Headlines

ಉತ್ತರ ಭಾರತಕ್ಕೂ ವಿಸ್ತರಿಸಿದ ಇಶಾ ಗ್ರಾಮೋತ್ಸವ; 10 ರಾಜ್ಯಗಳಲ್ಲಿ ನಡೆಯಲಿದೆ ಗ್ರಾಮೀಣ ಕ್ರೀಡಾ ಹಬ್ಬ – Kannada News | Sadhgurus Isha Gramotsavam expands to 10 states and 40000 Villages in India

ನವದೆಹಲಿ, ಜುಲೈ 15: ಸದ್ಗುರು ಜಗ್ಗಿ ವಾಸುದೇವ್ ಅವರ ‘ಇಶಾ ಔಟ್‌ರೀಚ್’ ಸಂಸ್ಥೆ ಆಯೋಜಿಸುವ ಪ್ರಸಿದ್ಧ ಗ್ರಾಮೀಣ ಕ್ರೀಡಾ ಹಬ್ಬ ‘ಇಶಾ ಗ್ರಾಮೋತ್ಸವ’ (Isha Gramotsavam) ಈ ಬಾರಿ ಉತ್ತರ ಭಾರತಕ್ಕೂ ಕಾಲಿಟ್ಟಿದೆ. ತನ್ನ 18ನೇ ಆವೃತ್ತಿಯಲ್ಲಿ ಬರೋಬ್ಬರಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಣೆಯಾಗಿದ್ದು, ಇದು ಇದುವರೆಗಿನ ಅತ್ಯಂತ ಬೃಹತ್ ಕ್ರೀಡಾಕೂಟವಾಗಿರಲಿದೆ. ಈ ಬೃಹತ್ ಹಬ್ಬದಲ್ಲಿ 40,000ಕ್ಕೂ ಹೆಚ್ಚು ಹಳ್ಳಿಗಳ 80,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಇದುವರೆಗೆ ದಕ್ಷಿಣ ಭಾರತದ ತಮಿಳುನಾಡು, ಕೇರಳ,…

Read More

ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ದೆಹಲಿಗೆ ತೆರಳುವ ಮುನ್ನ ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​ – Kannada News | Karnataka Cabinet Expansion: BK Hariprasad’s Remarks Before Leaving for Delhi

ದೇವನಹಳ್ಳಿ, ಜುಲೈ 15: ಸಿಎಂ ಡಿಕೆ ಶಿವಕುಮಾರ್​ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಕೌಂಟ್​ಡೌನ್ ಶುರುವಾಗಿದೆ. ಈಗಾಗಲೇ ಹಲವು ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್​​​ ಇಂದು 5:20ರ ವಿಮಾನದಲ್ಲಿ ಕೆಂಪೇಗೌಡ ಏರ್ ಪೋರ್ಟ್​ನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಎಲ್ಲಾ ಶಾಸಕರಿಗೂ, ಕೇಳಲಿಕ್ಕೆ, ಹೇಳುವುದಕ್ಕೆ ಹಕ್ಕಿದೆ. ಅದರ ತೀರ್ಮಾನವನ್ನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆ ವಿಚಾರವನ್ನ ಬಹಳಕೂಲಂಕಷವಾಗಿ ನೋಡಿ ತೀರ್ಮಾನ ಮಾಡುತ್ತದೆ. ಎಲ್ಲಾ ವಿಚಾರಗಳು ಕೂಡ…

Read More

ಮನೆಯಲ್ಲೇ ಅನಸ್ತೇಶಿಯಾ ತಜ್ಞನ ಭೀಕರ ಕೊಲೆ: ಪತ್ನಿಯಿಂದಲೇ ದುರಂತ ಅಂತ್ಯ ಕಂಡ ವೈದ್ಯ? – Kannada News | Dharwad Shocker: Renowned Anaesthetist Found Dead at Apartment; Doctor Wife Detained, 10 Year Old Son Assaulted

ಮೃತ ವೈದ್ಯ ಕಿರಣ್ ಹೊನ್ನಣ್ಣನವರ್Image Credit source: Tv9 Kannada ಧಾರವಾಡ, ಜುಲೈ 15: ಚಿರಾಯು ಆಸ್ಪತ್ರೆಯ ವೈದ್ಯ ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅವರ 10 ವರ್ಷದ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾರ್ಟ್​ಮೆಂಟ್​ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಘಟನೆ ಸಂಬಂಧ ಡಾ.ಕಿರಣ್ ಪತ್ನಿ ಡಾ.ಪ್ರಿಯಾರನ್ನು ಪೊಲೀಸರು ವಶಕ್ಕೆ…

Read More

ಓದಲು ವಯಸ್ಸಿನ ಮಿತಿಯಿಲ್ಲ; ಐಐಟಿ ಮದ್ರಾಸ್​​ನಲ್ಲಿ ಒಟ್ಟಿಗೇ ಪದವಿ ಪಡೆದ ತಾಯಿ-ಮಗ! – Kannada News | Inspirational Story: Mother and son graduated together from IIT Madras at 45 and 21 age

