ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ – Kannada News | Lalithaa Jewellery IPO from 2026 August 17th to 19th, price band, lot, minimum investment and other details

ಲಲಿತಾ ಜ್ಯುವೆಲ್ಲರಿImage Credit source: Press Release

ಮುಂಬೈ, ಆಗಸ್ಟ್ 13: ದಕ್ಷಿಣ ಭಾರತದ ಖ್ಯಾತ ಆಭರಣ ಸಂಸ್ಥೆಯಾದ ‘ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್’ (Lalithaa Jewellery Mart Limited) ತನ್ನ ಐಪಿಒ (IPO- ಆರಂಭಿಕ ಸಾರ್ವಜನಿಕ ಕೊಡುಗೆ) ದಿನಾಂಕ ಮತ್ತು ಶೇರು ದರವನ್ನು ಅಧಿಕೃತವಾಗಿ ಘೋಷಿಸಿದೆ. ಲಲಿತಾ ಜ್ಯುವೆಲರಿ ಕಂಪನಿಯ ಐಪಿಒ ಆಗಸ್ಟ್ 17ರಂದು ಆರಂಭಗೊಂಡು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.

ಲಲಿತಾ ಜ್ಯುವೆಲರಿ ಐಪಿಒ ಮುಖ್ಯಾಂಶಗಳು

  • ಬೆಲೆ ಶ್ರೇಣಿ (Price Band): ಪ್ರತಿ ಶೇರಿಗೆ ₹190 ರಿಂದ ₹201 (ಮುಖಬೆಲೆ ₹5).
  • ಆಫರ್ ದಿನಾಂಕ: 2026ರ ಆಗಸ್ಟ್ 17 ರಿಂದ ಆಗಸ್ಟ್ 19ರವರೆಗೆ.
  • ಕನಿಷ್ಠ ಹೂಡಿಕೆ (Lot Size): ಕನಿಷ್ಠ 74 ಶೇರುಗಳು ಮತ್ತು ನಂತರದ 74 ರ ಗುಣಕಗಳಲ್ಲಿ ಬಿಡ್ ಮಾಡಬಹುದು.

ಇದರಲ್ಲಿ ಹೂಡಿಕೆ ಮಾಡಬೇಕೆನ್ನುವವರು ಕನಿಷ್ಠ 74 ಶೇರುಗಳನ್ನು ಖರೀದಿಸಬೇಕು. ಸುಮಾರು ₹14,060 ರಿಂದ ₹14,874 ಹೂಡಿಕೆ ಮಾಡಬೇಕು. ಅದಕ್ಕೂ ಹೆಚ್ಚು ಹೂಡಿಕೆ ಮಾಡಬೇಕೆನ್ನುವವರು ಇನ್ನೂ 74 ಶೇರುಗಳನ್ನು ಖರೀದಿಸಬೇಕು. ಹೀಗೆ 74 ಗುಣಕಗಳಲ್ಲಿ ಶೇರುಗಳನ್ನು ಖರೀದಿಸುತ್ತಾ ಹೋಗಬಹುದು.

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?

ಒಟ್ಟು ಐಪಿಒ ಮೊತ್ತ: ₹1,200 ಕೋಟಿಯ ಹೊಸ ಶೇರುಗಳ ವಿತರಣೆ (Fresh Issue) ಹಾಗೂ ಕಂಪನಿಯ ಪ್ರವರ್ತಕರಾದ (ಪ್ರೊಮೋಟರ್) ಎಂ. ಕಿರಣ್ ಕುಮಾರ್ ಜೈನ್ ಅವರಿಂದ ₹500 ಕೋಟಿ ಮೌಲ್ಯದ ಶೇರುಗಳ ಮಾರಾಟ (Offer-for-Sale) ಒಳಗೊಂಡಿದೆ.

ಲಲಿತಾ ಜ್ಯುವೆಲ್ಲರಿ ವಹಿವಾಟು ಮತ್ತು ಬೆಳವಣಿಗೆ

ಲಲಿತಾ ಜ್ಯುವೆಲ್ಲರಿ ಭಾರತದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿಯಲ್ಲಿ ಒಟ್ಟು 61 ಮಳಿಗೆಗಳನ್ನು ಹೊಂದಿದೆ. ಸಂಸ್ಥೆಯು ಶೇ.60 ಕ್ಕಿಂತ ಹೆಚ್ಚು ಆದಾಯವನ್ನು ಟೈಯರ್-2 ಮತ್ತು ಟೈಯರ್-3 ನಗರಗಳಿಂದ ಪಡೆಯುತ್ತಿದೆ.

ಆರ್ಥಿಕ ವರ್ಷ 2026 ರಲ್ಲಿ ಕಂಪನಿಯು ₹25,023.93 ಕೋಟಿ ಕಾರ್ಯಾಚರಣೆ ಆದಾಯ ಹಾಗೂ ₹1,009.82 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ

ಲಲಿತಾ ಜ್ಯುವೆಲ್ಲರಿ ಐಪಿಒ ಶೇರು ಹಂಚಿಕೆ ವಿವರ

ಈ ಕೊಡುಗೆಯಲ್ಲಿ ದೊಡ್ಡ ಸಾಂಸ್ಥಿಕ ಹೂಡಿಕೆದಾರರಿಗೆ (QIB) ಶೇ 50 ಕ್ಕಿಂತ ಹೆಚ್ಚು ಶೇರು ಲಭ್ಯವಿರುವುದಿಲ್ಲ. ಸಾಂಸ್ಥಿಕೇತರ ಹೂಡಿಕೆದಾರರಿಗೆ (NII) ಕನಿಷ್ಠ ಶೇ. 15 ಮತ್ತು ರೀಟೇಲ್ ಹೂಡಿಕೆದಾರರಿಗೆ (Retail) ಕನಿಷ್ಠ ಶೇ. 35 ರಷ್ಟು ಶೇರುಗಳನ್ನು ಕಾಯ್ದಿರಿಸಲಾಗಿದೆ.

ಆನಂದ್ ರಾಠಿ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಈಕ್ವಿರಸ್ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಗಳು ಈ ಐಪಿಒಗೆ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿ.ಕೆ. ಶಿವಕುಮಾರ್​ ಭೇಟಿಯಾದ ಕನ್ನಡಪರ ಹೋರಾಟಗಾರರು: ಪ್ರಮುಖ ಬೇಡಿಕೆಗಳೇನು? – Kannada News | Cauvery Dispute: Kannada Activists Meet DK Shivakumar; Demand Halting Water Release and Speeding Up Mekedatu Project

ಸಿಎಂ ಡಿಕೆಶಿ ಭೇಟಿಯಾದ ಕನ್ನಡಪರ ಹೋರಾಟಗಾರರುImage Credit source: Tv9 Kannada

ಬೆಂಗಳೂರು, ಆಗಸ್ಟ್​​ 13: ಕಾವೇರಿ ಜಲ ವಿವಾದ ಸಂಬಂಧ ಕರ್ನಾಟಕ ಬಂದ್​​ಗೆ ಕರೆ ನೀಡಿರುವ ನಡುವೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಕನ್ನಡಪರ ಹೋರಾಟಗಾರು ಭೇಟಿಯಾಗಿದ್ದಾರೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂಬ ಆಗ್ರಹದ ಜೊತೆಗೆ ಮೇಕೆದಾಟು ಯೋಜನೆ ಆರಂಭ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕರವೇ ಶಿವರಾಮೇಗೌಡ ಬಣದ‌ ಮುಖಂಡರು ಈ ವೇಳೆ ಉಸಪಸ್ಥಿತರಿದ್ದರು.

