ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರೆ ಕರಣ್; ಬಾಲಿವುಡ್ ಪ್ರಮುಖರ ಜೊತೆ ಅಂತರ

‘ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು (Karan Joahr) ಇತ್ತೀಚೆಗೆ ಬಾಲಿವುಡ್​ ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರಾ?’- ಹೀಗೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಮೊದಲು ತಮ್ಮ ಧರ್ಮ ಪ್ರೊಡಕ್ಷನ್ಸ್ ಹೌಸ್​​ನ ಶೇ.50ರಷ್ಟು ಷೇರನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಮಾರಾಟ ಮಾಡಿದ್ದರು. ಈಗ ಬಾಲಿವುಡ್​ನ ಪ್ರಮುಖರನ್ನೇ ಇನ್​​ಸ್ಟಾಗ್ರಾಮ್​​ನಲ್ಲಿ ಅನ್​ಫಾಲೋ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕರಣ್ ಜೋಹರ್ ಈ ದಿಢೀರ್ ಬದಲಾವಣೆ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚಿತ್ರರಂಗದ ಜೊತೆ ದಶಕಗಳ ಕಾಲ ಆಪ್ತ ಒಡನಾಟ ಹೊಂದಿರುವ ಕರಣ್, ತಮ್ಮ ಅತ್ಯಂತ ಆಪ್ತ ಸ್ನೇಹಿತರಾದ ಶಾರುಖ್ ಖಾನ್, ಕರೀನಾ ಕಪೂರ್ ಖಾನ್, ಮನೀಶ್ ಮಲ್ಹೋತ್ರಾ ಮತ್ತು ತಾವೇ ಚಿತ್ರರಂಗಕ್ಕೆ ಪರಿಚಯಿಸಿದ್ದ ಆಲಿಯಾ ಭಟ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಕೇವಲ ಇಷ್ಟೇ ಅಲ್ಲದೆ, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರಾ, ಮಲೈಕಾ ಅರೋರಾ ಹಾಗೂ ಅನನ್ಯಾ ಪಾಂಡೆ ಅವರೂ ಸಹ ಕರಣ್ ಅವರ ಫಾಲೋಯಿಂಗ್ ಲಿಸ್ಟ್‌ನಿಂದ ಮಾಯವಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1.7 ಕೋಟಿಗೂ (17.5 ಮಿಲಿಯನ್) ಹೆಚ್ಚು ಫಾಲೋವರ್ಸ್ ಹೊಂದಿರುವ ಕರಣ್ ಜೋಹರ್, ಪ್ರಸ್ತುತ ಫಾಲೋ ಮಾಡುತ್ತಿರುವುದು ಕೇವಲ 78 ಖಾತೆಗಳನ್ನು ಮಾತ್ರ. ವಿಶೇಷವೆಂದರೆ, ತಮ್ಮ ಮುಂಬರುವ ‘ನಾಗ್‌ಜಿಲ್ಲಾ’ ಸಿನಿಮಾದ ನಾಯಕ ಕಾರ್ತಿಕ್ ಆರ್ಯನ್ ಅವರನ್ನೂ ಅವರು ಅನ್‌ಫಾಲೋ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರ ಅವರನ್ನು ಕರಣ್ ಫಾಲೋ ಮಾಡುತ್ತಿದ್ದಾರೆ ಈ ದಿಢೀರ್ ನಿರ್ಧಾರಕ್ಕೆ ನಿಖರ ಕಾರಣವೇನೆಂಬುದನ್ನು ಕರಣ್ ಜೋಹರ್ ಇದುವರೆಗೆ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ

ಕರಣ್ ಜೋಹರ್ ಅವರು ತಮ್ಮ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ ಸಂಸ್ಥೆಯ ಶೇಕಡಾ 50 ರಷ್ಟು ಷೇರುಗಳನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರ ‘ಸೆರೀನ್ ಪ್ರೊಡಕ್ಷನ್ಸ್’ಗೆ 1,000 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಈ ಬೆಳವಣಿಗೆಯಿಂದ ಕರಣ್ ಅವರು ಸಿನಿಮಾ ರಂಗದಿಂದ ದೂರ ಹೋಗುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆ ಶಿವಕುಮಾರ್​ಗೆ ಪಟ್ಟಾಭಿಷೇಕದ ತಯಾರಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಡಿಸಿಎಂ

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್Image Credit source: tv9

ಬೆಂಗಳೂರು, ಮೇ 29: ಕರ್ನಾಟಕ ಕಾಂಗ್ರೆಸ್ (Congress) ಕೋಟೆಯಲ್ಲಿ ಕೊನೆಗೂ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆಬಿದ್ದಿದ್ದು, ರಾಜ್ಯ ರಾಜಕೀಯ ಚಟುವಟಿಕೆಗಳು ಈಗ ದೆಹಲಿ ಮಟ್ಟಕ್ಕೆ ಶಿಫ್ಟ್ ಆಗಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ರಾಜೀನಾಮೆ ನೀಡುತ್ತಿದ್ದಂತೆಯೇ, ನೂತನ ಮುಖ್ಯಮಂತ್ರಿಯಾಗಿ ಉಪಮುಖ್ಯಮಂತ್ರಿ, ಕನಕಪುರ ಬಂಡೆ ಡಿಕೆ ಶಿವಕುಮಾರ್ (DK Shivakumar) ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಬುಧವಾರ ನಡೆದ ಸಚಿವರ ಉಪಾಹಾರ ಕೂಟದಲ್ಲೇ ಸಿದ್ದರಾಮಯ್ಯ ಅವರು, ‘ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಆಗಲಿದ್ದಾರೆ’ ಎಂದು ತಮ್ಮ ಸಹೋದ್ಯೋಗಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ, ನೂತನ ಸಚಿವ ಸಂಪುಟ ರಚನೆ ಹಾಗೂ ಪ್ರಮಾಣವಚನದ ಮುಹೂರ್ತ ನಿಗದಿಪಡಿಸುವ ಸಲುವಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಹೈಕಮಾಂಡ್ ಮಟ್ಟದಲ್ಲಿ ಗ್ರೀನ್ ಸಿಗ್ನಲ್.
  • ನೂತನ ಮುಖ್ಯಮಂತ್ರಿಯೊಂದಿಗೆ 8 ರಿಂದ 10 ಸಚಿವರ ಪ್ರಮಾಣವಚನಕ್ಕೆ ಪ್ಲಾನ್.
  • ಜ್ಯೋತಿಷಿ ದ್ವಾರಕನಾಥ್ ಅವರಿಂದ 3 ಮುಹೂರ್ತ ಪಡೆದ ಡಿಕೆಶಿ.

