Headlines

ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ – Kannada News | Moving Train Puja Viral Video: Indian Railways Clarifies Rs3 Lakh Luxury Saloon Car Booking

ನವದೆಹಲಿ, ಜುಲೈ 13: ಇತ್ತೀಚೆಗಷ್ಟೇ ರೈಲು(Train) ಬೋಗಿಯೊಂದನ್ನು ವಧು-ವರರ ಕೋಣೆಯಂತೆ ಅಲಂಕರಿಸಲಾಗಿದ್ದ ‘ಹನಿಮೂನ್ ಕೋಚ್’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಚಲಿಸುವ ರೈಲಿನೊಳಗೇ ಪುರೋಹಿತರ ಸಮ್ಮುಖದಲ್ಲಿ ಮಂತ್ರ ಘೋಷಗಳೊಂದಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೈರಲ್ ವಿಡಿಯೋದಲ್ಲಿ, ಬಿಳಿ ವಸ್ತ್ರ ಧರಿಸಿದ ಭಕ್ತರ ಸಮ್ಮುಖದಲ್ಲಿ ಅರ್ಚಕರೊಬ್ಬರು ರೈಲು ಬೋಗಿಯ ನೆಲದ ಮೇಲೆಯೇ ಕುಳಿತು ಪೂಜೆನೆರವೇರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಪ್ರಯಾಣಿಕರು ಓಡಾಡುವ ರೈಲಿನಲ್ಲಿ…

Read More

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ತರಾತುರಿ ತೋರದ ಭಾರತ; ಕೆಟ್ಟ ಒಪ್ಪಂದಕ್ಕಿಂತ, ಒಪ್ಪಂದವಿಲ್ಲದಿರುವುದೇ ಲೇಸು – ಸರ್ಕಾರ ನಿಲುವು – Kannada News | Having no deal better than bad deal, India’s tough stand on US trade agreement

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್Image Credit source: PTI ನವದೆಹಲಿ, ಜುಲೈ 13: ಅಮೆರಿಕ (US) ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ದೃಢ ನಿಲುವು ತಳೆದಿದೆ. ವ್ಯಾಪಾರ ಮಾತುಕತೆಗಳಲ್ಲಿ ಭಾರತವು ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತಹ ಯಾವುದೇ “ಕೆಟ್ಟ ಒಪ್ಪಂದ” (Bad Deal) ಮಾಡಿಕೊಳ್ಳಲು ಸಿದ್ಧವಿಲ್ಲ. ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇರಲು (No Deal) ಭಾರತ ನಿರ್ಧರಿಸಿದೆ ಎಂದು ಸರ್ಕಾರಿ ಅಧಿಕಾರಿಗಳ ಅಭಿಪ್ರಾಯ ಕೇಳಿ ನ್ಯೂಸ್18…

Read More

ಶಾಸಕ ರಾಯರೆಡ್ಡಿ ಆಪ್ತನ ಲ್ಯಾಂಡ್ ಡೀಲಿಂಗ್ ವಿಡಿಯೋ ವೈರಲ್: ತಕ್ಷಣವೇ ಅಲರ್ಟ್ ಆದ ಶಾಸಕ – Kannada News | Koppal Land Acquisition Row: MLA Rayareddy’s Aide Navali Hiremath Caught in Yelaburga Deals

ಕೊಪ್ಪಳ, ಜು.13: ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ವಿಂಡ್ ಪವರ್, ಸೋಲಾರ್ ಮತ್ತು ಕೆಪಿಟಿಸಿಎಲ್ ವಿದ್ಯುತ್ ಸಬ್‌ಸ್ಟೇಷನ್‌ಗಳ ಜಮೀನು ಸ್ವಾಧೀನ ಪ್ರಕ್ರಿಯೆಯದ್ದೇ ದೊಡ್ಡ ಸುದ್ದಿಯಾಗುತ್ತಿದೆ. ಇದರ ನಡುವೆಯೇ, ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಆಪ್ತ ಎನ್ನಲಾದ ಮುಖಂಡ ಎಸ್.ಆರ್. ನವಲಿ ಹಿರೇಮಠ ರೈತರೊಂದಿಗೆ ಬಹಿರಂಗವಾಗಿ ಲ್ಯಾಂಡ್ ಡೀಲ್ ಮಾಡುತ್ತಿರುವ ಮತ್ತೊಂದಿಷ್ಟು ಸ್ಫೋಟಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸರಣಿಯಾಗಿ ವೈರಲ್ ಆಗುತ್ತಿದ್ದು, ಕ್ಷೇತ್ರದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಶಾಸಕ…

