Headlines

ಪೈಪ್ ಲೈನ್ ಕಾಮಗಾರಿ: ರಸ್ತೆ ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ – Kannada News | BMTC Bus Gets Stuck in Road pothole In on KR Road After Pipeline Work in Bengaluru, Passengers Stranded

ಬೆಂಗಳೂರು, ಜುಲೈ 13: ಬೆಂಗಳೂರಿನ ಬಸವನಗುಡಿ ಕೆಆರ್ ರಸ್ತೆಯಲ್ಲಿ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆ ಮಧ್ಯೆ ಸೃಷ್ಟಿಯಾದ ಗುಂಡಿಯಲ್ಲಿ ಬಿಎಂಟಿಸಿ ಬಸ್ ಸಿಲುಕಿ ಪ್ರಯಾಣಿಕರಿಗೆ ಸಮಸ್ಯೆ ಉಂಟಯಿತು. ಪದ್ಮನಾಭನಗರದಿಂದ ಮಾರ್ಕೆಟ್‌ ಕಡೆಗೆ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್, ರಸ್ತೆ ಗುಂಡಿಗೆ ಸಿಲುಕಿ ಒಂದು ಬದಿಗೆ ವಾಲಿ ನಿಂತಿತು. ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದ ಸಿಬ್ಬಂದಿ, ಕೆಲಸ ಮುಗಿದ ನಂತರ ಗುಂಡಿಗಳನ್ನು ಸರಿಯಾಗಿ ಮುಚ್ಚದೆ, ಕೇವಲ ಮಣ್ಣು ಮತ್ತು ಜಲ್ಲಿ ಹಾಕಿ ಹಾಗೆಯೇ ಹೋಗಿದ್ದರು. ಇದರಿಂದಾಗಿ ರಸ್ತೆಯು ವಾಹನ ಸಂಚಾರಕ್ಕೆ ಅಸುರಕ್ಷಿತವಾಗಿ…

Read More

ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ! – Kannada News | Bravery at Murdeshwar Station: Konkan Railway Pointsman Saves Passenger From Moving Train

ಉತ್ತರ ಕನ್ನಡ, ಜುಲೈ 13: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ಉದ್ಯೋಗಿಯೊಬ್ಬರ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಭೀಕರ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕೇರಳದಿಂದ ರಾಜಸ್ಥಾನಕ್ಕೆ ತೆರಳುತ್ತಿದ್ದ ರೈಲೊಂದು ಮುರುಡೇಶ್ವರ ನಿಲ್ದಾಣದಿಂದ ಹೊರಡುವಾಗ, 22 ವರ್ಷದ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ್ದಾನೆ. ಈ ವೇಳೆ ಆತ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವಿನ ಗ್ಯಾಪ್‌ನಲ್ಲಿ ಬೀಳಲು ಹೋಗಿದ್ದಾನೆ. ಇದನ್ನು ತಕ್ಷಣ ಗಮನಿಸಿದ ಅಲ್ಲೇ ಕರ್ತವ್ಯದಲ್ಲಿದ್ದ ಕೊಂಕಣ…

Read More

ಜಾಗತಿಕ ಆತಂಕ: ಇರಾನ್​ನ ಹಿಟ್​ಲಿಸ್ಟ್​ನಲ್ಲಿ ಇದ್ದಾರಂತೆ ಟ್ರಂಪ್, ಮೆಲೋನಿ, ನೆತನ್ಯಾಹು ಅಲಿ ಪುತ್ರನ ಶಪಥ – Kannada News | Iran’s Global Hit List: Trump, Macron, Meloni Targeted as New Leader Vows Revenge

