ನಿಯಮ ಹೇಳೋರು ಎಲ್ಲೋದ್ರು?: ಜಯನಗರದಲ್ಲಿ ಪೊಲೀಸರು ಸೀಜ್ ಮಾಡಿದ ವಾಹನಗಳಿಂದಲೇ ಅರ್ಧ ರಸ್ತೆ ಬ್ಲಾಕ್ – Kannada News | Jayanagar Traffic Woes: Seized Vehicles by Bengaluru Police Occupy Roads for Years

ಬೆಂಗಳೂರು, ಜು.16: ರಾಜಧಾನಿಯ ಜನರಿಗೆ ಸಂಚಾರ ನಿಯಮ ಪಾಲನೆ ಮಾಡುವಂತೆ ಮತ್ತು ರಸ್ತೆ ಬದಿ ವಾಹನ ನಿಲ್ಲಿಸದಂತೆ ದಿನವಿಡೀ ಪಾಠ ಹೇಳುವ ಟ್ರಾಫಿಕ್ ಪೊಲೀಸರೇ ಈಗ ನಿಯಮ ಉಲ್ಲಂಘಿಸುತ್ತಿದ್ದಾರಾ? ಇಂತಹದ್ದೊಂದು ಗಂಭೀರ ಪ್ರಶ್ನೆ ಈಗ ಸಿಲಿಕಾನ್ ಸಿಟಿಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಜಯನಗರದ ಪ್ರಮುಖ ರಸ್ತೆಯೊಂದರ ಬದಿಯಲ್ಲೇ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಸೀಜ್ ಮಾಡಿರುವ ವಾಹನಗಳು ವರ್ಷಗಳಿಂದ ಧೂಳು ಹಿಡಿದು ನಿಂತಿದ್ದು, ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ದೃಶ್ಯ ಜಯನಗರದ ಪ್ರಮುಖ ರಸ್ತೆಯಲ್ಲಿ ಕಂಡು ಬಂದಿದೆ. ಇಲ್ಲಿ ಸಾಲು ಸಾಲಾಗಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸಾಮಾನ್ಯ ಸವಾರರ ವಾಹನಗಳಲ್ಲ. ಬದಲಾಗಿ ಪೊಲೀಸರು ವಿವಿಧ ಅಪರಾಧ ಹಾಗೂ ಅಪಘಾತ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ (ಸೀಜ್) ವಾಹನಗಳು. ಈ ವಾಹನಗಳು ಕಳೆದ ಕೆಲವು ತಿಂಗಳುಗಳಲ್ಲ, ಬರೋಬ್ಬರಿ ವರ್ಷಗಳಿಂದ ಇದೇ ರಸ್ತೆ ಬದಿಯಲ್ಲಿ ಧೂಳು ಹಿಡಿದು, ತುಕ್ಕು ಹಿಡಿದು ನಿಂತಿವೆ.

ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ಈ ವಾಹನಗಳಿಂದಾಗಿ ಅರ್ಧ ರಸ್ತೆಯೇ ಮುಚ್ಚಿ ಹೋಗಿದೆ. ಇದರ ಪರಿಣಾಮವಾಗಿ ಈ ಭಾಗದಲ್ಲಿ ಪ್ರತಿದಿನ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದ್ದು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಬೆಂಗಳೂರು ನಗರದಾದ್ಯಂತ ರಸ್ತೆ ಬದಿಗಳಲ್ಲಿ ಅನಾಥವಾಗಿ ಅಥವಾ ದೀರ್ಘಕಾಲ ನಿಂತಿರುವ ಸಾರ್ವಜನಿಕರ ವಾಹನಗಳನ್ನು ಗುರುತಿಸಿ, ನೋಟಿಸ್ ಸ್ಟಿಕ್ಕರ್ ಅಂಟಿಸಿ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಜಂಟಿಯಾಗಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಜಯನಗರದ ಈ ರಸ್ತೆಯಲ್ಲಿ ಪೊಲೀಸರೇ ಕಾನೂನು ಉಲ್ಲಂಘಿಸಿ ಸೀಜ್ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. “ಸಾಮಾನ್ಯ ನಾಗರಿಕರು ಗಾಡಿ ನಿಲ್ಲಿಸಿದರೆ ದಂಡ ಹಾಕುವ ಪೊಲೀಸರು, ತಾವೇ ರಸ್ತೆ ಆಕ್ರಮಿಸಿಕೊಂಡಾಗ ಮೌನ ವಹಿಸುವುದು ಎಷ್ಟು ಸರಿ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು,” ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

“ರಸ್ತೆ ನಿಯಮ ಪಾಲನೆ ಬಗ್ಗೆ ಜನರಿಗೆ ಪಾಠ ಹೇಳುವ ಇಲಾಖೆಗಳು ಮೊದಲು ತಮ್ಮ ಆವರಣ ಹಾಗೂ ತಮ್ಮ ವಶದಲ್ಲಿರುವ ವಾಹನಗಳ ಸೂಕ್ತ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಇಲಾಖೆಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯ ಎನ್ನುವ ತಾರತಮ್ಯ ನಿಲ್ಲಬೇಕು.” ಎಂದು ಸ್ಥಳೀಯ ನಿವಾಸಿ ಜಯಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಅತ್ಯುತ್ತಮ ವಾಯು ಗುಣಮಟ್ಟ: ಬೆಂಗಳೂರಿನ ಹಲವೆಡೆ ‘ಗ್ರೀನ್ ಜೋನ್’

ಒಟ್ಟಿನಲ್ಲಿ, ಜನರ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ಈ ಸೀಜ್ ವಾಹನಗಳನ್ನು ಪೊಲೀಸ್ ಇಲಾಖೆಯು ತಕ್ಷಣವೇ ತೆರವುಗೊಳಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸುತ್ತಾ? ಅಥವಾ ತನ್ನದೇ ಇಲಾಖೆಯ ಉಲ್ಲಂಘನೆಯನ್ನು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು – Kannada News | ICC ODI World Cup 2027 format explained in Kannada

2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಸ್ವರೂಪ ಬದಲಾಗಿದೆ. ಐಸಿಸಿ ಮುಂಬರುವ ವಿಶ್ವಕಪ್‌ಗಾಗಿ ಹೊಸ ಫಾರ್ಮ್ಯಾಟ್ ಪರಿಚಯಿಸಿದ್ದು, ಈ ಸ್ವರೂಪದ ಮೂಲಕ ಒಟ್ಟು ಮೂರು ಹಂತಗಳಲ್ಲಿ ಟೂರ್ನಿಯನ್ನು ಆಯೋಜಿಸಲು ರೂಪುರೇಷೆ ಸಿದ್ಧಪಡಿಸಿದೆ. ಹಾಗಾದರೆ ಈ ಬಾರಿ ಏನೆಲ್ಲಾ ಬದಲಾವಣೆಗಳಾಗಿವೆ? ಟೂರ್ನಿಯ ಮೂರು ಹಂತಗಳಾವುವು ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಹಂತ 1: ಸೂಪರ್ ಸೀರೀಸ್:

  • ಯಾರ ನಡುವೆ?: ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಐಸಿಸಿ ಶ್ರೇಯಾಂಕದಲ್ಲಿ ಅತ್ಯಂತ ಕೆಳಗಿರುವ ಕೊನೆಯ 3 ತಂಡಗಳು ಈ ಹಂತದಲ್ಲಿ ಸ್ಪರ್ಧಿಸುತ್ತವೆ. ಅಂದರೆ 11 ತಂಡಗಳು ನೇರ ಅರ್ಹತೆ ಪಡೆದರೆ, 3 ತಂಡಗಳು ಟೂರ್ನಿ ಆರಂಭಕ್ಕೂ ಮುನ್ನ ಸೂಪರ್ ಸಿರೀಸ್ ಆಡಿ ಅರ್ಹತೆ ಪಡೆಯಬೇಕಿದೆ.
  • ಮಾದರಿ: ಈ ಮೂರು ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ (ಮಿನಿ ಲೀಗ್).
  • ಫಲಿತಾಂಶ: ಈ ಮೂರು ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೇವಲ 1 ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ 2 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಹಂತ 2: ಗ್ರೂಪ್ ರೌಂಡ್:

  • ಯಾರ ನಡುವೆ?: ಸೂಪರ್ ಸೀರೀಸ್‌ನಿಂದ ಗೆದ್ದು ಬಂದ 1 ತಂಡವು, ಉಳಿದ 11 ಉನ್ನತ ಶ್ರೇಯಾಂಕದ ತಂಡಗಳನ್ನು ಸೇರಿಕೊಳ್ಳುತ್ತದೆ. ಅದರಂತೆ ದ್ವಿತೀಯ ಹಂತದಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ.
  • ಮಾದರಿ: ಈ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ (ಗ್ರೂಪ್ A ಮತ್ತು ಗ್ರೂಪ್ B) ವಿಂಗಡಿಸಲಾಗುತ್ತದೆ. ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು (ಒಟ್ಟು 5 ಪಂದ್ಯಗಳು) ಆಡಲಿವೆ.
  • ಫಲಿತಾಂಶ: ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಹೋಗುತ್ತವೆ (ಒಟ್ಟು 6 ತಂಡಗಳು). ಇದರೊಂದಿಗೆ, ಎರಡೂ ಗುಂಪುಗಳಲ್ಲಿ ಉಳಿದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ಹೆಚ್ಚುವರಿ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗೆ ಒಟ್ಟು 7 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡುತ್ತವೆ.
  • 7ನೇ ತಂಡದ ಆಯ್ಕೆ ಹೇಗೆ?: ಗ್ರೂಪ್ ಹಂತದ 5 ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗ್ರೂಪ್‌ಗಳ 4ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಅಂಕಗಳನ್ನು ಹೊಂದಿದೆಯೋ ಆ ತಂಡವು 7ನೇ ತಂಡವು ಮೂರನೇ ಹಂತಕ್ಕೆ ಪ್ರವೇಶಿಸುತ್ತದೆ.

