RCB ಫ್ರಾಂಚೈಸಿ ಮಾರಾಟ: ಇನ್ಮುಂದೆ 2 ತಂಡಗಳಿಗೆ ಹೊಸ ಮಾಲೀಕರು! – Kannada News | IPL 2027: Regulatory approval for RCB sale complete

ಆರ್​ಸಿಬಿ ಫ್ರಾಂಚೈಸಿಯನ್ನು ಕೇವಲ ಒಂದು ಕಂಪನಿ ಮಾತ್ರ ಖರೀದಿ ಮಾಡಿಲ್ಲ. ಬದಲಿಗೆ ವಿಶ್ವದ ಪ್ರಮುಖ ಉದ್ಯಮಿಗಳು ಮತ್ತು ಹೂಡಿಕೆ ಸಂಸ್ಥೆಗಳು ಕೈಜೋಡಿಸಿ ಹೊಸ ಒಕ್ಕೂಟವನ್ನು ರಚಿಸಿವೆ. ಅದರಂತೆ ಆದಿತ್ಯ ಬಿರ್ಲಾ ಗ್ರೂಪ್​, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲ್ಯಾಕ್‌ಸ್ಟೋನ್ ಸಂಸ್ಥೆ ಮತ್ತು ಬೋಲ್ಟ್ ವೆಂಚರ್ಸ್ ಸಂಸ್ಥೆಯನ್ನು ಒಳಗೊಂಡ ಈ ಒಕ್ಕೂಟವು ಇನ್ಮುಂದೆ ಆರ್​ಸಿಬಿ ಫ್ರಾಂಚೈಸಿಯ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ.  (PC.X.com)

Source link

Gold Rate: ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ – Kannada News | Gold Price Today on 1st July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 1: ನಿನ್ನೆ ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Price) ಇವತ್ತು ಸ್ವಲ್ಪ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆಯೂ ನಿನ್ನೆ ಐದು ರೂ ಕಡಿಮೆಗೊಂಡಿದ್ದು, ಇವತ್ತು ಅಷ್ಟೇ ಮೊತ್ತ ಹೆಚ್ಚಿದೆ. ಬಂಗಾರದ ದರ ಬುಧವಾರ ಗ್ರಾಮ್​ಗೆ 60 ರೂನಷ್ಟು ಏರಿದೆ. ಇದರೊಂದಿಗೆ ಆಭರಣ ಚಿನ್ನದ ಬೆಲೆ 12,900 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಇಂದು ಈ ಹಳದಿ ಲೋಹದ ದರ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 1ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,078 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,905 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,559 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,078 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,905 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,905 ರೂ
  • ಚೆನ್ನೈ: 13,100 ರೂ
  • ಮುಂಬೈ: 12,905 ರೂ
  • ದೆಹಲಿ: 12,920 ರೂ
  • ಕೋಲ್ಕತಾ: 12,905 ರೂ
  • ಕೇರಳ: 12,905 ರೂ
  • ಅಹ್ಮದಾಬಾದ್: 12,910 ರೂ
  • ಜೈಪುರ್: 12,920 ರೂ
  • ಲಕ್ನೋ: 12,920 ರೂ
  • ಭುವನೇಶ್ವರ್: 12,905 ರೂ

ಇದನ್ನೂ ಓದಿ: ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 537 ರಿಂಗಿಟ್ (12,422 ರುಪಾಯಿ)
  • ದುಬೈ: 485.25 ಡಿರಾಮ್ (12,515 ರುಪಾಯಿ)
  • ಅಮೆರಿಕ: 133 ಡಾಲರ್ (12,600 ರುಪಾಯಿ)
  • ಸಿಂಗಾಪುರ: 176.10 ಸಿಂಗಾಪುರ್ ಡಾಲರ್ (12,874 ರುಪಾಯಿ)
  • ಕತಾರ್: 488 ಕತಾರಿ ರಿಯಾಲ್ (12,684 ರೂ)
  • ಸೌದಿ ಅರೇಬಿಯಾ: 502 ಸೌದಿ ರಿಯಾಲ್ (12,658 ರುಪಾಯಿ)
  • ಓಮನ್: 51.80 ಒಮಾನಿ ರಿಯಾಲ್ (12,746 ರುಪಾಯಿ)
  • ಕುವೇತ್: 40.78 ಕುವೇತಿ ದಿನಾರ್ (12,547 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಸರಣಿ ವೈಫಲ್ಯ: ತೇಜಸ್ವಿ ಸೂರ್ಯ ದೂರಿನ ಬೆನ್ನಲ್ಲೇ ಕೇಂದ್ರದಿಂದ ತನಿಖೆಗೆ ಆದೇಶ! – Kannada News | Metro Service Disruptions: Rail Safety Commissioner Directs BMRCL to Submit Probe Report

ತೇಜಸ್ವಿ ಸೂರ್ಯImage Credit source: Tejaswi Surya X account

ಬೆಂಗಳೂರು, ಜುಲೈ 01: ನಮ್ಮ ಮೆಟ್ರೋ ರೈಲು ಸೇವೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವ್ಯತ್ಯಯಗಳ ಕುರಿತು ತನಿಖೆ ನಡೆಸಿ, ಕೈಗೊಂಡಿರುವ ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು (CCRS) ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಕಡಕ್ ನಿರ್ದೇಶನ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕಳೆದ ಮೂರು ವರ್ಷಗಳಲ್ಲಿ ನಡೆದಿದ್ದ 20 ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಬಿದ್ದಿದ್ದು, ಈ ಬಗ್ಗೆ ಸೂರ್ಯ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

3 ವರ್ಷಗಳ ಮೆಟ್ರೋ ಸರಣಿ ವ್ಯತ್ಯಯಗಳ ತನಿಖೆಗೆ ಆದೇಶ

ಜೂನ್ 23 ರಂದು ನಮ್ಮ ಮೆಟ್ರೋದ ಪರ್ಪಲ್ ಲೈನ್‌ನಲ್ಲಿ (ನೇರಳೆ ಮಾರ್ಗ) ಉಂಟಾಗಿದ್ದ ತಾಂತ್ರಿಕ ದೋಷ ಹಾಗೂ ಸೇವಾ ವ್ಯತ್ಯಯದ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಜೂನ್ 25 ರಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು.