ಕನ್ನಡಪರ ಹೋರಾಟಗಾರರ ಆಗ್ರಹಗಳೇನು?

  • ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾದ ಅನ್ಯಾಯವಾಗುತ್ತಿರುವುದರಿಂದ ಕರ್ನಾಟಕ ಸರಕಾರವು ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಭಾರತ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಇದೆಯೇ ? ಎಂಬ ಪ್ರಶ್ನೆ ಕಾಡುತ್ತಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ನಾಡಿಗೆ ಅನ್ಯಾಯ ವಾಗುತ್ತಿರುವುದನ್ನು ಕನ್ನಡಿಗರು ಎಷ್ಟು ಕಾಲ ಸಹಿಸಲು ಸಾಧ್ಯ? ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
  • ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕವು ಪ್ರತಿದಿನ 12,000 ಕ್ಯುಸೆಕ್ಸ್ ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಕೆಂಬ ನಿರ್ದೇಶನವು ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದೆ. ಕಾವೇರಿ ನೀರು ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಶಿಫಾರಸು, ನಿರ್ದೇಶನ ಮತ್ತು ನಡವಳಿಕೆಗಳ ಬಗ್ಗೆ ಕನ್ನಡಿಗರಲ್ಲಿ ಅನುಮಾನ ಮೂಡುತಿದೆ. ಪಕ್ಷಪಾತ ಧೋರಣೆ, ಅವೈಜ್ಞಾನಿಕ ನಿರ್ಧಾರಗಳ ಹಿನ್ನೆಲೆ ಇರುವುದರಿಂದ ತಾವು ಕರ್ನಾಟಕ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿಯಬೇಕೆಂದು.
  • ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ “ಮೇಕೆದಾಟು ಅಣೆಕಟ್ಟು” ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿಯನ್ನು ಆರಂಭಿಸಬೇಕು.
  • ತಮಿಳುನಾಡು ಕಾವೇರಿ ನದಿ ನೀರಿನ ಹಕ್ಕಿಗಾಗಿ ಮತ್ತೆ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿರುವುದರಿಂದ ರಾಜ್ಯ ಸರಕಾರ ನಾಡಿನ ಹಿತ ಕಾಪಾಡಲು ಕಾನೂನು ಮತ್ತು ನೀರಾವರಿ ತಜ್ಞರ ತಂಡವನ್ನು ರಚಿಸಬೇಕು.
  • ಉತ್ತರ ಕರ್ನಾಟಕದ ಬಹು ವರ್ಷದ ಬೇಡಿಕೆಯಾದ ಮಹದಾಯಿ, ಕಳಸ-ಬಂಡೂರಿ ನದಿ ನೀರಿನ ಹಕ್ಕಿಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.
  • ಆಲಮಟ್ಟಿ ಜಲಾಶಯದ ಅಣೆಕಟ್ಟನ್ನು ಎತ್ತರಿಸಬೇಕು. ಭದ್ರಾ ಯೋಜನೆಯನ್ನು ಅನುಷ್ಠಾನಗೊಳಿಸಲು ತ್ವರಿತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಒತ್ತಾಯಿಸ ಬೇಕು.
  • ರಾಜ್ಯದ ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶಗಳ ನೀರಾವರಿ ಯೋಜನೆಗಳ ಕಾಮಗಾರಿಗಳು ಕುಂಠಿತವಾಗಿವೆ. ಈ ಬಗ್ಗೆ ಜಲ ಸಂಪನ್ಮೂಲ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯವಾಗಬೇಕು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:27 am, Thu, 13 August 26

Source link

Karnataka Assembly Session 2026 Live: ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಕಲಾಪ ಪ್ರಾರಂಭ – Kannada News | Karnataka Assembly Session 2026 Live streaming Online TV9 Kannada

ಬೆಂಗಳೂರು,ಆ.13: ಕರ್ನಾಟಕ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವು ಇಂದು (ಆಗಸ್ಟ್ 13) ಅಧಿಕೃತವಾಗಿ ಪ್ರಾರಂಭಗೊಂಡಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡೂ ಸದನಗಳಲ್ಲಿ ಮೊದಲ ದಿನದ ಕಲಾಪಗಳು ಪ್ರಮುಖ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕರ ಅಭಿನಂದನೆಗಳೊಂದಿಗೆ ಜರುಗಿದವು. ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆ ಕಲಾಪವನ್ನು ಆರಂಭಿಸಿದರು. ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡುವಂತೆ ಸ್ಪೀಕರ್ ಜಯಚಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದರು. ಆದರೆ, “ಇಂದು ಮೊದಲು ಸಂತಾಪ ಸೂಚನಾ ಕಲಾಪವನ್ನು ನಡೆಸಿ, ನಾಳೆ ನೂತನ ಸಚಿವರ ಪರಿಚಯ ಮಾಡಿಕೊಡಿ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದರು. ವಿಪಕ್ಷಗಳ ಈ ಭಾವನೆಯನ್ನು ಗೌರವಿಸುವುದಾಗಿ ಮುಖ್ಯಮಂತ್ರಿಗಳು ಸಮ್ಮತಿಸಿದರು. ವಿಧಾನಪರಿಷತ್ತಿನ ನೂತನ ಸಭಾನಾಯಕರಾಗಿ ನೇಮಕಗೊಂಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವಿಪಕ್ಷ ಸದಸ್ಯರ ಬಳಿಗೆ ತೆರಳಿ ಕುಶಲೋಪಚಾರಿ ಮಾತನಾಡಿ ಅಭಿನಂದನೆಗಳನ್ನು ಸ್ವೀಕರಿಸಿದರು. ಪರಿಷತ್ ವಿಪಕ್ಷ ನಾಯಕರ ಪಕ್ಕದಲ್ಲೇ ಬಸವರಾಜ ಹೊರಟ್ಟಿ ಅವರ ಆಸನವನ್ನು ವ್ಯವಸ್ಥೆಗೊಳಿಸಲಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನೂತನವಾಗಿ ಆಯ್ಕೆಯಾದ ಪರಿಷತ್ ಸದಸ್ಯರಾದ ವಿನಯ್ ಕಾರ್ತಿಕ್, ಮಳವಳ್ಳಿ ಶಿವಣ್ಣ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಹಾಗೂ ಪಿ.ವಿ. ಮೋಹನ್ ಪರಸ್ಪರ ಶುಭಾಶಯ ಕೋರಿಕೊಂಡರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಸಿನಿಮಾದ ಕತೆಯೇನು? ರುದ್ರ, ಮಂದಾಕಿನಿ, ಕುಂಭರ ಗುರಿಗಳೇನು? – Kannada News | What is the story Varanasi movie here is Synopsis