ದೆಹಲಿಯಲ್ಲಿ ಡಿಕೆ ಶಿವಕುಮಾರ್ ತಂತ್ರ

ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಹೊಸ ಸಚಿವ ಸಂಪುಟದ ಮಾದರಿ ಹಾಗೂ ತಮ್ಮೊಂದಿಗೆ ಪ್ರಮಾಣವಚನ ಸ್ವೀಕರಿಸಲಿರುವ 8 ರಿಂದ 10 ಪ್ರಮುಖ ಸಚಿವರ ಪಟ್ಟಿಯ ಕುರಿತು ಹೈಕಮಾಂಡ್ ನಿರ್ದೇಶನ ಪಡೆಯಲಿದ್ದಾರೆ. ಇದೇ ವೇಳೆ, ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ತಮ್ಮ ಆಪ್ತ ಜ್ಯೋತಿಷಿ ದ್ವಾರಕನಾಥ್ ಗುರೂಜಿ ಅವರಿಂದ ಮೂರು ವಿಭಿನ್ನ ಶುಭ ಮುಹೂರ್ತಗಳನ್ನು ಪಡೆದಿರುವ ಡಿಕೆಶಿ, ಹೈಕಮಾಂಡ್ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಲಭ್ಯತೆಯನ್ನು ನೋಡಿಕೊಂಡು ದಿನಾಂಕ ಫಿಕ್ಸ್ ಮಾಡಲು ಮುಂದಾಗಿದ್ದಾರೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಅಧಿಕೃತ ಸಭೆ ನಡೆಸಿ, ಶಾಸಕಾಂಗ ನಾಯಕನ ಆಯ್ಕೆಯಾದ ಬಳಿಕ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಡಿಕೆ ಸಹೋದರರ ಮೌನ ಮತ್ತು ಅಭಿಮಾನಿಗಳ ಜೈಕಾರ

ಇಷ್ಟೆಲ್ಲಾ ಸಂಚಲನ ನಡೆಯುತ್ತಿದ್ದರೂ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಸದ್ಯಕ್ಕೆ ಮೌನ ಮಂತ್ರ ಅನುಸರಿಸುತ್ತಿದ್ದಾರೆ. ಮಾಧ್ಯಮಗಳಿಗೆ ಯಾವುದೇ ಅಧಿಕೃತ ಹೇಳಿಕೆ ನೀಡದೆ ಕೇವಲ ಕೈಮುಗಿಯುತ್ತಾ ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಡಿಕೆಶಿ ನಡೆ ಕುತೂಹಲ ಮೂಡಿಸಿದೆ. ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿ, ‘ಪಕ್ಷದ ಮುಂದಿನ ಅಧಿಕೃತ ನಿರ್ಧಾರಕ್ಕೆ ನಾವೆಲ್ಲರೂ ಕಾಯೋಣ’ ಎಂದಿದ್ದಾರೆ. ಇತ್ತ ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಡಿಕೆಶಿ ಹೊರಡುವಾಗ ಅಭಿಮಾನಿಗಳು ‘ಡಿಕೆ ಡಿಕೆ’ ಎಂದು ಘೋಷಣೆ ಕೂಗಿದರೆ, ವಿಜಯಪುರದ ಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಬೃಹತ್ ಬ್ಯಾನರ್ ಹಿಡಿದು, ಪಟಾಕಿ ಸಿಡಿಸಿ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ.

ಹೈಕಮಾಂಡ್ ನಾಯಕರಿಗೆ ಕೃತಜ್ಞತೆ ಸಲ್ಲಿಸಲಿರುವ ಸಿದ್ದರಾಮಯ್ಯ

ಮತ್ತೊಂದೆಡೆ, ಮಧ್ಯರಾತ್ರಿಯೇ ದೆಹಲಿ ತಲುಪಿರುವ ಸಿದ್ದರಾಮಯ್ಯ ಅವರು ಕರ್ನಾಟಕ ಭವನಕ್ಕೆ ತೆರಳದೆ ನೇರವಾಗಿ ಐಟಿಸಿ ಮೌರ್ಯ (ITC Maurya) ಹೋಟೆಲ್‌ನಲ್ಲಿ ತಂಗಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಲಿರುವ ಸಿದ್ದರಾಮಯ್ಯ, ತಮ್ಮ ಅಧಿಕಾರಾವಧಿಗೆ ನೀಡಿದ ಸಹಕಾರಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆತ್ಮೀಯ ಕ್ಷಣ! ಇಲ್ಲಿವೆ ಅಪರೂಪದ ಚಿತ್ರಗಳು

ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿ ರಾಜ್ಯ ರಾಜಕೀಯದ ಮುಂದಿನ ಸೌಹಾರ್ದಯುತ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ. ಒಟ್ಟಿನಲ್ಲಿ ಕರುನಾಡಿನ ಜನರ ಚಿತ್ತವೀಗ ಸಂಪೂರ್ಣವಾಗಿ ದೆಹಲಿಯತ್ತ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:53 am, Fri, 29 May 26

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಸಹವಾಸ ದುಷ್ಪರಿಣಾಮವನ್ನು ಉಂಟುಮಾಡುವುದು..

ಮೇಷ ರಾಶಿ:

ನಿಮ್ಮ ಮಾತು ಸತ್ಯವಾಗಿದ್ದು ಕುಟುಂಬದವರು ಅಚ್ಚರಿಪಡುವರು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಶಾಂತಚಿತ್ತರಾಗಿ ಯೋಚಿಸಿ. ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ.

ವೃಷಭ ರಾಶಿ :

ನಿಮ್ಮ ಮಾತಿಗೆ ಬೆಲೆಯು ಕಡಿಮೆಯಾದೀತು. ಮಾರ್ಗಾಯಾಸದಿಂದ ವಿಶ್ರಾಂತಿ ಪಡೆಯುವಿರಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿದೆ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಸಾಮಾಜಿಕ ಬದ್ಧತೆಯನ್ನು ಪೂರೈಸುವಿರಿ. ನಿಮ್ಮ ಕೆಲವು ಅಭ್ಯಾಸವನ್ನು ನೀವು ಬಿಡಬೇಕಾಗಿಬರಬಹುದು. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ದೈವವನ್ನು ದೂರುತ್ತ ಕೂರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು.

