ಕ್ವಾರಿ ದುರಂತ: ಐವರು ಕಾರ್ಮಿಕರ ಸ್ಥಿತಿ ಗಂಭೀರ, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ – Kannada News | Madapatna Quarry Tragedy: Five Workers Critical, Seven Confirmed Dead in Bengaluru

ರಾಮನಗರ, ಜುಲೈ 02: ಮಾದಪಟ್ಟಣ ಸಮೀಪದ ಕಾವೇರಿ ಕ್ರಷರ್‌ನಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತ ದುರಂತದಲ್ಲಿ 7 ಜನ ಮೃತಪಟ್ಟಿದ್ದರೆ, ಗಂಭೀವಾಗಿ ಗಾಯಗೊಂಡ ಐವರು ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ರಕ್ಷಣಾ ಕಾರ್ಯಾಚರಣೆಯ ಬಳಿಕ ಇವರನ್ನು ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಕಾರ್ಮಿಕರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಕೈ ಕಾಲುಗಳು, ಹಣೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ರಕ್ತಸ್ರಾವದಿಂದಾಗಿ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

30 ದಿನ ಜೈಲಲ್ಲಿದ್ದರೆ ಕಳೆದುಕೊಳ್ತಾರೆ ಮಂತ್ರಿ ಸ್ಥಾನ: ಸಚಿವರ ಹುದ್ದೆ ಕಳೆದುಕೊಳ್ಳುವ ಕಠಿಣ ಮಸೂದೆ ಸಿದ್ಧ – Kannada News | Ministers Face Losing Post: 30 Day Jail Rule Proposed in New Amendment Bill

ನವದೆಹಲಿ, ಜುಲೈ 02: ಪ್ರಧಾನಿ, ಮುಖ್ಯಮಂತ್ರಿ(Chief Minister) ಅಥವಾ ಕೇಂದ್ರ ಮತ್ತು ರಾಜ್ಯ ಸಚಿವರು ಯಾವುದೇ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಸತತ 30 ದಿನಗಳ ಕಾಲ ಜೈಲಿನಲ್ಲಿದ್ದರೆ , ಅವರು ಸ್ವಯಂಚಾಲಿತವಾಗಿ ತಮ್ಮ ಸಚಿವ ಹುದ್ದೆಯನ್ನು ಕಳೆದುಕೊಳ್ಳುವ ಕಠಿಣ ಕಾನೂನೊಂದು ಜಾರಿಗೆ ಬರಲು ಸಿದ್ಧತೆಯಾಗಿದೆ. ಈ ನಿಬಂಧನೆಯನ್ನು ಒಳಗೊಂಡಿರುವ ವಿವಾದಾತ್ಮಕ ‘130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ’ಯನ್ನು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆಯಿದೆ.

ಈ ಪ್ರಸ್ತಾವಿತ ಮಸೂದೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು (JPC) ಜುಲೈ 17 ರಂದು ತನ್ನ ಅಂತಿಮ ವರದಿಯನ್ನು ಅನುಮೋದಿಸುವ ನಿರೀಕ್ಷೆಯಿದೆ. ಬುಧವಾರ ನಡೆದ ಸಮಿತಿಯ ಸಭೆಯ ಮೂಲಗಳ ಪ್ರಕಾರ, ದೇಶದ ಹಲವು ವಲಯಗಳಿಂದ ಈ 30 ದಿನಗಳ ಕಠಿಣ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ಸಹ, ಜೆಪಿಸಿ ಸಮಿತಿಯು ಈ ವಿವಾದಾತ್ಮಕ ನಿಯಮವನ್ನು ಮಸೂದೆಯಿಂದ ತೆಗೆದುಹಾಕಲು ಶಿಫಾರಸು ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಅಂದರೆ ಈ ನಿಯಮ ಮಸೂದೆಯಲ್ಲಿ ಹಾಗೇ ಉಳಿಯಲಿದೆ.

ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು, ಕೇವಲ ರಾಜಕೀಯ ದ್ವೇಷ ಅಥವಾ ಗುಪ್ತ ಉದ್ದೇಶಗಳಿಗಾಗಿ ಈ ಕಠಿಣ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ, ಇಂತಹ ರಾಜಕೀಯ ಪ್ರೇರಿತ ಬಂಧನಗಳನ್ನು ತಡೆಯಲು ಮತ್ತು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸದಂತೆ ತೂಗಾಡಿಸಲು ಕೆಲವು ಅಗತ್ಯ ‘ಸುರಕ್ಷತಾ ಕ್ರಮಗಳನ್ನು’ ಈ ವರದಿಯಲ್ಲಿ ಸೇರಿಸಲು ಸಮಿತಿ ನಿರ್ಧರಿಸಿದೆ.

ಮತ್ತಷ್ಟು ಓದಿ: ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್​​ ಈಶ್ವರ್​​ ಕಣ್ಣೀರು

ಈ ಪ್ರಸ್ತಾವಿತ ತಿದ್ದುಪಡಿಯು ಸದ್ಯ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಈ ನಿಯಮ ಜಾರಿಗೆ ಬಂದರೆ ಸಾರ್ವಜನಿಕ ಜೀವನದಲ್ಲಿ ಮತ್ತು ಉನ್ನತ ರಾಜಕೀಯ ಹುದ್ದೆಗಳಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ನೈತಿಕತೆ ಹೆಚ್ಚುತ್ತದೆ ಎಂದು ಮಸೂದೆಯನ್ನು ಬೆಂಬಲಿಸುವವರು ವಾದಿಸುತ್ತಿದ್ದಾರೆ.

ವಿಮರ್ಶಕರ ಆತಂಕ: ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳ ಮೂಲಕ ಚುನಾಯಿತ ಮುಖ್ಯಮಂತ್ರಿಗಳು ಅಥವಾ ಸಚಿವರನ್ನು 30 ದಿನಗಳ ಕಾಲ ಜೈಲಿಗೆ ದೂಡಿ, ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸರ್ಕಾರಗಳನ್ನು ಬೀಳಿಸಲು ಈ ಕಾನೂನನ್ನು ಅಸ್ತ್ರವಾಗಿ ಬಳಸಬಹುದು ಎಂದು ವಿರೋಧಿಗಳು ಎಚ್ಚರಿಸಿದ್ದಾರೆ. ಜೆಪಿಸಿ ವರದಿ ಸಲ್ಲಿಕೆಯಾದ ಬಳಿಕ ಸಂಸತ್ತಿನಲ್ಲಿ ಈ ಮಸೂದೆಯ ಮೇಲೆ ಭಾರಿ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಸ್ಯಾಲರಿ ಹೈಕ್ ಕಡಿಮೆಯಾದದ್ದಕ್ಕೆ ಜಾಬ್ ರಿಸೈನ್ ಮಾಡಿದ ಬೆಂಗಳೂರಿನ ಯುವಕ – Kannada News | Bengaluru: A hike of just ₹2,000 despite working day and night without sleep; a young man makes a firm decision.

