ಫೋಟೋ ನೋಡಿಯೇ ಪ್ರೀತಿಯಲ್ಲಿ ಬಿದ್ದಿದ್ದ ಗಾನಕೋಕಿಲೆ; ಎಸ್. ಜಾನಕಿ ಅಪರೂಪದ ಪ್ರೇಮಕಥೆ – Kannada News | S Janaki Untold Love Story and Ram Prasad Enduring Support

ಎಲ್ಲಿಯೋ ಸಿಕ್ಕ ಒಂದು ಸುಂದರ ಹುಡುಗನ ಫೋಟೋ. ಅದನ್ನೇ ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಂಡು ಪ್ರೀತಿಸೋ ಮುಗ್ಧ ಹುಡುಗಿ. ಜೀವನ ಕಳೆದರೆ ಈ ಹುಡುಗನ ಜೊತೆಯೇ ಕಳೆಯಬೇಕು ಎಂದು ಆಕೆ ಆಗಲೇ ಮನಸ್ಸಿನಲ್ಲೇ ನಿರ್ಧರಿಸಿಬಿಡುತ್ತಾಳೆ. ಚಿತ್ರವಿಚಿತ್ರ ಎನಿಸುವ ವಿಧಿಯ ಆಟ ನೋಡಿ, ಆ ಹುಡುಗಿ ಮುಂದೆ ಅದೇ ಹುಡುಗನನ್ನು ಪ್ರೀತಿಸಿ ಮದುವೆ ಕೂಡ ಆಗುತ್ತಾಳೆ.  ಕೇಳಲು ಯಾವುದೋ ಸಿನಿಮಾದ ರೋಮ್ಯಾಂಟಿಕ್ ಕಥೆಯಂತೆ ಅನಿಸಬಹುದು. ಇತ್ತೀಚೆಗೆ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ ಜಾನಕಮ್ಮನವರ ಬಾಳಿನಲ್ಲಿ ಇಂಥದ್ದೊಂದು ಅಪರೂಪದ, ಸುಂದರ ಪ್ರೇಮಕಥೆ ಇತ್ತು ಎಂಬ ವಿಷಯ ಇಂದಿನ ತಲೆಮಾರಿನ ಅನೇಕರಿಗೆ ತಿಳಿದೇ ಇಲ್ಲ. ಜಾನಕಮ್ಮ (S Janaki) ಜನ್ಮ ಜನ್ಮಾಂತರದ ಒಡನಾಡಿಯಂತೆ ಪ್ರೀತಿಸಿದ ಆ ‘ರಾಜಕುಮಾರ’ನ ಜೊತೆಗಿನ ಲವ್ ಸ್ಟೋರಿ ಇಲ್ಲಿದೆ.

ನಾವು ಮನಸ್ಸಿನಿಂದ ಏನನ್ನಾದರೂ ಪ್ರಾಮಾಣಿಕವಾಗಿ ಬಯಸಿದರೆ, ಅದನ್ನು ನಮಗೆ ತಲುಪಿಸಲು ಇಡೀ ವಿಶ್ವವೇ ಸಹಾಯ ಮಾಡುತ್ತದೆ ಎಂಬ ಮಾತಿದೆ. ಈ ಮಾತು ಗಾನಕೋಕಿಲೆ ಎಸ್. ಜಾನಕಿ ಅವರ ಬಾಳಿನಲ್ಲಿ ಅಕ್ಷರಶಃ ನಿಜವಾಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

‘ನಮ್ಮದು ನಿಜಕ್ಕೂ ಒಂದು ಸುಂದರ ಪ್ರೇಮ ವಿವಾಹ. ನಾನು ಹೈದರಾಬಾದ್‌ನಲ್ಲಿ ನನ್ನ ಚಿಕ್ಕಪ್ಪ ಚಂದ್ರಶೇಖರ್ ಅವರೊಂದಿಗೆ ಇರುತ್ತಿದ್ದೆ. ಅವರು ನಾಟಕಗಳಲ್ಲಿ ನಟಿಸುತ್ತಿದ್ದರು. ನಾಟಕದ ಮೇಕಪ್ ಬದಲಾಯಿಸುವ ವಿರಾಮದ ಸಮಯದಲ್ಲಿ ಪ್ರೇಕ್ಷಕರನ್ನು ರಂಜಿಸಲು ನಾನು ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಹಾಡುತ್ತಿದ್ದೆ. ಒಂದು ದಿನ, ನನ್ನ ಚಿಕ್ಕಪ್ಪನ ಜೇಬಿನಿಂದ ರಾಮ್ ಪ್ರಸಾದ್ ಅವರ ಫೋಟೋವೊಂದು ಕೆಳಗೆ ಬಿದ್ದಿತು. ನಾನು ಯಾರಿಗೂ ತಿಳಿಯದಂತೆ ಆ ಫೋಟೋವನ್ನು ಎತ್ತಿ ಬಚ್ಚಿಟ್ಟುಕೊಂಡೆ. ಆ ಫೋಟೋ ನೋಡಿದ ಕ್ಷಣದಲ್ಲೇ ನಾನು ಅವರನ್ನು ಪ್ರೀತಿಸಲು ಶುರು ಮಾಡಿದ್ದೆ. ನಮ್ಮಿಬ್ಬರ ನಡುವೆ ಜನ್ಮ ಜನ್ಮಾಂತರದ ಅಪರಿಚಿತ ಸಂಬಂಧವಿದ್ದಂತೆ ನನಗೆ ಭಾಸವಾಗಿತ್ತು’ ಎಂದು ಜಾನಕಮ್ಮ ನೆನಪಿಸಿಕೊಂಡಿದ್ದರು.

ಅದಾದ ಕೆಲವು ದಿನಗಳ ನಂತರ, ಚಿಕ್ಕಪ್ಪನ ಮೂಲಕವೇ ರಾಮ್ ಪ್ರಸಾದ್ ಅವರ ಪರಿಚಯ ಜಾನಕಮ್ಮ ಅವರಿಗೆ ಆಯಿತು. ಜಾನಕಿ ಅವರ ಗಾಯನ ಪ್ರತಿಭೆಯನ್ನು ಗುರುತಿಸಿದ ರಾಮ್ ಪ್ರಸಾದ್, ‘ಈ ಹುಡುಗಿ ಕೇವಲ ನಾಟಕಗಳಲ್ಲಿ ಹಾಡುವುದಕ್ಕೆ ಸೀಮಿತವಾಗಬಾರದು. ಸಿನಿಮಾಗಳಲ್ಲಿ ಇವರಿಗೆ ದೊಡ್ಡ ಅವಕಾಶಗಳು ಸಿಗಬೇಕು. ಭವಿಷ್ಯದಲ್ಲಿ ಇಡೀ ದೇಶವೇ ಹೆಮ್ಮೆಪಡುವ ಗಾಯಕಿಯಾಗುತ್ತಾಳೆ’ ಎಂದು ಭವಿಷ್ಯ ನುಡಿದಿದ್ದರು. ರಾಮ್ ಪ್ರಸಾದ್ ಅವರಿಗೆ ಜಾನಕಿ ಅವರು ಹಾಡುವ ಪ್ರತಿಯೊಂದು ಹಾಡೂ ಇಷ್ಟವಾಗುತ್ತಿತ್ತು. ಅದರಲ್ಲಿಯೂ ‘ರಸಿಕಾ ಬಾಲಂ’ ಎಂಬ ಹಾಡು ಅವರ ಆಲ್‌ಟೈಮ್ ಫೇವರಿಟ್ ಆಗಿತ್ತು. ಆ ಪ್ರೀತಿ ಮತ್ತು ಪ್ರೋತ್ಸಾಹದ ಜರ್ನಿ ಮುಂದೆ 1959ರಲ್ಲಿ ಇವರಿಬ್ಬರ ಮದುವೆಯಾಗಿ ಬದಲಾಯಿತು.

