ರಾಜ್ಯದ ಹಲವೆಡೆ ವರುಣಾರ್ಭಟ: ತಡೆಗೋಡೆ ಕುಸಿದು, ಮರ ಬಿದ್ದು ಮನೆಗಳಿಗೆ ಹಾನಿ – Kannada News | Monsoon Havoc: Houses Damaged Due to Rain in Hassan and Belagavi; Entry to Delta Falls Banned

ಸಕಲೇಶಪುರದಲ್ಲಿ ತಡೆಗೋಡೆ ಕುಸಿದು ಮನೆಗಳಿಗೆ ಹಾನಿImage Credit source: Tv9 Kannada

ಹಾಸನ/ಬೆಳಗಾವಿ, ಜುಲೈ 05: ಮುಂಗಾರು ಮಳೆಯ ತೀವ್ರ ಕೊರತೆಯ ನಡುವೆಯೂ ಕರ್ನಾಟಕದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ತೀವ್ರ ಗಾಳಿ ಮಳೆ ಹಿನ್ನೆಲೆ ಬೃಹತ್ ತಡೆಗೋಡೆ ಕುಸಿದು 2 ಮನೆಗಳು ಜಖಂಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸುತ್ತಿದ್ದ ಬಡಾವಣೆಯಲ್ಲಿ ಅವಘಡ ನಡೆದಿದ್ದು, ಮಧು ಮತ್ತು ಅಬ್ದುಲ್ ಮುನಾಫ್ ಎಂಬುವವರ ಮನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೃಹತ್ ಹುಣಸೆ ಮರ ಬಿದ್ದು ಮನೆಗಳಿಗೆ ಹಾನಿ

ಮನೆಗಳ ಮೇಲೆ ಬಿದ್ದ ಹುಣಸೆ ಮರ

ಬೆಳಗಾವಿ ನಗರದಲ್ಲಿ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಅವಾಂತರಗಳೇ ನಡೆದಿದ್ದು, ಬೃಹತ್ ಹುಣಸೆ ಮರ ಬಿದ್ದು ನಾಲ್ಕು ಮನೆಗಳಿಗೆ ಹಾನಿಯಾಗಿರುವ ಘಟನೆ ಸಬಾಗ್ ನ‌ ಉಪ್ಪಾರ ಗಲ್ಲಿಯಲ್ಲಿ ನಡೆದಿದೆ. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದು, ಮನೆಯ ಸದಸ್ಯರು ಗ್ರೇಟ್​​ ಎಸ್ಕೇಪ್​​ ಆಗಿದ್ದಾರೆ. ಮರ ಧರೆಗುರುಳುವ ವೇಳೆ ಅಲ್ಲೇ ಕೆಳಗೆ ಮಹಿಳೆಯೋರ್ವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಘಟನೆಯಲ್ಲಿ ಅನಿಲ್ ಮುಟ್ಕೇಕರ್ ಎಂಬವರ ಮನೆಯ ಗೋಡೆ ಕುಸಿದಿದ್ದರೆ, ಆನಂದ್ ಭದ್ವಾಂಕರ್, ಏಕನಾಥ್ ಭದ್ವಾಂಕರ್, ಪ್ರಶಾಂತ್ ಗೋರ್ಲೆ ಮನೆಗಳ ಮುಂಭಾಕ್ಕೆ ಹಾನಿಯಾಗಿದೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!

ಡೆಲ್ಟಾ ಫಾಲ್ಸ್​​ಗೆ ಪ್ರವಾಸಿಗರಿಗೆ ನಿರ್ಬಂಧ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಹೊರವಲಯದಲ್ಲಿರುವ ಡೆಲ್ಟಾ ಫಾಲ್ಸ್​​ಗೆ ಜೀವಕಳೆ ಬಂದಿದೆ. ಈ ನಡುವೆ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ಕಾರಣ ಫಾಲ್ಸ್ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಬೆಳಗಾವಿ-ಗೋವಾ ಮುಖ್ಯರಸ್ತೆ ಮೂಲಕ ಫಾಲ್ಸ್​ಗೆ ಪ್ರವಾಸಿಗರು ಹೋಗ್ತಿದ್ದ ಕಾರಣ ಜಲಪಾತಕ್ಕೆ ಪ್ರವೇಶಿಸುವ ರಸ್ತೆಯಲ್ಲೇ ಅರಣ್ಯ ಸಿಬ್ಬಂದಿ ಕಾವಲಿಗೆ ನಿಂತಿದ್ದಾರೆ. ಜಲಪಾತಕ್ಕೆ ಸಾರ್ವಜನಿಕರ ನಿಷೇಧ ಎಂದು ಬೋರ್ಡ್ ಅಳವಡಿಕೆ ಮಾಡಲಾಗಿದೆ. ಕಾಲ್ನಡಿಗೆಯಿಂದ ತೆರಳುತ್ತಿದ್ದ ರಸ್ತೆಯೂದ್ದಕ್ಕೂ ಗುಂಡಿ ತೋಡಿ ಬಂದ್ ಮಾಡಲಾಗಿದ್ದು, ನಿರಂತರವಾಗಿ ಗಸ್ತು ನಡೆಸಲಾಗ್ತಿದೆ. ಇಷ್ಟಾಗಿಯೂ ಕಣ್ತಪ್ಪಿಸಿ ಜಲಪಾತಕ್ಕೆ ಹೋದ್ರೆ ಎಫ್ಐಆರ್ ದಾಖಲಿಸುವುದಾಗಿ ಖಡಕ್​ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ – Kannada News | Sonu Srinivas Gowda express her anger for talking about iphone troll

