ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ! – Kannada News | Bravery at Murdeshwar Station: Konkan Railway Pointsman Saves Passenger From Moving Train

ಉತ್ತರ ಕನ್ನಡ, ಜುಲೈ 13: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ಉದ್ಯೋಗಿಯೊಬ್ಬರ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಭೀಕರ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕೇರಳದಿಂದ ರಾಜಸ್ಥಾನಕ್ಕೆ ತೆರಳುತ್ತಿದ್ದ ರೈಲೊಂದು ಮುರುಡೇಶ್ವರ ನಿಲ್ದಾಣದಿಂದ ಹೊರಡುವಾಗ, 22 ವರ್ಷದ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ್ದಾನೆ. ಈ ವೇಳೆ ಆತ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವಿನ ಗ್ಯಾಪ್‌ನಲ್ಲಿ ಬೀಳಲು ಹೋಗಿದ್ದಾನೆ. ಇದನ್ನು ತಕ್ಷಣ ಗಮನಿಸಿದ ಅಲ್ಲೇ ಕರ್ತವ್ಯದಲ್ಲಿದ್ದ ಕೊಂಕಣ ರೈಲ್ವೆಯ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್, ಮಿಂಚಿನ ವೇಗದಲ್ಲಿ ಧಾವಿಸಿ ಯುವಕನನ್ನು ಹಿಂದಕ್ಕೆ ಎಳೆದು ಪ್ರಾಣ ಉಳಿಸಿದ್ದಾರೆ.

ಈ ರೋಮಾಂಚಕ ರಕ್ಷಣೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಗಣಪತಿ ನಾಯ್ಕ್ ಅವರ ಈ ಶ್ಲಾಘನೀಯ ಸಾಹಸವನ್ನು ಗುರುತಿಸಿ ಕೊಂಕಣ ರೈಲ್ವೆ ಮಂಡಳಿಯು 10,000 ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದೆ.

Source: Konkan railway X account

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ಆತಂಕ: ಇರಾನ್​ನ ಹಿಟ್​ಲಿಸ್ಟ್​ನಲ್ಲಿ ಇದ್ದಾರಂತೆ ಟ್ರಂಪ್, ಮೆಲೋನಿ, ನೆತನ್ಯಾಹು ಅಲಿ ಪುತ್ರನ ಶಪಥ – Kannada News | Iran’s Global Hit List: Trump, Macron, Meloni Targeted as New Leader Vows Revenge

ಟೆಹ್ರಾನ್, ಜುಲೈ 13:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆಯೇ ಜಾಗತಿಕ ರಾಜಕಾರಣದಲ್ಲಿ ನೆತ್ತರು ಹೆಪ್ಪುಗಟ್ಟಿಸುವಂತಹ ರಣತಂತ್ರವೊಂದು ಬಯಲಾಗಿದೆ. ಇರಾನ್‌(Iran)ನ ಅತ್ಯುನ್ನತ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ರಾಷ್ಟ್ರಗಳ ಅಗ್ರ ನಾಯಕರನ್ನು ಒಳಗೊಂಡ ಹಿಟ್​ಲಿಸ್ಟ್​ ಅನ್ನು ಇರಾನ್‌ನ ಪ್ರಭಾವಿ ಸರ್ಕಾರಿ ಮಾಧ್ಯಮವೊಂದು ಪ್ರಕಟಿಸಿದೆ.

2026ರ ಫೆಬ್ರವರಿ 28 ರಂದು ನಡೆದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಬೆನ್ನಲ್ಲೇ ಇರಾನ್‌ನ ನೂತನ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವರ ಪುತ್ರ ಮೊಜ್ತಬಾ ಖಮೇನಿ, “ನಮ್ಮ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವುದು ನಮ್ಮ ರಾಷ್ಟ್ರದ ಇಚ್ಛೆಯಾಗಿದೆ. ಈ ಹಿಟ್ ಲಿಸ್ಟ್‌ನಲ್ಲಿರುವ ಅಪರಾಧಿಗಳು ತಮ್ಮ ಹಾಸಿಗೆಯ ಮೇಲೆ ಶಾಂತಿಯುತವಾಗಿ ಸಾಯುವ ಆಸೆಯನ್ನು ಸಮಾಧಿಗೆ ಕೊಂಡೊಯ್ಯಬೇಕಾಗುತ್ತದೆ” ಎಂದು ಭೀಕರ ಶಪಥ ಮಾಡಿದ್ದಾರೆ.

ಪತ್ರಿಕೆಯಲ್ಲಿ ಬಿಡುಗಡೆಯಾಯ್ತು 13 ಜಾಗತಿಕ ನಾಯಕರ ಫೋಟೋ

ಇರಾನ್ ರಾಜಧಾನಿ ಟೆಹ್ರಾನ್‌ನ ಅಧಿಕೃತ ಆಡಳಿತ ಮಂಡಳಿಯಿಂದ ಪ್ರಕಟವಾಗುವ ‘ಹಮ್ಶಹ್ರಿ’ಎಂಬ ಸಂಪ್ರದಾಯವಾದಿ ಪತ್ರಿಕೆಯು ಮೊಜ್ತಬಾ ಅವರ ಈ ಎಚ್ಚರಿಕೆಯ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಇನ್ಫೋಗ್ರಾಫಿಕ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇರಾನ್ ಗುರಿಯಾಗಿಸಲಿರುವ ವಿಶ್ವದ 13 ಪ್ರಮುಖ ನಾಯಕರ ಫೋಟೋಗಳನ್ನು ಹಾಕಲಾಗಿದೆ.