ಟೆಹ್ರಾನ್, ಜುಲೈ 13:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆಯೇ ಜಾಗತಿಕ ರಾಜಕಾರಣದಲ್ಲಿ ನೆತ್ತರು ಹೆಪ್ಪುಗಟ್ಟಿಸುವಂತಹ ರಣತಂತ್ರವೊಂದು ಬಯಲಾಗಿದೆ. ಇರಾನ್‌(Iran)ನ ಅತ್ಯುನ್ನತ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ರಾಷ್ಟ್ರಗಳ ಅಗ್ರ ನಾಯಕರನ್ನು ಒಳಗೊಂಡ ಹಿಟ್​ಲಿಸ್ಟ್​ ಅನ್ನು ಇರಾನ್‌ನ ಪ್ರಭಾವಿ ಸರ್ಕಾರಿ ಮಾಧ್ಯಮವೊಂದು ಪ್ರಕಟಿಸಿದೆ. 2026ರ ಫೆಬ್ರವರಿ 28 ರಂದು ನಡೆದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಬೆನ್ನಲ್ಲೇ…

Read More

Gold Rate: ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ; ಗ್ರಾಮ್​ಗೆ 130 ರೂ ಕುಸಿತ – Kannada News | Gold Price Today on 13th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 13: ಚಿನ್ನದ ಬೆಲೆಯ ಸತತ ಇಳಿಕೆಯ ಟ್ರೆಂಡ್ ಮತ್ತೆ ಶುರುವಾದಂತಿದೆ. ವಾರಾಂತ್ಯದಲ್ಲಿ ಅಲ್ಪ ಇಳಿಕೆ ಕಂಡಿದ್ದ ಬಂಗಾರದ ದರ ಇವತ್ತು 130 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಐದಾರು ತಿಂಗಳುಗಳಿಂದ ಇದರ ಬೆಲೆ ಬಹಳಷ್ಟು ಇಳಿದಿದೆ. ಇರಾನ್ ಯುದ್ಧವು ಚಿನ್ನದ ಬೆಲೆ (Gold Price) ಕುಸಿತಕ್ಕೆ ಎಡೆ ಮಾಡಿಕೊಟ್ಟಂತಿದೆ. ಜನವರಿ ಕೊನೆಯಲ್ಲಿ 17,885 ರೂ ಇದ್ದ ಅಪರಂಜಿ ಚಿನ್ನದ ಬೆಲೆ ಇದೀಗ 14,291 ರೂಗೆ ಕುಸಿದಿದೆ. ಐದಾರು ತಿಂಗಳಲ್ಲಿ ಬೆಲೆ ಮೂರೂವರೆ ಸಾವಿರ ರೂಗಿಂತ ಹೆಚ್ಚಿನ…

Read More

Linganamakki Dam: ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು – Kannada News | Muppane Launch Service Resumes in Shivamogga as Linganamakki Backwater Levels Rise

ಶಿವಮೊಗ್ಗ, ಜುಲೈ 13: ಜಿಲ್ಲೆಯ ಲಿಂಗನಮಕ್ಕಿ ಡ್ಯಾಂ ಹಿನ್ನೀರು ಇಳಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮುಪ್ಪಾನೆ ಲಾಂಚ್ ಸೇವೆ ಇಂದಿನಿಂದ ಮತ್ತೆ ಪುನರಾರಂಭಗೊಂಡಿದೆ. ಈ ನಿರ್ಧಾರದಿಂದ ಸಾಗರ ತಾಲೂಕಿನ ಮುಪ್ಪಾನೆ ಕಡವು ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಿದೆ. ಸಾಗರ ತಾಲೂಕಿನ ಮುಪ್ಪಾನೆ ಕಡವಿನಲ್ಲಿ ಕಾರ್ಯನಿರ್ವಹಿಸುವ ಈ ಲಾಂಚ್, ಜೋಗ ಹಾಗೂ ಸಿಗಂದೂರು ನಡುವೆ ಅತಿ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಕರೂರು ಮತ್ತು ಬಾರಂಗಿ ಹೋಬಳಿಗಳ ಜನರಿಗೆ ಕಾಗಲ್ ಮತ್ತು ಜೋಗಕ್ಕೆ ತೆರಳಲು ಇದೇ ಹತ್ತಿರದ…