ಇದನ್ನೂ ಓದಿ: ಆ ಒಬ್ಬ ನಟಿಗಾಗಿ ಹಾಡು ಹಾಡುವುದಿಲ್ಲ ಎಂದು ಶಪಥ ಮಾಡಿದ್ದ ಎಸ್ ಜಾನಕಿ 

‘ನಾನು ರೆಕಾರ್ಡಿಂಗ್‌ಗೆ ಹೋದಾಗಲೆಲ್ಲಾ ಅವರು ನನ್ನನ್ನು ಒಂದೇ ಒಂದು ದಿನವೂ ಒಂಟಿಯಾಗಿ ಕಳುಹಿಸಲಿಲ್ಲ. ತಮ್ಮ ಇಡೀ ಜೀವನವನ್ನು ನನಗಾಗಿ ಮತ್ತು ನನ್ನ ಸಂಗೀತ ಸಾಧನೆಗಾಗಿ ಮುಡಿಪಾಗಿಟ್ಟರು. ಅವರ ಆ ಬೆಂಬಲವಿಲ್ಲದಿದ್ದರೆ ನಾನು ಇಂದು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ’ ಎಂದು ಜಾನಕಮ್ಮ ಭಾವುಕರಾಗಿ ಹೇಳಿದ್ದರು. 1997ರಲ್ಲಿ ರಾಮ್ ಪ್ರಸಾದ್ ಅವರು ಹೃದಯಾಘಾತದಿಂದ ನಿಧನರಾದರು. ಈ ದಂಪತಿಗೆ ಮುರಳಿ ಕೃಷ್ಣ ಹೆಸರಿನ ಮಗ ಇದ್ದರು. ಈ ವರ್ಷ ಜನವರಿಯಲ್ಲಿ ಮುರಳಿ ಕೃಷ್ಣ ಕೂಡ ಕೊನೆಯುಸಿರೆಳೆದಿದ್ದರು.

ಪ್ರಶ್ನೆ: ಎಸ್​ ಜಾನಕಿ ನಿಧನ ಹೊಂದಿದ್ದು ಎಲ್ಲಿ, ಯಾವಾಗ?
ಉತ್ತರ: ಜುಲೈ 11ರಂದು ಮೈಸೂರಿನಲ್ಲಿ ನಿಧನ ಹೊಂದಿದರು.

ಪ್ರಶ್ನೆ: ಎಸ್​. ಜಾನಕಿಗೆ ಎಷ್ಟು ವರ್ಷ ವಯಸ್ಸಾಗಿತ್ತು?
ಉತ್ತರ: ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು

ಪ್ರಶ್ನೆ: ಜಾನಕಿ ಎಷ್ಟು ಹಾಡುಗಳನ್ನು ಹಾಡಿದ್ದರು?
ಉತ್ತರ: ಜಾನಕಿ ಅವರು 20ಕ್ಕೂ ಅಧಿಕ ಭಾಷೆಗಳಲ್ಲಿ, 40 ಸಾವಿರ ಹಾಡುಗಳನ್ನು ಹಾಡಿದ್ದರು.

Published On – 11:51 am, Mon, 13 July 26

Source link

ಬೆಂಗಳೂರಿನ ರಸ್ತೆಗಳಲ್ಲಿ ‘ವಿಂಟೇಜ್‌’ ವೈಭವ: ಜಾಗತಿಕ ಮಟ್ಟದಲ್ಲಿ ಧೂಳೆಬ್ಬಿಸಿದ ಜಾವಾ-ಯೆಜ್ಡಿ ಬೈಕ್ ಪ್ರೇಮಿಗಳ ಅದ್ದೂರಿ ಹಬ್ಬ! – Kannada News | International Jawa Yezdi Day Celebrated in Bengaluru: 7500 Riders Join Global Vintage Bike Rally

ಬೆಂಗಳೂರು, ಜುಲೈ 13: ಮೋಟಾರ್‌ಸೈಕಲ್ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಹಾಗೂ ಹೆಮ್ಮೆಯ ಸಂಪ್ರದಾಯ ಹೊಂದಿರುವ ‘ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ’ವನ್ನು ಭಾನುವಾರ (ಜು 12) ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ನೂರಾರು ಬೈಕ್ ಪ್ರೇಮಿಗಳು ಒಂದೆಡೆ ಸೇರಿ 24ನೇ ಆವೃತ್ತಿಯ ಈ ಸಡಗರಕ್ಕೆ ಸಾಕ್ಷಿಯಾದರು. ನಗರದ ರಿಚ್‌ಮಂಡ್‌ ಟೌನ್‌ನಲ್ಲಿರುವ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ ಮೈದಾನಕ್ಕೆ ನೂರಾರು ರೈಡರ್‌ಗಳು ತಮ್ಮ ನೆಚ್ಚಿನ ಬೈಕ್‌ಗಳೊಂದಿಗೆ ಸವಾರಿ ಮಾಡಿಕೊಂಡು ಬಂದು ಜಮಾಯಿಸಿದ್ದರು.

ಇಡೀ ದಿನ ಮೈದಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪ್ರದರ್ಶನಕ್ಕಿಟ್ಟಿದ್ದ ಹಳೆಯ ಕ್ಲಾಸಿಕ್‌ ಯೆಜ್ಡಿ ಬೈಕ್‌ಗಳನ್ನು ಕಂಡು ಹಿರಿಯರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಯುವ ಪೀಳಿಗೆಯೂ ಅಷ್ಟೇ ಕುತೂಹಲದಿಂದ ಬೈಕ್‌ಗಳನ್ನು ವೀಕ್ಷಿಸಿ ಪುಳಕಿತಗೊಂಡಿತು. ಸವಾರರು ಮತ್ತು ಸಾರ್ವಜನಿಕರು ಬೈಕ್‌ಗಳ ಜೊತೆ ಸೆಲ್ಫಿ ತೆಗೆದುಕೊಂಡು, ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

ಸಣ್ಣ ಗುಂಪಿನಿಂದ ಜಾಗತಿಕ ಮಟ್ಟಕ್ಕೆ ಬೆಳೆದ ಚಳುವಳಿ

ಕೆಲವೇ ಕೆಲವು ಜಾವಾ ಮತ್ತು ಯೆಜ್ಡಿ ಬೈಕ್ ಮಾಲೀಕರು ಒಟ್ಟಾಗಿ ಆರಂಭಿಸಿದ್ದ ಈ ಆಚರಣೆ, ಇಂದು ಜಾಗತಿಕ ಮಟ್ಟದ ಬೃಹತ್ ಹಬ್ಬವಾಗಿ ರೂಪಾಂತರಗೊಂಡಿದೆ. ಬೈಕಿಂಗ್ ಪರಂಪರೆ ಹಾಗೂ ಸಮುದಾಯದ ಮೇಲಿನ ಅಪಾರ ಪ್ರೀತಿಯು ಹಲವು ತಲೆಮಾರುಗಳ ರೈಡರ್‌ಗಳನ್ನು ಒಂದೇ ಸೂರಿನಡಿ ತಂದು ಬೆಸೆಯುವಂತೆ ಮಾಡಿದೆ.

ಪ್ರತಿ ವರ್ಷ ಜುಲೈ ತಿಂಗಳ ಎರಡನೇ ಭಾನುವಾರದಂದು ಈ ವಿಶೇಷ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದಶಕಗಳ ಇತಿಹಾಸವಿರುವ ಹಳೆಯ ವಿಂಟೇಜ್ ಜಾವಾ ಮತ್ತು ಯೆಜ್ಡಿ ಬೈಕ್‌ಗಳು, ಇಂದಿನ ಆಧುನಿಕ ತಂತ್ರಜ್ಞಾನದ ಬೈಕ್‌ಗಳ ಜೊತೆ ಹೆಗಲಿಗೆ ಹೆಗಲು ಕೊಟ್ಟು ರಸ್ತೆಗಿಳಿಯುವುದೇ ಈ ದಿನದ ಹೈಲೈಟ್. ಇದು ಕೇವಲ ಬೈಕ್‌ಗಳ ಪ್ರದರ್ಶನವಾಗಿರದೆ, ಎರಡು ತಲೆಮಾರುಗಳ ನಡುವಿನ ಬೈಕಿಂಗ್ ಪ್ರೇಮದ ಅದ್ಭುತ ಕೊಂಡಿಯಾಗಿದೆ.

ಗಡಿ ದಾಟಿದ ಸಂಭ್ರಮ: 7,500ಕ್ಕೂ ಹೆಚ್ಚು ಸವಾರರ ಭಾಗಿ

ಈ ವರ್ಷದ ಆಚರಣೆಯು ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದ 150ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ 40ಕ್ಕೂ ಹೆಚ್ಚು ಬೈಕ್ ಕ್ಲಬ್‌ಗಳು ಮತ್ತು ಬರೋಬ್ಬರಿ 7,500ಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡು ಹೊಸ ದಾಖಲೆ ಬರೆದಿದ್ದಾರೆ.