ಬೆಂಗಳೂರು, ಜುಲೈ 02: ಓದು ಮುಗಿಯುತ್ತಿದ್ದಂತೆ ಕೆಲಸವೊಂದು ಸಿಕ್ಕಿ ಬಿಡಬೇಕು. ಕಡಿಮೆ ಸಂಬಳವಿದ್ರೂ ಸಮಸ್ಯೆಯಿಲ್ಲ. ಆದರೆ ಕೆಲಸ ಸಿಕ್ಕಿ ಒಂದಷ್ಟು ವರ್ಷಗಳು ಕಳೆಯುತ್ತಿದ್ದಂತೆ ಹೆಚ್ಚಿನ ಸಂಬಳದ ಕೆಲಸವನ್ನು ಹುಡುಕುತ್ತಾರೆ. ಆದರೆ  ಬೆಂಗಳೂರಿನ (Bengaluru) ಯುವಕನಿಗೆ ಹಗಲು ರಾತ್ರಿ ನಿದ್ದೆಯಿಲ್ಲದೇ ದುಡಿದ್ರೂ ಕಂಪನಿ 2,000 ರೂ ಸಂಬಳ ಹೆಚ್ಚಳ ಮಾಡಿದೆ. ಹೀಗಾಗಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮಟೆ ಬಾರಿಸಿ ಖುಷಿ ಪಟ್ಟಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.

ಹ್ಯೂಮನ್ಸ್ ಆಫ್ ಬಾಂಬೆ (Humans Off Bombay) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಮೋದ್ ಪೌಲ್ ಎಂಬ ಯುವಕ ತನ್ನ ಅನುಭವವನ್ನು ಹಂಚಿಕೊಂಡಿದ್ದು, ಕೆಲಸಕ್ಕೆ ರಾಜೀನಾಮೆ ಕೊಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾನೆ.  ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಿದ್ರೂ, ಕೆಲಸಕ್ಕೆ ತಕ್ಕಂತೆ ಸಂಬಳವಿಲ್ಲ. ಈ ಕಾರಣಕ್ಕೆ ರಾಜೀನಾಮೆ ನೀಡಿದೆ. ಹಗಲು ರಾತ್ರಿ ನಿದ್ದೆ ಬಿಟ್ಟು ಆತಂಕ, ಖಿನ್ನತೆ ಅನುಭವಿಸಿದ್ದು ಯಾವ ಕಾರಣಕ್ಕಾಗಿ ಎಂಬುದು ಕೇವಲ 6% ಸಂಬಳ ಏರಿಕೆಗಾ ಎಂದು ತಿಳಿಯುತ್ತಿಲ್ಲ. ಆರು ಪರ್ಸೆಂಟ್ ಅಂದ್ರೆ ತಿಂಗಳಿಗೆ ಕೇವಲ 2,600 ರೂಪಾಯಿ ಜಾಸ್ತಿ ಆಗಿದೆ ಅಷ್ಟೇ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಕೆಲಸದ ಆತಂಕದಿಂದಾಗಿ ನಾನು ಸೈಕ್ಯಾಟ್ರಿಸ್ಟ್‌ರನ್ನು ಭೇಟಿಯಾದೆ. ಕನ್ಸಲ್ಟೇಷನ್ ಫೀಸ್ 2,000 ರೂಪಾಯಿ ಆಗಿತ್ತು. ಅವರು ನನ್ನನ್ನು ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಥೆರಪಿಗೆ ಹೋಗಲು ಹೇಳಿದ್ರು. ಆ ಒಂದು ಸೆಷನ್‌ಗೆ 3,000 ರೂ. ವಾರ್ಷಿಕ ಸಂಬಳ ಹೆಚ್ಚಳಕ್ಕಿಂತ ಒಂದು ಥೆರಪಿ ಸೆಷನ್‌ನ ಖರ್ಚು ಹೆಚ್ಚಾಗಿದ್ದರೆ, ನೀವು ನಿಜವಾಗಿಯೂ ಸಂಕಷ್ಟದಲ್ಲಿದ್ದೀರಿ ಎನ್ನುವುದು ನೂರಕ್ಕೆ ನೂರರಷ್ಟು ಖಚಿತ ಎಂದಿದ್ದಾನೆ.

ನಮ್ಮ ಊರಿನಲ್ಲಿ ಚಹಾ ಮಾರುವವರು ತಿಂಗಳಿಗೆ 2 ಲಕ್ಷ ರೂಪಾಯಿವರೆಗೆ ಸಂಪಾದಿಸುವುದನ್ನು ನಾನು ನೋಡಿದ್ದೇನೆ. ಆದರೆ ನನ್ನದು ಮಾತ್ರ ಕಡಿಮೆ ಸಂಬಳದ ಕೆಲಸವಾಗಿದೆ. ಅದಲ್ಲದೇ ಕಾರ್ಪೊರೇಟ್ ಜೀವನದ ಬಗ್ಗೆ ತಮಾಷೆ ಮಾಡಿದೆ. ಅಮ್ಮನ ಜೊತೆ ವಿಡಿಯೋಗಳನ್ನು ಮಾಡಿದೆ. ಈ ವಿಡಿಯೋಗಳು ನನಗೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಆಯ್ತು. ಕಂಟೆಂಟ್ ಕ್ರಿಯೇಷನ್ ನಾನು ಮಾನಸಿಕ ಹಾಗೂ ಆರ್ಥಿಕವಾಗಿ ಗಟ್ಟಿಯಾಗುವಂತೆ ಮಾಡಿತು ಎಂದು ಹೇಳಿದ್ದಾನೆ.

ಅದಲ್ಲದೇ, ನಾನು ಸೀನಿಯರ್ ಅನಾಲಿಸ್ಟ್‌ನ ಕೆಲಸವನ್ನು ಮಾಡುತ್ತಿದ್ದೆ. ಆದರೆ ಅಪ್ರೈಸಲ್ ಸಮಯದಲ್ಲಿ ನನಗೆ ಕೇವಲ 2,000 ರೂ ಸಂಬಳವಷ್ಟೇ ಹೆಚ್ಚಳ ಮಾಡಿದ್ರು. ಹಾಗಾಗಿ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆದರೆ ಈಗ 3 ಲಕ್ಷ ರೂ ಸಾಲವಿದೆ. ಮಾನಸಿಕವಾದ ಹಿಂಸೆ ಹಾಗೂ ಶೋಷಣೆ ಸಹಿಸಿಕೊಂಡು ಇರುವುದು ಒಳ್ಳೆಯದಲ್ಲ ಎಂದು ಈ ನಿರ್ಧಾರಕ್ಕೆ ಬಂದೆ ಎಂದು ವಿವರಿಸಿದ್ದಾನೆ.

ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ನಂಗೆ ಖುಷಿಯಾಗಿದೆ; ಉದ್ಯೋಗಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಈ ನಿರ್ಧಾರ ನಿಮ್ಮ ಮನಸ್ಸಿಗೆ ಒಪ್ಪಿಗೆಯಾದರೆ ಸಾಕು ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚು ಚಿಂತಿಸಬೇಡಿ, ಬೇರೆ ಕೆಲಸಕ್ಕೆ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ರಾಜೀನಾಮೆ ನೀಡುವ ಧೈರ್ಯವನ್ನು ಮೆಚ್ಚಿಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಜಿಲ್ಲಾಸ್ಪತ್ರೆ ಅಗ್ನಿ ದುರಂತದ ಕಾರಣ ಬಯಲು: ತನಿಖೆಯಲ್ಲಿ ಗೊತ್ತಾಯ್ತು ಅಸಲಿ ಸತ್ಯ – Kannada News | Davanagere District Hospital Fire Accident: Probe Reveals Faulty Medical Equipment and Doctors Negligence Caused OT Fire

ದಾವಣಗೆರೆ ಜಿಲ್ಲಾಸ್ಪತ್ರೆImage Credit source: tv9

ದಾವಣಗೆರೆ, ಜುಲೈ 2: ದಾವಣಗೆರೆ (Davanagere) ಜಿಲ್ಲಾ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (OT) ಜೂನ್ 30 ರಂದು ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿ ತನಿಖೆಯಲ್ಲಿ ಆಘಾತಕಾರಿ ಸತ್ಯಗಳು ಹೊರಬಂದಿವೆ. ಆಸ್ಪತ್ರೆಯಲ್ಲಿ ಸುಸ್ಥಿತಿಯಲ್ಲಿ ಇಲ್ಲದ ಮತ್ತು ಬಳಸಲು ಯೋಗ್ಯವಲ್ಲದ ವೈದ್ಯಕೀಯ ಯಂತ್ರೋಪಕರಣಗಳನ್ನು ಬಳಸಿದ್ದೇ ಈ ಅಗ್ನಿ ದುರಂತಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ನೇಮಿಸಿದ್ದ ತನಿಖಾ ತಂಡ ಪತ್ತೆಹಚ್ಚಿದೆ. ಉಪ ವಿಭಾಗಾಧಿಕಾರಿ (AC) ಸಂತೋಷ್ ಕುಮಾರ್ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷ ತನಿಖೆ ನಡೆಸಿದ ಬಳಿಕ ಈ ತಾಂತ್ರಿಕ ಲೋಪಗಳು ಬೆಳಕಿಗೆ ಬಂದಿದೆ. ಜೂನ್ 30 ರಂದು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ ಸಂಭವಿಸಿ, ಅದೃಷ್ಟವಶಾತ್ ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿತ್ತು.

ಬ್ಯಾಟರಿ ಹಾಳಾಗಿದ್ದರೂ ಬದಲಿಸದ ಆಡಳಿತ ಮಂಡಳಿ

ತನಿಖಾ ತಂಡದ ವರದಿಯ ಪ್ರಕಾರ, ಅಗ್ನಿ ಅವಘಡ ಸಂಭವಿಸಿದ ಆಪರೇಷನ್ ರೂಮ್‌ನಲ್ಲಿದ್ದ ‘ಅರಿವಳಿಕೆ ವರ್ಕ್ ಸ್ಟೇಷನ್’ (Anesthesia Workstation) ಸೇರಿದಂತೆ ಹಲವು ಪ್ರಮುಖ ಯಂತ್ರಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಈ ಯಂತ್ರೋಪಕರಣಗಳಿಗೆ ಅಳವಡಿಸಲಾಗಿದ್ದ ಬ್ಯಾಟರಿಗಳು ಸಂಪೂರ್ಣವಾಗಿ ಹಾಳಾಗಿದ್ದವು. ಈ ಬಗ್ಗೆ ಆಸ್ಪತ್ರೆಯ ಯಂತ್ರಗಳ ಉಸ್ತುವಾರಿ ಹೊತ್ತಿದ್ದ ಖಾಸಗಿ ಏಜೆನ್ಸಿಯು ಮೊದಲೇ ಪರಿಶೀಲನೆ ನಡೆಸಿ, ಬ್ಯಾಟರಿಗಳನ್ನು ತಕ್ಷಣವೇ ಬದಲಾಯಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಲಿಖಿತ ವರದಿ ನೀಡಿತ್ತು. ಆದರೆ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ವೈದ್ಯರು ಹಾಗೂ ಸಿಬ್ಬಂದಿ ಅದೇ ಹಾಳಾದ ಯಂತ್ರಗಳನ್ನು ಬಳಸುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಪವಿಭಾಗಾಧಿಕಾರಿ ಸಂತೋಷ್‌ ಕುಮಾರ್ ಅವರು ಈ ಎಲ್ಲಾ ಅಂಶಗಳನ್ನೊಳಗೊಂಡ ಅಧಿಕೃತ ವರದಿಯನ್ನು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

ಸಚಿವರಿಂದ ಸಂಪೂರ್ಣ ವರದಿಗೆ ಸೂಚನೆ: ಉನ್ನತ ತಂಡದಿಂದ ಪರಿಶೀಲನೆ

ಮತ್ತೊಂದೆಡೆ, ಜಿಲ್ಲಾ ಆಸ್ಪತ್ರೆಯ ಈ ಅಗ್ನಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್, ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸಚಿವರ ಆದೇಶದ ಬೆನ್ನಲ್ಲೇ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ತನಿಖಾ ತಂಡವು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲಿನ ಮುಖ್ಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿರುವ ಅಧಿಕಾರಿಗಳು, ಅಂದು ಕರ್ತವ್ಯದಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯಿಂದ ಇಂಚಿಂಚೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್ ಸಿಲಿಂಡರ್ ಸ್ಫೋಟ: ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ

ತಪ್ಪಿತಸ್ಥ ಅಧಿಕಾರಿಗಳು ಹಾಗೂ ವೈದ್ಯರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವ ಮುನ್ಸೂಚನೆ ಲಭ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Puja Posture: ದೇವರ ಮುಂದೆ ನಿಂತು ಪೂಜೆ ಮಾಡಬೇಕೇ ಅಥವಾ ಕುಳಿತು ಮಾಡಬೇಕೇ? ಯಾವುದು ಶ್ರೇಷ್ಠ? – Kannada News | Hindu Puja Posture: Stand or Sit? Decoding Ritual Rules and Exceptions

ದೇವರ ಮುಂದೆ ನಿಂತು ಪೂಜೆ ಮಾಡಬೇಕೇ?Image Credit source: hinduwebsite.com

ಹಿಂದೂ ಧರ್ಮದಲ್ಲಿ ದೈನಂದಿನ ಪೂಜೆ ಮತ್ತು ದೇವತಾ ಆರಾಧನೆಗೆ ಅತ್ಯಂತ ವಿಶೇಷ ಮಹತ್ವವಿದೆ. ಆದರೆ ಪೂಜೆ ಮಾಡುವಾಗ ದೇವರ ಮುಂದೆ ನಿಂತುಕೊಳ್ಳಬೇಕೇ ಅಥವಾ ಕುಳಿತುಕೊಳ್ಳಬೇಕೇ ಎಂಬ ಗೊಂದಲ ಬಹುತೇಕರಲ್ಲಿ ಕಾಡುತ್ತದೆ. ಕೆಲವೊಮ್ಮೆ ಸಮಯದ ಅಭಾವದಿಂದ ಆತುರದಲ್ಲಿ ನಿಂತೇ ಕೈಮುಗಿದರೆ, ಇನ್ನು ಕೆಲವೊಮ್ಮೆ ಆರಾಮವಾಗಿ ಚಾಪೆಯ ಮೇಲೆ ಕುಳಿತು ಪೂಜಿಸುತ್ತೇವೆ. ಆದರೆ, ನಮ್ಮ ಶಾಸ್ತ್ರಗಳು ಮತ್ತು ಪುರಾಣಗಳಲ್ಲಿ ಪೂಜೆ ಮಾಡಲು ಕೆಲವು ನಿರ್ದಿಷ್ಟ ನಿಯಮಗಳನ್ನು ವಿವರಿಸಲಾಗಿದೆ. ಅವುಗಳ ಹಿಂದಿರುವ ನೈಜ ಕಾರಣಗಳನ್ನು ಇಲ್ಲಿ ತಿಳಿದುಕೊಳ್ಳಿ.