ಮಿಥುನ ರಾಶಿ :

ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ನಿಮ್ಮ ಗುಣಗಳು ನಿಮ್ಮನ್ನು ಕಟ್ಟಿಹಾಕಬಹುದು. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಸಮಸ್ಯೆಗೆ ಬೇಕಾದ ಪರಿಹಾರವನ್ನು ತಿಳಿದೂ ಅದನ್ನು ಮಾಡಲಾರಿರಿ. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ.

ಕರ್ಕಾಟಕ ರಾಶಿ :

ಆಕಸ್ಮಿಕವಾಗಿ ಮೇಲಿನಿಂದ ಬಿದ್ದು ಪೆಟ್ಟು‌‌ಮಾಡಿಕೊಳ್ಳುವಿರಿ. ನೀವಿಂದು ಪ್ರೀತಿಸಲು ಆರಂಭಿಸುವಿರಿ. ಆಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ನಿಮ್ಮ ಅಸ್ತಿತ್ವ ಮರೆಯಾಗದಂತೆ ನೋಡಿಕೊಳ್ಳಿ. ಅವಸರದಲ್ಲಿ ಅನಾಹುತವಾದೀತು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು.

ಸಿಂಹ ರಾಶಿ:

ನಿಮ್ಮ ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಅನೇಕ ಒತ್ತಡಗಳು ನಿಮ್ಮ ಬಲವನ್ನು ಕುಗ್ಗಿಸುವುದು. ಮನೆಯ ವ್ಯವಹಾರದಲ್ಲಿ ಭಾಗವಹಿಸಲು ಇಷ್ಟವಾಗದು. ಇದರಿಂದ ಕುಟುಂಬವು ಬೇಸರಗೊಳ್ಳುವುದು. ಆದಾಯದ ಮಟ್ಟವು ಇಂದು ಅಧಿಕವಾಗಲಿದೆ. ನೀವು ತಾಳ್ಮೆಯಿಂದ ಮಾಡುವ ಯಾವುದೇ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ.

ಕನ್ಯಾ ರಾಶಿ :

ಹಿರಿಯರ ಪಾಲನ್ನೂ ನೀವೇ ಪಡೆಯುವ ಆಸೆ ಇದೆ. ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ನಿಮ್ಮ ಆಲೋಚನೆ ಹಾಗೂ ಸಾಮರ್ಥ್ಯದಿಂದ ಉನ್ನತ ಹುದ್ದೆಗೆ ಹೋಗುವ ಅವಕಾಶವಿರಬಹುದು. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಡುವುದು ಒಳ್ಳೆಯದಲ್ಲ. ಅನೇಕ ಗೊಂದಲಗಳು ನಿಮ್ಮ ಜೀವನದಲ್ಲಿ ಬರುವುದು. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು.

ತುಲಾ ರಾಶಿ :

ಇಂದಿನ ಆಯಾಸದಿಂದ ಯಾವ ಉತ್ಸಾಹವೂ ನಿಮ್ಮಲ್ಲಿ ಇರದು. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ವಾಹನವು ನಾಷ್ಟವಾಗುವ ಸಾಧ್ಯತೆಯಿದೆ. ಹೊಸ ಹವ್ಯಾಸದ ಕಡೆಗೆ ಗಮನವಿರಲಿ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆಯನ್ನು ನೀವು ಹೊಂದುವಿರಿ. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ಇಂದು ನೀವು ಕೆಲವು ಅನಗತ್ಯ ಖರ್ಚುಗಳನ್ನು ಸಹ ಅನುಭವಿಸಬಹುದು. ದುಂದುವೆಚ್ಚ ಮಾಡುವ ಸಾಧ್ಯತೆಯೂ ಇದೆ. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು.

ವೃಶ್ಚಿಕ ರಾಶಿ:

ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಉತ್ತಮ‌ ವಿಚಾರಗಳ ಕಡೆ ಗಮನವಿರಲಿ. ಪೋಷಕರ ಬೆಂಬಲ ಮತ್ತು ಆಶೀರ್ವಾದದಿಂದ ಸಮಾಧಾನವಿರುತ್ತದೆ. ವ್ಯವಹಾರದಿಂದ ಬಾಂಧವ್ಯ ನಿರ್ಣಯ ಮಾಡುವುದು ಬೇಡ. ನಿಮ್ಮ ಬಂಧುಗಳ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಚೆನ್ನಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ.

ಧನು ರಾಶಿ:

ದೇಹದಂಡನೆಯಿಂದ ದಿನದ ಕೊನೆಯಲ್ಲಿ ಅನಾರೋಗ್ಯದಂತೆ ಅನ್ನಿಸುವುದು. ನಿಂತಲ್ಲೇ ಇರುವ ಬುದ್ಧಿ ಹಾಗೂ ಮನಸ್ಸಿನಿಂದ ಕೆಟ್ಟ ಆಲೋಚನೆಗಳು ಬರಲಿವೆ. ಹಿತಶತ್ರುಗಳ ಜಾಲದಲ್ಲಿಯೇ ಇದ್ದರೂ ಅರಿವಿಗೆ ಬಾರದು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸುವಿರಿ. ನಿಮ್ಮ ಅಪೂರ್ಣ ಕೆಲಸವು ಇಂದು ಪೂರ್ಣಗೊಳ್ಳುತ್ತದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ.

ಮಕರ ರಾಶಿ :

ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದಿನ ಶಕ್ತಿಗೆ ಅನುಗುಣವಾಗಿ ಉದ್ಯೋಗವನ್ನು ಮಾಡುವುದು ಉತ್ತಮ. ಸತ್ಸಂಗದಲ್ಲಿ ದಿನ ಕಳೆಯುವಿರಿ. ಉದ್ಯೋಗದ ಹುಡುಕಾಟದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು.