ಹುಡುಗರ ಬಗ್ಗೆ ಸೋನು ಗೌಡ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿವಾದದ ಮಧ್ಯೆ ತಮ್ಮ ವೈಯಕ್ತಿಕ ವಿಷಯವನ್ನು ಎಳೆದುತಂದವರ ವಿರುದ್ಧ ಸೋನು ಗೌಡ (Sonu Srinivas Gowda) ಗರಂ ಆಗಿದ್ದಾರೆ. ಐಫೋನ್ ಬಗ್ಗೆ ಮಾತನಾಡಿದವರ ಬಗ್ಗೆ ಸೋನು ಕಿಡಿಕಾರಿದ್ದಾರೆ. ‘ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲ್ಲ. ಆದರೆ ನಾನು ತಮಾಷೆಯಾಗಿ ಹೇಳಿದ್ದಕ್ಕೆ ಕ್ಷಮೆ ಕೇಳಿಸಲು ಒತ್ತಾಯಿಸಿದ್ದಾರೆ. ಆದರೆ ನಾನು ಕ್ಷಮೆ ಕೇಳಲ್ಲ. ಹುಡುಗರನ್ನು ಕಳ್ಳ ನನ್ನ ಮಕ್ಕಳು ಅಂತ ನಾನು ಹೇಳಿದ್ದಕ್ಕೆ ಇಷ್ಟೆಲ್ಲ ವಿವಾದ ಮಾಡುತ್ತಿದ್ದಾರೆ. ಆದರೆ ನನ್ನ ವೈಯಕ್ತಿಕ ವಿಷಯ ಇಟ್ಟುಕೊಂಡು ಐಫೋನ್ ಅಂತ ಹೇಳಲು ಇವನು ಯಾವನು? ಇವನಿಗೆ ಏನು ಅಧಿಕಾರ ಇದೆ? ನನ್ನ ಹತ್ತಿರ ಇದೆಲ್ಲ ನಡೆಯಲ್ಲ. ಕಾನೂನು ಪ್ರಕಾರವಾಗಿ ಎಫ್​ಐಆರ್ ಮಾಡಿಸಿದ್ದೇನೆ’ ಎಂದು ಸೋನು ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vasthu Tips: ಮನೆಯ ಬಾಲ್ಕನಿ ಅಥವಾ ಕಿಟಕಿ ಸಂದಿಗಳಲ್ಲಿ ಪಕ್ಷಿ ಗೂಡು ಕಟ್ಟಿದ್ದರೆ ಅಶುಭವೇ? ಶಾಸ್ತ್ರಗಳು ಹೇಳುವುದೇನು? – Kannada News | Birds Nesting at Home: Spiritual Meaning, Vastu and Good Omens for Prosperity

ಪಕ್ಷಿ ಗೂಡು ಕಟ್ಟಿದ್ದರೆ ಅಶುಭವೇ? Image Credit source: Depositphotos

ಭಾರತೀಯ ಸನಾತನ ಸಂಪ್ರದಾಯದಲ್ಲಿ ಪ್ರಕೃತಿಗೆ ಮತ್ತು ಅದರಲ್ಲಿರುವ ಪ್ರತಿಯೊಂದು ಜೀವಚರಾಚರಗಳಿಗೂ ದೈವಿಕ ಸ್ಥಾನವನ್ನು ನೀಡಲಾಗಿದೆ. ಗಿಡ-ಮರಗಳು, ನದಿ-ಪರ್ವತಗಳು ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಪಶು-ಪಕ್ಷಿಗಳೂ ಸಹ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಗಳ ವಾಹಕಗಳಾಗಿ ಕೆಲಸ ಮಾಡುತ್ತವೆ ಎಂಬುದು ನಂಬಿಕೆ. ವಿಶೇಷವಾಗಿ, ನಮ್ಮ ಮನೆಯ ಅಂಗಳದಲ್ಲಿ, ಬಾಲ್ಕನಿಯಲ್ಲಿ ಅಥವಾ ಕಿಟಕಿಗಳ ಸಂದಿಗಳಲ್ಲಿ ಪಕ್ಷಿಗಳು ಬಂದು ಗೂಡು ಕಟ್ಟುವುದು ಕೇವಲ ನೈಸರ್ಗಿಕ ಪ್ರಕ್ರಿಯೆಯಲ್ಲ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಮತ್ತು ಜಾನಪದ ನಂಬಿಕೆಗಳ ಪ್ರಕಾರ, ಇವು ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ಮಹತ್ವದ ಆಧ್ಯಾತ್ಮಿಕ ಸಂಕೇತಗಳಾಗಿವೆ. ಕೆಲವು ನಿರ್ದಿಷ್ಟ ಪಕ್ಷಿಗಳ ಆಗಮನವು ಮನೆಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಪಾರಿವಾಳದ ಗೂಡು ಶಾಂತಿ, ಪ್ರೀತಿ ಮತ್ತು ಸಮೃದ್ಧಿಯ ಮುನ್ನುಡಿ:

ಪಾರಿವಾಳವನ್ನು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವೆಂದು ಗುರುತಿಸಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ನಿಮ್ಮ ಮನೆಯ ಒಳಾಂಗಣ, ಅಟ್ಟ ಅಥವಾ ಬಾಲ್ಕನಿಯಲ್ಲಿ ಪಾರಿವಾಳವು ಗೂಡು ನಿರ್ಮಿಸಿದರೆ, ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂವಹನ ಹೆಚ್ಚಾಗುತ್ತಿದೆ ಎಂದರ್ಥ. ಇದು ಕುಟುಂಬದ ಸದಸ್ಯರ ನಡುವೆ ಪರಸ್ಪರ ಪ್ರೀತಿ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲದೆ, ಆರ್ಥಿಕ ಮುಗ್ಗಟ್ಟುಗಳು ದೂರವಾಗಿ ಹೊಸ ಪ್ರಗತಿಯ ಅವಕಾಶಗಳು ತೆರೆದುಕೊಳ್ಳುತ್ತವೆ ಎಂಬ ನಂಬಿಕೆಯೂ ಇದೆ. ಆದರೆ, ಪ್ರಾಯೋಗಿಕವಾಗಿ ನೋಡಿದಾಗ ಪಾರಿವಾಳಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ಅನೈರ್ಮಲ್ಯ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಆಧ್ಯಾತ್ಮಿಕ ನಂಬಿಕೆಯ ಜೊತೆಗೆ ಮನೆಯ ಸ್ವಚ್ಛತೆಗೂ ಸಮಾನ ಆದ್ಯತೆ ನೀಡುವುದು ಅತ್ಯಗತ್ಯ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ಗುಬ್ಬಚ್ಚಿ ಮನೆಗೆ ಒಲಿಯುವ ಲಕ್ಷ್ಮಿಯ ಕೃಪೆ:

ಆಧುನಿಕ ಕಾಂಕ್ರೀಟ್ ಕಾಡುಗಳಲ್ಲಿ ಇಂದು ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಮನೆಯ ಕಿಟಕಿಯ ಪಕ್ಕದಲ್ಲೋ ಅಥವಾ ಸಣ್ಣ ಮೂಲೆಗಳಲ್ಲೋ ಗುಬ್ಬಚ್ಚಿ ಗೂಡು ಕಟ್ಟಿದರೆ ಅದನ್ನು ಅತ್ಯಂತ ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಗುಬ್ಬಚ್ಚಿಯ ಆಗಮನವು ಮನೆಗೆ ಶಾಂತಿ ಮತ್ತು ಸಂಪತ್ತನ್ನು ಹೊತ್ತು ತರುತ್ತದೆ. ವಿಶೇಷವಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ಗುಬ್ಬಚ್ಚಿ ಗೂಡು ನಿರ್ಮಿಸಿದರೆ, ಅದು ಆ ಕುಟುಂಬದ ಯಶಸ್ಸಿನ ಹಾದಿಯನ್ನು ಸುಲಭಗೊಳಿಸುತ್ತದೆ. ಹಕ್ಕಿಗಳು ಸಾಮಾನ್ಯವಾಗಿ ಮನುಷ್ಯರ ಓಡಾಟವಿರುವ ಜಾಗದಲ್ಲಿ ಸುರಕ್ಷತೆಯ ಭರವಸೆ ಇದ್ದರೆ ಮಾತ್ರ ಗೂಡು ಕಟ್ಟುತ್ತವೆ. ಹೀಗಾಗಿ, ಗುಬ್ಬಚ್ಚಿ ನಿಮ್ಮ ಮನೆಯನ್ನು ಆರಿಸಿಕೊಂಡಿದೆ ಎಂದರೆ, ನಿಮ್ಮ ಮನೆಯಲ್ಲಿ ಪ್ರೀತಿ ತುಂಬಿದ ಧನಾತ್ಮಕ ವಾತಾವರಣವಿದೆ ಎಂದೇ ಅರ್ಥ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮರನಾಥ ಯಾತ್ರಿಕರಿಗೆ ಪ್ರಧಾನಿ ಮೋದಿ ಪತ್ರ: ಭಕ್ತರ ಮನ ಗೆದ್ದ ‘ಐದು ಪ್ರತಿಜ್ಞೆಗಳು’ – Kannada News | PM Modi’s 5 Amarnath Yatra Pledges: Cleanliness, Safety, Local and Nation First

ನವದೆಹಲಿ, ಜುಲೈ 05: ಈ ವರ್ಷದ ಪವಿತ್ರ ಅಮರನಾಥ ಯಾತ್ರೆ(Amarnath Yatra)ಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರಿಕರಿಗೆ ವಿಶೇಷವಾದ ಎರಡು ಪುಟಗಳ ಪತ್ರವೊಂದನ್ನು ಬರೆದಿದ್ದಾರೆ. ಭಕ್ತರಿಗೆ “ಹರ ಹರ ಮಹಾದೇವ್” ಮತ್ತು “ಜೈ ಬಾಬಾ ಬರ್ಫಾನಿ” ಘೋಷಣೆಗಳೊಂದಿಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿ ಕರೆ ನೀಡಿರುವ ಆ ‘ಐದು ಪ್ರತಿಜ್ಞೆಗಳು’ ಯಾವುವು?
ಸ್ವಚ್ಛತೆ: ಇಡೀ ಯಾತ್ರಾ ಮಾರ್ಗದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮತ್ತು ಎಲ್ಲೂ ಕಸ ಹಾಕದೆ ಸ್ವಚ್ಛತೆಗೆ ಆದ್ಯತೆ ನೀಡುವುದು.

ಸುರಕ್ಷತಾ ನಿಯಮಗಳ ಪಾಲನೆ: ಮಳೆ, ಶೀತ ಮತ್ತು ಜಾರುವ ರಸ್ತೆಗಳಿರುವುದರಿಂದ ಆಡಳಿತ ಮಂಡಳಿ ನೀಡುವ ಸುರಕ್ಷತಾ ಸಲಹೆಗಳು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ (ವೋಕಲ್ ಫಾರ್ ಲೋಕಲ್): ಜಮ್ಮು ಮತ್ತು ಕಾಶ್ಮೀರದ ಬಡ ಕುಟುಂಬಗಳು ಹಾಗೂ ಯುವಕರ ಜೀವನೋಪಾಯಕ್ಕೆ ನೆರವಾಗಲು, ಯಾತ್ರೆಯ ಒಟ್ಟು ವೆಚ್ಚದ ಕನಿಷ್ಠ ಶೇಕಡಾ 10 ರಷ್ಟನ್ನು ಅಲ್ಲಿನ ಸ್ಥಳೀಯ ವಸ್ತುಗಳನ್ನು ಖರೀದಿಸಲು ಬಳಸಬೇಕು.

ಪರಿಸರ ಸಂರಕ್ಷಣೆ (ಏಕ್ ಪೆಡ್ ಮಾ ಕೆ ನಾಮ್): ಯಾತ್ರೆ ಮುಕ್ತಾಯವಾಗುವ ‘ರಕ್ಷಾ ಬಂಧನ’ದ ದಿನದಂದು ಸಹೋದರ ಅಥವಾ ಸಹೋದರಿಗೆ ಒಂದು ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರ ಬೆಳೆಸುವುದು.

ರಾಷ್ಟ್ರ ಪ್ರಥಮ (ನೇಷನ್ ಫಸ್ಟ್): ಯಾತ್ರೆ ಮುಗಿದ ಮೇಲೂ “ರಾಷ್ಟ್ರವೇ ಮೊದಲು” ಎಂಬ ಭಾವನೆಯೊಂದಿಗೆ ವರ್ಷವಿಡೀ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವುದು.

ಮತ್ತಷ್ಟು ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ

ಸೇವೆಗೆ ಪ್ರಧಾನಿ ಶ್ಲಾಘನೆ
ಅಮರನಾಥ ದೇವಾಲಯ ಮಂಡಳಿ, ಜಮ್ಮು-ಕಾಶ್ಮೀರ ಆಡಳಿತ ಸೇರಿದಂತೆ ಯಾತ್ರೆಯ ಯಶಸ್ಸಿಗೆ ಶ್ರಮಿಸುತ್ತಿರುವ ಭಾರತೀಯ ಸೇನೆ, ಸಿಆರ್‌ಪಿಎಫ್, ಪೊಲೀಸ್, ಐಟಿಬಿಪಿ, ಬಿಎಸ್‌ಎಫ್, ಎನ್‌ಡಿಆರ್‌ಎಫ್, ವೈದ್ಯರು ಮತ್ತು ಸ್ವಯಂಸೇವಕರ ನಿಸ್ವಾರ್ಥ ಸೇವೆಯನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಸವಾಲಿನ ಪರ್ವತ ಹಾದಿಯಲ್ಲಿ ನೆರವಾಗುವ ಸ್ಥಳೀಯ ಕುದುರೆ ಮಾಲೀಕರು ಮತ್ತು ಪಲ್ಲಕ್ಕಿ ಹೊರುವವರ ಕೊಡುಗೆಯನ್ನು ಅವರು ವಿಶೇಷವಾಗಿ ಸ್ಮರಿಸಿದ್ದಾರೆ.