ಹಂತ 3: ಸೂಪರ್ 7:

  • ಮಾದರಿ: ಅರ್ಹತೆ ಪಡೆದ 7 ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಅಂದರೆ ಇಲ್ಲಿ ಯಾವುದೇ ಗುಂಪುಗಳಿರುವುದಿಲ್ಲ, ಪ್ರತಿ ತಂಡವೂ ಉಳಿದ 6 ತಂಡಗಳ ವಿರುದ್ಧ ಆಡಲೇಬೇಕು (ಒಟ್ಟು 21 ಪಂದ್ಯಗಳು ನಡೆಯಲಿವೆ).
  • ನಾಕೌಟ್ ಹಂತ: ಸೂಪರ್ 7 ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ತದನಂತರ ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್​ ಪಂದ್ಯ ನಡೆಯಲಿದೆ.

ಏಕದಿನ ವಿಶ್ವಕಪ್ ಯಾವಾಗ ಶುರು?

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

ಸ್ವರೂಪ ಬದಲಾವಣೆಗೆ ಕಾರಣವೇನು?

ಟೂರ್ನಿಯ ಆರಂಭಿಕ ಹಂತದಲ್ಲೇ ನೀರಸ ಪಂದ್ಯಗಳು ನಡೆಯುವುದನ್ನು ತಡೆಯಲು ಮತ್ತು ಬಲಿಷ್ಠ ತಂಡಗಳ ನಡುವೆ ಹೆಚ್ಚು ಹೈ-ವೋಲ್ಟೇಜ್ ಪಂದ್ಯಗಳು ಜರುಗುವಂತೆ ಮಾಡಲು ಐಸಿಸಿ ಈ ಕಠಿಣ ಸ್ವರೂಪವನ್ನು ಜಾರಿಗೆ ತಂದಿದೆ. ಇದಕ್ಕಾಗಿಯೇ ಈ ಹಿಂದೆ ಉದ್ದೇಶಿಸಲಾಗಿದ್ದ ಸಾಂಪ್ರದಾಯಿಕ ‘ಸೂಪರ್-6’ ಮಾದರಿಯನ್ನು ಸಂಪೂರ್ಣವಾಗಿ ಕೈಬಿಟ್ಟು, ಅದರ ಬದಲಿಗೆ ಕ್ರಾಂತಿಕಾರಕ ‘ಸೂಪರ್-7’ ಫಾರ್ಮ್ಯಾಟ್ ಪರಿಚಯಿಸಲಾಗಿದೆ.

ಈ ಹೊಸ ನಿಯಮದಿಂದಾಗಿ, ಬಲಿಷ್ಠ ತಂಡಗಳು ಕೇವಲ ಒಂದು ಪಂದ್ಯದ ಅದೃಷ್ಟದ ಆಧಾರದ ಮೇಲೆ ನಾಕೌಟ್ ತಲುಪಲು ಸಾಧ್ಯವಿಲ್ಲ. ಬದಲಿಗೆ, ಪ್ರತಿ ಪಂದ್ಯದಲ್ಲೂ ಉನ್ನತ ಮಟ್ಟದ ಸ್ಥಿರ ಪ್ರದರ್ಶನ ನೀಡುವ ಜಾಗತಿಕ ಕ್ರಿಕೆಟ್‌ನ ನೈಜ ಶಕ್ತಿಗಳು ಮಾತ್ರ ಸೆಮಿಫೈನಲ್ ತಲುಪಲು ಈ ಸ್ವರೂಪವು ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್‌ನ ಈ ಹೊಸ ಸ್ವರೂಪವು ಕ್ರಿಕೆಟ್ ಜಗತ್ತನ್ನು ಮತ್ತೊಂದು ರೋಮಾಂಚಕ ಹಂತಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ. ಐಸಿಸಿ ರೂಪಿಸಿರುವ ಈ ‘ಸೂಪರ್-7’ ಮಾಸ್ಟರ್ ಪ್ಲಾನ್ ಕೇವಲ ವಾಣಿಜ್ಯ ಲಾಭ ಮತ್ತು ಪ್ರಸಾರಕರ ಆದಾಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಕ್ರಿಕೆಟ್ ಅಭಿಮಾನಿಗಳಿಗೆ ಆರಂಭದಿಂದ ಕೊನೆಯವರೆಗೂ ಹೈ-ವೋಲ್ಟೇಜ್ ಪಂದ್ಯಗಳ ಮನರಂಜನೆಯ ರಸದೌತಣ ನೀಡಲಿದೆ.

Published On – 8:12 am, Thu, 16 July 26

Source link

ಮತ್ತೊಂದು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ – Kannada News | Sreeleela out from Thala Ajith’s next movie

ಶ್ರೀಲೀಲಾ (Sreeleela), ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗುವ ಹಾದಿಯಲ್ಲಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ, ತೆಲುಗಿನ ಸ್ಟಾರ್ ನಟರುಗಳೊಟ್ಟಿಗೆ ನಟಿಸಿ, ಚಿತ್ರರಂಗದ ನಂಬರ್ 1 ನಟಿ ಎನಿಸಿಕೊಂಡಿದ್ದರು. ಅದಾದ ಬಳಿಕ ತಮಿಳಿಗೂ ಎಂಟ್ರಿ ಕೊಟ್ಟು, ಅಲ್ಲಿಯೂ ಈಗ ಸತತ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಬಾಲಿವುಡ್​​ನಲ್ಲೂ ಸಹ ಶ್ರೀಲೀಲಾ ಬ್ಯುಸಿ, ಆದರೆ ಕೆಲ ಒಳ್ಳೆಯ ಅವಕಾಶಗಳನ್ನು ಶ್ರೀಲೀಲಾ ಕಳೆದುಕೊಳ್ಳುತ್ತಿದ್ದಾರೆ ಸಹ. ಈ ಹಿಂದೆ ಎರಡು ಒಳ್ಳೆ ತೆಲುಗು ಸಿನಿಮಾ ಅವಕಾಶ ಕಳೆದುಕೊಂಡಿದ್ದ ನಟಿ ಶ್ರೀಲೀಲಾ, ಈಗ ತಮಿಳಿನ ಸ್ಟಾರ್ ನಟನೊಟ್ಟಿಗೆ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಈ ಹಿಂದೆ ಶ್ರೀಲೀಲಾ, ವಿಜಯ್ ದೆವರಕೊಂಡ ಜೊತೆಗೆ ಶ್ರೀಲೀಲಾ ಸಿನಿಮಾ ಒಪ್ಪಿಕೊಂಡಿದ್ದರು. ಸಿನಿಮಾಕ್ಕೆ ಆಗ ವಿಡಿ 12 ಎಂದು ಕರೆಯಲಾಗಿತ್ತು. ಫೋಟೊಶೂಟ್ ಸಹ ಆಗಿತ್ತು. ಆದರೆ ಬಳಿಕ ಆ ಸಿನಿಮಾ ಅವಕಾಶ ಭಾಗ್ಯಶ್ರೀ ಭೋರ್ಸೆ ಪಾಲಾಯ್ತು. ‘ಕಿಂಗ್​​ಡಮ್’ ಹೆಸರಿನ ಆ ಸಿನಿಮಾ ಬಿಡುಗಡೆ ಆಗಿ, ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಬಳಿಕ, ಶ್ರೀಲೀಲಾ, ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆದರು. ಆದರೆ ಆ ಸಿನಿಮಾದಿಂದಲೂ ಹೊರಬಂದರು ನಟಿ. ಆ ಸಿನಿಮಾ ಸಹ ಭಾಗ್ಯಶ್ರೀ ಭೋರ್ಸೆ ಅವರ ಕೈಸೇರಿತು. ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ, ಬ್ಲಾಕ್ ಬಸ್ಟರ್ ಆಗಿದೆ.

