ಬಸ್, ಕ್ಯಾಬ್ ಸಿಗಲ್ಲ ಎಂಬ ಆತಂಕ: ಅರ್ಧ ರಾತ್ರಿಯಲ್ಲೇ ಏರ್‌ಪೋರ್ಟ್‌ ತಲುಪಿ ಕಷ್ಟಪಟ್ಟು ಕಾಲಕಳೆದ ಪ್ರಯಾಣಿಕರು – Kannada News | Early Bird Travellers at Bengaluru Airport as Karnataka Bandh Looms

ಬೆಂಗಳೂರು, ಆ.13: ಇಂದು ಕರೆಯಲಾಗಿರುವ ಕರ್ನಾಟಕ ಬಂದ್‌ನ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್‌ಗಳ ಲಭ್ಯತೆಯ ಕುರಿತು ಆತಂಕಗೊಂಡ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಧಿಗೂ ಮುನ್ನವೇ ಆಗಮಿಸಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಸ್, ಕ್ಯಾಬ್ ಸಿಗುವುದಿಲ್ಲ ಎಂಬ ಭಯದಲ್ಲಿ ಅನೇಕ ಮಂದಿ ಮುಂಜಾನೆಯಲ್ಲೇ ಬಂದು ತಲುಪಿದ್ದಾರೆ. ಈ ಅನಿಶ್ಚಿತತೆಯ ವಾತಾವರಣದಲ್ಲಿ, ವಿಮಾನ ನಿಲ್ದಾಣದ ಆಸನಗಳಲ್ಲಿಯೇ ಪ್ರಯಾಣಿಕರು ನಿದ್ದೆಗೆ ಜಾರಿದ ದೃಶ್ಯಗಳು ಕಂಡುಬಂದಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ತಮ್ಮ ವಿಮಾನಗಳಿಗಾಗಿ ಕಾದು ಕುಳಿತಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ಹೊರಡುವ ವಿಮಾನಗಳ ಪ್ರಯಾಣಿಕರು ಕೂಡ ಮುಂಜಾನೆಯಲ್ಲೇ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಬಂದ್‌ನಿಂದ ಸೃಷ್ಟಿಯಾಗಬಹುದಾದ ಸಾರಿಗೆ ಸಮಸ್ಯೆಗಳನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಜನರು ಈ ನಿರ್ಧಾರ ಕೈಗೊಂಡಿದ್ದಾರೆ. ಸಹಜವಾಗಿ ಬಂದ್ ಘೋಷಣೆಯಾದಾಗ ಬಸ್ ಮತ್ತು ಕ್ಯಾಬ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕ ಬಂದ್‌ಗೆ ಎಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗದಿರುವುದು ಗಮನಾರ್ಹ ಸಂಗತಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ರಾತ್ರಿ ಮಲಗುವಾಗ ದಿಂಬಿನ ಬಳಿ ಈ ವಸ್ತುಗಳನ್ನು ಇಡಲೇಬೇಡಿ – Kannada News | Vastu Tips for Sound Sleep: What Not to Keep Near Your Bed for Peace

ಪ್ರತಿಯೊಬ್ಬರೂ ದಿನವಿಡೀ ಕೆಲಸ ಮಾಡಿ ರಾತ್ರಿ ನೆಮ್ಮದಿಯ ನಿದ್ರೆ ಬಯಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ನಾವು ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳು ನಮ್ಮ ಮನಸ್ಸಿನ ಶಾಂತಿ ಮತ್ತು ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ರಾತ್ರಿಯಲ್ಲಿ ನಮ್ಮ ಮನಸ್ಸು ಮತ್ತು ದೇಹವು ವಿಶ್ರಾಂತಿ ಸ್ಥಿತಿಯಲ್ಲಿರುವುದರಿಂದ, ನಮ್ಮ ಸುತ್ತಮುತ್ತಲಿರುವ ವಸ್ತುಗಳ ಶಕ್ತಿಯು (Energy) ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರಲು ಪ್ರಾರಂಭಿಸುತ್ತದೆ.

ವಿಶೇಷವಾಗಿ, ಮಲಗುವಾಗ ದಿಂಬಿನ ಬಳಿ ಅಥವಾ ಹಾಸಿಗೆಯ ಹತ್ತಿರ ಕೆಲವು ಸಾಮಾನ್ಯ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕತೆ ಹೆಚ್ಚಿ, ಒತ್ತಡ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಹಾಗಿದ್ದರೆ ಮಲಗುವಾಗ ಯಾವ ವಸ್ತುಗಳನ್ನು ದೂರವಿಡಬೇಕು? ಉತ್ತಮ ನಿದ್ರೆಗೆ ಯಾವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು? ಇಲ್ಲಿದೆ ಸಂಪೂರ್ಣ ವಿವರ.

ಹಣ ಮತ್ತು ಪರ್ಸ್:

ಮಲಗುವಾಗ ದಿಂಬು ಅಥವಾ ಹಾಸಿಗೆಯ ಬಳಿ ಪರ್ಸ್, ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ವಾಸ್ತು ಪ್ರಕಾರ, ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ನಿರಂತರವಾಗಿ ಆರ್ಥಿಕ ಚಿಂತೆಗಳು ಹೆಚ್ಚಾಗುತ್ತವೆ ಮತ್ತು ಆರಾಮದಾಯಕ ನಿದ್ರೆಗೆ ಭಂಗ ಉಂಟಾಗುತ್ತದೆ. ಹಣವನ್ನು ಯಾವಾಗಲೂ ಬೀರು ಅಥವಾ ಸುರಕ್ಷಿತ ಲಾಕರ್‌ನಲ್ಲಿಡುವುದು ಸೂಕ್ತ.

ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು:

ತಲೆಯ ಬಳಿ ಮೊಬೈಲ್ ಫೋನ್, ಟ್ಯಾಬ್ ಅಥವಾ ಇತರೆ ಗ್ಯಾಜೆಟ್‌ಗಳನ್ನು ಇಟ್ಟುಕೊಂಡು ಮಲಗುವುದು ಅತ್ಯಂತ ಅಪಾಯಕಾರಿ. ಇದು ಮನಸ್ಸಿನ ವಿಶ್ರಾಂತಿಯನ್ನು ಕಡಿತಗೊಳಿಸುವುದಲ್ಲದೆ, ರಾತ್ರಿಯಲ್ಲಿ ಆಗಾಗ್ಗೆ ಫೋನ್ ನೋಡುವ ಅಭ್ಯಾಸವು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಮೊಬೈಲ್ ಅನ್ನು ಹಾಸಿಗೆಯಿಂದ ದೂರವಿಟ್ಟು ಮಲಗುವುದು ಶ್ರೇಷ್ಠ.

ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು:

ಪುಸ್ತಕಗಳು ಮತ್ತು ಪತ್ರಿಕೆಗಳನ್ನು ದಿಂಬಿನ ಕೆಳಗೆ ಅಥವಾ ತಲೆಯ ಬಳಿ ಇಡಬಾರದು. ಜ್ಞಾನದ ಸಂಕೇತವಾದ ಪುಸ್ತಕಗಳನ್ನು ಗೌರವಯುತವಾಗಿ ನಿಗದಿತ ಸ್ಥಳದಲ್ಲಿ ಇಡಬೇಕು. ಮಲಗುವಾಗ ಇವುಗಳನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಮನಸ್ಸಿನ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಇವುಗಳನ್ನು ಸ್ಟಡಿ ಟೇಬಲ್ ಅಥವಾ ರ್ಯಾಕ್‌ನಲ್ಲಿ ಜೋಡಿಸಿಡಿ.