ರಾಜಮೌಳಿ (Rajamouli) ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾ ಪ್ರಸ್ತುತ ವಿಶ್ವ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ಹತ್ತಿರ ಬರು-ಬರುತ್ತಾ, ಸಿನಿಮಾದ ಬಗ್ಗೆ, ಸಿನಿಮಾದ ಕತೆಯ ಬಗ್ಗೆ ಸಾಕಷ್ಟು ವಿಷಯಗಳು ಹೊರಬೀಳುತ್ತಿವೆ. ಇದೀಗ ಸಿನಿಮಾದ ಕತೆ ಏನೆಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ಈ ಹಿಂದೆ ತಿಳಿದು ಬಂದಂತೆ, ರುದ್ರ, ಶ್ರೀರಾಮನ ವಂಶಸ್ಥ, ಕುಂಭ ರಾವಣನ ವಂಶಸ್ಥ, ವಿಶೇಷವಾಗಿ ಕುಂಭಕರ್ಣನ ಅಂಶ. ಸಿನಿಮಾನಲ್ಲಿ ರುದ್ರ ಅಂದರೆ ಮಹೇಶ್ ಬಾಬು ಆರ್ಕಿಯಾಲಜಿಸ್ಟ್ (ಪುರಾತತ್ವಶಾಸ್ತ್ರಜ್ಞ) ಜೊತೆಗೆ ರಗಡ್ ವ್ಯಕ್ತಿತ್ವವುಳ್ಳ ವ್ಯಕ್ತಿ. ನಾಯಕನಿಗೆ ಎರಡು ರೀತಿಯ ವ್ಯಕ್ತಿತ್ವ, ಒಮ್ಮೊಮ್ಮೆ ಅತ್ಯಂತ ಧೈರ್ಯವಂತ, ರಣಭೀಕರ, ಕೆಲವೊಮ್ಮೆ ಬಹಳ ಅಂಜುಬುರುಕ. ಇನ್ನು ನಾಯಕಿ ಪ್ರಿಯಾಂಕಾ ಚೋಪ್ರಾ, ಮಂದಾಕಿನಿ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ನಾಯಕಿ ಒಳ್ಳೆಯ ಇತಿಹಾಸಜ್ಞೆ ಜೊತೆಗೆ ಮಾರ್ಷಿಯಲ್ ಆರ್ಟ್ ಕಲಿತಿದ್ದಾಳೆ, ಒಳ್ಳೆಯ ಶೂಟರ್ ಸಹ. ವಿಲನ್ ಕುಂಭನಿಗೆ (ಪೃಥ್ವಿರಾಜ್ ಸುಕುಮಾರನ್) ಕೈ-ಕಾಲು ಸ್ವಾಧೀನ ಇಲ್ಲ. ಆದರೆ ಅಪಾರವಾದ ಬುದ್ಧಿಶಕ್ತಿ ಇದೆ. ಅದರಲ್ಲೂ ತಂತ್ರಜ್ಞಾನದಲ್ಲಿ ಎತ್ತಿದ ಕೈ. ಅಮರತ್ವ ಪಡೆಯುವ ತವಕದಲ್ಲಿ ಕುಂಭ ಇದ್ದಾನೆ.

ಇದನ್ನೂ ಓದಿ:ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ

ಇಂಥಹಾ ಸಮಯದಲ್ಲಿ ವಾರಣಾಸಿ ನಗರಕ್ಕೆ ಶಾಂಭವಿ ಹೆಸರಿನ ಕ್ಷುದ್ರಗ್ರಹ ಅಪ್ಪಳಿಸಲಿರುವ ವಿಷಯ ಮಹೇಶ್ ಬಾಬು ಅಲಿಯಾಸ್ ರುದ್ರನಿಗೆ ಗೊತ್ತಾಗುತ್ತದೆ. ಅದನ್ನು ತಡೆಯಲು ರುದ್ರ ಮುಂದಾಗುತ್ತಾನೆ. ಅದಕ್ಕೆ ಮಂದಾಕಿನಿ ಜೊತೆ ಆಗುತ್ತಾಳೆ. ಆದರೆ ಕುಂಭ, ಆ ಕ್ಷುದ್ರ ಗ್ರಹ ಅಪ್ಪಳಿಸುವ ಸಮಯಕ್ಕಾಗಿ ಕಾದು ಕೂತಿರುತ್ತಾನೆ. ಇದನ್ನು ತಪ್ಪಿಸಲು ಮುಂದಾಗುವ ರುದ್ರ ಮತ್ತು ಮಂದಾಕಿನಿಯರ ಹಿಂದೆ ಕುಂಭ ಬೀಳುತ್ತಾನೆ.

ಕ್ಷುದ್ರಗ್ರಹದ ಅಪ್ಪಳಿಕೆಯನ್ನು ತಡೆಯಲು ರುದ್ರ ಪುರಾತನ ಶಾಸ್ತ್ರಗಳ ನೆರವು ಪಡೆಯುತ್ತಾನೆ, ಆ ಶಾಸ್ತ್ರಗಳು ರುದ್ರನನ್ನು ಆಫ್ರಿಕಾ, ರೋಮ್, ಅಂಟಾರ್ಟಿಕಾ, ಪ್ಯಾರಿಸ್ ಇನ್ನೂ ಹಲವು ದೇಶಗಳನ್ನು ಸುತ್ತು ಹಾಕುವಂತೆ ಮಾಡುತ್ತದೆ. ರುದ್ರ, ಮಂದಾಕಿನಿ ಹೋದಲ್ಲೆಲ್ಲ ಕುಂಭ ಅವರನ್ನು ಹಿಂಬಾಲಿಸುತ್ತಾನೆ. ಈ ಓಟದಲ್ಲಿ ಗೆಲ್ಲುವವರ್ಯಾರು, ಸೋಲುವರ್ಯಾರು ಎಂಬುದೇ ಸಿನಿಮಾದ ಕತೆ. ‘ವಾರಣಾಸಿ’ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:13 am, Thu, 13 August 26

Source link

ಧುರಂಧರ್ ಚಿತ್ರದಲ್ಲಿ ಕೆಟ್ಟ ಪದವಿದ್ದರೂ ಸೆನ್ಸಾರ್ ಮಂಡಳಿ ಮ್ಯೂಟ್ ಮಾಡಿಲ್ಲವೇಕೆ? ಸಿಕ್ಕಿತು ಉತ್ತರ – Kannada News | Dhurandhar: Suvinder Vicky Reveals Aditya Dhar Was Confident Censors Would not Beep Dialogues   

ಚಿತ್ರರಂಗದ ಖ್ಯಾತ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ ಸಿನಿಮಾದಲ್ಲಿ ನಟ ಸುವಿಂದರ್ ವಿಕ್ಕಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ನಟ ಅರ್ಜುನ್ ರಾಂಪಾಲ್ ಅವರ ತಂದೆಯ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಅವರ ಪಾತ್ರದ ಸಮಯ ಕಡಿಮೆಯಿದ್ದರೂ ಅವರ ಖಡಕ್ ಸಂಭಾಷಣೆಗಳು ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿವೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಸುವಿಂದರ್ ವಿಕ್ಕಿ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರದ ಪ್ರಮುಖ ಶ್ರೇಯಸ್ಸು ನಿರ್ದೇಶಕ ಆದಿತ್ಯ ಧರ್ ಅವರಿಗೆ ಸಲ್ಲುತ್ತದೆ. ಜೊತೆಗೆ ಚಿತ್ರದ ಸಂಭಾಷಣೆ ಬರೆದ ಬರಹಗಾರರಿಗೂ ಇದರ ಶ್ರೇಯಸ್ಸು ನೀಡಬೇಕು. ಚಿತ್ರಕಥೆಯಲ್ಲಿದ್ದ ಸಂಭಾಷಣೆಗಳನ್ನು ತಾವು ಅತ್ಯಂತ ನಿಷ್ಠೆಯಿಂದ ಅಭಿನಯಿಸಿದ್ದೇನೆ ಎಂದು ಸುವಿಂದರ್ ಹೇಳಿದ್ದಾರೆ.