ಕುಳಿತು ಪೂಜೆ ಮಾಡುವುದು ಅತ್ಯಂತ ಸೂಕ್ತ ಮತ್ತು ಶ್ರೇಷ್ಠ:

ಧಾರ್ಮಿಕ ನಂಬಿಕೆಗಳು ಮತ್ತು ಶಾಸ್ತ್ರಗಳ ಪ್ರಕಾರ, ದೇವರ ದೈನಂದಿನ ಪೂಜೆಯನ್ನು ಯಾವಾಗಲೂ ಆಸನದ ಮೇಲೆ ಕುಳಿತು ಮಾಡುವುದು ಅತ್ಯಂತ ಶ್ರೇಷ್ಠ. ನೇರವಾಗಿ ಬರಿ ನೆಲದ ಮೇಲೆ ಕುಳಿತುಕೊಳ್ಳುವ ಬದಲು, ಹತ್ತಿ ಬಟ್ಟೆ, ಅಥವಾ ಚಾಪೆಯನ್ನು ಬಳಸುವುದು ವಾಡಿಕೆ. ಆಸನದ ಮೇಲೆ ಕುಳಿತುಕೊಳ್ಳುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ದೇಹವು ಸ್ಥಿರತೆಯನ್ನು ಪಡೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ದಿನನಿತ್ಯದ ಪೂಜೆ, ಮಂತ್ರ ಪಠಣ, ಜಪ ಮತ್ತು ಧ್ಯಾನ ಮಾಡುವಾಗ ಕಡ್ಡಾಯವಾಗಿ ಕುಳಿತುಕೊಳ್ಳಲು ಸೂಚಿಸಲಾಗುತ್ತದೆ.

ಯಾವ ಸಂದರ್ಭಗಳಲ್ಲಿ ನಿಂತು ಪೂಜೆ ಮಾಡುವುದು ಧರ್ಮ ಸಮ್ಮತ?

ಹಾಗಂತ ಪೂಜೆಯ ಸಮಯದಲ್ಲಿ ನಿಲ್ಲುವುದೇ ತಪ್ಪು ಎಂದು ಇದರ ಅರ್ಥವಲ್ಲ. ಅನೇಕ ಧಾರ್ಮಿಕ ಸಂದರ್ಭಗಳಲ್ಲಿ ನಿಂತು ಪೂಜಿಸುವುದು ನಮ್ಮ ಸಂಪ್ರದಾಯದ ಭಾಗವಾಗಿದೆ. ದೇವರಿಗೆ ಮಂಗಲ ಆರತಿ ಮಾಡುವಾಗ, ದೇವತೆಗಳ ಪ್ರಾರ್ಥನೆ ಅಥವಾ ಸ್ತೋತ್ರಗಳನ್ನು ಪಠಿಸುವಾಗ, ಧೂಪ-ದೀಪಗಳನ್ನು ಅರ್ಪಿಸುವಾಗ ಭಕ್ತರು ನಿಂತುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ದೇವಸ್ಥಾನಗಳಲ್ಲಿ ದೊಡ್ಡ ಜನಸಂದಣಿ ಇದ್ದಾಗ ಅಥವಾ ಆಸನದ ಲಭ್ಯತೆ ಇಲ್ಲದಿದ್ದಾಗ ನಿಂತುಕೊಂಡೇ ದೇವರನ್ನು ಸ್ಮರಿಸುವುದು ಮತ್ತು ಪ್ರಾರ್ಥಿಸುವುದು ಯಾವುದೇ ದೋಷವನ್ನು ತರುವುದಿಲ್ಲ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಪೂಜೆಯ ಸಮಯದಲ್ಲಿ ಭಂಗಿ ಯಾಕೆ ಮುಖ್ಯವಾಗುತ್ತದೆ?

ನಮ್ಮ ಧಾರ್ಮಿಕ ಗ್ರಂಥಗಳು ಪೂಜೆಯ ಭಂಗಿಗೆ ಹೆಚ್ಚಿನ ಒತ್ತು ನೀಡುತ್ತವೆ. ಸರಿಯಾದ ಭಂಗಿಯಲ್ಲಿ (ಸ್ಥಿರ ಸುಖಮಾಸನ) ಕುಳಿತುಕೊಳ್ಳುವುದರಿಂದ ದೇಹದಲ್ಲಿನ ಶಕ್ತಿ ಕೇಂದ್ರಗಳು ಸಮತೋಲನಗೊಳ್ಳುತ್ತವೆ. ಇದು ಮನಸ್ಸು ಇತ್ತೀಚೆಗೆ ಅಲೆದಾಡದಂತೆ ತಡೆದು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ದೇವರ ಮೇಲಿನ ಭಕ್ತಿಯನ್ನು ಗಟ್ಟಿಗೊಳಿಸುತ್ತದೆ. ಇದೇ ಕಾರಣಕ್ಕಾಗಿ ಪ್ರಾಚೀನ ಕಾಲದ ಋಷಿ-ಮುನಿಗಳು ಮತ್ತು ಸಂತರು ತಮ್ಮ ತಪಸ್ಸಿನ ಅವಧಿಯಲ್ಲಿ ನಿರ್ದಿಷ್ಟ ಆಸನ ಹಾಗೂ ಭಂಗಿಗಳನ್ನು ಬಳಸುತ್ತಿದ್ದರು.

ವೃದ್ಧರು ಅಥವಾ ಅನಾರೋಗ್ಯ ಪೀಡಿತರಿಗೆ ಶಾಸ್ತ್ರಗಳಲ್ಲಿ ವಿನಾಯಿತಿ ಇದೆಯೇ?

ಖಂಡಿತವಾಗಿಯೂ ಇದೆ. ಒಬ್ಬ ವ್ಯಕ್ತಿಗೆ ವಯೋಸಹಜ ಕಾರಣಗಳಿಂದಾಗಿ ಅಥವಾ ಅನಾರೋಗ್ಯದ ನಿಮಿತ್ತ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಂತು ಅಥವಾ ಕುರ್ಚಿಯ ಮೇಲೆ ಕುಳಿತು ಪೂಜೆ ಮಾಡಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಂತನು ಭಕ್ತನ ಬಾಹ್ಯ ಭಂಗಿಗಿಂತ ಹೆಚ್ಚಾಗಿ ಆತನ ಅಂತಃಕರಣದ ನಿಷ್ಕಲ್ಮಶ ಭಕ್ತಿ ಮತ್ತು ನಂಬಿಕೆಯನ್ನು ಪ್ರೀತಿಸುತ್ತಾನೆ. ಹಾಗಾಗಿ ಆರೋಗ್ಯದ ಸಮಸ್ಯೆಗಳಿದ್ದಾಗ ಪೂಜಾ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವುದು ತಪ್ಪಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಲು ಕ್ವಾರಿ ದುರಂತ: ಅಕ್ರಮ ಚಟುವಟಿಕೆಗಳ ತನಿಖೆಗೆ ಡಿಸಿಎಂ ಪರಮೇಶ್ವರ್ ಆದೇಶ