ಶೂ ಮತ್ತು ಚಪ್ಪಲಿಗಳು:

ಹಾಸಿಗೆಯ ಕೆಳಗೆ ಅಥವಾ ತಲೆಯ ಹತ್ತಿರದ ಜಾಗದಲ್ಲಿ ಶೂ, ಚಪ್ಪಲಿಗಳನ್ನು ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇವುಗಳೊಂದಿಗೆ ಹೊರಗಿನಿಂದ ಬರುವ ಧೂಳು ಮತ್ತು ನಕಾರಾತ್ಮಕ ಶಕ್ತಿಯು ಮಲಗುವ ಕೋಣೆಯ ಶಾಂತ ವಾತಾವರಣವನ್ನು ಹಾಳುಮಾಡುತ್ತದೆ. ಚಪ್ಪಲಿಗಳನ್ನು ಕೋಣೆಯ ಹೊರಗೆ ನಿಗದಿತ ಜಾಗದಲ್ಲೇ ಇಡಿ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ನಕಾರಾತ್ಮಕ ವಾತಾವರಣದ ಪರಿಣಾಮಗಳೇನು?

ಮಲಗುವ ಜಾಗದಲ್ಲಿ ಅನುಚಿತ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ:

  • ಮಾನಸಿಕ ಒತ್ತಡ, ಆತಂಕ ಮತ್ತು ಚಡಪಡಿಕೆ ಹೆಚ್ಚಾಗುತ್ತದೆ.
  • ಸೂಕ್ತ ನಿದ್ರೆ ಸಿಗದೆ, ಬೆಳಿಗ್ಗೆ ಆಯಾಸ ಮತ್ತು ಕಿರಿಕಿರಿ ಉಂಟಾಗುತ್ತದೆ.
  • ದೈನಂದಿನ ನಿರ್ಧಾರಗಳು ಮತ್ತು ಕೌಟುಂಬಿಕ ಸಂಬಂಧಗಳ ಮೇಲೆಯೂ ಇದು ಪರೋಕ್ಷವಾಗಿ ಕೆಟ್ಟ ಪರಿಣಾಮ ಬೀರುತ್ತದೆ.

ಉತ್ತಮ ನಿದ್ರೆಗಾಗಿ ಈ ಸರಳ ಅಭ್ಯಾಸ:

  • ಕೋಣೆಯ ಸ್ವಚ್ಛತೆ: ಮಲಗುವ ಮುನ್ನ ಹಾಸಿಗೆ ಮತ್ತು ಮಲಗುವ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿಡಿ.
  • ವಸ್ತುಗಳ ಸೂಕ್ತ ಜೋಡಣೆ: ಮೊಬೈಲ್, ವಾಲೆಟ್, ಪುಸ್ತಕಗಳು ಮುಂತಾದವುಗಳನ್ನು ಅವುಗಳಿಗೆ ನಿಗದಿಯಾದ ಸ್ಥಳದಲ್ಲೇ ಇರಿಸಿ.
  • ಮೃದು ಬೆಳಕು ಮತ್ತು ಸುಗಂಧ: ಕೋಣೆಯಲ್ಲಿ ಮಂದವಾದ (Soft light) ಬೆಳಕು ಹಾಗೂ ನಿಮ್ಮಿಷ್ಟದ ಹಿತಕರ ಸುಗಂಧ ದ್ರವ್ಯವನ್ನು ಬಳಸುವುದರಿಂದ ಮನಸ್ಸಿಗೆ ತಕ್ಷಣವೇ ಸಕಾರಾತ್ಮಕ ಮತ್ತು ಶಾಂತ ಅನುಭವ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಜ್ವಲ್​​ಗೆ ಜೈಲಲ್ಲಿ ಮೊಬೈಲ್​​ ಕೊಟ್ಟಿದ್ದು ಅಧಿಕಾರಿಗಳು?: ಹೆತ್ತವರ ಹೆಸರನ್ನು ಶಿವಪ್ಪ, ಪಾರ್ವತಿ ಎಂದು ನೋಟ್​​ಬುಕ್​ನಲ್ಲಿ ಬರೆದಿಟ್ಟಿದ್ದ ಮಾಜಿ ಸಂಸದ! – Kannada News | Mobile Found in Prajwal Revanna’s Jail Cell: Officer Suspended; Code Names ‘Shivappa and Parvathi’ Found in Diary

ಪ್ರಜ್ವಲ್​​ ರೇವಣ್ಣImage Credit source: Tv9 Kannada

ಬೆಂಗಳೂರು, ಆಗಸ್ಟ್​​ 13: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಅತ್ಯಾಚಾರ ಕೇಸ್​​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್​​ನಲ್ಲಿ ಮೊಬೈಲ್​​ ಪತ್ತೆ ಪ್ರಕರಣ ಸಂಬಂಧ ಬಗೆದಷ್ಟು ಮಾಹಿತಿಗಳು ಬಯಲಾಗುತ್ತಿವೆ. ಹಲವು ತಿಂಗಳಿಂದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಹಣ ಪಡೆದು ಮೊಬೈಲ್ ಬಳಕೆಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ರಾ? ಎಂಬ ಅನುಮಾನ ಉದ್ಭವಿಸಿದೆ. ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣವೇ ವಿರುದ್ಧವೇ ಆರೋಪ ಕೇಳಿಬಂದಿದೆ.

ಕೈದಿಗಳಿಗೆ ನೆರವಾಗುತ್ತಿದ್ದ ಅಸಿಸ್ಟೆಂಟ್ ಸೂಪರಿಂಡೆಂಟ್?

ಜೈಲಿನಲ್ಲಿ ರೇಡ್ ಆದಾಗೆಲ್ಲ ಏನು ಸಿಗದಂತೆ ತಪ್ಪಿಸುತ್ತಿದ್ದ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ನೋಡಿಕೊಳ್ಳುತ್ತಿದ್ದರು. ರೇಡ್​ಗೆ ಬಂದ ಅಧಿಕಾರಿಗಳನ್ನು ಒಳಬಿಡಲು ಸುಮಾರು 15ರಿಂದ 20 ನಿಮಿಷ ತಡಮಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಅಲರ್ಟ್​ ಆಗುತ್ತಿದ್ದ ಜೈಲಿನ ಸೆಲ್​ನಲ್ಲಿದ್ದ ಕೈದಿಗಳು ರೇಡ್​​ ವೇಳೆ ಏನೂ ಸಿಗದಂತೆ ನೋಡಿಕೊಳ್ಳುತ್ತಿದ್ದರು. ಆದ್ರೆ ಮೊನ್ನೆ ರೇಡ್ ವೇಳೆ ಈರಣ್ಣ ಮಾತು ಕೇಳದೆ ಸಿಸಿಬಿ ಅಧಿಕಾರಿಗಳು ಒಳನುಗ್ಗಿದ್ದಾರೆ. ಹೀಗಾಗಿಯೇ ಪ್ರಜ್ವಲ್​​ ಬ್ಯಾರಕ್​​ ಸೇರಿ ಹಲವೆಡೆ ಮೊಬೈಲ್​​ಗಳು ಪತ್ತೆಯಾಗಿವೆ. ಘಟನೆ ಬಳಿಕ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಸಸ್ಪೆಂಡ್​​ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ಪ್ರಜ್ವಲ್​​ ರೇವಣ್ಣ ಬ್ಯಾರಕ್​​ ಸೇರಿ ವಿವಿಧೆಡೆ ಒಟ್ಟು 10ಕ್ಕೂ ಹೆಚ್ಚು ಮೊಬೈಲ್​​ಗಳು​​ ಪತ್ತೆ

ನೋಟ್​​ಬುಕ್​​ನಲ್ಲಿತ್ತು 30ಕ್ಕೂ ಹೆಚ್ಚು ಮೊಬೈಲ್​​ ನಂಬರ್!