ಇದನ್ನೂ ಓದಿ:ಮಿಶ್ರ ಪ್ರತಿಕ್ರಿಯೆ ನಡುವೆಯೂ ಒಟಿಟಿಯಲ್ಲಿ ಟ್ರೆಂಡ್ ಆಗುತ್ತಿರುವ ‘ಪೆದ್ದಿ’ ಸಿನಿಮಾ

ಇನ್ನು ಈಗ ತಮಿಳಿನ ಸೂಪರ್ ಸ್ಟಾರ್ ನಟರೊಬ್ಬರ ಜೊತೆಗೆ ನಟಿಸುವ ಅವಕಾಶವನ್ನು ಶ್ರೀಲೀಲಾ ಕಳೆದುಕೊಂಡಿದ್ದಾರೆ. ಶ್ರೀಲೀಲಾ ಅವರು, ತಮಿಳಿನ ಸ್ಟಾರ್ ನಟ ಅಜಿತ್ ಅವರ ನಟನೆಯ ಹೊಸ ಸಿನಿಮಾನಲ್ಲಿ ನಟಿಸಲಿದ್ದರು. ಸಿನಿಮಾದ ಕುರಿತು ಮಾತುಕತೆ ಸಹ ನಡೆದಿತ್ತು. ಆದರೆ ಇದೀಗ ಹಠಾತ್ತನೆ ಅಜಿತ್ ಅವರ ಸಿನಿಮಾಕ್ಕೆ ನಾಯಕಿ ಬದಲಾವಣೆ ಆಗಿದೆ. ಅಜಿತ್ ಅವರ ಸಿನಿಮಾದಿಂದ ಶ್ರೀಲೀಲಾ ಹೊರನಡೆದಿದ್ದು, ಅವರ ಜಾಗವನ್ನು ಖಯಾದು ಲೋಹರ್ ತುಂಬಲಿದ್ದಾರೆ. ಕನ್ನಡದ ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ನಟನೆ ಆರಂಭಿಸಿದ್ದ ಖಯಾದು ಲೋಹರ್, ಈಗ ಅಜಿತ್ ಸಿನಿಮಾದ ಹೊಸ ನಾಯಕಿ.

ಶ್ರೀಲೀಲಾಗೆ ಅವಕಾಶ ತಪ್ಪಿದೆ ಆದರೂ ಅವರ ಕೈಯಲ್ಲಿ ಹಲವಾರು ಹೊಸ ಸಿನಿಮಾ ಅವಕಾಶಗಳು ಇವೆ. ಧನುಶ್ ನಟನೆಯ ಹೊಸ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ. ತೆಲುಗಿನ ಎರಡು ಹೊಸ ಸಿನಿಮಾ ಕೈಯಲ್ಲಿವೆ. ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದು, ಭರ್ಜರಿಯಾಗಿ ಸಿನಿಮಾ ನಿರ್ಮಾಣ ಆಗುತ್ತಿದೆ. ಹಿಂದಿಯ ಇನ್ನೂ ಎರಡು ಸಿನಿಮಾಗಳನ್ನು ಈಗಾಗಲೇ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಶ್ರೀಲೀಲಾ ಬಹಳ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾಯುದ್ಧದ ಭೀತಿ: ಇರಾನ್‌ನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ, MQ-9 ಡ್ರೋನ್ ಹೊಡೆದುರುಳಿಸಿದ ಇರಾನ್ – Kannada News | US Iran War Escalates: Children’s Cancer Hospital Bombed, MQ 9 Drone Downed by Iran

ಟೆಹ್ರಾನ್, ಜುಲೈ 16: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷವು ರಕ್ತಸಿಕ್ತ ಕ್ರಾಂತಿಗೆ ಕಾರಣವಾಗಿದೆ. ಕೇವಲ 24 ಗಂಟೆಗಳಲ್ಲಿ ಇರಾನ್ ಮೇಲೆ 3ನೇ ಬಾರಿಗೆ ಭೀಕರ ವಾಯುದಾಳಿ ನಡೆಸಿರುವ ಅಮೆರಿಕ ಪಡೆಗಳು, ಇರಾನ್ ಬಂದರುಗಳಿಗೆ ಕಠಿಣ ನೌಕಾ ದಿಗ್ಬಂಧನ ವಿಧಿಸಿವೆ. ಇದಕ್ಕೆ ಅತ್ಯಂತ ಕ್ರೂರವಾಗಿ ಪ್ರತಿಕ್ರಿಯಿಸಿರುವ ಇರಾನ್, ಜಾಗತಿಕ ತೈಲ ಮಾರುಕಟ್ಟೆಯ ಜೀವಾಳವಾಗಿರುವ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿಬಿಡುವುದಾಗಿ ಪಣತೊಟ್ಟಿದೆ. ಈ ಬೆನ್ನಲ್ಲೇ ಕಚ್ಚಾ ತೈಲ ಬೆಲೆಗಳು ಜಾಗತಿಕವಾಗಿ ಗಗನಕ್ಕೇರಿವೆ.

ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಧ್ವಂಸ: ರೋಗಿಗಳ ಕಣ್ಣೀರು

ಇರಾನ್‌ನ ಅಹ್ವಾಜ್ ನಗರದ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯು ಇಡೀ ಮಾನವಕುಲವೇ ತಲೆತಗ್ಗಿಸುವಂತಹ ದುರಂತಕ್ಕೆ ಕಾರಣವಾಗಿದೆ. ಅಲ್ಲಿನ ಪ್ರಸಿದ್ಧ ‘ಶಾಹಿದ್ ಬಘೈ’ ಆಸ್ಪತ್ರೆಯ ಮೇಲೆ ಅಮೆರಿಕದ ಬಾಂಬ್‌ಗಳು ಬಿದ್ದಿದ್ದು, ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಸಂಪೂರ್ಣ ಧ್ವಂಸಗೊಂಡಿದೆ. ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಜೀವಭಯದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಈ ಸರಣಿ ದಾಳಿಗಳಲ್ಲಿ ಇರಾನ್‌ನ ಇಡೀ ಸೇನಾ ಬ್ಯಾರಕ್‌ಗಳು ಧೂಳೀಪಟವಾಗಿದ್ದು, ಕನಿಷ್ಠ 7 ಸೈನಿಕರು ಸೇರಿ ಇದುವರೆಗೆ 35 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಅಧಿಕ ಜನ ರಕ್ತಸಿಕ್ತವಾಗಿ ಗಾಯಗೊಂಡಿದ್ದಾರೆ. ಇರಾನ್‌ನ ಏಕೈಕ ನಾಗರಿಕ ಪರಮಾಣು ಸ್ಥಾವರವಿರುವ ಬುಶೆಹರ್ ಮೇಲೂ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್ ರಾಜ್ಯ ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿವೆ.

ಅಮೆರಿಕದ 250 ಕೋಟಿ ರೂ. ಮೌಲ್ಯದ ‘MQ-9’ ಡ್ರೋನ್ ಧೂಳೀಪಟ

ಅಮೆರಿಕದ ವಾಯುದಾಳಿಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅತ್ಯಂತ ಭೀಕರ ತಿರುಗೇಟು ನೀಡಿದೆ. ಅಮೆರಿಕ ಸೇನೆಯ ಹೆಮ್ಮೆಯ, ಜಗತ್ತಿನ ಅತ್ಯಂತ ಸುಧಾರಿತ ಹಾಗೂ ದುಬಾರಿ ಬೇಹುಗಾರಿಕಾ ಯುದ್ಧ ವಿಮಾನವಾದ MQ-9 ರೀಪರ್ ಡ್ರೋನ್ ಅನ್ನು ಇರಾನ್‌ನ ನೈಋತ್ಯ ನಗರವಾದ ಆಂಡಿಮೆಶ್ಕ್ ಆಕಾಶದಲ್ಲಿ ತನ್ನ ಹೊಸ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಿದೆ. ಅಮೆರಿಕದ ಅತ್ಯಾಧುನಿಕ ಡ್ರೋನ್ ಅನ್ನು ನಾವೇ ಹೊಡೆದುರುಳಿಸಿದ್ದು ಎಂದು ಇರಾನ್ ಹೆಮ್ಮೆಯಿಂದ ಜಗತ್ತಿನೆದುರು ಘೋಷಿಸಿಕೊಂಡಿದೆ.

ಮತ್ತಷ್ಟು ಓದಿ: ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಮೊದಲ ಬಾರಿ ಕಡಲ ಡ್ರೋನ್ ದಾಳಿ

ಅಲ್ಲದೆ, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್ ಬೇಸ್ ಅನ್ನು ಗುರಿಯಾಗಿಸಿ ಇರಾನ್ ಸರಣಿ ಕ್ಷಿಪಣಿಗಳನ್ನು ಹಾರಿಸಿದ್ದು, ಅಲ್ಲಿ ಯುದ್ಧದ ಸೈರನ್‌ಗಳು ನಿರಂತರವಾಗಿ ಮೊಳಗುತ್ತಿವೆ.