ಈ ಸಡಗರ ಕೇವಲ ಭಾರತಕ್ಕಷ್ಟೇ ಸೀಮಿತವಾಗಿರದೆ, ದೇಶದ ಗಡಿಗಳನ್ನು ದಾಟಿ ವಿಶ್ವದ 11 ದೇಶಗಳಿಗೂ ಪಸರಿಸಿದೆ. ವಿದೇಶಿ ರೈಡರ್‌ಗಳು ಸ್ಥಳೀಯ ರ‍್ಯಾಲಿಗಳು, ಸಮುದಾಯ ಕೂಟಗಳು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಜಾವಾ ಸಮುದಾಯಗಳು ಭಾರತದ ರೈಡಿಂಗ್ ಕ್ಲಬ್‌ಗಳೊಂದಿಗೆ ಡಿಜಿಟಲ್ ಹಾಗೂ ಪ್ರತ್ಯಕ್ಷವಾಗಿ ಕೈಜೋಡಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ. ಕೇವಲ ರೈಡಿಂಗ್ ಮಾಡುವುದಷ್ಟೇ ಅಲ್ಲದೆ, ತಲೆಮಾರುಗಳಿಂದ ಸಾಗಿಬಂದ ಸ್ನೇಹ, ರೋಮಾಂಚಕ ನೆನಪುಗಳು ಮತ್ತು ಸವಾರಿಯ ಕಥೆಗಳನ್ನು ರೈಡರ್‌ಗಳು ಇಲ್ಲಿ ಹಂಚಿಕೊಂಡಿದ್ದಾರೆ.

ಇದು ಸವಾರರಿಂದ, ಸವಾರರಿಗಾಗಿಯೇ ಇರುವ ಹಬ್ಬ

ಈ ಐತಿಹಾಸಿಕ ಆಚರಣೆಯ ಯಶಸ್ಸಿನ ಕುರಿತು ಮಾತನಾಡಿದ ‘ಕ್ಲಾಸಿಕ್ ಲೆಜೆಂಡ್ಸ್’ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಸವಾರರ ಸಣ್ಣ ಗುಂಪೊಂದು ತಮ್ಮ ನೆಚ್ಚಿನ ಮೋಟಾರ್‌ಸೈಕಲ್‌ಗಳನ್ನು ಸಂಭ್ರಮಿಸಲು ಶುರು ಮಾಡಿದ ಪ್ರಯತ್ನವಿದು. ಇಂದು ಇದು ದೇಶ-ವಿದೇಶಗಳ ಗಡಿಗಳನ್ನು ದಾಟಿ, ತಲೆಮಾರುಗಳನ್ನು ಮೀರಿದ ಜಾಗತಿಕ ಸಂಪ್ರದಾಯವಾಗಿ ಬೆಳೆದು ನಿಂತಿದೆ. ಈ ಹಬ್ಬದ ಸಂಪೂರ್ಣ ಕ್ರೆಡಿಟ್ ಬೈಕ್ ಸವಾರರಿಗೆ ಸಲ್ಲುತ್ತದೆ. ಪ್ರತಿಯೊಂದು ರೈಡ್, ಪ್ರತಿ ಕೂಟ ಮತ್ತು ಹಂಚಿಕೊಂಡ ಪ್ರತಿಯೊಂದು ಕಥೆಯೂ ಈ ಹೆಮ್ಮೆಯ ಪರಂಪರೆಯನ್ನು ಜೀವಂತವಾಗಿರಿಸಿದೆ. ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಿರುವ ಈ ಚಳುವಳಿಯ ಭಾಗವಾಗಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಲಾಸಿಕ್ ಬೈಕ್‌ಗಳ ಮರುಜೀವಕ್ಕೆ ಮುನ್ನುಡಿ

ಭಾರತೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿಷ್ಠಿತ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳನ್ನು ಮತ್ತೆ ವೈಭವದಿಂದ ಪರಿಚಯಿಸುವ ಮಹತ್ವಾಕಾಂಕ್ಷೆಯೊಂದಿಗೆ ‘ಕ್ಲಾಸಿಕ್ ಲೆಜೆಂಡ್ಸ್’ ಕಂಪನಿಯನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಸ್ಥೆಯು ಜಾವಾ (Jawa), ಯೆಜ್ಡಿ (Yezdi) ಮತ್ತು ಬಿಎಸ್‌ಎ (BSA) ನಂತಹ ಐತಿಹಾಸಿಕ ಬ್ರ್ಯಾಂಡ್‌ಗಳ ಮಾಲೀಕತ್ವವನ್ನು ಹೊಂದಿದೆ. ಗ್ರಾಹಕರಿಗೆ ಅತ್ಯುತ್ತಮ ಬೈಕ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಮೂಲಕ, ನೈಜ ಮೋಟಾರ್‌ಸೈಕ್ಲಿಂಗ್ ಜೀವನಶೈಲಿಯ ಅನುಭವವನ್ನು ಒದಗಿಸುವುದು ಹಾಗೂ ಕ್ಲಾಸಿಕ್ ಬೈಕ್‌ಗಳ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬುವುದು ಕಂಪನಿಯ ಮುಖ್ಯ ಗುರಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ – Kannada News | Moving Train Puja Viral Video: Indian Railways Clarifies Rs3 Lakh Luxury Saloon Car Booking

ನವದೆಹಲಿ, ಜುಲೈ 13: ಇತ್ತೀಚೆಗಷ್ಟೇ ರೈಲು(Train) ಬೋಗಿಯೊಂದನ್ನು ವಧು-ವರರ ಕೋಣೆಯಂತೆ ಅಲಂಕರಿಸಲಾಗಿದ್ದ ‘ಹನಿಮೂನ್ ಕೋಚ್’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಚಲಿಸುವ ರೈಲಿನೊಳಗೇ ಪುರೋಹಿತರ ಸಮ್ಮುಖದಲ್ಲಿ ಮಂತ್ರ ಘೋಷಗಳೊಂದಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈರಲ್ ವಿಡಿಯೋದಲ್ಲಿ, ಬಿಳಿ ವಸ್ತ್ರ ಧರಿಸಿದ ಭಕ್ತರ ಸಮ್ಮುಖದಲ್ಲಿ ಅರ್ಚಕರೊಬ್ಬರು ರೈಲು ಬೋಗಿಯ ನೆಲದ ಮೇಲೆಯೇ ಕುಳಿತು ಪೂಜೆನೆರವೇರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಪ್ರಯಾಣಿಕರು ಓಡಾಡುವ ರೈಲಿನಲ್ಲಿ ಇಂತಹ ಆಚರಣೆಗಳಿಗೆ ಅವಕಾಶವಿದೆಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ ಬೆನ್ನಲ್ಲೇ ಉತ್ತರ ರೈಲ್ವೆ ಅಧಿಕೃತ ಸ್ಪಷ್ಟನೆ ನೀಡಿದೆ.

ಸಾಮಾನ್ಯ ಬೋಗಿಯಲ್ಲ, ಇದು 3 ಲಕ್ಷದ ‘ಲಕ್ಸುರಿ ಸಲೂನ್ ಕಾರು’

ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆದಿರುವ ರೈಲ್ವೆ ಇಲಾಖೆ, ಈ ಪೂಜೆ ನಡೆದಿರುವುದು ಸಾಮಾನ್ಯ ಪ್ರಯಾಣಿಕರ ಕೋಚ್‌ನಲ್ಲಿ ಅಲ್ಲ, ಬದಲಿಗೆ ಖಾಸಗಿಯಾಗಿ ಬುಕ್ ಮಾಡಲಾದ ಅತ್ಯಂತ ಐಷಾರಾಮಿ ‘ಸಲೂನ್ ಕಾರ್’ಬೋಗಿಯೊಳಗೆ ಎಂದು ಸ್ಪಷ್ಟಪಡಿಸಿದೆ.

ವಿಡಿಯೋ:

ಖಾಸಗಿ ವ್ಯಕ್ತಿಯೊಬ್ಬರು ಐಆರ್‌ಸಿಟಿಸಿ (IRCTC) ಮೂಲಕ ಈ ವಿಶೇಷ ಐಷಾರಾಮಿ ಕೋಚ್ ಅನ್ನು ಸಂಪೂರ್ಣವಾಗಿ ತಮಗಾಗಿ ಮಾತ್ರ ಬುಕ್ ಮಾಡಿದ್ದರು. ಜುಲೈ 8 ರಂದು ಈ  ಬುಕಿಂಗ್ ನಡೆದಿದ್ದು, ನವದೆಹಲಿಯಿಂದ ಮುಂಬೈವರೆಗಿನ ಏಕಮುಖ ಪ್ರಯಾಣಕ್ಕಾಗಿ ಆ ವ್ಯಕ್ತಿ ಬರೋಬ್ಬರಿ 3,08,580 ರೂಪಾಯಿಗಳನ್ನು ಮುಂಗಡವಾಗಿ ರೈಲ್ವೆ ಇಲಾಖೆಗೆ ಪಾವತಿಸಿದ್ದರು. ಜುಲೈ 10 ರಂದು ನವದೆಹಲಿಯಿಂದ ಹೊರಟ ‘ಪಶ್ಚಿಮ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ: 12926) ರೈಲಿಗೆ ಈ ವಿಶೇಷ ಸಲೂನ್ ಕಾರ್ ಅನ್ನು ಜೋಡಿಸಲಾಗಿತ್ತು.

