ಶೂಟಿಂಗ್ ವೇಳೆ ನಟಿಯರನ್ನು ಕೀಳಾಗಿ ಕಾಣಲಾಗುತ್ತದೆ: ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್ – Kannada News | Cocktail 2 Actress Kriti Sanon opens up on Gender Bias and Discrimination on Movie sets

ಚಿತ್ರರಂಗದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ನಡೆಯುವ ಲಿಂಗ ತಾರತಮ್ಯದ (Gender Bias) ಕುರಿತು ಖ್ಯಾತ ನಟಿ ಕೃತಿ ಸನನ್ (Kriti Sanon) ಮುಕ್ತವಾಗಿ ಧ್ವನಿ ಎತ್ತಿದ್ದಾರೆ. ಚಿತ್ರೀಕರಣದ ಸೆಟ್‌ಗಳಲ್ಲಿ ಮಹಿಳಾ ಕಲಾವಿದರನ್ನು ಹೇಗೆ ಕೀಳಾಗಿ ಕಾಣಲಾಗುತ್ತದೆ ಮತ್ತು ಪುರುಷರಿಗೆ ಹೋಲಿಸಿದರೆ ನಟಿಯರನ್ನು ಹೇಗೆ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದ ಕೃತಿ, ತಾವು ಮಾಡೆಲಿಂಗ್, ಇಂಜಿನಿಯರಿಂಗ್ ಕಾಲೇಜು ಮತ್ತು ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಭಾಗವಾಗಿದ್ದರೂ, ಬಾಲಿವುಡ್‌ನಲ್ಲೇ ಅತ್ಯಂತ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗಿ ಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರಶ್ನೆ ಕೇಳಿದರೆ ಕಿರಿಕಿರಿ ಅಂತಾರೆ!’

ಚಿತ್ರೀಕರಣದ ಸಮಯದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ ಎಂದು ಕೃತಿ ವಿವರಿಸಿದ್ದಾರೆ. ತಮಗೆ ಚಿತ್ರಕಥೆ ಹಾಗೂ ಪಾತ್ರಗಳ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸುವ ಅಭ್ಯಾಸ ಮೊದಲಿನಿಂದಲೂ ಇದೆ ಎಂದ ಅವರು, ‘ಒಬ್ಬ ನಟಿ ಪ್ರಶ್ನೆ ಕೇಳಿದರೆ ಸೆಟ್‌ನಲ್ಲಿರುವವರು ‘ಇವಳು ಎಷ್ಟು ಪ್ರಶ್ನೆ ಕೇಳುತ್ತಾಳೆ, ಇನ್ನು ಇವಳ 50 ಪ್ರಶ್ನೆಗಳು ಶುರುವಾಗುತ್ತವೆ’ ಎಂದು ಆಡಿಕೊಳ್ಳುತ್ತಾರೆ. ಇದೇ ಪ್ರಶ್ನೆಯನ್ನು ಒಬ್ಬ ನಟ ಕೇಳಿದರೆ, ಅವನು ಸಿನಿಮಾದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾನೆ ಎಂದು ಹೊಗಳುತ್ತಾರೆ’ ಎಂದು ಹೇಳಿದ್ದಾರೆ.

‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’:

‘ನನಗೂ ಇಂತಹ ಅನುಭವವಾಗಿದೆ. ನಾನು ಪ್ರಶ್ನೆ ಕೇಳಿದಾಗ ‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’ ಎಂದು ಹೇಳುತ್ತಿದ್ದರು. ಆದರೆ ಅದೇ ಪ್ರಶ್ನೆಯನ್ನು ಸಹನಟ ಕೇಳಿದಾಗ ‘ಓಕೆ, ಹಾಗೇ ಮಾಡೋಣ’ ಎಂದು ಒಪ್ಪಿಕೊಳ್ಳುತ್ತಿದ್ದರು’ ಎಂದು ಕೃತಿ ಬೇಸರ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಿಗುವ ಸೌಲಭ್ಯಗಳಲ್ಲೂ ನಟ-ನಟಿಯರ ನಡುವೆ ವ್ಯತ್ಯಾಸ ಇರುತ್ತದೆ ಎಂದು ಕೃತಿ ಸನೋನ್ ಗಂಭೀರ ಆರೋಪ ಮಾಡಿದ್ದಾರೆ.

‘ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ’:

‘ಹಲವು ಬಾರಿ ನಟರಿಗೆ ನೀಡಲಾಗುವ ಕಾರು ಅಥವಾ ಕ್ಯಾರವಾನ್ ರೂಮ್‌ಗಳು ತುಂಬಾ ಐಷಾರಾಮಿಯಾಗಿರುತ್ತವೆ. ಆದರೆ ನಟಿಯರಿಗೆ ಸಾಮಾನ್ಯವಾದ ರೂಮ್ ನೀಡಲಾಗುತ್ತದೆ. ನನಗೆ ಸಣ್ಣ ರೂಮ್ ಅಥವಾ ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ ಆ ಮೂಲಕ ನಾನು ಅವರಿಗಿಂತ ಕಮ್ಮಿ ಎನ್ನುವಂತೆ ನನ್ನನ್ನು ಭಾವಿಸಬೇಡಿ ಎನ್ನುವುದಷ್ಟೇ ನನ್ನ ವಾದ’ ಎಂದು ಕೃತಿ ಹೇಳಿದ್ದಾರೆ.

ಇದರೊಂದಿಗೆ ಸಹಾಯಕ ನಿರ್ದೇಶಕರ ವರ್ತನೆಯ ಬಗ್ಗೆಯೂ ಮಾತನಾಡಿರುವ ಅವರು, ‘ಶೂಟಿಂಗ್ ಸೆಟ್‌ಗೆ ಬರುವಂತೆ ಸಹಾಯಕ ನಿರ್ದೇಶಕರು ಮೊದಲು ಹುಡುಗಿಯರನ್ನೇ ಕರೆಯುತ್ತಾರೆ. ಅವರಿಗೆ ಪುರುಷ ನಟರನ್ನು ಕಂಡರೆ ಕೊಂಚ ಭಯವಿರುತ್ತದೆ. ಹೀಗಾಗಿ ಮಹಿಳಾ ನಟಿಯರನ್ನು ಅವರು ತುಂಬಾ ಸಲೀಲಾಗಿ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ: ‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಕೃತಿ, ಹಿಂದೆ ಬಾಲಿವುಡ್‌ನಲ್ಲಿ ಮಹಿಳೆಯರಿಗೆ ಸಿಗುತ್ತಿದ್ದ ಪಾತ್ರಗಳು ಕೇವಲ ಗ್ಲಾಮರ್ ಅಥವಾ ನಾಯಕನ ಪ್ರೇಯಸಿಯ ಪಾತ್ರಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಕಾಲ ಬದಲಾಗುತ್ತಿದೆ, ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ ಮತ್ತು ನಟಿಯರಿಗಾಗಿ ಉತ್ತಮ ಪಾತ್ರಗಳನ್ನು ಬರೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್ – Kannada News | Bengaluru is Europe in India: Woman’s Viral Video Rating Namma Bengaluru 5 on 5 Wins Internet

