ಕರ್ನಾಟಕ ಬಂದ್: ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವ ಬಸ್ಗಳಿಗೆ ತಾತ್ಕಾಲಿಕ ತಡೆ – Kannada News | Karnataka Bandh: Bus Services to Tamil Nadu Halted from Bengaluru; Airport Cabs and Intrastate Transport Normal
ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವ ಬಸ್ಗಳಿಗೆ ತಾತ್ಕಾಲಿಕ ತಡೆImage Credit source: Tv9 Kannada ಬೆಂಗಳೂರು, ಆಗಸ್ಟ್ 13: ಕಾವೇರಿ ಜಲ ವಿವಾದ ಸಂಬಂಧ ಇಂದು (ಆಗಸ್ಟ್ 13) ಕರ್ನಾಟಕ ಬಂದ್‌ಗೆ ಕರೆ ನೀಡಿರುವ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಜನ ಜೀವನ, ವಾಹನಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರ ಸೂಚನೆ ಮೇರೆಗೆ ನಗರದಿಂದ ತಮಿಳುನಾಡಿಗೆ ಸಂಚರಿಸುವ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನ ಪ್ರಮುಖ ನಗರಗಳಾದ ಊಟಿ, ತಿರುವಣ್ಣಾಮಲೈ,…