ಕುಂಭ ರಾಶಿ :

ನಿಮ್ಮ ಗುರಿಯನ್ನು ಆಪ್ತರೇ ತಪ್ಪಿಸಬಹುದು. ಉಡುಗೆ ತೊಡುಗೆಯ ವ್ಯವಹಾರಕ್ಕಾಗಿ ಮ‌ನೆಯಲ್ಲಿ ಕಲಹ. ನಿಮ್ಮನ್ನು ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ನಿಮ್ಮಲ್ಲಿ ಕಲಾವೃಕ್ಷವಿದ್ದು ಅದಕ್ಕೆ ಸರಿಯಾಗಿ ನೀರೆರಿಯಿರಿ. ಇದೇ ನಿಮ್ಮನ್ನು ಎತ್ತರಕ್ಕೆ ಒಯ್ಯಲಿದೆ. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ.

ಮೀನ ರಾಶಿ :

ತಪ್ಪುಗಳು ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಶ್ಚಿಂತೆಯಿಂದ ಮುನ್ನಡೆಯಿರಿ. ಪರಿಚಿತರ ಜೊತೆ ಅಕಾರಣ ತಿರುಗಾಟವನ್ನು ಮನೆಯವರು ನಿಲ್ಲಿಸುವರು.‌ ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಗೌರವವನ್ನೂ ಪಡೆಯುವಿರಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯತಿಪಾತ್, ಕರಣ : ಗರಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:22, ಯಮಗಂಡ ಕಾಲ 15:35 – 17:11, ಗುಳಿಕ ಕಾಲ 07:33 – 09:09

-ಲೋಹಿತ ಹೆಬ್ಬಾರ್-8762924271 (what’s app only)

Source link

IPL 2026: ರಾಜಸ್ಥಾನ್ ಟ್ರೋಫಿ ಗೆಲ್ಲುವುದು ಕಷ್ಟ ಎನ್ನುತ್ತಿವೆ ಅಂಕಿ ಅಂಶಗಳು

ಐಪಿಎಲ್ 2026 (IPL 2026) ರ ಫೈನಲ್​ನಲ್ಲಿ ಆರ್​ಸಿಬಿಯನ್ನು (RCB) ಯಾವ ತಂಡ ಎದುರಿಸಲಿದೆ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ (RR) ಎರಡೂ ತಂಡಗಳು ಕ್ವಾಲಿಫೈಯರ್ 2 ರಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್​ಗೇರಿದರೆ, ಸೋತ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಕ್ವಾಲಿಫೈಯರ್ 2 ಪಂದ್ಯವು ಮೇ 29 ರಂದು ನಡೆಯಲಿದೆ. ಇದಾದ ನಂತರ ಮೇ 31 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಈ ತಂಡವನ್ನು ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್​ನಲ್ಲಿ ಗೆದ್ದು ಟ್ರೋಫಿ ಎತ್ತಿಹಿಡಿಯುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದನ್ನು ಇದುವರೆಗಿನ ಅಂಕಿ ಅಂಶಗಳು ಸಾರಿ ಹೇಳುತ್ತಿವೆ.

2016 ರ ಇತಿಹಾಸ ಮರುಕಳಿಸುತ್ತಾ?

ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್ ಆಡಿದ ತಂಡವೊಂದು ಫೈನಲ್ ಗೆದ್ದು ಪ್ರಶಸ್ತಿ ಗೆದ್ದಿರುವುದು ಒಮ್ಮೆ ಮಾತ್ರ. ಈ ಸಾಧನೆ ಮಾಡಿದ ಏಕೈಕ ತಂಡವೆಂದರೆ ಅದು ಸನ್‌ರೈಸರ್ಸ್ ಹೈದರಾಬಾದ್. 2016 ರಲ್ಲಿ, ಡೇವಿಡ್ ವಾರ್ನರ್ ನೇತೃತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಫೈನಲ್​ನಲ್ಲಿ ಆರ್​ಸಿಬಿಯನ್ನು ಮಣಿಸಿ ಟ್ರೋಫಿ ಎತ್ತಿಹಿಡಿದಿತ್ತು.

ಆದರೆ ಅದಕ್ಕೂ ಮುನ್ನ ಎಲಿಮಿನೇಟರ್ ಸುತ್ತಿನಲ್ಲಿ ಕೆಕೆಆರ್ ತಂಡವನ್ನು 22 ರನ್‌ಗಳಿಂದ ಸೋಲಿಸಿ, ಆ ನಂತರ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಲಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ, ರಾಜಸ್ಥಾನ ರಾಯಲ್ಸ್ 2016 ರ ಸಾಧನೆಯನ್ನು ಪುನರಾವರ್ತಿಸುತ್ತದೆಯೇ? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ನಾಕೌಟ್ ಸುತ್ತಿನಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವುದು ಮತ್ತು ಫೈನಲ್ ಪಂದ್ಯವನ್ನು ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ.

IPL 2026: 30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ; ಭವಿಷ್ಯ ನುಡಿದ ಸೆಹ್ವಾಗ್

ರಾಜಸ್ಥಾನ್ ಐಪಿಎಲ್ ಇತಿಹಾಸ

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಒಮ್ಮೆ ಮಾತ್ರ ಪ್ರಶಸ್ತಿ ಗೆದ್ದಿದೆ. ಶೇನ್ ವಾರ್ನ್ ನೇತೃತ್ವದಲ್ಲಿ ರಾಜಸ್ಥಾನ್, 2008 ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ಅದರ ನಂತರ, ರಾಜಸ್ಥಾನ್ ರಾಯಲ್ಸ್ 2022 ರಲ್ಲಿ ನೇರವಾಗಿ ಫೈನಲ್ ತಲುಪಿತ್ತಾದರೂ, ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ರಾಜಸ್ಥಾನ್ 3ನೇ ಬಾರಿಗೆ ಫೈನಲ್ ತಲುಪುತ್ತದೆಯೇ? ಎಂಬುದು ಪ್ರಶ್ನೆ. ಎಲಿಮಿನೇಟರ್ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ರಾಜಸ್ಥಾನ್ ಕ್ವಾಲಿಫೈಯರ್ 2 ಅನ್ನು ಪ್ರವೇಶಿಸಿದೆ. ಇದೀಗ ಮೊದಲ ಬಾರಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವುದು ದೊಡ್ಡ ಸವಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣವೀರ್ ಸಿಂಗ್‌, ಫರ್ಹಾನ್ ಅಖ್ತರ್ ನಡುವಿನ ಜಗಳ ಬಿಡಿಸಲು ಸಲ್ಮಾನ್ ಖಾನ್ ಎಂಟ್ರಿ?