ಬೆಂಗಳೂರು, ಜುಲೈ 02: ಮಾದಪಟ್ಟಣ ಗ್ರಾಮದ ಸಮೀಪವಿರುವ ಕಾವೇರಿ ಕ್ರಷರ್‌ನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಏಳು ಬಿಹಾರ ಮೂಲದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಲ್ಲು ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಬಂಡೆ ಕುಸಿದ ಪರಿಣಾಮ ಸಂಭವಿಸಿದ ದುರ್ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರು, ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ. ತಮ್ಮ ಇಲಾಖೆಗೆ ಸಂಬಂಧಿಸಿದ ಯಾವುದೇ ಅಂಶವಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಘಟನೆ ಅಕ್ರಮವಾಗಿ ನಡೆಯುತ್ತಿದೆಯೇ ಎಂಬುದರ ಬಗ್ಗೆಯೂ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಪೆನಾಲ್ಟಿ ವಿವಾದ, ವಿಶ್ವಕಪ್ ಇತಿಹಾಸದಲ್ಲೇ ತಡವಾಗಿ ದಾಖಲಾದ ಗೋಲು! – Kannada News | Fifa World Cup 2026: Belgium vs Senegal Penalty Controversy

ಫಿಫಾ ವಿಶ್ವಕಪ್‌ನ ‘ರೌಂಡ್ ಆಫ್ 32’ ಹಂತದ ರೋಚಕ ಪೈಪೋಟಿ ಮುಂದುವರೆದಿದೆ. ಈ ಬಾರಿಯ ಪೈಪೋಟಿಯಲ್ಲಿ ಮುಖಾಮುಖಿಯಾಗಿದ್ದು ಬೆಲ್ಜಿಯಂ ಮತ್ತು ಸೆನೆಗಲ್. ಈ ತಂಡಗಳ ನಡುವಿನ ಕದನವು ಫುಟ್‌ಬಾಲ್ ಇತಿಹಾಸದಲ್ಲೇ ಎಂದಿಗೂ ಮರೆಯಲಾಗದ ರೋಮಾಂಚಕ ಹಾಗೂ ವಿವಾದಾತ್ಮಕ ಅಂತ್ಯವನ್ನು ಕಂಡಿದೆ.

ಏಕೆಂದರೆ ಹೆಚ್ಚುವರಿ ಸಮಯದ ಕೊನೆಯ ನಿಮಿಷದಲ್ಲಿ ಲಭಿಸಿದ ಒಂದು ಪೆನಾಲ್ಟಿ ತೀರ್ಪು ಇಡೀ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ಈ ಪೆನಾಲ್ಟಿ ತೀರ್ಪಿನ ವಿರುದ್ಧ ಇದೀಗ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

ಮೊದಲಾರ್ಧದಲ್ಲಿ ಸೆನೆಗೆಲ್ ತಂಡವು 2-0 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ ದ್ವಿತಿಯಾರ್ಧದಲ್ಲಿ ಕಂಬ್ಯಾಕ್ ಮಾಡಿದ ಬೆಲ್ಜಿಯಂ ಪಡೆ ಎರಡು ಗೋಲು ದಾಖಲಿಸಿ 2-2 ಅಂತರದಿಂದ ಸಮಬಲ ಸಾಧಿಸಿದರು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚುವರಿ 30 ನಿಮಿಷಗಳನ್ನು ನೀಡಲಾಯಿತು.

117ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ನಾಯಕ ಯೂರಿ ಟೀಲೆಮನ್ಸ್ ಸೆನೆಗಲ್‌ನ ಪೆನಾಲ್ಟಿ ಬಾಕ್ಸ್‌ನೊಳಗೆ ನುಗ್ಗಿದರು. ಈ ವೇಳೆ ಸೆನೆಗಲ್‌ನ ಮಿಡ್‌ಫೀಲ್ಡರ್ ಲಮೈನ್ ಕಮರಾ ಹಿಂದಿನಿಂದ ಸ್ಲೈಡ್ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಟೀಲೆಮನ್ಸ್ ಬಿದ್ದರು.

ತಕ್ಷಣವೇ ಬೆಲ್ಜಿಯಂ ಆಟಗಾರರು ಪೆನಾಲ್ಟಿಗಾಗಿ ರೆಫರಿಗೆ ಮನವಿ ಮಾಡಿದ್ದಾರೆ. ಈ ವೇಳೆ ರೆಫರಿ ನೇರವಾಗಿ ಪೆನಾಲ್ಟಿ ನೀಡದೇ, ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಮರುಪರಿಶೀಲನೆಗೆ ಸೂಚಿಸಿದರು. ಸುದೀರ್ಘ ಪರಿಶೀಲನೆಯ ನಂತರ ರೆಫರಿ ಬೆಲ್ಜಿಯಂಗೆ ಪೆನಾಲ್ಟಿ ಕಿಕ್ ನೀಡಿದರು.

ಟೀಲೆಮನ್ಸ್ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ಪಂದ್ಯದ 124 ನಿಮಿಷ ಮತ್ತು 44 ಸೆಕೆಂಡುಗಳಲ್ಲಿ ಗೋಲು ಗಳಿಸಿದರು. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ತಡವಾಗಿ ದಾಖಲಾದ ಗೋಲು ಎಂಬ ಐತಿಹಾಸಿಕ ದಾಖಲೆ ಬರೆಯಿತು. ಈ ಮೂಲಕ ಬೆಲ್ಜಿಯಂ 3-2 ಅಂತರದಲ್ಲಿ ಜಯಗಳಿಸಿತು.

ಸಾಮಾನ್ಯವಾಗಿ ಫುಟ್‌ಬಾಲ್ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋದಾಗ ಒಟ್ಟು 120 ನಿಮಿಷಗಳ ಆಟವಿರುತ್ತದೆ. ಆದರೆ ಬೆಲ್ಜಿಯಂ ಮತ್ತು ಸೆನೆಗಲ್ ಪಂದ್ಯದಲ್ಲಿ ಇಷ್ಟು ದೊಡ್ಡ ಸಮಯದ ವಿಳಂಬ ಉಂಟಾಗಲು ಮತ್ತು ಈ ದಾಖಲೆ ಸೃಷ್ಟಿಯಾಗಲು ಮೈದಾನದಲ್ಲಿ ನಡೆದ ಪೆನಾಲ್ಟಿ ವಿವಾದ ಮತ್ತು ನಾಟಕೀಯ ಘಟನೆಗಳೇ ಕಾರಣ. ಈ ಕಾರಣದಿಂದಾಗಿ ಪೆನಾಲ್ಟಿ ಕಿಕ್ ಕೊಡಲು ತಡವಾಯಿತು. ಅದರಂತೆ ಟೀಲೆಮನ್ಸ್ 124ನೇ ನಿಮಿಷದಲ್ಲಿ ಗೋಲು ದಾಖಲಿಸಿ, ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ತಡವಾಗಿ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡರು.