ಮತ್ತಷ್ಟು ಓದಿ: Video: ಮುಂಬೈ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಹಠ ಮಾಡುತ್ತಾ ಪ್ಲಾಟ್‌ಫಾರ್ಮ್ ಮೇಲೆ ಮಲಗಿದ ಯುವಕ

ಏನಿದು ರೈಲ್ವೆ ಸಲೂನ್ ಕಾರ್?

ಸಾಮಾನ್ಯವಾಗಿ ರೈಲ್ವೆ ಸಲೂನ್ ಕಾರುಗಳು ಭಾರತೀಯ ರೈಲ್ವೆಯ ಅತ್ಯುನ್ನತ ಅಧಿಕಾರಿಗಳು, ಸಚಿವರು ಅಥವಾ ವಿಐಪಿಗಳ ಪ್ರಯಾಣಕ್ಕಾಗಿ ಮೀಸಲಾಗಿರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಐಆರ್‌ಸಿಟಿಸಿ ಇದನ್ನು ಶ್ರೀಮಂತ ಸಾರ್ವಜನಿಕರಿಗೂ ಬಾಡಿಗೆಗೆ ನೀಡಲು ಆರಂಭಿಸಿದೆ.

ಚಲಿಸುವ ಐಷಾರಾಮಿ ಮನೆ: ಈ ಸಲೂನ್ ಕಾರು ಒಳಭಾಗದಲ್ಲಿ ಪಂಚತಾರಾ ಹೋಟೆಲ್‌ನಂತಿರುತ್ತದೆ. ಇದರಲ್ಲಿ ಎರಡು ಹವಾನಿಯಂತ್ರಿತ (AC) ಮಲಗುವ ಕೋಣೆಗಳು, ಸುಸಜ್ಜಿತ ಅಡುಗೆಮನೆ , ಲಿವಿಂಗ್ ರೂಮ್, ಊಟದ ಕೋಣೆ ಮತ್ತು ಪ್ರತ್ಯೇಕ ಶೌಚಾಲಯಗಳು ಇರುತ್ತವೆ.

ನಿಯಮಗಳು ಏನು ಹೇಳುತ್ತವೆ?

ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಇಡೀ ಕೋಚ್ ಅನ್ನು ಬುಕ್ ಮಾಡಿರುವುದರಿಂದ, ಅದರ ಒಳಗಡೆ ಅವರ ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ. ಆದರೆ, ಚಲಿಸುವ ರೈಲಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೆಂಕಿ ಹಚ್ಚುವ ಪ್ರಕ್ರಿಯೆಗಳಿಗೆ ಕಟ್ಟುನಿಟ್ಟಿನ ನಿಷೇಧವಿದೆ.

ರೈಲ್ವೆ ಇಲಾಖೆಯು ಇದು ವಾಣಿಜ್ಯ ನಿಯಮಾವಳಿಗಳ ಅಡಿಯಲ್ಲೇ ನಡೆದಿದೆ ಎಂದು ಸ್ಪಷ್ಟಪಡಿಸಿದೆಯಾದರೂ, ಚಲಿಸುತ್ತಿರುವ ರೈಲಿನಲ್ಲಿ ಇಂತಹ ಧಾರ್ಮಿಕ ಆಚರಣೆಗಳನ್ನು ಮಾಡುವುದು ಎಷ್ಟು ಸುರಕ್ಷಿತ ಎಂಬ ಚರ್ಚೆ ಮಾತ್ರ ನೆಟ್ಟಿಗರ ನಡುವೆ ಇನ್ನೂ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ತರಾತುರಿ ತೋರದ ಭಾರತ; ಕೆಟ್ಟ ಒಪ್ಪಂದಕ್ಕಿಂತ, ಒಪ್ಪಂದವಿಲ್ಲದಿರುವುದೇ ಲೇಸು – ಸರ್ಕಾರ ನಿಲುವು – Kannada News | Having no deal better than bad deal, India’s tough stand on US trade agreement

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್Image Credit source: PTI

ನವದೆಹಲಿ, ಜುಲೈ 13: ಅಮೆರಿಕ (US) ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ದೃಢ ನಿಲುವು ತಳೆದಿದೆ. ವ್ಯಾಪಾರ ಮಾತುಕತೆಗಳಲ್ಲಿ ಭಾರತವು ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತಹ ಯಾವುದೇ “ಕೆಟ್ಟ ಒಪ್ಪಂದ” (Bad Deal) ಮಾಡಿಕೊಳ್ಳಲು ಸಿದ್ಧವಿಲ್ಲ. ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇರಲು (No Deal) ಭಾರತ ನಿರ್ಧರಿಸಿದೆ ಎಂದು ಸರ್ಕಾರಿ ಅಧಿಕಾರಿಗಳ ಅಭಿಪ್ರಾಯ ಕೇಳಿ ನ್ಯೂಸ್18 ಮತ್ತು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿವೆ.

ಭಾರತದ ಕೃಷಿ ಕ್ಷೇತ್ರ, ಸಣ್ಣ ಕೈಗಾರಿಕೆಗಳು ಮತ್ತು ದೇಶೀಯ ಮಾರುಕಟ್ಟೆಯನ್ನು ರಕ್ಷಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಅಮೆರಿಕದ ದೊಡ್ಡ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯನ್ನು ಮುಕ್ತವಾಗಿ ಬಿಟ್ಟುಕೊಡುವ ಮುನ್ನ ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಭಾರತ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿಗೆ ಎರಡು ಬುಲೆಟ್ ರೈಲುಗಳು; ಭಾರತದಲ್ಲಿ ಉದ್ದೇಶಿತ ಹೈಸ್ಪೀಡ್ ರೈಲುಗಳ ಪಟ್ಟಿ

ಬೌದ್ಧಿಕ ಆಸ್ತಿ ಮತ್ತು ಡೇಟಾ ಸುರಕ್ಷತೆ: ತಂತ್ರಜ್ಞಾನ, ಡೇಟಾ ಸ್ಥಳೀಕರಣ (Data Localisation) ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ (IPR) ವಿಷಯಗಳಲ್ಲಿ ಅಮೆರಿಕದ ಕಠಿಣ ನಿಬಂಧನೆಗಳಿಗೆ ಭಾರತವು ಒಪ್ಪಿಗೆ ಸೂಚಿಸಿಲ್ಲ. ಭಾರತೀಯ ಗ್ರಾಹಕರ ಡೇಟಾ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೃಷಿ ಕ್ಷೇತ್ರದ ರಕ್ಷಣೆ: ಅಮೆರಿಕದ ಡೈರಿ ಉತ್ಪನ್ನಗಳು ಮತ್ತು ಕೃಷಿ ಸರಕುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ನೀಡಬೇಕೆಂಬ ಅಮೆರಿಕದ ಬೇಡಿಕೆಗೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಇದು ದೇಶದ ಕೋಟ್ಯಂತರ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂಬುದು ಭಾರತದ ಆತಂಕವಾಗಿದೆ.

ಸಮತೋಲಿತ ಒಪ್ಪಂದಕ್ಕೆ ಆಗ್ರಹ: ಒಪ್ಪಂದವು ಕೇವಲ ಒಂದು ದೇಶಕ್ಕೆ ಲಾಭದಾಯಕವಾಗಿರದೆ, ಎರಡೂ ದೇಶಗಳಿಗೆ ಸಮಾನವಾಗಿ ಪ್ರಯೋಜನ ತರುವಂತಿರಬೇಕು (Win-Win Situation) ಎಂಬುದು ಭಾರತದ ಪ್ರತಿಪಾದನೆ. ಒತ್ತಡ ಹೇರಿ ಒಪ್ಪಂದ ಮಾಡಿಕೊಳ್ಳುವ ತಂತ್ರಗಳಿಗೆ ಭಾರತ ಮಣಿಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದ್ಯತೆ ಬಯಸುತ್ತಿದೆ ಭಾರತ: ಅಮೆರಿಕ ವಿವಿಧ ದೇಶಗಳ ಮೇಲೆ ವಿವಿಧ ಟ್ಯಾರಿಫ್​ಗಳನ್ನು ಹಾಕುತ್ತಿದೆ. ಅಮೆರಿಕಕ್ಕೆ ರಫ್ತು ಮಾಡಲು ಭಾರತಕ್ಕೆ ಹಲವು ಪ್ರತಿಸ್ಪರ್ಧಿ ದೇಶಗಳಿವೆ. ಈ ದೇಶಗಳಿಗಿಂತ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಭಾರತ ಮಾಡುತ್ತಿರುವ ಒತ್ತಾಯ. ಇದಕ್ಕೆ ಅಮೆರಿಕ ಒಪ್ಪದೇ ಇರುವುದು ವ್ಯಾಪಾರ ಒಪ್ಪಂದ ಅಂತಿಮಗೊಳ್ಳದೇ ಉಳಿಯಲು ಮುಖ್ಯ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ರಕ್ಷಣಾ ನೀತಿಯಲ್ಲಿ ದೊಡ್ಡ ಬದಲಾವಣೆ; ಕ್ಷಿಪಣಿ ತಯಾರಿಕೆಗೆ ಖಾಸಗಿಯವರಿಗೂ ಸಿಗಲಿದೆ ಅವಕಾಶ