Read More

ಚಿಕ್ಕಜಾಲ ರೌಡಿಶೀಟರ್ ‘ಕಿಂಗ್ ಮೇಕರ್ ದಾಸ’ನ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಭಾಗಿ – Kannada News | BJP MLA Vishwanath Joins Notorious Rowdy Dasa’s Party; Viral Photos Spark Outrage

ಬೆಂಗಳೂರು, ಜು.13: ಯಲಹಂಕ ಕ್ಷೇತ್ರದ ಪ್ರಭಾವಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕುಖ್ಯಾತ ರೌಡಿಶೀಟರ್ ಒಬ್ಬನ ಅದ್ಧೂರಿ ಹುಟ್ಟುಹಬ್ಬದ ಆಚರಣೆಯಲ್ಲಿ ಖುದ್ದಾಗಿ ಭಾಗಿಯಾಗಿ ಕೇಕ್ ತಿನ್ನಿಸಿರುವ ಫೋಟೋ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಯಲಹಂಕ ಕ್ಷೇತ್ರದ ಆಲೂರು ಗ್ರಾಮದಲ್ಲಿ ಈ ಅದ್ಧೂರಿ ಬರ್ತಡೇ ಪಾರ್ಟಿ ನಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ದಾಸ ಅಲಿಯಾಸ್ ‘ಕಿಂಗ್ ಮೇಕರ್ ದಾಸ’ ಎಂಬಾತನೇ ಈಗ ಶಾಸಕರ ಜೊತೆ…

Read More

Video: ಮಧ್ಯರಾತ್ರಿ ಊಟ ಕದ್ದು ತಿನ್ನುವಾಗ್ಲೇ ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದ ಯುವಕ – Kannada News | A young man who stopped eating after quarrelling with his mother

ಬೆಳೆದು ಎಷ್ಟೇ ದೊಡ್ಡವರಾದ್ರೂ ಪುಟಾಣಿ ಮಕ್ಕಳಂತೆ (little kids) ಅಮ್ಮನ ಜತೆಗೆ ಕೋಪಿಸಿಕೊಳ್ಳುತ್ತೇವೆ. ಸಣ್ಣ ಪುಟ್ಟ ವಿಷ್ಯಕ್ಕೆ ಹಠ ಹಿಡಿಯುತ್ತೇವೆ. ಊಟ ತಿಂಡಿ ಬಿಟ್ಟು ಮನೆಯಲ್ಲಿ ಸಣ್ಣದೊಂದು ಧರಣಿ ಮಾಡುತ್ತೇವೆ. ಈ ಯುವಕನದ್ದು ಅದೇ ಕಥೆ. ಅಮ್ಮ ಜತೆಗೆ ಜಗಳ ಮಾಡಿ ಊಟ ಬಿಟ್ಟಿದ್ದಾನೆ. ಕೊನೆಗೆ ಹಸಿವು ತಾಳಲಾರದೇ ಮಧ್ಯರಾತ್ರಿ 2 ಗಂಟೆಗೆ ಅಡುಗೆ ಮನೆಗೆ ಹೋಗಿ ಕದ್ದು ತಿಂದಿದ್ದಾನೆ. ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗಮನ ಸೆಳೆದಿದೆ….

Read More

18 ವರ್ಷಗಳ ಜರ್ನಿ ಮುಕ್ತಾಯ: CSKಗೆ ಗುಡ್‌ಬೈ ಹೇಳಿದ ಫ್ಲೆಮಿಂಗ್! – Kannada News | CSK Part Ways With Coach Stephen Fleming

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಇದರೊಂದಿಗೆ ಐಪಿಎಲ್​ನ ಅತ್ಯಂತ ಸುದೀರ್ಘ ಹಾಗೂ ಯಶಸ್ವಿ ಕೋಚ್-ಫ್ರಾಂಚೈಸಿ ಬಾಂಧವ್ಯವೊಂದು ಕೊನೆಗೊಂಡಂತಾಗಿದೆ. 2008 ರ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಸ್ಟೀಫನ್ ಫ್ಲಯಿಂಗ್, ಆ ಸೀಸನ್ ಮುಗಿದ ತಕ್ಷಣವೇ ಅವರು ನಿವೃತ್ತಿ ಘೋಷಿಸಿ, 2009 ರಿಂದ ಸಿಎಸ್​ಕೆ ತಂಡ ಕೋಚ್ ಆಗಿ ಜವಾಬ್ದಾರಿ…