ನವದೆಹಲಿ, ಜುಲೈ 15: ಇತ್ತೀಚೆಗೆ ನಡೆದ ಪ್ರತಿಷ್ಠಿತ ಐಐಟಿ ಮದ್ರಾಸ್ (IIT Madras) ಘಟಿಕೋತ್ಸವದಲ್ಲಿ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದೆ. 45 ವರ್ಷದ ತಾಯಿ ಜಿಗೀಷಾ ಟೇಲರ್ (Jigisha Tailor) ಮತ್ತು ಅವರ 21 ವರ್ಷದ ಮಗ ಆದಿತ್ಯ ಕಪಾಡಿಯಾ (Aditya Kapadia) ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಐಐಟಿ ಪದವಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ ಒಟ್ಟಿಗೇ ಐಐಟಿ ಪದವಿ ಪಡೆಯುತ್ತಿರುವ ಫೋಟೋಗಳನ್ನು ಐಐಟಿ ಮದ್ರಾಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ…

Read More

ಬೆಂಗಳೂರಿನಲ್ಲಿ ಡಿಜಿಟಲ್ ಹೋರ್ಡಿಂಗ್ಸ್‌ಗಳ ಹಾವಳಿ: ಹೊಸ ಜಾಹೀರಾತು ನೀತಿ ಹೆಸರಲ್ಲಿ ಕೋಟ್ಯಂತರ ರೂ ತೆರಿಗೆ ವಂಚನೆ – Kannada News | Bengaluru’s Illegal Digital Hoardings: Tax Evasion and Road Safety Concerns

ಡಿಜಿಟಲ್ ಹೋರ್ಡಿಂಗ್ಸ್‌Image Credit source: tv9 kannada ಬೆಂಗಳೂರು, ಜುಲೈ 15: ನಗರವನ್ನು ‘ಫ್ಲೆಕ್ಸ್ ಮುಕ್ತ’ ಮಾಡುವುದಾಗಿ ಹೊರಟಿರುವ ಬೆಂಗಳೂರು (bengaluru) ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡರಿಗೆ ಇದೀಗ ಅನಧಿಕೃತ ಡಿಜಿಟಲ್ ಹೋರ್ಡಿಂಗ್ಸ್ (illegal hoardings) ಹೊಸ ತಲೆನೋವಾಗಿ ಪರಿಣಮಿಸಿದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಜಾಹೀರಾತು ನೀತಿಯನ್ನು ಬಂಡವಾಳ ಮಾಡಿಕೊಂಡು ದೊಡ್ಡ ದಂಧೆಯೇ ಆರಂಭವಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ರಸ್ತೆಗಳಲ್ಲೂ ಅನಧಿಕೃತ ಡಿಜಿಟಲ್ ಸ್ಕ್ರೀನ್‌ಗಳು ತಲೆಎತ್ತುತ್ತಿವೆ. ತೆರಿಗೆ ಪಾವತಿಸಿ, ಲೈಸೆನ್ಸ್ ಪಡೆದು ಅಧಿಕೃತವಾಗಿ ಹೋರ್ಡಿಂಗ್ಸ್ ಅಳವಡಿಸಬೇಕು…

Read More

ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದು ಬಂದಿದ್ದು ಹೇಗೆ? – Kannada News | Bigg Boss Kannada fame Mokshitha Pai on playing Radha Character in Rukmini Radha Krishna movie

‘ಪಾರು’ ಸೀರಿಯಲ್ ಮತ್ತು ‘ಬಿಗ್ ಬಾಸ್’ ರಿಯಾಲಿಟಿ ಶೋ ಖ್ಯಾತಿಯ ನಟಿ ಮೋಕ್ಷಿತಾ ಪೈ (Mokshitha Pai) ಅವರು ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರು ರಾಧಾ ಎಂಬ ಪಾತ್ರ ಮಾಡಿದ್ದಾರೆ. ಆ ಕುರಿತು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಈ ರೀತಿಯ ಪಾತ್ರಗಳು ನನ್ನನ್ನು ಅರಸಿ ಬರುತ್ತಿವೆ. ಜನರು ನನ್ನನ್ನು ಅದೇ ರೀತಿ ನೋಡಲು ಇಷ್ಟಪಡುತ್ತಿದ್ದಾರೆ ಎನಿಸುತ್ತದೆ. ರುಕ್ಮಿಣಿ ಮತ್ತು ರಾಧಾ ಪಾತ್ರಗಳಲ್ಲಿ ನನಗೆ ಯಾವುದು ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ದೇಶಕರು…