ಭಾರತದ ಸರಕುಗಳ ಮೇಲೆ ಸದ್ಯ ಅಮೆರಿಕ ಶೇ. 10ರಷ್ಟು ಟ್ಯಾರಿಫ್ ಹಾಕುತ್ತಿದೆ. ಸದ್ಯದಲ್ಲೇ ಬಲವಂತದ ಕಾರ್ಮಿಕ ವ್ಯವಸ್ಥೆ ಇರುವ ದೇಶಗಳಿಗೆ ಹೆಚ್ಚುವರಿ ಶೇ. 12.5ರಷ್ಟು ಟ್ಯಾರಿಫ್ ಹಾಕಲು ಅಮೆರಿಕ ಯೋಜಿಸಿದೆ. ಈ ದೇಶಗಳಲ್ಲಿ ಭಾರತವೂ ಇದೆ. ಏನಾದರೂ ನೆವಗಳನ್ನು ಹುಡುಕಿ ಈ ಮೊದಲು ಇದ್ದ ಅಧಿಕ ಟ್ಯಾರಿಫ್ ಮಟ್ಟಕ್ಕೆ ತರಲು ಅಮೆರಿಕ ಪ್ರಯತ್ನಿಸುತ್ತಿರುವಂತಿದೆ. ಹಾಗೆಯೇ, ಹೆಚ್ಚುವರಿ ಸುಂಕ ಜಾರಿಯಾಗುವ ಮುನ್ನ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಡ ತಂತ್ರವನ್ನೂ ಭಾರತದ ಮೇಲೆ ಅದು ಹಾಕುತ್ತಿದೆ. ಆದರೆ, ಭಾರತ ಯಾವುದೇ ತರಾತುರಿ ತೋರದೆ ಉತ್ತಮ ಒಪ್ಪಂದಕ್ಕಾಗಿ ಪ್ರಯತ್ನಿಸುತ್ತಿದೆ ಎಂದು ಅದರಲ್ಲಿ ಭಾಗಿಯಾದವರು ಹೇಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕ ರಾಯರೆಡ್ಡಿ ಆಪ್ತನ ಲ್ಯಾಂಡ್ ಡೀಲಿಂಗ್ ವಿಡಿಯೋ ವೈರಲ್: ತಕ್ಷಣವೇ ಅಲರ್ಟ್ ಆದ ಶಾಸಕ – Kannada News | Koppal Land Acquisition Row: MLA Rayareddy’s Aide Navali Hiremath Caught in Yelaburga Deals

ಕೊಪ್ಪಳ, ಜು.13: ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ವಿಂಡ್ ಪವರ್, ಸೋಲಾರ್ ಮತ್ತು ಕೆಪಿಟಿಸಿಎಲ್ ವಿದ್ಯುತ್ ಸಬ್‌ಸ್ಟೇಷನ್‌ಗಳ ಜಮೀನು ಸ್ವಾಧೀನ ಪ್ರಕ್ರಿಯೆಯದ್ದೇ ದೊಡ್ಡ ಸುದ್ದಿಯಾಗುತ್ತಿದೆ. ಇದರ ನಡುವೆಯೇ, ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಆಪ್ತ ಎನ್ನಲಾದ ಮುಖಂಡ ಎಸ್.ಆರ್. ನವಲಿ ಹಿರೇಮಠ ರೈತರೊಂದಿಗೆ ಬಹಿರಂಗವಾಗಿ ಲ್ಯಾಂಡ್ ಡೀಲ್ ಮಾಡುತ್ತಿರುವ ಮತ್ತೊಂದಿಷ್ಟು ಸ್ಫೋಟಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸರಣಿಯಾಗಿ ವೈರಲ್ ಆಗುತ್ತಿದ್ದು, ಕ್ಷೇತ್ರದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಒಂದು ಕಡೆ ಶಾಸಕ ಬಸವರಾಜ್ ರಾಯರೆಡ್ಡಿ ಅವರು “ಯಾರೂ ಕಂಪನಿಗಳಿಗೆ ಜಮೀನು ಕೊಡಬೇಡಿ” ಎಂದು ರೈತರಿಗೆ ಬಹಿರಂಗವಾಗಿ ಕೈಮುಗಿದು ಪತ್ರ ಬರೆಯುತ್ತಿದ್ದರೆ, ಇನ್ನೊಂದೆಡೆ ಅವರದ್ದೇ ನೆರಳಿನಂತಿರುವ ಆಪ್ತ ನವಲಿ ಹಿರೇಮಠ ರೈತರ ಸಭೆ ನಡೆಸಿ ಜಮೀನು ಮಾರಾಟದ ಡೀಲ್ ಕುದುರಿಸುತ್ತಿರುವುದು ತೀವ್ರ ಕುತೂಹಲ ಮತ್ತು ಅನುಮಾನಗಳನ್ನು ಮೂಡಿಸಿದೆ.

ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಎಸ್.ಆರ್. ನವಲಿ ಹಿರೇಮಠ ಅವರು ಸುತ್ತಲೂ ಯಲಬುರ್ಗಾ ಭಾಗದ ರೈತರನ್ನು ಕೂರಿಸಿಕೊಂಡು ಸಭೆ ನಡೆಸುತ್ತಾ, ಲಕ್ಷ ಲಕ್ಷ ಹಣದ ಮಾತುಕತೆ ಆಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ನಿರ್ಮಾಣವಾಗಲಿರುವ ಕೆಪಿಟಿಸಿಎಲ್ ವಿದ್ಯುತ್ ಸಬ್‌ಸ್ಟೇಷನ್ ವಿಚಾರವಾಗಿ ರೈತರೊಂದಿಗೆ ಮಾತನಾಡುತ್ತಾ, “ನೀವು ಪ್ರತಿ ಎಕರೆಗೆ 40 ಲಕ್ಷ ರೂಪಾಯಿ ಕೇಳುತ್ತಿದ್ದೀರಿ. ಆದರೆ ಅದು 30 ರಿಂದ 32 ಲಕ್ಷ ರೂಪಾಯಿಗೆ ಬಗೆಹರಿಯಬಹುದು,” ಎಂದು ರೇಟ್ ಫಿಕ್ಸ್ ಮಾಡುತ್ತಿರುವ ಆಡಿಯೋ ಮತ್ತು ವಿಡಿಯೋ ವೈರಲ್ ಆಗಿದೆ.

ರೈತರನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಿರುವ ಹಿರೇಮಠ, “ನೀವು ಮೊದಲು ಜಮೀನು ಕೊಡಲು ಒಪ್ಪಿಗೆ ನೀಡಿ ಸಹಿ ಹಾಕಿದರೆ, ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಅಲ್ಲಿ ಕೆಪಿಟಿಸಿಎಲ್ ಎಂಡಿ (MD) ಇರುತ್ತಾರೆ, ಜೊತೆಗೆ ಒಬ್ಬರು ಐಎಎಸ್ (IAS) ಅಧಿಕಾರಿ ಕೂಡ ಇರುತ್ತಾರೆ,” ಎಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಹೆಸರು ಬಳಸಿ ಪ್ರಭಾವದ ಮಾತುಗಳನ್ನು ಆಡಿದ್ದಾರೆ.