ಸಂಭಾಷಣೆಯಲ್ಲಿ ಅತಿಯಾದ ಬೂತು ಪದಗಳಿದ್ದ ಕಾರಣ ನಟ ಸುವಿಂದರ್ ಅವರು ನಿರ್ದೇಶಕರ ಜೊತೆ ತಮಾಷೆ ಮಾಡಿದ್ದರು. ಇಷ್ಟೊಂದು ಸಾರ್ವಜನಿಕವಾಗಿ ಬಳಕೆಗೆ ಯೋಗ್ಯವಲ್ಲದ ಪದಗಳಿದ್ದರೆ ಸೆನ್ಸಾರ್ ಮಂಡಳಿಯು ಎಲ್ಲವನ್ನೂ ಬಿಪ್ ಮಾಡುತ್ತದೆ. ಇದರಿಂದಾಗಿ ತಮ್ಮ ಪಾತ್ರವನ್ನು ಮೂಕ ಪಾತ್ರವನ್ನಾಗಿ ಮಾಡಬಹುದಿತ್ತು ಎಂದು ಹಾಸ್ಯ ಮಾಡಿದ್ದರು. ಆದರೆ ನಿರ್ದೇಶಕ ಆದಿತ್ಯ ಧರ್ ಅವರಿಗೆ ಯಾವುದೇ ಸಂಭಾಷಣೆ ಕಟ್ ಆಗುವುದಿಲ್ಲ ಎಂಬ ಬಲವಾದ ನಂಬಿಕೆಯಿತ್ತು.

ಚಿತ್ರದಲ್ಲಿ ಅಭಿನಯಿಸುವಾಗ ಯಾವುದೇ ವ್ಯಕ್ತಿಯ ಅಥವಾ ಕುಟುಂಬದ ಭಾವನೆಗಳಿಗೆ ಧಕ್ಕೆ ಬರಬಾರದು ಎಂಬ ಎಚ್ಚರಿಕೆ ಇತ್ತು. ಆದ್ದರಿಂದ ಸಂಭಾಷಣೆಯ ಗಡಿಯನ್ನು ದಾಟದಂತೆ ನಿರ್ದೇಶಕರು ಎಚ್ಚರ ವಹಿಸಿದ್ದರು. ಈ ಚಿತ್ರಕ್ಕಿಂತ ಮುಂಚೆಯೇ ನಟ ಅರ್ಜುನ್ ರಾಂಪಾಲ್ ಮತ್ತು ಸುವಿಂದರ್ ‘ಸಟ್ಲುಜ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದರಿಂದಾಗಿ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಮತ್ತು ಹೊಂದಾಣಿಕೆ ಇತ್ತು.

ಇದನ್ನೂ ಓದಿ: ‘ಧುರಂಧರ್’ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ

ಚಿತ್ರದ ಸಂಭಾಷಣೆಗಳ ಬಗ್ಗೆ ಸುವಿಂದರ್ ಅವರು ಅರ್ಜುನ್ ರಾಂಪಾಲ್ ಅವರಿಗೆ ಮುಂಚಿತವಾಗಿಯೇ ಎಚ್ಚರಿಸಿದ್ದರು. ಆದರೆ ಅರ್ಜುನ್ ಅವರು ಇದನ್ನು ಕೇವಲ ನಟನೆಯ ಭಾಗವಾಗಿ ತೆಗೆದುಕೊಂಡರು. ಕ್ಯಾಮೆರಾ ಮುಂದೆ ಯಾವುದೇ ಹಿಂಜರಿಕೆಯಿಲ್ಲದೆ ಸಂಪೂರ್ಣ ಶ್ರಮ ಹಾಕಿ ನಟಿಸುವಂತೆ ಧೈರ್ಯ ತುಂಬಿದ್ದರು. ಈ ಕಾರಣದಿಂದಾಗಿ ಇಬ್ಬರ ನಡುವಿನ ದೃಶ್ಯಗಳು ತೆರೆಯ ಮೇಲೆ ಅತ್ಯಂತ ನೈಜವಾಗಿ ಮೂಡಿಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೌನ್​ ಬನೇಗಾ ಕರೋಡ್ಪತಿ ಶೊನಲ್ಲಿ ಯಶ್ ಕುರಿತು ಪ್ರಶ್ನೆ; ಇದಪ್ಪ ರಾಕಿಂಗ್ ಸ್ಟಾರ್ ಹವಾ – Kannada News | Rocking Star Yash Feature Question on Amitabh Bachchan Kaun Banega Crorepati Show

ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ರಾಕಿಂಗ್ ಸ್ಟಾರ್ ಯಶ್ (Yash) ಜನಪ್ರಿಯತೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಅಂಗಳದಲ್ಲೂ ಈಗ ಯಶ್ ಅವರ ಹೆಸರು ಮೊಳಗಿದೆ. ಶೋನಲ್ಲಿ ಅವರ ಕುರಿತು ಪ್ರಶ್ನೆ ಎದುರಾಗಿದೆ.

ಕೌನ್ ಬನೇಗಾ ಕರೋಡ್ಪತಿ ಶೋನ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರೆ. ಈ ಶೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಮುಖ ಸೂಪರ್‌ಸ್ಟಾರ್‌ಗಳ ಬಿರುದುಗಳಿಗೆ ಸಂಬಂಧಿಸಿದಂತೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ‘ರಜನಿಕಾಂತ್ ‘ಸೂಪರ್’, ಚಿರಂಜೀವಿ ‘ಮೆಗಾ’, ಪವನ್ ಕಲ್ಯಾಣ್ ‘ಪವರ್’ ಆದರೆ, ಯಶ್ ಏನು?’ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಆಯ್ಕೆಗಳನ್ನು ಕೂಡ ನೀಡಲಾಯಿತು.

ಈ ವೇಳೆ’ರಾಕಿಂಗ್ ಸ್ಟಾರ್’ ಎಂದು ಸರಿಯಾದ ಉತ್ತರ ನೀಡಿದರು. ಅಮಿತಾಭ್ ಬಚ್ಚನ್ ಕೂಡ ಇದನ್ನು ಯಶ್ ಅವರ ಪಯಣವನ್ನು ಕೊಂಡಾಡಿದರು. ಕೆಬಿಸಿಯಂತಹ ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ದಿಗ್ಗಜ ನಟರ ಸಾಲಿನಲ್ಲಿ ಯಶ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿರುವುದು ಅವರ ಅಗಾಧ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ರಾರಾಜಿಸುತ್ತಿದೆ ಟಾಕ್ಸಿಕ್ ಪೋಸ್ಟರ್; ಯಶ್ ಅಭಿಮಾನಿಗಳಿಗೆ ಹಬ್ಬ

‘ಕೆಜಿಎಫ್’ ಸರಣಿಯ ಐತಿಹಾಸಿಕ ಯಶಸ್ಸಿನ ನಂತರ ಯಶ್ ಅವರ ಪ್ರತಿಯೊಂದು ನಡೆಯೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪ್ರಸ್ತುತ ಅವರ ಅಭಿನಯದ ‘ಟಾಕ್ಸಿಕ್’ ಸಿನಿಮಾ ತೀವ್ರ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಭಾರಿ ಸದ್ದು ಮಾಡುತ್ತಿವೆ. ಇದಲ್ಲದೆ ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನಾಗಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26ರಂದು ಹಾಗೂ ದೀಪಾವಳಿಯಲ್ಲಿ ರಾಮಾಯಣ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:44 am, Thu, 13 August 26

Source link

International Lefthanders Day 2026: ಬುದ್ಧಿವಂತಿಕೆ, ನಾಯಕತ್ವ; ಎಗಡೈ ಜನರಲ್ಲಿ ಈ ಎಲ್ಲಾ ವಿಶೇಷ ಗುಣಗಳಿವೆಯಂತೆ – Kannada News | International Lefthanders Day 2026: What is the purpose of International Lefthanders Day?