ಸೌದಿ ಅರೇಬಿಯಾಕ್ಕೆ ಭಾರಿ ಆಫರ್: ಸೌದಿ ಅರೇಬಿಯಾಕ್ಕೆ ಬರೋಬ್ಬರಿ ಸುಮಾರು 16,000 ಕೋಟಿ ರೂ. ಕ್ಷಿಪಣಿ ವ್ಯವಸ್ಥೆಗಳು, ಸಿಡಿತಲೆಗಳು ಮತ್ತು ಲಾಂಚರ್‌ಗಳ ಮಾರಾಟಕ್ಕೆ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ತಕ್ಷಣದ ಅನುಮೋದನೆ ನೀಡಿದೆ.

ಕುವೈತ್‌ಗೆ ವಿಮಾನ ರಕ್ಷಣೆ: ಕುವೈತ್ ದೇಶಕ್ಕೆ ತನ್ನ C-17 ದೈತ್ಯ ಮಿಲಿಟರಿ ಸರಕು ಸಾಗಣೆ ವಿಮಾನಗಳ ಸುಸ್ಥಿರತೆಗಾಗಿ 484 ಮಿಲಿಯನ್ ಡಾಲರ್ಪ್ಯಾಕೇಜ್ ಅನ್ನು ಘೋಷಿಸಿದೆ.

ತೈಲ ಹಡಗಿನ ಮೇಲೆ ಹೆಲ್‌ಫೈರ್ ಕ್ಷಿಪಣಿ ದಾಳಿ

ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್‌ನ ಬಂದರುಗಳ ದಿಗ್ಬಂಧನವನ್ನು ಮುರಿಯಲು ಯತ್ನಿಸುತ್ತಿದ್ದ ‘ಎಂ/ಟಿ ಬೆಲ್ಮಾ’ ಎಂಬ ದೈತ್ಯ ತೈಲ ಟ್ಯಾಂಕರ್ ಹಡಗಿನ ಮೇಲೆ ಯುದ್ಧವಿಮಾನದ ಮೂಲಕ ಭೀಕರ ‘ಹೆಲ್‌ಫೈರ್’ ಕ್ಷಿಪಣಿಗಳನ್ನು ಹಾರಿಸಿ ಅದನ್ನು ಜಲಮಾರ್ಗದ ನಡುವೆಯೇ ನಿಷ್ಕ್ರಿಯಗೊಳಿಸಿದೆ.

ಇದರ ನಡುವೆಯೂ ಪೆನ್ಸಿಲ್ವೇನಿಯಾದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ದಾಳಿಗಳು ಇರಾನ್‌ಗೆ ಇಷ್ಟವಾಗುತ್ತಿಲ್ಲ, ಅವರು ಒಪ್ಪಂದಕ್ಕೆ ಬರಲು ಬಯಸುತ್ತಿದ್ದಾರೆ. ಅವರು ಮಾತುಕತೆಗೆ ಬರದಿದ್ದರೆ ಮುಂದಿನ ವಾರ ಅವರ ಇಡೀ ದೇಶದ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಸಂಪೂರ್ಣವಾಗಿ ಕೆಡವಿಹಾಕಲಿದ್ದೇವೆ ಎಂದು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಸದ್ಯ ಜಾಗತಿಕ ತೈಲ ಸಾಗಣೆಯ ಶೇ. 20 ರಷ್ಟು ಭಾಗ ಹಾದುಹೋಗುವ ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಆಗಿರುವುದರಿಂದ ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ತೀವ್ರವಾಗಿ ಏರಿಕೆಯಾಗುವ ಆತಂಕ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು – Kannada News | Icc odi world cup 2027 format explained in kannada

2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಸ್ವರೂಪ ಬದಲಾಗಿದೆ. ಐಸಿಸಿ ಮುಂಬರುವ ವಿಶ್ವಕಪ್‌ಗಾಗಿ ಹೊಸ ಫಾರ್ಮ್ಯಾಟ್ ಪರಿಚಯಿಸಿದ್ದು, ಈ ಸ್ವರೂಪದ ಮೂಲಕ ಒಟ್ಟು ಮೂರು ಹಂತಗಳಲ್ಲಿ ಟೂರ್ನಿಯನ್ನು ಆಯೋಜಿಸಲು ರೂಪುರೇಷೆ ಸಿದ್ಧಪಡಿಸಿದೆ. ಹಾಗಾದರೆ ಈ ಬಾರಿ ಏನೆಲ್ಲಾ ಬದಲಾವಣೆಗಳಾಗಿವೆ? ಟೂರ್ನಿಯ ಮೂರು ಹಂತಗಳಾವುವು ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಹಂತ 1: ಸೂಪರ್ ಸೀರೀಸ್ 

  • ಯಾರ ನಡುವೆ?: ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಐಸಿಸಿ ಶ್ರೇಯಾಂಕದಲ್ಲಿ ಅತ್ಯಂತ ಕೆಳಗಿರುವ ಕೊನೆಯ 3 ತಂಡಗಳು ಈ ಹಂತದಲ್ಲಿ ಸ್ಪರ್ಧಿಸುತ್ತವೆ. ಅಂದರೆ 11 ತಂಡಗಳು ನೇರ ಅರ್ಹತೆ ಪಡೆದರೆ, 3 ತಂಡಗಳು ಟೂರ್ನಿ ಆರಂಭಕ್ಕೂ ಮುನ್ನ ಸೂಪರ್ ಸಿರೀಸ್ ಆಡಿ ಅರ್ಹತೆ ಪಡೆಯಬೇಕಿದೆ.
  • ಮಾದರಿ: ಈ ಮೂರು ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ (ಮಿನಿ ಲೀಗ್).
  • ಫಲಿತಾಂಶ: ಈ ಮೂರು ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೇವಲ 1 ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ 2 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಹಂತ 2: ಗುಂಪು ಹಂತ:

  • ಯಾರ ನಡುವೆ?: ಸೂಪರ್ ಸೀರೀಸ್‌ನಿಂದ ಗೆದ್ದು ಬಂದ 1 ತಂಡವು, ಉಳಿದ 11 ಉನ್ನತ ಶ್ರೇಯಾಂಕದ ತಂಡಗಳನ್ನು ಸೇರಿಕೊಳ್ಳುತ್ತದೆ. ಅದರಂತೆ ದ್ವಿತೀಯ ಹಂತದಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ.
  • ಮಾದರಿ: ಈ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ (ಗ್ರೂಪ್ A ಮತ್ತು ಗ್ರೂಪ್ B) ವಿಂಗಡಿಸಲಾಗುತ್ತದೆ. ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು (ಒಟ್ಟು 5 ಪಂದ್ಯಗಳು) ಆಡಲಿವೆ.
  • ಫಲಿತಾಂಶ: ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಹೋಗುತ್ತವೆ (ಒಟ್ಟು 6 ತಂಡಗಳು). ಇದರೊಂದಿಗೆ, ಎರಡೂ ಗುಂಪುಗಳಲ್ಲಿ ಉಳಿದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ಹೆಚ್ಚುವರಿ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗೆ ಒಟ್ಟು 7 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡುತ್ತವೆ.
  • 7ನೇ ತಂಡದ ಆಯ್ಕೆ ಹೇಗೆ?: ಗ್ರೂಪ್ ಹಂತದ 5 ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗ್ರೂಪ್‌ಗಳ 4ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಅಂಕಗಳನ್ನು ಹೊಂದಿದೆಯೋ ಆ ತಂಡವು 7ನೇ ತಂಡವು ಮೂರನೇ ಹಂತಕ್ಕೆ ಪ್ರವೇಶಿಸುತ್ತದೆ.

ಹಂತ 3: ಸೂಪರ್ 7:

  • ಮಾದರಿ: ಅರ್ಹತೆ ಪಡೆದ 7 ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಅಂದರೆ ಇಲ್ಲಿ ಯಾವುದೇ ಗುಂಪುಗಳಿರುವುದಿಲ್ಲ, ಪ್ರತಿ ತಂಡವೂ ಉಳಿದ 6 ತಂಡಗಳ ವಿರುದ್ಧ ಆಡಲೇಬೇಕು (ಒಟ್ಟು 21 ಪಂದ್ಯಗಳು ನಡೆಯಲಿವೆ).
  • ನಾಕೌಟ್ ಹಂತ: ಸೂಪರ್ 7 ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ತದನಂತರ ಸೆಮಿಫೈನಲ್ ಪಂದ್ಯಗಳು ಮತ್ತು ಫೂನಲ್​ ಪಂದ್ಯ ನಡೆಯಲಿದೆ.

ಏಕದಿನ ವಿಶ್ವಕಪ್ ಯಾವಾಗ ಶುರು?

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

ಸ್ವರೂಪ ಬದಲಾವಣೆಗೆ ಕಾರಣವೇನು?