ಪೆನಾಲ್ಟಿ ಪರ ವಾದ:

ಫಿಫಾದ ನಿಯಮಗಳ ಪ್ರಕಾರ, ಡಿಫೆಂಡರ್ ಒಬ್ಬರು ಎದುರಾಳಿ ಆಟಗಾರನನ್ನು ಟ್ಯಾಕಲ್ ಮಾಡುವಾಗ ಮೊದಲು ಚೆಂಡನ್ನು ಸ್ಪರ್ಶಿಸಬೇಕು. ಆದರೆ ಸ್ಲೋ-ಮೋಷನ್ ರೀಪ್ಲೇಗಳಲ್ಲಿ ಸೆನೆಗಲ್‌ನ ಕಮರಾ ಅವರ ಕಾಲು ಚೆಂಡನ್ನು ಮುಟ್ಟುವ ಮೊದಲೇ ಟೀಲೆಮನ್ಸ್ ಅವರ ಹಿಮ್ಮಡಿಗೆ ಬಲವಾಗಿ ತಗುಲಿರುವುದು ಸ್ಪಷ್ಟವಾಗಿ ಕಂಡಿದೆ.

ಆಟಗಾರನ ಹಿಂಬದಿಯಿಂದ ಬರುವ ಸ್ಲೈಡಿಂಗ್ ಚಾಲೆಂಜ್‌ಗಳು ಯಾವಾಗಲೂ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕಮರಾ ಹಿಂದಿನಿಂದ ಬಂದಿದ್ದರಿಂದ ಟೀಲೆಮನ್ಸ್ ನಿಯಂತ್ರಣ ತಪ್ಪಿ ಬೀಳಲು ಅದು ನೇರ ಕಾರಣವಾಯಿತು.

ಮೈದಾನದಲ್ಲಿ ರೆಫರಿ ಇದನ್ನು ಗಮನಿಸದಿದ್ದರೂ, VAR ತಂತ್ರಜ್ಞಾನವು ಯಾವುದೇ ಫೌಲ್ ಅನ್ನು ಸೂಕ್ಷ್ಮವಾಗಿ ಪತ್ತೆಹಚ್ಚುತ್ತದೆ. ತಾಂತ್ರಿಕವಾಗಿ ನಿಯಮ ಪುಸ್ತಕದ ಪ್ರಕಾರ ಬಾಕ್ಸ್ ಒಳಗಿನ ಇಂತಹ ದೈಹಿಕ ಸಂಪರ್ಕಕ್ಕೆ ಪೆನಾಲ್ಟಿ ನೀಡಲೇಬೇಕಾಗುತ್ತದೆ. ಅದರಂತೆ ಮ್ಯಾಚ್ ರೆಫರಿ ಪೆನಾಲ್ಟಿ ಕಿಕ್ ಅವಕಾಶ ನೀಡಿದ್ದಾರೆ.

ಪೆನಾಲ್ಟಿ ವಿರುದ್ಧ ವಾದ:

ರಾಯ್ ಕೀನ್ ಮತ್ತು ಗ್ಯಾರಿ ನೆವಿಲ್ಲೆ ಅವರಂತಹ ಪ್ರಮುಖ ಮಾಜಿ ಆಟಗಾರರ ಪ್ರಕಾರ, ಇದು ತೀರಾ ಸುಲಭವಾಗಿ ನೀಡಲಾದ ‘ಸಾಫ್ಟ್’ ಪೆನಾಲ್ಟಿ. ಟೀಲೆಮನ್ಸ್ ಅವರು ಕಮರಾ ಸ್ಲೈಡ್ ಮಾಡುವುದನ್ನು ಗಮನಿಸಿ, ಬೇಕೆಂದೇ ಅವರ ಕಾಲಿನ ಹಾದಿಗೆ ತಮ್ಮ ಕಾಲನ್ನು ಅಡ್ಡ ತಂದು ಬಿದ್ದರು.

ಪಂದ್ಯದ 120ನೇ ನಿಮಿಷದಲ್ಲಿ, ಅಂದರೆ ಇನ್ನು ಕೆಲವೇ ಸೆಕೆಂಡುಗಳಲ್ಲಿ ಪಂದ್ಯ ಮುಗಿಯುವಾಗ ಇಂತಹ ನಿರ್ಧಾರ ಇಡೀ ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ. ಇಂತಹ ಮಹತ್ವದ ಕ್ಷಣದಲ್ಲಿ ಆಟಗಾರ ಕೇವಲ ಬಿದ್ದ ತಕ್ಷಣ ಪೆನಾಲ್ಟಿ ನೀಡುವುದು ಸೆನೆಗಲ್ ತಂಡಕ್ಕೆ ಮಾಡಿದ ಅನ್ಯಾಯ ಎಂಬುದು ಕೆಲವರ ವಾದ.

ಇಲ್ಲಿ ಸೆನೆಗೆಲ್ ಆಟಗಾರ ಕಮರಾ ಅವರ ಉದ್ದೇಶ ಚೆಂಡನ್ನು ಕ್ಲಿಯರ್​ ಮಾಡುವುದಾಗಿತ್ತೇ ಹೊರತು ಆಟಗಾರನನ್ನು ಬೀಳಿಸುವುದಾಗಿರಲಿಲ್ಲ. ಫುಟ್‌ಬಾಲ್‌ನಲ್ಲಿ ಇಂತಹ ಸಣ್ಣಪುಟ್ಟ ದೈಹಿಕ ಸಂಪರ್ಕಗಳು ಸಾಮಾನ್ಯ. ಹಾಗಾಗಿ ಇದನ್ನು ಫೌಲ್ ಎಂದು ಪರಿಗಣಿಸಬಾರದಿತ್ತು ಎಂಬ ವಾದವನ್ನು ಅನೇಕರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ‘ಕಾರ್ಟೂನ್’ ಕಟ್ಟಿದ ಫುಟ್​ಬಾಲ್ ತಂಡ: ಇದು ಜಪಾನಿನ ಕಾಲ್ಚೆಂಡು ಕಥೆ!

ಒಟ್ಟಾರೆಯಾಗಿ ಹೇಳುವುದಾದರೆ, ರೆಫರಿ ನಿರ್ಧಾರವು ತಾಂತ್ರಿಕವಾಗಿ ಮತ್ತು ನಿಯಮಗಳ ಪ್ರಕಾರ ಸರಿಯಾಗಿತ್ತು ಎನ್ನಬಹುದು. ಆದರೆ ಕ್ರೀಡಾ ಸ್ಫೂರ್ತಿ ಮತ್ತು ಪಂದ್ಯದ ರೋಚಕತೆಯ ದೃಷ್ಟಿಯಿಂದ ಇದು ವಿವಾದಾತ್ಮಕವಾಗಿ ಉಳಿಯಿತು. ಈ ಒಂದು ತೀರ್ಪು ಸೆನೆಗಲ್ ತಂಡದ ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದರೆ, ಬೆಲ್ಜಿಯಂ ತಂಡವು ಈ ಪೆನಾಲ್ಟಿ ಗೋಲಿನೊಂದಿಗೆ ಪ್ರಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ.

