ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕೂರೋ ಬೆಂಗಳೂರಿನ ಪುರುಷರ ಲೈಫ್ ಡೇಂಜರ್: ಮಹಿಳೆಯರಿಗಿಂತ ಗಂಡಸರಿಗೆ ಬಿಪಿ, ಶುಗರ್ ಬರೋ ಚಾನ್ಸ್ ಜಾಸ್ತಿ – Kannada News | Bengaluru Men’s Health Crisis: Stress and Lifestyle Fuel BP, Diabetes. Solutions Inside

ಬೆಂಗಳೂರು, ಜೂ.30: ಸಿಲಿಕಾನ್ ಸಿಟಿಯ ಪುರುಷರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಏರುಪೇರಾಗುತ್ತಿರುವುದು ಈಗ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಎನ್‌ಎಫ್‌ಎಚ್‌ಎಸ್ (NFHS) ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಪ್ರಕರಣಗಳು ಅತಿ ವೇಗವಾಗಿ ದಾಖಲಾಗುತ್ತಿವೆ. ಕಚೇರಿಯ ವಿಪರೀತ ಕೆಲಸದ ಒತ್ತಡ, ಟ್ರಾಫಿಕ್ ಕಿರಿಕಿರಿ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಯ ನಡುವೆ ಪುರುಷರು ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವೈದ್ಯರು ಅಲರ್ಟ್ ಘೋಷಿಸಿದ್ದಾರೆ. ಈ ಬಗ್ಗೆ ಕೆ. ಸಿ. ಜನರಲ್ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲಕ್ಷ್ಮಿಪತಿ ಹಾಗೂ ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಅವರು ಕೆಲವೊಂದು ಸಲಹೆ ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ.

ಪುರುಷರಲ್ಲಿ ಬಿಪಿ, ಮಧುಮೇಹ ಹೆಚ್ಚಲು ಪ್ರಮುಖ ಕಾರಣಗಳು:

ಕುಳಿತು ಕೆಲಸ ಮಾಡುವ ಶೈಲಿ: ದಿನವಿಡೀ ಕಚೇರಿಯಲ್ಲಿ ಅಥವಾ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು.

ತೀವ್ರ ಮಾನಸಿಕ ಒತ್ತಡ: ಸಾಫ್ಟ್‌ವೇರ್ ಹಾಗೂ ಕಾರ್ಪೊರೇಟ್ ವಲಯದಲ್ಲಿ ಟಾರ್ಗೆಟ್ (ಗುರಿ) ಸಾಧನೆಯ ಒತ್ತಾಯ, ಟ್ರಾಫಿಕ್ ಸಮಸ್ಯೆ ಹಾಗೂ ಮಾನಸಿಕ ಕಿರಿಕಿರಿ.

ವ್ಯಾಯಾಮದ ಕೊರತೆ: ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ನಿಯಮಿತ ದೈಹಿಕ ಚಟುವಟಿಕೆ ಅಥವಾ ಯೋಗ, ವ್ಯಾಯಾಮ ಇಲ್ಲದಿರುವುದು.

ಅನಾರೋಗ್ಯಕರ ಆಹಾರ ಪದ್ಧತಿ: ಜಂಕ್ ಫುಡ್ ಸಂಸ್ಕೃತಿ, ಅತಿಯಾದ ಎಣ್ಣೆ, ಸಕ್ಕರೆ ಮತ್ತು ಉಪ್ಪಿನಾಂಶವಿರುವ ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ.

ಅಧಿಕ ತೂಕ ಮತ್ತು ಬೊಜ್ಜು: ದೈಹಿಕ ಶ್ರಮವಿಲ್ಲದೆ ದೇಹದ ತೂಕ ಹೆಚ್ಚುತ್ತಿರುವುದು ಬಿಪಿ ಮತ್ತು ಮಧುಮೇಹಕ್ಕೆ ನೇರ ಆಹ್ವಾನ ನೀಡುತ್ತಿದೆ.

ವ್ಯಸನಗಳ ಅಡ್ಡಪರಿಣಾಮ: ಧೂಮಪಾನ ಮತ್ತು ಮದ್ಯಪಾನದ ಚಟಗಳು ರಕ್ತನಾಳಗಳು ಹಾಗೂ ದೇಹದ ಚಯಾಪಚಯ (Metabolism) ಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ.

ಈ ಸದ್ದಿಲ್ಲದ ಕಾಯಿಲೆಗಳು ಹೃದಯಾಘಾತ ಹಾಗೂ ಮೂತ್ರಪಿಂಡಗಳ (ಕಿಡ್ನಿ) ವೈಫಲ್ಯಕ್ಕೆ ಕಾರಣವಾಗುತ್ತಿರುವುದರಿಂದ ಸಾರ್ವಜನಿಕರು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆಯ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಋತುಮತಿ: ಆಹಾರ ಮತ್ತು ಜೀವನಶೈಲಿಯಲ್ಲಿ ಈ ಬದಲಾವಣೆಗಳು ಅಗತ್ಯ

ದಿನಚರಿಯಲ್ಲಿ ಈ ಸರಳ ಬದಲಾವಣೆ ಮಾಡಿ:

ಕಚೇರಿಯಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಪ್ರತಿ 45 ನಿಮಿಷಕ್ಕೊಮ್ಮೆ ಸೀಟಿನಿಂದ ಎದ್ದು 5 ನಿಮಿಷಗಳ ಕಾಲ ಕಚೇರಿಯ ಆವರಣದಲ್ಲೇ ಸಣ್ಣ ವಾಕ್ ಮಾಡಬೇಕು. ಲಿಫ್ಟ್ ಬಳಸುವ ಬದಲು ಕನಿಷ್ಠ 2-3 ಮಹಡಿಗಳನ್ನು ಹತ್ತಲು ಮೆಟ್ಟಿಲುಗಳನ್ನು ಬಳಸಿ. ಇದು ದೇಹದ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಜಂಕ್ ಫುಡ್, ಬೇಕರಿ ತಿಂಡಿ ಹಾಗೂ ಸಂಸ್ಕರಿಸಿದ ಆಹಾರಗಳಿಗೆ ಗುಡ್‌ಬೈ ಹೇಳಿ. ಪ್ರತಿದಿನದ ಊಟದಲ್ಲಿ ಹಸಿರು ಸೊಪ್ಪು, ತರಕಾರಿ, ಬೇಳೆಕಾಳು ಹಾಗೂ ನಾರಿನಾಂಶವಿರುವ (Fibre Rich) ಆಹಾರವನ್ನು ಹೆಚ್ಚಾಗಿ ಬಳಸಿ. ಚಹಾ/ಕಾಫಿಯಲ್ಲಿ ಸಕ್ಕರೆ ಪ್ರಮಾಣ ತಗ್ಗಿಸಿ. ದಿನನಿತ್ಯದ ಅಡುಗೆಯಲ್ಲಿ ಉಪ್ಪಿನ ಬಳಕೆಯನ್ನು ಮಿತಿಗೊಳಿಸುವುದರಿಂದ ರಕ್ತದೊತ್ತಡ ತಾನಾಗಿಯೇ ಹತೋಟಿಗೆ ಬರುತ್ತದೆ.