ವೈರಲ್ ವೀಡಿಯೋImage Credit source: sukoon.se.batein instagram account

ಬೆಂಗಳೂರು, ಜುಲೈ 05: ಸಿಲಿಕಾನ್ ಸಿಟಿ ಬೆಂಗಳೂರು ಅಂದ ತಕ್ಷಣ ನೆನಪಾಗುವುದು ಐಟಿ ಕಂಪನಿಗಳು, ತಲೆನೋವು ತರಿಸುವ ಟ್ರಾಫಿಕ್ ಜಾಮ್ ಹಾಗೂ ದುಬಾರಿ ಮನೆ ಬಾಡಿಗೆ. ಆದರೆ, ಇದೇ ಬೆಂಗಳೂರನ್ನು ಭಾರತದ ‘ಯುರೋಪ್’ ಎಂದು ಕರೆದು, ನಗರದ ಸೌಂದರ್ಯವನ್ನು ಕೊಂಡಾಡಿರುವ ಯುವತಿಯೊಬ್ಬಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನ ‘sukoon.se.batein’ ಎಂಬ ಖಾತೆಯಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬರು ತಮಗೆ ಬೆಂಗಳೂರು ಏಕೆ ಇಷ್ಟ ಮತ್ತು ಈ ನಗರದ ಮೇಲಿರುವ ಪ್ರೀತಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಭಾರತದಲ್ಲೇ ಎಲ್ಲೂ ಇಲ್ಲದ ಮ್ಯಾಜಿಕ್ ಇಲ್ಲಿದೆ!

ವಿಡಿಯೋದಲ್ಲಿ ಮಾತನಾಡಿರುವ ಯುವತಿ, ಭಾರತದಲ್ಲಿ ಎಲ್ಲಾದರೂ ಯುರೋಪ್ ಇದ್ದರೆ, ಅದು ನಮ್ಮ ಬೆಂಗಳೂರಿನಲ್ಲೇ ಇದೆ. ನಾನು ಸ್ವಲ್ಪ ಅತಿಶಯೋಕ್ತಿಯಾಗಿ ಹೇಳುತ್ತಿದ್ದೇನೆ ಅನಿಸಬಹುದು. ಆದರೆ ನಿಜ ಹೇಳಬೇಕೆಂದರೆ, ನಾನು ಭಾರತದ ಅದೆಷ್ಟೋ ಸುಂದರ ನಗರಗಳಿಗೆ ಭೇಟಿ ನೀಡಿದ್ದೇನೆ. ಪ್ರಕೃತಿಯ ದೃಷ್ಟಿಯಿಂದ ಹಲವು ನಗರಗಳು ಅದ್ಭುತವಾಗಿವೆ. ಆದರೆ ಬೆಂಗಳೂರಿನಲ್ಲಿ ಎಲ್ಲವೂ ಇದೆ ಎಂದು ಹೊಗಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಇಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳಿವೆ. ಇನ್ನು ಇಲ್ಲಿನ ಹವಾಮಾನವಂತೂ ಬಹಳ ಅದ್ಭುತವಾಗಿದೆ. ಹೌದು, ನಗರದಲ್ಲಿ ಟ್ರಾಫಿಕ್ ಸಮಸ್ಯೆ ಸ್ವಲ್ಪ ಇದೆ, ಆದರೆ ಪರವಾಗಿಲ್ಲ. ಇಲ್ಲಿನ ಹವಾಮಾನ ಎಷ್ಟು ಚೆನ್ನಾಗಿದೆ ಎಂದರೆ, ನಿಮಗೆ ಎಲ್ಲವೂ ಇಷ್ಟವಾಗಲು ಶುರುವಾಗುತ್ತದೆ. ನನ್ನ ಪ್ರಕಾರ ಬೆಂಗಳೂರಿಗೆ ಐದಕ್ಕೆ ಐದು (5/5) ರೇಟಿಂಗ್ ನೀಡುತ್ತೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಈ ವಿಡಿಯೋ ಜಾಲತಾಣಗಳಲ್ಲಿ ಅಪ್‌ಲೋಡ್ ಆದ ಬೆನ್ನಲ್ಲೇ ಭಾರಿ ಚರ್ಚೆ ಸೃಷ್ಟಿಸಿದೆ. ಕೇವಲ ಕಷ್ಟಗಳನ್ನೇ ಚರ್ಚಿಸುವ ಇಂಟರ್ನೆಟ್ ಜಗತ್ತಿನಲ್ಲಿ, ಬೆಂಗಳೂರಿನ ಸಕಾರಾತ್ಮಕ ಮತ್ತು ಸುಂದರವಾದ ಮುಖವನ್ನು ಪರಿಚಯಿಸಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, ಬೆಂಗಳೂರಿನ ಹವಾಮಾನ ನಗರದ ಎಲ್ಲಾ ಕೆಡುಕುಗಳನ್ನು ಮರೆಮಾಚುವಷ್ಟು ಸೊಗಸಾಗಿದೆ ಎಂದಿದ್ದಾರೆ. ಮತ್ತೊಬ್ಬರು, ನಗರಕ್ಕೆ ತನ್ನದೇ ಆದ ಒಂದು ವೈಬ್ ಇದೆ ನಿಜ, ಆದರೆ ಇಲ್ಲಿನ ಟ್ರಾಫಿಕ್ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ. ಇಲ್ಲಿ ವಾಸ ಮಾಡಿದವರಿಗೆ ಮಾತ್ರ ಬೆಂಗಳೂರಿನ ಮೇಲಿರುವ ಈ ಪ್ರೀತಿ ಅರ್ಥವಾಗುತ್ತದೆ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ಕೆಲಸದ ಒತ್ತಡ ಮತ್ತು ನಿತ್ಯದ ಜಂಜಾಟದ ನಡುವೆಯೂ ನಮ್ಮ ಹೆಮ್ಮೆಯ ಬೆಂಗಳೂರು ತನ್ನ ಹಸಿರು ಮತ್ತು ಹವಾಮಾನದಿಂದ ಜನರ ಹೃದಯ ಗೆಲ್ಲುತ್ತಲೇ ಇರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇತಿಹಾಸದಲ್ಲೇ ಮೊದಲು… ಟೀಮ್ ಇಂಡಿಯಾ ಕ್ಯಾಪ್ಟನ್ ಹೆಗಲಿಗೆ ಬೇಡದ ದಾಖಲೆ! – Kannada News | Team India Captain Shreyas Iyer Creates unwanted Record

ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್​ನಲ್ಲಿ ಈವರೆಗೆ 15 ನಾಯಕರುಗಳು ಮುನ್ನಡೆಸಿದ್ದಾರೆ. ಈ ಹದಿನೈದು ನಾಯಕರುಗಳಲ್ಲಿ ಹದಿನಾಲ್ಕು ಕ್ಯಾಪ್ಟನ್​ಗಳು ಬರೆಯದ ಅನಗತ್ಯ ದಾಖಲೆಯೊಂದು ಶ್ರೇಯಸ್ ಅಯ್ಯರ್ ಪಾಲಾಗಿದೆ. ಅದು ಸಹ ಸೋಲುಗಳೊಂದಿಗೆ..!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳ ಸೋಲನ್ನು ಅನುಭವಿಸಿದೆ. ಇದರೊಂದಿಗೆ ನಾಯಕ ಶ್ರೇಯಸ್ ಅಯ್ಯರ್ ಅವರ ಗೆಲುವಿನ ಕಾಯುವಿಕೆ ಮತ್ತಷ್ಟು ಸುದೀರ್ಘವಾಗಿದೆ.

ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಆರಂಭದ ನಾಲ್ಕೂ ಪಂದ್ಯಗಳಲ್ಲಿ ಒಂದೂ ಜಯ ಕಾಣದ ಭಾರತದ ಮೊದಲ ಕ್ಯಾಪ್ಟನ್ ಎಂಬ ನಿರಾಶಾದಾಯಕ ದಾಖಲೆಗೆ ಅಯ್ಯರ್ ಪಾತ್ರರಾಗಿದ್ದಾರೆ.

ಸೋಲಿನ ಮೇಲೆ ಸೋಲು:

ಶ್ರೇಯಸ್ ಅಯ್ಯರ್ ನಾಯಕನಾಗಿ ಪಾದರ್ಪಣೆ ಮಾಡಿದ ಮೊದಲ ಸರಣಿಯಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿತ್ತು. ಐರ್ಲೆಂಡ್ ವಿರುದ್ಧ ನಡೆದ 2 ಪಂದ್ಯಗಳ ಈ ಸರಣಿಯಲ್ಲಿ 2-0 ಅಂತರದಿಂದ ಸೋತು ಭಾರತ ತಂಡ ಭಾರೀ ಮುಖಭಂಗ ಅನುಭವಿಸಿತ್ತು.

ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಮ್ಯಾಚ್ ಮಳೆಗೆ ಆಹುತಿಯಾಗಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿದೆ. ಅಂದರೆ ಶ್ರೇಯಸ್ ನಾಯಕತ್ವದಲ್ಲಿ ಭಾರತ ಆಡಿದ ಮೊದಲ 4 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಸಾಧ್ಯವಾಗಿಲ್ಲ.

‘ಅನಪೇಕ್ಷಿತ’ ದಾಖಲೆ ಪಟ್ಟಿ:

ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ದೇಶಗಳ ಪೈಕಿ, ತಮ್ಮ ನಾಯಕತ್ವದ ಮೊದಲ 4 ಟಿ20 ಪಂದ್ಯಗಳಲ್ಲಿ ಒಂದೂ ಗೆಲುವು ಕಾಣದ 9ನೇ ನಾಯಕರಾಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿರುವ ಇತರ ಪ್ರಮುಖ ನಾಯಕರುಗಳೆಂದರೆ…

  • ಶಾಕಿಬ್ ಅಲ್ ಹಸನ್ (ಬಾಂಗ್ಲಾದೇಶ್)
  • ಎಲ್ಟನ್ ಚಿಗುಂಬುರಾ (ಝಿಂಬಾಬ್ವೆ)
  • ಬ್ರೆಂಡನ್ ಟೇಲರ್ (ಝಿಂಬಾಬ್ವೆ)
  • ತಿಸಾರ ಪೆರೇರಾ (ಶ್ರೀಲಂಕಾ)
  • ಮಹಮುದುಲ್ಲಾ (ಬಾಂಗ್ಲಾದೇಶ್)
  • ಮ್ಯಾಥ್ಯೂ ವೇಡ್ (ಆಸ್ಟ್ರೇಲಿಯಾ)
  • ಶಾಹೀನ್ ಶಾ ಅಫ್ರಿದಿ (ಪಾಕಿಸ್ತಾನ್)
  • ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)
  • ಶ್ರೇಯಸ್ ಅಯ್ಯರ್ (ಭಾರತ)

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಟೀಮ್ ಇಂಡಿಯಾ ಪರ ನಾಯಕರೊಬ್ಬರು ಪಾದಾರ್ಪಣೆ ಬೆನ್ನಲ್ಲೇ ಸತತ ಮೂರು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲು. ಅಂದರೆ ಅಯ್ಯರ್ ಕ್ಯಾಪ್ಟನ್ ಆದ ಬಳಿಕ ಟೀಮ್ ಇಂಡಿಯಾ ಸತತ ಮೂರು ಮ್ಯಾಚ್​ಗಳಲ್ಲೂ ಪರಾಜಯಗೊಂಡಿದೆ.

ಅಲ್ಲದೆ 2021ರ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಸತತವಾಗಿ ಮೂರು ಟಿ20 ಪಂದ್ಯಗಳನ್ನು ಸೋತಿದೆ. ಈ ಸೋಲುಗಳಿಂದ ಶ್ರೇಯಸ್ ಅಯ್ಯರ್ ಪಡೆ ಭಾರೀ ನಿರಾಶೆ ಎದುರಿಸಿದ್ದು ಮಾತ್ರವಲ್ಲದೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆ ಅನುಭವಿಸಿದೆ.

ಇದನ್ನೂ ಓದಿ: ಆಟವಲ್ಲ… ಹೊಡೆದಾಟ… ಕೈಕೈ ಮಿಲಾಯಿಸಿದ  ಫ್ರಾನ್ಸ್ vs ಪರಾಗ್ವೆ ಆಟಗಾರರು!

ಈ ಸರಣಿಯಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಟ್ರೋಫಿ ಗೆಲ್ಲುವ ಆಶಯವನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ತಂಡವು ಮುಂದಿನ ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಕಂಬ್ಯಾಕ್ ಅನ್ನು ನಿರೀಕ್ಷಿಸಬಹುದು.

Source link

ಮಹಿಳೆಯ ಆಭರಣಗಳನ್ನು ಕದ್ದು ಆಕೆಯನ್ನು ಬಾವಿಗೆ ತಳ್ಳಿದ ಕಳ್ಳ, 21 ಗಂಟೆಗಳ ಬಳಿಕ ಬದುಕಿ ಬಂದ ಧೀರ ಮಹಿಳೆ – Kannada News | Woman Survives 21 Hours in Well After Robbery: Karimnagar’s Lakshmi Defies Death

ಕರೀಂನಗರ, ಜುಲೈ 05: ಕಳ್ಳನೊಬ್ಬ ಒಡವೆ, ಹಣ ದೋಚಿ ಸಾಕ್ಷಿ ನಾಶಪಡಿಸಲು 55 ವರ್ಷದ ಮಹಿಳೆಯೊಬ್ಬರನ್ನು ಕೃಷಿ ಬಾವಿ(Well)ಗೆ ತಳ್ಳಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಸಾವಿನ ದವಡೆಯಿಂದ ಪಾರಾದ ಮಹಿಳೆ ಸುಮಾರು 21 ಗಂಟೆಗಳ ಕಾಲ ಬಾವಿಯಲ್ಲೇ ಹೋರಾಟ ನಡೆಸಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಆಕೆಯ ಧೈರ್ಯದಿಂದಾಗಿ ಪೊಲೀಸರು 21 ವರ್ಷದ ಆರೋಪಿ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲಸದ ಆಮಿಷ ಒಡ್ಡಿ ದರೋಡೆ
ದಿನಗೂಲಿ ಕಾರ್ಮಿಕರಾದ ತಂಗರಾಲ ಲಕ್ಷ್ಮೀ ಎಂಬುವವರು ಜುಲೈ 1 ರಂದು ಕೆಲಸಕ್ಕೆ ಹೋಗಿ ಮನೆಗೆ ಮರಳದಿದ್ದಾಗ, ಅವರ ಮಗ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಕರಾಳ ಸತ್ಯ ಹೊರಬಿದ್ದಿದೆ. ಆರೋಪಿ ಧಮ್ಮ ದಿನೇಶ್ ರೆಡ್ಡಿ (21) ಎಂಬಾತ ಲಕ್ಷ್ಮೀಗೆ ತನ್ನ ಜಮೀನಿನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ, ಮೊದಲು ರಾಪಿಡೋ ಬೈಕ್‌ನಲ್ಲಿ ಹಾಗೂ ನಂತರ ತನ್ನದೇ ಬೈಕ್‌ನಲ್ಲಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಲಕ್ಷ್ಮೀಯನ್ನು ಹೆದರಿಸಿ ಅವರಲ್ಲಿದ್ದ 5 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯ ಕಾಲ್ಗೆಜ್ಜೆ ಹಾಗೂ ನಗದನ್ನು ದೋಚಿದ್ದ.