ಅಂತಾರಾಷ್ಟ್ರೀಯ ಎಡಗೈ ಜನರ ದಿನ Image Credit source: Getty Images

ಕೆಲವು ಜನರು ಬರೆಯಲು, ತಿನ್ನಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಎಡಗೈಯನ್ನೇ ಬಳಸುತ್ತಾರೆ. ಪ್ರಪಂಚದಲ್ಲಿ ಶೇಕಡಾ 10 ರಷ್ಟು ಜನ ಲೆಫ್ಟೀಸ್‌ಗಳಿದ್ದಾರೆ. ಬಲಗೈಯನ್ನು ಬಳಸುವವರಿಗಾಗಿ ಪ್ರಪಂಚದ ಹೆಚ್ಚಿನ ವಸ್ತುಗಳು ಮತ್ತು ಉಪಕರಣಗಳು ಸಿದ್ಧವಾಗಿರುವುದರಿಂದ ಎಡಗೈ ಜನರಿಗೆ (Lefthanders) ಈ ಉಪಕರಣಗಳನ್ನು ಬಳಸುವುದು, ಕೆಲಸವನ್ನು ಮಾಡುವುದು ಸ್ವಲ್ಪ ಕಷ್ಟಕರವಾಗಿದೆ. ಇವೆಲ್ಲವನ್ನೂ ಕಷ್ಟ ಎಂದೂ ಭಾವಿಸದೆ ಬಲಗೈ ಜನರಂತೆ ಎಡಗೈ ಜನರೂ ಸಲೀಸಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಇವರ ಈ ವಿಶೇಷತೆಯನ್ನು ಶ್ಲಾಘಿಸಲು, ಎಡಗೈ ಜನರ ಈ ವಿಶೇಷ ಗುಣದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್‌ 13 ರಂದು ಅಂತಾರಾಷ್ಟ್ರೀಯ ಎಡಗೈ ಜನರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಎಡಗೈ ಜನರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಅಂತಾರಾಷ್ಟ್ರೀಯ ಎಡಗೈ ಜನರ ದಿನದ ಇತಿಹಾಸವೇನು?

ಎಡಗೈ ಆಟಗಾರರ ಕ್ಲಬ್‌ನ ಸಂಸ್ಥಾಪಕ ಡೀನ್ ಆರ್. ಕ್ಯಾಂಪ್‌ಬೆಲ್ ಅವರು 1976 ರಲ್ಲಿ ಅಂತಾರಾಷ್ಟ್ರೀಯ ಎಡಗೈ ಆಟಗಾರರ ದಿನವನ್ನು ಪ್ರಾರಂಭಿಸಿದರು. ಎಡಗೈ ಆಟಗಾರರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಬಲಗೈ ಜಗತ್ತಿನಲ್ಲಿ ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಲು ಅವರು ಈ ದಿನವನ್ನು ಆಚರಿಸಲು ನಿರ್ಧರಿಸಿದರು. ಅಂದಿನಿಂದ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಎಡಗೈ ಜನರ ಈ ವಿಶೇಷ ಗುಣದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿವಾಗಿದೆ.

ಎಡಗೈ ಜನರ ವಿಶೇಷತೆಗಳೇನು?

ಹುಡುಗಿಯರಿಗಿಂತ ಹುಡುಗರು ಎಡಗೈ ಬಳಸುವ ಸಾಧ್ಯತೆ ಹೆಚ್ಚು, ಈ ಪ್ರವೃತ್ತಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಕಾರಣ. ಎಡಗೈ ಜನರಿಗೆ ಹುಣ್ಣು ಮತ್ತು ಸಂಧಿವಾತ ಬರುವ ಅಪಾಯ ಕಡಿಮೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ.  ಅಲ್ಲದೆ ಅವರು ಪಾರ್ಶ್ವವಾಯುವಿನಿಂದಲೂ ಬೇಗನೆ ಚೇತರಿಸಿಕೊಳ್ಳುತ್ತಾರಂತೆ. ಅಮೇರಿಕನ್ ಜರ್ನಲ್ ಆಫ್ ಸೈಕಾಲಜಿ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವು ಎಡಗೈ ಜನರು ಬಲಗೈ ಜನರಿಗಿಂತ ವಿಭಿನ್ನ ಚಿಂತನೆ, ಸೃಜನಶೀಲತೆಯನ್ನು ಹೊಂದಿರುತ್ತಾರೆ ಎಂಬುದನ್ನು ಹೇಳಿದೆ..

2007 ರಲ್ಲಿ ಜರ್ನಲ್ ಆಫ್ ದಿ ಇಂಡಿಯನ್ ಅಕಾಡೆಮಿ ಆಫ್ ಅಪ್ಲೈಡ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಎಡಗೈ ಜನರು ತಮ್ಮ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುತ್ತಾರೆ ಆದರೆ ಬಲಗೈ ಜನರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿದಿದೆ. ಹೆಚ್ಚುವರಿಯಾಗಿ, ಬ್ರೈನ್ ಜರ್ನಲ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಎಡಗೈ ಜನರು ಸಾಮಾನ್ಯವಾಗಿ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ ಮತ್ತು ಬಲಗೈ ಜನರಿಗಿಂತ ಹೆಚ್ಚು ಬುದ್ಧಿವಂತರು ಎಂಬುದನ್ನು ಹೇಳಿದೆ.

ಇದನ್ನೂ ಓದಿ: ಅರಣ್ಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಆನೆಗಳ ಪಾತ್ರ ಅಪಾರ

ಎಡಗೈ ಜನರ ವ್ಯಕ್ತಿತ್ವದ ರಹಸ್ಯಗಳು:

ಎಡಗೈ ಜನರು ಸಾಮಾನ್ಯವಾಗಿ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ ಮತ್ತು ಬಲಗೈ ಜನರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಎಡಗೈ ಜನರು ಅತ್ಯುತ್ತಮ ನಾಯಕತ್ವ ಸಾಮರ್ಥ್ಯಗಳನ್ನು ಸಹ ಹೊಂದಿರುತ್ತಾರೆ. ಎಡಗೈ ಜನರು ಉತ್ತಮ ಕಲಾವಿದರು, ಸೃಜನಶೀಲರು ಮತ್ತು ಕ್ರೀಡಾಪಟುಗಳೂ ಹೌದು. ಕ್ರಿಕೆಟ್‌, ಬಾಕ್ಸಿಂಗ್, ಟೆನಿಸ್, ಗಾಲ್ಫ್ ಮುಂತಾದ ಕ್ರೀಡೆಗಳಲ್ಲಿ ಎಡಗೈ ಜನರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ರಫೇಲ್‌ ನಡಾಲ್‌, ಡಿಯಾಗೋ ಮರಡೋನಾ, ಸಚಿನ್‌ ತೆಂಡೂಲ್ಕರ್‌, ಬ್ರಿಯಾನ್‌ ಲಾರಾ, ಪೆಲೆ ಈ ಎಲ್ಲಾ ಕ್ರೀಡಾಲೋಕದ ದಿಗ್ಗಜರು ಲೆಫ್ಟೀಸ್‌ಗಳಾಗಿದ್ದಾರೆ.