ಈ ದೂರಿಗೆ ಅಧಿಕೃತವಾಗಿ ಉತ್ತರಿಸಿರುವ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಾದ ಜನಕ್ ಕುಮಾರ್ ಗರ್ಗ್ ಅವರು, ಜೂನ್ 23ರ ಘಟನೆ ಮಾತ್ರವಲ್ಲದೆ, ಕಳೆದ ಮೂರು ವರ್ಷಗಳಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಎಲ್ಲಾ ಸರಣಿ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ (MD) ಸೂಚಿಸಿದ್ದಾರೆ. ಇದರೊಂದಿಗೆ ಮೆಟ್ರೋ ರೈಲ್ವೆ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ದಕ್ಷತೆಯ ಬಗ್ಗೆ ಆಡಿಟಿಂಗ್ ನಡೆಸಲು ಆದೇಶಿಸಲಾಗಿದೆ.

ಸಚಿವ ಕೃಷ್ಣಭೈರೇಗೌಡ ಅವರಿಗೆ ಟ್ಯಾಗ್

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರ ಪತ್ರವನ್ನು ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಈ ಪತ್ರವನ್ನು ಬಿಎಂಆರ್ಸಿಎಲ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಟ್ಯಾಗ್ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

2024ರಿಂದೀಚೆಗೆ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 20 ಬಾರಿ ಸೇವಾ ವ್ಯತ್ಯಯಗಳು ವರದಿಯಾಗಿವೆ. ಇದು ವ್ಯವಸ್ಥಿತ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದು, ತಕ್ಷಣವೇ ಸರಿಪಡಿಸುವ ಕ್ರಮಗಳು ಅಗತ್ಯವಾಗಿವೆ. ವ್ಯವಸ್ಥಿತ ವೈಫಲ್ಯಗಳನ್ನು ಸರಿಪಡಿಸಲು ಮತ್ತು ಪ್ರಯಾಣಿಕರ ವಿಶ್ವಾಸವನ್ನು ಪುನಃಸ್ಥಾಪಿಸಲು ನಾನು ಒತ್ತಾಯಿಸುತ್ತೇನೆ ಎಂದು ಸೂರ್ಯ ತಿಳಿಸಿದ್ದಾರೆ.

ಇದನ್ನೂ ಓದಿ ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!

ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯು ಬಿಎಂಆರ್‌ಸಿಎಲ್‌ನ ಅತ್ಯುನ್ನತ ಆದ್ಯತೆಯಾಗಿರಬೇಕು. ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಜವಾಬ್ದಾರರಾಗಿರುವ ಪ್ರಾಧಿಕಾರವಾಗಿ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ತಡೆರಹಿತ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದೆ. ಹೀಗಾಗಿ ರಾಜ್ಯ ಸರ್ಕಾರವು ಇದನ್ನು ತಕ್ಷಣದ ತುರ್ತುಸ್ಥಿತಿಯೊಂದಿಗೆ ಪರಿಗಣಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರದ 4,500 ಇ-ಬಸ್ ಪಡೆಯಲು ರಾಜ್ಯ ಹಿಂದೇಟು ಹಾಕ್ತಿರೋದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಸಾರಿಗೆ ಸಚಿವ ಭೈರತಿ ಸುರೇಶ್ – Kannada News | Why Karnataka is Reluctant to Accept 4500 PM E Drive Electric Buses Explained by Transport Minister Byrathi Suresh

ತೇಜಸ್ವಿ ಸೂರ್ಯಗೆ ಭೈರತಿ ಸುರೇಶ್ ಕೌಂಟರ್Image Credit source: tv9

ಬೆಂಗಳೂರು, ಜುಲೈ 1: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ಇ-ಡ್ರೈವ್ (PM E-Drive)’ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ನೀಡಲು ಉದ್ದೇಶಿಸಿರುವ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದಿನ ಅಸಲಿ ಆರ್ಥಿಕ ಲೆಕ್ಕಾಚಾರವನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಬಹಿರಂಗಪಡಿಸಿದ್ದಾರೆ. ಕೇಂದ್ರದ ಈ ನಿಯಮಾವಳಿಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರಿ ನಷ್ಟ ಉಂಟಾಗಲಿದ್ದು, ಬಸ್ಸುಗಳು ಸಂಚಾರ ನಡೆಸದೆ ಶೆಡ್‌ನಲ್ಲಿ ನಿಂತರೂ ಕೋಟ್ಯಂತರ ರೂಪಾಯಿ ಬಾಡಿಗೆ ಪಾವತಿಸಬೇಕಾದ ಕಠಿಣ ಷರತ್ತುಗಳು ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವರ್ಷಕ್ಕೆ 3,000 ಕೋಟಿ ರೂ. ಬಾಡಿಗೆ, ಕಲೆಕ್ಷನ್ ಮಾತ್ರ 2,000 ಕೋಟಿ ರೂ!

ಒಟ್ಟು 6,000 ಕೋಟಿ ರೂಪಾಯಿ ಮೌಲ್ಯದ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಒಪ್ಪಂದದ ಅಡಿಯಲ್ಲಿ ಪಡೆಯಲು ಪ್ರತಿವರ್ಷ ಅಂದಾಜು 3,000 ಕೋಟಿ ರೂಪಾಯಿ ಬಾಡಿಗೆಯನ್ನು ಖಾಸಗಿ ಆಪರೇಟರ್‌ಗಳಿಗೆ ಪಾವತಿಸಬೇಕಾಗುತ್ತದೆ. ಆದರೆ, ಈ ಬಸ್ಸುಗಳಿಂದ ಬಿಎಂಟಿಸಿಗೆ ವಾರ್ಷಿಕವಾಗಿ ಕೇವಲ 2,000 ಕೋಟಿ ರೂಪಾಯಿ ಮಾತ್ರ ಆದಾಯ ಸಂಗ್ರಹವಾಗಲಿದೆ. ಅಂದರೆ, ಪ್ರತಿವರ್ಷ ಸುಮಾರು 1,000 ಕೋಟಿ ರೂಪಾಯಿ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಒಟ್ಟಾರೆ 7 ವರ್ಷಗಳ ಅವಧಿಗೆ ಬರೋಬ್ಬರಿ 21,000 ಕೋಟಿ ರೂಪಾಯಿ ಬಾಡಿಗೆ ನೀಡಬೇಕಾದ ಹೊಣೆಗಾರಿಕೆ ರಾಜ್ಯದ ಮೇಲಿದ್ದು, ಇದರಲ್ಲಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಪ್ರತಿ ಬಸ್ಸಿಗೆ ಕೇವಲ 30 ರಿಂದ 40 ಲಕ್ಷ ರೂಪಾಯಿ ಮಾತ್ರ ಎಂದು ಸಚಿವರು ವಿವರಿಸಿದ್ದಾರೆ.