ಹಿಂದಿ ಚಿತ್ರರಂಗದಲ್ಲಿ ಯಾರಾದರೂ ಸಂಕಷ್ಟದಲ್ಲಿದ್ದರೆ ಮೊದಲು ಧಾವಿಸುವುದೇ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan). ಅದಕ್ಕಾಗಿಯೇ ಬಾಲಿವುಡ್​ನ ಹಲವು ಮಂದಿಗೆ ಅವರು ಗಾಡ್‌ಫಾದರ್ ಆಗಿದ್ದಾರೆ. ಇದೀಗ ‘ಡಾನ್ 3’ (Don 3) ಚಿತ್ರದ ವಿಚಾರವಾಗಿ ನಟ ರಣವೀರ್ ಸಿಂಗ್ (Ranveer Singh) ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಇಡೀ ಹಿಂದಿ ಚಿತ್ರರಂಗವನ್ನು ಇಬ್ಭಾಗ ಮಾಡಿದೆ. ಆದರೆ, ಮೀಡಿಯಾ ಮುಂದೆ ಈ ವಿವಾದ ದೊಡ್ಡ ಸರ್ಕಸ್ ಆಗುವುದನ್ನು ತಡೆಯಲು ಸಲ್ಮಾನ್ ಖಾನ್ ಈಗ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

‘ಬಾಲಿವುಡ್ ಹಂಗಾಮಾ’ ವರದಿ ಮಾಡಿರುವ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ರಣವೀರ್ ಸಿಂಗ್ ಮೇಲೂ ಪ್ರೀತಿಯಿದೆ ಹಾಗೂ ಅಖ್ತರ್ ಕುಟುಂಬದೊಂದಿಗೂ ಆತ್ಮೀಯ ಒಡನಾಟವಿದೆ. ಹೀಗಾಗಿ, ಅವರು ಇಬ್ಬರೊಂದಿಗೂ ಫೋನ್‌ನಲ್ಲಿ ಮಾತನಾಡಿ, ತಮ್ಮ ವೈಯಕ್ತಿಕ ಪ್ರಾಜೆಕ್ಟ್‌ಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

‘ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳು ದಶಕಗಳಿಂದಲೂ ಸಾಮಾನ್ಯ ಎಂದು ಸಲ್ಮಾನ್ ಅವರು ಫರ್ಹಾನ್ ಅಖ್ತರ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದೇ ರೀತಿ ರಣವೀರ್ ಸಿಂಗ್ ಜೊತೆಯೂ ಸುದೀರ್ಘವಾಗಿ ಮಾತನಾಡಿ ಅವರ ನಿಲುವನ್ನು ಅರ್ಥಮಾಡಿಕೊಂಡಿದ್ದಾರೆ. ಯಾರೊಬ್ಬರಿಗೂ ಅನ್ಯಾಯವಾಗದಂತೆ ಈ ವಿವಾದವನ್ನು ಹತ್ತಿಕ್ಕಲು ಸಲ್ಮಾನ್ ಸಂಧಾನಕಾರನ ಪಾತ್ರ ವಹಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಸಲ್ಮಾನ್ ಖಾನ್ ಅವರ ಈ ಮಾತನ್ನು ಫರ್ಹಾನ್ ಅಖ್ತರ್ ಮತ್ತು ರಣವೀರ್ ಸಿಂಗ್ ಇಬ್ಬರೂ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ದೊಡ್ಡ ವಿವಾದ ಸೃಷ್ಟಿಸದೆ ಕಾನೂನು ಹೋರಾಟ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿಗಳ ಮಧ್ಯಸ್ಥಿಕೆ ಇಲ್ಲದೆ ಪರಸ್ಪರ ಮಾತುಕತೆಯ ಮೂಲಕವೇ ಇತ್ಯರ್ಥಕ್ಕೆ ಬರಲು ಆಲೋಚಿಸುತ್ತಿದ್ದಾರೆ. ತಮ್ಮನ್ನು ಒಳಗೊಂಡಂತೆ, ಯಾವುದೇ ಮೂರನೇ ವ್ಯಕ್ತಿಯನ್ನು ಇದರಲ್ಲಿ ಎಳೆದು ತರದೆ ನೇರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಲ್ಮಾನ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಚಿತ್ರರಂಗದಿಂದ ರಣವೀರ್ ಸಿಂಗ್‌ ಬ್ಯಾನ್; ಸಿನಿಮಾ ನೌಕರರ ಒಕ್ಕೂಟದಿಂದ ಕಠಿಣ ನಿರ್ಧಾರ

ಮತ್ತೊಂದೆಡೆ, ಸಿನಿಮಾ ತಡವಾಗಿದ್ದರಿಂದ ಫರ್ಹಾನ್ ಅಖ್ತರ್ ಅವರಿಗೆ ಆಗಿರುವ ಆರ್ಥಿಕ ನಷ್ಟಕ್ಕೆ ಸಲ್ಮಾನ್ ಬೆಂಬಲವಾಗಿ ನಿಂತಿದ್ದಾರೆ. ಹಾಗೆಯೇ, ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಯಶಸ್ಸು ಸಾಧಿಸಿದ ‘ಧುರಂಧರ್’ ಚಿತ್ರದ ಗೆಲುವಿನ ಅಲೆಯನ್ನು ಬಳಸಿಕೊಂಡು ಹೊಸ ಪ್ರಾಜೆಕ್ಟ್ ಆರಂಭಿಸುವಂತೆ ರಣವೀರ್ ಸಿಂಗ್ ಅವರಿಗೂ ಸಲ್ಮಾನ್ ಖಾನ್ ಉತ್ತೇಜನ ನೀಡುತ್ತಿದ್ದಾರೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಟ ಆಡೋ ವಯಸ್ಸಲ್ಲಿ ಇಡೀ ಸಂಸಾರದ ಜವಾಬ್ದಾರಿ!: ತಂಗಿ-ತಮ್ಮಂದಿರಿಗಾಗಿ ಬಾಲ್ಯವನ್ನೇ ತ್ಯಾಗ ಮಾಡಿದ 9ನೇ ತರಗತಿ ಬಾಲಕಿ