ಇನ್ನು ಸಿಸಿಬಿ ರೇಡ್​​ ವೇಳೆ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಇದ್ದ ಬ್ಯಾರಕ್​​ನಲ್ಲಿ ಮೊಬೈಲ್, ಪೆನ್​​ಡ್ರೈವ್​​ ಜೊತೆಗೆ ನೋಟ್​​ಬುಕ್ ಕೂಡ ಪತ್ತೆಯಾಗಿತ್ತು. ಆ ನೋಟ್​​ಬುಕ್​​ನಲ್ಲಿ 30ಕ್ಕೂ ಹೆಚ್ಚು ಮೊಬೈಲ್​​ ನಂಬರ್​​ಗಳು ಕಂಡುಬಂದಿವೆ. ತಾಯಿಯ ನಂಬರ್ ಅನ್ನು ಪಾರ್ವತಿ ಎಂದು ಬರೆದಿಟ್ಟುಕೊಂಡಿದ್ದ ಪ್ರಜ್ವಲ್, ಶಿವಪ್ಪ ಎಂದು ತಂದೆಯ ನಂಬರ್ ಬರೆದಿಟ್ಟುಕೊಂಡಿರೋದು ಪರಿಶೀಲನೆ ವೇಳೆ ಕಂಡುಬಂದಿದೆ. ಸ್ನೇಹಿತೆಯ ನಂಬರ್ ಕೂಡ ಉಲ್ಲೇಖವಿರೋದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದುವರೆಗೆ ಮೊಬೈಲ್ ಪಾಸ್ ವರ್ಡ್ ಪ್ರಜ್ವಲ್ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮೊಬೈಲ್ ನನ್ನದಲ್ಲ ಮತ್ತು ನನ್ನ ಬ್ಯಾರಕ್​​ನಲ್ಲಿ ಅದು ಹೇಗೆ ಬಂತು ಗೊತ್ತಿಲ್ಲ ಎಂದು ಪ್ರಜ್ವಲ್​​ ಹೇಳುತ್ತಿದ್ದಾರಂತೆ. ಸದ್ಯ ಮೊಬೈಲ್ ವಶಕ್ಕೆ ಪಡೆದುಕೊಂಡು ಎಲೆಕ್ಟ್ರಾನಿಕ್ ಸಿಟಿ ವಿಭಾಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:02 am, Thu, 13 August 26

Source link

ಏಷ್ಯನ್ ಗೇಮ್ಸ್​ಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪ್ರಕಟ

Source link

ಬುಮ್ರಾ ಇಲ್ಲದಿದ್ದಾಗ ಸಿರಾಜ್ ಅತ್ಯಂತ ಅಪಾಯಕಾರಿ! – Kannada News | Beyond Bumrah: Mohammed Siraj’s Reign as India’s Pace Boss

ಟೀಮ್ ಇಂಡಿಯಾದ ವೇಗದ ದಾಳಿಯ ಆಧಾರಸ್ತಂಭ ಜಸ್​ಪ್ರೀತ್ ಬುಮ್ರಾ ತಂಡದಲ್ಲಿದ್ದಾಗ ಎದುರಾಳಿ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುವುದು ಎಲ್ಲರಿಗೂ ಗೊತ್ತು. ಆದರೆ, ಬುಮ್ರಾ ತಂಡದಲ್ಲಿ ಇಲ್ಲದಿದ್ದರೆ ಏನಾಗುತ್ತದೆ? ಭಾರತದ ಬೌಲಿಂಗ್ ಶಕ್ತಿ ಕುಸಿಯುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ ಬುಮ್ರಾ ಅಲಭ್ಯತೆಯಲ್ಲಿ ಮೊಹಮ್ಮದ್ ಸಿರಾಜ್ ಕೇವಲ ಒಬ್ಬ ಬೌಲರ್ ಆಗಿ ಉಳಿಯದೆ, ಇಡೀ ಪೇಸ್ ವಿಭಾಗವನ್ನು ಮುನ್ನಡೆಸುವ ಅತ್ಯಂತ ಅಪಾಯಕಾರಿ ‘ಸ್ಟ್ರೈಕ್ ಬೌಲರ್’ ಆಗಿ ರೂಪಾಂತರಗೊಳ್ಳುತ್ತಾರೆ. ಇದು ಕೇವಲ ಅಭಿಮಾನಿಗಳ ನಂಬಿಕೆಯಲ್ಲ, ಅಧಿಕೃತ ಅಂಕಿ-ಅಂಶಗಳೇ ಸಾಬೀತುಪಡಿಸಿರುವ ಸತ್ಯ.

ಜವಾಬ್ದಾರಿ ಹೆಚ್ಚಾದಾಗ ಸಿರಾಜ್ ಅಪಾಯಕಾರಿ!

ಅಂಕಿ-ಅಂಶಗಳ ಪ್ರಕಾರ, ಸಿರಾಜ್ ಅವರಿಗೆ ತಂಡದ ಮುಂಚೂಣಿ ಬೌಲರ್ ಆಗಿ ಜವಾಬ್ದಾರಿ ಸಿಕ್ಕಾಗ ಅವರ ಪ್ರದರ್ಶನ ಮತ್ತೊಂದು ಮಟ್ಟಕ್ಕೆ ತಲುಪುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಜೊತೆಗಿದ್ದಾಗ ಸಿರಾಜ್ ಅವರ ಬೌಲಿಂಗ್ ಸರಾಸರಿ 33.82 ರಷ್ಟಿರುತ್ತದೆ.

ಆದರೆ, ಬುಮ್ರಾ ಇಲ್ಲದ ಪಂದ್ಯಗಳಲ್ಲಿ ಈ ಸರಾಸರಿ ಭಾರಿ ಸುಧಾರಣೆ ಕಂಡು 25.20 ಕ್ಕೆ ಇಳಿಕೆಯಾಗುತ್ತದೆ. ಅಂದರೆ, ಅವರು ಅತ್ಯಂತ ಕಡಿಮೆ ರನ್ ನೀಡಿ ಹೆಚ್ಚು ವಿಕೆಟ್ ಕಬಳಿಸುತ್ತಾರೆ. ಇನ್ನು ಮೊಹಮ್ಮದ್ ಶಮಿ ಕೂಡ ಇಲ್ಲದ ಪಂದ್ಯಗಳಲ್ಲಿ ಸಿರಾಜ್ ಅವರ ಟೆಸ್ಟ್ ಸರಾಸರಿ 22.27 ರಷ್ಟು ಅಮೋಘವಾಗಿರುತ್ತದೆ!