ಸಾಕ್ಷಿ ನಾಶಕ್ಕೆ ಸಂಚು, ಹಗ್ಗ ಕತ್ತರಿಸಿದ ಪಾಪಿ
ದರೋಡೆ ಮಾಡಿದ ನಂತರ ಯಾರೂ ತನ್ನನ್ನು ಕಂಡುಹಿಡಿಯಬಾರದೆಂದು ಆರೋಪಿ ದಿನೇಶ್ ರೆಡ್ಡಿ ಆಕೆಯನ್ನು ಆಳವಾದ ಕೃಷಿ ಬಾವಿಗೆ ತಳ್ಳಿದ್ದಾನೆ. ಬಾವಿಗೆ ಬಿದ್ದ ತಕ್ಷಣ ಲಕ್ಷ್ಮೀ ಅಲ್ಲಿದ್ದ ಹಗ್ಗವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕ್ರೂರಿ ಆರೋಪಿ, ಆಕೆ ಹೇಗೊ ಬದುಕುಳಿಯಬಾರದು ಎಂದು ಆ ಹಗ್ಗವನ್ನೂ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದ.

ಮತ್ತಷ್ಟು ಓದಿ: ಮಂಗಳೂರಿನಲ್ಲಿ ಮಹಾ ಅಚ್ಚರಿ: ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್, ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು!

ಸಾವು ಗೆದ್ದ ಈಜು ಮತ್ತು ಧೈರ್ಯ
ಲಕ್ಷ್ಮೀ ಅವರಿಗೆ ಈಜು ಬರುತ್ತಿದ್ದ ಕಾರಣ ಬಾವಿಯ ನೀರಿನಲ್ಲಿ ತೇಲುತ್ತಾ, ಮೋಟಾರ್ ಪೈಪ್‌ಲೈನ್‌ಗೆ ಜೋಡಿಸಲಾಗಿದ್ದ ಮತ್ತೊಂದು ಕೇಬಲ್ ವೈರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿರ್ಜನ ಪ್ರದೇಶವಾದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಹಾಗಾಗಿ ಇಡೀ ರಾತ್ರಿ ಕತ್ತಲಲ್ಲಿ, ಕೇವಲ ಆ ಕೇಬಲ್ ವೈರ್ ಆಸರೆಯಲ್ಲಿ ಸುಮಾರು 20 ರಿಂದ 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದರು. ಮರುದಿನ ಬೆಳಗ್ಗೆ ಸ್ಥಳೀಯ ರೈತರು ಬಾವಿಯಿಂದ ಶಬ್ದ ಕೇಳಿ ಆಕೆಯನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

ಕರೀಂನಗರ ಪೊಲೀಸ್ ಆಯುಕ್ತ ಗೌಸ್ ಆಲಂ ನೇತೃತ್ವದ ವಿಶೇಷ ತಂಡವು ರಾಪಿಡೋ ಬುಕಿಂಗ್, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ತಾಂತ್ರಿಕ ತನಿಖೆ ನಡೆಸಿ ಆರೋಪಿ ಧಮ್ಮ ದಿನೇಶ್ ರೆಡ್ಡಿಯನ್ನು ಬಂಧಿಸಿದೆ. 21 ವರ್ಷದ ಈ ಕಾಲೇಜು ವಿದ್ಯಾರ್ಥಿ ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ. ಆ ಸಾಲ ತೀರಿಸಲು ಈ ದರೋಡೆ ಹಾಗೂ ಕೊಲೆ ಯತ್ನದ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕದ್ದ ಒಡವೆಗಳನ್ನು ಖರೀದಿಸಿದ ಆಭರಣ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸಂಪರ್ಕ ಸೇತುವೆಗಳು ಜಲಾವೃತ – Kannada News | Maharashtra Rain Fury: Three Key Connecting Bridges Submerged in Belagavi’s Nippani Amid Rising River Levels

ಬೆಳಗಾವಿ, ಜುಲೈ 05: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಆರ್ಭಟ ಹಿನ್ನೆಲೆ ನಿಪ್ಪಾಣಿ ತಾಲೂಕಿನಲ್ಲಿ ಮೂರು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಿದೆ. ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾರವಾಡ-ಕನ್ನೂರ, ಬೋಜವಾಡಿ-ಗಜವರವಾಡಿ ಸೇತುವೆಗಳೂ ಸಂಪೂರ್ಣ ಜಲಾವೃತವಾಗಿವೆ. ಮಹಾರಾಷ್ಟ್ರದಲ್ಲಿರುವ ರಾಜಾಪುರ-ಜುಗಳ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದು, ಉಕ್ಕಿ ಹರಿಯುತ್ತಿರುವ ನದಿಗಳಿಗೆ ಯಾರೂ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇತನ್ ಅಗರ್ವಾಲ್ ಕೊಲೆಯಾಗಿ 16 ದಿನದೊಳಗೆ ‘ಬ್ರೋಕನ್ ಹಾರ್ಟ್​ ಸಿಂಡ್ರೋಮ್​’ಗೆ ಅಜ್ಜ ದೇವಿಚಂದ್ ಬಲಿ – Kannada News | Pune Tragedy: Ketan Agarwal Murder and Grandfather’s Broken Heart Syndrome Death

ಪುಣೆ, ಜುಲೈ 05: ತೀವ್ರ ಭಾವನಾತ್ಮಕ ಆಘಾತ ಮನುಷ್ಯನ ಜೀವಕ್ಕೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಪುಣೆಯ ಉದ್ಯಮಿ ಕುಟುಂಬದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಜೂನ್ 18ರಂದು ಅನುಮಾನಾಸ್ಪದವಾಗಿ  ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಮೃತಪಟ್ಟ ಕೇವಲ 16 ದಿನಗಳ ಅಂತರದಲ್ಲಿ, ಅವರ ಅಜ್ಜ ದೇವಿಚಂದ್ ಅಗರ್ವಾಲ್ (71) ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೊಮ್ಮಗನ ಅಕಾಲಿಕ ಸಾವಿನ ಆಘಾತವನ್ನು ತಡೆಯಲಾರದೆ ಅವರು ಮೃತಪಟ್ಟಿರುವುದು ಇಡೀ ಕುಟುಂಬವನ್ನು ಮತ್ತಷ್ಟು ಕಣ್ಣೀರಿನಲ್ಲಿ ಮುಳುಗಿಸಿದೆ.