ಯಲಬುರ್ಗಾ ಕ್ಷೇತ್ರದಲ್ಲಿ ರೈತರ ಜಮೀನುಗಳನ್ನು ಬೃಹತ್ ಯೋಜನೆಗಳ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವುದಕ್ಕೆ ಶಾಸಕ ಬಸವರಾಜ್ ರಾಯರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕಂಪನಿಗಳಿಗೆ ರೈತರು ಯಾವುದೇ ಕಾರಣಕ್ಕೂ ಜಮೀನು ನೀಡದಂತೆ ಪತ್ರ ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಶಾಸಕರ ಆಪ್ತ ನವಲಿ ಹಿರೇಮಠ ದಿನಕ್ಕೊಂದರಂತೆ ವಿಡಿಯೋ ವೈರಲ್ ಮಾಡಿಕೊಳ್ಳುವ ಮೂಲಕ ರೈತರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರ ಬೆನ್ನಹಿಂದೆಯೇ ಅವರ ಆಪ್ತರು ಇಂತಹ ಲ್ಯಾಂಡ್ ಡೀಲಿಂಗ್ ದಂಧೆಯಲ್ಲಿ ತೊಡಗಿದ್ದಾರಾ? ಅಥವಾ ರೈತರನ್ನು ಕಂಪನಿಗಳ ಪರವಾಗಿ ಒಪ್ಪಿಸಲು ಇವರಿಗೆ ಯಾರು ಸುಪಾರಿ ಕೊಟ್ಟಿದ್ದಾರೆ? ಎಂಬ ಆಕ್ರೋಶದ ಪ್ರಶ್ನೆಗಳು ಸ್ಥಳೀಯವಾಗಿ ಕೇಳಿಬರುತ್ತಿವೆ.

ಇಲ್ಲಿದೆ ನೋಡಿ ವಿಡಿಯೋ:

ಆಪ್ತನ ಲ್ಯಾಂಡ್ ಡೀಲ್ ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕ ಅಲರ್ಟ್

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಜಮೀನು ವಿಚಾರವಾಗಿ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಆಪ್ತ ಎಸ್.ಆರ್. ನವಲಿ ಹಿರೇಮಠ ರೈತರೊಂದಿಗೆ ನಡೆಸುತ್ತಿದ್ದ ಲ್ಯಾಂಡ್ ಡೀಲಿಂಗ್‌ನ ಸರಣಿ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಶಾಸಕರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಕ್ಷೇತ್ರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ 770 ಮೆಗಾವ್ಯಾಟ್ ವಿದ್ಯುತ್ ಕೇಂದ್ರ ಸ್ಥಾಪನೆಗಾಗಿ ರೈತರ ಜಮೀನು ಖರೀದಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕೋರಿ ಕೊಪ್ಪಳ ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳಿಗೆ ಶಾಸಕರು ತುರ್ತು ಪತ್ರ ಬರೆದಿದ್ದಾರೆ.

ಒಂದು ಕಡೆ ಆಪ್ತ ನವಲಿ ಹಿರೇಮಠ ರೈತರ ಸಭೆ ನಡೆಸಿ, “ನೀವು 40 ಲಕ್ಷ ಕೇಳಿದ್ದೀರಿ, ಆದರೆ ಪ್ರತಿ ಎಕರೆಗೆ 30 ರಿಂದ 32 ಲಕ್ಷಕ್ಕೆ ಡೀಲ್ ಮುಗಿಯಬಹುದು. ಅಲ್ಲಿ ಕೆಪಿಟಿಸಿಎಲ್ ಎಂಡಿ ಹಾಗೂ ಐಎಎಸ್ ಅಧಿಕಾರಿಗಳು ಇರುತ್ತಾರೆ,” ಎಂದು ಮಾತನಾಡಿದ್ದ ವಿಡಿಯೋಗಳು ದಿನಕ್ಕೊಂದರಂತೆ ಲೀಕ್ ಆಗಿ ತೀವ್ರ ಮುಜುಗರ ಉಂಟುಮಾಡಿದ್ದವು. ಈ ಬೆನ್ನಲ್ಲೇ ರಾಯರೆಡ್ಡಿ ಅವರು ನೇರವಾಗಿ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ತಮಗೂ ಈ ಡೀಲಿಂಗ್‌ಗೂ ಸಂಬಂಧವಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಮೂವರು ಉನ್ನತಾಧಿಕಾರಿಗಳಿಗೆ ರಾಯರೆಡ್ಡಿ ಪತ್ರ

ಶಾಸಕ ಬಸವರಾಜ್ ರಾಯರೆಡ್ಡಿ ಅವರು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಕೆಪಿಸಿಎಲ್ (KPCL) ವ್ಯವಸ್ಥಾಪಕ ನಿರ್ದೇಶಕರು (MD) ಹಾಗೂ ಕೆಪಿಟಿಸಿಎಲ್ (KPTCL) ಎಂಡಿ ಅವರಿಗೆ ಅಧಿಕೃತ ಪತ್ರ ಬರೆದು ತಮ್ಮ ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಮಾಡಿಕೊಳ್ಳದಂತೆ ಆಗ್ರಹಿಸಿದ್ದಾರೆ. “ಕೆಪಿಸಿಎಲ್ ಸಂಸ್ಥೆಯಿಂದ ಯಲಬುರ್ಗಾ ಕ್ಷೇತ್ರದಲ್ಲಿ 770 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಜಮೀನು ಖರೀದಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿದ್ಯುತ್ ಕೇಂದ್ರದ ಜರೂರತ್ತು ನಮ್ಮ ತಾಲೂಕಿಗೆ ಇಲ್ಲ. ಹೀಗಾಗಿ ಇದನ್ನು ಯಲಬುರ್ಗಾ ಹಾಗೂ ಕುಕನೂರು ತಾಲೂಕು ಬಿಟ್ಟು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಪತ್ರದಲ್ಲಿ ಕೋರಿದ್ದಾರೆ.

“ಕೆಪಿಸಿಎಲ್ ಸಂಸ್ಥೆಯಿಂದ ಯಲಬುರ್ಗಾ ಕ್ಷೇತ್ರದಲ್ಲಿ 770 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಜಮೀನು ಖರೀದಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿದ್ಯುತ್ ಕೇಂದ್ರದ ಜರೂರತ್ತು ನಮ್ಮ ತಾಲೂಕಿಗೆ ಇಲ್ಲ. ಹೀಗಾಗಿ ಇದನ್ನು ಯಲಬುರ್ಗಾ ಹಾಗೂ ಕುಕನೂರು ತಾಲೂಕು ಬಿಟ್ಟು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಪತ್ರದಲ್ಲಿ ಕೋರಿದ್ದಾರೆ. ತಮ್ಮ ತಾಲೂಕಿನ ರೈತರ ಹಿತರಕ್ಷಣೆಯ ಪರವಾಗಿ ಮಾತನಾಡಿದ ಶಾಸಕರು, ಭೂಸ್ವಾಧೀನದ ವಿರುದ್ಧ ತಮ್ಮ ಪತ್ರದಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ

“ನಮ್ಮ ತಾಲೂಕು ಆರ್ಥಿಕವಾಗಿ ಮೊದಲೇ ಹಿಂದುಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 3 ರಿಂದ 4 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ತೊಂದರೆಯಿಲ್ಲ. ಆದರೆ, ಬರೋಬ್ಬರಿ 180 ಎಕರೆ ಜಮೀನನ್ನು ಯೋಜನೆಯ ಹೆಸರಿನಲ್ಲಿ ಕಿತ್ತುಕೊಂಡರೆ ಇಲ್ಲಿನ ರೈತರು ಸಂಪೂರ್ಣವಾಗಿ ಭೂಮಿ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ. ಒಂದು ವೇಳೆ ಯೋಜನೆ ಮಾಡಲೇಬೇಕಿದ್ದರೆ ಸರ್ಕಾರದ ಜಮೀನಿನಲ್ಲಿ ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ,” ಎಂದು ರಾಯರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​! – Kannada News |  Dudhsagar Falls: A Monsoon Spectacle Amidst Western Ghats Restrictions

ಬೆಳಗಾವಿ, ಜುಲೈ 13: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕಾರವಾರದ ಜೋಯಿಡಾದಲ್ಲಿ ಹುಟ್ಟುವ ದೂದ್ ಸಾಗರ ಜಲಪಾತವು ಜೀವಕಳೆ ಪಡೆದುಕೊಂಡಿದೆ. ಹಾಲಿನ ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಗೋವಾಕ್ಕೆ ಹರಿಯುವ ದೂದ್ ಸಾಗರ, ಮಹದಾಯಿ ನದಿಯನ್ನು ಸೇರುತ್ತದೆ. 1017 ಅಡಿ ಎತ್ತರದಿಂದ ಕಲ್ಲು-ಬಂಡೆಗಳನ್ನು ಕೊರೆದುಕೊಂಡು ರಭಸವಾಗಿ ಹರಿಯುವ ಈ ಜಲಪಾತವು ದೇಶದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ, ದೂದ್ ಸಾಗರದ ರುದ್ರರಮಣೀಯ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ – Kannada News | Karnataka Reservoir Water Level on 13 July 2026: KRS Yet to Reach 100 Feet, Hemavathi, Kabini, Almatti Storage Remains Below Last Year

ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ಮುಂಗಾರು ಮಳೆಯ (Monsoon Rain) ಕೊರತೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜುಲೈ ತಿಂಗಳ ಆರಂಭದಲ್ಲಿ ದಕ್ಷಿಣ ಕನ್ನಡ, ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಕಡೆ ಭಾರಿ ಮಳೆಯಾಗಿ ಜಲಾಶಯಗಳ ಒಳಹರಿವು ತುಸು ಹೆಚ್ಚಾಗಿದ್ದರೂ ಒಟ್ಟು ಲೆಕ್ಕದಲ್ಲಿ ನೀರಿನ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿಲ್ಲ. ಕಳೆದ ವರ್ಷ ಜೂನ್ ಆರಂಭದಲ್ಲೇ ನೂರು ಅಡಿ ನೀರು ತುಂಬಿದ್ದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಕೆಆರ್​ಎಸ್​​ ಜಲಾಶಯದಲ್ಲಿ (KRS Dam) ಈ ವರ್ಷ ಇನ್ನೂ ನೀರಿನ ಮಟ್ಟ 92.15 ಅಡಿಗೆ ತಲುಪಿದೆಯಷ್ಟೆ. ಇದು ರಾಜ್ಯದ ಜನತೆಯನ್ನು ಆತಂಕ್ಕೆ ಈಡುಮಾಡಿದೆ.