ಕೆಲವರಿಗೆ ಬಾಲ್ಯ ಸವಿಯುವ ಮುನ್ನವೇ ಅನಿವಾರ್ಯವಾಗಿ ದೊಡ್ಡವರಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬ ಮಾತಿಗೆ ಇಲ್ಲೊಂದು ಜೀವಂತ ಸಾಕ್ಷಿಯಿದೆ. ಓದುವ, ಗೆಳೆಯರೊಂದಿಗೆ ಆಟ ಆಡುವ ವಯಸ್ಸಿನಲ್ಲಿಯೇ ವಿಧಿಯ ಕ್ರೂರ ಆಟಕ್ಕೆ ಸಿಲುಕಿ, ತನ್ನ ಮೂವರು ಪುಟ್ಟ ಒಡಹುಟ್ಟಿದವರ (Siblings) ತಾಯಿಯಾಗಿ ಇಡೀ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ 9ನೇ ತರಗತಿಯ ವಿದ್ಯಾರ್ಥಿನಿ ಅಸ್ಮಿತಾ ತಮಾಂಗ್. ತನ್ನ ವಯಸ್ಸನ್ನು ಮೀರಿದ ಜವಾಬ್ದಾರಿಯನ್ನು ಆಕೆ ಹೊತ್ತುಕೊಂಡಿದ್ದಾಳೆ. ಕೇವಲ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಅಸ್ಮಿತಾಗೆ ಈಗ ಮನೆಯೇ ಒಂದು ದೊಡ್ಡ ಪಾಠಶಾಲೆ. ಹೆತ್ತವರು ಇಲ್ಲದ ಕಾರಣ ಆಕೆಯ ಹೆಗಲಿಗೆ ಇಡೀ ಮನೆಯ ಜವಾಬ್ದಾರಿ ಬಿದ್ದಿದೆ. ಬೆಳಿಗ್ಗೆ ಎದ್ದ ತಕ್ಷಣ ತನ್ನ ಮೂವರು ಪುಟ್ಟ-ಪುಟ್ಟ ತಂಗಿ-ತಮ್ಮಂದಿರಿಗೆ ಅಡುಗೆ ಮಾಡುವುದು, ಅವರನ್ನು ಶಾಲೆಗೆ ಸಿದ್ಧಪಡಿಸುವುದು, ಮನೆಯ ಕೆಲಸಗಳನ್ನು ಮುಗಿಸುವುದು ಅಸ್ಮಿತಾಳ ದಿನಚರಿ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಆಕೆ ತನ್ನ ಓದನ್ನು ಮಾತ್ರ ಎಲ್ಲೂ ಕೈಬಿಟ್ಟಿಲ್ಲ. ಒಂದು ಕೈಯಲ್ಲಿ ತನ್ನ ಪುಟ್ಟ ತಂಗಿಯನ್ನು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಆಕೆ ಸಾಗುತ್ತಿರುವ ಹಾದಿ ನಿಜಕ್ಕೂ ಶ್ಲಾಘನೀಯ.ಮಕ್ಕಳು ಅಳುತ್ತಾ ಹಠ ಹಿಡಿದರೆ ಕೋಪಗೊಳ್ಳುವ ಪೋಷಕರಿರುವ ಇಂದಿನ ಜಗತ್ತಿನಲ್ಲಿ, ಅಸ್ಮಿತಾ ತನಗಾಗಿ ಏನನ್ನೂ ಕೇಳುತ್ತಿಲ್ಲ. ತನಗೆ ಸಿಗದ ಬಾಲ್ಯ ತನ್ನ ಒಡಹುಟ್ಟಿದವರಿಗಾದರೂ ಸಿಗಲಿ ಎಂಬುದು ಆಕೆಯ ಆಶಯ. ಹಸಿವು, ಬಡತನ ಮತ್ತು ಜವಾಬ್ದಾರಿಯ ನಡುವೆ ಆಕೆಯ ಮುಗ್ಧ ಬಾಲ್ಯ ಎಲ್ಲೋ ಕಳೆದುಹೋಗಿದೆ. ಆಕೆಯ ಕಣ್ಣುಗಳಲ್ಲಿ ಭವಿಷ್ಯದ ಕನಸುಗಳಿಗಿಂತ ಹೆಚ್ಚಾಗಿ, “ನಾಳೆ ನನ್ನ ತಂಗಿ-ತಮ್ಮಂದಿರಿಗೆ ಏನು ಮಾಡಬೇಕು?” ಎಂಬ ಆತಂಕವೇ ಎದ್ದು ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಲಕಿಯ ಹೋರಾಟದ ಕಥೆ ಭಾರಿ ವೈರಲ್ ಆಗುತ್ತಿದ್ದು, “ಈ ಪುಟ್ಟ ಹುಡುಗಿಯ ಧೈರ್ಯದ ಮುಂದೆ ನಮ್ಮ ಕಷ್ಟಗಳೆಲ್ಲಾ ತೃಣ ಸಮಾನ. ಈಕೆಗೆ ಸರ್ಕಾರ ಹಾಗೂ ದಾನಿಗಳು ನೆರವಾಗಬೇಕು” ಎಂದು ನೆಟ್ಟಿಗರು ಭಾವುಕರಾಗಿ ಒತ್ತಾಯಿಸುತ್ತಿದ್ದಾರೆ. ಇನ್ನು ಈ ವಿಡಿಯೋ ನೇಪಾಳದಿಂದ ವೈರಲ್​ ಆಗಿದೆ ಎಂದು ಹೇಳಲಾಗುತ್ತಿದೆ. ಎಕ್ಸ್​​​ನಲ್ಲಿ ಈ ಬಗ್ಗೆ ಭಾರೀ ವೈರಲ್​​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು? ಇದು ಬರದಂತೆ ತಡೆಯಲು ಏನು ಮಾಡಬೇಕು?