‘ಬ್ರೋಕನ್ ಹಾರ್ಟ್ ಸಿಂಡ್ರೋಮ್‌’ಗೆ ಬಲಿಯಾದ ಅಜ್ಜ
ಕುಟುಂಬದ ಸದಸ್ಯರ ಪ್ರಕಾರ, ಮೊಮ್ಮಗ ಕೇತನ್ ಅಗರ್ವಾಲ್ ನಿಧನರಾದ ದಿನದಿಂದಲೂ 71 ವರ್ಷದ ದೇವಿಚಂದ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇತ್ತೀಚೆಗಷ್ಟೇ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರೀತಿಯ ಮೊಮ್ಮಗ ಇನ್ನು ನೆನಪು ಮಾತ್ರ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಅವರು, ವೈದ್ಯಕೀಯ ಭಾಷೆಯಲ್ಲಿ ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’ ಎಂಬ ಸ್ಥಿತಿಗೆ ತಲುಪಿದ್ದರು. ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶನಿವಾರ ರಾತ್ರಿ 9.45 ಕ್ಕೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ದೇವಿಚಂದ್ ಅವರ ನಿಧನದ ನಂತರ ಅವರ ಪುತ್ರ ವಿಶಾಲ್ ಅಗರ್ವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಿಸ್ ಯು ಡ್ಯಾಡ್ ಎಂದು ಬರೆದು ತಮ್ಮ ತಂದೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮತ್ತಷ್ಟು ಓದಿ: ಕೇತನ್ ಅಗರ್ವಾಲ್ ಕೊಲೆ ಪ್ರಕರಣ; ಸಿಯಾ ಗೋಯಲ್, ಚೇತನ್‌ ಜುಲೈ 3ರವರೆಗೆ ಪೊಲೀಸ್ ವಶಕ್ಕೆ

ಕೇತನ್ ಸಾವು: ಅಪಘಾತವೋ? ಕೊಲೆಯೋ?
ಜೂನ್ 18, 2026 ರಂದು ಪುಣೆಯ ಲೋಹಗಢ ಕೋಟೆಯಿಂದ ಬಿದ್ದು ಕೇತನ್ ಅಗರ್ವಾಲ್ ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಕೇವಲ ಒಂದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ದಿನ ಕಳೆದಂತೆ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಇತರರು ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದೆ.

ಒಂದೆಡೆ ಕೈಗೆ ಬಂದಿದ್ದ ಮಗನ ನಿಗೂಢ ಸಾವು, ಮತ್ತೊಂದೆಡೆ ಹಿರಿಯ ಜೀವದ ವಿಯೋಗ ಹೀಗೆ ಕೇವಲ ಎರಡು ವಾರಗಳ ಅಂತರದಲ್ಲಿ ಇಬ್ಬರು ಪ್ರೀತಿಪಾತ್ರರನ್ನು ಕಳೆದುಕೊಂಡ ಅಗರ್ವಾಲ್ ಕುಟುಂಬದ ದುಃಖವನ್ನು ನೋಡಿ ಇಡೀ ಪುಣೆ ನಗರವೇ ಕಂಬನಿ ಮಿಡಿಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಜನರು ಈ ದುರಂತಕ್ಕೆ ಸಂತಾಪ ಸೂಚಿಸುತ್ತಿದ್ದು, ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ಟಾರ್ಚರ್​​: ಕಾಡಿನ ಮಕ್ಕಳಿಗೆ ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆಯಿಂದ ಕಿರುಕುಳ ಆರೋಪ – Kannada News | Chamarajanagar: Soliga Tribals Allege Harassment by Forest Officials for Lodging Lokayukta Complaint

ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆಯಿಂದ ಕಿರುಕುಳ ಆರೋಪImage Credit source: Tv9 Kannada

ಚಾಮರಾಜನಗರ, ಜುಲೈ 05: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಆರ್​​ಎಫ್​​ಒ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಾಲಾರ್ ಹಾಡಿಯ ಆದಿವಾಸಿ ಸೋಲಿಗರಿಗೆ ಕಳೆದ ಒಂದು ವರ್ಷದಿಂದ ಮನೆ ಕಟ್ಟಿಕೊಳ್ಳಲು ಬಿಡದೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಇಲಾಖೆ ಸಿಬ್ಬಂದಿ ಅಂಧಾ ದರ್ಬಾರ್ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸಂಸದರು, ಜಿಲ್ಲಾಧಿಕಾರಿಗಳ ಸೂಚನೆಗೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಮಗೆ ನ್ಯಾಯ ಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಒಂದು ಮನೆಗೆ 1 ಸಾವಿರದಂತೆ 18 ಮನೆಗೆ 18 ಸಾವಿರ ರೂಪಾಯಿ ಹಣವನ್ನು ಡಿಆರ್​​ಎಫ್​​ಒ ಭೋಜಪ್ಪ ವಸೂಲಿ ಮಾಡಿದ್ದರಂತೆ. ಈ ಸಂಬಂಧ ಸೋಲಿಗ ಮುಖಂಡ ನಾಗೇಂದ್ರ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ರೆಡ್ ಹ್ಯಾಂಡ್ ಆಗಿ ಭೋಜಪ್ಪರನ್ನು ಲೋಕಾಯುಕ್ತ ಅಧಿಕಾರಿಗಳು ಲಾಕ್ ಮಾಡಿದ್ದರು. ಬಳಿಕ ಪ್ರಕರಣ ಸಂಬಂಧ ಅವರನ್ನು ಅಮಾನತು ಕೂಡ ಮಾಡಲಾಗಿತ್ತು. ಇದೇ ಕಾರಣಕ್ಕೆ ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆ ಸಿಬ್ಬಂದಿ ಹಿಂಸೆ ನೀಡುತ್ತಿದ್ದಾರೆ. ಲೋಕಾಯುಕ್ತದಲ್ಲಿ ಕೇಸ್ ನಡೆಯುತ್ತಿದೆ. ಹೀಗಾಗಿ ನೀವು ಮನೆ ಕಟ್ಟುವಂತಿಲ್ಲವೆಂದು ಧಮ್ಕಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಲೋಕಾಯುಕ್ತ ಕೇಸ್​​ಗೂ ಮನೆ ಕಟ್ಟೋಕು ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿಯವರದ್ದು.

ಇದನ್ನೂ ಓದಿ: ಮೂರ್ನಾಲ್ಕು ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ

ಸಂಸದರ ಸೂಚನೆಗೂ ಇಲ್ಲ ಕಿಮ್ಮತ್ತು!