ಏಕದಿನ ಕ್ರಿಕೆಟ್‌ನಲ್ಲೂ ಇದೇ ಮ್ಯಾಜಿಕ್ ಪುನರಾವರ್ತನೆಯಾಗಿದೆ. ಬುಮ್ರಾ ಜೊತೆಯಿದ್ದಾಗ ಸಿರಾಜ್ ಓವರ್‌ಗೆ ಸರಾಸರಿ 5.52 ರನ್ ನೀಡಿದರೆ, ಬುಮ್ರಾ ಇಲ್ಲದಾಗ ಕಟ್ಟುನಿಟ್ಟಿನ ಬೌಲಿಂಗ್ ಪ್ರದರ್ಶಿಸಿ ತಮ್ಮ ಎಕಾನಮಿ ರೇಟ್ ಅನ್ನು 4.99 ಕ್ಕೆ ತಗ್ಗಿಸುತ್ತಾರೆ. ಜೊತೆಗೆ ಅವರ ಬೌಲಿಂಗ್ ಸರಾಸರಿ ಕೂಡ 27.18 ರಿಂದ 24.57 ಕ್ಕೆ ಸುಧಾರಿಸುತ್ತದೆ.

ಬುಮ್ರಾ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ಹೇಗೆ ಬದಲಾಗುತ್ತದೆ ಎಂಬುದರ ಖಚಿತ ಮತ್ತು ಅಧಿಕೃತ ಅಂಕಿ-ಅಂಶಗಳ  ವಿವರ ಇಲ್ಲಿದೆ.

ಟೆಸ್ಟ್ ಕ್ರಿಕೆಟ್ ಅಂಕಿ-ಅಂಶಗಳು:  ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಇಲ್ಲದಿದ್ದಾಗ ಸಿರಾಜ್ ಅವರ ವಿಕೆಟ್ ಟೇಕಿಂಗ್ ಸಾಮರ್ಥ್ಯ ಮತ್ತು ಬೌಲಿಂಗ್ ಸರಾಸರಿ ಗಣನೀಯವಾಗಿ ಉತ್ತಮಗೊಳ್ಳುತ್ತದೆ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು.

ಬೌಲಿಂಗ್ ಸ್ಥಿತಿ ಪಂದ್ಯಗಳು ವಿಕೆಟ್‌ಗಳು ಬೌಲಿಂಗ್ ಸರಾಸರಿ  ಸ್ಟ್ರೈಕ್ ರೇಟ್
ಬುಮ್ರಾ ಜೊತೆಯಿದ್ದಾಗ 16 42 33.82 63.4
ಬುಮ್ರಾ ಇಲ್ಲದಿದ್ದಾಗ 11 36 25.20 49.8
ಬುಮ್ರಾ + ಶಮಿ ಇಬ್ಬರೂ ಇಲ್ಲದಾಗ 6 21 22.27 44.1

ಬೌಲಿಂಗ್ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಎಷ್ಟು ಕಡಿಮೆ ಇದ್ದರೆ ಬೌಲರ್ ಅಷ್ಟು ಹೆಚ್ಚು ಅಪಾಯಕಾರಿ ಎಂದು ಅರ್ಥ.

ಏಕದಿನ ಕ್ರಿಕೆಟ್ ಅಂಕಿ-ಅಂಶಗಳು: ಏಕದಿನ ಪಂದ್ಯಗಳಲ್ಲಿ ಬುಮ್ರಾ ಇಲ್ಲದಿದ್ದಾಗ ಸಿರಾಜ್ ರನ್ ನಿಯಂತ್ರಣ ಸಾಧಿಸುವುದರ ಜೊತೆಗೆ ಅತ್ಯಂತ ಪ್ರಭಾವಶಾಲಿ ಬೌಲರ್ ಆಗಿ ಹೊರಹೊಮ್ಮುತ್ತಾರೆ.

ಬೌಲಿಂಗ್ ಸ್ಥಿತಿ ಪಂದ್ಯಗಳು ವಿಕೆಟ್‌ಗಳು ಎಕಾನಮಿ ರೇಟ್ ಬೌಲಿಂಗ್ ಸರಾಸರಿ
ಬುಮ್ರಾ ಜೊತೆಯಿದ್ದಾಗ 14 22 5.52 27.18
ಬುಮ್ರಾ ಇಲ್ಲದಿದ್ದಾಗ 29 46 4.99 24.57

ಆರಂಭಿಕ ಓವರ್‌ಗಳ ಪ್ರದರ್ಶನ:

ಹೊಸ ಚೆಂಡಿನಲ್ಲಿ ದಾಳಿ ಮುನ್ನಡೆಸುವಾಗ ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಹೆಚ್ಚು ವಿಕೆಟ್ ಕಬಳಿಸುತ್ತಾರೆ.

  • ಬುಮ್ರಾ ಜೊತೆಯಿದ್ದಾಗ ಹೊಸ ಚೆಂಡಿನಲ್ಲಿ: ಪ್ರತಿ 42 ಎಸೆತಕ್ಕೆ ಒಂದು ವಿಕೆಟ್ ಪಡೆಯುತ್ತಾರೆ.
  • ಬುಮ್ರಾ ಇಲ್ಲದಿದ್ದಾಗ ಹೊಸ ಚೆಂಡಿನಲ್ಲಿ: ಪ್ರತಿ 29 ಎಸೆತಕ್ಕೆ ಒಂದು ವಿಕೆಟ್ ಪಡೆಯುತ್ತಾರೆ (ಇದು ಪವರ್‌ಪ್ಲೇನಲ್ಲಿ ವಿಶ್ವದ ಅತ್ಯುತ್ತಮ ದಾಖಲೆಗಳಲ್ಲೊಂದಾಗಿದೆ).

ಐತಿಹಾಸಿಕ ಪಂದ್ಯಗಳ ಬೆಸ್ಟ್‌ ಸ್ಪೆಲ್‌ಗಳು:

  • 5/73 (ಗಾಬಾ, ಆಸ್ಟ್ರೇಲಿಯಾ) – ಬುಮ್ರಾ ಗಾಯಗೊಂಡಿದ್ದಾಗ ಮೊಹಮ್ಮದ್ ಸಿರಾಜ್ 5 ವಿಕೆಟ್ ಕಿತ್ತು ಭಾರತಕ್ಕೆ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ತಂದುಕೊಟ್ಟಿದ್ದರು.
  • 6/70 (ಎಡ್ಜ್‌ಬಾಸ್ಟನ್, ಇಂಗ್ಲೆಂಡ್) – ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ನೆಲದಲ್ಲಿ ಸಿರಾಜ್ ಬೌಲಿಂಗ್ ದರ್ಬಾರ್ ನಡೆಸಿದ್ದರು.
  • 6/21 (ಕೊಲೊಂಬೊ, ಏಷ್ಯಾ ಕಪ್ ಫೈನಲ್) – ಬುಮ್ರಾ ತಂಡದಲ್ಲಿದ್ದರೂ ಸಿರಾಜ್ ಹೊಸ ಚೆಂಡಿನ ಪ್ರಮುಖ ಜವಾಬ್ದಾರಿ ಹೊತ್ತು ಕೇವಲ 7 ಓವರ್‌ಗಳಲ್ಲಿ ಶ್ರೀಲಂಕಾವನ್ನು ಧೂಳೀಪಟ ಮಾಡಿದರು.