ಕೊನೆಯಲ್ಲಿ, ಬಾಬಾ ಅಮರನಾಥರ ಆಶೀರ್ವಾದ ಎಲ್ಲರ ಮೇಲಿರಲಿ, ನಿಮ್ಮ ಪ್ರಯಾಣವು ಸುರಕ್ಷಿತ ಹಾಗೂ ಮಂಗಳಕರವಾಗಿರಲಿ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿ ಪ್ರತಿಜ್ಞೆಗೆ ಜನರ ಪ್ರತಿಕ್ರಿಯೆ

ನಮ್ಮ ನಗರಗಳ ಮೆಟ್ರೋ ರೈಲನ್ನು ಜನರು ಕೇವಲ ಸರ್ಕಾರಿ ಸೇವೆಯಾಗಿ ನೋಡದೆ, ಜವಾಬ್ದಾರಿಯಿಂದ ಕಾಪಾಡಿಕೊಳ್ಳುವಂತೆ, ಅಮರನಾಥದ ಸೌಲಭ್ಯಗಳನ್ನೂ ಭಕ್ತರು ತಮ್ಮದೇ ಎಂಬ ಭಾವನೆಯಿಂದ ನೋಡಬೇಕು ಎಂದು ಭಕ್ತರು ಕೂಡ ಕರೆ ನೀಡಿದ್ದಾರೆ. ಯಾತ್ರೆಯ ಮಾರ್ಗದಲ್ಲಿ ಭಕ್ತರು ಈ ಪತ್ರವನ್ನು ಕೈಯಲ್ಲಿ ಹಿಡಿದು ಪ್ರಧಾನಿಯವರ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಲ್ಕ್ ಬೋರ್ಡ್​ ಸೇರಿದಂತೆ ಬೆಂಗಳೂರಿನ ಹಲವೆಡೆ ಇಂದಿನ ವಾಯು ಗುಣಮಟ್ಟ ಸೂಪರ್! – Kannada News | Karnataka AQI Update: Bengaluru Records Good Air Quality Amid Monsoon Rains

ಬೆಂಗಳೂರು, ಜುಲೈ 05: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ, ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕುಸಿದಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ ಹಾಗೂ ‘ಸಾಧಾರಣ’ ಮಟ್ಟದಲ್ಲಿದೆ.

ಬೆಂಗಳೂರಿನ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇಂದು ಸರಾಸರಿ AQI 34 ರಿಂದ 45 ರ ಆಸುಪಾಸಿನಲ್ಲಿದೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ 0 ರಿಂದ 50 ರವರೆಗಿನ ಸ್ಕೋರ್ ಅನ್ನು ‘ಉತ್ತಮ’ (Good) ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯ ಗಾಳಿ ಅತ್ಯಂತ ಶುದ್ಧವಾಗಿದ್ದು, ನಾಗರಿಕರು ಯಾವುದೇ ಆರೋಗ್ಯದ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ. ಮುಖ್ಯ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಕಣಗಳ ಪ್ರಮಾಣವು ಮಳೆಯ ಕಾರಣದಿಂದಾಗಿ ತುಂಬಾ ಕಡಿಮೆಯಾಗಿದೆ.

ಬೆಂಗಳೂರಿನ ಕೆಲವು ಪ್ರಮುಖ ಏರಿಯಾಗಳ ಇಂದಿನ ಸ್ಥಿತಿ

  • ಬಿಟಿಎಂ ಲೇಔಟ್ ಮತ್ತು ಬಸವನಗುಡಿ: AQI 53-58 (ಸಾಧಾರಣ)
  • ಅರೆಕೆರೆ ಮತ್ತು ಬನಶಂಕರಿ: AQI 55-58 (ಸಾಧಾರಣ)
  • ಕೇಂದ್ರ ರೇಷ್ಮೆ ಮಂಡಳಿ (ಸಿಲ್ಕ್ ಬೋರ್ಡ್): AQI 42 (ಉತ್ತಮ)

ಕರ್ನಾಟಕದ ಇತರೆ ಪ್ರಮುಖ ನಗರಗಳ ಇಂದಿನ AQI ಸ್ಥಿತಿ

ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಮುಂಗಾರು ಮಾರುತಗಳ ಪ್ರಭಾವದಿಂದಾಗಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಅಲ್ಲಿ ಅತ್ಯಂತ ಪರಿಶುದ್ಧವಾದ ಗಾಳಿ ದಾಖಲಾಗಿದೆ.

  • ಬೇಲೂರು: 46 (Good)
  • ಬಾಗಲಕೋಟೆ: 60 (Moderate)
  • ಬೆಳಗಾವಿ: 52 (Moderate)
  • ಬಳ್ಳಾರಿ: 56 (Moderate)

ಒಟ್ಟಾರೆಯಾಗಿ ಇಂದಿನ ಹವಾಮಾನವು ಶ್ವಾಸಕೋಶದ ತೊಂದರೆ ಇರುವವರಿಗೂ ಹಾಗೂ ಹಿರಿಯ ನಾಗರಿಕರಿಗೂ ಸುರಕ್ಷಿತವಾಗಿದೆ. ಮಳೆಯ ವಾತಾವರಣ ಇರುವುದರಿಂದ ಗಾಳಿಯಲ್ಲಿ ತೇವಾಂಶ (Humidity) ಹೆಚ್ಚಿರುತ್ತದೆ, ಆದರೂ ಮಾಲಿನ್ಯದ ಪ್ರಮಾಣ ತೀರಾ ಕಡಿಮೆ ಇರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೋತಿದ್ದು ಯಾರಿಂದ ಅಂತ ಎಲ್ಲರಿಗೂ ಗೊತ್ತು: ಪಂದ್ಯದ ಬಳಿಕ ಅಯ್ಯರ್ ಹೇಳಿದ್ದೇನು? – Kannada News | Shreyas iyer Post match interview after IND vs ENG 2nd T20I

ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 190 ರನ್ ಕಲೆಹಾಕಿತು. ಈ ಗುರಿಯನ್ನು ಇಂಗ್ಲೆಂಡ್ 19 ಓವರ್​ಗಳಲ್ಲಿ ಚೇಸ್ ಮಾಡಿ 4 ವಿಕೆಟ್​ಗಳ ಜಯ ಸಾಧಿಸಿದೆ. ಈ ಸೋಲಿನ ಬಳಿಕ ಶ್ರೇಯಸ್ ಅಯ್ಯರ್, ಕಾಮೆಂಟೇಟರ್ ನಾಸಿರ್ ಹುಸೇನ್ ಅವರೊಂದಿಗೆ ನಡೆಸಿದ ಚಿಟ್​ ಚಾಟ್​ನ ಮುಖ್ಯಾಂಶಗಳು ಇಲ್ಲಿವೆ.