Read More

Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​! – Kannada News |  Dudhsagar Falls: A Monsoon Spectacle Amidst Western Ghats Restrictions

ಬೆಳಗಾವಿ, ಜುಲೈ 13: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕಾರವಾರದ ಜೋಯಿಡಾದಲ್ಲಿ ಹುಟ್ಟುವ ದೂದ್ ಸಾಗರ ಜಲಪಾತವು ಜೀವಕಳೆ ಪಡೆದುಕೊಂಡಿದೆ. ಹಾಲಿನ ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಗೋವಾಕ್ಕೆ ಹರಿಯುವ ದೂದ್ ಸಾಗರ, ಮಹದಾಯಿ ನದಿಯನ್ನು ಸೇರುತ್ತದೆ. 1017 ಅಡಿ ಎತ್ತರದಿಂದ ಕಲ್ಲು-ಬಂಡೆಗಳನ್ನು ಕೊರೆದುಕೊಂಡು ರಭಸವಾಗಿ ಹರಿಯುವ ಈ ಜಲಪಾತವು ದೇಶದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ…

Read More

Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ – Kannada News | Karnataka Reservoir Water Level on 13 July 2026: KRS Yet to Reach 100 Feet, Hemavathi, Kabini, Almatti Storage Remains Below Last Year

ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ಮುಂಗಾರು ಮಳೆಯ (Monsoon Rain) ಕೊರತೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜುಲೈ ತಿಂಗಳ ಆರಂಭದಲ್ಲಿ ದಕ್ಷಿಣ ಕನ್ನಡ, ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಕಡೆ ಭಾರಿ ಮಳೆಯಾಗಿ ಜಲಾಶಯಗಳ ಒಳಹರಿವು ತುಸು ಹೆಚ್ಚಾಗಿದ್ದರೂ ಒಟ್ಟು ಲೆಕ್ಕದಲ್ಲಿ ನೀರಿನ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿಲ್ಲ. ಕಳೆದ ವರ್ಷ ಜೂನ್ ಆರಂಭದಲ್ಲೇ ನೂರು ಅಡಿ ನೀರು ತುಂಬಿದ್ದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಕೆಆರ್​ಎಸ್​​ ಜಲಾಶಯದಲ್ಲಿ (KRS Dam) ಈ ವರ್ಷ ಇನ್ನೂ ನೀರಿನ…

Read More

ತಿರುಪತಿ ತಿಮ್ಮಪ್ಪನಿಗೆ ಪ್ರತಿದಿನ ಮೊದಲ ಆರತಿ ಬೆಳಗುವ ಹಕ್ಕು ಕರ್ನಾಟಕಕ್ಕೆ ಸಿಕ್ಕಿದ್ದು ಹೇಗೆ? ಇಲ್ಲಿದೆ ರೋಚಕ ಇತಿಹಾಸ! – Kannada News | Why is Tirupati Temple First Aarti Performed on Behalf of Karnataka? Know the History

ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ತಿರುಮಲದಲ್ಲಿರುವ ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಅತ್ಯಂತ ಪವಿತ್ರವಾದ ‘ಮೊದಲ ಆರತಿ’ ಸಾಂಪ್ರದಾಯಿಕವಾಗಿ ನಮ್ಮ ಕರ್ನಾಟಕ ರಾಜ್ಯದ ಹೆಸರಿನಲ್ಲೇ ಸಲ್ಲಿಕೆಯಾಗುತ್ತದೆ. ತಿರುಪತಿ ಕ್ಷೇತ್ರಕ್ಕೂ ಕರ್ನಾಟಕಕ್ಕೂ 400 ವರ್ಷಗಳ ಅವಿನಾಭಾವ ಧಾರ್ಮಿಕ ಮತ್ತು ಐತಿಹಾಸಿಕ ನಂಟಿದೆ. ಈ ನಂಟಿನ ಪ್ರತೀಕವಾಗಿ ಸ್ವಾಮಿಯ ಮೊದಲ ಆರತಿ ಕರ್ನಾಟಕದ ಪರವಾಗಿಯೇ ಸಲ್ಲಿಸಲಾಗುತ್ತದೆ. ಮೈಸೂರು ಮಹಾರಾಜರ ಕೊಡುಗೆ ಮತ್ತು ಐತಿಹಾಸಿಕ ಒಪ್ಪಂದ ಈ ವಿಶಿಷ್ಟ ಧಾರ್ಮಿಕ ಹಕ್ಕಿನ ಹಿಂದೆ ಮೈಸೂರು ಸಂಸ್ಥಾನದ ಒಡೆಯರ್…