Read More

ಟೊಮೆಟೊ, ದಾಳಿಂಬೆ ಬೆನ್ನಲ್ಲೇ ದ್ರಾಕ್ಷಿ ಮೇಲೆ ಕಳ್ಳರ ಕಣ್ಣು: ರಾತ್ರೋರಾತ್ರಿ ಕೈಚಳಕ ತೋರಿಸಿದ ಖದೀಮರು! – Kannada News | Grape Theft: Red Globe Grapes Stolen Amid Price Surge

ಚಿಕ್ಕಬಳ್ಳಾಪುರ, ಜುಲೈ 15: ಚಿನ್ನ, ಬೆಳ್ಳಿ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ. ಟೊಮೆಟೊ, ದಾಳಿಂಬೆ ಬಳಿಕ ದ್ರಾಕ್ಷಿ (grape theft) ತೋಟಕ್ಕೆ ನುಗ್ಗಿರುವ ಕಳ್ಳರು ರಾತ್ರೋರಾತ್ರಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದಿರುವಂತಹ ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರಿಂದ ಆತಂಕಗೊಂಡಿರುವ ರೈತರು, ಕಳ್ಳರ ಪತ್ತೆಗೆ ಪೊಲೀಸರ ಮೊರೆ ಹೋಗಿದ್ದಾರೆ. ನಡೆದಿದ್ದೇನು? ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದ…

Read More

ಎಲ್ಲ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಅಜಿತ್ ಪವಾರ್ ಜನ್ಮ ದಿನಾಚರಣೆ ಆಚರಣೆ; ಮಹಾರಾಷ್ಟ್ರ ಸರ್ಕಾರ ಘೋಷಣೆ – Kannada News | Maharashtra government orders celebration of NCP Leader Ajit Pawars birthday in all government offices, schools and colleges

ಮುಂಬೈ, ಜುಲೈ 15: ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದಿವಂಗತ ನಾಯಕ ಅಜಿತ್ ಪವಾರ್ (Ajit Pawar) ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು. ರಾಜ್ಯ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರದ ಪ್ರಕಾರ, ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಜನ್ಮ ದಿನಾಚರಣೆಯನ್ನು ಈಗ ಸರ್ಕಾರಿ ಮಟ್ಟದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಮಹಾನ್ ವ್ಯಕ್ತಿಗಳ ಅಧಿಕೃತ ಜನ್ಮ ದಿನಾಚರಣೆ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಕುರಿತು ಸರ್ಕಾರದಿಂದ ಇಂದು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಹಿರಿಯ ಎನ್‌ಸಿಪಿ…

Read More

ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ – Kannada News | Aamir Khan faces Death Threat Rs 5 Cr Bounty from Ayodhya Priest over 3rd Marriage Love Jihad

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ಜುಲೈ 5ರಂದು ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ಮೂರನೇ ವಿವಾಹವಾದ ಬೆನ್ನಲ್ಲೇ ಅವರ ಸುತ್ತಲಿನ ವಿವಾದಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಆರಂಭದಲ್ಲಿ ಬಜರಂಗದಳದ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ತೀವ್ರ ಆಕ್ರೋಶಗಳು ಈಗ ಕೊಲೆ ಬೆದರಿಕೆಯ ಹಂತಕ್ಕೆ ಬಂದು ತಲುಪಿವೆ. ಅಯೋಧ್ಯೆಯ ತಪಸ್ವಿ ಛಾವಣಿಯ ಪೀಠಾಧೀಶರಾದ ಜಗದ್ಗುರು ಪರಮಹಂಸ ಆಚಾರ್ಯ (Jagadguru Paramhans Acharya) ಅವರು ಆಮಿರ್ ಖಾನ್ ಅವರನ್ನು ಕೊಲ್ಲುವವರಿಗೆ ಬರೋಬ್ಬರಿ 5…

Read More

ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು – Kannada News | Never Make These Mistakes Right After Eating: Protect Your Digestion

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ಆಹಾರ ಸೇವಿಸಿದ ನಂತರ ಪಾಲಿಸುವ ಅಭ್ಯಾಸಗಳೂ ಅಷ್ಟೇ ಮುಖ್ಯ. ಹಲವರು ರಾತ್ರಿ ಊಟ ಮಾಡಿದ ತಕ್ಷಣವೇ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಆಸಿಡ್ ರಿಫ್ಲಕ್ಸ್, ಗ್ಯಾಸ್ಟ್ರಿಕ್ ಹಾಗೂ ನಿದ್ರೆ ಸರಿಯಾಗಿ ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಊಟದ ನಂತರದ ಮೊದಲ 2– 3 ಗಂಟೆಗಳು ಜೀರ್ಣಕ್ರಿಯೆಗೆ ಅತ್ಯಂತ ಪ್ರಮುಖ ಸಮಯವಾಗಿದ್ದು ಈ ಸಮಯದಲ್ಲಿ ಕೆಲವು ಆರೋಗ್ಯ…

Read More