‘ಸಪೋರ್ಟಿಂಗ್’ ಪಾತ್ರದಿಂದ ‘ಡಾಮಿನೇಟಿಂಗ್’!

ಬುಮ್ರಾ ತಂಡದಲ್ಲಿದ್ದಾಗ ಸಿರಾಜ್ ಹೆಚ್ಚಾಗಿ ರನ್ ನಿಯಂತ್ರಿಸುವ ಅಥವಾ ಎಂಡ್ ಕಾಯ್ದುಕೊಳ್ಳುವ ಪಾತ್ರಕ್ಕೆ ಸೀಮಿತವಾಗುತ್ತಾರೆ. ಆದರೆ ಬುಮ್ರಾ ಇಲ್ಲದಿದ್ದಾಗ, ನಾಯಕ ಅವರಿಗೆ ಮೊದಲ ಸ್ಪೆಲ್‌ನಲ್ಲಿ ಸತತವಾಗಿ ಆಕ್ರಮಣಕಾರಿ ಬೌಲಿಂಗ್ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ತಮ್ಮ ನೆಚ್ಚಿನ ‘ವೋಬಲ್ ಸೀಮ್’ ಅಸ್ತ್ರವನ್ನು ಬಳಸಿ ಬ್ಯಾಟರ್‌ಗಳನ್ನು ಅನಿರೀಕ್ಷಿತ ಬೌನ್ಸ್ ಮತ್ತು ಮೂವ್‌ಮೆಂಟ್ ಮೂಲಕ ಕಾಡುತ್ತಾರೆ.

ಇದನ್ನೂ ಓದಿ: ಗಂಭೀರ್ ಪಾಲಿಗೆ ವರವಾದ ಆಟಗಾರರ ಗಾಯದ ಸಮಸ್ಯೆ!

ಒಟ್ಟಾರೆಯಾಗಿ ಹೇಳುವುದಾದರೆ, ಮೊಹಮ್ಮದ್ ಸಿರಾಜ್ ಕೇವಲ ಜಸ್​ಪ್ರೀತ್ ಬುಮ್ರಾ ಅವರ ನೆರಳಿನಲ್ಲಿ ಬೆಳಗುವ ಬೌಲರ್ ಅಲ್ಲ. ಬದಲಿಗೆ, ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಅವರೊಳಗಿನ ಅಪ್ಪಟ ನಾಯಕ ಮತ್ತು ಮ್ಯಾಚ್-ವಿನ್ನರ್ ಹೊರಬರುತ್ತಾರೆ. ಜವಾಬ್ದಾರಿಯ ಹೆಗಲೇರಿದಾಗ ಅವರ ಬೌಲಿಂಗ್ ಸರಾಸರಿ (25.20) ಮತ್ತು ಸ್ಟ್ರೈಕ್ ರೇಟ್ (49.8) ಅದ್ಭುತವಾಗಿ ಸುಧಾರಿಸುವುದು ಇದಕ್ಕೆ ಬಲವಾದ ಸಾಕ್ಷಿ.

Source link

ಮೊಬೈಲ್ ಗೇಮಿಂಗ್ ಚಟ; ದುಬಾರಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ – Kannada News | Actor Shakeela Undergoes Rs 3 Lakh Neck Surgery Due to Mobile Gaming Habit

ಖ್ಯಾತ ನಟಿ ಶಕೀಲಾ (Shakeela) ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ಮೊಬೈಲ್ ಬಳಕೆಯೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯ ಪರಿಸ್ಥಿತಿಯ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ನೆಕ್ ಕಾಲರ್ ಬಳಸಲು ವೈದ್ಯರು ಸೂಚಿಸಿದ್ದಾರೆ. ವಿಡಿಯೋದಲ್ಲಿ ಅವರು ನೆಕ್ ಕಾಲರ್ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾಸಿಗೆಯಲ್ಲಿ ಸತತವಾಗಿ ಒಂದು ಮಗ್ಗಲಿಗೆ ಮಲಗಿ ಮೊಬೈಲ್ ಗೇಮ್ ಆಡುತ್ತಿದ್ದರು. ಇದರಿಂದ ಅವರ ಕುತ್ತಿಗೆಯ ಮುಖ್ಯ ನರಗಳಿಗೆ ತೊಂದರೆಯಾಯಿತು. ಪರಿಣಾಮವಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಶಸ್ತ್ರಚಿಕಿತ್ಸೆಗೆ 3 ಲಕ್ಷ ರೂಪಾಯಿ ವೆಚ್ಚವಾಗಿದೆ.

ತಮ್ಮ ವೀಡಿಯೊದಲ್ಲಿ ಶಕೀಲಾ ಸ್ವತಃ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಹಾಸಿಗೆಯಿಂದ ಏಳಲು ಮತ್ತು ಆಹಾರ ಸೇವಿಸಲು ಸಹಾಯ ಬೇಕಾಗಿದೆ ಎಂದಿದ್ದಾರೆ. ‘ನನಗೆ ಇತ್ತೀಚೆಗೆ ದೊಡ್ಡ ಶಸ್ತ್ರಚಿಕಿತ್ಸೆ ನಡೆದಿದೆ. ಫೋನ್ ತುಂಬಾ ಉಪಯುಕ್ತ ವಸ್ತುವಾಗಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ’ ಎಂದು ಶಕೀಲಾ ಎಚ್ಚರಿಸಿದ್ದಾರೆ.

‘ನಾನು ಹಾಸಿಗೆಯಲ್ಲಿ ಮಲಗಿ ನಾಲ್ಕು ಗಂಟೆ ಕಾಲ ಗೇಮ್ ಆಡುತ್ತಿದ್ದೆ. ಕಾಫಿ ಕುಡಿಯಲು ಮಾತ್ರ ಎದ್ದು ಬರುವೆ. ನಂತರ ಮತ್ತೆ ಗೇಮ್ ಆಡಲು ಶುರು ಮಾಡುತ್ತಿದ್ದೆ. ಆ ಬಳಿಕ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುತ್ತಿದ್ದೆ. ತಪ್ಪಾದ ಭಂಗಿ ಮತ್ತು ಅತಿಯಾದ ಫೋನ್ ಬಳಕೆ ನರಗಳ ಮೇಲೆ ಪ್ರಭಾವ ಬೀರಿದೆ. ಇದು ನನ್ನನ್ನು ಶಸ್ತ್ರಚಿಕಿತ್ಸೆಯ ಕೊಠಡಿಗೆ ಕರೆದೊಯ್ಯಿತು’ ಎಂದು ಶಕೀಲಾ ವಿವರಿಸಿದ್ದಾರೆ.