ಇರಾನ್‌ನ ಹಿಟ್ ಲಿಸ್ಟ್‌ನಲ್ಲಿರುವ ಪ್ರಮುಖರು

ಡೊನಾಲ್ಡ್ ಟ್ರಂಪ್ (ಅಮೆರಿಕ ಅಧ್ಯಕ್ಷ)

ಬೆಂಜಮಿನ್ ನೆತನ್ಯಾಹು (ಇಸ್ರೇಲ್ ಪ್ರಧಾನಿ)

ಕೀರ್ ಸ್ಟಾರ್ಮರ್ (ಬ್ರಿಟನ್ ಪ್ರಧಾನಿ)

ಎಮ್ಯಾನುಯೆಲ್ ಮ್ಯಾಕ್ರನ್ (ಫ್ರಾನ್ಸ್ ಅಧ್ಯಕ್ಷ)

ಜಾರ್ಜಿಯಾ ಮೆಲೋನಿ (ಇಟಲಿ ಪ್ರಧಾನಿ)

ಫ್ರೆಡ್ರಿಕ್ ಮೆರ್ಜ್ (ಜರ್ಮನಿ ಚಾನ್ಸೆಲರ್)

ಮಾರ್ಕೊ ರೂಬಿಯೊ (ಅಮೆರಿಕದ ವಿದೇಶಾಂಗ ಕಾರ್ಯದರ್ಶಿ)

ಪೀಟ್ ಹೆಗ್ಸೆತ್ (ಅಮೆರಿಕದ ರಕ್ಷಣಾ ಕಾರ್ಯದರ್ಶಿ)

ಮತ್ತಷ್ಟು ಓದಿ: ನಾನೇ ನಂಬರ್ 1 ಟಾರ್ಗೆಟ್, ಇರಾನ್‌ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದ ಡೊನಾಲ್ಡ್ ಟ್ರಂಪ್

ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಇರಾನ್ ಕೆಂಡಾಮಂಡಲ

ಈ ಯುದ್ಧದಲ್ಲಿ ಕೇವಲ ಅಮೆರಿಕ ಮತ್ತು ಇಸ್ರೇಲ್ ಮಾತ್ರವಲ್ಲದೆ ಇಡೀ ಯುರೋಪ್ ತನ್ನ ವಿನಾಶಕ್ಕೆ ಕಾರಣ ಎಂದು ಇರಾನ್ ನಂಬಿದೆ. ಅಮೆರಿಕದ ಯುದ್ಧವಿಮಾನಗಳು ಇರಾನ್ ಮೇಲೆ ಬಾಂಬ್ ದಾಳಿ ಮಾಡಲು ತಮ್ಮ ವಾಯುಪ್ರದೇಶವನ್ನು ಬಳಸಲು ಮುಕ್ತ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಫ್ರಾನ್ಸ್, ಇಟಲಿ ಮತ್ತು ಜರ್ಮನಿಯ ನಾಯಕರನ್ನು ಇರಾನ್ ತೀವ್ರವಾಗಿ ದ್ವೇಷಿಸುತ್ತಿದೆ.

ಖುದ್ದಾಗಿ ಮೊಜ್ತಾಬಾ ಖಮೇನಿ ಕೂಡ ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಈಗ ರಹಸ್ಯ ಸ್ಥಳದಿಂದಲೇ ಜಾಗತಿಕ ನಾಯಕರ ಹತ್ಯೆಗೆ ಸ್ಕೆಚ್ ಹಾಕುತ್ತಿರುವುದು ಪಾಶ್ಚಿಮಾತ್ಯ ದೇಶಗಳ ಭದ್ರತಾ ಸಂಸ್ಥೆಗಳಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ಜಾಗತಿಕ ಭದ್ರತೆಯ ಮೇಲಾಗುವ ಭೀಕರ ಪ್ರಭಾವ

ಇರಾನ್‌ನ ಈ ಅಧಿಕೃತ ಬೆದರಿಕೆಯು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ರಹಸ್ಯ ಕಮಾಂಡೋ ದಾಳಿಗಳ ಭೀತಿ: ಇರಾನ್ ಈ ಹಿಂದೆ ಜಾಗತಿಕವಾಗಿ ತನ್ನ ಶತ್ರುಗಳನ್ನು ಮಟ್ಟಹಾಕಲು ತನ್ನ ಪ್ರಸಿದ್ಧ ‘ಕುದ್ಸ್ ಫೋರ್ಸ್’ಮತ್ತು ಇಂಟರ್ನ್ಯಾಷನಲ್ ಸ್ಲೀಪರ್ ಸೆಲ್‌ಗಳನ್ನು ಬಳಸಿಕೊಂಡ ಇತಿಹಾಸ ಹೊಂದಿದೆ. ಈಗ ನೇರವಾಗಿ ದೇಶಗಳ ರಾಷ್ಟ್ರಪ್ರಧಾನಿಗಳನ್ನೇ ಟಾರ್ಗೆಟ್ ಮಾಡಿರುವುದರಿಂದ ಅಮೆರಿಕದ ಸೀಕ್ರೆಟ್ ಸರ್ವೀಸ್ ಸೇರಿದಂತೆ ಜಾಗತಿಕ ಕಮಾಂಡೋ ಪಡೆಗಳು ತಮ್ಮ ನಾಯಕರ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿವೆ.

ಯುದ್ಧ ಮತ್ತಷ್ಟು ಭೀಕರವಾಗುವ ಶಂಕೆ: ಇರಾನ್‌ನ ಇಂತಹ ಪ್ರಚೋದನಾಕಾರಿ ಹೇಳಿಕೆಗಳು ಶಾಂತಿ ಮಾತುಕತೆಯ ಹಾದಿಯನ್ನು ಸಂಪೂರ್ಣವಾಗಿ ಮುಚ್ಚಿಹಾಕುತ್ತವೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈ ಹಿಟ್ ಲಿಸ್ಟ್‌ಗೆ ಪ್ರತಿಯಾಗಿ ಟೆಹ್ರಾನ್‌ನಲ್ಲಿರುವ ಇರಾನ್‌ನ ಮಿಲಿಟರಿ ಬಂಕರ್‌ಗಳ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಲು ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿವೆ ಎನ್ನಲಾಗಿದೆ. ಜಾಗತಿಕ ಮಹಾಯುದ್ಧದ ಕಡೆಗೆ ಜಾರುತ್ತಿರುವ ಮಧ್ಯಪ್ರಾಚ್ಯದ ಪರಿಸ್ಥಿತಿ ಸದ್ಯ ಅತ್ಯಂತ ಕಠಿಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate: ಚಿನ್ನದ ಬೆಲೆ ಮತ್ತೆ ಭರ್ಜರಿ ಇಳಿಕೆ; ಗ್ರಾಮ್​ಗೆ 130 ರೂ ಕುಸಿತ – Kannada News | Gold Price Today on 13th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 13: ಚಿನ್ನದ ಬೆಲೆಯ ಸತತ ಇಳಿಕೆಯ ಟ್ರೆಂಡ್ ಮತ್ತೆ ಶುರುವಾದಂತಿದೆ. ವಾರಾಂತ್ಯದಲ್ಲಿ ಅಲ್ಪ ಇಳಿಕೆ ಕಂಡಿದ್ದ ಬಂಗಾರದ ದರ ಇವತ್ತು 130 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಐದಾರು ತಿಂಗಳುಗಳಿಂದ ಇದರ ಬೆಲೆ ಬಹಳಷ್ಟು ಇಳಿದಿದೆ. ಇರಾನ್ ಯುದ್ಧವು ಚಿನ್ನದ ಬೆಲೆ (Gold Price) ಕುಸಿತಕ್ಕೆ ಎಡೆ ಮಾಡಿಕೊಟ್ಟಂತಿದೆ. ಜನವರಿ ಕೊನೆಯಲ್ಲಿ 17,885 ರೂ ಇದ್ದ ಅಪರಂಜಿ ಚಿನ್ನದ ಬೆಲೆ ಇದೀಗ 14,291 ರೂಗೆ ಕುಸಿದಿದೆ. ಐದಾರು ತಿಂಗಳಲ್ಲಿ ಬೆಲೆ ಮೂರೂವರೆ ಸಾವಿರ ರೂಗಿಂತ ಹೆಚ್ಚಿನ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,291 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,100 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,718 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,291 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,100 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,100 ರೂ
  • ಚೆನ್ನೈ: 13,200 ರೂ
  • ಮುಂಬೈ: 13,100 ರೂ
  • ದೆಹಲಿ: 13,115 ರೂ
  • ಕೋಲ್ಕತಾ: 13,100 ರೂ
  • ಕೇರಳ: 13,100 ರೂ
  • ಅಹ್ಮದಾಬಾದ್: 13,105 ರೂ
  • ಜೈಪುರ್: 13,115 ರೂ
  • ಲಕ್ನೋ: 13,115 ರೂ
  • ಭುವನೇಶ್ವರ್: 13,100 ರೂ