ಬಸ್ಸುಗಳು ಕೆಟ್ಟು ನಿಂತರೂ ಹಣ ಪಾವತಿಸಬೇಕು!

ಕೇಂದ್ರದ ನಿಯಮಾವಳಿಗಳ ಪ್ರಕಾರ, ತಾಂತ್ರಿಕ ದೋಷ ಅಥವಾ ರಿಪೇರಿಯಿಂದಾಗಿ ಇ-ಬಸ್ಸುಗಳು ರಸ್ತೆಗೆ ಇಳಿಯದೆ ನಿಂತುಕೊಂಡರೂ ಸಹ ಒಪ್ಪಂದದ ಅನ್ವಯ ನಿಗದಿತ ಬಾಡಿಗೆ ಹಣವನ್ನು ಪಾವತಿಸಲೇಬೇಕು. ‘ಬಸ್ಸುಗಳು ಸಂಚಾರ ನಡೆಸಲಿ ಅಥವಾ ಇಲ್ಲದಿರಲಿ, ನಾವು ಖಾಸಗಿ ಕಂಪನಿಗಳಿಗೆ ವರ್ಷಕ್ಕೆ 2,850 ಕೋಟಿ ರೂಪಾಯಿ ನೀಡಬೇಕು ಎನ್ನುವುದು ಎಷ್ಟು ಸರಿ?’ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ತಿರುಗೇಟು

ಎರಡು ದಿನ ಹಿಂದಷ್ಟೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿ, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ್ದರು. ನಂತರ ಮಾತನಾಡಿ, ಕೇಂದ್ರ ಸರ್ಕಾರ ನೀಡಿರುವ 4,500 ಬಸ್ಸುಗಳ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ಕೇಂದ್ರದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಭೈರತಿ ಸುರೇಶ್, ‘ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಕ್ಕೆಲ್ಲಾ ಉತ್ತರ ಕೊಡಲು ನಾನು ಇಲ್ಲಿ ಕೂತಿಲ್ಲ. ರಾಜ್ಯದ ಹಣಕಾಸು ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Toxic Ladies Teaser: ಬಂದೇ ಬಿಟ್ಟರು ಲೇಡೀಸ್: ‘ಟಾಕ್ಸಿಕ್’ನ ಪವರ್​ಫುಲ್ ಮಹಿಳೆಯರ ಪವರ್​​ಫುಲ್ ಎಂಟ್ರಿ – Kannada News | Toxic movie new teaser released, this time heroines shines

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಮೇಲೆ ಸಿನಿಮಾ ಪ್ರೇಮಿಗಳು ಕಣ್ಣು ನೆಟ್ಟಿದೆ. ಸಿನಿಮಾದ ಬಿಡುಗಡೆಗಾಗಿ ದೇಶ, ವಿದೇಶಗಳ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಪೋಸ್ಟರ್, ಟೀಸರ್​​ಗಳು ಸಾಕಷ್ಟು ಗಮನ ಸೆಳೆದಿವೆ, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿವೆ. ಇದೀಗ ಯಶ್ ಅವರು ಸಿನಿಮಾನಲ್ಲಿ ನಟಿಸಿರುವ ಐವರು ನಾಯಕಿಯರ ವಿಶೇಷ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಯಶ್ ಅವರಂತೆಯೇ ಸಿನಿಮಾದ ನಾಯಕಿಯರ ಪಾತ್ರಗಳು ಸಹ ಬಲು ಪವರ್​​ಫುಲ್ ಆಗಿವೆ.

ಇಂದು (ಜುಲೈ 1) ‘ಟಾಕ್ಸಿಕ್’ ಸಿನಿಮಾದ ಹೊಸ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನ ಆರಂಭದಲ್ಲಿಯೇ ಎಚ್ಚರಿಕೆಯನ್ನು ಸಹ ಚಿತ್ರತಂಡ ನೀಡಿದೆ. ಮಕ್ಕಳು ಈ ಟೀಸರ್​ ನೋಡಬೇಡಿ, ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ ಎಂದು ಪೋಷಕರಿಗೆ, ವಯಸ್ಸಾದವರು ನಿಮ್ಮ ರಿಸ್ಕ್​​ನಲ್ಲಿ ನೋಡಿ ಎಂಬ ಎಚ್ಚರಿಕೆಯನ್ನು ಟೀಸರ್ ನ ಆರಂಭದಲ್ಲಿಯೇ ನೀಡಲಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಿನಿಮಾನಲ್ಲಿ ನಟಿಸಿರುವ ನಾಯಕಿಯರ ಪಾತ್ರಗಳ ಝಲಕ್ ತೋರಿಸಲಾಗಿದೆ. ಕಿಯಾರಾ ಅಡ್ವಾಣಿಯ ಸೌಂದರ್ಯ, ನಯನತಾರಾ ಅವರ ಸಾಹಸ, ರುಕ್ಮಿಣಿ ವಸಂತ್ ಪಾತ್ರದ ಧೈರ್ಯ, ಹುಮಾ ಅವರ ಪಾತ್ರದ ತಂತ್ರ, ತಾರಾ ಸುತಾರಿಯಾ ಪಾತ್ರದ ಬಿಂದಾಸ್ ತನಗಳನ್ನು ಟೀಸರ್​​ನಲ್ಲಿ ತೋರಿಸಲಾಗಿದೆ. ‘ಟಾಕ್ಸಿಕ್’ ಸಿನಿಮಾದ ಕತೆ ಪ್ರಧಾನ ಅಂಶ ಯಶ್ vs ನಾಯಕಿಯರು, ಎಂದು ಸಹ ಈಗ ಬಿಡುಗಡೆ ಆಗಿರುವ ಟೀಸರ್ ಸೂಚನೆ ನೀಡುತ್ತಿದೆ.