ಮಕ್ಕಳಿಗೆ ಫೋನ್ ನೀಡದಂತೆ ಹೆತ್ತವರಿಗೆ ಅವರು ಸಲಹೆ ನೀಡಿದ್ದಾರೆ. ‘ಅಗತ್ಯ ಕೆಲಸಗಳಿಗೆ ಮಾತ್ರ ಫೋನ್ ಬಳಸಿ. ಅನಗತ್ಯ ವೀಡಿಯೊಗಳನ್ನು ನೋಡಬೇಡಿ. ಇಲ್ಲದಿದ್ದರೆ 3 ಲಕ್ಷ ರೂಪಾಯಿ ಕಳೆದುಕೊಳ್ಳುತ್ತೀರಿ. ಜೊತೆಗೆ ತಡೆಯಲಾಗದ ನೋವು ಅನುಭವಿಸಬೇಕಾಗುತ್ತದೆ’ ಎಂದು ಶಕೀಲಾ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಡಲು ರೆಡಿ ಆದ ಶಕೀಲಾ; ಸಿಗುತ್ತಿದೆ ಭರ್ಜರಿ ಸಂಭಾವನೆ

ಆಂಧ್ರಪ್ರದೇಶದ ನೆಲ್ಲೂರು ಮೂಲದ ಶಕೀಲಾ ‘ಕಿನ್ನಾರತುಂಬಿಗಳು’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಯಶಸ್ಸು ಕಂಡಿತು. ಆ ಬಳಿಕ ಅವರು ಪ್ರಸಿದ್ಧ ನಟಿಯಾಗಿದರು. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಕೆಂಪ’, ‘ಶ್ರೀ’, ‘ಲವ್ ಯೂ ಆಲಿಯಾ’ ಮೊದಲಾದ ಸಿನಿಮಾಗಳಲ್ಲಿಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಈ ಗುಣಗಳಿರುವ ಹೆಂಡತಿ ಸಿಕ್ಕರೆ ಗಂಡನ ಅದೃಷ್ಟವೇ ಬದಲಾಗುತ್ತೆ; ಚಾಣಕ್ಯ ಹೇಳಿದ ರಹಸ್ಯಗಳಿವು… – Kannada News | Chanakya Neeti: Wife’s Qualities for Husband’s Success and Family Prosperity

ಆಚಾರ್ಯ ಚಾಣಕ್ಯ ಭಾರತ ಕಂಡ ಮಹಾನ್ ವಿದ್ವಾಂಸ, ಧುರೀಣ ರಾಜಕಾರಣಿ ಹಾಗೂ ಶ್ರೇಷ್ಠ ಅರ್ಥಶಾಸ್ತ್ರಜ್ಞ. ಕೌಟಿಲ್ಯ, ವಿಷ್ಣುಗುಪ್ತ ಎಂದೂ ಕರೆಯಲ್ಪಡುವ ಇವರು ತಮ್ಮ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. ಚಾಣಕ್ಯರು ರಚಿಸಿದ ‘ಚಾಣಕ್ಯ ನೀತಿ’ ಗ್ರಂಥವು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಉಪಯುಕ್ತವಾದ ಜೀವನ ಪಾಠಗಳನ್ನು ಒಳಗೊಂಡಿದೆ.

ಚಾಣಕ್ಯ ನೀತಿಯಲ್ಲಿ ಜೀವನದ ಯಶಸ್ಸು, ಹಣಕಾಸು, ಬಾಂಧವ್ಯ, ಸ್ನೇಹ ಹಾಗೂ ದಾಂಪತ್ಯ ಜೀವನದ ಬಗ್ಗೆ ಆಳವಾದ ವಿಚಾರಗಳನ್ನು ವಿವರಿಸಲಾಗಿದೆ. ಮುಖ್ಯವಾಗಿ, ಗಂಡನ ಯಶಸ್ಸು ಮತ್ತು ಮನೆಯ ಸಮೃದ್ಧಿಯಲ್ಲಿ ಹೆಂಡತಿಯ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಚಾಣಕ್ಯರು ಸ್ಪಷ್ಟವಾಗಿ ತಿಳಿಸಿದ್ದಾರೆ. ಚಾಣಕ್ಯನ ಪ್ರಕಾರ, ಯಾವ ಗುಣಗಳಿರುವ ಮಹಿಳೆ ತನ್ನ ಗಂಡನಿಗೆ ಹಾಗೂ ಕುಟುಂಬಕ್ಕೆ ಅದೃಷ್ಟ ತರುತ್ತಾಳೆ? ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಹಣದ ಸದ್ಬಳಕೆ ಮತ್ತು ಬುದ್ಧಿವಂತಿಕೆ:

ಮದುವೆಯ ನಂತರ ಪುರುಷನೊಬ್ಬ ಆರ್ಥಿಕವಾಗಿ ಬೆಳೆದು ಶ್ರೀಮಂತ ಜೀವನ ನಡೆಸುತ್ತಿದ್ದಾನೆ ಎಂದರೆ, ಅದಕ್ಕೆ ಅವನ ಶ್ರಮ ಮಾತ್ರವಲ್ಲ, ಅವನ ಹೆಂಡತಿಯ ಬುದ್ಧಿವಂತಿಕೆಯೂ ಕಾರಣವಾಗಿರುತ್ತದೆ. ಹಣವನ್ನು ಅನಗತ್ಯವಾಗಿ ವ್ಯರ್ಥ ಮಾಡದೆ, ತಮ್ಮ ಜ್ಞಾನ ಮತ್ತು ಶಿಸ್ತಿನಿಂದ ಮನೆಯಲ್ಲಿ ಸಂಪತ್ತನ್ನು ಕಾಯ್ದುಕೊಳ್ಳುವ ಮಹಿಳೆ ಸಾಕ್ಷಾತ್ ಲಕ್ಷ್ಮೀ ಸ್ವರೂಪಿ. ಇಂತಹ ಮಹಿಳೆಯಿಂದ ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಿರುತ್ತದೆ.

ಒಳ್ಳೆಯ ನಡತೆ ಮತ್ತು ಶಿಸ್ತು:

ಉತ್ತಮ ನಡತೆ ಹಾಗೂ ಶಿಸ್ತನ್ನು ಹೊಂದಿರುವ ಮಹಿಳೆ ಅತ್ತೆಯ ಮನೆಗೆ ಕಾಲಿಟ್ಟಾಗ, ಆ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಂಸ್ಕೃತಿಕ ವಾತಾವರಣ ಉಂಟಾಗುತ್ತದೆ. ಮನೆಯ ಪ್ರತಿಯೊಂದು ಕಾರ್ಯದಲ್ಲೂ ಶಿಸ್ತನ್ನು ಕಾಯ್ದುಕೊಳ್ಳುವ ಆಕೆ, ಕುಟುಂಬದ ಗೌರವವನ್ನು ಹೆಚ್ಚಿಸುತ್ತಾಳೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಶಿಕ್ಷಣ ಮತ್ತು ಸದಾ ಬೆಂಬಲ ನೀಡುವ ಗುಣ:

ವಿದ್ಯಾವಂತ ಹಾಗೂ ಜಾಣೆಯಾದ ಹೆಂಡತಿ ಗಂಡನ ಪ್ರತಿಯೊಂದು ಹೆಜ್ಜೆಯಲ್ಲೂ ಮಾರ್ಗದರ್ಶಕಿಯಾಗಿ, ಬೆನ್ನೆಲುಬಾಗಿ ನಿಲ್ಲುತ್ತಾಳೆ. ಜೀವನದಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯಗಳು ಎದುರಾದರೂ, ಗಂಡನ ನೆರಳಿನಂತೆ ಜೊತೆಗಿದ್ದು, ಸವಾಲುಗಳನ್ನು ಎದುರಿಸಲು ಧೈರ್ಯ ತುಂಬುತ್ತಾಳೆ.