ಕಾರ್ಪೊರೇಟ್ ಟಾರ್ಗೆಟ್ ಹಾಗೂ ಟ್ರಾಫಿಕ್ ಒತ್ತಡದಿಂದ ಮುಕ್ತಿ ಪಡೆಯಲು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಪ್ರಾಣಾಯಾಮ, ಧ್ಯಾನ ಅಥವಾ ಆಳವಾದ ಉಸಿರಾಟದ ಪ್ರಕ್ರಿಯೆಯನ್ನು ಅಭ್ಯಾಸ ಮಾಡಿ. ಇದು ಮೆದುಳಿಗೆ ಮತ್ತು ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ. ಕೆಟ್ಟ ಚಟಗಳಿಂದ ದೂರವಿರುವುದು ನಿಮ್ಮ ಹೃದಯ ಮತ್ತು ಕಿಡ್ನಿಗಳನ್ನು ದೀರ್ಘಕಾಲದವರೆಗೆ ಯುವ ಜನತೆಯಂತೆ ಸದೃಢವಾಗಿಡುತ್ತದೆ. ಇದರೊಂದಿಗೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯ ನಿದ್ದೆ ಮಾಡುವುದು ಹಾರ್ಮೋನ್‌ಗಳ ಸಮತೋಲನಕ್ಕೆ ಅತಿ ಮುಖ್ಯ. 30 ವರ್ಷ ದಾಟಿದ ಪ್ರತಿಯೊಬ್ಬ ಪುರುಷನೂ ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಾಸ್ಟರ್ ಹೆಲ್ತ್ ಚೆಕಪ್ (ರಕ್ತದ ಪರೀಕ್ಷೆ) ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಬಿಪಿ, ಶುಗರ್ ಪತ್ತೆಯಾದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಆರೋಗ್ಯ ಸುದಗ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆ ಮುಗಿದ 5 ನಿಮಿಷದಲ್ಲೇ 60 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ ಇತಿಹಾಸ ಸೃಷ್ಟಿಸಿದ VTU – Kannada News | Visvesvaraya Technological University (VTU) has created a new record by announcing the results of the 6th semester engineering exam just five minutes after the exam ended

ಬೆಂಗಳೂರು, (ಜೂನ್ 30): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (Visvesvaraya Technological University) 6ನೇ ಸೆಮಿಸ್ಟರ್‌ನ ಇಂಜಿನಿಯರಿಂಗ್ ಪರೀಕ್ಷೆ (Engineering Exam) ಮುಗಿದ ಕೇವಲ 5 ನಿಮಿಷದಲ್ಲಿ ಫಲಿತಾಂಶ (Exam Result) ಪ್ರಕಟಿಸಿದೆ. ಇದರೊಂದಿಗೆ ವಿಟಿಯು (VTU) ಹೊಸ ಇತಿಹಾಸ ನಿರ್ಮಿಸಿದೆ. ಇಂದು (ಜೂನ್ 30) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಇ./ಬಿ.ಟೆಕ್​​ನ 6ನೇ ಸೆಮಿಸ್ಟರ್ ಪರೀಕ್ಷೆ ಆಯೋಜಿಸಲಾಗಿದ್ದು, ಸುಮಾರು 60,856 ವಿದ್ಯಾರ್ಥಿಗಳ ಹಾಜರಾಗಿ ಪರೀಕ್ಷೆ ಬರೆದಿದ್ದರು. ಇಂದು ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5.35ಕ್ಕೆ ವೇಳೆಗ ಅಂದರೆ ಪರೀಕ್ಷೆ ಮುಗಿದ ಐದೇ ನಿಮಿಷದಲ್ಲೇ ಫಲಿತಾಂಶ ಪ್ರಕಟವಾಗಿದೆ.

ಈ ಹಿಂದಿನ ತನ್ನದೇ ದಾಖಲೆ ಮುರಿದ VTU

ಇನ್ನು ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು 21 ದಿನಗಳ ಮುಂಚಿತವಾಗಿಯೇ ಮುಗಿಸಿದ್ದು, ಒಟ್ಟು 76.84 ಫಲಿತಾಂಶ ದಾಖಲಾಗಿದೆ. ಈ ಹಿಂದೆ ವಿಟಿಯು ಅಂತಿಮ ವರ್ಷದ ಫಲಿತಾಂಶವನ್ನು ಕೇವಲ 10 ನಿಮಿಷದಲ್ಲಿ ಪ್ರಕಟಿಸಿ ದಾಖಲೆ ಬರೆದಿತ್ತು, ಇದೀಗ ಪರೀಕ್ಷೆ ಮುಗಿದ 5 ನಿಮಿಷಕ್ಕೆ ಫಲಿತಾಂಶವನ್ನು ಪ್ರಕಟಿಸಿ ಹಳೆ ದಾಖಲೆಯನ್ನು ಮುರಿದಿದೆ. ಡಿಜಿಟಲ್ ಮೌಲ್ಯಮಾಪನ ಹಾಗೂ ತಂತ್ರಜ್ಞಾನ ಬಳಕೆಯಿಂದ ಕಡಿಮೆ ಸಮಯದಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದ್ದು, ವಿಟಿಯು ಸಿಬ್ಬಂದಿ, ಪರೀಕ್ಷಾ ವಿಭಾಗ ಮತ್ತು ಸಂಯೋಜಿತ ಕಾಲೇಜುಗಳ ಸಹಕಾರಕ್ಕೆ ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ.

ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳುವುದೇನು?

ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, “ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುತ್ತಾರೆ. ಹೀಗಾಗಿ ನಾವು ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸಲು ನಿರ್ಧರಿಸಿ, ಆ ಪ್ರಕಾರ ಸಿದ್ಧತೆ ನಡೆಸಿ ಫಲಿತಾಂಶ ಬಿಡುಗಡೆ ಮಾಡಿದ್ದೇವೆ. ಈ ಹಿಂದೆ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು 10 ನಿಮಿಷಗಳ ಒಳಗಾಗಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಸಹಕಾರ ನೀಡಿದ ವಿಟಿಯು ಆಡಳಿತ ಸಿಬ್ಬಂದಿ, ಪರೀಕ್ಷಾ ವಿಭಾಗದ ಸಿಬ್ಬಂದಿ ಮತ್ತು ಸಂಯೋಜಿತ ಕಾಲೇಜುಗಳ ಸಿಬ್ಬಂದಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು.

ಕೆಲ ವಿಶ್ವವಿದ್ಯಾಲಯಗಳು ಪರೀಕ್ಷೆ ಮುಗಿದು ಮುಂದಿನ ಸೆಮಿಸ್ಟರ್ ಕ್ಲಾಸ್​​ಗಳು ಆರಂಭವಾಗಿದ್ದರೂ ಸಹ ರಿಸಲ್ಟ್ ಪ್ರಕಟಿಸಿರಲ್ಲ. ಇಂತಹ ಉದಾಹರಣೆಗಳು ಸಾಕಷ್ಟು ಇವೆ. ಇದಕ್ಕೆ ಪೂರಕವೆಂಬಂತೆ ಗುಲಬರ್ಗಾ ವಿಶ್ವವಿದ್ಯಾಯ ಪರೀಕ್ಷೆಯ ರಿಸಲ್ಟ್​​​​ ಕೊಡುವುದರಲ್ಲಿ ತುಂಬಾ ವಿಳಂಬ. ಈ ಬಗ್ಗೆ ಸಾಕಷ್ಟು ದೂರುಗಳು ಸಹ ಕೇಳಿಬಂದಿವೆ. ಈ ರೀತಿ ಇರುವಾಗ ವಿಟಿಯು ಕೇವಲ ಐದು ನಿಮಿಷಗಳಲ್ಲೇ ಫಲಿತಾಂಶ ನೀಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ 4 ಗಂಟೆ ಪ್ರಧಾನಿ ಮೋದಿ ಮಹತ್ವದ ಸಭೆ – Kannada News | PM Narendra Modi chairs meeting with Secretaries to the Government of India at Seva Teerth

ನವದೆಹಲಿ, ಜೂನ್ 30: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಇಂದು ‘ಸೇವಾ ತೀರ್ಥ’ದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. 4 ಗಂಟೆಗಳ ಕಾಲ ಸುದೀರ್ಘ ಸಭೆಯಲ್ಲಿ ಸುಲಭ ವಾಣಿಜ್ಯ ವಹಿವಾಟು, ಸುಲಭ ಜೀವನೋಪಾಯ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡುವ ಕುರಿತು ಚರ್ಚಿಸಲಾಯಿತು.