ಹಾಡಿ ಜನತೆಗೆ ತೊಂದರೆ ಕೊಡದಂತೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಸಂಸದ ಸುನೀಲ್ ಬೋಸ್ ಸೂಚಿಸಿದ್ದು, ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದ್ದರು. ಹೀಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಯ ಕಿರುಕುಳ ಮಾತ್ರ ತಪ್ಪಿಲ್ಲ. ಹಕ್ಕು ಪತ್ರ ಹೊಂದಿದ್ದರೂ ಮನೆ ಕಟ್ಟಲು ಬಿಡದೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ದೂರಲಾಗಿದೆ. ಫಾರೆಸ್ಟ್ ಗಾರ್ಡ್ ಚಂದ್ರು ನಿರಂತರ ಕಾಟ ಕೊಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಕಾಡಿನ ಮಕ್ಕಳು ಗಾಳಿ, ಮಳೆ, ಚಳಿಗೆ ತತ್ತರಿಸಿ ಹೋಗಿದ್ದು, ಸುಭದ್ರ ಸೂರು ನಿರ್ಮಿಸಿಕೊಳ್ಳಲು ಇನ್ನಾದರೂ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:13 am, Sun, 5 July 26

Source link

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್: ಹೆಡ್‌ಲೈಟ್ ಇಲ್ಲದೆ 90 ಕಿ.ಮೀ ಪ್ರಯಾಣ! – Kannada News | KKRTC Driver Uses Mobile Torch to Navigate Bus for 90KM, Raising Safety Concerns

ಕಲಬುರಗಿ, ಜುಲೈ 05: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದರ ಡ್ರೈವರ್ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಓಡಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿಯಿಂದ ಚಿಂಚೋಳಿ ಮಾರ್ಗದಲ್ಲಿ ಸಂಚರಿಸುವ ಈ ಬಸ್‌ನಲ್ಲಿ ಕಂಡಕ್ಟರ್ ಮೊಬೈಲ್ ಟಾರ್ಚ್ ಹಿಡಿದರೆ, ಡ್ರೈವರ್​​ ಬಸ್​​ ಚಲಾಯಿಸಿದ್ದಾರೆ. ಕಳೆದ 15 ದಿನಗಳಿಂದ ಈ ಬಸ್‌ನ ಹೆಡ್‌ಲೈಟ್‌ಗಳು ಕೆಟ್ಟು ಹೋಗಿದ್ದರೂ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅದನ್ನು ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ. ಕಲಬುರಗಿಯಿಂದ ಚಿಂಚೋಳಿ 90 ಕಿಲೋ ಮೀಟರ್​​ ದೂರವಿದ್ದು, ರಾತ್ರಿ ವೇಳೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಓಡಿಸುವುದು ಪ್ರಯಾಣಿಕರ ಜೀವಕ್ಕೆ ಆಪತ್ತು ತಂದಿದೆ. ಸಾರಿಗೆ ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಎದುರಾಗಿದೆ.ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿ: ಬಯಲಾಯ್ತು ಆರೋಪಿಗಳ ಭ್ರಷ್ಟಾಚಾರ – Kannada News | Ayodhya Ram Mandir Donation Scam: SIT Exposes Crores in Fraud and Corruption

ಅಯೋಧ್ಯಾ, ಜುಲೈ 05: ಅಯೋಧ್ಯೆಯ ಶ್ರೀರಾಮ ಮಂದಿರ(Ram Mandir)ದ  ದೇಣಿಗೆ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪಿಗಳ ಆರ್ಥಿಕ ಸ್ಥಿತಿಯಲ್ಲಿ ದಿಢೀರ್ ಭಾರಿ ಏರಿಕೆ ಕಂಡುಬಂದಿದೆ. ವಿಶೇಷ ತನಿಖಾ ತಂಡದ (SIT) ವರದಿಯ ಪ್ರಕಾರ, ತಿಂಗಳಿಗೆ ಕೇವಲ 14,000 ರೂ.ನಿಂದ 15,000 ರೂ. ಆದಾಯ ಹೊಂದಿದ್ದ ಸಾಮಾನ್ಯ ನೌಕರರು ಈಗ ಐಷಾರಾಮಿ ಬಂಗಲೆಗಳನ್ನು ನಿರ್ಮಿಸಿ, ಎಸ್‌ಯುವಿ (SUV) ಕಾರುಗಳಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

ಅವಿನಾಶ್ ಶುಕ್ಲಾ: ಆರಂಭದಲ್ಲಿ ಹನುಮಾನ್ ಗುಫಾ ಬಳಿ ಕುಡಿಯುವ ನೀರು ಮಾರುತ್ತಿದ್ದ ಈತ, ನಂತರ ದೇವಸ್ಥಾನದ ದೇಣಿಗೆ ಎಣಿಕೆ ಕೇಂದ್ರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಪ್ರತಾಪ್‌ಗಢ ಮೂಲದ ಈತ ಅಯೋಧ್ಯೆಯಲ್ಲಿ ದೊಡ್ಡ ಮನೆ ಕಟ್ಟುತ್ತಿದ್ದು, ಶನಿವಾರ ರಾತ್ರಿ ಪೊಲೀಸರು ಈತನಿಗೆ ಸೇರಿದ ಮಾರುತಿ ಬ್ರೆಝಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಲವ್‌ಕುಶ್ ಮಿಶ್ರಾ: ಈತ ಕಳೆದ ವರ್ಷ ಅಕ್ಟೋಬರ್‌ನಲ್ಲಿ 1,000 ಚದರ ಅಡಿಯ ಜಮೀನನ್ನು ಕೇವಲ 8.8 ಲಕ್ಷ ರೂ.ಗೆ ಖರೀದಿಸಿದ್ದಾಗಿ ದಾಖಲೆ ಸೃಷ್ಟಿಸಿದ್ದ. ಆದರೆ ಸ್ಥಳೀಯರ ಪ್ರಕಾರ ಆ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 24 ರಿಂದ 25 ಲಕ್ಷ ರೂ. ಆಗಿದೆ. ಈ ನಿಧಿಯ ಮೂಲದ ಬಗ್ಗೆ ತನಿಖೆ ನಡೆಯುತ್ತಿದ್ದು, ಈತನ ಪತ್ನಿಗೂ ನೋಟಿಸ್ ಜಾರಿಯಾಗಿದೆ.

ರಾಮಶಂಕರ್ ಯಾದವ್ (ಟಿನ್ನು): ಆರಂಭದಲ್ಲಿ ಚಾಲಕನಾಗಿದ್ದ ಈತ, ಈಗ ದೊಡ್ಡ ಹಾಸ್ಟೆಲ್ ಅನ್ನೇ ನಿರ್ಮಿಸಿದ್ದಾನೆ.