ಇದನ್ನೂ ಓದಿ:ಐತಿಹಾಸಿಕ ಸಿನಿಮಾಕ್ಕಾಗಿ 13 ವರ್ಷಗಳ ಬಳಿಕ ಒಂದಾದ ಪ್ರೇಮ್-ಮೇಘನಾ

ಟೀಸರ್​​ನಲ್ಲಿ ಕೆಲವು ದೃಶ್ಯಗಳಲ್ಲಿ ಯಶ್, ನಾಯಕಿಯರೊಡನೆ ಚೆಲ್ಲಾಟ ಆಡುತ್ತಿದ್ದಾರೆ. ಇನ್ನು ಕೆಲವು ದೃಶ್ಯಗಳಲ್ಲಿ ನಾಯಕಿಯರು ಯಶ್ ಅವರನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾರೆ. ಟೀಸರ್​ನ ಕೊನೆಯ ದೃಶ್ಯದಲ್ಲಂತೂ ಹಲವು ಮಹಿಳೆಯರು ಒಂದೇ ರೀತಿ ಬಟ್ಟೆ ತೊಟ್ಟು ಯಶ್ ವಿರುದ್ಧ ಫೈಟಿಂಗ್ ಮಾಡುತ್ತಿದ್ದಾರೆ. ಯಶ್, ನಿರ್ದಯವಾಗಿ ಒಬ್ಬ ಮಹಿಳೆಯ ಬಾಯಿಗೆ ಬಂದೂಕಿಟ್ಟು ಗುಂಡು ಹಾರಿಸುವ ದೃಶ್ಯವೂ ಇದೆ. ಒಟ್ಟಾರೆ, ಈ ಸಿನಿಮಾ, ಮಹಿಳೆ vs ಪುರುಷ ಇದ್ದಂತಿದೆ.

‘ಟಾಕ್ಸಿಕ್’ ಸಿನಿಮಾ ‘ಲೇಡೀಸ್’ ಟೀಸರ್

‘ಟಾಕ್ಸಿಕ್’ ಸಿನಿಮಾನಲ್ಲಿ ಬರೋಬ್ಬರಿ ಐವರು ನಾಯಕಿಯರು ನಟಿಸಿದ್ದಾರೆ. ಸಿನಿಮಾನಲ್ಲಿ ನಯನತಾರಾ ಗಂಗಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ, ಕಿಯಾರಾ ಅಡ್ವಾಣಿ ನಾಡಿಯಾ ಹೆಸರಿನ ಪಾತ್ರ, ತಾರಾ ಸುತಾರಿಯಾ ರೆಬೆಕಾ ಹೆಸರಿನ ಪಾತ್ರ, ಹುಮಾ ಖುರೇಷಿ ಎಲಿಜಬೆತ್ ಹೆಸರಿನ ಪಾತ್ರ ಮತ್ತು ರುಕ್ಮಿಣಿ ವಸಂತ್ ಮೆಲಿಸಾ ಹೆಸರಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರುಗಳು ಮಾತ್ರವೇ ಅಲ್ಲದೆ, ಕೆಲ ವಿದೇಶಿ ನಟಿಯರು ಸಹ ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಕತೆ ನಾಯಕಿ ಪ್ರಧಾನವೇ ಆಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:47 am, Wed, 1 July 26

Source link

ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣ: ಹೇಗಿತ್ತು ಗೊತ್ತಾ ಆರೋಪಿಗಳ ಕಳ್ಳಾಟ? ಸ್ಫೋಟಕ ಮಾಹಿತಿ ರಿವೀಲ್​​ – Kannada News | Ayodhya Ram Mandir Donation Theft: Accused Hide Stolen Cash in Toilets to Avoid CCTV; Crores Looted for Property Purchase

ಲಖನೌ, ಜುಲೈ 01: ರಾಮಮಂದಿರದ ಕಾಣಿಕೆ ಹಣ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಕಳವು ಮಾಡಿದ ಹಣವನ್ನು ಮೊದಲು ಮಂದಿರದ ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಅಡಗಿಸಿಡಲಾಗುತ್ತಿತ್ತು. ನಂತರ ಸೂಕ್ತ ಸಮಯ ಸಿಕ್ಕಾಗ ಅಲ್ಲಿಂದ ಹೊರಗೆ ಸಾಗಿಸಲಾಗುತ್ತಿತ್ತು. ಈ ಮೂಲಕ ಸಿಸಿಟಿವಿ ಕಣ್ಗಾವಲು ತಪ್ಪಿಸಲು ಆರೋಪಿಗಳು ಯೋಜಿತವಾಗಿ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಟ್ರಸ್ಟಿ ಹೆಸರೂ ಪ್ರಸ್ತಾಪ!

ನ್ಯಾಯಾಲಯದ ಅನುಮತಿ ಬಳಿಕ, ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ಅವಿನಾಶ್ ಶುಕ್ಲಾನನ್ನು ಸುಮಾರು ಎರಡು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ಹಣವನ್ನು ಕಳ್ಳತನ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕಳ್ಳತನದ ಸಂಪೂರ್ಣ ವಿಧಾನವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಅವಿನಾಶ್ ಶುಕ್ಲಾ, ಮಂದಿರದ ಟ್ರಸ್ಟಿ ಅನಿಲ್ ಮಿಶ್ರಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದು, ಕಾಣಿಕೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ಹೇಳಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ; ಹಣ ಎಣಿಸುವಾಗ ನಿಯಮಗಳನ್ನು ಹೇಗೆ ಉಲ್ಲಂಘಿಸಲಾಯಿತು?

ಆರೋಪಿ ಹೇಳಿಕೆಯಂತೆ, ಕಾಣಿಕೆ ಹಣ ಎಣಿಕೆ ಕೊಠಡಿಯ ಒಂದು ಕೀ ತಿನ್ನು ಯಾದವ್ ಬಳಿ ಇದ್ದರೆ, ಮತ್ತೊಂದು ಕೀ ಬ್ಯಾಂಕ್ ಸಿಬ್ಬಂದಿ ಬಳಿ ಇತ್ತು. ಕಳ್ಳತನದ ವೇಳೆ ಒಬ್ಬ ವ್ಯಕ್ತಿ ಹಣವನ್ನು ತೆಗೆದುಕೊಳ್ಳುತ್ತಿದ್ದರೆ, ಉಳಿದವರು ಆತನನ್ನು ಸುತ್ತುವರಿದು ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದರು. ಮಂದಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಸ್ಥಳದ ಬಗ್ಗೆ ಆರೋಪಿಗಳಿಗೆ ಸಂಪೂರ್ಣ ಮಾಹಿತಿ ಇದ್ದುದರಿಂದ, ಕ್ಯಾಮೆರಾ ಕಣ್ಣಿಗೆ ಬೀಳದಂತೆ ಹಣವನ್ನು ಸಾಗಿಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಕಳವು ಹಣದಿಂದ ಭೂಮಿ, ಮನೆ ಖರೀದಿ