ಈ ಮಹತ್ವದ ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಈ ಆದ್ಯತೆಗಳಿಗೆ ಅನುಗುಣವಾಗಿ ತಮ್ಮ ಸಚಿವಾಲಯಗಳು ತೆಗೆದುಕೊಳ್ಳುತ್ತಿರುವ ಪ್ರಮುಖ ಕ್ರಮಗಳ ಬಗ್ಗೆ ವಿವರಿಸಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ತಳಮಟ್ಟದ ಜನರಿಗೆ ತಲುಪಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಹಂಚಿಕೊಂಡರು. ಜೊತೆಗೆ, ಆಯಾ ವಲಯಗಳಲ್ಲಿರುವ ಸವಾಲುಗಳು ಮತ್ತು ಭವಿಷ್ಯದಲ್ಲಿ ಆಡಳಿತ ಹಾಗೂ ಜನಸೇವೆಯನ್ನು ಸುಧಾರಿಸುವ ಕಾರ್ಯತಂತ್ರಗಳನ್ನು ಚರ್ಚಿಸಿದರು.

ಇದನ್ನೂ ಓದಿ: ನಾಳೆ ಭಾರತಕ್ಕೆ ಜಪಾನ್ ಪ್ರಧಾನಿ ಟಕೈಚಿ ಭೇಟಿ; ಮೋದಿ ಜೊತೆ ಮಹತ್ವದ ಮಾತುಕತೆ

ಈ ಸಭೆಯಲ್ಲಿ ಇಡೀ ಸರ್ಕಾರ ಒಂದಾಗಿ ಕೆಲಸ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಪ್ರಧಾನಿ ಮೋದಿ ಒತ್ತಿಹೇಳಿದರು. ಇಲಾಖೆಗಳ ನಡುವಿನ ಕಟ್ಟುಪಾಡುಗಳನ್ನು ಮುರಿಯುವಂತೆ ಕರೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಸರ್ಕಾರದ ವಿವಿಧ ಯೋಜನೆಗಳು ಜನರ ದೈನಂದಿನ ಜೀವನದ ಮೇಲೆ ಬೀರುವ ನೇರ ಮತ್ತು ಸ್ಪಷ್ಟವಾದ ಸಕಾರಾತ್ಮಕ ಪ್ರಭಾವದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಪ್ರಧಾನಮಂತ್ರಿಯವರು ಕಾರ್ಯದರ್ಶಿಗಳಿಗೆ ಕರೆ ನೀಡಿದರು.

ಇದನ್ನೂ ಓದಿ: ಸೆಶೆಲ್ಸ್ ಸಂಸತ್​​ನಲ್ಲಿ ಭಾಷಣ ಮಾಡಿ ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ; ಸಮೋಸಾ, ದೀಪಾವಳಿ, ಗರ್ಭಾ ನೃತ್ಯದ ಮೆಲುಕು

ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಪೂರ್ಣ ಕಾರ್ಯದರ್ಶಿ ಮಟ್ಟದ ಸಭೆಗಳಲ್ಲಿ ಇದೂ ಒಂದಾಗಿದೆ. 2047ರಲ್ಲಿ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಮೋದಿ ಅವರ ದೃಷ್ಟಿಕೋನದ ಅಡಿಯಲ್ಲಿ, ಸರ್ಕಾರವು ದೀರ್ಘಕಾಲೀನ ಸುಧಾರಣೆಗಳ ಮೇಲೆ ತನ್ನ ಗಮನವನ್ನು ತೀವ್ರಗೊಳಿಸುತ್ತಿರುವ ಸಮಯದಲ್ಲಿ ಈ ಸಭೆ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಲಸದ ಒತ್ತಡದಿಂದ ಫರ್ಟಿಲಿಟಿ ಕುಗ್ಗುತ್ತಿದೆಯೇ? ತಜ್ಞರು ಹೇಳಿರುವ ಮಹತ್ವದ ಮಾಹಿತಿ ಇಲ್ಲಿದೆ – Kannada News | How Office Lifestyle Can Impact Male And Female Fertility

ಇಂದಿನ ವೇಗದ ಜೀವನಶೈಲಿ ಮತ್ತು ಉದ್ಯೋಗದ ಒತ್ತಡದಿಂದ ಕುಟುಂಬ ಯೋಜನೆಯನ್ನು ಮುಂದೂಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಹಿಳೆಯರು ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ (Fertility) ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ದೀರ್ಘಕಾಲದ ಮಾನಸಿಕ ಒತ್ತಡ (Stress), ಅನಾರೋಗ್ಯಕರ ಜೀವನಶೈಲಿ ಮತ್ತು ತಡವಾಗಿ ಮಕ್ಕಳ ಯೋಜನೆ ಮಾಡುವುದರಿಂದ ಗರ್ಭಧಾರಣೆಯಲ್ಲಿ ತೊಂದರೆ ಉಂಟಾಗಬಹುದು. ಹಾಗಾದರೆ ಕೆಲಸದ ಒತ್ತಡ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆಯೇ, ಇನ್ನು ಯಾವ ಅಭ್ಯಾಸಗಳು ಅಪಾಯ ಹೆಚ್ಚಿಸುತ್ತವೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉದ್ಯೋಗದ ಒತ್ತಡ ಹೇಗೆ ಪರಿಣಾಮ ಬೀರುತ್ತದೆ?

ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ದೇಹದ ಚಲನೆ ಕಡಿಮೆಯಾಗುತ್ತದೆ. ಇದರಿಂದ ಶ್ರೋಣಿ ಭಾಗದಲ್ಲಿ (Pelvic Area) ರಕ್ತಸಂಚಾರ ಕುಂಠಿತವಾಗಿ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಜೊತೆಗೆ, ರಾತ್ರಿ ತಡವರೆಗೂ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವುದರಿಂದ ನಿದ್ರೆ ಹಾಳಾಗಿ ಮೆಲಟೊನಿನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗಬಹುದು.

ಇದನ್ನೂ ಓದಿ: ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ

ಇನ್ನು ಯಾವ ಅಭ್ಯಾಸಗಳು ಅಪಾಯ ಹೆಚ್ಚಿಸುತ್ತವೆ?

ಅತಿಯಾಗಿ ಕಾಫಿ ಸೇವಿಸುವುದು, ನಿರಂತರ ಒತ್ತಡ, 30 ವರ್ಷಗಳ ನಂತರ ಗರ್ಭಧಾರಣೆಯ ಯೋಜನೆ ಮಾಡುವುದು ಮತ್ತು ಹಾನಿಕಾರಕ ರಾಸಾಯನಿಕಗಳ ಸಂಪರ್ಕವೂ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ. ದೀರ್ಘಕಾಲದ ಒತ್ತಡದಿಂದ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಮಹಿಳೆಯರಲ್ಲಿ ಅಂಡೋತ್ಸರ್ಗದ (Ovulation) ಪ್ರಕ್ರಿಯೆಗೆ ಅಡ್ಡಿಯಾಗಬಹುದು.

ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿಯಂತ್ರಣಕ್ಕೆ ಯೋಗ ಅಥವಾ ಧ್ಯಾನವನ್ನು ರೂಢಿಸಿಕೊಳ್ಳುವುದು ಉತ್ತಮ. ಕುಟುಂಬ ಯೋಜನೆ ಇದ್ದರೆ ತಡ ಮಾಡದೇ ವೈದ್ಯರ ಸಲಹೆ ಪಡೆಯುವುದು ಒಳಿತು. ಕೆಲಸದ ಸ್ಥಳದಲ್ಲಿ ರಾಸಾಯನಿಕಗಳ ಸಂಪರ್ಕವಿದ್ದರೆ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಫಲವತ್ತತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಭಾರತಕ್ಕೆ ಜಪಾನ್ ಪ್ರಧಾನಿ ಟಕೈಚಿ ಭೇಟಿ; ಮೋದಿ ಜೊತೆ ಮಹತ್ವದ ಮಾತುಕತೆ – Kannada News | Japanese PM Sanae Takaichi to visit India on July 1 hold talks with PM Modi on strategic partnership

ನವದೆಹಲಿ, ಜೂನ್ 30: ಜಪಾನ್ ಪ್ರಧಾನಿ ಸನಾ ಇ ಟಕೈಚಿ (Sanae Takaichi) ಅವರು ಜುಲೈ 1 ರಿಂದ ಭಾರತಕ್ಕೆ ತಮ್ಮ ಚೊಚ್ಚಲ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಕೈಗೊಳ್ಳುತ್ತಿರುವ ಅತ್ಯಂತ ಮಹತ್ವದ ವಿದೇಶಿ ಪ್ರವಾಸ ಇದಾಗಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಜಪಾನ್ ಪ್ರಧಾನಿ ನಡೆಸಲಿರುವ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯು ಭಾರತ-ಜಪಾನ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

ಇಂಡೋ-ಪೆಸಿಫಿಕ್ ವಲಯದಲ್ಲಿ ಭೌಗೋಳಿಕ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವ ಈ ಸಮಯದಲ್ಲಿ ಈ ಭೇಟಿ ನಡೆಯುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಪ್ರಭಾವವನ್ನು ಎದುರಿಸಲು ಉಭಯ ದೇಶಗಳ ರಕ್ಷಣಾ ಸಹಕಾರವನ್ನು ಬಲಪಡಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿದೆ. ‘ಕ್ವಾಡ್’ (QUAD – ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ) ಒಕ್ಕೂಟದ ಬದ್ಧತೆಗಳು ಮತ್ತು ಜಂಟಿ ಮಿಲಿಟರಿ ಸಮರಾಭ್ಯಾಸಗಳನ್ನು ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಸೆಶೆಲ್ಸ್ ಸಂಸತ್​​ನಲ್ಲಿ ಭಾಷಣ ಮಾಡಿ ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ; ಸಮೋಸಾ, ದೀಪಾವಳಿ, ಗರ್ಭಾ ನೃತ್ಯದ ಮೆಲುಕು

ಜಪಾನ್ ತಂತ್ರಜ್ಞಾನದ ನೆರವಿನೊಂದಿಗೆ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (ಬುಲೆಟ್ ಟ್ರೈನ್) ಯೋಜನೆಯ ಪ್ರಗತಿಯನ್ನು ಉಭಯ ಪ್ರಧಾನಿಗಳು ಪರಾಮರ್ಶಿಸಲಿದ್ದಾರೆ. ಈ ಯೋಜನೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಮತ್ತು ಭಾರತದ ಇತರ ಮಾರ್ಗಗಳಿಗೂ ಈ ತಂತ್ರಜ್ಞಾನ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ತಂತ್ರಜ್ಞಾನ ವಲಯದಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ. ವಿಶೇಷವಾಗಿ ಸೆಮಿಕಂಡಕ್ಟರ್ (ಚಿಪ್ಸ್) ಉತ್ಪಾದನೆ, ಕೃತಕ ಬುದ್ಧಿಮತ್ತೆ (AI), ಮತ್ತು 6G ನೆಟ್‌ವರ್ಕ್ ತಂತ್ರಜ್ಞಾನಗಳಲ್ಲಿ ಜಪಾನ್ ಹೂಡಿಕೆಯನ್ನು ಭಾರತಕ್ಕೆ ಆಕರ್ಷಿಸುವುದು ಪ್ರಮುಖ ಕಾರ್ಯಸೂಚಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ

ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ‘ಭಾರತ-ಜಪಾನ್ ಕ್ಲೀನ್ ಎನರ್ಜಿ ಪಾರ್ಟ್‌ನರ್‌ಶಿಪ್’ ಅಡಿಯಲ್ಲಿ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ವಾಹನ (EV) ತಂತ್ರಜ್ಞಾನಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಕುರಿತು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಈ ಭೇಟಿ ವೇಳೆ ಭಾರತದ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಕಾರಿಡಾರ್‌ಗಳು ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಜಪಾನ್‌ನ ಬೃಹತ್ ಹೂಡಿಕೆಯನ್ನು ಮುಂದುವರಿಸುವ ಕುರಿತು ಮಾತುಕತೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಟಕೈಚಿ ಅವರು 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಜಂಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದು ನವದೆಹಲಿ ಮತ್ತು ಟೋಕಿಯೊ ನಡುವೆ ಪರ್ಯಾಯವಾಗಿ ನಡೆಯುವ ಉಭಯ ದೇಶಗಳ ನಡುವಿನ ಅತ್ಯುನ್ನತ ಮಟ್ಟದ ಸಂವಾದವಾಗಿದೆ. ಈ ಶೃಂಗಸಭೆಯು ವ್ಯಾಪಾರ, ತಂತ್ರಜ್ಞಾನ, ಮೂಲಸೌಕರ್ಯ, ರಕ್ಷಣಾ ಸಹಕಾರ ಮತ್ತು ಉಭಯ ದೇಶಗಳ ಜನರ ನಡುವಿನ ಪರಸ್ಪರ ವಿನಿಮಯದ ಪ್ರಗತಿಯನ್ನು ಪರಾಮರ್ಶಿಸಲಿದೆ. ಉಭಯ ನಾಯಕರ ಮಾತುಕತೆಯಲ್ಲಿ ಆರ್ಥಿಕ ಸಹಕಾರವೇ ಪ್ರಮುಖವಾಗಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ ಭದ್ರತೆಗೆ ಅತ್ಯಂತ ಪ್ರಮುಖವೆಂದು ಪರಿಗಣಿಸಲಾದ ಸೆಮಿಕಂಡಕ್ಟರ್‌ಗಳು, ಬ್ಯಾಟರಿಗಳು ಮತ್ತು ನಿರ್ಣಾಯಕ ಖನಿಜಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಯನ್ನು ಬಲಪಡಿಸುವಾಗ, ಹೂಡಿಕೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವತ್ತ ಉಭಯ ದೇಶಗಳು ಗಮನ ಹರಿಸಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರ ಭವಿಷ್ಯ: ಈ ರಾಶಿಗೆ ಅದೃಷ್ಟವೋ? ತಾಳ್ಮೆಯ ಪರೀಕ್ಷೆಯೋ?: ಕಚೇರಿಯಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ ತರಲಿರುವ ವಾರ ಭವಿಷ್ಯ – Kannada News | June 28 July 4, 2026 Zodiac Forecast: Career, Luck and Problem Solutions

2026ರ ಜೂನ್ 28ರಿಂದ ಜುಲೈ 4ರವರೆಗಿನ ಗ್ರಹಗತಿ ಆಧಾರಿತ ಈ ವಾರದ ರಾಶಿ ಭವಿಷ್ಯ, ನಿಮ್ಮ ವ್ಯವಹಾರ, ಕೌಟುಂಬಿಕ ಜೀವನ ಮತ್ತು ವೃತ್ತಿಯಲ್ಲಿನ ಏರಿಳಿತಗಳನ್ನು ವಿಶ್ಲೇಷಿಸುತ್ತದೆ. ಕೀರ್ತಿಯ ಆಸೆ, ಪ್ರಶಸ್ತಿಗಳ ಪ್ರಯತ್ನಗಳು ಸಫಲವಾಗುವ ಸಾಧ್ಯತೆ, ಹಾಗೂ ಹಲವು ಸಮಸ್ಯೆಗಳು ಮಾಯವಾಗಿ ಸಕಾರಾತ್ಮಕ ಬದಲಾವಣೆಗಳು ಮೂಡಲಿವೆ. ಈ ವಾರ ಅದೃಷ್ಟದ ಅವಕಾಶಗಳು ಮತ್ತು ನೆಮ್ಮದಿಯ ಕ್ಷಣಗಳನ್ನು ಒದಗಿಸಲಿದೆ.