ಇದನ್ನೂ ಓದಿ: ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ 21 ವರ್ಷದಲ್ಲಿ 1 ಕೋಟಿ ಸಂಪತ್ತು ಸೃಷ್ಟಿ ಸಾಧ್ಯ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 549 ರಿಂಗಿಟ್ (12,876 ರುಪಾಯಿ)
  • ದುಬೈ: 496.50 ಡಿರಾಮ್ (12,947 ರುಪಾಯಿ)
  • ಅಮೆರಿಕ: 136 ಡಾಲರ್ (13,027 ರುಪಾಯಿ)
  • ಸಿಂಗಾಪುರ: 179.60 ಸಿಂಗಾಪುರ್ ಡಾಲರ್ (13,295 ರುಪಾಯಿ)
  • ಕತಾರ್: 497.50 ಕತಾರಿ ರಿಯಾಲ್ (13,075 ರೂ)
  • ಸೌದಿ ಅರೇಬಿಯಾ: 511 ಸೌದಿ ರಿಯಾಲ್ (13,037 ರುಪಾಯಿ)
  • ಓಮನ್: 52.70 ಒಮಾನಿ ರಿಯಾಲ್ (13,111 ರುಪಾಯಿ)
  • ಕುವೇತ್: 41.49 ಕುವೇತಿ ದಿನಾರ್ (12,913 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:51 pm, Mon, 13 July 26

Source link

Linganamakki Dam: ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು – Kannada News | Muppane Launch Service Resumes in Shivamogga as Linganamakki Backwater Levels Rise

ಶಿವಮೊಗ್ಗ, ಜುಲೈ 13: ಜಿಲ್ಲೆಯ ಲಿಂಗನಮಕ್ಕಿ ಡ್ಯಾಂ ಹಿನ್ನೀರು ಇಳಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮುಪ್ಪಾನೆ ಲಾಂಚ್ ಸೇವೆ ಇಂದಿನಿಂದ ಮತ್ತೆ ಪುನರಾರಂಭಗೊಂಡಿದೆ. ಈ ನಿರ್ಧಾರದಿಂದ ಸಾಗರ ತಾಲೂಕಿನ ಮುಪ್ಪಾನೆ ಕಡವು ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಿದೆ. ಸಾಗರ ತಾಲೂಕಿನ ಮುಪ್ಪಾನೆ ಕಡವಿನಲ್ಲಿ ಕಾರ್ಯನಿರ್ವಹಿಸುವ ಈ ಲಾಂಚ್, ಜೋಗ ಹಾಗೂ ಸಿಗಂದೂರು ನಡುವೆ ಅತಿ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಕರೂರು ಮತ್ತು ಬಾರಂಗಿ ಹೋಬಳಿಗಳ ಜನರಿಗೆ ಕಾಗಲ್ ಮತ್ತು ಜೋಗಕ್ಕೆ ತೆರಳಲು ಇದೇ ಹತ್ತಿರದ ಮಾರ್ಗವಾಗಿದೆ. ನೀರಿನ ಮಟ್ಟ ಕಡಿಮೆಯಾಗಿದ್ದ ಕಾರಣ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯು ಲಾಂಚ್ ಸೇವೆ ನಿಲ್ಲಿಸಿತ್ತು.

ಪ್ರತಿದಿನ ಈ ಮಾರ್ಗದಲ್ಲಿ ಸಾವಿರಾರು ಜನರು, ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರು ಓಡಾಡುತ್ತಾರೆ. ಲಾಂಚ್ ಸೇವೆ ಸ್ಥಗಿತಗೊಂಡಿದ್ದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದೀಗ ಸೇವೆ ಪುನರಾರಂಭಗೊಂಡಿರುವುದರಿಂದ ಸಂಚಾರ ಸುಗಮವಾಗಿದ್ದು, ಕಾಗಲ್, ಜೋಗ ಹಾಗೂ ಸಿಗಂದೂರು ಕಡೆಗೆ ಪ್ರಯಾಣಿಸುವ ಜನರಿಗೆ ಮತ್ತು ಪ್ರವಾಸಿಗರಿಗೆ ಸಂತಸ ತಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಜಾಲ ರೌಡಿಶೀಟರ್ ‘ಕಿಂಗ್ ಮೇಕರ್ ದಾಸ’ನ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಭಾಗಿ – Kannada News | BJP MLA Vishwanath Joins Notorious Rowdy Dasa’s Party; Viral Photos Spark Outrage

