Headlines

ಕರ್ನಾಟಕ ಬಂದ್​​ ಎಫೆಕ್ಟ್​​: ಬಾಟಲ್​​ ಹಿಡಿದು ಹೋದ್ರೆ ಇಂದು ಬಂಕ್​ಗಳಲ್ಲಿ ಸಿಗಲ್ಲ ಪೆಟ್ರೋಲ್​​! – Kannada News | Karnataka Bandh Effect: Petrol Not Available for Those Carrying Bottles Today

ಬೆಂಗಳೂರು, ಆಗಸ್ಟ್​​ 13: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಪೆಟ್ರೋಲ್ ಬಂಕ್‌ಗಳಿಗೆ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಬಾಟಲಿಗಳಲ್ಲಿ ಪೆಟ್ರೋಲ್ ವಿತರಣೆ ಮಾಡದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ಬಾಟಲಿಗಳಲ್ಲಿ ಪೆಟ್ರೋಲ್ ನೀಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕ ಹಿನ್ನೆಲ ಮಹತ್ವದ ಸೂಚನೆ ನೀಡಲಾಗಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಬಸ್, ಕ್ಯಾಬ್ ಸಿಗಲ್ಲ ಎಂಬ ಆತಂಕ: ಅರ್ಧ ರಾತ್ರಿಯಲ್ಲೇ ಏರ್‌ಪೋರ್ಟ್‌ ತಲುಪಿ ಕಷ್ಟಪಟ್ಟು ಕಾಲಕಳೆದ ಪ್ರಯಾಣಿಕರು – Kannada News | Early Bird Travellers at Bengaluru Airport as Karnataka Bandh Looms

ಬೆಂಗಳೂರು, ಆ.13: ಇಂದು ಕರೆಯಲಾಗಿರುವ ಕರ್ನಾಟಕ ಬಂದ್‌ನ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್‌ಗಳ ಲಭ್ಯತೆಯ ಕುರಿತು ಆತಂಕಗೊಂಡ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಧಿಗೂ ಮುನ್ನವೇ ಆಗಮಿಸಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಸ್, ಕ್ಯಾಬ್ ಸಿಗುವುದಿಲ್ಲ ಎಂಬ ಭಯದಲ್ಲಿ ಅನೇಕ ಮಂದಿ ಮುಂಜಾನೆಯಲ್ಲೇ ಬಂದು ತಲುಪಿದ್ದಾರೆ. ಈ ಅನಿಶ್ಚಿತತೆಯ ವಾತಾವರಣದಲ್ಲಿ, ವಿಮಾನ ನಿಲ್ದಾಣದ ಆಸನಗಳಲ್ಲಿಯೇ ಪ್ರಯಾಣಿಕರು ನಿದ್ದೆಗೆ ಜಾರಿದ ದೃಶ್ಯಗಳು ಕಂಡುಬಂದಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ತಮ್ಮ ವಿಮಾನಗಳಿಗಾಗಿ ಕಾದು…

Read More

Vastu Tips: ರಾತ್ರಿ ಮಲಗುವಾಗ ದಿಂಬಿನ ಬಳಿ ಈ ವಸ್ತುಗಳನ್ನು ಇಡಲೇಬೇಡಿ – Kannada News | Vastu Tips for Sound Sleep: What Not to Keep Near Your Bed for Peace

ಪ್ರತಿಯೊಬ್ಬರೂ ದಿನವಿಡೀ ಕೆಲಸ ಮಾಡಿ ರಾತ್ರಿ ನೆಮ್ಮದಿಯ ನಿದ್ರೆ ಬಯಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ನಾವು ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳು ನಮ್ಮ ಮನಸ್ಸಿನ ಶಾಂತಿ ಮತ್ತು ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ರಾತ್ರಿಯಲ್ಲಿ ನಮ್ಮ ಮನಸ್ಸು ಮತ್ತು ದೇಹವು ವಿಶ್ರಾಂತಿ ಸ್ಥಿತಿಯಲ್ಲಿರುವುದರಿಂದ, ನಮ್ಮ ಸುತ್ತಮುತ್ತಲಿರುವ ವಸ್ತುಗಳ ಶಕ್ತಿಯು (Energy) ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ವಿಶೇಷವಾಗಿ, ಮಲಗುವಾಗ ದಿಂಬಿನ ಬಳಿ ಅಥವಾ ಹಾಸಿಗೆಯ ಹತ್ತಿರ ಕೆಲವು ಸಾಮಾನ್ಯ ವಸ್ತುಗಳನ್ನು…

Read More

ಪ್ರಜ್ವಲ್​​ಗೆ ಜೈಲಲ್ಲಿ ಮೊಬೈಲ್​​ ಕೊಟ್ಟಿದ್ದು ಅಧಿಕಾರಿಗಳು?: ಹೆತ್ತವರ ಹೆಸರನ್ನು ಶಿವಪ್ಪ, ಪಾರ್ವತಿ ಎಂದು ನೋಟ್​​ಬುಕ್​ನಲ್ಲಿ ಬರೆದಿಟ್ಟಿದ್ದ ಮಾಜಿ ಸಂಸದ! – Kannada News | Mobile Found in Prajwal Revanna’s Jail Cell: Officer Suspended; Code Names ‘Shivappa and Parvathi’ Found in Diary