2026ರ ಜೂನ್ 28ರಿಂದ ಜುಲೈ ,04ರವರೆಗೆ ಆಗುವ ಗ್ರಹಗತಿ ಆಧಾರದ ಮೇಲೆ ವ್ಯವಹಾರ, ಕೌಟುಂಬಿಕ ಅಸಮತೋಲನ, ಕೀರ್ತಿಯ ಆಸೆ, ಪ್ರಶಸ್ತಿಗೆ ಪ್ರಯತ್ನ, ಸಮಸ್ಯೆಗಳು ಕಾಣದಂತೆ ಮಾಯ ಇವೆಲ್ಲ ಈ ವಾರದ ವಿಶೇಷತೆಗಳಾಗಿವೆ.

​ಮೇಷ ರಾಶಿ

​ಮಂಗಳನ ದಿವ್ಯ ದೃಷ್ಟಿಯಿಂದ ಧೈರ್ಯದ ಕಾರಂಜಿ ಚಿಮ್ಮಲಿದೆ. ಉದ್ಯೋಗದ ಹಾದಿಯಲ್ಲಿ ಸುವರ್ಣಾವಕಾಶಗಳ ಹೊಸ ಮುಂಜಾವು ಮೂಡಲಿದ್ದು, ಹಳೆಯ ಕಷ್ಟದ ಮೋಡಗಳು ಕರಗಲಿವೆ. ಬದುಕಿನ ತೋಟದಲ್ಲಿ ಹರ್ಷದ ಹೂವುಗಳು ಅರಳುವವು. ಕುಟುಂಬದ ಜೊತೆ ಕಳೆಯುವ ಸುಂದರ ಕ್ಷಣಗಳು ಮನಸ್ಸಿಗೆ ಅಪಾರ ನೆಮ್ಮದಿ ನೀಡಿ, ಆರ್ಥಿಕತೆಗೆ ಹೊಸ ಚೈತನ್ಯ ತರಲಿವೆ.

ವೃಷಭ ರಾಶಿ

​ನಿಮ್ಮ ರಾಶಿಯಲಿರುವ ಮಂಗಳನು ಆತುರಕ್ಕೆ ಒಲಿಯನು, ತಾಳ್ಮೆಯೇ ಯಶಸ್ಸಿನ ಮಂತ್ರ. ಆರ್ಥಿಕ ಪ್ರಗತಿಯ ತಂಗಾಳಿ ಬೀಸಲಿದ್ದು, ವ್ಯಾಪಾರದ ಹೊಸ ಹೂಡಿಕೆಗೆ ಸುಂದರ ಸಮಯವಿದು. ಪ್ರೀತಿಪಾತ್ರರ ಮಧುರ ಒಡನಾಟವು ಜೀವನವನ್ನು ರಮಣೀಯವಾಗಿಸಲಿದೆ. ಆರೋಗ್ಯದ ಕಡೆಗೆ ಕೊಂಚ ನಿಗಾವಹಿಸಿ, ಉಳಿದಂತೆ ಈ ವಾರ ಸೌಭಾಗ್ಯದ ಹೊನಲು ನಿಮ್ಮ ಮನೆಮನಗಳಲ್ಲಿ ಹರಿಯಲಿದೆ.

ಮಿಥುನ ರಾಶಿ

​ಸೂರ್ಯನು ನಿಮ್ಮ ರಾಶಿಯಲ್ಲೇ ಹೊಳೆಯುತ್ತಾ ಕೀರ್ತಿಯ ಬೆಳಕನ್ನು ಚೆಲ್ಲಲಿದ್ದಾನೆ. ನಿಮ್ಮ ಮಾತುಗಳ ಮಧುರ ಚತುರತೆಯು ಕಚೇರಿಯಲ್ಲಿ ಎಲ್ಲರ ಹೃದಯ ಗೆಲ್ಲುವುದು. ದೀರ್ಘಕಾಲದ ಕನಸುಗಳು ನನಸಾಗುವ ಸುಂದರ ಹಾದಿ ತೆರೆಯಲಿದೆ. ಆರ್ಥಿಕ ಇಕ್ಕಟ್ಟುಗಳು ಕರಗಿ, ಮನದಲ್ಲಿ ನೆಮ್ಮದಿಯ ರಾಗ ಮೂಡಲಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸಿನ ಸವಿಫಲ ಸಿಗಲಿದೆ.

​ಕರ್ಕಾಟಕ ರಾಶಿ

​ಗುರು ಮತ್ತು ಬುಧರ ಸುಂದರ ಮಿಲನವು ನಿಮ್ಮ ರಾಶಿಗೆ ಬುದ್ಧಿಶಕ್ತಿಯ ಅಮೃತಧಾರೆಯನ್ನೇ ಎರೆಯಲಿದೆ. ಉದ್ಯೋಗದಲ್ಲಿ ಬಡ್ತಿಯ ಯೋಗವಿದ್ದು, ಸಮಾಜದಲ್ಲಿ ಗೌರವ ದುಪ್ಪಟ್ಟಾಗಲಿದೆ. ಮನೆಯಂಗಳದಲ್ಲಿ ಹಬ್ಬದ ಸಡಗರದ ವಾತಾವರಣವಿರಲಿದ್ದು, ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಶಾಂತಿಯನ್ನು ನೀಡಲಿವೆ. ಕೈಕೊಳ್ಳುವ ಪ್ರತಿಯೊಂದು ನಿರ್ಧಾರವೂ ರಮಣೀಯ ಯಶಸ್ಸನ್ನು ತಂದುಕೊಡಲಿದೆ.

ಸಿಂಹ ರಾಶಿ

​ಶುಕ್ರ ಹಾಗೂ ಕೇತುವಿನ ಸಾನ್ನಿಧ್ಯವು ಭೌತಿಕ ಸುಖ ಹಾಗೂ ಆಧ್ಯಾತ್ಮದ ಅದ್ಭುತ ಸಮನ್ವಯ ತರಲಿದೆ. ಸೃಜನಶೀಲ ಕಲಾ ಲೋಕದಲ್ಲಿ ನಿಮ್ಮ ಕೀರ್ತಿ ಪತಾಕೆ ಹಾರಲಿದೆ. ಹಳೆಯ ಸ್ನೇಹಿತರ ಮಧುರ ಭೇಟಿಯು ಬಾಲ್ಯದ ನೆನಪುಗಳನ್ನು ಮರುಕಳಿಸುವುದು. ಆರ್ಥಿಕವಾಗಿ ವೆಚ್ಚಗಳು ಹೆಚ್ಚಾಗಬಹುದಾದರೂ, ಆದಾಯದ ರಮಣೀಯ ಹರಿವು ನಿಮ್ಮ ಕೈಹಿಡಿದು ಮುನ್ನಡೆಸಲಿದೆ.

ಕನ್ಯಾ ರಾಶಿ

​ಸವಾಲುಗಳ ಕಲ್ಲುಬಂಡೆಗಳ ನಡುವೆಯೂ ಈ ವಾರ ಯಶಸ್ಸಿನ ತಾವರೆ ಅರಳಲಿದೆ. ಕಠಿಣ ಪರಿಶ್ರಮಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆಯ ಹೂಮಳೆ ಸಿಗಲಿದೆ. ಆಸ್ತಿ ಅಥವಾ ಹೊಸ ವಾಹನ ಖರೀದಿಯ ಯೋಗ ಕೂಡಿಬರಲಿದೆ. ಹಠಾತ್ ಧನಲಾಭವು ಆರ್ಥಿಕ ಸಂಕಷ್ಟಗಳನ್ನು ಕರಗಿಸಲಿದೆ. ನಕಾರಾತ್ಮಕ ಚಿಂತನೆಗಳನ್ನು ದೂಗಿಸಿ, ಆತ್ಮವಿಶ್ವಾಸದಿಂದ ಮುನ್ನಡೆದರೆ ವಿಜಯಲಕ್ಷ್ಮಿ ಒಲಿಯುವಳು.