ಟೂರ್ನಿಯ ಆರಂಭಿಕ ಹಂತದಲ್ಲೇ ನೀರಸ ಪಂದ್ಯಗಳು ನಡೆಯುವುದನ್ನು ತಡೆಯಲು ಮತ್ತು ಬಲಿಷ್ಠ ತಂಡಗಳ ನಡುವೆ ಹೆಚ್ಚು ಹೈ-ವೋಲ್ಟೇಜ್ ಪಂದ್ಯಗಳು ಜರುಗುವಂತೆ ಮಾಡಲು ಐಸಿಸಿ ಈ ಕಠಿಣ ಸ್ವರೂಪವನ್ನು ಜಾರಿಗೆ ತಂದಿದೆ. ಇದಕ್ಕಾಗಿಯೇ ಈ ಹಿಂದೆ ಉದ್ದೇಶಿಸಲಾಗಿದ್ದ ಸಾಂಪ್ರದಾಯಿಕ ‘ಸೂಪರ್-6’ ಮಾದರಿಯನ್ನು ಸಂಪೂರ್ಣವಾಗಿ ಕೈಬಿಟ್ಟು, ಅದರ ಬದಲಿಗೆ ಕ್ರಾಂತಿಕಾರಕ ‘ಸೂಪರ್-7’ ಫಾರ್ಮ್ಯಾಟ್ ಪರಿಚಯಿಸಲಾಗಿದೆ.

ಈ ಹೊಸ ನಿಯಮದಿಂದಾಗಿ, ಬಲಿಷ್ಠ ತಂಡಗಳು ಕೇವಲ ಒಂದು ಪಂದ್ಯದ ಅದೃಷ್ಟದ ಆಧಾರದ ಮೇಲೆ ನಾಕೌಟ್ ತಲುಪಲು ಸಾಧ್ಯವಿಲ್ಲ. ಬದಲಿಗೆ, ಪ್ರತಿ ಪಂದ್ಯದಲ್ಲೂ ಉನ್ನತ ಮಟ್ಟದ ಸ್ಥಿರ ಪ್ರದರ್ಶನ ನೀಡುವ ಜಾಗತಿಕ ಕ್ರಿಕೆಟ್‌ನ ನೈಜ ಶಕ್ತಿಗಳು ಮಾತ್ರ ಸೆಮಿಫೈನಲ್ ತಲುಪಲು ಈ ಸ್ವರೂಪವು ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್‌ನ ಈ ಹೊಸ ಸ್ವರೂಪವು ಕ್ರಿಕೆಟ್ ಜಗತ್ತನ್ನು ಮತ್ತೊಂದು ರೋಮಾಂಚಕ ಹಂತಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ. ಐಸಿಸಿ ರೂಪಿಸಿರುವ ಈ ‘ಸೂಪರ್-7’ ಮಾಸ್ಟರ್ ಪ್ಲಾನ್ ಕೇವಲ ವಾಣಿಜ್ಯ ಲಾಭ ಮತ್ತು ಪ್ರಸಾರಕರ ಆದಾಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಕ್ರಿಕೆಟ್ ಅಭಿಮಾನಿಗಳಿಗೆ ಆರಂಭದಿಂದ ಕೊನೆಯವರೆಗೂ ಹೈ-ವೋಲ್ಟೇಜ್ ಪಂದ್ಯಗಳ ಮನರಂಜನೆಯ ರಸದೌತಣ ನೀಡಲಿದೆ.

Source link

ಶಂಕರ್​ ನಾಗ್ ಕನಸಿನ ಕೂಸು ‘ಮಾಲ್ಗುಡಿ ಡೇಸ್’ ಸರಣಿಗೆ 40 ವರ್ಷ – Kannada News | Celebrating 40 Years of Malgudi Days How Shankar Nag directorial magic brought RK Narayan world to life in Agumbe

ಆರ್‌ಕೆ ನಾರಾಯಣ್ ಅವರ ಕಲ್ಪನೆಯ ಕಥಾಲೋಕ, ಶಂಕರ್ ನಾಗ್ ಅವರ ಅದ್ಭುತ ದೃಶ್ಯಾವಳಿ ಹಾಗೂ ಎಲ್.ವೈದ್ಯನಾಥನ್ ಅವರ ಹಿನ್ನೆಲೆ ಸಂಗೀತದ ಮೂಲಕ ‘ಮಾಲ್ಗುಡಿ ಡೇಸ್’ ಸರಣಿ ಮೂಡಿ ಬಂದಿತ್ತು. ಕಥಾಸರಣಿ ಬಿಡುಗಡೆಯಾಗಿ ಈಗ ಭರ್ತಿ 40 ವರ್ಷಗಳು ತುಂಬುತ್ತಾ ಬಂದಿವೆ. 1986ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿದ್ದ ಈ ಸರಣಿ, ಇಂದಿಗೂ ಕೋಟ್ಯಂತರ ಭಾರತೀಯರ ಬಾಲ್ಯದ ಮಧುರ ನೆನಪಾಗಿದೆ.

ಶಂಕರ್ ನಾಗ್ ಅವರ ದೃಶ್ಯ ಮ್ಯಾಜಿಕ್

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ದೇಶಕ ಶಂಕರ್ ನಾಗ್ ಅವರು ಅತ್ಯಂತ ಕಾಳಜಿ ಮತ್ತು ಶ್ರದ್ಧೆಯಿಂದ ಈ ಸರಣಿಯನ್ನು ನಿರ್ದೇಶಿಸಿದ್ದರು. ಆರ್.ಕೆ. ನಾರಾಯಣ್ ಅವರ ಸಣ್ಣ ಕಥೆಗಳನ್ನು ದೃಶ್ಯ ರೂಪಕ್ಕೆ ತರುವಾಗ ಅವರು ಅಳವಡಿಸಿಕೊಂಡ ತಂತ್ರಜ್ಞಾನ ಹಾಗೂ ಮೇಕಿಂಗ್ ಶೈಲಿ ಇಂದಿಗೂ ಮಾದರಿಯಾಗಿದೆ. ಶಂಕರ್ ನಾಗ್ ಅವರ ವಿಷನ್ ಎಷ್ಟು ಅದ್ಭುತವಾಗಿತ್ತೆಂದರೆ, ಇಡೀ ಭಾರತವೇ ಈ ಸರಣಿಗೆ ಮನಸೋತಿತ್ತು.

ಆಗುಂಬೆಯಲ್ಲೇ ಸೃಷ್ಟಿಯಾಗಿತ್ತು ‘ಮಾಲ್ಗುಡಿ’ ಲೋಕ

ಕಥೆಯಲ್ಲಿ ಬರುವ ಕಾಲ್ಪನಿಕ ತಾಣ ‘ಮಾಲ್ಗುಡಿ’ಯನ್ನು ಕಣ್ಣಿಗೆ ಕಟ್ಟುವಂತೆ ಮಾಡಲು ಶಂಕರ್ ನಾಗ್ ಆರಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನು. ಅಲ್ಲಿನ ಹಳೆಯ ಮನೆಗಳು, ಮಲೆನಾಡಿನ ಹಸಿರು, ಮಳೆ ಹಾಗೂ ಪ್ರಕೃತಿ ಸೌಂದರ್ಯ ಇಡೀ ಸರಣಿಗೆ ಜೀವ ತುಂಬಿದ್ದವು. ಇಂದಿಗೂ ಆಗುಂಬೆಗೆ ಹೋದರೆ ‘ಮಾಲ್ಗುಡಿ ಡೇಸ್’ ಶೂಟಿಂಗ್ ನಡೆದ ಮನೆಗಳನ್ನು ಪ್ರವಾಸಿಗರು ಆಸಕ್ತಿಯಿಂದ ನೋಡುತ್ತಾರೆ.ಈ ಜಾಗವನ್ನು ಸೂಚಿಸಿದ್ದರು ಅವರೇ ಅನ್ನೋದು ವಿಶೇಷ.

ಸ್ವಾಮಿ ಮತ್ತು ಆತನ ಗೆಳೆಯರ ಬಳಗ

ಮಾಲ್ಗುಡಿ ಡೇಸ್ ಎಂದ ತಕ್ಷಣ ನೆನಪಿಗೆ ಬರುವುದು ಕಲಾವಿದರ ಬಳಗ. ಮಾಸ್ಟರ್ ಮಂಜುನಾಥ್, ಅನಂತ್ ನಾಗ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ ಸೇರಿದಂತೆ ಶ್ರೇಷ್ಠ ಕಲಾವಿದರ ದಂಡೇ ಈ ಸರಣಿಯಲ್ಲಿ ನಟಿಸಿತ್ತು.

‘ತಾನಾ ನಾನಾ ತಾನಾನಾನಾ’ ಸಾರ್ವಕಾಲಿಕ ರಾಗ

ಎಲ್.ವೈದ್ಯನಾಥನ್ ಸಂಯೋಜಿಸಿದ ಮಾಲ್ಗುಡಿ ಡೇಸ್ ಶೀರ್ಷಿಕೆ ಗೀತೆ ಕೇಳದ ಭಾರತೀಯನೇ ಇಲ್ಲ ಎನ್ನಬಹುದು. ಕೇವಲ ಒಂದು ಸರಳ ರಾಗ ಇಡೀ ಸರಣಿಯ ಆತ್ಮವಾಗಿ ಮೂಡಿಬಂದಿತ್ತು. ಇಂದಿಗೂ ಆ ಟ್ಯೂನ್ ಕೇಳಿದರೆ ಸಾಕು, ನಾವೆಲ್ಲರೂ ನಮ್ಮ ಬಾಲ್ಯದ ದಿನಗಳಿಗೆ ಜಾರಿಬಿಡುತ್ತೇವೆ.