ಕಳವು ಮಾಡಿದ ಹಣವನ್ನು ಭೂಮಿ ಮತ್ತು ಮನೆ ಖರೀದಿಸಲು ಬಳಸಲಾಗಿದೆ ಎಂದು ಅವಿನಾಶ್ ಶುಕ್ಲಾ ವಿಚಾರಣೆ ವೇಳೆ ಹೇಳಿದ್ದಾನೆ. ಹೀಗಾಗಿ ಆರೋಪಿಗಳ ಆಸ್ತಿ ಹಾಗೂ ಹಣಕಾಸಿನ ವಹಿವಾಟಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದೇಗುಲದ ಹುಂಡಿ ಹಣ ಕಳ್ಳತನ ಆರೋಪದ ಹಿನ್ನೆಲೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ದಾಖಲಾಗುವ ಮೊದಲೇ, ಜೂನ್ 5ರಂದು ಅವಿನಾಶ್ ಶುಕ್ಲಾ ಮನೆಯಿಂದ 58 ಲಕ್ಷವನ್ನು ಟ್ರಸ್ಟ್ ವಶಪಡಿಸಿಕೊಂಡಿತ್ತು ಎಂಬ ಮಾಹಿತಿಯೂ ಈ ವೇಳೆ ಬೆಳಕಿಗೆ ಬಂದಿದೆ. ಇದರಿಂದ, ಕಾನೂನು ಪ್ರಕ್ರಿಯೆ ಆರಂಭವಾಗುವ ಮುನ್ನವೇ ದುರ್ಬಳಕೆಯಾದ ಹಣವನ್ನು ಮರುಪಡೆಯುವ ಪ್ರಯತ್ನಗಳು ನಡೆದಿದ್ದವು ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:48 am, Wed, 1 July 26

Source link

ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ – Kannada News | Jet Fuel, commercial LPG prices down, Nayara slashes petrol, diesel prices

ನವದೆಹಲಿ, ಜುಲೈ 1: ಕಮರ್ಷಿಯಲ್ ಗ್ಯಾಸ್ ಬೆಲೆ (Commercial LPG price) ಇಳಿಕೆ ಬೆನ್ನಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಜೆಟ್ ಇಂಧನದ ಬೆಲೆಗಳನ್ನೂ ತಗ್ಗಿಸಿವೆ. ಖಾಸಗಿ ತೈಲ ಕಂಪನಿಯಾದ ನಯಾರ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಿದೆ. ಪಿಟಿಐ ವರದಿ ಪ್ರಕಾರ, ವಿಮಾನಗಳಿಗೆ ಇಂಧನವಾಗಿ ಬಳಸಲಾಗುವ ಈ ಎಟಿಎಫ್​ನ (Jet Fuel/ ATF) ದರವನ್ನು ಲೀಟರ್​ಗೆ 5 ರೂನಷ್ಟು ಕಡಿಮೆ ಮಾಡಲಾಗಿದೆ. ಈ ಬೆಲೆ ಇಳಿಕೆಯೊಂದಿಗೆ ಜೆಟ್ ಇಂಧನದ ಬೆಲೆ ಲೀಟರ್​ಗೆ 110 ರೂ ಆಗಿದೆ. ನಯಾರ ಎನರ್ಜಿ ಸಂಸ್ಥೆಯು (Nayara Energy) ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 5 ರೂ, ಹಾಗೂ ಡೀಸಲ್ ಬೆಲೆಯನ್ನು 3 ರೂ ಇಳಿಸಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಇಳಿದಿರುವ ಹಿನ್ನೆಲೆಯಲ್ಲಿ ಇದನ್ನು ಕಡಿಮೆ ಮಾಡಲಾಗಿದೆ.

ನಯಾರ ಎನರ್ಜಿ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಪೆಟ್ರೋಲಿಯಂ ದರಗಳನ್ನು ಹೆಚ್ಚಿಸಿತ್ತು. ಈಗ ಹಿಂದಿನ ದರಕ್ಕೆ ಮರಳಿದೆ. ಜಿಯೋ ಬಿಪಿ ಇತ್ಯಾದಿ ಇತರ ಖಾಸಗಿ ಪೆಟ್ರೊಲಿಯಂ ಕಂಪನಿಗಳು ಸದ್ಯಕ್ಕೆ ಬೆಲೆ ಇಳಿಸಿಲ್ಲ. ಮಾರುಕಟ್ಟೆಯ ಹೆಚ್ಚಿನ ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಕೂಡ ಪೆಟ್ರೋಲ್ ಡೀಸಲ್ ಬೆಲೆಯನ್ನು ಇಳಿಸಿಲ್ಲ.

ನಯಾರಾದಲ್ಲಿ ಸರ್ಕಾರಿ ಬಂಕ್​ಗಳಿಗಿಂತಲೂ ಕಡಿಮೆ ಬೆಲೆ

ನಯಾರಾ ಎನರ್ಜಿಯಿಂದ ದರ ಪರಿಷ್ಕರಣೆ ನಂತರ ಬೆಂಗಳೂರಿನಲ್ಲಿ ಅದರ ಔಟ್​ಲೆಟ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 105.93 ರೂಗೆ ಇಳಿದಿದೆ. ಇಂಡಿಯನ್ ಆಯಿಲ್, ಎಚ್​ಪಿ, ಬಿಪಿ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ರೀಟೇಲ್ ಬೆಲೆ 110.89 ರೂ ಇದೆ.

ಇದನ್ನೂ ಓದಿ: ಪೆಟ್ರೋಕೆಮಿಕಲ್ ಉದ್ಯಮ ನಿರಾಳ; ಪ್ರಮುಖ ಕಚ್ಛಾವಸ್ತುಗಳ ಆಮದಿಗೆ ಜುಲೈ 15ರವರೆಗೆ ಕಸ್ಟಮ್ಸ್ ಡ್ಯೂಟಿ ವಿನಾಯಿತಿ

ವಿಮಾನ ಪ್ರಯಾಣ ದರ ಕಡಿಮೆ ಆಗುತ್ತಾ?