Read More

ಸರಳತೆಯನ್ನೇ ಉಸಿರಾಗಿಸಿಕೊಂಡಿದ್ದ ಗಾಯಕಿ ಎಸ್​. ಜಾನಕಿ ಆಸ್ತಿ ಎಷ್ಟು ಕೋಟಿ? – Kannada News | S Janaki Rs 537 Cr Net Worth: Singer Simple Life Amidst Fame and Spiritual Journey

ಇಂದಿನ ಗ್ಲಾಮರ್ ಜಗತ್ತಿನಲ್ಲಿ ಒಂದು ಸಿನಿಮಾ ಹಿಟ್ ಆದರೆ ಸಾಕು, ನಟ-ನಟಿಯರು, ಗಾಯಕರ ಹಮ್ಮು ಬಿಮ್ಮೇ ಬದಲಾಗಿಬಿಡುತ್ತದೆ. ಅವರ ಮಾತಿನ ಶೈಲಿ ಬದಲಾಗುತ್ತದೆ, ಗ್ಯಾರೇಜ್‌ಗೆ ಕೋಟಿ ಬೆಲೆಯ ದುಬಾರಿ ಕಾರುಗಳು ಬಂದು ನಿಲ್ಲುತ್ತವೆ. ಆದರೆ, ತಮ್ಮ ಮಧುರ ಧ್ವನಿಯಿಂದಲೇ ಜಗತ್ತನ್ನೇ ಗೆದ್ದು, ನೂರಾರು ಕೋಟಿ ಆಸ್ತಿಯ ಒಡತಿಯಾಗಿದ್ದರೂ ಎಸ್. ಜಾನಕಿ ಅವರು ಎಂದಾದರೂ ಹಮ್ಮು-ಬಿಮ್ಮಿನಿಂದ ನಡೆದುಕೊಂಡಿದ್ದನ್ನು ನೋಡಿದ್ದೀರಾ? ದಶಕಗಳ ಕಾಲ ಚಿತ್ರರಂಗವನ್ನು ಆಳಿದರೂ, ಅವರು ಯಾವಾಗಲೂ ಒಂದು ಸಾಧಾರಣ ಸೀರೆಯುಟ್ಟು ಸರಳ ಜೀವನ ನಡೆಸಿದರು. ಅವರ ಆಸ್ತಿ…

Read More

ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಬ್ರೇಕ್: ತಮಿಳುನಾಡಿನಲ್ಲಿ ಸದ್ಯಕ್ಕಿಲ್ಲ ‘ಸಂಪೂರ್ಣ ಗೋಹತ್ಯೆ ನಿಷೇಧ’ – Kannada News | Supreme Court Blocks Madras HC’s Complete Cow Slaughter Ban in Tamil Nadu

ನವದೆಹಲಿ, ಜುಲೈ 13: ಬಕ್ರೀದ್ ಹಬ್ಬದ ಮುನ್ನಾದಿನದಂದು ತಮಿಳುನಾಡು ರಾಜ್ಯಾದ್ಯಂತ ಹಸು  ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್(Supreme Court) ಇಂದು ಮಧ್ಯಂತರ ತಡೆ ನೀಡಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಇದರೊಂದಿಗೆ ತಮಿಳುನಾಡಿನಲ್ಲಿ ಸೃಷ್ಟಿಯಾಗಿದ್ದ ದೊಡ್ಡ ಆಡಳಿತಾತ್ಮಕ ಮತ್ತು ಕಾನೂನು ಗೊಂದಲಕ್ಕೆ ಸದ್ಯ ತೆರೆ ಬಿದ್ದಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರದ ವಾದವೇನು? ಹೈಕೋರ್ಟ್…

Read More