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಪಿತ್ತಕೋಶದಲ್ಲಿ ಕಲ್ಲು (Gall Bladder Stone) ಕಂಡುಬರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಸಮತೋಲನ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫಾಸ್ಟ್ ಫುಡ್ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ. ತಜ್ಞರ ಪ್ರಕಾರ, ಪಿತ್ತಕೋಶದಲ್ಲಿ ಪಿತ್ತರಸ (Bile) ಒಳಗೆ ಕೊಲೆಸ್ಟ್ರಾಲ್ ಅಥವಾ ಬಿಲಿರೂಬಿನ್ ಅತಿಯಾಗಿ ಜಮೆಯಾಗುವಾಗ ಕಲ್ಲು ರೂಪಗೊಳ್ಳುತ್ತದೆ. ಇದು ಸಣ್ಣ ಕಣದಿಂದ ಹಿಡಿದು ಗಾಲ್ಫ್ ಚೆಂಡಿನ ಗಾತ್ರದವರೆಗೂ ಇರಬಹುದು. ಅನೇಕರಲ್ಲಿ ಇದು ಕಂಡುಬರುವಾಗ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ಸಮಸ್ಯೆ ಉಂಟಾದರೆ ಹೊಟ್ಟೆಯ ಮಧ್ಯಭಾಗ ಮತ್ತು ಬಲಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.

ಗಾಲ್ ಸ್ಟೋನ್‌ಗಳ ವಿಧಗಳು:

ವೈದ್ಯರ ಪ್ರಕಾರ ಗಾಲ್ ಸ್ಟೋನ್‌ಗಳು ಮುಖ್ಯವಾಗಿ ಎರಡು ವಿಧಗಳಾಗಿವೆ. ಕೊಲೆಸ್ಟ್ರಾಲ್ ಸ್ಟೋನ್ ಮತ್ತು ಪಿಗ್ಮೆಂಟ್ ಸ್ಟೋನ್. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಅಥವಾ ಪಿತ್ತಕೋಶದ ಒಳಪದರದಲ್ಲಿ ದೋಷ ಉಂಟಾದಾಗ ಕೊಲೆಸ್ಟ್ರಾಲ್ ಸ್ಟೋನ್ ರೂಪಗೊಳ್ಳುತ್ತದೆ. ಕೆಲವರಲ್ಲಿ ಇದು ವಂಶಪಾರಂಪರ್ಯ ಕಾರಣಗಳಿಂದಲೂ ಕಾಣಿಸಬಹುದು. ಪಿಗ್ಮೆಂಟ್ ಸ್ಟೋನ್‌ಗಳು ಸಾಮಾನ್ಯವಾಗಿ ರಕ್ತಕಣಗಳ ಒಡೆತ (Hemolysis) ಹೆಚ್ಚಾದಾಗ ಉಂಟಾಗುತ್ತವೆ. ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಈ ರೀತಿಯ ಕಪ್ಪು ಬಣ್ಣದ ಸಣ್ಣ ಕಲ್ಲುಗಳು ಕಂಡುಬರುತ್ತವೆ.

ಯುವಕರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಕಾರಣವೇನು?

ಅನಿಯಮಿತ ಆಹಾರ ಪದ್ಧತಿ, ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆ, ತ್ವರಿತವಾಗಿ ತೂಕ ಇಳಿಸುವ ಕ್ರ್ಯಾಶ್ ಡಯಟ್ ಮತ್ತು ದೇಹದಲ್ಲಿ ನೀರಿನ ಕೊರತೆ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಜಿಮ್‌ಗೆ ಹೋಗುವವರು, ಹೆಚ್ಚು ಹೊರಗಡೆ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಕೇವಲ ನೀರು ಕಡಿಮೆ ಕುಡಿದ್ರೆ ಮಾತ್ರವಲ್ಲ, ಈ ಆಹಾರಗಳ ಸೇವನೆ ಮಾಡಿದ್ರೂ ಕಿಡ್ನಿ ಸ್ಟೋನ್ ಆಗುತ್ತೆ!

ತಪ್ಪದೇ ಗಮನಿಸಬೇಕಾದ ಲಕ್ಷಣಗಳು:

  • ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು
  • ವಾಂತಿ ಅಥವಾ ಅಜೀರ್ಣ
  • ಊಟದ ನಂತರ ಹೊಟ್ಟೆ ಉಬ್ಬರ
  • ಜ್ವರ ಅಥವಾ ಅಸ್ವಸ್ಥತೆ

ಪಿತ್ತಕೋಶದ ಕಲ್ಲು ತಡೆಯಲು ಏನು ಮಾಡಬೇಕು?

ತಜ್ಞರ ಪ್ರಕಾರ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯ. ಎಣ್ಣೆಯಲ್ಲಿ ಕರಿದ ಆಹಾರ, ಪಿಜ್ಜಾ, ಬರ್ಗರ್, ಸಮೋಸಾ ಮೊದಲಾದ ಫಾಸ್ಟ್ ಫುಡ್ ಕಡಿಮೆ ಮಾಡಬೇಕು. ಓಟ್ಸ್, ಹಣ್ಣುಗಳು, ಹಸಿ ತರಕಾರಿ ಮತ್ತು ಸಂಪೂರ್ಣ ಧಾನ್ಯಗಳಲ್ಲಿ ಇರುವ ಫೈಬರ್ ಅಂಶವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಜೊತೆಗೆ ಉಪಹಾರವನ್ನು ಬಿಟ್ಟುಬಿಡದೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ವಿಡಿಯೋ ನೋಡಿದ್ರೆ ಇಂದಿಗೂ ಮೈ ರೋಮಾಂಚನವಾಗುತ್ತೆ!: ಮತ್ತೆ ವೈರಲ್​​ ಆಯಿತು ಅಂದು ಸಿದ್ದರಾಮಯ್ಯ ಗುಡುಗಿದ ದೃಶ್ಯ!