ದಿನಕ್ಕೆ 6 ರಿಂದ 8 ಲಕ್ಷ ರೂ. ಲೂಟಿ
ಪ್ರಕರಣ ಬೆಳಕಿಗೆ ಬರುವ ಮುನ್ನ ದೇವಸ್ಥಾನದ ಬ್ಯಾಂಕ್ ಖಾತೆಗಳಿಗೆ ದಿನಕ್ಕೆ ಸರಾಸರಿ 16 ರಿಂದ 18 ಲಕ್ಷ ರೂ. ಜಮಾ ಆಗುತ್ತಿತ್ತು. ಆದರೆ ಅಕ್ರಮ ಪತ್ತೆಯಾದ ನಂತರ ಈ ಮೊತ್ತ ದಿನಕ್ಕೆ 24 ರಿಂದ 26 ಲಕ್ಷ ರೂ.ಗೆ ಏರಿಕೆಯಾಗಿದೆ. ಬ್ಯಾಂಕ್ ಅಂಕಿ-ಅಂಶಗಳ ಆಧಾರದ ಮೇಲೆ, ಆರೋಪಿಗಳು ಪ್ರತಿದಿನ ದೇವಸ್ಥಾನದ ಕಾಣಿಕೆಯಲ್ಲಿ 6 ರಿಂದ 8 ಲಕ್ಷ ರೂಪಾಯಿಗಳನ್ನು ವಂಚಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ; 8 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ

ಸಾಕ್ಸ್ ಮತ್ತು ಜೇಬಿನಲ್ಲಿ ಹಣ ಕಳ್ಳಸಾಗಣೆ
ದೇಣಿಗೆ ಎಣಿಕೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎಂಟು ಆರೋಪಿಗಳ ಪೈಕಿ ಐವರು ಅನುಮಾನಾಸ್ಪದವಾಗಿ ಹಣವನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಕೆಲವರು ಸಿಸಿಟಿವಿ ಕ್ಯಾಮೆರಾಗಳನ್ನು ಮರೆಮಾಚುತ್ತಿದ್ದರು. ಎಣಿಕೆ ಸಿಬ್ಬಂದಿಗೆ ಜೇಬಿಲ್ಲದ ಬಟ್ಟೆಗಳನ್ನು ಧರಿಸಬೇಕು ಎಂಬ ನಿಯಮವಿದ್ದರೂ ಅದನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು. ಆರೋಪಿಗಳು ನೋಟುಗಳನ್ನು ತಮ್ಮ ಜೇಬು ಹಾಗೂ ಸಾಕ್ಸ್‌ಗಳಲ್ಲಿ ಅಡಗಿಸಿ, ದೇವಸ್ಥಾನದ ಶೌಚಾಲಯಗಳಲ್ಲಿ ಬಚ್ಚಿಡುತ್ತಿದ್ದರು. ನಂತರ ಅದನ್ನು ಸಣ್ಣ ಸಣ್ಣ ಭಾಗಗಳಲ್ಲಿ ಹೊರಗೆ ಸಾಗಿಸುತ್ತಿದ್ದರು.

ಮಹಾಕುಂಭದ ವೇಳೆ ಗರಿಷ್ಠ ಕಳ್ಳತನ
ದೇವಸ್ಥಾನಕ್ಕೆ ದಿನಕ್ಕೆ ಸರಾಸರಿ 80,000 ದಿಂದ 1 ಲಕ್ಷ ಭಕ್ತರು ಬರುತ್ತಾರೆ. ಆದರೆ ಮಹಾಕುಂಭ ಮೇಳದ 45 ದಿನಗಳಲ್ಲಿ ಈ ಸಂಖ್ಯೆ ದಿನಕ್ಕೆ 10 ರಿಂದ 12 ಲಕ್ಷಕ್ಕೆ ಏರಿತ್ತು. ಆಗ ಕಾಣಿಕೆ ಎಣಿಸಲು ವಾರಾಣಸಿ ಮೂಲದ ಏಜೆನ್ಸಿಯಿಂದ 40-45 ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಯಿತು. ಇವರಲ್ಲಿ ಹಲವರನ್ನು ಕೆಲವೇ ಕೆಲವು ಟ್ರಸ್ಟ್ ಸದಸ್ಯರು ಶಿಫಾರಸು ಮಾಡಿದ್ದರು. ಇದೇ ಅವಧಿಯಲ್ಲಿ ಗರಿಷ್ಠ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ.

ಚಿನ್ನ-ಬೆಳ್ಳಿಗೂ ಇರಲಿಲ್ಲ ಲೆಕ್ಕ
ಭಕ್ತರು ನೀಡುತ್ತಿದ್ದ ಚಿನ್ನ, ಬೆಳ್ಳಿ ಮತ್ತು ಆಭರಣಗಳ ದೇಣಿಗೆಗೆ ಯಾವುದೇ ವ್ಯವಸ್ಥಿತ ಲೆಕ್ಕಪತ್ರ ಇರಲಿಲ್ಲ. ಇದು ಕಳ್ಳರಿಗೆ ಮತ್ತಷ್ಟು ಸುಲಭವಾಯಿತು. ಸದ್ಯ ಟ್ರಸ್ಟ್ ಮೊದಲ ಹಂತದಲ್ಲಿ ಪರೀಕ್ಷೆಗಾಗಿ 944 ಕೆಜಿ (9.44 ಕ್ವಿಂಟಾಲ್) ಬೆಳ್ಳಿಯನ್ನು ಸರ್ಕಾರಿ ಟಂಕಸಾಲೆಗೆ ಕಳುಹಿಸಿದೆ. ಎಸ್‌ಐಟಿ ತಂಡವು ಆಭರಣ ದೇಣಿಗೆಗಳ ಸಂಪೂರ್ಣ ದಾಖಲೆಗಳನ್ನು ಮತ್ತು ಭಾರತೀಯ ಮುದ್ರಣ ಹಾಗೂ ನಾಣ್ಯ ತಯಾರಿಕೆ ನಿಗಮದೊಂದಿಗೆ ನಡೆದ ವಹಿವಾಟಿನ ವಿವರಗಳನ್ನು ಕೋರಿದೆ.

ದೇವಸ್ಥಾನಕ್ಕೆ ಅಪಖ್ಯಾತಿ ಬರುತ್ತದೆ ಎಂಬ ಕಾರಣಕ್ಕೆ ಆರಂಭದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಲೂಟಿ ಮಾಡಿದ ಸ್ವತ್ತನ್ನು ವಶಪಡಿಸಿಕೊಳ್ಳಲಾಯಿತಾದರೂ, ಯಾವುದೇ ಎಫ್‌ಐಆರ್ (FIR) ದಾಖಲಿಸಿರಲಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಟವಲ್ಲ… ಹೊಡೆದಾಟ… ಕೈಕೈ ಮಿಲಾಯಿಸಿದ  ಫ್ರಾನ್ಸ್ vs ಪರಾಗ್ವೆ ಆಟಗಾರರು! – Kannada News | Huge Fight Between France and Paraguay Players in FIFA World Cup 2026

ಫಿಫಾ ವಿಶ್ವಕಪ್​ 2026ರ ನಾಕೌಟ್ ಹಂತದ ಪಂದ್ಯದಲ್ಲಿ ಅಹಿತಕರ ಘಟನೆ ನಡೆದಿದೆ. ಫಿಲಡೆಲ್ಫಿಯಾದ ಲಿಂಕನ್ ಫೈನಾನ್ಷಿಯಲ್ ಫೀಲ್ಡ್ ಮೈದಾನದಲ್ಲಿ ನಡೆದ ಪ್ರಿ-ಕ್ವಾರ್ಟರ್​ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಪರಾಗ್ವೆ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ ಮುಗಿಯುತ್ತಿದ್ದಂತೆ ಮೈದಾನದಲ್ಲೇ ಆಟಗಾರರು ರಣರಂಗ ಸೃಷ್ಟಿಸಿದರು.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಫ್ರಾನ್ಸ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಅಲ್ಲದೆ ಅಂತಿಮ ವಿಸ್ಲ್ ಮೊಳಗುತ್ತಿದ್ದಂತೆ, ಉಭಯ ದೇಶಗಳ ಆಟಗಾರರು ಹಾಗೂ ಸಿಬ್ಬಂದಿ ಪರಸ್ಪರ ಕೈಕೈ ಮಿಲಾಯಿಸಲು ಮುಂದಾದರು. ಇದಕ್ಕೆ ಮುಖ್ಯ ಕಾರಣ ಪಂದ್ಯದದ್ದಕ್ಕೂ ಕಂಡು ಬಂದ ದೈಹಿಕ ಆಕ್ರಮಣ.