ಪ್ರಶ್ನೆ (ನಾಸಿರ್ ಹುಸೇನ್): ಶ್ರೇಯಸ್, ನಿಮ್ಮ ಕೈಯಲ್ಲಿದ್ದ ಪಂದ್ಯ ಹಠಾತ್ ಆಗಿ ಎಲ್ಲಿ ಕೈತಪ್ಪಿ ಹೋಯಿತು ಎಂದು ನಿಮಗನಿಸುತ್ತಿದೆಯೇ?

ಉತ್ತರ (ಶ್ರೇಯಸ್ ಅಯ್ಯರ್): ನಮ್ಮ ಪಂದ್ಯ ಎಲ್ಲಿ ಕೈತಪ್ಪಿತು ಎಂದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತು. ಆದರೆ ನಾನು ಯಾವುದೇ ಒಬ್ಬ ನಿರ್ದಿಷ್ಟ ಆಟಗಾರನನ್ನು ದೂಷಿಸಲು ಇಷ್ಟಪಡುವುದಿಲ್ಲ. 15 ಓವರ್‌ಗಳವರೆಗೆ ನಾವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೆವು. ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದೆವು. ಆದರೆ ಹಠಾತ್ ಆಗಿ ಪಂದ್ಯದ ಗತಿ ಅವರ ಕಡೆಗೆ ತಿರುಗಿತು. ಅಲ್ಲಿಂದ ಮುಂದೆ ಅವರಿಗೆ ಗೆಲುವು ಸುಲಭವಾಯಿತು.

ಪ್ರಶ್ನೆ: ನೀವು ಆ ಆಟಗಾರನ ಹೆಸರನ್ನು ಹೇಳದೆ ಇರಬಹುದು, ಆದರೆ ನಾನು ಹೇಳಲೇಬೇಕು. ರವಿ ಬಿಷ್ಣೋಯ್ ಎಸೆದ ಆ 17ನೇ ಓವರ್! ನಾನು ಹಳೆಯ ದಾಖಲೆಗಳನ್ನು ನೋಡಿದೆ, ಅವರು ಈ ಹಿಂದೆ ಕೇವಲ ಮೂರು ನೋ-ಬಾಲ್‌ಗಳನ್ನು ಮಾತ್ರ ಎಸೆದಿದ್ದರು. ಈ ಪಂದ್ಯದಲ್ಲಿ ಅವರು ಬ್ಯಾಕ್ ಟು ಬ್ಯಾಕ್ ನೋ-ಬಾಲ್ ಎಸೆದಿದ್ದು ನಿಮಗೆ ಎಷ್ಟು ಆಘಾತ ತಂದಿತು?

ಉತ್ತರ: ಮೊದಲ ನೋ-ಬಾಲ್ ಬಿದ್ದಾಗ, ಅವರು ಮುಂದಿನ ಎಸೆತದಲ್ಲಿ ಕಂಬ್ಯಾಕ್ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅದೇ 17ನೇ ಓವರ್‌ನಲ್ಲಿ ಸತತವಾಗಿ ನೋ-ಬಾಲ್‌ಗಳನ್ನು ಎಸೆದದ್ದು ನಮಗೆ ದೊಡ್ಡ ಹಿನ್ನಡೆಯಾಯಿತು. ಇದು ಖಂಡಿತವಾಗಿಯೂ ನಮಗೆ ಬೇಸರ ತಂದಿದೆ. ಆದರೆ ಅವರು ಈ ತಪ್ಪಿನಿಂದ ಖಂಡಿತವಾಗಿಯೂ ಕಲಿಯಲಿದ್ದಾರೆ.

ಪ್ರಶ್ನೆ: ಟೀಮ್ ಇಂಡಿಯಾ 190 ರನ್ ಗಳಿಸಿದಾಗ ನಿಮ್ಮ ಆಲೋಚನೆ ಏನಿತ್ತು?

ಉತ್ತರ: ಈ ಪಿಚ್‌ನಲ್ಲಿ ಅನಿಶ್ಚಿತ ಬೌನ್ಸ್ ಇತ್ತು. ಹಾಗಾಗಿ 190 ರನ್ ಎಂಬುದು ನಿಜಕ್ಕೂ ಒಂದು ಅತ್ಯುತ್ತಮ ಮತ್ತು ಸವಾಲಿನ ಮೊತ್ತವಾಗಿತ್ತು. ಕೊನೆಯ ಓವರ್‌ನಲ್ಲಿ ತಿಲಕ್ ವರ್ಮಾ ಗಳಿಸಿದ ಆ ಪ್ರಮುಖ 20 ರನ್‌ಗಳು ನಮ್ಮ ರನ್ ವೇಗವನ್ನು ಹೆಚ್ಚಿಸಿದವು. ನಾನು ಮೊದಲೇ ಹೇಳಿದಂತೆ, ಬೌಲಿಂಗ್ ಆರಂಭಿಸಿದ ಮೊದಲ 15 ಓವರ್‌ಗಳವರೆಗೆ ನಾವು ಪಂದ್ಯದಲ್ಲಿ ಹಿಡಿತ ಸಾಧಿಸಿದ್ದೆವು. ಆದರೆ ನಂತರ ಇಂಗ್ಲೆಂಡ್‌ನ ಜೇಕಬ್ ಬೆಥೆಲ್ ಅದ್ಭುತವಾಗಿ ಆಡಿದರು. ಅವರ ಶಾಂತ ಸ್ವಭಾವ ಮತ್ತು ಇನ್ನಿಂಗ್ಸ್ ಕಟ್ಟಿದ ರೀತಿ ನಿಜಕ್ಕೂ ಪ್ರಶಂಸನೀಯ.

ಪ್ರಶ್ನೆ: 13ನೇ ಓವರ್ ಅವಧಿಯಲ್ಲಿ ಸ್ಯಾಮ್ ಕರನ್ ಬೌಲಿಂಗ್‌ಗೆ ಬಂದಾಗ ನಿಮ್ಮ ರನ್ ವೇಗ ಕೊಂಚ ಕಡಿಮೆಯಾಯಿತು. ಆ ಸಮಯದಲ್ಲಿ ನೀವು ಬೇರೆ ಏನಾದರೂ ಮಾಡಲು ಸಾಧ್ಯವಿತ್ತೇ?