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿ
  • ಪ್ರಸ್ತುತ ನೀರಿನ ಮಟ್ಟ : 92.15 ಅಡಿ
  • ಒಳಹರಿವು : 7,515 ಕ್ಯೂಸೆಕ್
  • ಹೊರಹರಿವು: 619 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ : 17.253 ಟಿಎಂಸಿ
  • 24 ಗಂಟೆಯಲ್ಲಿ 0.588 ಹೆಚ್ಚಳವಾಗಿದೆ.

ಹಾಸನ ಗೊರೂರು ಸಮೀಪದ ಹೇಮಾವತಿ ಜಲಾಶಯ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2922 ಅಡಿ (37 TMC)
  • ಇಂದಿನ ಪ್ರಮಾಣ: 2903.52(22.048 TMC)
  • ಒಳ ಹರಿವು: 2960 ಕ್ಯೂಸೆಕ್
  • ಹೊರ ಹರಿವು: 300 ಕ್ಯೂಸೆಕ್

ಈ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 2920.82 ಅಡಿ (35.963.TMC) ನೀರಿತ್ತು. 8780 ಕ್ಯೂಸೆಕ್ ನೀರಿನ ಒಳ ಹರಿವು ಮತ್ತು 5400 ಕ್ಯುಸೆಕ್ ಹೊರ ಹರಿವು ಇತ್ತು.

ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಡ್ಯಾಂ ನೀರಿನ ಮಟ್ಟ

  • ಡ್ಯಾಂ ಗರಿಷ್ಟ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.27 ಮೀಟರ್
  • ಒಳ ಹರಿವು: 56,756 ಕ್ಯೂಸೆಕ್
  • ಹೊರ ಹರಿವು: 423 ಕ್ಯೂಸೆಕ್

ಮೈಸೂರು ಕಬಿನಿ ಜಲಾಶಯ ನೀರಿನ ಮಟ್ಟ

  • ಇಂದಿನ ನೀರಿನ ಮಟ್ಟ: 70.06 ಅಡಿ
  • ಕಳೆದ ವರ್ಷ ಇದೇ ದಿನ ಇದ್ದ ನೀರಿನ ಮಟ್ಟ: 81.98 ಅಡಿ
  • 11.71 ಟಿಎಂಸಿ ನೀರು ಸಂಗ್ರಹ
  • ಕಳೆದ ವರ್ಷ ಇದೇ ದಿನ 18.18 ಟಿಎಂಸಿ ಸಂಗ್ರಹ
  • 3,166 ಕ್ಯೂಸೆಕ್ ನೀರು ಒಳಹರಿವು
  • 500 ಕ್ಯೂಸೆಕ್ ನೀರು ಹೊರಹರಿವು

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಮತ್ತೊಂದೆಡೆ, ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲಗೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೀರಿನ ಅಭಾವ ಸೃಷ್ಟಿಯಾಗಿ ತೀವ್ರತರದ ಸಮಸ್ಯೆ ಎದುರಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರುಪತಿ ತಿಮ್ಮಪ್ಪನಿಗೆ ಪ್ರತಿದಿನ ಮೊದಲ ಆರತಿ ಬೆಳಗುವ ಹಕ್ಕು ಕರ್ನಾಟಕಕ್ಕೆ ಸಿಕ್ಕಿದ್ದು ಹೇಗೆ? ಇಲ್ಲಿದೆ ರೋಚಕ ಇತಿಹಾಸ! – Kannada News | Why is Tirupati Temple First Aarti Performed on Behalf of Karnataka? Know the History

ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ತಿರುಮಲದಲ್ಲಿರುವ ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಅತ್ಯಂತ ಪವಿತ್ರವಾದ ‘ಮೊದಲ ಆರತಿ’ ಸಾಂಪ್ರದಾಯಿಕವಾಗಿ ನಮ್ಮ ಕರ್ನಾಟಕ ರಾಜ್ಯದ ಹೆಸರಿನಲ್ಲೇ ಸಲ್ಲಿಕೆಯಾಗುತ್ತದೆ. ತಿರುಪತಿ ಕ್ಷೇತ್ರಕ್ಕೂ ಕರ್ನಾಟಕಕ್ಕೂ 400 ವರ್ಷಗಳ ಅವಿನಾಭಾವ ಧಾರ್ಮಿಕ ಮತ್ತು ಐತಿಹಾಸಿಕ ನಂಟಿದೆ. ಈ ನಂಟಿನ ಪ್ರತೀಕವಾಗಿ ಸ್ವಾಮಿಯ ಮೊದಲ ಆರತಿ ಕರ್ನಾಟಕದ ಪರವಾಗಿಯೇ ಸಲ್ಲಿಸಲಾಗುತ್ತದೆ.

ಮೈಸೂರು ಮಹಾರಾಜರ ಕೊಡುಗೆ ಮತ್ತು ಐತಿಹಾಸಿಕ ಒಪ್ಪಂದ

ಈ ವಿಶಿಷ್ಟ ಧಾರ್ಮಿಕ ಹಕ್ಕಿನ ಹಿಂದೆ ಮೈಸೂರು ಸಂಸ್ಥಾನದ ಒಡೆಯರ್ ರಾಜವಂಶದ ಭಕ್ತಿ ಮತ್ತು ಅಪೂರ್ವ ಕೊಡುಗೆಯ ಇತಿಹಾಸವಿದೆ. ಮೈಸೂರು ಮಹಾರಾಜರ ಕಾಲದಲ್ಲಿ ತಿರುಮಲ ಶ್ರೀವಾರಿಯ ಗರ್ಭಗುಡಿಯೊಳಗೆ ನಿರಂತರವಾಗಿ ಬೆಳಗುವ ಪವಿತ್ರ ದೀಪಗಳಾದ ಬ್ರಹ್ಮದೀಪ, ಮಹಾರಾಜ ದೀಪ ಹಾಗೂ ಅಖಂಡ ದೀಪಗಳಿಗಾಗಿ ಪ್ರತಿದಿನ 5 ಕೆಜಿ ಪರಿಶುದ್ಧವಾದ ತುಪ್ಪವನ್ನು ಕಾಣಿಕೆಯಾಗಿ ನೀಡುವ ಅದ್ಭುತ ಸಂಪ್ರದಾಯವನ್ನು ಆರಂಭಿಸಲಾಗಿತ್ತು.

ಮೈಸೂರು ಸಂಸ್ಥಾನವು ನೀಡಿದ ಈ ಸುದೀರ್ಘ ಧಾರ್ಮಿಕ ಮತ್ತು ಆರ್ಥಿಕ ಕೊಡುಗೆಗಳ ಗೌರವಾರ್ಥವಾಗಿ, ಪ್ರತಿದಿನ ಬೆಳಿಗ್ಗೆ ಸುಪ್ರಭಾತ ಸೇವೆಯ ನಂತರ ನೆರವೇರುವ ದಿನದ ಮೊದಲ ಕರ್ಪೂರದ ಆರತಿಯನ್ನು ಸಾಂಪ್ರದಾಯಿಕವಾಗಿ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಸಲ್ಲಿಸುವ ಐತಿಹಾಸಿಕ ಹಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡಿದೆ.