ಪ್ರಜ್ವಲ್​​ ರೇವಣ್ಣImage Credit source: Tv9 Kannada ಬೆಂಗಳೂರು, ಆಗಸ್ಟ್​​ 13: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಅತ್ಯಾಚಾರ ಕೇಸ್​​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್​​ನಲ್ಲಿ ಮೊಬೈಲ್​​ ಪತ್ತೆ ಪ್ರಕರಣ ಸಂಬಂಧ ಬಗೆದಷ್ಟು ಮಾಹಿತಿಗಳು ಬಯಲಾಗುತ್ತಿವೆ. ಹಲವು ತಿಂಗಳಿಂದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಹಣ ಪಡೆದು ಮೊಬೈಲ್ ಬಳಕೆಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ರಾ? ಎಂಬ ಅನುಮಾನ ಉದ್ಭವಿಸಿದೆ….

Read More

ಏಷ್ಯನ್ ಗೇಮ್ಸ್​ಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪ್ರಕಟ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಪಾಕಿಸ್ತಾನ್ ತಂಡದ ನಾಯಕನಾಗಿ ಸಾಹಿಬ್​ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ. (PC: Getty Images) ಈ ಹಿಂದೆ ಪಾಕಿಸ್ತಾನ್ ತಂಡದ ನಾಯಕನಾಗಿ ಸಲ್ಮಾನ್ ಅಲಿ ಅಘಾ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅದರಂತೆ ಏಷ್ಯಾಡ್ ಟೂರ್ನಿಯಲ್ಲಿ ಸಾಹಿಬ್​ಝಾದ ಫರ್ಹಾನ್ ಮುಂದಾಳತ್ವದಲ್ಲಿ ಪಾಕ್ ಪಡೆ ಕಣಕ್ಕಿಳಿಯಲಿವೆ. (PC:…

Read More

ಬುಮ್ರಾ ಇಲ್ಲದಿದ್ದಾಗ ಸಿರಾಜ್ ಅತ್ಯಂತ ಅಪಾಯಕಾರಿ! – Kannada News | Beyond Bumrah: Mohammed Siraj’s Reign as India’s Pace Boss

ಟೀಮ್ ಇಂಡಿಯಾದ ವೇಗದ ದಾಳಿಯ ಆಧಾರಸ್ತಂಭ ಜಸ್​ಪ್ರೀತ್ ಬುಮ್ರಾ ತಂಡದಲ್ಲಿದ್ದಾಗ ಎದುರಾಳಿ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುವುದು ಎಲ್ಲರಿಗೂ ಗೊತ್ತು. ಆದರೆ, ಬುಮ್ರಾ ತಂಡದಲ್ಲಿ ಇಲ್ಲದಿದ್ದರೆ ಏನಾಗುತ್ತದೆ? ಭಾರತದ ಬೌಲಿಂಗ್ ಶಕ್ತಿ ಕುಸಿಯುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ ಬುಮ್ರಾ ಅಲಭ್ಯತೆಯಲ್ಲಿ ಮೊಹಮ್ಮದ್ ಸಿರಾಜ್ ಕೇವಲ ಒಬ್ಬ ಬೌಲರ್ ಆಗಿ ಉಳಿಯದೆ, ಇಡೀ ಪೇಸ್ ವಿಭಾಗವನ್ನು ಮುನ್ನಡೆಸುವ ಅತ್ಯಂತ ಅಪಾಯಕಾರಿ ‘ಸ್ಟ್ರೈಕ್ ಬೌಲರ್’ ಆಗಿ ರೂಪಾಂತರಗೊಳ್ಳುತ್ತಾರೆ. ಇದು ಕೇವಲ ಅಭಿಮಾನಿಗಳ ನಂಬಿಕೆಯಲ್ಲ, ಅಧಿಕೃತ ಅಂಕಿ-ಅಂಶಗಳೇ ಸಾಬೀತುಪಡಿಸಿರುವ ಸತ್ಯ. ಜವಾಬ್ದಾರಿ…

Read More

ಮೊಬೈಲ್ ಗೇಮಿಂಗ್ ಚಟ; ದುಬಾರಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ – Kannada News | Actor Shakeela Undergoes Rs 3 Lakh Neck Surgery Due to Mobile Gaming Habit

ಖ್ಯಾತ ನಟಿ ಶಕೀಲಾ (Shakeela) ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ಮೊಬೈಲ್ ಬಳಕೆಯೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯ ಪರಿಸ್ಥಿತಿಯ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ನೆಕ್ ಕಾಲರ್ ಬಳಸಲು ವೈದ್ಯರು ಸೂಚಿಸಿದ್ದಾರೆ. ವಿಡಿಯೋದಲ್ಲಿ ಅವರು ನೆಕ್ ಕಾಲರ್ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾಸಿಗೆಯಲ್ಲಿ ಸತತವಾಗಿ ಒಂದು ಮಗ್ಗಲಿಗೆ ಮಲಗಿ ಮೊಬೈಲ್ ಗೇಮ್…