ಇದನ್ನೂ ಓದಿ: ನಿಧನ ಹೊಂದುವ ಹಿಂದಿನ ದಿನ ಸಾಯುವ ದೃಶ್ಯವನ್ನೇ ಶೂಟ್ ಮಾಡಿದ್ದ ಶಂಕರ್ ನಾಗ್

ಸ್ಮರಣೀಯ ಮೈಲಿಗಲ್ಲು

ದೂರದರ್ಶನದ ಸುವರ್ಣ ಯುಗಕ್ಕೆ ಸಾಕ್ಷಿಯಾಗಿದ್ದ ‘ಮಾಲ್ಗುಡಿ ಡೇಸ್’ ಕೇವಲ ಒಂದು ಸರಣಿಯಾಗಿ ಉಳಿಯದೆ ಭಾರತೀಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. 40 ವರ್ಷಗಳು ಕಳೆದರೂ ಇದರ ಜನಪ್ರಿಯತೆ ಹಾಗೂ ಪ್ರಸ್ತುತತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದೇ ಶಂಕರ್ ನಾಗ್ ಹಾಗೂ ಅವರ ಇಡೀ ತಂಡದ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೈಬರ್ ಅಕ್ರಮ ತಡೆ, ಡಿಜಿಟಲ್ ಭದ್ರತೆ ಬಲಪಡಿಸಲು DRDO ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಪ್ರಯೋಗ ಯಶಸ್ವಿ: ಬೆಂಗಳೂರಿನ ಕಂಪನಿ ಸಾಥ್! – Kannada News | DRDO Quantum Key Distribution Success: Bengaluru Based Taqbit Labs Powers India’s Next Generation Cyber Security

ಬೆಂಗಳೂರು, ಜುಲೈ 16: ಭಾರತದ ಡಿಜಿಟಲ್ ಭದ್ರತೆ ಮತ್ತು ಕಾರ್ಯತಂತ್ರದ ಸಂವಹನ ಜಾಲಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಹತ್ವದ ಸಾಧನೆ ಮಾಡಿದೆ. ಫೈಬರ್ ಆಧಾರಿತ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ (Quantum Key Distribution – QKD) ವ್ಯವಸ್ಥೆಯ ಸೇನಾ ಕ್ಷೇತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಡಿಆರ್‌ಡಿಒ, ಈ ಯೋಜನೆಯಲ್ಲಿ ಬೆಂಗಳೂರು ಮೂಲದ ಟ್ಯಾಕ್‌ಬಿಟ್ ಲ್ಯಾಬ್ಸ್ (Taqbit Labs) ಸಂಸ್ಥೆಯ ಸಹಯೋಗವನ್ನು ಪಡೆದುಕೊಂಡಿದೆ. ದೇಶೀಯ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಭವಿಷ್ಯದ ಸೈಬರ್ ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಸುರಕ್ಷಿತ ಸಂವಹನ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ.

ಪ್ರಯೋಗಾಲಯ ಮಟ್ಟದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟ ಪರಿಕಲ್ಪನೆಯನ್ನು ಆಧರಿಸಿ, ಡಿಆರ್‌ಡಿಒ ತನ್ನ ಕೈಗಾರಿಕಾ ಪಾಲುದಾರರಾದ ಬೆಂಗಳೂರು ಮೂಲದ ಟ್ಯಾಕ್‌ಬಿಟ್ ಲ್ಯಾಬ್ಸ್ ಜೊತೆಗೂಡಿ ಈ ಸುಧಾರಿತ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಕಾರ್ಯರೂಪಕ್ಕೆ ತಂದಿದೆ. ಸೇನಾ ಕ್ಷೇತ್ರದಲ್ಲಿ ನಡೆಸಿದ ಪರೀಕ್ಷೆಗಳು ಯಶಸ್ವಿಯಾಗಿದ್ದು, ದೇಶದ ಅತ್ಯಂತ ಪ್ರಮುಖ ಕಾರ್ಯತಂತ್ರದ ಸಂವಹನ ಜಾಲಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

ರಕ್ಷಣಾ ಸಂವಹನ, ರಾಷ್ಟ್ರೀಯ ಭದ್ರತೆಗೆ ಹೆಚ್ಚುವರಿ ಸುರಕ್ಷತೆ

ಕ್ವಾಂಟಂ ಕಂಪ್ಯೂಟಿಂಗ್ ಯುಗದಲ್ಲಿ ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಎನ್‌ಕ್ರಿಪ್ಷನ್ ವ್ಯವಸ್ಥೆಗಳಿಗೆ ಪರ್ಯಾಯವಾಗಿ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ ತಂತ್ರಜ್ಞಾನವನ್ನು ಅತ್ಯಂತ ಸುರಕ್ಷಿತ ಸಂವಹನ ವ್ಯವಸ್ಥೆಯಾಗಿ ಪರಿಗಣಿಸಲಾಗುತ್ತಿದೆ. ಈ ತಂತ್ರಜ್ಞಾನವು ಮಾಹಿತಿಯ ವಿನಿಮಯವನ್ನು ಹೆಚ್ಚಿನ ಭದ್ರತೆಯೊಂದಿಗೆ ನಡೆಸಲು ನೆರವಾಗಲಿದ್ದು, ರಕ್ಷಣಾ ಸಂವಹನ ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಜಾಲಗಳಿಗೆ ಹೆಚ್ಚುವರಿ ಸುರಕ್ಷತೆ ಒದಗಿಸಲಿದೆ.

ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕ

ಈ ಸಾಧನೆಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಲ್ಟಿ-ಹಾಪ್ (Multi-hop) ಕ್ವಾಂಟಂ ಸಂವಹನ ಜಾಲಗಳ ನಿರ್ಮಾಣಕ್ಕೂ ಬಲವಾದ ಅಡಿಪಾಯ ಹಾಕಿದೆ. ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಅನುಗುಣವಾಗಿ ಭಾರತೀಯ ತಂತ್ರಜ್ಞಾನ ಮತ್ತು ಕೈಗಾರಿಕಾ ಸಹಭಾಗಿತ್ವದ ಮೂಲಕ ಈ ವ್ಯವಸ್ಥೆ ರೂಪುಗೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD?

ಒಟ್ಟಿನಲ್ಲಿ, ಡಿಆರ್‌ಡಿಒ ಮತ್ತು ಬೆಂಗಳೂರು ಮೂಲದ ಸಂಸ್ಥೆಯ ಸಹಯೋಗದಲ್ಲಿ ಸಾಧಿಸಲಾದ ಈ ಯಶಸ್ಸು, ಭಾರತದ ಡಿಜಿಟಲ್ ಭದ್ರತೆ, ಸೈಬರ್ ಸುರಕ್ಷತೆ ಹಾಗೂ ರಕ್ಷಣಾ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ನಿರೀಕ್ಷೆ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಕ್ವಾಂಟಂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ, ಎಲ್ಲೆಲ್ಲೂ ಭಕ್ತಸಾಗರ – Kannada News | Puri Jagannath Rath Yatra 2026: Grand Start, Dates and Festival Significance

ಪುರಿ, ಜುಲೈ 16: ಭಾರತದ ಅತ್ಯಂತ ಪವಿತ್ರ ಹಾಗೂ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ‘ಪುರಿ ಜಗನ್ನಾಥ ರಥಯಾತ್ರೆ’ಯು ಇಂದು(ಜುಲೈ 16) ಅತ್ಯಂತ ವೈಭವದಿಂದ ಆರಂಭವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಪುರಿ(Puri) ನಗರಕ್ಕೆ ಹರಿದು ಬಂದಿದ್ದು, ಇಡೀ ನಗರವು ‘ಜಯ ಜಗನ್ನಾಥ’ ಎಂಬ ಜೈಕಾರದೊಂದಿಗೆ ಭಕ್ತಿಯ ಸಾಗರದಲ್ಲಿ ಮುಳುಗಿದೆ. ಶ್ರೀ ಜಗನ್ನಾಥ ದೇವಾಲಯ ಆಡಳಿತವು ಈ ಮಹಾ ಉತ್ಸವದ ಅಧಿಕೃತ ಧಾರ್ಮಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬಿಗಿ ಭದ್ರತೆಯ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.

ದೇವಸ್ಥಾನದಿಂದ ಹೊರಬಂದು ಆಶೀರ್ವದಿಸುವ ಜಗನ್ನಾಥ

ಸಾಮಾನ್ಯವಾಗಿ ಹಿಂದೂ ಧರ್ಮದ ಬಹುತೇಕ ಹಬ್ಬಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಲು ದೇವಾಲಯಗಳ ಒಳಗೆ ಹೋಗಬೇಕಾಗುತ್ತದೆ. ಆದರೆ, ಪುರಿ ರಥಯಾತ್ರೆಯ ವೈಶಿಷ್ಟ್ಯವೇ ಬೇರೆ. ಇಲ್ಲಿ ಜಗನ್ನಾಥ ಸ್ವಾಮಿ, ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ದೇವಿಯೊಂದಿಗೆ ಸ್ವತಃ ತಾನೇ ದೇವಾಲಯದಿಂದ ಹೊರಬಂದು, ಜಾತಿ, ಮತ, ಧರ್ಮ ಅಥವಾ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ರಸ್ತೆಯಲ್ಲಿ ನಿಂತಿರುವ ಪ್ರತಿಯೊಬ್ಬ ಭಕ್ತನಿಗೂ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಸನಾತನ ಸಂಪ್ರದಾಯದ ಪ್ರಕಾರ, ಜಗನ್ನಾಥ ಸ್ವಾಮಿಯು ತನ್ನ ಒಡಹುಟ್ಟಿದವರೊಂದಿಗೆ ಜಗನ್ನಾಥ ದೇವಸ್ಥಾನದಿಂದ ಹೊರಟು, ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ತನ್ನ ಸೋದರತ್ತೆಯ ಮನೆ ಎಂದು ನಂಬಲಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಪ್ರಯಾಣ ಬೆಳೆಸುತ್ತಾನೆ. ಈ ಒಂಬತ್ತು ದಿನಗಳ ಕಾಲ ದೇವತೆಗಳು ಗುಂಡಿಚಾ ಮಂದಿರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಪ್ರತಿ ವರ್ಷವೂ ಹೊಸ ರಥಗಳ ನಿರ್ಮಾಣದ ಅಚ್ಚರಿ

ಈ ಹಬ್ಬದ ಅತ್ಯಂತ ರೋಮಾಂಚನಕಾರಿ ಸಂಗತಿಯೆಂದರೆ, ಹಿಂದಿನ ವರ್ಷದ ರಥಗಳನ್ನು ಇಲ್ಲಿ ಎಂದಿಗೂ ಮರುಬಳಕೆ ಮಾಡುವುದಿಲ್ಲ. ಬದಲಿಗೆ, ಪ್ರತಿ ವರ್ಷವೂ ಕಾಡುಗಳಿಂದ ಅತ್ಯಂತ ಎಚ್ಚರಿಕೆಯಿಂದ ಆಯ್ದುಕೊಂಡ ವಿಶೇಷ ಮರಗಳನ್ನು ತಂದು, ಅಕ್ಷಯ ತೃತೀಯದ ದಿನದಿಂದ ಸಂಪೂರ್ಣ ಹೊಸದಾದ 3 ಬೃಹತ್ ಮರದ ರಥಗಳನ್ನು ನಿರ್ಮಿಸಲಾಗುತ್ತದೆ.

ಮತ್ತಷ್ಟು ಓದಿ: Puri Jagannath Temple: ಪುರಿ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಧ್ವಜ ಬದಲಾಯಿಸುವುದೇಕೆ?

ಭಗವಾನ್ ಜಗನ್ನಾಥನ ರಥವನ್ನು ‘ನಂದಿಘೋಷ’ ಎಂದು ಕರೆಯಲಾಗುತ್ತದೆ.

ಬಲಭದ್ರ ಸ್ವಾಮಿಯ ರಥವನ್ನು ‘ತಾಳಧ್ವಜ’ ಎನ್ನಲಾಗುತ್ತದೆ.

ದೇವಿ ಸುಭದ್ರೆಯ ರಥವನ್ನು ‘ದರ್ಪದಲನ’ ಎಂದು ಕರೆಯಲಾಗುತ್ತದೆ.

ಈ ದೈತ್ಯ ರಥಗಳ ಹಗ್ಗವನ್ನು ಕೇವಲ ಒಮ್ಮೆ ಮುಟ್ಟಿ ಎಳೆದರೆ ಸಾಕು, ಜನ್ಮಜನ್ಮಾಂತರದ ಪಾಪಗಳು ತೊಳೆದುಹೋಗುತ್ತವೆ ಎಂಬುದು ಕೋಟ್ಯಂತರ ಭಕ್ತರ ಗಾಢ ನಂಬಿಕೆಯಾಗಿದೆ.

ರಥಯಾತ್ರೆ 2026 ರ ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ
ಜುಲೈ 16, 2026 (ಇಂದು – ಗುರುವಾರ): ರಥಯಾತ್ರೆಯ ಭವ್ಯ ಆರಂಭ. ಶ್ರೀವಿಗ್ರಹಗಳನ್ನು ಮಂದಿರದಿಂದ ರಥಕ್ಕೆ ತರುವ ‘ಪಹಂಡಿ’ ಆಚರಣೆ ಮತ್ತು ರಥ ಚಲನೆ.

ಜುಲೈ 17 ರಿಂದ ಜುಲೈ 23: ದೇವತೆಗಳ ಗುಂಡಿಚಾ ಜಗನ್ನಾಥ ಮಂದಿರದ ವಾಸ್ತವ್ಯ ಹಾಗೂ ವಿಶೇಷ ಪೂಜೆಗಳು.

ಜುಲೈ 24, 2026 (ಶುಕ್ರವಾರ): ಒಂಬತ್ತು ದಿನಗಳ ಸೋದರತ್ತೆಯ ಮನೆಯ ವಾಸ್ತವ್ಯ ಮುಗಿಸಿ ದೇವತೆಗಳು ಮರಳಿ ತಮ್ಮ ಮೂಲ ಜಗನ್ನಾಥ ಮಂದಿರಕ್ಕೆ ಹಿಂದಿರುಗುವ ‘ಬಹುಡಾ ಯಾತ್ರೆ’ (ಮರಳಿ ಪ್ರಯಾಣ).

‘ಛೇರಾ ಪಹರಾ’ ಎಂಬ ರಾಜಮನೆತನದ ಸೇವೆ
ಪುರಿ ರಥಯಾತ್ರೆಯ ಅತ್ಯಂತ ಸುಂದರ ಹಾಗೂ ಮಾನವೀಯ ಸಂದೇಶ ಸಾರುವ ಆಚರಣೆಯೆಂದರೆ ‘ಛೇರಾ ಪಹರಾ’.

ರಾಜನೇ ಇಲ್ಲಿ ಗುಡಿಸುವವನು: ರಥಗಳು ಹೊರಡುವ ಮುನ್ನ ಪುರಿಯ ರಾಜಮನೆತನದ ಇಂದಿನ ಗಜಪತಿ ಮಹಾರಾಜರು ರಥಗಳ ಬಳಿ ಬಂದು, ಚಿನ್ನದ ಹಿಡಿಕೆಯುಳ್ಳ ಕಸಪೊರಕೆಯಿಂದ ರಥದ ಸುತ್ತಲೂ ಕಸ ಗುಡಿಸಿ, ಶ್ರೀಗಂಧದ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ.

ಸಮಾನತೆಯ ಸಂದೇಶ: ಜಗತ್ತಿನ ಸೃಷ್ಟಿಕರ್ತನಾದ ಜಗನ್ನಾಥನ ಮುಂದೆ ರಾಜನಾಗಲಿ ಅಥವಾ ಸಾಮಾನ್ಯ ಪ್ರಜೆಯಾಗಲಿ ಎಲ್ಲರೂ ಸಮಾನರು, ಭಗವಂತನಿಗೆ ಎಲ್ಲರೂ ಸೇವಕರು ಎಂಬ ಪರಮೋಚ್ಚ ಸಮಾನತೆಯ ಸಂದೇಶವನ್ನು ಈ ಆಚರಣೆ ಸಾರುತ್ತದೆ. ಒಡಿಶಾ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಲಕ್ಷಾಂತರ ಭಕ್ತರ ಸೌಕರ್ಯಕ್ಕಾಗಿ ಇಡೀ ಪುರಿ ನಗರದಾದ್ಯಂತ ವಾಹನ ಸಂಚಾರ ವ್ಯವಸ್ಥೆ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು ಅತ್ಯಂತ ಸುಸಜ್ಜಿತವಾಗಿ ಸಿದ್ಧಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯೂ’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ? – Kannada News | Ramayana movie trailer censored got U certificate

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಹಾಗೂ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ವರೆಗೆ ನಿರ್ಮಾಣ ಆಗಿರುವ ಭಾರತೀಯ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಬಜೆಟ್ನ ಸಿನಿಮಾ ಇದೆನ್ನಲಾಗುತ್ತಿದೆ. ದೊಡ್ಡ ನಟ-ನಟಿಯರು, ದೊಡ್ಡ ಬಜೆಟ್, ಹಾಲಿವುಡ್ ಸಿನಿಮಾಗಳ ನಿರ್ಮಾಪಕ, ತಂತ್ರಜ್ಞರು ಎಲ್ಲರ ಒಟ್ಟುಗೂಡುವಿಕೆಯಿಂದಾಗಿ ಸಿನಿಮಾದ ಗುಣಮಟ್ಟದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಈಗಾಗಲೇ ಸಿನಿಮಾದ ಸಣ್ಣ ಟೀಸರ್, ಕೆಲ ಪೋಸ್ಟರ್​​ಗಳು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಇದಕ್ಕಾಗಿ ಟ್ರೈಲರ್​​ ಅನ್ನು ಸೆನ್ಸಾರ್ ಬೋರ್ಡ್​​ಗೆ ನೀಡಿ ಪ್ರಮಾಣ ಪತ್ರವನ್ನು ಸಹ ಪಡೆದು ಕೊಂಡಿದೆ.