ಜೆಟ್ ಇಂಧನದ ಬೆಲೆ ಇಳಿಕೆ ಬಳಿಕ ವಿಮಾನ ಪ್ರಯಾಣಕ್ಕೆ ಟಿಕೆಟ್ ದರ ಕೂಡ ಇಳಿಕೆ ಆಗುತ್ತದಾ ಎನ್ನುವ ನಿರೀಕ್ಷೆ ಹುಟ್ಟಿದೆ. ಇಂಧನ ಬೆಲೆ ಇಳಿದರೆ ಟಿಕೆಟ್ ಬೆಲೆಯನ್ನೂ ಇಳಿಸಬೇಕೆಂಬ ಕಡ್ಡಾಯ ನಿಯಮವೇನಿಲ್ಲ. ತೈಲ ಬೆಲೆ ಹೆಚ್ಚಿದ್ದಾಗ ಎಟಿಎಫ್ ಬೆಲೆಯೂ ಅಧಿಕವಿತ್ತು. ಆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವೈಮಾನಿಕ ಸಂಸ್ಥೆಗಳು ತಮ್ಮ ನಷ್ಟದ ಹೊರೆಯಿಂದ ಚೇತರಿಸಿಕೊಳ್ಳಲು ಈ ಸಂದರ್ಭವನ್ನು ಬಳಸಿಕೊಳ್ಳಬಹುದು. ಒಂದು ವಿಮಾನವು ಸಾಮಾನ್ಯವಾಗಿ ಒಂದು ಕಿಲೋಮೀಟರ್​​ಗೆ 12 ಲೀಟರ್ ಇಂಧನವನ್ನು ವ್ಯಯಿಸುತ್ತದೆ. ವಿಮಾನವು ಪ್ರಯಾಣಿಕರನ್ನು ಭರ್ತಿಯಾಗಿ ತುಂಬಿಸಿಕೊಂಡರೆ ಪ್ರತೀ ವ್ಯಕ್ತಿಯ 20-40 ಕಿಮೀ ಪ್ರಯಾಣಕ್ಕೆ ಒಂದು ಲೀಟರ್ ಇಂಧನ ವ್ಯಯವಾಗುತ್ತದೆ.

ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ

ಇದೇ ವೇಳೆ, ತೈಲ ಮಾರುಕಟ್ಟೆ ಕಂಪನಿಗಳು ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರಗಳನ್ನು ಕಡಿಮೆ ಮಾಡಿವೆ. ಸಾಮಾನ್ಯವಾಗಿ ಬಳಸುವ 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 177 – 184 ರೂನಷ್ಟು ಕಡಿಮೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಮರ್ಷಿಯಲ್ ಎಲ್​ಪಿಜಿ ಬೆಲೆ 3,021 ರೂಗೆ ಇಳಿದಿದೆ. 47.5 ಕಿಲೋದ ಬೃಹತ್ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 441 ರೂಗಳಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: LPG Cylinder Price: ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ! ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್

ಇರಾನ್ ಯುದ್ಧ ಶುರುವಾದ ಬಳಿಕ ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆ ನಾಲ್ಕು ಬಾರಿ ಹೆಚ್ಚಿದ್ದವು. 19 ಕಿಲೋ ಸಿಲಿಂಡರ್ ಬೆಲೆ ಪಡೆದ ಏರಿಕೆ ಒಟ್ಟು 1,374 ರೂ ಆಗಿತ್ತು. ಈ ವರ್ಷ ಇದೇ ಮೊದಲ ಬಾರಿಗೆ ಇದರ ಬೆಲೆ ತಗ್ಗಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ಎಲ್​ಪಿಜಿ ದರಗಳು

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ ಬೆಲೆ: 944.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ ಬೆಲೆ: 350.5- ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಬೆಲೆ: 3,021 ರೂ
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ಬೆಲೆ: 7,548 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಟಗಾರನ ಹೊಡೆದಾಟ… ಕ್ರಿಕೆಟಿಗ ಶಶಾಂಕ್ ಸಿಂಗ್ ವಿರುದ್ಧ FIR ದಾಖಲು – Kannada News | IPL Cricketer Shashank Singh Booked for Assaulting Family Cook

ಪಂಜಾಬ್ ಕಿಂಗ್ಸ್​ ತಂಡದ ಸ್ಟಾರ್ ಆಟಗಾರ ಶಶಾಂಕ್ ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧ ಭೋಪಾಲ್‌ನಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ಅಡುಗೆ ಭಟ್ಟನಿಗೆ ಮೌಖಿಕವಾಗಿ ನಿಂದಿಸಿ, ಹಲ್ಲೆ ನಡೆಸಿದ ಆರೋಪದ ಮೇಲೆ ಶಶಾಂಕ್ ಸಿಂಗ್, ಅವರ ತಂದೆ ಶೈಲೇಶ್ ಸಿಂಗ್ (ನಿವೃತ್ತ ವಿಶೇಷ ಡಿಜಿಪಿ) ಮತ್ತು ಅವರ ಚಾಲಕ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನಲ್ಲೇನಿದೆ?

ಶಶಾಂಕ್ ಸಿಂಗ್ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕಿದ್ದ 31 ವರ್ಷದ ವಿಪೇಂದ್ರ ಸಿಂಗ್ ತೋಮರ್ ಎಂಬುವವರು ರತೀಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಊಟದ ಗುಣಮಟ್ಟದ ವಿಚಾರವಾಗಿ ಮನೆಯಲ್ಲಿ ವಿವಾದ ಉಂಟಾಗಿತ್ತು. ಇದರಿಂದ ಬೇಸತ್ತು ಕೆಲಸ ಬಿಟ್ಟು ಹೋಗಲು ನಿರ್ಧರಿಸಿದಾಗ, ಯಾರನ್ನೂ ಸಂಪರ್ಕಿಸದಂತೆ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಳ್ಳಲಾಯಿತು.

ಭಯದಿಂದ ನಾನು (ವಿಪೇಂದ್ರ ಸಿಂಗ್ ತೋಮರ್) ಕೋಣೆಯೊಂದರಲ್ಲಿ ಬೀಗ ಹಾಕಿಕೊಂಡಾಗ, ಶಶಾಂಕ್ ಸಿಂಗ್, ಅವರ ತಂದೆ ಶೈಲೇಶ್ ಸಿಂಗ್ ಮತ್ತು ಅವರ ಚಾಲಕ ಮಿಶ್ರಾ ಬಾಗಿಲು ಮುರಿದು ಒಳನುಗ್ಗಿ ಕೈ ಮತ್ತು ಮುಷ್ಟಿಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ವಿಪೇಂದ್ರ ಸಿಂಗ್ ತೋಮರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ತೋಮರ್ ಅವರ ಮುಖ ಮತ್ತು ದೇಹದ ಮೇಲೆ ಗಾಯದ ಗುರುತುಗಳು ಇರುವುದು ದೃಢಪಟ್ಟಿದೆ. ಇದರ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ದೌರ್ಜನ್ಯ, ಜಂಟಿ ಕ್ರಿಮಿನಲ್ ಹೊಣೆಗಾರಿಕೆ ಮತ್ತು ಸಾರ್ವಜನಿಕ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಶಶಾಂಕ್ ಸಿಂಗ್ ಸ್ಪಷ್ಟನೆ:

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಶಶಾಂಕ್ ಸಿಂಗ್, ಇವೆಲ್ಲವೂ ಸುಳ್ಳು ಮತ್ತು ಕಲ್ಪಿತ ಕಥೆ ಎಂದು ಹೇಳಿದ್ದಾರೆ.