ಬೆಂಗಳೂರು, ಜು.13: ಯಲಹಂಕ ಕ್ಷೇತ್ರದ ಪ್ರಭಾವಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕುಖ್ಯಾತ ರೌಡಿಶೀಟರ್ ಒಬ್ಬನ ಅದ್ಧೂರಿ ಹುಟ್ಟುಹಬ್ಬದ ಆಚರಣೆಯಲ್ಲಿ ಖುದ್ದಾಗಿ ಭಾಗಿಯಾಗಿ ಕೇಕ್ ತಿನ್ನಿಸಿರುವ ಫೋಟೋ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಯಲಹಂಕ ಕ್ಷೇತ್ರದ ಆಲೂರು ಗ್ರಾಮದಲ್ಲಿ ಈ ಅದ್ಧೂರಿ ಬರ್ತಡೇ ಪಾರ್ಟಿ ನಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ದಾಸ ಅಲಿಯಾಸ್ ‘ಕಿಂಗ್ ಮೇಕರ್ ದಾಸ’ ಎಂಬಾತನೇ ಈಗ ಶಾಸಕರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಈ ರೌಡಿಶೀಟರ್ ದಾಸ ಯಲಹಂಕ, ನೆಲಮಂಗಲ ಹಾಗೂ ದಾಸರಹಳ್ಳಿ ಭಾಗಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಕಬಳಿಕೆ ಮತ್ತು ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ. ಕಳೆದ ಬಾರಿ ಈತನ ಬರ್ತ್‌ಡೇ ಪಾರ್ಟಿಯಲ್ಲಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ಭಾಗಿಯಾಗಿದ್ದರು. ಒಬ್ಬ ರೌಡಿಶೀಟರ್ ಪಾರ್ಟಿಯಲ್ಲಿ ಪೊಲೀಸ್ ಅಧಿಕಾರಿಯೇ ಭಾಗಿಯಾಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಆ ಪ್ರಕರಣ ದೊಡ್ಡ ಸದ್ದು ಮಾಡಿದ ಬೆನ್ನಲ್ಲೇ ಇನ್ಸ್‌ಪೆಕ್ಟರ್ ನಾಗರಾಜ್ ಅವರನ್ನ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಧ್ಯರಾತ್ರಿ ಊಟ ಕದ್ದು ತಿನ್ನುವಾಗ್ಲೇ ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದ ಯುವಕ – Kannada News | A young man who stopped eating after quarrelling with his mother

ಬೆಳೆದು ಎಷ್ಟೇ ದೊಡ್ಡವರಾದ್ರೂ ಪುಟಾಣಿ ಮಕ್ಕಳಂತೆ (little kids) ಅಮ್ಮನ ಜತೆಗೆ ಕೋಪಿಸಿಕೊಳ್ಳುತ್ತೇವೆ. ಸಣ್ಣ ಪುಟ್ಟ ವಿಷ್ಯಕ್ಕೆ ಹಠ ಹಿಡಿಯುತ್ತೇವೆ. ಊಟ ತಿಂಡಿ ಬಿಟ್ಟು ಮನೆಯಲ್ಲಿ ಸಣ್ಣದೊಂದು ಧರಣಿ ಮಾಡುತ್ತೇವೆ. ಈ ಯುವಕನದ್ದು ಅದೇ ಕಥೆ. ಅಮ್ಮ ಜತೆಗೆ ಜಗಳ ಮಾಡಿ ಊಟ ಬಿಟ್ಟಿದ್ದಾನೆ. ಕೊನೆಗೆ ಹಸಿವು ತಾಳಲಾರದೇ ಮಧ್ಯರಾತ್ರಿ 2 ಗಂಟೆಗೆ ಅಡುಗೆ ಮನೆಗೆ ಹೋಗಿ ಕದ್ದು ತಿಂದಿದ್ದಾನೆ. ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗಮನ ಸೆಳೆದಿದೆ.

ಎಲೋ ವರ್ಲ್ಡ್ (allow world) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಅಮ್ಮನ ಜತೆಗೆ ಜಗಳ ಮಾಡಿಕೊಂಡು ರಾತ್ರಿ ಊಟ ಬಿಟ್ಟಿದ್ದಾನೆ. ಹಸಿವು ತಾಳಲಾರದೇ ಮಧ್ಯರಾತ್ರಿ 2 ಗಂಟೆಗೆ ಅಡುಗೆ ಮನೆಯಲ್ಲಿ ಕದ್ದು ತಿನ್ನುವುದನ್ನು ಕಾಣಬಹುದು. ಇದೇ ವೇಳೆ ಈ ಯುವಕನ ತಾಯಿ ಮೆಲ್ಲನೆ ಅಡುಗೆ ಮನೆಯತ್ತ ಬಂದಿದ್ದಾಳೆ. ಈ ವಿಡಿಯೋದ ಕೊನೆಗೆ ಅಮ್ಮನ ಕೈಯಲ್ಲಿ ಸಿಕ್ಕಿ ಬಿದ್ದಿದ್ದು ಇಬ್ಬರೂ ಮುಖ ಮುಖ ನೋಡಿಕೊಂಡು ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಚಪಾತಿ ಮಾಡಲು ಹೋಗಿ ಮೈ ತುಂಬಾ ಹಿಟ್ಟು ಮೆತ್ತಿಕೊಂಡ ಪುಟಾಣಿ

ಈ ವಿಡಿಯೋ ಒಂದು ಲಕ್ಷ ಎಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆ ನಗುವೇ ಎಲ್ಲವನ್ನು ಹೇಳುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ಹೀಗೆಯೇ ಮಾಡುವೆ ಎಂದಿದ್ದಾರೆ. ಮತ್ತೊಬ್ಬರು, ರೋಲ್, ಕ್ಯಾಮೆರಾ, ಆಕ್ಷನ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

18 ವರ್ಷಗಳ ಜರ್ನಿ ಮುಕ್ತಾಯ: CSKಗೆ ಗುಡ್‌ಬೈ ಹೇಳಿದ ಫ್ಲೆಮಿಂಗ್! – Kannada News | CSK Part Ways With Coach Stephen Fleming

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಇದರೊಂದಿಗೆ ಐಪಿಎಲ್​ನ ಅತ್ಯಂತ ಸುದೀರ್ಘ ಹಾಗೂ ಯಶಸ್ವಿ ಕೋಚ್-ಫ್ರಾಂಚೈಸಿ ಬಾಂಧವ್ಯವೊಂದು ಕೊನೆಗೊಂಡಂತಾಗಿದೆ.

2008 ರ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಸ್ಟೀಫನ್ ಫ್ಲಯಿಂಗ್, ಆ ಸೀಸನ್ ಮುಗಿದ ತಕ್ಷಣವೇ ಅವರು ನಿವೃತ್ತಿ ಘೋಷಿಸಿ, 2009 ರಿಂದ ಸಿಎಸ್​ಕೆ ತಂಡ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರು. ಇದಾದ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಆದರೆ ಕಳೆದ ಕೆಲ ಸೀಸನ್​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಸುದ್ದಿಯು ನಿಜವಾಗಿದೆ.

