ್ವಿ: ಬೆಂಗಳೂರಿನ ಕಂಪನಿ ಸಾಥ್! – Kannada News | DRDO Quantum Key Distribution Success: Bengaluru Based Taqbit Labs Powers India’s Next Generation Cyber Security
ಬೆಂಗಳೂರು, ಜುಲೈ 16: ಭಾರತದ ಡಿಜಿಟಲ್ ಭದ್ರತೆ ಮತ್ತು ಕಾರ್ಯತಂತ್ರದ ಸಂವಹನ ಜಾಲಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಹತ್ವದ ಸಾಧನೆ ಮಾಡಿದೆ. ಫೈಬರ್ ಆಧಾರಿತ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ (Quantum Key Distribution – QKD) ವ್ಯವಸ್ಥೆಯ ಸೇನಾ ಕ್ಷೇತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಡಿಆರ್‌ಡಿಒ, ಈ ಯೋಜನೆಯಲ್ಲಿ ಬೆಂಗಳೂರು ಮೂಲದ ಟ್ಯಾಕ್‌ಬಿಟ್ ಲ್ಯಾಬ್ಸ್ (Taqbit Labs) ಸಂಸ್ಥೆಯ ಸಹಯೋಗವನ್ನು ಪಡೆದುಕೊಂಡಿದೆ. ದೇಶೀಯ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಪಡಿಸಿರುವ ಈ…