Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 28ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಅಣಬೆ ಬೆಳೆಯುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಬಹಳ ಸಮಯದಿಂದ ನಿಂತು ಹೋಗಿರುವ ಸರ್ಕಾರಿ ಮಟ್ಟದಲ್ಲಿನ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಮಕ್ಕಳ ಶಿಕ್ಷಣ- ಉದ್ಯೋಗದಲ್ಲಿ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಉದ್ದೇಶ ಈಡೇರುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮನೆಯ ಮಟ್ಟಿಗೆ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವಂಥ ನಿರ್ಧಾರ ಮಾಡಲಿದ್ದೀರಿ. ಜನ್ಮಸಂಖ್ಯೆ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 28ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ತಮಾಷೆಗೆ ಎಂದು ಆರಂಭಿಸಿದ ಮಾತು ಹೊಸ ವ್ಯವಹಾರವನ್ನೋ ವ್ಯಾಪಾರವನ್ನೋ ಆರಂಭಿಸುವ ಮಟ್ಟಕ್ಕೆ ಒಯ್ಯಲಿದೆ. ನಿಮ್ಮ ಗುಣ- ಸ್ವಭಾವಕ್ಕೆ ಶಿಸ್ತಿನ ಚೌಕಟ್ಟು ಹಾಕಲು ಮುಂದಾಗಲಿದ್ದೀರಿ. ಹಿಂದೆಲ್ಲ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಒಪ್ಪಿಕೊಂಡು ಬಿಡುತ್ತಿದ್ದ ಕೆಲಸ- ಕಾರ್ಯಗಳಂಥ ಸುಳಿಗೆ ಇನ್ನು ಮುಂದೆ ಸಿಕ್ಕಿಹಾಕಿಕೊಳ್ಳಬಾರದು ಎಂಬ ದೃಢವಾದ ನಿಶ್ಚಯ ಮಾಡುತ್ತೀರಿ. ಆದಾಯದಲ್ಲಿ ಏರಿಕೆ ಮಾಡಿಕೊಳ್ಳಲು ದೊರೆಯುವ ಅವಕಾಶಗಳ ಪೈಕಿ ಯಾವುದಕ್ಕೆ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಸ್ಪಷ್ಟತೆ…

Read More

Horoscope Today 28 January : ಇಂದು ಈ ರಾಶಿಯವರಿಗೆ ಆರ್ಥಿಕ ವಂಚನೆ ಸಂಭವ – Kannada News | Horoscope Today: January 28, Wednesday 2026 Daily Zodiac Predictions and Lucky Signs

ಮೇಷ ರಾಶಿ: ನಿಮ್ಮ ಸಾಧನೆಗೆ ಸಣ್ಣ ಪ್ರೋತ್ಸಾಹವೂ ದೊಡ್ಡದೇ. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಬಾಗುವಿಕೆಯಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಆ ಭಾವ ನಿಮ್ಮಲ್ಲಿದ್ದರೆ ತೆಗೆದುಹಾಕಿ. ಕ್ಷುಲ್ಲಕ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ.‌ ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಅಪರಿಚಿತರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲವು ಬರಬಹುದು. ವೃಷಭ ರಾಶಿ: ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ….

Read More

ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್ – Kannada News | Duniya Vijay talks about his real life experience of Landlord movie story

ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾ ಹಿಟ್ ಆಗಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಶೋಷಿತ ವರ್ಗದ ಕೊಡಲಿ ರಾಚಯ್ಯ ಎಂಬ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಈ ಕುರಿತು ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಪಾತ್ರ ಅಷ್ಟು ಸಹಜವಾಗಿ ಮೂಡಿಬರಲು ಕಾರಣ ಆದ ಅಂಶಗಳು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಊರಿನಲ್ಲಿ ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು. ಅದನ್ನು ನಾನು ನೋಡಿದ್ದೇನೆ. ನಮ್ಮ ಊರಿನಲ್ಲಿ ನಾನು ಆ ಶೋಷಣೆ ನೋಡಿದ್ದೇನೆ. ನಮ್ಮ…

Read More

ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಪಾಲಿಗೆ ದೇವರಾದ ರಾಫ್ಟಿಂಗ್ ಗೈಡ್ – Kannada News | Tourist Saved by Rafting Guides in Rishikesh Ganga River Viral Video

ರಿಷಿಕೇಶ, ಜನವರಿ 27: ರಿಷಿಕೇಶದಲ್ಲಿ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡುವಾಗ ಮುಳುಗುತ್ತಿದ್ದ ಗುರುಗ್ರಾಮದ ಪ್ರವಾಸಿ ಅವಿನಾಶ್ ಎಂಬುವವರನ್ನು ರಾಫ್ಟಿಂಗ್ ಗೈಡ್ ಒಬ್ಬರು ಪವಾಡಸದೃಶವಾಗಿ ರಕ್ಷಿಸಿದ್ದಾರೆ. ಯೂಸುಫ್ ಬೀಚ್‌ನಲ್ಲಿ ನಡೆದ ಈ ಘಟನೆ ರಾಫ್ಟಿಂಗ್ ಗೈಡ್‌ನ ಹೆಲ್ಮೆಟ್‌ನಲ್ಲಿ ಅಳವಡಿಸಲಾದ ಗೋಪ್ರೊ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ ಗೈಡ್ ಅವಿನಾಶ್​ನನ್ನು ಕಾಪಾಡಿ, ತಕ್ಷಣ ಸಿಪಿಆರ್ ನೀಡುವ ಮೂಲಕ ಅವರ ಜೀವವನ್ನು ಉಳಿಸಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಿಂದಾಗಿ ಆ ಪ್ರವಾಸಿಗನ ಜೀವ ಉಳಿಯಿತು. ಇನ್ನಷ್ಟು…

Read More

ಪ್ರೇಯಸಿಯನ್ನು ಕೊಂದು ಆಕೆಯ ತಲೆ ಕತ್ತರಿಸಿ ಕಾಲುವೆಗೆ ಎಸೆದ ಪ್ರೇಮಿ! – Kannada News | Agra Man murders his lover and threw her head in Canal

ಆಗ್ರಾ, ಜನವರಿ 27: ಉತ್ತರ ಪ್ರದೇಶದ ಆಗ್ರಾದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ, ಆಕೆಯ ತಲೆಯನ್ನು ಪ್ಯಾಕೆಟ್‌ನಲ್ಲಿ ಹಾಕಿ ಕಾಲುವೆಗೆ ಎಸೆದಿದ್ದಾನೆ. ಈ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಈಗಾಗಲೇ ಕೊಲೆಗಾರನನ್ನು (Killer) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಮಿಂಕಿ ಶರ್ಮಾ ಎಂದು ಗುರುತಿಸಲಾಗಿದೆ. ಅವರು ಆಗ್ರಾದಲ್ಲಿರುವ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಹೆಚ್​ಆರ್​ ಆಗಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವಿನಯ್…

Read More

ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್: ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ – Kannada News | Singer Arijit Singh announces retirement from playback singing

ನೂರಾರು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಗಾಯಕ ಅರಿಜಿತ್ ಸಿಂಗ್ ಅವರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಏಕಾಏಕಿ ಅವರು ನಿವೃತ್ತಿ (Arijit Singh Retirement) ಘೋಷಿಸಿದ್ದಾರೆ. ಅವರು ಈ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಅರಿಜಿತ್ ಸಿಂಗ್ ಅವರು ನಿವೃತ್ತಿ ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವಾರು ಲವ್ ಸಾಂಗ್​ಗಳನ್ನು ಹಾಡುವ ಮೂಲಕ ಅರಿಜಿತ್ ಸಿಂಗ್ (Arijit Singh) ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಧ್ವನಿಯಲ್ಲಿ ಹೊಸ ಹೊಸ ಹಾಡುಗಳನ್ನು…

Read More

ಭಾರೀ ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗಾಗಿ ವಿಶೇಷ ರೈಲು ಸಂಚಾರ – Kannada News | Special train operated for tourists as heavy snowfall blocks the Jammu Srinagar National Highway

ಶ್ರೀನಗರ, ಜನವರಿ 27: ಇಂದು ಕಾಶ್ಮೀರದಾದ್ಯಂತ ಭಾರೀ ಹಿಮಪಾತವಾಗಿದೆ. ಹೀಗಾಗಿ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ನೂರಾರು ಪ್ರವಾಸಿಗರು ಜಮ್ಮು-ಕಾಶ್ಮೀರದಲ್ಲಿ ಸಿಲುಕಿಕೊಂಡರು. ಹೀಗಾಗಿ, ಪ್ರವಾಸಿಗರಿಗಾಗಿ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆ ರೈಲು ಹಿಮದಿಂದ (Snowfall) ಆವೃತವಾದ ರೈಲ್ವೆ ಹಳಿಯನ್ನು ಭೇದಿಸುತ್ತಾ ಸಾಗುತ್ತಿರುವ ದೃಶ್ಯ ಇಲ್ಲಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಉಡುಪಿಯಲ್ಲಿ ಪ್ರವಾಸಿ ಬೋಟ್ ದುರಂತ: ಮತ್ತೋರ್ವ ಯುವತಿ ಸಾವು; ಮೃತರ ಸಂಖ್ಯೆ ಮೂರಕ್ಕೇರಿಕೆ – Kannada News | Udupi Tourist Boat Capsize Tragedy: Another Young Girl Dies, Death Toll Rises to Three

ಉಡುಪಿ, ಜನವರಿ 27: ಪ್ರವಾಸಿ ಬೋಟ್ ದುರಂತ ಪ್ರಕರಣಕ್ಕೆ (Boat Tragedy) ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿದ್ದಾರೆ (death). ಮೈಸೂರಿನ ದಿಶಾ(23) ಮೃತ ಯುವತಿ. ನಿನ್ನೆ ಸಿಂಧು ಮತ್ತು ಶಂಕರಪ್ಪ ಎಂಬುವವರು ಮೃತಪಟ್ಟಿದ್ದರು. ಸದ್ಯ ಧರ್ಮರಾಜ್ ಎಂಬ ಯುವಕ‌ನಿಗೆ ಚಿಕಿತ್ಸೆ ಮುಂದುವರೆದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ ಉಡುಪಿಯ ಮಲ್ಪೆ ವ್ಯಾಪ್ತಿಗೆ ಬರುವ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್ ವಿಶ್ವಪ್ರಸಿದ್ಧ. ಯೂಟ್ಯೂಬ್ ನಲ್ಲಿ ಈ ಬಿಚ್​​ ವಿಡಿಯೋ ನೋಡಿದರೆ ಭೂಲೋಕದ…

Read More

1 ಲಕ್ಷ ಸಾಲಕ್ಕೆ 40 ಲಕ್ಷದ ಚೆಕ್ ಕೇಸ್: ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ – Kannada News | A Bengaluru Man Commits Suicide In Hassan for Loan torture

ಹಾಸನ, (ಜನವರಿ 27): ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಬೆಂಗಳೂರಿನ (Bengaluru) ನೆಲಮಂಗಲದ ಕೃಷ್ಣಪ್ಪ(47) ಮೃತ ವ್ಯಕ್ತಿ. ಹಾಸನ ಹೊರವಲಯದ ದೊಡ್ಡಪುರ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಕೃಷ್ಣಪ್ಪನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಇನ್ನು ಸಾಯುವ ಮುನ್ನ ಕೃಷ್ಣಪ್ಪ ಸೆಲ್ಫಿ ವಿಡಿಯೋ ಮಾಡುತ್ತಲೇ ವಿಷ ಸೇವಿಸಿದ್ದಾನೆ. ಸೆಲ್ಫಿ ವಿಡಿಯೋವನ್ನು ಪತ್ನಿ ಕಾಂಚನಗೆ ಕಳುಹಿಸಿದ್ದು, ಕಾಂಚನ ನನ್ನ ಕ್ಷಮಿಸಿಬಿಡು. ರಮೇಶ್ ಹಾಗೂ ಮಂಜು…

Read More