Read More

Chanakya Niti: ಈ ಗುಣಗಳಿರುವ ಹೆಂಡತಿ ಸಿಕ್ಕರೆ ಗಂಡನ ಅದೃಷ್ಟವೇ ಬದಲಾಗುತ್ತೆ; ಚಾಣಕ್ಯ ಹೇಳಿದ ರಹಸ್ಯಗಳಿವು… – Kannada News | Chanakya Neeti: Wife’s Qualities for Husband’s Success and Family Prosperity

ಆಚಾರ್ಯ ಚಾಣಕ್ಯ ಭಾರತ ಕಂಡ ಮಹಾನ್ ವಿದ್ವಾಂಸ, ಧುರೀಣ ರಾಜಕಾರಣಿ ಹಾಗೂ ಶ್ರೇಷ್ಠ ಅರ್ಥಶಾಸ್ತ್ರಜ್ಞ. ಕೌಟಿಲ್ಯ, ವಿಷ್ಣುಗುಪ್ತ ಎಂದೂ ಕರೆಯಲ್ಪಡುವ ಇವರು ತಮ್ಮ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. ಚಾಣಕ್ಯರು ರಚಿಸಿದ ‘ಚಾಣಕ್ಯ ನೀತಿ’ ಗ್ರಂಥವು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಉಪಯುಕ್ತವಾದ ಜೀವನ ಪಾಠಗಳನ್ನು ಒಳಗೊಂಡಿದೆ. ಚಾಣಕ್ಯ ನೀತಿಯಲ್ಲಿ ಜೀವನದ ಯಶಸ್ಸು, ಹಣಕಾಸು, ಬಾಂಧವ್ಯ, ಸ್ನೇಹ ಹಾಗೂ ದಾಂಪತ್ಯ ಜೀವನದ ಬಗ್ಗೆ ಆಳವಾದ ವಿಚಾರಗಳನ್ನು ವಿವರಿಸಲಾಗಿದೆ. ಮುಖ್ಯವಾಗಿ, ಗಂಡನ ಯಶಸ್ಸು ಮತ್ತು ಮನೆಯ ಸಮೃದ್ಧಿಯಲ್ಲಿ…

Read More

ಮುಂಗಾರು ಮಳೆ ಮತ್ತೆ ದುರ್ಬಲ: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಹೇಗಿದೆ? – Kannada News | Monsoon Weakens in Karnataka: Water Inflow Drops Across Major Dams Including KRS and Kabini

ಬೆಂಗಳೂರು, ಆಗಸ್ಟ್​ 13: ಕರ್ನಾಟಕದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂಗಾರು ಮಳೆ ದುರ್ಬಲವಾಗಿದ್ದು, ಬುಧವಾರವೂ ರಾಜ್ಯದ ಕೇವಲ ಶೇ.5ರಷ್ಟು ಪ್ರದೇಶದಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ. ಇನ್ನು ರಾಜ್ಯದ ಭೌಗೋಳಿಕ ಪ್ರದೇಶದ ಶೇ.44ರಷ್ಟು ಭಾಗದಲ್ಲಿ ಯಾವುದೇ ಮಳೆಯಾಗಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ದೈನಂದಿನ ವರದಿ ಪ್ರಕಾರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗದ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ಸ್ಥಿತಿಗತಿ ಕೆಆರ್​​ಎಸ್​​ ಜಲಾಶಯ ಮಂಡ್ಯದ…

Read More

ಅಯೋಧ್ಯೆ ರಾಮಮಂದಿರಕ್ಕೆ ಶೀಘ್ರವೇ ಸಿಇಒ ನೇಮಕ: ಕಠಿಣ ಸಂದರ್ಶನ ಪೂರ್ಣಗೊಳಿಸಿದ ಉನ್ನತ ಮಟ್ಟದ ಶೋಧ ಸಮಿತಿ – Kannada News | Ram Janmabhoomi Trust CEO Interviews Complete; Official Name Soon

ಅಯೋಧ್ಯೆ, ಆ,13 : ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯ ಆಯ್ಕೆಗಾಗಿ ರಚಿಸಲಾಗಿದ್ದ ಶೋಧ ಸಮಿತಿಯು ಅಂತಿಮ ಹಂತದ ಮುಖಾಮುಖಿ ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದಲ್ಲೇ ಈ ಸಂದರ್ಶನಗಳು ಜರುಗಿದ್ದು, ಶೀಘ್ರದಲ್ಲೇ ನೂತನ ಸಿಇಒ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ. ಅಭ್ಯರ್ಥಿಗಳ ಮೌಲ್ಯಮಾಪನಕ್ಕಾಗಿ ರಕ್ಷಣೆ, ನ್ಯಾಯಾಂಗ ಹಾಗೂ ವಿಜ್ಞಾನ ಕ್ಷೇತ್ರದ ದಿಗ್ಗಜರನ್ನು ಒಳಗೊಂಡ ಶೋಧ ಸಮಿತಿಯನ್ನು ರಚಿಸಲಾಗಿತ್ತು. ಈ…

Read More