ಸ್ಟೀಫನ್ ಫ್ಲೆಮಿಂಗ್ ಹಾಗೂ  ಫ್ರಾಂಚೈಸಿ ಪರಸ್ಪರ ಮಾತುಕತೆಯ ಮೂಲಕ ಗೌರವಯುತವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ತಿಳಿಸಿದೆ. ಈ ಮೂಲಕ ಹೊಸ ಅಧ್ಯಾಯಕ್ಕೆ ಕಾಲಿಡಲು ಸಿಎಸ್​ಕೆ ಫ್ರಾಂಚೈಸಿ ನಿರ್ಧರಿಸಿದೆ. ಅದರಂತೆ ಮುಂದಿನ ಸೀಸನ್​ನಿಂದ ಸಿಎಸ್​ಕೆ ತಂಡವನ್ನು ಹೊಸ ಕೋಚ್ ಮುನ್ನಡೆಸಲಿದ್ದಾರೆ.

 ಫ್ಲೆಮಿಂಗ್-ಸಿಎಸ್​ಕೆ ಬೇರ್ಪಡಲು ಕಾರಣವೇನು?

  • ಸತತ ವೈಫಲ್ಯಗಳು: ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ಸಿಎಸ್‌ಕೆ ತಂಡವು ಪ್ಲೇ-ಆಫ್ಸ್ ತಲುಪಲು ವಿಫಲವಾಗಿತ್ತು (ಇತ್ತೀಚಿನ ಸೀಸನ್‌ಗಳಲ್ಲಿ 10 ಮತ್ತು 8 ನೇ ಸ್ಥಾನ ಪಡೆದಿತ್ತು).
  • ಜಾಗತಿಕ ಲೀಗ್‌ಗಳಲ್ಲೂ ಹಿನ್ನಡೆ: ಅಮೆರಿಕಾದ ಮೇಜರ್ ಲೀಗ್ ಕ್ರಿಕೆಟ್ (MLC) 2026 ರ ಸೀಸನ್‌ನಲ್ಲಿ ಸಿಎಸ್‌ಕೆ ಒಡೆತನದ ‘ಟೆಕ್ಸಾಸ್ ಸೂಪರ್ ಕಿಂಗ್ಸ್’ ತಂಡವು ಕೊನೆಯ ಸ್ಥಾನಕ್ಕೆ ಕುಸಿದಿರುವುದು ಈ ಕಠಿಣ ತೀರ್ಮಾನಕ್ಕೆ ಪ್ರಮುಖ ಕಾರಣವಾಗಿದೆ.

ಫ್ಲೆಮಿಂಗ್ ಅವರ ಐತಿಹಾಸಿಕ ಸಾಧನೆಗಳು:

2008 ರ ಚೊಚ್ಚಲ ಐಪಿಎಲ್‌ನಲ್ಲಿ ಆಟಗಾರನಾಗಿ ಸಿಎಸ್‌ಕೆ ಸೇರಿದ ಫ್ಲೆಮಿಂಗ್, 2009 ರಲ್ಲಿ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡರು. ಅಂದಿನಿಂದ ಎಂ.ಎಸ್. ಧೋನಿ ಅವರೊಂದಿಗೆ ಸೇರಿ ಸಿಎಸ್‌ಕೆಯನ್ನು ಟಿ20 ಕ್ರಿಕೆಟ್‌ನ ಅತ್ಯಂತ ಬಲಿಷ್ಠ ತಂಡವನ್ನಾಗಿ ಬೆಳೆಸಿದರು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐಪಿಎಲ್​ನಲ್ಲಿ 5 ಬಾರಿ ಹಾಗೂ ಚಾಂಪಿಯನ್ಸ್ ಲೀಗ್​ನಲ್ಲಿ 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

  •  5 ಐಪಿಎಲ್ ಟ್ರೋಫಿಗಳು (2010, 2011, 2018, 2021, 2023)
  •  2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳು
  •  10 ಬಾರಿ ಐಪಿಎಲ್ ಫೈನಲ್ ಪ್ರವೇಶ
  •  12 ಬಾರಿ ಪ್ಲೇ-ಆಫ್ಸ್‌ಗೆ ತಂಡವನ್ನು ಮುನ್ನಡೆಸಿದ ಕೀರ್ತಿ.

ಇದನ್ನೂ ಓದಿ: ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್

ಇದೀಗ 18 ವರ್ಷಗಳ ಸುದೀರ್ಘ ನಂಟಿಗೆ ಸ್ಟೀಫನ್ ಫ್ಲೆಮಿಂಗ್ ಗುಡ್ ಬೈ ಹೇಳಿದ್ದು, ಹೀಗಾಗಿ ಮುಂಬರುವ ಐಪಿಎಲ್​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.

Source link

ಸರಳತೆಯನ್ನೇ ಉಸಿರಾಗಿಸಿಕೊಂಡಿದ್ದ ಗಾಯಕಿ ಎಸ್​. ಜಾನಕಿ ಆಸ್ತಿ ಎಷ್ಟು ಕೋಟಿ? – Kannada News | S Janaki Rs 537 Cr Net Worth: Singer Simple Life Amidst Fame and Spiritual Journey

ಇಂದಿನ ಗ್ಲಾಮರ್ ಜಗತ್ತಿನಲ್ಲಿ ಒಂದು ಸಿನಿಮಾ ಹಿಟ್ ಆದರೆ ಸಾಕು, ನಟ-ನಟಿಯರು, ಗಾಯಕರ ಹಮ್ಮು ಬಿಮ್ಮೇ ಬದಲಾಗಿಬಿಡುತ್ತದೆ. ಅವರ ಮಾತಿನ ಶೈಲಿ ಬದಲಾಗುತ್ತದೆ, ಗ್ಯಾರೇಜ್‌ಗೆ ಕೋಟಿ ಬೆಲೆಯ ದುಬಾರಿ ಕಾರುಗಳು ಬಂದು ನಿಲ್ಲುತ್ತವೆ. ಆದರೆ, ತಮ್ಮ ಮಧುರ ಧ್ವನಿಯಿಂದಲೇ ಜಗತ್ತನ್ನೇ ಗೆದ್ದು, ನೂರಾರು ಕೋಟಿ ಆಸ್ತಿಯ ಒಡತಿಯಾಗಿದ್ದರೂ ಎಸ್. ಜಾನಕಿ ಅವರು ಎಂದಾದರೂ ಹಮ್ಮು-ಬಿಮ್ಮಿನಿಂದ ನಡೆದುಕೊಂಡಿದ್ದನ್ನು ನೋಡಿದ್ದೀರಾ? ದಶಕಗಳ ಕಾಲ ಚಿತ್ರರಂಗವನ್ನು ಆಳಿದರೂ, ಅವರು ಯಾವಾಗಲೂ ಒಂದು ಸಾಧಾರಣ ಸೀರೆಯುಟ್ಟು ಸರಳ ಜೀವನ ನಡೆಸಿದರು. ಅವರ ಆಸ್ತಿ ವಿವರ ಇಲ್ಲಿದೆ.