ಎಡಗೈ ಜನರು ಜೀವನದ ಸವಾಲುಗಳಿಗೆ ಹೆದರುವುದಿಲ್ಲ, ಅವುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಅವರು ಅಪಾರ ತಾಳ್ಮೆ ಮತ್ತು ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಪರಿಸ್ಥಿತಿಗೂ ಹೊಂದಿಕೊಳ್ಳುತ್ತಾರೆ. ಮುಖ್ಯವಾಗಿ ಇವರು ಏಕಕಾಲದಲ್ಲಿ ಹಲವು ವಿಷಯಗಳ ಬಗ್ಗೆ ಯೋಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮುಖ್ಯ ಬಾಗಿಲಿಗೆ ಯಾವ ಬಣ್ಣ ಬಳಿಯಬೇಕು? ದಿಕ್ಕುಗಳ ಆಧಾರದ ಮೇಲೆ ಇಲ್ಲಿದೆ ಸಮಗ್ರ ಮಾಹಿತಿ! – Kannada News | Vastu Main Door Colors: Boost Prosperity & Positive Energy by Direction

ಮುಖ್ಯ ಬಾಗಿಲಿಗೆ ಯಾವ ಬಣ್ಣ ಬಳಿಯಬೇಕು? Image Credit source: Getty Images

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಒಂದು ನಿರ್ದಿಷ್ಟ ಶಕ್ತಿಯನ್ನು ಹೊಂದಿರುತ್ತದೆ. ಇದು ಕುಟುಂಬದ ಯೋಗಕ್ಷೇಮ, ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಮನೆಯ ಮುಖ್ಯ ದ್ವಾರವು ಹೊರಗಿನ ಪ್ರಪಂಚ ಮತ್ತು ಮನೆಯ ಒಳಗಿನ ವಾತಾವರಣದ ನಡುವಿನ ಪ್ರಮುಖ ಸಂಪರ್ಕ ಬಿಂದುವಾಗಿದೆ. ಈ ಬಾಗಿಲಿನ ಬಣ್ಣ ಸರಿಯಾಗಿಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಆದ್ದರಿಂದ, ವಾಸ್ತು ಪ್ರಕಾರ ಯಾವ ದಿಕ್ಕಿನ ಬಾಗಿಲಿಗೆ ಯಾವ ಬಣ್ಣ ಸೂಕ್ತ ಎಂಬುದನ್ನು ವಿವರವಾಗಿ ತಿಳಿಯೋಣ.

ಉತ್ತರ ದಿಕ್ಕಿನ ಬಾಗಿಲು (North Facing Door):

ಉತ್ತರ ದಿಕ್ಕನ್ನು ಮುಖ್ಯವಾಗಿ ನೀರಿನ ಅಂಶದೊಂದಿಗೆ ಜೋಡಿಸಲಾಗುತ್ತದೆ ಮತ್ತು ಇದನ್ನು ಆರ್ಥಿಕ ಅವಕಾಶಗಳ ವಲಯವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರವು ಉತ್ತರಕ್ಕೆ ಎದುರಾಗಿದ್ದರೆ, ಅದಕ್ಕೆ ನೀಲಿ, ಹಸಿರು, ಬೆಳ್ಳಿ ಅಥವಾ ಬಿಳಿ ಬಣ್ಣಗಳನ್ನು ಬಳಸುವುದು ಅತ್ಯಂತ ಶ್ರೇಷ್ಠ. ಈ ಬಣ್ಣಗಳು ಆರ್ಥಿಕ ಹರಿವನ್ನು ಹೆಚ್ಚಿಸಲು, ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ ತರಲು ಹಾಗೂ ಹಠಾತ್ ಧನನಷ್ಟದಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಪೂರ್ವ ದಿಕ್ಕಿನ ಬಾಗಿಲು (East Facing Door):

ಪೂರ್ವ ದಿಕ್ಕು ಗಾಳಿಯ ಅಂಶದೊಂದಿಗೆ ಸಂಪರ್ಕ ಹೊಂದಿದ್ದು, ಉದಯಿಸುವ ಸೂರ್ಯನ ಸಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಪೂರ್ವಕ್ಕೆ ಮುಖ ಮಾಡಿರುವ ಮುಖ್ಯ ಬಾಗಿಲಿಗೆ ಕಂದು, ಹಸಿರು, ತಿಳಿ ನೀಲಿ ಬಣ್ಣ ಬಳಿಯುವುದು ಸೂಕ್ತವಾಗಿದೆ. ಈ ಬಣ್ಣಗಳು ಕುಟುಂಬದ ಸದಸ್ಯರಲ್ಲಿ ಆಶಾವಾದವನ್ನು ಹೆಚ್ಚಿಸಿ, ಉತ್ತಮ ಆರೋಗ್ಯ, ಆಂತರಿಕ ಶಾಂತಿ ಮತ್ತು ಸಾಮರಸ್ಯದ ಬಾಂಧವ್ಯವನ್ನು ಬೆಳೆಸುತ್ತವೆ.

ದಕ್ಷಿಣ ದಿಕ್ಕಿನ ಬಾಗಿಲು (South Facing Door):

ದಕ್ಷಿಣ ದಿಕ್ಕನ್ನು ಅಗ್ನಿ ಅಂಶವು ನಿಯಂತ್ರಿಸುತ್ತದೆ, ಹೀಗಾಗಿ ಇದನ್ನು ಶಕ್ತಿ ಮತ್ತು ಮಹತ್ವಾಕಾಂಕ್ಷೆಯ ಕೇಂದ್ರವೆನ್ನಲಾಗುತ್ತದೆ. ದಕ್ಷಿಣ ದಿಕ್ಕಿನ ಮುಖ್ಯ ದ್ವಾರಕ್ಕೆ ಕೆಂಪು, ಕಿತ್ತಳೆ, ಮೆರೂನ್ ಅಥವಾ ಗುಲಾಬಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಬಣ್ಣಗಳು ಮನೆಯಲ್ಲಿರುವವರ ಯಶಸ್ಸಿನ ಹಸಿವನ್ನು ಹೆಚ್ಚಿಸುವುದಲ್ಲದೆ, ದುಷ್ಟ ಶಕ್ತಿಗಳು ಮತ್ತು ನಕಾರಾತ್ಮಕ ಪ್ರಭಾವಗಳಿಂದ ಮನೆಗೆ ರಕ್ಷಣೆ ನೀಡುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಪಶ್ಚಿಮ ದಿಕ್ಕಿನ ಬಾಗಿಲು (West Facing Door):