ತುಲಾ ರಾಶಿ

​ಮನದ ದ್ವಂದ್ವಗಳ ಮಂಜು ಮುಸುಕಿದ ವಾತಾವರಣ ಸಿದ್ಧಿಗೆದ್ದು ಸ್ಪಷ್ಟತೆಯ ಬೆಳಕು ಮೂಡಲಿದೆ. ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಸುಲಭವಾಗಿ ಪೂರ್ಣಗೊಂಡು ನೆಮ್ಮದಿ ತರಲಿವೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭದ ಅಮೃತ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿಯ ಸಾಮರಸ್ಯ ಮೂಡಲಿದ್ದು, ಸಂಗಾತಿಯ ಸುಂದರ ಸಹಕಾರವು ಬದುಕಿನ ಹಾದಿಯನ್ನು ರಮಣೀಯವಾಗಿಸಲಿದೆ.

ವೃಶ್ಚಿಕ ರಾಶಿ

​ಭಾಗ್ಯಸ್ಥಾನದ ಗ್ರಹಗಳ ಒಲುಮೆಯಿಂದ ಅದೃಷ್ಟದ ಹೊಸ ಮುಂಜಾವು ನಿಮ್ಮನ್ನು ಆಲಿಂಗಿಸಲಿದೆ. ನಿರುದ್ಯೋಗಿಗಳಿಗೆ ಸುಂದರ ಉದ್ಯೋಗದ ಶುಭ ಸಮಾಚಾರ ಸಿಗಲಿದೆ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದ್ದು, ಧನಲಕ್ಷ್ಮಿಯ ಕೃಪೆ ಸದಾ ಇರಲಿದೆ. ಹಳೆಯ ಆರೋಗ್ಯದ ಏರುಪೇರುಗಳು ಸುಧಾರಿಸಿ, ಮನದಲ್ಲಿ ನವೋತ್ಸಾಹದ ರಂಗು ಮೂಡಲಿದ್ದು ಸವಾಲುಗಳು ತಾವಾಗಿಯೇ ಕರಗಲಿವೆ.

ಧನು ರಾಶಿ

​ವ್ಯಕ್ತಿತ್ವದಲ್ಲಿ ಅದ್ಭುತ ಆಕರ್ಷಣೆಯ ತೇಜಸ್ಸು ಮೂಡಲಿದೆ. ನಿಮ್ಮ ನಾಯಕತ್ವದ ಗುಣವು ಕಚೇರಿಯಲ್ಲಿ ಎಲ್ಲರ ಗೌರವಕ್ಕೆ ಪಾತ್ರವಾಗಲಿದೆ. ಹೊಸ ಸುಂದರ ಯೋಜನೆಗಳಿಗೆ ಚಾಲನೆ ನೀಡಲು ಇದು ಪ್ರಶಸ್ತ ಸಮಯ. ಆರ್ಥಿಕ ತೊಂದರೆಗಳು ನಿವಾರಣೆಯಾಗಿ, ದೂರದ ಪ್ರಯಾಣದಿಂದ ಧನಲಾಭವಾಗಲಿದೆ. ಕೌಟುಂಬಿಕ ಸುಖ ನೆಮ್ಮದಿ ಸದಾ ಕಾಯಲಿದೆ.

ಇದನ್ನೂ ಓದಿ: ಜುಲೈನಲ್ಲಿ ‘ತ್ರಿಗ್ರಹ ಯೋಗ’; ಈ 5 ರಾಶಿಯವರಿಗೆ ಒಲಿಯಲಿದೆ ಅಪಾರ ಧನಸಂಪತ್ತು ಮತ್ತು ಕೀರ್ತಿ!

ಮಕರ ರಾಶಿ

​ವ್ಯವಹಾರದ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಗ್ರಹಬಲವು ರಮಣೀಯವಾಗಿ ಕೈಜೋಡಿಸಿದೆ. ಹಿರಿಯರ ದಿವ್ಯ ಮಾರ್ಗದರ್ಶನದಿಂದ ಅಪಾರ ಲಾಭ ಪಡೆಯುವಿರಿ. ಕಚೇರಿಯ ವಿವಾದಗಳು ಸುಖಾಂತ್ಯಗೊಂಡು ನೆಮ್ಮದಿ ತರಲಿವೆ. ಕೌಟುಂಬಿಕ ಭಿನ್ನಾಭಿಪ್ರಾಯಗಳ ಮಳೆ ನಿಂತು, ಪ್ರೀತಿಯ ಮಧುರ ವಾತಾವರಣ ಸೃಷ್ಟಿಯಾಗಲಿದೆ. ಆರ್ಥಿಕ ಸ್ಥಿತಿ ಭದ್ರವಾಗಿದ್ದು ನವ ಹೂಡಿಕೆಗೆ ಸುಸಮಯ.

ಕುಂಭ ರಾಶಿ

​ಚಂದ್ರ ಮತ್ತು ರಾಹುವಿನ ಜುಗಲ್ಬಂದಿಯಿಂದ ಮನಸ್ಸು ಕೊಂಚ ಚಂಚಲವಾದರೂ, ತಾಳ್ಮೆಯ ಹರಿವು ನಿಮ್ಮನ್ನು ಕಾಯಲಿದೆ. ಉದ್ಯೋಗದಲ್ಲಿನ ನಿರಂತರ ಶ್ರಮಕ್ಕೆ ವಾರಾಂತ್ಯದಲ್ಲಿ ಯಶಸ್ಸಿನ ಸಿಹಿ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಲಗಾಮು ಹಾಕುವುದು ಒಳಿತು. ಹಿರಿಯರ ಆರೋಗ್ಯದ ಕಡೆಗೆ ಕಾಳಜಿಯಿರಲಿ, ಧನಾತ್ಮಕ ಚಿಂತನೆಗಳೇ ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ರಮಣೀಯವಾಗಿ ತಲುಪಿಸಲಿವೆ.

ಮೀನ ರಾಶಿ

​ನಿಮ್ಮ ರಾಶಿಯಲ್ಲಿರುವ ಶನಿದೇವನು ಕಠಿಣ ಪರಿಶ್ರಮದ ಶಿಸ್ತನ್ನು ಬಯಸುತ್ತಿದ್ದಾನೆ. ತಾಳ್ಮೆಯಿಂದ ಹೆಜ್ಜೆಯಿಟ್ಟರೆ ವಾರಾಂತ್ಯದಲ್ಲಿ ಯಶಸ್ಸಿನ ಸವಿಫಲ ನಿಮ್ಮ ಮುಡಿಗೇರಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗಲಿದೆ. ಹಠಾತ್ ಧನಲಾಭದ ಸುಂದರ ಯೋಗವಿದ್ದು, ಆರ್ಥಿಕ ಸಂಕಷ್ಟಗಳು ದೂರಾಗಲಿವೆ. ಸಂಗಾತಿಯ ಪ್ರೀತಿಯ ಆಸರೆ ಬದುಕಿಗೆ ಹೊಸ ಚೈತನ್ಯ ನೀಡಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಚಿತ್ರಕ್ಕೆ ನಂ.1 ಸ್ಥಾನ; 2026ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅಬ್ಬರ – Kannada News | Rocking Star Yash Toxic Ramayana IMDb Most Anticipated Indian movies 2026 List

ಮುಂಬರುವ ತಿಂಗಳುಗಳಲ್ಲಿ ತೆರೆಕಾಣಲಿರುವ ಭಾರತೀಯ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಜಗತ್ತಿನ ಹೆಸರಾಂತ ಸಿನಿಮಾ ವೆಬ್‌ಸೈಟ್ ಐಎಂಡಿಬಿ (IMDb) 2026ರ ದ್ವಿತೀಯಾರ್ಧದ ‘ಟಾಪ್ 20 ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ’ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ‘ಕಿಂಗ್’ ಅಥವಾ ಆಲಿಯಾ ಭಟ್ ಅವರ ‘ಆಲ್ಫಾ’ ಚಿತ್ರಗಳನ್ನು ಹಿಂದಿಕ್ಕಿ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನ ‘ರಾಮಾಯಣ: ಪಾರ್ಟ್ 1’ (Ramayana: Part 1) ಮೊದಲ ಸ್ಥಾನ ಪಡೆದುಕೊಂಡಿದೆ. ವಿಶೇಷ ಎಂದರೆ, ಈ ಪಟ್ಟಿಯ ಟಾಪ್ 3 ಸ್ಥಾನಗಳಲ್ಲಿ ಕನ್ನಡದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಎರಡು ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.

2026ರ ಮೊದಲಾರ್ಧದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಭಾಷೆಗಳ ಕೆಲವು ಸಿನಿಮಾಗಳು ಅಬ್ಬರಿಸಿವೆ. ರಣವೀರ್ ಸಿಂಗ್ ನಟನೆಯ ‘ಧುರಂಧರ್’, ಸೂರ್ಯ ಅಭಿನಯದ ‘ಕರುಪ್ಪು’, ಸನ್ನಿ ಡಿಯೋಲ್ ಅವರ ‘ಬಾರ್ಡರ್ 2’ ಮುಂತಾದ ಬಿಗ್ ಬಜೆಟ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಈಗ ವರ್ಷದ ದ್ವಿತೀಯಾರ್ಧದ ಸರದಿ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ ‘ರಾಮಾಯಣ: ಪಾರ್ಟ್ 1’ ಸಿನಿಮಾ ನಂಬರ್ ಸ್ಥಾನದಲ್ಲಿದ್ದು, ದೇಶಾದ್ಯಂತ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿದೆ. ಆಲಿಯಾ ಭಟ್ ಮತ್ತು ಶರ್ವರಿ ಮುಖ್ಯ ಪಾತ್ರದಲ್ಲಿರುವ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಆ್ಯಕ್ಷನ್ ಥ್ರಿಲ್ಲರ್ ‘ಆಲ್ಫಾ’ ಸಿನಿಮಾ ಎರಡನೇ ಸ್ಥಾನದಲ್ಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಗ್ಯಾಂಗ್‌ಸ್ಟರ್ ಡ್ರಾಮಾ ‘ಟಾಕ್ಸಿಕ್’ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಕಿಂಗ್’ ಸಿನಿಮಾ 4ನೇ ಸ್ಥಾನದಲ್ಲಿದ್ದರೆ, ಅಜಯ್ ದೇವಗನ್ ಅವರ ಕಾಮಿಡಿ ಎಂಟರ್‌ಟೈನರ್ ‘ಧಮಾಲ್ 4’ ಚಿತ್ರವು 5ನೇ ಸ್ಥಾನ ಪಡೆದಿದೆ. ಅಜಯ್ ದೇವಗನ್ ಮತ್ತು ಟಬು ನಟನೆಯ ‘ದೃಶ್ಯಂ 3’ ಸಿನಿಮಾ 6ನೇ ಸ್ಥಾನದಲ್ಲಿದೆ. ತಮಿಳು ನಟ ಸೂರ್ಯ ಅವರ ‘ವಿಶ್ವನಾಥ್ ಆ್ಯಂಡ್ ಸನ್ಸ್’ 7ನೇ ಸ್ಥಾನದಲ್ಲಿದೆ.

ಒಟಿಟಿಯಲ್ಲಿ ಧೂಳೆಬ್ಬಿಸಿ ಈಗ ಬೆಳ್ಳಿಪರದೆಗೆ ಬರಲಿರುವ ಪಂಕಜ್ ತ್ರಿಪಾಠಿ ಅವರ ‘ಮಿರ್ಜಾಪುರ್: ದಿ ಮೂವೀ’ 8ನೇ ಸ್ಥಾನ ಪಡೆದಿದೆ. ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ 9ನೇ ಸ್ಥಾನ ಹಾಗೂ ಶ್ರದ್ಧಾ ಕಪೂರ್ ಅವರ ‘ಈಠಾ’ ಚಿತ್ರವು 10ನೇ ಸ್ಥಾನ ಪಡೆದುಕೊಂಡಿವೆ. ಇಮ್ರಾನ್ ಹಶ್ಮಿಯ ನಟನೆಯ ‘ಆವಾರಪನ್ 2’ ಸಿನಿಮಾಗೆ 11ನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ಮುಂದಿನ ಚಿತ್ರದಲ್ಲಿ ಯಶ್​ಗೆ ಪೊಲೀಸ್ ಪಾತ್ರ? ಐಎಂಡಿಬಿಯಲ್ಲಿ ಲೀಕ್ ಆಯ್ತು ಕಥೆ

ಸನ್ನಿ ಡಿಯೋಲ್ ಅವರ ‘ಇಕ್ಕಾ’ (12ನೇ ಸ್ಥಾನ), ತಮಿಳು ನಟ ಸಿಂಬು ಅವರ ‘ಅರಸನ್’ (13ನೇ ಸ್ಥಾನ), ಪೃಥ್ವಿರಾಜ್ ಸುಕುಮಾರನ್ ಅವರ ‘ಖಲೀಫಾ’ (14ನೇ ಸ್ಥಾನ) ಮತ್ತು ದುಲ್ಕರ್ ಸಲ್ಮಾನ್ ಅವರ ‘ಐ ಆಮ್ ಗೇಮ್’ (15ನೇ ಸ್ಥಾನ) ಪಡೆದಿವೆ. ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ 16ನೇ ಸ್ಥಾನದಲ್ಲಿದ್ದರೆ, ಮ್ಯಾಡಾಕ್ ಹಾರರ್ ಯೂನಿವರ್ಸ್‌ನ ‘ಶಕ್ತಿ ಶಾಲಿನಿ’ 17ನೇ ಸ್ಥಾನದಲ್ಲಿದೆ. ಕೊನೆಯ ಮೂರು ಸ್ಥಾನಗಳಲ್ಲಿ ‘ಹೃದಯಂ ಮುರಳಿ’, ‘ಸಿಗ್ಮಾ’ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ವನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಸಿನಿಮಾಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯ: ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ; ಕೋರ್ಟ್ ಆದೇಶದೊಂದಿಗೆ ಬಂದು ಪೀಠೋಪಕರಣ ಹೊತ್ತೊಯ್ದ ರೈತರು – Kannada News | Court Order Enforcement: Mandya Farmers Seize Special Land Acquisition Office for Hemavathi Compensation