Source link

ಹಿರಿಯೂರು ಬೈಎಲೆಕ್ಷನ್ ಅಖಾಡ ರಂಗು: ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್; ದಿವಂಗತ ಸುಧಾಕರ್ ಪುತ್ರನಿಗೆ ಟಿಕೆಟ್​​​ಗೆ ಒತ್ತಡ – Kannada News | JDS Strategy for Hiriyur By poll; Sudhakar Son’s Congress Ticket Demand Gains Momentum

ಹಿರಿಯೂರು ಜು. 2: ಮಾಜಿ ಸಚಿವ ಡಿ. ಸುಧಾಕರ್ ಅವರ ಹಠಾತ್ ನಿಧನದಿಂದ ತೆರವಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡ ಅಧಿಕೃತ ಘೋಷಣೆಗೂ ಮುನ್ನವೇ ಭರ್ಜರಿ ರಾಜಕೀಯ ಚಟುವಟಿಕೆಗಳನ್ನು ಶುರುವಾಗಿದೆ. ಒಂದೆಡೆ ಮೈತ್ರಿಕೂಟದ ಪರವಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೆರೆಮರೆಯ ಕೊನೆಹಂತದ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ದಿವಂಗತ ಸುಧಾಕರ್ ಅವರ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ತೀವ್ರಗೊಂಡಿದೆ. ಸಚಿವ ಸುಧಾಕರ್ ನಿಧನದಿಂದ ತೆರವಾದ ಹಿರಿಯೂರು ಕ್ಷೇತ್ರವನ್ನು ಈ ಬಾರಿ ಮೈತ್ರಿಕೂಟದ ಲೆಕ್ಕಾಚಾರದಲ್ಲಿ ಜೆಡಿಎಸ್ ತನ್ನದಾಗಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಶೀಘ್ರದಲ್ಲೇ ರಾಜ್ಯ ಬಿಜೆಪಿ ನಾಯಕರೊಂದಿಗೂ ಸಭೆ ನಡೆಸಿ ಜಂಟಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಿರಿಯೂರು ಕ್ಷೇತ್ರದ ಒಕ್ಕಲಿಗ ಮತ್ತು ಯಾದವ (ಗೊಲ್ಲ) ಸಮುದಾಯಗಳ ಮತಗಳ ಸಮೀಕರಣದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ, ಈ ಎರಡೂ ಸಮುದಾಯಗಳಲ್ಲಿ ಸಮಾನ ಪ್ರಭಾವ ಹೊಂದಿರುವ ಪ್ರಬಲ ನಾಯಕನಿಗೆ ಟಿಕೆಟ್ ನೀಡುವ ಸುಳಿವನ್ನು ಸ್ಥಳೀಯ ಜೆಡಿಎಸ್ ಮುಖಂಡರಿಗೆ ನೀಡಿದ್ದಾರೆ. ಈ ಕುರಿತು ನಾಳೆ (ಜು.3) ಹೆಚ್‌ಡಿಕೆ ಮಹತ್ವದ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್​​ ತಕರಾರು: ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್​​

ಸುಧಾಕರ್ ಪುತ್ರ ಸುಹಾಸ್ ಪರ ಕಾಂಗ್ರೆಸ್‌ನಲ್ಲಿ ಒತ್ತಡ:

ಇತ್ತ ಕಾಂಗ್ರೆಸ್ ಪಾಳಯದಲ್ಲೂ ಉಪಚುನಾವಣೆಯ ಟಿಕೆಟ್ ಫೈಟ್ ಜೋರಾಗಿದೆ. ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ನಿಧನದಿಂದಾಗಿ ಉಂಟಾಗಿರುವ ಅನುಕಂಪದ ಅಲೆಯನ್ನೇ ಬಂಡವಾಳ ಮಾಡಿಕೊಳ್ಳಲು ಬೆಂಬಲಿಗರು ಮುಂದಾಗಿದ್ದಾರೆ. ಸುಧಾಕರ್ ಅವರ ಪುತ್ರ ಸುಹಾಸ್ ಅವರಿಗೆ ಹಿರಿಯೂರು ಬೈಎಲೆಕ್ಷನ್ ಟಿಕೆಟ್ ನೀಡಬೇಕೆಂದು ಕ್ಷೇತ್ರದ ನೂರಾರು ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುಹಾಸ್ ಬೆಂಬಲಿಗರ ದಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಟಿಕೆಟ್‌ಗಾಗಿ ಆಗ್ರಹಿಸಲಿದೆ. ಉಪಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ಹಿರಿಯೂರಿನಲ್ಲಿ ರಾಜಕೀಯ ನಾಯಕರ ತೆರೆಮರೆಯ ಓಡಾಟ ಮತ್ತು ಒತ್ತಡದ ರಾಜಕಾರಣದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

WhatsApp Username: ವಾಟ್ಸಾಪ್‌ನಲ್ಲಿ ಸೆಲೆಬ್ರಿಟಿಗಳು, ಬ್ಯಾಂಕ್‌ಗಳ ಹೆಸರಲ್ಲಿ ವಂಚನೆ ಅಸಾಧ್ಯ: ಸರ್ಕಾರದ ನೋಟಿಸ್‌ಗೆ ಮೆಟಾ ಸ್ಪಷ್ಟನೆ – Kannada News | WhatsApp Username Scam Shield: Meta Clarifies Robust Security Measures to Govt

ನವದೆಹಲಿ, ಜುಲೈ 02: ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಚಾಟ್ ಮಾಡಲು ಅನುಕೂಲ ಮಾಡಿಕೊಡುವ ತನ್ನ ಮುಂಬರುವ ಯೂಸರ್​ ನೇಮ್ವೈ(Username)ಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರ ವ್ಯಕ್ತಪಡಿಸಿರುವ ಆತಂಕಕ್ಕೆ ವಾಟ್ಸಾಪ್(WhatsApp) ಸೂಕ್ತ ಸ್ಪಷ್ಟನೆ ನೀಡಿದೆ. ಈ ಹೊಸ ವೈಶಿಷ್ಟ್ಯದಲ್ಲಿ ನಕಲಿ ಖಾತೆಗಳ ಮೂಲಕ ವಂಚನೆ ಮಾಡುವುದನ್ನು ತಡೆಯಲು ಅತ್ಯಂತ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಮೆಟಾ ಸಂಸ್ಥೆ ತಿಳಿಸಿದೆ.

ಏನಿದು ವಿವಾದ? ನಿಷೇಧದ ಭೀತಿ ಯಾಕಿತ್ತು?:

ವಾಟ್ಸಾಪ್ ಇತ್ತೀಚೆಗಷ್ಟೇ ತನ್ನ ಹೊಸ ಯೂಸರ್​ ನೇಮ್ ವೈಶಿಷ್ಟ್ಯವನ್ನು ಘೋಷಿಸಿತ್ತು. ಆದರೆ, ಈ ವೈಶಿಷ್ಟ್ಯದ ಅಡಿಯಲ್ಲಿ ವಂಚಕರು ಪ್ರಸಿದ್ಧ ವ್ಯಕ್ತಿಗಳು, ಬ್ಯಾಂಕುಗಳು ಅಥವಾ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಯೂಸರ್ ನೇಮ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು.

ಇದರಿಂದ ಗುರುತಿನ ಕಳ್ಳತನ ಮತ್ತು ಆನ್‌ಲೈನ್ ವಂಚನೆಗಳ ಅಪಾಯ ಹೆಚ್ಚಾಗುವುದರಿಂದ, ಈ ವೈಶಿಷ್ಟ್ಯವನ್ನು ನಿಷೇಧಿಸುವ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಎಚ್ಚರಿಸಿತ್ತು.