ಬೆಂಗಳೂರು, ಮೇ.28: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅವರ ಅತ್ಯಂತ ರೋಚಕ ರಾಜಕೀಯ ಹೋರಾಟದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ದಾವಣಗೆರೆಯಂತೆ ಮತ್ತೆ ಭಾರಿ ವೈರಲ್ ಆಗುತ್ತಿದೆ. ಅಂದು ಬಳ್ಳಾರಿಯ ಗಣಿ ಧಣಿಗಳು ಹಾಗೂ ರೆಡ್ಡಿ ಸಹೋದರರ (Reddy Brothers) ಸಾಮ್ರಾಜ್ಯದ ವಿರುದ್ಧ ಸಿದ್ದರಾಮಯ್ಯ ಅವರು ವಿಧಾನಸಭೆಯ ಒಳಗೆ ಮತ್ತು ಹೊರಗೆ ಸಿಂಹದಂತೆ ಗುಡುಗಿದ್ದ ಆ ಐತಿಹಾಸಿಕ ದೃಶ್ಯಗಳು ಇಂದಿಗೂ ಕೋಟ್ಯಂತರ ಕನ್ನಡಿಗರ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತಿವೆ. ಅದು 2010ರ ಸಮಯ, ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ವಿರುದ್ಧ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸಿಡಿದೆದ್ದಿದ್ದರು. “ಧೈರ್ಯವಿದ್ದರೆ ಬಳ್ಳಾರಿಗೆ ಕಾಲಿಟ್ಟು ತೋರಿಸಿ” ಎಂದು ರೆಡ್ಡಿ ಬ್ರದರ್ಸ್ ಹಾಕಿದ್ದ ಸವಾಲನ್ನು ಸ್ವೀಕರಿಸಿದ್ದ ಸಿದ್ದರಾಮಯ್ಯ, ಸದನದಲ್ಲಿ ಮೇಜು ಕುಟ್ಟಿ ಗರ್ಜಿಸಿದ್ದರು. ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರ ಆವೇಶ, ಕಣ್ಣುಗಳಲ್ಲಿನ ಧೀರತೆ ಮತ್ತು ಗಡಸು ಧ್ವನಿಯ ಹೆದರಿಕೆಯಿಲ್ಲದ ಮಾತುಗಳು ಇಂದಿನ ಯುವ ಪೀಳಿಗೆಗೂ ನೆಚ್ಚಿನ ‘ಮಾಸ್ ಡೈಲಾಗ್’ನಂತೆ ಕಾಣಿಸುತ್ತಿವೆ.

ಅಷ್ಟಕ್ಕೇ ನಿಲ್ಲದ ಸಿದ್ದರಾಮಯ್ಯ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಬರೋಬ್ಬರಿ 320 ಕಿಲೋಮೀಟರ್‌ಗಳ ಐತಿಹಾಸಿಕ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈ ಪಾದಯಾತ್ರೆಯು ಅಂದಿನ ಬಿಜೆಪಿ ಸರ್ಕಾರದ ಪತನಕ್ಕೆ ಭದ್ರ ಬುನಾದಿ ಹಾಕಿದ್ದಲ್ಲದೆ, 2013 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಅತ್ಯಂತ ಪ್ರಮುಖ ಕಾರಣವಾಗಿತ್ತು. ಸದ್ಯ ಸಿದ್ದರಾಮಯ್ಯ ಅವರು ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಸಿಎಂ ಸ್ಥಾನಕ್ಕೆ ವಿದಾಯ ಹೇಳಿರುವ ಈ ಭಾವುಕ ಸಂದರ್ಭದಲ್ಲಿ, ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಆ ಹಳೇ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. “ಕುರ್ಚಿ ಇರಲಿ, ಬಿಡಲಿ.. ಸಿದ್ದರಾಮಯ್ಯ ಅವರ ಈ ಗತ್ತನ್ನು ಮತ್ತು ಧೈರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಇವರೊಬ್ಬರೇ ನಿಜವಾದ ಮಾಸ್ ಲೀಡರ್” ಎಂದು ಅಭಿಮಾನಿಗಳು ಕಮೆಂಟ್‌ಗಳ ಮೂಲಕ ಭಾವುಕರಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

IPL 2026: 30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ; ಭವಿಷ್ಯ ನುಡಿದ ಸೆಹ್ವಾಗ್

Source link

ಯಕ್ಷಗಾನ ಕಲಾವಿದನ ತಾಯಿಗೆ ನಿಂದನೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು!

ಬೆಂಗಳೂರು, ಮೇ.28: ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸುದೀರ್ಘ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ತಿಮರೋಡಿ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರ ಅಧ್ಯಕ್ಷತೆಯ ರಜಾ ಕಾಲದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ದೂರುದಾರರು ಹಾಗೂ ಆರೋಪಿ ಪರ ವಕೀಲರ ಸುದೀರ್ಘ ಮತ್ತು ಕೂಲಂಕಷ ವಾದಗಳನ್ನು ಆಲಿಸಿದ ನ್ಯಾಯಪೀಠವು ಕೊನೆಗೂ ಔಪಚಾರಿಕವಾಗಿ ಪರಿಹಾರವನ್ನು ಮಂಜೂರು ಮಾಡಿದೆ.

ಮಾನ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡುವ ವೇಳೆ ಕೆಲವು ಕಠಿಣ ಕಾನೂನು ಷರತ್ತುಗಳನ್ನು ವಿಧಿಸಿದೆ. ಅದರಂತೆ, ಆರೋಪಿತ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರತಿ ವಾರಕ್ಕೊಮ್ಮೆ ಕಡ್ಡಾಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಅಲ್ಲಿನ ಪೊಲೀಸ್ ರಿಜಿಸ್ಟರ್‌ನಲ್ಲಿ ಸಹಿ ಹಾಕಬೇಕು ಎಂದು ಪೀಠವು ಕಟ್ಟುನಿಟ್ಟಾಗಿ ಸೂಚಿಸಿದೆ.

ಇದನ್ನೂ ಓದಿ:ಕೊನೆಯುಸಿರಿರುವವರೆಗೂ ನೀನೇ ನನ್ನವಳು!: ಆಸ್ಪತ್ರೆ ಹಾಸಿಗೆಯಲ್ಲೇ ಹೆಂಡತಿಗೆ ಸಿಂಧೂರ ಇಟ್ಟು ಪತಿ ಧರ್ಮ ಮೆರೆದ ಪತಿ

ಇದಲ್ಲದೆ, ಈ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ನಡೆಸುತ್ತಿರುವ ಕಾನೂನು ತನಿಖೆಗೆ ಆರೋಪಿಯು ಸಂಪೂರ್ಣವಾಗಿ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶಪಡಿಸುವ ಅಥವಾ ದೂರುದಾರರಿಗೆ ಬೆದರಿಕೆ ಹಾಕುವ ಪ್ರಯತ್ನ ಮಾಡಬಾರದು ಎಂದು ಹೈಕೋರ್ಟ್ ಬಿಗಿಯಾದ ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹೈಪ್ರೊಫೈಲ್ ನಿಂದನೆ ಪ್ರಕರಣಕ್ಕೆ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version