ಉತ್ತರ: ಇಂಗ್ಲೆಂಡ್ ಬೌಲರ್‌ಗಳು ಮೈದಾನದ ಗಾತ್ರ ಮತ್ತು ಪಿಚ್‌ನ ಸ್ವರೂಪವನ್ನು ಮೊದಲೇ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಸ್ಯಾಮ್ ಕರನ್ ನಿಖರವಾದ ಜಾಗದಲ್ಲಿ ಬೌಲಿಂಗ್ ಮಾಡಿದರು. ನಮ್ಮ ಎಡಗೈ ಬ್ಯಾಟರ್‌ಗಳಿಗೆ ಲೆಗ್ ಸೈಡ್‌ನಲ್ಲಿ ಆಡಲು ಯಾವುದೇ ಅವಕಾಶ ನೀಡಲಿಲ್ಲ. ಆಫ್-ಸ್ಟಂಪ್‌ನ ಹೊರಗಡೆ ಬೌಲಿಂಗ್ ಮಾಡುವ ಅವರ ಯೋಜನೆ ತುಂಬಾ ಯಶಸ್ವಿಯಾಯಿತು.

ಪ್ರಶ್ನೆ: ಇಂದು ಭಾರತೀಯ ಕ್ರಿಕೆಟ್‌ಗೆ ಒಂದು ಐತಿಹಾಸಿಕ ದಿನ. ಯುವ ಆಟಗಾರ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಿದ್ದಾರೆ. ಒಬ್ಬ ನಾಯಕನಾಗಿ ಅವರ ಇಂದಿನ ಪ್ರದರ್ಶನವನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ: ವೈಭವ್ ಯಾವುದೇ ನಿರ್ಭೀತಿಯ  ಮನೋಭಾವವನ್ನು ಹೊಂದಿದ್ದಾರೆ. ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಶೈಲಿಯಿಂದ ನಾವೂ ಕಲಿಯುವುದು ಸಾಕಷ್ಟಿದೆ. ಅವರು ಕಳೆದ ಕೆಲವು ತಿಂಗಳು ಹಾಗೂ ವರ್ಷಗಳಿಂದ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಹಾಗಾಗಿ ಅವರು ಪಂದ್ಯದ ವೇಳೆ ಆತಂಕಕ್ಕೆ ಒಳಗಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇಂತಹ ದೊಡ್ಡ ವೇದಿಕೆಯಲ್ಲಿ ಅವರು ಹೆಜ್ಜೆ ಇಟ್ಟ ರೀತಿ ಮತ್ತು ಆಡಿದ ಶೈಲಿ ನೋಡಲು ತುಂಬಾ ಸಂತೋಷ ತಂದಿದೆ.

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್!

ಪ್ರಶ್ನೆ: ಭಾರತ ತಂಡವು ಸತತವಾಗಿ 3 ಪಂದ್ಯಗಳನ್ನು ಸೋತಿರುವುದು ತುಂಬಾ ಅಪರೂಪ. ಇಲ್ಲಿಂದ ನೀವು ಮತ್ತೆ ಗೆಲುವಿನ ಹಾದಿಗೆ ಮರಳಬಹುದು ಎಂಬ ನಂಬಿಕೆ ಇದೆಯೇ?

ಉತ್ತರ: ಖಂಡಿತವಾಗಿಯೂ ಇದೆ. ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ನಾವು ಪ್ರಸ್ತುತ ಅತ್ಯಂತ ಕೆಳಮಟ್ಟದಲ್ಲಿದ್ದೇವೆ ಎಂಬುದು ಗೊತ್ತು. ಆದರೆ ಇಲ್ಲಿಂದ ನಮಗೆ ಮುಂದಿರುವ ಏಕೈಕ ದಾರಿ ಎಂದರೆ ಗೆಲುವಿನತ್ತ ಮುನ್ನಡೆಯುವುದು ಮಾತ್ರ. ನಾವು ಮತ್ತಷ್ಟು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇವೆ ಎನ್ನುವ ಮೂಲಕ ಶ್ರೇಯಸ್ ಅಯ್ಯರ್ ಮಾತು ಮುಗಿಸಿದರು.

Source link

ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು: ಸಿಎಂ ರೇವಂತ್ ರೆಡ್ಡಿ – Kannada News | CM Revanth Reddy: Rahul Gandhi Must Be PM in 2029 for India’s Progress

ಹೈದರಾಬಾದ್, ಜುಲೈ 05: ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ(Rahul Gandhi) ಅವರೇ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ದೇಶದ ಭವಿಷ್ಯದ ನಾಯಕನನ್ನಾಗಿ ಮಾಡಲು ತೆಲಂಗಾಣದ ಜನತೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತೆಲಂಗಾಣದ ಮಿಡ್ಜಿಲ್ ಮಂಡಲ್‌ನಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪ್ರಮುಖವಾಗಿ ಈ ಕೆಳಗಿನ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ 2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ರಾಜ್ಯದ ಜನತೆ ಕೈಜೋಡಿಸಬೇಕು ಎಂದರು.

ಈ ದೇಶದ ಪ್ರಗತಿಗಾಗಿ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೇರುವುದು ಇಂದಿನ ಐತಿಹಾಸಿಕ ಅವಶ್ಯಕತೆಯಾಗಿದೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 2034 ರವರೆಗೆ ಅಧಿಕಾರದಲ್ಲಿ ಇರಲಿದೆ. ಮುಂದಿನ ದಿನಗಳಲ್ಲೂ ಪಕ್ಷ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ.

ಮತ್ತಷ್ಟು ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

2023ರ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಆರ್‌ಎಸ್ (BRS) ಪಕ್ಷದ 10 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.