ಪಶ್ಚಿಮ ದಿಕ್ಕು ಲಾಭ, ಅಭಿವೃದ್ಧಿ ಮತ್ತು ದೀರ್ಘಕಾಲೀನ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ. ಪಶ್ಚಿಮಕ್ಕೆ ಎದುರಾಗಿರುವ ಮುಖ್ಯ ಬಾಗಿಲಿಗೆ ಬಿಳಿ, ಬೂದು, ಹಳದಿ ಅಥವಾ ಆಫ್-ವೈಟ್ ಬಣ್ಣಗಳನ್ನು ಬಳಸುವುದು ಉತ್ತಮ. ಈ ಬಣ್ಣಗಳು ಆಲೋಚನೆಗಳಲ್ಲಿ ಸ್ಪಷ್ಟತೆಯನ್ನು ತರುತ್ತವೆ, ಸ್ನೇಹಿತರು ಹಾಗೂ ಮಾರ್ಗದರ್ಶಕರಿಂದ ಸೂಕ್ತ ಬೆಂಬಲ ಸಿಗುವಂತೆ ಮಾಡುತ್ತವೆ ಮತ್ತು ಭಾವನಾತ್ಮಕ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.

ಮುಖ್ಯ ಬಾಗಿಲಿಗೆ ಕಪ್ಪು ಬಣ್ಣವನ್ನು ಸಂಪೂರ್ಣವಾಗಿ ತಪ್ಪಿಸಿ:

ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ಬಾಗಿಲಿಗೆ ಕಪ್ಪು ಬಣ್ಣವನ್ನು ಎಂದಿಗೂ ಬಳಸಬಾರದು. ಕಪ್ಪು ಬಣ್ಣವು ಶಕ್ತಿಯನ್ನು ಪ್ರತಿಫಲಿಸುವ ಬದಲು, ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸಿ ಹೀರಿಕೊಳ್ಳುತ್ತದೆ. ಮುಖ್ಯ ದ್ವಾರಕ್ಕೆ ಕಪ್ಪು ಬಣ್ಣ ಹಚ್ಚುವುದರಿಂದ ಜೀವನದಲ್ಲಿ ಪ್ರತಿಯೊಂದು ಕೆಲಸಕ್ಕೂ ಅಡೆತಡೆಗಳು ಎದುರಾಗುತ್ತವೆ ಮತ್ತು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ.

Source link

ಜಾಗತಿಕ ಯುವ ಜನಸಂಖ್ಯೆ ವರದಿ: ಭಾರತ ಪ್ರಥಮ; ಚೀನಾ, ಪಾಕಿಸ್ತಾನ, ಅಮೆರಿಕವನ್ನು ಹಿಂದಿಕ್ಕಿದ ಭಾರತೀಯ ಯುವಕರ ಸಂಖ್ಯೆ – Kannada News | Youth Power: How Investing in Global Youth Drives Economic and Social Progress

ದೆಹಲಿ, ಆ.13: ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಯುವಕರ ಪಾಲು ಅತ್ಯಂತ ಗಣನೀಯವಾಗಿದೆ. ಆದರೆ, ದೇಶದಿಂದ ದೇಶಕ್ಕೆ ಅವರ ಸಂಖ್ಯೆ ಮತ್ತು ಹಂಚಿಕೆಯಲ್ಲಿ ವೇಗದ ಬದಲಾವಣೆಗಳು ಕಂಡುಬರುತ್ತಿವೆ. ಪ್ರಸ್ತುತ ವಿಶ್ವದ ಯುವಜನಾಂಗ ಎಲ್ಲಿದ್ದಾರೆ ಮತ್ತು ಈ ಬೆಳೆಯುತ್ತಿರುವ ಜನಸಂಖ್ಯೆಯು ಭವಿಷ್ಯದ ಅಭಿವೃದ್ಧಿಗೆ ಹೇಗೆ ದಾರಿಯಾಗಬಲ್ಲದು ಎಂಬುದರ ಕುರಿತು ವಿಶ್ವಸಂಸ್ಥೆ (UN) ಹಾಗೂ ಜಾಗತಿಕ ವರದಿಗಳು ಇಲ್ಲಿದೆ.

ವಿಶ್ವಸಂಸ್ಥೆಯ (UN) ಪ್ರಕಾರ, 15 ರಿಂದ 24 ವರ್ಷ ವಯೋಮಾನದ ವ್ಯಕ್ತಿಗಳನ್ನು ‘ಯುವಕರು’ (Youth) ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ ಈ ವಯೋಮಾನದ ಯುವಕರ ಸಂಖ್ಯೆ ಸುಮಾರು 1.3 ಶತಕೋಟಿ (130 ಕೋಟಿ) ಇದೆ. ಬರುವ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

2050 ರ ವೇಳೆಗೆ ಜಾಗತಿಕ ಬದಲಾವಣೆಗಳು:

2050 ರ ವೇಳೆಗೆ ಪ್ರಪಂಚದ ಯುವ ಜನಸಂಖ್ಯಾ ಭೂದೃಶ್ಯದಲ್ಲಿ ಭಾರೀ ಬದಲಾವಣೆಗಳು ನಿರೀಕ್ಷಿತವಾಗಿವೆ. ಬಡ ಮತ್ತು ಬೆಳೆಯುತ್ತಿರುವ ದೇಶಗಳಲ್ಲಿ ಯುವಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿ, ಯುವಕರ ಸಂಖ್ಯೆ ಕುಸಿಯಲಿದೆ.

ಇದನ್ನೂ ಓದಿ: ಆಟೋ, ಕ್ಯಾಬ್ ಬಳಸುವ ಗ್ರಾಹಕರಿಗೆ ಒಳ್ಳೆ ಸುದ್ದಿ; ಟ್ರಿಪ್ ಪೂರ್ಣಗೊಳ್ಳುವ ಮುನ್ನ ಟಿಪ್ ಕೋರುವಂತಿಲ್ಲ ಎಂದ ಸರ್ಕಾರ