ವಿಜಯನಗರ ಸಾಮ್ರಾಜ್ಯ ಮತ್ತು ಪ್ರೋಟೋಕಾಲ್ ಇತಿಹಾಸ

ಮೈಸೂರು ಒಡೆಯರಿಗಿಂತ ಮುಂಚೆ, 14 ರಿಂದ 17 ನೇ ಶತಮಾನದವರೆಗೆ ಆಳಿದ ವಿಜಯನಗರದ ಅರಸರಾದ ಶ್ರೀಕೃಷ್ಣದೇವರಾಯ, ಅಚ್ಯುತರಾಯ ಮುಂತಾದವರು ತಿರುಪತಿ ತಿಮ್ಮಪ್ಪನಿಗೆ ಅಸಂಖ್ಯಾತ ವಜ್ರ ವೈಢೂರ್ಯ ಹಾಗೂ ಬಂಗಾರದ ಕಿರೀಟಗಳನ್ನು ಕಾಣಿಕೆಯಾಗಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಸಂಸ್ಥಾನವು ಈ ಧಾರ್ಮಿಕ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಬಂದಿತ್ತು.

ಇದನ್ನೂ ಓದಿ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ!

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದ ಮೇಲೂ ಈ ಐತಿಹಾಸಿಕ ಹಕ್ಕನ್ನು ಹಾಗೇ ಉಳಿಸಿಕೊಳ್ಳಲಾಯಿತು. ತಿರುಮಲ ಕ್ಷೇತ್ರವು ಆಂಧ್ರಪ್ರದೇಶದ ಭೌಗೋಳಿಕ ವ್ಯಾಪ್ತಿಗೆ ಸೇರಿದರೂ, ಪ್ರತಿದಿನ ಬೆಳಿಗ್ಗೆ ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿಯಲ್ಲಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿಯೊಬ್ಬರು ಅಲ್ಲಿ ಹಾಜರಿದ್ದು ಈ ಪ್ರಸಾದ ಮತ್ತು ಗೌರವವನ್ನು ಸ್ವೀಕರಿಸುತ್ತಾರೆ. ಇದೀಗ ಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ – Kannada News | US Iran Conflict Intensifies: America Bombs Omidiya Airport, Iran Retaliates Against US, Israel, and Gulf Nations

ಟೆಹ್ರಾನ್, ಜುಲೈ 13: ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅಮೆರಿಕವು ಇರಾನ್‌ನ ಮೇಲೆ ಐದನೇ ಸುತ್ತಿನ ದಾಳಿ ನಡೆಸಿದ್ದು, ಇರಾನ್‌ನ ಖುಜಿಸ್ತಾನ್ ಪ್ರಾಂತ್ಯದಲ್ಲಿರುವ ಒಮೈದಿಯಾ ಏರ್‌ಪೋರ್ಟ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ. ಇರಾನ್‌ನಿಂದ ಹಡಗುಗಳ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕ ಈ ಕ್ರಮ ಕೈಗೊಂಡಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಸುಮ್ಮನಿಲ್ಲ. ಅದು ಅಮೆರಿಕದ ಸೇನಾ ನೆಲೆಗಳು ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ ಮಳೆ ಸುರಿಸಿದೆ. ಕತಾರ್, ಕುವೈತ್, ಓಮನ್, ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೂ ಡ್ರೋನ್ ದಾಳಿ ನಡೆಸಿದೆ. ದುಬೈನ ಪಾಮ್ ಹೋಟೆಲ್‌ನಲ್ಲಿ ಸ್ಫೋಟ ಸಂಭವಿಸಿ, ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಅಲ್ಲಿಯೂ ದಾಳಿಯ ಆತಂಕವಿದೆ. ಖಮೇನಿ ಅಂತ್ಯಕ್ರಿಯೆ ಬಳಿಕ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಅಮೆರಿಕವು ಇರಾನ್‌ನ 140ಕ್ಕೂ ಹೆಚ್ಚು ಸೇನಾ ಮತ್ತು ವಾಣಿಜ್ಯ ಗುರಿಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡರೆ, ಇರಾನ್ ತಾನು ಅಮೆರಿಕದ ನೆಲೆಗಳ ಮೇಲೆ ನಡೆಸಿದ ದಾಳಿಗಳ ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಈ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ಗಳಿಂದ 80 ಡಾಲರ್‌ಗೆ ಏರಿದ್ದು, ವಿಶ್ವ ಆತಂಕದಲ್ಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

1.8 ಕೋಟಿ ರೂ. ಬಾಕಿ ಉಳಿಸಿಕೊಂಡ ಆರೋಪ; ನಟ ಆರ್ಯ ವಿರುದ್ಧ ಕೇಸ್ – Kannada News | Actor Arya Faces Fraud Case: Unpaid Film Equipment Rentals, Hyderabad Police Probe

ತಮಿಳು ಚಿತ್ರರಂಗದ ಪ್ರಸಿದ್ಧ ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶೂಟಿಂಗ್ ಉಪಕರಣಗಳನ್ನು ಬಾಡಿಗೆಗೆ ಪಡೆದು ಹಣ ಪಾವತಿಸದ ಆರೋಪ ಇವರ ಮೇಲಿದೆ. ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 1.8 ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣ ನೀಡಬೇಕಾಗಿದೆ. ಈ ಸಂಬಂಧ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ.

ಭರವಸೆ ನೀಡಿದ್ದ ಆರ್ಯ

‘ತಾಹರ್ ಸಿನಿ ಟೆಕ್ನಿಕ್’ ಸಂಸ್ಥೆಯು ಜುಲೈ 10 ರಂದು ಪೊಲೀಸರಿಗೆ ಈ ದೂರು ನೀಡಿದೆ. ಆರ್ಯ ನಟನೆಯ ‘ಅನಂತನ್ ಕಾಡು’ ಸಿನಿಮಾದ ಶೂಟಿಂಗ್‌ಗಾಗಿ ಉಪಕರಣಗಳನ್ನು ಪಡೆಯಲಾಗಿತ್ತು. ಈ ವೇಳೆ ಚಿತ್ರದ ನಾಯಕ ನಟ ಆರ್ಯ ಪ್ರೊಡಕ್ಷನ್ ಹೌಸ್ ಎಲ್ಲಾ ಹಣವನ್ನು ಚುಕ್ತಾ ಮಾಡುತ್ತದೆ ಎಂದು ಭರವಸೆ ಕೊಟ್ಟಿದ್ದರು.

ಒಪ್ಪಂದ ಮುರಿದ ಚಿತ್ರತಂಡ

ಈ ಭರವಸೆಯ ಮೇರೆಗೆ 2025ರ ಫೆಬ್ರವರಿಯಲ್ಲಿ ಎರಡೂ ಸಂಸ್ಥೆಗಳ ನಡುವೆ ಒಪ್ಪಂದವಾಗಿತ್ತು. ಹೈದರಾಬಾದ್‌ನಿಂದ ಕೇರಳಕ್ಕೆ ಡಿಜಿಟಲ್ ಕ್ಯಾಮೆರಾಗಳು ಮತ್ತು ಲೈಟಿಂಗ್ ಉಪಕರಣಗಳನ್ನು ಸರಬರಾಜು ಮಾಡಲಾಗಿತ್ತು. ಒಟ್ಟು ಒಪ್ಪಂದದ ಮೊತ್ತ 2.12 ಕೋಟಿ ರೂಪಾಯಿ ಆಗಿತ್ತು. ಆದರೆ ಉಪಕರಣಗಳನ್ನು ಬಳಸಿಕೊಂಡ ನಂತರ ಚಿತ್ರತಂಡ ಹಣ ನೀಡದೆ ವಂಚಿಸಿದೆ. 32 ಲಕ್ಷ ರೂಪಾಯಿ ನೀಡಿ ಇನ್ನುಳಿದ 1.8 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ

ಮ್ಯಾನೇಜರ್‌ಗೆ ಬೆದರಿಕೆ ಹಾಕಿದ ನಟ

ಸಿನಿಮಾ ಬಿಡುಗಡೆಗೆ ಮುನ್ನ ಎಲ್ಲಾ ಬಾಕಿ ಹಣವನ್ನು ತೀರಿಸುವುದಾಗಿ ಚಿತ್ರತಂಡ ಹೇಳಿತ್ತು. ಹಣ ಪಾವತಿಸಿದ ನಂತರವೇ ಸಂಸ್ಥೆಯಿಂದ ‘ನೋ ಡ್ಯೂಸ್ ಸರ್ಟಿಫಿಕೇಟ್’ ಪಡೆಯುವುದಾಗಿ ಒಪ್ಪಿಕೊಂಡಿತ್ತು. ಆದರೆ ಹಲವು ಬಾರಿ ನೆನಪಿಸಿದರೂ ಚಿತ್ರತಂಡ ಹಣ ನೀಡಿಲ್ಲ. ಬಾಕಿ ಹಣ ಕೇಳಲು ಹೋದ ಸಂಸ್ಥೆಯ ಮ್ಯಾನೇಜರ್‌ಗೆ ನಟ ಆರ್ಯ ಮತ್ತು ನಿರ್ಮಾಪಕರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version