ವಿಪೇಂದ್ರ ಸಿಂಗ್ ತೋಮರ್ ತನಗೆ ದೊಡ್ಡ ಹೋಟೆಲ್‌ಗಳಲ್ಲಿ ಅಡುಗೆ ಮಾಡಿದ ಅನುಭವವಿದೆ ಎಂದು ಸುಳ್ಳು ಹೇಳಿ ಕೆಲಸಕ್ಕೆ ಸೇರಿದ್ದrಉ. ಆದರೆ ಅವನಿಗೆ ಅಡುಗೆಯ ಪ್ರಾಥಮಿಕ ಜ್ಞಾನವೂ ಇರಲಿಲ್ಲ.

ಅಲ್ಲದೆ ನಮ್ಮ ಮನೆಯ ಬೆಡ್‌ರೂಮ್‌ಗಳಿಗೆ ನುಗ್ಗಿ ಅಲ್ಲಿನ ದುಬಾರಿ ವಾಚ್‌ಗಳು, ಸನ್‌ಗ್ಲಾಸ್‌ಗಳು ಮತ್ತು ವಾರ್ಡ್‌ರೋಬ್‌ಗಳ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.

ಈ ವಿಡಿಯೋಗಳನ್ನು ಡಿಲೀಟ್ ಮಾಡಲು ಹೇಳಿದಾಗ ತಪ್ಪು ಒಪ್ಪಿಕೊಂಡ ತೋಮರ್, ದಯವಿಟ್ಟು ಪೊಲೀಸ್ ಕೇಸ್ ಮಾಡಬೇಡಿ ಎಂದು ಕಾಲು ಹಿಡಿದು ಬೇಡಿಕೊಂಡಿದ್ದ. ಆನಂತರ ಅವನನ್ನು ಗೌರವಯುತವಾಗಿಯೇ ಮನೆಯಿಂದ ಕಳುಹಿಸಲಾಗಿತ್ತು. ಯಾವುದೇ ಹಲ್ಲೆ ಮಾಡಿಲ್ಲ ಎಂದು ಶಶಾಂಕ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Shreyas Iyer: ಐರ್ಲೆಂಡ್ ವಿರುದ್ಧ ಸೋತಿದ್ದಕ್ಕೆ ಮುಜಗರವೇನು ಇಲ್ಲ..!

ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಭೋಪಾಲ್ ಪೊಲೀಸರು ಎರಡೂ ಕಡೆಯ ಹೇಳಿಕೆಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.

Source link

National Doctors Day 2026: ಬದಲಾಗುತ್ತಿರುವ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ? – Kannada News | How Doctors Are Driving The Future Of Healthcare In India

ಭಾರತದ ಆರೋಗ್ಯ ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಅನಾರೋಗ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ಕಾಯಿಲೆಗಳಿಗೆ ಕೇವಲ ಔಷಧ ಮಾತ್ರವಲ್ಲದೆ ಸಮಯಕ್ಕೆ ಸರಿಯಾದ ರೋಗನಿರ್ಣಯ, ವೈಯಕ್ತಿಕ ಆರೈಕೆ ಮತ್ತು ವೈದ್ಯರ ನಿರಂತರ ಮಾರ್ಗದರ್ಶನವನ್ನೂ ನಿರೀಕ್ಷಿಸುತ್ತಿದ್ದಾರೆ. ಉತ್ತಮ ಆರೋಗ್ಯ ಸೇವೆ ತಂತ್ರಜ್ಞಾನದಿಂದ ಮಾತ್ರ ಬರುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ರಾಷ್ಟ್ರೀಯ ವೈದ್ಯರ ದಿನ (National Doctors Day) ಪ್ರಯುಕ್ತ ಈ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಒಳ್ಳೆಯದು.

ಬಹು ತಜ್ಞರ ಸಹಕಾರ ಅಗತ್ಯ

ತಜ್ಞರ ಪ್ರಕಾರ, ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ವಿವಿಧ ವಿಭಾಗಗಳ ವೈದ್ಯರು ಒಟ್ಟಾಗಿ ಕೆಲಸ ಮಾಡಿದರೆ ರೋಗವನ್ನು ನಿಖರವಾಗಿ ಗುರುತಿಸಿ, ರೋಗಿಗೆ ಸೂಕ್ತ ಮಾಹಿತಿ ನೀಡಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ಪ್ರಿವೆಂಟಿವ್ ಸ್ಕ್ರೀನಿಂಗ್‌ಗೆ ಜನರಲ್ಲಿ ಅರಿವು ಮೂಡಿಸುವುದು ರೋಗದ ಭಾರವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ: ಕೆಲಸದ ಒತ್ತಡದಿಂದ ಫರ್ಟಿಲಿಟಿ ಕುಗ್ಗುತ್ತಿದೆಯೇ? ತಜ್ಞರು ಹೇಳಿರುವ ಮಹತ್ವದ ಮಾಹಿತಿ ಇಲ್ಲಿದೆ

ಆಧುನಿಕ ತಂತ್ರಜ್ಞಾನದಿಂದ ಉತ್ತಮ ಚಿಕಿತ್ಸೆ

ಮಿನಿಮಲಿ ಇನ್ವೇಸಿವ್ ಶಸ್ತ್ರಚಿಕಿತ್ಸೆಯಂತಹ ಆಧುನಿಕ ತಂತ್ರಜ್ಞಾನಗಳು ಕಡಿಮೆ ನೋವು, ವೇಗವಾದ ಚೇತರಿಕೆ ಹಾಗೂ ಆಸ್ಪತ್ರೆಯಲ್ಲಿ ಕಡಿಮೆ ದಿನ ಉಳಿಯುವಂತಹ ಪ್ರಯೋಜನಗಳನ್ನು ನೀಡುತ್ತಿವೆ. ಆದರೆ ಉತ್ತಮ ಆರೋಗ್ಯ ಸೇವೆ ತಂತ್ರಜ್ಞಾನದಿಂದ ಮಾತ್ರ ಸಾಧ್ಯವಿಲ್ಲ.

