Headlines

ಪಹಲ್ಗಾಮ್ ದಾಳಿಯ ತನಿಖೆ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ; ಅಮಿತ್ ಶಾ – Kannada News | Terror Plotters Punished and Executors Neutralised by Indias security forces Amit Shah says

ನವದೆಹಲಿ, ಡಿಸೆಂಬರ್ 26: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಯಶಸ್ವಿ ತನಿಖೆ ನಡೆಸುವ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಮಾಸ್ಟರ್​​ಮೈಂಡ್​​ಗಳಿಗೆ ಬಲವಾದ ಮತ್ತು ಸೂಕ್ತವಾದ ಉತ್ತರವನ್ನು ನೀಡಲಾಗಿದೆ. ಪಹಲ್ಗಾಮ್ ತನಿಖೆಯು ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿನೆದುರು ಮತ್ತೊಮ್ಮೆ ಬಯಲು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ದಾಳಿಕೋರರು 26 ಜನರನ್ನು ಕೊಲ್ಲಲಾಗಿತ್ತು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ದಿನಗಳ ಕಾಲ ನಡೆದ…

Read More

August 2026 Rule Changes: ಆಗಸ್ಟ್ 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್‌ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್‌ ಮೇಲೆ ಭಾರಿ ಪ್ರಭಾವ – Kannada News | August 2026 Rule Changes: 5 New Laws Affecting LPG, Banking and Tatkal Bookings

ನವದೆಹಲಿ,ಜುಲೈ 29: ಭಾರತದಾದ್ಯಂತ ಹಣಕಾಸು, ಸಾರಿಗೆ ಮತ್ತು ಅಂಚೆ(Post) ಸೇವೆಗಳಲ್ಲಿ 5 ಪ್ರಮುಖ ಬದಲಾವಣೆಗಳು ಆಗಸ್ಟ್​ 1, 2026ರಿಂದ ಜಾರಿಗೆ ಬರಲಿವೆ. ಪ್ರತಿ ತಿಂಗಳ ಆರಂಭದಲ್ಲಿ ಹಲವು ಆರ್ಥಿಕ ನಿಯಮಗಳು ಬದಲಾಗುವಂತೆ, ಆಗಸ್ಟ್ 1 ರಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆಗಳಾಗಲಿವೆ. ಅಡುಗೆ ಅನಿಲ (LPG) ದರ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ನಿಯಮಗಳು ಹಾಗೂ ಅಂಚೆ ಶುಲ್ಕಗಳಲ್ಲಿನ ಈ ಬದಲಾವಣೆಗಳು ಸಾರ್ವಜನಿಕರ ದಿನನಿತ್ಯದ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿವೆ. ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್…

Read More

Pat Cummins: ಹೆಡ್, ಅಭಿಷೇಕ್ ಅಲ್ಲ, ನಮ್ಮ ಗೆಲುವಿಗೆ ಈತನೇ ಕಾರಣ! – Kannada News | Pat Cummins Post Match Interview After MI vs SRH Match

IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈ ನೀಡಿದ್ದ 244 ರನ್‌ಗಳ ಬೃಹತ್ ಮೊತ್ತವನ್ನು ಇನ್ನು 8 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಐತಿಹಾಸಿಕ ರನ್ ಚೇಸ್ ದಾಖಲಿಸಿದೆ. ಈ ಗೆಲುವಿನ ಬಳಿಕ ಮಾತನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, “ನಮ್ಮ ಬ್ಯಾಟಿಂಗ್ ಲೈನಪ್…

Read More

Pooja Rituals: ಹೋಮ-ಹವನ ಮಾಡುವಾಗ ಎದ್ದು ಹೊರಗೆ ಹೋಗಬಾರದು ಯಾಕೆ ಗೊತ್ತಾ? – Kannada News | The Sacred Discipline: Why Interrupting Homa and Pooja Rituals is Inauspicious

ಸಂಕಲ್ಪಪೂರ್ವಕವಾಗಿ ಮಾಡುವ ಪೂಜೆ, ವ್ರತ, ಯಜ್ಞ ಯಾಗಾದಿ, ಹೋಮಗಳ ಸಂದರ್ಭದಲ್ಲಿ, ಎಷ್ಟೇ ಕ್ಲಿಷ್ಟ ಅಥವಾ ಕಠಿಣ ಸಮಸ್ಯೆ ಎದುರಾದರೂ ಪೂಜಾ ಸ್ಥಳವನ್ನು ಬಿಟ್ಟು ಹೊರಗೆ ಬರಬಾರದು ಎಂಬುದು ನಿಯಮ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಅನೇಕ ಜನರು ಹೋಮ, ಯಜ್ಞಾದಿಗಳ ಸಮಯದಲ್ಲಿ ಫೋನ್ ಕರೆಗಳು, ವಿಐಪಿಗಳ ಆಗಮನ ಅಥವಾ ಇತರೆ ಕಾರಣಗಳಿಗಾಗಿ ಎದ್ದು ಹೋಗಿ ಮಾತನಾಡುತ್ತಾರೆ. ಇಂತಹ…

Read More

ಕರ್ನಾಟಕ ಹವಾಮಾನ ವರದಿ: ಇಂದೂ ಗುಡುಗು ಸಹಿತ ಮಳೆಯಾಗುವ ಸಂಭವ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು, ಏಪ್ರಿಲ್ 06: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ  (Weather Forecast)ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​ ಕಲಬುರ್ಗಿ, ಧಾರವಾಡ, ಗದಗ, ಶಿವಮೊಗ್ಗ ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ…

Read More

31 ವರ್ಷ ಜೈಲಿನಲ್ಲಿದ್ದ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಈಗ ಹೈಕೋರ್ಟ್ ವಕೀಲ! – Kannada News | After 31 years in jail Rajiv Gandhi assassination convict becomes High Court advocate