  • ಪಂದ್ಯದ ವೇಳೆ ಪರಾಗ್ವೆಯ ಮಟಿಯಾಸ್ ಗಲಾರ್ಜಾ, ಎಂಬಾಪೆಯನ್ನು ಮೊಣಕೈಯಿಂದ ಬಲವಾಗಿ ಗುದ್ದಿ ಕೆಳಗೆ ಬೀಳಿಸಿದ್ದರು.
  • ಫ್ರಾನ್ಸ್‌ಗೆ ಪೆನಾಲ್ಟಿ ಸಿಕ್ಕಾಗ, ಪರಾಗ್ವೆ ಆಟಗಾರರು ಎಂಬಾಪೆ ಕಿಕ್ ಹೊಡೆಯದಂತೆ ತಡೆಯಲು ತಮ್ಮ ಬೂಟುಗಳಿಂದ ಪೆನಾಲ್ಟಿ ಸ್ಪಾಟ್ ಗುರುತನ್ನು ಹಾಳು ಮಾಡಲು ಯತ್ನಿಸಿದ್ದರು.
  • ಪಂದ್ಯದದ್ದಕ್ಕೂ ಪರಾಗ್ವೆ ಆಟಗಾರರು ಉದ್ದೇಶಪೂರ್ವಕವಾಗಿಯೇ ಫ್ರಾನ್ಸ್ ಆಟಗಾರರ ಮೇಲೆ ದೈಹಿಕ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿತ್ತು.
  • ಪರಾಗ್ವೆ ಆಟಗಾರರು ಸರಣಿ ಫೌಲ್‌ಗಳನ್ನು ಮಾಡುತ್ತಿದ್ದರೂ ಅಂಪೈರ್ ಅವರಿಗೆ ಯಾವುದೇ ಕಾರ್ಡ್ ನೀಡಿರಲಿಲ್ಲ.
  • ಫ್ರಾನ್ಸ್ ಆಟಗಾರರಿಗೆ ಮೂರು ಎಲ್ಲೋ ಕಾರ್ಡ್ ನೀಡಿದ್ದು ಫ್ರೆಂಚ್ ಪಾಳಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಎಲ್ಲಾ ಆಕ್ರೋಶಗಳು ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆಯಿತು. ಪರಿಣಾಮ ಉಭಯ ತಂಡಗಳ ಆಟಗಾರರು ಮೈದಾನದಲ್ಲೇ ಕೈಕೈ ಮಿಲಾಯಿಸಿದರು.

ಕೈಕುಲುಕಲು ನಿರಾಕರಿಸಿದ ಎಂಬಾಪೆ!

ಮೊದಲೇ ಪರಾಗ್ವೆ ಆಟಗಾರರ ಆಕ್ರಮಣಕಾರಿ ಮನಸ್ಥಿತಿಯಿಂದ ಕುಪಿತಗೊಂಡಿದ್ದ ಕಿಲಿಯನ್ ಎಂಬಾಪೆ ಪಂದ್ಯದ ಬಳಿಕ ಪರಾಗ್ವೆಯ ಗೋಲ್‌ಕೀಪರ್ ಒರ್ಲಾಂಡೊ ಗಿಲ್ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು.

ಎಂಬಾಪೆ ಅವರ ಈ ವರ್ತನೆಯಿಂದ ಪರಾಗ್ವೆ ಆಟಗಾರರು ಕೆರಳಿದರು. ಇದೇ ವೇಳೆ ಒರ್ಲಾಂಡೊ ಗಿಲ್, ನೇರವಾಗಿ ಎಂಬಾಪೆ ಅವರತ್ತ ಫುಟ್‌ಬಾಲ್ ಎಸೆದು ಆಕ್ರೋಶ ಹೊರಹಾಕಿದರು.

ಮತ್ತೊಂದು ಕಡೆಯಿಂದ ಬಂದ ಪರಾಗ್ವೆ ರಕ್ಷಣಾತ್ಮಕ ಆಟಗಾರ ಗುಸ್ಟಾವೊ ವೆಲಾಜ್ಕ್ವೆಜ್ ಫ್ರಾನ್ಸ್‌ನ ಜೂಲ್ಸ್ ಕೌಂಡೆ ಅವರನ್ನು ಹಿಂದಿನಿಂದ ಜೋರಾಗಿ ತಳ್ಳಿ ಜಗಳಕ್ಕಿಳಿದರು.

ಕ್ಷಣಾರ್ಧದಲ್ಲೇ ಉಭಯ ತಂಡಗಳ ಸಬ್‌ಸ್ಟಿಟ್ಯೂಟ್ ಆಟಗಾರರು ಮತ್ತು ತರಬೇತುದಾರರು ಮೈದಾನಕ್ಕೆ ನುಗ್ಗಿದ್ದರಿಂದ ಫಿಲಡೆಲ್ಫಿಯಾದ ಕ್ರೀಡಾಂಗಣವು ಕುಸ್ತಿ ಅಖಾಡವಾಗಿ ಮಾರ್ಪಟ್ಟಿತು.

ಕ್ವಾರ್ಟರ್​ ಫೈನಲ್​ಗೇರಿದ ಫ್ರಾನ್ಸ್​:

ಪರಾಗ್ವೆ ತಂಡದ ತೀವ್ರ ಆಕ್ರಮಣಕಾರಿ ಮತ್ತು ದೈಹಿಕ ಆಟದ ನಡುವೆಯೂ ಫ್ರಾನ್ಸ್ ತಂಡವು ಕಿಲಿಯನ್ ಎಂಬಾಪೆ 70ನೇ ನಿಮಿಷದಲ್ಲಿ ಹೊಡೆದ ಪೆನಾಲ್ಟಿ ಗೋಲಿನ ನೆರವಿನಿಂದ 1-0 ಅಂತರದಲ್ಲಿ ರೋಚಕ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಫ್ರಾನ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮೊರಾಕೊ ತಂಡವನ್ನು ಎದುರಿಸಲಿದೆ.

ಕಠಿಣ ಕ್ರಮದ ಸಾಧ್ಯತೆ:

ಮೈದಾನದಲ್ಲಿ ಕಂಡು ಬಂದ ಈ ಘರ್ಷಣೆಯನ್ನು ಫಿಫಾ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಮೈದಾನದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಉಭಯ ತಂಡಗಳ ಆಟಗಾರರ ಮೇಲೆ ಕಠಿಣ ಶಿಸ್ತು ಕ್ರಮಗೊಳ್ಳುವ ಮತ್ತು ನಿಷೇಧ ಹೇರುವ ಸಾಧ್ಯತೆಯಿದೆ.

Source link

Exit mobile version