ಮಂಡ್ಯ, ಜೂನ್ 30: ಭೂಮಿ ಕಳೆದುಕೊಂಡು 15 ವರ್ಷ ಕಳೆದರೂ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಉಡಾಫೆ ಧೋರಣೆಗೆ ಬೇಸತ್ತ ರೈತರು, ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಬಂದು ಸರ್ಕಾರಿ ಕಚೇರಿಯನ್ನೇ ಜಪ್ತಿ (Attachment of Government Office) ಮಾಡಿರುವ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲಾಧಿಕಾರಿ (DC) ಕಚೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯನ್ನು ವಕೀಲರ ಸಮ್ಮುಖದಲ್ಲಿ ರೈತರು ಇಂದು ಜಪ್ತಿ ಮಾಡಿದ್ದಾರೆ. ಹೇಮಾವತಿ ನಾಲೆ ನಿರ್ಮಾಣ ಕಾಮಗಾರಿಗಾಗಿ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಗೆ ಒಳಪಡುವ ಮತ್ತಿಕೆರೆ, ಚಿಕ್ಕಾಡಿಗನಹಳ್ಳಿ, ಬೀರಚಳ್ಳಿ ಸೇರಿದಂತೆ ಸುಮಾರು 15 ಹಳ್ಳಿಗಳ ರೈತರ ಜಮೀನನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದರು. ಆದರೆ, ಭೂಮಿ ವಶಪಡಿಸಿಕೊಂಡು 15 ವರ್ಷ ಕಳೆದರೂ ರೈತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸರಿಯಾದ ಪರಿಹಾರವನ್ನು ನೀಡಿರಲಿಲ್ಲ. ಅಧಿಕಾರಿಗಳ ಈ ವಂಚನೆಯ ವಿರುದ್ಧ ಅನ್ನದಾತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ ಅಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದೆ ಉಡಾಫೆ ಪ್ರದರ್ಶಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೈತರು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹೇಮಾವತಿ ನೀರಾವರಿ ಕಚೇರಿಯನ್ನು ಜಪ್ತಿ ಮಾಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ಇಲಾಖೆ ತಮಗೆ ಬರಬೇಕಾದ ಹಣ ಬಿಡುಗಡೆ ಮಾಡದಿದ್ದಾಗ, ರೈತರು ಮತ್ತೊಮ್ಮೆ ತೀವ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ವಕೀಲರೊಂದಿಗೆ ಮಂಡ್ಯ ಡಿಸಿ ಕಚೇರಿ ಆವರಣದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ನೇರವಾಗಿ ಎಂಟ್ರಿ ಕೊಟ್ಟ ರೈತರು, ನ್ಯಾಯಾಲಯದ ಜಪ್ತಿ ಆದೇಶದ ಪ್ರತಿಯನ್ನು ಅಧಿಕಾರಿಗಳ ಕೈಗಿಟ್ಟಿದ್ದಾರೆ. ಬಳಿಕ ಕಚೇರಿಯಲ್ಲಿದ್ದ ಸರ್ಕಾರಿ ಪೀಠೋಪಕರಣಗಳು, ಕಂಪ್ಯೂಟರ್, ಕುರ್ಚಿ ಹಾಗೂ ಮೇಜುಗಳನ್ನು ತಾವೇ ಖುದ್ದಾಗಿ ಹೊರಗೆ ಹೊತ್ತು ತಂದು ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ಈ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಹಾಗೂ ಸರ್ಕಾರಿ ಅಧಿಕಾರಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನಲ್ಲಿ ಭೀಕರ ದುರಂತ; ಶಾಲಾ ಬಸ್ ಮೇಲೆ ದೊಡ್ಡ ಮರ ಬಿದ್ದು 11 ವರ್ಷದ ವಿದ್ಯಾರ್ಥಿ ಸಾವು – Kannada News | Mumbai 11 Year Old Student Dies after tree falls on school bus 4 Injured

ಮುಂಬೈ, ಜೂನ್ 30: ಮುಂಬೈನ ಚೆಂಬೂರ್ ಉಪನಗರದಲ್ಲಿ ಇಂದು (ಜೂನ್ 30) ಭೀಕರ ಅಪಘಾತವೊಂದು (Mumbai Accident) ಸಂಭವಿಸಿದೆ. ಚಲಿಸುತ್ತಿದ್ದ ಶಾಲಾ ಬಸ್ಸಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮದಿಂದ 11 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಸ್​​ನಲ್ಲಿ ಒಟ್ಟು 18 ಮಕ್ಕಳಿದ್ದರು. ಸ್ಥಳೀಯ ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಚೆಂಬೂರ್‌ನ ಪ್ರಮುಖ ರಸ್ತೆಯೊಂದರಲ್ಲಿ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಲಿಸುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಇದ್ದಕ್ಕಿದ್ದಂತೆ ಬುಡಸಮೇತ ಬಸ್ಸಿನ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ಸಿನ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ.

ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಹಲವು ವಿದ್ಯಾರ್ಥಿಗಳಿದ್ದರು. ದುರದೃಷ್ಟವಶಾತ್, ಮರ ಬಿದ್ದ ಜಾಗದಲ್ಲಿ ಕುಳಿತಿದ್ದ 11 ವರ್ಷದ ವಿದ್ಯಾರ್ಥಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು, ಮುಂಬೈ ಮಹಾನಗರ ಪಾಲಿಕೆ (BMC) ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಸ್ಸಿನೊಳಗೆ ಸಿಲುಕಿಕೊಂಡಿದ್ದ ಮಕ್ಕಳನ್ನು ತಕ್ಷಣವೇ ಹೊರತೆಗೆಯಲಾಯಿತು.

ಇದನ್ನೂ ಓದಿ: ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಭೀಕರ ಬಸ್ ಅಪಘಾತ; 8 ಸಿಐಎಸ್ಎಫ್ ಸಿಬ್ಬಂದಿ, ಚಾಲಕನಿಗೆ ಗಾಯ

ಅಪಘಾತದಲ್ಲಿ ಗಾಯಗೊಂಡಿರುವ ಇತರ 4 ಜನರನ್ನು (ಮೂವರು ವಿದ್ಯಾರ್ಥಿಗಳು ಮತ್ತು ಬಸ್ ಚಾಲಕ) ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪೋಷಕರ ಆಕ್ರೋಶ:

ಮುಂಬೈನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಈ ಸಮಯದಲ್ಲಿ ದುರ್ಬಲವಾಗಿರುವ ಮರಗಳನ್ನು ಗುರುತಿಸಿ ಅವುಗಳನ್ನು ಕತ್ತರಿಸುವಲ್ಲಿ ಮುಂಬೈ ಮಹಾನಗರ ಪಾಲಿಕೆ (BMC) ನಿರ್ಲಕ್ಷ್ಯ ವಹಿಸಿದೆ ಎಂದು ಮೃತ ವಿದ್ಯಾರ್ಥಿಯ ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆಯ ಬೇಜವಾಬ್ದಾರಿತನವೇ ತಮ್ಮ ಮಗುವಿನ ಸಾವಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ:ರಾಜಕೀಯ ಜೀವನ ಅಂತ್ಯ ಎಂದ ಅಶೋಕ್ – Kannada News | R Ashok talks about His Party MLAs Cross Voting In MLC Election

ಬೆಂಗಳೂರು, (ಜೂನ್ 30): ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಮಾಡಿದ ಅಡ್ಡಮತದಾನ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲ ಶಾಸಕರ ಮೇಲೆ ಅನುಮಾನ ವ್ಯಕ್ತವಾಗಿದೆ. ಅ ಪಟ್ಟಿಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ಹೆಸರು ಕೇಳಿಬಂದಿದ್ದರಿಂದ ಅವರು ಇಂದು (ಜೂನ್ 30) ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಈ ಮೂಲಕ ನಾನು ಅಡ್ಡಮತದಾನ ಮಾಡಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ವಿಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಅಡ್ಡ ಮತದಾನ ಮಾಡಿರುವ ಶಾಸಕರ ಪಟ್ಟಿ ದೆಹಲಿಯಲ್ಲಿದ್ದು, ಯಾರೂ ಆಣೆ ಪ್ರಮಾಣ ಮಾಡಬೇಡಿ. ಕೇಂದ್ರದವರು ಪತ್ತೆ ಹಚ್ಚುತ್ತಾರೆ. ಸರಿಯಾಗಿ ಏಟು ಕೊಡುತ್ತೇವೆ. ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version