ಚೆನ್ನೈ, ಏಪ್ರಿಲ್ 28: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎ.ಜಿ. ಪೆರಾರಿವಾಲನ್ ಇದೀಗ ಹೈಕೋರ್ಟ್​ ವಕೀಲರಾಗಿದ್ದಾರೆ. 2022ರಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆದು ಬಿಡುಗಡೆಯಾದ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. 2025ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಈಗ ವಕೀಲರಾಗಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ಆರೋಪಿಯಾಗಿದ್ದ ಪೆರಾರಿವಾಲನ್ ಅವರನ್ನು 2022ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ…

Read More

ಮತ್ತೆ ಒಂದಾಗಲಿದ್ದಾರೆ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ; ಶೀಘ್ರವೇ ಮುಂಬೈನಲ್ಲಿ ‘ರಾಕಾ’ ಶೂಟಿಂಗ್ ಆರಂಭ – Kannada News | Allu Arjun, Rashmika Mandanna Reunite in Atlee’s ‘Raaka’ 700 Cr Budget Film Details

‘ಪುಷ್ಪ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಈಗ ಮತ್ತೆ ಒಂದಾಗುತ್ತಿದೆ. ಆದರೆ ಈ ಬಾರಿ ಇವರು ಪುಷ್ಪರಾಜ್ ಮತ್ತು ಶ್ರೀವಲ್ಲಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ನಿರ್ದೇಶಕ ಅಟ್ಲಿ ಅವರ ಮುಂದಿನ ಬಹುನಿರೀಕ್ಷಿತ ‘ರಾಕಾ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಮುಂಬೈನಲ್ಲಿ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ. ಈ ಸುದ್ದಿ ಸದ್ಯ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ರಾಕಾ’ ಚಿತ್ರಕ್ಕೆ…

Read More

ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ – Kannada News | DK Shivakumar Visits Ballari: Consoles Mother of Slain Congress Worker

ಬಳ್ಳಾರಿ, ಜನವರಿ 06: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರಾಜಶೇಖರ್ ನಿವಾಸಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಮುಂದೆ ಮೃತ ರಾಜಶೇಖರ ತಾಯಿ ತುಳಸಿ ಅವರು ಕಣ್ಣೀರು ಹಾಕಿದರು. ಇಡೀ ಮನೆಗೆ ರಾಜಶೇಖರ್ ಆಧಾರವಾಗಿದ್ದ ಎಂದು ಕಣ್ಣೀರು ಹಾಕಿದರು. ಇಡೀ ಪಕ್ಷವೇ ರಾಜಶೇಖರ ಕುಟುಂಬಸ್ಥರ ಜೊತೆ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಕುಟುಂಬಕ್ಕೆ ಅಗತ್ಯ…

Read More

ನಮ್ಮ ಮೆಟ್ರೋ ಗ್ರೀನ್ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಗಸ್ಟ್‌ನಿಂದ ಸಂಚಾರ ಆರಂಭಿಸಲಿವೆ 3 ಹೊಸ ರೈಲುಗಳು – Kannada News | Namma Metro Good News: 3 New Trains to Run on Green Line from August, Waiting Time Reduced to 3.30 Mins

ಬೆಂಗಳೂರು, ಜುಲೈ 8: ಸಿಲಿಕಾನ್ ಸಿಟಿ ಬೆಂಗಳೂರಿಗರ ನೆಚ್ಚಿನ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ಪರ್ಪಲ್ ಲೈನ್ ಹಾಗೂ ಗ್ರೀನ್ ಲೈನ್ ಎರಡೂ ಸೇರಿ ಮೆಟ್ರೋದಲ್ಲಿ ಪ್ರತಿದಿನ ಹತ್ತು ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದ್ದು, ಜನರಿಗೆ ನಿಲ್ಲಲು ಜಾಗ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಂತೂ (Peak Hours) ಮೆಟ್ರೋ ಒಳಗೆ ಹೋಗುವುದೇ ದೊಡ್ಡ ಸಾಹಸವಾಗಿದೆ. ಈ ಸಮಸ್ಯೆಗೆ…

Read More

ರಣರೋಚಕ ಪಂದ್ಯ… ಅಂತಿಮ ನಿಮಿಷದಲ್ಲಿ ಗೆದ್ದ ಬ್ರೆಝಿಲ್ – Kannada News | Brazil win it in the 95th minute goal against Japan

ಫಿಫಾ ವಿಶ್ವಕಪ್ 2026ರ ರೌಂಡ್ ಆಫ್-32 ಸುತ್ತಿನ 2ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ರೋಚಕ ಜಯ ಸಾಧಿಸಿದೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಈ ನಾಕೌಟ್ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಜಪಾನ್ ತಂಡಗಳು ಮುಖಾಮುಖಿಯಾಗಿದ್ದವು. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಮ್ಯಾಚ್​ನಲ್ಲಿ ಮೊದಲ ಗೋಲು ಬಾರಿಸಿದ್ದು ಜಪಾನ್. ಆದರೆ ಪಂದ್ಯ ಗೆದ್ದಿದ್ದು ಬ್ರೆಝಿಲ್ ಎಂಬುದು ವಿಶೇಷ. ಮೊದಲಾರ್ಧದಲ್ಲಿ ಜಪಾನ್ ಪರಾಕ್ರಮ: ಈ ಪಂದ್ಯದ ಆರಂಭದಿಂದಲೂ ಜಪಾನ್ ಆಟಗಾರರು ಬ್ರೆಝಿಲ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಪಂದ್ಯದ 29ನೇ…

Read More