ಮತ್ತಷ್ಟು ಓದಿ: ವಾಟ್ಸಾಪ್ ಯೂಸರ್ ನೇಮ್ ಫೀಚರ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ; ಮೆಟಾಗೆ ನೋಟಿಸ್ ಜಾರಿ

ವಿಐಪಿ ಹೆಸರುಗಳು ಕಾಯ್ದಿರಿಸಲಾಗಿದೆ, ಬೇರೆಯವರಿಗೆ ಸಿಗಲ್ಲ

ಕೇಂದ್ರದ ಕಳವಳಕ್ಕೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ವಂಚನೆ ತಡೆಯಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದೆ. ಸೆಲೆಬ್ರಿಟಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಪರಿಶೀಲಿಸಲ್ಪಟ್ಟ ಮೆಟಾ ಖಾತೆಗಳನ್ನು ಹೊಂದಿರುವ ಪ್ರಮುಖ ವ್ಯಕ್ತಿಗಳ ಅಧಿಕೃತ ಹೆಸರುಗಳನ್ನು ವಾಟ್ಸಾಪ್ ಮೊದಲೇ ಕಾಯ್ದಿರಿಸಿ ಲಾಕ್ ಮಾಡಿದೆ. ಅವುಗಳ ನಿಜವಾದ ಮಾಲೀಕರು ಮಾತ್ರ ಆ ಹೆಸರುಗಳನ್ನು ಕ್ಲೈಮ್ ಮಾಡಲು ಸಾಧ್ಯ.

ಪ್ರಸಿದ್ಧ ಹೆಸರುಗಳನ್ನು ಹೋಲುವ ಅಥವಾ ಕನ್ಫ್ಯೂಸ್ ಮಾಡುವಂತಹ ಇತರ ಹೆಸರುಗಳನ್ನು ಸಹ ಬೇರೆ ಯಾರೂ ಇಡದಂತೆ ತಡೆಹಿಡಿಯಲಾಗಿದೆ. ಯೂಸರ್​ ನೇಮ್ ವೈಶಿಷ್ಟ್ಯ ಬಂದರೂ ಸಹ, ವಾಟ್ಸಾಪ್ ಬಳಸಲು ಫೋನ್ ಸಂಖ್ಯೆಯ ಅಗತ್ಯ ಕಡ್ಡಾಯವಾಗಿರುತ್ತದೆ.

ದುರುಪಯೋಗಕ್ಕೆ ಸಿಗಲ್ಲ ಚಾನ್ಸ್: ಈ ವೈಶಿಷ್ಟ್ಯದ ದುರುಪಯೋಗವನ್ನು ತಡೆಯಲು ವ್ಯವಸ್ಥೆಯಲ್ಲಿ ಹಲವು ಭದ್ರತಾ ಲೇಯರ್‌ಗಳನ್ನು ಅಳವಡಿಸಲಾಗಿದೆ.

ಊಹಿಸುವ ಪ್ರಯತ್ನಗಳಿಗೆ ಬ್ಲಾಕ್: ಯಾರೊಬ್ಬರ ಯೂಸರ್ ನೇಮ್ ಅನ್ನು ಸುಮ್ಮನೆ ಊಹಿಸಿ (Guess) ಹುಡುಕಲು ಪದೇ ಪದೇ ಪ್ರಯತ್ನಿಸಿದರೆ ಅಂತಹ ಖಾತೆಗಳನ್ನು ಸಿಸ್ಟಮ್ ತಂತಾನೇ ನಿರ್ಬಂಧಿಸುತ್ತದೆ. ಸಂದೇಶ ಕಳುಹಿಸಲು ನಿಖರವಾದ ಯೂಸರ್ ನೇಮ್ ಗೊತ್ತಿರಲೇಬೇಕು.

ಸಂಪರ್ಕದ ಮಿತಿ: ಒಂದು ಖಾತೆಯಿಂದ ದಿನಕ್ಕೆ ಎಷ್ಟು ಜನ ಹೊಸಬರನ್ನು ಸಂಪರ್ಕಿಸಬಹುದು ಎಂಬುದಕ್ಕೆ ಮಿತಿ ಇರಲಿದೆ. ಇದರಿಂದ ಸಾರಾಸಗಟಾಗಿ ವಂಚನೆಯ ಮೆಸೇಜ್ ಕಳುಹಿಸುವುದು ನಿಲ್ಲುತ್ತದೆ.

ಯಾರಾದರೂ ಹೊಸ ಯೂಸರ್ ನೇಮ್ ಬಳಸಿ ಮೊದಲ ಬಾರಿಗೆ ನಿಮಗೆ ಮೆಸೇಜ್ ಕಳುಹಿಸಿದರೆ, ಆ ಖಾತೆಯ ಸಂಪೂರ್ಣ ವಿವರ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ಅದು ಹೊಸ ಖಾತೆಯೇ? ನಿಮ್ಮಿಬ್ಬರ ನಡುವೆ ಸಾಮಾನ್ಯ ಗ್ರೂಪ್‌ಗಳಿವೆಯೇ? ಅಥವಾ ಆ ಖಾತೆ ಬೇರೆ ದೇಶದ್ದಾಗಿದೆಯೇ ಎಂಬ ಮಾಹಿತಿ ಲಭ್ಯವಿರುತ್ತದೆ. ಇದರಿಂದ ಚಾಟ್ ಮುಂದುವರಿಸಬೇಕೇ ಬೇಡವೇ ಎಂದು ಬಳಕೆದಾರರೇ ನಿರ್ಧರಿಸಬಹುದು.

ಈ ಹೊಸ ವೈಶಿಷ್ಟ್ಯವು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಮತ್ತು ಈ ವರ್ಷದ ಕೊನೆಯ ವೇಳೆಗೆ ಹಂತ-ಹಂತವಾಗಿ ಜಾರಿಗೆ ಬರಲಿದೆ ಎಂದು ವಾಟ್ಸಾಪ್ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಅಯೋಧ್ಯೆ ರಾಮಮಂದಿರದ ಹುಂಡಿ ಹಣದಿಂದಲೇ ಹೊಸ ಮನೆ ಕಟ್ಟಿದ ಆರೋಪಿ – Kannada News | Ayodhya Ram Mandir Donation Theft: Accused Built House with Stolen Funds, SIT Probe Continues

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ ಕದ್ದ ದೇಣಿಗೆ ಹಣದಿಂದಲೇ ಮನೆ ಕಟ್ಟಿದ್ದು ಬೆಳಕಿಗೆ ಬಂದಿದೆ. ಅನುಕಲ್ಪ್​ನ ಇನಾಯತ್​ ನಗರದ ಬಸವ ಮುತಲ್ಕೆ ಗ್ರಾಮದಲ್ಲಿನ ಹೊಸ ಮನೆ ಸೇರಿದಂತೆ ಆತನ ತಂದೆ ಮತ್ತು ಮೂವರು ಸಹೋದರರ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಕ್ತರು ಭಕ್ತಿಯಿಂದ ರಾಮಮಂದಿರಕ್ಕೆ ನೀಡಿದ್ದ ಹುಂಡಿ ಹಣವನ್ನು ಕಳವು ಮಾಡಿದ ಅನುಕಲ್ಪ್, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ. ಜೂನ್ 23 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ SIT ಪ್ರಾಥಮಿಕ ವರದಿ ಸಲ್ಲಿಸಿದ್ದು, ಅನೇಕ ಆಘಾತಕಾರಿ ಅಂಶಗಳು ಬಹಿರಂಗಗೊಂಡಿವೆ. SIT ಅಧಿಕಾರಿಗಳು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಇದುವರೆಗೆ ಸುಮಾರು 80 ಲಕ್ಷ ರೂಪಾಯಿಯಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದರ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Source link

Exit mobile version