ವೈದ್ಯ–ರೋಗಿ ನಂಬಿಕೆಯೇ ಯಶಸ್ಸಿನ ಗುಟ್ಟು

ರೋಗಿಯೊಂದಿಗೆ ವೈದ್ಯರ ಸ್ಪಷ್ಟ ಸಂವಹನ, ಸರಿಯಾದ ಮಾಹಿತಿ ನೀಡುವುದು ಮತ್ತು ಮಾನವೀಯತೆ ತುಂಬಿದ ಆರೈಕೆ ಚಿಕಿತ್ಸೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಗಂಭೀರ ಕಾಯಿಲೆಗಳಲ್ಲಿ ಸಮಯಕ್ಕೆ ಸರಿಯಾದ ರೋಗನಿರ್ಣಯ, ಸೂಕ್ತ ಚಿಕಿತ್ಸೆ ಹಾಗೂ ಭಾವನಾತ್ಮಕ ಬೆಂಬಲ ಉತ್ತಮ ಫಲಿತಾಂಶಕ್ಕೆ ನೆರವಾಗುತ್ತದೆ. ಆಧುನಿಕ ತಂತ್ರಜ್ಞಾನ, ತಜ್ಞ ವೈದ್ಯರ ಸಹಕಾರ ಮತ್ತು ರೋಗಿಯ ಮೇಲಿನ ಕಾಳಜಿ ಈ ಮೂರರ ಸಮನ್ವಯವೇ ಭವಿಷ್ಯದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ. ವೈದ್ಯರ ಸೇವೆ ಕೇವಲ ಚಿಕಿತ್ಸೆ ನೀಡುವುದಲ್ಲ, ರೋಗಿಗೆ ಆರೋಗ್ಯಕರ ಮತ್ತು ಭರವಸೆಯ ಜೀವನವನ್ನು ನೀಡುವುದಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯಲ್ಲಿ ಬರಗಾಲದ ಭೀತಿ; ಮಳೆರಾಯನನ್ನು ಒಲಿಸಿಕೊಳ್ಳಲು ‘ಕತ್ತೆಗಳ ಮದುವೆ’ ಮಾಡಿದ ಶೇಡಬಾಳ ಗ್ರಾಮಸ್ಥರು – Kannada News | Karnataka Monsoon Failure: Belagavi Farmers Resort to Donkey Marriage Amidst Severe Drought

ಬೆಳಗಾವಿ, ಜು.1: ಸಪ್ತ ನದಿಗಳ ಉಗಮ ಸ್ಥಾನವಾದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಜೂನ್ ತಿಂಗಳು ಕಳೆದು ಜುಲೈ ಆರಂಭವಾದರೂ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಈ ಮಳೆ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಕೃಷ್ಣಾ ನದಿ ತೀರದ ರೈತರು ಹಾಗೂ ಸಾರ್ವಜನಿಕರು ಈಗ ವರುಣ ದೇವನನ್ನು ಪ್ರಸನ್ನಗೊಳಿಸಲು ವಿಶಿಷ್ಟ ಹಾಗೂ ವಿಚಿತ್ರ ಆಚರಣೆಯ ಮೊರೆ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಸಡಗರ-ಸಂಭ್ರಮದಿಂದ ಕತ್ತೆಗಳ ಮದುವೆಯನ್ನು ನೆರವೇರಿಸಿದ್ದಾರೆ. ಕತ್ತೆಗಳ ಮದುವೆ ಮಾಡಿದರೆ ಮಳೆರಾಯ ಕೃಪೆ ತೋರುತ್ತಾನೆ ಎಂಬ ಪುರಾತನ ನಂಬಿಕೆ ಜನರಲ್ಲಿ ಇರುವುದರಿಂದ, ಈ ಶಾಸ್ತ್ರವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಲಾಗಿದೆ. ಮದುಮಗ ಹಾಗೂ ಮದುಮಗಳಂತೆ ಕತ್ತೆಗಳನ್ನು ಸುಂದರವಾಗಿ ಸಿಂಗರಿಸಿ, ಡೊಳ್ಳು-ತಮಟೆಗಳ ವಾದ್ಯ ವೈಭವದೊಂದಿಗೆ ಇಡೀ ಊರಿನ ಪ್ರಮುಖ ಬೀದಿಗಳಲ್ಲಿ ಭರ್ಜರಿ ಮೆರವಣಿಗೆ ನಡೆಸಲಾಯಿತು. ಬಳಿಕ ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಮದುವೆಯ ಶಾಸ್ತ್ರ ಮುಗಿಸಿ ಇಡೀ ಗ್ರಾಮಸ್ಥರು ಮಳೆರಾಯನಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲೂ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂಗಾರು ಮಳೆಯ ಆರಂಭದ ಮುನ್ಸೂಚನೆ ನಂಬಿ ಗಡಿಭಾಗದ ರೈತರು ಸಾಲಸೋಲ ಮಾಡಿ ಜಮೀನುಗಳಲ್ಲಿ ಬಿತ್ತನೆ ಕಾರ್ಯವನ್ನು ಮುಗಿಸಿದ್ದರು. ಆದರೆ ಬಿತ್ತನೆಯಾದ ನಂತರ ಮಳೆ ಸಂಪೂರ್ಣವಾಗಿ ಮಾಯವಾಗಿರುವುದರಿಂದ ಮೊಳಕೆ ಒಡೆಯುತ್ತಿದ್ದ ಪೈರುಗಳು ಒಣಗಲಾರಂಭಿಸಿವೆ. ಇತ್ತ ಕೃಷ್ಣಾ ನದಿಯ ಒಳಹರಿವು ಕಡಿಮೆಯಾಗಿ ಜಲಮೂಲಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. “ಮಳೆ ಬರದಿದ್ದರೆ ನಮ್ಮ ಬದುಕು ಬೀದಿಗೆ ಬೀಳುತ್ತದೆ, ಅದಕ್ಕಾಗಿಯೇ ಶ್ರದ್ಧೆಯಿಂದ ಈ ಆಚರಣೆ ಮಾಡಿದ್ದೇವೆ” ಎಂದು ಕಂಗಾಲಾಗಿರುವ ಶೇಡಬಾಳ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version