ನಿಷ್ಠೆ ಮತ್ತು ಪತಿವ್ರತಾ ಧರ್ಮ:

ಚಾಣಕ್ಯನ ಪ್ರಕಾರ, ತನ್ನ ಗಂಡನಿಗೆ ಸಂಪೂರ್ಣವಾಗಿ ನಿಷ್ಠಳಾಗಿರುವ ಮಹಿಳೆ, ಆತನ ಪಾಲಿನ ಅದೃಷ್ಟ ದೇವತೆಯಾಗಿದ್ದಾಳೆ. ಇಂತಹ ನಿಷ್ಠಾವಂತ ಹಾಗೂ ಪವಿತ್ರ ಮನಸ್ಸಿನ ಮಹಿಳೆ ಇರುವ ಮನೆಗೆ ಸಂಪತ್ತು ಮತ್ತು ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ.

ಒಟ್ಟಾರೆಯಾಗಿ “ಮದುವೆಯ ನಂತರ ಗಂಡನ ಜಾತಕವೇ ಬದಲಾಯಿತು, ಅದೃಷ್ಟ ಒಲಿದು ಬಂತು” ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು. ಅದಕ್ಕೆ ಮೂಲ ಕಾರಣ ಆತನ ಜೀವನಕ್ಕೆ ಬರುವ ಸದ್ಗುಣ ಸಂಪನ್ನೆಯಾದ ಹೆಂಡತಿ. ಆಕೆಯ ಸನ್ನಿಧಾನವೇ ಆ ಮನೆಗೆ ಐಶ್ವರ್ಯ ಮತ್ತು ಶಾಂತಿಯ ಮೂಲವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುಂಗಾರು ಮಳೆ ಮತ್ತೆ ದುರ್ಬಲ: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಹೇಗಿದೆ? – Kannada News | Monsoon Weakens in Karnataka: Water Inflow Drops Across Major Dams Including KRS and Kabini

ಬೆಂಗಳೂರು, ಆಗಸ್ಟ್​ 13: ಕರ್ನಾಟಕದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂಗಾರು ಮಳೆ ದುರ್ಬಲವಾಗಿದ್ದು, ಬುಧವಾರವೂ ರಾಜ್ಯದ ಕೇವಲ ಶೇ.5ರಷ್ಟು ಪ್ರದೇಶದಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ. ಇನ್ನು ರಾಜ್ಯದ ಭೌಗೋಳಿಕ ಪ್ರದೇಶದ ಶೇ.44ರಷ್ಟು ಭಾಗದಲ್ಲಿ ಯಾವುದೇ ಮಳೆಯಾಗಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ದೈನಂದಿನ ವರದಿ ಪ್ರಕಾರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗದ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ.

ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ಸ್ಥಿತಿಗತಿ

ಕೆಆರ್​​ಎಸ್​​ ಜಲಾಶಯ

ಮಂಡ್ಯದ ಕೆಆರ್​​ಎಸ್ಗ್​ ಜಲಾಶಯದ ಒಳಹರಿವಲ್ಲಿ ಇಳಿಕೆಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ 8 ಸಾವಿರ ಕ್ಯೂಸೆಕ್‌ ಇದ್ದಿದ್ದೀಗ 4,875 ಕ್ಯೂಸೆಕ್​​ಗೆ ಕುಸಿತ ಕಂಡಿದೆ. ಡ್ಯಾಂ ಭರ್ತಿಯಾಗಬಹುದೆಂಬ ನಿರೀಕ್ಷರಯ ನಡುವೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಕಮುಖವಾಗಿರುವ ಕಾರಣ ಒಳಹರಿವಲ್ಲಿ ಭಾರಿ ಇಳಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟವಿರುವ ಡ್ಯಾಂನಲ್ಲಿ ಸದ್ಯ 109.74 ಅಡಿ ಮಾತ್ರ ನೀರಿದೆ. 2,310 ಕ್ಯೂಸೆಕ್ ಹೊರ ಹರಿವನ್ನು ಜಲಾಶಯ ಹೊಂದಿದೆ.

ಇದನ್ನೂ ಓದಿ: ಕರಾವಳಿ-ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹಾರಂಗಿ ಡ್ಯಾಂ

2859 ಅಡಿ ಗರಿಷ್ಠ ಮಟ್ಟವಿರುವ ಕೊಡಗು ಜಿಲ್ಲೆ ಕುಶಾಲನಗರದ ಹಾರಂಗಿ ಜಲಾಶಯದಲ್ಲಿ ಇಂದು 2858.22 ಅಡಿ ನೀರಿದ್ದು, 4060 ಕ್ಯೂಸೆಕ್ ಒಳಹರಿವು ಮತ್ತು 5000 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.

ಕಬಿನಿ ಅಣೆಕಟ್ಟೆ

ಕಬಿನಿ ಜಲಾಶಯದ ನೀರಿನ ಮಟ್ಟ 82.36 ಅಡಿಗೆ ಇಳಿಕೆ ಕಂಡಿದ್ದು, ಡ್ಯಾಂನ ಗರಿಷ್ಠ ಮಟ್ಟ 84 ಅಡಿಗಳಾಗಿವೆ. ಕಬಿನಿಗೆ 8,448 ಕ್ಯೂಸೆಕ್ ಒಳಹರಿವಿದ್ದರೆ, 10,000 ಕ್ಯೂಸೆಕ್ ನೀರು ಹೊರಹರಿವಿದೆ.

ಆಲಮಟ್ಟಿ ಡ್ಯಾಂ

519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ 519.42 ಮೀಟರ್ ನೀರಿನ ಸಂಗ್ರಹವಿದೆ. 27,979 ಕ್ಯೂಸೆಕ್ ಒಳಹರಿವು ಮತ್ತು 20,155 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ

ಬಸವಸಾಗರ ಜಲಾಶಯ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ 492.23 ಮೀಟರ್ ನೀರಿದ್ದು, ಇದರ ಗರಿಷ್ಠ ಮಟ್ಟ 492.25 ಮೀಟರ್. ಒಳ ಹರಿವು 20 ಸಾವಿರ ಕ್ಯೂಸೆಕ್ ಇದ್ದರೆ ಹೊರ ಹರಿವು 13 ಸಾವಿರ ಕ್ಯೂಸೆಕ್​​ನಷ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಯೋಧ್ಯೆ ರಾಮಮಂದಿರಕ್ಕೆ ಶೀಘ್ರವೇ ಸಿಇಒ ನೇಮಕ: ಕಠಿಣ ಸಂದರ್ಶನ ಪೂರ್ಣಗೊಳಿಸಿದ ಉನ್ನತ ಮಟ್ಟದ ಶೋಧ ಸಮಿತಿ – Kannada News | Ram Janmabhoomi Trust CEO Interviews Complete; Official Name Soon

ಅಯೋಧ್ಯೆ, ಆ,13 : ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯ ಆಯ್ಕೆಗಾಗಿ ರಚಿಸಲಾಗಿದ್ದ ಶೋಧ ಸಮಿತಿಯು ಅಂತಿಮ ಹಂತದ ಮುಖಾಮುಖಿ ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಗಸ್ಟ್ 11 ಮತ್ತು 12 ರಂದು ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದಲ್ಲೇ ಈ ಸಂದರ್ಶನಗಳು ಜರುಗಿದ್ದು, ಶೀಘ್ರದಲ್ಲೇ ನೂತನ ಸಿಇಒ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ.