ಎಸ್. ಜಾನಕಿ ಅವರು ಬರೋಬ್ಬರಿ 20 ಭಾಷೆಗಳಲ್ಲಿ ಸುಮಾರು 40,000 ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗೆ ಇದೆ. ಅವರು ಪ್ರತಿ ಹಾಡಿಗೂ ಸಂಭಾವನೆ ಪಡೆಯುತ್ತಿದ್ದರು. ಆದರೆ, ಅವರು ಪ್ರತಿ ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎಂಬ ವಿಷಯ ಎಲ್ಲಿಯೂ ರಿವೀಲ್ ಆಗಿರಲಿಲ್ಲ. ಅವರ ಆಸ್ತಿ ಮೌಲ್ಯ ಸದ್ಯ 537 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಹಣ-ಖ್ಯಾತಿಗಿಂತಲೂ ಅವರು ನೆಮ್ಮದಿಯನ್ನೇ ಹೆಚ್ಚು ಬಯಸಿದ್ದರು.

ಇಷ್ಟು ಶ್ರೀಮಂತ ಮಹಿಳೆ ಎಂದು ಯಾವಾಗಲೂ ಅನಿಸಿಲ್ಲ

ನೂರಾರು ಕೋಟಿ ರೂಪಾಯಿ ಇದ್ದರೆ ವಿವಿಧ ರೀತಿಯ ಕಾರುಗಳನ್ನು ಇಟ್ಟುಕೊಂಡು, ದೊಡ್ಡ ಬಂಗಲೆಯಲ್ಲಿ ವಾಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಜಾನಕಿ ಅವರನ್ನು ನೋಡಿದರೆ ಎಂದಿಗೂ ಹಾಗೆ ಅನಿಸಿದ್ದೇ ಇಲ್ಲ. ಅವರ ಸರಳತೆಯೇ ಇದಕ್ಕೆಲ್ಲ ಕಾರಣ ಎಂದು ಅನೇಕರು ಮಾತನಾಡಿದ್ದಾರೆ.

ಇದನ್ನೂ ಓದಿ: ಫೋಟೋ ನೋಡಿಯೇ ಪ್ರೀತಿಯಲ್ಲಿ ಬಿದ್ದಿದ್ದ ಗಾನಕೋಕಿಲೆ; ಎಸ್. ಜಾನಕಿ ಅಪರೂಪದ ಪ್ರೇಮಕಥೆ

ಮಗನ ಅಗಲಿಕೆ ಮತ್ತು ಆಧ್ಯಾತ್ಮದ ಹಾದಿ

ಜೀವನದಲ್ಲಿ ಎಲ್ಲವನ್ನೂ ಕಂಡಿದ್ದ ಜಾನಕಮ್ಮ ಅವರಿಗೆ ಇತ್ತೀಚಿನ ವರ್ಷಗಳು ತೀವ್ರ ನೋವು ತಂದಿದ್ದವು. ಈ ವರ್ಷದ ಜನವರಿಯಲ್ಲಿ ಅವರ ಮಗ ಮುರಳಿ ಕೃಷ್ಣ ಹೃದಯಾಘಾತದಿಂದ ನಿಧನರಾದಾಗ ಜಾನಕಮ್ಮ ಭಾವನಾತ್ಮಕವಾಗಿ ಸಂಪೂರ್ಣವಾಗಿ ಕುಸಿದುಹೋಗಿದ್ದರು. ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲೇ ನೆಲೆಸಿದ್ದ ಅವರು, ಸಂಪೂರ್ಣವಾಗಿ ಹಾಡುವುದನ್ನು ಬಿಟ್ಟು ಆಧ್ಯಾತ್ಮದತ್ತ ಮುಖ ಮಾಡಿದ್ದರು. ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಯೋಗನರಸಿಂಹಸ್ವಾಮಿ ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಬ್ರೇಕ್: ತಮಿಳುನಾಡಿನಲ್ಲಿ ಸದ್ಯಕ್ಕಿಲ್ಲ ‘ಸಂಪೂರ್ಣ ಗೋಹತ್ಯೆ ನಿಷೇಧ’ – Kannada News | Supreme Court Blocks Madras HC’s Complete Cow Slaughter Ban in Tamil Nadu

ನವದೆಹಲಿ, ಜುಲೈ 13: ಬಕ್ರೀದ್ ಹಬ್ಬದ ಮುನ್ನಾದಿನದಂದು ತಮಿಳುನಾಡು ರಾಜ್ಯಾದ್ಯಂತ ಹಸು  ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್(Supreme Court) ಇಂದು ಮಧ್ಯಂತರ ತಡೆ ನೀಡಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಇದರೊಂದಿಗೆ ತಮಿಳುನಾಡಿನಲ್ಲಿ ಸೃಷ್ಟಿಯಾಗಿದ್ದ ದೊಡ್ಡ ಆಡಳಿತಾತ್ಮಕ ಮತ್ತು ಕಾನೂನು ಗೊಂದಲಕ್ಕೆ ಸದ್ಯ ತೆರೆ ಬಿದ್ದಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರದ ವಾದವೇನು?

ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ (SLP) ಪರವಾಗಿ ದೇಶದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿದರು.

ಕಾನೂನು ಚೌಕಟ್ಟು ಮೀರಿದ ಆದೇಶ: ಹೈಕೋರ್ಟ್ ಆದೇಶವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘1958ರ ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ’ಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸರ್ಕಾರ ವಾದಿಸಿತು. ಈ ಕಾನೂನಿನ ಪ್ರಕಾರ, 10 ವರ್ಷಕ್ಕಿಂತ ಮೇಲ್ಪಟ್ಟ, ಕೃಷಿ ಕೆಲಸಕ್ಕೆ ಹಾಗೂ ಸಂತಾನೋತ್ಪತ್ತಿಗೆ ಅನರ್ಹವಾದ ಹಸುಗಳನ್ನು ಸಕ್ಷಮ ಪ್ರಾಧಿಕಾರದ ಪ್ರಮಾಣಪತ್ರ ಪಡೆದು ನಿರ್ದಿಷ್ಟ ಕಸಾಯಿಖಾನೆಗಳಲ್ಲಿ ವಧೆ ಮಾಡಲು ಅವಕಾಶವಿದೆ.