Read More

ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ – Kannada News | US Iran Conflict Intensifies: America Bombs Omidiya Airport, Iran Retaliates Against US, Israel, and Gulf Nations

ಟೆಹ್ರಾನ್, ಜುಲೈ 13: ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅಮೆರಿಕವು ಇರಾನ್‌ನ ಮೇಲೆ ಐದನೇ ಸುತ್ತಿನ ದಾಳಿ ನಡೆಸಿದ್ದು, ಇರಾನ್‌ನ ಖುಜಿಸ್ತಾನ್ ಪ್ರಾಂತ್ಯದಲ್ಲಿರುವ ಒಮೈದಿಯಾ ಏರ್‌ಪೋರ್ಟ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ. ಇರಾನ್‌ನಿಂದ ಹಡಗುಗಳ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕ ಈ ಕ್ರಮ ಕೈಗೊಂಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಸುಮ್ಮನಿಲ್ಲ. ಅದು ಅಮೆರಿಕದ ಸೇನಾ ನೆಲೆಗಳು ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ…

Read More

1.8 ಕೋಟಿ ರೂ. ಬಾಕಿ ಉಳಿಸಿಕೊಂಡ ಆರೋಪ; ನಟ ಆರ್ಯ ವಿರುದ್ಧ ಕೇಸ್ – Kannada News | Actor Arya Faces Fraud Case: Unpaid Film Equipment Rentals, Hyderabad Police Probe

ತಮಿಳು ಚಿತ್ರರಂಗದ ಪ್ರಸಿದ್ಧ ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶೂಟಿಂಗ್ ಉಪಕರಣಗಳನ್ನು ಬಾಡಿಗೆಗೆ ಪಡೆದು ಹಣ ಪಾವತಿಸದ ಆರೋಪ ಇವರ ಮೇಲಿದೆ. ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 1.8 ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣ ನೀಡಬೇಕಾಗಿದೆ. ಈ ಸಂಬಂಧ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ. ಭರವಸೆ ನೀಡಿದ್ದ ಆರ್ಯ ‘ತಾಹರ್ ಸಿನಿ ಟೆಕ್ನಿಕ್’ ಸಂಸ್ಥೆಯು ಜುಲೈ 10 ರಂದು ಪೊಲೀಸರಿಗೆ ಈ ದೂರು ನೀಡಿದೆ. ಆರ್ಯ ನಟನೆಯ ‘ಅನಂತನ್ ಕಾಡು’ ಸಿನಿಮಾದ ಶೂಟಿಂಗ್‌ಗಾಗಿ…

Read More

ಸೆನ್ಸಾರ್ ಕಟ್ ಇಲ್ಲದೆ ‘ಜನ ನಾಯಗನ್’ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ – Kannada News | Thalapathy Vijay Fans Can Watch Jana Nayagan Without CBFC Cuts, Here is How

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿದೆ. ಸುಮಾರು 7 ತಿಂಗಳ ವಿಳಂಬದ ನಂತರ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ. ಭಾರತದಲ್ಲಿ ರಿಲೀಸ್ ಆಗುವ ಸಿನಿಮಾಗೆ ಸೆನ್ಸಾರ್ ಮಂಡಳಿ ಹಲವು ಕಟ್‌ಗಳನ್ನು ಮಾಡಿದೆ. ಆದರೆ ವಿದೇಶಗಳಲ್ಲಿ ಯಾವುದೇ ಕಟ್ ಇಲ್ಲದೆ ಒರಿಜಿನಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಚಿತ್ರದ ರಾ ಮತ್ತು ಅನ್‌ಕಟ್ ವರ್ಷನ್ ನೋಡಬಹುದು. ವಿದೇಶಿ…

Read More

ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್​ನಿಂದ ಭಾರತ ಫುಟ್‌ಬಾಲ್ ತಂಡ ಹೊರಕ್ಕೆ! – Kannada News | Indian football teams will not play in the Asian Games 2026

ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾ ಸಚಿವಾಲಯದ ಕಠಿಣ ನಿಯಮಾವಳಿಗಳು. ಅಂದರೆ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಹು-ಕ್ರೀಡಾಕೂಟಗಳಿಗೆ ಕಳುಹಿಸುವ ತಂಡಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ. ಏಷ್ಯನ್ ಗೇಮ್ಸ್ ಕೇವಲ ಅನುಭವ ಪಡೆಯುವ ಪ್ರವಾಸವಲ್ಲ. ಅದು ಪದಕ ಗೆಲ್ಲುವ ವೇದಿಕೆ ಎಂದು ಕೇಂದ್ರ ಕೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಇದಕ್ಕಾಗಿಯೇ ಸರ್ಕಾರ ಕೆಲ…

Read More