ಅಭ್ಯರ್ಥಿಗಳ ಮೌಲ್ಯಮಾಪನಕ್ಕಾಗಿ ರಕ್ಷಣೆ, ನ್ಯಾಯಾಂಗ ಹಾಗೂ ವಿಜ್ಞಾನ ಕ್ಷೇತ್ರದ ದಿಗ್ಗಜರನ್ನು ಒಳಗೊಂಡ ಶೋಧ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ನ್ಯಾ. ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ ವಿ.ಕೆ. ಚತುರ್ವೇದಿ, ವಿಜ್ಞಾನಿ ಡಾ. ಸುರೇಶ್ ಹಾವರೆ ಒಳಗೊಂಡಿದ್ದಾರೆ.

ಈ ಮಹತ್ವದ ಹುದ್ದೆಗೆ ದೇಶಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗಿದ್ದು, ಶೇಕಡಾ 0.3 ಕ್ಕಿಂತಲೂ ಕಡಿಮೆ ಅಭ್ಯರ್ಥಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ಸಲ್ಲಿಕೆಯಾಗಿದ್ದ 5,585 ಅರ್ಜಿಗಳ ಪೈಕಿ 3,877 ಅಭ್ಯರ್ಥಿಗಳು ವಿವರವಾದ ಸಿವಿ (CV) ಸಲ್ಲಿಸಿದ್ದರು. ಅವರಿಂದ ನಿರ್ವಹಣಾ ಸಾಮರ್ಥ್ಯ, ಭಾಷಾ ಪ್ರಾವೀಣ್ಯ ಹಾಗೂ ಕಾರ್ಯತಂತ್ರ ಯೋಜನೆಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಮೌಲ್ಯಮಾಪನಗೊಂಡ 1,580 ಅಭ್ಯರ್ಥಿಗಳಲ್ಲಿ 111 ಮಂದಿಯನ್ನು ಆನ್‌ಲೈನ್ ಸಂದರ್ಶನಕ್ಕೆ ಆಯ್ಕೆ ಮಾಡಿ, ಅವರ ನಾಯಕತ್ವ ಗುಣ ಹಾಗೂ ತಂತ್ರಜ್ಞಾನದ ತಿಳುವಳಿಕೆಯನ್ನು ಪರಿಶೀಲಿಸಲಾಯಿತು.

ಇದನ್ನೂ ಓದಿ: ಅಯೋಧ್ಯೆ ಮಂದಿರಕ್ಕೆ ಬೇಕಾಗಿದ್ದಾರೆ ‘ಕಟ್ಟಾ ಹಿಂದೂ’ ಸಿಇಒ: ಜನಿವಾರ ಧರಿಸುತ್ತೀರಾ, ಸಸ್ಯಾಹಾರಿಯೇ? ಗೂಗಲ್ ಫಾರ್ಮ್‌ನಲ್ಲಿ ಧಾರ್ಮಿಕ ಪ್ರಶ್ನೆ

ಅಂತಿಮವಾಗಿ ಆಯ್ಕೆಯಾದ 16 ಪ್ರಮುಖ ಅಭ್ಯರ್ಥಿಗಳನ್ನು ಅಯೋಧ್ಯೆಗೆ ಆಹ್ವಾನಿಸಿ ಮುಖಾಮುಖಿ ಸಂದರ್ಶನ ನಡೆಸಲಾಯಿತು. ಅಂತಿಮ 16 ಅಭ್ಯರ್ಥಿಗಳು 50 ರಿಂದ 70 ವರ್ಷ ವಯೋಮಾನದವರಾಗಿದ್ದು, ನಿವೃತ್ತ ಐಎಎಸ್ (IAS), ಐಪಿಎಸ್ (IPS) ಅಧಿಕಾರಿಗಳು, ಸಶಸ್ತ್ರ ಪಡೆಗಳ ನಿವೃತ್ತ ಯೋಧರು, ಕಾರ್ಪೊರೇಟ್, ಶಿಕ್ಷಣ ಹಾಗೂ ಐಟಿ ಕ್ಷೇತ್ರದ ದಿಗ್ಗಜರಾಗಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಮ ಜನ್ಮಭೂಮಿ ಸಂಸ್ಥೆಯನ್ನು ದಕ್ಷತೆಯಿಂದ ಮುನ್ನಡೆಸಬಲ್ಲ ಸಮರ್ಥ ನಾಯಕನ ಹುಡುಕಾಟ ಅಂತಿಮ ಘಟ್ಟಕ್ಕೆ ತಲುಪಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಮೆಟ್ರೋದಲ್ಲಿ ರಾರಾಜಿಸುತ್ತಿದೆ ‘ಟಾಕ್ಸಿಕ್’ ಪೋಸ್ಟರ್; ಯಶ್ ಅಭಿಮಾನಿಗಳಿಗೆ ಹಬ್ಬ

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಗಳು ರಾಜಧಾನಿ ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಆರಂಭವಾಗಿವೆ. ನಮ್ಮ ಮೆಟ್ರೋ ರೈಲುಗಳ ಮೇಲೆ ‘ಟಾಕ್ಸಿಕ್’ ಚಿತ್ರದ ಪೋಸ್ಟರ್‌ಗಳನ್ನು ಹಾಗೂ ಬ್ರ್ಯಾಂಡಿಂಗ್‌ ಅನ್ನು ಅಳವಡಿಸಲಾಗಿದ್ದು, ಈಗ ನಗರದಲ್ಲೆಲ್ಲಾ ‘ಟಾಕ್ಸಿಕ್’ದ್ದೇ ಹವಾ ಎದ್ದಿದೆ.

ಬೆಂಗಳೂರು ಮೆಟ್ರೋದ ಒಳಭಾಗ ಮತ್ತು ಹೊರಭಾಗಕ್ಕೆ ‘ಟಾಕ್ಸಿಕ್’ ಚಿತ್ರದ ಮಾಸ್ ಪೋಸ್ಟರ್‌ಗಳು ಮತ್ತು ಯಶ್ ಅವರ ವಿಭಿನ್ನ ಲುಕ್‌ಗಳ ಬ್ಯಾನರ್‌ಗಳನ್ನು ಹಚ್ಚಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮ್ಯಾನ್‌ಸ್ಟರ್ ಮೈಂಡ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದ ಪ್ರಚಾರದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೆಟ್ರೋದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಯಶ್ ಅಭಿಮಾನಿಗಳು ಈ ಪ್ರಚಾರ ಶೈಲಿಯನ್ನು ಕಂಡು ಫಿದಾ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅಡಿಬರಹ ಹೊಂದಿರುವ ಈ ಸಿನಿಮಾ, 2026ರ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version