ನ್ಯಾಯಾಂಗವೇ ಕಾನೂನು ರಚಿಸಲು ಸಾಧ್ಯವಿಲ್ಲ: ಶಾಸನಬದ್ಧ ಕಾನೂನು ಕೆಲವು ವಿನಾಯಿತಿಗಳನ್ನು ನೀಡಿರುವಾಗ, ಹೈಕೋರ್ಟ್ ಅದನ್ನೆಲ್ಲಾ ಮೀರಿ ‘ಸಂಪೂರ್ಣ ನಿಷೇಧ’ ಹೇರುವ ಮೂಲಕ ಶಾಸಕಾಂಗದ ಕೆಲಸವನ್ನು ತಾನೇ ಮಾಡಲು ಹೊರಟಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪಿಸಿತ್ತು.

ಅರ್ಜಿಯ ವ್ಯಾಪ್ತಿ ಮೀರಿದ ತೀರ್ಪು ಮತ್ತು ಆಂತರಿಕ ವಿರೋಧಾಭಾಸ

ಹಿಂದೂ ಮಕ್ಕಳ್ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಎಂಬುವವರು ಕೊಯಮತ್ತೂರಿನಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ತಡೆಯಲು ಮಾತ್ರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಿದ್ದರು.

ಮತ್ತಷ್ಟು ಓದಿ: ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಮ ಮಂದಿರ ದೇಣಿಗೆ ಹಗರಣ, ಸಿಬಿಐ ತನಿಖೆಗೆ ಕೋರಿ ಅರ್ಜಿ

ಆದರೆ, ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮಿನಾರಾಯಣ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು, ಅರ್ಜಿದಾರರು ಕೇಳದಿದ್ದರೂ ಇಡೀ ರಾಜ್ಯಾದ್ಯಂತ ಅಧಿಕೃತ ಕಸಾಯಿಖಾನೆಗಳಲ್ಲೂ ಗೋಹತ್ಯೆ ಮಾಡಬಾರದು ಎಂದು ಆದೇಶದ ವ್ಯಾಪ್ತಿಯನ್ನು ವಿಸ್ತರಿಸಿತ್ತು. ಆಶ್ಚರ್ಯದ ಸಂಗತಿಯೆಂದರೆ, ಹೈಕೋರ್ಟ್ ತನ್ನ ತೀರ್ಪಿನ ಒಂದು ಭಾಗದಲ್ಲಿ “ಗೊತ್ತುಪಡಿಸಿದ ಕಸಾಯಿಖಾನೆಗಳಲ್ಲಿ ಮಾತ್ರ ಪ್ರಾಣಿಗಳ ಹತ್ಯೆ ನಡೆಯಬಹುದು” ಎಂದು ಹೇಳುತ್ತಲೇ, ಮತ್ತೊಂದು ಭಾಗದಲ್ಲಿ “ಯಾವುದೇ ದಿನ ಹಸು ಅಥವಾ ಕರುವನ್ನು ವಧಿಸಬಾರದು” ಎಂದು ಹೇಳಿದೆ. ಇಂತಹ ಆಂತರಿಕ ವಿರೋಧಾಭಾಸಗಳ ಕಾರಣದಿಂದಲೇ ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿದೆ.

1976ರ ಹಳೆಯ ಸರ್ಕಾರಿ ಆದೇಶಕ್ಕೆ ಬೆಲೆ ಇಲ್ಲ

ಹಾಲು ಉತ್ಪಾದನೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ಗೋಹತ್ಯೆ ನಿಷೇಧ ಅಗತ್ಯ ಎಂದು ಹೇಳುವ 1976 ರ ಹಳೆಯ ಸರ್ಕಾರಿ ಆದೇಶವನ್ನು ಆಧರಿಸಿ ಹೈಕೋರ್ಟ್ ಈ ತೀರ್ಪು ನೀಡಿತ್ತು. ಆದರೆ, ಈ ಹಳೆಯ ಆದೇಶದ ಸಿಂಧುತ್ವ ಕೋರ್ಟ್ ಮುಂದೆ ಎಂದಿಗೂ ಚರ್ಚೆಗೇ ಬಂದಿರಲಿಲ್ಲ ಮತ್ತು ಇದರ ಬಳಕೆಗೆ ಮುನ್ನ ಸರ್ಕಾರಕ್ಕೆ ನೋಟಿಸ್ ನೀಡಿರಲಿಲ್ಲ ಎಂದು ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು. ಯಾವುದೇ ಹಳೆಯ ಆಡಳಿತಾತ್ಮಕ ಸೂಚನೆಗಳು ಈಗ ಜಾರಿಯಲ್ಲಿರುವ ಶಾಸನಬದ್ಧ ಕಾನೂನುಗಳನ್ನು ಮೀರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಒಪ್ಪಿಕೊಂಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಬಲಿ ನಿಷೇಧ ಮುಂದುವರಿಕೆ

ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಸಂಪೂರ್ಣ ನಿಷೇಧಕ್ಕೆ ತಡೆ ನೀಡಿದೆಯಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ವಧೆ ಮಾಡುವುದಕ್ಕೆ ಇದ್ದ ತಡೆಯನ್ನು ಯಥಾವತ್ತಾಗಿ ಉಳಿಸಿಕೊಂಡಿದೆ.