ಯುವ ಜನಸಂಖ್ಯೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ

5 ರಿಂದ 24 ವರ್ಷ ವಯೋಮಾನದ ಯುವಜನತೆಯನ್ನು ಅತಿ ಹೆಚ್ಚು ಹೊಂದಿರುವ ದೇಶವಾಗಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಭಾರತದ ನಂತರ ಕ್ರಮವಾಗಿ ಚೀನಾ, ಪಾಕಿಸ್ತಾನ, ನೈಜೀರಿಯಾ ಹಾಗೂ ಅಮೆರಿಕ (US) ದೇಶಗಳು ಯುವ ಜನಸಂಖ್ಯೆಯಲ್ಲಿ ಮುಂದಿನ ಸ್ಥಾನಗಳಲ್ಲಿವೆ. ಪ್ರಪಂಚದ ಒಟ್ಟು ಯುವಕರ ಪೈಕಿ ಸುಮಾರು ಶೇಕಡಾ 60 ರಷ್ಟು ಜನರು ಕೇವಲ 10 ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಬೆಳೆಯುತ್ತಿರುವ ಬಡ ಹಾಗೂ ಮಧ್ಯಮ ಆದಾಯದ ದೇಶಗಳು ಸರಿಯಾದ ಸಮಯಕ್ಕೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಲ್ಲಿ ಬಂಡವಾಳ ಹೂಡಿದರೆ, ಈ ಯುವಶಕ್ತಿಯು ಆಯಾ ದೇಶಗಳ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ದೊಡ್ಡ ಚಾಲನಾ ಶಕ್ತಿಯಾಗಲಿದೆ. ಬರಿ ದೊಡ್ಡ ಮಟ್ಟದ ಯುವ ಜನಸಂಖ್ಯೆ ಇದ್ದ ತಕ್ಷಣ ದೇಶಕ್ಕೆ ಸ್ವಯಂಚಾಲಿತವಾಗಿ ಆರ್ಥಿಕ ಲಾಭ ಸಿಗುವುದಿಲ್ಲ. ಯುವಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಮಾರುಕಟ್ಟೆಗೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಬೇಕು. ಯೋಗ್ಯ ಉದ್ಯೋಗ ಹಾಗೂ ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಬೇಕು. ಆಗ ಮಾತ್ರ ಯುವಕರ ಪೂರ್ಣ ಸಾಮರ್ಥ್ಯವು ದೇಶದ ಉತ್ಪಾದಕತೆಯನ್ನು ಹೆಚ್ಚಿಸಿ, ಬಲವಾದ ಆರ್ಥಿಕತೆಯನ್ನು ನಿರ್ಮಿಸಲು ನೆರವಾಗುತ್ತದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಕಿ ವಿಶ್ವಕಪ್ 2026: ಟೀಮ್ ಇಂಡಿಯಾ ವೇಳಾಪಟ್ಟಿ ಪ್ರಕಟ – Kannada News | FIH Hockey World Cup 2026: Schedule and India Timings

‘ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2026′ ಕ್ಕೆ ದಿನಗಣನೆ ಆರಂಭವಾಗಿದೆ. ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ಆಗಸ್ಟ್ 15 ರಿಂದ ಆಗಸ್ಟ್ 30, 2026 ರವರೆಗೆ ನಡೆಯಲಿದ್ದು, ಒಟ್ಟು 16 ಬಲಿಷ್ಠ ತಂಡಗಳು ಕಣಕ್ಕಿಳಿಯಲಿವೆ.

ಈ ಬಾರಿ ಟೂರ್ನಿಯು ಹೊಚ್ಚ ಹೊಸ ಮಾದರಿಯಲ್ಲಿ ನಡೆಯುತ್ತಿದ್ದು, ಸಾಂಪ್ರದಾಯಿಕ ಕ್ವಾರ್ಟರ್ ಫೈನಲ್ ಪಂದ್ಯಗಳ ಬದಲಿಗೆ ಎರಡನೇ ಹಂತದ ಗ್ರೂಪ್ ಹಂತವನ್ನು (ಕ್ರಾಸ್‌ಓವರ್ ಪೂಲ್‌ಗಳು) ಪರಿಚಯಿಸಲಾಗಿದೆ. ಇದು ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ರೋಚಕತೆಯನ್ನು ನೀಡಲಿದೆ.

ಟೂರ್ನಿಯ ಪ್ರಮುಖ ವಿವರಗಳು:

  • ದಿನಾಂಕಗಳು: ಆಗಸ್ಟ್ 15 ರಿಂದ ಆಗಸ್ಟ್ 30, 2026
  • ಆತಿಥೇಯ ದೇಶಗಳು: ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ
  • ಕ್ರೀಡಾಂಗಣ: ವೆಗೆನರ್ ಹಾಕಿ ಸ್ಟೇಡಿಯಂ (ಅಮ್ಸ್ಟೆಲ್ವೀನ್, ನೆದರ್ಲ್ಯಾಂಡ್ಸ್) ಮತ್ತು ಬೆಲ್ಫಿಯಸ್ ಹಾಕಿ ಅರೆನಾ (ವಾವ್ರೆ, ಬೆಲ್ಜಿಯಂ)
  • ಒಟ್ಟು ತಂಡಗಳು: 16

ಟೀಮ್ ಇಂಡಿಯಾ ವೇಳಾಪಟ್ಟಿ:

ಭಾರತ ತಂಡವು ‘ಪೂಲ್ ಡಿ’ ನಲ್ಲಿ ಬಲಿಷ್ಠ ಇಂಗ್ಲೆಂಡ್, ವೇಲ್ಸ್ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.  ಭಾರತ ತಂಡದ ಆರಂಭಿಕ ಲೀಗ್ ಹಂತದ ಪಂದ್ಯಗಳು ನೆದರ್ಲ್ಯಾಂಡ್ಸ್‌ನ ಅಮ್ಸ್ಟೆಲ್ವೀನ್‌ನಲ್ಲಿ ನಡೆಯಲಿದ್ದು, ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

  • ಆಗಸ್ಟ್ 15 (ಸಂಜೆ 4:30 IST): ಭಾರತ vs ವೇಲ್ಸ್
  • ಆಗಸ್ಟ್ 17 (ಸಂಜೆ 6:30 IST): ಭಾರತ vs ಇಂಗ್ಲೆಂಡ್
  • ಆಗಸ್ಟ್ 19 (ಸಂಜೆ 6:30 IST): ಭಾರತ vs ಪಾಕಿಸ್ತಾನ್

ಮುಂದಿನ ಹಂತದ ವೇಳಾಪಟ್ಟಿ:

ಆಗಸ್ಟ್ 21 – 24: ಎರಡನೇ ಗ್ರೂಪ್ ಹಂತದ (ಕ್ರಾಸ್‌ಓವರ್ ಪೂಲ್ಸ್ ಇ ಮತ್ತು ಎಫ್) ಪಂದ್ಯಗಳು ನಡೆಯಲಿದ್ದು, ಅಗ್ರ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ. ಪ್ರಮುಖ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8:30 ಮತ್ತು 9:30 ಕ್ಕೆ ಆರಂಭವಾಗಲಿವೆ.

  • ಆಗಸ್ಟ್ 28 (ರಾತ್ರಿ 9:30 IST): ಮೊದಲ ಸೆಮಿಫೈನಲ್ ಪಂದ್ಯ
  • ಆಗಸ್ಟ್ 29 (ಮಧ್ಯರಾತ್ರಿ 12:00 IST): ಎರಡನೇ ಸೆಮಿಫೈನಲ್ ಪಂದ್ಯ
  • ಆಗಸ್ಟ್ 30 (ರಾತ್ರಿ 8:00 IST): ವಿಶ್ವಕಪ್ ಫೈನಲ್

ಇದನ್ನೂ ಓದಿ: ಏಷ್ಯನ್ ಗೇಮ್ಸ್​ಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪ್ರಕಟ

ಈ ಬಾರಿಯ ವಿಶ್ವಕಪ್ ಹೊಸ ಮಾದರಿ ಮತ್ತು ಜಂಟಿ ಆತಿಥ್ಯದ ಕಾರಣದಿಂದಾಗಿ ಇತಿಹಾಸದಲ್ಲೇ ಅತ್ಯಂತ ರೋಚಕ ಜಾಗತಿಕ ಹಾಕಿ ಹಬ್ಬವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಭಾರತೀಯ ಹಾಕಿ ತಂಡವು, 1975ರ ನಂತರ ಮತ್ತೊಮ್ಮೆ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಲಿ ಎಂಬುದೇ ಕೋಟ್ಯಂತರ ಭಾರತೀಯ ಕ್ರೀಡಾಭಿಮಾನಿಗಳ ಆಶಯ.

Source link

Exit mobile version