ನಿನ್ನೆಯಷ್ಟೆ ‘ರಾಮಾಯಣ’ ಸಿನಿಮಾದ ಟ್ರೈಲರ್​​ಗೆ ಸೆನ್ಸಾರ್​​ನಲ್ಲಿ ಪ್ರಮಾಣ ಪತ್ರ ನೀಡಲಾಗಿದ್ದು, ಟ್ರೈಲರ್​​​ಗೆ ಯು ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಸಿನಿಮಾದ ಟ್ರೈಲರ್​​​ಗಳಿಗೆ ಹೆಚ್ಚಿನ ಚಿತ್ರತಂಡಗಳು ಸೆನ್ಸಾರ್ ಮಾಡಿಸುವುದಿಲ್ಲ. ಆದರೆ ಯಾವ ಸಿನಿಮಾದ ಟ್ರೈಲರ್​​ ಅನ್ನು ಜಾಹೀರಾತು ರೂಪದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆಯೋ ಅಂಥಹಾ ಟ್ರೈಲರ್​​ಗಳಿಗೆ ಮಾತ್ರವೇ ಸೆನ್ಸಾರ್ ಪ್ರಮಾಣ ಪತ್ರ ಅವಶ್ಯಕವಾಗಿರುತ್ತದೆ. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್​​ನ ಸೆನ್ಸಾರ್ ಮಾಡಿಸಿರುವುದು ಗಮನಿಸಿದರೆ, ಈ ಟ್ರೈಲರ್ ಅನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಖಾತ್ರಿ ಆಗಿದೆ.

ನಿನ್ನೆ ಒಟ್ಟು ಎರಡು ಟ್ರೈಲರ್​ಗಳನ್ನು ಸೆನ್ಸಾರ್ ಮಾಡಿಸಲಾಗಿದೆ. ಎರಡೂ ಟ್ರೈಲರ್‌ನ ಅವಧಿಯು ಸರಿ ಸುಮಾರು 4 ನಿಮಿಷಗಳಾಗಿವೆ. CBFC ವೆಬ್‌ಸೈಟ್‌ನಲ್ಲಿ ‘ರಾಮಾಯಣ’ ಟ್ರೈಲರ್‌ಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಟ್ರೈಲರ್ – ರಾಮಾಯಣ 3D’ ಎಂದು ಹೆಸರಿಸಲ್ಪಟ್ಟಿದ್ದು, ಇದರ ಅವಧಿ 4 ನಿಮಿಷ 15 ಸೆಕೆಂಡುಗಳು. ಇನ್ನೊಂದು ‘ಥಿಯೇಟ್ರಿಕಲ್ ಟ್ರೈಲರ್ – ರಾಮಾಯಣ 3D’ ಎಂದು ಹೆಸರಿಸಲ್ಪಟ್ಟಿದ್ದು, ಇದರ ಅವಧಿ 4 ನಿಮಿಷಗಳು.

ಇದನ್ನೂ ಓದಿ:ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು?

ಕಳೆದ ವರ್ಷ ಜುಲೈ 3 ರಂದು ಮೊದಲ ಸಣ್ಣ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲಿ, ಏಪ್ರಿಲ್ 2 ರಂದು ಹನುಮ ಜಯಂತಿಯಂದು, ರಣಬೀರ್ ಕಪೂರ್ ನಿರ್ವಹಿಸಿರುವ ಶ್ರೀರಾಮನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ‘ರಾಮ’ ಎಂಬ ಟೀಸರನ್ನು ಬಿಡುಗಡೆ ಮಾಡಲಾಗಿತ್ತು. ಆ ಟೀಸರ್ 2 ನಿಮಿಷ 38 ಸೆಕೆಂಡುಗಳ ಅವಧಿಯನ್ನು ಹೊಂದಿದ್ದು, ಅದಕ್ಕೂ ‘U’ ಪ್ರಮಾಣಪತ್ರ ಸಿಕ್ಕಿತ್ತು.

‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಸಂಗೀತವನ್ನು ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಝೀಮರ್ ಸಂಯೋಜಿಸಿದ್ದಾರೆ. ಇದು ಎರಡು ಭಾಗಗಳ ಚಿತ್ರವಾಗಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೆಸ್ಸಿ ಪಡೆಯ ಮಿಂಚಿನಾಟ: ಫೈನಲ್​ಗೆ ಅರ್ಜೆಂಟೀನಾ – Kannada News | Messi Magic: Argentina Into World Cup Final

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಮತ್ತೊಮ್ಮೆ ತನ್ನ ಸಾಂಪ್ರದಾಯಿಕ ಹಾಗೂ ಕೊನೆಯ ಕ್ಷಣದ ಮಿಂಚಿನಾಟದ ಮೂಲಕ ಫಿಫಾ ವಿಶ್ವಕಪ್ 2026ರ ಫೈನಲ್ ಪ್ರವೇಶಿಸಿದೆ. ಅಮೆರಿಕದ ಅಟ್ಲಾಂಟಾ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಪಡೆ 2-1 ಗೋಲುಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿ ಮಹಾ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್:

ಈ ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಕಷ್ಟು ಹೆಣಗಾಡಿದವು. ಇಂಗ್ಲೆಂಡ್‌ನ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅರ್ಜೆಂಟೀನಾ ಆರಂಭದಲ್ಲಿ ಮಂಕಾಗಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಆಂಥೋನಿ ಗಾರ್ಡನ್ ಭರ್ಜರಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆ ಮೂಲಕ ಥಾಮಸ್ ಟುಚೆಲ್ ಮಾರ್ಗದರ್ಶನದ ಇಂಗ್ಲೆಂಡ್ ತಂಡ 1966ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವ ಸನಿಹಕ್ಕೆ ಬಂದಿತ್ತು.

ಕೊನೆಯ ನಿಮಿಷಗಳಲ್ಲಿ ತಿರುಗಿಬಿದ್ದ ಮೆಸ್ಸಿ ಪಡೆ:

ಪಂದ್ಯ ಮುಗಿಯಲು ಕೇವಲ 5 ನಿಮಿಷಗಳು ಬಾಕಿ ಇರುವಾಗ 39 ವರ್ಷದ ಮ್ಯಾಜಿಷಿಯನ್ ಲಿಯೋನೆಲ್ ಮೆಸ್ಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

  • ಮೊದಲ ಗೋಲು (85ನೇ ನಿಮಿಷ): ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಕಿಕ್ ನೆರವಿನಿಂದ ಎಂಜೊ ಫೆರ್ನಾಂಡಿಸ್ ಚೆಂಡನ್ನು ನೆಟ್‌ಗೆ ತೂರಿಸಿ 1-1 ಗೋಲುಗಳ ಸಮಬಲ ತಂದರು.
  • ಗೆಲುವಿನ ಗೋಲು (92ನೇ ನಿಮಿಷ): ಪಂದ್ಯ ಮುಕ್ತಾಯದ ಇಂಜುರಿ ಸಮಯದಲ್ಲಿ (90+2ನೇ ನಿಮಿಷ) ಮೆಸ್ಸಿ ತಮ್ಮ ಬಲಗಾಲಿನಿಂದ ಮತ್ತೊಂದು ಅದ್ಭುತ ಕ್ರಾಸ್ ಪಾಸ್ ನೀಡಿದರು. ಇದನ್ನು ಚಾಣಾಕ್ಷತನದಿಂದ ಹೆಡರ್ ಮಾಡಿದ ಲೌಟಾರೊ ಮಾರ್ಟಿನೆಝ್ ವಿನ್ನಿಂಗ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 2-1 ಅದ್ಭುತ ಜಯ ತಂದುಕೊಟ್ಟರು.

ಫೈನಲ್‌ನಲ್ಲಿ ಯಾರು ಎದುರಾಳಿ?

ಈ ಗೆಲುವಿನೊಂದಿಗೆ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಅಲ್ಲದೆ ಮುಂದಿನ ಭಾನುವಾರ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ ಯೂರೋ ಚಾಂಪಿಯನ್ಸ್ ಆದ ಸ್ಪೇನ್ ವಿರುದ್ಧ ಅರ್ಜೆಂಟೀನಾ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಇದು ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವಾಗಲಿದ್ದು, ಇಡೀ ವಿಶ್ವವೇ ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದೆ. ಈ ಪಂದ್ಯದ ಮೂಲಕ ಮೆಸ್ಸಿ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Source link

Exit mobile version