ಜುಲೈ 4, 2006 ರಂದು ಇದೇ ಮಿಡ್ಜಿಲ್‌ನಿಂದ ಜಿಲ್ಲಾ ಪರಿಷತ್ (ZPTC) ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರೇವಂತ್ ರೆಡ್ಡಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಅಂದು ನೀವು ನೆಟ್ಟ ಸಸಿ ಇಂದು ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಹೆಮ್ಮರವಾಗಿ ನಿಂತಿದೆ ಎಂದು ಭಾವನಾತ್ಮಕವಾಗಿ ಜನರಿಗೆ ಧನ್ಯವಾದ ತಿಳಿಸಿದರು.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದ ಸೋನಿಯಾ ಗಾಂಧಿ ಅವರ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು, ರಾಜ್ಯದ ಜನತೆ 2029 ರಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಬೆಂಬಲಿಸಬೇಕು ಎಂದು ಕರೆ ನೀಡಿದರು. ಹಿಂದಿನ ಬಿಆರ್‌ಎಸ್ ಸರ್ಕಾರ ಕೇವಲ ಜನರ ಫೋನ್‌ಗಳನ್ನು ಕದ್ದು ಕೇಳಲು ಮತ್ತೆ ಅಧಿಕಾರಕ್ಕೆ ಬರಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇವಂತ್ ರೆಡ್ಡಿ ಅವರು 20 ವರ್ಷಗಳ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು, ಇಂದು ಮುಖ್ಯಮಂತ್ರಿಯಾಗಿ ಅದೇ ಮಣ್ಣಿಗೆ ಮರಳಿರುವುದು ಈ ಸಭೆಗೆ ರಾಜಕೀಯ ಹಾಗೂ ಭಾವನಾತ್ಮಕ ಮಹತ್ವ ತಂದುಕೊಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪರಪ್ಪನ ಅಗ್ರಹಾರದ ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ – Kannada News | Bengaluru Central Jail’s Inmate Grown Organic Vegetables See Strong Demand Among Officers and Staff

ಬೆಂಗಳೂರು, ಜುಲೈ 05: ಸೆಂಟ್ರಲ್‌ ಜೈಲ್ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಬೆಳೆದ ತರಕಾರಿಯನ್ನು ಕಾರಾಗೃಹ ಇಲಾಖೆಯ ಕಚೇರಿ ಮುಂದೆ ಸಂತೆ ಮಾದರಿಯಲ್ಲಿ ಸಿಬ್ಬಂದಿ ಮಾರಾಟ ಮಾಡಿದ್ದು, ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿ ಅವುಗಳನ್ನು ಮುಗಿಬಿದ್ದು ಖರೀದಿ ಮಾಡಿದ ದೃಶ್ಯಗಳು ಕಂಡುಬಂದಿವೆ. ಕೈದಿಗಳು ಬೆಳೆದ ತರಕಾರಿ ಮಾರಾಟದಂತಹ ವಿನೂತನ ಪ್ರಯತ್ನಕ್ಕೆ ಕಾರಾಗೃಹ ಇಲಾಖೆ ಡಿಜಿ ಅಲೋಕ್ ಕುಮಾರ್​​ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ತರಕಾರಿಯನ್ನ ಸಂತೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಲೂ ಸಿದ್ದತೆ ನಡೆದಿದೆ. ಕೇವಲ ತರಕಾರಿ ಅಲ್ಲದೆ ಬಟ್ಟೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನ ಸಹ ಮಾರಾಟ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Karnataka Weather Forecast: ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ವರುಣನ ಆರ್ಭಟ ಜೋರು! ಕರಾವಳಿಗೆ ರೆಡ್ ಅಲರ್ಟ್​ – Kannada News | Karnataka Weather forecast: Red Alert Issued for Coastal Districts; Heavy Rain Forecast

ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ವರುಣನ ಆರ್ಭಟ ಜೋರು!

ಬೆಂಗಳೂರು, ಜುಲೈ 05: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಆರ್ಭಟ ಜೋರಾಗಿರಲಿದ್ದು, ಹವಾಮಾನ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಿದೆ. ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Weather) ಮುನ್ಸೂಚನೆ ಇದೆ. ಹೀಗಾಗಿ ಮುಂದಿನ ಮೂರು ದಿನಗಳ ಕಾಲ ರೆಡ್ ಅಲರ್ಟ್​ ಸೂಚಿಸಲಾಗಿದೆ.

ಎಲ್ಲೆಲ್ಲಿ ಅಲರ್ಟ್ಸ್?

  • ಯೆಲ್ಲೋ ಅಲರ್ಟ್: ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ್ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
  • ಆರೆಂಜ್ ಅಲರ್ಟ್: ಮಲೆನಾಡು ಮತ್ತು ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.
  • ರೆಡ್ ಅಲರ್ಟ್ (ಜುಲೈ 6, 7 ಮತ್ತು 8): ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 6 ರಿಂದ 8 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಕರಾವಳಿಯಲ್ಲಿ ವರುಣಾರ್ಭಟ

ಇಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಸಾಧಾರಣ ಮಳೆ

ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯೊಂದಿಗೆ 40-50 ಕಿ.ಮೀ ವೇಗದ ಗಾಳಿ ಬೀಸಲಿದೆ. ಬಾಗಲಕೋಟೆ, ಬಿದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಪರಿಸ್ಥಿತಿ ಏನು?

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಯಿಂದ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:40 am, Sun, 5 July 26

Source link

IND vs ENG: ಟೀಮ್ ಇಂಡಿಯಾ ಸೋಲಿಗೆ ಈ 5 ತಪ್ಪುಗಳೇ ಕಾರಣ! – Kannada News | IND vs ENG 2nd T20: 5 Reasons Why India Lost

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬಯ್ಆಟ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 190 ರನ್ ಕಲೆಹಾಕಿತು. ಭಾರತ ನೀಡಿದ್ದ 191 ರನ್‌ಗಳ ಸವಾಲಿನ ಗುರಿಯನ್ನು ಇಂಗ್ಲೆಂಡ್ ಇನ್ನು 1 ಓವರ್ ಬಾಕಿ ಇರುವಂತೆಯೇ ತಲುಪಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಅತ್ತ ಇಂಗ್ಲೆಂಡ್ ಗೆಲುವಿನಲ್ಲಿ ಭಾರತೀಯ ಆಟಗಾರರು ಮಾಡಿದ ತಪ್ಪುಗಳ ಪಾಲೂ ಇತ್ತು. ಅದರಂತೆ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

1. ರವಿ ಬಿಷ್ಣೋಯ್ ದುಬಾರಿ ಓವರ್​:

ಈ ಪಂದ್ಯದ ಅತಿ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ ಸ್ಪಿನ್ನರ್ ರವಿ ಬಿಷ್ಣೋಯ್ ಎಸೆದ 17ನೇ ಓವರ್. ಈ ಓವರ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೇಕಬ್ ಬೆಥೆಲ್ ಸತತ ಮೂರು ಸಿಕ್ಸರ್ ಸಿಡಿಸಿದರು. ಅಷ್ಟೇ ಅಲ್ಲದೆ, ಬಿಷ್ಣೋಯ್ ಒಂದೇ ಓವರ್‌ನಲ್ಲಿ ಎರಡು ನೋ-ಬಾಲ್‌ಗಳನ್ನು ಎಸೆದು ಫ್ರೀ-ಹಿಟ್ ಕೊಡುಗೆಯನ್ನು ಸಹ ನೀಡಿದರು. ಈ ಮೂಲಕ ಈ ಓವರ್‌ನಲ್ಲಿ ನೀಡಿದ್ದು ಬರೋಬ್ಬರಿ 29 ರನ್​ಗಳು. ನಿರ್ಣಾಯಕ ಹಂತದಲ್ಲಿ 29 ರನ್​ ನೀಡಿದ್ದರಿಂದ ಪಂದ್ಯವು ಸಂಪೂರ್ಣವಾಗಿ ಇಂಗ್ಲೆಂಡ್ ಕೈವಶವಾಯಿತು.