ಇದರರ್ಥ, ತಮಿಳುನಾಡಿನಲ್ಲಿ ಈ ಹಿಂದೆ ಇದ್ದ ನಿಯಂತ್ರಿತ ನಿಯಮಗಳೇ ಮುಂದುವರೆಯಲಿವೆ. ರಸ್ತೆಗಳು, ಪಾರ್ಕ್‌ಗಳು ಅಥವಾ ಸಾರ್ವಜನಿಕರ ಕಣ್ಣಿಗೆ ಬೀಳುವ ಜಾಗಗಳಲ್ಲಿ ಯಾವುದೇ ಧಾರ್ಮಿಕ ಪ್ರಾಣಿ ಬಲಿ ನೀಡುವಂತಿಲ್ಲ. ಕೇವಲ ಮುಚ್ಚಿದ, ಸಾರ್ವಜನಿಕವಲ್ಲದ ಜಾಗ ಅಥವಾ ಸರ್ಕಾರಿ ಕಸಾಯಿಖಾನೆಗಳಲ್ಲಿ ಮಾತ್ರ ಕಾನೂನಿನ ಚೌಕಟ್ಟಿನಡಿ ಪ್ರಾಣಿ ವಧೆಗೆ ಅವಕಾಶವಿರುತ್ತದೆ. ತಮಿಳುನಾಡಿನಲ್ಲಿ ದ್ರಾವಿಡ ರಾಜಕಾರಣ ಮತ್ತು ಧಾರ್ಮಿಕ ಸಂಪ್ರದಾಯಗಳ ನಡುವೆ ಈ ಗೋಹತ್ಯೆ ವಿಷಯ ಸದಾ ಸೂಕ್ಷ್ಮ ಸದ್ದು ಮಾಡುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್ – Kannada News | Mohammad Amir Starts Fresh Chapter as British Citizen

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಕೂಡ ಬ್ರಿಟಿಷ್ ಪ್ರಜೆಯಾಗಿ ಎಂಬುದು ವಿಶೇಷ. ಮೊಹಮ್ಮದ್ ಅಮೀರ್ ಅವರು ಅಧಿಕೃತವಾಗಿ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದು, ಇದೀಗ ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಳೀಯ ಆಟಗಾರನಾಗಿ ಹೊಸ ಪಯಣ ಆರಂಭಿಸಿದ್ದಾರೆ.

 ಪೌರತ್ವ ಸಿಕ್ಕಿದ್ದು ಹೇಗೆ?

ಮೊಹಮ್ಮದ್ ಅಮೀರ್ ಅವರ ಪತ್ನಿ ನರ್ಜಿಸ್ ಖಾನ್ ಅವರು ಬ್ರಿಟಿಷ್ ಪ್ರಜೆಯಾಗಿದ್ದಾರೆ. ಇದರ ಆಧಾರದ ಮೇಲೆ ಅಮೀರ್ ಕೆಲವು ವರ್ಷಗಳ ಹಿಂದೆಯೇ ಯುಕೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ದೀರ್ಘಾವಧಿಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಬ್ರಿಟಿಷ್ ಸರ್ಕಾರ ಅವರಿಗೆ ನಾಗರಿಕತ್ವವನ್ನು ನೀಡಿದೆ.

‘ಸ್ಥಳೀಯ ಆಟಗಾರ’!

ಬ್ರಿಟಿಷ್ ಪೌರತ್ವ ಸಿಕ್ಕ ತಕ್ಷಣವೇ ಮೊಹಮ್ಮದ್ ಅಮೀರ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಸ್ಥಳೀಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಕೌಂಟಿ ಕ್ರಿಕೆಟ್​ನಲ್ಲಿ ಒಪ್ಪಂದವನ್ನೂ ಕೂಡ ಮಾಡಿಕೊಂಡಿದ್ದಾರೆ.

  • ಇಂಗ್ಲೆಂಡ್‌ನ ಪ್ರಸಿದ್ಧ ಕೌಂಟಿ ತಂಡವಾದ ನಾಟಿಂಗ್‌ಹ್ಯಾಮ್‌ಶೈರ್ ಪರ ದೇಶೀಯ ಆಟಗಾರನಾಗಿ ಅಮೀರ್ ಒಪ್ಪಂದ ಮಾಡಿಕೊಂಡಿದ್ದಾರೆ.
  • ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿರುವುದರಿಂದ ಅವರು ತಂಡದ ಇಬ್ಬರು ವಿದೇಶಿ ಆಟಗಾರರ ಕೋಟಾದಡಿ ಬರುವುದಿಲ್ಲ. ಹೀಗಾಗಿ ತಂಡದ ಆಯ್ಕೆ ಪ್ರಕ್ರಿಯೆ ಸುಲಭವಾಗಿದೆ.
  • ದಿ ಹಂಡ್ರೆಡ್: ಇಂಗ್ಲೆಂಡ್‌ನ 100 ಎಸೆತಗಳ ಟೂರ್ನಿಯಲ್ಲಿ ಅಮೀರ್ ಆರಂಭದಲ್ಲಿ ವಿದೇಶಿ ಆಟಗಾರನಾಗಿ ಡ್ರಾಫ್ಟ್‌ನಲ್ಲಿ ಹೆಸರು ನೋಂದಾಯಿಸಿ ಅನ್‌ಸೋಲ್ಡ್ ಆಗಿದ್ದರು. ಆದರೆ ಪೌರತ್ವ ಸಿಕ್ಕ ಬೆನ್ನಲ್ಲೇ, ಗಾಯಗೊಂಡ ಇಂಗ್ಲೆಂಡ್ ವೇಗಿ ಡೇವಿಡ್ ಪೇನ್ ಅವರ ಬದಲಿಗೆ ‘ಟ್ರೆಂಟ್ ರಾಕೆಟ್ಸ್’ ತಂಡಕ್ಕೆ ಸ್ಥಳೀಯ ಆಟಗಾರನಾಗಿ ನೇರ ಪ್ರವೇಶ ಪಡೆದಿದ್ದಾರೆ.

ಐಪಿಎಲ್ ಕನಸು ನನಸಾಗಲಿದೆಯೇ?

2008ರ ಮುಂಬೈ ದಾಳಿಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಿದೆ. ಆದರೆ, ಅಮೀರ್ ಈಗ ಬ್ರಿಟಿಷ್ ಪ್ರಜೆಯಾಗಿರುವುದರಿಂದ ಅವರು ಇಂಗ್ಲೆಂಡ್ ಮೂಲದ ವಿದೇಶಿ ಆಟಗಾರನಾಗಿ ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕಾನೂನುಬದ್ಧವಾಗಿ ಅರ್ಹರಾಗಿದ್ದಾರೆ.

ಇದನ್ನೂ ಓದಿ: ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್​ನಿಂದ ಭಾರತ ಫುಟ್‌ಬಾಲ್ ತಂಡ ಹೊರಕ್ಕೆ!

ಅಮೀರ್ ಕೂಡ ಮುಂಬರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. “ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡುತ್ತೇನೆ” ಎಂದು ಅಮೀರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ಐಪಿಎಲ್ 2027ರ ಹರಾಜಿನಲ್ಲಿ ಮೊಹಮ್ಮದ್ ಅಮೀರ್ ಹೆಸರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

Published On – 12:28 pm, Mon, 13 July 26

Source link

Exit mobile version