2. ಆರ್ಭಟಿಸದ ಇಶಾನ್ ಕಿಶನ್:

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 43 ರನ್ ಸಿಡಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ 49 ರನ್ ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳು. ಟಿ20 ಮಾದರಿಗೆ ತಕ್ಕಂತೆ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳಲು ಕಿಶನ್ ವಿಫಲರಾಗಿದ್ದರು. ಪರಿಣಾಮ ಟೀಮ್ ಇಂಡಿಯಾ ರನ್ ವೇಗ ಕುಂಠಿತವಾಯಿತು. ಇದರಿಂದ ಬೃಹತ್ ಮೊತ್ತ ಪೇರಿಸಿಬೇಕಿದ್ದ ಭಾರತದ ಇನಿಂಗ್ಸ್ 190 ರನ್​ಗಳೊಂದಿಗೆ ಅಂತ್ಯಗೊಂಡಿತು.

3. ಮಂದಗತಿಯ ಬ್ಯಾಟಿಂಗ್ ಮಂದಗತಿ:

ಭಾರತ ತಂಡವು 13 ಓವರ್‌ಗಳಲ್ಲಿ 2 ವಿಕೆಟ್‌ಗೆ 130 ರನ್ ಗಳಿಸಿ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿತ್ತು. ಆದರೆ ಕೊನೆಯ 7 ಓವರ್‌ಗಳಲ್ಲಿ ಟೀಮ್ ಇಂಡಿಯಾ ಕೇವಲ 60 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶೇಷವಾಗಿ 15ನೇ ಓವರ್‌ನಲ್ಲಿ ಕೇವಲ 6 ಸಿಂಗಲ್ಸ್ ಬಂದರೆ, 16ನೇ ಓವರ್‌ನಲ್ಲಿ ಕೇವಲ 2 ರನ್ ಮಾತ್ರ ಕಲೆಹಾಕಿದ್ದರು. ಇದರಿಂದಾಗಿ ಸ್ಕೋರ್ 210-220 ತಲುಪುವ ಬದಲು ಟೀಮ್ ಇಂಡಿಯಾ ಮೊತ್ತ 190 ರನ್‌ಗಳಿಗೆ ಸೀಮಿತವಾಯಿತು.

4. ಹ್ಯಾರಿ ಬ್ರೂಕ್ ಕೌಂಟರ್ ಅಟ್ಯಾಕ್:

ಇಂಗ್ಲೆಂಡ್ ತಂಡ ಮೊದಲ ಓವರ್​ನಲ್ಲೇ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಎರಡು ವಿಕೆಟ್ ಪಡೆದಿದ್ದು ಅರ್ಷದೀಪ್ ಸಿಂಗ್. ಆದರೆ ಈ ಆಘಾತದಿಂದ ಇಂಗ್ಲೆಂಡ್ ತಂಡವನ್ನು ಪಾರು ಮಾಡುವಲ್ಲಿ ನಾಯಕ ಹ್ಯಾರಿ ಬ್ರೂಕ್ ಯಶಸ್ವಿಯಾಗಿದ್ದರು. ಅರ್ಷದೀಪ್ ಸಿಂಗ್ ಎಸೆದ ತಮ್ಮ 2ನೇ ಓವರ್​ನಲ್ಲಿ ಬ್ರೂಕ್ ಬರೋಬ್ಬರಿ 27 ರನ್​ ಚಚ್ಚಿದ್ದರು. ಅಲ್ಲದೆ ಕೇವಲ 15 ಎಸೆತಗಳಲ್ಲಿ ಬ್ರೂಕ್ 39 ರನ್ ಸಿಡಿಸಿ ಇಂಗ್ಲೆಂಡ್‌ ಚೇಸಿಂಗ್​ಗೆ ಅಡಿಪಾಯ ಹಾಕಿಕೊಟ್ಟರು. ಅಂದರೆ ಆರಂಭಿಕ ಆಘಾತಕ್ಕೆ ಒಳಗಾದರೂ ಬ್ರೂಕ್ ಮಾಡಿದ ಕೌಂಡರ್ ಅಟ್ಯಾಕ್​ನಿಂದ ಇಂಗ್ಲೆಂಡ್ ಪವರ್​ಪ್ಲೇನಲ್ಲಿ 61 ರನ್​ಗಳಿಸಲು ಸಾಧ್ಯವಾಯಿತು.

5. ಜೇಕಬ್ ಬೆಥೆಲ್ ಅವರ ಸ್ಫೋಟಕ ಬ್ಯಾಟಿಂಗ್‌:

ಇಂಗ್ಲೆಂಡ್‌ ತಂಡದ ಯುವ ಆಟಗಾರ ಜೇಕಬ್ ಬೆಥೆಲ್ ಭಾರತೀಯ ಬೌಲರ್‌ಗಳ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 76 ರನ್ ಸಿಡಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಬೆಥೆಲ್, ನಿರ್ಣಾಯಕ ಹಂತದಲ್ಲಿ ಅಬ್ಬರಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು. ಇತ್ತ ಟೀಮ್ ಇಂಡಿಯಾ ಬೌಲರ್​ಗಳು ಹಲವು ತಂತ್ರಗಳನ್ನು ಪ್ರಯೋಗಿಸಿದರೂ ವಿಕೆಟ್ ಪಡೆಯಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಜೇಕಬ್ ಬೆಥೆಲ್ ಇಂಗ್ಲೆಂಡ್ ತಂಡಕ್ಕೆ 4 ವಿಕೆಟ್​ಗಳ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್!

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಈ ಸರಣಿಯ ಮೂರನೇ ಪಂದ್ಯವು  ಜುಲೈ 7 ರಂದು ನಾಟಿಂಗ್ಹ್ಯಾಮ್‌ನಲ್ಲಿ ನಡೆಯಲಿದ್ದು, ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.

Source link

Exit mobile version